ಕಿವುಡು ಮತ್ತು ಅರೆಗಿವುಡು

ಭಾಗಶಃ ಅಥವಾ ಸಂಪೂರ್ಣ ಶ್ರವಣ ದೋಷ

ಕಿವುಡು ಎಂದರೆ ಕೇಳುವ ಶಕ್ತಿ ಇಲ್ಲದಿರುವುದು. ಇದು ಸ್ವಲ್ಪ ಕಿವುಡಿನಿಂದ ಪೂರ್ತಿ ಕಿವುಡಿನವರೆಗೆ ಬೇರೆ ಬೇರೆ ಮಟ್ಟಗಳಲ್ಲಿರಬಹುದು. ಸ್ವಲ್ಪ, ಸುಮಾರು, ಮತ್ತು ಪೂರ್ತಿ ಎಂಬವು ಕಿವುಡಿನ ಪ್ರಮಾಣವನ್ನು ಸೂಚಿಸುವ ಪದಗಳು. ಕೇಳುವ ಶಕ್ತಿ ಇದ್ದರೂ ದಿನಚರಿಯಲ್ಲಿ ಉಪಯೋಗಕ್ಕೆ ಬಾರದಷ್ಟು ಕಿವುಡು ಇರುವವರಿದ್ದಾರೆ. ಅಳತೆಯ ಮಾತಿನಲ್ಲಿ ಕಿವುಡು ಎಂದರೆ 30 ಡೆಸಿಬೆಲ್‍ಗಳಿಗಿಂತ ಹೆಚ್ಚಿರುವುದ (ಶ್ರವ್ಯ ಶಬ್ದದ ತೀವ್ರತಯ ಒಂದು ಮಾನ 1 ಡಿಸಿಬೆಲ್ = 1,259. 30 ಡೆಸಿಬಲ್ = (1.259)30. (ನೋಡಿ- ಡೆಸಿಬೆಲ್). ಕ್ಷಣಕ್ಕೆ 500. 1,000 ಮತ್ತು 2,000 ಕಂಪನಿವಿರುವ ಶ್ರುತಿಗಳಲ್ಲಿ 70 ಡೆಸಿಬೆಲ್‍ಗಳಿಗಿಂತ ಹೆಚ್ಚು ಕಿವುಡಾಗಿರುವವರನ್ನು ಮಾತ್ರ ಕಿವುಡರು ಎಂದು ಪರಿಗಣಿಸಬೇಕೆಂದು ಭಾರತ ಸರ್ಕಾರ ನಿಗದಿಮಾಡಿದ. ಈ ಲೇಖನದಲ್ಲಿ ಕಿವುಡು ಎಂದರೆ 30 ಡೆಸಿಬೆಲ್‍ಗಳಿಗಿಂತ ಹೆಚ್ಚಿರುವುದು ಎಂದು ತಿಳಿಯಬೇಕು.ಹೆಚ್ಚು ಕಿವುಡಾಗಿರುವವರು ಭಾರತದಲ್ಲಿ 10 ದಶಲಕ್ಷಗಳಷ್ಟಿರುವರೆಂದು ಅಂದಾಜಾಗಿದೆ. ಸ್ವಲ್ಪ ಕಿವುಡಿರುವ ಕೆಪ್ಪರನ್ನೂ ಸೇರಿಸಿಕೊಂಡರೆ ಈ ಸಂಖ್ಯೆಯ ಬಹು ದೊಡ್ಡದಾಗುತ್ತದೆ. ಈ ಅಂಕಿಅಂಶಗಳು ಅಲ್ಲಲ್ಲಿ ನಡೆಯುವ ಜನಗಣತಿಯಿಂದ ತಿಳಿಯುತ್ತವೆ. ದೇಶದ ಕೆಲವು ಭಾಗಗಳಲ್ಲಿ ಶಾಲಾಬಾಲಕರ ವೈದ್ಯಪರೀಕ್ಷೆಯಿಂದ ಸೇ. 17-20 ರಪ್ಟು ಮಕ್ಕಳು ಸ್ವಲ್ಪ ಕಿವುಡಿನಿಂದ ತೊಂದರೆಪಡುವುದು ಗೊತ್ತಾಗಿದೆ.1971ನೆಯ ಸಾಲಿನ ಜನಗಣತಿಯಿಂದ ಭಾರತದ ಜನರಲ್ಲಿ ಎಪ್ಟು ಕಿವುಡತನವೆದೆಯೆಂದು ತಿಳಿಯಲು ಸಾಧ್ಯವಾಗಿದೆ.

ಕಿವುಡಿನ ವಿಧಗಳು

ಬದಲಾಯಿಸಿ

ವಾಯುಮಾಧ್ಯಮದಲ್ಲಿ ಶಬ್ದತರಂಗಗಳು ಸರಿಯತ್ತಿರುತ್ತವೆ. ಈ ಅಲೆಗಳು ಹೊರಗಿವಿಯಲ್ಲಿ ನುಗ್ಗಿ ನಡುಗಿವಿಯಲ್ಲಿನ ಮೂರು ಸಣ್ಣ ಮೂಳೆಗಳ ಮೂಲಕ ಒಳಗಿವಿಯನ್ನು ಸೇರುತ್ತವೆ. ಅಲ್ಲಿ ಸಣ್ಣ ರೋಮಕಣಗಳಿರುವ ಕಾರ್ಟಿ ಅಂಗವಿದೆ. ವಿಂಗಡಿಸಲಾದ ಸಮಾಚಾರ ಕಿವಿಯ ನರದ ಮೂಲಕ ಮಿದುಳಿನಲ್ಲಿರುವ ಶ್ರವಣ ಕೇಂದ್ರವನ್ನು ತಲಪುತ್ತದೆ. ಅಲ್ಲಿ ಸಮಾಚಾರದ ವಿವರಗಳನು ತಿಳಿಯಲಾಗುತ್ತದೆ. ಶಬ್ದ ಸಮಾಚಾರಗಳನ್ನು ಒಯ್ಯುವ ಈ ಮಾರ್ಗಕ್ಕೆ ಅಡಚಣೆಯೊಡ್ಡುವ ಯಾವ ಅಸಾಧಾರಣ ಸ್ಥಿತಿ ಅಥವಾ ಶಬ್ದ ಒಯ್ಯಲಿಕ್ಕೆ, ಕಿವಿಯ ಶಂಖದಲ್ಲಿ ನರಗಳ ಕೆಲಸಕ್ಕೆ ಅಥವಾ ಮಿದುಳಿಗೆ ಸಮಾಚಾರ ತಲುಪುವುದಕ್ಕೆ ಅಡ್ಡಿಮಾಡುವ ಯಾವ ಅಸಾಧಾರಣಸ್ಥಿತಿ ಅಥವಾ ರೋಗದಿಂದಲಾಗಲಿ ಕೆಳಕಾಣಿಸಿರುವ ಕಿವುಡಿನ ವಿಧಗಳುಂಟಾಗುತ್ತದೆ. 1. ವಾಹಕಕಿವುಡು: ಒಳಗಿವಿಗಿರುವ ಶಬ್ದದ ಅಲೆಗಳ ದಾರಿಯಲ್ಲಿ ಅಡ್ಡಿಯೊದಗುವುದು. ಇದು ಹೊರಗಿವಿಯ, ಕಿವಿದಮಟಿಯ ಮತ್ತು ನಡುಗಿವಿಯ ರೋಗಗಳಿಂದಾಗುತ್ತದೆ ಈ ರೀತಿಯ ಕಿವುಡಿರುವವರಲ್ಲನೇಕರು ತಗ್ಗುಧ್ವನಿಯಲ್ಲಿ ಮಾತನಾಡುತ್ತಾರೆ. ಇದು ಔಷಧ ಅಥವಾ ಶಸ್ತ್ರ್ರಚಿಕಿತ್ಸೆಯಿಂದ ಸರಿಹೋಗುತ್ತದೆ. 2. ಶಂಖದ ಕಿವುಡು: ಇದು ಒಳಗಿವಿಯಲ್ಲಿ ಕಾರ್ಟಿ ಅಂಗದ ರೋಗದಿಂದಾಗುತ್ತದೆ. ಇದರಲ್ಲಿ ಸಾಧಾರಣವಾಗಿ ದೊಡ್ಡ ಶಬ್ದಗಳಿಗೆ ವ್ಯಕ್ತಿ ಅಸಹನೆ ತೋರುತ್ತಾನೆ ಇಲ್ಲವೇ ಹೇಳಿದ್ದನ್ನು ತಪ್ಪಾಗಿ ಗ್ರಹಿಸುತ್ತಾನೆ. 3. ನರದ ಕಿವುಡು: ಇದು ಕಿವಿಯ ನರದ ದೌರ್ಬಲ್ಯದಿಂದಾಗುತ್ತದೆ. ಇದಿದ್ದಲ್ಲಿ ಸಾಧಾರಣವಾಗಿ ಸುಲಭವಾಗಿ ಆಯಾಸವಾಗುವುದು. ಕೇಳಿಸಿದ ಶಬ್ದ ಅರ್ಥವಾಗುವುದಿಲ್ಲ. 4. ಮಿಶ್ರ ಕಿವುಡು: ಮೇಲೆ ಹೇಳಿದ 1, 2 ಮತ್ತು 3ನೆಯ ವಿಧಗಳು ಒಟ್ಟಗಿರುವುದು. 5. ಮಾನಸಿಕ ಕಿವುಡು: ಇದರಲ್ಲಿ ಎರಡು ವಿಧಗಳಿವೆ. ಸನ್ನಿಯ ಕಿವುಡಿನಲ್ಲಿ ಕಿವಿಯ ಯಾವ ಭಾಗದ ರೋಗವೂ ಇರುವುದಿಲ್ಲ. ಸದಾ ಕಿವಿಡು ಒಂದೇ ಮಟ್ಟದಲ್ಲಿರುವುದಿಲ್ಲ. ಇಂಥವರ ವ್ಯಕ್ತಿತ್ವದಲ್ಲೇ ಮಾರ್ಪಾಡಾಗುತಿರುತ್ತದೆ. ತೋರಿಕೆ ಕಿವುಡಿನಲ್ಲಿ ಸರಿಯಾಗಿರುವ ಮನುಷ್ಯನೇ ಕಿವುಡನಂತೆ ನಟಿಸುವುದು ಕಂಡು ಬರುತ್ತದೆ. ಕೆಲವು ಉದ್ದೇಶಗಳಿಂದ ವ್ಯಕ್ತಿ ಹೀಗೆ ನಟನೆಮಾಡುತ್ತಾನೆ.[]

ನಿಷ್ಕರ್ಷೆ ಮತ್ತು ಅಳತೆ

ಬದಲಾಯಿಸಿ

ಚಪ್ಪಾಳೆ, ಪಾತ್ರೆ ಶಬ್ದ ಇತ್ಯಾದಿಗಳಿಂದ ಕೂಸಿನಲ್ಲೇ ಕಿವುಡಿರುವುದನ್ನು ಪತ್ತೆಮಾಡಬಹುದು. ಮಾತು ತಿಳಿಯದಿರುವದರಿಂದ ಪ್ರಶ್ನೆಗಳಿಗೆ ಉತ್ತರ ಕೊಡುವುದರಿಂದ ಬೆಳೆದ ಮಗುವಿನಲ್ಲಿರುವ ಕಿವುಡು ತಿಳಿಯುತ್ತದೆ. ಮಾತನ್ನು ತಿಳಿಯಲಾಗದಿರುವುದು, ಅದರಲ್ಲೂ ಗುಂಪು ಸಂಭಾಷಣೆಯಲ್ಲಿ ಕಷ್ಟಕಾಣುವುದು ದೊಡ್ಡವರಲ್ಲಿ ಕಿವುಡಿನ ಮೊದಲು ಸೂಚನೆ. ಕೈಗಡಿಯಾರದ ಶಬ್ದ ಕೇಳದಿದ್ದಾಗ ಬಹು ಜನರು ವೈದ್ಯನನ್ನು ಕಾಣುತ್ತಾರೆ.ಪಿಸುಮಾತು, ಶ್ರುತಿಚಿಮಟ ಮತ್ತು ಅಡಿಯೋಮಿಟರ್ ಪರೀಕ್ಷೆಗಳಿಂದ ಕಿವುಡಿರುವುದನ್ನು ನಿಶ್ಚಯಿಸಬಹುದು. ಒಂದು ನಿಶ್ಶಬ್ದ ಕೋಣೆಯಲ್ಲಿ 12 ಅಡಿ ದೂರದಲ್ಲಿ ಆಡಿದ ಗಟ್ಟಿಪಿಸುಮಾತನ್ನು ಸಾಮಾನ್ಯರು ಕೇಳಬಲ್ಲರು. ಆಡಿಯೋಮೀಟರ್‍ಗಳಿಂದ ಎಷ್ಟು ಕಿವುಡು ಎಂಬುದನ್ನು ಅಳತೆಮಾಡಬಹುದು.[]

ಕಿವುಡಿನ ಕಾರಣಗಳು

ಬದಲಾಯಿಸಿ

ಕಿವುಡು ಹಲವು ರೋಗಗಳ ಚಿಹ್ನೆ. ಇಲ್ಲಿ ಬೇರೆ ಬೇರೆ ವಯಸ್ಸಗಳಲ್ಲುಂಟಾಗುವ ಅತಿಸಾಮಾನ್ಯ ರೋಗಗಳನ್ನು ತಿಳಿಸಲಾಗಿದೆ. ಆದರೆ ನಿಜಜೀವನದಲ್ಲಿ ಇಲ್ಲಿ ಬರೆದಂತೆ ಅವು ತನಿತನಿಯಾಗಿರುವಿದಿಲ್ಲ. ಸ್ಪಷ್ಟತೆಗೆ ಈರೀತಿ ಬರೆಯಲಾಗಿದೆ.ಶೈಶವ ಮತ್ತು ಮೊದಲ ಬಾಲ್ಯಾವಸ್ಥೆ: ಕೂಸಿನಲ್ಲಿಲ ಹುಟ್ಟು ಕಿವುಡಿರಬಹುದು. ಇದಕ್ಕೆ ಕಾರಣ ವಂಶಾವಳಿಯ ಪ್ರಭಾವ, ಅಂದರೆ ಪ್ರಬಲ ಅಥವಾ ನಿರ್ಬಲವಂಶವಾಹಿಗಳು (ಜೀನ್) ಹೀಗೆ ಕಿವುಡು ಪರಂಪರೆಯಿಂದ ಮಗುವಿಗೆ ಬರಬಹುದು. ಗರ್ಭಕೋಶದಲ್ಲಿ ಅಥವಾ ಪ್ರಸವಕಾಲದಲ್ಲಿ ಬಸುರುನಂಜು, ಆರ್ ಎಚ್ ರಕ್ತದೋಷ, ವೈರಸ್ ರೋಗಗಳು, ನಿಧಾನ ಪ್ರಸವ ಅಥವಾ ಪ್ರಸವಗಾಯಗಳಿಂದಾಗಿ ತಾಯಿಯ ಮೂಲಕ ಮಗು ಕಿವುಡಾಗಬಹುದು. ಗದ್ದಬಾವು, ಸೀತಾಳಿ, ಮತ್ತು ಮಿದುಳು ಪೊರೆಯುರಿತಗಳು ಮಗುವಿನಲ್ಲಿ ಅತಿಕಿವುಡನ್ನುಂಟು ಮಾಡುವ ಮೂರು ಸಾಮಾನ್ಯರೋಗಗಳು. ಮಗುವಿನಲ್ಲಿ ಕಿವುಡಿಗೂ ಮಾತು ಕಲಿಯುವುದಕ್ಕೂ ನಿಕಟಸಂಬಂಧವಿದೆ.

ಶಾಲಾಬಾಲ್ಯಾವಸ್ಥೆ

ಬದಲಾಯಿಸಿ

ಕಿವಿಯ ಮೇಲೆ ಏಟು, ಪಟಾಕಿ ಸಿಡಿತದ ಶಬ್ದ ಮುಂತಾದುವುಗಳಿಂದ ಕಿವಿತಮಟೆಗೆ ಹಾನಿಯಾಗಿ ಕಿವುಡು ಬರುತ್ತದೆ. ಕಿವಿಸೋರುವುದು ಮಕ್ಕಳಲ್ಲಿ ಕಿವುಡಿಗೆ ಅತಿಸಾಮನ್ಯ ಕಾರಣ. ಪದೇ ಪದೇ ಬರುವ ನೆಗಡಿಯೂ ಒಂದು ಕಾರಣ. ಗಂಟಲಿನಲ್ಲಿ ಸಣ್ಣ ದುಗ್ಧಗ್ರಂಥಿಗಳ ಉರಿತವೇ ಆಗಾಗ ಬರುವ ನೆಗಡಿಗೂ ಕಿವಿಗಂಟಲುನಾಳ ಮುಚಿಕೊಳ್ಳುವುದಕ್ಕೂ ಕಾರಣ. ಈ ನಾಳದ ಮತ್ತು ನಡುಗಿವಿಯ ಒಗ್ಗದಿಕೆ ರೋಗದಿಂದ ಗೋಂದುಕಿವಿ ಎಂಬ ಸ್ಥಿತಿಯುಂಟಾಗಿ ಕಿವುಡಾಗುತ್ತದೆ.ಹೆಚ್ಚು ಗುಗ್ಗೆ, ಮಣಿ, ಕಾಳು, ಕಲ್ಲು ಮುಂತಾದವುಗಳಿಂದ ಕಿವುಡುಂಟಾಗುತ್ತದೆ. ಇವನ್ನು ತೆಗೆಯುವುದರಲ್ಲಾಗುವ ಅಚಾರ್ತುಯದಿಂದ ಕಿವಿಗಳಿಗೆ ಆಗಾಗ ಸರಿಪಡಿಸಲಾಗದ ಹಾನಿಯಾಗುತ್ತದೆ.

ಪ್ರೌಢಾವಸ್ಥೆ

ಬದಲಾಯಿಸಿ

ಫಿರಂಗಿ ಶಬ್ದ ಮುಂತಾದ ಗಟ್ಟಿಶಬ್ದಗಳಿಂದ ಸೈನಿಕರಲ್ಲಿ ಕಿವಿದಮಟೆ ಮತ್ತು ಒಳಗಿವಿಗಳಿಗೆ ಹಾನಿಯಾಗುವುದು ಸಾಮಾನ್ಯ. ಇದು ಸಿಡಿತದ ಕಿವುಡು. ಹೊರಗಿವಿಯಲ್ಲಾಗುವ ಒತ್ತಡದ ವ್ಯತ್ಯಾಸಗಳಿಂದ ಕಿವಿದಮಟೆ ಹರಿಯುವುದಲ್ಲದೆ ಒಳಗಿವಿಯಲ್ಲಿ ಸಣ್ಣ ರಕ್ತಸ್ರಾವವಾಗುತ್ತದೆ. ಇದರಿಂದ ಮಿಶ್ರಕಿವುಡುಂಟಾಗುತ್ತದೆ. ವಿಮಾನಪ್ರಯಾಣದಲ್ಲೂ ಇದೇ ರೀತಿ ವ್ಯತ್ಯಾಸಗಳಾಗುತ್ತದೆ. ಇವು ವಿಮಾನ ಇಳಿಯುವಾಗ ಕೆಲವು ಪ್ರಯಾಣಿಕರಲ್ಲುಂಟಾಗುವ ಕಿವಿನೋವು ಮತ್ತು ಕಿವುಡಿಗೆ ಕಾರಣ.

ಸಾಮಾನ್ಯವಾಗಿ ಉಪಯೋಗಿಸುವ ಸ್ಟ್ರೆಪ್ಟೊಮೈಸಿನ್ ಸಲ್ಛೇಟ್ ಎಂಬ ಚುಚ್ಚು ಮದ್ದು ಕಿವಿಯ ಶಂಖದ ಮೇಲೆ ವಿಷಪರಿಣಾಮವನ್ನುಂಟುಮಾಡಿ ಕೆಲವರಲ್ಲಿ ಕಿವುಡಿಗೆ ಕಾರಣವಾಗುತ್ತದೆ. ಹಾಗೆಯೇ ನೋವನ್ನು ಹೋಗಲಾಡಿಸುವ ಸ್ಯಾಲಿಸಿಲೇಟ್ ರಾಸಾಯನಿಕಗಳಿಂದಲೂ ಕಿವುಡಾಗುತ್ತದೆ. ಸಕಾಲಕ್ಕೆ ಅವುಗಳ ಸೇವನೆಯನ್ನು ನಿಲ್ಲಿಸುವುದರಿಂದ ಪರಿಣಾಮವನ್ನು ಕಡಿಮೆಮಾಡಬಹುದು ಮತ್ತು ಕೇಳುವ ಪೂರ್ಣಶಕ್ತಿಯನ್ನೂ ಮತ್ತೆ ಪಡೆಯಬಹುದು.

ಕ್ರಿಮಿರೋಗಗಳು

ಬದಲಾಯಿಸಿ

ಸಾಮಾನ್ಯವಾಗಿ ಮಕ್ಕಳಲ್ಲಿ ಕಿವಿಯ ಕೀವು ಮತ್ತು ಉರಿತವನ್ನುಂಟುಮಾಡುವ ಕ್ರಿಮಿಗಳು ದೊಡ್ಡವರನ್ನೂ ಅದೇ ರೀತಿ ಕಾಡಬಹುದು. ಒಳಗಿವಿಗೆ ಮೇಹರೋಗವಾದ ಉಪದಂಶ ತಗಲವುದÀರಿಂದ ದಿಢೀರನೆ ಕಡುಕಿವುಡಾಗುತ್ತದೆ. ತತ್‍ಕ್ಷಣ ಚಿಕಿತ್ಸೆಯಾಗದಿದ್ದರೆ ಈ ಕಿವುಡು ಹೋಗುವುದಿಲ್ಲ.

ಇತರ ರೋಗಗಳು

ಬದಲಾಯಿಸಿ

ಓಟೊಸ್ಕ್ಲೀರೋಸಿಸ್ ಇದು ಒಳಗಿವಿಯ ಅಸ್ಥಿಕೋಶದ ರೋಗ. ಇದರಿಂದ ಮೂಳೆಯಲ್ಲಿ ವ್ಯತ್ಯಾಸವಾಗಿ ಸ್ಟೇಪಿಸ್ ಎಂಬ ಸಣ್ಣ ಕಿವಿಮೂಳೆಯ ಕೀಲುಕಚ್ಚಿಕೊಂಡು ಮೂಳೆ ಅದುರಲಾರದು. ಇದರಿಂದ ರೋಗಿಯಲ್ಲಿ ವಾಹಕಕಿವುಡು ಹೆಚ್ಚಾಗುತ್ತ ಬರುತ್ತದೆ. ಇದು 18ರಿಂದ 40ರ ವಯಸ್ಸಿನವರೆಗೆ ಸಾಮಾನ್ಯ. ಹೆಂಗಸರಲ್ಲಿ ಹೆಚ್ಚು. ಹಲವು ವೇಳೆ ಚೊಚ್ಚಲಬಾಣಂತಿತನದ ಅನಂತರ ಮೊದಲು ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಪಟ್ಟಣವಾಸಿಗಳಲ್ಲಿ ಹೆಚ್ಚು. ಇದರಲ್ಲಿ ಸ್ವಲ್ಪ ವಂಶಾವಳಿಯ ಪ್ರಭಾವವೂ ಇದೆ. ಇವರಲ್ಲಿ ಕೆಲವರು ಗದ್ದಲದಲ್ಲಿ ಹೆಚ್ಚು ಚೆನ್ನಾಗಿ ಕೇಳಬಲ್ಲರು. ಈ ರೋಗದ ಚಿಕಿತ್ಸೆ ಹೆಚ್ಚು ಮುಂದುವರಿದಿದೆ. ರೋಗತಟ್ಟಿದ ಎಲುಬನ್ನು ತೆಗೆದು ಕೃತಕ ಭಾಗದ ಜೋಡಣೆಯಿಂದ ಪೂರ್ಣ ಕೇಳುವ ಶಕ್ತಿ ಬರುವುದು.

ಮಿನಿಯರ್ಸ್ ರೋಗ

ಬದಲಾಯಿಸಿ

ಫ್ರೆಂಚ್ ವೈದ್ಯನಾಗಿದ್ದ ಪ್ರಾಸ್ಪರ್ ಮಿನಿಯರ್‍ನಿಂದ ಈ ಹೆಸರು ಬಂದಿದೆ. ತಲೆಸುತ್ತು, ಕಿವಿ ಗುಂಯೆನ್ನುವುದು ಮತ್ತು ಕಿವುಡು-ಇವು ಮರಳಿ ಮರಳಿ ಕಾಡುವುದು ಈ ರೋಗದ ಲಕ್ಷಣ. ಪ್ರತಿಸಲ ತಲೆಸುತ್ತು ಬಂದಾಗ ಕಿವುಡು ಮತ್ತು ಕಿವಿ ಗುಂಯೆನ್ನುವುದು ಹೆಚ್ಚುತ್ತವೆ. ತಲೆಸುತ್ತಿನಿಂದ ಯಾರೊ ಹೊಡೆಯಲು ಬಂದಂತೆ ಭಯವುಂಟಾಗಿ ರೋಗಿಗೆ ತೊಂದರೆಯಾಗುತ್ತದೆ. ಕಿವಿ ಗುಂಯೆನ್ನುವುದರಿಂದ ಹುಚ್ಚೂ ಬರಬಹುದು. ಕೆಲವರು ತಪ್ಪು ಕೇಳಿಸುವುದರಿಂದ ಗಾಸಿಪಡುತ್ತಾರೆ. ಒಳಗಿವಿಯ ಒಳನೀರು ಹೆಚ್ಚಾಗಿರುವುದರಿಂದ ಈ ರೋಗವುಂಟಾಗುತ್ತದೆ. ಇದು ಗಂಡಸರಲ್ಲಿ ಹೆಚ್ಚು. ಉಪ್ಪು ಮತ್ತು ನೀರಿನ ಸೇವನೆಯನ್ನು ಕಡಿಮೆಮಾಡುವುದರಿಂದ ರೋಗದ ದಾಳಿಗಳನ್ನು ಹತೋಟಿಗೆ ತರಬಹುದು. ಶಾಮಕ ಮದ್ದುಗಳಿಂದ ಕಿವಿ ಗುಂಯೆನ್ನುವುದು ಕಡಿಮೆಯಾಗುತ್ತದೆ. ಮಿತಿಮೀರಿದ ಸ್ಥಿತಿಯಲ್ಲಿ ಶಸ್ತ್ರಕ್ರಿಯೆಯಿಂದ ಅಥವಾ ಶಬ್ದಾತೀತ ಅಲೆಗಳಿಂದ ಒಳಗಿವಿಯನ್ನು ನಾಶಮಾಡಬೇಕಾಗುತ್ತದೆ. (ಪೂರ್ತಿ ಕಿವುಡಿದ್ದಲ್ಲಿ ಮಾತ್ರ)

ಮುಪ್ಪು: ಶಬ್ದಹಾನಿ

ಬದಲಾಯಿಸಿ

ಹಲವು ವರ್ಷ ಒಂದೇ ಶಬ್ದವನ್ನು ಎಡೆಬಿಡದೆ ಕೇಳುತ್ತಿರವುದರಿಂದ ಆ ಶಬ್ದದ ಶ್ರವಣೀಂದ್ರಿಯ ಭಾಗಗಳು ನಾಶವಾಗುತ್ತವೆ. ಇದನ್ನು ಕೈಗಾರಿಕೋದ್ಯಮಿಗಳಲ್ಲಿ ನೋಡಬಹುದು. ಈಚೀಚೆಗೆ ಈ ಸಮಸ್ಯೆ ಆರೋಗ್ಯಾಧಿಕಾರಗಳ ಗಮನವನ್ನು ಎರಡು ಕಾರಣಗಳಿಂದ ಸೆಳೆದಿದೆ; ಕೈಗಾರಿಕೆಗಳಲ್ಲಿ ಹೆಚ್ಚುತಿರುವ ಸಪ್ಪಳ ಮತ್ತು ಪರಿಹಾರಧನಕ್ಕೆ ಕೆಲಸಗಾರಿಂದ ಹಚ್ಚುತ್ತಿರುವ ಬೇಡಿಕೆಗಳು.

ಮುಪ್ಪಿನ ಕಿವುಡು

ಬದಲಾಯಿಸಿ

ಎರಡು ಮುಖ್ಯ ಕಾರಣಗಳಿಂದ ಮುಪ್ಪಿನಲ್ಲಿ ಕಿವುಡು ಸಹಜ. ಮುಪ್ಪಿನಿಂದ ಮಿದುಳುಶಕ್ತಿ ಕುಗ್ಗಿ ಒಳಗಿವಿಯ ಕಾರ್ಟಿ ಅಂಗ ನಶಿಸುವುದು ಒಂದು. ಮುಪ್ಪಿನಲ್ಲಿ ರಕ್ತನಾಳಗಳು ದಪ್ಪವಾಗಿ ರಕ್ತಚಲನೆ ಮಂದವಾಗಿ ರಕ್ತಗಡ್ಡೆಕಟ್ಟಿ ಸಣ್ಣನಾಳಗಳಲ್ಲಿ ಚಲನೆ ನಿಲ್ಲುವುದು ಮತ್ತು ರಕ್ತನಾಳ ಒಡೆದು ಮಿದುಳು ಕಿವಿಗಳಲ್ಲಿ ರಕ್ತಸ್ರಾವವಾಗುವುದು ಇನ್ನೊಂದು.

ಕಿವುಡು ನಿರೋಧ

ಬದಲಾಯಿಸಿ

ರೋಗಬರುವುದಕ್ಕೆ ಮುಂಚೆ ಅದು ಬರದಂತೆ ನೋಡಿಕೊಳ್ಳುವುದು ಮೇಲು. ಈ ವಿಚಾರ ಕಿವುಡಿನ ವಿಚಾರದಲ್ಲಂತೂ ಬಹುಸೂಕ್ತ; ಏಕೆಂದರೆ ಕಿವಿಯ ಕೆಲಸವನ್ನು ದೇಹದಲ್ಲಿ ಇನ್ಯಾವ ಅಂಗವೂ ಮಾಡಲಾರದು.ಅಜಾಗರೂಕತೆಯನ್ನು ತಪ್ಪ್ಪಿಸುವುದರಿಂದ ಗಾಯಗಳನ್ನು ತಪ್ಪಿಸಬಹುದು. ಕಿವಿಗೆ ಏನು ಬೇಕಾದರೂ ಹಾಕಿಕೊಳ್ಳುವ ಅಭ್ಯಾಸವಿರುವ ಮಕ್ಕಳಲ್ಲಿ ಇದು ಹೆಚ್ಚು, ಆವಶ್ಯಕ. ಸಪ್ಪಳಗಳಲ್ಲಿ ವಾಸಿಸುವವರು ಕಿವಿಗೆ ರಕ್ಷೆಗಳನ್ನು ಧರಿಸಿಕೊಳ್ಳವುದು ಅನಿವಾರ್ಯ.ಕೆಟ್ಟ ಅಭ್ಯಾಸಗಳನ್ನು ತಪ್ಪಿಸುವುದರಿಂದ ಕ್ರಿಮಿರೋಗ ನಿಯಂತ್ರಣವಾಗುತ್ತದೆ. ಕಿವಿಗಳಿಗೆ ಎಣ್ಣೆ ಹಾಕುವುದು ಸಾಮಾನ್ಯವಾಗಿ ಒಳ್ಳೆಯ ಪದ್ಧತಿ. ಬೆಳ್ಳುಳ್ಳಿ. ಈರುಳ್ಳಿ ಮುಂತಾದ ಉರಿಯುಂಟುಮಾಡುವ ವಸ್ತುಗಳೊಡನೆ ಈ ಎಣ್ಣೆಗಳನ್ನು ಕಾಯಿಸುತ್ತಾರೆ. ಇದು ಕೂಡದು. ಹಾಗೆಯೇ ಗುಗ್ಗೆಯನ್ನು ತೆರೆಯಲು ಚೂಪಾದ ಸಲಕರಣೆಗಳ ಉಪಯೋಗವನ್ನು ತಡೆಗಟ್ಟಬೇಕು. ನುರಿತವರಿಂತಲೇ ಕಿವಿಯನ್ನು ಪಿಚಕಾರಿಯಿಂದ ತೊಳೆಸಬೇಕು. ಹಳ್ಳಿಗಳಲ್ಲಿ ಜನ ಬಾಯಲ್ಲಿ ನೀರು ತುಂಬಿಕೊಂಡು ಕಿವಿಗಳೊಳಕ್ಕೆ ಉಗಿಯುವ ಅಭ್ಯಾಸವನ್ನಟ್ಟಿದ್ದಾರೆ. ಇದರಿಂದ ಒಬ್ಬರ ಬಾಯಿಂದ ಕ್ರಿಮಿಗಳು ಇನ್ನೊಬ್ಬರ ಕಿವಿಗೆ ಸೇರುತ್ತವೆ. ಕಿವುಡ ಕಿವುಡರ ಮದುವೆಗಳನ್ನು ಮತ್ತು ಅನುವಂಶಿಕವಾಗಿ ಕಿವುಡರುವವರೊಡನೆ ರಕ್ತಸಂಬಂಧ ಒದಗುವುದನ್ನು ತಪ್ಪಿಸುವುದರಿಂದ ಕಿವುಡು ಮಕ್ಕಳು ಹುಟ್ಟುವುದನ್ನು ನಿವಾರಿಸಬಹುದು. ಬಾಣಂತಿಯ ಅರೋಗ್ಯಕ್ಕೆ ಹೆಚ್ಚಿನ ಗಮನ ಕೊಡುತ್ತಿರುವುದು ಮತ್ತು ಪ್ರಸವಗಳಿಗೆ ಇರಬೇಕಾದ ಆಸ್ವತ್ರೆಗಳ ಸೌಕರ್ಯ ಹೆಚ್ಚುತ್ತಿರುವುದು ಹುಟ್ಟುಕಿವುಡನ್ನು ಬಹುಮಟ್ಟಿಗೆ ನಿವಾರಿಸಿದೆ.

ಚಿಕಿತ್ಸೆ

ಬದಲಾಯಿಸಿ

ಕಿವಿಡಿನ ಚಿಕಿತ್ಸೆ ಬಹುಮುಂದುವರಿದಿದೆ. ಬೂಷಲು ಮದ್ದುಗಳು ಕಿವಿಯ ಕ್ರಿಮಿರೋಗಗಳನ್ನು ನಿಯಂತ್ರಿಸಿ ಕಿವುಡನ್ನು ತಪ್ಪಸುವುದರಲ್ಲಿ ಹೆಚ್ಚು ಸಹಕಾರಿಗಳಾಗಿವೆ. ಶಸ್ತ್ರ್ರಕ್ರಿಯೆ ಸೂಕ್ಷದರ್ಶಿಗಳಿಂದ ನಡುಗಿವಿಯ ಜೀರ್ಣೋದ್ಧಾರ ಸಾಧ್ಯವಾಗಿದೆ. ಈ ಕ್ರಮಕ್ಕೆ ಟಿಂಪನೊಪ್ಲಾಸ್ಟಿ ಎನ್ನುತ್ತಾರೆ. ಇದರಲ್ಲಿ ಹಲವು ವಿಧಗಳಿವೆ. ಇವು ಸೂಕ್ಷ್ಮವಾದವು ಮತ್ತು ಕುಶಲವಾದವು, ಮತ್ತು ಹೆಚ್ಚುಕಾಲ ತೆಗೆದುಕೊಳ್ಳುವ ಶಸ್ತ್ರಕ್ರಿಯೆಗಳು, ಅದರೆ ಒಳ್ಳೆಯ ಕೈಚಳಕವಿರುವವರಿಂದ ಬಹಳ ತೃಪ್ತಿಕರ ಫಲಗಳು ದೊರೆತಿವೆ.ತಂತಿ ಮತ್ತು ಕೊಬ್ಬು, ತಂತಿ ಮತ್ತು ಲೋಳೆನೊರೆ, ಪಾಲಿಥೀನ್ ಕೊಳವೆ ಮತ್ತು ಸ್ಟ್ರಿಂಗ್ ಮುಂತಾದ ಕೃತಕಸಾಧನಗಳಿಂದ ಓಟೊಸ್ಕ್ಲೀರೊಸಿಸ್ ಅಂಥ ರೋಗಗಳ ಸಮಸ್ಯೆಗಳು ಪರಿಹಾರ ಹೊಂದಿವೆ. ಕಳೆದ 10 ವರ್ಷಗಳಲ್ಲಿ ಇನ್ನು ಯಾವ ಶಸ್ತ್ರವೈದ್ಯ ವಿಭಾಗದಲ್ಲೂ ಇಷ್ಟು ವಸ್ತುಗಳ ಉಪಯೋಗವಾಗಿಲ್ಲ.

ಶ್ರವಣಸಹಾಯಕಗಳು

ಬದಲಾಯಿಸಿ

ಇವು ಶಬ್ದವನ್ನು ಹೆಚ್ಚಿಸಲು ಧರಿಸುವ ಸಾಧನಗಳು. ಗ್ರಹಾಮ್ ಬೆಲ್ ಇವುಗಳನ್ನು ಸೃಷ್ಟಿಮಾಡಿದ. ಅಂದಿನಿಂದ ಇವು ಹೆಚ್ಚು ಮಾರ್ಪಾಟು ಹೊಂದಿವೆ. ಟ್ರಾನ್ಸಿಸ್ಟರ್ ಯಾಂತ್ರಿಕ ಜ್ಞಾನದ ಪ್ರಗತಿಯಿಂದ ಈಗ ನಮಗೆ ಅಟೊಮ್ಯಾಟಿಕ್ ವಾಲ್ಯೂಂ ಕಂಟ್ರೋಲ್, ಪೀಕ್ ಕ್ಲಿಪ್ಟಿಂಗ್ ಮುಂತಾದ ಅನುಕೂಲ ಸಾಧನಗಳು ಸಿಕ್ಕಿವೆ. ಅಷ್ಟೇ ಅಲ್ಲದೆ ಅವುಗಳ ಗಾತ್ರವೂ ಕಡಿಮೆಯಾಗಿರುವುದರಿಂದ ಕನ್ನಡಕಗಳನ್ನು ಜನರು ಒಪ್ಪುವಷ್ಟು ಇವನ್ನೂ ಒಪ್ಪುವಂತಾಗಿದೆ. ಆದರೆ ಈ ಸಹಾಯಕಗಳ ಬೆಲೆ ಜನ ಸಾಮಾನ್ಯರಿಗೆ ಎಟುಕುವಷ್ಟು ಕಡಿಮೆಯಾಗಿಲ್ಲ.ಕಿವುಡು ಮಗುವಿಗೆ ಮಾತು ಕಲಿಸಲು ಶ್ರವಣಸಹಾಯಗಳು ಬೇಕೇ ಬೇಕು. ಶಸ್ತ್ರಕ್ರಿಯೆಗೆ ಕಾರಣಾಂತರದಿಂದ ಒಳಪಡಲಾಗದ, ಬೆಳೆದ ಕಿವುಡರಿಗಂತೂ ಇವು ಅನುಕೂಲಕಾರಿಗಳು. ಆದರೆ ಕೆಲವರು ದೊಡ್ಡ ಶಬ್ದಗಳನ್ನು ಸಹಿಸಲಾರದವರಾದ್ದರಿಂದ ಅವರಿಗೆ ಇಂಥ ಸಹಾಯಗಳು ಸರಿಹೋಗುವುದಿಲ್ಲ. ಆದ್ದರಿಂದ ಸಹಾಯಗಳನ್ನು ಕಿವಿಗೆ ಸಿಕ್ಕಿಸುವ ಮೊದಲು ಎಚ್ಚರಿಕೆಯಿಂದ ಕೇಳುವ ಶಕ್ತಿಯ ಅಳತೆ ಅಳತೆಮಾಡಿಸಿ ನೋಡಬೇಕು.  

ಉಲ್ಲೇಖಗಳು

ಬದಲಾಯಿಸಿ