ಪರಮಾಣು ಶಸ್ತ್ರಾಸ್ತ್ರ

(ಬೈಜಿಕ ಬಾಂಬ್ ಇಂದ ಪುನರ್ನಿರ್ದೇಶಿತ)

ಬೈಜಿಕ ಶಸ್ತ್ರಾಸ್ತ್ರ ಎಂದರೆ ತನ್ನ ವಿನಾಶಕಾರಿ ಶಕ್ತಿಯನ್ನು ಬೈಜಿಕ ಕ್ರಿಯೆಗಳಿಂದ (ಪರಮಾಣು ವಿದಳನ ಕ್ರಿಯೆಯಿಂದ (ವಿದಳನ ಬಾಂಬ್) ಅಥವಾ ವಿದಳನ ಮತ್ತು ಸಮ್ಮಿಳನ ಕ್ರಿಯೆಗಳ ಸಂಯೋಜನೆಯಿಂದ (ಉಷ್ಣಬೈಜಿಕ ಬಾಂಬ್)) ಪಡೆಯುವ ಒಂದು ಸ್ಫೋಟಕ ಸಾಧನ. ಪರಿಣಾಮವಾಗಿ ಬೈಜಿಕ ಸ್ಫೋಟವಾಗುತ್ತದೆ.

ನಾಗಸಾಕಿ ಮೇಲೆ ಅಮೆರಿಕ ಸುರಿಸಿದ ಅಣುಬಾಂಬಿನಿಂದಾದ ಅಣಬೆಯಾಕಾರದ ಮೋಡ

ಬೈಜಿಕ ಬಾಂಬ್‍ನಲ್ಲಿ ಎರಡು ಬಗೆಯ ಬಾಂಬುಗಳಿವೆ. ಒಂದು ಪರಮಾಣು ಬಾಂಬು ಹಾಗೂ ಇನ್ನೊಂದು ಜಲಜನಕ ಬಾಂಬು. ಈ ಬಾಂಬುಗಳು ವಿನಾಶಕಾರಿಯಾದ ಅಗಾಧ ಪ್ರಮಾಣದ ಒತ್ತಡ, ಆಘಾತ, ಉಷ್ಣತೆ ಮತ್ತು ವಿಕಿರಣವನ್ನು ಉಂಟುಮಾಡುತ್ತವೆ. ಇವುಗಳು ಸಾಂಪ್ರದಾಯಿಕವಾದ ಸಿಡಿತಲೆ (ಬಾಂಬು) ಗಳಿಗಿಂತ ಸಾವಿರಾರು ಪಟ್ಟು ಅಧಿಕ ಹಾನಿಯನ್ನು ಎಸಗುತ್ತವೆ. ಎರಡನೆ ವಿಶ್ವಯುದ್ಧದಲ್ಲಿ ಪ್ರಥಮವಾಗಿ ಪರಮಾಣು ಬಾಂಬನ್ನು ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಅಮೆರಿಕ ದೇಶ ಪ್ರಯೋಗಿಸಿತು.

ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದ

ಬದಲಾಯಿಸಿ
  • ಅಣ್ವಸ್ತ್ರದಿಂದ ಭವಿಷ್ಯದಲ್ಲಿ ಮಾನವ ಕುಲಕ್ಕೆ ಆಗಬಹುದಾದ ಅಪಾಯ ಕುರಿತು ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕಾಗಿ ವಿಶ್ವಸಂಸ್ಥೆ ೧೯೬೩ ರಿಂದಲೂ ಪ್ರಯತ್ನಿಸುತ್ತಿದೆ. ಅದರ ಫಲವಾಗಿ ಬಹುಮಟ್ಟಿನ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಬಹಳಷ್ಟು ರಾಷ್ಟ್ರಗಳು ಬರಲು ಒಪ್ಪಿವೆ.

೧೨೨ ರಾಷ್ಟ್ರಗಳ ಸಮ್ಮತಿ

ಬದಲಾಯಿಸಿ

ಭವಿಷ್ಯದ ಭರವಸೆಗಳಿಗೆ ಸ್ಪಂದನೆ

ಬದಲಾಯಿಸಿ
  • ವಿಶ್ವಸಂಸ್ಥೆಯಲ್ಲಿ ೮--೭-೨೦೧೭ ರ ಸಭೆಯಲ್ಲಿ, ‘ಈ ಒಪ್ಪಂದದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಜನಾಂಗದ ಭರವಸೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂಬ ಅಂಶ ನಮ್ಮನ್ನು ಭಾವುಕಗೊಳಿಸಿದೆ’ ಎಂದು ಕೋಸ್ಟಾ ರಿಕಾ ರಾಯಭಾರಿ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಲ್ಯಾನೆ ವ್ಹೈಟ್ ಗೊಮೇಜ್ ಸಂಭ್ರಮ ವ್ಯಕ್ತಪಡಿಸಿದರು. ಒಪ್ಪಂದಕ್ಕೆ ತೋರಿದ ಉತ್ಸಾಹವು ಅಣ್ವಸ್ತ್ರ ಆತಂಕದ ಕುರಿತ ಕಳಕಳಿಯನ್ನು ತೋರುತ್ತದೆ. ಅಣ್ವಸ್ತ್ರರಹಿತ ಜಗತ್ತಿನ ಸಮಾನ ನಿರೀಕ್ಷೆಗಳನ್ನು ಪೂರೈಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಹೇಳಿದರು.[]

ಬೈಜಿಕ ಶಸ್ತ್ರಾಸ್ತ್ರಗಳ ಅಪಾಯಗಳು

ಬದಲಾಯಿಸಿ

ಪರಮಾಣು ಬಾಂಬ್ ಸ್ಫೋಟನ ಕೇಂದ್ರದ ಬಳಿ ಇರುವವರು ವಿಕಿರಣದ ನೇರ ಹೊಡೆತಕ್ಕೆ ಈಡಾಗುತ್ತಾರೆ. ಇಂಥವರು ರಕ್ತಕ್ಯಾನ್ಸರಿನಿಂದ (ಲ್ಯೂಕೀಮಿಯ) ನರಳುವುದು ವಿರಳವಲ್ಲ.

ಪರಮಾಣು ಸ್ಫೋಟದಿಂದ ಹೊಮ್ಮುವ ವಿಕಿರಣ ಮನುಷ್ಯನಲ್ಲಿ ಉಂಟುಮಾಡುವ ರೋಗಲಕ್ಷಣಗಳನ್ನು ಮೂರು ಪ್ರಧಾನ ವರ್ಗಗಳಲ್ಲಿ ಅಳವಡಿಸಲಾಗಿದೆ:

  1. ತೀವ್ರವಿಕಿರಣ ಗಾಸಿ,
  2. ತೀವ್ರ ಸ್ಥಳಿಕ ಗಾಸಿ,
  3. ವಿಳಂಬಕಾಲಿಕ ದುಷ್ಪರಿಣಾಮಗಳು.

೧. ತೀವ್ರವಿಕಿರಣ ಗಾಸಿಯ ಕಾರಣವಾಗಿ ರಕ್ತ, ಜಠರ, ಕರುಳು, ನರಮಂಡಲ ಹಾಗೂ ಹೃದಯ ಸಂಬಂಧೀ ರೋಗಗಳು ಕಂಡುಬರುತ್ತವೆ.

ರಕ್ತಸಂಬಂಧೀ ರೋಗಲಕ್ಷಣಗಳು 1-3 ವಾರಗಳವರೆಗೆ ಸುಪ್ತವಾಗಿದ್ದು ಮತ್ತೆ ಉದ್ರೇಕಿಸುತ್ತವೆ. ಆಗ ಜ್ವರ ಮತ್ತು ಚರ್ಮದಲ್ಲಿ ಹಾಗೂ ದೇಹದ್ವಾರಗಳಿಂದ ರಕ್ತಸ್ರಾವವಾಗುತ್ತದೆ. ಆಯಾಸ, ತೂಕನಷ್ಟ ಮುಂತಾದವು ಇತರ ಲಕ್ಷಣಗಳು. ಪೂರ್ತಿ ಶಮನವಾಗಲು ಹಲವಾರು ತಿಂಗಳುಗಳೇ ಬೇಕಾಗಬಹುದು.

ಜಠರ ಮತ್ತು ಕರುಳುಸಂಬಂಧೀ ಲಕ್ಷಣಗಳು: ವಿಕಿರಣ ತಾಡನೆಯಾದ ಕೆಲವೇ ಗಂಟೆಗಳಲ್ಲಿ ಅಗ್ನಿಮಾಂದ್ಯ (ಹಸಿವಾಗದಿರುವಿಕೆ), ವಾಕರಿಕೆ, ವಾಂತಿ, ಭೇದಿ ಮುಂತಾದವು ಕಾಣಿಸಿಕೊಳ್ಳುತ್ತವೆ.[] ತತ್‌ಕ್ಷಣ ಚಿಕಿತ್ಸೆ ನೀಡಿದರೆ ಸುಮಾರು 48 ಗಂಟೆಗಳಲ್ಲಿ ಶಮನವಾಗಬಹುದು. ಇಲ್ಲವಾದರೆ ಮರಣ ಖಾತ್ರಿ.

ಇನ್ನು ನರಮಂಡಲ[] ಮತ್ತು ಹೃದಯಗಳಿಗೆ ಗಾಸಿ ತಟ್ಟಿದರೆ ವಮನ, ಅತಿಸಾರಗಳು ಉಲ್ಬಣಿಸಬಹುದು. ಜೊತೆಗೆ ರಕ್ತದೊತ್ತಡ ತೀವ್ರಗೊಂಡು ಆಘಾತ ಬಡಿಯಬಹುದು. ಕೇವಲ 24-48 ಗಂಟೆಗಳ ಒಳಗೆ ಈ ಎಲ್ಲ ದುಷ್ಪರಿಣಾಮಗಳೂ ಪ್ರಕಟವಾಗಿ ವ್ಯಕ್ತಿ ಮರಣಿಸುತ್ತಾನೆ.

೨. ಸ್ಥಳಿಕವಾಗಿ ಚರ್ಮ ಕೆಂಪಾಗಿ ಕೂದಲು ಉದುರಿ ಹೊರಚರ್ಮ ಗಾಸಿಗೊಳ್ಳಬಹುದು. ಅಧಿಕ  ವಿಕಿರಣಶಕ್ತಿಯ ಪರಿಣಾಮವಾಗಿ ಕೂದಲು ಶಾಶ್ವತವಾಗಿ ನಷ್ಟವಾಗಬಹುದು. ಚರ್ಮ ಪೂರ್ತಿ ಸುಟ್ಟಂತಾಗಿ ವ್ಯಕ್ತಿ ಅನೇಕ ಸೋಂಕು ರೋಗಗಳಿಗೆ ಬಲಿ ಆಗುವುದುಂಟು. ನಿರಂತರ ಅಸ್ವಾಸ್ಥ್ಯ ಈತನ ಶಾಶ್ವತ ಸಂಗಾತಿ.

೩. ವಿಕಿರಣಶಕ್ತಿಗೆ ಮೈಯೊಡ್ಡಿದ ಕೆಲವು ತಿಂಗಳು ಅಥವಾ ವರ್ಷಗಳ ಮೇಲೆ ಕೆಲವು ರೋಗಗಳು ಕಾಣಿಸಿಕೊಳ್ಳಬಹುದು: ಫಲವಂತಿಕೆ ನಷ್ಟ, ಸಂತಾನಶಕ್ತಿಯಲ್ಲಿ ಇಳಿಕೆ, ಕಣ್ಪೊರೆ, ಚರ್ಮಬಿರಿತ, ಕೀಲುನೋವು ಮುಂತಾದವು. ಕ್ಯಾನ್ಸರ್ ಸಂಬಂಧೀ ಕಾಯಿಲೆಗಳು ಸುಮಾರು 4-7 ವರ್ಷಗಳಲ್ಲಿ ತಲೆದೋರುತ್ತವೆ. ಥೈರಾಯಿಡ್, ಲಾಲಾರಸಗ್ರಂಥಿ, ಶ್ವಾಸಕೋಶ, ಮೂಳೆ, ಯಕೃತ್ತು, ಗುಲ್ಮ ಮತ್ತು ಸ್ತನ ಇವುಗಳ ಕ್ಯಾನ್ಸರ್ ರೋಗಗಳು ಬರಬಹುದು.

ಉಲ್ಲೇಖಗಳು

ಬದಲಾಯಿಸಿ
  1. "History of the TPNW". ICAN (in ಇಂಗ್ಲಿಷ್). Archived from the original on June 5, 2023. Retrieved 2023-06-05.
  2. ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಒಪ್ಪದ ಭಾರತ;ಪಿಟಿಐ; 9 Jul, 2017
  3. W., Levy, Barry S. Sidel, Victor (2008). War and public health. Oxford University Press. ISBN 978-0-19-531118-1. OCLC 508484113.{{cite book}}: CS1 maint: multiple names: authors list (link)
  4. Coggle, J.E., Lindop, Patricia J. "Medical Consequences of Radiation Following a Global Nuclear War." The Aftermath (1983): 60-71.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: