ಕ್ವೀನ್ಸ್‌ಲ್ಯಾಂಡ್‌

23°0′S 143°0′E / 23.000°S 143.000°E / -23.000; 143.000 ಕ್ವೀನ್ಸ್‌ಲ್ಯಾಂಡ್‌ ಆಸ್ಟ್ರೇಲಿಯಾದ ಒಂದು ರಾಜ್ಯ. ಇದು ಪ್ರಧಾನ ಭೂಖಂಡದ ಈಶಾನ್ಯ ಭಾಗದಲ್ಲಿದೆ. ಇದು ಪಶ್ಚಿಮದಲ್ಲಿ ನಾರ್ದರ್ನ್ ಟೆರಿಟರಿ, ನೈಋತ್ಯದಲ್ಲಿ ದಕ್ಷಿಣ ಆಸ್ಟ್ರೇಲಿಯಾ ಮತ್ತು ದಕ್ಷಿಣದಲ್ಲಿ ನ್ಯೂ ಸೌತ್ ವೇಲ್ಸ್‌‌ನಿಂದ ಆವರಿಸಲ್ಪಟ್ಟಿದೆ. ಕ್ವೀನ್ಸ್‌ಲ್ಯಾಂಡ್‌ ಪೂರ್ವದಲ್ಲಿ ಕೋರಲ್ ಸಮುದ್ರ ಪೆಸಿಫಿಕ್ ಸಾಗರವನ್ನು ಹೊಂದಿದೆ. ಇದು ಪಶ್ಚಿಮ ಆಸ್ಟ್ರೇಲಿಯಾದ ನಂತರ ವಿಸ್ತೀರ್ಣದಲ್ಲಿ ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ಹಾಗೂ ನ್ಯೂ ಸೌತ್ ವೇಲ್ಸ್‌ ಮತ್ತು ವಿಕ್ಟೋರಿಯಾದ ನಂತರ ರಾಷ್ಟ್ರದ ಮ‌ೂರನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.

Gross state product 
 - Product ($m)$$೨೨೪,೧೮೭[]

ಈ ಪ್ರದೇಶದಲ್ಲಿ ಮೊದಲು ಅನೇಕ ದಿನಾಂಕ ಸೂಚಿಸುವ ವಿಧಾನಗಳ ಪ್ರಕಾರ ಸ್ಥಳೀಯ ಆಸ್ಟ್ರೇಲಿಯಾದವರು ಮತ್ತು 40,000ದಿಂದ 65,000 ವರ್ಷಗಳ ಹಿಂದೆ ಆಗಮಿಸಿದ ಟಾರೆಸ್ ಸ್ಟ್ರೈಟ್ ಐಲ್ಯಾಂಡ್‌ನವರು ನೆಲೆಸಿದ್ದರು.[] ನಂತರ ಕ್ವೀನ್ಸ್‌ಲ್ಯಾಂಡ್‌ಅನ್ನು ಬ್ರಿಟಿಷ್‌ ರಾಜವಸಾಹತು ಆಗಿ ಮಾಡಿ, ಜೂನ್‌ 6ರ 1859ರಲ್ಲಿ ನ್ಯೂ ಸೌತ್ ವೇಲ್ಸ್‌ನಿಂದ ಬೇರ್ಪಡಿಸಲಾಯಿತು. ಈ ದಿನಾಂಕವನ್ನು ಇಂದು ವಾರ್ಷಿಕವಾಗಿ ಕ್ವೀನ್ಸ್‌ಲ್ಯಾಂಡ್‌ ದಿನವೆಂದು ಆಚರಿಸಲಾಗುತ್ತದೆ.

ಈಗಿನ ಬ್ರಿಸ್ಬೇನ್‌ ಹಿಂದೆ ಮೋರೆಟನ್ ಕೊಲ್ಲಿದಂಡನೆಯ ನೆಲೆಯಾಗಿತ್ತು. ಮತ್ತೆ ಮತ್ತೆ ತಪ್ಪು ಮಾಡುವ ಅಪರಾಧಿಗಳಿಗೆ ನ್ಯೂ ಸೌತ್ ವೇಲ್ಸ್‌ನಲ್ಲಿ ಶಿಕ್ಷೆ ವಿಧಿಸುವಾಗ ಕಾನೂನು ಉಲ್ಲಂಘಿಸಿದವರನ್ನು ಇಲ್ಲಿ ಇರಿಸಲಾಗುತ್ತಿತ್ತು. ರಾಜ್ಯವು ನಂತರ ಸ್ವತಂತ್ರ ಒಪ್ಪಂದಗಳನ್ನು ಉತ್ತೇಜಿಸಿತು. ಈಗ ಕ್ವೀನ್ಸ್‌ಲ್ಯಾಂಡ್‌ನ ಆರ್ಥಿಕ ಪರಿಸ್ಥಿತಿಯು ಕೃಷಿ, ಪ್ರವಾಸ ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ಏಳಿಗೆ ಹೊಂದುತ್ತಿದೆ.

ರಾಜ್ಯದ ಜನಸಂಖ್ಯೆಯು ಆಗ್ನೇಯ ಕ್ವೀನ್ಸ್‌ಲ್ಯಾಂಡ್‌‌ನಲ್ಲಿ ಕೇಂದ್ರೀಕೃತವಾಗಿದೆ. ಇದು ರಾಜಧಾನಿ ಬ್ರಿಸ್ಬೇನ್‌, ಲೋಗನ್ ಸಿಟಿ, ರೆಡ್‌ಲ್ಯಾಂಡ್ ಸಿಟಿ, ಇಪ್ಸ್‌ವಿಚ್‌, ಟೂವೂಂಬ ಹಾಗೂ ಗೋಲ್ಡ್ ಕೋಸ್ಟ್‌ ಮತ್ತು ಸನ್‌ಶೈನ್ ಕೋಸ್ಟ್‌ ಮೊದಲಾದ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಇತರ ಪ್ರಮುಖ ಪ್ರಾದೇಶಿಕ ಕೇಂದ್ರಗಳೆಂದರೆ - ಕೈರ್ನ್ಸ್, ಟೌವ್ನ್‌ಸ್ವಿಲ್ಲೆ, ಮ್ಯಾಕೆ, ರೋಖ್ಯಾಂಪ್ಟನ್‌, ಬುಂದಬರ್ಗ್‌, ಹರ್ವೆ ಬೇ, ಇಂಘ್ಯಾಮ್‌ ಮತ್ತು ಮೌಂಟ್ ಇಸಾ.

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಬಿಸಿಯಾದ ಹವಾಮಾನವಿರುವುದರಿಂದ ಮತ್ತು ರಾಜ್ಯದ ಅಧಿಕ ಭಾಗವು ಉಷ್ಣವಲಯದಲ್ಲಿರುವುದರಿಂದ ಇದನ್ನು ಹೆಚ್ಚಾಗಿ ಸೂರ್ಯನ ಬೆಳಕಿನ ರಾಜ್ಯ ಎಂಬ ಅಡ್ಡಹೆಸರಿನಿಂದ ಕರೆಯುತ್ತಾರೆ.

ವ್ಯುತ್ಪತ್ತಿ ಶಾಸ್ತ್ರ

ಬದಲಾಯಿಸಿ

ಜೂನ್‌ 6ರ 1859ರಲ್ಲಿ ಈ ರಾಜ್ಯವನ್ನು ನ್ಯೂ ಸೌತ್ ವೇಲ್ಸ್‌ನಿಂದ ಬೇರ್ಪಡಿಸುವ ಪ್ರಕಟಣೆಗೆ ಸಹಿಹಾಕಿದ ರಾಣಿ ವಿಕ್ಟೋರಿಯಾ[] ಗೌರವಾರ್ಥವಾಗಿ ರಾಜ್ಯಕ್ಕೆ ಈ ಹೆಸರನ್ನು ಇಡಲಾಗಿದೆ. ಆ ಸಂದರ್ಭದಲ್ಲಿ ವಿಕ್ಟೋರಿಯಾ ವ್ಯಾಪಕವಾಗಿ ಜನಪ್ರಿಯವಾಗಿದ್ದ ರಾಣಿಯಾಗಿದ್ದಳು. ಇವಳು ಇಂಗ್ಲಿಷ್ ನಾವಿಕ ಜೇಮ್ಸ್ ಕುಕ್ನ ಸ್ಮರಣಾರ್ಥವಾಗಿ ಪ್ರಭಾವಶಾಲಿ ಸ್ಥಳೀಯ ಪ್ರೆಸ್ಬಿಟೀರಿಯನ್ ಮಂತ್ರಿ ಜಾನ್ ಡ್ಯುನ್ಮೋರ್ ಲ್ಯಾಂಗ್ ಸಲಹೆ ನೀಡಿದ್ದರು. ನಂತರ ಹೊಸ ವಸಾಹತು ಕುಕ್ಸ್‌ಲ್ಯಾಂಡ್ ಗೆ ನಾಮಸೂಚಕ ಹೆಸರನ್ನು ಇಡುವಂತೆ ಸೂಚಿಸಿದಳು.[][] ದಕ್ಷಿಣ ಆಸ್ಟ್ರೇಲಿಯಾದ ರಾಜ್ಯ ವಿಕ್ಟೋರಿಯಾಕ್ಕೂ ಸಹ ಆಕೆಯ ಹೆಸರನ್ನೇ ಇಡಲಾಗಿದೆ.

ಇತಿಹಾಸ

ಬದಲಾಯಿಸಿ

ಕ್ವೀನ್ಸ್‌ಲ್ಯಾಂಡ್‌ನ ಇತಿಹಾಸವು ದೀರ್ಘ ಕಾಲದ ಸ್ಥಳೀಯರ ಅಸ್ತಿತ್ವ ಮತ್ತು ಹಿಂದೆ ನೆಲೆಗೊಂಡಿದ್ದ ಯುರೋಪಿಯನ್ನರ ವಿಶೇಷ ಘಟನೆಗಳುಳ್ಳ ಅವಧಿಗಳೆರಡನ್ನೂ ಒಳಗೊಂಡ ಸಾವಿರಾರು ವರ್ಷಗಳ ದೀರ್ಘಾವಧಿಯನ್ನು ವ್ಯಾಪಿಸಿಕೊಂಡಿದೆ. ಸ್ಥಳೀಯ ಆಸ್ಟ್ರೇಲಿಯಾದವರು ಸರಿಸುಮಾರು 40,000 ವರ್ಷಗಳ ಹಿಂದಿನಿಂದ ಇದ್ದರೆಂದು ಅಂದಾಜಿಸಲಾದ ಈಶಾನ್ಯ ಆಸ್ಟ್ರೇಲಿಯಾದ ಪ್ರದೇಶವನ್ನು 1770ರಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್ ಸಂಧಿಸುವ ಮೊದಲೇ ಡಚ್, ಪೋರ್ಚುಗೀಸ್ ಮತ್ತು ಫ್ರೆಂಚ್ ನಾವಿಕರು ಸಂಶೋಧಿಸಿದ್ದಾರೆ. ನ್ಯೂ ಸೌತ್ ವೇಲ್ಸ್‌ನಿಂದ ಬೇರ್ಪಟ್ಟ ಪ್ರತ್ಯೇಕ ವಸಾಹತು ಎಂಬುದಾಗಿ ರಚನೆಯಾದುದರ 150ನೇ ವಾರ್ಷಿಕ ದಿನವೆಂದು ಜೂನ್‌ 2009ರಲ್ಲಿ ಆಚರಿಸಲಾಯಿತು.[] ರಾಜ್ಯವು ಯುರೋಪಿಯನ್ ವಸಾಹತುಗಾರರ ಮತ್ತು ಸ್ಥಳೀಯ ನಿವಾಸಿಗರ ನಡುವಿನ ಗಡಿನಾಡಿನ ಯುದ್ಧಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಇಲ್ಲಿ ದಕ್ಷಿಣ ಪೆಸಿಫಿಕ್‌ ಮ‌ೂಲದ ಕಡಿಮೆ ಕೂಲಿಯ ಕನಾಕ (ಬಲಾತ್ಕಾರವಾಗಿ ಕೆಲಸ ಮಾಡುತ್ತಿದ್ದ)ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ.

 
ಕ್ವೀನ್ಸ್‌ಲ್ಯಾಂಡ್‌ ನಗರಗಳು, ಪಟ್ಟಣಗಳು, ವಸಾಹತುಗಳು ಮತ್ತು ರಸ್ತೆ ಜಾಲ

ಕ್ವೀನ್ಸ್‌ಲ್ಯಾಂಡ್‌ ಉತ್ತರದಲ್ಲಿ, ಭೂಖಂಡದ ಉತ್ತರ ಭಾಗದ ತುತ್ತತುದಿಯಾದ ನ್ಯೂ ಜೀನಿಯಾದ ಕರಾವಳಿಯಲ್ಲಿನ ಬೊಯಗ್ಯು ದ್ವೀಪದೊಂದಿಗೆ ಟಾರೆಸ್ ಸ್ಟ್ರೈಟ್‌ನಿಂದ ಆವರಿಸಲ್ಪಟ್ಟಿದೆ. ನ್ಯೂ ಜೀನಿಯಾದ ದಿಕ್ಕಿಗೆ ಕೇಂದ್ರೀಕೃತವಾಗಿರುವ ತ್ರಿಕೋನಾಕಾರದ ಕ್ಯಾಪೆ ಯಾರ್ಕ್ ಪರ್ಯಾಯ ದ್ವೀಪ, ಈ ರಾಜ್ಯದ ಅತ್ಯಂತ ಉತ್ತರ ದಿಕ್ಕಿನ ತುದಿಯಲ್ಲಿರುವ ಪ್ರದೇಶವಾಗಿದೆ. ಪರ್ಯಾಯ ದ್ವೀಪದ ಪಶ್ಚಿಮ ಭಾಗವು ಗಲ್ಫ್ ಆಫ್ ಕಾರ್ಪೆಂಟೇರಿಯದಿಂದ ಇಲ್ಲವಾಗಿ ಹೋಗಿದೆ. ಅದೇ ಅದರ ಪೂರ್ವ ಭಾಗವು ಪೆಸಿಫಿಕ್ ಸಾಗರದ ಕವಲು ಕೋರಲ್ ಸಮುದ್ರದ ಅಂಚಿನಲ್ಲಿದೆ. ಈ ರಾಜ್ಯದ ಪೂರ್ವದ ಸೀಮೆಯೆಂದರೆ ಪೆಸಿಫಿಕ್ ಸಾಗರ. ಕ್ವೀನ್ಸ್‌ಲ್ಯಾಂಡ್‌ ಪಶ್ಚಿಮದಲ್ಲಿ 138°E ರೇಖಾಂಶದಲ್ಲಿ ನಾರ್ದರ್ನ್ ಟೆರಿಟರಿಯಿಂದ ಹಾಗೂ ನೈಋತ್ಯದಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಈಶಾನ್ಯ ಅಂಚಿನಿಂದ ಆವರಿಸಲ್ಪಟ್ಟಿದೆ.

ದಕ್ಷಿಣ ದಿಕ್ಕಿನಲ್ಲಿ ಈ ರಾಜ್ಯದ ಸೀಮೆಯಾಗಿರುವ ಮ‌ೂರು ವಿಭಾಗಗಳಿವೆ: ಪಾಯಿಂಟ್ ಡೇಂಜರ್‌ನಿಂದ ಡ್ಯುಮರೆಸ್ಕ್ ನದಿಯವರೆಗಿನ ಜಲಾನಯನ ಪ್ರದೇಶ; ಡ್ಯುಮರೆಸ್ಕ್, ಮ್ಯಾಕ್‌ಇಂಟೈರ್ ಮತ್ತು ಬಾರ್ವನ್ಅನ್ನು ಒಳಗೊಂಡ ನದಿ ವಿಭಾಗ; ಹಾಗೂ ದಕ್ಷಿಣ ಆಸ್ಟ್ರೇಲಿಯಾದ ಗಡಿಯ ಆಚೆಗಿನ 29°S ರೇಖಾಂಶ ಪ್ರದೇಶ (29ನೇ ಅಕ್ಷಾಂಶ ರೇಖೆಯ ಕೆಳಗಿನ ಕೆಲವು ಕಡಿಮೆ ಐತಿಹಾಸಿಕ ಅತಿಕ್ರಮಣದಿಂದ ಪಡೆದ ಪ್ರದೇಶಗಳನ್ನೂ ಒಳಗೊಂಡು).

ರಾಜ್ಯದ ರಾಜಧಾನಿ ಬ್ರಿಸ್ಬೇನ್‌. ಇದು ನ್ಯೂ ಸೌತ್ ವೇಲ್ಸ್‌ ಸೀಮೆಯಿಂದ ರಸ್ತೆಯ ಮ‌ೂಲಕ 100 ಕಿಲೋಮೀಟರ್ (60 ಮೈಲು) ಉತ್ತರಕ್ಕೆ ಕರಾವಳಿಯಲ್ಲಿದೆ. ವಿಸ್ತೀರ್ಣದಲ್ಲಿ ಪ್ರಪಂಚದಲ್ಲೇ ಐದನೇ ಅತಿದೊಡ್ಡ ನಗರವಾದ ಮೌಂಟ್ ಇಸಾ ಕ್ವೀನ್ಸ್‌ಲ್ಯಾಂಡ್‌ನಲ್ಲಿದೆ‌. ಈ ನಗರದ ವಿಸ್ತೀರ್ಣ 40,000 ಚದರ ಕಿಲೋಮೀಟರ್ (15,400 ಚದರ ಮೈಲು). ರಾಜ್ಯವು ಅನೇಕ ಅಧಿಕೃತವಾಗಿ ಅಂಗೀಕರಿಸಲಾದ ವಲಯಗಳಾಗಿ ವಿಭಾಗಿಸಲ್ಪಟ್ಟಿದೆ. ಇತರ ಪ್ರಮುಖ ಭೌಗೋಳಿಕ ಪ್ರದೇಶಗಳೆಂದರೆ - ಅಥೆರ್ಟಾನ್ ಪ್ರಸ್ಥಭೂಮಿ, ಗ್ರ್ಯಾನೈಟ್ ಬೆಲ್ಟ್ ಮತ್ತು ನೈಋತ್ಯ ಭಾಗದ ಚಾನೆಲ್ ಕಂಟ್ರಿ.

ಕ್ವೀನ್ಸ್‌ಲ್ಯಾಂಡ್‌ ಅನೇಕ ನೈಸರ್ಗಿಕ ಸೊಬಗಿನ ಸ್ಥಳಗಳನ್ನು ಹೊಂದಿದೆ, ಅವುಗಳೆಂದರೆ: ಸನ್‌ಶೈನ್ ಕೋಸ್ಟ್‌ ಮತ್ತು ಗೋಲ್ಡ್ ಕೋಸ್ಟ್‌‌ಗಳು ರಾಜ್ಯದ ಕೆಲವು ಹೆಚ್ಚು ಜನಪ್ರಿಯ ಕರಾವಳಿಗಳನ್ನು ಹೊಂದಿದೆ; ಹಲವಾರು ದೃಶ್ಯ, ಜಲಪಾತ ಮತ್ತು ವಿಹಾರ ಪ್ರವಾಸದ ಪ್ರದೇಶಗಳನ್ನು ಹೊಂದಿರುವ ಬುನ್ಯಾ ಪರ್ವತಗಳು ಮತ್ತು ಗ್ರೇಟ್ ಡಿವೈಡಿಂಗ್ ರೇಂಜ್; ಕಾರ್ನರ್ವನ್ ಕಮರಿ(ಗಾರ್ಜ್); ವಿಟ್ಸಂಡೆ ದ್ವೀಪ ಮತ್ತು ಹಿಂಚಿನ್‌ಬ್ರೂಕ್ ದ್ವೀಪ.

ಈ ರಾಜ್ಯವು ಪ್ರಪಂಚದ ಆಸ್ತಿಯ ಪಟ್ಟಿಯಲ್ಲಿ ಸೇರಿದ ಐದು ಸಂರಕ್ಷಣಾ ಪ್ರದೇಶಗಳನ್ನು ಹೊಂದಿದೆ: ಗಲ್ಫ್ ಕಂಟ್ರಿರಿವರ್‌ಸ್ಲೈಹ್‌ನ ಆಸ್ಟ್ರೇಲಿಯಾದ ಸಸ್ತನಿಗಳ ಪಳೆಯುಳಿಕೆಯ ಪ್ರದೇಶ, ಆಸ್ಟ್ರೇಲಿಯಾದ ಗೊಂಡ್ವನ ಮಳೆಕಾಡುಗಳು, ಫ್ರೇಸರ್ ದ್ವೀಪ, ಗ್ರೇಟ್ ಬ್ಯಾರಿಯರ್ ರೀಫ್ ಮತ್ತು ಕ್ವೀನ್ಸ್‌ಲ್ಯಾಂಡ್‌ನ ‌ಆರ್ದ್ರ ಉಷ್ಣವಲಯ.

ವಾಯುಗುಣ

ಬದಲಾಯಿಸಿ

ಭೂಪ್ರದೇಶದ ಕಾರಣದಿಂದಾಗಿ ರಾಜ್ಯದಾದ್ಯಂತದ ವಾಯುಗುಣದಲ್ಲಿ ಗಮನಾರ್ಹ ವ್ಯತ್ಯಾಸಗಳು ಕಂಡುಬರುತ್ತವೆ. ಪಶ್ಚಿಮದ ಒಳನಾಡಿನಲ್ಲಿ ಕಡಿಮೆ ಮಳೆ ಮತ್ತು ಬಿಸಿಯಾದ ಬೇಸಿಗೆಯಿರುತ್ತದೆ. ದೂರದ ಉತ್ತರದಲ್ಲಿ ಮಾನ್ಯೂನ್‌ ಮಾರುತದ 'ಮಳೆ'ಗಾಲವಿದ್ದರೆ, ಕರಾವಳಿಯಾದ್ಯಂತ ಬೆಚ್ಚಗಿನ ಸಮಶೀತೋಷ್ಣದ ವಾತಾವರಣವಿರುತ್ತದೆ. ಒಳನಾಡು ಮತ್ತು ದಕ್ಷಿಣ ವಲಯಗಳು ಕನಿಷ್ಠ ತಾಪಮಾನವನ್ನು ಅನುಭವಿಸುತ್ತವೆ. ಕರಾವಳಿ ಪ್ರದೇಶಗಳ ವಾಯುಗುಣವು ಬೆಚ್ಚಗಿನ ಸಾಗರದ ನೀರಿನ ಪ್ರಭಾವಕ್ಕೆ ಒಳಗಾಗುತ್ತದೆ. ಇದು ಈ ಪ್ರದೇಶವನ್ನು ಅತಿಹೆಚ್ಚಿನ ತಾಪಮಾನದಿಂದ ದೂರವಿರಿಸುತ್ತದೆ ಮತ್ತು ಮಳೆಗೆ ಆರ್ದ್ರತೆಯನ್ನು ಒದಗಿಸುತ್ತದೆ.[]

 
ರಾಜ್ಯದ ರಾಜಧಾನಿ ಮತ್ತು ಹೆಚ್ಚು ಜನಪ್ರಿಯ ನಗರ ಬ್ರಿಸ್ಬೇನ್‌

ತಾಪಮಾನ ಮತ್ತು ಆರ್ದ್ರತೆಯ ಆಧಾರದಲ್ಲಿ ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಾಯುಗುಣವನ್ನು ಪ್ರಧಾನ ಅಂಶವಾಗಿ ಹೊಂದಿರುವ ಐದು ವಲಯಗಳಿವೆ‌[]:

  • ಬಿಸಿಯಾದ ಆರ್ದ್ರ ಬೇಸಿಗೆ (ದೂರದ ಉತ್ತರ ಭಾಗ ಮತ್ತು ಕರಾವಳಿ)
  • ಬೆಚ್ಚಿಗಿನ ಆರ್ದ್ರ ಬೇಸಿಗೆ (ಕರಾವಳಿಯ ಮೇಲಕ್ಕೆ ಹಿಂಭಾಗದಲ್ಲಿರುವ ಪ್ರದೇಶ ಮತ್ತು ಕರಾವಳಿಯ ಆಗ್ನೇಯ)
  • ಬಿಸಿಯಾದ ಶುಷ್ಕ ಬೇಸಿಗೆ, ಹಿತಕರ ಚಳಿಗಾಲ (ಕೇಂದ್ರದ ಪಶ್ಚಿಮ ಭಾಗ)
  • ಬಿಸಿಯಾದ ಶುಷ್ಕ ಬೇಸಿಗೆ, ಶೀತ ಚಳಿಗಾಲ (ನೈಋತ್ಯ)
  • ಸಮಶೀತೋಷ್ಣ - ಬೆಚ್ಚಗಿನ ಬೇಸಿಗೆ, ಶೀತ ಚಳಿಗಾಲ (ಒಳನಾಡಿನ ಆಗ್ನೇಯ, ಉದಾ. ಗ್ರ್ಯಾನೈಟ್ ಬೆಲ್ಟ್‌)

ಆದರೆ ಕ್ವೀನ್ಸ್‌ಲ್ಯಾಂಡ್‌ನ ಹೆಚ್ಚಿನ ಜನರು ಎರಡು ಹವಾಮಾನದ ಕಾಲಗಳನ್ನು ಅನುಭವಿಸುತ್ತಾರೆ: ಒಂದು, ಸ್ವಲ್ಪಮಟ್ಟಿಗೆ ಬೆಚ್ಚಗಿನ ತಾಪಮಾನವಿರುವ ಮತ್ತು ಅತಿಕಡಿಮೆ ಪ್ರಮಾಣದಲ್ಲಿ ಮಳೆ ಬೀಳುವ "ಚಳಿಗಾಲ". ಮತ್ತೊಂದು, ಬಿಸಿಯಾದ, ತೇವವಿದ್ದು ಬೆವರುವ ತಾಪಮಾನವಿರುವ ಮತ್ತು ಅತಿ ಹೆಚ್ಚಿಗೆ ಮಳೆ ಬೀಳುವ ತೀರ ಸೆಕೆಯಿರುವ ಬೇಸಿಗೆಗಾಲ.

ಕ್ವೀನ್ಸ್‌ಲ್ಯಾಂಡ್‌ನ ಕೆಲವು ಪ್ರದೇಶಗಳ ವಾರ್ಷಿಕ ಅಂಕಿಅಂಶಗಳನ್ನು ಈ ಕೆಳಗೆ ತೋರಿಸಲಾಗಿದೆ[]:

ನಗರ ಕನಿಷ್ಠ ತಾಪಮಾನ ಗರಿಷ್ಠ ತಾಪಮಾನ ತಿಳಿಯಾದ ವಾತಾವರಣವಿರುವ ದಿನಗಳು ಮಳೆಯ ಪ್ರಮಾಣ
ಬ್ರಿಸ್ಬೇನ್‌ 14 °C (57 °F) 26 °C (79 °F) 123 1061ಮಿಮೀ (42 in)
ಮ್ಯಾಕೆ 18 °C (64 °F) 27 °C (81 °F) 113 1667ಮಿಮೀ (66 in)
ಕೈರ್ನ್ಸ್ 20 °C (68 °F) 29 °C (84 °F) 86 2223ಮಿಮೀ (88 in)
ಟೌವ್ನ್‌ಸ್ವಿಲ್ಲೆ 18 °C (64 °F) 29 °C (84 °F) ಲಭ್ಯವಿಲ್ಲ 1144ಮಿಮೀ (45 in)

ಕಳೆದ 1972ರ ಡಿಸೆಂಬರ್ 24ರಲ್ಲಿ ಬರ್ಡ್‌ಸ್ವಿಲ್ಲೆಯಲ್ಲಿ ಕಂಡುಬಂದ ತಾಪಮಾನ 49.5 °C (121 °F)ಅನ್ನು ರಾಜ್ಯದಲ್ಲಿನ ಗರಿಷ್ಠ ತಾಪಮಾನ ಎಂದು ಹೇಳಲಾಗಿದೆ. (1889ರ ಜನವರಿ 16ರಲ್ಲಿ ಕ್ಲೋನ್ಕರಿಯಲ್ಲಿ ಕಂಡುಬಂದ ತಾಪಮಾನ 53.1 °C (128 °F)ಅನ್ನು ಅಧಿಕೃತವೆಂದು ಪರಿಗಣಿಸಲಾಗಿಲ್ಲ; ಬರ್ಡ್‌ಸ್ವಿಲ್ಲೆಯಲ್ಲಿ ಕಾಣಿಸಿಕೊಂಡ ನಂತರದ ಅತಿಹೆಚ್ಚು ತಾಪಮಾನವನ್ನು ಅಧಿಕೃತವೆಂದು ಹೇಳಲಾಯಿತು).

ಕನಿಷ್ಠ ತಾಪಮಾನ −10.6 °C (13 °F) ಸ್ಟ್ಯಾಂಥೋರ್ಪ್‌ನಲ್ಲಿ 1961ರ ಜೂನ್‌ 23ರಲ್ಲಿ ಮತ್ತು 1965ರ ಜುಲೈ 12ರಲ್ಲಿ ಹರ್ಮಿಟೇಜ್‌ನಲ್ಲಿ ಕಂಡುಬಂದಿದೆ.[೧೦]

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

ಇತರ ರಾಜ್ಯಗಳಿಗೆ ಹೋಲಿಸಿದರೆ ಕ್ವೀನ್ಸ್‌ಲ್ಯಾಂಡ್‌‌ನ ಒಟ್ಟು ಜನಸಂಖ್ಯೆಯ ಸ್ವಲ್ಪ ಭಾಗ ಮಾತ್ರ ರಾಜಧಾನಿಯಲ್ಲಿ ನೆಲೆಸಿದೆ. ಜೂನ್‌ 2004ರ ಪ್ರಕಾರ ಕ್ವೀನ್ಸ್‌ಲ್ಯಾಂಡ್‌‌ನ ರಾಜಧಾನಿಯು ಒಟ್ಟು ಜನಸಂಖ್ಯೆಯ 45.7%ನಷ್ಟನ್ನು ಹೊಂದಿದೆ; ಇತರ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ ಒಟ್ಟು ಜನಸಂಖ್ಯೆಯ 63.8%ನಷ್ಟು ಜನರು ರಾಜಧಾನಿಗಳಲ್ಲಿ ನೆಲೆಸಿರುತ್ತಾರೆ.

 
ಇತರ ರಾಜ್ಯಗಳಿಗಿಂತ ಕ್ವೀನ್ಸ್‌ಲ್ಯಾಂಡ್‌ ಕಡಿಮೆ ಸಾಂದ್ರತೆಯ ಕೇಂದ್ರೀಕೃತ ಜನಸಂಖ್ಯೆ ಹೊಂದಿದೆ. ಗಣನೀಯ ಪ್ರಮಾಣದ ಜನಸಂಖ್ಯೆಯು ಟೌವ್ನ್‌ಸ್ವಿಲ್ಲೆಯಂತಹ ಪ್ರಾದೇಶಿಕ ನಗರಗಳಲ್ಲಿ ಕಂಡುಬರುತ್ತದೆ.

ಡಿಸೆಂಬರ್ 9ರ 2005ರಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಜನಸಂಖ್ಯೆಯು ಅಧಿಕೃತವಾಗಿ 4 ದಶಲಕ್ಷವನ್ನು ತಲುಪಿತು. ಕ್ವೀನ್ಸ್‌ಲ್ಯಾಂಡ್‌ ಆಸ್ಟ್ರೇಲಿಯಾದಲ್ಲಿ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯವಾಗಿದೆ. ವಾರಕ್ಕೆ ಸುಮಾರು 1,500 ಜನರು ಈ ರಾಜ್ಯಕ್ಕೆ ಬರುತ್ತಿದ್ದಾರೆ; ರಾಜ್ಯದ ದಕ್ಷಿಣ ಭಾಗವೊಂದರಲ್ಲೇ 1,000ದಷ್ಟು ಮಂದಿ ಸಾಗುತ್ತಿದ್ದಾರೆ. ಕ್ವೀನ್ಸ್‌ಲ್ಯಾಂಡ್‌ 2020ರ ಹೊತ್ತಿಗೆ ಆಸ್ಟ್ರೇಲಿಯಾದ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಬಹುದು, ಎಂದು ಭವಿಷ್ಯವಾಣಿ ಸೂಚಿಸುತ್ತದೆ.[೧೧] ಕ್ವೀನ್ಸ್‌ಲ್ಯಾಂಡ್‌ನ ಆಫೀಸ್ ಆಫ್ ಎಕಾನಮಿಕ್ ಆಂಡ್ ಸ್ಟ್ಯಾಟಿಸ್ಟಿಕಲ್ ರಿಸರ್ಚ್‌ನ ಪ್ರಕಾರ, 2007ರ ಕೊನೆಯಲ್ಲಿ ಅಂದಾಜಿಸಲಾದ ರಾಜ್ಯದ ಒಟ್ಟು ಜನಸಂಖ್ಯೆ 4,228,290. ಇದು ಹೆಚ್ಚುಕಡಿಮೆ ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆಯ 20%ನಷ್ಟಿದೆ.

2007ರಲ್ಲಿ ಕ್ವೀನ್ಸ್‌ಲ್ಯಾಂಡ್‌ TFR ಪ್ರಮಾಣವನ್ನು 2.1ರಷ್ಟು ದಾಖಲಿಸಿದೆ. ಇದು 1977ರಿಂದ ಈಚೆಗೆ ಅತಿಹೆಚ್ಚಿನದಾಗಿದೆ.[೧೨]

ಆರ್ಥಿಕ ಸ್ಥಿತಿ

ಬದಲಾಯಿಸಿ
 
ಚಿಲ್ಡರ್ಸ್‌ನ ದಕ್ಷಿಣ ಭಾಗದಲ್ಲಿರುವ ಕಬ್ಬು ಬೆಳೆಯುವ ಪ್ರದೇಶ

ಕ್ವೀನ್ಸ್‌ಲ್ಯಾಂಡ್‌ನ ಆರ್ಥಿಕತೆಯು ಸುಮಾರು 20 ವರ್ಷಗಳಿಂದ ಈಚೆಗೆ ಪ್ರವಾಸೋದ್ಯಮ ಮತ್ತು ಗಣಿಗಾರಿಕೆ ಉದ್ಯಮಗಳಿಂದ ಭಾರಿ ಉತ್ಕರ್ಷ ಕಂಡಿದೆ. ಅಂತರರಾಜ್ಯಗಳ ಮತ್ತು ಸಮುದ್ರದಾಚೆಗಿನ ವಲಸಿಗರ ಗಣನೀಯ ಗಾತ್ರದ ಒಳಹರಿವು, ಕೇಂದ್ರ ಸರಕಾರದ ಅತಿಹೆಚ್ಚಿನ ಪ್ರಮಾಣದ ಹೂಡಿಕೆ, ದೊಡ್ಡ ಮಟ್ಟದ ಖನಿಜ ನಿಕ್ಷೇಪಗಳ ಗಣಿಗಾರಿಕೆ ಮತ್ತು ಅಂತರಿಕ್ಷಯಾನ ವಿಭಾಗದಲ್ಲಿನ ಬೆಳವಣಿಗೆ ಮೊದಲಾದವುಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಭಾರಿ ಕೊಡುಗೆ ನೀಡಿವೆ. ಕಳೆದ 2008-09 ಅವಧಿಯು ರಾಜ್ಯದ 18 ವರ್ಷಗಳ ನಿರ್ವಹಣೆಯಲ್ಲೇ ಅತಿಕೆಟ್ಟ 0.8%ನಷ್ಟು ನಿಧಾನ ಗತಿಯ ಬೆಳವಣಿಗೆಯನ್ನು ಕಂಡಿದೆ.[೧೩]

1992ರಿಂದ 2002ರವರೆಗಿನ ಅವಧಿಯಲ್ಲಿನ ಕ್ವೀನ್ಸ್‌ಲ್ಯಾಂಡ್‌ನ ನಿವ್ವಳ ರಾಜ್ಯದ ಉತ್ಪನ್ನ(ಗ್ರಾಸ್ ಸ್ಟೇಟ್ ಪ್ರೋಡಕ್ಟ್)ದ ಹೆಚ್ಚಳವು ಇತರ ರಾಜ್ಯ ಮತ್ತು ಪ್ರದೇಶಗಳನ್ನು ಮೀರಿಸಿದೆ. ಆ ಅವಧಿಯಲ್ಲಿ ಕ್ವೀನ್ಸ್‌ಲ್ಯಾಂಡ್‌ನ GSP ಪ್ರತಿ ವರ್ಷ 5.0%ನಷ್ಟು ಬೆಳವಣಿಗೆ ಹೊಂದಿತು. ಅದೇ ಆಸ್ಟ್ರೇಲಿಯಾದ ನಿವ್ವಳ ದೇಶೀಯ ಉತ್ಪನ್ನವು (GDP) ಪ್ರತಿ ವರ್ಷಕ್ಕೆ 3.9%ನಷ್ಟು ಹೆಚ್ಚಾಯಿತು. ಆಸ್ಟ್ರೇಲಿಯಾದ GDPಗೆ ಕ್ವೀನ್ಸ್‌ಲ್ಯಾಂಡ್‌ನ ಕೊಡುಗೆಯು ಈ ಅವಧಿಯಲ್ಲಿ 10.4%ನಷ್ಟು ಹೆಚ್ಚಾಯಿತು. ಈ ರೀತಿ ಏರಿಕೆ ಮಾಡಿದ ಕೇವಲ ಮ‌ೂರು ರಾಜ್ಯಗಳಲ್ಲಿ ಇದೂ ಒಂದು. [೧೪]

2003ರಲ್ಲಿ ಬ್ರಿಸ್ಬೇನ್‌ ಆಸ್ಟ್ರೇಲಿಯಾದ ಇತರ ಎಲ್ಲಾ ರಾಜಧಾನಿ ನಗರಗಳಿಗಿಂತ ಕಡಿಮೆ ಜೀವನಮಟ್ಟದ ಕಡಿಮೆ ವೆಚ್ಚ ಹೊಂದಿತ್ತು. ಸುಮಾರು 2005ರ ಉತ್ತರಾರ್ಧದಲ್ಲಿ ಬ್ರಿಸ್ಬೇನ್‌ ವಸತಿಗಳಿಗಾಗಿ ಸಿಡ್ನಿ ಮತ್ತು ಕ್ಯಾನ್‌ಬೆರಾದ ನಂತರದ ಹಾಗೂ ಮೆಲ್ಬರ್ನ್‌ಅನ್ನು ಮೀರಿಸಿದ $15,000ದಷ್ಟು ಮ‌ೂರನೇ ಅತಿ ದುಬಾರಿ ರಾಜಧಾನಿಯಾಯಿತು. 2008ರಲ್ಲಿ ಕ್ವೀನ್ಸ್‌ಲ್ಯಾಂಡ್‌ ಇತರ ರಾಜ್ಯ ಅಥವಾ ಪ್ರದೇಶಗಳಿಗಿಂತ ಮನೆಗಳನ್ನು ಕನಿಷ್ಠ ಮಟ್ಟದಲ್ಲಿ ಒದಗಿಸುವ ರಾಜ್ಯವಾಯಿತು.[೧೫]

ಪ್ರಾಥಮಿಕ ಉದ್ಯಮಗಳು:'' ಬಾಳೆಹಣ್ಣುಗಳು'', ಅನಾನಾಸ್ ಹಣ್ಣುಗಳು, ಕಡಲೆಕಾಯಿಗಳು, ಇತರ ಅನೇಕ ವಿಧದ ಉಷ್ಣವಲಯದ ಮತ್ತು ಸಮಶೀತೋಷ್ಣವಲಯದ ಹಣ್ಣು ಮತ್ತು ತರಕಾರಿಗಳು, ದವಸ ಧಾನ್ಯಗಳು, ವೈನ್ ಸ್ಥಾವರಗಳು, ದನಕರುಗಳ ಸಾಕಣೆ, ಹತ್ತಿ, ಕಬ್ಬು, ಉಣ್ಣೆ ಹಾಗೂ ಗಣಿಗಾರಿಕೆ ಉದ್ಯಮಗಳಾದ ಬಾಕ್ಸೈಟ್, ಕಲ್ಲಿದ್ದಲು, ಬೆಳ್ಳಿ, ಸೀಸ, ಸತು, ಚಿನ್ನ ಮತ್ತು ತಾಮ್ರ. ಎರಡನೆ ಶ್ರೇಣಿಯ ಉದ್ಯಮಗಳು ಮೇಲೆ-ಸೂಚಿಸಿದ ಪ್ರಾಥಮಿಕ ಉತ್ಪನ್ನಗಳನ್ನು ಇನ್ನಷ್ಟು ಕ್ರಿಯೆಗೊಳಪಡಿಸುವುದನ್ನು ಒಳಗೊಳ್ಳುತ್ತವೆ. ಉದಾಹರಣೆಗಾಗಿ, ಬಾಕ್ಸೈಟ್ಅನ್ನು ವೈಪಾದಿಂದ ಸಮುದ್ರದ ಮ‌ೂಲಕ ಹಡಗಿನಿಂದ ತಂದು, ಗ್ಲ್ಯಾಡ್‌ಸ್ಟೋನ್‌ನಲ್ಲಿ ಅಲ್ಯೂಮಿನಿಯಂ ಆಕ್ಸೈಡ್ ಆಗಿ ಪರಿವರ್ತಿಸಲಾಗುತ್ತದೆ.[೧೬] ತಾಮ್ರವನ್ನು ಶುದ್ಧೀಕರಿಸುವ ಮತ್ತು ಕಬ್ಬಿನಿಂದ ಸಕ್ಕರೆಯನ್ನು ಸಂಸ್ಕರಿಸುವ ಅನೇಕ ಮಿಲ್ಲುಗಳು ಪೂರ್ವದ ಕರಾವಳಿಯುದ್ದಕ್ಕೂ ಇವೆ. ಪ್ರಮುಖ ತೃತೀಯ ಶ್ರೇಣಿಯ ಉದ್ಯಮಗಳೆಂದರೆ ಚಿಲ್ಲರೆ ವ್ಯಾಪಾರಗಳು ಮತ್ತು ಪ್ರವಾಸೋದ್ಯಮ.

ಪ್ರವಾಸೋದ್ಯಮ

ಬದಲಾಯಿಸಿ
 
ಗ್ರೇಟ್ ಬ್ಯಾರಿಯರ್ ರೀಫ್‌
 
ಪ್ರಮುಖ ಪ್ರವಾಸಿ ನಗರ ಗೋಲ್ಡ್ ಕೋಸ್ಟ್‌
ಚಿತ್ರ:DSCN1033.JPG
ಒಳನಾಡಿನಲ್ಲಿರುವ ಸರ್ಫರ್ಸ್ ಪ್ಯಾರಡೈಸ್ ಸ್ಕೈಲೈನ್

ಪ್ರವಾಸೋದ್ಯಮವು ಕ್ವೀನ್ಸ್‌ಲ್ಯಾಂಡ್‌ನ ಅತಿ ಮುಖ್ಯ ತೃತೀಯ ಶ್ರೇಣಿಯ ಉದ್ಯಮವಾಗಿದೆ. ಪ್ರತಿ ವರ್ಷ ದಶಲಕ್ಷದಷ್ಟು ಅಂತರರಾಜ್ಯ ಮತ್ತು ಕಡಲಾಚೆಯ ಸಂದರ್ಶಕರು ಸೂರ್ಯನ ಬೆಳಕಿನ ರಾಜ್ಯಕ್ಕೆ ಭೇಟಿ ನೀಡಲು ಹಿಂಡುಹಿಂಡಾಗಿ ಬರುತ್ತಿರುತ್ತಾರೆ. ಈ ಉದ್ಯಮವು ಕ್ವೀನ್ಸ್‌ಲ್ಯಾಂಡ್‌ನ GSPಗೆ 4.5%ನಷ್ಟನ್ನು ಸೇರಿಸುವುದರ ಮ‌ೂಲಕ ವಾರ್ಷಿಕವಾಗಿ $4.0 ಶತಕೋಟಿಯಷ್ಟು ಆದಾಯ ನೀಡುತ್ತದೆ.[೧೭] ಕ್ವೀನ್ಸ್‌ಲ್ಯಾಂಡ್‌ ಬಿಸಿಲಿನಿಂದ ಕೂಡಿದ ಉಷ್ಣ ಕರಾವಳಿ ಪ್ರದೇಶ, ಹುಲುಸಾಗಿರುವ ಮಳೆಕಾಡುಗಳಿಂದ ಹಿಡಿದು ಶುಷ್ಕ ಒಳನಾಡು ಪ್ರದೇಶಗಳಂತಹ ಅನೇಕ ಭೂದೃಶ್ಯಗಳನ್ನು ಹೊಂದಿರುವ ಒಂದು ರಾಜ್ಯ.

ಕ್ವೀನ್ಸ್‌ಲ್ಯಾಂಡ್‌ನ ಪ್ರಮುಖ ಪ್ರವಾಸಿ ಸ್ಥಳಗಳೆಂದರೆ - ಬ್ರಿಸ್ಬೇನ್‌, ಅತ್ಯಂತ ಉತ್ತರ ದಿಕ್ಕಿನಲ್ಲಿರುವ ಕ್ವೀನ್ಸ್‌ಲ್ಯಾಂಡ್‌ನ ಪ್ರದೇಶಗಳಾದ‌ ಕೈರ್ನ್ಸ್, ಪೋರ್ಟ್ ಡೌಗ್ಲಾಸ್ ಮತ್ತು ಡೈನ್‌ಟ್ರೀ ಮಳೆಕಾಡುಗಳು, ಗೋಲ್ಡ್ ಕೋಸ್ಟ್‌, ಗ್ರೇಟ್ ಬ್ಯಾರಿಯರ್ ರೀಫ್, ಹರ್ವೆ ಬೇ ಮತ್ತು ಹತ್ತಿರದ ಫ್ರೇಸರ್ ದ್ವೀಪ, ಟೌವ್ನ್‌ಸ್ವಿಲ್ಲೆ ಮತ್ತು ಮ್ಯಾಗ್ನೆಟಿಕ್ ದ್ವೀಪವನ್ನು ಒಳಗೊಂಡ ಉತ್ತರ ಕ್ವೀನ್ಸ್‌ಲ್ಯಾಂಡ್‌, ಉತ್ತರ ಸ್ಟ್ರ್ಯಾಡ್‌ಬ್ರೂಕ್ ದ್ವೀಪ ಮತ್ತು ದಕ್ಷಿಣ ಸ್ಟ್ರ್ಯಾಡ್‌ಬ್ರೂಕ್ ದ್ವೀಪ, ಏರ್‌ಲೈ ಬೀಚ್‌ಗೆ ಹೆಸರುವಾಸಿಯಾದ ಸನ್‌ಶೈನ್ ಕೋಸ್ಟ್‌ ಮತ್ತು ವಿಟ್ಸಂಡೆ, ವೈಟ್‌ಹ್ಯಾವೆನ್ ಬೀಚ್‌, ಹ್ಯಾಮಿಲ್ಟನ್ ದ್ವೀಪ ಮತ್ತು ಡೇಡ್ರೀಮ್ ದ್ವೀಪ.

ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್ ಕೋಸ್ಟ್‌ಅನ್ನು "ಆಸ್ಟ್ರೇಲಿಯಾದ ಚರ್ಚೆ ಮಾಡುವ ಉದ್ಯಾನ ರಾಜಧಾನಿ" ಎಂದು ಕರೆಯುತ್ತಾರೆ. ಇದು ಐದು ಪ್ರಮುಖ ಮೋಜಿನ ಉದ್ಯಾನಗಳನ್ನು ಹೊಂದಿದೆ. ಅವುಗಳೆಂದರೆ - ಡ್ರೀಮ್‌ವರ್ಲ್ಡ್, ಮ‌ೂವಿ ವರ್ಲ್ಡ್, ಸೀ ವರ್ಲ್ಡ್, ವೆಟ್ ಆಂಡ್ ವೈಲ್ಡ್ ಮತ್ತು ವೈಟ್‌ವಾಟರ್ ವರ್ಲ್ಡ್.

ಕ್ವೀನ್ಸ್‌ಲ್ಯಾಂಡ್‌ನಲ್ಲಿ ವನ್ಯಜೀವಿಗಳ ಉದ್ಯಾನಗಳೂ ಇವೆ, ಅವುಗಳೆಂದರೆ:

ಗೋಲ್ಡ್ ಕೋಸ್ಟ್‌
ಸನ್‌ಶೈನ್ ಕೋಸ್ಟ್‌
ಬ್ರಿಸ್ಬೇನ್‌
ಬ್ರಿಸ್ಬೇನ್‌ನ ಉತ್ತರ

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹೋಟೆಲ್/ಆಹಾರ (15%), ವಿಮಾನ ಟಿಕೆಟ್ ಹಣ (11%), ಇಂಧನ (11%) ಮತ್ತು ಖರೀದಿಸುವಿಕೆ/ಉಡುಗೊರೆ (11%) ಮೊದಲಾದವುಗಳನ್ನು ಹೊರತು ಪಡಿಸಿ ಬರಿಯ ಉಳಿದುಕೊಳ್ಳಲು ಒಟ್ಟು ಖರ್ಚಿನ ಸುಮಾರು 22%ನಷ್ಟು ಬೇಕಾಗುತ್ತದೆ.[೧೮]

ಸಾರಿಗೆ

ಬದಲಾಯಿಸಿ
 
ಕೈರ್ನ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಅನೇಕ ರಾಷ್ಟ್ರೀಯ ಹೆದ್ದಾರಿಗಳಿವೆ. ನಿರ್ದಿಷ್ಟವಾಗಿ ಆಗ್ನೇಯ ಕ್ವೀನ್ಸ್‌ಲ್ಯಾಂಡ್‌ನಲ್ಲಿ M1ನಂತಹ ಅತ್ಯುತ್ತಮ ಗುಣಮಟ್ಟದ ಮೋಟಾರು ಮಾರ್ಗಗಳಿವೆ.

ಪ್ರಮುಖ ರೈಲು ಸೇವೆಯನ್ನು ಕ್ವೀನ್ಸ್‌ಲ್ಯಾಂಡ್‌ ರೈಲ್ ಮತ್ತು ಪೆಸಿಫಿಕ್‌ ನ್ಯಾಷನಲ್‌ ಒದಗಿಸುತ್ತದೆ. ಮುಖ್ಯವಾಗಿ ಬ್ರಿಸ್ಬೇನ್‌ನ ಬಂದರು‌ ಹಾಗೂ ಗ್ಲ್ಯಾಡ್‌ಸ್ಟೋನ್ ಮತ್ತು ಟೌವ್ನ್‌ಸ್ವಿಲ್ಲೆಯ ಸಹಾಯಕ ಬಂದರುಗಳನ್ನೂ ಒಳಗೊಂಡಂತಹ ಕೊಯಮೇಜರ್ ಬಂದರುಗಳಾದ್ಯಂತ.

ಜೆಟ್ ವಿಮಾನಗಳ ಸೇವೆಯನ್ನು ಗ್ರೀನ್‌ಹೌಸ್ ಎನರ್ಜಿ, ಕ್ವೀನ್ಸ್‌ಲ್ಯಾಂಡ್‌ ಟ್ರಾನ್ಸ್‌ಪೋರ್ಟ್, ಡಿಪಾರ್ಟ್ಮೆಂಟ್ ಆಫ್ ಮೈನ್ ರೋಡ್ಸ್, ಡಿಫೆನ್ಸ್ ಫೋರ್ಸ್ ರಿಸರ್ವ್ ಆಫ್ ಕ್ವೀನ್ಸ್‌ಲ್ಯಾಂಡ್‌, ಬ್ರಿಸ್ಬೇನ್‌ ಜೆಟ್ ಟ್ಯಾಕ್ಸಿ ಮತ್ತು ಆಸ್ಟ್ರೇಲಿಯನ್ ಜೆಟ್‌ಲೈನ್ಸ್. ಮುಖ್ಯವಾಗಿ ಬ್ರಿಸ್ಬೇನ್‌ ವಿಮಾನ ನಿಲ್ದಾಣ, ಗೋಲ್ಡ್ ಕೋಸ್ಟ್‌ ವಿಮಾನ ನಿಲ್ದಾಣ ಮತ್ತು ಕೈರ್ನ್ಸ್ ವಿಮಾನ ನಿಲ್ದಾಣ ಮೊದಲಾದ ವಿಮಾನ ನಿಲ್ದಾಣಗಳಾದ್ಯಂತ ಇವು ಸೇವೆಯನ್ನು ಒದಗಿಸುತ್ತವೆ.

ಬ್ರಿಸ್ಬೇನ್‌ ವಿಮಾನ ನಿಲ್ದಾಣವು ರಾಜ್ಯದಲ್ಲಿನ ಪ್ರಮುಖ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರವೇಶ ದ್ವಾರವಾಗಿದೆ. ಗೋಲ್ಡ್ ಕೋಸ್ಟ್‌ ವಿಮಾನ ನಿಲ್ದಾಣ ಮತ್ತು ಕೈರ್ನ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ನಂತರದ ಮತ್ತೆರಡು ಪ್ರಧಾನ ವಿಮಾನ ನಿಲ್ದಾಣಗಳು. ಎರಡೂ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ನಿಗದಿಮಾಡುತ್ತವೆ. ದೇಶೀಯ ವಿಮಾನಗಳ ಹಾರಾಟವನ್ನು ನಿಗದಿಮಾಡುವ ಇತರ ಸ್ಥಳೀಯ ವಿಮಾನ ನಿಲ್ದಾಣಗಳೆಂದರೆ - ಗ್ರೇಟ್ ಬ್ಯಾರಿಯರ್ ರೀಫ್‌ ವಿಮಾನ ನಿಲ್ದಾಣ, ಹರ್ವೆ ಬೇ ವಿಮಾನ ನಿಲ್ದಾಣ, ಮ್ಯಾಕೆ ವಿಮಾನ ನಿಲ್ದಾಣ, ಮೌಂಟ್ ಇಸಾ ವಿಮಾನ ನಿಲ್ದಾಣ, ಪ್ರೋಸೆರ್ಪೈನ್ / ವಿಟ್ಸಂಡೆ ಕೋಸ್ಟ್ ವಿಮಾನ ನಿಲ್ದಾಣ, ರೋಖ್ಯಾಂಪ್ಟನ್‌ ವಿಮಾನ ನಿಲ್ದಾಣ, ಸನ್‌ಶೈನ್ ಕೋಸ್ಟ್‌ ವಿಮಾನ ನಿಲ್ದಾಣ ಮತ್ತು ಟೌವ್ನ್‌ಸ್ವಿಲ್ಲೆ ವಿಮಾನ ನಿಲ್ದಾಣ.

ಆಗ್ನೇಯ ಕ್ವೀನ್ಸ್‌ಲ್ಯಾಂಡ್‌ ಏಕೀಕೃತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಟ್ರಾನ್ಸ್‌ಲಿಂಕ್‌‌ನಿಂದ ನಿರ್ವಹಿಸಲ್ಪಡುತ್ತದೆ. ಇದು ಬಸ್, ರೈಲು ಮತ್ತು ವಿಮಾನ ಸೇವೆಗಳನ್ನು ಒದಗಿಸುತ್ತದೆ. ರಾಜ್ಯದಾದ್ಯಂತ ಪ್ರಾದೇಶಿಕ ಬಸ್ ಮತ್ತು ಬಹುದೂರದ ರೈಲು ಸೇವೆಗಳೂ ಇವೆ. ಸ್ಥಳೀಯ ಬಸ್ ಸೌಲಭ್ಯಗಳು ಹೆಚ್ಚಿನ ಪ್ರಾದೇಶಿಕ ಕೇಂದ್ರಗಳಲ್ಲೂ ಲಭ್ಯ ಇವೆ.

 
ಬ್ರಿಸ್ಬೇನ್‌ನಲ್ಲಿರುವ ಕ್ವೀನ್ಸ್‌ಲ್ಯಾಂಡ್‌ನ ಸಂಸತ್ತು

ಕಾರ್ಯನಿರ್ವಾಹಣಾ ಅಧಿಕಾರವು ಗವರ್ನರ್‌ನ ವಶದಲ್ಲಿರುತ್ತದೆ. ಅವರನ್ನು ಪ್ರಧಾನಮಂತ್ರಿಯ ಸಲಹೆಯ ಮೇರೆಗೆ ರಾಣಿ ಎಲಿಜಬೆತ್ II ಸೂಚಿಸಿ,ನೇಮಕ ಮಾಡುತ್ತಾರೆ. ಪ್ರಸ್ತುತವಿರುವ ಗವರ್ನರ್ ಮಿಸ್. ಪೆನೆಲೋಪ್ ವೆಂಸ್ಲೆ, AO. ಪ್ರಧಾನ ಮಂತ್ರಿಯು ಸರಕಾರದ ಮುಖ್ಯಸ್ಥನಾಗಿರುತ್ತಾನೆ. ಅವನನ್ನು ಲೆಜಿಸ್ಲೇಟಿವ್ ಅಸೆಂಬ್ಲಿಯ ಬೆಂಬಲದೊಂದಿಗೆ ಗವರ್ನರ್ ನೇಮಕ ಮಾಡುತ್ತಾರೆ. ಸದ್ಯದ ಪ್ರಧಾನ ಮಂತ್ರಿ ಅನ್ನಾ ಬ್ಲಿಘ್. ಈಕೆ ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯವಳು. ಕಾರ್ಯನಿರ್ವಾಹಕ ಆಡಳಿತ ಮಂಡಳಿಯನ್ನು ರೂಪಿಸುವ ಇತರ ಸಚಿವರನ್ನು ಲಿಜಿಸ್ಲೇಟಿವ್ ಅಸೆಂಬ್ಲಿಯ ಸದಸ್ಯರಿಂದ ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಗವರ್ನರ್ ನೇಮಕ ಮಾಡುತ್ತಾನೆ.

ಕ್ವೀನ್ಸ್‌ಲ್ಯಾಂಡ್‌ ಸಂಸತ್ತು ಅಥವಾ ಲೆಜಿಸ್ಲೇಟಿವ್ ಅಸೆಂಬ್ಲಿಯು ಏಕಸಭಾ ಶಾಸನ ಸಭೆಯಾಗಿದೆ. ಇದು ಏಕಸಭಾ ಶಾಸಕಾಂಗ ಹೊಂದಿರುವ ಏಕೈಕ ಆಸ್ಟ್ರೇಲಿಯಾ ರಾಜ್ಯವಾಗಿದೆ. ದ್ವಿಸಭೆಯ ವ್ಯವಸ್ಥೆಯು 1922ರವರೆಗೆ ಕಾರ್ಮಿಕ ಸದಸ್ಯರ "ಸ್ಯೂಸೈಡ್ ಸ್ಕ್ವಾಡ್"ನಿಂದ ಲೆಜಿಸ್ಲೇಟಿವ್ ಕೌನ್ಸಿಲ್ ರದ್ದುಗೊಳ್ಳುವವರೆಗೆ ಅಸ್ತಿತ್ವದಲ್ಲಿತ್ತು. ಅವರ ಸ್ವಂತ ಹುದ್ದೆಗಳನ್ನು ಕೊನೆಗೊಳಿಸುವ ಉದ್ದೇಶಕ್ಕಾಗಿ ನೇಮಕಮಾಡಿಕೊಂಡಿದ್ದರಿಂದ ಅವರನ್ನು ಸ್ಯೂಸೈಡ್ ಸ್ಕ್ವಾಡ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಕ್ವೀನ್ಸ್‌ಲ್ಯಾಂಡ್‌ನ ನ್ಯಾಯಾಂಗ ವ್ಯವಸ್ಥೆಯು ಕ್ವೀನ್ಸ್‌ಲ್ಯಾಂಡ್‌ ಸಂವಿಧಾನದಿಂದ ಪ್ರಮಾಣೀಕೃತವಾದ ಸರ್ವೋಚ್ಛ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯವನ್ನು ಹಾಗೂ ಕ್ವೀನ್ಸ್‌ಲ್ಯಾಂಡ್‌ ಸಂಸತ್ತಿನ ಸಾಮಾನ್ಯ ಕಾಯಿದೆಗಳಿಂದ ದೃಢಿಕರಿಸಲಾದ ಅನೇಕ ಇತರ ನ್ಯಾಯಾಲಯಗಳು ಮತ್ತು ನ್ಯಾಯಮಂಡಲಿಗಳನ್ನು ಹೊಂದಿದೆ.

2001ರಲ್ಲಿ ಕ್ವೀನ್ಸ್‌ಲ್ಯಾಂಡ್‌ ಹಿಂದಿನ ಸಂವಿಧಾನವನ್ನು ಮಾಡಿದ ಹೆಚ್ಚಿನ ಸಂಸತ್ತಿನ ಕಾಯಿದೆಗಳನ್ನು ರದ್ದುಗೊಳಿಸಿ ಹೊಸದಾದ ಕ್ರೋಡೀಕರಿಸಿದ ಸಂವಿಧಾನವೊಂದನ್ನು ಅನುಮೋದಿಸಿತು. ಹೊಸ ಸಂವಿಧಾನವನ್ನು, 1859ರಲ್ಲಿ ರಾಣಿ ವಿಕ್ಟೋರಿಯಾ ಪೇಟೆಂಟು ಒಡೆತನದ ದಾಖಲೆ ಪತ್ರಕ್ಕೆ ಸಹಿಹಾಕಲಾಯಿತು. ಈ ಮ‌ೂಲಕ ಕ್ವೀನ್ಸ್‌ಲ್ಯಾಂಡ್‌ಅನ್ನು ವಸಹಾತುವಾಗಿ ಮಾಡಿಕೊಂಡ ವಾರ್ಷಿಕ ದಿನದಂದು ಜೂನ್‌ 6ರ 2002ರಲ್ಲಿ ಪರಿಣಾಮಕಾರಿಯಾಗಿ ಹೊರತರಲಾಯಿತು.

ವಿಶ್ವವಿದ್ಯಾಲಯಗಳು

ಬದಲಾಯಿಸಿ
 
ರೋಬಿನದಲ್ಲಿರುವ ಬಾಂಡ್ ವಿಶ್ವವಿದ್ಯಾಲಯ

ಕ್ರೀಡೆಗಳು

ಬದಲಾಯಿಸಿ
 
ಬ್ರಿಸ್ಬೇನ್‌ ಬ್ರೋಂಕಸ್, ಇದು ನ್ಯಾಷನಲ್ ರುಗ್ಬಿ ಲೀಗ್ ಪಂದ್ಯದ ಅತಿಯಶಸ್ವಿ ತಂಡಗಳಲ್ಲಿ ಒಂದು.
 
ಆಸ್ಟ್ರೇಲಿಯಾದ ಸ್ಥಳೀಯ ಕ್ರಿಕೆಟ್‌ ಪಂದ್ಯಾಟದಲ್ಲಿ ಭಾಗವಹಿಸಿದ ಕ್ವೀನ್ಸ್‌ಲ್ಯಾಂಡ್‌ ಬುಲ್ಸ್

ಕ್ವೀನ್ಸ್‌ಲ್ಯಾಂಡ್‌ ರಾಜ್ಯವು ಆಸ್ಟ್ರೇಲಿಯಾದ ಎಲ್ಲಾ ರಾಷ್ಟ್ರೀಯ ಕ್ರೀಡಾ ಸ್ಫರ್ಧೆಗಳಲ್ಲಿ ಭಾಗವಹಿಸುತ್ತದೆ. ಅಲ್ಲದೆ ಇದು ಅನೇಕ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಪಂದ್ಯಗಳನ್ನೂ ನಡೆಸಿಕೊಡುತ್ತದೆ. ಹೆಚ್ಚು ಜನಪ್ರಿಯವಾದ ಬೇಸಿಗೆ ಮತ್ತು ಚಳಿಗಾಲದ ತಂಡದ ಕ್ರೀಡೆಗಳೆಂದರೆ ಅನುಕ್ರಮವಾಗಿ ಕ್ರಿಕೆಟ್‌ ಮತ್ತು ರಗ್ಬಿ ಲೀಗ್. ವಾರ್ಷಿಕ ರಗ್ಬಿ ಲೀಗ್ ಸ್ಟೇಟ್ ಆಫ್ ಒರಿಜಿನ್ ಸರಣಿಯು ಕ್ವೀನ್ಸ್‌ಲ್ಯಾಂಡ್‌ನ ಕ್ರೀಡಾ ದಾಖಲೆ ಪಟ್ಟಿಯಲ್ಲಿನ ಒಂದು ಪ್ರಮುಖ ಸಂಗತಿಯಾಗಿದೆ.

ಈಜು ಸಹ ಕ್ವೀನ್ಸ್‌ಲ್ಯಾಂಡ್‌ನ ಒಂದು ಜನಪ್ರಿಯ ಕ್ರೀಡೆ. ಆಸ್ಟ್ರೇಲಿಯಾ ತಂಡದ ಸದಸ್ಯರಲ್ಲಿ ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತರಲ್ಲಿ ಹೆಚ್ಚಿನವರು ಈ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಕಳೆದ 2008ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಈಜುಗಾರರು ಎಲ್ಲಾ ಆರು ಆಸ್ಟ್ರೇಲಿಯಾದ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಮ‌ೂವರು ಮಹಿಳೆಯರ (ಅಂತಿಮ) ಸರದಿಯ ಪಂದ್ಯದಲ್ಲಿ ಭಾಗವಹಿಸಿದ ಎಲ್ಲಾ ಈಜುಗಾರರು ಕ್ವೀನ್ಸ್‌ಲ್ಯಾಂಡ್‌ನವರಾಗಿದ್ದರು. ಅವರಲ್ಲಿ ಇಬ್ಬರು ಚಿನ್ನದ ಪದಕ ಗೆದ್ದರು. ಕ್ವೀನ್ಸ್‌ಲ್ಯಾಂಡ್‌ ನಾಲ್ಕು ಒರಿಜಿನ್ ಸರಣಿಯಲ್ಲಿ ಅನುಕ್ರಮವಾಗಿ ಮ‌ೂರನ್ನು ಗೆದ್ದದ್ದು ಸ್ಟೇಟ್ ಆಫ್ ಒರಿಜಿನ್‌ನಲ್ಲಿನ ಅದರ ಪ್ರಾಬಲ್ಯ ಹೆಚ್ಚಿಸಿತು.

ಪ್ರಮುಖ ವೃತ್ತಿಪರ ತಂಡಗಳೆಂದರೆ:

ಪಂದ್ಯಗಳೆಂದರೆ:

ಇವನ್ನೂ ನೋಡಿ

ಬದಲಾಯಿಸಿ

ಟೆಂಪ್ಲೇಟು:Portal

ಪಟ್ಟಿಗಳು:

ಆಕರಗಳು

ಬದಲಾಯಿಸಿ
  1. 5220.0 - Australian National Accounts: State Accounts, 2008-09 (Reissue), Australian Bureau of Statistics, 22 December 2009.
  2. ಡ್ರೀಮಿಂಗ್ ಆನ್‌ಲೈನ್: ಇಂಡಿಜೀನಸ್ ಆಸ್ಟ್ರೇಲಿಯನ್ ಟೈಮ್‌ಲೈನ್
  3. "ಸ್ಥಳಗಳ ಹೆಸರುಗಳು". Archived from the original on 2007-10-13. Retrieved 2010-04-14.
  4. "ಡಿಕ್ಶನರಿ ಆಫ್ ಆಸ್ಟ್ರೇಲಿಯನ್ ಬಯೋಗ್ರಫಿ". Archived from the original on 2020-11-06. Retrieved 2010-04-14.
  5. "ಕ್ವೀನ್ಸ್‌ಲ್ಯಾಂಡ್‌ ಸರಕಾರ - Q150". Archived from the original on 2010-03-30. Retrieved 2010-04-14.
  6. ಕ್ವೀನ್ಸ್‌ಲ್ಯಾಂಡ್‌ನ ಇತಿಹಾಸ
  7. "ಆಸ್ಟ್ರೇಲಿಯಾದ ಸರಕಾರ, ಬ್ಯೂರೊ ಆಫ್ ಮೀಟಿಯಾರಲಜಿ - ಕ್ವೀನ್ಸ್‌ಲ್ಯಾಂಡ್‌ನ ವಾಯುಗುಣ". Archived from the original on 2009-03-17. Retrieved 2010-04-14.
  8. "ಆಸ್ಟ್ರೇಲಿಯಾ ಸರಕಾರ, ಬ್ಯೂರೊ ಆಫ್ ಮೀಟಿಯಾರಲಜಿ - ಆಸ್ಟ್ರೇಲಿಯಾದ ವಾಯುಗುಣದ ವಲಯಗಳು". Archived from the original on 2020-12-12. Retrieved 2010-04-14.
  9. "ಆಸ್ಟ್ರೇಲಿಯಾದ ಸರಕಾರ, ಬ್ಯೂರೊ ಆಫ್ ಮೀಟಿಯಾರಲಜಿ - ಆಸ್ಟ್ರೇಲಿಯಾದ ಸ್ಥಳಗಳ ವಾಯುಗುಣದ ಅಂಕಿಅಂಶಗಳು". Archived from the original on 2011-02-24. Retrieved 2010-04-14.
  10. "Rainfall and Temperature Records: National" (PDF). Bureau of Meteorology. Retrieved 14 November 2009.
  11. ABS ಅಂಕಿಅಂಶಗಳು
  12. "3301.0 - Births, Australia, 2008". Australian Bureau of Statistics. Retrieved 10 January 2010.
  13. Tom Dusevic (17 December 2009). "Queensland falls back with the pack". The Australian. News Limited. Retrieved 10 January 2010.
  14. "1387.3 - Queensland in Review, 2003". Australian Bureau of Statistics. Retrieved 10 January 2010.
  15. Torny Jensen (28 May 2008). "Queensland housing now the most unaffordable". Courier Mail. Queensland Newspapers. Archived from the original on 1 June 2008. Retrieved 9 January 2010.
  16. "Gladstone". www.comalco.com. Rio Tinto Aluminium. Archived from the original on 17 ಆಗಸ್ಟ್ 2009. Retrieved 11 January 2010.
  17. "About TQ - Profile". Tourism Queensland. Retrieved 6 January 2010.
  18. ಪ್ರವಾಸೋದ್ಯಮ ಸಂಬಂಧಿತ ಮಾಹಿತಿ ಮತ್ತು ಅಂಕಿಅಂಶಗಳು


ಬಾಹ್ಯ ಕೊಂಡಿಗಳು

ಬದಲಾಯಿಸಿ