ವ್ಯಾಟಿಕನ್ ನಗರ

ವ್ಯಾಟಿಕನ್ ನಗರ - ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ವ್ಯಾಟಿಕನ್ ನಗರ-ಅಧಿಕೃತವಾಗಿ, 'ವ್ಯಾಟಿಕನ್ ನಗರ ರಾಜ್ಯ'. ವ್ಯಾಟಿಕನ್ ನಗರವು ಕ್ರಿಶ್ಚಿಯನ್ನರ ಅತ್ಯುಚ್ಚ ಧರ್ಮಗುರು ಪೋಪ್ ಅವರು ನೆಲೆಸಿರುವ ಸ್ಥಳ. ರೋಮ್ ನಗರದ ಮಧ್ಯಭಾಗದಲ್ಲಿ ಸ್ಥಿತವಾಗಿರುವ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ ಮತ್ತು 'ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರ'ವೆಂಬ ಹೆಗ್ಗಳಿಕೆಯನ್ನು ಪಡೆದಿದೆ.

ವ್ಯಾಟಿಕನ್ ನಗರ*
UNESCO ವಿಶ್ವ ಪರಂಪರೆಯ ತಾಣ

View of St. Peter's Square from the top of Michaelangelo's dome.
ರಾಷ್ಟ್ರ Flag of the Vatican City.svg ವ್ಯಾಟಿಕನ್
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು i, ii, iv, vi
ಆಕರ 286
ವಲಯ** ಯುರೋಪ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1984  (8ನೆಯ
ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಹೋಲಿ ಸೀಸಂಪಾದಿಸಿ

ಈ ನಗರದ ಅಧಿಕಾರವನ್ನು ಹೋಲಿ ಸೀ ಎಂಬ ರೋಮನ್ ಕ್ಯಾಥೋಲಿಕ್ ಚರ್ಚ್ ಪೀಠವು ನೆಡೆಸುತ್ತದೆ. ಈ ದೇಶದ ನಾಯಕತ್ವವನ್ನು ಮತ್ತು ಆಡಳಿತವನ್ನು ಪೋಪ್ ರವರಿಗೆ ನೀಡಲಾಗಿದೆ ಮತ್ತು ಸರ್ಕಾರದ ಪ್ರಮುಖರಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯವರಿಗೂ ಮತ್ತು ವ್ಯಾಟಿಕನ್ ರಾಜ್ಯಪಾಲರಿಗೂ ಅಡಳಿತ ವಹಿಸಲಾಗಿದೆ. ಈಗಿನ ಪೋಪ್ ಪದವಿಯನ್ನು, ಪೋಪ್ ಹದಿನಾರನೇ ಬೆನೆಡಿಕ್ಟ್ ಅಲಂಕರಿಸಿದ್ದಾರೆ.

ವಿಶ್ವದ ಅತಿದೊಡ್ಡ ಇಗರ್ಜಿಸಂಪಾದಿಸಿ

ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಂಜಲೋ ಮತ್ತಿತರರು ರಚಿಸಿದ ಕಲಾಕೃತಿಗಳ ಸಂಗ್ರಹ ಹಾಗೂ ವೈವಿಧ್ಯ ಶೈಲಿಯ ಕಟ್ಟಡ ವಿನ್ಯಾಸಗಳನ್ನು ಕಾಣಬಹುದು.