ಕಾರ್ಯದರ್ಶಿ
ಕಾರ್ಯದರ್ಶಿ ಅಥವಾ ಆಪ್ತ ಸಹಾಯಕನು ಬಗೆಬಗೆಯ ಯೋಜನಾ ನಿರ್ವಹಣೆ, ಸಂವಹನ, ಅಥವಾ ಸಂಘಟನಾ ಕೌಶಲಗಳನ್ನು ಬಳಸಿ ಕಾರ್ಯನಿರ್ವಾಹಕರು ಸೇರಿದಂತೆ ಆಡಳಿತ ಮಂಡಳಿಗೆ ಬೆಂಬಲ ನೀಡುವ ಕೆಲಸವನ್ನು ಮಾಡುವ ವ್ಯಕ್ತಿ. ಆದರೆ ಈ ಪಾತ್ರವನ್ನು ಆಪ್ತ ಸಹಾಯಕನಿಂದ ಭಿನ್ನವಾಗಿರುವ ಕಾರ್ಯನಿರ್ವಾಹಕ ಕಾರ್ಯದರ್ಶಿಯ ಪಾತ್ರದೊಂದಿಗೆ ತಪ್ಪಾಗಿ ತಿಳಿಯಬಾರದು. ಅನೇಕ ದೇಶಗಳಲ್ಲಿ, ಕಾರ್ಯನಿರ್ವಾಹಕ ಕಾರ್ಯದರ್ಶಿಯು ಆಡಳಿತ ಶ್ರೇಣಿ ವ್ಯವಸ್ಥೆಯಲ್ಲಿ ಉನ್ನತ ಶ್ರೇಣಿಯ ಸ್ಥಾನವಾಗಿರುತ್ತದೆ. ವಾಸ್ತವವಾಗಿ ಪಾಕಿಸ್ತಾನದಲ್ಲಿ, ಸಂಯುಕ್ತ ಕಾರ್ಯದರ್ಶಿಗಳನ್ನು ದೇಶದಲ್ಲಿನ ಅತ್ಯಂತ ಪ್ರಭಾವಿ ವ್ಯಕ್ತಿಗಳೆಂದು ಹೆಸರಿಸಲಾಗಿದೆ.
ಆಪ್ತ ಸಹಾಯಕನ ಕಾರ್ಯಗಳನ್ನು ಸಂಪೂರ್ಣವಾಗಿ ಒಬ್ಬ ಇತರ ಉದ್ಯೋಗಿಗೆ ನೆರವಾಗಲು ನಡೆಸಲಾಗಬಹುದು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಲಾಭಕ್ಕೆ ಇರಬಹುದು. ಇತರ ಸಂದರ್ಭಗಳಲ್ಲಿ, ಕಾರ್ಯದರ್ಶಿ ಎಂದರೆ ಪತ್ರವ್ಯವಹಾರವನ್ನು ನಿಭಾಯಿಸುವ, ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ, ಮತ್ತು ಅಧಿಕೃತ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘ ಅಥವಾ ಸಂಸ್ಥೆಯ ಅಧಿಕಾರಿ.[೧]
ಒಬ್ಬ ಕಾರ್ಯದರ್ಶಿಗೆ (ಅಥವಾ ಆಡಳಿತ ಸಹಾಯಕ ಎಂದೂ ಕರೆಯಲ್ಪಡುತ್ತಾನೆ) ಅನೇಕ ಆಡಳಿತ ಕರ್ತವ್ಯಗಳು ಇರುತ್ತವೆ. "ಕಾರ್ಯದರ್ಶಿ" ಎಂಬ ಶಿರೋನಾಮೆಯನ್ನು ಹಿಂದಿನ ದಶಕಗಳಷ್ಟು ಸಾಮಾನ್ಯಾವಾಗಿ ಈಗ ಬಳಸಲಾಗುವುದಿಲ್ಲ, ಮತ್ತು ಜವಾಬ್ದಾರಿಗಳು ಮೈಕ್ರೊಸಾಫ಼್ಟ್ ಆಫ಼ಿಸ್ ಅನ್ವಯಗಳಲ್ಲಿ (ಕೆಲವನ್ನು ಹೆಸರಿಸಲು ವರ್ಡ್, ಪವರ್‌ಪಾಯಿಂಟ್, ಮತ್ತು ಎಕ್ಸೆಲ್) ನಿಪುಣನಾಗುವಂತಹ ಇನ್ನೂ ಹೆಚ್ಚು ಮುಂದುವರೆದ ಕೌಶಲ್ಯ ಸಮೂಹಕ್ಕೆ ಕ್ರಮವಾಗಿ ಹೆಚ್ಚಾಗಿವೆ. ಕಂಪನಿ ಅಥವಾ ಸಂಸ್ಥೆಯ ಸ್ವರೂಪ ಮತ್ತು ಗಾತ್ರಕ್ಕೆ ತಕ್ಕಂತೆ ಕರ್ತವ್ಯಗಳು ಬದಲಾಗಬಹುದು, ಮತ್ತು ಬಜೆಟ್‍ಗಳನ್ನು ನಿರ್ವಹಿಸುವುದು, ಲೆಕ್ಕ ಬರಹ, ದೂರವಾಣಿ ಕರೆಗಳನ್ನು ನಿರ್ವಹಿಸುವುದು, ಭೇಟಿಗಾರರನ್ನು ನಿಭಾಯಿಸುವುದು, ಜಾಲತಾಣಗಳನ್ನು ಸುಸ್ಥಿತಿಯಲ್ಲಿಡುವುದು, ಪ್ರಯಾಣ ವ್ಯವಸ್ಥೆಗಳು, ಮತ್ತು ಖರ್ಚುವೆಚ್ಚ ವರದಿಗಳನ್ನು ಸಿದ್ಧಪಡಿಸುವುದನ್ನು ಒಳಗೊಳ್ಳಬಹುದು. ಕಾರ್ಯದರ್ಶಿಗಳು ಉನ್ನತ ಮಟ್ಟದ ಸಮಾವೇಶ ಅಥವಾ ಸಭೆಯ ನಿರ್ವಹಣೆಯ ಎಲ್ಲ ಆಡಳಿತ ವಿವರಗಳನ್ನು ಕೂಡ ನಿರ್ವಹಿಸಬಹುದು ಮತ್ತು ಊಟಸಹಿತ ಸಭೆಯ ಆಹಾರ ಏರ್ಪಾಟನ್ನು ಮಾಡುವುದಕ್ಕೆ ಜವಾಬ್ದಾರರಾಗಿರಬಹುದು. ಹಲವುವೇಳೆ ಕಾರ್ಯನಿರ್ವಾಹಕರು ಸಭೆಗಳಲ್ಲಿ ಸಂಕ್ಷಿಪ್ತ ಟಿಪ್ಪಣಿಗಳನ್ನು ಬರೆದುಕೊಳ್ಳುವಂತೆ ಮತ್ತು ಪರಿಶೀಲನೆಗಾಗಿ ಸಭಾ ದಸ್ತಾವೇಜುಗಳನ್ನು ಸಿದ್ಧಪಡಿಸುವಂತೆ ತಮ್ಮ ಸಹಾಯಕನನ್ನು ಕೇಳಿಕೊಳ್ಳುತ್ತಾರೆ. ಸಂಕ್ಷಿಪ್ತ ವರದಿಯ ಜೊತೆಗೆ, ಕಾರ್ಯದರ್ಶಿಯು ಒಂದು ಕಂಪನಿ ಅಥವಾ ಸಂಸ್ಥೆಯ ಎಲ್ಲ ಅಧಿಕೃತ ದಾಖಲೆಗಳನ್ನು ಇಡಲು ಜವಾಬ್ದಾರನಾಗಿರಬಹುದು. ಕಾರ್ಯದರ್ಶಿಯನ್ನು "ಕಚೇರಿ ನಿರ್ವಾಹಕ" ಎಂದೂ ಪರಿಗಣಿಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Secretary Job Information | National Careers Service". Nationalcareersservice.direct.gov.uk. 27 January 2012. Retrieved 3 February 2014.