ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು
ಹೊಸ ಲೇಖನವನ್ನು ಪ್ರಾರಂಭಿಸುವುದು
- ವಿಧಾನ ೧: ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ಕೋಗಿಲೆ ಎಂಬ ಲೇಖನ ಸೇರಿಸಬೇಕಿದ್ದರೆ http://kn.wikipedia.org/wiki/ಕೋಗಿಲೆ ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ') ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.
- ವಿಧಾನ ೨: 'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, ಲೇಖನದ ಹೆಸರು ಪುಟವನ್ನು ಈ ವಿಕಿಯಲ್ಲಿ ಸೃಷ್ಟಿಸಿ! ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.
ಹುಡುಕುವಾಗ (ಸರ್ಚ್) ನೆನಪಿಟ್ಟುಕೊಳ್ಳಬೇಕಾದ ವಿಷಯಗಳು
ಹುಡುಕುವಾಗ (ಸರ್ಚ್) ತೀರ ಕನ್ನಡವಲ್ಲದ ಶಬ್ದಗಳ ಎಲ್ಲ ಬಳಕೆಗಳನ್ನೂ ಹುಡುಕಿ ನೋಡಿ. ಉದಾಹರಣೆಗೆ ನಾಗಲ್ಯಾಂಡ್ ಮತ್ತು ನಾಗಲ್ಯಂಡ್, ನಾಗಾಲ್ಯಾಂಡ್.