ವಿಕಿಪೀಡಿಯ:ಕೋರಿಕೆಯ ಲೇಖನಗಳು

೧."ಎಲ್ಲಿ ನೋಡಿದೊಡೆಲ್ಲ ......."

ಎಲ್ಲಿ ನೋಡಿದೊಡೆಲ್ಲ ನೀನೆ ಕಾಣುತಲಿರುವೆ ಅಣು ಅಣುವಲಿ.ಕಣ ಕಣದಲಿ,ಸಕಲ ಜೀವಾತ್ಮರಲಿ//ಪ//

ನನ್ನದೆನ್ನುವದೆಲ್ಲ ಏನಿಹುದು ಈ ಜಗದಿ ನಿನ್ನ ಲೀಲೆಯ ಮಾಯೆ ,ಕವಿದ ಮೋಹದ ಛಾಯೇ ನೀ ಸೂತ್ರಧಾರಿಯಾದರೆ ನಾ ಪಾತ್ರಧಾರಿ //

ಹೃದಯವೇ ಗುಡಿಯಾಗಿ,ನೇತ್ರ ಜ್ಯೋತಿಯು ಆಗಿ ಕಂಬನಿಯೇ ಪನ್ನೀರು-ಕರುಳಬಳ್ಳಿಯೇ ಹಾರ ಪರಶಿವಗೆ ಅರ್ಪಿಸುವೆ ನನ್ನಾತ್ಮ ಲಿಂಗದಲಿ //೧//

ಅಂತರಾತ್ಮದೊಳಿರುವ ಈ ಶಿವಲಿಂಗಕೆ ಅನವರತ ಭಜಿಸುವೆ ಪರಮಾತ್ಮಗೆ ನಿರ್ಮಲ ಮನದಿ ದೀಪಧೂಪಾರತಿ ಬೆಳಗಿದೆ//

ಮಣ್ಣಾಗುವ ಈ ಕಾಯಕೆ,ನಿನ್ನ ಸ್ಮರಣೆಯೇ ಸಾಕು ಎಲ್ಲವೂ ಶಿವಮಯವು ಸರ್ವಾಂಗ ಶಿವಮಯವು ಭಕ್ತಿ ಮಾರ್ಗವೆ ಸಾಕು ಮುಕ್ತಿ ಪಡೆವುದೀ ಜನುಮ // ೨//

                            -"ಕಸ್ತೂರೀಪ್ರಿಯ"

ಲೇಖನಗಳ ಕೋರಿಕೆಗಳುಸಂಪಾದಿಸಿ