ಮೈನಾ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮೈನಾ (ಇಂಗ್ಲಿಷ್: Myna) ನಾಗಶೇಖರ್ ಇವರು ಬರೆದು ನಿರ್ದೇಶಿಸಿದ ೨೦೧೩ ರ ಕನ್ನಡ ಭಾಷೆಯ ಪ್ರಣಯ ನಾಟಕ ಚಿತ್ರ . ನಿಜ ಜೀವನದ ಘಟನೆಯನ್ನು ಆಧರಿಸಿ ,[] ಈ ಚಿತ್ರವನ್ನು ಎಸ್.ರಾಜ್‌ಕುಮಾರ್‌ಗಾಗಿ ವಜ್ರೇಶ್ವರಿ ಕಂಬೈನ್ಸ್ ತಂಡವು ನಿರ್ಮಿಸಿದೆ . ಚೇತನ್‌ ಕುಮಾರ್‌ ಮತ್ತು ನಿತ್ಯಾ ಮೆನನ್‌ ಇವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ . ಜಸ್ಸೀ ಗಿಫ್ಟ್ ಇವರು ಈ ಚಿತ್ರದ ಸಂಗೀತ ನಿರ್ದೇಶಕರು. ಈ ಚಲನಚಿತ್ರವು ಫಿಲ್ಮ್‌ಫೇರ್ ಪ್ರಶಸ್ತಿಯನ್ನು[] ಗೆದ್ದು ಕನ್ನಡದ ಅತ್ಯುತ್ತಮ ಚಲನಚಿತ್ರ ಎಂಬ ಬಿರುದನ್ನು ಪಡೆಯಿತು. ಈ ಚಿತ್ರವನ್ನು ಪ್ರಸ್ತುತ ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ.

ಮೈನಾ
ನಿರ್ದೇಶನನಾಗಶೇಖರ್
ನಿರ್ಮಾಪಕಎನ್.ಎಸ್.ರಾಜ್ಕುಮಾರ್
ಚಿತ್ರಕಥೆನಾಗಶೇಖರ್
ಕಥೆನಾಗಶೇಖರ್
ಪಾತ್ರವರ್ಗಚೇತನ್ ಕುಮಾರ್
ನಿತ್ಯಾ ಮೆನನ್
ಆರ್.ಶರತ್ ಕುಮಾರ್
ಸಂಗೀತಜಸ್ಸೀ ಗಿಫ್ಟ್‌
ಸಾಧು ಕೋಕಿಲ
(background score) []
ಛಾಯಾಗ್ರಹಣಸತ್ಯ ಹೆಗ್ಡೆ
ಸಂಕಲನಜಾನಿ ಹರ್ಷಾ
ಸ್ಟುಡಿಯೋವಜ್ರೇಶ್ವರಿ ಕಂಬೈನ್ಸ್
ಬಿಡುಗಡೆಯಾಗಿದ್ದು೨೨ ಫೆನ್ರವರಿ ೨೦೧೩
ದೇಶಭಾರತ
ಭಾಷೆಕನ್ನಡ

ಕಥಾವಸ್ತು

ಬದಲಾಯಿಸಿ

ಸತ್ಯ (ಚೇತನ್ ಕುಮಾರ್) ಇವರನ್ನು ಪೊಲೀಸರು ಬೆನ್ನಟ್ಟುವ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ಆತನ ಮೇಲೆ ೩೪ ನೇ ಸರಣಿ ಕೊಲೆ ಪ್ರಕರಣದ ಆರೋಪವಿದ್ದು , ಅಪರಾಧಿಯನ್ನು ಆರೋಪದ ಮೇಲೆ ಬೆಂಗಳೂರಿಗೆ ಸಾಗಿಸುವಾಗ , ತನ್ನನ್ನು ಬಂಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಅಧಿಕಾರಿ ಎಸಿಪಿ ಬಿ. ಬಿ. ಅಶೋಕ್ ಕುಮಾರ್ (ಆರ್. ಶರತ್‌ಕುಮಾರ್) ಅವರೊಂದಿಗೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಾನೆ. ಈ ರೀತಿ ಪ್ರಾರಂಭಗಳ್ಳುವ ಚಿತ್ರವು ಅಂತಿಮವಾಗಿ ಸತ್ಯ ಮತ್ತು ಮೈನಾಳ ಸಾವಿನೊಂದಿಗೆ ಚಿತ್ರವು ಮುಕ್ತಾಯವಾಗುತ್ತದೆ.

ಸಾರಾಂಶ

ಬದಲಾಯಿಸಿ

ಸತ್ಯ (ಚೇತನ್ ಕುಮಾರ್) ಇವರನ್ನು ಪೊಲೀಸರು ಬೆನ್ನಟ್ಟುವ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ಆತನ ಮೇಲೆ ೩೪ ನೇ ಸರಣಿ ಕೊಲೆ ಪ್ರಕರಣದ ಆರೋಪವಿದ್ದು , ಅಪರಾಧಿಯನ್ನು ಆರೋಪದ ಮೇಲೆ ಬೆಂಗಳೂರಿಗೆ ಸಾಗಿಸುವಾಗ , ತನ್ನನ್ನು ಬಂಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಅಧಿಕಾರಿ ಎಸಿಪಿ ಬಿ. ಬಿ. ಅಶೋಕ್ ಕುಮಾರ್ (ಆರ್. ಶರತ್‌ಕುಮಾರ್) ಅವರೊಂದಿಗೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಾನೆ. ಸತ್ಯ (ಚೇತನ್‌ ಕುಮಾರ್)‌ ಈ ಚಿತ್ರದಲ್ಲಿ ದೂಧ್ ಸಾಗರ್ ಜಲಪಾತ ದ ಬಳಿ ರಿಯಾಲಿಟಿ ಗೇಮ್ ಶೋನಲ್ಲಿ ಸ್ಪರ್ಧಿಯಾಗಿರುತ್ತಾನೆ . ಒಂದು ಕಾರ್ಯದಲ್ಲಿ , ಅವನಿಗೆ ಸಾಧ್ಯವಾದಷ್ಟು ಹಣವನ್ನು ಸಂಗ್ರಹಿಸಬೇಕೆಂಬ ಟಾಸ್ಕ್ ಕೊಡಲಾಗುತ್ತದೆ . ಅದರ ಪ್ರಕಾರ ಸ್ಪರ್ಧಿಗಳು ತಮ್ಮ ಅಸಲಿ ಗುರುತನ್ನು ಯಾರಿಗೂ ತಿಳಿಸದೆ ಈ ಕಾರ್ಯವನ್ನು ಮಾಡಬೇಕಾಗಿತ್ತು . ಹಾಗಾಗಿ ಸತ್ಯ ಭಿಕ್ಷುಕನ ವೇಷ ಧರಿಸಿಕೊಂಡು ಅಂಗವಿಕಲನಾಗಿ ನಟಿಸುತ್ತಾ ಭಿಕ್ಷೆ ಬೇಡುವ ಸಮಯದಲ್ಲಿ ರೈಲಿನಲ್ಲಿ ಅವನು ಮೈನಾ (ನಿತ್ಯಾ ಮೆನೆನ್) ಎಂಬ ಹುಡುಗಿಯನ್ನು ಗುರುತಿಸುತ್ತಾನೆ ಮತ್ತು ಅವನು ತಕ್ಷಣ ಅವಳಿಂದ ಮೋಹಗೊಳ್ಳುತ್ತಾನೆ. ಅವಳು ಅವನಿಗೆ ₹ ೧೦೦ ರ ನೋಟು ಕೊಟ್ಟು ಅದನ್ನು ದುರುಪಯೋಗ ಬಳಸದೆ ಉಪಯೋಗಿಸಬೇಕೆಂಬ ಮಾತನ್ನು ಹೇಳುತ್ತಾಳೆ. ಆಟದ ನಿಯಮದ ಪ್ರಕಾರ ಸತ್ಯ ಆ ಹಣವನ್ನು ಆಟದ ಮುಖ್ಯಸ್ಥನಿಗೆ ನೀಡಬೇಕಾಗಿತ್ತು ಆದರೆ ಭಾವನೆಗಳೊಳಗಾಗಿ ಅವನು ನಿರಾಕರಿಸಿ ಆಟದಿಂದ ಹೊರಬೀಳಲು ಇಷ್ಟಪಡುತ್ತಾನೆ . ನಂತರ ಅವನು ಅದೇ ರೈಲಿನಲ್ಲಿ ಭಿಕ್ಷೆ ಬೇಡುವ ಬದಲು ದಿನಪತ್ರಿಕೆಯನ್ನು ಹಂಚಲು ಶುರುಮಾಡುತ್ತಾನೆ . ಇದು ಮೈನಾಳನ್ನು ಅಪಾರವಾಗಿ ಸಂತೋಷಪಡಿಸುತ್ತದೆ . ಇದರಿಂದಾಗಿ ದಿನ ಕಳೆದಂತೆ ಅವರಿಬ್ಬರೂ ಇನ್ನಷ್ಟೂ ಹತ್ತಿರವಾದರು . ಅವಳು ಅಂಗವಿಕಲೆ ಎಂದು ಹೇಳುವ ಮುನ್ನವೇ ಅವಳ ಕೈಚೀಲದ ಕಳ್ಳತನವಾಗುತ್ತದೆ . ಈ ಘಟನೆಯಿಂದ ಮೈನಾ ಅಂಗವಿಕಲೆ ಎಂಬ ಸತ್ಯ ತಿಳಿಯುತ್ತದೆ ಹಾಗೂ ಮೈನಾಳಿಗೆ ಸತ್ಯ ಅಂಗವಿಕಲನಲ್ಲ ಎಂಬ ಮಾತು ತಿಳಿಯುತ್ತದೆ. ನಿಜ ತಿಳಿದ ಮೇಲೂ ಸತ್ಯ ಅವಳನ್ನು ಒಪ್ಪಿಕೊಳ್ಳುತ್ತಾನೆ ಎಂಬ ಭರವಸೆ ಅವಳಿಗಿರಲಿಲ್ಲ . ಆದರೆ ಸತ್ಯನು ಮೈನಾಳನ್ನು ಯಾವಾಗಲೂ ಇಷ್ಟಪಡುತ್ತೇನೆ ಎಂಬ ಮಾತನ್ನು ವ್ಯಕ್ತಪಡಿಸುತ್ತಾನೆ . ನಂತರ ಇಬ್ಬರೂ ಮದುವೆಯಾಗಿ ಬೆಂಗಳೂರಿಗೆ ತೆರಳುತ್ತಾರೆ . ಹೀಗೆ ಅವರಿಬ್ಬರ ಪ್ರೀತಿ ಶುರುವಾಯಿತು . ಈ ರೀತಿ ಪ್ರಾರಂಭಗಳ್ಳುವ ಚಿತ್ರವು ಅಂತಿಮವಾಗಿ ಸತ್ಯ ಮತ್ತು ಮೈನಾಳ ಸಾವಿನೊಂದಿಗೆ ಮುಕ್ತಾಯವಾಗುತ್ತದೆ.

ಪಾತ್ರಗಳು

ಬದಲಾಯಿಸಿ

ಪ್ರಶಸ್ತಿಗಳು

ಬದಲಾಯಿಸಿ
ಅಕೋಲೇಡ್‌ಗಳ ಪಟ್ಟಿ
ಪ್ರಶಸ್ತಿ / ಚಲನಚಿತ್ರೋತ್ಸವ ವರ್ಗ ವಿಜೇತರು ಫಲಿತಾಂಶ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ[] ಅತ್ಯುತ್ತಮ ಸಂವಾದ ನಾಗಶೇಖರ್ ಗೆಲುವು
ಫಿಲ್ಮ್ ಫೇರ್ ಅವಾರ್ಡ್ಸ್ ಸೌಥ್ [] ಅತ್ಯುತ್ತಮ ಚಲನಚಿತ್ರ - ಕನ್ನಡ[೧೦] ಎನ್.ಎಸ್.ರಾಜ್ಕುಮಾರ್ ಗೆಲುವು
ಅತ್ಯುತ್ತಮ ನಿರ್ದೇಶಕ – ಕನ್ನಡ ನಾಗಶೇಖರ್ Nominated
ಅತ್ಯುತ್ತಮ ಸಂಗೀತ ನಿರ್ದೇಶಕ – ಕನ್ನಡ ಜಸ್ಸೀ ಗಿಫ್ಟ್ Nominated
ಅತ್ಯುತ್ತಮ ಗೀತರಚನೆಕಾರ – ಕನ್ನಡ ಕವಿರಾಜ್ Nominated
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕ - ಕನ್ನಡ ಶ್ರೇಯಾ ಘೋಷಾಲ್ Nominated
ಸೌಥ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್[೧೧] ಅತ್ಯುತ್ತಮ ಚಲನಚಿತ್ರ (ಕನ್ನಡ) ಎನ್.ಎಸ್.ರಾಜ್‌ಕುಮಾರ್ ಗೆಲುವು
ಅತ್ಯುತ್ತಮ ಛಾಯಾಗ್ರಾಹಕ (ಕನ್ನಡ) ಸತ್ಯ ಹೆಗ್ಡೆ Nominated
ಅತ್ಯುತ್ತಮ ಸಂಗೀತ ನಿರ್ದೇಶಕ (ಕನ್ನಡ) ಜಸ್ಸೀ ಗಿಫ್ಟ್ Nominated
ಅತ್ಯುತ್ತಮ ಗೀತೆರಚನಾಕಾರ (ಕನ್ನಡ) ಕವಿರಾಜ್ Nominated
ಮಿರ್ಚಿ ಮ್ಯೂಸಿಕ್‌ ಅವಾರ್ಡ್ಸ್‌ ಸೌಥ್ ಆಲ್ಬಂ ಆಫ್‌ ದಿ ಇಯರ್ ಜಸ್ಸೀ ಗಿಫ್ಟ್‌ ಗೆಲುವು
ವರ್ಷದ ಸಂಗೀತ ಸಂಯೋಜಕ ಜಸ್ಸೀ ಗಿಫ್ಟ್‌ ಗೆಲುವು
ಫೀಮೇಲ್ ವೋಕಲಿಸ್ಟ್ ಆಫ್ ದಿ ಇಯರ್ ಶ್ರೇಯಾ ಘೋಷಾಲ್ ಗೆಲುವು
ಅಪ್ಕಮಿಂಗ್ ಫೀಮೇಲ್ ವೋಕಲಿಸ್ಟ್ ಆಫ್ ದಿ ಇಯರ್ ನಿತ್ಯಾ ಮೆನನ್ ಗೆಲುವು
ವರ್ಷದ ಗೀತರಚನಾಕಾರ್ತಿ ಕವಿರಾಜ್ ಗೆಲುವು
ತಮಿಳುನಾಡು ರಾಜ್ಯ ಪ್ರಶಸ್ತಿ ೨೦೧೦ ರ ಅತ್ಯುತ್ತಮ ಚಲನಚಿತ್ರ ಗೆಲುವು
ಈಟಿವಿ ಸಂಗೀತ ಸನ್ಮಾನ ಪ್ರಶಸ್ತಿ ಬೆಸ್ಟ್ ಅಪ್ಕಮಿಂಗ್ ಮೇಲ್ ಪ್ಲೇಬ್ಯಾಕ್ ಸಿಂಗರ್ ಸಂತೋಷ್ ಗೆಲುವು
ಬೆಸ್ಟ್ ಅಪ್ಕಮಿಂಗ್ ಫೀಮೇಲ್ ಪ್ಲೇಬ್ಯಾಕ್ ಸಿಂಗರ್ ನಿತ್ಯಾ ಮೆನನ್ ಗೆಲುವು
ಅತ್ಯುತ್ತಮ ಸಂಗೀತ ಸಂಯೋಜಕ ಜಸ್ಸೀ ಗಿಫ್ಟ್ ಗೆಲುವು

ಪ್ರೊಡಕ್ಷನ್

ಬದಲಾಯಿಸಿ

ಮೈನಾ ನಿಜ ಜೀವನದ ಘಟನೆಯನ್ನು ಆಧರಿಸಿದೆ. ೧೦೦ ಕ್ಕೂ ಹೆಚ್ಚು ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಾಜಿ ಕಾಪ್ ಬಿ.ಬಿ ಅಶೋಕ್ ಕುಮಾರ್ ಅವರು ನಿರ್ದೇಶಕರಿಗೆ ಕೊಲೆ ರಹಸ್ಯವನ್ನು ವಿವರಿಸಿದ್ದು ಅದು ಕಥೆಯ ವಿಷಯವಾಯಿತು. ಕ್ಯಾಮರಾಮ್ಯಾನ್ ಕಾಶಿ , ಸಂಪಾದಕ ಜಾನಿ ಹರ್ಷ, ಮತ್ತು ಸಂಜು ವೆಡ್ಸ್ ಗೀತಾ ಚಿತ್ರದ ಸಂಗೀತ ನಿರ್ದೇಶಕರಾದ ಜಸ್ಸೀ ಗಿಫ್ಟ್ ಅವರನ್ನು ನಿರ್ದೇಶಕ ನಾಗಶೇಖರ್ ತಮ್ಮ ತಂಡದಲ್ಲಿ ಉಳಿಸಿಕೊಂಡಿದ್ದರು . ಈ ಚಿತ್ರದ ಚಿತ್ರೀಕರಣವು ಕರ್ನಾಟಕಕೊಂಕಣ ಪ್ರದೇಶದಾದ್ಯಂತ ಕರ್ನಾಟಕ ಮತ್ತು ಗೋವಾದ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತಗಳಂತಹ ಸ್ಥಳಗಳನ್ನು ಒಳಗೊಂಡಂತೆ ಮಾಡಲಾಯಿತು. ಸ್ಥಳಗಳು ಉತ್ತರ ಕನ್ನಡಕರಾವಳಿಯನ್ನೂ ಸಹ ಒಳಗೊಂಡಿವೆ.[೧೨]

ಧ್ವನಿಸುರುಳಿ

ಬದಲಾಯಿಸಿ

ಜಸ್ಸೀ ಗಿಫ್ಟ್ ಎಲ್ಲಾ ಹಾಡುಗಳನ್ನು ಸಂಯೋಜಿಸಿದ್ದಾರೆ .

ಸಂ.ಹಾಡುಸಾಹಿತ್ಯಗಾಯಕಸಮಯ
1."ಬಾ ಇಲ್ಲಿ ಬೀಸು"ಕವಿರಾಜ್ಸೋನು ನಿಗಮ್, ಸಂತೋಷ್ 
2."ಮೊದಲ ಮಳೆಯಂತೆ(Male)"ಕವಿರಾಜ್ಸೋನು ನಿಗಮ್ 
3."ಮೊದಲ ಮಳೆಯಂತೆ"ಕವಿರಾಜ್ನಿತ್ಯಾ ಮೆನನ್ 
4."ಮೊದಲ ಮಳೆಯಂತೆ(Duet)"ಕವಿರಾಜ್ಸೋನು ನಿಗಮ್, ಶ್ರೇಯಾ ಘೋಷಾಲ್ 
5."ಮೈನಾ ಮೈನಾ"ಕವಿರಾಜ್ಸೋನು ನಿಗಮ್ 
6."ಓ ಪ್ರೇಮದ ಪೂಜಾರಿ"ಗೀತಪ್ರಿಯನಿತ್ಯಾ ಮೆನನ್, ಶ್ರೇಯಾ ಘೋಷಾಲ್ 
7."ಕಾಣದ ಕಡಲಿಗೆ"ಜಿ.ಎಸ್.ಶಿವರುದ್ರಪ್ಪಸಿ.ಅಸ್ವಥ್ 

ಉಲ್ಲೇಖಗಳು

ಬದಲಾಯಿಸಿ
  1. User, Super. "Mynaa Movie Review - chitraloka.com - Kannada Movie News, Reviews - Image". www.chitraloka.com. Archived from the original on 2020-09-29. Retrieved 2019-12-28. {{cite web}}: |last= has generic name (help)
  2. https://www.filmibeat.com/kannada/news/2013/interview-mynaa-real-life-nagashekar-103789.html
  3. "Nominations for the Best Director (Kannada)". filmfare.com (in ಇಂಗ್ಲಿಷ್). Retrieved 31 December 2019.
  4. "Mynaa Movie Review {4/5}: Critic Review of Mynaa by Times of India". Retrieved 31 December 2019.
  5. "Chetan and Nithya Menen film Mynaa goes to Mumbai - Times of India". The Times of India (in ಇಂಗ್ಲಿಷ್). Retrieved 31 December 2019.
  6. "Sumithra : Kannada Actress, Movies, Biography, Photos". chiloka.com. Retrieved 31 December 2019.
  7. "7 reality shows are equal to 7 super hit films: Akul - Times of India". The Times of India (in ಇಂಗ್ಲಿಷ್). Retrieved 31 December 2019.
  8. "Karantaka State Film Awards announced". 5 January 2015. Retrieved 5 January 2015.
  9. "61st Idea Filmfare Awards (South) Nomination list". 8 July 2014. Retrieved 5 January 2015.
  10. Nasreen, Raisa (14 July 2014). "Filmfare awards south 2014: Full list of winners". BookMyShow. Retrieved 31 December 2019.
  11. "SIIMA 2014 Kannada Nominations: Sudeep, Yash, Darshan, Upendra and Shivarajkumar Rated as Best Actors". 21 July 2014. Retrieved 5 January 2015.
  12. upadhye, amit s (22 July 2015). "Karnataka: Dudhsagar waterfalls shut for trekkers". Deccan Chronicle (in ಇಂಗ್ಲಿಷ್). Retrieved 31 December 2019.