ದೃಷ್ಟಿ ಹಾನಿ
(ಕುರುಡುತನ ಇಂದ ಪುನರ್ನಿರ್ದೇಶಿತ)
ದೃಷ್ಟಿ ಹಾನಿ ಅಥವಾ ದೃಷ್ಟಿ ನಷ್ಟ ಕನ್ನಡಕದಂತಹ ಸಾಮಾನ್ಯ ವಿಧಾನಗಳಿಂದ ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗುವ ಮಟ್ಟಿಗೆ ನೋಡುವುದರ ತಗ್ಗಿದ ಸಾಮರ್ಥ್ಯ.[೧] ಕುರುಡುತನ ಪದವನ್ನು ಸಂಪೂರ್ಣ ಅಥವಾ ಬಹುತೇಕ ಸಂಪೂರ್ಣ ದೃಷ್ಟಿ ನಷ್ಟಕ್ಕೆ ಬಳಸಲಾಗುತ್ತದೆ. ದೃಷ್ಟಿ ಹಾನಿಯು ಜನರಿಗೆ ವಾಹನ ಚಾಲನೆ, ಓದುವುದು, ಸಾಮಾಜಿಕ ಬೆರೆಯುವಿಕೆ, ಮತ್ತು ಕಾಲ್ನಡಿಗೆಯಂತಹ ಸಾಮಾನ್ಯ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.
ಸರಿಪಡಿಸದ ವಕ್ರೀಕಾರಕ ದೋಷಗಳು (೪೩%), ಕಣ್ಣಿನ ಪೊರೆಗಳು (೩೩%), ಮತ್ತು ಗ್ಲಾಕೋಮಾ (೨%) ಜಾಗತಿಕವಾಗಿ ದೃಷ್ಟಿ ಹಾನಿಯ ಅತಿ ಸಾಮಾನ್ಯ ಕಾರಣಗಳು. ಕಣ್ಣಿನ ಪೊರೆಗಳು ಕುರುಡುತನದ ಅತಿ ಸಾಮಾನ್ಯ ಕಾರಣವಾಗಿವೆ. ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುವ ಇತರ ಅಸ್ವಸ್ಥತೆಗಳು ಮಧುಮೇಹದ ಅಕ್ಷಿಪಟಲದೋಷ, ಬಾಲ್ಯದ ಕುರುಡು, ಮತ್ತು ಹಲವಾರು ಸೋಂಕುಗಳನ್ನು ಒಳಗೊಂಡಿವೆ.[೨] ದೃಷ್ಟಿ ಹಾನಿಯು ಆಘಾತದಿಂದ ಮಿದುಳಿನಲ್ಲಿನ ಸಮಸ್ಯೆಗಳು, ಅಕಾಲಿಕ ಜನನ, ಅಥವಾ ಮಾನಸಿಕ ಧಕ್ಕೆಯಿಂದ ಉಂಟಾಗಬಲ್ಲದು.