ಜಾಮಿಯಾ ಮರ್ಕಝ್
ಜಾಮಿಯಾ ಮರ್ಕಝ್
ಬದಲಾಯಿಸಿThis article contains content that is written like an advertisement. |
ಮರ್ಕಝುಸ್ಸಖಾಫತಿ ಸುನ್ನಿಯಾ[೧], ಮರ್ಕಝ್[೨], ಜಾಮಿಯಾ ಮರ್ಕಝ್, ಅಥವಾ ಸುನ್ನಿ ಮರ್ಕಝ್, ಇದು ಕೇರಳದ ಕೋಝಿಕೋಡಿನಲ್ಲಿರುವ ಅಂತರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾನಿಲಯವಾಗಿದೆ. ಮರ್ಕಝ್ ವಿಶ್ವವಿದ್ಯಾಲಯವು ಕೋಝಿಕೋಡ್ ನಗರದಿಂದ 14 ಕಿಲೋಮೀಟರ್ (8.70 ಮೈಲಿ) ದೂರದಲ್ಲಿ ಪೂರ್ವಕ್ಕೆ ಇದೆ. ಸೌದಿ ಅರೇಬಿಯಾದ ಇಸ್ಲಾಮಿಕ್ ವಿದ್ವಾಂಸ ಮುಹಮ್ಮದ್ ಅಲವೀ ಅಲ್-ಮಾಲಿಕಿ ಅವರು ಕನ್ನಿಯತ್ ಅಹ್ಮದ್ ಮುಸ್ಲಿಯಾರ್ ಮತ್ತು ಇ.ಕೆ. ಅಬೂಬಕರ್ ಮುಸ್ಲಿಯಾರ್ ಅವರ ಉಪಸ್ಥಿತಿಯಲ್ಲಿ ಅಡಿಪಾಯವನ್ನು ಹಾಕಿದರು. ಮರ್ಕಝ್ ಮಹಾ ವಿದ್ಯಾನಿಲಯವನ್ನು ಭಾರತದ ಮುಸಲ್ಮಾನರ ಗ್ರಾಂಡ್ ಮುಫ್ತಿ ಅಖಿಲ ಭಾರತ ಸುನ್ನೀ ಜಂ-ಇಯತುಲ್ ಉಲಮಾದ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್[೩] ಸ್ಥಾಪಿಸಿದರು. ಇದು ಇಸ್ಲಾಮಿಕ್ ಅಧ್ಯಯನ, ಕಲೆ, ವಿಜ್ಞಾನ, ವಾಣಿಜ್ಯ, ತಾಂತ್ರಿಕ, ಸೇರಿದಂತೆ ಎಲ್ಲಾ ರೀತಿಯ ಧಾರ್ಮಿಕ ಲೌಕಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಶಿಕ್ಷಣವನ್ನು ನೀಡುತ್ತಿದ್ದು ಸುಮಾರು 20,000 ವಿದ್ಯಾರ್ಥಿಗಳು ಮರ್ಕಝ್ ಸಂಸ್ಥೆಯ ಕೇಂದ್ರ ಕ್ಯಾಂಪಸ್ಸಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮರ್ಕಝ್ ಭಾರತದ ಅತ್ಯುನ್ನತ ಮುಸ್ಲಿಂ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಭಾರತದ ವಿವಿಧ ರಾಜ್ಯಗಳಲ್ಲದೆ ವಿದೇಶಗಳಲ್ಲಿಯೂ ಶಾಖೆಗಳನ್ನು ಹೊಂದಿದೆ. ಇಸ್ಲಾಮಿಕ್ ಶಿಕ್ಷಣ ಮತ್ತು ದುಬೈ ಚಾರಿಟಬಲ್ ಆಕ್ಟಿವಿಟೀಸ್ ಇಲಾಖೆಯ ಮೆಲ್ವಿಚಾರಣೆಯ ಅಡಿಯಲ್ಲಿ ಮರ್ಕಝ್ ಅರಬ್ ಸಂಯುಕ್ತ ಸಂಸ್ಥಾನದ ದುಬೈಯಲ್ಲಿ ಶಾಖೆಯನ್ನು ಹೊಂದಿದೆ. ಇದನ್ನು ದುಬೈ ಮರ್ಕಝ್ ಎಂದೂ ಕರೆಯುತ್ತಾರೆ. ದುಬೈ ಮರ್ಕಝ್‍ನಲ್ಲೂ ಇಸ್ಲಾಮಿಕ್ ಅಧ್ಯಯನ ವಿಭಾಗಗಳಲ್ಲಿ ವಿವಿಧ ಕೋರ್ಸುಗಳು ಲಭ್ಯವಿವೆ. ನವದೆಹಲಿಯ ಜಾಮಿಯಾ ನಿಝಾಮುದ್ದೀನ್ ಕೂಡ ಮರ್ಕಝ್‍ನ ಪ್ರಮುಖ ಸಂಸ್ಥೆಗಳಲ್ಲಿ ಒಂದು.
ಆರೋಗ್ಯ ಸೇವೆಗಳು
ಬದಲಾಯಿಸಿಮರ್ಕಝ್ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿಯೂ ಸೇವೆಯನ್ನು ನೀಡುತ್ತಿದೆ. ಕ್ಯಾಂಪಸ್ ಆಸ್ಪತ್ರೆಯಲ್ಲಿ ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯರ ತಂಡವು ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಅನಾರೋಗ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷ ಆಸ್ಪತ್ರೆ ಕೂಡ ನಿರ್ಮಾಣ ಹಂತದಲ್ಲಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ಪ್ರಥಮ ಚಿಕಿತ್ಸಾ ತಂಡವೊಂದು ಸಂಸ್ಥೆಯಲ್ಲಿ ಕಾರ್ಯಚರಿಸುತ್ತಿದೆ.
ಕಲ್ಯಾಣ ಸೇವೆಗಳು
ಬದಲಾಯಿಸಿಮರ್ಕಝ್ ಕಲ್ಯಾಣ ಸೇವೆಗಳಿಗೂ ಒತ್ತು ನೀಡುತ್ತಿದೆ. ವಿವಿಧ ರೀತಿಯಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತದೆ. ಉನ್ನತ ಅಧ್ಯಯನಗಳಿಗಾಗಿ ಬಡ ವಿದ್ಯಾರ್ಥಿಗಳಿಗೆ ಮರ್ಕಝ್ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ದೇಶದಲ್ಲಿ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆಯಲ್ಲಿ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈಜಿಪ್ಟ್, ರಷ್ಯಾ ರಾಷ್ಟ್ರಗಳ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಮುಂದುವರೆಸಲು ಮರ್ಕಝ್ ಧನ ಸಹಾಯವನ್ನು ಒದಗಿಸುತ್ತದೆ. ಕೇರಳ ಮತ್ತು ಇತರ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮರ್ಕಝ್ ಪ್ರಾಯೋಜಕತ್ವದಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮರ್ಕಝ್ ವಿಶೇಷ ಸೇವಾ ಕೇಂದ್ರಗಳನ್ನು ತೆರೆದಿದೆ. ಇಸ್ಲಾಮಿಕ್ ಅಧ್ಯಯನದಲ್ಲಿ ಮರ್ಕಝ್ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮೌಲವೀ ಫಾಝಿಲ್ ಸಖಾಫಿ ಮತ್ತು ಮೌಲವೀ ಫಾಝಿಲ್ ಖಾಮಿಲ್ ಸಖಾಫಿ ಎಂಬ ಬಿರುದನ್ನು ನೀಡುತ್ತಿದೆ. ಇದು ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಮರ್ಕಝ್ ಅಧೀನದಲ್ಲಿ ಇಸ್ಲಾಮಿಕ್ ಧಾರ್ಮಿಕ ಪದವಿಯನ್ನು ಪಡೆದ ಸುಮಾರು 15,000ದಷ್ಟು ಧಾರ್ಮಿಕ ವಿದ್ವಾಂಸರು ಜಗತ್ತಿನ ವಿವಿಧ ರಾಷ್ಟ್ರಗಳಾದ ಆಫ್ರಿಕಾ, ಯುಕೆ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಈಜಿಫ್ಟ್ ಮುಂತಾದ ಕಡೆಗಳಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ.
ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಮಾನ್ಯತೆಗಳು
ಬದಲಾಯಿಸಿಮರ್ಕಝ್ ವಿಶ್ವವಿದ್ಯಾನಿಲಯವು ಜಗತ್ತಿನ ಹಲವು ರಾಷ್ಟ್ರಗಳ ಉನ್ನತ ವಿದ್ಯಾಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಹಲವು ವಿಶ್ವವಿದ್ಯಾನಿಯಲಗಳಿಂದ ಮಾನ್ಯತೆಯನ್ನು ಪಡೆದಿದೆ.ಮರ್ಕಝ್ ವಿಶ್ವವಿದ್ಯಾನಿಲಯವು ಈಜಿಫ್ಟ್‍ನ ಖೈರೋದ ಅಲ್-ಅಝ್ಹರ್ ವಿಶ್ವವಿದ್ಯಾನಿಯಲದ ಮಾನ್ಯತೆಯನ್ನು ಪಡೆದಿದೆ. ಅಲ್-ಅಝ್ಹರ್ ವಿಶ್ವವಿದ್ಯಾನಿಯದಲ್ಲಿ ನೀಡುವ ಅಝ್ಹರಿ ಪದವಿಯನ್ನು ಮರ್ಕಝ್ ವಿಶ್ವವಿದ್ಯಾನಿಯದಲ್ಲಿ ನೀಡಲಾಗುತ್ತದೆ.
ಮರ್ಕಝ್ ಮಾನ್ಯತೆ ಪಡೆದ ಇತರ ಜಾಗತಿಕ ಪ್ರಮುಖ ವಿಶ್ವವಿದ್ಯಾನಿಲಯಗಳು
ಬದಲಾಯಿಸಿ• ತುರ್ಕಿ - ಫತಿಹ್ ವಿಶ್ವವಿದ್ಯಾಲಯ • ಮಲೇಷಿಯಾ – ಐ.ಐ.ಯು.ಎಮ್ • ಯುಎಇ - ಅಲ್ ಕ್ವಾಸಿಮಿಯಾ ವಿಶ್ವವಿದ್ಯಾಲಯ • ಈಜಿಪ್ಟ್ - ಅಲ್ ಅಝ್ಹರ್ ವಿಶ್ವವಿದ್ಯಾಲಯ • ಜೋರ್ಡಾನ್ - ವಿಶ್ವ ಇಸ್ಲಾಮಿಕ್ ವಿಜ್ಞಾನ ಮತ್ತು ಶಿಕ್ಷಣ ವಿಶ್ವವಿದ್ಯಾಲಯ • ಯುಕೆ - ಇಸ್ಲಾಮಿಕ್ ಹಸ್ತಪ್ರತಿ ಅಸೋಸಿಯೇಷನ್ • ಯೆಮೆನ್ - ದರ್ ಅಲ್-ಮುಸ್ತಫಾ
ರೂಬಿ ಜುಬೀಲಿ
ಬದಲಾಯಿಸಿಮರ್ಕಝ್ ರೂಬಿ ಜುಬಿಲಿ ಜಾಮಿಯಾ ಮರ್ಕಝ್‍ನ ನಲವತ್ತನೇ ವಾರ್ಷಿಕ ಸಮ್ಮೇಳನ. ಮಾಣಿಕ್ಯ ಮಹೋತ್ಸವದ ಆಚರಣೆಯ ಅಂಗವಾಗಿ, ಮರ್ಕಝ್ ಅನೇಕ ವಿಚಾರಗೋಷ್ಠಿಗಳನ್ನು ಮತ್ತು ಸಮ್ಮೇಳನಗಳನ್ನು ನಡೆಸಿದೆ. ಇದು ಮಾನವೀಯತೆಯ ಮತ್ತು ಮುಸ್ಲಿಂ ಪ್ರಪಂಚದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಚರ್ಚೆಗಳನ್ನು ನಡೆಸಿದೆ. 2018 ಜನವರಿ 4ರಿಂ27ರವರೆಗೆ ರೂಬಿ ಜುಬೀಲಿ ನಡೆಯಿತು.
ಮರ್ಕಝ್ ರೂಬೀ ಜುಬೀಲಿಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು
ಬದಲಾಯಿಸಿಸಾಂಸ್ಕೃತಿಕ ಸಮ್ಮೇಳನ ಉದ್ಘಾಟನಾ ಸಮಾವೇಶ ಶೈಖ್ ಝಾಯಿದ್ ಅಂತರಾಷ್ಟ್ರೀಯ ಶಾಂತಿ ಸಮಾವೇಶ ರಾಷ್ಟ್ರೀಯ ಏಕೀಕರಣ ಸಮಾವೇಶ ಕ್ವೀನ್ಸ್ ಲ್ಯಾಂಡ್ ಉದ್ಘಾಟನೆ ಅಂತರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸರ ಸಮಾವೇಶ
ಪ್ರಮುಖ ಯೋಜನೆಗಳು, ಕೇಂದ್ರಗಳು ಮತ್ತು ಸಂಸ್ಥೆಗಳು
ಬದಲಾಯಿಸಿ• ಮರ್ಕಝ್ ನಾಲೆಡ್ಜ್ ಸಿಟಿ • ಶಹರೇ ಮುಬಾರಕ್ ಗ್ರ್ಯಾಂಡ್ ಮಸೀದಿ • ಮರ್ಕಝ್ ಆಟ್ರ್ಸ್ ಮತ್ತು ಸೈನ್ಸ್ ಕಾಲೇಜ್ • ಮರ್ಕಝ್ ಲಾ ಕಾಲೇಜ್ • ಮರ್ಕಝ್ ದುಬೈ • ಇಶತ್ ಪಬ್ಲಿಕ್ ಸ್ಕೂಲ್
ಮರ್ಕಝ್ ನಾಲೆಡ್ಜ್ ಸಿಟಿ
ಬದಲಾಯಿಸಿಮರ್ಕಝ್ ನಾಲೆಡ್ಜ್ ಸಿಟಿ ಅಥವಾ ಜ್ಞಾನ ನಗರ ಕೇರಳದ ಕೋಝಿಕೋಡಿನಲ್ಲಿರುವ ಮರ್ಕಝ್ ವಿಶ್ವವಿದ್ಯಾನಿಲಯದ ಒಂದು ಯೋಜನೆಯಾಗಿದೆ. ಯೋಜನಾ ಅಡಿಪಾಯವನ್ನು ಡಿಸೆಂಬರ್ 24, 2012 ರಂದು ಸಮಸ್ತ ಕೇರಳ ಸುನ್ನಿ ಜಂ-ಇಯತುಲ್ ಉಲಮಾ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಹಾಕಿದರು. ಯೋಜನೆಯ ವೆಚ್ಚವು 10 ಮಿಲಿಯನ್ ಎಂದು ಅಂದಾಜಿಸಲಾಗಿದೆ.
ಸ್ಥಳ
ಬದಲಾಯಿಸಿಮರ್ಕಝ್ ನಾಲೆಡ್ಜ್ ಸಿಟಿ ಬೆಂಗಳೂರು ಕ್ಯಾಲಿಕಟ್ ರಾಷ್ಟ್ರೀಯ ಹೆದ್ದಾರಿ 766ರ ಕೈದಪೊಯಿಲ್ ಎನ್ನುವ ಪ್ರದೇಶದಲ್ಲಿ ಬರುತ್ತದೆ.
ಆರ್ಥಿಕತೆ
ಬದಲಾಯಿಸಿಮರ್ಕಝ್ ನಾಲೆಡ್ಜ್ ಸಿಟಿ ಹೋಟೆಲ್ ಮತ್ತು ಕನ್ವೆನ್ಶನ್ ಸೆಂಟರ್, ಶಾಪಿಂಗ್ ಮಾಲ್, ಮತ್ತು ಸೈಬೊಲ್ಯಾಂಡ್ ಐಟಿ ಪಾರ್ಕುಗಳನ್ನು ಒಳಗೊಂಡಿದೆ.
ಆರೋಗ್ಯ ಸೇವೆ
ಬದಲಾಯಿಸಿಮರ್ಕಝ್ ಯುನಾನಿ ವೈದ್ಯಕೀಯ ಕಾಲೇಜು[೪] ಮತ್ತು ಆಸ್ಪತ್ರೆ ನಾಲೆಡ್ಜ್ ಸಿಟಿಯಲ್ಲಿ ಕಾರ್ಯಾಚರಿಸುತ್ತಿದೆ.
ಶಿಕ್ಷಣ
ಬದಲಾಯಿಸಿಮರ್ಕಝ್ ಕಾನೂನು ಮಹಾ ವಿದ್ಯಾಲ[೫]ಯವು ಮುಖ್ಯ ಕ್ಯಾಂಪಸ್ನಲ್ಲಿ ಇದೆ. ಈ ಕಾಲೇಜು ಕ್ಯಾಲಿಕಟ್ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದೆ ಮತ್ತು ಇದು ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟಿದೆ.
ಇತರ ಶೈಕ್ಷಣಿಕ ಸಂಸ್ಥೆಗಳು
ಬದಲಾಯಿಸಿತಾಂತ್ರಿಕ ಮಹಾವಿದ್ಯಾಲಯ ವಿಜ್ಞಾನ, ವಾಣಿಜ್ಯ ಮತ್ತು ಕಾನೂನು ಸಂಸ್ಥೆ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಮರ್ಕಝ್ ಅಂತರರಾಷ್ಟ್ರೀಯ ಶಾಲೆ ಮರ್ಕಝ್ ವಿಶೇಷ ಶಾಲೆ
ಸಾರಿಗೆ ವ್ಯವಸ್ಥೆ
ಬದಲಾಯಿಸಿಮರ್ಕಝ್ ನಾಲೆಡ್ಜ್ ಸಿಟಿ ಪಶ್ಚಿಮದಲ್ಲಿ ಕ್ಯಾಲಿಕಟ್ ನಗರದಿಂದ ಮತ್ತು ಪೂರ್ವ ಭಾಗದಲ್ಲಿರುವ ತಾಮರಶ್ಶೇರಿ ಪಟ್ಟಣದ ಮೂಲಕ ಭಾರತದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ಕೋಯಿಕ್ಕೋಡ್ ಮೂಲಕ ಹಾದುಹೋಗುತ್ತದೆ ಮತ್ತು ಉತ್ತರದ ಮಂಗಳೂರು, ಗೋವಾ ಮತ್ತು ಮುಂಬೈಗೆ ಸಂಪರ್ಕಿಸುತ್ತದೆ. ದಕ್ಷಿಣದ ಕೊಚ್ಚಿ, ಮತ್ತು ತಿರುವನಂತಪುರಕ್ಕೆ ಸಂಪರ್ಕಿಸುತ್ತದೆ. ಪೂರ್ವದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 54 ಆದಿವರಾಮ್ ಮೂಲಕ ಹಾದು ಹೋಗುತ್ತದೆ ಈ ರಸ್ತೆಯು ಕಲ್ಪೆಟ, ಮೈಸೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ವಿಮಾನ ನಿಲ್ದಾಣಗಳು ಕಣ್ಣೂರು ಮತ್ತು ಕೋಯಿಕ್ಕೋಡ್ ಹತ್ತಿರದ ರೈಲ್ವೇ ಸ್ಟೇಷನ್ ಕೋಯಿಕ್ಕೋಡಿನಲ್ಲಿದೆ.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://www.markaz.in/
- ↑ https://www.markaz.in/
- ↑ https://en.wikipedia.org/wiki/Kanthapuram_A.P._Aboobacker_Musliyar
- ↑ http://markazunanimedicalcollege.org/
- ↑ "ಆರ್ಕೈವ್ ನಕಲು". Archived from the original on 2020-08-12. Retrieved 2019-03-02.