ಅಜೀರ್ಣ

(ಅಗ್ನಿಮಾಂದ್ಯ ಇಂದ ಪುನರ್ನಿರ್ದೇಶಿತ)

ಅಜೀರ್ಣ ದುರ್ಬಲಗೊಂಡ ಜೀರ್ಣಕ್ರಿಯೆಯ ಒಂದು ಸ್ಥಿತಿ. ಲಕ್ಷಣಗಳು ಮೇಲಿನ ಕಿಬ್ಬೊಟ್ಟೆಯ ಉಬ್ಬುವಿಕೆ, ಎದೆಯುರಿ, ವಾಕರಿಕೆ, ತೇಗುವಿಕೆ, ಅಥವಾ ಮೇಲು ಹೊಟ್ಟೆ ನೋವನ್ನು ಒಳಗೊಳ್ಳಬಹುದು.[೧] ಜನರು ತಿನ್ನುವಾಗ ನಿರೀಕ್ಷೆಗಿಂತ ಮೊದಲೇ ಹೊಟ್ಟೆ ತುಂಬಿದ ಅನಿಸಿಕೆಯನ್ನು ಸಹ ಅನುಭವಿಸಬಹುದು.[೨] ಅಜೀರ್ಣ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು ಆಗಾಗ್ಗೆ ಜಠರ ಹಿಮ್ಮುಖ ಹರಿವು ರೋಗ ಅಥವಾ ಜಠರದುರಿತದಿಂದ ಉಂಟಾಗುತ್ತದೆ. ಅಲ್ಪ ಸಂಖ್ಯೆಯ ಸ್ವಲ ಭಾಗದಲ್ಲಿ ಅದು ಜಠರ ಹುಣ್ಣು ರೋಗ (ಹೊಟ್ಟೆ ಅಥವಾ ಡೂವಡೀನಮ್‍ನ ಹುಣ್ಣು) ಮತ್ತು ಒಮ್ಮೊಮ್ಮೆ ಕ್ಯಾನ್ಸರ್‍ನ ಮೊದಲ ಲಕ್ಷಣವಾಗಿರಬಹುದು. ಹಾಗಾಗಿ, ೫೫ರ ಮೇಲಿನ ಜನರಲ್ಲಿ ವಿವರಿಸಲಾಗದ ಹೊಸ ಆರಂಭದ ಅಜೀರ್ಣ ಅಥವಾ ಇತರ ಅಪಾಯಕಾರಿ ಲಕ್ಷಣಗಳ ಇರುವಿಕೆಯಲ್ಲಿ ಮತ್ತಷ್ಟು ತನಿಖೆಗಳು ಅಗತ್ಯವಾಗಬಹುದು. ಕ್ರಿಯಾತ್ಮಕ ಅಜೀರ್ಣವು ಲಕ್ಷಣಗಳನ್ನು ವಿವರಿಸಬಲ್ಲ ಸಾಧ್ಯತೆಯಿರುವ ಜೈವಿಕ ರೋಗದ ಪುರಾವೆ ಇಲ್ಲದ ಅಜೀರ್ಣ. ಕ್ರಿಯಾತ್ಮಕ ಅಜೀರ್ಣವು ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯ ಜನಸಂಖ್ಯೆಯ ೧೫% ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ಆಹಾರದಲ್ಲಿನ ಬದಲಾವಣೆಗಳಿಂದಾಗಿ, ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗುತ್ತದೆ. ಈ ಕಾರಣದಿಂದಾಗಿ ದೇಹವು ಸಣ್ಣಪುಟ್ಟ ಕಾಯಿಲೆಗಳಿಗೆ ಗುರಿಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಗಳು ಉಂಟಾಗಲು ಆರಂಭವಾಗುತ್ತದೆ. ಇದರಿಂದಾಗಿ ಇದ್ದಕ್ಕಿದ್ದಂತೆ ಹೊಟ್ಟೆಯ ಅನೇಕ ರೋಗಗಳು ಹೊರಹೊಮ್ಮುತ್ತವೆ. ಇದು ಹಠಾತ್ ಹೊಟ್ಟೆ ನೋವಿನ ಸಮಸ್ಯೆಯನ್ನು ಸಹ ತರಬಹುದು. [೩]

ಅಜೀರ್ಣ ನಿವಾರಣೆ ಹೇಗೆ ? ಬದಲಾಯಿಸಿ

  • ಪ್ರತಿದಿನ ಆಹಾರ ಸೇವಿಸಿದ ನಂತರ ಒಂದೊಂದು ಬಾಳೆಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ[೪]
  • ಅನಾನಸ್ ಹಣ್ಣು ಸೇವನೆ ಅಜೀರ್ಣ ನಿವಾರಣೆಗೆ ಒಂದು ಸುಲಭ ಪರಿಹಾರ.[೫]
  • ಊಟವಾದ ನಂತರ ಪರಂಗಿ ಹಣ್ಣಿನ ಒಂದೆರಡು ತುಂಡುಗಳನ್ನು ಸೇವಿಸಿ ಅಜೀರ್ಣ ನಿವಾರಣೆ ಮಾಡಿಕೊಳ್ಳಬಹುದು.
  • ಆಹಾರ ಸೇವನೆಯ ನಂತರ ಸೋಂಪು ಕಾಳುಗಳನ್ನು ಬಾಯಲ್ಲಿ ಅಗಿಯುವುದರಿಂದಲೂ ಅಜೀರ್ಣ ಸಮಸ್ಯೆ ದೂರ ಮಾಡಬಹುದು.
  • ಜೇನುತುಪ್ಪ ಸಹ ಅಜೀರ್ಣ ಸಮಸ್ಯೆಗೆ ಒಂದು ಉತ್ತಮ ಮನೆಮದ್ದು, ಜೇನುತುಪ್ಪದ ಸೇವನೆಯಿಂದ ಅಜೀರ್ಣ ಸಮಸ್ಯೆಯಿಂದ ನಿವಾರಣೆಯಾಗುತ್ತದೆ.
  • ಪ್ರತಿದಿನ ಸ್ವಲ್ಪ ಪ್ರಮಾಣದ ಪುದೀನ ಎಲೆಗಳನ್ನು ಅಗಿದು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ.
  • ಅನ್ನದ ಗಂಜಿಗೆ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.
  • ಮಾವಿನ ಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ ಮತ್ತು ಜೇನುತುಪ್ಪ ಲೇಪಿಸಿ ಸೇವಿಸಿದರೆ ಅಜೀರ್ಣ ಸಮಸ್ಯೆ ಮಾಯವಾಗುತ್ತದೆ.


ಉಲ್ಲೇಖಗಳು ಬದಲಾಯಿಸಿ

  1. https://books.google.ca/books?id=UGpATfS5-T8C&pg=PA2
  2. Talley NJ, Vakil N (October 2005). "Guidelines for the management of dyspepsia". Am. J. Gastroenterol. 100 (10): 2324–37. doi:10.1111/j.1572-0241.2005.00225.x. PMID 16181387.
  3. "ಹೊಟ್ಟೆ ನೋವಿಗೆ ಪರಿಹಾರ". kannadanews.today.
  4. "ಅಜೀರ್ಣ ನಿವಾರಣೆಗೆ ಈ ಸುಲಭ ಟಿಪ್ಸ್ ಪಾಲಿಸಿ". kannadanews.today.
  5. "ಅಜೀರ್ಣ ಸಮಸ್ಯೆಗೆ ಪರಿಹಾರ". kannadanews.today.
"https://kn.wikipedia.org/w/index.php?title=ಅಜೀರ್ಣ&oldid=1161722" ಇಂದ ಪಡೆಯಲ್ಪಟ್ಟಿದೆ