ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ
ವಿಕಿ ಸಮ್ಮಿಲನ ೨೦೨೩ - ವಿಕಿಮೀಡಿಯಾದ ವಿವಿಧ ಕನ್ನಡ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಕನ್ನಡ ವಿಕಿಮೀಡಿಯನ್ನರು ಒಂದೆಡೆ ಭೌತಿಕವಾಗಿ ಸೇರುವ, ಚರ್ಚೆ ಮಾಡುವ, ಮಾಹಿತಿ ಮತ್ತು ಜ್ಞಾನ ವಿನಿಮಯ ಮಾಡಿಕೊಳ್ಳುವ ಒಂದು ಅವಕಾಶ. ಕೆಲವು ವರ್ಷಗಳಿಂದ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವು ನಡೆದಿಲ್ಲದ ಕಾರಣ ಈ ಬಾರಿ ಕನ್ನಡ ವಿಕಿಮೀಡಿಯನ್ನರ ಸಮ್ಮಿಲನವನ್ನು ಆಯೋಜಿಸಲಾಗುತ್ತಿದೆ.
ಆನ್ಲೈನ್ ಸಮ್ಮಿಲನ ೩೫ರಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಏರ್ಪಾಡಾಗುತ್ತಿರುವ ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಸಂಪಾದನೆ ಮಾಡುತ್ತಿರುವ ಎಲ್ಲ ಸಂಪಾದಕರಿಗೆ ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯವು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ..
ಸಮ್ಮಿಲನದ ಸ್ಥಳ ಮತ್ತು ದಿನ
ಬದಲಾಯಿಸಿಸ್ಥಳ: ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ. (OpenStreetMap link)
ದಿನ: ೨೨ ಜನವರಿ ೨೦೨೩, ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ.
ಕಾರ್ಯಕ್ರಮಗಳು
ಬದಲಾಯಿಸಿಸಮಯ | ಕಾರ್ಯಕ್ರಮ | ವಿವರ |
---|---|---|
೯:೩೦ - ೧೦:೦೦ | ನೋಂದಣಿ | |
೧೦:೦೦ - ೧೧:೧೫ | ಉದ್ಘಾಟನಾ ಕಾರ್ಯಕ್ರಮ |
ಸ್ವಾಗತ ಗೀತೆ - ಪ್ರಾಜ್ಞ ಸ್ವಾಗತ, ಪರಿಚಯ - ವಿಕಾಸ ಹೆಗಡೆ ಆಶಯ ಭಾಷಣ - ಡಾ. ಯು. ಬಿ. ಪವನಜ ಉದ್ಘಾಟಣೆ - ನಾಡೋಜ ಶ್ರೀ ಕೆ. ಪಿ. ರಾವ್ ಮುಖ್ಯ ಅತಿಥಿಗಳ ಮಾತು - ಕೆ.ಪಿ. ರಾವ್, ವಿಷಯ - ಲಿಪಿ ಮತ್ತು ಭಾಷೆ ಅಧ್ಯಕ್ಷರ ಮಾತು - ಡಾ. ಭಾಸ್ಕರ ಶೆಟ್ಟಿ, ಪ್ರಿನ್ಸಿಪಾಲ್ ವೇದಿಕೆಯಲ್ಲಿ - ರಾಮಚಂದ್ರ ಅಡಿಗ ಜಿ., ಮುಖ್ಯಸ್ಥರು, ಗಣಕ ವಿಜ್ಞಾನ ವಿಭಾಗ ಧನ್ಯವಾದ ಸಮರ್ಪಣೆ |
೧೧:೧೫ - ೧೧:೩೦ | ಚಹಾ ಬ್ರೇಕ್ | |
೧೧:೩೦ - ೧೩:೦೦ | ಪ್ರೆಸೆಂಟೇಶನ್ಗಳು |
ತನ್ವೀರ್ - ವಿಕಿ ಫೌಂಡೇಶನ್ ಬಗ್ಗೆ, ಗ್ರಾಂಟ್ ಗಳ ಬಗ್ಗೆ ಮಾಹಿತಿ - ೩೦ ನಿಮಿಷ ಸೆಮಿನಾರ್ - ವಿಕಿ ಸದಸ್ಯರುಗಳಿಂದ ವಿಶ್ವನಾಥ ಬದಿಕಾನ & ಭರತೇಶ ಅಲಸಂಡೆಮಜಲು: ೧೫ ನಿಮಿಷ ಶ್ರೀನಿಧಿ ಹಂದೆ: ೧೦ ನಿಮಿಷ ಪವನಜ: ೨೦ ನಿಮಿಷ |
೧೩:೦೦ - ೧೪:೦೦ | ಊಟ | |
೧೪:೦೦ - ೧೫:೦೦ | ಉಳಿದ ಪ್ರೆಸೆಂಟೇಶನ್ |
ಮಾನಸ ಆಚಾರ್ಯ: ೫ ನಿಮಿಷ ಧನಲಕ್ಷ್ಮೀ - ೧೫ ನಿಮಿಷ ಸಂಜನ ಹೆಬ್ಬಾರ್ - ೫ ನಿಮಿಷ ಪ್ರಶ್ನೋತ್ತರ, ಮಾಹಿತಿ ವಿನಿಮಯ, ಅನುಭವ ಅನಿಸಿಕೆ ಹಂಚಿಕೆ |
೧೫:೦೦ - ೧೫:೧೫ | ಕ್ವಿಜ್, ಪರೀಕ್ಷೆ | |
೧೫:೧೫ - ೧೫:೩೦ | ಚಹಾ ಬ್ರೇಕ್ (ಕ್ವಿಜ್ ಪರೀಕ್ಷೆ ಮೌಲ್ಯಮಾಪನ) | |
೧೫:೩೦ - ೧೬:೩೦ | ಕ್ವಿಜ್ | |
೧೬:೩೦ - ೧೬:೪೫ | ಬಹುಮಾನ , ಮುಕ್ತಾಯ ನುಡಿಗಳು | |
೧೬:೪೫ - ೧೭:೦೦ | ನೆನಪಿನ ಕಾಣಿಕೆ ವಿತರಣೆ. |
ಪ್ರಯಾಣ, ವಸತಿ ಭತ್ಯೆಗಳು
ಬದಲಾಯಿಸಿಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳಿಗಾಗಿ ವಿಕಿಮೀಡಿಯಾ ಫೌಂಡೇಶನ್ ಗೆ ಅರ್ಜಿಯನ್ನು ಸಲ್ಲಿಸಲಾಗಿದ್ದು ಅದು ಪರಿಶೀಲನಾ ಹಂತದಲ್ಲಿದೆ. ಅದರ ಪ್ರಕಾರ ೬೦ ಜನರಿಗೆ ಅವಕಾಶವಿದೆ. ಉಡುಪಿಯ ಸುತ್ತಮುತ್ತಲಿನ ಮತ್ತು ಕರಾವಳಿ ಪ್ರದೇಶದ ಊರುಗಳಿಂದ ಬರುವ ೧೫ ಜನರಿಗೆ ಮತ್ತು ದೂರದ ಊರುಗಳಿಂದ ಬರುವ ೧೦ ಜನರಿಗೆ ರೈಲು/ಬಸ್ಸು ಪ್ರಯಾಣ ಮತ್ತು ವಸತಿಯ ಭತ್ಯೆಗೆ ಅವಕಾಶವಿದೆ. ಭಾಗವಹಿಸಲು ನೊಂದಾಯಿಸಿದವರ ಸಂಖ್ಯೆಯು ಇದನ್ನು ಮೀರಿದಲ್ಲಿ ನೊಂದಾಯಿಸಿದವರ ವಿಕಿ ಸಂಪಾದನೆಗಳ, ಕೊಡುಗೆಗಳ ಮತ್ತು ಇತ್ತೀಚಿನ ಒಂದು ವರ್ಷದ ಚಟುವಟಿಕೆಗಳ ಆಧಾರದಲ್ಲಿ ಆಯ್ಕೆಮಾಡಲಾಗುವುದು. ಉಡುಪಿ ಸುತ್ತಮುತ್ತಲಿನ ಮತ್ತು ಕರಾವಳಿಯ ಊರುಗಳಿಂದ ಪ್ರಯಾಣ ಭತ್ಯೆಯ ಗರಿಷ್ಠ ಮಿತಿ ಮುನ್ನೂರು ರೂಪಾಯಿಗಳು ಹಾಗೂ ದೂರದೂರಿನ ಪ್ರಯಾಣ ಭತ್ಯೆಯ ಗರಿಷ್ಠ ಮಿತಿ ಮೂರು ಸಾವಿರ ರೂ ಆಗಿದ್ದು ಪ್ರಯಾಣದ ಟಿಕೆಟ್ ಗಳನ್ನು ಸಲ್ಲಿಸುವ ಮೂಲಕ ಭತ್ಯೆಯನ್ನು ಪಡೆಯಬಹುದು. ಕಾಯ್ದಿರಿಸಿದ ವಸತಿಯನ್ನು ಮುಂಚಿತವಾಗಿ ತಿಳಿಸಲಾಗುತ್ತದೆ. ಭತ್ಯೆಯ ಅಗತ್ಯವಿಲ್ಲದೆ ಭಾಗವಹಿಸಲಿಚ್ಛಿಸುವ ವಿಕಿಮೀಡಿಯನ್ನರೆಲ್ಲರಿಗೆ ಮುಕ್ತಸ್ವಾಗತವಿರುತ್ತದೆ. ಮಧ್ಯಾಹ್ನದ ಊಟ ಮತ್ತು ಸಂಜೆಯ ಉಪಾಹಾರದ ವ್ಯವಸ್ಥೆಯು ಎಲ್ಲರಿಗೂ ಇರುತ್ತದೆ.
ಆಯೋಜನಾ ತಂಡ
ಬದಲಾಯಿಸಿಭಾಗವಹಿಸಲು ಇಲ್ಲಿ ನೋಂದಾಯಿಸಿಕೊಳ್ಳಿ
ಬದಲಾಯಿಸಿನಿಮ್ಮ ವಿಕಿಪೀಡಿಯಾ ಯೂಸರ್ ನೇಮ್, ನಿಮ್ಮ ಹೆಸರು ಮತ್ತು ನಿಮ್ಮ ಊರನ್ನು ನಮೂದಿಸಿ. ಪ್ರಯಾಣ ಭತ್ಯೆ ಮತ್ತು ವಸತಿ ಬೇಕು ಅಥವಾ ಬೇಡ ತಿಳಿಸಿ
ಕೊನೆಯ ದಿನಾಂಕ: ೧೫ ಜನವರಿ ೨೦೨೩
- ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೧:೨೭, ೩೦ ಡಿಸೆಂಬರ್ ೨೦೨೨ (IST) - ವಿಕಾಸ್ ಹೆಗಡೆ - ಬೆಂಗಳೂರು - ಪ್ರಯಾಣ ಮತ್ತು ವಸತಿ ಭತ್ಯೆ ಬೇಕು.
- ಮಹಾವೀರ ಇಂದ್ರ (ಚರ್ಚೆ) ೧೧:೨೬, ೩೦ ಡಿಸೆಂಬರ್ ೨೦೨೨ (IST) - ಮಹಾವೀರ ಇಂದ್ರ - ಕಾರ್ಕಳ - ಪ್ರಯಾಣ ಭತ್ಯೆ ಬೇಕು. ವಸತಿ ಬೇಡ.
- Sudheerbs - ಸುಧೀರ್ ಶಾನುಭಾಗ - ಬೆಂಗಳೂರು - ಪ್ರಯಾಣ ಭತ್ಯೆ ಬೇಡ ಮತ್ತು ವಸತಿ ಭತ್ಯೆ ಬೇಕು.
- Vishwanatha Badikana (ಚರ್ಚೆ) ೧೨:೪೩, ೩೦ ಡಿಸೆಂಬರ್ ೨೦೨೨ (IST) ನಾನು ಮಂಗಳೂರಿಂದ ಬರುತ್ತೇನೆ
- ಗೋಪಾಲಕೃಷ್ಣ (ಚರ್ಚೆ) ೧೫:೦೬, ೩೦ ಡಿಸೆಂಬರ್ ೨೦೨೨ (IST) ಮಂಗಳೂರಿನಿಂದ ಬರುತ್ತೇನೆ. ಪ್ರಯಾಣ ಭತ್ಯೆ ಬೇಕು.
- ವಿದ್ಯಾಧರ ಚಿಪ್ಳಿ (ಚರ್ಚೆ) ೨೦:೨೧, ೩೦ ಡಿಸೆಂಬರ್ ೨೦೨೨ (IST) - ಸಾಗರ - ನಾನು ಸಾಗರದಿಂದ ಬರುತ್ತೇನೆ. ಪ್ರಯಾಣ ಮತ್ತು ವಸತಿ ಭತ್ಯೆ ಬೇಕು.
- ಪವನಜ ಯು. ಬಿ. (ಚರ್ಚೆ) ೧೪:೩೨, ೩೧ ಡಿಸೆಂಬರ್ ೨೦೨೨ (IST), ಬೆಂಗಳೂರು, ವಸತಿ, ಪ್ರಯಾಣ ವೆಚ್ಚ ಬೇಕಿಲ್ಲ.
- Prakrathi shettigar (ಚರ್ಚೆ) ೧೪:೪೨, ೩೧ ಡಿಸೆಂಬರ್ ೨೦೨೨ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Pallaviv123 (ಚರ್ಚೆ) ೧೪:೪೬, ೩೧ ಡಿಸೆಂಬರ್ ೨೦೨೨ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Acharya Manasa (ಚರ್ಚೆ) ೧೪:೫೧, ೩೧ ಡಿಸೆಂಬರ್ ೨೦೨೨ (IST),ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Chaithra C Nayak (ಚರ್ಚೆ)೧೫:೦೪, ೩೧ ಡಿಸೆಂಬರ್ ೨೦೨೨ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Ashwini Devadigha (ಚರ್ಚೆ) ೧೫:೦೧, ೩೧ ಡಿಸೆಂಬರ್ ೨೦೨೨ (IST),ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Santhosh Notagar (ಚರ್ಚೆ) ೧೫:೨೨, ೩೧ ಡಿಸೆಂಬರ್ ೨೦೨೨ (IST) ಮಂಗಳೂರು - ಪ್ರಯಾಣ ಭತ್ಯೆ ಬೇಕು. ವಸತಿ ಬೇಡ.
- Prajna gopal (ಚರ್ಚೆ) ೧೫:೨೭, ೩೧ ಡಿಸೆಂಬರ್ ೨೦೨೨ (IST),ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Chaithali C Nayak (ಚರ್ಚೆ)೧೫:೦೪, ೩೧ ಡಿಸೆಂಬರ್ ೨೦೨೨ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Kavya.S.M (ಚರ್ಚೆ) ೧೫:೩೬, ೩೧ ಡಿಸೆಂಬರ್ ೨೦೨೨ (IST),ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Apoorva poojay (ಚರ್ಚೆ) ೧೫:೪೧, ೩೧ ಡಿಸೆಂಬರ್ ೨೦೨೨ (IST)ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Kavyashri hebbar (ಚರ್ಚೆ) ೧೭:೫೯, ೩೧ ಡಿಸೆಂಬರ್ ೨೦೨೨ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Chaitra. B. H. (ಚರ್ಚೆ)೨೧:೪೯, ೩೧ ಡಿಸೆಂಬರ್ ೨೦೨೨ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Akshitha achar (ಚರ್ಚೆ)೦೭:೫೫, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Prajna poojari (ಚರ್ಚೆ) ೧೦:೦೧, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Sahana Poojary (ಚರ್ಚೆ) ೧೦:೪೨, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- BENET G AMANNA (ಚರ್ಚೆ) ೧೦:೪೬, ೧ ಜನವರಿ ೨೦೨೩ (IST),ವಾಮಂಜೂರಿನಿಂದ ಉಡುಪಿ ಪ್ರಯಾಣ ಬತ್ತೆ ಬೇಕು
- ಮೈತ್ರಿ ಭಟ್ (ಚರ್ಚೆ) ೧೦:೪೬, ೧ ಜನವರಿ ೨೦೨೩ (IST) - ಮೈತ್ರಿ ಭಟ್ - ವಿಟ್ಲ - ಪ್ರಯಾಣ ಭತ್ಯೆ ಬೇಕು. ವಸತಿ ಬೇಡ.
- Ananya Rao Katpadi (ಚರ್ಚೆ) ೧೧:೩೭, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Rakshitha b kulal (ಚರ್ಚೆ) ೧೨:೧೦, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- KR Sanjana Hebbar (ಚರ್ಚೆ) ೧೪:೨೬, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Soorya Hebbar (ಚರ್ಚೆ) ೧೭:೪೪, ೧ ಜನವರಿ ೨೦೨೩ (IST), ಬೆಂಗಳೂರು, ವಸತಿ, ಪ್ರಯಾಣವೆಚ್ಚ ಬೇಕು.
- ಶ್ರೀನಿಧಿ ಹಂದೆ (ಚರ್ಚೆ) ೧೭:೪೪, ೧ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- ಕಿರಣಕುಮಾರ ಬಡಿಗೇರ, ೨ ಜನವರಿ ೨೦೨೩, ಧಾರವಾಡ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Vinaya M A (ಚರ್ಚೆ) ೦೪:೪೮, ೨ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Praajna G (ಚರ್ಚೆ) ೦೫:೧೯, ೨ ಜನವರಿ ೨೦೨೩ (IST), ಉಡುಪಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Veena Sundar N. (ಚರ್ಚೆ) ೧೮:೨೮, ೦೨ ಜನವರಿ ೨೦೨೩ (IST), ಉಡುಪಿ- ವಸತಿ ಮತ್ತು ಪ್ರಯಾಣ ವೆಚ್ಚ ಬೇಡ.
- Chetan (ಚರ್ಚೆ) ೧೮:೨೦, ೪ ಜನವರಿ ೨೦೨೩ (IST), ಶಿವಮೊಗ್ಗ , ವಸತಿ ಮತ್ತು ಪ್ರಯಾಣ ವೆಚ್ಚ ಬೇಡ.ಬರಲಾಗುತ್ತಿಲ್ಲ
- Prashantha R Navali (ಚರ್ಚೆ) ೧೧:೪೨, ೫ ಜನವರಿ ೨೦೨೩ (IST) - ಪ್ರಶಾಂತ ಆರ್ ನವಲಿ - ಬೆಂಗಳೂರು/ಬೆಳಗಾವಿ - ಪ್ರಯಾಣ ಮತ್ತು ವಸತಿ ಭತ್ಯೆ ಬೇಕು.
- ವಿಶ್ವನಾಥ/Vishwanatha (ಚರ್ಚೆ) ೧೭:೦೮, ೫ ಜನವರಿ ೨೦೨೩ (IST) - - ವಿಶ್ವನಾಥ ಎಮ್. ಎಸ್. - ಬೆಂಗಳೂರು - ಪ್ರಯಾಣ ಮತ್ತು ವಸತಿ ಭತ್ಯೆ ಬೇಕು.
- ಚಂದನಾ ಕೆ. ಎಸ್. (ಚರ್ಚೆ) ೧೫:೩೧, ೬ ಜನವರಿ ೨೦೨೩ (IST) ಚಂದನಾ ಕೆ. ಎಸ್. - ಕೊಣಾಜೆ ಮಂಗಳೂರು - ಪ್ರಯಾಣ ವೆಚ್ಚ ಬೇಡ.
- Kishorekumarrai (ಚರ್ಚೆ) ೧೭:೪೩, ೬ ಜನವರಿ ೨೦೨೩ (IST), ಪೆರ್ಲದಿಂದ ಪ್ರಯಾಣ ವೆಚ್ಚ ಬೇಕು.
- ವೈದೇಹೀ ಪಿ ಎಸ್ (ಚರ್ಚೆ) ೧೫:೦೯, ೭ ಜನವರಿ ೨೦೨೩ (IST), ಉಪ್ಪಿನಂಗಡಿ, ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೭:೫೧, ೭ ಜನವರಿ ೨೦೨೩ (IST). ಸಾಗರದಿಂದ ಬರುತ್ತೇನೆ. ಪ್ರಯಾಣ ಮತ್ತು ವಸತಿ ಭತ್ಯೆ ಬೇಕು.
- ಧನಲಕ್ಷ್ಮಿ ಕೆ. ಟಿ. --Dhanalakshmi .K. T (ಚರ್ಚೆ) ೧೨:೪೯, ೯ ಜನವರಿ ೨೦೨೩ (IST), ಸಕಲೇಶಪುರ, ಪ್ರಯಾಣ ಮತ್ತು ವಸತಿ ವೆಚ್ಚ ಬೇಕು.
- ಪ್ರಶಸ್ತಿ (ಚರ್ಚೆ) ೧೩:೩೦, ೯ ಜನವರಿ ೨೦೨೩ (IST) , ಶಿವಮೊಗ್ಗ, ಪ್ರಯಾಣ ಮತ್ತು ವಸತಿ ವೆಚ್ಛ ಬೇಕು.
- VASANTH S.N. (ಚರ್ಚೆ) ೧೩:೫೪, ೯ ಜನವರಿ ೨೦೨೩ (IST) ವಸತಿ ಮತ್ತು ಪ್ರಯಾಣ ವೆಚ್ಚ ಬೇಕಿಲ್ಲ.
- Avinash Kateel (ಚರ್ಚೆ) ೧೭:೪೧, ೯ ಜನವರಿ ೨೦೨೩ (IST) ಪ್ರಯಾಣ ವೆಚ್ಚ ಬೇಕು.
- Yashu poojarigadde (ಚರ್ಚೆ) ೧೭:೪೯, ೯ ಜನವರಿ ೨೦೨೩ (IST) ಪ್ರಯಾಣ ವೆಚ್ಚ ಬೇಕು
- Yakshitha (ಚರ್ಚೆ) ೧೭:೫೦, ೯ ಜನವರಿ ೨೦೨೩ (IST)
- Neha kotary (ಚರ್ಚೆ) ೧೭:೫೧, ೯ ಜನವರಿ ೨೦೨೩ (IST) ಪ್ರಯಾಣ ವೆಚ್ಚ ಬೇಕು
- Priydarshini.R.mujagond (ಚರ್ಚೆ) ೧೭:೫೪, ೯ ಜನವರಿ ೨೦೨೩ (IST) ಪ್ರಯಾಣ ವೆಚ್ಚ ಬೇಕು
- Bharathesha Alasandemajalu (ಚರ್ಚೆ) ೨೦:೨೬, ೯ ಜನವರಿ ೨೦೨೩ (IST), ಪ್ರಯಾಣ ವೆಚ್ಚ ಬೇಕು
- revathikainthaje ವಿಟ್ಲ. ಪ್ರಯಾಣ ವೆಚ್ಚ ಬೇಕಿಲ್ಲ.
- Swathivishwakarma (ಚರ್ಚೆ) ೦೯:೦೬, ೧೦ ಜನವರಿ ೨೦೨೩ (IST)
- ನಿತಿನ್ ಹೆಗ್ಡೆ (ಚರ್ಚೆ) ೦೯:೨೨, ೧೦ ಜನವರಿ ೨೦೨೩ (IST) ತೀರ್ಥಹಳ್ಳಿ,ಪ್ರಯಾಣ ವೆಚ್ಚ ಬೇಕು. ಭಾಗವಹಿಸುವಿಕೆ Tentative (ಖಚಿತವಿಲ್ಲದ್ದು)
- Arpitha05 (ಚರ್ಚೆ) ೦೯:೨೯, ೧೨ ಜನವರಿ ೨೦೨೩ (IST) ಉಡುಪಿ, ಪ್ರಯಾಣ ಮತ್ತು ವಸತಿ ವೆಚ್ಚ ಬೇಡ.
- Lokesh panchaksharia (ಚರ್ಚೆ) ೦೩:೨೫, ೧೫ ಜನವರಿ ೨೦೨೩ (IST) -Lokesh Panchaksharia- ಶಿವಮೊಗ್ಗ - ಪ್ರಯಾಣ ಮತ್ತು ವಸತಿ ಭತ್ಯೆ ಬೇಕು.
- Shreya Bhaskar|ಚರ್ಚೆ ೮:೧೫, ೨೦ ಜನವರಿ ೨೦೨೩(IST) -Shreya. Bhaskar- ಉಡುಪಿ - ಪ್ರಯಾಣ ಮತ್ತು ವಸತಿ ಬೇಡ.
ನೋಂದಾವಣಿ ದಿನಾಂಕ ಮುಗಿದಿದೆ. ಇನ್ನು ಯಾವ ನೋಂದಾವಣೆಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಧನ್ಯವಾದಗಳು. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೫೧, ೧೬ ಜನವರಿ ೨೦೨೩ (IST)
ಪ್ರೆಸೆಂಟೇಶನ್ ಮತ್ತು ಸೆಮಿನಾರುಗಳು
ಬದಲಾಯಿಸಿಈ ಕಾರ್ಯಕ್ರಮದಲ್ಲಿ ವಿಕಿ ಯೋಜನೆಗಳಿಗೆ ಮತ್ತು ಕೆಲಸಗಳಿಗೆ ಸಂಬಂಧಿಸಿದ ಅಥವಾ ಕನ್ನಡ ಕಂಪ್ಯೂಟಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಸೂಕ್ತ ವಿಷಯದ ಬಗ್ಗೆ ಪ್ರೆಸೆಂಟೇಶನ್, ಸೆಮಿನಾರ್ ಅಥವಾ ಟಾಕ್ ಗಳಿಗೆ ಅವಕಾಶವಿದ್ದು ಆಸಕ್ತಿ ಇರುವವರು ಈ ಗೂಗ್ಲ್ ಫಾರಂ ಭರ್ತಿ ಮಾಡುವ ಮೂಲಕ ಮುಂಚಿತವಾಗಿ (ಜನವರಿ ೧೫, ೨೦೨೩ರ ಮೊದಲು) ತಿಳಿಸಲು ಕೋರಿಕೆ.
ನೋಂದಾವಣಿ ದಿನಾಂಕ ಮುಗಿದಿದೆ. ಇನ್ನು ಯಾವ ಪ್ರವೇಶಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಧನ್ಯವಾದಗಳು--ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೫೨, ೧೬ ಜನವರಿ ೨೦೨೩ (IST)
ಸಲಹೆ ಸೂಚನೆಗಳು ಚರ್ಚೆಗಳು
ಬದಲಾಯಿಸಿಈ ಸಮ್ಮಿಲದ ಬಗ್ಗೆ ಯಾವುದೇ ಸಲಹೆಗಳಿದ್ದಲ್ಲಿ, ಪ್ರಶ್ನೆಗಳಿದ್ದಲ್ಲಿ ಈ ಪುಟದ ಚರ್ಚಾಪುಟದಲ್ಲಿ ಬರೆಯಬಹುದು. ಈ ಕಾರ್ಯಕ್ರಮದ ಬಗ್ಗೆ ಅಪ್ಡೇಟ್ ಗಳಿಗಾಗಿ ಈ ಪುಟವನ್ನು ವೀಕ್ಷಣಾಪಟ್ಟಿಗೆ ಸೇರಿಸಿಕೊಂಡು ಗಮನಿಸುತ್ತಿರಿ.
ಸಹಯೋಗ ಮತ್ತು ಬೆಂಬಲ
ಬದಲಾಯಿಸಿಪುಸ್ತಕಗಳ ಪ್ರಾಜೋಜನೆ
ಬದಲಾಯಿಸಿ- ನೀಲಿಮಾ ಪ್ರಕಾಶನ, ಬೆಂಗಳೂರು
- ವಿಠ್ಥಲರಾಯ ಶೆಣೈ, ಬೆಂಗಳೂರು
ವರದಿ
ಬದಲಾಯಿಸಿಮೊದಲಿಗೆ ಸ್ವಾಗತ ಗೀತೆ ಮತ್ತು ಸ್ವಾಗತಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿ ನಾಡೋಜ ಕೆ.ಪಿ. ರಾವ್, ಪ್ರಾಂಶುಪಾಲ ಶ್ರೀ ಭಾಸ್ಕರ ಶೆಟ್ಟಿಯವರು, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಶ್ರೀ ರಾಮಚಂದ್ರ ಅಡಿಗ ಮತ್ತು ಕನ್ನಡ ಕಂಪ್ಯೂಟಿಂಗ್ ತಜ್ಞ ಡಾ. ಯು. ಬಿ. ಪವನಜ ಇದ್ದರು. ಮುಖ್ಯ ಅತಿಥಿ ಕೆ.ಪಿ.ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಆಶಯದ ಬಗ್ಗೆ ಡಾ. ಯು.ಬಿ. ಪವನಜರು ತಿಳಿಸಿಕೊಟ್ಟರು. ಹಲವು ವರ್ಷಗಳ ನಂತರ ನಡೆಯುತ್ತಿರುವ ವಿಕಿಪೀಡಿಯ ಭೌತಿಕ ಸಮ್ಮಿಲನ ಏಕೆ ಮುಖ್ಯ ಮತ್ತು ವಿಕಿಪೀಡಿಯಾದಂತಹ ಯೋಜನಗೆಳಲ್ಲಿ ತೊಡಗಿಕೊಳ್ಳುವುದರಿಂದ ವೈಯಕ್ತಿಕವಾಗಿ, ಸಮಾಜಕ್ಕೆ ಮತ್ತು ಭಾಷೆಗೆ ಹೇಗೆ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ಮಾತನಾಡಿದರು.
ಅನಂತರ ಕೆ. ಪಿ. ರಾವ್ ಅವರು 'ಭಾಷೆ ಮತ್ತು ಲಿಪಿ' ಎಂಬ ವಿಷಯದ ಬಗ್ಗೆ ೧೫ ನಿಮಿಷ ಮಾತನಾಡಿದರು. ಒಂದು ಚಹಾಬ್ರೇಕಿನ ನಂತರ ಹಲವಾರು ಮಾಹಿತಿ ಸೆಶನ್ ಗಳು ನಡೆದವು.
ತನ್ವೀರ್ ಹಸನ್ ಅವರು ವಿಕಿಮೀಡಿಯಾ ಫೌಂಡೇಶನ್ ಬಗ್ಗೆ ಅದರ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದರು. ವಿಕಿಮೀಡಿಯಾ ಸಂಬಂಧಿತ ಕೆಲಸಗಳಿಗೆ, ಸಮುದಾಯಗಳಿಗೆ ವಿಕಿಮೀಡಿಯಾ ಫೌಂಡೇಶನ್ ಯಾವ ರೀತಿ ಸಹಾಯಧನ ಮುಂತಾದವುಗಳನ್ನು ಒದಗಿಸಿ ಬೆಂಬಲ ನೀಡುತ್ತದೆ ಎಂಬುದರ ಮಾಹಿತಿ ನೀಡಿದರು.
ಎರಡನೆಯದಾಗಿ ಡಾ. ವಿಶ್ವನಾಥ ಬದಿಕಾನ ಅವರು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಮಾಹಿತಿಗಳನ್ನು ಆನ್ಲೈನಲ್ಲಿ ಸಂಪಾದಿಸುವ ಬಗ್ಗೆ ಮಾತನಾಡಿದರು. ತಾವು ತೊಡಗಿಕೊಂಡ 'ಅರೆಭಾಷೆ ಪದಕೋಶ ಮತ್ತು ಪಾರಂಪರಿಕ ವಸ್ತು ವಿಶ್ವಕೋಶ' ಯೋಜನೆಯ ಬಗ್ಗೆ ಹೇಳುತ್ತಾ ತಮ್ಮ ಹಲವು ವರ್ಷಗಳ ವಿಕಿಪೀಡಿಯ ಸಂಪಾದನೆಯ ಅನುಭವವು ಈ ಕೆಲಸಕ್ಕೆ ಹೇಗೆ ಸಹಾಯವಾಯಿತು ಎಂಬುದರ ಬಗ್ಗೆ ತಿಳಿಸಿ ಎಲ್ಲರಿಗೂ ಪ್ರೇರಣೆ ಒದಗಿಸಿಕೊಟ್ಟರು.
ಟ್ರಾವೆಲ್ ಬ್ಲಾಗರ್ ಶ್ರೀನಿಧಿ ಹಂದೆಯವರು ಮಾತನಾಡಿ ಪ್ರವಾಸಗಳಲ್ಲಿ ನೈಜ ಮಾಹಿತಿಗಳನ್ನು ಪಡೆಯಲು ವಿಕಿಪೀಡಿಯಾ, ವಿಕಿವಾಯೇಜ್ನಂತಹ ತಾಣಗಳು ಎಷ್ಟು ಸಹಾಯಕಾರಿ ಎಂಬುದರ ಬಗ್ಗೆ ಮಾತನಾಡಿದರು. ಇತರ ಬಹುತೇಕ ಮಾಹಿತಿತಾಣಗಳು ಜಾಹೀರಾತು ಮತ್ತು ಜನರನ್ನು ಸೆಳೆಯುವ ದೃಷ್ಟಿಕೋನ ಹೊಂದಿರುವುದರಿಂದ ಅದರಲ್ಲಿ ಸಿಗುವ ಮಾಹಿತಿ ಮತ್ತು ಚಿತ್ರಗಳು ನೈಜ ಚಿತ್ರಣವನ್ನು ಒದಗಿಸದೇ ಇರಬಹುದು. ಆದರೆ ಸಮುದಾಯದಿಂದಲೇ ನಡೆಯುವ, ಜಾಹಿರಾತುಗಳಿಗೆ ಅವಕಾಶವಿಲ್ಲದಿರುವ ವಿಕಿಪೀಡಿಯಾದಂತಹ ಯೋಜನೆಗಳು ನೈಜಚಿತ್ರಣವನ್ನು ಪಡೆಯುವಲ್ಲಿ ಉಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡಾ.ಪವನಜ ಅವರು ಉಡುಪಿಯ ಜಿ.ಶಂಕರ್ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ 'ವಿಕಿ ಇ-ಲರ್ನಿಂಗ್ ಸರ್ಟಿಫೀಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆ' ಬಗ್ಗೆ ಮಾತನಾಡಿದರು. ವಿಕಿಪೀಡಿಯಾ ಸಂಪಾದನೆಯು ವಿದ್ಯಾರ್ಥಿಗಳಲ್ಲಿ ಅರಿವಿನ ಕೌಶಲ್ಯವನ್ನು ಹೆಚ್ಚಿಸಲು ಹೇಗೆ ಸಹಾಯವಾಗಬಹುದು ಎಂಬುದರ ಬಗ್ಗೆ ತಮ್ಮ ಯೋಜನೆಯು ಧನಾತ್ಮಕ ನಿಟ್ಟಿನಲ್ಲಿ ಸಾಗುತ್ತಿರುವುದನ್ನು ವಿವರಿಸಿದರು.
ಒಂದು ತಾಸಿನ ಊಟದ ವಿರಾಮದ ನಂತರ ಮಧ್ಯಾಹ್ನ ಪುನಃ ಸಭೆ ಸೇರಿತು.
ಧನಲಕ್ಷ್ಮಿಯವರು ತಾವು ವಿಕಿಪೀಡಿಯಾ ಯೋಜನೆಗೆ ಪರಿಚಿತವಾದದ್ದು ಹೇಗೆ, ಅದರಲ್ಲಿ ಆಸಕ್ತಿ ಹೇಗೆ ಬಂತು ಎಂದು ತಿಳಿಸಿ, ನಾವು ನಮಗೆ ಬೇಕಾದ ಮಾಹಿತಿಯು ದೊರಕದೇ ಹೋದಾಗ ಯಾರನ್ನೋ ದೂರುವ ಬದಲು ನಾವೇ ವಿಷಯಗಳನ್ನು ಕಲೆಹಾಕಿ ಲೇಖನಗಳನ್ನು ರಚಿಸಿ ಮಾಹಿತಿಗಳನ್ನು ಒದಗಿಸಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ವಿವರಿಸಿದರು. ಇದಕ್ಕೆ ವಿಕಿಪೀಡಿಯಾ ಒಂದು ಅತ್ಯುತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು. ವಿಕಿಪೀಡಿಯಾದಲ್ಲಿ ಹೆಣ್ಣುಮಕ್ಕಳ ಪಾಲ್ಗೊಳ್ಳುವಿಕೆಯು ಕಡಿಮೆ ಇರುವುದರಿಂದ ಅದರ ಬಗ್ಗೆ ಕೆಲಸಗಳನ್ನು ಮಾಡಲು 'ವಿಕಿವಿಮೆನ್ಸ್ ಮೆಂಗಳೂರು' ಎಂಬ ಬಳಕೆದಾರರ ಗುಂಪನ್ನು ರಚಿಸಿಕೊಂಡು ಆ ಮೂಲಕ ಮಾಡುತ್ತಿರುವ ಕೆಲಸಗಳ ಮಾಹಿತಿ ತಿಳಿಸಿದರು.
ವಿದ್ಯಾರ್ಥಿನಿಯರಾದ ಮಾನಸ ಆಚಾರ್ಯ ಮತ್ತು ಸಂಜನಾ ಹೆಬ್ಬಾರ್ ಅವರು ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಮತ್ತು ವಿಕಿಪೀಡಿಯಾ ಕಲಿಕೆಯ ಅನುಭವಗಳ ಬಗ್ಗೆ ಮಾತನಾಡಿದರು.
ಸೂರ್ಯ ಹೆಬ್ಬಾರ್ ಅವರು ಕ್ರೌಡ್ ಸೋರ್ಸಿಂಗ್ ಫಾರ್ ಶಬ್ದಕೋಶ ಎನ್ನುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಇದು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯ ಭಾಷೆಗಳ ಪಾರಿಭಾಷಿಕ ಪದಕೋಶವನ್ನು ರಚಿಸುವ ಯೋಜನೆಯಾಗಿದ್ದು ಇದು ಕ್ರೌಡ್ ಸೋರ್ಸಿಂಗ್ ಮೂಲಕವೂ ನಡೆಯುವುದರಿಂದ ವಿಕಿಪೀಡಿಯನ್ನರು ಇದರಲ್ಲಿ ಪಾಲ್ಗೊಳ್ಳಬಹುದಾದ ಬಗ್ಗೆ ತಿಳಿಸಿಕೊಟ್ಟರು.
ಅನಂತರ ಬೇರೆ ಬೇರೆ ಊರುಗಳಿಂದ ಬಂದಿದ್ದ ವಿಕಿಪೀಡಿಯನ್ನರು ತಮ್ಮ ಪರಿಚಯಗಳನ್ನು ಮಾಡಿಕೊಂಡು ತಾವು ಎಷ್ಟು ವರ್ಷಗಳಿಂದ ವಿಕಿಪೀಡಿಯಾ ಸಂಪಾದನೆಯ ಕೆಲಸಗಳನ್ನು ಮಾಡುತ್ತಿದ್ದೇವೆ, ಇದರಲ್ಲಿ ತಮ್ಮ ಅನುಭವಗಳು ಮುಂತಾದವುಗಳ ಬಗ್ಗೆ ಮಾತನಾಡಿದರು. ಪ್ರಶ್ನೋತ್ತರಗಳು, ಮಾಹಿತಿ ವಿನಿಮಯಗಳು, ಚರ್ಚೆಗಳು ನಡೆದವು.
ಕೊನೆಯದಾಗಿ ಸಭೆಯಲ್ಲಿದ್ದ ಎಲ್ಲ ವಿಕಿಮೀಡಿಯನ್ನರಿಗೆ ವಿಕಿಮೀಡಿಯಾ ಕ್ವಿಜ್ ಸ್ಪರ್ಧೆ ನಡೆಸಲಾಯಿತು. ಲಿಖಿತ ಪ್ರಶ್ನೆಪತ್ರಿಕೆ ಕೊಟ್ಟು ಅದರಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಲ್ವರಿಗೆ ವೇದಿಕೆಯಲ್ಲಿ ಕ್ವಿಜ್ ಸ್ಪರ್ಧೆ ನಡೆಸಲಾಯಿತು.
ಸಮಾರೋಪ ಸಮಾರಂಭ. ಕ್ವಿಜ್ ಬಹುಮಾನ ಮತ್ತು ನೆನಪಿನ ಕಾಣಿಕೆ ಮತ್ತು ಪುಸ್ತಕಗಳ ವಿತರಣೆಯೊಂದಿಗೆ ಸಂಜೆ ೫ ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಒಂದು ದಿನದ ಸಮ್ಮಿಲನ ಕಾರ್ಯಕ್ರಮದಲ್ಲಿ ೩ ಜನ ಅತಿಥಿಗಳು ಸೇರಿದಂತೆ ಒಟ್ಟು ೫೧ ಜನ ಪಾಲ್ಗೊಂಡಿದ್ದರು.