ಪಾಸ್‌ಪೋರ್ಟ್‌‌‌‌

thumb|260px|ಲಾತ್ವಿಯಾದಲ್ಲಿ ಬಿಡುಗಡೆ ಮಾಡಲಾದ ವಿವಿಧ ಪಾಸ್‌ಪೋರ್ಟ್‌‌‌‌ಗಳು

ಸಧ್ಯ ಬಳಕೆಯಲ್ಲಿರುವ ಜಪಾನಿ ಇ-ಪಾಸ್‌ಪೋರ್ಟ್‌ನ ಮುಖ ಪುಟ
ಚಿತ್ರ:ColombianBiometricPassport1.jpg
ಕೊಲಂಬಿಯಾದ ಯಂತ್ರ ಓದಬಲ್ಲ ಪಾಸ್‌ಪೋರ್ಟ್‌‌‌‌

ಪಾಸ್‌ಪೋರ್ಟ್‌‌‌‌ ಎಂದರೆ ರಾಷ್ಟ್ರೀಯ ಸರ್ಕಾರವು ತನ್ನ ದೇಶದ ನಾಗರೀಕನಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಹೋಗುವಾಗ ಆತನ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡುವ ದಾಖಲೆಯಾಗಿದೆ. ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಹುಟ್ಟಿದ ಸ್ಥಳಗಳು ಈ ವ್ಯಕ್ತಿ ಗುರುತಿನ ಅಂಶಗಳಾಗಿವೆ. ಹೆಚ್ಚಾಗಿ, ರಾಷ್ಟ್ರೀಯತೆ ಮತ್ತು ನಾಗರಿಕತ್ವಗಳು ಸಮಾನವಾಗಿವೆ.

ಒಂದು ಪಾಸ್‌ಪೋರ್ಟ್‌‌‌‌ ಪಡೆದ ತಕ್ಷಣ ಆ ಪಾಸ್‌ಪೋರ್ಟ್‌‌‌‌ ಹೊಂದಿರುವವನಿಗೆ ಇನ್ನೊಂದು ದೇಶಕ್ಕೆ ಹೋಗಲು ಹಕ್ಕನ್ನು ನೀಡಿದಂತೆ ಅಲ್ಲ, ಅಥವಾ ವಿದೇಶದಲ್ಲಿರುವಾಗ ವಾಣಿಜ್ಯಿಕ ರಕ್ಷಣೆ ಅಥವಾ ಇನ್ಯಾವುದೇ ಸೌಲಭ್ಯಗಳಿಗೆ ಅವಕಾಶ ನೀಡಿದಂತೆ ಅಲ್ಲ. ಆದರೆ, ಇದು ಸಾಮಾನ್ಯವಾಗಿ ಪಾಸ್‌ಪೋರ್ಟ್‌‌‌‌‌ದಾರರಿಗೆ ಯಾವ ದೇಶ ಪಾಸ್‌ಪೋರ್ಟ್‌‌‌‌ ನೀಡಿದೆಯೋ ಆ ದೇಶಕ್ಕೆ ಮರಳಿ ಬರಲು ಅವಕಾಶ ನೀಡುತ್ತದೆ. ವಾಣಿಜ್ಯಿಕ ಸಂರಕ್ಷಣೆಯ ಹಕ್ಕುಗಳು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಂಬಂಧಿಸಿ ಬರುತ್ತವೆ, ಮತ್ತು ದೇಶಕ್ಕೆ ಮರಳುವ ಹಕ್ಕು ಪಾಸ್‌ಪೋರ್ಟ್‌‌‌ ನೀಡಿದ ದೇಶದ ಕಾನೂನುಗಳಿಗೆ ಸಂಬಂಧಿಸಿ ಇರುತ್ತದೆ. ಪಾಸ್‌ಪೋರ್ಟ್‌‌‌‌ ಹೊಂದಿರುವಿಕೆಯು ಪಾಸ್‌ಪೋರ್ಟ್‌‌‌‌ ನೀಡಿದ ದೇಶದಲ್ಲಿ ಪಾಸ್‌ಪೋರ್ಟ್‌‌‌‌‌ದಾರನ ಜೀವಿಸುವ ಸ್ಥಳ ಅಥವಾ ಜೀವಿಸುವ ಹಕ್ಕನ್ನು ಪ್ರತಿನಿಧಿಸುವುದಿಲ್ಲ.

ಇತಿಹಾಸ

ಬದಲಾಯಿಸಿ
 
ಮೊಟ್ಟಮೊದಲ ಜಪಾನಿ ಪಾಸ್‌ಪೋರ್ಟ್‌‌‌‌,(1866)
 
ಹಳೆ ಪೊಲಿಶ್‌ ಪಾಸ್‌ಪೋರ್ಟ್‌‌‌‌‌ನ ಒಳಗಿನ ಪುಟ - 1931

ಮೊತ್ತ ಮೊದಲ ಬಾರಿ ಪಾಸ್‌ಪೋರ್ಟ್‌‌‌‌ ರೀತಿ ಪ್ರಮುಖವಾಗಿ ಬಳಸಲಾದ ಸಂಗತಿಯ ಕುರಿತು ಹೀಬ್ರ್ಯೂ ಬೈಬಲ್‌ ನಲ್ಲಿ ಉಲ್ಲೇಖವಿದೆ. ಕ್ರಿಸ್ತಪೂರ್ವ ೪೫೦ ರಕಾಲದ ಪರ್ಶಿಯಾದ ಸಾಮ್ರಾಜ್ಯ ದಲ್ಲಿ ನಡೆದಿದೆ ಎನ್ನಲಾದ ಒಂದು ಘಟನೆ Nehemiah 2:7-9 ರಲ್ಲಿ ಉಲ್ಲೇಖಿತವಾಗಿದೆ. ಅರ್ಟಾಕ್ಸೆರ್ಕ್ಸೆಸ್‌ I ಎಂಬ ಪರ್ಶಿಯಾದ ರಾಜನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ ನೆಹೆಮಿಯಾ ಎಂಬಾತ, ಜುಡಿಯಾ ಗೆ ಪ್ರವಾಸ ಮಾಡಲು ಅನುಮತಿ ಬೇಡಿದ. ರಾಜ ಅದಕ್ಕೆ ಅನುಮತಿ ನೀಡಿ, ಆತನಿಗೆ ಒಂದು ಪತ್ರವನ್ನು ನೀಡಿದ. ಅದರಲ್ಲಿ "ನದಿಯಾಚೆಯ ಆಡಳಿತಾಧಿಕಾರಿಗಳಿಗೆ" ಆತನು ಅವರ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿರುವುದರಿಂದ ಆತನಿಗೆ ಸುರಕ್ಷಿತವಾಗಿ ಪ್ರವಾಸ ಮಾಡಲು ಅವಕಾಶ ನೀಡುವಂತೆ ಕೋರಿ ಆ ಪತ್ರ ನೀಡಿದ್ದ.

ಮಧ್ಯಕಾಲೀನ ಇಸ್ಲಾಮಿಕ್ ಖಲೀಫರ ಸಮಯದಲ್ಲಿ, ಒಂದು ಪ್ರಕಾರದ ಪಾಸ್‌ಪೋರ್ಟ್‌‌‌‌ ಅನ್ನು (bara'a ) ತೆರಿಗೆ ನೀಡಿದ ರಸೀತಿಯೆಂಬ ರೀತಿಯಲ್ಲಿ ಬಳಸಲಾಗುತ್ತಿತ್ತು. ಯಾವ ನಾಗರೀಕರು ತಮ್ಮ ಝಕಾಹ್ (ಮುಸ್ಲಿಮ್‌ರಿಗೆ) ಅಥವಾ ಲಿಝ್ಯಾ (ಡಿಮ್ಮಿಗಳಿಗೆ) ತೆರಿಗೆಗಳನ್ನು ನೀಡಿದರೋ ಅವರಿಗೆ ಮಾತ್ರ ಖಲೀಫರ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಿಗೆ ಪ್ರವಾಸ ಮಾಡಲು ಅವಕಾಶ ನೀಡಿದರು, ಮತ್ತು ಆ ಮೂಲಕ bara'a ರಸೀತಿಯು ಒಂದು ರೀತಿಯಲ್ಲಿ "ಪ್ರವಾಸಿಗರ ಮೂಲ ಪಾಸ್‌ಪೋರ್ಟ್‌‌‌‌" ಆಗಿತ್ತು.[]

"ಪಾಸ್‌ಪೋರ್ಟ್‌‌‌‌" ಎಂಬ ಶಬ್ದವು ಸೀಪೋರ್ಟ್ (ಬಂದರು) ಎಂಬ ಶಬ್ದದಿಂದ ಬಂದಿದೆ ಎಂದು ಹೇಳಲಾಗುವುದಿಲ್ಲ, ಆದರೆ ಇದನ್ನು ಮಧ್ಯಕಾಲೀನ ಸಮಯದ ದಾಖಲೆಯೊಂದರ ಮೂಲದಿಂದ ಪಡೆದುಕೊಳ್ಳಲಾಗಿದೆ ಎನ್ನಬಹುದು. ಈ ದಾಖಲೆಯು ಒಂದು ಪ್ರದೇಶದಿಂದ ದಾಟಿ ಹೋಗುವಾಗ ಒಂದು ನಗರದ ಗೋಡೆಯ ದ್ವಾರವನ್ನು ("porte") ದಾಟುವವರಿಗೆ ಹೊಂದಿರಬೇಕಾದ ದಾಖಲೆಯಾಗಿತ್ತು.[][] ಮಧ್ಯಕಾಲೀನ ಯೂರೋಪ್‌‍ನಲ್ಲಿ, ಪ್ರವಾಸಿಗರಿಗೆ ಸ್ಥಳೀಯ ಅಧಿಕಾರಿಗಳು ಅಂತಹ ದಾಖಲೆಗಳನ್ನು ನೀಡುತ್ತಿದ್ದರು ಮತ್ತು ಅವುಗಳಲ್ಲಿ ಆ ವ್ಯಕ್ತಿಗಳು ಹೋಗಲು ಅನುಮತಿಸಿರುವ ನಗರಗಳು ಮತ್ತು ಪಟ್ಟಣಗಳ ಹೆಸರನ್ನು ನಮೂದಿಸಿರಲಾಗಿರುತ್ತಿತ್ತು. ಒಟ್ಟಾರೆಯಾಗಿ, ಸಮುದ್ರದ ಬಂದರುಗಳಿಗೆ ಸಾಗಲು ಈ ದಾಖಲೆಗಳು ಅಗತ್ಯವಿರಲಿಲ್ಲ. ಏಕೆಂದರೆ ಅವುಗಳನ್ನು ಮುಕ್ತ ವ್ಯಾಪಾರೀ ಕೇಂದ್ರಗಳೆಂದು ಪರಿಗಣಿಸಲಾಗಿತ್ತು, ಆದರೆ ಬಂದರುಗಳಿಂದ ಒಳಪ್ರದೇಶಗಳಿಗೆ ಪ್ರಯಾಣ ಬೆಳೆಸಲು ದಾಖಲೆಗಳು ಅಗತ್ಯವಾಗಿತ್ತು.

ಮೊದಲ ನಿಜವಾದ ಪಾಸ್‌ಪೋರ್ಟ್‌‌‌ ಕಂಡುಹಿಡಿದ ಶ್ರೇಯಸ್ಸು ರಾಜ ಇಂಗ್ಲೆಂಡ್‌ನ ಹೆನ್ರಿ V ಗೆ ಸಲ್ಲುತ್ತದೆ. ಈ ಮೊದಲೇ ಹೇಳಲಾದ ಉದಾಹರಣೆಗಳಿದ್ದರೂ ಸಹ, ಈತ ತನ್ನ ಜನರಿಗೆ ಬೇರೆ ದೇಶಕ್ಕೆ ಹೋದಾಗ ತಾವು ಯಾರು ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಾಗುವಂತೆ ಇದನ್ನು ಮಾಡಿದ್ದ.[]

ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಯೂರೋಪ್‌‍‌ನಲ್ಲಿ ರೈಲ್ವೆಯ ವೇಗದ ವಿಸ್ತರಣೆಯು ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ಅಸ್ತಿತ್ವದಲ್ಲಿದ್ದ ಯೂರೋಪ್‌‍ ನ ಪಾಸ್‌ಪೋರ್ಟ್‌‌‌‌ ವ್ಯವಸ್ಥೆಯನ್ನು ಮುರಿದು ಹಾಕಿತು. ರೈಲುಗಳ ವೇಗ ಮತ್ತು ಅವುಗಳ ಮೂಲಕ ಗಡಿಯನ್ನು ದಾಟುತ್ತಿದ್ದ ಜನರ ಬೃಹತ್ ಸಂಖ್ಯೆಯು, ಪಾಸ್‌ಪೋರ್ಟ್‌‌‌‌ ಕಾನೂನು ಹೇರುವಿಕೆಯನ್ನು ಅತ್ಯಂತ ಕಷ್ಟಕರವಾಗಿಸಿತು. ಪಾಸ್‌ಪೋರ್ಟ್‌‌‌‌ ಅಗತ್ಯವನ್ನು ತೆಗೆದುಹಾಕುವುದು ಆಗ ಅಗತ್ಯವಾಗಿ ಕಂಡಿತು.[] ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು ವಿಶ್ವ ಯುದ್ಧ I ವರೆಗೂ, ಪ್ರವಾಸಿಗರಿಗೆ ಯೂರೋಪ್‌‍‌ನೊಳಗೆ ಪ್ರವಾಸ ಮಾಡಲು ಪಾಸ್‌ಪೋರ್ಟ್‌‌‌‌ಗಳು ಬೇಕಾಗಲಿಲ್ಲ ಮತ್ತು ನೇರವಾಗಿ ಅವರು ಗಡಿ ದಾಟಬಹುದಾಗಿತ್ತು. ಕಾಲಕ್ರಮೇಣ, ಪಾಸ್‌ಪೋರ್ಟ್‌‌‌‌ ಅಗತ್ಯವಿಲ್ಲದ್ದರಿಂದ ಯಾರೂ ಅದನ್ನು ಇಟ್ಟುಕೊಳ್ಳಲಿಲ್ಲ. ಒಟ್ಟೋಮನ್‌ ಸಾಮ್ರಾಜ್ಯ ಮತ್ತು ರಷ್ಯನ್‌‌ ಸಾಮ್ರಾಜ್ಯಗಳು ಪಾಸ್‌ಪೋರ್ಟ್‌‌‌‌ ಅಗತ್ಯವನ್ನು ಅಂತರರಾಷ್ಟ್ರೀಯ ಪ್ರವಾಸದ ಅಗತ್ಯವಾಗಿ ಉಳಿಸಿಕೊಂಡವು ಮತ್ತು ಅವರಲ್ಲಿ ಗಡಿಯೊಳಗೇ ಪ್ರವಾಸ ಮಾಡಲು ಆಂತರಿಕ-ಪಾಸ್‌ಪೋರ್ಟ್‌‌‌‌ ವ್ಯವಸ್ಥೆಯು ಸಹಾ ಇತ್ತು.

ಪ್ರಾರಂಭಿಕ ಕಾಲದ ಪಾಸ್‌ಪೋರ್ಟ್‌‌‌‌ಗಳು ಅದನ್ನು ಹೊಂದಿರುವವನ ಕುರಿತು ವಿವರಗಳನ್ನು ಹೊಂದಿರುತ್ತಿದ್ದವು. ಫೋಟೋಗ್ರಾಫ್‌ಗಳನ್ನು ಪಾಸ್‌ಪೋರ್ಟ್‌‌‌‌ಗಳಿಗೆ ಅಂಟಿಸುವುದು ಇಪ್ಪತ್ತನೇ ಶತಮಾನದ ಪ್ರಾರಂಭಿಕ ದಶಕಗಳಲ್ಲಿ ಫೋಟೋಗ್ರಫಿ ಪ್ರಸಿದ್ಧಿಗೊಂಡ ನಂತರದಲ್ಲಿ ಚಾಲ್ತಿಗೆ ಬಂತು.

ವಿಶ್ವ ಯುದ್ಧ Iದ ಕಾಲದಲ್ಲಿ, ಯೂರೋಪ್‌‍ ಸರ್ಕಾರಗಳು ಸುರಕ್ಷತೆಯ ದೃಷ್ಟಿಯಿಂದ (ಪತ್ತೆದಾರರನ್ನು ದೂರವಿಡಲು) ಮತ್ತು ಕುಶಲ ಕರ್ಮಿಗಳಾದ ನಾಗರೀಕರು ಬೇರೆ ದೇಶಗಳಿಗೆ ವಲಸೆ ಹೋಗದಂತೆ ತಡೆಯುವ ಮೂಲಕ ಅವರ ಸಾಮರ್ಥ್ಯವನ್ನು ಸ್ವದೇಶದಲ್ಲಿಯೇ ಬಳಸಿಕೊಳ್ಳುವ ಅಗತ್ಯವಾಗಿಯೂ ಗಡಿಯ ಪಾಸ್‌ಪೋರ್ಟ್‌‌‌‌ ಅಗತ್ಯಗಳನ್ನು ಮನಗಂಡರು. ಯುದ್ಧದ ನಂತರವೂ ಈ ನಿರ್ಬಂಧ ಮುಂದುವರೆಯಿತು. ಮತ್ತು ಅನೇಕ ವಿವಾದಗಳ ನಡುವೆಯೂ ಒಂದು ಪ್ರಮಾಣಿತ ಪ್ರಕ್ರಿಯೆಯಾಗಿ ಮುಂದುವರೆಯಿತು. ೧೯೨೦ರ ದಶಕದ ಬ್ರಿಟೀಷ್ ಪ್ರವಾಸಿಗರು, ಅದರಲ್ಲಿಯೂ ಫೋಟೋಗ್ರಾಫ್‌ಗಳು ಮತ್ತು ಭೌತಿಕ ವಿವರಗಳನ್ನ ಅದರಲ್ಲಿ ನೀಡುವುದು "ನಿಕೃಷ್ಟ ಮತ್ತು ಅಮಾನವೀಯಗೊಳಿಸುವಂತಹದ್ದು" ಎಂದು ಆರೋಪಿಸಿದರು.[]

೧೯೨೦ರಲ್ಲಿ ಲೀಗ್ ಆಫ್ ನೇಶನ್ಸ್ ಪಾಸ್‌ಪೋರ್ಟ್‌‌‌‌ಗಳು ಮತ್ತು ಥ್ರೂ ಟಿಕೇಟ್‌ಗಳ ಕುರಿತು ಒಂದು ಸಮ್ಮೇಳನವನ್ನು ಏರ್ಪಡಿಸಿತು. ಪಾಸ್‌ಪೋರ್ಟ್‌‌‌‌ ಸೂಚನೆಗಳು ಮತ್ತು ಒಂದು ಸಾಮಾನ್ಯ ಕೈಪಿಡಿಯನ್ನು ಈ ಸಮ್ಮೇಳನದಲ್ಲಿ ಹೊರತರಲಾಯಿತು,[] ಮತ್ತು ೧೯೨೬[] ಮತ್ತು ೧೯೨೭ ರಲ್ಲಿ ನಡೆದ ಸಮ್ಮೇಳನಗಳಲ್ಲಿ ಅವುಗಳನ್ನು ಅನುಸರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]

ವಿಶ್ವ ಸಂಸ್ಥೆಯು ೧೯೬೩ ರಲ್ಲಿ ಒಂದು ಪ್ರವಾಸೀ ಸಮ್ಮೇಳನವನ್ನು ಏರ್ಪಡಿಸಿತು, ಆದರೆ ಪಾಸ್‌ಪೋರ್ಟ್‌‌‌‌ ಆಗ ಪಾಸ್‌ಪೋರ್ಟ್‌‌‌ ಗೊತ್ತುವಳಿಗಳನ್ನು ರೂಪಿಸಲಿಲ್ಲ. ಪಾಸ್‌ಪೋರ್ಟ್‌‌‌‌ ಪ್ರಮಾಣೀಕರಣ ಸುಮಾರು ೧೯೮೦ ರಲ್ಲಿ ಬಳಕೆಗೆ ಬಂದಿತು, ಅಂತರರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಸ್ಥೆ (ICAO)ಯ ಆಶ್ರಯದಲ್ಲಿ ನಡೆಯಿತು.

ವಿಧಗಳು

ಬದಲಾಯಿಸಿ
 
ಅಜರ್‌ಬೈಜಾನಿ ಸಾಮಾನ್ಯ ಪಾಸ್‌ಪೋರ್ಟ್‌‌‌‌‌ನ ಒಳಗಿನ ಮತ್ತು ಮೊದಲ ಪುಟಗಳು

ಪಾಸ್‌ಪೋರ್ಟ್‌‌‌‌ಗಳ ಪ್ರಕಾರದಲ್ಲಿ ಜಾಗತೀಕವಾಗಿ ಒಂದು ಪ್ರಮಾಣೀಕರಣವಿದೆ, ಹಾಗಿದ್ದರೂ ಪಾಸ್‌ಪೋರ್ಟ್‌‌‌‌ ಪ್ರಕಾರ, ಪುಟಗಳ ಸಂಖ್ಯೆ ಮತ್ತು ವ್ಯಾಖ್ಯಾನಗಳು ಪ್ರತೀ ದೇಶಕ್ಕೂ ಬೇರೆಯೇ ಆಗಿರುತ್ತವೆ.

ಸಂಪೂರ್ಣ ಪಾಸ್‌ಪೋರ್ಟ್‌‌‌‌ಗಳು

ಬದಲಾಯಿಸಿ
  • ಸಾಮಾನ್ಯ ಪಾಸ್‌ಪೋರ್ಟ್‌‌‌‌, [ಪ್ರವಾಸಿಗರ ಪಾಸ್‌ಪೋರ್ಟ್‌‌‌‌, ಖಾಯಂಗೊಳಿಸಿದ ಪಾಸ್‌ಪೋರ್ಟ್‌‌‌‌, ಪಾಸ್‌ಪೋರ್ಟ್‌‌‌‌]
ನಾಗರೀಕರಿಗೆ ನೀಡಲಾಗುತ್ತದೆ ಮತ್ತು ಸಾಮಾನ್ಯವಾಗಿ ಅತ್ಯಂತ ಹೆಚ್ಚುಬಾರಿ-ನೀಡಲಾಗುವ ಪ್ರಕಾರದ ಪಾಸ್‌ಪೋರ್ಟ್‌‌‌‌ ಇದು. ಕೆಲವೊಮ್ಮೆ ಮಕ್ಕಳೂ ಸಹ ತಮ್ಮ ಪಾಲಕರ ಸಾಮಾನ್ಯ ಪಾಸ್‌ಪೋರ್ಟ್‌‌‌‌ ಜೊತೆ ತಮ್ಮ ಹೆಸರನ್ನೂ ನಮೂದಿಸಿಕೊಳ್ಳಲು ಸಾಧ್ಯವಿದ್ದು, ಇದು ಪಾಸ್‌ಪೋರ್ಟ್‌‌‌‌ ಬಳಕೆ ವ್ಯಾಪ್ತಿಯನ್ನು ಕೌಟುಂಬಿಕ ಪಾಸ್‌ಪೋರ್ಟ್‌‌‌‌ ವ್ಯಾಪ್ತಿಗೆ ಸಮಾನ ಎನ್ನಲಾಗುತ್ತದೆ.
  • ಅಧಿಕೃತ ಪಾಸ್‌ಪೋರ್ಟ್‌‌‌‌ [ಸೇವಾ ಪಾಸ್‌ಪೋರ್ಟ್‌‌‌‌, ಅಥವಾ ವಿಶೇಷ ಪಾಸ್‌ಪೋರ್ಟ್‌‌‌‌]
ಸರ್ಕಾರದ ಅಧಿಕಾರಿಗಳಿಗೆ ಕಾರ್ಯ-ಸಂಬಂಧಿ ಪ್ರಯಾಣಕ್ಕೆ ಮತ್ತು ಅಧೀನ ವ್ಯಕ್ತಿಗಳನ್ನು ಕರೆದೊಯ್ಯುವುದಕ್ಕೆ ಇದನ್ನು ನೀಡಲಾಗುತ್ತದೆ.
  • ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌
ರಾಜತಾಂತ್ರಿಕರಿಗೆ ಕಾರ್ಯ-ಸಂಬಂಧಿ ಪ್ರಯಾಣಕ್ಕೆ ಮತ್ತು ಅಧೀನ ವ್ಯಕ್ತಿಗಳನ್ನು ಕರೆದೊಯ್ಯುವುದಕ್ಕೆ ಈ ಪಾಸ್‌ಪೋರ್ಟ್ ನೀಡಲಾಗುತ್ತದೆ. ರಾಜತಾಂತ್ರಿಕ ವಿನಾಯಿತಿಯಿರುವ ಹೆಚ್ಚಿನ ರಾಜತಾಂತ್ರಿಕರು ತಮ್ಮೊಂದಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌ಗಳನ್ನು ಕೊಂಡೊಯ್ಯುತ್ತಾರಾದರೂ, ಒಂದು ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌ ಹೊಂದಿರುವುದು ರಾಜತಾಂತ್ರಿಕ ವಿನಾಯಿತಿ ಹೊಂದಿರುವುದಕ್ಕೆ ಸಮನಲ್ಲ. ರಾಜತಾಂತ್ರಿಕ ವಿನಾಯಿತಿ ಸೌಲಭ್ಯವಾದ ರಾಜತಾಂತ್ರಿಕ ಸ್ಥಾನಮಾನವನ್ನು ನೀಡುವಿಕೆಯು, ಒಂದು ದೇಶದ ಸರ್ಕಾರದಿಂದ ನೀಡಲ್ಪಡುತ್ತದೆ. ಅಲ್ಲದೇ, ಒಂದು ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌ ಎಂದರೆ ಅದು ವೀಸಾ-ಮುಕ್ತ ಪ್ರಯಾಣಕ್ಕೆ ಅವಕಾಶ ಎಂದಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌ ಹೊಂದಿದವರು ಸಾಮಾನ್ಯವಾಗಿ ಒಂದು ರಾಜತಾಂತ್ರಿಕ ವೀಸಾವನ್ನೂ ಹೊಂದಬೇಕಾಗುತ್ತದೆ. ಒಂದು ವೇಳೆ ಒಬ್ಬ ಸಾಮಾನ್ಯ ಪಾಸ್‌ಪೋರ್ಟ್‌‌‌‌ ಹೊಂದಿದವನು ವೀಸಾ-ಮುಕ್ತ ಪ್ರವಾಸ ಮಾಡಿ ದೇಶವನ್ನು ಪ್ರವೇಶಿಸಿದರೂ ಆ ನಂತರದಲ್ಲಿ ಆತ ವೀಸಾ ಪಡೆದುಕೊಳ್ಳಬೇಕಾಗುತ್ತದೆ.
ವಿಶೇಷ ಸಂದರ್ಭಗಳಲ್ಲಿ, ಒಂದು ರಾಜತಾಂತ್ರಿಕ ಪಾಸ್‌ಪೋರ್ಟ್‌‌‌‌ ಅನ್ನು ತನ್ನದೇ ಆದ ಪಾಸ್‌ಪೋರ್ಟ್‌‌‌‌ ಹೊಂದಿರದ ವಿದೇಶಿಗೆ ನೀಡಲಾಗುತ್ತದೆ, ಅಂದರೆ ಒಂದು ದೇಶದಿಂದ ಗಡಿಪಾರು ಮಾಡಲ್ಪಟ್ಟ ವಿಶೇಷ ವ್ಯಕ್ತಿಯನ್ನು ಇನ್ನೊಂದು ದೇಶವು ತನ್ನ ನೆಲದಲ್ಲಿ ಉಳಿದುಕೊಳ್ಳಲು ಆಹ್ವಾನಿಸಿದಾಗ ನೀಡಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು].
  • ತುರ್ತು ಸಂದರ್ಭದ ಪಾಸ್‌ಪೋರ್ಟ್‌‌‌‌ [ತಾತ್ಕಾಲಿಕ ಪಾಸ್‌ಪೋರ್ಟ್‌‌‌‌]
ಪಾಸ್‌ಪೋರ್ಟ್‌‌‌‌ ಕಳೆದುಕೊಂಡ ವ್ಯಕ್ತಿಗೆ ಮತ್ತೊಂದು ಪಾಸ್‌ಪೋರ್ಟ್‌‌‌‌ ಪಡೆಯುವ ಸಮಯವಿಲ್ಲದಿದ್ದಾಗ ಇದನ್ನು ನೀಡಲಾಗುತ್ತದೆ. ಕೆಲವೊಮ್ಮೆ ಪ್ರವೇಶ ದಾಖಲೆ ಅಥವಾ ಪ್ರವೇಶ ಚೀಟಿಯನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ.
  • ಗುಂಪು ಪಾಸ್‌ಪೋರ್ಟ್‌‌‌‌
ಇದನ್ನು ಒಂದು ನಿರ್ದಿಷ್ಟ ಗುಂಪಿನ ಜನರಿಗೆ ಒಂದು ನಿರ್ದಿಷ್ಟ ಕಾರ್ಯದ ಮೇಲೆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಪ್ರವಾಸ ಹೋಗಬೇಕಾದ ಸಂದರ್ಭದಲ್ಲಿ ನೀಡಲಾಗುತ್ತದೆ. ಉದಾಹಣೆಗೆ ಶಾಲೆಯ ವಿದ್ಯಾರ್ಥಿಗಳ ಪ್ರವಾಸಕ್ಕೆ.
  • ಕುಟುಂಬದ ಪಾಸ್‌ಪೋರ್ಟ್‌‌‌‌
ಇದನ್ನು ಕುಟುಂಬದ ಸದಸ್ಯರಿಗೆ ನೀಡಲಾಗುತ್ತದೆ—ತಂದೆ, ತಾಯಿ, ಮಗ, ಮಗಳು. ಇದರಲ್ಲಿ ಒಬ್ಬ ಪಾಸ್‌ಪೋರ್ಟ್‌‌‌‌ ಹೊಂದಿರುವವನಿರುತ್ತಾನೆ. ಆತ ಒಬ್ಬನೇ ಪ್ರವಾಸ ಮಾಡಬಹುದು ಅಥವಾ ಕುಟುಂಬದ ಸದಸ್ಯರೊಡನೆ. ಪಾಸ್‌ಪೋರ್ಟ್‌‌‌‌ ಹೊಂದಿರದ ಒಂದು ಕುಟುಂಬದ ಸದಸ್ಯ ಹೊಂದಿರುವ ಸದಸ್ಯ ಜೊತೆಗಿಲ್ಲದೇ ಇದ್ದಾಗ ಆ ಪಾಸ್‌ಪೋರ್ಟ್‌‌‌‌ ಬಳಸಿ ಪ್ರವಾಸ ಮಾಡಲು ಅನುಮತಿ ಇರುವುದಿಲ್ಲ.

ಪುಸ್ತಕ ರೂಪದ ಪಾಸ್‌ಪೋರ್ಟ್ನಲ್ಲಿ ಪ್ರವೇಶ ದಾಖಲೆಗಳು

ಬದಲಾಯಿಸಿ
 
ವಲಸೆಗಾರರಿಗೆ ಇರುವ ನಾನ್‌ಸೆನ್‌ ಪಾಸ್‌ಪೋರ್ಟ್‌ (ಈಗ ಚಾಲ್ತಿಯಲ್ಲಿಲ್ಲ)
  • ಪ್ರವೇಶ ದಾಖಲೆ
ಇದನ್ನು ಒಂದು ರಾಷ್ಟ್ರೀಯ ಸರ್ಕಾರವು ತುರ್ತು ಸಂದರ್ಭದ ಪಾಸ್‌ಪೋರ್ಟ್‌‌‌‌ ಆಗಿ ನೀಡುತ್ತದೆ, ಅಥವಾ ಮಾನವೀಯ ನೆಲೆಯ ಪ್ರವಾಸಗಳಿಗಾಗಿ ನೀಡುತ್ತದೆ. ಪ್ರವೇಶ ದಾಖಲೆಗಳನ್ನು ಅಂತರರಾಷ್ಟ್ರೀಯ ಸಂಸ್ಥೆಗಳು (ಅತ್ಯಂತ ಪ್ರಮುಖವಾಗಿ, ವಿಶ್ವಸಂಸ್ಥೆ) ತಮ್ಮ ಅಧಿಕಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಅಧಿಕೃತ ಪ್ರವಾಸದ ಸಂದರ್ಭದಲ್ಲಿ ನೀಡುತ್ತವೆ.
  • ಗುರುತಿನ ಪ್ರಮಾಣ ಪತ್ರ, [ವಿದೇಶಿಗಳ ಪಾಸ್‌ಪೋರ್ಟ್‌‌‌‌]
ಕೆಲವು ಸಂದರ್ಭಗಳಲ್ಲಿ -ಯಾವುದೇ ಸ್ಥಾನಮಾನವಿರದ ಸ್ಥಿತಿಯಲ್ಲಿ- ನಾಗರೀಕರಲ್ಲದ ನಿವಾಸಿಗಳಿಗೆ ನೀಡಲಾಗುವ ದಾಖಲೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ "ನಾನ್‌ಸೆನ್ ಪಾಸ್‌ಪೋರ್ಟ್‌‌‌‌". ಕೆಲವೊಮ್ಮೆ ವಿದೇಶಿಗರ ಪಾಸ್‌ಪೋರ್ಟ್‌‌‌‌ಗಳನ್ನು ಆಂತರಿಕ ಪಾಸ್‌ಪೋರ್ಟ್‌‌‌‌ ಆಗಿ ಅನಿವಾಸಿಗಳಿಗೆ ನೀಡಲಾಗುತ್ತದೆ.
  • ನಿರಾಶ್ರಿತ ಪ್ರವಾಸೀ ದಾಖಲೆ
ತನ್ನ ನೆಲದಲ್ಲಿ ಉಳಿದುಕೊಂಡ ನಿರಾಶ್ರಿತರಿಗೆ ಒಂದು ರಾಜ್ಯವು ಈ ದಾಖಲೆಯನ್ನು ಒದಗಿಸಿದ್ದು, ಅವರಿಗೆ ರಾಜ್ಯದ ಹೊರಗೆ ಹೋಗಿಬರಲು ಅನುಮತಿಯನ್ನು ನೀಡುತ್ತದೆ. ನಿರಾಶ್ರಿತರು ತಾವು ವಾಸಿಸುತ್ತಿರುವ ರಾಜ್ಯದ ದೇಶದಿಂದ (ಆಶ್ರಯ ಬೇಡಿ ಬಂದ ಪ್ರದೇಶ) ಪಾಸ್‌ಪೋರ್ಟ್‌‌‌‌ ಪಡೆದುಕೊಳ್ಳುವುದು ಸಾಧ್ಯವಿಲ್ಲ ಹಾಗಾಗಿ ಅವರಿಗೆ ವಿದೇಶೀ ಪ್ರವಾಸ ಕೈಗೊಳ್ಳುವುದಕ್ಕೆ ಪ್ರವಾಸೀ ದಾಖಲೆಗಳು ಅಗತ್ಯವಾಗಿರುತ್ತವೆ.
  • ಆಂತರಿಕ ಪಾಸ್‌ಪೋರ್ಟ್‌‌‌‌
ಕೆಲವು ದೇಶಗಳು ಗುರುತಿನ ದಾಖಲೆಯಾಗಿ ನೀಡಲ್ಪಡುವ ಇದು ಆ ನಿರ್ದಿಷ್ಟ ದೇಶದೊಳಗೇ ಪ್ರವಾಸ ಮಾಡುವಿಕೆಯನ್ನು ನಿಯಂತ್ರಿಸುತ್ತದೆ. ಉದಾಹರಣೆಗೆ ರಷ್ಯಾದ ಆಂತರಿಕ ಪಾಸ್‌ಪೋರ್ಟ್‌‌‌‌, ಅಥವಾ ಚೀನಾದಲ್ಲಿನ ಹುಕಾವು ನಿವಾಸಿ-ನೋಂದಣಿ ವ್ಯವಸ್ಥೆ. ಇವೆರಡೂ ರಾಜರ ಕಾಲದಿಂದಲೂ ಇದ್ದವು.
  • ಮರೆವೇಷ ಮತ್ತು ಕಾಲ್ಪನಿಕ ಪಾಸ್‌ಪೋರ್ಟ್‌‌‌‌
ಒಂದು ಮರೆವೇಷ ಪಾಸ್‌ಪೋರ್ಟ್‌‌‌‌ ಎಂಬುದು ಸಾಮಾನ್ಯ ಪಾಸ್‌ಪೋರ್ಟ್‌‌‌‌ ಹಾಗೆಯೇ ಇರುವಂತಹದ್ದು ಆದರೆ ಅದು ನಿಜವಾಗಿ ಅದು ಸದ್ಯದಲ್ಲಿ ಅಸ್ತಿತ್ವದಲ್ಲಿಲ್ಲಿದ, ಯಾವತ್ತೂ ಇಲ್ಲದಿದ್ದ ಅಥವಾ ಯಾವುದೇ ಹೆಸರು ಬದಲಿಸಿದ ದೇಶದ ಹಳೇ ಹೆಸರಿನಲ್ಲಿರುತ್ತದೆ. ಇಂತಹ ಮರೆವೇಷ ಪಾಸ್‌ಪೋರ್ಟ್‌‌‌‌ಗಳನ್ನು ಮಾರಾಟ ಮಾಡುವ ಕಂಪನಿಗಳು ಒಂದು ವೇಳೆ ವಿಮಾನಾಪಹರಣಗೊಂಡರೆ ಅವುಗಳನ್ನು ಭಯೋತ್ಪಾದಕರಿಗೆ ತೋರಿಸಿ ತಪ್ಪಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದು ಅಸ್ಪಷ್ಟವಾಗಿ ಹೇಳುತ್ತವೆ. ಆದರೆ ಇದು ಯಾವತ್ತೂ ಸಾಧ್ಯವಾಗಿಲ್ಲ. ಏಕೆಂದರೆ ಮರೆವೇಷ ಪಾಸ್‌ಪೋರ್ಟ್‌‌‌‌ ಅನ್ನು ಯಾವುದೇ ನಿರ್ದಿಷ್ಟವಾಗಿ ಅಸ್ತಿತ್ವದಲ್ಲಿರುವ ದೇಶದ ಹೆಸರಿನಲ್ಲಿ ನೀಡಲಾಗಿರುವುದಿಲ್ಲ, ಅದು ಕೃತಕವಾದದ್ದಾಗಿರುವುದಿಲ್ಲ ಹಾಗೂ ಅದನ್ನು ಹೊಂದುವುದು ಕಾನೂನಿನ ಪ್ರಕಾರ ತಪ್ಪೂ ಆಗಿರುವುದಿಲ್ಲ. ಆದರೂ, ಇಂತಹ ಪಾಸ್‌ಪೋರ್ಟ್ ಬಳಸಿ ಯಾವುದಾದರೂ ದೇಶದ ಒಳಗೆ ಹೋಗಲು ಪ್ರಯತ್ನಿಸುವುದು ಅನೇಕ ದೇಶಗಳಲ್ಲಿ ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ.
ಒಂದು ಕಾಲ್ಪನಿಕ ಪಾಸ್‌ಪೋರ್ಟ್‌‌‌‌ ಒಂದು ನಿರ್ದಿಷ್ಟ ಗುರುತಿಸಲ್ಪಟ್ಟ ಸರ್ಕಾರವು ನೀಡಲ್ಪಟ್ಟ ದಾಖಲೆಯಾಗಿರುವುದಿಲ್ಲ ಮತ್ತು ಅದು ಕಾನೂನಿನ ಪ್ರಕಾರದ ಪ್ರವಾಸಕ್ಕೆ ಅರ್ಹ ದಾಖಲೆಯಾಗಿರುವುದಿಲ್ಲ. ಕಾಲ್ಪನಿಕ ಪಾಸ್‌ಪೋರ್ಟ್‌‌‌‌ಗಳನ್ನು ಮರೆವೇಷ ಪಾಸ್‌ಪೋರ್ಟ್‌‌‌‌ಗಳಿಂದ ಬೇರೆಯಾಗಿಸುವುದೆಂದರೆ ಮರೆವೇಷ ಪಾಸ್‌ಪೋರ್ಟ್‌‌‌‌ಗಳನ್ನು ಒಂದು ನೈಜ, ಅಸ್ತಿತ್ವದಲ್ಲಿರುವ ಗುಂಪು, ಸಂಘ ಅಥವಾ ಪಂಗಡವು ನೀಡಿರುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕಾಲ್ಪನಿಕ ಪಾಸ್‌ಪೋರ್ಟ್‌‌‌‌ ನ ಉದ್ದೇಶವು ಒಂದು ರಾಜಕೀಯ ಹೇಳಿಕೆಯನ್ನು ಪ್ರತಿಬಿಂಭಿಸುತ್ತದೆ ಅಥವಾ ಯಾವುದೋ ಒಂದು ಸಂಘಟನೆಯ ಸದಸ್ಯತ್ವವನ್ನು ಗುರುತಿಸುವಂತಹುದಾಗಿರುತ್ತದೆ. ಇತರೆ ಸಂದರ್ಭಗಳಲ್ಲಿ, ಅವುಗಳನ್ನು ಒಂದು ಹಾಸ್ಯದ ರೀತಿಯಲ್ಲಿ ಅಥವಾ ಹೊಸ ಪ್ರಕಾರದ ನೆನಪಿನ ಕಾಣಿಕೆಯಾಗಿ, ಉದಾಹರಣೆಗೆ "ಕಾಂಚ್ ರಿಪಬ್ಲಿಕ್" ಪಾಸ್‌ಪೋರ್ಟ್‌‌‌‌ಗಳು ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಾರಲ್ಲ, ಹಾಗೆ ಬಳಸಲಾಗುತ್ತದೆ.

ಅಂತರರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಸ್ಥೆಗಳ ನಿಯಮಗಳು

ಬದಲಾಯಿಸಿ

ಅಂತರಾಷ್ಟ್ರೀಯ ನಾಗರಿಕ ಉಡ್ಡಯನ ಸಂಸ್ಥೆಯು(ICAO), ಯಾವುದೇ ದೇಶದ ಕೇಂದ್ರ ಸರ್ಕಾರವು ಶಿಫಾರಸ್ಸನ್ನಾಗಿ ಪರಿಗಣಿಸಬಹುದಾದ ಪಾಸ್‌ಪೋರ್ಟ್‌‌‌‌ ಮಾದರಿಗಳನ್ನು ಪ್ರಕಟಿಸಿದವು.

  • ಪಾಸ್‌ಪೋರ್ಟ್‌‌‌‌‌ಗಳ ನಿರ್ಧಿಷ್ಟ ನಮೂನೆಗಳು
ಪ್ರಮಾಣಿತ ನಮೂನೆಯ ಪಾಸ್‌ಪೋರ್ಟ್‌‌‌‌‌ ಗಳು, ಪಾಸ್‌ಪೋರ್ಟ್‌‌‌‌ ನ ಹೊದಿಕೆಯ ಮೇಲೆ ವಿತರಿಸಿದ ದೇಶದ ಹೆಸರು, ರಾಷ್ಟ್ರದ ಸಂಕೇತ, ದಾಖಲೆಗಳ ವಿವರಣೆಗಳು(ಉದಾಹರಣೆಗೆ, ಪಾಸ್‌ಪೋರ್ಟ್‌‌‌‌, ಕಛೇರಿ ಪಾಸ್‌ಪೋರ್ಟ್‌‌‌‌, ರಾಜತಾಂತ್ರಿಕ ಪಾಸ್‌ಪೋರ್ಟ್‌‌‌) ಮತ್ತು ಸದರಿ ಪಾಸ್‌ಪೋರ್ಟ್‌‌‌ ಆಯುರ್ಗಣನೆಯದಾಗಿದ್ದರೆ, ಆಯುರ್ಗಣನೆಯ ಪಾಸ್‌ಪೋರ್ಟ್‌‌‌‌ ಸಂಕೇತವನ್ನು ಹೊಂದಿರುತ್ತವೆ. ಒಳಭಾಗದಲ್ಲಿ ರಾಷ್ಟ್ರವನ್ನು ಹೆಸರಿಸುವ ತಲೆಬರಹ ಪುಟವನ್ನು ಹೊಂದಿರುತ್ತದೆ. ನಂತರದ ಪುಟಗಳು ಪಾಸ್‌ಪೋರ್ಟ್‌‌‌‌ ಧಾರಕ ವ್ಯಕ್ತಿಯ ಹೆಸರು,ವಿತರಿಸಿದ ಅಧಿಕಾರಿಗಳ ಹೆಸರು ಮುಂತಾದ ಇತರ ಮಾಹಿತಿಗಳನ್ನು ಹೊಂದಿರುತ್ತವೆ. ಆದಾಗಿಯೂ ಕೆಲವು ಯುರೋಪಿಯನ್‌ ಯೂನಿಯನ್‌ ಸದಸ್ಯ ರಾಷ್ಟ್ರಗಳು ಈ ಮಾಹಿತಿಗಳನ್ನು ಹಿಂಭಾಗದ ಹೊದಿಕೆಯ ಮೇಲೆ ಮುದ್ರಿಸುತ್ತವೆ. ಪ್ರವೇಶ ಮತ್ತು ನಿರ್ಗಮನ ಕುರಿತ ಮುದ್ರೆ ಛಾಪಿಸಲು ಮತ್ತು ವೀಸಾಗಳನ್ನು ಜೋಡಿಸಲು ಖಾಲಿ ಪುಟಗಳನ್ನು ಕಾಯ್ದಿರಿಸಲಾಗಿರುತ್ತದೆ. ಪಾಸ್‌ಪೋಟ್‌ಗಳಲ್ಲಿ ಸಂಖ್ಯೆಗಳ ಅಥವಾ ಅಕ್ಷರಗಳ ಅನುಕ್ರಮ ಸರಣಿಯ ಮೂಲಕ ವಿತರಕ ಅಧಿಕಾರಿಗಳ ಹೆಸರು ನಮೂದಿತವಾಗಿರುತ್ತದೆ.
  • ಯಂತ್ರಗಳು ಓದಬಹುದಾದ ಪಾಸ್‌ಪೋರ್ಟ್‌‌‌‌ ಮಾದರಿಗಳು
ಅಂತರಾಷ್ಟ್ರೀಯ ನಾಗರಿಕ ಉಡ್ಡಯನ ಸಂಸ್ಥೆಯು (ICAO),[] ಯಂತ್ರಗಳು ಓದಬಹುದಾದ ಪಾಸ್‌ಪೋರ್ಟ್‌‌‌‌ ನಮೂನೆಗಳನ್ನು ಕೂಡಾ ಪ್ರಕಟಿಸಿದೆ.ಸ್ವಲ್ಪ ಸ್ಥಳವನ್ನು ಹೊರತುಪಡಿಸಿ ಲಿಪಿಗಳಲ್ಲಿ ಬರೆದಿರುವ ಹೆಚ್ಚಿನಂಶ ಮಾಹಿತಿಗಳನ್ನು ಕೂಡಾ ದೃಗ್‌ವಿಜ್ಞಾನ ತಂತ್ರವನ್ನು ಬಳಸಿ ಓದಲು ಅನುವಾಗುವಂತೆ ರಚಿಸಲಾಗಿರುತ್ತದೆ.
  • ಇ-ಪಾಸ್‌ಪೋರ್ಟ್‌‌‌‌ ಪ್ರಮಾಣಗಳು
ಐಸಿಎಓ ನಮೂನೆಗೆ ಸರಿಹೊಂದುವದಕ್ಕಾಗಿ, ಜೀವಸಂಖ್ಯಾಶಾಸ್ತ್ರ ಪಾಸ್‌ಪೋರ್ಟ್‌‌‌‌‌ಗಳು ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್‌‌ಗಳಾಗಿ ಬದಲಾವಣೆಗೊಂಡವು. ಇವುಗಳು ಪಾಸ್‌ಪೋರ್ಟ್‌‌‌‌ ಹೊಂದಿದ ವ್ಯಕ್ತಿಯ ವಿವರಣೆ, ಡಿಜಿಟಲ್‌ ಮಾದರಿ ಭಾವಚಿತ್ರ ಮತ್ತು ಪಾಸ್‌ಪೋರ್ಟ್‌‌‌‌ ಬಗೆಗಿನ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅನೇಕ ದೇಶಗಳು ಆಯುರ್ಗಣನೆಯ ಪಾಸ್‌ಪೋರ್ಟ್‌‌‌‌ಗಳನ್ನು ಒದಗಿಸುತ್ತವೆ. ಜೀವಸಂಖ್ಯಾಶಾಸ್ತ್ರ ಪಾಸ್‌ಪೋರ್ಟ್‌‌‌‌‌ಗಳ ಉದ್ದೇಶವು ವಿದೇಶ ಪ್ರವಾಸಗಳಿಗೆ ಶೀಘ್ರದಲ್ಲಿ ಅನುವುಮಾಡಿಕೊಡುವುದು ಮತ್ತು ಗುರುತಿಸುವಿಕೆಯಲ್ಲಿನ ಮೋಸಗಳನ್ನು ತಡೆಯುವುದಾಗಿದೆ. ಈ ಕಾರಣಗಳು ಖಾಸಗಿ ನ್ಯಾಯವಾದಿಗಳಿಂದ ವಿರೋಧಿಸಲ್ಪಟ್ಟಿತು.[೧೦][೧೧]

ಪಾಸ್‌ಪೋರ್ಟ್‌‌‌‌ ಸಂದೇಶ

ಬದಲಾಯಿಸಿ

ಯಾವುದೇ ಪಾಸ್‌ಪೋರ್ಟ್‌‌‌‌ ಸಾಮಾನ್ಯವಾಗಿ ಮುಂಬಾಗದಲ್ಲಿ,ಪಾಸ್‌ಪೋರ್ಟ್‌‌‌‌ ಧಾರಕನು ಮುಕ್ತವಾಗಿ ದಾಟಿಹೋಗಲು ಅನುಮತಿ ನೀಡಬೇಕು ಮತ್ತು ಅವಶ್ಯಕತೆ ಬಿದ್ದರೆ ಧಾರಕನು ಯಾವುದೇ ಸಹಾಯ ಪಡೆಯಲು ಅವಕಾಶವಿರಬೇಕೆಂದು ಕೋರುವ ಸಂದೇಶಗಳನ್ನು ಒಳಗೊಂಡಿರುತ್ತದೆ. ಸಂದೇಶಗಳು ಕೆಲವೊಮ್ಮೆ ಸರ್ಕಾರದ ಹೆಸರಿನಲ್ಲಿ ಅಥವಾ ರಾಷ್ಟ್ರದ ಮುಖ್ಯಸ್ಥರ ಹೆಸರಿನಲ್ಲಿ ಮುದ್ರಿತವಾಗಿರುತ್ತವೆ ಅಥವಾ ಸೈದ್ದಾಂತಿಕವಾಗಿ ವಿದೇಶಾಂಗ ಮಂತ್ರಿ ಅಥವಾ ಯಾವುದೇ ಸರ್ಕಾರದ ಪ್ರತಿನಿಧಿಯ ಹೆಸರಿನಲ್ಲಿರುತ್ತದೆ. ಪಾಸ್‌ಪೋರ್ಟ್‌‌‌‌ ನೀಡುವ ದೇಶದ ಭಾಷಾ ನೀತಿಯನ್ನವಲಂಬಿಸಿ, ಸಂದೇಶಗಳು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮುದ್ರಿತವಾಗಿರಬಹುದು. ಉದಾಹರಣೆಗೆ, ಫಿಲಿಫೈನ್‌ ಪಾಸ್‌ಪೋರ್ಟ್‌‌‌‌ನಲ್ಲಿನ ಇಂಗ್ಲಿಷ್‌ ಪಾಸ್‌ಪೋರ್ಟ್‌‌‌‌ ಸಂದೇಶವು,

ಫಿಲಿಫೈನ್‌ ಸರ್ಕಾರವು ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಪಾಸ್‌ಪೋರ್ಟ್‌‌‌‌ ಧಾರಕರನ್ನು ಫಿಲಿಫೈನ್‌ ಪ್ರಜೆಯೆಂದು ಪರಿಗಣಿಸಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಪಾರಾಗಲು ಅವಕಾಶ ನೀಡುವಂತೆ ಹಾಗೂ ಅವಶ್ಯಕತೆ ಬಿದ್ದರೆ ಆ ವ್ಯಕ್ತಿಗೆ ಕಾನೂನಿಸ ಸಹಾಯ ಮತ್ತು ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದರಿಂದ ಸಾಧ್ಯವಾಯಿತು.

ಇತರ ಉದಾಹರಣೆಗಳು : ಯುನೈಟೆಡ್‌ ಕಿಂಗ್‌ಡಮ್[೧೨],ಯುನೈಟೆಡ್‌ ಸ್ಟೇಟ್ಸ್‌.[೧೩] ಆದಾಗಿಯೂ ಅಂತಹ ಸಂದೇಶಗಳು ಯಾವಾಗಲೂ ಪ್ರಸ್ತುತವಲ್ಲ. ಸ್ವಿಸ್‌ ಪಾಸ್‌ಪೋರ್ಟ್‌‌‌‌ ಇದಕ್ಕೊಂದು ನಿದರ್ಶನವಾಗಿದೆ.

ಭಾಷೆಗಳು

ಬದಲಾಯಿಸಿ
ಚಿತ್ರ:Frenchpassportinside.png
ಫ್ರೆಂಚ್‌ ಪಾಸ್‌ಪೋರ್ಟ್‌ನ EUಭಾಷೆಯ ಪುಟಗಳು

ಪಾಸ್‌ಪೋರ್ಟ್‌‌‌‌ಗಳು ಮತ್ತು ಮಧ್ಯಂತರ ಟಿಕೆಟ್‌ಗಳ ಕುರಿತು ೧೯೨೦ ರಲ್ಲಿ ಹಲವು ರಾಷ್ಟ್ರಗಳ ಒಕ್ಕೂಟದಿಂದ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ, ಪಾಸ್‌ಪೋರ್ಟ್‌‌‌‌ಗಳು ಕಡ್ಡಾಯವಾಗಿ ಪುರಾತನ ಕಾಲದಿಂದ ಆಡಳಿತ ಭಾಷೆಯಾಗಿರುವ ಫ್ರೆಂಚ್‌ ಭಾಷೆಯಲ್ಲಿ ಹಾಗೂ ಒಂದು ಇತರ ಭಾಷೆಯಲ್ಲಿಯೇ ಹೊರಡಿಸಬೇಕೆಂದು ಶಿಪಾರಸ್ಸು ಮಾಡಿತು.[ಸೂಕ್ತ ಉಲ್ಲೇಖನ ಬೇಕು] ಇತ್ತೀಚಿನ ದಿನಮಾನದಲ್ಲಿ ಪಾಸ್‌ಪೋರ್ಟ್‌‌‌‌‌ಗಳು ಇಂಗ್ಲಿಷ್ ಮತ್ತು ಫ್ರೆಂಚ್‌ ಭಾಷೆಯಲ್ಲಿ ನೀಡಿಕೆಯಾಗಬೇಕು ಎಂದು ಐಸಿಎಓ ಶಿಪಾರಸ್ಸು ನೀಡಿತು.

ಅದಲ್ಲದೇ ಹೋದರೆ ಕೆಲವು ಚಾಲ್ತಿಯಲ್ಲಿರದ ಭಾಷೆಗಳ ಸಂಯೋಗಗಳೆಂದರೆ:

  • ಯುರೋಪಿಯನ್‌ ಒಕ್ಕೂಟ ಸದಸ್ಯ ರಾಷ್ಟ್ರಗಳಿಂದ ನೀಡಿಕೆಯಾದ ಪಾಸ್‌ಪೋರ್ಟ್‌‌‌‌‌ಗಳು, ಯುರೋಪಿಯನ್‌ ಒಕ್ಕೂಟದ ಎಲ್ಲಾ ಆಡಳಿತ ಭಾಷೆಗಳನ್ನು ಒಳಗೊಂಡಿರಬೇಕು. ಎರಡು ಅಥವಾ ಮೂರು ಭಾಷೆಗಳು ಪ್ರಸಕ್ತ ವಿಷಯಕ್ಕೆ ಸಂಬಂಧಿಸಿ ಸಂಖ್ಯೆಗಳಿಂದ ಅನುಕ್ರಮವಾಗಿ ಮುದ್ರಿಸಿರಬೇಕು ಮತ್ತು ಅವುಗಳು ಯಾವ ಪುಟದಲ್ಲಿ, ವ್ಯಕ್ತವಾದ ಉಳಿದ ಭಾಷೆಗಳಿಗೆ ತರ್ಜುಮೆ ಮಾಡುವ ಅಂಶಗಳಿವೆ ಎಂಬುದನ್ನು ಸ್ಪಸ್ಟಪಡಿಸಿರಬೇಕು.
  • ಸಂಯುಕ್ತ ಸಂಸ್ಥಾನ ಮತ್ತು ಬಾರ್ಬಾಡಿಯನ್‌ ಪಾಸ್‌ಪೋರ್ಟ್‌‌‌‌‌ಗಳು ತ್ರಿಬಾಷೆಗಳಾದ ಇಂಗ್ಲಿಷ್,ಫ್ರೆಂಚ್ ಮತ್ತು ಸ್ಪಾನಿಷ್‌ ಭಾಷೆಗಳಲ್ಲಿರುತ್ತವೆ. ಸಂಯುಕ್ತ ಸಂಸ್ಥಾನದ ಪಾಸ್‌ಪೋರ್ಟ್‌‌‌‌‌ಗಳು ಸಾಂಪ್ರದಾಯಿಕವಾಗಿ ಇಂಗ್ಲಿಷ್ ಮತ್ತು ಫ್ರೆಂಚ್‌ ಭಾಷೆ ಹೊಂದಿರುತ್ತವೆ. ಆದರೆ ಕ್ಲಿಂಟನ್‌ ಆಡಳಿತಾವಧಿಯಲ್ಲಿ ಪೋರ್ಟೋ ರಿಕೋ ಅವರ ಸ್ಪಾನಿಷ್‌ ಮಾತನಾಡುವ ಅಂತಸ್ತನ್ನು ಗುರುತಿಸಿ, ಸ್ಪಾನಿಷ್‌ ಭಾಷೆಯಲ್ಲಿಯೇ ಸಂದೇಶಗಳನ್ನು ಮತ್ತು ಲೇಬಲ್‌ಗಳನ್ನು ಮುದ್ರಿಸುವುದು ಆರಂಭವಾಯಿತು. ಕೇವಲ ಸಂದೇಶಗಳು ಮತ್ತು ಲೇಬಲ್‌ಗಳು ಮಾತ್ರ ವಿವಿಧ ಭಾಷೆಗಳಲ್ಲಿರುತ್ತಿದ್ದವು. ಸೂಚನೆಗಳು ಮತ್ತು ಹೊದಿಕೆ ಪುಟಗಳು ಕೇವಲ ಇಂಗ್ಲಿಷ್‌ನಲ್ಲಿ ಮುದ್ರಣವಾಗುತ್ತಿದ್ದವು.
  • ಬೆಲ್ಜಿಯಮ್ ದೇಶವು ತನ್ನ ನಾಗರಿಕರಿಗೆ ಡಚ್,ಫ್ರೆಂಚ್,ಮತ್ತು ಜರ್ಮನ್‌ ಭಾಷೆಗಳಲ್ಲಿ ಯಾವುದು ಮೊದಲು ಗೋಚರಿಸಬೇಕೆಂದು ಆಯ್ಕೆಮಾಡಿಕೊಳ್ಳುವ ಅವಕಾಶ ನೀಡಿತು.
  • ಯುರೋಪಿಯನ್‌ ಒಕ್ಕೂಟದ ಮೊದಲಿನ ಹಂಗೇರಿಯನ್ ಪಾಸ್‌ಪೋರ್ಟ್‌‌‌‌‌ನ(ಹಂಗೇರಿಯಾದಲ್ಲಿನ "ಅಟ್ಲೆವಲ್") ಮುಖಪುಟವು ಹಂಗೇರಿಯಾದಲ್ಲಿ ಮಾತ್ರ ಚಾಲ್ತಿಯಲ್ಲಿತ್ತು. ಒಳಭಾಗದಲ್ಲಿ ಹಂಗೇರಿಯನ್-ಇಂಗ್ಲಿಷ್ ದ್ವಿಭಾಷೆಯ ಎರಡನೇ ಪುಟ ಒಳಗೊಂಡಿತ್ತು. ವೈಯಕ್ತಿಕ ಮಾಹಿತಿ ಪುಟವು ಹಂಗೇರಿಯನ್, ಇಂಗ್ಲೀಷ್, ಮತ್ತು ಫ್ರೆಂಚ್ ವಿವರಣೆಗಳನ್ನು ಒಳಗೊಂಡಿತ್ತು. ಇದಕ್ಕೆ ಹೆಚ್ಚುವರಿಯಾಗಿ ಇಂಗ್ಲಿಷ್, ಫ್ರೆಂಚ್, ಚೈನೀಸ್, ರಷ್ಯನ್, ಸ್ಪಾನಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ವಿವರಣೆಯಿರುವ ಪುಟಗಳನ್ನು ನಂತರದಲ್ಲಿ ಸೇರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]
  • ಲಿಬಿಯಾನ್‌ ಪಾಸ್‌ಪೋರ್ಟ್‌‌‌‌‌ನ ಮೊದಲ ಪುಟವು ಅರೇಬಿಕ್‌ನಲ್ಲಿ ಮಾತ್ರವಿದ್ದಿತ್ತು. ಕೊನೆಯ ಪುಟದಲ್ಲಿ (ಪಾಶ್ಚಿಮಾತ್ಯರ ಪ್ರಕಾರ ಮೊದಲ ಪುಟ) ಇಂಗ್ಲಿಷ್ ಭಾಷೆಯಲ್ಲಿ ಮತ್ತು ಮೊದಲ ಪುಟದಲ್ಲಿ(ಪಾಶ್ಚಿಮಾತ್ಯರ ಪ್ರಕಾರ ಕೊನೆಯ ಪುಟ) ತತ್ಸಮನಾದ ಮಾಹಿತಿಗಳನ್ನು ಅರೇಬಿಕ್‌ನಲ್ಲಿ ಮುದ್ರಿಸಲಾಗಿತ್ತು. ಇದೇ ತರಹದ ವಿನ್ಯಾಸವು ಇನ್ನಿತರ ಅರಬ್‌ ದೇಶಗಳಲ್ಲಿಯೂ ಕೂಡಾ ಕಂಡುಬಂದಿತು.
  • ನ್ಯೂಝಿಲ್ಯಾಂಡ್ ಪಾಸ್‌ಪೋರ್ಟ್‌‌‌‌‌ಗಳು ಇಂಗ್ಲಿಷ್ ಮತ್ತು ಮಾಓರಿ ಭಾಷೆಯಲ್ಲಿವೆ.
  • ಪಾಕಿಸ್ತಾನಿ ಪಾಸ್‌ಪೋರ್ಟ್‌‌‌‌‌ಗಳು ಉರ್ದು,ಇಂಗ್ಲಿಷ್,ಅರೇಬಿಕ್ ಮತ್ತು ಫ್ರೆಂಚ್ ಭಾಷೆಯಲ್ಲಿವೆ.
  • ಸ್ವಿಸ್‌ ಪಾಸ್‌ಪೋರ್ಟ್‌‌‌‌‌ಗಳು ಈ ಐದು ಭಾಷೆಗಳಲ್ಲಿವೆ : ಜರ್ಮನ್, ಫ್ರೆಂಚ್, ಇಟಾಲಿಯನ್, ರೋಮಾನ್ಶ್ ಮತ್ತು ಇಂಗ್ಲಿಷ್.
  • ಮಕಾಯಿಯೋ ಎಸ್‌ಎಆರ್‌ ಪಾಸ್‌ಪೋರ್ಟ್‌‌‌‌‌ಗಳು ಈ ಮೂರು ಭಾಷೆಗಳಲ್ಲಿವೆ : ಚೈನೀಸ್‌, ಪೋರ್ಚುಗೀಸ್ ಮತ್ತು ಇಂಗ್ಲಿಷ್.

ಸಾಮಾನ್ಯ ವಿನ್ಯಾಸಗಳು

ಬದಲಾಯಿಸಿ
 
ಮೇಲ್ಬಾಗದಲ್ಲಿ ಮರ್ಕೌಸರ‍್ ಹೆಸರಿರುವ ಅರ್ಜಂಟೈನಾದ ಪಾಸ್‍ಪೋರ್ಟ್

ಯುರೋಪಿಯನ್‌ ಒಕ್ಕೂಟದಲ್ಲಿ ನೀಡಲಾದ ಪಾಸ್‌ಪೋರ್ಟ್‌‌‌‌‌‌ದ ವಿನ್ಯಾಸವು ಬಹುಜನಾಭಿಪ್ರಾಯದ ಮತ್ತು ಶಿಫಾರಸಿನ ಮೇಲೆ ಬಂದ ಪದ್ದತಿಯಾಗಿದೆಯೇ ಹೊರತು ಯಾವುದೇ ನಿರ್ದೇಶನದ ಮೇಲಲ್ಲ.[೧೪] ಪಾಸ್‌ಪೋರ್ಟ್‌‌‌‌‌‌ಗಳನ್ನು EU ದ ಮೇಲೆ ನೀಡದೆ ಜನರ ಸ್ಥಾನಮಾನಗಳ ಮೆಲೆ ನೀಡಲಾಗುತ್ತದೆ.ಮಾಹಿತಿಯು ಪಾಸ್‌ಪೋರ್ಟ್‌‌‌‌‌‌ಗಳ ಮುಂದೆ ಅಥವಾ ಅದರ ಹಿಂದುಗಡೆ ಇರುತ್ತವೆ. ಮತ್ತು ಯಾವ ರಾಜ್ಯದಿಂದ ನೀಡಲ್ಪಟ್ಟಿದೆ ಎಂಬುದನ್ನು ಗುರುತಿಸುವ ಸಲುವಾಗಿ ವಿನ್ಯಾಸದಲ್ಲಿ ಸ್ವಲ್ಪ ಮಾತ್ರದ ಬದಲಾವಣೆಯನ್ನು ಮಾಡಲಾಗುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌‌‌‌‌‌ಗಳ ಹೊದಿಕೆಯನ್ನು ತಿಳಿಯಾದ ಕೆಂಪುಬಣ್ಣದಿಂದ ಮಾಡಿರುತ್ತಾರೆ "ಯುರೋಪಿಯನ್‌ ಯುನಿಯನ್‌" ಎಂದು ಅಲ್ಲಿನ ದೇಶದ ಭಾಷೆಯಲ್ಲಿ ಅಥವಾ ಭಾಷೆಗಳಲ್ಲಿ ಬರೆದಿರುತ್ತಾರೆ. ಅದರ ಕೆಳಗಡೆ ದೇಶದ ಹೆಸರು, ಪಾಸ್‌ಪೋರ್ಟ್‌‌‌‌‌‌ಗಳಿಗೆ ರಾಷ್ಟ್ರೀಯ ಚಿನ್ಹೆ, ರಾಷ್ಟ್ರೀಯ ಭಾಷೆಯಲ್ಲಿಯ ಶಬ್ದ ಅಥವಾ ಶಬ್ದಗಳು ಮತ್ತು ಪಾಸ್‌ಪೋರ್ಟ್‌‌‌‌‌‌ಗಳ ಕೊನೆಯಲ್ಲಿ ಪಾಸ್‌ಪೋರ್ಟ್‌‌‌‌‌‌ಗಳಿಗಾಗಿ ಜೀವ ಸಂಖ್ಯಾಶಾಸ್ತ್ರದ ಚಿನ್ಹೆಯನ್ನು ಅಳವಡಿಸಿರುತ್ತಾರೆ.

ಮಧ್ಯ ಅಮೇರಿಕಾದಲ್ಲಿ ಒಪ್ಪಂದದ CA-೪ ಸದಸ್ಯರು (ಗ್ವಾಟೆಮಾಲಾ, ಎಲ್‌ ಸಾಲ್ವಾಡೊರ್‌, ಹೊಂಡುರಾಸ್‌, ಮತ್ತು ನಿಕಾರಾಗುವಾ) ’ಸೆಂಟ್ರಲ್‌ ಅಮೇರಿಕನ್‌ ಪಾಸ್‌ಪೋರ್ಟ್‌‌‌’ ಎಂಬ ಹೆಸರಿನ ಸಾಮಾನ್ಯ ಮಾದರಿಯ ಪಾಸ್‌ಪೋರ್ಟ್‌‌‌‌‌‌ಗಳನ್ನು ಹೊಂದಿವೆ. ನಿಕಾರಾಗುವಾ ಮತ್ತು ಎಲ್‌ ಸಾಲ್ವೆಡೊರ್‌ ಸದಸ್ಯರಿಂದ ೧೯೯೦ರ ಮಧ್ಯ ದಶಕದಿಂದಲೂ ಈ ವಿನ್ಯಾಸದ ಪಾಸ್‌ಪೋರ್ಟ್‌‌‌‌‌‌ಗಳು ಬಳಕೆಯಾಗಲ್ಪಡುತ್ತಿವೆಯಾದರೂ, ೨೦೦೬ ಜನವರಿಯಲ್ಲಿ ಈ ವಿನ್ಯಾಸವು CA-೪ ಸದಸ್ಯರ ಮಾದರಿಯಾಯಿತು. ಇದರ ಮುಖ್ಯ ಲಕ್ಷಣವೆಂದರೆ ಸಮುದ್ರ ನೀಲಿಯ ಹೊದಿಕೆಯನ್ನು ಹೊಂದಿದ್ದು ಅದರ ಮೇಲೆ "ಅಮೆರಿಕಾ ಸೆಂಟ್ರಲ್‌" ಎಂದು ಬರೆದಿದ್ದು ಮಧ್ಯ ಅಮೇರಿಕಾದ ನಕಾಶೆಯನ್ನು ಹೊಂದಿರುತ್ತದೆ ಮತ್ತು ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡುವ ದೇಶದ ನಕ್ಷೆಯು ಚಿನ್ನದ ವರ್ಣದಲ್ಲಿ ಪ್ರಮುಖವಾಗಿ ಕಾಣುವಂತೆ ಚಿತ್ರಿಸಲಾಗುತ್ತದೆ. ಇದು ಒಂದು ನಕಾಶೆಯನ್ನು ನಾಲ್ಕು ರಾಷ್ಟ್ರೀಯ ಚಿನ್ಹೆಗಳ ಬದಲಾಗಿ ಬಳಸಲ್ಪಡುತ್ತದೆ. ಪಾಸ್‌ಪೋರ್ಟ್‌‌‌‌‌‌ಗಳ ಕೆಳ ಕೊನೆಯಲ್ಲಿ ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡುವ ದೇಶದ ಹೆಸರು ಮತ್ತು ಪಾಸ್‌ಪೋರ್ಟ್‌‌‌‌‌‌ಗಳ ನಮೂನೆಯನ್ನು ನಮೂದಿಸಲಾಗಿರುತ್ತದೆ. ೨೦೦೬ ರಲ್ಲಿ ನಿಕಾರಾಗುವನ್‌ ಪಾಸ್‌ಪೋರ್ಟ್‌‌‌‌‌‌ಗಳ ಉಳಿದ ಮೂರು ದೇಶಗಳ ಗುರುತಿನ ಚೀಟಿಗೆ ಮಾದರಿಯಾದ ನಂತರ ಸ್ಪಾನಿಷ್‌, ಫ್ರೆಂಚ್‌ ಮತ್ತು ಇಂಗ್ಲಿಷ್‌ಗಳಲ್ಲಿ ಬಿಡುಗಡೆಯಾದವು.

ಕೆರಿಬಿಯನ್‌ ವರ್ಗಕ್ಕೆ ಸೇರಿದ ಸದಸ್ಯ ರಾಷ್ಟ್ರಗಳು (CARICOM) ಸಾಮಾನ್ಯ ಮಾದರಿಯ ಪಾಸ್‌ಪೋರ್ಟ್‌‌‌‌‌‌ಗಳನ್ನು ವಿತರಿಸುವುದನ್ನು ಸದ್ಯ ಪ್ರಾರಂಭಿಸಿವೆ. ಇವು (CARICOM) ಚಿನ್ಹೆಯನ್ನು ಹೊಂದಿದ್ದು ಅದರೊಂದಿಗೆ ರಾಷ್ಟ್ರೀಯ ಚಿನ್ಹೆಯನ್ನು ಮತ್ತು ಸದಸ್ಯ ರಾಷ್ಟ್ರದ ಚಿನ್ಹೆಯನ್ನು ಹೊಂದಿರುತ್ತವೆ. ಮತ್ತು CARICOM ನ ಅಧಿಕೃತ ಭಾಷೆಯಲ್ಲಿ ಮುದ್ರಿಸಿರುತ್ತವೆ(ಇಂಗ್ಲಿಷ್‌, ಫ್ರೆಂಚ್‌, ಡಚ್‌). ಸಾಮಾನ್ಯ ವಿನ್ಯಾಸದ ಪಾಸ್‌ಪೋರ್ಟ್‌‌‌‌‌‌ಗಳನ್ನು ಉಪಯೋಗಿಸುತ್ತಿರುವ ದೇಶಗಳೆಂದರೆ ಆಂಟಿಗುವಾ ಮತ್ತು ಬರ್ಬುಡಾ, ಡೊಮಿನಿಕಾ, ಗ್ರೆನಡಾ, ಸೇಂಟ್‌ ಕಿಟ್ಸ್‌ ಮತ್ತು ನೆವಿಸ್‌, ಸೇಂಟ್‌ ಲುಸಿಯಾ, ಸೇಂಟ್‌ ವಿನ್ಸೆಂಟ್‌ ಮತ್ತು ದಿ ಗ್ರೆನಾಡಿಯನ್ಸ್‌, ಸುರಿನಾಮೆ‌, ಮತ್ತು ಟ್ರಿನಿಡ್ಯಾಡ್‌ ಮತ್ತು ಟೊಬಾಗೊ.

ಈಸ್ಟರ್ನ್‌‌ ಕೆರಿಬಿಯನ್‌ ರಾಜ್ಯಗಳ ಒಕ್ಕೂಟದ ಸದಸ್ಯ ರಾಷ್ಟ್ರಗಳು (OECS) ಸಾಮಾನ್ಯ ಮಾದರಿಯ OECS ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡಲು ಜನವರಿ ೧, ೨೦೦೩ರಂದು ಯೋಜನೆ ಹಾಕಿದವು ಆದರೆ ಇದು ತುಂಬ ತಡವಾಯಿತು. CARICOM ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡುವ ಯೋಜನೆಯು OECS ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡುವ ಯೋಜನೆಯ ಮೌಲ್ಯವು ಕುಸಿಯುವಂತೆ ಮಾಡಿತು. OECS ಎಲ್ಲ ಸದಸ್ಯರೂ ಕೂಡ CARICOMನ ಸದಸ್ಯರೂ ಆಗಿದ್ದರು. ಹೀಗಾಗಿ ನವೆಂಬರ್‌ ೨೦೦೪ರಿಂದ OECS ಸರ್ಕಾರವು CARICOM ಪಾಸ್‌ಪೋರ್ಟ್‌‌‌‌‌‌ಗಳನ್ನು ಮೇ ೨೦೦೫ಒಳಗಾಗಿ ವಿತರಿಸಲು ಒಪ್ಪಿಗೆ ಸೂಚಿಸಿತು. CARICOM ಪಾಸ್‌ಪೋರ್ಟ್‌‌‌‌‌‌ಗಳ ವಿತರಣೆಯು OECS ಪಾಸ್‌ಪೋರ್ಟ್‌‌‌‌‌‌ಗಳ ವಿತರಣೆಯ ಕಾರ್ಯದ ಸೋಲಿನಿಂದ ಪ್ರಾರಂಭವಾದಂತಾಯಿತು. CARICOM ಪಾಸ್‌ಪೋರ್ಟ್‌‌‌‌‌‌ಗಳು ಜನವರಿ ೨೦೦೫ರಲ್ಲಿ ಸುರಿನಾಮೆನಿಂದ ಪರಿಚಯಿಸಲ್ಪಟ್ಟಿತು.ಆದ್ದರಿಂದ OECS ಪಾಸ್‌ಪೋರ್ಟ್‌‌‌‌‌‌ಗಳ ವಿತರಣಾ ಯೋಜನೆಯು ಕೈಬಿಡಲ್ಪಟ್ಟಂತಾಯಿತು. ಒಂದು ವೇಳೆ OECS ಪಾಸ್‌ಪೋರ್ಟ್‌‌‌‌‌‌ಗಳನ್ನು ವಿತರಿಸಲ್ಪಟ್ಟಾಗ್ಯೂ, ಅದನ್ನು ಆರ್ಥಿಕ ನಾಗರೀಕರಿಗೆ OECS ರಾಜ್ಯದ ಒಳಗಡೆ ನೀಡಲ್ಪಡಲಿಲ್ಲ.

ಈ ಪ್ರನಾಳಿಕೆಯನ್ನು ಕುಸ್ಕೊ, ಪೆರುಗಳಲ್ಲಿ ಅಳವಡಿಸಲ್ಪಟ್ಟಿತು. ಉತ್ತರ ಅಮೇರಿಕಾದ ರಾಷ್ಟ್ರಗಳಲ್ಲಿನ ಒಕ್ಕೂಟವನ್ನು ಸ್ಥಾಪಿಸುವುದರೊಂದಿಗೆ ಸಾಮಾನ್ಯ ಮಾದರಿಯ ಪಾಸ್‌ಪೋರ್ಟ್‌‌‌‌‌‌ಗಳನ್ನು ಹೊಂದುವುದಕ್ಕೆ ಸಹಿ ಹಾಕಿದರು, ಆದರೆ ಇವು ಬಹಳ ಕಾಲದ ವರೆಗೆ ಮುಂದುವರಿಯಲ್ಪಡತಕ್ಕವುಗಳಾಗಿವೆ. ಈಗಾಗಲೇ ಕೆಲವು ಸ್ಥಳಿಯ ಮತ್ತು ಮೆಕ್ರೊಸರ್‌ ಮತ್ತು ಅಂಡೆಯನ್‌ ಸಮುದಾಯದ ರಾಷ್ಟ್ರಗಳಂತಹ ಉಪ-ಸಮುದಾಯದ ಸದಸ್ಯ ರಾಷ್ಟ್ರಗಳು ಅವುಗಳ ಅಧಿಕೃತ ಹೆಸರುಗಳುಳ್ಳ ಗುರುತಿನ ಚೀಟಿಯನ್ನು ಅವುಗಳ ಮೊಹರಿನೊಂದಿಗೆ ಮತ್ತು ಉಪ ಸಮುದಾಯದ ಹೆಸರಿನೊಂದಿಗೆ ಪ್ರಕಟಿಸಿವೆ. ಉದಾಹರಣೆಗೆ ಫೆರಾಗ್ವೇ ಮತ್ತು ಇಕ್ವೆಡಾರ್‌‌ಗಳಲ್ಲಿ ಅಳವಡಿಸಲಾಗಿದೆ.

೨೦೦೧ರಲ್ಲಿ ಅಂಡೆಯನ್‌ ಸಮುದಾಯದ ರಾಷ್ಟಗಳು ಸಾಮಾನ್ಯ ಮಾದರಿಯ ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡಲು ಪ್ರಾರಂಭಿಸಿದವು. ೨೦೦೨ರಲ್ಲಿ ನಡೆದ ಅಂತರಾಷ್ಟ್ರೀಯ ಮಂತ್ರಿಗಳ ಸಂಘಟನೆಯ ಸಭೆಯಲ್ಲಿ ಸಾಮಾನ್ಯ ಮಾದರಿಯ ಪಾಸ್‌ಪೋರ್ಟ್‌‌‌‌‌‌ಗಳನ್ನು ನೀಡುವುದರ ಬಗೆಗಿನ ರೂಪುರೇಷೆಗಳನ್ನು ವಿವರಿಸಲಾಯಿತು.[೧೫] ಅದರ ಸದಸ್ಯ ರಾಷ್ಟ್ರಗಳೂ ಕೂಡ ಸ್ಪಾನಿಷ್‌ ಬಾಷೆಯಲ್ಲಿ ಮುದ್ರಿತವಾದ (ಕಮ್ಯೂನಿಡೆಡ್‌ ಎಂಡಿನಾ )ಹೊಸ ಅಂಡೆಯನ್‌ ಪಾಸ್‌ಪೋರ್ಟ್‌‌‌‌‌‌ಗಳನ್ನು ವಿತರಿಸಲು ಜನವರಿ ೨೦೦೫ರಲ್ಲಿ ಒಪ್ಪಿಕೊಂಡವು. ಈ ಮೊದಲು ವಿತರಿಸಿದ ಪಾಸ್‌ಪೋರ್ಟ್‌‌‌‌‌‌ಗಳನ್ನು ಮೊದಲು ನೀಡಿದ ಅಂತಿಮ ದಿನಾಂಕದ ವರೆಗೂ ಬಳಸಿಕೊಳ್ಳಬಹುದೆಂದು ಸೂಚಿಸಲಾಯಿತು. ಎಂಡೆಯನ್‌ ಪಾಸ್‌ಪೋರ್ಟ್‌‌‌‌‌‌ಗಳು ಸದ್ಯ ಇಕ್ವೆಡಾರ್‌‌ ಮತ್ತು ಪೆರುದಲ್ಲಿ ಬಳಸಲ್ಪಡುತ್ತಿದೆ. ಬೊಲಿವಿಯಾ ಮತ್ತು ಕೊಲಂಬಿಯಾಗಳು ಎಂಡಿಯನ್‌ ಪಾಸ್‌ಪೋರ್ಟ್‌‌‌‌‌‌ವನ್ನು ೨೦೦೬ ನೀಡಲು ಪ್ರಾರಂಭಿಸುತ್ತಿವೆ. ಎಂಡಿಯನ್‌ ಪಾಸ್‌ಪೋರ್ಟ್‌‌‌‌‌‌ಗಳು ಚಿನ್ನದ ಬಣ್ಣದಲ್ಲಿ ಅಕ್ಷರಗಳನ್ನು ಹೊಂದಿದ್ದು ತಿಳಿಕೆಂಪು ಬಣ್ಣದಲ್ಲಿರುತ್ತವೆ. ಮೇಲೆ ರಾಷ್ಟ್ರೀಯ ಮುದ್ರೆಯನ್ನು ಹೊಂದಿದ್ದು ಸಂಸ್ಥೆಯ ಹೆಸರನ್ನು ಸ್ಪಾನಿಷ್‌ ಬಾಷೆಯಲ್ಲಿ ಬರೆದಿರುತ್ತದೆ.ಅವುಗಳನ್ನು ಪಾಸ್‌ಪೋರ್ಟ್‌‌‌‌‌‌ನ ಮಧ್ಯದಲ್ಲಿ ಮತ್ತು ದೊಡ್ಡದಾಗಿ ಮುದ್ರಿಸಲಾಗುತ್ತದೆ. ಮುದ್ರೆಯ ಕೆಳಭಾಗದಲ್ಲಿ ಸದಸ್ಯ ರಾಷ್ಟ್ರದ ಅಧಿಕೃತ ಹೆಸರನ್ನು ಬರೆಯಲಾಗುತ್ತದೆ. ಹೊದಿಕೆಯ ಕೆಳಭಾಗದಲ್ಲಿ ಪಾಸ್‌ಪೋರ್ಟ್‌‌‌‌‌‌ ಎಂಬ ಅರ್ಥವನ್ನು ಸೂಚಿಸುವ ಸ್ಪಾನಿಷ್‌ನಲ್ಲಿ "pasaporte"ಎಂದು ಬರೆದಿರುತ್ತದೆ ಮತ್ತು ಇಂಗ್ಲಿಷ್‌ನಲ್ಲಿಯೂ ಬರೆದಿರುತ್ತದೆ. ವೆನೆಜುಯೆಲಾ ಎಂಡೆಯನ್‌ ವರ್ಗವನ್ನು ಬಿಟ್ಟಿದ್ದು ಅವು ಇನ್ನು ಬಹಳಕಾಲ ಎಂಡೆಯನ್‌ ಪಾಸ್‌ಪೋರ್ಟ್‌‌‌‌‌‌ಗಳನ್ನು ಬಿಡುಗಡೆ ಮಾಡುವುದಿಲ್ಲ.

ರಾಷ್ಟ್ರೀಯ ಸ್ಥಾನಮಾನ

ಬದಲಾಯಿಸಿ
 
ಚೀನಾದ ಪಾಸ್‌ಪೋರ್ಟ್‌‌‌‌ ಕ್ಯಿಂಗ್‌ ಸಾಮ್ರಾಜ್ಯದಿಂದ ಬಂದದ್ದು. ಗ್ವುವಾಂಕ್ಸೂ ಆಡಳಿತದ 24ನೇ ವರ್ಷ.(1898)

ಪಾಸ್‌ಪೋರ್ಟ್‌ಗಳು ಅವುಗಳನ್ನು ಹೊಂದಿರುವವರ ರಾಷ್ಟ್ರೀಯತೆಯ ಬಗೆಗಿನ ವಿವರಗಳನ್ನು ಒಳಗೊಂಡಿರುತ್ತದೆ. ಹಲವು ದೇಶಗಳಲ್ಲಿ ಒಂದೇ ಬಗೆಯ ರಾಷ್ಟ್ರೀಯತೆಯನ್ನು ಎಲ್ಲ ತನ್ನ ನಾಗರೀಕರಿಗೂ ನೀಡಲಾಗಿರುತ್ತದೆ.ಮತ್ತು ಒಂದೆ ತರಹದ ಸಾಮಾನ್ಯ ಮಾದರಿಯ ಪಾಸ್‌ಪೋರ್ಟ್‌ಗಳನ್ನು ಎಲ್ಲ ನಾಗರೀಕರಿಗೂ ನೀಡುವ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದಕ್ಕೆ ಹೊರತಾಗಿ ಇರುವ ಹಲವಾರು ಬಗೆಯ ಅಪವಾದಗಳೆಂದರೆ:

ಒಂದೇ ದೇಶದಲ್ಲಿನ ಹಲವಾರು ಬಗೆಯ ನಾಗರಿಕತೆಗಳು

ಬದಲಾಯಿಸಿ

ಹಲವಾರು ಬಗೆಯ ರಾಷ್ಟ್ರೀಯತೆಯನ್ನು ನೀಡುವ ದೇಶದಲ್ಲಿ ಅವು ನೋಡಲು ಒಂದೇ ತರಹ ಕಾಣಿಸುವ ಆದರೆ ರಾಷ್ಟ್ರೀಯ ಸ್ಥಿತಿತ್ವಗಳನ್ನು ಬೇರೆ ಬೇರೆಯಾಗಿ ಸೂಚಿಸುವ ರೀತಿಯಲ್ಲಿ ಪಾಸ್‌ಪೋರ್ಟ್‌ಗಳನ್ನು ವಿತರಿಸಬಹುದಾಗಿದೆ. ಬ್ರಿಟಿಷ್‌ ವಸಾಹತು ಕಾಲ ಅಥವಾ ಅದಕ್ಕೆ ಸಮಕಾಲಿನವಾದ ಕಾನೂನುಗಳ ಪ್ರಕಾರ ಯುನೈಟೆಡ್‌ ಕಿಂಗ್‌ಡಮ್‌ ಹಲವಾರು ಬಗೆಯ ಸ್ಥಿತಿತ್ವವನ್ನು ಸೂಚಿಸುವ ರಾಷ್ಟ್ರೀಯತೆಗಳನ್ನು ಹೊಂದಿದ್ದವು. ಮತ್ತು ಯುನೈಟೆಡ್‌ ಕಿಂಗ್‌ಡಮ್‌ನ ಜನತೆಗೆ ಒಂದಕ್ಕಿಂತ ಹೆಚ್ಚು ಸಂಬಂಧಗಳು ಇದ್ದವು. ಹಲವು ಬಗೆಯ ವಿಧಗಳು ಮತ್ತು ಸಂಬಂಧಗಳು ಹೊರದೇಶದ ಕಾನೂನುಗಳನ್ನು ಅವಲಂಬಿಸಿ ಇರುತ್ತಿದ್ದವು ಮತ್ತು ಬೇರೆ ಬೇರೆ ಕಾರಣಗಳಿಗಾಗಿ ಪ್ರವೇಶ ಪಡೆಯುವ ಅಗತ್ಯತೆಯು ಇರುವ ಕಾರಣದಿಂದ ಬೇರೆ ರೀತಿಯ ಯು.ಕೆ ಪಾಸ್‌ಪೋರ್ಟ್‌ನ್ನು ಹೊಂದುವುದು ಅನಿವಾರ್ಯವಾಗಿತ್ತು.

ಬೇರೆ ಬೇರೆ ದೇಶಗಳಲ್ಲಿ ಒಂದೇ ರೀತಿಯ ರಾಷ್ಟ್ರೀಯತೆ

ಬದಲಾಯಿಸಿ

ಒಂದೇ ದೇಶದಲ್ಲಿ ಹಲವು ರೀತಿಯ ನಾಗರೀಕತೆಯನ್ನು ಹೊಂದುವುದರ ಬದಲಾಗಿ ಒಂದೇ ರೀತಿಯ ನಾಗರೀಕತೆಯು ಹಲವಾರು ದೇಶಗಳಲ್ಲಿ ಇರಬಹುದಾಗಿದೆ. ಉದಾಹರಣೆಗೆ ಒಂದೇ ವಿಧದ ರಾಷ್ಟ್ರೀಯತೆಯು ನೆದರ್‌ಲ್ಯಾಂಡ್‌ ಸಾಮ್ರಾಜ್ಯದಲ್ಲಿ ಮತ್ತು ಡೆನ್ಮಾರ್ಕ್‌‌ನ ಮೂರು ದೇಶಗಳಲ್ಲಿ ಹೂಡಿಕೆಯ ಆದಾರದ ಮೇಲೆ ಕಾಣಬಹುದಾಗಿದೆ(ಆದಾಗ್ಯೂ ಫರೊ ದೇಶದ ಜನತೆಯು ವಿಶೇಷ ಸ್ಥಿತಿತ್ವವನ್ನು ಹೊಂದಿದೆ).

ಹೂಡಿಕೆ ಮೂಲಕ ವಿಶೇಷ ರಾಷ್ಟ್ರೀಯತೆ ತರಗತಿ

ಬದಲಾಯಿಸಿ

ಕೆಲವು ಸಂದರ್ಭಗಳಲ್ಲಿ ರಾಷ್ಟ್ರೀಯತೆಯನ್ನು ಹೂಡಿಕೆಯ ಆದಾರದ ಮೇಲೆ ನೀಡಲಾಗುತ್ತದೆ. ಟೋಂಗಾನಲ್ಲಿನ ಕೆಲವು ಹೂಡಿಕೆದಾರರ ಪಾಸ್‌ಪೋರ್ಟ್‌ಗಳ ಮೇಲೆ "ಟೋಂಗಾ ಪ್ರೊಟೆಕ್ಟೆಡ್‌ ಪರ್ಸನ್‌" ಎಂಬ ವಕ್ಕಣಿಕೆಯಿಂದ ವರ್ಣಿಸಲಾಗುತ್ತದೆ. ಈ ಸ್ಥಿತಿತ್ವದಿಂದಾಗಿ ಟೋಂಗಾನೊಳಗೆ ಒಯ್ಯುವ ಅವಶ್ಯಕತೆ ಇರುವುದಿಲ್ಲ.[೧೬] ಹಲವಾರು ದೇಶಗಳು ಟೊಂಗಾದ ನಾಗರೀಕತ್ವವನ್ನು ದಾಖಲಿಸಿರುವ ಟೋಂಗಾದ ಪಾಸ್‌ಪೋರ್ಟ್‌ನ್ನು ಒಪ್ಪಿಕೊಂಡಿದ್ದರೂ ಸಹ "ಟೋಂಗಾ ಪ್ರೊಟೆಕ್ಟೆಡ್‌ ಪರ್ಸನ್‌" ಎಂಬ ಸ್ಥಾನಮಾನವುಳ್ಳ ಪಾಸ್‌ಪೋರ್ಟ್‌ಗಳನ್ನು ಮಾನ್ಯಮಾಡುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಒಂದೇ ರಾಷ್ಟ್ರೀಯತೆಯಡಿಯಲ್ಲಿ ಹಲವಾರು ಪಾಸ್‌ಪೋರ್ಟ್‌ಗಳು

ಬದಲಾಯಿಸಿ

ಚೀನಾದ ಮಧ್ಯ ದೇಶದ ಸರ್ಕಾರವಾದ ಪೀಪಲ್ಸ್‌ ರಿಪಬ್ಲಿಕ್‌ ಆಪ್‌ ಚೈನಾ(PRC)ಯು ತನ್ನ ವಿಶೇಷ ಆಡಳಿತವುಳ್ಳ ಪ್ರದೇಶಗಳಾದ ಹಾಂಗ್‌ಕಾಂಗ್‌ ಮತ್ತು ಮಕಾವುಗಳಲ್ಲಿನ ಸ್ಥಳಿಯರಿಗಾಗಿ ವಿಶೇಷವಾದ ಪಾಸ್‌ಪೋರ್ಟ್‌ಗಳನ್ನು ನೀಡಲು ಅನುಮತಿಯನ್ನು ಹೊಂದಿದ್ದು ಇದು ಒಂದೇ ಚೀನಾ ರಾಷ್ಟ್ರೀಯತೆಯನ್ನು ಹೊಂದಿದಲ್ಲಿ ಕಾಣಸಿಗುವ ಎರಡು ನಮೂನೆಯ ವ್ಯವಸ್ಥೆಗಳಾಗಿವೆ. ಅಲ್ಲಿನ ಅಂತರಾಷ್ಟ್ರೀಯ ನೀತಿಯು ಹಾಂಗ್‌ಕಾಂಗ್‌ ಮತ್ತು ಮಕಾವುದಲ್ಲಿನ ಸ್ಥಳಿಯರು ಪಡೆಯುವ ಪಾಸ್‌ಪೋರ್ಟ್‌ಗಳು ಚೀನಾದಲ್ಲಿನ ಉಳಿದ ಪಾಸ್‌ಪೋರ್ಟ್‌ಗಳಿಂದ ಬಿನ್ನವಾಗಿದೆಯೆಂದು ಅನುಮತಿಯನ್ನು ನೀಡಿದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಎಲ್ಲ ಸದಸ್ಯರೂ ಕೂಡ ಚೀನಾದ ನಾಗರೀಕರೆಂದು ಮಾನ್ಯತೆಯನ್ನು ಪಡೆದಿದ್ದಾರೆ. (ಚೀನಾದ ರಾಷ್ಟ್ರೀಯತೆಯ ಸ್ಥಿತಿತ್ವವನ್ನೇ ಹೊಂದಿರುತ್ತಾರೆ ಮತ್ತು CHNಎಂಬ ಉಳಿದವರಿಗೆ ನೀಡುವ ಪಾಸ್‌ಪೋರ್ಟ್‌ ನೀಡಿದ ದೇಶದ ಸಂಕೇತವನ್ನು ಹೊಂದಿರುತ್ತದೆ.)ಪೀಪಲ್ಸ್‌ ರಿಪಬ್ಲಿಕ್ ಆಫ್‌ ಚಿನಾದ ರಾಷ್ಟ್ರೀಯ ಕಾನೂನಿನ ಪ್ರಕಾರ ಹಾಂಗ್‌ ಕಾಂಗ್‌ನಲ್ಲಿ ಅಥವಾ ಮಕಾವುಗಳಲ್ಲಿ ಖಾಯಂ ವಾಸ್ಥವ್ಯ ಹೊಂದಿರುವವರು ಚೀನಾದ ನಾಗರೀಕರಲ್ಲದೆಯೂ ಚೀನಾದ ರಾಷ್ಟ್ರೀಯತೆಯನ್ನು ಹೊಂದಿರುತ್ತಾರೆ.

ಸಾರ್ವಭೌಮ ಪ್ರದೇಶವಿಲ್ಲದ ಪಾಸ್‌ಪೋರ್ಟ್‌‌‌‌ಗಳು

ಬದಲಾಯಿಸಿ

ಸಾರ್ವಭೌಮ ಪ್ರದೇಶವಲ್ಲದ ಅನೇಕ ರಾಜ್ಯ ಘಟಕಗಳು ಸಹಾ ಪಾಸ್‌ಪೋರ್ಟ್‌‌‌‌ಗಳನ್ನು ನೀಡುತ್ತವೆ, ಅದರಲ್ಲಿ ಪ್ರಮುಖವಾಗಿ ಇರಾಕಾಯಿಸ್ ಲೀಗ್[೧೭][೧೮] ಮತ್ತು ಸಾವರಿನ್ ಮಿಲಿಟರಿ ಆರ್ಡರ್ ಆಫ್ ಮಾಲ್ಟಾ.[೧೯]

ಪಾಸ್‌ಪೋರ್ಟ್‌‌‌‌ ನೀಡುವಿಕೆಯ ಕುರಿತಾದ ರಾಷ್ಟ್ರೀಯ ನಿಯಮಗಳು

ಬದಲಾಯಿಸಿ

ಪಾಕೀಸ್ತಾನದಲ್ಲಿ ಪಾಸ್‌ಪೋರ್ಟ್‌‌‌‌ ಬಯಸಿ ಅರ್ಜಿ ಹಾಕುವ ಒಬ್ಬ ಮುಸ್ಲಿಮ್‌ ನಾಗರೀಕನು ಈ ಕೆಳಗಿನ ಘೋಷಣೆ ಮಾಡಬೇಕು:

  1. ನಾನೊಬ್ಬ ಮುಸ್ಲಿಮ್‌ ಆಗಿದ್ದು, ನಾನು ಕೊನೆಯ ಪ್ರವಾದಿಯಾದ ಮಹಮ್ಮದ್ ರ ಸಂಪೂರ್ಣ ಮತ್ತು ಬೇಷರತ್ತಾದ ಪ್ರವಾದಿತ್ವದ ಕುರಿತು ಸಂಪೂರ್ಣವಾಗಿ ನಂಬಿಕೆ ಇಟ್ಟಿದ್ದೇನೆ.
  2. ಇನ್ಯಾರೇ ಆದರೂ ತಾನು ಪ್ರವಾದಿ ಮೊಹಮ್ಮದ್ ನಂತರದ ಪ್ರವಾದಿ ಎಂಬುದಾಗಿ ಯಾವುದೇ ರೀತಿಯ ಶಬ್ದಗಳನ್ನು ಬಳಸಿ ಅಥವಾ ವಿವರಗಳಲ್ಲಿ ಹೇಳಿಕೊಂಡರೆ ಅಂತಹ ಹೇಳಿಕೊಳ್ಳುವರನ್ನು ನಾನು ಮುಸ್ಲೀಮನಾಗಿ ಆತನನ್ನು ಪ್ರವಾದಿ ಎಂಬುದಾಗಿ ಅಥವಾ ಒಬ್ಬ ಧಾರ್ಮಿಕ ಸುಧಾರಕ ಎಂದು ಹೇಳಿಕೊಂಡರೆ ಆತನನ್ನು ನಾನು ಗುರುತಿಸುವುದಿಲ್ಲ.
  3. ನಾನು ಮಿರ್ಜಾ ಗುಲಾಮ್ ಅಹ್ಮದ್ ಖದಿಯಾನಿ ಒಬ್ಬ ವೇಷಧಾರಿ ಪ್ರವಾದಿ ಮತ್ತು ಒಬ್ಬ ನಾಸ್ತಿಕ ಎಂದು ಪರಿಗಣಿಸುತ್ತೇನಲ್ಲದೇ ಆತನ ಅನುಯಾಯಿಗಳು, ಅವರು ಲಾಹೋರಿ, ಖದಿಯಾನಿ ಅಥವಾ ಮಿರ್ಜಾಯಿ ಗುಂಪಾಗಿರಲಿ, ಅವರನ್ನು ಮುಸ್ಲಿಮ್‌-ಅಲ್ಲ ಎಂದು ಪರಿಗಣಿಸುತ್ತೇನೆ.

ಈ ಪ್ರಕಟಣೆಯನ್ನು ಮಹಮ್ಮದ್‌ ಜಿಯಾ ಉಲ್‌ಹಕ್‌ ಇಸ್ಲಾಮಿ ಮಿಲಿಟರಿ ಪಡೆ ಜಾರಿಗೆ ತಂದಿತ್ತು. ಇದಕ್ಕೆ ಕಾರಣವೆಂದರೆ ಕ್ವಾದಿಯಾನಿಸ್ ಎಂದು ಕರೆಯಲ್ಪಡುವ ಅಹಮ್ಮದೀಯರನ್ನು ಮೆಕ್ಕಾ ಅಥವಾ ಮೆದಿನಾಗೆ ಹಜ್ ಅಥವಾ ಉಮ್‌ರಾಹ್ ಸಲುವಾಗಿ ಹೋಗುವುದನ್ನು ತಪ್ಪಿಸುವುದು ಆಗಿತ್ತು. ಪಾಕಿಸ್ಥಾನಿ ಪಾಸ್‌ಪೋರ್ಟ್‌ನ ಬಯೋಮೆಟ್ರಿಕ್ ಪ್ರಕಾರದಲ್ಲಿ ಪಾಸ್‌ಪೋರ್ಟ್‌ ಪಡೆದುಕೊಳ್ಳುವವನ ಧರ್ಮವನ್ನು ತಿಳಿಸುವ ಸಲುವಾಗಿ ಯಾವುದೇ ಬಾಕ್ಸ್‌ ನೀಡಲಾಗಿಲ್ಲ. ಇದು ಧಾರ್ಮಿಕತೆಯನ್ನು ತಿಳಿಸುವುದು ಅಗತ್ಯ ಇಲ್ಲ ಎಂಬುದನ್ನು ಸೂಚಿಸುತ್ತದೆ. ಅದೇನೆ ಇದ್ದರೂ ಈ ವಿವರವನ್ನು ತಿಳಿಸುವ ಬಾಕ್ಸ್ ಅನ್ನು ಪಾಕಿಸ್ಥಾನಿ ಸರ್ಕಾರದಿಂದ ವಿರುದ್ಧಾತ್ಮಕವಾಗಿಸಿತ್ತು ಕಾರಣ ಧರ್ಮವನ್ನೇ ಮೂಲವಾಗಿರಿಸಿಕೊಂಡ ಪಕ್ಷಗಳ ಒತ್ತಡಕ್ಕೆ ಮಣಿದು ಈ ರೀತಿ ಮಾಡಿತ್ತು. ಪಾಸ್‌ಪೋರ್ಟ್‌ಗಳು ಧರ್ಮದ ಕುರಿತಾದ ವಿವರಣೆಯನ್ನು ಮೂರನೇ ಪುಟದಲ್ಲಿ ಹೊಂದುವಂತಾಯಿತು. ಪಾಸ್‌ಪೋರ್ಟ್ ಹೊಂದಿರುವವನ ಧರ್ಮದ ವಿವರಣೆ ಇಲ್ಲದ ಪಾಸ್‌ಪೋರ್ಟ್‌ಗಳಲ್ಲಿ ಧರ್ಮದ ಕುರಿತಾದ ವಿವರಣೆ ನೀಡಲು ರಬ್ಬರ್ ಸ್ಟ್ಯಾಂಪ್‌ಗಳನ್ನು ಬಳಸಲಾಯಿತು. ಹೀಗಿದ್ದರೂ ಕೂಡ ಕಂಪ್ಯೂಟರೀಕೃತ ಪಾಕಿಸ್ಥಾನಿ CNIC ಪಾಸ್‌ಪೋರ್ಟ್‌ನಲ್ಲಿ (ಕಂಪ್ಯೂಟರೈಸ್ಡ್ ನ್ಯಾಷನಲ್ ಐಡೆಂಟಿಟಿ ಕಾರ್ಡ್) [೨೦] ಧರ್ಮದ ಕುರಿತಾದ ವಿವರಣೆಗೆ ಅವಕಾಶವಿಲ್ಲ.

ಫಿನ್‌ಲ್ಯಾಂಡ್‌ನಲ್ಲಿ ೧೮ರಿಂದ ೩೦ ವರ್ಷದೊಳಗಿನ ಪುರುಷ ನಾಗರೀಕರು ತಾವು ಕಡ್ಡಾಯವಾದ ಮಿಲಿಟರಿ ಸೇವೆಯನ್ನು ಪೂರೈಸಿದ್ದೇವೆ ಅಥವಾ ಅದರಿಂದ ಮೀಸಲಾತಿ ಪಡೆಸಿದ್ದೇವೆ ಎಂಬುದನ್ನು ಸಮರ್ಥಿಸಿಕೊಂಡರೆ ಮಾತ್ರ ಫಿನ್ನಿಷ್‌ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಬಹುದಾಗಿದೆ. ಒಂದೊಮ್ಮೆ ಅವರು ಸೇವೆಯನ್ನು ಈವರೆಗೆ ಪೂರೈಸದಿದ್ದಲ್ಲಿ, ಪಾಸ್‌ಪೋರ್ಟ್‌ ಅನ್ನು ೨೮ ವರ್ಷಗಳವರೆಗಿನದ್ದಾಗಿ ಮಾತ್ರ ನೀಡಲಾಗುತ್ತದೆ. ಅಲ್ಲದೆ ಅವರು ದೇಶವನ್ನು ಹಾಗೂ ಮರುಭೂಮಿ ಪ್ರದೇಶಗಳಿಗೆ ಹಾರಾಟ ನಡೆಸುವ ಹಾಗಿಲ್ಲ ಎಂಬುದಾಗಿ ನೀಡಲಾಗುತ್ತದೆ.[೨೧]

ಸರ್ಕಾರದ ಆಸ್ತಿಯಾಗಿ ಪಾಸ್‌ಪೋರ್ಟ್‌ಗಳು

ಬದಲಾಯಿಸಿ

ಪಾಸ್‌ಪೋರ್ಟ್‌‌‌ ಒಂದು ಸರಕಾರಿ ಆಸ್ತಿಯೆಂದು ಬಹುತೇಕ ರಾಷ್ಟ್ರಗಳು ಕಾನೂನಿನ ಮೂಲಕ ಘೋಷಿಸಿವೆ. ಇದು ಯಾವುದೇ ಸಮಯದಲ್ಲಿ, ನಿದಿಷ್ಟ ನೆಲೆಗಟ್ಟಿನ ಆಧಾರದ ಮೇಲೆ ಇದನ್ನು ಸೀಮಿತಗೊಳಿಸಬಹದು ಅಥವಾ ಹಿಂಪಡೆಯಬಹುದು. ಮೀತಿ ಅಥವಾ ಹಿಂಪಡೆಯುವ ಕ್ರಮವು ಸಾಮಾನ್ಯವಾಗಿ ಕಾನೂನು ವ್ಯಾಪ್ತಿಗೆ ಒಳಪಡುತ್ತದೆ.

ಪಾಸ್‌ಪೋರ್ಟ್‌‌‌‌ಗಳು ಮತ್ತು ಜಾಮೀನು

ಬದಲಾಯಿಸಿ

ಹಲವು ದೇಶಗಳಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ ಪಾಸ್‌ಪೋರ್ಟ್‌‌‌‌ನ್ನು ಹಾಜರುಪಡಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ವ್ಯಕ್ತಿಯು ಜಾಮೀನು ಪಡೆದಿದ್ದರೆ ಆತ ಪಾಸ್‌ಪೋರ್ಟ್‌‌‌‌ಗೆ ಅರ್ಜಿ ಸಲ್ಲಿಸುವುದು ಅಥವಾ ಈ ಮೊದಲೇ ಅರ್ಜಿ ಸಲ್ಲಿಸಿದ್ದರೆ ಪಾಸ್‌ಪೊರ್ಟ್ ಪಡೆಯುವುದನ್ನು ತಡೆಹಿಡಿಯಲಾಗುತ್ತದೆ.

ಒರ್ವ ವ್ಯಕ್ತಿಗೆ ಒಂದು ಪಾಸ್‌ಪೋರ್ಟ್‌‌‌

ಬದಲಾಯಿಸಿ

ಬಹುತೇಕ ರಾಷ್ಟ್ರಗಳು ತನ್ನ ಪ್ರಜೆಗೆ ಕೇವಲ ಒಂದು ಪಾಸ್‌ಪೋರ್ಟ್‌‌‌‌ನ್ನು ಮಾತ್ರ ನೀಡುತ್ತದೆ. ಪಾಸ್‌ಪೋರ್ಟ್‌‌‌‌ದಾರರು ಹೊಸ ಪಾಸ್‌ಪೋರ್ಟ್‌‌‌‌ಗಾಗಿ (ಪ್ರಸ್ತುತ ಇರುವ ಪಾಸ್‌ಪೋರ್ಟ್‌‌‌‌ನ ವಾಯಿದೆ ಮುಕ್ತಾಯ ಅಥವಾ ಪಾಸ್‌ಪೋರ್ಟ್‌‌‌‌ನಲ್ಲಿ ಖಾಲಿ ಪುಟಗಳು ಇಲ್ಲದಿದ್ದ ಪಕ್ಷದಲ್ಲಿ) ಅರ್ಜಿ ಸಲ್ಲಿಸುವುದಾದರೆ ಅವರು ತಮ್ಮ ಹಳೆಯ ಪಾಸ್‌ಪೋರ್ಟ್‌‌‌‌ನ್ನು ಅನೂರ್ಜಿತಗೊಳಿಸಲು ಹಾಜರುಪಡಿಸಬೇಕಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅವಧಿ ಮುಕ್ತಾಯಗೊಂಡಿದ್ದರೆ ಪಾಸ್‌ಪೋರ್ಟ್‌‌‌‌ನ್ನು ಹಾಜರುಪಡಿಸುವ ಅಥವಾ ಅನೂರ್ಜಿತಗೊಳಿಸುವ ಅಗತ್ಯವಿರುವುದಿಲ್ಲ (ಉದಾಹರಣೆಗೆ ಇದು ಅವಧಿ ಮುಗಿಯದ ವೀಸಾವನ್ನು ಹೊಂದಿದ್ದರೆ).

ನಿರ್ದಿಷ್ಟ ಕಾರಣಗಳಿಗಾಗಿ ಪ್ರಜೆಯೊರ್ವ ಒಂದಕ್ಕಿಂತ ಹೆಚ್ಚು ಪಾಸ್‌ಪೋರ್ಟ್‌‌‌‌ನ್ನು ಹೊಂದಲು ಕೆಲವು ದೇಶಗಳು ಅವಕಾಶ ಮಾಡಿಕೊಡುತ್ತವೆ. ಪಾಸ್‌ಪೋರ್ಟ್‌‌‌‌ನಲ್ಲಿರುವ ಸ್ಟಾಂಪ್ ಅನರ್ಹವಾಗಿರುವುದು ಒಂದು ಸಂದರ್ಭವಾಗಿದ್ದು, ಈ ರೀತಿಯ ಸ್ಟಾಂಪ್‌ನಲ್ಲಿ ಇಸ್ರೇಲ್ ಪ್ರಯಾಣವನ್ನು ತೋರಿಸುತ್ತದೆ ಮತ್ತು ಪ್ರಜೆಯು ದೇಶವೊಂದಕ್ಕೆ ಪ್ರಯಾಣದ ಉದ್ದೇಶ ಹೊಂದಿದ್ದು, ಆಗ ಇಸ್ರೇಲ್ ಇದನ್ನು ಪರಿಗಣಿಸುವುದಿಲ್ಲ. ಇನ್ನೊಂದು ಸನ್ನಿವೇಶವೆಂದರೆ ಪದೇ ಪದೇ ವಿದೇಶಿ ಪ್ರಯಾಣವನ್ನು ವೀಸಾ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು ರಕ್ಷಿಸುತ್ತದೆ. ನಿರ್ದಿಷ್ಟ ದೇಶಕ್ಕೆ ಪ್ರಯಾಣಿಸಲು ವೀಸಾಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯು ಎರಡು ಪಾಸ್‌ಪೋರ್ಟ್‌‌‌ ಹೊಂದಿದ್ದರೆ, ಎರಡನೇ ಪಾಸ್‌ಪೋರ್ಟ್‌‌‌‌ನಲ್ಲಿ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಸಾಧ್ಯವಿದೆ. ಈ ಉದ್ದೇಶಕ್ಕಾಗಿ ಕೆಲವು ದೇಶಗಳು ನೆರೆಹೊರೆಯ ಒಂದು ಅಥವಾ ಹೆಚ್ಚು ದೇಶಗಳಿಗೆ ಪಾಸ್‌ಪೋಟ್‌ನಲ್ಲಿ ಪ್ರಯಾಣಿಸುವ ವಿಚಾರದಲ್ಲಿ ನಿರ್ಬಂಧಿತ ಪಾಸ್‌ಪೋರ್ಟ್‌ಗಳನ್ನು ನೀಡುತ್ತವೆ. ಆಗ ಇಂಥ ಸಂದರ್ಭದಲ್ಲಿ ಆಗಾಗ ನೆರೆ ದೇಶಗಳಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಒಬ್ಬ ವ್ಯಕ್ತಿ ಈ ರೀತಿಯಲ್ಲಿ ಕೆಲವು ದೇಶಗಳಿಗಾಗಿ ನಿರ್ಬಂಧಿತ ಪಾಸ್‌ಪೋರ್ಟ್‌ಗಳನ್ನು ಮತ್ತು ಇತರೆ ದೇಶಗಳಿಗಾಗಿ ಸಾಮಾನ್ಯ ಅಂತರರಾಷ್ಟ್ರೀಯ ಪಾಸ್‌ಪೋರ್ಟ್‌ ಅನ್ನು ಹೊಂದಿರಬಹುದು.[ಸೂಕ್ತ ಉಲ್ಲೇಖನ ಬೇಕು]

ಕೌಟುಂಬಿಕ ಪಾಸ್‌ಪೋರ್ಟ್‌‌‌

ಬದಲಾಯಿಸಿ

ಒಂದು ಸಮಯದಲ್ಲಿ ಪೋಷಕರ ಪಾಸ್‌ಪೋರ್ಟ್‌‌‌‌ನಲ್ಲಿ ಅವರ ಮಕ್ಕಳ ಹೆಸರು ಮತ್ತು ಭಾವಚಿತ್ರವನ್ನು ಹೊಂದಿರುವ ಕುಟುಂಬದ ಪಾಸ್‌ಪೋರ್ಟ್‌‌‌ ನೀಡುವ ಅವಕಾಶ ಇತ್ತು. ಕುಟುಂಬವು ಇಂಥ ಪಾಸ್‌ಪೋರ್ಟ್‌‌‌‌ನಲ್ಲಿ ಮಕ್ಕಳಿಗೆ ತಮ್ಮ ಹೆತ್ತವರೊಂದಿಗೆ ವಿದೇಶಕ್ಕೆ ತೆರಳಲು ಅವಕಾಶವಿತ್ತು. ಹೀಗಾಗಿ ಪ್ರತಿಯೊಂದು ಮಗುವು ಪ್ರತ್ಯೇಕ ಪ್ರತ್ಯೇಕ ಪಾಸ್‌ಪೋರ್ಟ್‌‌‌ ಹೊಂದುವ ಅಗತ್ಯವಿರಲಿಲ್ಲ. ಕುಟುಂಬ ಪಾಸ್‌ಪೋರ್ಟ್‌‌‌‌ನಲ್ಲಿ ಮಕ್ಕಳು ತಮ್ಮ ಹೆತ್ತವರಲ್ಲದೇ ಬೇರೆಯವರೊಂದಿಗೆ ಅಥವಾ ಸ್ವತಃ ಪ್ರಯಾಣಿಸುವಂತಿರಲಿಲ್ಲ. ಇವುಗಳನ್ನು ಭಾರತ, ಯು.ಕೆ, ಆಮೇರಿಕಾ ರಾಷ್ಟ್ರಗಳು ಒಂದೊಮ್ಮೆ ಜಾರಿಗೆ ತಂದಿದ್ದವು. ಆದರೆ ಸ್ವಲ್ಪ ಸಮಯದ ಬಳಿಕ ಇದು ರದ್ದಾಯಿತು. ಆದರೂ, ರಷ್ಯಾದಲ್ಲಿ ಇಂದಿಗೂ ಕುಟುಂಬ ಪಾಸ್‌ಪೋರ್ಟ್‌‌‌ ಚಾಲ್ತಿಯಲ್ಲಿದೆ.[ಸೂಕ್ತ ಉಲ್ಲೇಖನ ಬೇಕು] ಉರುಗ್ವೆ ದೇಶದ ಪಾಸ್‌ಪೋರ್ಟ್‌‌‌‌ನಲ್ಲಿ ಎರಡು ಪುಟಗಳು ಕುಟುಂಬದ ಸದಸ್ಯರ ಭಾವಚಿತ್ರಗಳನ್ನು ಲಗತ್ತಿಸಲು ಮೀಸಲಾಗಿರುತ್ತದೆ. ಈ ಪಾಸ್‌ಪೋರ್ಟ್‌‌‌‌ನಲ್ಲಿ ಗರಿಷ್ಠ ಆರು ಮಕ್ಕಳ ಭಾವಚಿತ್ರ, ಬೆರಳಚ್ಚು ಮತ್ತಿತರ ವಿವರಗಳನ್ನು ದಾಖಲಿಸಲು ಅವಕಾಶವಿದೆ.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಅಂತಾರಾಷ್ಟ್ರೀಯ ಅಪಹರಣ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಮಕ್ಕಳಿಗೆ ಪಾಸ್‌ಪೋರ್ಟ್‌‌‌‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅದರಲ್ಲಿ ಅವರ ತಂದೆ-ತಾಯಿಯರ ಸಹಿ ಕಡ್ಡಾಯವಾಗಿರುತ್ತದೆ. ಆಮೇರಿಕಾದಲ್ಲಿ ೧೬ ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಂದೆ-ತಾಯಿಯ ಸಹಿಯಿಲ್ಲದೆ ಪಾಸ್‌ಪೋರ್ಟ್‌‌‌‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ೧೫ ವರ್ಷಕ್ಕಿಂತ ಕೆಳಗಿನವರು ಪಾಸ್‌ಪೋರ್ಟ್‌‌‌‌ಗೆ ಅರ್ಜಿಸಬೇಕಾದರೆ ತಂದೆ-ತಾಯಿಯರ ಸಹಿ ಕಡ್ಡಾಯವಾಗಿರಬೇಕಾಗುತ್ತದೆ, ಅಥವಾ ಒಬ್ಬರೇ ಭೌತಿಕವಾಗಿ ಸಹಿ ಹಾಕಬೇಕಾದ ಸಂದರ್ಭದಲ್ಲಿ, ಒಂದು ಸುಳ್ಳುಸಾಕ್ಷಿಯ ದಂಡದ ಅಡಿಯಲ್ಲಿ, ಅದಕ್ಕೆ ಕಾರಣವಾದ ಒಂದು ಲಿಖಿತ ಹೇಳಿಕೆಯನ್ನು ಒದಗಿಸಬೇಕಾಗುತ್ತದೆ.

ಪಾಸ್‌ಪೋರ್ಟ್‌‌‌‌ನ ಇತಿಮಿತಿಗಳು

ಬದಲಾಯಿಸಿ
 
ಪ್ರಸ್ತುತ ಬಳಕೆಯಲ್ಲಿರುವ ಬ್ರೆಜಿಲ್‌ನ ಪಾಸ್‌ಪೋರ್ಟ್‌‌‌‌, ಡಿಸೆಂಬರ್‌ 2010ರಲ್ಲಿ ಇದನ್ನು ಅದರ ಕಡು ನೀಲಿ ಕವರ್ ಮತ್ತು ಮೈಕ್ರೊಚಿಪ್ ಒಳಗೊಂಡು ಬಳಕೆಗೆ ತರಲಾಯ್ತು.
 
ತೈವಾನ್ ಕಂಪ್ಯಾಟ್ರಿಯೋಟ್‌ ಎಂಟ್ರಿ ಪರ್ಮಿಟ್, ಪಿಆರ್‌ಸಿಯಿಂದ ಪ್ರಕಟಣೆಗೊಂಡಿದ್ದು. ತೈವಾನ್‌ನ ವಾಸಿಗಳು ಚೀನಾದ ಮೇನ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಲು ಒಪ್ಪಿಗೆ ಪತ್ರ.

ಬಹುತೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ಪ್ರವಾಸ ಮತ್ತು ನ್ಯಾಯ ಸಮ್ಮತ ಪ್ರವೇಶಕ್ಕೆ ಇತರ ದೇಶಗಳ ಪಾಸ್‌ಪೋರ್ಟ್‌‌‌‌ನ್ನು ಸ್ವೀಕರಿಸುತ್ತದೆ. ಆದರೂ, ಕೆಲವೊಂದು ಸಂದರ್ಭದಲ್ಲಿ ದೇಶವೊಂದು ಸಾರ್ವಭೌಮ ರಾಷ್ಟ್ರ ನೀಡಿರುವ ಪಾಸ್‌ಪೋರ್ಟ್‌‌‌‌ನ್ನು ಸ್ವೀಕರಿಸದೆ ಇರಬಹುದು. ಅದೇ ರೀತಿ, ಪಾಸ್‌ಪೋರ್ಟ್‌‌‌ ನೀಡುವ ಸಂದರ್ಭದಲ್ಲಿ ತನ್ನ ಪ್ರಜೆಗಳಿಗೆ ದೇಶವು ನಿರ್ದಿಷ್ಟ ದೇಶಗಳಿಗೆ ಹೋಗದಂತೆ ಸ್ಟಾಂಪ್ ನಿಯಂತ್ರಣವನ್ನು ಹೇರುವ ಸಾಧ್ಯತೆಯಿರುತ್ತದೆ. ಇದಕ್ಕೆ ದುರ್ಬಲ ಅಂತಾರಾಷ್ಟ್ರೀಯ ಸಂಬಂಧ ಅಥವಾ ಬಾಂಧವ್ಯವೇ ಇಲ್ಲದಿರುವುದು ಅಥವಾ ಸುರಕ್ಷತೆ ಮತ್ತು ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು.

ಏಷ್ಯಾ ಚೀನಾ ಮತ್ತು ತೈವಾನ್

ಬದಲಾಯಿಸಿ

ಚೀನಾ ಗಣರಾಜ್ಯದ ಪ್ರಜೆಗಳು (ಆರ್ಒಸಿ, ತೈವಾನ್) ಚೀನಾ ಗಣರಾಜ್ಯದ ಪ್ರಜೆಗಳು (ಆರ್ಒಸಿ, ತೈವಾನ್) ಪೀಪಲ್ಸ್ ರಿಪಬ್ಲಿಕ ಆಫ್ ಚೀನಾ (ಪಿಆರ್‌ಸಿ) ದ ಸಾರ್ವಜನಿಕ ಭದ್ರತಾ ಪ್ರಾಧಿಕಾರ ನೀಡುವ ಗುರುತು ಚೀಟಿಯನ್ನು ಚೀನಾ ಪ್ರಜೆಗಳ ಗಣರಾಜ್ಯಕ್ಕೆ ಪ್ರವೇಶಿಸುವಾಗ ಬಳಸುತ್ತಾರೆ. ಚೀನಾ ಗಣರಾಜ್ಯದ ನಾಗರೀಕರು ತೈವಾನ್‌ಗೆ ಪ್ರವೇಶಿಸುವಾಗ ಚೀನಾ ಗಣರಾಜ್ಯದ ಸರಕಾರ ನೀಡುವ ಗುರುತು ಚೀಟಿಗಳನ್ನು ಮತ್ತು ಅವರ ಮೂಲ ಪ್ರದೇಶದ ಗುರುತು ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಈ ಗುರುತು ದಾಖಲೆಗಳು ತೈವಾನ್ ಮತ್ತು ಚೀನಾ ಪ್ರಜೆಗಳ ಗಣರಾಜ್ಯದ ನಡುವೆ ಕ್ರಾಸ್-ಸ್ಟ್ರೆಟ್ ಪ್ರಯಾಣವನ್ನು ಮಾತ್ರ ಮಾನ್ಯ ಮಾಡುತ್ತದೆ ಮತ್ತು ಪ್ರಯಾಣ ಪ್ರತ್ಯೇಕ ಶರತ್ತುಗಳಿಗೆ ಬದ್ಧನಾಗಿರಬೇಕಾಗುತ್ತದೆ.

ಹಾಂಗ್‌ಕಾಂಗ್ ಮತ್ತು ಮಕಾವು
ಬದಲಾಯಿಸಿ

ಚೀನಾ ಭೂ ಪ್ರದೇಶದ ಗಡಿ ಸೇರಿದಂತೆ ಪ್ರವೇಶದ ಎಲ್ಲಾ ದಿಕ್ಕುಗಳಲ್ಲೂ ಗಡಿ ನಿಯಂತ್ರಣಗಳನ್ನು ಹಾಂಗ್‌ಕಾಂಗ್ ಮತ್ತು ಮಕಾವು ನಿರ್ವಹಿಸುತ್ತದೆ. ಚೀನಾ ಭೂ ಪ್ರದೇಶಕ್ಕೆ ಮತ್ತು ಈ ಭೂ ಪ್ರದೇಶದ ನಡುವೆ ಸಾರ್ಸ್ ಸೇರಿದಂತೆ ಪ್ರಯಾಣ ಬೆಳಸುವುದನ್ನು ಅಂತಾರಾಷ್ಟ್ರೀಯ ಪ್ರಯಾಣ ಎಂದು ಪರಿಗಣಿಸುವುದಿಲ್ಲ. ಇದನ್ನು ಅಂತರ್ ಪ್ರಾದೇಶಿಕ ಪ್ರಯಾಣ ಎನ್ನಲಾಗುತ್ತದೆ. ಸಾರ್ಸ್ ನಡುವೆ ಪ್ರಯಾಣಿಸಲು ಸಾರ್ಸ್ ಶಾಶ್ವತ ನಿವಾಸಿಗಳು ತಮ್ಮ ಗುರುತು ಚೀಟಿಗಳನ್ನು ಉಪಯೋಗಿಸುತ್ತಾರೆ.

ಚೀನಾ ಪ್ರಜೆಗಳು ಹಾಂಗ್‌ಕಾಂಗ್ ಮತ್ತು ಮಕಾವುನಲ್ಲಿ ವಾಸವಿದ್ದು, ಅಲ್ಲಿಗೆ ಪ್ರವೇಶ ಮತ್ತು ಅಲ್ಲಿಂದ ಚೀನಾ ಭೂ ಪ್ರದೇಶಕ್ಕೆ ಹಿಂದಕ್ಕೆ ಬರಲು ಸ್ವದೇಶಕ್ಕೆ ಹಿಂತಿರುಗುವಿಕೆಯ ಅನುಮತಿ ಅಗತ್ಯವಾಗಿರುತ್ತದೆ. ಚೀನಾ ಭೂ ಪ್ರದೇಶಕ್ಕೆ ಪ್ರಯಾಣ ಬೆಳೆಸಲು ಹಾಂಗ್‌ಕಾಂಗ್ ವಿಶೇಷ ಆಡಳಿತ ಪ್ರದೇಶದ ಪಾಸ್‌ಪೋರ್ಟ್‌‌‌ ಮತ್ತು ಮಕಾವು ವಿಶೇಷ ಆಡಳಿತ ಪ್ರದೇಶದ ಪಾಸ್‌ಪೋರ್ಟ್‌‌‌ ಉಪಯೋಗಕ್ಕೆ ಬರುವುದಿಲ್ಲ. ಬ್ರಿಟಿಷ್ ರಾಷ್ಟ್ರೀಯತೆ ಆಯ್ಕೆ ಯೋಜನೆಯಡಿ ನೀಡುವ ಬ್ರಿಟಿಷ್ ರಾಷ್ಟ್ರೀಯ (ಸಾಗರೋತ್ತರ) ಪಾಸ್‌ಪೋರ್ಟ್‌‌‌ ಅಥವಾ ಬ್ರಿಟಿಷ್ ನಾಗರೀಕ ಪಾಸ್‌ಪೋರ್ಟ್‌‌‌‌ನ್ನು ಹಾಂಗ್‌ಕಾಂಗ್‌ನಲ್ಲಿ ವಾಸವಾಗಿರುವ ಚೀನಾದ ಪ್ರಜೆಗಳು ಬಳಸುವಂತಿಲ್ಲ. ಚೀನಾ ಪ್ರಜೆಗಳ ಗಣರಾಜ್ಯ ಪರಿಗಣಿಸಿದಂತಹ ದ್ವಿ-ರಾಷ್ಟ್ರೀಯತೆಯನ್ನು ಇದು ಅಂಗೀಕರಿಸುವುದಿಲ್ಲ.

ಹಾಂಗ್‌ಕಾಂಗ್ ಮತ್ತು ಮಕಾವುಗೆ ಚೀನಾ ಪ್ರದೇಶದ ನಿವಾಸಿಗಳು ಭೇಟಿ ನೀಡುವಾಗ ಹಾಂಗ್‌ಕಾಂಗ್ ಮತ್ತು ಮಕಾವುಗೆ (往来港澳通行证 ಅಥವಾ 双程证) ಪ್ರಯಾಣಿಸಲು ಶರತ್ತುಗಳೊಂದಿಗೆ ಚೀನಾ ಆಡಳಿತ ನೀಡಿದ ನಿರ್ಗಮನ ಮತ್ತು ಪ್ರವೇಶ ಅನುಮತಿಯನ್ನು (签注) ಹೊಂದಿರಬೇಕಾಗುತ್ತದೆ. ಮತ್ತು ಸಾರ್ಸ್ ಗೆ ಭೇಟಿ ನೀಡುವ ಪ್ರತಿಯೊಂದು ಸಂದರ್ಭದಲ್ಲೂ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ (ಇದು ವೀಸಾದ ರೀತಿ).[೨೨]

ಹಾಂಗ್‌ಕಾಂಗ್ (澳門居民往來香港特別行政區旅行證) 'ಸಂದರ್ಶನ ಅನುಮತಿಯಡಿ' ಹಾಂಗ್‌ಕಾಂಗ್‌ಗೆ ಮಕಾವು ಅನಿವಾಸಿ ಪ್ರವಾಸ ಕೈಗೊಳ್ಳಲು ಅರ್ಹನಾಗಿರುವುದಿಲ್ಲ. ೭ ವರ್ಷಗಳ ಮಾನ್ಯತೆಯ ತಾಂತ್ರಿಕ ಭಾಷೆಯಲ್ಲಿ 'ನಿಯಂತ್ರಿತ ಪಾಸ್‌ಪೋರ್ಟ್‌‌‌' ಹಾಂಗ್‌ಕಾಂಗ್‌ಗೆ ‘ಗ್ರೆ-ಕವರ್ ಸಂದರ್ಶನ ಅನುಮತಿ’ ನೀಡುತ್ತದೆ. ಇದರ ಮಾನ್ಯತೆಯ ಅವಧಿಯಲ್ಲಿ ಪ್ರವಾಸಿಗ ಹಾಂಗ್‌ಕಾಂಗ್ ವಿಶೇಷ ಆಡಳಿತ ಪ್ರದೇಶಕ್ಕೆ ಬಹು ಸಂದರ್ಭದಲ್ಲಿ ಪ್ರಯಾಣಿಸಬಹುದು.

ಇಸ್ರೇಲ್‌

ಬದಲಾಯಿಸಿ
 
ಲಿಜೆಂಡ್‌: [56] [57] [58]

ಇಸ್ರೇಲ್‌ನಲ್ಲಿ ಆರಂಭಿಕ ವರ್ಷಗಳಲ್ಲಿ ಇಸ್ರೇಲಿ ಪಾಸ್‌ಪೋರ್ಟ್‌‌ಗಳು "ಜರ್ಮನಿಗೆ ಅನ್ವಯಿಸುವುದಿಲ್ಲ" ಎಂಬ ಸಂದೇಶವುಳ್ಳ ಚಿನ್ಹೆಯನ್ನು ಹೊಂದಿದ್ದವು. ಅಲ್ಲಿ ಯೆಹೂದಿಗಳ ಸಾಮೂಹಿಕ ಬಲಿಯ ಕಾರಣದಿಂದ ಇಸ್ರೇಲಿಗಳಿಗೆ ಜರ್ಮನಿ ದೇಶಕ್ಕೆ ಭೇಟಿ ನೀಡುವುದು ಒಳ್ಳೆಯದಲ್ಲ ಎಂಬುದಕ್ಕಾಗಿ ಈ ವ್ಯವಸ್ಥೆ ಎಂದು ಪರಿಗಣಿಸಲಾಯಿತು("ರಾಜತಾಂತ್ರಿಕ"ರಿಗೆ ಸರ್ಕಾರವು ವಿಶೇಷ ಪಾಸ್‌ಪೋರ್ಟ್‌‌ಗಳನ್ನು ವಿತರಿಸುತ್ತಿತ್ತು). ಕೆಲವು ಮುಸ್ಲಿಮ್ ಮತ್ತು ಅಮೆರಿಕನ್ ದೇಶಗಳು ಇಸ್ರೇಲಿ ಪಾಸ್‌ಪೋರ್ಟ್‌ ಬಳಸಿ ದೇಶ ಪ್ರವೇಶಿಸುವುದನ್ನು ನಿರ್ಬಂಧಿಸಿತು. ಇದರೊಂದಿಗೆ ಹೆಚ್ಚುವರಿಯಾಗಿ, ಇರಾನ್,[೨೩] ಕುವೈತ್,[೨೪] ಲೆಬನಾನ್,[೨೫] ಲಿಬಿಯಾ,[೨೬] ಸೌದಿ ಅರೇಬಿಯಾ,[೨೭] ಸೂಡಾನ್,[೨೮] ಸಿರಿಯಾ[೨೯] ಮತ್ತು ಯೆಮೆನ್[೩೦] ದೇಶಗಳು ಯಾರ ಪಾಸ್‌ಪೋರ್ಟ್‌‌ಗಳು ಇಸ್ರೇಲಿ ವೀಸಾವನ್ನು ಹೊಂದಿವೆಯೋ ಅಥವಾ ಯಾರು ಇಸ್ರೇಲ್ ಪಾಸ್‌ಪೋರ್ಟ್‌ ಹೊಂದಿದ್ದಾರೆಯೋ ಅಂತವರಿಗೆ ಪ್ರವೇಶವನ್ನು ನಿರಾಕರಿಸಿದವು.

ಪಾಕಿಸ್ತಾನ‌

ಬದಲಾಯಿಸಿ

ಪ್ರಾರಂಭದಲ್ಲಿ ಪಾಕಿಸ್ತಾನಿ ಪಾಸ್‌ಪೋರ್ಟ್‌‌ಗಳ ಮೇಲೆ ಪ್ರವೇಶಿಸಬಹುದಾದ ದೇಶಗಳ ಮುದ್ರಿತ ಯಾದಿಯನ್ನು ಪ್ರಕಟಿಸಲಾಗಿತ್ತು. ಪ್ರಸ್ತುತ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳ ಮೇಲೆ "ಇಸ್ರೇಲ್ ಹೊರತಾಗಿ ಈ ಪಾಸ್‌ಪೋರ್ಟ್‌ ಉಳಿದೆಲ್ಲಾ ದೇಶಗಳಿಗೆ ಅನ್ವಯಿಸುತ್ತದೆ" ಎಂಬ ಮುದ್ರಿಸಿರುವ ಹೇಳಿಕೆಯಿರುತ್ತದೆ.

ಫಿಲಿಫೈನ್ಸ್‌‌

ಬದಲಾಯಿಸಿ

೨೦೦೪ ರಿಂದ ಫಿಲಿಫೈನ್ಸ್ ವಿದೇಶ ವ್ಯವಹಾರಗಳ ಖಾತೆಯು, ತಮ್ಮ ದೇಶದ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಗಳು ಭದ್ರತಾ ಆತಂಕದ ಕಾರಣಗಳಿಗಾಗಿ ಇರಾಕ್ ದೇಶಕ್ಕೆ ಪ್ರಯಾಣಿಸಲು ಬರುವುದಿಲ್ಲವೆಂದು ಪರಿಗಣಿಸಿತು. ಅದರಂತೆಯೇ ಆ ಸಮಯದಲ್ಲಿ ವಿತರಿಸಿದ ಫಿಲಿಫೈನ್ಸ್ ಪಾಸ್‌ಪೋರ್ಟ್‌ಗಳು "ಇರಾಕ್‌ ದೇಶಕ್ಕೆ ಪ್ರಯಾಣಿಸಲು ಸಮ್ಮತವಾಗಿಲ್ಲ" ಎಂಬ ಸಂದೇಶವಾಕ್ಯ ಹೊಂದಿದ್ದವು.(ಫಿಲಿಫಿನೋ: Hindi balido para sa paglalakbay sa Iraq).[೩೧]

ದಕ್ಷಿಣ ಕೊರಿಯಾ‌

ಬದಲಾಯಿಸಿ

ದಕ್ಷಿಣ ಕೋರಿಯಾ ದೃಷ್ಟಿಯಲ್ಲಿ, ದಕ್ಷಿಣ ಕೋರಿಯಾ ಆಡಳಿದದಡಿಯಲ್ಲಿರುವ ಕೋರಿಯನ್ ಪರ್ಯಾಯ ದ್ವೀಪದಿಂದ ಉತ್ತರ ಕೋರಿಯಾ ಆಡಳಿದದಡಿಯಲ್ಲಿರುವ ಕೋರಿಯನ್ ಪರ್ಯಾಯ ದ್ವೀಪ ವಿಭಾಗಕ್ಕೆ ನೇರವಾಗಿ ಪ್ರಯಾಣ ಕೈಗೊಳ್ಳುವುದು ಅಂತರಾಷ್ಟ್ರೀಯ ಪ್ರಯಾಣವೆಂದೆನಿಸುವುದಿಲ್ಲ. ಆದಾಗಿಯೂ ಭದ್ರತಾ ಕಾರಣದಿಂದಾಗಿ ಯಾವುದೇ ದಕ್ಷಿಣ ಕೋರಿಯನ್ ಪ್ರಜೆಯು ಉತ್ತರ ಕೋರಿಯಾ ಪ್ರವಾಸಿ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದಲ್ಲಿ ಪಾಸ್‌ಪೋರ್ಟ್‌ ಹೊಂದಿರುವುದು ಕಡ್ಡಾಯವಾಗಿದೆ.

ಯುರೋಪ್‌

ಬದಲಾಯಿಸಿ

ಆಸ್ಟ್ರಿಯಾ

ಬದಲಾಯಿಸಿ

೧೯೧೮ ರಲ್ಲಿ ಹ್ಯಾಬ್ಸ್‌ಬರ್ಗ್ ರಾಜಾಡಳಿತವು ಪತನಗೊಂಡ ನಂತರ ಮತ್ತು ಆಸ್ಟ್ರಿಯನ್ ಪ್ರಜಾಪ್ರಭುತ್ವ ಅಸ್ಥಿತ್ವಕ್ಕೆ ಬಂದ ನಂತರ, ಮೊದಲಿನ ರಾಜವಂಶದ ಕುಟುಂಬದ ಸದಸ್ಯರುಗಳನ್ನು ಗಡಿಪಾರು ಮಾಡಲಾಯಿತು ಮತ್ತು ಆಸ್ಟ್ರಿಯನ್ ದೇಶದ ಪ್ರದೇಶಗಳಿಗೆ ಪ್ರವೇಶವನ್ನು ನಿಷೇಧಿಸಿತು. ಆದಾಗಿಯೂ ಅವರು ಆಸ್ಟ್ರಿಯನ್ ಪ್ರಜೆಗಳಾಗಿಯೇ ಉಳಿದು ಆಸ್ಟ್ರಿಯನ್ ಪಾಸ್‌ಪೋರ್ಟ್‌ ಹೊಂದುವ ಅರ್ಹತೆ ಹೊಂದಿದ್ದರು. ಅಂತಹ ಪಾಸ್‌ಪೋರ್ಟ್‌ಗಳು ಅದ್ವಿತೀಯವಾದ "ಈ ಪಾಸ್‌ಪೋರ್ಟ್‌ ಆಸ್ಟ್ರಿಯಾ ದೇಶಕ್ಕೆ ಹೊರತುಪಡಿಸಿ ಉಳಿದ ದೇಶಗಳಿಗೆಲ್ಲಾ ಅನ್ವಯಿಸುತ್ತದೆ" ಎಂಬ ಹೇಳಿಕೆಯನ್ನು ಒಳಗೊಂಡಿತ್ತು. ಹ್ಯಾಬ್ಸ್‌ಬರ್ಗ್ ಗಳ ಗಡಿಪಾರು ಕ್ರಮವನ್ನು, ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯವು ಅನೂರ್ಜಿತಗೊಳಿಸಿತು ಮತ್ತು ಈ ರೀತಿಯ ವಿಶೇಷ ಪಾಸ್‌ಪೋರ್ಟ್‌ಗಳು ಕೂಡಾ ಇದರೊಂದಿಗೆ ಸೇರಿತ್ತು.

ಸೈಪ್ರಸ್‌

ಬದಲಾಯಿಸಿ
Cypriot passport cover (pre-EU)  
Cypriot passport cover (pre-EU)
Cover of a biometric Turkish passport in line with EU

‌ಉತ್ತರ ಸೈಪ್ರಸ್‌‌ನ ತುರ್ಕಿಷ್ ಪ್ರಜಾಪ್ರಭುತ್ವವು(ಟಿಆರ್‌ಎನ್‌ಸಿ) ಪಾಸ್‌ಪೋರ್ಟ್‌ ವಿತರಿಸಿತು. ಆದರೆ ಇದು ಕೇವಲ ತುರ್ಕಿ ದೇಶಕ್ಕೆ ಸೀಮಿತವಾಗಿ ಬಳಕೆಯಾಯಿತು. ಟಿಆರ್‌ಎನ್‌ಸಿ ಪಾಸ್‌ಪೋರ್ಟ್‌ಗಳು, ಸೈಪ್ರಸ್‌‌ ಪ್ರಜಾರಾಜ್ಯಕ್ಕೆ ವಿಮಾನ ನಿಲ್ದಾಣ ಅಥವಾ ಬಂದರುಗಳ ಮೂಲಕ ಪ್ರವೇಶಿಸಲು ಸ್ವೀಕಾರಾರ್ಹವಾಗಲಿಲ್ಲ. ಆದರೆ ನಿರ್ಧಿಷ್ಟ ಹಸಿರು ಗೆರೆಗಳಿಂದ ಗುರುತಿಸಿದ ಪಾಸ್‌ಪೋರ್ಟ್‌ಗಳನ್ನು ಸಮ್ಮತಿಸಲಾಯಿತು. ಆದಾಗಿಯೂ ಎಲ್ಲಾ ತುರ್ಕಿಷ್ ಸಿಪ್ರಿಯೋಟ್‌ಗಳು ಕಾನೂನುರೀತ್ಯಾ ಸೈಪ್ರಸ್‌‌ ಪ್ರಜಾರಾಜ್ಯದ ಇಯು(EU) ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಅಧಿಕಾರ ಪಡೆಯಿತು. ಮತ್ತು ಎರಡು ದೇಶಗಳ ಗಡಿಗಳನ್ನು ತೆರೆದ ನಂತರದಿಂದ ಸಿಪ್ರಿಯೋಟ್‌ ಮತ್ತು ಇಯು(EU) ಪ್ರಜೆಗಳಿಗೆ ಮುಕ್ತವಾಗಿ ಪ್ರವಾಸ ಮಾಡಲು ಅನುಕೂಲವಾಯಿತು.

ಯುನೈಟೆಡ್ ಕಿಂಗ್‌ಡಮ್‌,ಅಮೆರಿಕಾ ಸಂಯುಕ್ತ ಸಂಸ್ಥಾನ,ಫ್ರಾನ್ಸ್,ಆಸ್ಟ್ರೇಲಿಯಾ,ಪಾಕಿಸ್ತಾನ ಮತ್ತು ಸಿರಿಯಾ ದೇಶಗಳು ಆಡಳಿತಾತ್ಮಕವಾಗಿ ಟಿಆರ್‌ಎನ್‌ಸಿ (TRNC) ಪಾಸ್‌ಪೋರ್ಟ್‌ಗಳನ್ನು ಸಮುಚಿತವಾದ ವಿಸಾದೊಂದಿಗೆ ಅನುಮೋದಿಸಿತು.

ಸ್ಪೇನ್ ಮತ್ತು ಗಿಬ್ರಾಲ್ಟರ್‌

ಬದಲಾಯಿಸಿ

‌ಉತ್ತರ ಸೈಪ್ರಸ್‌‌ನ ತುರ್ಕಿಷ್ ಪ್ರಜಾಪ್ರಭುತ್ವವು(ಟಿಆರ್‌ಎನ್‌ಸಿ) ಪಾಸ್‌ಪೋರ್ಟ್‌ ವಿತರಿಸಿತು. ಆದರೆ ಇದು ಕೇವಲ ತುರ್ಕಿ ದೇಶಕ್ಕೆ ಸೀಮಿತವಾಗಿ ಬಳಕೆಯಾಯಿತು. ಟಿಆರ್‌ಎನ್‌ಸಿ ಪಾಸ್‌ಪೋರ್ಟ್‌ಗಳು, ಸೈಪ್ರಸ್‌‌ ಪ್ರಜಾರಾಜ್ಯಕ್ಕೆ ವಿಮಾನ ನಿಲ್ದಾಣ ಅಥವಾ ಬಂದರುಗಳ ಮೂಲಕ ಪ್ರವೇಶಿಸಲು ಸ್ವೀಕಾರಾರ್ಹವಾಗಲಿಲ್ಲ. ಆದರೆ ನಿರ್ಧಿಷ್ಟ ಹಸಿರು ಗೆರೆಗಳಿಂದ ಗುರುತಿಸಿದ ಪಾಸ್‌ಪೋರ್ಟ್‌ಗಳನ್ನು ಸಮ್ಮತಿಸಲಾಯಿತು. ಆದಾಗಿಯೂ ಎಲ್ಲಾ ತುರ್ಕಿಷ್ ಸಿಪ್ರಿಯೋಟ್‌ಗಳು ಕಾನೂನುರೀತ್ಯಾ ಸೈಪ್ರಸ್‌‌ ಪ್ರಜಾರಾಜ್ಯದ ಇಯು(EU) ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಅಧಿಕಾರ ಪಡೆಯಿತು. ಮತ್ತು ಎರಡು ದೇಶಗಳ ಗಡಿಗಳನ್ನು ತೆರೆದ ನಂತರದಿಂದ ಸಿಪ್ರಿಯೋಟ್‌ ಮತ್ತು ಇಯು(EU) ಪ್ರಜೆಗಳಿಗೆ ಮುಕ್ತವಾಗಿ ಪ್ರವಾಸ ಮಾಡಲು ಅನುಕೂಲವಾಯಿತು.

ಯುನೈಟೆಡ್ ಕಿಂಗ್‌ಡಮ್‌,ಅಮೆರಿಕಾ ಸಂಯುಕ್ತ ಸಂಸ್ಥಾನ,ಫ್ರಾನ್ಸ್,ಆಸ್ಟ್ರೇಲಿಯಾ,ಪಾಕಿಸ್ತಾನ ಮತ್ತು ಸಿರಿಯಾ ದೇಶಗಳು ಆಡಳಿತಾತ್ಮಕವಾಗಿ ಟಿಆರ್‌ಎನ್‌ಸಿ (TRNC) ಪಾಸ್‌ಪೋರ್ಟ್‌ಗಳನ್ನು ಸಮುಚಿತವಾದ ವಿಸಾದೊಂದಿಗೆ ಅನುಮೋದಿಸಿತು.

ಸ್ಪೇನ್ ಮತ್ತು ಗಿಬ್ರಾಲ್ಟರ್‌

ಬದಲಾಯಿಸಿ
 
ಬಯೊಮೆಟ್ರಿಕ್‌ ಕವರ್‌ವುಳ್ಳ ಗಿಬ್ರಾಲ್ಟರ್‌ ಪಾಸ್‌ಪೋರ್ಟ್‌

ಸ್ಪೇನ್ ದೇಶವು ಗಿಬ್ರಾಲ್ಟರ್ ನಲ್ಲಿ ವಿತರಿಸಿದ ಯುನೈಟೆಡ್ ಕಿಂಗ್‌ಡಮ್ ಪಾಸ್‌ಪೋರ್ಟ್‌ಗಳನ್ನು, ಗಿಬ್ರಾಲ್ಟರ್ ಸರ್ಕಾರವು ಅಂತಹ ಯುಕೆ ಪಾಸ್‌ಪೋರ್ಟ್‌ಗಳನ್ನು ವಿತರಿಸುವ ನಿಜವಾದ ಅಧಿಕಾರವನ್ನು ಹೊಂದಿಲ್ಲದಿರುವುದರಿಂದ ಸ್ವೀಕರಿಸಲಿಲ್ಲ. ಕೆಲವು ಗಿಬ್ರಾಲ್ಟರ್ ಪ್ರಜೆಗಳು ಸ್ಪೇನ್ ದೇಶಕ್ಕೆ ಪ್ರವೇಶಿಸಲು ನಿರಾಕರಿಸಲ್ಪಟ್ಟರು. "ಗಿಬ್ರಾಲ್ಟರ್" ಎಂಬ ಶಬ್ದವು ಈಗ ಪಾಸ್‌ಪೋರ್ಟ್‌ ಕವರ್‌ ಮೇಲೆ "ಗ್ರೇಟ್‌ ಬ್ರಿಟನ್‌ನ ಯುನೈಟೆಡ್ ಕಿಂಗ್‌ಡಮ್ ಮತ್ತು ಉತ್ತರ ಐರ್ಲೆಂಡ್" ಎಂಬ ವಾಕ್ಯದ ಕೆಳಗಡೆ ಕಂಡುಬರುತ್ತದೆ.

ಉತ್ತರ ಅಮೆರಿಕಾ

ಬದಲಾಯಿಸಿ

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

ಬದಲಾಯಿಸಿ

ಸಂಯುಕ್ತ ಸಂಸ್ಥಾನದ ಕೋಶಾಗಾರ ನಿಯಂತ್ರಣ ವಿಧಾಯಕಗಳು ಹೇಳುವಂತೆ, ಸಂಯುಕ್ತ ಸಂಸ್ಥಾನದ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವ್ಯಕ್ತಿಗಳು ಕ್ಯೂಬಾದೊಳಗೆ ನಡೆಸುವ ಅಥವಾ ಕ್ಯೂಬಾದಿಂದ, ಕ್ಯೂಬಾಕ್ಕೆ ನಡೆಸುವ ಯಾವುದೇ ರೀತಿಯ ಪ್ರಯಾಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಪರವಾನಿಗಿ ಪಡೆದಿರಬೇಕು. ಪ್ರವಾಸೀ ಪ್ರಯಾಣ ಸಂಬಂಧಿತ ವ್ಯವಹಾರಗಳಿಗೆ ಪರವಾನಿಗಿ ನೀಡಲಾಗುವುದಿಲ್ಲ. ಈ ನಿರ್ಬಂಧವು ಮೆಕ್ಸಿಕೋದಂತಹ ಮೂರನೇ ರಾಷ್ಟ್ರಗಳಿಂದ ಅಥವಾ ಅವುಗಳ ಮೂಲಕ ಕ್ಯೂಬಾವನ್ನು ತಲುಪುವ ಪ್ರವಾಸೀ ಪ್ರಯಾಣವನ್ನು ಸಹಾ ಒಳಗೊಂಡಿದೆ.[೩೨]

ವಿದೇಶೀ ಸ್ಥಳಗಳಿಂದ ಅಥವಾ ವಿದೇಶೀ ಸ್ಥಳಗಳಿಗೆ ಪ್ರಯಾಣ ಮಾಡಲು "ಅಧಿಕೃತ ಪ್ರವಾಸೋದ್ದೇಶಗಳಿಗೆ ಮಾತ್ರ ಸೀಮಿತ/ಊರ್ಜಿತವಾದುದು" ಎಂದು ಸೂಚಿಸುವ ನಿರ್ಬಂಧಿತ ಮುದ್ರೆಯ ಚೀಟಿ ಹಚ್ಚಲಾಗಿರುವ ಕೆಲವು ಪ್ರವಾಸಾಧಿಕಾರ ಪತ್ರಗಳನ್ನು ಸೈನಿಕರ ಆಶ್ರಯದಲ್ಲಿರುವವರಿಗೆ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಪ್ರೌಢರಿಗೆ ಹತ್ತು ವರ್ಷಗಳ ಕಾಲ ಊರ್ಜಿತವಾಗಿರುವುದಕ್ಕೆ ವಿರುದ್ಧವಾಗಿ ಈಗ ತಿಳಿಸಿದ ಪ್ರವಾಸಾಧಿಕಾರ ಪತ್ರಗಳು ಅವುಗಳನ್ನು ಒದಗಿಸಿದ ದಿನಾಂಕದಿಂದ ಕೇವಲ ಐದು ವರ್ಷಗಳವರೆಗೆ ಮಾತ್ರ ವಾಯಿದೆ ಹೊಂದಿರುತ್ತದೆ.

ಓಷಿಯಾನಿಯ

ಬದಲಾಯಿಸಿ

ಕೆಲವು ರಾಷ್ಟ್ರಗಳು ಟೋಂಗಾದ ನಾಗರಿಕರ ಪ್ರವಾಸಾಧಿಕಾರಪತ್ರಗಳನ್ನು ಸ್ವೀಕರಿಸಿದರೂ, ಟೋಂಗಾದಿಂದ ರಕ್ಷಿಸಲ್ಪಟ್ಟ ವ್ಯಕ್ತಿಗಳ ಪ್ರವಾಸಾಧಿಕಾರಪತ್ರಗಳನ್ನು ಸ್ವೀಕರಿಸುವುದನ್ನು ಕಡಿಮೆಮಾಡಿದುವು.[೩೩][೩೪][೩೫] ಟೋಂಗಾದಿಂದ ರಕ್ಷಿಸಲ್ಪಟ್ಟ ವ್ಯಕ್ತಿಗಳ ಪ್ರವಾಸಾಧಿಕಾರಪತ್ರಗಳು ಟೋಂಗಾದ ನಾಗರಿಕನಾಗಿಲ್ಲದ ಯಾವುದೇ ವ್ಯಕ್ತಿಗೆ ಟೋಂಗಾ ಸರಕಾರದಿಂದಲೇ ಮಾರಲ್ಪಡುತ್ತದೆ.[೩೬] ಟೋಂಗಾದಿಂದ ರಕ್ಷಿಸಲ್ಪಟ್ಟ ವ್ಯಕ್ತಿಗಳ ಪ್ರವಾಸಾಧಿಕಾರಪತ್ರಗಳನ್ನು ಹೊಂದಿರುವವನು ಟೋಂಗಾವನ್ನು ಪ್ರವೇಶಿಸಲು ಅಥವಾ ಟೋಂಗಾದಲ್ಲಿ ನೆಲೆಸುವುದಕ್ಕೆ ನಿಷೇಧಿತನಾಗಿರುತ್ತಾನೆ. ಈ ಮಾದರಿಯ ಪ್ರವಾಸಾಧಿಕಾರಪತ್ರಗಳನ್ನು ಹೊಂದಿರುವವರು ಸಾಮಾನ್ಯವಾಗಿ ನಿರಾಶ್ರಿತರು, ಯಾವುದೇ ರಾಷ್ಟ್ರಕ್ಕೆ ಸೇರಿರದ ವ್ಯಕ್ತಿಗಳು ಮತ್ತು, ರಾಜಕೀಯ ಕಾರಣಗಳಿಂದ ಪ್ರವೇಶಾಧಿಕಾರ ಪತ್ರಗಳನ್ನು ನೀಡುವ ಇತರ ಯಾವುದೇ ಪ್ರಾಧಿಕಾರಗಳ ಅನುಮತಿಯನ್ನು ಪಡೆಯಲು ಅನರ್ಹರಾದ ವ್ಯಕ್ತಿಗಳು.

ದಕ್ಷಿಣ ಅಮೆರಿಕಾ

ಬದಲಾಯಿಸಿ

ಬ್ರೆಜಿಲ್‌

ಬದಲಾಯಿಸಿ

ಕೆಲವು ರಾಷ್ಟ್ರಗಳು ಬ್ರೆಜಿಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಿಲ್ಲ. ಆದುದರಿಂದ, ರಾಯಭಾರಿ, ಅಧಿಕೃತ ಮತ್ತು ಕರ್ತವ್ಯ ನಿಮಿತ್ತದ ಪ್ರವಾಸಾಧಿಕಾರ ಪತ್ರಗಳು ಸ್ವೀಕರಿಸಲ್ಪಡುವುದಿಲ್ಲ ಮತ್ತು, ಬ್ರೆಜಿಲ್ ಮೂಲದ "ಲೈಸೀಝ್-ಪಾಸ್ಸರ್"ನಡಿಯಲ್ಲಿ ವೀಸಾಗಳನ್ನು ಮಾತ್ರ ಪ್ರವಾಸಿಗರಿಗೆ ಅಥವಾ ವ್ಯಾವಹಾರಿಕ ಸಂದರ್ಶಕರಿಗೆ ಒದಗಿಸಲಾಯಿತು. ಈ ಗುಂಪಿನಲ್ಲಿ ಬರುವ ರಾಷ್ಟ್ರಗಳೆಂದರೆ, ಭೂತಾನ್, ಮಧ್ಯ ಆಫ್ರಿಕಾ ಗಣರಾಜ್ಯ ಮತ್ತು ಥೈವಾನ್.[೩೭]

ಪ್ರವಾಸಾಧಿಕಾರ ಪತ್ರವಿಲ್ಲದ ಅಂತರಾಷ್ಟ್ರೀಯ ಪ್ರಯಾಣ

ಬದಲಾಯಿಸಿ

ಪ್ರವಾಸಾಧಿಕಾರ ಪತ್ರಗಳಿಲ್ಲದ ಅಂತರಾಷ್ಟ್ರೀಯ ಪ್ರಯಾಣವು ಕೆಲವೊಂದು ಸಂದರ್ಭಗಳಲ್ಲಿ ಸಾಧ್ಯವಾಗುತ್ತದೆ. ಆದರೂ, ಪೌರತ್ವವನ್ನು ಸೂಚಿಸುವ ರಾಷ್ಟ್ರೀಯ ಗುರುತಿನ ಚೀಟಿಯಂತಹ ದಾಖಲೆಗಳನ್ನು ಹೊಂದಿರುವುದು ಅಗತ್ಯವಾಗಿದೆ.

ಆಫ್ರಿಕಾ

ಬದಲಾಯಿಸಿ

ಪೂರ್ವ ಆಫ್ರಿಕಾ ಸಮುದಾಯ

ಬದಲಾಯಿಸಿ

ಕೀನ್ಯಾ, ಉಗಾಂಡ ಮತ್ತು ಟಾಂಝಾನಿಯಗಳು ಸೇರಿ ಪೂರ್ವಆಫ್ರಿಕಾ ಸಮುದಾಯವಾಗಿವೆ. ಪ್ರತಿಯೊಂದು ರಾಷ್ಟ್ರವೂ ಕೂಡಾ ಅರ್ಹ ನಾಗರಿಕನಿಗೆ ಪೂರ್ವ ಆಫ್ರಿಕಾದ ಪ್ರವಾಸಾಧಿಕಾರಪತ್ರಗಳನ್ನು ನೀಡಬಹುದು. ಆ ಪ್ರವಾಸಾಧಿಕಾರಪತ್ರಗಳು ಕೇವಲ ಮೂರು ರಾಷ್ಟ್ರಗಳ ಮಾನ್ಯತೆಗೊಳಪಟ್ಟಿದೆ ಮತ್ತು ಕೇವಲ ಈ ಮೂರು ರಾಷ್ಟ್ರಗಳೊಳಗೆ ಅಥವಾ, ಅವುಗಳ ನಡುವೆ ಪ್ರಯಾಣಿಸಲು ಮಾತ್ರ ಇವನ್ನು ಬಳಸಬಹುದಾಗಿದೆ. ಇದರ ಅರ್ಹತೆಗೆ ಬೇಕಾದ ಅವಶ್ಯಕತೆಗಳು ಅಂತರಾಷ್ಟ್ರೀಯ ಪ್ರಯಾಣಕ್ಕೆ ಬಳಸುವ ರಾಷ್ಟ್ರೀಯ ಪ್ರವಾಸಾಧಿಕಾರ ಪತ್ರಗಳನ್ನು ಪಡೆಯಲು ಇರುವ ನಿಯಮಗಳಷ್ಟು ಕಟ್ಟುನಿಟ್ಟಿನದ್ದಾಗಿರಲಿಲ್ಲ.

ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯ

ಬದಲಾಯಿಸಿ

ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯದ ಸದಸ್ಯ ರಾಜ್ಯಗಳು (ಇಸಿಒಡಬ್ಲ್ಯುಎಎಸ್) ತಮ್ಮ ಸಮುದಾಯದೊಳಗೆ ನಡೆಸುವ ಯಾವುದೇ ಪ್ರಯಾಣಕ್ಕೆ ಪ್ರವಾಸಾಧಿಕಾರ ಪತ್ರಗಳನ್ನು ಕೇಳುವುದಿಲ್ಲ. ರಾಷ್ಟ್ರೀಯ ಗುರುತಿನ ಚೀಟಿಗಳೇ ಸಾಕಾಗುತ್ತವೆ. ಸದಸ್ಯ ರಾಜ್ಯಗಳೆಂದರೆ, ಬೆನಿನ್, ಬರ್ಕಿನಾ ಫಾಸೋ, ಕೇಪ್ ವರ್ಡೆ, ಕೋಟ್ ಡಿ ಐವರಿ, ಗಾಂಬಿಯ, ಘಾನಾ, ಗಿನಿಯ, ಗಿನಿ ಬಿಸ್ಸಾವೊ, ಮಾಲಿ, ನೈಗರ್, ನೈಜೀರಿಯಾ, ಸೆನೆಘಲ್, ಸಿಯೆರಾ ಲಿಯೋನ್ ಮತ್ತು ಟಾಗೋ.

ಭಾರತ, ನೇಪಾಳ ಮತ್ತು ಭೂತಾನ್

ಬದಲಾಯಿಸಿ

ಭಾರತ ಮತ್ತು ನೇಪಾಳದ ಪ್ರಜೆಗಳಿಗೆ ಪರಸ್ಪರ ತಮ್ಮ ರಾಷ್ಟ್ರಗಳ ನಡುವೆ ಪ್ರಯಾಣ ಮಾಡಲು ಪ್ರವಾಸಾಧಿಕಾರ ಪತ್ರಗಳ ಅಗತ್ಯವಿರುವುದಿಲ್ಲ. ಆದರೆ, ರಾಷ್ಟ್ರದ ಗಡಿಯನ್ನು ದಾಟುವ ಸಂದರ್ಭದಲ್ಲಿ ಗುರುತಿನ ಯಾವುದೇ ದಾಖಲೆಗಳು ಅಗತ್ಯವಾಗಿದೆ. ಭೂತಾನ್‌ಗೆ ಪ್ರಯಾಣ ಮಾಡಲು ಕೇವಲ ಭಾರತೀಯರಿಗೆ ಮಾತ್ರ ಪ್ರವಾಸಾಧಿಕಾರ ಪತ್ರಗಳ ಅಗತ್ಯವಿರುವುದಿಲ್ಲ ಆದರೆ, ಭೂತಾನ್ ಪ್ರಜೆಗಳು ತಮ್ಮ ಪೌರತ್ವದ ಗುರುತಿನ ಚೀಟಿಗಳೊಂದಿಗೆ ಪ್ರಯಾಣ ಮಾಡಬಹುದಾಗಿದೆ.

ಸಿರಿಯಾ ಮತ್ತು ಲೆಬನಾನ್‌

ಬದಲಾಯಿಸಿ

ಸಿರಿಯಾವನ್ನು ಪ್ರವೇಶಿಸುವ ಲೆಬೆನಾನ್ ಪ್ರಜೆಗಳು ತಾವು ಲೆಬೆನಾನ್ ಗುರುತಿನ ಚೀಟಿಯನ್ನು ಹೊಂದಿದ್ದರೆ, ಪ್ರವಾಸಾಧಿಕಾರ ಪತ್ರಗಳ ಅಗತ್ಯವಿರುವುದಿಲ್ಲ. ಅದೇ ರೀತಿ, ಸಿರಿಯಾದ ಪ್ರಜೆಗಳು ತಮ್ಮ ಸಿರಿಯಾದ ಗುರುತಿನ ಚೀಟಿಯನ್ನು ಹೊಂದಿದ್ದರೆ ಲೆಬೆನಾನ್‌ನ್ನು ಪ್ರವೇಶಿಸಲು ಅವರಿಗೆ ಪ್ರವಾಸಾಧಿಕಾರ ಪತ್ರಗಳು ಬೇಕಾಗುವುದಿಲ್ಲ.

ಸ್ವತಂತ್ರ ದೇಶಗಳ ಕಾಮನ್ ವೆಲ್ತ್

ಬದಲಾಯಿಸಿ

ರಷ್ಯಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ಗಣತಂತ್ರ ರಾಷ್ಟ್ರಗಳಲ್ಲಿ ಕಾಮನ್‌ವೆಲ್ತ್ ಒಕ್ಕೂಟದಲ್ಲಿ ಭಾಗವಹಿಸುವ ಕೆಲವು ರಾಷ್ಟ್ರಗಳಿಗೆ ಪಾಸ್‌ಪೋರ್ಟಿಗಿಂತ, ರಾಷ್ಟ್ರೀಯ ಗುರುತಿನ ಚೀಟಿಗೆ ತತ್ಸಮಾನವಾದ ಆಂತರಿಕ ಪ್ರವಾಸಾಧಿಕಾರ ಪತ್ರಗಳು ಬೇಕಾಗುತ್ತವೆ.

ಗಲ್ಫ್ ರಾಷ್ಟ್ರದ ಅರಬ್ ರಾಜ್ಯಗಳಿಗಾಗಿ ಸಹಕಾರ ಸಮಿತಿ

ಬದಲಾಯಿಸಿ

ಗಲ್ಫ್ ರಾಷ್ಟ್ರದ ಅರಬ್ ರಾಜ್ಯಗಳ ಸಹಕಾರ ಸಮಿತಿಯ ಪ್ರಜೆಗಳು ಸಮಿತಿಯ ಗಡಿ ದಾಟಲು ಕೇವಲ ರಾಷ್ಟ್ರೀಯ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ (ನಾಗರಿಕ ಗುರುತಿನ ಚೀಟಿ ಎಂದೂ ಗುರುತಿಸಲ್ಪಡುತ್ತದೆ)

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ

ಬದಲಾಯಿಸಿ

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಮಂಡಳಿಯ ೨೦ ರಾಷ್ಟ್ರಗಳು ಒಕ್ಕೂಟದಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳಿಗೂ ವಿಸಾ ಇಲ್ಲದೆಯೇ ಪ್ರವೇಶ ಕಲ್ಪಿಸುವಂತಹ ಎಪಿಇಸಿ ವ್ಯಾವಹಾರಿಕ ಪ್ರಯಾಣ ಚೀಟಿಯನ್ನು ಒದಗಿಸುತ್ತವೆ.

ಯುರೋಪ್‌

ಬದಲಾಯಿಸಿ
 
ಬೆಲ್ಜಿಯನ್‌ ಪಾಸ್‌ಪೋರ್ಟ್‌‌‌‌ನಲ್ಲಿ ರಾಷ್ಟ್ರದ ಮೂರು ಅಧಿಕೃತ ಭಾಷೆಗಳನ್ನು ಬಳಸಲಾಗಿದೆ.

ರಾಷ್ಟ್ರೀಯ ಗುರುತು ಪತ್ರದ ಮೂಲಕ ಪ್ರಯಾಣಿಸುವುದು

ಬದಲಾಯಿಸಿ

ಯುರೋಪ್ ಒಕ್ಕೂಟದ ೨೭ ಸದಸ್ಯರಾಷ್ಟ್ರಗಳಲ್ಲಿ ಒಂದು ರಾಷ್ಟ್ರದ ಪ್ರಜೆ ಅಥವಾ, ಲೀಚ್ಟೆನ್‌ಸ್ಟೀನ್, ಆಂಡೊರ್ರಾ, ಮೊನಾಕೋ, ನಾರ್ವೆ, ಸಾನ್ ಮರಿನೋ, ಐಸ್‌ಲ್ಯಾಂಡ್ ಮತ್ತು ಸ್ವಿಟ್ಸರ್‌ಲ್ಯಾಂಡ್ ರಾಷ್ಟ್ರಗಳ ಪ್ರಜೆಯು ಈ ರಾಷ್ಟ್ರಗಳ ನಡುವೆ ಪ್ರಯಾಣಿಸುವಾಗ ಪಾಸ್‌ಪೋರ್ಟಿಗಿಂತ ಮಿಗಿಲಾದ, ಪ್ರಮಾಣಕ, ವಿಧೇಯ ರಾಷ್ಟ್ರೀಯ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ. ಎಲ್ಲಾ ಇಯು/ಇಇಎ ಸದಸ್ಯ ರಾಜ್ಯಗಳು ಪ್ರಮಾಣಕ, ವಿಧೇಯ ರಾಷ್ಟ್ರೀಯ ಗುರುತಿನ ಚೀಟಿಯನ್ನು ಒದಗಿಸುವುದಿಲ್ಲ, ಗಮನಾರ್ಹವಾಗಿ, ಡೆನ್ಮಾರ್ಕ್, ನಾರ್ವೆ, ಐಸ್‌ಲ್ಯಾಂಡ್, ಲತ್ವಿಯಾ, ಐರ್ಲ್ಯಾಂಡ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳು. ಸ್ವೀಡನ್ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ನೀಡುತ್ತದೆ ಆದರೆ, ಸ್ವೀಡನ್ ಪ್ರಜೆಯೋರ್ವನನ್ನು, ಪಾಸ್‌ಪೋರ್ಟ್ ಇಲ್ಲದೆಯೇ ಸ್ಚೆಂಜೆನ್‌ನಿಂದಾಚೆಗೆ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ..[೩೮]

ಸ್ಚೆಂಜೆನ್ ಪ್ರದೇಶದೊಳಗೆ ಪ್ರಯಾಣ

ಬದಲಾಯಿಸಿ

ಈಗಿನವರೆಗೆ, ಸ್ಚೆಂಜೆನ್ ಒಪ್ಪಂದವು(ಇಇಎಯ ಉಪವಿಭಾಗ) ಅನ್ವಯವಾಗುವ ೨೫ ರಾಷ್ಟ್ರಗಳು ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ತಮ್ಮ ನಡುವೆ ಪಾಸ್‌ಪೋರ್ಟ್ ನಿಯಂತ್ರಣವನ್ನು ಕಾರ್ಯರೂಪಕ್ಕೆ ತಂದಿರುವುದಿಲ್ಲ. ಆದರೆ, ಪಾಸ್‌ಪೋರ್ಟ್‌, ವಿಧೇಯ ರಾಷ್ಟ್ರೀಯ ಗುರುತಿನ ಚೀಟಿ ಅಥವಾ, ವಿದೇಶಿಯರ ವಸತಿ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಸ್ಕಾಂಡಿನೇವಿಯ

ಬದಲಾಯಿಸಿ

ನಾರ್ಡಿಕ್ ಪಾಸ್‌ಪೋರ್ಟ್ ಒಕ್ಕೂಟವು ನಾರ್ಡಿಕ್ ಪ್ರಜೆಗಳು (ಫೆರೋ ಐಲ್ಯಾಂಡ್, ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್, ನಾರ್ವೆ ಮತ್ತು ಸ್ವೇಡನ್‌ಗಳನ್ನೊಳಗೊಂಡ ಡೆನ್ಮಾರ್ಕ್) ಈ ರಾಷ್ಟ್ರಗಳಿಗೆ (ಗ್ರೀನ್‌ಲ್ಯಾಂಡ್ ಅಥವಾ ಸ್ವಾಲ್ಬಾರ್ಡ್‌ಗಳನ್ನಲ್ಲ) ಬೇಟಿನೀಡಲು ಗುರುತಿನ ದಾಖಲೆಯ ಅಗತ್ಯವಿರುವುದಿಲ್ಲ (ಕಾಗದದಲ್ಲಿ/ಲಿಖಿತ ರೂಪದಲ್ಲಿ) ಎಂದು ತಿಳಿದುಕೊಂಡಿದೆ. ಕೇಳಿದಾಗ ತಮ್ಮ ಗುರುತನ್ನು ನಿರೂಪಿಸುವ ದಾರಿಗಳನ್ನು ಶಿಫಾರಸ್ಸು ಮಾಡಲಾಗಿದೆ. (ಉದಾಹರಣೆಗೆ, ಪೌರತ್ವವನ್ನು ಸೂಚಿಸದ ವಾಹನ ಚಾಲನೆಯ ಪರವಾನಿಗಿ). ೧೯೭೭ರಲ್ಲಿ ಸ್ಚೆಂಜೆನ್ ಪ್ರದೇಶವನ್ನು ಸೇರಿದುದು ಈ ನಿಯಮಗಳನ್ನು ಬದಲಾಯಿಸಲಿಲ್ಲ.

ಯುನೈಟೆಡ್‌‌ ಕಿಂಗ್‌ಡಮ್‌‌ ಹಾಗೂ ಐರ್‌ಲೆಂಡ್‌

ಬದಲಾಯಿಸಿ

ಸಂಯುಕ್ತಸಂಸ್ಥಾನ ಮತ್ತು ಐರ್ಲ್ಯಾಂಡ್‌ನ ಪ್ರಜೆಗಳು ಈ ರಾಷ್ಟ್ರಗಳ ನಡುವೆ ಪ್ರಯಾಣ ಮಾಡಲು ಪ್ರವಾಸಾಧಿಕಾರ ಪತ್ರಗಳನ್ನು ಹೊಂದಿರುವ ಅಗತ್ಯವಿರುವುದಿಲ್ಲ. ವಿಮಾನಯಾನದಲ್ಲಿ ಮಾತ್ರ, ಯಾವುದಾದರೂ ಗುರುತಿನ ದಾಖಲೆಗಳ ಅಗತ್ಯವಿದೆಯಾದರೂ, ಭೂಗಡಿಯಲ್ಲಿ ಇದರ ಅಗತ್ಯವಿರುವುದಿಲ್ಲ.

ಯುಗೋಸ್ಲೇವ್ ನಂತರದ ರಾಜ್ಯಗಳು (ಪಾಶ್ಚಾತ್ಯ ಬಾಲ್ಕನ್‌ಗಳು)

ಬದಲಾಯಿಸಿ
 
ಮಾಂಟೆನ್‌ಗ್ರಿನ್‌ ಪಾಸ್‌ಪೋರ್ಟ್‌‌‌‌ - 1887
  • ರಾಷ್ಟ್ರೀಯ ಗುರುತಿನ ಚೀಟಿ ಹೊಂದಿರುವ ಯುರೋಪ್ ಒಕ್ಕೂಟದ ಸದಸ್ಯತ್ವ ಹೊಂದಿರುವ ರಾಜ್ಯಗಳು ಮತ್ತು, ಬೋಸ್ನಿಯ ಮತ್ತು ಹರ್ಝೆಗೋವಿನಾದ ಪ್ರಜೆಗಳನ್ನು ಪ್ರವಾಸಾಧಿಕಾರ ಪತ್ರಗಳನ್ನು ಕ್ರೊಯೇಶಿಯ ಕೇಳುವುದಿಲ್ಲ. ಬೊಸ್ನಿಯ ಮತ್ತು ಹರ್ಝೆಗೋವಿನಾ, ಇಟಲಿ, ಹಂಗೇರಿ, ಮಾಂಟೆನಿಗ್ರೋ ಮತ್ತು ಸ್ಲೋವೆನಿಯಗಳು ಕ್ರಿಯೇಶಿಯಾ ಪ್ರಜೆಗಳ ಪ್ರವಾಸಾಧಿಕಾರ ಪತ್ರಗಳನ್ನು ಕೇಳುವುದಿಲ್ಲ ಬದಲಿಗೆ, ಕ್ರೊಯೇಶಿಯಾದ ಗುರುತಿನ ಚೀಟಿಯನ್ನು ಮಾತ್ರ ಕೇಳುತ್ತವೆ.
  • ಸರ್ಬಿಯಾವು ರಾಷ್ಟ್ರೀಯ ಗುರುತಿನ ಚೀಟಿ ಹೊಂದಿರುವ ಯುರೋಪ್ ಒಕ್ಕೂಟ, ಬೊಸ್ನಿಯ ಮತ್ತು ಹರ್ಝೆಗೋವಿನಾ, ಐಸ್‌ಲ್ಯಾಂಡ್, ಮಾಂಟೆನಿಗ್ರೋ, ನಾರ್ವೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಪ್ರಜೆಗಳಲ್ಲಿ ಪ್ರವಾಸಾಧಿಕಾರ ಪತ್ರಗಳನ್ನು ಕೇಳುವುದಿಲ್ಲ.
  • ಬೊಸ್ನಿಯ ಮತ್ತು ಹರ್ಝೆಗೋವಿನಾ ರಾಷ್ಟ್ರಗಳು ಸರ್ಬಿಯಾದ ಪ್ರಜೆಗಳ ಪ್ರವಾಸಾಧಿಕಾರ ಪತ್ರಗಳನ್ನು ಕೇಳುವುದಿಲ್ಲ, ಕೇವಲ ಸರ್ಬಿಯಾದ ಗುರುತಿನ ಚೀಟಿಯನ್ನು ಕೇಳುತ್ತದೆ.
  • ಸರ್ಬಿಯಾದ ಪ್ರಜೆಗಳು ಮತ್ತು ಮಾಂಟೆನಿಗ್ರೋದ ಪ್ರಜೆಗಳು ಈ ಎರಡು ರಾಷ್ಟ್ರಗಳ ನಡುವೆ ರಾಷ್ಟ್ರೀಯ ಗುರುತಿನ ಚೀಟಿಯೊಂದಿಗೆ ಪ್ರಯಾಣ ಮಾಡಬಹುದು.
  • ಮಾಂಟೆನಿಗ್ರೋ ರಾಷ್ಟ್ರವು ರಾಷ್ಟ್ರೀಯ ಗುರುತಿನ ಚೀಟಿ ಹೊಂದಿರುವ ಬೊಸ್ನಿಯ ಮತ್ತು ಹರ್ಝೆಗೋವಿನಾ, ಕ್ರೊಯೇಶಿಯ ಮತ್ತು ಸರ್ಬಿಯ ರಾಷ್ಟ್ರಗಳ ಪ್ರಜೆಗಳಲ್ಲಿ ಪ್ರವಾಸಾಧಿಕಾರ ಪತ್ರಗಳನ್ನು ಕೇಳುವುದಿಲ್ಲ. ಬೊಸ್ನಿಯ ಮತ್ತು ಹರ್ಝೆಗೋವಿನಾ, ಕ್ರೊಯೇಶಿಯ (ಕೇವಲ ಹರ್ಸೆಗ್ ನೋವಿ, ಕೊಟೋರ್, ಟಿವಾಟ್‌ಗಳಿಗಾಗಿ ಮಾತ್ರ) ಮತ್ತು ಸರ್ಬಿಯಾ ರಾಷ್ಟ್ರಗಳು ಮಾಂಟೆನಿಗ್ರೋ ರಾಷ್ಟ್ರದ ಪ್ರಜೆಗಳ ಪ್ರವಾಸಾಧಿಕಾರ ಪತ್ರಗಳನ್ನು ಕೇಳುವುದಿಲ್ಲ, ಕೇವಲ ಮಾಂಟೆನಿಗ್ರೋದ ಗುರುತಿನ ಚೀಟಿಯನ್ನು ಮಾತ್ರ ಕೇಳುತ್ತದೆ.

ಉತ್ತರ ಅಮೆರಿಕಾ

ಬದಲಾಯಿಸಿ
 
ಯುನೈಟೆಡ್ ಸ್ಟೇಟ್ಸ್‌ನ ಪಾಸ್‌ಪೋರ್ಟ್‌‌‌‌ ಕಾರ್ಡ್‌
 
ನೆಕ್ಸಸ್ ( NEXUS) ಕಾರ್ಡ್‌

ಕೆರಿಬಿಯನ್

ಬದಲಾಯಿಸಿ
  • CARICOM ದೇಶಗಳು ಒಂದು CARICOM ಪಾಸ್‍ಪೋರ್ಟ್ ಅನ್ನು ತನ್ನ ನಾಗರಿಕರಿಗೆ ಒದಗಿಸುತ್ತದೆ, ಮತ್ತು ಜೂನ್ ೨೦೦೯ರಿಂದ, ಭಾಗವಹಿಸುತ್ತಿರುವ ದೇಶಗಳ ಅರ್ಹ ದೇಶೀಯರನ್ನು CARICOM ಪ್ರವಾಸ ಕಾರ್ಡ್ ಅನ್ನು ಬಳಸಲು ಅನುಮತಿಸಲಾಗುವುದು, ಇದರಿಂದ ಸಮುದಾಯದ ಒಳಗಿನ ಪ್ರವಾಸದಲ್ಲಿ ಪಾಸ್‌ಪೋರ್ಟ್‌ನ ಅಗತ್ಯವಿರುವುದಿಲ್ಲ.

ಮಧ್ಯ ಅಮೆರಿಕ

ಬದಲಾಯಿಸಿ
  • CA-೪ ದೇಶಗಳು: ಗುವೆಟ್‍ಮೇಲ, ಎಲ್ ಸಾಲ್ವಾಡೊರ್, ಹೊಂಡರಸ್, ಹಾಗೂ ನಿಕಾರಗುವಾದ ನಾಗರಿಕರು ಈ ದೇಶಗಳ ಮಧ್ಯ ಅಥವಾ ಉಳಿದ ಯಾವುದೇ ನಾಲ್ಕು ದೇಶಗಳ ನಡುವೆ ಪ್ರಯಾಣ ಮಾಡಬಹುದಾಗಿದೆ. ಪ್ರವೇಶಕ್ಕೆ ಒಂದು ರಷ್ತ್ರೀಯ ID ಕಾರ್ಡ್ (cédula) ಅಷ್ಟೆ ಸಾಕು. ಇದಲ್ಲದೆ, CA-೪ ಒಪ್ಪಂದ ಮಧ್ಯ ಅಮೆರಿಕಾದ ಏಕ ವಿಸಾವನ್ನು (Visa Única Centroamericana) ಕಾರ್ಯಗತ ಮಾಡಿತು.

ಉತ್ತರ ಅಮೇರಿಕಾ ಹಾಗೂ ಮೆಕ್ಸಿಕೊ

ಬದಲಾಯಿಸಿ

ಕೆಲವು ನಿರ್ಧಿಷ್ಟ ಉತ್ತರ ಅಮೆರಿಕಾದ ನಾಗರೀಕರಿಗೆ/ವಾಸಿಗರಿಗೆ ಪಾಸ್‌ಪೋರ್ಟ್ ಮುಕ್ತ ಪ್ರವಾಸವನ್ನು ಅನುಮತಿಸುವ ಹಲವು ಕಾರ್ಡುಗಳಿವೆ; ಸಾಮಾನ್ಯವಾಗಿ ಬರಿ ಭೂಮಿ ಹಾಗೂ ಸಮುದ್ರ ಗಡಿ ಪಾರು ಮಾಡಲು:

  • U.S. ಪಾಸ್‍ಪೋರ್ಟ್ ಕಾರ್ಡ್ ಸಾಮಾನ್ಯ U.S. ಪಾಸ್‌ಪೋರ್ಟ್‍ ಕಿರುಪುಸ್ತಕಕ್ಕೆ ಒಂದು ಪರ್ಯಾಯ, ಇದು ಉತ್ತರ ಅಮೆರಿಕಾದ ಅಂತರ್ಗತದಲ್ಲಿ (ಕ್ಯಾನಡ, ಮೆಕ್ಸಿಕೊ, ದಿ ಕ್ಯಾರೆಬಿಯನ್, ಹಾಗೂ ಬರ್ಮೂಡ) ಭೂಮಿ ಹಾಗೂ ಸಮುದ್ರದ ಪ್ರವಾಸ ದಲ್ಲಿ ಉಪಯುಕ್ತ. ಪಾಸ್‌ಪೋರ್ಟ್ ಪುಸ್ತಕದ ಹಾಗೆ, ಪಾಸ್‌ಪೋರ್ಟ್ ಕಾರ್ಡ್ ಕೂಡ ಬರಿ U.S. ನಾಗರಿಕರಿಗೆ ಹಾಗೂ ದೇಶಿಯರಿಗೆ ಮಾತ್ರ ಒದಗಿಸಲಾಗುತ್ತದೆ.
  • NEXUS ಕಾರ್ಡ್ U.S. ಹಾಗೂ ಕ್ಯಾನಡ ಮಧ್ಯದ ಗಡಿ ದಾಟುವಿಕೆಯನ್ನು ಅನುಮತಿಸುತ್ತದೆ. ವಾಯು NEXUS ಕಾರ್ಡ್ ಅನ್ನು ಕೂಡ ವಾಯು ಪ್ರವಾಸದಲ್ಲಿ US ಹಾಗೂ ಕ್ಯಾನಡದ ನಾಗರೀಕರ/ದೇಶಿಯರ ಏಕ ಮಾತ್ರ ಗುರುತಿಸುವಿಕೆಯ ವಿಧಾನವಾಗಿ ಬಳಸಬಹುದು.
  • SENTRI-ಕಾರ್ಡ್ ಪಾಸ್‍ಪೋರ್ಟ್ ಮುಕ್ತ ಪ್ರವಾಸವನ್ನು USಯಿಂದ ಮೆಕ್ಸಿಕೊಗೆ ಅನುಮತಿಸುತ್ತದೆ (ಅದರೆ ವಿಷರ್ಯಯವಾಗಿ ಅನುಮತಿಸುವುದಿಲ್ಲ).
  • US ದೇಶಿಯರು ಇನ್ನು US ಅನ್ನು ಪ್ರವೇಶಿಸಲು ವರ್ಮೊಂಟ್ ರಾಷ್ಟ್ರಗಳು, ವಾಷಿಂಗ್ಟನ್, ಮಿಚಿಗನ್ ಹಾಗೂ ನ್ಯೂ ಯೋರ್ಕ್ (ಇದು WHTI ವಿಧೇಯವಾಗಿ ಅರ್ಹತೆ ಪಡೆದಿರುತ್ತದೆ) ಯಿಂದ ಒದಗಿಸಿದ ಚಾಲಕರ ಪರವಾನಗಿ; ವರ್ಧಿಸಿದ ಬುಡಕಟ್ಟಿನ ಕಾರ್ಡ್‍ಗಳು; U.S. ಮಿಲಿಟರಿ ID ಕಾರ್ಡ್‌ಗಳು ಅಲ್ಲದೆ ಮಿಲಿಟರಿ ಪ್ರವಾಸ ಆಜ್ಞೆಗಳು; U.S. ವ್ಯಾಪಾರಿ ನಾವಿಕ ID ಕಾರ್ಡ್‍ಗಳು, ನೌಕ ವ್ಯವಹಾರದಲ್ಲಿ ಪ್ರವಾಸಿಸುವಾಗ; ಸ್ಥಳೀಯ ಅಮೆರಿಕಾದ ಬುಡಕಟ್ಟಿನ ID ಕಾರ್ಡ್‌ಗಳು; ನಮೂನೆ I-೮೭೨ ಅಮೆರಿಕಾದ ಭಾರತೀಯ ಕಾರ್ಡ್‌ಗಳನ್ನು ಬಳಸಬಹುದು.[೩೯][೪೦]
  • ಕ್ಯಾನಡಾದ ದೇಶಿಯರು US ಅನ್ನು ಭೂಮಿ ಅಥವಾ ಸಮುದ್ರದ ಮೂಲಕ ಒಂದು "ವರ್ಧಿಸಿದ" WHTI-ವಿಧೇಯದ ಚಾಲಕನ ಪರವಾನಗಿಯನ್ನು ಬಳಸಿ ಪ್ರವೇಶಿಸಬಹುದು. ಅವುಗಳನ್ನು ಪ್ರಸ್ತುತ ಬ್ರಿಟಿಷ್ ಕೊಲಂಬಿಯ, ಮ್ಯಾನಿಟೊಬ, ಕ್ಯುಬೆಕ್ ಹಾಗೂ ಒಂಟಾರಿಯೋ ಒದಗಿಸುತ್ತವೆ. ಕ್ಯಾನೆಡದವರು ವಾಯು ಮೂಲಕ US ಅನ್ನು ಪ್ರವೇಶಿಸಲು ಇಛ್ಚಿಸಿದರೆ, ಅವರು ಪಾಸ್‌ಪೋರ್ಟ್ ಪುಸ್ತಕವನ್ನು ಬಳಸ ಬೇಕು.

U.S. ನಲ್ಲಿ ಒಪ್ಪಬಲ್ಲ ಪಾಸ್‌ಪೋರ್ಟ್-ಪ್ರತಿವಸ್ತು ದಾಖಲೆಗಳನ್ನು ಪಶ್ಚಿಮ ಭೂಗೋಳಾರ್ಧದ ಪ್ರವಾಸ ಪ್ರಾರಂಭದ ಅಂತರ್ಗತದಲ್ಲಿ ಇಡಲಾಗಿದೆ.

ಓಷಿಯಾನಿಯ

ಬದಲಾಯಿಸಿ
 
ಆಸ್ಟ್ರೇಲಿಯಾ ಮತ್ತು ಪಾಪುವಾವನ್ನು ಬೇರ್ಪಡಿಸುವ ಟಾರೆಸ್‌‍ ಸ್ಟ್ರೇಟ್‌

ಪಪುವ ನ್ಯೂ ಗಿನಿಯದಲ್ಲಿನ ಒಂಬತ್ತು ಕರಾವಳಿ ಹಳ್ಳಿಗಳ ನಿವಾಸಿಗರು ಟೊರೆಸ್ ಸ್ಟ್ರೇಟ್‌ನ (ಕ್ವೀನ್ಸ್‌ಲ್ಯಾಂಡ್, ಆಸ್ಟ್ರೇಲಿಯಾದ ಭಾಗ) ’ಸಂರಕ್ಷಿತ ವಲಯ’ ವನ್ನು ಸಾಂಪ್ರದಾಯಿಕ ಉದ್ದೇಶಗಳಿಗೆ ಪ್ರವೇಶಿಸಲು ಪರವಾನಗಿ ಪಡೆದಿದ್ದಾರೆ. ಪಾಸ್‌ಪೋರ್ಟ್ ನಿಯಂತ್ರಣದ ಈ ವಿನಾಯಿತಿ ಆಸ್ಟ್ರೇಲಿಯ ಹಾಗೂ ಪಪುವ ನ್ಯೂ ಗಿನಿಯಯದ ಮಧ್ಯದ ಒಪ್ಪಂದದ ಒಂದು ಭಾಗ, ಈ ಸಂಧಿ ಮಾತು PNG ೧೯೭೫ರಲ್ಲಿ ಆಸ್ಟ್ರೇಲಿಯದಿಂದ ಸ್ವತಂತ್ರವಾದಾಗ ಆಗಿತ್ತು.[೪೧] ಆಸ್ಟ್ರೇಲಿಯ ಅಥವಾ ಆಸ್ಟ್ರೇಲಿಯಾದ ಜಲ ಪ್ರದೇಶವನ್ನು (ವಿಶೇಷವಾಗಿ ಇಂಡೋನೇಷಿಯಾದಿಂದ) ಪ್ರವೇಶಿಸಲು ಪ್ರಯತ್ನಿಸುವ ಇತರ ಸಾಂಪ್ರದಾಯಿಕ ಹಡಗುಗಳನ್ನು ಆಸ್ಟ್ರೇಲಿಯಾದ ಆಮದು ಅಥವಾ ರಾಜಯೋಗ್ಯ ಆಸ್ಟ್ರೇಲಿಯ ನೌಕ ಅವರಿಂದ ತಡೆಯಲಾಗುತ್ತದೆ, ಕಾರಣ ಜನರ ಹಾಗೂ ಔಷಧಿಗಳ ಕಳ್ಳ ಸಾಗಾಣಿಕೆಯ ಭೀತಿಯಿಂದ.

ದಕ್ಷಿಣ ಅಮೆರಿಕಾ

ಬದಲಾಯಿಸಿ

ಮಧ್ಯ ಅಮೇರಿಕ ಮತ್ತು ದಕ್ಷಿಣ ಅಮೇರಿಕಾದ ಹಲವು ಜನಾಂಗಗಳು ಮರ್ಕೋಸರ್ ಮತ್ತು ಅಂಡಿಯನ್ ರಾಷ್ಟ್ರದ ಸಮುದಾಯಗಳಂತಹ ಅಥವಾ ಉಭಯ ಪ್ರದೇಶಗಳ ಆಧಾರದ ಮೇಲೆ (ಇಕ್ಕಡೆಯಲ್ಲೂ) (ಉದಾಹರಣೆಗೆ, ಚಿಲಿ ಮತ್ತು ಪೆರುಗಳ ನಡುವೆ, ಬ್ರೆಜಿಲ್ ಮತ್ತು ಚಿಲಿಗಳ ನಡುವೆ) ಪಾಸ್‌ಪೋರ್ಟ್ಗಳಿಲ್ಲದೆ (ಪಾಸ್‌ಪೋರ್ಟ್‌‌‌) ತಮ್ಮ ರಾಷ್ಟ್ರೀಯ ಗುರುತಿನ ಚೀಟಿ ಅಥವಾ, ಕಡಿಮೆ ಅವಧಿಯ ನೆಲೆಸುವಿಕೆಗಾಗಿ ತಮ್ಮ ಮತದಾರರ ನೋಂದಣಿ ಚೀಟಿಗಳನ್ನು ತೋರಿಸುವ ಮೂಲಕ ತಮ್ಮ ತಮ್ಮ ಪ್ರಾದೇಶಿಕ ಆರ್ಥಿಕ ವಲಯಗಳೊಳಗೆ ಸಂಚರಿಸಬಹುದಾಗಿತ್ತು. ಕೆಲವು ಸಂದರ್ಭಗಳಲ್ಲಿ, ಈ ಪ್ರಯಾಣವು ವಾಯುಮಾರ್ಗ ಮುಖೇನವಾಗಿಲ್ಲದೇ ಭೂಮಿಯ ಮೂಲಕವೇ ನಡೆಯಬೇಕಾಗಿತ್ತು. ದಕ್ಷಿಣ ಅಮೇರಿಕಾ ರಾಷ್ಟ್ರಗಳ ಒಕ್ಕೂಟದಡಿ ದಕ್ಷಿಣ ಅಮೇರಿಕಾದುದ್ದಕ್ಕೂ ಈ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತರಿಸಲು ಯೋಜನೆಗಳಿದ್ದುವು.

ಪಾಸ್‌ಪೋರ್ಟ್ದ ಅಗತ್ಯವಿರುವ ದೇಶೀಯ ಪ್ರಯಾಣ

ಬದಲಾಯಿಸಿ

ಕೆಲವು ರಾಷ್ಟ್ರಗಳಲ್ಲಿ ದೇಶದೊಳಗಿನ ಪ್ರಯಾಣಕ್ಕೂ ಸಹ ವಲಸೆಯನ್ನು ನಿಯಂತ್ರಿಸುವ/ಪರಿಶೀಲಿಸುವ ವ್ಯವಸ್ಥೆ ಮತ್ತು ಪಾಸ್‌ಪೋರ್ಟ್ಗಳ ನಿಯಂತ್ರಣಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಚೀನಾ, ಹಾಂಗ್‌ಕಾಂಗ್ ಮತ್ತು ಮಕಾವು

ಬದಲಾಯಿಸಿ

ವಿಶೇಷ ಆಡಳಿತಾತ್ಮಕ ಪ್ರದೇಶಗಳಾದ ಹಾಂಗ್‌ಕಾಂಗ್ ಮತ್ತು ಮಕಾವುಗಳಿಗೆ ತಮ್ಮದೇ ಆದ ವಲಸೆ ನಿಯಂತ್ರಣಾ ವ್ಯವಸ್ಥೆಯನ್ನು ಹೊಂದುವಂತೆ ಚೀನಾವು ಅಧಿಕೃತ ಅನುಮತಿ ನೀಡಿದೆ. ಹಾಗಿದ್ದರೂ, ಮೇನ್‌ಲ್ಯಾಂಡ್ ಚೀನಾ, ಹಾಂಗ್‌ಕಾಂಗ್ ಮತ್ತು ಮಕಾವುಗಳ ನಡುವೆ ಪ್ರಯಾಣ ಮಾಡುವುದನ್ನು ಅಂತರಾಷ್ಟ್ರೀಯ ಪ್ರಯಾಣ ಎಂದು ಪರಿಗಣಿಸಲಾಗುವುದಿಲ್ಲ. ಚೀನಾದ ಜನರ ಪ್ರಜಾಪ್ರಭುತ್ವದ (ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ) ನಾಗರಿಕರು ಮೂರು ಪ್ರದೇಶಗಳ ನಡುವೆ ಪ್ರಯಾಣ ಕೈಗೊಳ್ಳುವಾಗ ಪಾಸ್‌ಪೋರ್ಟ್ಗಳನ್ನು ಬಳಸದೇ ಇದ್ದರೂ (ಬದಲಿಗೆ ಇತರ ದಾಖಲೆಗಳಾದ ತಾಯ್ನಾಡಿಗೆ ಹಿಂತಿರುಗಲು ನೀಡಿದ ಅನುಮತಿ ಪತ್ರಗಳನ್ನು ಬಳಸಲಾಗುತ್ತದೆ), ವಿದೇಶೀಯರು ಮಾತ್ರ ವಲಸೆ ನಿಯಂತ್ರಣಾ ಸ್ಥಳಗಳಲ್ಲಿ ತಮ್ಮ ಪಾಸ್‌ಪೋರ್ಟ್ಗಳನ್ನು ತೋರಿಸಬೇಕು. ಹಾಂಗ್‌ಕಾಂಗ್ ಅಥವಾ ಮಕಾವುಗಳ ಶಾಶ್ವತ ವಸತಿ ಗುರುತಿನ ಚೀಟಿಗಳನ್ನು ಹೊಂದಿರುವವರು (ರಾಷ್ಟ್ರೀಯತೆಯ ಹೊರತಾಗಿ) ಹೇಗಿದ್ದರೂ, ಎಸ್‌ಎ‌ಆರ್‌ನ್ನು ಪ್ರವೇಶಿಸುವಾಗ ಮತ್ತು ಅಲ್ಲಿಂದ ನಿರ್ಗಮಿಸುವಾಗ ಯಾವುದೇ ಪಾಸ್‌ಪೋರ್ಟ್‌ ಅನ್ನು ತೋರಿಸದೇ ಒದಗಿಸಲಾಗುವ ತಮ್ಮ ಗುರುತಿನ ಚೀಟಿಯನ್ನು ಬಳಸಬಹುದು.

ಮಲೇಶಿಯಾ

ಬದಲಾಯಿಸಿ
ಚಿತ್ರ:Malaysia Regular international passport.jpg
ಮಲೇಷ್ಯಾದ ನಿಯಮಾನುಕ್ರಮವಾದ ಪಾಸ್‌ಪೋರ್ಟ್‌‌‌‌

ಮಲೇಶಿಯಾ ನಿರ್ಮಾಣವಾಗುವ ಸಮಯದಲ್ಲಿ ನಡೆದ ವಿಶೇಷ ವ್ಯವಸ್ಥೆಯಡಿ ಸಬಾಃ ಮತ್ತು ಸರವಾಕ್‌ಗಳ ಪೂರ್ವ ಮಲೇಶಿಯಾ ರಾಜ್ಯಗಳು ತಮ್ಮದೇ ಆದ ವಲಸೆ ನಿಯಂತ್ರಣಾ ವ್ಯವಸ್ಥೆಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ಇದರ ಫಲಿತಾಂಶವಾಗಿ, ಪೆನಿನ್ಸುಲಾರ್ ಮಲೇಶಿಯಾದಿಂದ ಪೂರ್ವ ಮಲೇಶಿಯಾಗೆ ಪ್ರಯಾಣ ಮಾಡಲು, ಅಂತೆಯೇ, ಸಬಾಃ ಮತ್ತು ಸರವಾಕ್‌ಗಳ ನಡುವೆ ಪ್ರಯಾಣ ಮಾಡಲು ಪಾಸ್‌ಪೋರ್ಟ್ವು ಅಗತ್ಯವಾಯಿತು. ಹಿಂದೆ ಪೆನಿನ್ಸುಲಾರ್ ಮಲೇಶಿಯಾದ ಮಲೇಶಿಯ ನಾಗರಿಕರು ಪೆನಿನ್ಸುಲಾರ್ ಮಲೇಶಿಯಾದಿಂದ ಪೂರ್ವ ಮಲೇಶಿಯಾಗೆ ಪ್ರಯಾಣ ಮಾಡುವಾಗ ಮಲೇಶಿಯಾದ ಪಾಸ್‌ಪೋರ್ಟ್‌ ಅನ್ನು ಹೊಂದಿರಬೇಕಾಗಿತ್ತು. ಆದರೆ, ಅವರು ಮೂರನೇ ರಾಷ್ಟ್ರಕ್ಕೆ ಕಾಲಿಡುವುದಕ್ಕೆ ಮುಂಚಿನ ಮೂರು ತಿಂಗಳೊಳಗೆ ನಡೆಸುವ ಯಾವುದೇ ಸಾಮಾಜಿಕ/ವ್ಯಾವಹಾರಿಕ ಸಂದರ್ಶನಗಳಿಗೆ ಇದರ ಅಗತ್ಯವಿರುವುದಿಲ್ಲ. ಆದರೂ, ಪಶ್ಚಿಮ ಮಲೇಶಿಯನ್ನರು ತಮ್ಮ ಮಲೇಶಿಯಾದ ಗುರುತಿನ ಚೀಟಿಯನ್ನು, ೧೨ ವರ್ಷದೊಳಗಿನ ಮಕ್ಕಳಿಗೆ, ಅವರ ಜನನ ಪ್ರಮಾಣಪತ್ರವನ್ನು, ವಿಶೇಷ ವಲಸೆ ಪತ್ರದಲ್ಲಿ ಪ್ರತ್ಯೇಕವಾಗಿ ತುಂಬಿ (ಆಂತರಿಕ/ದೇಶೀಯ ಪ್ರಯಾಣ ದಾಖಲೆಯ ಬದಲಿಗೆ ಬಳಸುವ ದಾಖಲೆ ಪತ್ರ, ಐಎಮ್‌ಎಮ್ ೧೧೪) ಹಾಜರುಪಡಿಸಬೇಕಾಗಿತ್ತು.[೪೨] ಯಾರಾದರೂ ಐಎಮ್‌ಎಮ್ ೧೧೪ ಫಾರಂ ತುಂಬುವ ಈ ವಿಧಾನವನ್ನು ತಪ್ಪಿಸುವಂತಿದ್ದರೆ, ಅದು ಅವರು ತಮ್ಮ ಮಲೇಶಿಯಾದ ಪಾಸ್‌ಪೋರ್ಟ್‌ ಅನ್ನು ಹಾಜರುಪಡಿಸುವ ಮೂಲಕ ಅಥವಾ, ನಿರ್ಬಂಧಿತ ಪ್ರಯಾಣ ದಾಖಲೆ ಪತ್ರವನ್ನು ಒಪ್ಪಿಸುವ ಮೂಲಕ ತಪ್ಪಿಸಿಕೊಂಡು ತಮ್ಮ ವಲಸೆ ಪರವಾನಿಗಿಯನ್ನು ಶೀಘ್ರವಾಗಿ ಪಡೆಯಬಹುದಾದ ಆನಂದವನ್ನು ಅನುಭವಿಸಬಹುದು.

ಆಂತರಿಕ ಪಾಸ್‌ಪೋರ್ಟ್‌‌‌‌ ವಿಧಾನವು ರಷ್ಯಾ ಮತ್ತು ಚೀನಾ ಎರಡೂ ದೇಶಗಳಲ್ಲಿ ಇದೆ. ಮತ್ತು ಇತಿಹಾಸದಲ್ಲಿ ಇತರೆ ಕೆಲವು ದೇಶಗಳಲ್ಲಿ ಕೂಡಾ ಇದನ್ನು ವಿತರಿಸಲಾಗಿತ್ತು.

ಪಾಸ್‌ಪೋರ್ಟ್‌‌‌‌ನಲ್ಲಿರುವ ವಲಸೆ ಮುದ್ರೆಗಳು

ಬದಲಾಯಿಸಿ

ವಲಸೆ ಜನಸಂಖ್ಯೆಯನ್ನು ಕಡಿಮೆಗೊಳಿಸುವ ಸಲುವಾಗಿ ಹಲವಾರು ದೇಶದ ವಲಸೆ ಅಧಿಕಾರಿಗಳು ಪ್ರವೇಶ ಮತ್ತು ನಿರ್ಗಮನದ ಮುದ್ರೆಗಳನ್ನು ಪಾಸ್‌ಪೋರ್ಟ್‌ನ ಮೇಲೆ ಲಗತ್ತಿಸುವ ರೂಡಿಯನ್ನು ಬೆಳೆಸಿಕೊಂಡಿದ್ದಾರೆ. ಈ ಮುದ್ರೆಯು ಅನೇಕ ಕಾರ್ಯಕ್ಕೆ ಸಹಕಾರಿಯಾಗಿದೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿಯ ವಲಸೆ ಮುದ್ರೆಯು, ವ್ಯಕ್ತಿ ಪ್ರವೇಶಗೊಂಡ ದಿನಾಂಕವನ್ನು ಕೂಡಾ ತಿಳಿಸುತ್ತದೆ. ಅಲ್ಲದೆ ಯಾವಾಗ ಆತ ಅಲ್ಲಿ ಪ್ರವೇಶಿಸಬಹುದು ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಅದಿಲ್ಲದಿದ್ದಲ್ಲಿ, ಇಲ್ಲಿರುವ ಮುದ್ರೆಯಲ್ಲಿ ಸಂಬಂಧಪಟ್ಟವರಿಗೆ ನೀಡಲಾದ ದಿನಗಳನ್ನು ನಮೂದಿಸಲಾಗಿರುತ್ತದೆ. ಅಲ್ಲದೆ ಪ್ರವೇಶ ಅವಕಾಶ ನೀಡಿದ ನಂತರದಲ್ಲಿ ಇದನ್ನು ನಮೂದಿಸಲಾಗಿರುತ್ತದೆ.

ಶ್ಚೆಂಗನ್ ಪದ್ದತಿಯ ಪ್ರಕಾರ ವಿದೇಶಿ ಪಾಸ್‌ಪೋರ್ಟ್‌‌ಗೆ ದಿನಾಂಕದ ಮುದ್ರೆಯನ್ನು ಹಾಕಿರಲಾಗುತ್ತದೆ ಆದರೆ ಅಲ್ಲಿ ವಾಸ್ತವ್ಯವಿರುವ ದಿನಗಳನ್ನು ಅದರಲ್ಲಿ ನಮೂದಿಸಲಾಗಿರುವುದಿಲ್ಲ. ಈ ಮುದ್ರೆಯ ಪ್ರಕಾರ ವ್ಯಕ್ತಿಯು ಸಂಬಂಧಪಟ್ಟ ದೇಶದಲ್ಲಿ ಅದರಲ್ಲಿ ನಮೂದಿಸಲಾಗಿರುವ ದಿನದಷ್ಟು ಅಥವಾ ಮೂರು ತಿಂಗಳವರೆಗೆ ಹೊರದೇಶದಲ್ಲಿ ಇರಬಹುದಾಗಿದೆ. (ಇವೆರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅದು ಅನ್ವಯವಾಗುತ್ತದೆ)

ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು ಪಾಸ್‌ಪೋರ್ಟ್‌ ಮೇಲೆ ವ್ಯಕ್ತಿಯು ವ್ ಮುದ್ರೆ ವಲಸೆ ನಿಯಂತ್ರಣಕ್ಕೆ ಒಳಪಡುವುದಿಲ್ಲವಾದ್ದರಿಂದ ಈ ಪದ್ದತಿಯನ್ನು ಒಪ್ಪುವುದಿಲ್ಲ. ಯುರೋಪಿಯನ್‍ ಒಕ್ಕೂಟದ ಇತರೆ ರಾಷ್ಟ್ರಗಳು ಹಾಗೂ ಯುನೈಟೆಡ್ ಒಕ್ಕೂಟೇತರ ರಾಷ್ಟಗಳ ಸದಸ್ಯರು ಯುರೋಪಿಯನ್ ಒಕ್ಕೂಟದ ಡೈರೆಕ್ಟಿವ್ ೨೦೦೪/೩೮/EC ಮೂಲಕ ಪರವಾನಗಿಯನ್ನು ಪಡೆದುಕೊಳ್ಳಬೇಕು. ಪಾಸ್‌ಪೋರ್ಟ್‌ ಮುದ್ರಕವು ಒಬ್ಬ ವ್ಯಕ್ತಿಯು ಯಾವುದಕ್ಕೆ ಅರ್ಹನಲ್ಲವೋ ಅದನ್ನು ತೋರ್ಪಡಿಸುವುದರಿಂದ ಅದನ್ನು ನಿಷೇಧಿಸಲಾಗಿದೆ. ಈ ಪರಿಕಲ್ಪನೆಯು ಪಾಸ್‌ಪೋರ್ಟ್‌ ಮೇಲೆ ಪ್ರವೇಶ ಮತ್ತು ನಿರ್ಗಮನದ ಮುದ್ರೆಯನ್ನು ಲಗತ್ತಿಸುವ ಯುರೋಪಿಯನ್ ದೇಶದ ಹೊರಗೆ ಚಾಲ್ತಿಗೆ ಬರುವುದಿಲ್ಲ.

ಬೇರೆ ಬೇರೆ ದೇಶಗಳು ಆಗಮನ ಮತ್ತು ನಿರ್ಗಮನಕ್ಕಾಗಿ ವಿಭಿನ್ನ ಶೈಲಿಯ ಮುದ್ರಕ ವಿಧಾನವನ್ನು ಜನರ ಚಲನವಲನವನ್ನು ಗಮನದಲ್ಲಿರಿಸಲು ಹೊಂದಿರುತ್ತವೆ. ಮುದ್ರಕದ ಬಣ್ಣ ಕೂಡ ಚಲನವಲನವನ್ನು ಕೂಡ ಹೇಳುತ್ತದೆ. (ಆಗಮನ ಅಥವಾ ನಿರ್ಗಮನವನ್ನು ಹೇಳುತ್ತದೆ) ಹಾಂಕ್‌ಕಾಂಗ್‌ನಲ್ಲಿ ೧೯೯೭ರ ನಂತರದಲ್ಲಿ ತಕ್ಷಣದಲ್ಲಿ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಸಲುವಾಗಿ ಎಲ್ಲ ಪೋರ್ಟ್‍ಗಳ ಆಮಗನ ಮತ್ತು ನಿರ್ಗಮನವನ್ನು ಒಂದೇ ರೀತಿಯ ಮುದ್ರೆಗಳು ಹೊಂದಿರುತ್ತವೆ ಆದರೆ ಬಣ್ಣ ಮಾತ್ರ ಬೇರೆ ಬೇರೆಯಾಗಿರುತ್ತದೆ. ವಿಮಾನ ನಿಲ್ದಾಣದಲ್ಲಿ ಕಪ್ಪು ಬಣ್ಣದ ಶಾಯಿಯನ್ನು ಬಳಸಿದರೆ, ಭೂಮಾರ್ಗದಲ್ಲಿ ಕೆಂಪು ಬಣ್ಣದ ಶಾಯಿಯನ್ನು ಬಳಸಲಾಗುತ್ತದೆ ಮತ್ತು ಜಲ ಮಾರ್ಗದಲ್ಲಿ ನೇರಳೆ ಬಣ್ಣವನ್ನು ಬಳಸಲಾಗುತ್ತದೆ. ಮಕಾವ್‌ನಲ್ಲಿ ಪೊರ್ಚುಗೀಸ್‌ ಆಡಳಿತದಲ್ಲಿ ಎಲ್ಲ ಮುದ್ರೆಗಳಿಗೂ ಒಂದೇ ಬಣ್ಣದ ಶಾಯಿಯನ್ನು ಬಳಸಲಾಗುತ್ತದೆ. ಆದರೆ ಸ್ವಲ್ಪ ವಿಭಿನ್ನವಾದ ಬಾರ್ಡರ್‌ಗಳನ್ನು ಬಳಸಲಾಗುತ್ತದೆ. ವಾಯು, ಭೂ ಅಥವಾ ಜಲ ಮಾರ್ಗದ ಮೂಲಕ ಆಗಮಿಸುವವರಿಗೆ ಬೇರೆ ಬೇರೆ ವಿಧದಲ್ಲಿರುತ್ತದೆ. ಹಲವಾರು ದೇಶಗಳಲ್ಲಿ ಈ ಮುದ್ರೆಗಳ ಅಥವಾ ಇದರ ಬಣ್ಣಗಳು ವಿವಿಧ ರೀತಿಯದ್ದಾಗಿರುತ್ತದೆ. ವ್ಯಕ್ತಿ ಕಾರು/ಬಸ್/ಬೋಟ್‌/ಟ್ರೇನ್/ಅಥವಾ ವಾಯು ಮಾರ್ಗದಲ್ಲಿ ಬಂದರೆ ವಿವಿಧ ರೀತಿಯ ಬಣ್ಣಗಳನ್ನು ಬಳಸಲಾಗುತ್ತದೆ. ದೇಶಗಳು ಮುದ್ರೆಗಳಲ್ಲಿಯ ಉದ್ದ ಅಗಲಗಳಲ್ಲಿ ವಿವಿಧತೆಯನ್ನು ತೋರ್ಪಡಿಸುವ ಮೂಲಕ ವ್ಯಕ್ತಿಯೊಬ್ಬ ಬೇರೆ ದೇಶದಲ್ಲಿ ಎಷ್ಟು ದಿನಗಳವರೆಗೆ ಇರಬಹುದು ಎಂಬುದನ್ನು ತೋರ್ಪಡಿಸುತ್ತವೆ. ಉದಾಹರಣೆಗೆ ಚೌಕಾಕಾರದ ಮುದ್ರೆಯು ಹದಿನಾಲ್ಕು ದಿನ ವಾಸ್ತವ್ಯ ಹೂಡಲು ಅನುಮತಿಯನ್ನು ನೀಡುತ್ತದೆ. ಗೋಲಾಕಾರದ ಚೌಕವು ಮೂವತ್ತು ದಿನಗಳ ವಾಸ್ತವ್ಯ ಹಾಗೂ ಷಟ್ಕೋನದ ಮುದ್ರೆಯು ತೊಂಬತ್ತು ದಿನಗಳ ವಾಸ್ತವ್ಯಕ್ಕೆ ಅನುಮತಿ ನೀಡುತ್ತದೆ.

ವಲಸೆಯ ಮುದ್ರೆಯು ಪ್ರಯಾಣಕ್ಕೆ ಉಪಯುಕ್ತವಾದುದಾಗಿದೆ. ಕೆಲವು ಪ್ರಯಾಣಿಕರು ವಲಸೆಯ ಮುದ್ರೆ ಹಾಗೂ ಪಾಸ್‌ಪೋರ್ಟ್‌ಗಳನ್ನು ಕಲೆಹಾಕುತ್ತಾರೆ. ಮತ್ತು ಬೇರೆ ಬೇರೆ ರೀತಿಯಲ್ಲಿ ದೇಶಕ್ಕೆ ಆಗಮನ ಹಾಗೂ ನಿರ್ಗಮನ ಮಾಡುವವರಾಗಿದ್ದಾರೆ.( ಉದಾಹರಣೆಗೆ, ಭೂ, ಜಲ ಅಥವಾ ವಾಯು) ಏಕೆಂದರೆ ಅವರ ಪಾಸ್‌ಪೋರ್ಟ್‌ ಮೇಲೆ ವಿವಿಧ ರೀತಿಯ ಮುದ್ರೆಗಳನ್ನು ಅವರು ಬಯಸುತ್ತಾರೆ.

ವಿಸಾಗಳು ಹೆಚ್ಚಾಗಿ ಶಾಯಿಯುಕ್ತ ಮುದ್ರಕಗಳ ಅರ್ಜಿಗಳನ್ನು ತೆಗೆದುಕೊಳ್ಳುತ್ತವೆ. ನಕಲು ಮಾಡುವುದನ್ನು ತಪ್ಪಿಸುವ ಸಲುವಾಗಿ ಕೆಲವು ರಾಷ್ಟ್ರಗಳು ಸ್ಟಿಕರ್‌ಗಳನ್ನು ಬಳಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Frank, Daniel (೧೯೯೫). The Jews of Medieval Islam: Community, Society, and Identity. Brill Publishers. p. ೬. ISBN ೯೦೦೪೧೦೪೦೪೬. {{cite book}}: Check |isbn= value: invalid character (help)
  2. George William Lemon (1783). English etymology; or, A derivative dictionary of the English language. p. 397. ಹೇಳಿರುವ ಪ್ರಕಾರ ಪಾಸ್‌ಪೋರ್ಟ್‌ ಎಂದರೆ ಒಂದು ಗೇಟ್‌ ಅಥವಾ ತಪಾಸಣಾ ತಡೆಯನ್ನು ದಾಟಿ ಹೋಗಲು ಇರಬೇಕಾದ ಒಂದು ಪರವಾನಗಿ ಎಂದಾಗುತ್ತದೆ. ಮೊದಲು ಇದು ಪ್ರಯಾಣದ ವಾರಂಟ್‍, ಒಂದು ಪರವಾನಗಿ ಅಥವಾ ರಾಜ ಮಹಾರಾಜರ ಪ್ರದೇಶಕ್ಕೆ ಪ್ರವೇಶ ಪಡೆಯಲು ಇರಬೇಕಾದ ಒಂದು ಪರವಾನಗಿ ಪತ್ರ pass par teut ಎಂದು ಕರೆಯಲಾಗುತ್ತಿತ್ತು.
  3. James Donald (1867). Chambers's etymological dictionary of the English language. W. and R. Chambers. pp. 366. passport, pass´pōrt, n. orig. permission to pass out of port or through the gates; a written warrant granting permission to travel.
  4. Casciani, Dominic (2008-09-25). "Analysis: The first ID cards". BBC. Retrieved 2008-09-27.
  5. "History of Passports". Passport Canada. Archived from the original on ಜೂನ್ 3, 2013. Retrieved April 18, 2008.
  6. ಮಾರಸ್, ಮೈಕಲ್, ದಿ ಅನ್‌ವಾಂಟೆಡ್: ಯೂರೋಪ್‌‍ ಆನ್‌ ರೆಫ್ಯೂಜಿಸ್ ಇನ್ ದಿ ಟ್ವೆಂಟಿಯತ್ ಸೆಂಚೂರಿ . ನ್ಯೂ ಯಾರ್ಕ್:ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌ (೧೯೮೫), p. ೯೨.
  7. "ಲೀಗ್ ಆಫ್ ನೇಶನ್ಸ್ 'ಅಂತರಾಷ್ಟ್ರೀಯ' ಅಥವಾ 'ಮಾದರಿ' ಪಾಸ್‌ಪೋರ್ಟ್‌‌‌‌ ವಿನ್ಯಾಸ". Archived from the original on 2011-07-19. Retrieved 2011-03-25.
  8. "International Conferences - League of Nations Archives". Center for the Study of Global Change. 2002. Retrieved 2009-08-05.
  9. "Machine Readable Travel Documents (MRTD)". ICAO. Archived from the original on ಸೆಪ್ಟೆಂಬರ್ 25, 2008. Retrieved June 15, 2006.
  10. "The ID Chip You Don't Want in Your Passport". Bruce Schneier. ೨೦೦೬-೦೯-೧೬. Retrieved September ೧, ೨೦೦೭. {{cite news}}: Check date values in: |accessdate= and |date= (help)
  11. "Scan This Guy's E-Passport and Watch Your System Crash". Kim Zetter. Archived from the original on ಜನವರಿ 5, 2013. Retrieved September 1, 2007.
  12. ಕ್ವೀನ್ ಆಂಡ್ಪಾ ಸ್‌ಪೋರ್ಟ್‌‌‌‌ - royal.gov.uk.
  13. "ಪಾಸ್‌ಪೋರ್ಟ್‌‌‌‌ ಮೆಸೆಜ್‌" - ಯುನೈಟೆಡ್ ಸ್ಟೇಟ್ಸ್‌‍ ಪಾಸ್‌ಪೋರ್ಟ್‌‌‌‌ ಕಲಮ್‌.
  14. ೨೩ ಜೂನ್‌‍ ೧೯೮೧ರ ಅಜೆಂಡಾಗಳು, ೩೦ ಜೂನ್‌ ೧೯೮೨, ೧೪ ಜುಲೈ ೧೯೮೬ ಮತ್ತು ೧೦ ಜುಲೈ ೧೯೯೫ರಂದು ಪಾಸ್‌ಪೋರ್ಟ್‌ ಅನ್ನು ಏಕೈಕ ಮಾದರಿಯದ್ದಾಗಿ ಮಾಡಬೇಕು ಎಂಬುದರ ಕುರಿತಾದ ಅಜೆಂಡಾಗಳು ಬಂದವು. OJEC, ೧೯ ಸೆಪ್ಟೆಂಬರ್‌ ೧೯೮೧, ಸಿ ೨೪೧, ಪುಟ. ೧; ೧೬ ಜುಲೈ ೧೯೮೨, C ೧೭೯, p. ೧; ೧೪ ಜುಲೈ ೧೯೮೬, C ೧೮೫, p. ೧; ೪ ಆಗಸ್ಟ್ ೧೯೯೫, C ೨೦೦, p. ೧.
  15. ಆಂಡಿಯನ್ ಕಮ್ಯೂನಿಟಿ ಡಿಸಿಷನ್‌ 525: ಇದು ಸಾಮಾನ್ಯವಾಗಿ ಆಂಡಿಯನ್‌ ಪಾಸ್‌ಪೋರ್ಟ್‌ನಲ್ಲಿದ್ದ ತಾಂತ್ರಿಕ ಶಬ್ಧಗಳು Archived 2006-05-26 ವೇಬ್ಯಾಕ್ ಮೆಷಿನ್ ನಲ್ಲಿ..
  16. Crocombe, R. G. (2007). Asia in the Pacific Islands: replacing the West. University of South Pacific Press. p. 165. ISBN 9789820203884. Retrieved 10/05/2010. {{cite book}}: Check date values in: |accessdate= (help)
  17. http://ezra.cornell.edu/posting.php?timestamp=1065675600
  18. Wallace, William N. (1990-06-12). "Putting Tradition to the Test". The New York Times. Retrieved 2010-05-21.
  19. http://www.bmlv.gv.at/truppendienst/ausgaben/artikel.php?id=೪೩೩
  20. "Application Form". New Passport. Retrieved June 15, 2006.
  21. "Passports for persons liable for military service". Finnish Police. 2009. Archived from the original on 2008-10-14. Retrieved 2009-08-24.
  22. ೮೮೫[53]
  23. ಇರಾನ್ ಪ್ರವಾಸಕ್ಕೆ ಸಲಹೆಗಳು -ಆಸ್ಟ್ರೇಲಿಯನ್‌ ಡಿಪಾರ್ಟ್‌ಮೆಂಟ್‌ ಆಫ್ ಫಾರಿನ್‌ ಅಫೇರ್ಸ್‌ ಆಂಡ್‌ ಟ್ರೇಡ್‌
  24. ಟ್ರಾವೆಲ್‌ ರಿಪೋರ್ಟ್‌ -ಕುವೈತ್‌
  25. ಲೆಬನಾನ್ ಪ್ರಯಾಣಕ್ಕೆ ಸಲಹೆಗಳು - ಆಸ್ಟ್ರೇಲಿಯನ್ ಡಿಪಾರ್ಟ್‌ಮೆಂಟ್‌ ಆಫ್ ಫಾರಿನ್‌ ಅಫೇರ್ಸ್ ಆಂಡ್‌ ಟ್ರೇಡ್‌ Archived 2008-12-24 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಲೆಬನೀಸ್ ಮಿನಿಸ್ಟ್ರಿ ಆಫ್‌ ಟೂರಿಸಮ್ Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ.
  26. "ಲಿಬಿಯಾ ಪ್ರಯಾಣಕ್ಕೆ ಸಲಹೆಗಳು - ಆಸ್ಟ್ರೇಲಿಯನ್ ಡಿಪಾರ್ಟ್‌ಮೆಂಟ್‌ ಆಫ್ ಫಾರಿನ್‌ ಅಫೇರ್ಸ್ ಆಂಡ್‌ ಟ್ರೇಡ್‌". Archived from the original on 2015-10-11. Retrieved 2011-03-25.
  27. ಮೈಕೆಲ್‌ ಫ್ರಾಡ್‌‍, ಕೆನಡಾ ಡಿಪೆಂಡ್ಸ್ ಸೌದಿ ಪಾಲಿಸಿ ಆಫ್ ಶನ್ನಿಂಗ್ ಟೂರಿಸ್ಟ್ಸ್ ಹೂ ವಿಸಿಟೆಡ್ ಇಸ್ರೇಲ್, ೭ ಡಿಸೆಂಬರ್ ೨೦೦೮, ಜೆರುಸಲೆಮ್ ಪೋಸ್ಟ್
  28. "ಸುಡಾನ್‌‍ ಪ್ರಯಾಣಕ್ಕೆ ಸಲಹೆಗಳು - ಆಸ್ಟ್ರೇಲಿಯನ್ ಡಿಪಾರ್ಟ್‌ಮೆಂಟ್‌‍ ಆಫ್ ಫಾರಿನ್‌ ಅಫೇರ್ಸ್ ಆಂಡ್ ಟ್ರೇಡ್‌". Archived from the original on 2013-07-05. Retrieved 2011-03-25.
  29. ಸಿರಿಯಾಕ್ಕೆ ಪ್ರಯಾಣದ ಸಲಹೆಗಳು -ಆಸ್ಟ್ರೇಲಿಯನ್ ಡಿಪಾರ್ಟ್‌ಮೆಂಟ್‌ ಆಫ್‌ ಫಾರಿನ್‌ ಅಫೇರ್ಸ್ ಆಂಡ್‌ ಟ್ರೇಡ್‌ Archived 2008-12-19 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಸೀರಿಯನ್‌ ಮಿನಿಸ್ಟ್ರಿ ಆಫ್ ಟೂರಿಸಮ್ Archived 2012-05-05 ವೇಬ್ಯಾಕ್ ಮೆಷಿನ್ ನಲ್ಲಿ.
  30. "ಯಮನ್‍ ಪ್ರಯಾಣಕ್ಕೆ ಸಲಹೆಗಳು- ಆಸ್ಟ್ರೇಲಿಯನ್ ಡಿಪಾರ್ಟ್‌ಮೆಂಟ್‌ ಆಫ್‌ ಫಾರಿನ್‌ ಅಫೇರ್ಸ್‌ ಆಂಡ್‌ ಟ್ರೇಡ್‌". Archived from the original on 2011-08-20. Retrieved 2011-03-25.
  31. "ಇರಾಕ್‌ಗೆ ಹೋಗದಂತೆ ತಡೆಯಲು ಪಾಸ್‌ಪೋರ್ಟ್‌ಗಳನ್ನು ಫಿಲಿಫಿನೊ ಪಾಸ್‌ಪೋರ್ಟ್‍ಗಳನ್ನು ಗುರುತು ಮಾಡಲಾಗಿದೆ". Archived from the original on 2013-06-04. Retrieved 2011-03-25.
  32. "Cuba : Country Specific Information". U.S. Department of State. November 7, 2008. Archived from the original on ಏಪ್ರಿಲ್ 9, 2009. Retrieved ಮಾರ್ಚ್ 25, 2011. {{cite journal}}: Cite journal requires |journal= (help).
  33. EU ವಿಧೇಯಕ
  34. "ಪ್ರಯಾಣದಲ್ಲಿ ಒಪ್ಪಿಗೆಯಾಗದ ಪ್ರಮಾಣಪತ್ರಗಳು". Archived from the original on 2011-05-14. Retrieved 2011-03-25.
  35. "GEN 1.3 ENTRY, TRANSIT AND DEPARTURE OF PASSENGERS AND CREW" (PDF). Archived from the original (PDF) on 2021-12-16. Retrieved 2011-03-25.
  36. ಟೊಂಗಾ ರಾಜನ ನ್ಯಾಯಾಲಯದಲ್ಲಿ
  37. "ಬ್ರೆಜಿಲ್: ವಿದೇಶಿಗರಿಗಿರುವ ರಹದಾರಿ ವಿಸಾ". Archived from the original on 2010-12-30. Retrieved 2011-03-25.
  38. "Fakta om nationellt id-kort". Signguard. Archived from the original on 2012-01-11. Retrieved 2009-05-18.
  39. Willis, Hh; Latourrette, T (2008). "Western Hemisphere Travel Initiative". Risk analysis : an official publication of the Society for Risk Analysis. 28 (2). Bureau of Consular Affairs, U.S. State Department: 325–39. doi:10.1111/j.1539-6924.2008.01022.x. ISSN 0272-4332. PMID 18419652. Archived from the original on 2005-04-06. Retrieved 2008-05-20. {{cite journal}}: Unknown parameter |month= ignored (help)CS1 maint: multiple names: authors list (link).
  40. "For U.S. Citizens". Customs and Border Protection, U.S. Department of Homeland Security. Archived from the original on 2008-09-16. Retrieved 2008-05-20. {{cite journal}}: Cite journal requires |journal= (help).
  41. "Torres Strait Treaty and You - What is free movement for traditional activities?". Australian Government = Dept. of Foreign Affairs and Trade. Archived from the original on 13 ಏಪ್ರಿಲ್ 2010. Retrieved 3 March 2010.
  42. ಡಾಕ್ಯೂಮೆಂಟ್‌ ಇನ್ ಲ್ಯೂ ಆಫ್‌ ಇಂಟರ್ನಲ್ ಟ್ರಾವೆಲ್ ಡಾಕ್ಯೂಮೆಂಟ್‌ ಐಐಎಮ್‌. 114 Archived 2009-02-21 ವೇಬ್ಯಾಕ್ ಮೆಷಿನ್ ನಲ್ಲಿ., ಮಲೇಷ್ಯಿಯಾದ ವಲಸೆ ಇಲಾಖೆ; ೪ ಮಾರ್ಚ್‌ ೨೦೦೯ರಂದು ಪಡೆಯಲಾಗಿದ್ದು.


ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಬಾಹ್ಯ ಕೊಂಡಿಗಳು‌

ಬದಲಾಯಿಸಿ

ಟೆಂಪ್ಲೇಟು:Visa Requirements