ನಮಸ್ಕಾರ Atmalinga


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೫:೩೧, ೧೭ ಏಪ್ರಿಲ್ ೨೦೨೧ (UTC)

ಶೀರ್ಷಿಕೆ!ಸಂಪಾದಿಸಿ

Atmalinga (ಚರ್ಚೆ) ೦೭:೦೭, ೨೨ ಏಪ್ರಿಲ್ ೨೦೨೧ (UTC) ಶೀರ್ಶಿಕೆಯಲ್ಲಿ ಪ್ರೊಫ಼ೆಸರ್ ಸೇರಿಸಬೇಡಿ ಎಂದು ಹೇಳುತ್ತೀರಿ. ಜಿ.ವಿ.ಯವರ ಲೇಖನದಲ್ಲಿ ಮೊದಲೇ ಪ್ರೊಫ಼ೆಸರ್ ಅಂತ ಇತ್ತು. ಇದಕ್ಕೆ ಉತ್ತರ ಕೊಡಿ. ನೀವು ಮುಂದೆ ಹೊಸ ಲೇಖನ ಶುರು ಮಾಡುವಾಗ ಶೀರ್ಷಿಕೆಯಲ್ಲಿ ಡಾ/ಪ್ರೊ. ಸೇರಿಸಬೇಡಿ. ಕೇವಲ ಹೆಸರು ಮಾತ್ರ ಇರಲಿ. NinadMysuru (ಚರ್ಚೆ) ೦೮:೧೯, ೧೮ ಏಪ್ರಿಲ್ ೨೦೨೧ (UTC)

Atmalinga, ನೀವು ಇಲ್ಲೇ ಉತ್ತರ ಕೊಡಬಹುದು. NinadMysuru (ಚರ್ಚೆ) ೧೧:೨೫, ೧೮ ಏಪ್ರಿಲ್ ೨೦೨೧ (UTC)

(Atmalinga (ಚರ್ಚೆ) ೧೨:೦೯, ೧೮ ಏಪ್ರಿಲ್ ೨೦೨೧ (UTC)) ಹೌದು. ಅದನ್ನು ಹೇಗೆ ತೆಗೆಯುವುದು ? ತಿಳಿಸಿ.

ಶೀರ್ಷಿಕೆ ಬದಲಾವಣೆ ಈಗ ನಿರ್ವಾಹಕರ ಅಧೀನದಲ್ಲಿದೆ. ನಿರ್ವಾಹಕರ ಗಮನಕ್ಕೆ ತರಬೇಕು. NinadMysuru (ಚರ್ಚೆ) ೧೨:೧೪, ೧೮ ಏಪ್ರಿಲ್ ೨೦೨೧ (UTC)
@Atmalinga:, ನೀವು ಪುನಃ ಉತ್ತರಿಸುವಾಗ :: ಹೀಗೆ ಚುಕ್ಕಿಗಳನ್ನು ಬಳಸಿದರೆ ಕ್ರಮಬದ್ಧವಾಗಿ ನಮ್ಮ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ನಮ್ಮ ಚರ್ಚೆಯ ಇತಿಹಾಸ ತೆಗೆದು ನೋಡಿ. ತಿಳಿಯುತ್ತದೆ. NinadMysuru (ಚರ್ಚೆ) ೧೨:೧೮, ೧೮ ಏಪ್ರಿಲ್ ೨೦೨೧ (UTC)
@NinadMysuru, Atmalinga: ಬಹುತೇಕ ಪುಟಗಳ ಶೀರ್ಷಿಕೆಯನ್ನು ಬದಲಾವಣೆ ಮಾಡಲು ನಿರ್ವಾಹಕರು ಬೇಕಾಗಿಲ್ಲ, ಯಾರ ಬೇಕಾದರೂ ಬದಲಾಯಿಸಬಹುದು. ನಾನು ಅದನ್ನು ಎಮ್. ಎಸ್. ವಿಜಯಾ ಹರನ್ ಎಂದು ಬದಲಾಯಿಸಿದ್ದೇನೆ.
ಹಾಗೆಯೇ Atmalinga ಅವರು ಇಲ್ಲಿ ಇದು ತಮ್ಮ ಎರಡನೇ ಖಾತೆ ಆಗಿರುವುದಾಗಿ ಹೇಳಿದ್ದಾರೆ. ಹಳೆಯ ಖಾತೆ ಯಾವುದೆಂದು ಬಳೆಕೆದಾರಪುಟದಲ್ಲಿ ಬಹಿರಂಗಪಡಿಸಿದರೆ ಒಳ್ಳೆಯದು. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೩:೪೪, ೧೮ ಏಪ್ರಿಲ್ ೨೦೨೧ (UTC)
@ಮಲ್ನಾಡಾಚ್ ಕೊಂಕ್ಣೊ: ಧನ್ಯವಾದಗಳು. ಹೇಗೆ ಎಂದು ತಿಳಿಸಿದರೆ ಉಪಕಾರವಾದೀತು. NinadMysuru (ಚರ್ಚೆ) ೧೩:೫೬, ೧೮ ಏಪ್ರಿಲ್ ೨೦೨೧ (UTC)
@NinadMysuru: ಪುಟದ ಮೇಲ್ಭಾಗದಲ್ಲಿ ವೀಕ್ಷಣಾಪಟ್ಟಿಯ ನಕ್ಷತ್ರ ಗುರುತಿನ ಪಕ್ಕದಲ್ಲಿರುವ "ಇನ್ನಷ್ಟು" ಗುಂಡಿಯನ್ನು ಒತ್ತಿ "ಸ್ಥಳಾಂತರಿಸಿ" ಆಯ್ಕೆ ಮಾಡಬೇಕು. ನಂತರ ಹೊಸ ಶೀರ್ಷಿಕೆ ಬರೆದು "ಪುಟವನ್ನು ಸ್ಥಳಾಂತರಿಸಿ" ಆಯ್ಕೆ ಮಾಡಬೇಕು. ಇದನ್ನು ಮೊಬೈಲಿನಲ್ಲಿ ಮಾಡಲು ಸಾಧ್ಯವಿಲ್ಲ, ಕೇವಲ ಡೆಸ್ಕ್‌ಟಾಪ್ ಮೋಡಿನಲ್ಲಿ ಮಾತ್ರ ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ - en:Help:How to move a page. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೫:೨೫, ೧೮ ಏಪ್ರಿಲ್ ೨೦೨೧ (UTC)

೧೪:೧೦, ೧೮ ಏಪ್ರಿಲ್ ೨೦೨೧ (UTC)Atmalinga (ಚರ್ಚೆ)Atmalinga (ಚರ್ಚೆ) ೧೪:೦೯, ೧೮ ಏಪ್ರಿಲ್ ೨೦೨೧ (UTC) ಹಳೆಯ ಖಾತೆ 'ರಾಧಾತನಯ' ಎಂದು. ನಾನು ೨೦೦೫ ರಿಂದ ಕನ್ನಡ ವಿಕೀಪೀಡಿಯದಲ್ಲಿ ಕೆಲಸಮಾಡುತ್ತಿದ್ದೇನೆ. ಆಗಿನ್ನೂ ಕನ್ನಡ ವಿಕಿಪೀಡಿಯ ತನ್ನ ಗರಿಕೆದರಿಕೊಳ್ಳುತ್ತಿತ್ತು. (Atmalinga (ಚರ್ಚೆ) ೧೪:೨೦, ೧೮ ಏಪ್ರಿಲ್ ೨೦೨೧ (UTC)) ಹಿಂದೆ ನಾವೇ ಸ್ಟಾರ್ ಬಟನ್ ಒತ್ತಿ ಬದಲಾವಣೆ ಮಾಡ್ತಿದ್ವಿ. ತೊಂದರೆಗೆ ಕ್ಷಮೆಯಿರಲಿ.

ಧನ್ಯವಾದಗಳು @ಮಲ್ನಾಡಾಚ್ ಕೊಂಕ್ಣೊ:@Atmalinga:. NinadMysuru (ಚರ್ಚೆ) ೧೫:೩೩, ೧೮ ಏಪ್ರಿಲ್ ೨೦೨೧ (UTC)

(Atmalinga (ಚರ್ಚೆ) ೦೧:೨೩, ೧೯ ಏಪ್ರಿಲ್ ೨೦೨೧ (UTC))ನಮಸ್ಕಾರ. ಯಾಕೋ ಆ ಚುಕ್ಕಿಗಳನ್ನು ಮಾಡಿದಾಗ್ಯೂ ಕಾಣಿಸಿಕೊಳ್ಳುತ್ತಿಲ್ಲ. ನಿಮ್ಮ ಸವಿನಯ ಮಾರ್ಗದರ್ಶನಕ್ಕೆ ನಲ್ಮೆಗಳು. (Atmalinga (ಚರ್ಚೆ) ೦೨:೨೯, ೧೯ ಏಪ್ರಿಲ್ ೨೦೨೧ (UTC)) ಪ್ರೊ. ಜಿ. ವೆಂಕಟಸುಬ್ಬಯ್ಯನವರು (೧೦೮) ನಿನ್ನೆ ಬೆಂಗಳೂರಿನಲ್ಲಿ ನಿಧನರಾದ ಸಮಾಚಾರವನ್ನು ಮೊದಲು ವಿಕಿಪೀಡಿಯದಲ್ಲಿ ದಾಖಲಿಸಿದವ ನಾನು. ಶೀರ್ಷಿಕೆಯಲ್ಲಿ ಪ್ರೊಫೆಸರ್ ಎಂದು ಇದೆ.ಗಮನಿಸಿ.

ವ್ಯಕ್ತಿಪರಿಚಯದಲ್ಲಿ ಅನವಶ್ಯಕ ಮಾಹಿತಿ ಬೇಡಸಂಪಾದಿಸಿ

ದಯವಿಟ್ಟು ವ್ಯಕ್ತಿಪರಿಚಯ ಪುಟಗಳಲ್ಲಿ ಅನವಶ್ಯಕ ಮಾಹಿತಿಗಳನ್ನು ಸೇರಿಸಬೇಡಿ. ನೀವು ಬರೆದ ಬಹುತೇಕ ಲೇಖನಗಳು ಪತ್ರಿಕೆಗಳ ಲೇಖನಗಳ ಮಾದರಿಯಲ್ಲಿದ್ದು ಅತಿಯಾದ ಹೊಗಳಿಕೆ, ಅವರ ಕುಟುಂಬದವರ ಅನವಶ್ಯಕ ವಿವರಗಳು, ಕಾಲೆಜಿನಲ್ಲಿ ಏನೇನು ಮಾಡಿದ್ದರು, ಇತ್ಯಾದಿ ಅಗತ್ಯವಿಲ್ಲದ ಮಾಹಿತಿಗಳಿಂದ ತುಂಬಿವೆ. ದಯವಿಟ್ಟು ವ್ಯಕ್ತಿಯ ಸಾಧನೆಗಳ ಬಗೆಗೆ ಮಾತ್ರ ಲೇಖನ ಇರಲಿ. ಅವರಿಗೆ ಬಂದ ಪ್ರತಿಯೊಂದು ಚಿಕ್ಕಪುಟ್ಟ ಬಿರುದು, ಪ್ರಶಸ್ತಿಗಳು ಬೇಡ. ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಸಾಹಿತ್ಯ ಅಕಾಡೆಮಿ, ವಿ.ವಿ.ಗಳ ಪುರಸ್ಕಾರಗಳು ಮಾತ್ರ ಸಾಕು. ಪ್ರಶಸ್ತಿ ಪಡೆದುಕೊಳ್ಳುವಾಗ ಮಾಡಿದ ಭಾಷಣಗಳು ಎಲ್ಲ ಬೇಡ.--ಪವನಜ ಯು. ಬಿ. (ಚರ್ಚೆ) ೧೫:೧೪, ೨೧ ಏಪ್ರಿಲ್ ೨೦೨೧ (UTC)

Atmalinga (ಚರ್ಚೆ) ೦೨:೦೧, ೨೨ ಏಪ್ರಿಲ್ ೨೦೨೧ (UTC) ಗೊತ್ತಾಯಿತು. ಧನ್ಯವಾದಗಳು. (Atmalinga (ಚರ್ಚೆ) ೦೭:೦೪, ೨೨ ಏಪ್ರಿಲ್ ೨೦೨೧ (UTC)) ಮೈಸೂರು ಅಸೋಸಿಯೇಷನ್ ಲೇಖನವನ್ನು ಪರಿಶ್ಕೃತ ಗೊಳಿಸಿರುವೆ.
ಧನ್ಯವಾದಗಳು.--ಪವನಜ ಯು. ಬಿ. (ಚರ್ಚೆ) ೧೩:೩೭, ೨೩ ಏಪ್ರಿಲ್ ೨೦೨೧ (UTC)
(Atmalinga (ಚರ್ಚೆ) ೦೭:೨೧, ೨೨ ಏಪ್ರಿಲ್ ೨೦೨೧ (UTC))ಅಹಲ್ಯ ಬಲ್ಲಾಳ್ ರವರ ಲೇಖನದಲ್ಲಿ ಅವರ ಜನನದ ಕಾಲಂನಲ್ಲಿ ನಮೂದಿಸಿರುವ ತಾರೀಖಿಗೆ 'ಸಾಕ್ಷ್ಯಾಧಾರ ಬೇಕು' ಎಂದಿದ್ದೀರಿ. ಇದೆಷ್ಟು ಸಮರ್ಪಕ ಸ್ವಾಮಿ ? ಬಹುಶ: ಜನನ ಪತ್ರದ ದಾಖಲೆಯ ಅಗತ್ಯವಿದೆಯೆ ತಮಗೆ ?
Atmalinga (ಚರ್ಚೆ) ೧೩:೦೪, ೨೩ ಏಪ್ರಿಲ್ ೨೦೨೧ (UTC) ಶಂಕರ ನಾಗ್ ಆಕಾಶವಾಣಿ ನಡೆಸಿದ ಸಂದರ್ಶನ ಎಷ್ಟು ಕೆಟ್ಟದಾಗಿ ದಾಖಲಿಸಲ್ಪಟ್ಟಿದೆ. ನೀವೇ ನೋಡಿ.
ಅದು ಅನವಶ್ಯಕ. ತೆಗೆದು ಹಾಕಿದ್ದೇನೆ. ಈ ಕೆಲಸವನ್ನು ನೀವೇ ಮಾಡಬಹುದಿತ್ತು.--ಪವನಜ ಯು. ಬಿ. (ಚರ್ಚೆ) ೧೩:೩೭, ೨೩ ಏಪ್ರಿಲ್ ೨೦೨೧ (UTC)
(Atmalinga (ಚರ್ಚೆ) ೧೪:೦೨, ೨೩ ಏಪ್ರಿಲ್ ೨೦೨೧ (UTC)) ಸರಿ ನೀವು ಹೇಳುವುದು. ಈ ಸಂವಾದದಲ್ಲಿ ಮಹತ್ವದ ಮಾಹಿತಿಗಳಿವೆ. ಅವನ್ನು ವ್ಯವಸ್ಥಿತವಾಗಿ ಸರಿಜೋಡಿಸುವುದು ಮುಖ್ಯ. ಯಾರು ಈ ಲೇಖನ ಬರೆದರೋ ಅವರ ಬಗ್ಗೆ ನನಗೆ ಗೊತ್ತಿಲ್ಲ. ಹಿಂದೆ ಬರೆದಿದ್ದಾರೆ. ಹೊಸ ತಂತ್ರಜ್ಞಾನ ಅರಿಯದವರು. ಆ ಮಾಹಿತಿ ತೆಗೆದು ಹಾಕಿದರೆ ನೊಂದುಕೊಳ್ಳುವುದಿಲ್ಲವೇ ? ಸಿನಿ ಚಿತ್ರನಟ, ಕಮಲಹಾಸನ್ ಲೇಖನ ಸ್ವಲ್ಪ ನೋಡಿ. ಅದೆಷ್ಟು ಪುರಾಣ ಬರೆದಿದ್ದಾರೆ. ಇಂತಹ ಲೇಖನಗಳು ಹಲವಾರು. ದಯಮಾಡಿ ಸರಿಯಾಗಿ ನೋಡಿ. ಟ್ಯಾಗ್ ಹಾಕುವ ಕೆಲಸ ದಯಮಾಡಿ ಕಡಿಮೆಮಾಡಿ.

(Atmalinga (ಚರ್ಚೆ) ೧೪:೧೦, ೨೩ ಏಪ್ರಿಲ್ ೨೦೨೧ (UTC)) ಅಗತ್ಯವಿಲ್ಲದ ಮಾಹಿತಿಗಳಿಂದ ತುಂಬಿವೆ. ದಯವಿಟ್ಟು ವ್ಯಕ್ತಿಯ ಸಾಧನೆಗಳ ಬಗೆಗೆ ಮಾತ್ರ ಲೇಖನ ಇರಲಿ. ಇದು ತಮ್ಮ ಮಾತು.

ಲೇಖನ ಬರೆದವರಿಗೆ ಬೇಸರವಾಗುತ್ತದೆ ಎಂದು ವಿಶ್ವಕೋಶದ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳುವುದು ಸಾಧ್ಯವಿಲ್ಲದ ಮಾತು. ಯಾವುದೋ ಲೇಖನದಲ್ಲಿ ತಪ್ಪುಗಳಿವೆ, ಆದುದರಿಂದ ನಾನೂ ತಪ್ಪು ಮಾಡುತ್ತೇನೆ ಎಂಬುದು ಅಪ್ರಬುಧ್ಧರು ಮಾಡುವ ವಾದ. ನೀವು ಇಂತಹ ವಾದ ಮಾಡುವ ಬದಲು ಅಂತಹ ಲೇಖನಗಳನ್ನು ಹುಡುಕಿ ಅವುಗಳನ್ನು ಸರಿಪಡಿಸುವುದು ಉತ್ತಮ. ದಯವಿಟ್ಟು ಸ್ವಲ್ಪ ಸಮಯ ಯಾವುದೇ ವ್ಯಕ್ತಿ ಪರಿಚಯ ಬರೆಯುವ ಬದಲು ಇರುವ ಲೇಖನಗಳನ್ನು ಸರಿಪಡಿಸಿ. ಇದು ಕನ್ನಡ ವಿಕಿಪೀಡಿಯಕ್ಕೆ ನೀವು ನೀಡಬಹುದಾದ ಅತ್ಯಮೂಲ್ಯ ಕೊಡುಗೆ.--ಪವನಜ ಯು. ಬಿ. (ಚರ್ಚೆ) ೧೦:೩೭, ೨೫ ಏಪ್ರಿಲ್ ೨೦೨೧ (UTC)
ನೀವು ಮತ್ತೆ ಹಿರೇಮಗಳೂರು ಕಣ್ಣನ್ ಬಗ್ಗೆ ಪತ್ರಿಕಾಲೇಖನದ ಧಾಟಿಯಲ್ಲಿ ಅತಿಯಾಗಿ ಹೊಗಳಿಕೆ, ಅನವಶ್ಯಕ ಮಾಹಿತಿಗಳನ್ನು ತುಂಬಿದ ಲೇಖನವನ್ನು ಬರೆದಿದ್ದೀರಿ. ನಾನು ಅದನ್ನು ಸರಿಪಡಿಸಿದ್ದೇನೆ. ದಯವಿಟ್ಟು ಮತ್ತೆ ಮತ್ತೆ ಇಂತಹ ಲೇಖನಗಳನ್ನು ಬರೆಯಬೇಡಿ. ನಮಗೆ ನಿಮ್ಮ ಲೇಖನಗಳನ್ನು ಸರಿಪಡಿಸುವುದೇ ಕೆಲಸವಾಗುತ್ತದೆ.--ಪವನಜ ಯು. ಬಿ. (ಚರ್ಚೆ) ೧೦:೩೩, ೨೫ ಏಪ್ರಿಲ್ ೨೦೨೧ (UTC)

(Atmalinga (ಚರ್ಚೆ) ೧೨:೧೭, ೫ ಮೇ ೨೦೨೧ (UTC)) ಕಮಲ ಹಾಸನ್ ರವರ ಲೇಖನವನ್ನು ತಾವು ಹೇಗೆ ಅರ್ಥೈಸುತ್ತೀರೋ ದೇವರಿಗೇ ಗೊತ್ತು. ಇನ್ನೂ ಅದನ್ನು ತಿದ್ದುವ ಪ್ರಯತ್ನವನ್ನು ತಾವು ಮಾಡಿಲ್ಲ.ಏಕೆ ? 'ಬಿಲ್ ಗೇಟ್ಸ್' ಇಂಗ್ಲೀಷ್/ಕನ್ನಡ ಲೇಖನ ನೋಡಿ. ಅದೆಷ್ಟು ಮಾಹಿತಿಗಳನ್ನು ಅದು ಹೊಂದಿದೆ. ವಿಶ್ವಕೋಶದಲ್ಲಿ ಸರಿಯಾದಕಡೆಗಳಲ್ಲಿ ಸಮರ್ಪಕವಾದ ಮಾಹಿತಿಗಳು ಬೇಕಾಗುತ್ತವೆ. 'ಬಂದ, ಹೋದ' ಎನ್ನುವುದು ವಿಶ್ವಕೋಶವಾಗುತ್ತದೆಯೇ ? ಹಾಗಿದ್ದರೆ ಯಾರು ವಿಕಿಪೀಡಿಯ ನೋಡುತ್ತಾರೆ ? ವಿಕಿಪೀಡಿಯ ತ್ವರಿತಗತಿಯಲ್ಲಿ ವಿಶ್ವದ ಆಗುಹೋಗುಗಳನ್ನು ವೇಗವಾಗಿ ಮತ್ತು ಖಚಿತವಾಗಿ ತಲುಪಿಸುವ ಕೆಲಸಮಾಡಬೇಕು. ಅನಾವಶ್ಯಕ ಎನ್ನುವುದು ವ್ಯಕ್ತಿಗಳಿಗೆ ಸಂಬಂಧಿಸಿತ್ತು. ನಿಮಗೆ ಅನಾವಶ್ಯಕ ಬೇರೆ ಓದುಗರಿಗೆ ಅತಿ ಸಂಪನ್ಮೂಲ ಮಾಹಿತಿಯಾಗಿರಲಿಕ್ಕೂ ಸಾಧ್ಯವಿದೆ. ದಯವಿಟ್ಟು ಗಮನಿಸಿ. 'ಬಿಲ್ ಗೇಟ್ಸ್' ನ ಲೇಖನದಲ್ಲಿ ಇರುವುದೆಲ್ಲಾ ಅತ್ಯಾವಶ್ಯಕವೇ ! ಪತ್ರಿಕಾಧಾಟಿ ಸಲ್ಲದು. ಅದು ನನ್ನ ಒಂದು ತೃಟಿ. ಅದನ್ನು ನಾನು ಒಪ್ಪಿದ್ದೇನೆ. ಎಲ್ಲಾ, ಯಾವುದೇ ಇಂಗ್ಲೀಷ್ ವಿಕಿಪೀಡಿಯ ಲೇಖನಗಳೂ ಮಾಹಿತಿಗಳಿಂದ ತುಂಬಿರುತ್ತವೆ. ನಮಸ್ಕಾರ. ಇದಕ್ಕೆ ಉತ್ತರಿಸಬೇಡಿ. ನಾನೊಬ್ಬ ಕಡಿಮೆ ತಿಳುವಳಿಕೆಯವ. ಅದಕ್ಕೆ ಕನ್ನಡದಲ್ಲಿ ವ್ಯಕ್ತಿ ಚಿತ್ರ ಬರೆಯಲು ನಿಲ್ಲಿಸಿದ್ದೇನೆ.(ನಿಮ್ಮ ಅಪ್ಪಣೆಯ ಮೇಲೆ)

ಸ್ವಾಮಿ, ಈ ರೀತಿ whataboutery ಮಾಡುವುದರಿಂದ ಕನ್ನಡ ವಿಕಿಪೀಡಿಯ ಬೆಳೆಯುವುದಿಲ್ಲ. ನಿಮಗೆ ಪುರುಸೊತ್ತು ಇದ್ದರೆ ಅದನ್ನು ತಿದ್ದಿ. ನೀವು ಯಾಕೆ ಮಾಡಿಲ್ಲ ಎಂದು ಕೇಳುವುದು ಪ್ರಜ್ಞಾವಂತ ನಾಗರಿಕರ ಲಕ್ಷಣ ಅಲ್ಲ.
ಕನ್ನಡ ವಿಕಿಪೀಡಿಯದ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ಯಾವತ್ತೋ ಪ್ರಾರಂಭವಾಗಿ ಮುಂದೆ ಸಾಗಿಲ್ಲ. ನೀವು ಆ ಯೋಜನೆಯ ಮುಂದಾಳತ್ವ ವಹಿಸಿ. ತಿದ್ದಬೇಕಾದ ಲೇಖನಗಳ ಒಂದು ಪಟ್ಟಿ ಮಾಡಿ. ಅದನ್ನು ಈ ಯೋಜನಾಪುಟಕ್ಕೆ ಸೇರಿಸಿ. ಆ ನಂತರ ಲೇಖನಗಳನ್ನು ಒಂದೊಂದಾಗಿ ತಿದ್ದುತ್ತಾ ಹೋಗಿ. ಇದೇ ನೀವು ಕನ್ನಡ ವಿಕಿಪೀಡಿಯಕ್ಕೆ ನಿಡಬಹುದಾದ ಅತ್ಯುತ್ತಮ ಕೊಡುಗೆ. ಮಾಡುತ್ತೀರಲ್ಲ?--ಪವನಜ ಯು. ಬಿ. (ಚರ್ಚೆ) ೧೩:೩೪, ೫ ಮೇ ೨೦೨೧ (UTC)

ಟೆಂಪ್ಲೇಟು ತೆಗೆಯುವ ಬಗ್ಗೆಸಂಪಾದಿಸಿ

ಆರ್. ವಿ. ಮೂರ್ತಿಯವರ ಲೇಖನವನ್ನು ಸ್ವಚ್ಛಮಾಡಬೇಕು ಎಂದು ನಾನು ಸೇರಿಸಿದ್ದ ಟೆಂಪ್ಲೇಟನ್ನು ನೀವು ಲೇಖನವನ್ನು ಸ್ವಚ್ಛ ಮಾಡದೇ ತೆಗೆದಿದ್ದೀರಿ. ಇದು ತಪ್ಪು. ದಯವಿಟ್ಟು ಹಾಗೆ ಮಾಡಬೇಡಿ.--ಪವನಜ ಯು. ಬಿ. (ಚರ್ಚೆ) ೧೬:೩೮, ೮ ಮೇ ೨೦೨೧ (UTC)

ನಮಸ್ಕಾರ. ನಾನು ಸುಮಾರು ೧೯೬೮ ರಿಂದ ಮುಂಬೈ ಕನ್ನಡಿಗರಲ್ಲಿ ಮೇರು ವ್ಯಕ್ತಿಗಳಾಗಿದ್ದ ಡಾ.ಆರ್.ಎಲ್.ಐಯ್ಯಂಗಾರ್,ಆರ್.ವಿ.ಮೂರ್ತಿ, ಆರ್.ಡಿ.ಚಾರ್. ಚಂಪಕನಾಥ್, ಡಾ.ಸಿ.ನಂಜುಂಡಯ್ಯ. ನಾರಾಯಣಸ್ವಾಮಿ, ಮೊದಲಾದವರನ್ನು ಹತ್ತಿರದಿಂದ ನೋಡಿಬಲ್ಲೆ. ಅಷ್ಟು ದೊಡ್ಡ ಸಾಧಕರಾಗಿದ್ದಾಗ್ಯೂ ಅವರ ಬಗ್ಗೆ ಲೇಖನ ಬರೆಯಲು ನನಗೆ ಉಲ್ಲೇಖಗಳ ಕೊರತೆಯಿತ್ತು. ಕಾರಣ ನನ್ನ ಲ್ಯಾಬೋರೇಟರಿಯ ನಿರ್ದೇಶಕರ ವತಿಯಿಂದ ಎಲ್ಲರ ಪರಿಚಯವಾಗಿತ್ತು. ಕೆಲವು ಲೇಖನಗಳನ್ನು ಬರೆದನಾದರೂ ಡಾ.ಲೀಲಾರವರ ಪುಸ್ತಕ ಪ್ರಕಟವಾಗುವವರೆವಿಗೂ ನನಗೆ ಒಟ್ಟಾರೆ ಸಾಮಗ್ರಿಗಳು ಸಿಕ್ಕಿರಲಿಲ್ಲ. ಕಾಮರ್ಸ್ ಪತ್ರಿಕೆಯಂತಹ ಪ್ರತಿಷ್ಠಿತ ಪತ್ರಿಕೆಯ ಸಂಪಾದಕರಾಗುವುದು, ಇಂಗ್ಲೆಂಡ್ ನಲ್ಲಿ ೧೦ ಡೌನಿಂಗ್ ಸ್ಟ್ರೀಟ್ ನ ನಿವಾಸಿ,ಬ್ರಿಟನ್ ಪ್ರಧಾನಿ, ಮಿ.ಆಟ್ಲಿಯವರ ಹತ್ತಿರ ಪೂರ್ವಪರವಾನಗಿ ಪಡೆಯದೆ, ದಿಢೀರ್ ಎಂದು ಅವರ ಆಫೀಸಿನೊಳಗೆ ಹೋಗಿ ೪೫ ನಿಮಿಷಗಳಿಗಿಂತ ಹೆಚ್ಚು ಸಮಯದಲ್ಲಿ ಸಂವಾದ ಮಾಡಿದ ಭಾರತೀಯ ಪತ್ರಕರ್ತ ಎಂಬುದನ್ನು ಅರ್ಥಮಾಡಿಕೊಳ್ಳುವವರಿಗೆ ಹೇಳಬಹುದು. ಅದೆಷ್ಟೋ ವಿಶಯಗಳು ನನಗೆ ಗೊತ್ತು. (೧೯೪೪ ರಲ್ಲಿ ಜನಿಸಿದವನಲ್ಲವೇ)

ಇನ್ನು ನಿಮ್ಮ ಮಾತಿನಲ್ಲೇ ಹೇಳುವುದಾದರೆ, ಸ್ವಛ್ಛಮಾಡುವ ಕೆಲಸ. ದಯಮಾಡಿ ತಾವು ಏನು ಮಾಡುತ್ತೀರೋ ಮಾಡಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. (Atmalinga (ಚರ್ಚೆ) ೦೨:೦೯, ೯ ಮೇ ೨೦೨೧ (UTC))

ಸ್ವಾಮೀ, ನೀವು ಎಷ್ಟು ವರ್ಷಗಳಿಂದ ಮುಂಬಯಿಯಲ್ಲಿ ಇದ್ದೀರಿ, ಮುಂಬಯಿಯಲ್ಲಿ ಕನ್ನಡಿಗರು ಎಷ್ಟು ಸಾಧನೆ ಮಾಡಿದ್ದಾರೆ, ಇತ್ಯಾದಿಗಳ ಬಗ್ಗೆ ಅಲ್ಲ ನಾನು ನಿಮ್ಮ ಚರ್ಚಾಪುಟದಲ್ಲಿ ಬರೆದುದು. ಸ್ವಚ್ಛಗೊಳಿಸಬೇಕಾಗಿದೆ ಎಂದು ನಾನು ಸೇರಿಸಿದ ಟೆಂಪ್ಲೇಟನ್ನು ನೀವು ಲೇಖನವನ್ನು ಸ್ವಚ್ಛ ಮಾಡದೆಯೇ ತೆಗೆದುಹಾಕಿದ್ದು ಯಾಕೆ? ಹಾಗೆ ಮಾಡಬಾರದು ಎಂದು ನಾನು ತಿಳಿಸಿದ್ದು. ದಯವಿಟ್ಟು ವ್ಯಂಗ್ಯ ಬಿಟ್ಟು ಪ್ರಬುದ್ಧರಾಗಿ ಚರ್ಚಾಪುಟದಲ್ಲಿ ಬರೆಯಿರಿ.--ಪವನಜ ಯು. ಬಿ. (ಚರ್ಚೆ) ೦೨:೫೫, ೯ ಮೇ ೨೦೨೧ (UTC)

ಎಷ್ಟೇ ಆಗಲಿ,ನನ್ನ ವಯಸ್ಸು ಒಂದು ಪ್ರಭಾವ ಬೀರುತ್ತಿರುವುದನ್ನು ಗಮನಿಸುತ್ತಿದ್ದೇನೆ. ಮನೆಯಲ್ಲಿ ಮತ್ತೆ ಹೊರಗೆ ಸಹಿತ. ಇನ್ನೊಂದು ವಿಷಯ. ನನ್ನ ಮನೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಬಗ್ಗೆ ವ್ಯಸ್ತನಾಗಿದ್ದೇನೆ. ನನ್ನ ಗಮನ ಅತ್ತಕಡೆ ಹೆಚ್ಚಿದೆ. ನನಗೆ ತಿಳಿದಂತೆ ಕೆಲವು ಸಾಲುಗಳನ್ನು ತೆಗೆದುಹಾಕಿದ್ದೇನೆ. ಇದನ್ನು ಬಿಟ್ಟರೆ ನನಗೆ ಹೆಚ್ಚು ತಿಳಿಯದು. ಅದಕ್ಕೇ ನಾನು ನಿಮಗೆ ಹೇಳಿದ್ದು. ತಾವು ತಮಗೆ ತಿಳಿದಂತೆ ಮಾಡಿ. (Atmalinga (ಚರ್ಚೆ) ೦೩:೨೮, ೯ ಮೇ ೨೦೨೧ (UTC))

ವ್ಯಕ್ತಿ ಪರಿಚಯಸಂಪಾದಿಸಿ

ನೀವು ಮತ್ತೆ ಮತ್ತೆ ವ್ಯಕ್ತಿಪರಿಚಯ ಮಾತ್ರ ಬರೆಯುವುದು, ಇರುವ ಲೇಖನಗಳಿಗೆ ಇನ್ನಷ್ಟು ಅನಗತ್ಯ ಮಾಹಿತಿ ಸೇರಿಸುವುದು, ಅತಿಯಾದ ಹೊಗಳಿಕೆಯ ಧಾಟಿಯಲ್ಲಿ ಬರೆಯುವುದು ಇವುಗಳನ್ನು ಮುಂದುವರೆಸಿದ್ದೀರಿ. ಇದೇ ರೀತಿ ಮುಂದುವರೆಸಿದರೆ ನಿಮ್ಮನ್ನು ಕನ್ನಡ ವಿಕಿಪೀಡಿಯದಲ್ಲಿ ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಗುತ್ತದೆ. ಇದು ಮೊದಲನೇ ಸಲವಲ್ಲ ನಿಮಗೆ ಎಚ್ಚರಿಸುತ್ತಿರುವುದು. ಇದು ಅಂತಿಮ ಎಚ್ಚರಿಕೆ.--ಪವನಜ ಯು. ಬಿ. (ಚರ್ಚೆ) ೦೪:೫೦, ೬ ಜೂನ್ ೨೦೨೧ (UTC)

2021 Wikimedia Foundation Board elections: Eligibility requirements for votersಸಂಪಾದಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communitiesಸಂಪಾದಿಸಿ

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿಸಂಪಾದಿಸಿ

ಆತ್ಮೀಯ Atmalinga,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ಮೈಸೂರು ಅಸೋಸಿಯೇಶನ್ ಬಗೆಗಿನ ಲೇಖನಸಂಪಾದಿಸಿ

ಮೈಸೂರು ಅಸೋಸಿಯೇಶನ್ ಬಗೆಗಿನ ಲೇಖನ ಒಂದು ಪತ್ರಿಕಾವರದಿಯ ರೂಪದಲ್ಲಿದೆ. ಒಂದು ಸಂಸ್ಥೆಯ ವಾರ್ಷಿಕ ವರದಿಗಳನ್ನೆಲ್ಲ ಒಟ್ಟು ಸೇರಿಸಿ ಬರೆದಂತಿದೆ. ಈ ರೀತಿ ಬರೆಯುವ ಅಗತ್ಯವಿಲ್ಲ. ಈ ಬಗ್ಗೆ ನಿಮಗೆ ಹಲವು ಸಲ ತಿಳಿಸಿಯಾಗಿದೆ. ಆದರೆ ನೀವು ಅದೇ ರೀತಿ ಮುಂದುವರೆಸುತ್ತಿದ್ದೀರಿ. ಆದುದರಿಂದ ಈ ಲೇಖನವನ್ನು ಮುಖ್ಯ ಪುಟದಿಂದ ಕರಡು ಪುಟಕ್ಕೆ ವರ್ಗಾಯಿಸಿದ್ದೇನೆ. ಅದನ್ನು ಸ್ವಚ್ಛ ಮಾಡಿದ ನಂತರ ಮುಖ್ಯ ಪುಟಕ್ಕೆ ವರ್ಗಾಯಿಸಬಹುದು. ಅದನ್ನು ನೀವೇ ವರ್ಗಾಯಿಸಬೇಡಿ.--ಪವನಜ ಯು. ಬಿ. (ಚರ್ಚೆ) ೧೦:೪೫, ೩೦ ಮಾರ್ಚ್ ೨೦೨೨ (UTC) (ನಿರ್ವಾಹಕ)

ಸ್ವಾಮಿ, ನನಗೆ ತಿಳಿದಂತೆ ಲೇಖನವನ್ನು ಸ್ವಚ್ಛ ಮಾಡುವಲ್ಲಿ ಪ್ರಯತ್ನಿಸಿದ್ದೇನೆ. ಒಂದು ಪ್ರಮುಖ ಸಾರ್ವಜನಿಕ ಸಂಸ್ಥೆ ನಡೆದುಬಂದ ದಾರಿಯನ್ನು ಅವಲೋಕಿಸುವುದು ಅನೇಕರಿಗೆ ಬೇಕಾಗಿರುತ್ತದೆ. ಮುಂಬಯಿನಂತಹ ಬೃಹತ್ ನಗರದಲ್ಲಿ ತಮ್ಮ ಕಾಲುಗಳನ್ನು ಭದ್ರವಾಗಿ ಇಟ್ಟು ಓಡಾಡಲು ಮೈಸೂರು ಅಸೋಸಿಯೇಷನ್ ನಂತಹ ಹಲವಾರು ಸಂಘಸಂಸ್ಥೆಗಳು ದುಡಿದಿವೆ. ಅವುಗಳಿಂದಾಗಿಯೇ ನಮ್ಮಂತಹ, ನಿಮ್ಮಂತಹ ನೌಕರಿಗಾಗಿ ಅಲೆದಾಡುವ ವ್ಯಕ್ತಿಗಳಿಗೆ ಒಂದು ನೆಲೆ ಸಿಕ್ಕಿದೆ. ಅದನ್ನು ಮರೆಯದೆ, ನಾವುಗಳು ಕೃತಜ್ಞರಾಗಿರಬೇಕು. ವಿಕಿಪೀಡಿಯ ಮುಂದುವರೆಸಿಕೊಂಡು ಮರಾಠಿ, ತಮಿಳು, ಬೆಂಗಾಲಿಗಳ ಜತೆ ಮುನ್ನುಗ್ಗಬೇಕಾದರೆ ನಮ್ಮ ಕಾರ್ಯವೈಖರಿಯನ್ನು ಸಮರ್ಥವಾಗಿ ಎಲ್ಲರ ಪ್ರೀತಿ ಮತ್ತು ಸಹಕಾರದಿಂದ ಪಡೆಯುವುದೇ ಒಂದು ಜಾಣತನ. ಒಂದು ಟ್ಯಾಗ್ ಹಾಕಿ ಸುಮ್ಮನೆ ಕೂಡುವುದನ್ನು ಯಾರುಬೇಕಾದರೂ ಮಾಡಬಹುದು. ಸ್ವಲ್ಪ ಜವಾಬ್ದಾರಿಯಾಗಿ ವರ್ತಿಸಿ. ಧನ್ಯವಾದಗಳು.-((````) (ಚರ್ಚೆ) ೧೩:೦೧, ೩೦ ಮೇ ೨೦೨೨ (UTC))
ನೀವೂ ಏನೇನೂ ಸ್ವಚ್ಛ ಮಾಡಿಲ್ಲ. ಲೇಖನ ಇನ್ನೂ ಹೊಗಳಿಕೆಯ, ಪತ್ರಿಕಾವರದಿಯ ಧಾಟಿಯಲ್ಲಿಯೇ ಇದೆ. ಅದನ್ನು ಸರಿಪಡಿಸುವ ತನಕ ಸ್ವಚ್ಛ ಮಾಡಬೇಕಾಗಿದೆ ಎಂಬ ಟೆಂಪ್ಲೇಟನ್ನು ತೆಗೆಯಬೇಡಿ. ದಯವಿಟ್ಟು ಉತ್ತಮ ಲೇಖನ ಬರೆಯುವುದು ಹೇಗೆ ಎಂದು ಮೊದಲು ತಿಳಿದುಕೊಳ್ಳಿ. ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಕಾರಣವೇ ನಿಮ್ಮ ಲೇಖನವನ್ನು ಕರಡು ಎಂದು ಸ್ಥಳಾಂತರಿಸಿದ್ದು. ಅಲ್ಲವಾದಲ್ಲಿ ಅದನ್ನು ಅಳಿಸುತ್ತಿದ್ದೆ. ಮೈಸೂರು ಅಸೋಶಿಯೇಶನ್ ಬಗ್ಗೆ ಲೇಖನ ಅಗತ್ಯವಿಲ್ಲ ಎಂದು ನಾನು ತೀರ್ಮಾನಿಸಿಲ್ಲ. ಮುಂಬಯಿಯಲ್ಲಿ ಇದ್ದಾಗ ಮೈಸೂರು ಅಸೋಸಿಯೇಶನ್ ಅನ್ನು ಸುಮಾರು ವರ್ಷಗಳ ಕಾಲ ಬಳಸಿದ್ದೆ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ನಿಮ್ಮ ಲೇಖನ ಮಾತ್ರ ಹೊಗಳಿಕೆಯ ಧಾಟಿಯಲ್ಲಿದೆ. ವಿಕಿಪೀಡಿಯ ಒಂದು ವಿಶ್ವಕೋಶ. ಇದರಲ್ಲಿ ಹೊಗಳಿಕೆಯ ಧಾಟಿಯಲ್ಲಿ ಬರೆಯುವಂತಿಲ್ಲ. ಅದನ್ನು ವಿಕಿ ಶೈಲಿಯಲ್ಲಿ ತಟಸ್ಥ ಭಾಷೆ ಬಳಸಿ ಬರೆಯಿರಿ, ಅನವಶ್ಯಕ ವಿವರಗಳನ್ನು ತೆಗೆಯಿರಿ, ಎಂದು ನಿಮಗೆ ಮತ್ತೆ ಮತ್ತೆ ಹೇಳಿದ್ದೇನೆ. ಇನ್ನೂ ಹೇಳುತ್ತಿದ್ದೇನೆ.--ಪವನಜ ಯು. ಬಿ. (ಚರ್ಚೆ) ೧೬:೦೭, ೩೦ ಮೇ ೨೦೨೨ (UTC)
ಪನವಜರು ಹೇಳಿರುವುದು ಸರಿಯಾಗಿದೆ. ನಿಮ್ಮ ಬಹುಪಾಲು ಲೇಖನಗಳು ವಿಕಿಪೀಡಿಯ ಮಾದರಿಗೆ ವಿರುಧ್ದವಾಗಿಯೇ ಇವೆ. ಅತಿಯಾದ ಹೊಗಳಿಕೆ, ಬ್ಲಾಗ್ ಮಾದರಿಯ ಬರಹ, ಅತ್ಯಂತ ವೈಯಕ್ತಿಕ ಎನ್ನಿಸೋ ವಿಷಯಗಳನ್ನೂ ವಿಕಿಗೆ ಸೇರಿಸುವುದು ಇತ್ಯಾದಿ. ಇನ್ನೊಂದು ಮುಖ್ಯ ಅಂಶವೆಂದರೆ ತಾವು ಸೇರಿಸುವ ಬಹುಪಾಲು ಲೇಖನಗಳು ತಮಗೆ ಪರಿಚಯದವರದ್ದೇ ಆಗಿರುತ್ತದೆ. ಏಕೆಂದರೆ ಯಾವುದಕ್ಕೂ ಸರಿಯಾದ ವಿಶ್ವಾಸಾರ್ಹ source ಸೇರಿಸುವುದಿಲ್ಲ, ನಿಮ್ಮ ಅವರ ಪರಿಚಯವೇ ವಿಕಿ ಲೇಖನವಾಗುತ್ತಿವೆ. ದಯಮಾಡಿ ಪವನಜರ ಸಲಹೆಯನ್ನು ಸ್ವೀಕರಿಸಿ, ಈಗಾಗಲೇ ಬರೆದಿರುವ ಲೇಖನಗಳನ್ನು ಸರಿಪಡಿಸಿ. ತಪ್ಪು ತಿಳಿಯದೇ ಸಹಕರಿಸಿ. Msclrfl22 (ಚರ್ಚೆ) ೦೧:೦೨, ೩೧ ಮೇ ೨೦೨೨ (UTC)
((````) (ಚರ್ಚೆ) ೦೧:೫೬, ೩೧ ಮೇ ೨೦೨೨ (UTC))
ಧನ್ಯವಾದಗಳು. ನಮ್ಮ ಪರಿಚಯದ ಒಬ್ಬರು ಒಬ್ಬ ಮಹಾನ್ ಕನ್ನಡಿಗನಾದರೆ ಅದನ್ನು ಯಾರು ಬರೆಯಬೇಕು. ಸರಿಯಾಗಿ ಗುರುತಿಸುವ ಕಾರ್ಯವನ್ನೂ ನೀವುಗಳು ಮಾಡುತ್ತಿಲ್ಲ. ಒಂದು ಮಾಹಿಗಳೇ ಇಲ್ಲದ ಶುಶ್ಕ ಲೇಖನ ಬರೆದಾದರೂ ಏನು ಪ್ರಯೋಜನ ? ನಮ್ಮ ಗೆಳೆಯ ಜಿಮ್ಮಿವೇಲ್ಸ್ ರವರು ಬ್ರಿಟಾನಿಕಾ ವಿಶ್ವಕೋಶವನ್ನು ಬೇಡವೆಂದು ಹೇಳಿ, ಈ ಮುಕ್ತವಿಶ್ವಕೋಶಕ್ಕೆ ಕಾರಣರಾದರು. ಜಿಮ್ಮಿಯವರನ್ನು ನಾನು ಮುಂಬಯಿನಲ್ಲಿ ಭೇಟಿಯಾದಾಗ, ನಿಮ್ಮ ಪವನಜ ಎಲ್ಲಿದ್ದರು ? ಆದರೆ ಒಬ್ಬ ಮಹಾಜ್ಞಾನಿ ಹೇಳುವಂತೆ ಜನ್ಮ ದಿನದ ದಾಖಲೆ, ಮತ್ತು ಮರಣದ ದಾಖಲೆಬಿಟ್ಟರೆ ಇನ್ನೇನು ಮಹಾವಿಶಯ ಸಿಕ್ಕುತ್ತೆ ಅಲ್ಲಿ ? ಅಂತ ಕೇಳಿದಾಗ ನಾನು ಪೆಚ್ಚಾದೆ. ಹಾಗೆ ನೋಡಿದರೆ ನಾನು ಬಹಳ ಹಿಂದೆ ಪವನಜರವರ ಲೇಖನವನ್ನು ಶುದ್ಧಿಗೊಳಿಸಿ ಪ್ರಕಟಿಸಿದವನು. ಹಿರಿಯರಿಗೆ ಗೌರವವಿಲ್ಲ. 'ಮತ್ತೆ ಮತ್ತೆ ಹೇಳಿದ್ದೇನೆ. ಇನ್ನೂ ಹೇಳುತ್ತಿದ್ದೇನೆ' ಈ ತರಹದ ಬೆದರಿಕೆ ತಮಗೆ ತರವೇ ? ವಿಕಿಪೀಡಿಯದ ನೀತಿಗೆ ನೀವು ವಿರುದ್ಧವಾಗಿ ವರ್ತಿಸುವುದನ್ನು ಕಂಡು ಬೆರಗಾಗಿದ್ದೇನೆ. ಅನಗತ್ಯ ಅಂತ ನೀವು ಹೇಳಿದರೆ ಏನಾಯಿತು ? ಸ್ವಲ್ಪ ಸರಿಯಾಗಿ ಮಾತಾಡಿ. ನಾಲಿಗೆಯಮೇಲೆ ಹಿಡಿತ ಇಟ್ಟುಕೊಳ್ಳಿ. ಬೇಕಾದಷ್ಟು ಹಳೆಕಾಲದ ನನ್ನಂತಹವರ ಸಹಕಾರ ಅಗತ್ಯವೆನ್ನುವುದನ್ನು ಸ್ವಲ್ಪ ಅರ್ಥಮಾಡಿಕೊಳ್ಳಿ. ಕೊಳಕನ್ನು ತೆಗೆಯಿರಿ ಅಂದಿರಿ. ಸರಿ. ನೀವು ತೆಗೆದು ಒಮ್ಮೆ ತೋರಿಸಿದರೆ ನಮಗೆ ಮುಂದುವರೆಯಲು ಸಾಧ್ಯ. ಬೇರೆ ಭಾಷಿಗರೆಲ್ಲಾ ನಾಗಾಲೋಟದಲ್ಲಿ ಮೇಲೇರುತ್ತಿರುವಾಗಿ ನೀವಿನ್ನೂ ನಿಮ್ಮ ಬೇರುಗಳನ್ನು ಭದ್ರಪಡಿಸದೆ ಜಗಳ ಮನಸ್ತಾಪಗಳಲ್ಲೇ ಕಾಲಕಳೆಯುತ್ತಿದ್ದೀರಿ. ಸ್ವಲ್ಪ ಧನಾತ್ಮಕವಾಗಿ ಚಿಂತಿಸಿ. ಕೊಳಕನ್ನು ತೆಗೆಯಬೇಡಿ ಎಂದು ನಾನು ಹೇಳುತ್ತಿಲ್ಲ. ಸರಿಯಾಗಿ ಮಾತಡುವುದನ್ನು ಕಲಿಯಿರಿ. ವಿಕೀಪೀಡಿಯದ ಸಾಗರದಲ್ಲಿ ನೀವು-ನಾವು ಕೇವಲ ಬಿಂದುಗಳಷ್ಟೇ ಎನ್ನುವ ಸತ್ಯ ಈಗಲಾದರೂ ತಿಳಿಯಿರಿ. ಆ ದೇವರೆ, ನಿಮಗೆ ಬುದ್ಧಿ ನೀಡಬೇಕು. ಅಹಂಕಾರದಿಂದ ಮೆರೆಯುವ ನಿಮಗೆ ಸಧ್ಯ ಬೇರೆ ಹೆಚ್ಚಿನ ಜವಾಬ್ದಾರಿಗಳು ಸಿಕ್ಕಿಲ್ಲ. ಆಗ ಏನಾಗುತ್ತಿತ್ತೋ ಆ ಪರಮಾತ್ಮನೇ ಬಲ್ಲ. ಓ ದೇವ ನಮ್ಮ ದೇಶವನ್ನು ಕಾಪಾಡು. (````) (ಚರ್ಚೆ) ೦೧:೫೬, ೩೧ ಮೇ ೨೦೨೨ (UTC)
ನಿಮ್ಮ ಮಾತುಗಳು ಹಾಸ್ಯಾಸ್ಪದವಾಗುವ ಅಪಾಯವಿದೆ. ಹಿರಿಯರಾದ ನೀವು ಹೀಗೆಲ್ಲ ಹೇಳಬಾರದು. ನಾನು ಸಾಕಷ್ಟು ನಿಮ್ಮ ಲೇಖನಗಳನ್ನು ಸ್ವಚ್ಚ ಮಾಡಿದ್ದೇನೆ. ಅದನ್ನು ಗಮನಿಸಿಯೇ ಹೇಳಿದ್ದು. ತಾವು ಕೋಪಿಸಿಕೊಳ್ಳಬಾರದು. ಹಿಂದೆ ರಾಧಾತನಯ ಹೆಸರಿನಲ್ಲಿ ನೀವು ಬರೆದಿರುವ ಹಾಗೆಯೇ ಇಲ್ಲೂ ಮುಂದುವರೆದಿದೆ. ಸ್ವಲ್ಪ ಸರಿಪಡಿಸಿಕೊಂಡರೆ ಅತ್ಯುತ್ತಮ ಸಂಪಾದಕರಾಗಬಲ್ಲಿರಿ. ನಮಸ್ಕಾರಗಳು! Msclrfl22 (ಚರ್ಚೆ) ೦೫:೩೭, ೩೧ ಮೇ ೨೦೨೨ (UTC)
ಆತ್ಮಲಿಂಗ ರಾಧಾತನಯರೇ, ಪವನಜರ ಸಲಹೆಯಲ್ಲಿ ನನಗೆ ಯಾವ ತಪ್ಪು ಅಥವಾ ಅಗೌರವವೂ ಕಾಣಲಿಲ್ಲ. ಬದಲಾಗಿ ಉತ್ತಮವಾಗಿ ಲೇಖನಗಳನ್ನು ಬರೆಯಿರಿ ಎಂಬ ಸರಿಯಾದ ಸಲಹೆ ನೀಡಿದ್ದಾರೆ. ತಮಗೆ ಈ ಒಂದು ದಶಕದಲ್ಲಿ ಹಲವಾರು ಬಾರಿ ಹಲವರು ತಿಳಿಸಿ ಹೇಳಿದರೂ ಸಹ ನಿಮ್ಮ ಸಂಪಾದನೆಗಳು, ಲೇಖನ ಸೇರ್ಪಡೆಗಳು ವಿಶ್ವಕೋಶ ಶೈಲಿಯಲ್ಲಿ ಇಲ್ಲದಿರುವುದು ಕಂಡುಬರುತ್ತದೆ. ನಮ್ಮನ್ನು ನಾವು ತಿದ್ದಿಕೊಳ್ಳದೇ ಬೇರೆ ಭಾಷೆಯವರ ಜೊತೆ ಹೋಲಿಕೆ ಮಾಡಿಕೊಳ್ಳುವುದರಿಂದ ಏನು ಪ್ರಯೋಜನವಿದೆ? --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೫೩, ೨ ಜೂನ್ ೨೦೨೨ (UTC)
((````) (ಚರ್ಚೆ) ೧೪:೫೦, ೩ ಜೂನ್ ೨೦೨೨ (UTC))
ಈಗ ನೀವು, ವಿಕಾಸ್ ಹೆಗ್ಗಡೆ. ನೀವೆಲ್ಲ ನಿಮ್ಮ ಬಾಸ್ ಮಾತು ಕಟ್ಟಿಕೊಂಡು ಏನನ್ನು ಸಾಬೀತುಮಾಡಲು ಹೊರಟಿದ್ದೀರಿ ? ನನಗೆ ಅರ್ಥವಾಗುತ್ತಿಲ್ಲ. ನೀವೆಲ್ಲರೂ ನನ್ನ ವಯಸ್ಸಿಗೆ (೭೭) ಹೋಲಿಸಿದರೆ ಅತಿ ಚಿಕ್ಕವರು. ೨೦೦೫ ರಿಂದ ನಾನು ವಿಕಿಪೀಡಿಯಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಯಾಕೆಂದರೆ ಇದರಲ್ಲಿ ನನಗೆ ಸಂಭ್ರಮವಿದೆ. ಸಂತೋಷವಿದೆ. ಇಲ್ಲಿ ನಾವೆಲ್ಲಾ ವಿಕಿಪೀಡಿಯ ಎಂಬ ಮುಕ್ತ ವಿಶ್ವಕೋಶದಲ್ಲಿ ನಮ್ಮ ನಮ್ಮ ಯೋಗ್ಯತೆ ಮತ್ತು ತಿಳುವಳಿಕೆಗಳ ಆಧಾರದಮೇಲೆ ಕೆಲಸಮಾಡಿ ಸಾಧ್ಯವಾದರೆ ಕನ್ನಡ ವಲಯದ ನಾವು ನೋಡಿದ ಕೇಳಿದ ಸತ್ವಯುತವಾದ ವ್ಯಕ್ತಿಗಳ ಬಗ್ಗೆ ವ್ಯಕ್ತಿಚಿತ್ರ ಬರೆಯುವುದು ಒಂದು ವಿಷಯ. ನನ್ನ ಬಗ್ಗೆ ಹೇಳುವುದಾದರೆ, ಕೇವಲ ವ್ಯಕ್ತಿ ಚಿತ್ರವನ್ನು ಮಾತ್ರ ಬರೆಯಬಲ್ಲೆ. ಏಕೆಂದರೆ ನಾವು ಬರೆಯುವುದು ಯಾವುದೊ ಬ್ಲಾಗ್ ಲೇಖನವಲ್ಲ. ವಿಶ್ವಕೋಶದ ಲೇಖನ ; ನೀವೆಲ್ಲಾ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಹೆಚ್ಚಿನ ತಿಳುವಳಿಕೆಯುಳ್ಳವರು, ಮತ್ತು ಆಧುನಿಕತೆಯ ವಿಜ್ಞಾನದ ಸುಳಿಯಲ್ಲಿ ತೇಲುತ್ತಿರುವವರು. ನಿಮ್ಮ ಸಾಮರ್ಥ್ಯ ಹಲವಾರು ಜಟಿಲ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅತಿ ಹೆಚ್ಚಿದೆ. ಮತ್ತು ಅವನ್ನು ಜಾರಿಗೆ ತರುವಲ್ಲಿ ದುಡಿಯುತ್ತಿದ್ದಿರಿ. ಸಂತೋಷ. ಎರಡನೆಯ ವಿಶ್ವ ಯುದ್ಧದ ಸಮಯದಲ್ಲಿ ಜನಿಸಿದ (೧೯೪೪) ನನಗೆ ನಿಮ್ಮ ಬಿರುಸಿನ ಕಾರ್ಯವೈಖರಿಯಲ್ಲಿ ಭುಜಕ್ಕೆ ಭುಜ ಕೊಟ್ಟು ಓಡುವುದು ಹಾಗಿರಲಿ, ಸರಿಯಾಗಿ ನೆಟ್ಟಗೆ ನಿಲ್ಲುವುದೂ ಕಷ್ಟ. ನಿಮಗೆ ತಿಳಿದಹಾಗೆ ಇವು ನಮ್ಮಿಬ್ಬರ ಮಧ್ಯೆ ಇರುವ ವ್ಯತ್ಯಾಸಗಳು.
ಎರಡನೆಯದು. ಇದುವರೆಗೂ ನಾನು ಚಕಾರವೆತ್ತದೆ ನಿಮ್ಮ ಬಾಸ್ ಹೇಳಿದ ಮಾತುಗಳನ್ನು ಅರಿತು, ಲೇಖನಗಳನ್ನು ಸೃಷ್ಟಿಮಾಡುವುದನ್ನು ನಿಲ್ಲಿಸಿದೆ. ಆದರೆ ಕೆಲವು ವ್ಯಕ್ತಿಗಳ ಮಾಹಿತಿಗಳನ್ನು ನವೀಕರಿಸುವುದು, ಅನಿವಾರ್ಯವೆಂದು ತಿಳಿದಿರುವುದರಿಂದ ಅವನ್ನು ನವೀಕರಿಸಿದ್ದೇನೆ. ಉದಾಹರಣೆಗೆ, ಅಮೇರಿಕಾದ ಹಾಲಿವುಡ್ ಶ್ರೇಷ್ಠ ಹಿರಿಯ ನಟರಲ್ಲೊಬ್ಬ ಸ್ಪೆನ್ಸರ್ ಟ್ರೇಸಿ ಮರಣಿಸಿದ ಕೆಲವು ದಿನಗಳ ನಂತರವೂ ಅವರ ಪುಟವನ್ನು ನವೀಕರಿಸದೆ ಇದ್ದುದನ್ನು ಕಂಡು, ನಾನು ಆ ಕೆಲಸಮಾಡಿದೆ. ಸಂತೂರ್ ವಾದ್ಯ ವಿಶಾರದ ಶ್ರೀ.ಶಿವಕುಮಾರ ಶರ್ಮರ ಪುಟವನ್ನೂ ನವೀಕರಿಸಿರಲಿಲ್ಲ. ಅದನ್ನು ನಾನು ಮಾಡಿದೆ. ಡಾ. ಜಿ. ವೆಂಕಟಸುಬ್ಬರಾಯರ ಲೇಖನವೂ ಅಷ್ಟೆ. ಅದೇನು ಮಹಾ ಎಂದು ಹೇಳಬೇಡಿ. ಇವನ್ನೆಲ್ಲ ಕಾದಿದ್ದು ಓದಿ ನವೀಕರಿಸುವುದು ವಿಕಿಪಿಡಿಯಾದ ಪರಮ ಗುರಿಯಾಗಿದೆ ಎನ್ನುವುದನ್ನು ಗಮನಿಸಿ. ಇಲ್ಲದಿದ್ದಿದ್ದರೆ ಇಂದಿಗೂ ನಾವು ಬ್ರಿಟಾನಿಕಾ ವಿಶ್ವಕೋಶ ಮೊರೆಹೋಗುತ್ತಿದ್ದೆವು. ನಮ್ಮ ಮಾರ್ಗದರ್ಶಿ, ಮುಂದಾಲೋಚಕ, ಜಿಮ್ಮಿ ವೇಲ್ಸ್ ರ ಸೇವೆಗಳನ್ನು ನೆನೆಯಬೇಕು. ಇಂತಹ ಮಹಾನ್ ತಂತ್ರಜ್ಞಾನದ ರೂವಾರಿ ವಿಶ್ವದ ಜನತೆಗೆ ಕೊಟ್ಟಿರುವ ಅನುಪಮ ಕೊಡುಗೆಯಾಗಿದೆ. ವಾರಕ್ಕೆ ಒಮ್ಮೆಯಾದರೂ ಅವರ ಕಾರ್ಯವೈಖರಿಯ ಬಗ್ಗೆ ಒಂದು ಯೂಟ್ಯೂಬ್ ಕಾರ್ಯಕ್ರಮವನ್ನು ನೋಡದೆ ಇರುವುದಿಲ್ಲ.
ನಾನು ಮತ್ತು ನಿಮ್ಮ ಬಾಸ್ ಶ್ರೀ. ಪವನಜ. ಮೊದಲು ಪ್ರಾರಂಭದಲ್ಲಿ ವಿಕಿಪೀಡಿಯಕ್ಕೆ ಸೇರಿದಾಗ ಫೋನ್ ಮಾಡುವುದೇನು ಎಲ್ಲಾ ನಾಟಕ ಆಡಿದರು. ಆದರೆ ಅವರಿಗೆ ಹಿರಿಯರ ಹತ್ತಿರ ವ್ಯವಹರಿಸುವ ಸೂಕ್ಷ್ಮತೆಯನ್ನು ಅವರು ತಮ್ಮ ಪದವಿಯಲ್ಲಿ ಮೇಲಕ್ಕೆ ಹೋಗುತ್ತಿರುವಂತೆ ಕಳೆದುಕೊಳ್ಳುತ್ತಿದ್ದಾರೆ.
ವಿಕಿಪೀಡಿಯ ಎಂದರೆ ಏನು ಎಂದು ಮೊದಲು ನೋಡೋಣ. ವಿಶ್ವಕೋಶವೆನ್ನುವುದು ಮೇಲುನೋಟಕ್ಕೆ ಕಾಣಿಸುತ್ತದೆ. ಆದರ ಅಷ್ಟೇ ಅಲ್ಲ ಅದರ. ವ್ಯಾಪ್ತಿ ಮುಗಿಲಿಗೇರಿದೆ. ೨೦೦೫ ರಲ್ಲಿ ನಾನು ವಿಕಿಪೀಡಿಯಕ್ಕೆ ಪಾದಾರ್ಪಣೆ ಮಾಡಿದಾಗ ಕನ್ನಡದಲ್ಲಿ ಬಹಳ ಕಡಿಮೆ ಲೇಖನಗಳಿದ್ದವು. ಯಾರಿಗೂ ವಿಕಿಪೀಡಿಯದ ಬಗ್ಗೆ ತಿಳಿದಿರಲಿಲ್ಲ. ನಮಗೆ ತಿಳಿದದ್ದು ಏನು ಎಂದರೆ ಕನ್ನಡದಲ್ಲಿ ವಿಕಿಪೀಡಿಯ ಲೇಖನಗಳು ಬಹಳ ಕಡಿಮೆ. ಅವನ್ನು ಹೆಚ್ಚಿಸುವುದು ಕನ್ನಡ ಭಾಷೆಯ ಒಲವಿದ್ದವರಿಗೆ ಅತಿ ಆದ್ಯ ಕರ್ತವ್ಯ. ಹಾಗಾಗಿ ಆ ಸಮಯದಲ್ಲಿ ನಾನು ೫೦-೬೦ ಲೇಖನಗಳನ್ನು ಬರೆದೆ. ವಿಕಿಪಿಡಿಯದಲ್ಲಿ ಬರೆಯುವುದು ನನಗೇನು ಎಲ್ಲ ಹೊಸಬರಿಗೂ ಬಹಳ ಇಷ್ಟವಾದ ಸಂಗತಿ. ಲೇಖಗಳು ಅನೇಕ ತಪ್ಪುಗಳನ್ನು ಹೊಂದಿದ್ದವು. ಯಾರು ಬರೆಯುವ ಶೈಲಿಯನ್ನು ಕೇಳುತ್ತಿರಲಿಲ್ಲ. ನಂತರ ಈ ಕೆಲಸದ ಮೇಲ್ವಿಚಾರಣೆಗಾಗಿಯೇ ಉತ್ತಮ ಪಾಗಾರವನ್ನು ಕೊಟ್ಟು ಹೆಚ್ಚು ವಿದ್ಯಾವಂತರನ್ನು ನೇಮಿಸಿದಮೇಲೆ ಅವರುಗಳು ಭಾಷೆ ಶೈಲಿಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅದನ್ನು ಅವರು ಮಾಡಲೇ ಬೇಕು.
ಮೊದಲಿನಂತಯೇ ನಾನು ಕೆಲಸಮಾಡುತ್ತಾ ಬಂದಿದ್ದೇನೆ. ಶೈಲಿಯನ್ನು ಬದಲಾಯಿಸಬೇಕು ಎನ್ನುವುದನ್ನು ನಾನು ವಿರೋಧಿಸುತ್ತಿಲ್ಲ. ಎಷ್ಟೋ ಕಡೆ ಮಾಡಿದ್ದೇನೆ. ಇನ್ನೂ ಹಲವಾರು ತಾಂತ್ರಿಕ ಮೌಲ್ಯಗಳನ್ನು ನಾನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ನನಗೆ ಈಗಿರುವ ವೆಂದರೆ ವಿಕಿಪೀಡಿಯದಿಂದ ಹೊರಗೆ ಹೋಗುವುದು. ಬರೆಯುವ ಆಸಕ್ತಿ ಮತ್ತು ಪ್ರತಿಭೆ, ಆತ್ಮ ಸ್ಥೈರ್ಯಗಳಿರುವ ನನಗೆ ವಿಕಿಪೀಡಿಯದಿಂದ ಹೊರಗೆ ಹೋಗುವುದು ಬೇಸರವೇನಲ್ಲ. ಲೇಖನಗಳಿವೆ ಸರಿಹೊಂದುವ ಫೋಟೋ ಸೇರಿಸುವುದು ಮುಖ್ಯ ಆದ್ಯತೆಯೆನ್ನುವ ಸತ್ಯ ನನಗೆ ಗೊತ್ತಿದೆ. ಅದಕ್ಕಾಗಿ ನಾನು ೩೫ ಸಾವಿರ ರೂಪಾಯಿ ಹಣ ಕೊಟ್ಟು ಒಂದು ಕ್ಯಾಮರಾ ಖರೀದಿಸಿದೆ.
ಇಂಗ್ಲಿಷ್ ವಿಕಿಪಿಡಿಯಾದಲ್ಲೂ ಲೇಖನ ಬರೆದ ನನಗೆ ಕೆಲವು ಲೇಖನಗಳನ್ನು ನೋಡಿ ಗೊತ್ತಿದೆ. ಅನವಶ್ಯಕ ಮಾಹಿತಿ ಫೋಟೋ ಸೇರಿಸಬೇಡಿ, ವ್ಯಕ್ತಿಚಿತ್ರವನ್ನು ಬರೆಯಲೇ ಬೇಡಿ ಎಂದು ಒಂದು ಸುಗ್ರೀವಾಜ್ಞೆ ಕೊಡುವ ಮನೋಭಾವವನ್ನು ಇಟ್ಟುಕೊಂಡ ಮುಖ್ಯಸ್ಥರಿಗೆ ಏನು ಹೇಳೋಣ.
ಕೊನೆಯಲ್ಲಿ ಎಲ್ಲಾ ಲೇಖನಗಳೂ ಪ್ರಕಟವಾಗುವ ಪಠ್ಯ ಪುಸ್ತಕಗಳ ತರಹವಿರಲ್ಲ. ಅವನ್ನು ಯಾವಾಗ ಎಲ್ಲಿ, ಹೇಗೆ, ಯಾರು ಬೇಕಾದರೂ ಸಂಪಾದಿಸಿ ಸರಿಪಡಿಸುವ ಜವಾಬ್ದಾರಿ ಇರುತ್ತದೆ. ಅದನ್ನು ನಿರ್ವಾಹಕರು ಮಾಡಬೇಕು.
ನೀವು ನನಗೆ ಉಪದೇಶದ ಲೇಖನ ಬರೆದಕರಣ ನಾನು ಅದಕ್ಕೆ ಜವಾಬು ಕೊಟ್ಟಿದ್ದೇನೆ. ನಿಮಗೆ ಒಂದು ಬೃಹತ್ ವಿಕಿಪಿಡಿಯಾವೆಂಬ ಅಭಿಯಾನದ ಕೆಲವು ಜವಾಬ್ದಾರಿಗಳನ್ನು ಕೊಟ್ಟಿರುವುದನ್ನು
ನಿಷ್ಪಕ್ಷಪಾತವಾಗಿ ನಗುಮುಖದಿಂದ ನಿರ್ವಹಿಸಿ. ಯಾರೂ ನಿಮ್ಮನ್ನು ನಿಂದಿಸುತ್ತಿಲ್ಲ. ಆದರೆ ನಾಲಗೆಯನ್ನು ಹರಿಬಿಟ್ಟು ಹೇಗಂದರೆಹಾಗೆ ಮಾತಾಡುವುದನ್ನು ನಿಲ್ಲಿಸಿ. ಇದುವರೆಗೆ (೨೦೦೫-೨೦೨೨)
ನನಗೆ ಹೀಗೆ ಅವಮಾನವಾಗುವಂತಹ ಭಾಷೆಯನ್ನು ಉಪಯೋಗಿಸಿರಲಿಲ್ಲ. "ಅನವಶ್ಯಕ ವಿವರಗಳನ್ನು ತೆಗೆಯಿರಿ, ಎಂದು ನಿಮಗೆ ಮತ್ತೆ ಮತ್ತೆ ಹೇಳಿದ್ದೇನೆ. ಇನ್ನೂ ಹೇಳುತ್ತಿದ್ದೇನೆ" "ವ್ಯಕ್ತಿ ಸಂಗತಿ ಬರೆಯುವುದನ್ನು ನಿಲ್ಲಿಸಿ".
ಕೊನೆಯಲ್ಲಿ , ಇಷ್ಟುವರ್ಷ ವಿಕಿಪಿಡಿಯಾಕ್ಕಾಗಿ ಕೆಲಸಮಾಡಿದಮೇಲೆ :
೧. ವಿಕಿಪೀಡಿಯದಲ್ಲಿ ಬರೆಯುವ ಒಬ್ಬ ಸಂಪಾದಕನಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಮಾಡಬೇಕು. ಯಾರು ಬೇಕಾದರು, ಎಲ್ಲಿಯಾದರೂ, ಹೇಗಾದರೂ, ಎನ್ನುವ ಅತಿ ಸರಳ ವರ್ಗಿಕರಣ ಆರೋಗ್ಯಕರವಲ್ಲವೆನ್ನುವುದು ನಾವೆಲ್ಲಾ ಅರಿಯಬೇಕಾದ ಮಹತ್ವದ ಗುಟ್ಟು.
೨. ನಿಷ್ಠೆಯಿಂದ ದುಡಿಯುವ ಹಿರಿಯ ವ್ಯಕ್ತಿಗಳ ಜೊತೆ, ಸೂಕ್ಷ್ಮ ವಾಗಿ ವ್ಯವಹರಿಸಿ ಅವನ್ನು ಹೆಚ್ಚು ಹೆಚ್ಚು ಕೆಲಸಮಾಡಲು ಪ್ರೋತ್ಸಾಹ ನೀಡುವ ಜಾಣತನವನ್ನು ಕಲಿಯುವ ಅಗತ್ಯವಿದೆ.
ಮನೆಯಲ್ಲಿನ ಹಿರಿಯರಿಗೆ ಈಗಿನ ಪರಿಸ್ಥಿಗೆ ಹೊಂದಿಕೊಳ್ಳಲು ಸಮಯ ಬೇಕು. ಕಾಯಬೇಕು. ನನ್ನ ಲೇಖನಗಳು ಮಾಹಿತಿಪೂರ್ಣವಾಗಿರಬೇಕು ಎನ್ನುವುದು ನಮಗೆ ಇಷ್ಟವಿಲ್ಲವೇ ? ವಯಸ್ಸು ಮತ್ತು (Generation gap) ಪೀಳಿಗೆಯ ಅಂತರ ಈ ತರಹದ ಬರವಣಿಗೆಗೆ ಕಾರಣ. ಅವು ನಿಧಾನವಾಗಿ ಸರಿಹೋಗುತ್ತವೆ. ಕಾಯಬೇಕು. ಸಧ್ಯ ವಿವಾದಾಸ್ಪದವಂತೂ ಅಲ್ಲ.
ಅದೆಷ್ಟೋ ವಿಕಿಪೀಡಿಯ ಲೇಖನಗಳು ಹೀನ ಅವಸ್ಥೆಯಲ್ಲಿವೆ. ಅವನ್ನು ಗಮನಿಸಿ. ಸಧ್ಯಕ್ಕೆ ನನಗೆ ಬರೆಯಲು ನಿಜವಾಗಿಯೂ ಆಸಕ್ತಿ ಹೋಗಿದೆ. ಅದಕ್ಕೆ ಕಾರಣ ನನ್ನ ಮುಖದಮೇಲೆ ನೀವು ಎರಚುತ್ತಿರುವ ತಣ್ಣೀರು. (````) (ಚರ್ಚೆ) ೧೪:೫೦, ೩ ಜೂನ್ ೨೦೨೨ (UTC)