ಮಾನವ ಅಂಗರಚನಾಶಾಸ್ತ್ರದಲ್ಲಿ, ಹಣೆಯು ಬುರುಡೆ ಮತ್ತು ನೆತ್ತಿಯಿಂದ ಸುತ್ತುವರಿಯಲ್ಪಟ್ಟ ತಲೆಯ ಒಂದು ಪ್ರದೇಶ. ಹಣೆಯ ಮೇಲ್ತುದಿಯು ನೆತ್ತಿಯ ಮೇಲಿನ ಕೂದಲು ಬೆಳೆಯುವ ಪ್ರದೇಶದ ಅಂಚಾದ ಕೇಶರಜ್ಜಿನಿಂದ ಗುರುತಿಸಲ್ಪಟ್ಟಿದೆ. ಹಣೆಯ ಕೆಳತುದಿಯು ಬುರುಡೆಯ ಒಂದು ಗುಣಲಕ್ಷಣವಾದ ಕಣ್ಣುಗುಳಿಮೇಲಿನ ಏಣಿನಿಂದ ಗುರುತಿಸಲ್ಪಟ್ಟಿದೆ. ಹಣೆಯ ಎರಡು ಪಾರ್ಶ್ವಗಳು ಕಣ್ಣುಗುಳಿಮೇಲಿನ ಏಣನ್ನು ಹಲ್ಲುಸೇರುವೆಗೆ ಜೋಡಿಸುವ ಒಂದು ಅಸ್ಥಿ ಗುಣಲಕ್ಷಣವಾದ ಕಪೋಲ ಏಣಿನಿಂದ ಗುರುತಿಸಲ್ಪಟ್ಟಿವೆ.[]

  • ಹಣೆಯ ಸ್ನಾಯುಗಳು ಮುಖಭಾವಗಳನ್ನು ರೂಪಿಸಲು ನೆರವಾಗುತ್ತವೆ. ಭಿನ್ನ ಮುಖಭಾವಗಳನ್ನು ರೂಪಿಸಲು ಪ್ರತ್ಯೇಕವಾಗಿ ಅಥವಾ ಸಂಯೋಜನೆಯಲ್ಲಿ ಉಂಟಾಗಬಹುದಾದ ನಾಲ್ಕು ಮೂಲಭೂತ ಚಲನೆಗಳಿವೆ. ಆಕ್ಸಿಪಿಟೊಫ಼್ರಂಟಲಿಸ್ ಸ್ನಾಯುಗಳು ಕಣ್ಣುಹುಬ್ಬುಗಳನ್ನು ಒಟ್ಟಾಗಿ ಅಥವಾ ಪ್ರತ್ಯೇಕವಾಗಿ ಏರಿಸಬಲ್ಲವು.
  • ಮತ್ತು ಆಶ್ಚರ್ಯ ಹಾಗೂ ತಮಾಷೆಯ ಮುಖಭಾವಗಳನ್ನು ರೂಪಿಸುತ್ತವೆ. ಹುಬ್ಬಿನ ಫಾಲಸಂಕೋಚಕ ಸ್ನಾಯುಗಳು ಹುಬ್ಬುಗಳನ್ನು ಒಳಗಡೆ ಮತ್ತು ಕೆಳಗೆ ಎಳೆಯಬಲ್ಲವು, ಮತ್ತು ಗಂಟಿಕ್ಕುವ ಮುಖಭಾವವನ್ನು ರೂಪಿಸುತ್ತವೆ. ಪ್ರೋಸರಸ್ ಸ್ನಾಯುಗಳು ಹುಬ್ಬುಗಳ ಮಧ್ಯದ ಭಾಗಗಳನ್ನು ಕೆಳೆಗೆ ಎಳೆಯಬಲ್ಲವು.
  • ಹಣೆಯಲ್ಲಿನ ಸ್ನಾಯುಗಳ ಚಲನೆಗಳು ಚರ್ಮದಲ್ಲಿ ವಿಶಿಷ್ಟವಾದ ಸುಕ್ಕುಗಳನ್ನು ಉತ್ಪತ್ತಿ ಮಾಡುತ್ತವೆ. ಆಕ್ಸಿಪಿಟೊಫ಼್ರಂಟಲಿಸ್ ಸ್ನಾಯುಗಳು ಹಣೆಯ ಅಗಲಕ್ಕೆ ಅಡ್ಡವಾಗಿ ಸುಕ್ಕುಗಳನ್ನು ಉತ್ಪತ್ತಿ ಮಾಡುತ್ತವೆ, ಮತ್ತು ಹುಬ್ಬಿನ ಫಾಲಸಂಕೋಚಕ ಸ್ನಾಯುಗಳು ಮೂಗಿನ ಮೇಲೆ ಹುಬ್ಬುಗಳ ನಡುವೆ ಲಂಬ ಸುಕ್ಕುಗಳನ್ನು ಉತ್ಪತ್ತಿ ಮಾಡುತ್ತವೆ. ಪ್ರೋಸರಸ್ ಸ್ನಾಯುಗಳು ಮೂಗು ಸುಕ್ಕಾಗುವುದಕ್ಕೆ ಕಾರಣವಾಗಿವೆ.

ಸಾಮುದ್ರಿಕ ಶಾಸ್ತ್ರದಲ್ಲಿ

ಬದಲಾಯಿಸಿ
  • ಮುಖಸಾಮುದ್ರಿಕೆ ಮತ್ತು ಕಪಾಲ ಸಾಮುದ್ರಿಕ ಶಾಸ್ತ್ರದಲ್ಲಿ, ಹಣೆಯ ಆಕಾರವನ್ನು ಬುದ್ಧಿಶಕ್ತಿ ಮತ್ತು ಬುದ್ಧಿಮತ್ತೆಯನ್ನು ಸಂಕೇತಿಸುತ್ತದೆ. ತಗ್ಗಿನ ಮತ್ತು ಸಣ್ಣ ಹಣೆಯು ಉದಾರತೆ, ಧೈರ್ಯ, ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತಿತ್ತು; ಮಾಂಸಲ ಮತ್ತು ಸುಕ್ಕುರಹಿತ ಹಣೆಯು ವ್ಯಾಜ್ಯಪ್ರಿಯತೆ, ಗರ್ವ, ಮೋಸ, ಮತ್ತು ವಾದಗ್ರಸ್ತತೆಯನ್ನು ಸೂಚಿಸುತ್ತಿತ್ತು;
  • ಚೂಪಾದ ಹಣೆಯು ದುರ್ಬಲತೆ ಮತ್ತು ಚಂಚಲತೆಯನ್ನು ಸೂಚಿಸುತ್ತಿತ್ತು; ಸುಕ್ಕಿರುವ ಹಣೆಯು ಭಾರಿ ಸ್ಫೂರ್ತಿ ಮತ್ತು ಹಾಸ್ಯ ಪ್ರವೃತ್ತಿ ಆದರೆ ಕಳಪೆ ಅದೃಷ್ಟವನ್ನು ಸೂಚಿಸುತ್ತಿತ್ತು; ದುಂಡನೆಯ ಹಣೆಯು ಸದ್ಗುಣ ಮತ್ತು ಉತ್ತಮ ತಿಳುವಳಿಕೆಯನ್ನು ಸೂಚಿಸುತ್ತಿತ್ತು;
  • ತುಂಬಿದ ದೊಡ್ಡ ಹಣೆಯು ಧೈರ್ಯ, ದ್ವೇಷ, ಗಡಿ ಸಮಸ್ಯೆಗಳು, ಮತ್ತು ಉತ್ಸಾಹವನ್ನು ಸೂಚಿಸುತ್ತಿತ್ತು; ಮತ್ತು ಉದ್ದನೆಯ ಎತ್ತರದ ಹಣೆಯು ಪ್ರಾಮಾಣಿಕತೆ, ದುರ್ಬಲತೆ, ಸರಳತೆ, ಮತ್ತು ಕಳಪೆ ಅದೃಷ್ಟವನ್ನು ಸೂಚಿಸುತ್ತಿತ್ತು.

ಉಲ್ಲೇಖಗಳು

ಬದಲಾಯಿಸಿ
  1. David M. Knize; Mel Drisko (2001). The Forehead and Temporal Fossa: Anatomy and Technique. Lippincott Williams & Wilkins. p. 4. ISBN 9780781720748. {{cite book}}: Unknown parameter |lastauthoramp= ignored (help)


"https://kn.wikipedia.org/w/index.php?title=ಹಣೆ&oldid=847445" ಇಂದ ಪಡೆಯಲ್ಪಟ್ಟಿದೆ