ಏಕಸಭೀಯ ವ್ಯವಸ್ಥೆ ಎನ್ನುವುದು ಕೇವಲ ಒಂದು ವಿಧಾಯಕ ಅಥವಾ ಸಂಸದೀಯ ಸದನವನ್ನು ಹೊಂದುವ ವ್ಯವಸ್ಥೆಯಾಗಿದೆ.

Legislature
This series is part of the Politics series
Politics Portal · edit

ಕಲ್ಪನೆ

ಬದಲಾಯಿಸಿ

ಯಾವುದೇ ಬಹುಸಭೆಗಳ ವ್ಯಾಪಕ ಅಗತ್ಯತೆಯು ಇಲ್ಲದಿರುವಾಗ ಏಕಸಭೆಯ ಶಾಸಕಾಂಗಗಳು ಅಸ್ತಿತ್ವದಲ್ಲಿರುತ್ತವೆ. ಸಮಾಜದ ವಿಭಿನ್ನ ವರ್ಗಗಳಿಗೆ ಪ್ರತ್ಯೇಕ ಅಭಿಪ್ರಾಯದ ಹಕ್ಕನ್ನು ನೀಡಲು ಹಲವು ಬಹುಸಭೆಗಳ ಶಾಸಕಾಂಗಗಳನ್ನು ರಚಿಸಲಾಯಿತು. ಬಹು ಸದನವನ್ನು ವಿಭಿನ್ನ ಸಾಮಾಜಿಕ ವರ್ಗಗಳು (ಯುನೈಟೆಡ್ ಕಿಂಗ್‌ಡಮ್‌ನ ಪಾರ್ಲಿಮೆಂಟ್ ಅಥವಾ ಫ್ರೆಂಚ್ ಸ್ಟೇಟ್ಸ್-ಜನರಲ್‌‌ನಲ್ಲಿರುವಂತೆ), ಜನಾಂಗ ಅಥವಾ ಪ್ರಾಂತ್ಯೀಯ ಆಸಕ್ತಿಗಳು ಅಥವಾ ಒಕ್ಕೂಟದ ಉಪವಿಭಾಗಗಳ ಖಾತ್ರಿಯಾದ ಪ್ರಾತಿನಿಧಿತ್ವಕ್ಕಾಗಿ ಅನುಮತಿಸಲಾಯಿತು. ದುರ್ಬಲವಾದ ಪ್ರಾಂತೀಯ ಅನನ್ಯತೆಯೊಂದಿಗಿನ ಏಕೀಕೃತ ರಾಷ್ಟ್ರಗಳಲ್ಲಿ ಈ ವಿಷಯಗಳು ಪ್ರಾಮುಖ್ಯವಾಗಿರುವುದಿಲ್ಲ, ಅಲ್ಲಿ ಏಕಸಭೆಗಳು ಮೇಲುಗೈ ಸಾಧಿಸುತ್ತವೆ. ಕೆಲವೊಮ್ಮೆ, ಸ್ವೀಡನ್ ಅಥವಾ ನ್ಯೂಜಲೆಂಡ್ನಲ್ಲಿರುವಂತೆ, ಇತರ ಸದನಗಳ ರದ್ದತಿಯ ಮೂಲಕ ಅಥವಾ ಉಳಿದ ಸದನಗಳಲ್ಲಿ ಇವು ವಿಲೀನ ಹೊಂದುವ ಮೂಲಕ ಕಂಡುಬಂದರೆ, ಇತರವುಗಳಲ್ಲಿ ಎರಡನೆಯ ಸದನವು ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ. ಏಕಸಭೆಯ ಶಾಸಕಾಂಗಗಳು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಕ್ಯೂಬಾದಂತಹ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಸಹ ಸಾಮಾನ್ಯವಾಗಿದೆ. ಅದೇ ರೀತಿಯಾಗಿ, ಉಕ್ರೇನ್, ಮಾಲ್ಡೋವಾ ಮತ್ತು ಸರ್ಬಿಯಾದಂತಹ ಮಾಜಿ ಕಮ್ಯೂನಿಸ್ಟ್ ರಾಷ್ಟ್ರಗಳು ತಮ್ಮ ಏಕಸಭೆಯ ಶಾಸಕಾಂಗಗಳನ್ನು ಉಳಿಸಿಕೊಂಡರೂ, ರಷ್ಯಾ ಮತ್ತು ಪೋಲೆಂಡ್ನಂತಹ ರಾಷ್ಟ್ರಗಳು ಕಮ್ಯೂನಿಸಮ್‌ನ ಪತನದ ನಂತರ ದ್ವಿಸಭೆಯ ಶಾಸಕಾಂಗಗಳನ್ನು ಅನುಮೋದಿಸಿದವು. ಸಮಾಜವಾದಿ ಸಿದ್ಧಾಂತಗಳು, ಮೇಲ್ಮನೆಯನ್ನು ಪ್ರಾತಿನಿಧಿಕವಾಗಿ ಸಂಪ್ರದಾಯವಾದಿ ಎಂದು ಮತ್ತು ಉನ್ನತ ವರ್ಗಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವುದಾಗಿಯೆಂದು ಪರಿಗಣಿಸುತ್ತದೆ. ಏಕಸಭೀಯ ವ್ಯವಸ್ಥೆಯ ಮೂಲಭೂತ ಅನುಕೂಲವೆಂದರೆ ಅಲ್ಲಿ ಶಾಸಕಾಂಗದ ಪ್ರಕ್ರಿಯೆಗಳು ಹೆಚ್ಚು ಸರಳವಾಗಿರುವುದರಿಂದ ಮತ್ತು ಅಲ್ಲಿ ಯಾವುದೇ ಶಾಸಕಾಂಗದ ಅಡ್ಡಿಯ ಸಂಭಾವ್ಯತೆ ಇಲ್ಲದೇ ಇರುವುದರಿಂದ ಅದು ಕಾನೂನು ರಚನೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬಹುಸಭೆಯ ವ್ಯವಸ್ಥೆಯಲ್ಲಿರುವಂತೆ ಏಕಸಭೆಯಲ್ಲಿ ಶಾಸನ ಸಭೆಯ ಸದಸ್ಯರ ಸಂಖ್ಯೆಯು ಒಂದೇ ಆಗಿದ್ದರೂ, ಇದನ್ನು ನಿರ್ವಹಣೆ ಮಾಡಲು ಮತ್ತು ಬೆಂಬಲಿಸಲು ಕೆಲವೇ ಕೆಲವು ಸ್ಥಾಪಿತ ಪದ್ದತಿಗಳಿರುವುದರಿಂದ ಇದು ವೆಚ್ಚವನ್ನು ಕುಗ್ಗಿಸುತ್ತದೆ ಎಂದೂ ಸಹ ಏಕಸಭೀಯ ಪ್ರತಿಪಾದಕರು ವಾದಿಸುತ್ತಾರೆ. ಮುಖ್ಯವಾಗಿ ಪಾರ್ಲಿಮೆಂಟರಿ ಪದ್ಧತಿಯಲ್ಲಿ ನಿರ್ದಿಷ್ಟವಾಗಿ ಗಮನಿಸುವಂತೆ ಅಲ್ಲಿ ಬಹುಮತದ ಪಾರ್ಲಿಮೆಂಟರಿ ನಾಯಕರು ಕಾರ್ಯನಿರ್ವಹಣೆಯಲ್ಲೂ ಪ್ರಭಾವ ಬೀರುವುದರಿಂದ, ಬಹುಮತದ ಮೇಲಿನ ನಿಯಂತ್ರಣದ ಕೊರತೆಯನ್ನು ಏಕಸಭೀಯ ವ್ಯವಸ್ಥೆಯ ಕೊರತೆಯನ್ನಾಗಿ ಕಾಣಬಹುದು. ಶಾಸನ ಸಭೆಯಲ್ಲಿ ಸದಸ್ಯ ಸ್ಥಾನದ ಹಂಚಿಕೆಯನ್ನು ಆಧರಿಸಿಯೂ ಸಹ ಅಪಾಯವಿದೆ, ಅಲ್ಲಿ ಸಮಾಜದ ಪ್ರಮುಖ ವರ್ಗಗಳಿಗೆ ಸೂಕ್ತ ಪ್ರಾತಿನಿಧಿತ್ವ ದೊರೆಯದೇ ಇರಬಹುದು.

ಉದಾಹರಣೆಗಳು

ಬದಲಾಯಿಸಿ

ಅಂದಾಜು ವಿಶ್ವದ ಅರ್ಧ ಸಾರ್ವಭೌಮ ರಾಷ್ಟ್ರಗಳು ಪ್ರಸ್ತುತ ಏಕಸಭೆಯನ್ನು ಹೊಂದಿದ್ದು, ಇವುಗಳಲ್ಲಿ ಜನಪ್ರಿಯವಾದವುಗಳಾದ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಮತ್ತು ಪ್ರಾಮುಖ್ಯವಲ್ಲದ (ವ್ಯಾಟಿಕನ್ ಸಿಟಿ) ಸೇರಿದೆ. ಹಲವು ಉಪರಾಷ್ಟ್ರೀಯ ಅಸ್ತಿತ್ವಗಳು ಏಕಸಭೆಯ ಶಾಸನ ಸಭೆಗಳನ್ನು ಹೊಂದಿವೆ. ಇವುಗಳಲ್ಲಿ ಯುನೈಟೆಡ್ ಸ್ಟೇಟ್ಸ್ನ ನೆಬ್ರಾಸ್ಕಾ, ಗ್ವಾಮ್ ಮತ್ತು ವರ್ಜಿನ್ ಐಲ್ಯಾಂಡ್ಸ್, ಹಾಂಗ್ ಕಾಂಗ್, ಆಸ್ಟ್ರೇಲಿಯನ್ ಸ್ಟೇಟ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ನ ಪ್ರಾಂತ್ಯಗಳು, ಉತ್ತರ ಪ್ರಾಂತ್ಯ ಮತ್ತು ಆಸ್ಟ್ರೇಲಿಯನ್ ಕ್ಯಾಪಿಟಲ್ ಪ್ರಾಂತ್ಯ, ಕೆನಡಾದ ಎಲ್ಲಾ ಭಾಗಗಳು ಮತ್ತು ಪ್ರಾಂತ್ಯಗಳು, ಎಲ್ಲಾ ಜರ್ಮನ್ ಬಂಡ್‌ಸ್ಲಾಂಡರ್, ಎಲ್ಲಾ ಇಟಾಲಿಯನ್ ಪ್ರಾಂತ್ಯಗಳು ಮತ್ತು ಎಲ್ಲಾ ಸ್ಪ್ಯಾನಿಷ್ ಸ್ವಾಯತ್ತ ಸಮುದಾಯಗಳು ಸೇರಿದೆ. ಯುನೈಟೆಡ್ ಕಿಂಗ್‌ಡಮ್ ನಲ್ಲಿ, ಪಾರಂಪರಾಗತ ಸ್ಕಾಟಿಷ್ ಪಾರ್ಲಿಮೆಂಟ್, ವೇಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿ ಮತ್ತು ಉತ್ತರ ಐರ್ಲೆಂಡ್ ಅಸೆಂಬ್ಲಿಗಳು ಸಹ ಏಕಸಭೆಗಳಾಗಿದೆ. ನಗರ ಸಭೆಯನ್ನು ಎರಡು ಸದನಗಳಾಗಿ ವಿಭಾಗಿಸದೇ ಇರುವ ಕಾರಣದಿಂದಾಗಿ ಬಹುಪಾಲು ಎಲ್ಲಾ ನಗರ ಶಾಸನ ಸಭೆಗಳು ಸಹ ಏಕಸಭೆಗಳಾಗಿವೆ. 20 ನೇ ಶತಮಾನವು ಪ್ರಾರಂಭವಾಗುವವರೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಭಯ ಸದನದ ನಗರ ಸಭೆಗಳು ಸರ್ವೇ ಸಾಮಾನ್ಯವಾಗಿದ್ದವು[ಸೂಕ್ತ ಉಲ್ಲೇಖನ ಬೇಕು].

 
[4][5][6]

ರಾಷ್ಟ್ರೀಯ

ಬದಲಾಯಿಸಿ

ಪ್ರಾಂತೀಯ

ಬದಲಾಯಿಸಿ
 • ಜಾರ್ಜಿಯಾದ ಜನರಲ್ ಅಸೆಂಬ್ಲಿಯಯ ವಸಾಹತುಶಾಹಿಯ ಅವಧಿ
 • ಜಿಬ್ರಾಲ್ಟರ್ನ ಪಾರ್ಲಿಮೆಂಟ್
 • ಗ್ವಾಮ್ನ ಶಾಸನಸಭೆ
 • ಹಾಂಗ್‌ಕಾಂಗ್ನ ಶಾಸನ ಸಭೆ (1998 ರಿಂದ ಖಾಸಗಿ ಮಸೂದೆಗಳಿಗೆ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ)
 • ಪೆನ್ಸಿಲ್ವೇನಿಯಾದ ಸಾಮಾನ್ಯ ಅಸೆಂಬ್ಲಿಯ ವಸಾಹತುಶಾಹಿಯ ಅವಧಿ
 • ಯು.ಎಸ್. ವರ್ಜಿನ್ ಐಲ್ಯಾಂಡ್ಸ್ನ ಶಾಸನಸಭೆ

ಉಪರಾಷ್ಟ್ರೀಯ

ಬದಲಾಯಿಸಿ

ಸಂಯುಕ್ತ ರಾಷ್ಟ್ರಗಳು

ಬದಲಾಯಿಸಿ
 • ಬೆಲ್ಜಿಯಂನ ಪ್ರಾಂತ್ಯಗಳು ಮತ್ತು ಸಮುದಾಯಗಳ ಎಲ್ಲಾ ಶಾಸಕಾಂಗ ಮತ್ತು ಶಾಸನ ಸಭೆಗಳು
 • ಕೆನಡಾ ಪ್ರಾಂತ್ಯದ ಎಲ್ಲಾ ಶಾಸಕ ಸಭೆಗಳು
 • ಜರ್ಮನಿ ರಾಜ್ಯಗಳ ಎಲ್ಲಾ ಲ್ಯಾಂಡ್‌ಟೇಗ್
 • ನೆಬ್ರಾಸ್ಕ ಶಾಸಕಾಂಗ ಮತ್ತು ವಾಷಿಂಗ್ಟನ್, ಡಿ.ಸಿ.ಯ ಕೌನ್ಸಿಲ್ (ಅಮೆರಿಕಾ ಸಂಯುಕ್ತ ಸಂಸ್ಥಾನ
 • ಕ್ವೀನ್ಸ್‌ಲ್ಯಾಂಡ್ನ ಪಾರ್ಲಿಮೆಂಟ್ ಮತ್ತು ಆಸ್ಟ್ರೇಲಿಯ ಪ್ರಾಂತ್ಯಗಳ ಶಾಸಕ ಸಭೆಗಳು
 • ರಿಪಬ್ಲಿಕಾ ಸ್ಪಸ್ಕಾದ ನರೋಡ್ನಾ ಸ್ಕಪ್ಸ್ಟಿನಾ
 • ಬ್ರೆಜಿಲ್ನ ಎಲ್ಲಾ ಶಾಸಕಾಂಗಗಳು
 • ಕೆಲವು ಭಾರತೀಯ ರಾಜ್ಯಗಳು - ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ತಾನ, ಗುಜರಾತ್, ಒಡಿಶಾ, ಕೇರಳ, ಅಸ್ಸಾಂ, ಪಂಜಾಬ್, ಹರಿಯಾಣ, ಜಾರ್ಖಂಡ್, ತ್ರಿಪುರ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಗೋವಾ, ಮಿಜೋರಂ, ಸಿಕ್ಕಿಂ, ಉತ್ತರಾಖಂಡ, ಪಾಂಡಿಚೇರಿ, ದೆಹಲಿ ಮತ್ತು ಚತ್ತೀಸಘಡ
 • ಪ್ರಸ್ತುತ ಉಭಯಸದನದ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ನಿಂದ ಸ್ಥಾನ ಬದಲಾಯಿಸುವ ಮೊದಲು ಒಕ್ಕೂಟದ ಕಾಂಗ್ರೆಸ್ ಏಕಸಭೆಯಾಗಿತ್ತು.

ಪರಂಪರಾಗತ ಸರ್ಕಾರಗಳು

ಬದಲಾಯಿಸಿ
 • ಉತ್ತರ ಐರ್ಲೆಂಡ್ ಅಸೆಂಬ್ಲಿ
 • ಸ್ಕಾಟಿಷ್ ಸರ್ಕಾರ
 • ವೇಲ್ಸ್‌ಗಾಗಿನ ರಾಷ್ಟ್ರೀಯ ಅಸೆಂಬ್ಲಿ
 • ಸ್ಪೇನ್ನ ಸ್ವಾಯತ್ತ ಸಮುದಾಯಗಳ ಪಾರ್ಲಿಮೆಂಟ್‌ಗಳು
 • ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಏಕೀಕೃತ)ದ ಎಲ್ಲಾ ಪ್ರದೇಶಗಳು, ಪ್ರಾಂತ್ಯಗಳು ಮತ್ತು ಮುನ್ಸಿಪಾಲಿಟಿಗಳ ಎಲ್ಲಾ ಹಂತಗಳ ಪೀಪಲ್ಸ್ ಕಾಂಗ್ರೆಸ್‌ಗಳು
 • ವರ್ವೋಂಟ್ನ ಸಾಮಾನ್ಯ ಸಭೆ 1836 ರ ವರೆಗೆ (ಐತಿಹಾಸಿಕ)

ಅಮೇರಿಕ ಸಂಯುಕ್ತ ಸಂಸ್ಥಾನದ ಉಪವಿಭಾಗಗಳ ಒಳಗಿನ ಏಕಸಭೆಗಳು

ಬದಲಾಯಿಸಿ

ಅಮೇರಿಕದೊಳಗೆ, ನೆಬ್ರಾಸ್ಕಾವು ಪ್ರಸ್ತುತ ಏಕ ಶಾಸನ ಸಭೆಯನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ. ಸಂಪೂರ್ಣವಾಗಿ ಪಕ್ಷಪಾತವಿಲ್ಲದ ಏಕೈಕ ರಾಜ್ಯ ಶಾಸನ ಸಭೆಯಾಗಿ ನೆಬ್ರಾಸ್ಕಾದ ರಾಜ್ಯ ಶಾಸನ ಸಭೆಯು ಅನನ್ಯವಾಗಿದೆ. ರಾಜ್ಯದೊಳಗಿನ ಕೌಂಟಿಗಳು, ನಗರಗಳು ಮತ್ತು ಇತರ ರಾಜಕೀಯ ಉಪವಿಭಾಗಗಳ ಸ್ಥಳೀಯ ಸರ್ಕಾರೀ ಶಾಸನ ಸಭೆಗಳು ಸಾಮಾನ್ಯವಾಗಿ ಏಕ ಸಭೆಗಳಾಗಿರುತ್ತವೆ ಮತ್ತು ಅವುಗಳ ರಾಜ್ಯ ಮತ್ತು ಫೆಡರಲ್ ಸಹಯೋಗಿಗಳಿಗೆ ಹೋಲಿಸಿದರೆ ಸೀಮಿತ ಕಾನೂನು ರಚನೆಯ ಅಧಿಕಾರವನ್ನು ಹೊಂದಿರುತ್ತವೆ. 1999 ರಲ್ಲಿ, ಗವರ್ನರ್ ಜೆಸ್ಸಿ ವೆಂಚುರಾ ಅವರು ಮಿನ್ನೆಸೋಟಾ ಶಾಸನ ಸಭೆಯವನ್ನು ಏಕ ಶಾಸನ ಸಭೆಯಾಗಿ ಮಾರ್ಪಡಿಸಲು ಪ್ರಸ್ತಾಪಿಸಿದರು.[೧] ಇದು ಚರ್ಚೆಯಾಗಲ್ಪಟ್ಟರೂ ಸಹ, ಈ ಯೋಚನೆಯನ್ನು ಎಂದಿಗೂ ಜಾರಿಗೊಳಿಸಲಿಲ್ಲ. 2004 ರ ಜುಲೈ 10 ರಂದು ನಡೆದ ನಿರ್ಬಂಧಪಡಿಸಲಾಗದ ಜನಮತ ಸಂಗ್ರಹದಲ್ಲಿ, ಪ್ಯೂರ್ಟೋರಿಕೋ ಯು.ಎಸ್. ಪ್ರಾಂತ್ಯದ ಮತದಾರರು ಅದರ ಶಾಸನ ಸಭೆಯನ್ನು ಏಕಸಭೆಯನ್ನಾಗಿ ಬದಲಾಯಿಸುವುದರ ನಿರ್ಧಾರವನ್ನು ಅದರ ಪರವಾಗಿ 456,267 (83.7%) ಮತಗಳು ಮತ್ತು ವಿರೋಧವಾಗಿ 88,720 (16.3%) ಮತಗಳೊಡನೆ ಅನುಮೋದಿಸಿದರು. ಏಕ ಶಾಸನ ಸಭೆಯಾಗಿ ಮಾರ್ಪಡಿಸಲು ಎರಡೂ ಪ್ರದೇಶದ ಪ್ರಜಾಪ್ರತಿನಿಧಿಗಳ ಸಭೆ ಮತ್ತು ಸೆನೇಟ್ ಗಳು ಪ್ಯೂರ್ಟೋರಿಕೋ ಸಂವಿಧಾನದ ನಿರ್ದಿಷ್ಟ ತಿದ್ದುಪಡಿಯನ್ನು 2/3 ಮತದಿಂದ ಅನುಮೋದಿಸುವುದು ಅಗತ್ಯವಿದ್ದು, ಅಂತಹ ತಿದ್ದುಪಡಿಯನ್ನು ಅನುಮೋದಿಸಲು ಮತ್ತೊಂದು ಜನಮತ ಸಂಗ್ರಹಣೆ ನಡೆಯಲಿದೆ. ಅಂತಹ ಸಾಂವಿಧಾನಿಕ ಬದಲಾವಣೆಗಳನ್ನು ಅನುಮೋದಿಸಿದರೆ, 2015 ರೊಳಗೆ ಪ್ಯೂರ್ಟೋರಿಕೋವು ಏಕ ಶಾಸನ ಸಭೆ ಪದ್ಧತಿಗೆ ಬದಲಾಗಲಿದೆ. 2009 ರ ಜೂನ್ 9 ರಂದು ಮೈನ್ ಜನಪ್ರತಿನಿಧಿಗಳ ಸಭೆಯು ಏಕ ಶಾಸನ ಸಭೆಯನ್ನು ರೂಪಿಸಲು ಮತ ಚಲಾಯಿಸಿತು, ಆದರೆ ಕ್ರಮಗಳು ಸೆನೇಟ್‌ನಲ್ಲಿ ಅಂಗೀಕಾರವಾಗಲಿಲ್ಲ.[೨] 2009 ರಲ್ಲಿನ ಶಾಸನ ಸಭೆಯ ತಡೆಯ ಕಾರಣದಿಂದ, ಮಾಜಿ ಕಾಂಗ್ರೆಸಿಗರಾದ ಮತ್ತು ಗವರ್ನರ್ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಯಾದ ರಿಕ್ ಲ್ಯಾಜಿಯೋ ಅವರು ನ್ಯೂಯಾರ್ಕ್ ಏಕ ಶಾಸನ ಸಭೆಯನ್ನು ಅಳವಡಿಸಿಕೊಳ್ಳಬೇಕೆಂದು ಪ್ರಸ್ತಾಪಿಸಿದರು.[೩]

ಫಿಲಿಫೈನ್ಸ್‌ನಲ್ಲಿ ಏಕಸಭೆ

ಬದಲಾಯಿಸಿ

ಕಾಮನ್‌ವೆಲ್ತ್ ಅವಧಿಯ ಕಾಲವಾದ 1935-1940 ರಲ್ಲಿ ಫಿಲಿಫೈನ್ಸ್ನಲ್ಲಿ ಏಕ ಶಾಸನ ಸಭೆಯ ಅನುಭವವನ್ನು ಹೊಂದಲಾಯಿತು. 1973 ರ ಸಂವಿಧಾನದಲ್ಲಿ, ಶಾಸನಸಭೆಯ ಪದ್ಧತಿಯನ್ನು ಸರ್ಕಾರದ ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ 1986 ರವರೆಗೆ ಬಟಾಸಂಗ್ ಪಂಬನ್ಸಾ ಎಂದು ಕರೆಯಲಾಗುತ್ತಿತ್ತು. ಪ್ರಸ್ತುತ ನಡೆಯುತ್ತಿರುವ ಪ್ರಸ್ತುತ ಸಂವಿಧಾನದ ಮತ್ತು ಸರ್ಕಾರ ಸ್ವರೂಪದ ತಿದ್ದುಪಡಿ ಅಥವಾ ಪರಿಷ್ಕರಣೆಯು ಜನಪ್ರಿಯವಾಗಿ ಚಾರ್ಟರ್ ಬದಲಾವಣೆ ಎಂದು ಹೆಸರಾಗಿದೆ. ಅಧ್ಯಕ್ಷರಾದ ಗ್ಲೋರಿಯಾ-ಮ್ಯಾಕಾಪಗಲ್-ಅರ್ರೋಯೋ ಅವರು ರಚಿಸಿದ ಸಾಂವಿಧಾನಿಕ ಕಮಿಷನ್‌ನ ಪ್ರಸ್ತಾಪಗಳಲ್ಲಿ ಏಕ ಸಭೆಯ ಪಾರ್ಲಿಮೆಂಟಿಗೆ ರೂಪಾಂತರಗೊಳ್ಳುವುದನ್ನು ಸೇರ್ಪಡಿಸಲಾಗಿದೆ.[೪] ಅಮೇರಿಕದಲ್ಲಿರದಿರುವಂತೆ, ಫಿಲಿಫೈನ್ಸ್‌ನ ಸೆನೇಟ್ ನಲ್ಲಿನ ಸೆನೇಟರ್‌ಗಳನ್ನು ಜಿಲ್ಲೆ ಅಥವಾ ರಾಜ್ಯದ ಪ್ರಕಾರವಾಗಿ ಚುನಾಯಿಸದೇ ರಾಷ್ಟ್ರೀಯವಾಗಿ ಚುನಾಯಿಸಲಾಗುತ್ತದೆ; ಫಿಲಿಫೈನ್ಸ್ ಎನ್ನುವುದು ಏಕೀಕೃತ ರಾಷ್ಟ್ರವಾಗಿದೆ.[೫] ಫಿಲಿಫೈನ್ ಸರ್ಕಾರದ ನಿರ್ಧಾರ-ಕೈಗೊಳ್ಳುವಿಕೆ ಪ್ರಕ್ರಿಯೆಯು ಅಮೇರಿಕಕ್ಕೆ ಪರಸ್ಪರ ಸಂಬಂಧ ಹೊಂದಿದ್ದು, ಇದು ಹೆಚ್ಚು ಕಠಿಣ, ಕೇಂದ್ರೀಕೃತ, ಹೆಚ್ಚು ನಿಧಾನಗತಿಯ ಮತ್ತು ರಾಜಕೀಯ "ಅಸ್ಥಿರತೆ" ಗಳಿಗೆ ಹೆಚ್ಚು ಸುಲಭವಾಗಿ ಪ್ರಭಾವಕ್ಕೊಳಗಾಗುವಂತಿದೆ. ಪರಿಣಾಮವಾಗಿ, ಏಕ ಶಾಸನ ಸಭೆ ಮತ್ತು ಇತರ ರಾಜಕೀಯ ವ್ಯವಸ್ಥೆಯ ಸುಧಾರಣೆಗಳಿಗಿನ ಪ್ರವೃತ್ತಿಯು ಫಿಲಿಫೈನ್ಸ್‌ನಲ್ಲಿ ಹೆಚ್ಚು ವಿವಾದಾಸ್ಪದವಾಗಿದೆ.[೬]

ಇವನ್ನೂ ಗಮನಿಸಿ

ಬದಲಾಯಿಸಿ
 • ಬಹು ಸಭೆ
 • ದ್ವಿಸಭೆ
 • ತ್ರಿಸಭೆ
 • ನಾಲ್ಕು ಸಭೆ
 • ರಾಷ್ಟ್ರದ ಪ್ರಕಾರವಾಗಿ ಶಾಸನ ಸಭೆಗಳ ಪಟ್ಟಿ

ಟಿಪ್ಪಣಿಗಳು

ಬದಲಾಯಿಸಿ
 1. ಒನ್ ಪೀಪಲ್ - ಒನ್ ಹೌಸ್
 2. ರೆಸಲ್ಯೂಶನ್, ಪ್ರೊಪೋಸಿಂಗ್ ಆನ್ ಅಮೆಂಡ್‌ಮೆಂಟ್ ಟು ದಿ ಕಾನ್‌ಸ್ಟಿಟ್ಯೂಶನ್ ಆಫ್ ಮೈನ್ ಟು ಎಸ್ಟಾಬ್ಲಿಷ್ ಎ ಯೂನಿಕ್ಯಾಮೆರಾಲ್ ಲೆಜಿಸ್ಲೇಚರ್
 3. ಒನ್ ಫಾರ್ ಆಲ್, ರಿಕ್ ಲೇಜಿಯೋ, ನ್ಯೂಯಾರ್ಕ್ ಟೈಮ್ಸ್ , ಜುಲೈ 14, 2009
 4. "ಕಾನ್‌ಸ್ಟಿಟ್ಯೂಶನಲ್ ಕಮಿಷನ್ ಪ್ರೊಪೋಸಲ್ಸ್". Archived from the original on 2006-02-21. Retrieved 2011-02-15.
 5. Philippines : Gov.Ph : About the Philippines
 6. "ವೈ ಚೇಂಜ್?". Archived from the original on 2006-08-18. Retrieved 2011-02-15.
"https://kn.wikipedia.org/w/index.php?title=ಏಕಸಭೆ&oldid=1154812" ಇಂದ ಪಡೆಯಲ್ಪಟ್ಟಿದೆ