ದೂಧ್ ಸಾಗರ ( ಹಾಲಿನ ಸಮುದ್ರ ) ಮಹಾದಾಯಿ ನದಿಯಿಂದ ಬೀಳುವ ನಾಲ್ಕು ಹಂತದ ಒಂದು ಜಲಪಾತ. ಇದು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿ ಬರುತ್ತದೆ. ಇದು ಪಣಜಿಯಿಂದ ರಸ್ತೆ ಮಾರ್ಗವಾಗಿ ೬೦ ಕಿ.ಮೀ. ದೂರದಲ್ಲಿದೆ ಮತ್ತು ಮಡಗಾವ್-ಬೆಳಗಾವಿ ರೈಲುಮಾರ್ಗದಲ್ಲಿ ಮಡಗಾವಿನಿಂದ ೪೬ ಕಿ.ಮೀ. ಪೂರ್ವದಲ್ಲಿ ಮತ್ತು ಬೆಳಗಾವಿಯಿಂದ ೮೦ ಕಿ.ಮೀ. ದಕ್ಷಿಣಕ್ಕಿದೆ. ೩೧೦ ಮೀ (೧೦೧೭ ಅಡಿ) ಎತ್ತರದಿಂದ ಧುಮುಕುವ ದೂಧ್ ಸಾಗರ ಜಲಪಾತ, ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.[]

ದೂದ್ ಸಾಗರ್ ಜಲಾಪಾತ
ದೂದ್ ಸಾಗರ್ ಜಲಾಪಾತ
ಸ್ಥಳಗೋವಾ,  ಭಾರತ
ನಿರ್ದೇಶಾಂಕಗಳ15°18′46″N 74°18′51″E / 15.31277°N 74.31416°E / 15.31277; 74.31416
ಒಟ್ಟು ಉದ್ದ೩೧೦ ಮೀ (೧೦೧೭ ಅಡಿ)
ಒಟ್ಟು ಪ್ರಪಾತಗಳು
ಸೇರುವ ನದಿಮಂಡೋವಿ

ಈ ಜಲಪಾತವು ಪಶ್ವಿಮ ಘಟ್ಟಭಗವಾನ ಮಹಾವೀರ ಉದ್ಯಾನ ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನದ ಹತ್ತಿರವಿದೆ. ಈ ಜಲಪಾತವು ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿಯನ್ನು ರೂಪಿಸುತ್ತವೆ. ಈ ಪ್ರದೇಶವು ದಟ್ಟ ಕಾಡಿನಿಂದ ಸುತ್ತುವರಿದಿದೆ.

ಉಲ್ಲೇಖಗಳು

ಬದಲಾಯಿಸಿ
  1. "World's highest waterfalls". World Waterfall Database. Archived from the original on 2011-06-11. Retrieved 2006-11-11.