ಕ್ರ್ಯಾಬ್ ನಿಹಾರಿಕೆ
(M1 ಇಂದ ಪುನರ್ನಿರ್ದೇಶಿತ)
ಕ್ರ್ಯಾಬ್ ನಿಹಾರಿಕೆ ಕ್ರಿ.ಶ. ೧೦೫೪ರಲ್ಲಿ ಸ್ಫೋಟಿಸಿದ ಸೂಪರ್ ನೋವಾದ ಉಳಿಕೆ. ಆಗ ಅದು ಸುಮಾರು ೨೩ ದಿನ ಹಗಲಿನಲ್ಲಿಯೂ ಕಾಣುವಷ್ಟು ಪ್ರಕಾಶಮಾನವಾಗಿತ್ತು. ಚೀನೀಯರು ಇದನ್ನು ದಾಖಲಿಸಿದ್ದಾರೆ. ಇದು ವೃಷಭರಾಶಿಯ ಅಂಚಿನಲ್ಲಿದೆ. ಗೂಳಿಯನ್ನು ಕಲ್ಪಿಸಿಕೊಂಡರೆ ಅದರ ಕೋಡಿನ ತುದಿಯಲ್ಲಿದೆ. ಹಬಲ್ ದೂರದರ್ಶಕ ಈ ಸ್ಫೋಟದ ವಿಸ್ತಾರವನ್ನು ತೋರಿಸಿದೆ. ಮಧ್ಯದಲ್ಲಿ ಪಲ್ಸಾರನ್ನು ಗುರುತಿಸುವುದೂ ಸಾಧ್ಯವಾಗಿದೆ.'