ಸಣ್ಣ ಸಿಡುಬು

ಸಿಡುಬು ರೋಗ

ಸಣ್ಣ ಸಿಡುಬು (ಮೈಲಿ ಬೇನೆ) ಒಂದು ಸಾಂಕ್ರಾಮಿಕ ರೋಗ. ಈ ರೋಗವು ಎರಡು ಬಗೆಯ ವೈರಸ್‌ನಿಂದ ಉಂಟಾಗುತ್ತದೆ. ಒಂದು ವೇರಿಯಂಟ್ ಇನ್ನೊಂದು ವೇರಿಯೋಲ.ಲ್ಯಾಟಿನ್ ಭಾಷೆಯಲ್ಲಿ ಈ ರೋಗವನ್ನು ವೇರಿಯೋಲ ಎಂದು ಕರೆಯುತ್ತಾರೆ.[] ಆಂಗ್ಲ ಭಾಷೆಯಲ್ಲಿ ಈ ರೋಗವನ್ನು ಪಾಕ್ಸ್ ಅಥವಾ ರೆಡ್ ಪ್ಲೇಗ್ ಎಂದು ಕರೆಯುತ್ತಾರೆ.[][] ೧೫ನೇ ಶತಮಾನದಲ್ಲಿ ಮೊಟ್ಟ ಮೊದಲು ಬ್ರಿಟನ್‍ನವರು ಈ ರೋಗವನ್ನು ಸಣ್ಣ ಸಿಡುಬು ಎಂದು ಕರೆಯುತ್ತಿದ್ದರು.

ಸಣ್ಣ ಸಿಡುಬಿನಿಂದ ನರಳುತ್ತಿರುವ ಮಗು

ಸಣ್ಣ ಸಿಡುಬಿನ ವೈರಸ್ ಚರ್ಮದ ರಕ್ತ ಕಣಗಳು, ಬಾಯಿ ಮತ್ತು ಗಂಟಲಿನಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತದೆ, ಆನಂತರ ದೇಹವೆಲ್ಲಾ ಹರಡಿಕೊಳ್ಳುತ್ತದೆ. ಸುಮಾರು ಕ್ರಿ.ಪೂ. ೧೦,೦೦೦ ದಿಂದಲೂ ಜನರು ಸಣ್ಣ ಸಿಡುಬಿನಿಂದ ಬಳಲುತ್ತಿದ್ದರು. ೧೮ನೇ ಶತಮಾನದಲ್ಲಿ ಯುರೋಪಿನಲ್ಲಿ ವರ್ಷಕ್ಕೆ ಸುಮಾರು ೪೦,೦೦೦ ಜನರು ಈ ರೋಗದಿಂದ ಸಾವನಪ್ಪಿದ್ದರು. ಈ ರೋಗದಿಂದ ಜನರಲ್ಲಿ ಕುರುಡುತನ ಹೆಚ್ಚಿತು, ಸುಮಾರು ೨೦-೩೦ ಶೇಕಡದಷ್ಟು ಮಕ್ಕಳು ಸಾವನಪ್ಪಿದರು. ಆನಂತರ ೧೯೬೭ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪರಿಶೀಲಿಸಿದಂತೆ ಸುಮಾರು ೧೫ ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದರು. ಮತ್ತು ವಾರ್ಷಿಕ ೨ ಮಿಲಿಯನ್ ಜನರು ಸಾಯುತ್ತಿದ್ದರು.ಫ್ರೆಂಚ್ ಮತ್ತು ಅಮೇರಿಕ ಮೂಲನಿವಾಸಿ ಯುದ್ಧಗಳಲ್ಲಿ ಬ್ರಿಟಿಷರು ಸಣ್ಣಸಿಡುಬಿನ ರೋಗದ ವೈರಸ್‌ನನ್ನು ಯುದ್ಧದ ವಸ್ತುವನಾಗಿ ಬಳಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಯನ್ನು ಕಂಡು ಹಿಡಿದು ಅದನ್ನು ಎಲ್ಲ ಕಡೆ ಪರಿಚಯಿಸಿದ ಮೇಲೆ ೧೯೭೯ರಲ್ಲಿ ಸಣ್ಣ ಸಿಡುಬನ್ನು ವಿಶ್ವದಾದ್ಯಂತ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಯಿತು. ಸಣ್ಣ ಸಿಡುಬು ಕೊನೆಯದಾಗಿ ೧೯೭೭ರಲ್ಲಿ ಸೊಮಾಲಿಯದಲ್ಲಿ ಕಂಡು ಬಂದಿತ್ತು.[]

ಸಿಡುಬಿನಲ್ಲಿ ರಕ್ತಸ್ರಾವಕ (ಹೆಮರೇಜಿಕ್) ಗುಳ್ಳೆಗಳು, ಕಲೆತುಹೋಗುವ(ಕಾನ್‌ಫ್ಲುಯೆಂಟ್) ಗುಳ್ಳೆಗಳು, ವಿವಿಕ್ತ(ಡಿಸ್ಕ್ರೀಟ್) ಗುಳ್ಳೆಗಳು ಮತ್ತು ಮಾರ್ಪಟ್ಟ (ಮಾಡಿಫೈಡ್) ಸಿಡುಬು ಎಂಬ ನಾಲ್ಕು ಬಗೆಗಳಿವೆ. ಈ ಪೈಕಿ ಮೊದಲನೆಯದು ಪ್ರಾಣಾಂತಕ ಸಿಡುಬು - ಇದು ತಾಗಿದವರು ಮರಣ ಅಪ್ಪುವುದು ಶತಸ್ಸಿದ್ಧ.

ಮೊತ್ತಮೊದಲು 18ನೆಯ ಶತಮಾನದ ಕೊನೆಗೆ ಜೆನ್ನರ್‌ನಿಂದ ತಯಾರಿಸಲಾದ ಲಸಿಕೆ ಸಿಡುಬನ್ನು ತಡೆಯಿತು.[][] 1967-79 ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಿಂದಲೇ ಸಿಡುಬನ್ನು ಉತ್ಪಾಟಿಸಲು ಸರ್ವತ್ರ ಲಸಿಕೆ ಹಾಕುವ ಕಾರ್ಯಕ್ರಮವನ್ನು (ವ್ಯಾಕ್ಸಿನೇಶನ್) ಹಮ್ಮಿಕೊಂಡಿತು. ಫಲವಾಗಿ ಭಾರತದಲ್ಲಿ 1977 ಎಪ್ರಿಲ್ ತಿಂಗಳಿನಲ್ಲಿ ಸಿಡುಬು ಪೂರ್ತಿ ನಿರ್ಮೂಲನವಾಗಿದೆ ಎಂದು ಘೋಷಿಸಲಾಯಿತು. 1977 ಅಕ್ಟೋಬರ್ 26ರಂದು ಸೋಮಾಲಿಯದಲ್ಲಿ ಒಬ್ಬ ಸಿಡುಬುರೋಗಿಯನ್ನು ಗುರುತಿಸಿದ್ದು ಕಟ್ಟಕಡೆಯ ನಿದರ್ಶನ. ಮುಂದೆ 1980 ಮೇ 8ರಂದು ವಿಶ್ವಸಂಸ್ಥೆ ಪ್ರಪಂಚಾದ್ಯಂತ ಸಿಡುಬು ನಿರ್ಮೂಲನವಾಗಿದೆ ಎಂದು ಘೋಷಿಸಿತು.[] ಹೀಗೆ ಈಗ ಜನರು ಸಿಡುಬುಮುಕ್ತ ಪ್ರಪಂಚದ ಪ್ರಜೆಗಳು. ವರ್ಷವಿಡೀ ಲಕ್ಷಾಂತರ ಮಂದಿಯ ಪ್ರಾಣಹರಣವನ್ನೂ ಹಲವರಲ್ಲಿ ಅಂಗವಿಕಲತೆಯನ್ನೂ ಉಂಟುಮಾಡುತ್ತಿದ್ದ ಖಂಡಾಂತರ ಪಿಡುಗು ಈ ತೆರನಾಗಿ ತನ್ನ ಸಮಾಧಿ ಕಂಡಿತು.

1982ರ ಹೊತ್ತಿಗೆ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಕೈಬಿಡಲಾಯಿತು. ಆದರೆ ಇಂದಿಗೂ ಅಮೆರಿಕದ ಅಟ್ಲಾಂಟದಲ್ಲಿ ಮತ್ತು ರಷ್ಯದ ಮಾಸ್ಕೋದಲ್ಲಿ ಸಿಡುಬು ಲಸಿಕೆಯನ್ನು ದಾಸ್ತಾನು ಇಡಲಾಗಿದೆ.[] 1999 ಜೂನ್ 30ರಂದು ಈ ದಾಸ್ತಾನುಗಳನ್ನು ನಾಶಗೊಳಿಸಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆದೇಶವಾಗಿತ್ತು.[] ಆದರೆ ಆಧುನಿಕ ವೈಜ್ಞಾನಿಕ ಚಿಂತನೆ ಈ ಪುರಾತನ ಪಿಡುಗಿನ ವೈರಸನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನದ ಸಲುವಾಗಿ ಉಳಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಸಿಡುಬು ವೈರಸನ್ನು ಮಾರಕ ಜೀವವೈಜ್ಞಾನಿಕ ಅಸ್ತ್ರವಾಗಿ ಪ್ರಯೋಗಿಸುವ ಸಾಧ್ಯತೆಯನ್ನು ಅಮೆರಿಕ ಹಾಗೂ ರಷ್ಯ ಮರೆತಿಲ್ಲ. ಈ ವಿವಾದದ ಕಾರಣ ಸಿಡುಬು ವೈರಸ್‌ನ ಪೂರ್ಣನಾಶ ಇನ್ನೂ ಕೈಗೊಂಡಿಲ್ಲ.

ವಿಂಗಡಣೆ/ವರ್ಗೀಕರಣ

ಬದಲಾಯಿಸಿ

ಸಣ್ಣ ಸಿಡುಬನ್ನು ಎರಡು ಬಗೆಯಾಗಿ ಗುರುತಿಸಲಾಗಿದೆ. ಮೊದಲನೆಯದು ವೇರಿಯೋಲ ಮೇಜರ್, ಇನ್ನೊಂದು ವೇರಿಯೋಲ ಮೈನರ್.

ವೇರಿಯೋಲ ಮೇಜರ್

ಬದಲಾಯಿಸಿ

ಇದು ಒಂದು ಅತಿ ತೀವ್ರವಾದ ಮತ್ತು ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ. ಈ ರೋಗದಿಂದ ಬಾಧಿತರಾದ ರೋಗಿಗಳ ದೇಹವೆಲ್ಲ ದದ್ದುಗಳಿಂದ ತುಂಬಿರುತ್ತದೆ. ಈ ರೋಗಿಗಳು ತೀವ್ರವಾದ ಜ್ವರದಿಂದ ನರಳುತ್ತಿರುತ್ತಾರೆ. ಈ ರೋಗವು ನಾಲ್ಕು ರೀತಿಯಲ್ಲಿ ಹರಡುತ್ತದೆ. ಅವು ಸಾಮಾನ್ಯ ಸಿಡುಬು, ಬದಲಾದ ಸಿಡುಬು, ಅತ್ಯುಗ್ರ ಸಿಡುಬು, ರಕ್ತಸ್ರಾವದ ಸಿಡುಬು.

ಸಾಮಾನ್ಯ ಸಿಡುಬು

ಬದಲಾಯಿಸಿ

೯೦ ಶೇಕಡದಷ್ಟು ಕಾಣಿಸಿಕೊಳ್ಳುವ ಸಿಡುಬು ಸಾಮಾನ್ಯ ಸಿಡುಬಾಗಿರುತ್ತದೆ. ಇದರಲ್ಲಿ ಗುಳ್ಳೆಗಳು ಚರ್ಮದ ಮೇಲೆ ಅಂಟಿಕೊಂಡಂತೆ ಕಾಣಿಸಿಕೊಳ್ಳುತ್ತದೆ.

ಬದಲಾದ ಸಿಡುಬು

ಬದಲಾಯಿಸಿ

ಬದಲಾದ ಸಿಡುಬು ಹಿಂದೆ ಲಸಿಕೆಯನ್ನು ತೆಗೆದುಕೊಂಡಿರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲು ಬಂದು ಅದು ಸಂರ್ಪೂಣವಾಗಿ ವಾಸಿಯಾಗದ ಸಂದರ್ಭದಲ್ಲಿ ಇದು ಕಂಡು ಬರುತ್ತದೆ. ಇದು ಸಾಮಾನ್ಯ ಸಿಡುಬಿಗಿಂತ ಕಡಿಮೆ ಅಪಾಯಕಾರಿಯಾದದ್ದು.

ಅತ್ಯುಗ್ರ ಸಿಡುಬು

ಬದಲಾಯಿಸಿ

ಅತ್ಯುಗ್ರ ಸಿಡುಬಿನ ರೋಗದಿಂದ ಉಂಟಾಗುವ ದದ್ದುಗಳು ಕೀವಿನಿಂದಲ್ಲೇ ತುಂಬಿರುತ್ತದೆ. ಅವು ಎಷ್ಟೇ ದಿನಗಳಾದರೂ ಒಣಗುವುದಿಲ್ಲ. ಈ ರೋಗ ಏಕೆ ಬರುತ್ತದೆ ಎಂದು ಇನು ಕಂಡುಹಿಡಿದಿಲ್ಲ.

ರಕ್ತಸ್ರಾವದ ಸಿಡುಬು

ಬದಲಾಯಿಸಿ

ರಕ್ತಸ್ರಾವದ ಸಿಡುಬಿನ ರೋಗದಲ್ಲಿ ರಕ್ತ ಕಣಗಳು ಮುಳ್ಳೆಯಿಂದ ಚರ್ಮದ ಪದರಕ್ಕೆ ರಕ್ತಸ್ರಾವವಾಗುತ್ತದೆ ಮತ್ತು ಇದು ತುಂಬ ಅಪಯಕಾರಿ ರೋಗ.

ವೇರಿಯೋಲ ಮೈನರ್

ಬದಲಾಯಿಸಿ

ವೇರಿಯೋಲ ಮೈನರ್ ವೇರಿಯೋಲ ಮೇಜರ್‌ಗಿಂತ ಕಡಿಮೆ ಪ್ರಮಾಣದಲ್ಲಿ ತೀವ್ರವಾದ ರೋಗ ಮತ್ತು ಅಪರೂಪದಲ್ಲಿ ಕಾಣಿಸಿಕೊಳ್ಳುವ ರೋಗ.[೧೦]

ರೋಗದ ಲಕ್ಷಣಗಳು

ಬದಲಾಯಿಸಿ

ಈ ರೋಗವು ದೇಹವೆಲ್ಲ ಹರಡಲು ಸುಮಾರು ೧೨ ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ರೋಗವು ಗಾಳಿಯಿಂದ ಹೆಚ್ಚಾಗಿ ಹಬ್ಬುತ್ತದೆ. ರೋಗದ ವೈರಸ್ ಉಸಿರಾಟದ ಮೂಲಕ ಮನುಷ್ಯನ ದೇಹವನ್ನು ತಲುಪುತ್ತದೆ. ಅದು ಮೊದಲಿಗೆ ಮನುಷ್ಯನ ಬಾಯಿ ಮತ್ತು ಗಂಟಲು ಅಥವಾ ಶ್ವಾಸನಾಳಗಳಲ್ಲಿ ತಲುಪಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ದೇಹವೆಲ್ಲ ಹಬ್ಬುತ್ತದೆ. ಆರಂಭಿಕ ಬೆಳವಣಿಗೆಯ ಹಂತದಲ್ಲಿ ವೈರಸ್ ಒಂದು ಜೀವಕೋಶದಿಂದ ಇನ್ನೊಂದು ಜೀವಕೋಶಕ್ಕೆ ಚಲಿಸಿದಂತೆ ತೋರುತ್ತದೆ. ಆದರೆ ೧೨ ನೇ ದಿನಕ್ಕೆ ಸುಮಾರು ಅನೇಕ ಸೋಂಕಿತ ಜೀವಕೋಶಗಳಲ್ಲಿ ಲೈಸಿಸ್ ಸಂಭವಿಸುತ್ತದೆ. ಇದರಿಂದ ರಕ್ತ ಪ್ರವಾಹದಲ್ಲಿ ವೈರಸ್ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಅನಂತರ ಆ ವೈರಸ್ ಮೂಳೆ ಮಜ್ಜೆ ಮತ್ತು ದುಗ್ಧರಸ ಗ್ರಂಥಿಗಳಲ್ಲಿ ತಮ್ಮ ಬೆಳವಣಿಗೆಯನ್ನು ಆರಂಭಿಸಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡು ದೇಹವೆಲ್ಲಾ ಹರಡಿಕೊಳ್ಳುತ್ತದೆ. ರೋಗದ ಮೊದ ಮೊದಲ ಲಕ್ಷಣಗಳು: ಇನ್ಫ್ಲುಯೆಂಝಾ, ನೆಗಡಿ, ಕನಿಷ್ಠ 38.3 ° ಸಿ (101 ° F) ಅಷ್ಟು ಜ್ವರ, ಸ್ನಾಯು ನೋವು, ದೇಹಾಲಸ್ಯ, ತಲೆನೋವು ಮತ್ತು ಆಯಾಸದಿಂದ ನರಳುವುದು. ಸಾಮಾನ್ಯವಾಗಿ ಜೀರ್ಣನಾಳವು ಒಳಗೊಂಡಿರುವುದರಿಂದ ವಾಕರಿಕೆ, ವಾಂತಿ ಮತ್ತು ಬೆನ್ನು ನೋವು ಸಂಭವಿಸುತ್ತದೆ.

ರೋಗದ ಬೆಳವಣಿಗೆ

ಬದಲಾಯಿಸಿ

ಸಣ್ಣ ಸಿಡುಬಿನ ವೈರಸ್ ಸಾಮಾನ್ಯವಾಗಿ ಚರ್ಮದ ಜೀವಕೋಶಗಳನ್ನು ಆಕ್ರಮಿಸುತ್ತದೆ. ಆಕ್ರಮಿಸಿದ ಸ್ವಲ್ಪ ಸಮಯದ ನಂತರ ಚರ್ಮದ ಮೇಲೆ ಗುಳ್ಳೆ ಆಗಲು ಶುರುವಾಗುತ್ತದೆ. ಲೋಳೆ ಪೊರೆಗಳ ಮೇಲೆ ಲೈಸಿಸ್ ಕಾಣಿಸಿಕೊಂಡಾಗ ಗುಳ್ಳೆಗಳಲ್ಲಿ ಕೀವು ತುಂಬಿಕೊಂಡು ದದ್ದುಗಳಂತೆ ೨೪ ರಿಂದ ೪೮ ಗಂಟೆಗಳ ಒಳಗೆ ಪರಿವರ್ತನೆಗೊಳ್ಳುತ್ತದೆ. ಸಾಮಾನ್ಯವಾಗಿ ಗುಳ್ಳೆಗಳು ಮೊದಲಿಗೆ ನೆತ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅನಂತರ ಅದು ಮುಖ, ಕೈ-ಕಾಲುಗಳು, ಹೊಟ್ಟೆ ಮತ್ತು ಮುಂತಾದ ದೇಹದ ಭಾಗಗಳಲ್ಲಿ ೨೪ ರಿಂದ ೩೬ ಗಂಟೆಗಳಲ್ಲಿ ಹರಡಿಕೊಳ್ಳುತ್ತದೆ. ಅನಂತರ ಯಾವುದೇ ಹೊಸ ಗುಳ್ಳೆ ಅಥವಾ ದದ್ದುಗಳು ದೇಹದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಗುಳ್ಳೆಗಳು ಸಂಪೂರ್ಣವಾಗಿ ಉದುರುವವರೆಗೂ ರೋಗ ಹರಡುವ ಸಾಧ್ಯತೆಗಳು ಇರುತ್ತದೆ.

ರೋಗಕಾರಕ

ಬದಲಾಯಿಸಿ
 
ಸಣ್ಣ ಸಿಡುಬನ್ನು ಉಂಟು ಮಾಡುವ ವೈರಸ್-ವೇರಿಯೋಲ ವೈರಸ್

ಸಣ್ಣ ಸಿಡುಬು ವೇರಿಯೋಲ ವೈರಸ್ ಎಂಬ ವೈರಸ್‍ನಿಂದ ಹರಡುತ್ತದೆ. ಇದರ ಜಾತಿಯ ಹೆಸರು ಆರ್ಥೋಫಾಕ್ಸ್‌ವೈರಸ್.[೧೧][೧೨] ಇದು ಪಾಕ್ಸ್ ವಿರಿಡೆ ಎಂಬ ಕುಟುಂಬಕ್ಕೆ ಸೇರುತ್ತದೆ. ಉಪಕುಟುಂಬ ಕಾರ್ಡೊಪೊಕ್ಸಿವಿರಿನೆ. ವೇರಿಯೋಲ ವೈರಸ್ ದೊಡ್ಡ ಇಟ್ಟಿಗೆಯ ಆಕಾರದಲ್ಲಿದೆ. ಇದು ೩೦೨ ರಿಂದ ೩೫೦ ನ್ಯಾನೊ ಮೀಟರ್/೨೪೪ ರಿಂದ ೨೭೦ ನ್ಯಾನೊ ಮೀಟರ್ ಉದ್ದವಾಗಿದೆ.[೧೩] ಇದರಲ್ಲಿ ಎರಡು ಎಳೆಯ ಡಿ.ಎನ್.ಎ ಜಿನೋಮ್ ಒಂದು ರೇಖೆ ಎಳೆದಂತೆ ಇದೆ. ಇದು ೧೮೬ ಕಿಲೋ ಬೇಸ್ ಪೇರ್ಸ್ (ಕೆ.ಪಿ.ಪಿ) ಅಷ್ಟು ತೂಕವಿದೆ.[೧೪]

ರೋಗ ಹರಡುವಿಕೆ

ಬದಲಾಯಿಸಿ

ಸಾಮಾನ್ಯವಾಗಿ ಈ ರೋಗವು ಗಾಳಿಯಿಂದ ಹರಡುತ್ತದೆ. ಈ ರೋಗಿಗಳು ಉಸಿರಾಡಿದಾಗ ಉಸಿರಾಟದ ಮುಖಾಂತರ ವೈರಸ್‌ ಗಾಳಿಯನ್ನು ಸೇರುತ್ತದೆ. ಆ ಗಾಳಿಯನ್ನು ಆರೋಗ್ಯಕರ ವ್ಯಕ್ತಿಯು ಉಸಿರಾಡಿದಾಗ ಆ ವೈರಸ್ ಉಸಿರಾಟದ ಮೂಲಕ ಆರೋಗ್ಯಕರ ವ್ಯಕ್ತಿಯ ಶರೀರವನ್ನು ಹೊಕ್ಕು ಅವರಿಗೆ ರೋಗವನ್ನು ತರುತ್ತದೆ. ಈ ರೋಗವು ಜೊಲ್ಲು, ಗೊಣ್ಣೆ, ಶರೀರದಿಂದ ಹೊರಹೊಮ್ಮುವ ದ್ರವಗಳಿಂದ ಮತ್ತು ರೋಗಿ ಬಳಸಿದ ವಸ್ತುಗಳಿಂದ ಹಾಗೂ ಮುಂತಾದವುಗಳಿಂದ ಹರಡುವ ಸಾಧ್ಯತೆಗಳಿವೆ. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಬಳಿಯಲ್ಲಿ ಅಂದರೆ ಆರು ಅಡಿಗಳ ಹತ್ತಿರದಲ್ಲಿ ನಿಂತು ಮಾತನಾಡಿದರೂ ಈ ರೋಗ ಹರಡುತ್ತದೆ. ಇದಲ್ಲದೆ ರೋಗಿಗಳ ರಕ್ತ ಕಣಗಳು ಅಥವಾ ಎಂಜಲು ತಾಕುವುದರಿಂದಲೂ ರೋಗ ಹರಡುವ ಸಾಧ್ಯತೆ ಇದೆ. ವೈರಸ್ ಶರೀರಕ್ಕೆ ಸೇರುವಾಗ ಅದು ಸಾಂಕ್ರಾಮಿಕವಾಗಿ ಇರುವುದಿಲ್ಲ. ಆದರೆ ದದ್ದುಗಳು ಬರುವುದು ಶುರುವಾದಂತೆ ಅದು ಸಾಂಕ್ರಾಮಿಕವಾಗುತ್ತದೆ. ಈ ಸಣ್ಣ ಸಿಡುಬು ಪೂರ್ತಿಯಾಗಿ ವಾಸಿಯಾಗುವವರೆಗೂ ಬೇರೆಯವರಿಗೆ ಹರಡುವ ಸಾಧ್ಯತೆಗಳು ಇವೆ. ಅದರಲ್ಲೂ ದದ್ದುಗಳ ಮೇಲೇ ಲೈಸಿಸ್ ಕಾಣಿಸಿಕೊಳ್ಳುವ ಸಮಯದಲ್ಲಿ ಹರಡುವ ಸಾಧ್ಯತೆಗಳು ತುಂಬ ಹೆಚ್ಚಾಗಿ ಇರುತ್ತದೆ.

ಸಣ್ಣ ಸಿಡುಬು ಒಂದು ತುಂಬ ಸುಲಭವಾಗಿ ಹರಡುವ ರೋಗ. ಆದರೆ ದೇಹದಲ್ಲಿ ಇದರ ವೈರಸ್ ನಿಧಾನವಾಗಿ ಹರಡಲು ಆರಂಭಿಸುತ್ತದೆ. ಇದು ಬೇರೆ ವೈರಾಣು ರೋಗಗಳಂತೆ ವಿಶಾಲವಾಗಿ ಹರಡುವುದಿಲ್ಲ. ಈ ರೋಗ ಕಡಿಮೆ ಅವಧಿಯಲ್ಲಿ ಯಥೇಚ್ಚವಾಗಿ ಹರಡಿಕೊಳ್ಳುತ್ತದೆ. ಈ ರೋಗವು ತುಂಬ ಹತ್ತಿರದ ಸಂಪರ್ಕದಲ್ಲಿ ಇದ್ದರೆ ಮಾತ್ರ ಹರಡಲು ಸಾಧ್ಯ. ಈ ರೋಗವು ಚಳಿಗಾಲ ಮತ್ತು ವಸಂತಕಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಯಾವುದೇ ಕ್ರಿಮಿ-ಕೀಟಗಳಿಂದ ಅಥವಾ ಪ್ರಾಣಿಗಳಿಂದ ಹರಡುವುದಿಲ್ಲ. ಈ ರೋಗ ಬಂದಿರುವ ಸೂಚನೆಯನ್ನು ಪ್ರಯೋಗ ಶಾಲೆಯಲ್ಲಿ ಮುಂತಾದ ಪರೀಕ್ಷೆಗಳಿಂದ ಕಂಡು ಬರುತ್ತದೆ. ಈ ರೋಗವನ್ನು ಲಸಿಕೆಯ ಮೂಲಕ ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.[೧೫]

ತಡೆಗಟ್ಟುವಿಕೆ

ಬದಲಾಯಿಸಿ

ಸಣ್ಣ ಸಿಡುಬು ರೋಗವನ್ನು ಇನಾಕ್ಯುಲೇಷನ್ ಮುಖಾಂತರ ತಡೆಗಟ್ಟಬಹುದು. ಇನಾಕ್ಯುಲೇಷನ್‌ನನ್ನು ಮೊದಲಿಗೆ ಭಾರತ ಮತ್ತು ಚೈನಾ ದೇಶದಲ್ಲಿ ಬಳಸುತ್ತಿದ್ದರು.[೧೬][೧೭] ಹಿಂದಿನ ದಿನಗಳಲ್ಲಿ ಸಣ್ಣ ಸಿಡುಬನ್ನು ತಡೆಗಟ್ಟಲು ಇನಾಕ್ಯುಲೇಷನ್‌ನನ್ನು ಬಳಸುತ್ತಿದ್ದರು. ಈ ಇನಾಕ್ಯುಲೇಷನ್‌ನನ್ನು ಲೇಡಿ ಮೇರಿ ವಾರ್ಟ್ಲಿ ಮಂಟಾಗುರವರು ಕಂಡುಹಿಡಿದಿದ್ದಾರೆ. ಸಣ್ಣ ಸಿಡುಬು ತಡೆಗಟ್ಟಲು ಲಸಿಕೆಯನ್ನು ದೇಶದಾದ್ಯಂತ ಬಳಸಲು ಆರಂಭಿಸಿದರು. ಇತ್ತಿಚ್ಛಿಗೆ ವ್ಯಕ್ಸಿನ ಎಂಬ ವೈರಸ್‌ನನ್ನು ಸಣ್ಣ ಸಿಡುಬನ್ನು ತಡೆಗಟ್ಟಲು ಬಳಸುತ್ತಿದ್ದಾರೆ ಆದರೆ ಈ ವೈರಸ್ ಹೇಗೆ ಹುಟ್ಟಿಕೊಂಡಿತು ಎಂದು ಯಾರಿಗೂ ತಿಳಿದ್ದಿಲ್ಲ.

ಚಿಕಿತ್ಸೆ

ಬದಲಾಯಿಸಿ

ಸಣ್ಣ ಸಿಡುಬು ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆಯನ್ನು ನೀಡುವುದರಿಂದ ವಾಸಿ ಮಾಡುತ್ತಾರೆ. ಈ ಲಸಿಕೆಯನ್ನು ಸೋಂಕು ಕಾಣಿಸಿಕೊಂಡ ಮೂರು ದಿನಗಳ ಒಳಗೆ ನೀಡಿದರೆ ಆದು ಸಣ್ಣ ಸಿಡುಬಿನ ರೋಗದ ಲಕ್ಷಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುತ್ತದೆ. ಇದೇ ಲಸಿಕೆಯನ್ನು ನಾಲ್ಕು ದಿನದಿಂದ ಏಳು ದಿನಗಳ ಒಳಗೆ ನೀಡಿದರೆ ಸಣ್ಣ ಪ್ರಮಾಣದಲ್ಲಿ ರೋಗದ ಹರಡುವಿಕೆಯನ್ನು ತಡೆಯಬಹುದು. ಈ ರೋಗಕ್ಕೆ ಯಾವುದೇ ರೀತಿಯ ಮದ್ದು ಅಥವಾ ಮಾತ್ರೆಯನ್ನು ಇದುವರೆಗೂ ಅಂಗೀಕರಿಸಿಲ್ಲ. ಆದರೆ ಆಂಟಿವೈರಲ್ ಚಿಕಿತ್ಸೆಗಳು ಬಳಕೆಯಲ್ಲಿದೆ.

ರೋಗದ ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಲದಿಂದಲ್ಲೂ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಈ ರೋಗದ ಬಗ್ಗೆ ಭಾರತದ ಪ್ರಾಚೀನ ಪುಸ್ತಕಗಳಲ್ಲಿ ಸಹ ಕಂಡುಬಂದಿದೆ.[೧೮][೧೯] ಇದು ಮೊದಲಿಗೆ ಈಜಿಪ್ಟ್‌ನಲ್ಲಿ ಕಂಡು ಬಂದಿದೆ. ಆನಂತರ ವ್ಯಾಪಾರಿಗಳ ಮುಖಾಂತರ ಈ ರೋಗ ಭಾರತಕ್ಕೆ ಹಬ್ಬಿತು ಎಂಬ ಇತಿಹಾಸವಿದೆ. ಭಾರತದಲ್ಲಿ ಹಿಂದೂ ಜನಾಂಗದವರು ಸಣ್ಣ ಸಿಡುಬು ಬಂದಾಗ ಶೀತಲಾ ದೇವಿ ಎಂಬ ದೇವತೆಯನ್ನು ಪೂಜಿಸುವುದರ ಅವರ ರೋಗವನ್ನು ವಾಸಿ ಮಾಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದರು.[೨೦] ೧೮ ನೇ ಶತಮಾನದಲ್ಲಿ ಈ ಸಣ್ಣ ಸಿಡುಬು ಸ್ಥಳೀಯ ರೋಗವಾಗಿ ಕಂಡು ಬಂದಿತ್ತು. ಪ್ರಪಾಂಚದಾದ್ಯಂತ ಹೆಚ್ಚು ಕಡಿಮೆ ಎಲ್ಲಾ ದೇಶದ ಜನರು ಈ ರೋಗದಿಂದ ನರಳುತ್ತಿದ್ದರು. ಈ ರೋಗವು ಹೆಚ್ಚಿನ ಸಾವಿಗೆ ಕಾರಣವಾಯಿತ್ತು.

ರೋಗ ನಿರ್ಮೂಲನೆ

ಬದಲಾಯಿಸಿ

ಈ ರೋಗವನ್ನು ನಿರ್ಮೂಲನೆಗೊಳಿಸಲು ಅಮೇರಿಕ ಹಾಗೂ ಫಿಲಿಪೈನ್ಸ್ ನಲ್ಲಿ ಮಾಸ್ ವ್ಯಾಕ್ಸಿನೇಷನ್ ಪ್ರೋಗ್ರಮ್ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು.[೨೧] ೧೮೧೩ ನಲ್ಲಿ ಯು.ಎಸ್ ಕಾಂಗ್ರೆಸ್ ಸರ್ಕಾರವು ವ್ಯಾಕ್ಸಿನ್ ಆಕ್ಟ್‌ನನ್ನು ಪ್ರಾರಂಭಿಸಿತು. ಸಣ್ಣ ಸಿಡುಬಿನ ಲಸಿಕೆಯು ಅಮೇರಿಕದ ಸಾರ್ವಜನಿಕರಿಗೆ ಸುಲಭವಾಗಿ ಲಭಿಸಬೇಕೆಂಬುದು ಈ ಆಕ್ಟ್‌ನ ಮುಖ್ಯ ಉದ್ದೇಶವಾಗಿತ್ತು. ಈ ರೀತಿಯಾಗಿ ಮುಂತಾದ ಕಾರ್ಯಕ್ರಮಗಳನ್ನು ಕೈ ಗೊಳ್ಳುತ್ತಾ ಸಣ್ಣ ಸಿಡುಬನ್ನು ವಿಶ್ವದಾದ್ಯಂತ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿತ್ತು.

ಉಲ್ಲೇಖನಗಳು

ಬದಲಾಯಿಸಿ
  1. Barton, Leslie L.; Friedman, Neil R. (2008). The Neurological Manifestations of Pediatric Infectious Diseases and Immunodeficiency Syndromes (in ಇಂಗ್ಲಿಷ್). Springer Science & Business Media. p. 151. ISBN 978-1-59745-391-2.
  2. Fenner F, Henderson DA, Arita I, Ježek Z, Ladnyi ID (1988). "The History of Smallpox and its Spread Around the World" (PDF). Smallpox and its eradication. History of International Public Health. Vol. 6. Geneva: World Health Organization. pp. 209–44. hdl:10665/39485. ISBN 978-92-4-156110-5. Archived (PDF) from the original on 12 December 2019. Retrieved 14 December 2017.
  3. Medicine: The Definitive Illustrated History. Pengui. 2016. p. 100. ISBN 978-1-4654-5893-3.
  4. http://www.who.int/csr/disease/smallpox/en/
  5. Wolfe RM, Sharp LK (August 2002). "Anti-vaccinationists past and present". BMJ. 325 (7361): 430–32. doi:10.1136/bmj.325.7361.430. PMC 1123944. PMID 12193361.
  6. "Smallpox vaccines". WHO. Archived from the original on 30 September 2020. Retrieved 27 March 2020.
  7. "Smallpox". WHO Factsheet. Archived from the original on 21 September 2007.
  8. Vogel, Gretchen (2004-11-19). "WHO Gives a Cautious Green Light to Smallpox Experiments". Science (in ಇಂಗ್ಲಿಷ್). 306 (5700): 1270–1271. doi:10.1126/science.306.5700.1270a. ISSN 0036-8075. PMID 15550627. S2CID 28863021. Archived from the original on 11 May 2022. Retrieved 11 May 2022.
  9. Altman, Lawrence (25 January 1996). "Final Stock of the Smallpox Virus Now Nearer to Extinction in Labs". New York Times. Retrieved 23 November 2007.
  10. http://www.healthline.com/health/smallpox
  11. Ryan KJ, Ray CG, eds. (2004). Sherris Medical Microbiology (4th ed.). McGraw Hill. pp. 525–28. ISBN 978-0-8385-8529-0.
  12. Babkin, I, Babkina, I (March 2015). "The Origin of the variola Virus". Viruses. 7 (3): 1100–1112. doi:10.3390/v7031100. PMC 4379562. PMID 25763864.
  13. Dubochet J, Adrian M, Richter K, Garces J, Wittek R (March 1994). "Structure of intracellular mature vaccinia virus observed by cryoelectron microscopy". Journal of Virology. 68 (3): 1935–41. doi:10.1128/JVI.68.3.1935-1941.1994. PMC 236655. PMID 8107253.
  14. http://study.com/academy/lesson/smallpox-virus-structure-and-function.html
  15. http://www.healthline.com/health/smallpox
  16. "What is Smallpox?". CDC (in ಅಮೆರಿಕನ್ ಇಂಗ್ಲಿಷ್). 7 June 2016. Archived from the original on 7 June 2020. Retrieved 14 December 2017.
  17. Riedel S (January 2005). "Edward Jenner and the history of smallpox and vaccination". Proceedings. 18 (1): 21–25. doi:10.1080/08998280.2005.11928028. PMC 1200696. PMID 16200144.
  18. Shchelkunov SN (December 2011). "Emergence and reemergence of smallpox: the need for development of a new generation smallpox vaccine". Vaccine. 29 (Suppl 4): D49–53. doi:10.1016/j.vaccine.2011.05.037. PMID 22185833.
  19. Vaccine and Serum Evils, by Herbert M. Shelton, p. 5
  20. Henderson DA, Preston R (2009). Smallpox- the Death of a Disease: The Inside Story of Eradicating a Worldwide Killer (1st ed.). Prometheus Books. p. 334. ISBN 978-1-59102-722-5. Archived from the original on 21 July 2020. Retrieved 12 September 2017.
  21. Ong, Willie T. "Dr. Francisco de Balmis and his Mission of Mercy". Society of Philippine Health History. Archived from the original on 23 December 2004. Retrieved 14 July 2015.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: