ಉಷ್ಣಕಾಲದಲ್ಲಿ ವೈರಸ್‌ಗಳಿಂದ ಬಾಧಿಸುವ ಸಮಸ್ಯೆ ಸರ್ಪಸುತ್ತು. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತಿ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ.[]

ಕೆಳ ತುಟಿಗೆ ಹರ್ಪಿಸ್ ಲ್ಯಾಯಾಲಿಯಾಸ್ ಸೋಂಕು. ಬಾಣದಿಂದ ಗುರುತಿಸಲ್ಪಟ್ಟ ಗುಂಪಿನಲ್ಲಿರುವ ಗುಳ್ಳೆಗಳನ್ನು ಗಮನಿಸಿ. ವಿಶೇಷ ಸಾಂಕ್ರಾಮಿಕ ರೋಗ; ರೋಗಲಕ್ಷಣಗಳು ತೆರೆದ ಮುರಿತಗಳು ಮತ್ತು ಸಣ್ಣ ಹುಣ್ಣುಗಳು, ಜ್ವರ, ಊದಿಕೊಂಡ ದುಗ್ಧರಸ ಗ್ರಂಥಿಗಳು[]

ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು[][] ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಈ ನೀರ್ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ, ನವೆ ಉಂಟಾಗುತ್ತವೆ. ನರತಂತುಗಳ ಜಾಲಗಳಲ್ಲಿ ಇವು ಪಸರಿಸುತ್ತವೆ. ಇದನ್ನು ಜನಸಾಮಾನ್ಯರು ಸರ್ಪದ ಚರ್ಮ ಅಥವಾ ಹೆಡೆಯ ರೂಪವನ್ನು ಕಲ್ಪಿಸಿಕೊಂಡು, ಸರ್ಪ ದೋಷದಿಂದ ಬರುವ ಸಮಸ್ಯೆ ಎಂದು ಪರಿಗಣಿಸುತ್ತಾರೆ. ಸರ್ಪದ ಬಗ್ಗೆ ಇರುವ ಸಹಜ ಭಯ ಮತ್ತು ದೇವತಾರೂಪಿ ನಂಬಿಕೆಯಿಂದ ದೇವರು ಮುನಿದ ಎಂಬ ಆತಂಕದ ಛಾಯೆ ಆವರಿಸುವುದೂ ಉಂಟು. ಇದಕ್ಕಾಗಿ ಸರ್ಪದೋಷ ಪರಿಹಾರ ಅಥವಾ ರೋಗ ವಾಸಿ ಮಾಡುವ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಇದರಿಂದ ಕಾಯಿಲೆ ವಾಸಿಯಾಗುವುದರ ಬದಲು, ಉಪದ್ರವ ಜಾಸ್ತಿಯಾಗುತ್ತದೆ.[]

ರೋಗದಲ್ಲಿ  ಎರಡು  ಬಗೆಗಳಿವೆ: ಎಚ್‌ಎಸ್‌ವಿ-1  ಸೋಂಕು, ಎಚ್‌ಎಸ್‌ವಿ-2 ಸೋಂಕು.

ಲಕ್ಷಣಗಳೇನು

ಬದಲಾಯಿಸಿ
 
ಶೀತ ಹುಣ್ಣು
  • ಒಂದು ಪಾರ್ಶ್ವದಲ್ಲಿ ತುರಿಕೆ, ನೋವು, ಉರಿ, ನವೆಯ ಅನುಭವ, ಚರ್ಮದಲ್ಲಿ ಕೆಂಪಗಿನ ದದ್ದುಗಳು ಗೋಚರಿಸುವುದು. ಒತ್ತೊತ್ತಾಗಿರುವ ಸಣ್ಣ ಸಣ್ಣ ನೀರ್ಗುಳ್ಳೆಗಳು ಮೂಡುತ್ತವೆ.
  • ದದ್ದುಗಳು ಸಾಮಾನ್ಯವಾಗಿ ಪಟ್ಟೆಯಾಕಾರದಲ್ಲಿ ಬೆನ್ನುಮೂಳೆಯ ಒಂದು ಪಾರ್ಶ್ವದಿಂದ ಹೊಟ್ಟೆ ಎದೆಯ ಭಾಗಕ್ಕೆ ಚಲಿಸುತ್ತವೆ. ದೇಹದ ಯಾವುದೇ ಒಂದು ಪಾರ್ಶ್ವದಲ್ಲಿ ಅಥವಾ ಎಲ್ಲಾ ಭಾಗಗಳಿಗೆ ಅಂದರೆ ಮುಖ, ಕಣ್ಣು, ಕಿವಿ, ಬಾಯಿ, ಹಣೆ, ಕೈಕಾಲು, ಜನನಾಂಗಗಳಲ್ಲಿ ಇದು ವ್ಯಾಪಿಸಬಹುದು.
  • ದೇಹದಲ್ಲಿ ಸರ್ಪಸುತ್ತು ಗೋಚರಿಸುವ ಒಂದೆರಡು ವಾರಗಳ ಮೊದಲಿನಿಂದ ವೈರಸ್ ಸೋಂಕು ಕ್ರೀಯಾಶೀಲವಾಗಿರುತ್ತದೆ. ನಂತರ ಸಂಪೂರ್ಣವಾಗಿ ದೇಹದಲ್ಲಿ ಪ್ರಕಟಗೊಳ್ಳುತ್ತವೆ. 2 ರಿಂದ 3 ವಾರಗಳಲ್ಲಿ ನೀರ್ಗುಳ್ಳೆಗಳು ಒಡೆದು, ಕಪ್ಪು ಪದರ ಮೂಡುತ್ತದೆ. ನಂತರ ಅದು ಒಣಗಿ, ಉದುರಿ ಬೀಳುತ್ತದೆ.
  • ಸೋಂಕು ಕ್ರೀಯಾಶೀಲವಾಗಿರುವ ಸಮಯದಲ್ಲಿ ಪೂರಕ ಲಕ್ಷಣಗಳಾಗಿ ಹೊಟ್ಟೆನೋವು, ಚಳಿ, ಜ್ವರ, ತಲೆನೋವು, ಬೆನ್ನುನೋವು, ಸಂಧಿ ನೋವು, ಸುಸ್ತು, ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತವೆ. ಮುಖ ಅಥವಾ ಬಾಯಿಯಲ್ಲಾದರೆ ಮುಖ ವಕ್ರತೆ, ಕತ್ತಿನ ಗ್ರಂಥಿ ಊತ, ಕಣ್ಣಲ್ಲಾದರೆ ಕಣ್ಣಿನ ಊತ, ದೃಷ್ಟಿ ದೋಷ, ಕಿವಿಯಲ್ಲಾದರೆ ಶ್ರವಣ ದೋಷ ಕಾಣಿಸಿಕೊಳ್ಳುವುದು.

ವಿಧಗಳು

ಬದಲಾಯಿಸಿ
  • ಹರ್ಪಿಸ್ ಝೋಸ್ಟರ್-ದೇಹದ ಅಧಿಕ ಭಾಗವನ್ನು ಆಶ್ರಯಿಸುತ್ತದೆ.
  • ಹರ್ಪಿಸ್ ಸಿಂಪ್ಲೆಕ್ಸ್-ಕಡಿಮೆ ಭಾಗವನ್ನು ಆಶ್ರಯಿಸುತ್ತದೆ. (ಕೇವಲ 1 ರಿಂದ 2 ಸೆಂಟಿಮೀಟರ್ ಸುತ್ತಳತೆಯಲ್ಲಿ ವ್ಯಾಪ್ತಿ.) ಸೋಂಕಿತ ಭಾಗಗಳಿಗೆ ಆನುಗುಣವಾಗಿ ಮುಖಗತ ಸರ್ಪಸುತ್ತು, ಜನನಾಂಗಗತ ಸರ್ಪಸುತ್ತು, ಕಣ್ಣಿನ ಸರ್ಪಸುತ್ತು, ಮೆದುಳಿನ ಸರ್ಪಸುತ್ತು[] ಹಾಗೂ ನವಜಾತ ಶಿಶುಗಳ ಸರ್ಪಸುತ್ತು[] ಎಂದು ವಿಂಗಡಿಸಬಹುದು.

ಕಾರಣಗಳು

ಬದಲಾಯಿಸಿ

ಸಾಮಾನ್ಯವಾಗಿ ಪಿತ್ತ ವಿಕೃತಿಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ ಉಂಟಾಗುತ್ತದೆ. ರೋಗ ಬಾಧಿತ ವ್ಯಕ್ತಿಗಳ ನೇರ ಸಂಪರ್ಕದಿಂದ ಬರಬಹುದು. ರೋಗಿಯ ಜೊತೆ ಸಂಪರ್ಕ, ಆತನ ಬಟ್ಟೆಬರೆಯ ಉಪಯೋಗ, ಹುಣ್ಣುಗಳ ಸ್ರಾವದ ಸ್ಪರ್ಶ ಮುಂತಾದವು ರೋಗ ಅಂಟುವ ವಿಧಗಳು. ಹಿಂದೆಂದೋ ಕಾಡಿದ ಕ್ಯಾನ್ಸರ್, ಸಿಡುಬಿನಂಥ ಸಮಸ್ಯೆಗಳು ಪೂರ್ತಿ ಗುಣವಾಗದೇ ಇದ್ದವರಲ್ಲೂ ಸರ್ಪಸುತ್ತು ಬಾಧಿಸುವುದಿದೆ. ಬಾಧಿತ ವ್ಯಕ್ತಿಗಳೊಂದಿಗಿನ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ. ಪ್ರಸವ ಕಾಲದಲ್ಲಿ ತಾಯಿಯು ಜನನಾಂಗದ ಸರ್ಪಸುತ್ತಿನಿಂದ ಬಳಲುತ್ತಿದ್ದರೆ, ನವಜಾತ ಶಿಶು ತೀವ್ರತರದ ಸರ್ಪಸುತ್ತಿನಿಂದ ಬಳಲುತ್ತದೆ. ಈ ಸೋಂಕು ಇರುವವರು ಮಗುವನ್ನು ಮುದ್ದಾಡುವಾಗ ಅಥವಾ ಅದು ಬೆಳೆದಂತೆ ಇತರ ಮಕ್ಕಳೊಡನೆ ಆಡುವಾಗ ಸೋಂಕು ಹರಡುತ್ತದೆ. ಆದರೂ ಸಾಧಾರಣವಾಗಿ ನವಜಾತ ಶಿಶುಗಳಿಗೆ ಈ ರೋಗ ಅಂಟುವ ಸಂಭವ ವಿರಳ - ಸು. 3000-20,000ದಲ್ಲಿ ಕೇವಲ 1. ಸರ್ಪಸುತ್ತು ರೋಗಕ್ಕೆ ಪೂರ್ಣ ಚಿಕಿತ್ಸೆ ಇಲ್ಲ.

ತೊಂದರೆಗಳು

ಬದಲಾಯಿಸಿ

ಒಮ್ಮೆಗೆ ಗುಣಮುಖರಾಗಿ ಪುನಃ ಬಾಧಿಸುವುದು, ಅಂಧತ್ವ, ಕಿವುಡು, ಸ್ರಾವಯುಕ್ತ ಹುಣ್ಣು, ಬ್ಯಾಕ್ಟೀರಿಯಾ ಸೋಂಕು, ಮೆದುಳು ಜ್ವರ, ಮುಖಗತ ಪಾರ್ಶ್ವವಾತ, ಆಲ್ಜಿಮಿರ್ಸ್‌ ಸಮಸ್ಯೆ ಬಾಧಿಸುವ ಸಾಧ್ಯತೆ ಇರುತ್ತದೆ. ಸರ್ಪಸುತ್ತು ಬಾಧಿತ ಮಹಿಳೆಯರಲ್ಲಿ ಅದು ಪೂರ್ತಿ ಗುಣವಾಗದ ಕಾಲದಲ್ಲಿ ಗರ್ಭ ಧರಿಸಿದರೆ ಗರ್ಭಸ್ರಾವ ಉಂಟಾಗುತ್ತದೆ.

ಸರ್ಪಸುತ್ತು ತನ್ನಿಂತಾನೇ ಗುಣಮುಖ ಹೊಂದುವ ಒಂದು ವಿಶಿಷ್ಟ ರೋಗ. ಆದರೆ ಅಪಥ್ಯ ಉಂಟಾದರೆ, ಇತರ ರೋಗಗಳೊಂದಿಗೆ ಸಂಯೋಗ ಹೊಂದಿ, ರೋಗವನ್ನು ಸರಿಯಾಗಿ ನಿರ್ಣಯ ಮಾಡಿಕೊಳ್ಳದೇ ಚಿಕಿತ್ಸಾ ವ್ಯತ್ಯಾಸ ಉಂಟಾದರೆ, ನವಜಾತ ಶಿಶುಗಳಲ್ಲಿ ಹಾಗೂ ವಯೋವೃದ್ಧರಲ್ಲಿ ಮೃತ್ಯುಕಾರಕವೂ ಆಗಬಹುದು.

ಚಿಕಿತ್ಸೆ

ಬದಲಾಯಿಸಿ

ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ಹೆಸರು ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.

ಹೊಸ ಸಂಶೋಧನೆಗಳು

ಬದಲಾಯಿಸಿ

ಹ್ಯೂಮನ್ ಹರ್ಪಿಸ್ ವೈರಸ್-6 ಎಂಬುದು ಹೊಸತಾಗಿ ಗುರುತಿಸಲಾಗಿರುವ ವೈರಸ್. ಇದು 3-4 ವರ್ಷಗಳೊಳಗಿನ ಮಕ್ಕಳಲ್ಲಿ ರೋಸಿಯೋಲ ಇನ್‌ಫೇಂಟಮ್ ಅಥವಾ ಎಕ್ಸಾಂಥೀಮ ಸವಿಟಂ ಎಂಬ ರೋಗವನ್ನು ಉಂಟುಮಾಡುತ್ತದೆ. ಮಾರಕವಲ್ಲ. ಯುಕ್ತ ಚಿಕಿತ್ಸೆ ಮತ್ತು ಉಪಚಾರ ನೀಡಿದರೆ 3-5 ದಿವಸಗಳ ಒಳಗೆ ಶಮನವಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "Genital Herpes – CDC Fact Sheet". cdc.gov. December 8, 2014. Archived from the original on 31 December 2014. Retrieved 31 December 2014.
  2. http://www.kitkatwords.com/%E0%B2%B8%E0%B2%B0%E0%B3%8D%E0%B2%AA%20%E0%B2%B8%E0%B3%81%E0%B2%A4%E0%B3%8D%E0%B2%A4%E0%B3%81-meaning-in-english
  3. Balasubramaniam, R; Kuperstein, AS; Stoopler, ET (April 2014). "Update on oral herpes virus infections". Dental Clinics of North America. 58 (2): 265–80. doi:10.1016/j.cden.2013.12.001. PMID 24655522.
  4. Mosby (2013). Mosby's Medical Dictionary (9 ed.). Elsevier Health Sciences. pp. 836–37. ISBN 9780323112581. Archived from the original on 2017-09-06.
  5. http://kodagunews.com/2013/04/%E0%B2%B8%E0%B2%B0%E0%B3%8D%E0%B2%AA-%E0%B2%B8%E0%B3%81%E0%B2%A4%E0%B3%8D%E0%B2%A4%E0%B3%81/
  6. Steiner, I; Benninger, F (December 2013). "Update on herpes virus infections of the nervous system". Current Neurology and Neuroscience Reports. 13 (12): 414. doi:10.1007/s11910-013-0414-8. PMID 24142852. S2CID 22139709.
  7. Stephenson-Famy, A; Gardella, C (December 2014). "Herpes Simplex Virus Infection During Pregnancy". Obstetrics and Gynecology Clinics of North America. 41 (4): 601–14. doi:10.1016/j.ogc.2014.08.006. PMID 25454993.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: