ಚಳಿ ವಿಶೇಷವಾಗಿ ವಾತಾವರಣದಲ್ಲಿ ಕಡಿಮೆ ತಾಪಮಾನದ ಇರುವಿಕೆ.[೧] ಸಾಮಾನ್ಯ ಬಳಕೆಯಲ್ಲಿ, ಚಳಿಯು ಹಲವುವೇಳೆ ಒಂದು ವ್ಯಕ್ತಿನಿಷ್ಠ ಗ್ರಹಿಕೆ. ತಾಪಮಾನದ ಕೆಳ ಎಲ್ಲೆಯನ್ನು ನಿರಪೇಕ್ಷ ಶೂನ್ಯವೆಂದು ಕರೆಯಲಾಗುತ್ತದೆ, ಮತ್ತು ಒಂದು ಸಂಪೂರ್ಣ ಉಷ್ಣಬಲ ತಾಪಮಾನ ಮಾಪಕವಾದ ಕೆಲ್ವಿನ್ ಮಾಪಕದಲ್ಲಿ ಇದನ್ನು 0.00 ಕೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಸೆಲ್ಷಿಯಸ್ ಮಾಪಕದಲ್ಲಿ −273.15 °C ಮತ್ತು ಫ಼ಾರನ್‍ಹೈಟ್ ಮಾಪಕದಲ್ಲಿ −459.67 °F ಗೆ ಅನುರೂಪವಾಗಿದೆ.

ಸಾಮಾನ್ಯವಾಗಿ ಚಳಿಯೊಂದಿಗೆ ಸಂಬಂಧಿಸಲಾದ ಹಿಮಗುಡ್ಡ

ಉಷ್ಣ ಶಕ್ತಿಯು ಭೌತದ್ರವ್ಯದ ಕಣ ಘಟಕಗಳ ಯಾದೃಚ್ಛಿಕ ಚಲನೆಯ ಚಲನ ಶಕ್ತಿಯಾಗಿದೆ. ತಾಪಮಾನವು ಒಂದು ವಸ್ತು ಅಥವಾ ದ್ರವ್ಯದ ನಮೂನೆಯು ಹಿಡಿದಿಟ್ಟುಕೊಂಡಿರುವ ಉಷ್ಣ ಶಕ್ತಿಗೆ ಸಂಬಂಧಿಸಿರುವುದರಿಂದ, ಒಂದು ವಸ್ತು ಹೆಚ್ಚು ತಂಪಾಗಿದ್ದಾಗ ಕಡಿಮೆ ಉಷ್ಣ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಹೆಚ್ಚು ಬಿಸಿಯಾಗಿದ್ದಾಗ ಹೆಚ್ಚು ಉಷ್ಣ ಶಕ್ತಿಯನ್ನು ಹೊಂದಿರುತ್ತದೆ. ಒಂದು ವ್ಯವಸ್ಥೆಯನ್ನು ನಿರಪೇಕ್ಷ ಶೂನ್ಯಕ್ಕೆ ತಂಪಾಗಿಸುವುದು ಸಾಧ್ಯವಾಗಿದ್ದರೆ, ದ್ರವ್ಯದ ನಮೂನೆಯಲ್ಲಿನ ಕಣಗಳ ಎಲ್ಲ ಚಲನೆಯು ನಿಂತುಬಿಡುತ್ತದೆ ಮತ್ತು ಶಾಸ್ತ್ರೀಯ ಅರ್ಥದಲ್ಲಿ ಅವು ಸಂಪೂರ್ಣ ವಿಶ್ರಾಂತಿಯಲ್ಲಿರುತ್ತವೆ. ಆ ವಸ್ತುವು ಶೂನ್ಯ ಉಷ್ಣ ಶಕ್ತಿಯನ್ನು ಹೊಂದಿದೆ ಎಂದು ವಿವರಿಸಲಾಗುತ್ತದೆ. ಆದರೆ, ಸೂಕ್ಷ್ಮದರ್ಶಕೀಯವಾಗಿ ಕ್ವಾಂಟಮ್ ಯಂತ್ರಶಾಸ್ತ್ರದ ವಿವರಣೆಯಲ್ಲಿ, ಅನಿಶ್ಚಿತತೆ ತತ್ವದ ಕಾರಣ ಭೌತದ್ರವ್ಯವು ನಿರಪೇಕ್ಷ ಶೂನ್ಯದಲ್ಲಿ ಇನ್ನೂ ಶೂನ್ಯ ಬಿಂದು ಶಕ್ತಿಯನ್ನು ಹೊಂದಿರುತ್ತದೆ.

ಚಳಿಯು ಮಾನವ ಶರೀರ ಮತ್ತು ಇತರ ಜೀವಿಗಳ ಮೇಲೆ ಅಸಂಖ್ಯಾತ ಶಾರೀರಿಕ ಮತ್ತು ರೋಗಶಾಸ್ತ್ರೀಯ ಪರಿಣಾಮಗಳನ್ನು ಹೊಂದಿದೆ. ತಂಪಾದ ಪರಿಸರಗಳು ನಿರ್ದಿಷ್ಟ ಮಾನಸಿಕ ಗುಣಲಕ್ಷಣಗಳನ್ನು ಉತ್ತೇಜಿಸಬಹುದು, ಜೊತೆಗೆ ಚಲಿಸುವ ಸಾಮರ್ಥ್ಯದ ಮೇಲೆ ನೇರ ಪರಿಣಾಮಗಳನ್ನು ಹೊಂದಿರಬಹುದು. ನಡುಗುವುದು ಚಳಿಗೆ ಆಗುವ ಮೊದಲ ಶಾರೀರಿಕ ಪ್ರತಿಕ್ರಿಯೆಗಳಲ್ಲಿ ಒಂದು. ವಿಪರೀತ ತಂಪು ತಾಪಮಾನಗಳು ಹಿಮಗಡಿತ, ನೆತ್ತರುನಂಜು, ಮತ್ತು ಲಘೂಷ್ಣತೆಗೆ ಕಾರಣವಾಗಬಹುದು, ಇವು ಪ್ರತಿಯಾಗಿ ಸಾವಾಗಿ ಪರಿಣಮಿಸಬಹುದು.

ತಂಪುಗೊಳಿಸುವಿಕೆ ತಂಪಾಗುವ ಪ್ರಕ್ರಿಯೆಯನ್ನು ಅಥವಾ ತಾಪಮಾನದಲ್ಲಿನ ಇಳಿತವನ್ನು ಸೂಚಿಸುತ್ತದೆ. ಇದನ್ನು ಒಂದು ವ್ಯವಸ್ಥೆಯಿಂದ ಶಾಖವನ್ನು ತೆಗೆದು, ಅಥವಾ ವ್ಯವಸ್ಥೆಯನ್ನು ಕಡಿಮೆ ತಾಪಮಾನದ ಪರಿಸರಕ್ಕೆ ಒಡ್ಡಿ ಸಾಧಿಸಬಹುದು. ಶೀತಕಗಳು ವಸ್ತುಗಳನ್ನು ತಂಪುಗೊಳಿಸಲು, ಘನೀಕರಣವನ್ನು ತಡೆಗಟ್ಟಲು ಮತ್ತು ಯಂತ್ರಗಳಲ್ಲಿ ಸವೆತವನ್ನು ತಡೆಗಟ್ಟಲು ಬಳಸಲಾಗುವ ದ್ರವಗಳು.

ಉಲ್ಲೇಖಗಳು ಬದಲಾಯಿಸಿ

  1. Hansen, James E. "GISS Surface Temperature Analysis (GISTEMP)". National Aeronautic and Space Administration. Goddard Institute for Space Studies. Retrieved February 22, 2016.
"https://kn.wikipedia.org/w/index.php?title=ಚಳಿ&oldid=799099" ಇಂದ ಪಡೆಯಲ್ಪಟ್ಟಿದೆ