ಮುಖಭಾವವು[] (ಮುಖಚರ್ಯೆ) ಮುಖದ ಚರ್ಮದ ಕೆಳಗಿನ ಸ್ನಾಯುಗಳ ಒಂದು ಅಥವಾ ಹೆಚ್ಚು ಚಲನೆಗಳು ಅಥವಾ ಸ್ಥಿತಿಗಳು. ವಿವಾದಾತ್ಮಕ ಸಿದ್ಧಾಂತಗಳ ಒಂದು ಸಮೂಹದ ಪ್ರಕಾರ, ಈ ಚಲನೆಗಳು ವೀಕ್ಷಕರಿಗೆ ಒಬ್ಬ ವ್ಯಕ್ತಿಯ ಭಾವನಾತ್ಮಕ ಸ್ಥಿತಿಯನ್ನು ತಿಳಿಸುತ್ತವೆ. ಮುಖಭಾವಗಳು ಮಾತಿಲ್ಲದ ಸಂವಹನದ ಒಂದು ರೂಪವಾಗಿವೆ. ಇವು ಮನುಷ್ಯರ ನಡುವೆ ಸಾಮಾಜಿಕ ಮಾಹಿತಿಯನ್ನು ತಿಳಿಸುವ ಮುಖ್ಯ ಸಾಧನವಾಗಿವೆ, ಆದರೆ ಇವು ಬಹುತೇಕ ಇತರ ಸಸ್ತನಿಗಳು ಹಾಗೂ ಕೆಲವು ಇತರ ಪ್ರಾಣಿ ಪ್ರಜಾತಿಗಳಲ್ಲಿ ಕೂಡ ಇರುತ್ತವೆ.

ಭಿನ್ನ ಮುಖಭಾವಗಳು

ಮಾನವರು ಒಂದು ಮುಖಭಾವವನ್ನು ಸ್ವಯಂಪ್ರೇರಿತವಾಗಿ ಅಥವಾ ಅನೈಚ್ಛಿಕವಾಗಿ ಅಳವಡಿಸಿಕೊಳ್ಳಬಲ್ಲರು, ಮತ್ತು ಆ ಭಾವವನ್ನು ನಿಯಂತ್ರಿಸುವುದಕ್ಕೆ ಹೊಣೆಯಾಗಿರುವ ನರ ಕಾರ್ಯವಿಧಾನಗಳು ಪ್ರತಿ ಸಂದರ್ಭದಲ್ಲಿ ಬದಲಾಗುತ್ತವೆ. ಸ್ವಇಚ್ಛೆಯ ಮುಖಭಾವಗಳು ಹಲವುವೇಳೆ ಸಾಮಾಜಿಕವಾಗಿ ನಿಯಂತ್ರಿತವಾಗಿದ್ದು ಮೆದುಳಿನಲ್ಲಿ ಹೊರಕವಚದ ಮಾರ್ಗವನ್ನು ಅನುಸರಿಸುತ್ತವೆ. ಇದಕ್ಕೆ ಪ್ರತಿಯಾಗಿ, ನಿರಿಚ್ಛಾ ಮುಖಭಾವಗಳು ಸಹಜವೆಂದು ನಂಬಲಾಗಿದೆ ಮತ್ತು ಮೆದುಳಿನಲ್ಲಿ ಹೊರಪದರದ ಕೆಳಗಿನ ಮಾರ್ಗವನ್ನು ಅನುಸರಿಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Freitas-Magalhães, A. (2011). Facial Expression of Emotion: From Theory to Application. Porto: FEELab Science Books.


"https://kn.wikipedia.org/w/index.php?title=ಮುಖಭಾವ&oldid=1252054" ಇಂದ ಪಡೆಯಲ್ಪಟ್ಟಿದೆ