ಆವಕಾಡೊ
- ಕ್ಯಾಲಿಫೋರ್ನಿಯಾದ ಸ್ಥಳಕ್ಕಾಗಿ, ಆವಕಾಡೊ, ಕ್ಯಾಲಿಫೋರ್ನಿಯಾ ನೋಡಿ.
Avocado | |
---|---|
Avocado fruit and foliage, Huntington Library, California | |
Scientific classification | |
ವಿಭಾಗ: | |
ಕುಲ: | |
ಪ್ರಜಾತಿ: | P. americana
|
Synonyms | |
Persea gratissima |
ಪಾಲ್ಟ ಅಥವಾ ಅಗ್ವಕಟೆ (ಸ್ಪ್ಯಾನಿಶ್), ಬಟರ್ ಪಿಯರ್ ಅಥವಾ ಅಲಿಗೇಟರ್ ಪಿಯರ್ ಎಂದೂ ಕರೆಯುವ ಆವಕಾಡೊ ಪರ್ಸಿಯಾ ಅಮೇರಿಕಾನ ಮೆಕ್ಸಿಕೋದ ಕ್ಯಾರಿಬೀನ್ ತವರಿಗೆ ಸೇರಿದ ಒಂದು ಮರ. ಇದು ದಕ್ಷಿಣ ಅಮೇರಿಕಾ ಮತ್ತು ಮಧ್ಯ ಅಮೇರಿಕಾದಲ್ಲಿಯೂ ಕಂಡುಬರುತ್ತದೆ. ದಾಲ್ಚಿನ್ನಿ, ಕರ್ಪೂರ ಮತ್ತು ಬೇ ಲಾರೆಲ್ ಮೊದಲಾದವುಗಳೊಂದಿಗೆ ಇದೂ ಹೂ ಬಿಡುವ ಒಂದು ಸಸ್ಯ ವಾಗಿದ್ದು ಲಾರಸಿಯೆಯಲ್ಲಿ ಇದು ಕಂಡುಬರುತ್ತದೆ. ಈ ಮರದ ಹಣ್ಣನ್ನು (ದೊಡ್ಡ ಬೀಜವುಳ್ಳ ದೊಡ್ಡ ಬೆರಿ [೧]) "ಆವಕಾಡೊ" ಎಂಬ ಹೆಸರಿನಿಂದಲೇ ಕರೆಯುತ್ತಾರೆ, ಇದು ಅಂಡಾಕಾರದಲ್ಲಿ ಅಥವಾ ಗೋಲಾಕಾರದಲ್ಲಿ ಇರುತ್ತದೆ. ವಾಣಿಜ್ಯ ದೃಷ್ಟಿಯಿಂದ ಆವಕಾಡೊಗಳು ತುಂಬಾ ಬೆಲೆ ಬಾಳುವ ಹಣ್ಣುಗಳು, ಇವನ್ನು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನದಲ್ಲಿ (ಮತ್ತು ಕ್ಯಾಲಿಫೋರ್ನಿಯಾದಂತಹ ಕೆಲ ಸಮಶೀತೋಷ್ಣ ವಲಯದಲ್ಲಿ) ಬೆಳೆಯಲಾಗುತ್ತದೆ. ಹಸಿರು-ಸಿಪ್ಪೆಯ, ಪೇರು ಹಣ್ಣಿನ ಆಕಾರದಲ್ಲಿರುವ ಇದು ಕಟಾವು ಮಾಡಿದ ನಂತರ ಪಕ್ವವಾಗುತ್ತದೆ. ಸ್ವಂತವಾಗಿ ಆಂಶಿಕ ಪರಾಗಸ್ಪರ್ಶ ಮಾಡಿಕೊಳ್ಳುವ ಇವುಗಳನ್ನು ಹಣ್ಣಿನ ಅಪೇಕ್ಷಿತ ಗುಣಮಟ್ಟ ಮತ್ತು ಅಧಿಕ ಇಳುವರಿ ಪಡೆಯಲು ಕಸಿ ಮಾಡುವ ಮೂಲಕ ಸಂತಾನವೃದ್ಧಿ ಮಾಡಲಾಗುತ್ತದೆ.
ಇತಿಹಾಸ
ಬದಲಾಯಿಸಿP. ಅಮೇರಿಕಾನ ಅಥವಾ ಆವಕಾಡೊವನ್ನು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಹುಹಿಂದಿನಿಂದಲೂ ಬೆಳೆಸಲಾಗುತ್ತಿದೆ; ನೀರಿನ ಹೂಜಿಯ ಆಕಾರದ ಆವಕಾಡೊವೊಂದು A.D.900ರ ಸಂದರ್ಭದಲ್ಲಿ ಇಂಕ ನಗರಕ್ಕೂ ಪೂರ್ವದ್ದಾದ ಚಾನ್ ಚಾನ್[೨] ನಲ್ಲಿ ಪತ್ತೆಯಾಯಿತು. ಯುರೋಪ್‌ನಲ್ಲಿ ಆವಕಾಡೊ ಬಗ್ಗೆ ಮಾರ್ಟಿನ್ ಫರ್ನಾಂಡೇಜ್ ದಿ ಎನ್ಕಿಸೊ (c. 1470–c. 1528) ಅವನ ಸುಮ ದಿ ಜಿಯೋಗ್ರಾಫಿಯ ಕ್ಯು ಟ್ರಾಟ ದಿ ಟೋಡಸ್ ಲಾಸ್ ಪಾರ್ಟಿಡಾಸ್ ವೈ ಪ್ರೋವಿನ್ಸಿಯಾಸ್ ಡೆಲ್ ಮುಂಡೊ ಪುಸ್ತಕದಲ್ಲಿ 1518 ಅಥವಾ 1519ರಲ್ಲಿ ಮೊದಲು ಪ್ರಸ್ತಾಪಿಸಿದ್ದಾನೆ.[೩][೪] 'ಆವಕಾಡೊ' ಪದ ಬಳಕೆಯ ಬಗ್ಗೆ ಹಾನ್ಸ್ ಸ್ಲೊಯಾನೆಯ ಜಮೈಕಾದ ಸಸ್ಯಗಳ 1696ರ ಸೂಚಿಯು ಇಂಗ್ಲಿಷ್‌ನ ಮೊದಲ ಲಿಖಿತ ದಾಖಲೆಯಿದೆ. ಈ ಸಸ್ಯವು ಇಂಡೋನೇಷಿಯಾಕ್ಕೆ 1750ರಲ್ಲಿ, ಬ್ರೆಜಿಲ್‌ಗೆ 1809ರಲ್ಲಿ, ಲೆವಂಟ್‍ಗೆ 1908ರಲ್ಲಿ, ಹಾಗೂ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾಕ್ಕೆ 19ನೇ ಶತಮಾನದ ಉತ್ತರಾರ್ಧದಲ್ಲಿ ಚಾಲ್ತಿಗೆ ಬಂದಿತು. 1819ರಲ್ಲಿ ಇದನ್ನು ಬೆಂಗಳೂರಿಗೆ ತಂದರೆನ್ನಲಾಗಿದೆ. ಈಗ ಎಲ್ಲೆಡೆಯಲ್ಲೂ ಅವೊಕ್ಯಾಡೊ ವಾಣಿಜ್ಯದೃಷ್ಟಿಯಿಂದ ಹೆಚ್ಚಿನ ಮಹತ್ವವನ್ನು ಪಡೆದಿದೆ.
ವ್ಯುತ್ಪತ್ತಿ ಶಾಸ್ತ್ರ
ಬದಲಾಯಿಸಿ'ಆವಕಾಡೊ' ಪದವು ನಾವಾಟಲ್ ಶಬ್ಧ 'ಅವಾಕಾಟಲ್' ಎಂಬುದರಿಂದ ಬಂದಿದೆ (ಹಣ್ಣಿನ ಆಕಾರವು 'ವೃಷಣ'ವನ್ನು ಹೋಲುತ್ತದೆ).[೫] ಹಿಂದೆ ಆವಕಾಡೊಗಳು ಲೈಂಗಿಕ ಪ್ರಚೋದಕವಾಗಿ ಉದ್ದವಾದ ಶಲಾಕಾಗ್ರವನ್ನು ಹೊಂದಿದ್ದವು. ಅದಕ್ಕಿರುವ ಲೈಂಗಿಕ ಆಕಾರದಿಂದಾಗಿ 'ಮಡಿವಂತರ್ಯಾರೂ' ಅದನ್ನು ಖರೀದಿಸುತ್ತಿರಲಿಲ್ಲ ಅಥವಾ ಬಳಸುತ್ತಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು] ಅಜ್ಟೆಕ್ ಜನರು ಆವಕಾಡೊಗಳನ್ನು 'ಫಲವಂತತೆಯ ಹಣ್ಣು' ಎಂದು ಕರೆದಿದ್ದಾರೆ. ಅರ್ಜೆಂಟೀನಾ, ಬೋಲಿವಿಯಾ, ಚಿಲಿ, ಪೆರು, ಮತ್ತು ಉರುಗ್ವೆ ಮೊದಲಾದ ದಕ್ಷಿಣ ಅಮೇರಿಕಾದ ಕೆಲವು ರಾಷ್ಟ್ರಗಳಲ್ಲಿ ಆವಕಾಡೊ ಅದರ ಕೆಚ್ವ(=ದಕ್ಷಿಣ ಅಮೆರಿಕದ ಪೆರು ಸುತ್ತಲಿನ ಒಂದು ಭಾಷೆ) 'ಪಾಲ್ಟ' ಎಂದು ಕರೆಯಲ್ಪಟ್ಟಿದೆ. ಇತರ ಸ್ಪ್ಯಾನಿಶ್-ಮಾತನಾಡುವ ರಾಷ್ಟ್ರಗಳಲ್ಲಿ ಇದನ್ನು ಅಗ್ವಕಟೆ ಎಂದೂ, ಪೋರ್ಚುಗೀಸ್ ಭಾಷೆಯ ದೇಶಗಳಲ್ಲಿ ಅಬಕಟೆ ಎಂದೂ ಕರೆಯುತ್ತಾರೆ. ಈ ಹಣ್ಣನ್ನು ಕೆಲವೊಮ್ಮೆ ಆವಕಾಡೊ ಪಿಯರ್ ಅಥವಾ ಅವಿಗೇಟರ್ ಪಿಯರ್ (ಅದರ ಆಕಾರ ಮತ್ತು ಕೆಲವು ತಳಿಗಳಲ್ಲಿನ ಒರಟಾದ ಹಸಿರು ಸಿಪ್ಪೆಗಾಗಿ) ಎನ್ನುತ್ತಾರೆ. ನಾವಾಟಲ್ ಪದ ಅವಾಕಾಟಲ್ ಅನ್ನು ಇತರ ಪದಗಳೊಂದಿಗೆ ಸಂಯೋಗ ಮಾಡಬಹುದು, 'ಆವಕಾಡೊ ಸಾರು ಅಥವಾ ಸಾಂಬಾರು' ಎಂಬರ್ಥವಿರುವ ಅವಾಕಾಮೊಲ್ಲಿ ಶಬ್ಧದಲ್ಲಿ ಇದನ್ನು ಸೇರಿಸಲಾಗಿದೆ ಹಾಗೂ ಮೆಕ್ಸಿಕೊ ದೇಶದ ಸ್ಪ್ಯಾನಿಶ್ ಪದ ಗ್ವಾಕಮೋಲ್ ಅನ್ನು ಇದರಿಂದಲೇ ನಿಷ್ಪನ್ನವಾಗಿದೆ.
ಕೆಲವು ದಕ್ಷಿಣ ಅಮೇರಿಕಾ ರಾಷ್ಟ್ರಗಳಲ್ಲಿ, "ಲಾ ಮಂಜಾನ ಡೆಲ್ ಇನ್ವೈರ್ನೊ" ಎಂಬ ಹೆಸರನ್ನು ಆವಕಾಡೊ ಪಡೆದಿದೆ. ಇದರರ್ಥ - "ಚಳಿಗಾಲದ ಸೇಬಿನಹಣ್ಣು".
ಕೃಷಿ
ಬದಲಾಯಿಸಿಆಹಾರ ಮತ್ತು ಕೃಷಿ | ||
---|---|---|
ಆವಕಾಡೊ ಹಣ್ಣು (cv. ' ಫ್ಯುಯರ್ಟೆ'); ಎಡ:ಪೂರ್ಣಫಲ,ಬಲ:ಕೊಯ್ದಫಲ | ||
ರಾಷ್ಟ್ರ | ಪ್ರಮಾಣ(Tm) | ವಿಶ್ವ ಶ್ರೇಯಾಂಕ1 |
ಮೆಕ್ಸಿಕೊ | 1,040,390 | 1 |
ಇಂಡೊನೇಷಿಯ | 263,575 | 2 |
ಅಮೆರಿಕ ಸಂಯುಕ್ತ ಸಂಸ್ಥಾನ | 214,000 | 3 |
ಕೊಲಂಬಿಯಾ | 185,811 | 4 |
ಬ್ರೆಜಿಲ್ | 175,000 | 5 |
ಚಿಲಿ | 163,000 | 6 |
ಡೊಮಿನಿಕನ್ ಗಣರಾಜ್ಯ | 140,000 | 7 |
ಪೆರು | 102,000 | 8 |
ಚೀನಾ | 85,000 | 9 |
ಇಥಿಯೋಪಿಯ | 81,500 | 10 |
1ಮೂಲ: FAO (2004) ಮೇಜರ್ ಪ್ರೊಡ್ಯೂಸರ್ಸ್ ಆಫ್ ಆವಕಾಡೊ |
ಆವಕಾಡೊ ಮರವು 20 ಮೀ (69 ಅಡಿ) ಎತ್ತರಕ್ಕೆ ಬೆಳೆಯುತ್ತದೆ, ಇದರ ಎಲೆಗಳು 12 centimetres (4.7 in) – 25 centimetres (9.8 in) ಉದ್ದವಿದ್ದು ಅಕ್ಕ ಪಕ್ಕದ ಎಲೆಗಳ ನಡುವೆ ಅಂತರವಿರುತ್ತದೆ. ಹೂವುಗಳು ನಸುಹಸಿರು-ಹಳದಿ ಬಣ್ಣದಿಂದ ಕೂಡಿದ್ದು ಕಾಂತಿಹೀನವಾಗಿಯೂ ಹಾಗೂ 5 millimetres (0.2 in) – 10 millimetres (0.4 in) ಅಗಲವಾಗಿಯೂ ಇರುತ್ತವೆ. ಪೇರು ಹಣ್ಣಿನ-ಆಕಾರದ ಹಣ್ಣು 7 centimetres (2.8 in) – 20 centimetres (7.9 in) ಉದ್ದ ಮತ್ತು 100 grams (3.5 oz) – 1,000 grams (35 oz) ತೂಕವಿದ್ದು, ಒಳ ಮಧ್ಯದಲ್ಲಿ 5 centimetres (2.0 in) – 6.4 centimetres (2.5 in) ಗಾತ್ರದ ದೊಡ್ಡ ಬೀಜವಿರುತ್ತದೆ. ಉಷ್ಣವಲಯದ ಹತ್ತಿರದ ಪ್ರದೇಶದಲ್ಲಿರುವ ತಳಿಗಳಿಗೆ ಹಿಮವಿಲ್ಲದೆ ಅಲ್ಪ ಪ್ರಮಾಣದ ಗಾಳಿ ಇರುವ ಹವಾಗುಣ ಅವಶ್ಯಕ. ಬಿರುಸಾದ ಗಾಳಿಯು ಆರ್ದ್ರತೆಯನ್ನು ಇಳಿಸಿ, ಹೂಗಳನ್ನು ಶುಷ್ಕವಾಗಿಸುತ್ತದೆ ಹಾಗೂ ಇದು ಪರಾಗಸ್ಪರ್ಶ ಕ್ರಿಯೆಯ ಮೇಲೆ ಪರಿಣಾಮ ಬೀಳುತ್ತದೆ. ನಿರ್ದಿಷ್ಟವಾಗಿ, ಪಶ್ಚಿಮ ಭಾರತದ ಪ್ರಭೇದಗಳಿಗೆ ಹೂಬಿಡುವುದಕ್ಕೆ ಅಗತ್ಯವಿರುವ ಆರ್ದ್ರತೆ ಹಾಗೂ ಸಮಶೀತೋಷ್ಣ ಹವಾಗುಣದ ಅವಶ್ಯಕತೆ ಇದೆ. ಅಲ್ಪ ಪ್ರಮಾಣದಲ್ಲಿ ಮಂಜು ಬಿದ್ದರೂ ಬಲಿಯುವ ಮೊದಲೇ ಕಾಯಿಗಳು ಉದುರುತ್ತವೆ. ಆದರೂ ಹ್ಯಾಸ್ ತಳಿಗಳು −1°Cಗಿಂತ ಕೆಳಗಿನ ತಾಪಮಾನವನ್ನೂ ತಡೆದುಕೊಳ್ಳಬಲ್ಲವು. ಮರವು ಬೆಳೆಯಲು 1 ಮೀಟರ್‌ಗಿಂತಲೂ ಆಳ ಹಾಗೂ ಚೆನ್ನಾಗಿ ಗಾಳಿ ಹರಿಯುವ ಮಣ್ಣು ಇರಬೇಕಾಗುತ್ತದೆ. ಗಿಡಕ್ಕೆ ಪೂರೈಸುವ ನೀರು ಹೆಚ್ಚು ಲವಣಯುಕ್ತವಾಗಿದ್ದರೆ ಇಳುವರಿ ಕಡಿಮೆಯಾಗುತ್ತದೆ. ಈ ರೀತಿಯ ಮಣ್ಣು ಮತ್ತು ಹವಾಗುಣವು ಪ್ರಪಂಚದಾದ್ಯಂತ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ, ಇವುಗಳಲ್ಲಿ ಮುಖ್ಯವಾದವುಗಳೆಂದರೆ - ದಕ್ಷಿಣ ಸ್ಪೇನ್, ಲೆವಂಟ್, ದಕ್ಷಿಣ ಆಫ್ರಿಕಾ, ಪೆರು, ಮಧ್ಯ ಮತ್ತು ಉತ್ತರ ಚಿಲಿಯ ಕೆಲವು ಭಾಗಗಳು, ವಿಯೆಟ್ನಾಂ, ಇಂಡೋನೇಷ್ಯ, ದಕ್ಷಿಣ ಭಾರತದ ಕೆಲವು ಪ್ರದೇಶಗಳು, ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಲಿಪೈನ್ಸ್, ಮಲೇಷ್ಯ, ಮಧ್ಯ ಅಮೇರಿಕಾ, ಕ್ಯಾರಿಬೀನ್, ಮೆಕ್ಸಿಕೊ, ಕ್ಯಾಲಿಫೋರ್ನಿಯಾ, ಅರಿಜೋನಾ, ನ್ಯೂಮೆಕ್ಸಿಕೊ, ಟೆಕ್ಸಾಸ್, ಮತ್ತು ಫ್ಲೋರಿಡಾ. ಪ್ರತಿಯೊಂದು ಪ್ರದೇಶದಲ್ಲೂ ಈ ಮರದ ಬೇರೆ ಬೇರೆ ಪ್ರಭೇದಗಳಿವೆ. ಈ ತಳಿಯ ಹುಟ್ಟಿಗೆ ಮತ್ತು ವೈವಿಧ್ಯತೆಗೆ ಕೇಂದ್ರವಾಗಿರುವ ಮೆಕ್ಸಿಕೊ, ನಾನಾಬಗೆಯ ಹ್ಯಾಸ್ ಅನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ವರ್ಷಂಪ್ರತಿ 1 ದಶಲಕ್ಷ ಟನ್‌ಗಳಷ್ಟು ಉತ್ಪತ್ತಿ ಮಾಡುತ್ತದೆ.
ಕಟಾವು ಮತ್ತು ಕಟಾವಿನ ನಂತರ
ಬದಲಾಯಿಸಿಸಾಧಾರಣ ಆವಕಾಡೊ ಮರಗಳು ವಾರ್ಷಿಕವಾಗಿ ಸುಮಾರು 120 ಆವಕಾಡೊಗಳನ್ನು ಉತ್ಪಾದಿಸುತ್ತವೆ. ವಾಣಿಜ್ಯ ಹಣ್ಣು ತೋಟಗಾರಿಕೆಯು ಪ್ರತಿ ಒಂದು ವರ್ಷಕ್ಕೆ ಪ್ರತಿ ಹೆಕ್ಟೇರಿಗೆ ಸುಮಾರು 7 ಟನ್‌ಗಳಷ್ಟು ಉತ್ಪತ್ತಿ ಮಾಡುತ್ತದೆ, ಕೆಲವು ತೋಟಗಾರಿಕೆಗಳು ಪ್ರತಿ ಹೆಕ್ಟೇರಿಗೆ 20 ಟನ್‌ಗಳಷ್ಟೂ ತಲುಪುತ್ತವೆ.[೬] ಎರಡು ವರ್ಷಕ್ಕೊಮ್ಮೆ ಫಸಲು ನೀಡುವುದೇ ಒಂದು ಸಮಸ್ಯೆಯಾಗಿದೆ, ಇದರಿಂದಾಗಿ ಒಂದು ವರ್ಷ ಚೆನ್ನಾಗಿ ಫಸಲು ಸಿಕ್ಕಿದರೆ ಅದರ ಮುಂದಿನ ವರ್ಷದ ಇಳುವರಿ ಭಾರೀ ಕಡಿಮೆಯಾಗುತ್ತದೆ. ಆವಕಾಡೊ ಮರಗಳು ಅತಿಶೀತ ತಾಪಮಾನವನ್ನು ತಡೆದುಕೊಳ್ಳುವುದಿಲ್ಲ ಹಾಗೂ ಉಷ್ಣವಲಯದ ಪಕ್ಕದ ಪ್ರದೇಶ ಅಥವಾ ಸಮಶೀತೋಷ್ಣವಲಯದಲ್ಲಿ ಮಾತ್ರ ಬೆಳೆಯಬಲ್ಲವು. ಆವಕಾಡೊ ಒಂದು ಸಂಧಿಕಾಲದ ಹಣ್ಣು (ಮತ್ತೊಂದು ಬಾಳೆಹಣ್ಣು), ಅಂದರೆ ಮರದಲ್ಲಿ ಬಲಿಯುತ್ತದೆ, ಮರದಿಂದ ಕಿತ್ತ ನಂತರ ಮಾಗಿ ಹಣ್ಣಾಗುತ್ತದೆ. ವಾಣಿಜ್ಯೋದ್ದೇಶಕ್ಕಾಗಿ ಬೆಳೆಸುವ ಆವಕಾಡೊಗಳನ್ನು ಬಲಿತು ಗಟ್ಟಿಯಾಗಿ ಹಸಿರಾಗಿರುವಾಗಲೇ ಕೊಯ್ದು, ಅಂತಿಮವಾಗಿ ಅದು ತಲುಪಬೇಕಾದ ಸ್ಥಳವನ್ನು ಮುಟ್ಟುವವರೆಗೆ 38ರಿಂದ 42 °F (3.3ರಿಂದ 5.6 °C)ನಷ್ಟು ಉಷ್ಣಾಂಶವಿರುವ ಶೈತ್ಯಾಗಾರದಲ್ಲಿ ಇಡಲಾಗುತ್ತದೆ. ಆವಕಾಡೊಗಳು ಪಕ್ವವಾಗಲು ಚೆನ್ನಾಗಿ ಬಲಿತಿರಬೇಕು. ಮರದಿಂದ ಕೆಳಗೆ ಬಿದ್ದು ನೆಲದಲ್ಲಿ ಹಣ್ಣಾಗುವ ಆವಕಾಡೊಗಳ ರುಚಿ ಮತ್ತು ರೂಪವು ಬಹುಮಟ್ಟಿಗೆ ಅವು ಹೊಂದಿರುವ ಎಣ್ಣೆಯನ್ನು ಅವಲಂಬಿಸಿರುತ್ತದೆ ಮತ್ತು ಅದಕ್ಕೆ ತಕ್ಕಂತೆ ಬದಲಾಗುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಸರಿಯಾಗಿ ಬಲಿತ ನಂತರ ಕೊಯ್ಯಲಾಗುತ್ತದೆ; ಮೆಕ್ಸಿಕೊ ದೇಶದ ಬೆಳೆಗಾರರು ಹ್ಯಾಸ್-ಪ್ರಭೇದಕ್ಕೆ ಸೇರಿದ ಆವಕಾಡೊಗಳನ್ನು ಅದರಲ್ಲಿನ 23%ನಷ್ಟು ಅಂಶ ಒಣಗಿದ ನಂತರ ಕೊಯ್ಯುತ್ತಾರೆ ಹಾಗೂ ಇತರ ಉತ್ಪಾದಕ ರಾಷ್ಟ್ರಗಳೂ ಅದೇ ರೀತಿಯ ಮಾನದಂಡವನ್ನು ಬಳಸಿಕೊಳ್ಳುತ್ತವೆ. ಒಮ್ಮೆ ಕೊಯ್ದ ನಂತರ ಆವಕಾಡೊಗಳು ಕೊಠಡಿ ತಾಪಮಾನದಲ್ಲಿ ಕೆಲವು ದಿನಗಳೊಳಗಾಗಿ ಹಣ್ಣಾಗುತ್ತವೆ (ಬಾಳೆಹಣ್ಣು ಅಥವಾ ಸೇಬಿನ ಹಣ್ಣಿನಂಥ ಇತರ ಹಣ್ಣುಗಳೊಂದಿಗೆ ಸಂಗ್ರಹಿಸಿಟ್ಟರೆ ಅವುಎತಿಲೀನ್ ಅನಿಲದ ಪ್ರಭಾವದಿಂದಾಗಿ ಪಕ್ವತೆಯ ವೇಗ ವರ್ಧಿಸುತ್ತದೆ. ಪ್ರಮುಖ ಮಾರುಕಟ್ಟೆಗಳು ಪಕ್ವಗೊಳ್ಳುವ ಕ್ರಿಯೆಯನ್ನು ವೇಗಗೊಳಿಸುವ ಕೃತಕ ಎತಿಲೀನ್ನಿಂದ ಆವಕಾಡೊಗಳನ್ನು ಸಂಸ್ಕರಿಸಿ ಹಣ್ಣಾಗುವ ಮೊದಲೇ ಮಾರಾಟ ಮಾಡುತ್ತವೆ.[೭] ಕೆಲವು ಸಂದರ್ಭಗಳಲ್ಲಿ ಆವಕಾಡೊಗಳನ್ನು ಹಲವು ತಿಂಗಳುಗಳವರೆಗೆ ಮರದಲ್ಲೇ ಬಿಡಲಾಗುತ್ತದೆ. ಗರಿಷ್ಠ ಪ್ರಮಾಣದ ಲಾಭಗಳಿಸಲು ಪ್ರಯತ್ನಿಸುವ ವಾಣಿಜ್ಯ ಬೆಳೆಗಾರರಿಗೆ ಇದು ಬಹುಪ್ರಯೋಜನಕಾರಿ. ಹೇಗೇ ಆಗಲಿ ಹಣ್ಣುಗಳನ್ನು ಕೊಯ್ಯದೆ ತುಂಬಾ ದಿನಗಳವರೆಗೆ ಹಾಗೇ ಮರದಲ್ಲಿ ಬಿಟ್ಟರೆ ಅವು ಉದುರಿಹೋಗುತ್ತವೆ.
ಬೆಳೆಸುವಿಕೆ
ಬದಲಾಯಿಸಿಆ ತಳಿಗಳ ಹೂವಿನಲ್ಲಿ ಡೈಕೊಗಾಮಿಗುಣ ಇರುವುದರಿಂದ ಸ್ವ-ಪರಾಗಸ್ಪರ್ಶ ಮಾಡಿಕೊಳ್ಳಲು ಅವು ಭಾಗಶಃ ಮಾತ್ರ ಸಮರ್ಥವಾಗಿವೆ. ಈ ಮಿತಿಯಿಂದಾಗಿ ಇದರ ಬಾಲ್ಯಾವಸ್ಥೆಯ ಅವಧಿಯನ್ನು ಹೆಚ್ಚಿಸಿ ಬೆಳವಣಿಗೆಗೆ ಅಡ್ಡಿಯನ್ನುಂಟುಮಾಡುತ್ತದೆ. ಹೆಚ್ಚಿನ ತಳಿಗಳಲ್ಲಿ ಮೊಳಕೆಯೊಡೆವ ಗಿಡಗಳನ್ನು ಯಾದೃಚ್ಛಿಕವಾಗಿ ಕಸಿ ಮಾಡುವುದರಿಂದ ಅಥವಾ ಪ್ರಭೇದಗಳಿಂದ ಪಡೆದ ಹೊಸ ಪರಿವರ್ತನೆಯಿಂದ ಸಂತಾನವೃದ್ಧಿ ಮಾಡಲಾಗುತ್ತದೆ. ಮಿಶ್ರ-ಪರಾಗಸ್ಪರ್ಶ ನಡೆಯುವ ಸಂಭವ ಕಡಿಮೆಯಿರುತ್ತದೆಂದು ಭಾವಿಸಿ ಆಧುನಿಕ ಬೆಳೆಗಾರರು ಪ್ರತ್ಯೇಕ ಪ್ರದೇಶದಲ್ಲಿ ಬೆಳಸಲಾರಂಭಿಸಿದರು. ರಿವರ್ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಹಾಗೂ ವೋಲ್ಕನಿ ಸೆಂಟರ್ ಮತ್ತು ಚಿಲಿಯ ಇನ್‌ಸ್ಟಿಟ್ಯೂಟೊ ಡಿ ಇನ್ವೆಸ್ಟಿಗೇಶನೆಸ್ ಅಗ್ರೋಪೆಕ್ವರಿಯಾಸ್ ಮೊದಲಾದವು ಈ ರೀತಿಯ ಕ್ರಮಗಳನ್ನೇ ಉಪಯೋಗಿಸಿಕೊಂಡವು. ಗಂಡು ಮತ್ತು ಹೆಣ್ಣು ಹೂವಾಗುವ ಸಮಯವು ತಳಿಗಳಿಂದ ತಳಿಗಳಿಗೆ ಬೇರೆಬೇರೆ ಆಗಿರುವುದರಿಂದ ಆವಕಾಡೊದ್ದೊಂದು ವೈಶಿಷ್ಟ್ಯ. ಹೂಬಿಡುವುದರಲ್ಲಿ ಎರಡು ಪ್ರಕಾರಗಳಿವೆ - "A" ಮತ್ತು "B". "A" ತಳಿಯ ಹೂವುಗಳು ಮೊದಲ ದಿನದ ಬೆಳಿಗ್ಗೆ ಹೆಣ್ಣು ಹೂವಾಗಿ ಅರಳಿ, ಮಧ್ಯಾಹ್ನ ಆಗುವ ಮೊದಲು ಮುಚ್ಚುತ್ತವೆ. ಎರಡನೇ ದಿನದ ಮಧ್ಯಾಹ್ನದಲ್ಲಿ ಅವು ಗಂಡು ಹೂವಾಗಿ ಅರಳುತ್ತವೆ. "B" ಪ್ರಭೇದಗಳು ಮೊದಲ ದಿನದ ಮಧ್ಯಾಹ್ನ ಹೆಣ್ಣು ಹೂವಾಗಿ ಅರಳಿ ಸಂಜೆಯೊಳಗೆ ಮುಚ್ಚುತ್ತವೆ, ನಂತರದ ಬೆಳಿಗ್ಗೆ ಗಂಡು ಹೂವಾಗಿ ಪುನಃ ಅರಳುತ್ತವೆ.
- "A" ತಳಿ: ಹ್ಯಾಸ್, ಗ್ವೆನ್, ಲ್ಯಾಂಬ್ ಹ್ಯಾಸ್, ಪಿಂಕರ್ಟನ್, ರೀಡ್.
ಹ್ಯಾಸ್‌ನ ಕೆಲವು ತಳಿಗಳು ವರ್ಷ ಬಿಟ್ಟು ವರ್ಷ ಮಾತ್ರ ಚೆನ್ನಾಗಿ ಫಲ ನೀಡುತ್ತವೆ. ಶೀತವನ್ನು (ಆವಕಾಡೊ ಶೀತ ಸಹಿಷ್ಣುವಲ್ಲ) ಸಹಿಸಲಾರದ್ದರಿಂದಾಗಿ ಅಲ್ಪ ಇಳುವರಿ ನೀಡಿದ ಮರು ವರ್ಷ ಹೇರಳವಾಗಿ ಫಲ ಕೊಡುತ್ತವೆ.
ಈ ರೀತಿಯಲ್ಲಿ ಅಧಿಕ ಪ್ರಮಾಣದ ಫಸಲು ನೀಡುವುದರಿಂದ ಸಂಗ್ರಹಿಸಿಲ್ಪಟ್ಟ ಶರ್ಕರಪಿಷ್ಟಗಳು ಬರಿದಾಗಿ, ಮುಂದಿನ ವರ್ಷದ ಇಳುವರಿಯಲ್ಲಿ ಇಳಿಕೆಯಾಗುತ್ತದೆ. ಹೀಗಾಗಿ ಪರ್ಯಾಯ ವರ್ಷಗಳಲ್ಲಿ ಮಾತ್ರ ಅಧಿಕ ಫಲ ನೀಡುವ ಕ್ರಮ ಸ್ಥಿರವಾಯಿತು.[ಸೂಕ್ತ ಉಲ್ಲೇಖನ ಬೇಕು]
ಸಂತಾನವೃದ್ಧಿ ಮತ್ತು ಬೇರುಕಾಂಡಗಳು
ಬದಲಾಯಿಸಿಬೀಜದಿಂದ ಸಂತಾನವೃದ್ಧಿಗೊಂಡ ಆವಕಾಡೊ ಹಣ್ಣು ನೀಡುತ್ತದೆ, ಆದರೆ ಫಲ ನೀಡಲು ಇದು ಸುಮಾರು 4-6 ವರ್ಷಗಳಷ್ಟು ದೀರ್ಘಾವಧಿಯನ್ನು ತೆಗೆದುಕೊಳ್ಳುತ್ತದೆ. ಪರಿಣಾಮವಾಗಿ ಹುಟ್ಟಿಕೊಂಡ ಸಂತತಿಯು ಹಣ್ಣಿನ ಗುಣಮಟ್ಟ ಮೂಲ ತಳಿಯನ್ನು ಹೋಲದೆ ಭಿನ್ನವಾಗಿರುವ ಸಂಭವವಿದೆ. ಆದ್ದರಿಂದ, ವಾಣಿಜ್ಯ ಹಣ್ಣು-ತೋಟಗಾರಿಕೆ ಮಾಡುವವರು ಕಸಿ ಕಟ್ಟುವುದರಿಂದ ಮತ್ತು ಬೇರುಕಾಂಡಗಳನ್ನು ಊರುವುದರಿಂದ ಆವಕಾಡೊ ಸಸ್ಯಗಳನ್ನು ಬೆಳೆಸುತ್ತಾರೆ. ಬೇರುಕಾಂಡಗಳನ್ನು ಬೀಜಗಳ ಮೂಲಕ (ಮೊಳಕೆಯೊಡೆದು ಬಿಟ್ಟ ಬೇರುಕಾಂಡಗಳು) ಹಾಗೂ ರೆಂಬೆಗಳನ್ನು ಹೂತಿಡುವ (ಅಬೀಜ ಸಂತಾನದ ಬೇರುಕಾಂಡಗಳು) ಮೂಲಕ ಬೆಳೆಸಲಾಗುತ್ತದೆ. ಹಸಿರುಮನೆಯಲ್ಲಿ ಸುಮಾರು ಒಂದು ವರ್ಷದವರೆಗೆ ಬೆಳೆಸಿದ ನಂತರ, ಎಳೆಯ ಸಸ್ಯಗಳು ಕಸಿ ಮಾಡಿಸಿಕೊಳ್ಳಲು ತಯಾರಾಗಿರುತ್ತವೆ. ತುದಿ ಮತ್ತು ಪಾರ್ಶ್ವ ಕೊಂಬೆಗಳ ಕಸಿ ಕಟ್ಟುವಿಕೆ ಸರ್ವೇಸಾಮಾನ್ಯ. ಕಸಿಕುಡಿ ತಳಿಯನ್ನು ಮಾರಾಟ ಮಾಡುವ ಮೊದಲು ಮತ್ತೆ 6-12 ತಿಂಗಳುಗಳ ಕಾಲ ಬೆಳೆಸಲಾಗುತ್ತದೆ. ಅಬೀಜ ಸಂತಾನದ ಬೇರುಕಾಂಡಗಳನ್ನು ನಿರ್ದಿಷ್ಟವಾದ ಮಣ್ಣಿಗೆ ಮತ್ತು ರೋಗ ಬರುವ ಸಂಭವವಿದ್ದಾಗ ಆರಿಸಲಾಗುತ್ತದೆ. ಈ ರೋಗಗಳು ಮಣ್ಣಿನಲ್ಲಿ ಅನಿಲಪೂರಣವು ಕಡಿಮೆ ಪ್ರಮಾಣದಲ್ಲಿದ್ದರೆ ಅಥವಾ ಫೈಟೋಫ್ತೊರದಿಂದ ಬರುವ ಮಣ್ಣಿನ-ರೋಗ (ಬೇರು ಕೊಳೆಯುವುದು) ನಿರೋಧಕ ಶಕ್ತಿಯನ್ನು ಹೊಂದಿರದಿದ್ದರೆ ಬರುತ್ತವೆ.
ರೋಗಗಳು
ಬದಲಾಯಿಸಿಆವಕಾಡೊ ಸಸ್ಯಗಳು ಏಕಾಣುಜೀವಿ(=ಬ್ಯಾಕ್ಟೀರಿಯಾ), ವೈರಸ್ ಮತ್ತು ಶಿಲೀಂಧ್ರಗಳಿಂದ ಬರುವ ಹಾಗೂ ಅಪೌಷ್ಟಿಕತೆಯಿಂದ (ಪ್ರಮುಖ ಲವಣಾಂಶಗಳ ಹೆಚ್ಚಳದಿಂದ ಮತ್ತು ಕೊರತೆಯಿಂದ) ಉಂಟಾಗುವ ರೋಗಗಳಿಂದ ಘಾಸಿಗೊಳಗಾಗುತ್ತವೆ. ರೋಗವು ಸಸ್ಯದ ಎಲ್ಲಾ ಭಾಗಗಳ ಮೇಲೂ ದುಃಪರಿಣಾಮ ಬೀರುತ್ತದೆ. ಇದು ಸಸ್ಯದ ಮೇಲೆಲ್ಲಾ ಕಲೆ ಉಂಟಾಗಲು, ಕೊಳೆಯಲು, ಸಸ್ಯ ನಿರ್ಜೀವಗೊಳ್ಳಲು ಮತ್ತು ಬಣ್ಣಗೆಡಲು ಕಾರಣವಾಗುತ್ತದೆ.[೧೦]
ಕ್ಯಾಲಿಫೋರ್ನಿಯಾದಲ್ಲಿ ಅವಕಾಡೊ ಕೃಷಿ
ಬದಲಾಯಿಸಿಮೆಕ್ಸಿಕೋದದಿಂದ U.S. ರಾಜ್ಯ ಕ್ಯಾಲಿಫೋರ್ನಿಯಾಕ್ಕೆ ಆವಕಾಡೊ 19ನೇ ಶತಮಾನದಲ್ಲಿ ಪ್ರವೇಶಿಸಿತು. ಅಲ್ಲಿ ಅದು ಬಹು ಯಶಸ್ವೀ ವಾಣಿಜ್ಯ ಬೆಳೆಯಾಯಿತು. ಅಮೇರಿಕಾ ಸಂಯುಕ್ತ ಸಂಸ್ಥಾನದ ತೊಂಬತ್ತೈದು ಪ್ರತಿಶತದಷ್ಟು ಆವಕಾಡೊ ಉತ್ಪತ್ತಿಯು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಆಗುತ್ತದೆ, ಅದರಲ್ಲೂ 60%ನಷ್ಟು ಸ್ಯಾನ್ ಡಿಯಾಗೊ ಕೌಂಟಿಯಲ್ಲಿ ಬೆಳೆಯುತ್ತದೆ.[೧೧][೧೨] ಸರಿಸುಮಾರು 59,000 ಎಕರೆಗಳಷ್ಟು (ಸುಮಾರು 24,000 ಹೆಕ್ಟೇರುಗಳು)ಪ್ರದೇಶದಲ್ಲಿ ಆವಕಾಡೊಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಬೆಳೆಯಲಾಗುತ್ತದೆ. ಕ್ಯಾಲಿಫೋರ್ನಿಯಾದ ಫಾಲ್‌ಬ್ರೂಕ್ "ವಿಶ್ವದ ಆವಕಾಡೊ ರಾಜಧಾನಿ" ಎಂಬ ಹೆಸರು ಪಡೆದುಕೊಂಡಿದೆ. ಕ್ಯಾಲಿಫೋರ್ನಿಯಾದ ಫಾಲ್‌ಬ್ರೂಕ್ ಮತ್ತು ಕಾರ್ಪಿಂಟೇರಿಯಾ- ಇವೆರಡೂ ವಾರ್ಷಿಕ ಆವಕಾಡೊ ಹಬ್ಬವನ್ನು ಆಚರಿಸುತ್ತವೆ.
A ತಳಿಗಳು
ಬದಲಾಯಿಸಿಹ್ಯಾಸ್
ಬದಲಾಯಿಸಿಕ್ಯಾಲಿಫೋರ್ನಿಯಾದಲ್ಲಿ ಆವಕಾಡೊಗಳ ಹಲವಾರು ತಳಿಗಳಿವೆ, ಅದರಲ್ಲಿ ಇಂದು ಹೆಚ್ಚು ಪ್ರಚಲಿತವಾಗಿರುವುದು ಹ್ಯಾಸ್ ಆವಕಾಡೊ. ಇದು ವರ್ಷದಾದ್ಯಂತ ಹಣ್ಣುಗಳನ್ನು ಕೊಡುತ್ತದೆ ಹಾಗೂ USನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಆವಕಾಡೊ ಆಗಿದೆ.[೪][೧೩] ಎಲ್ಲಾ ಹ್ಯಾಸ್ ಆವಕಾಡೊ ಸಸ್ಯಗಳು ಕ್ಯಾಲಿಫೋರ್ನಿಯಾದ ಲಾ ಹಾಬ್ರ ಹೈಟ್ಸ್‌ನ ಪ್ರಮುಖ ರುಡೋಲ್ಫ್ ಹ್ಯಾಸ್ ಎಂಬ ಹೆಸರಿನ ಅಂಚೆ ವಾಹಕ ಬೆಳೆದ ಏಕೈಕ "ಮೂಲ ಸಸ್ಯ"ದಿಂದ ಹುಟ್ಟಿವೆ.[೩][೧೩] ಹ್ಯಾಸ್ 1935ರಲ್ಲಿ ಹೇರಳವಾಗಿ ಉತ್ಪತ್ತಿ ಮಾಡುವ ಸಸ್ಯವಾಗಿ ಹಕ್ಕು ಸ್ವಾಮ್ಯ ಪಡೆದುಕೊಂಡಿತು. ಕೆಲವು ಉಪಜಾತಿಗಳ "ಮೂಲ ಸಸ್ಯ"ಗಳು ಬೇರು ಕೊಳೆಯುವ ರೋಗದಿಂದ ಸತ್ತವು, ಆದ್ದರಿಂದ ಅವುಗಳನ್ನು 2002ರ ಸೆಪ್ಟೆಂಬರ್‌ನಲ್ಲಿ ಕಡಿದು ಉರಿಳಿಸಲಾಯಿತು.[೪][೧೩] ಇದರ ಹಣ್ಣು ಮಧ್ಯಮ ಗಾತ್ರದಲ್ಲಿದ್ದು (150-250ಗ್ರಾಂ) ಅಂಡಾಕಾರವಾಗಿರುತ್ತದೆ ಹಾಗೂ ಕಪ್ಪಗಿರುವ ಇದರ ಸಿಪ್ಪೆಯ ಮೈ ನುಣುಪಾಗಿರುತ್ತದೆ. ಹಣ್ಣಿಗೆ ಕರಟಕಾಯಿ ಪರಿಮಳವಿರುತ್ತದೆ. ಎಣ್ಣೆಯ ಅಂಶ 19%. ಹಣ್ಣಾದಂತೆ ಸಿಪ್ಪೆಯು ಕಪ್ಪಾಗುತ್ತದೆ. ಹೈಬ್ರಿಡ್ ಗ್ವಾಟೆಮಲನ್ ಪ್ರಕಾರದ ಉಷ್ಣಾಂಶವು 26 °F. ಮರದ ಗಾತ್ರ - 6ಮೀ x 4ಮೀ
ಗ್ವೆನ್
ಬದಲಾಯಿಸಿಇದು 1982ರಲ್ಲಿ ಉತ್ಪತ್ತಿ ಮಾಡಿದ ಹ್ಯಾಸ್ x ತಿಲ್ಲೆಯ ಮೊಳಕೆಯೊಡೆದ ಸಸಿಯ ಸಂತತಿಯಾಗಿದೆ. ಕ್ಯಾಲಿಫೋರ್ನಿಯಾದ `ಹ್ಯಾಸ್'ಗಿಂತ ಇದು ಅಧಿಕ ಫಸಲು ನೀಡುವ ಮತ್ತು ಹೆಚ್ಚು ಕುರುಚಲಾದ ಗಿಡ. ಹಣ್ಣುಗಳು ಅಂಡಾಕಾರದಲ್ಲಿದ್ದು, `ಹ್ಯಾಸ್'ಗಿಂತ ಸ್ವಲ್ಪ ಸಣ್ಣಕ್ಕಿರುತ್ತವೆ (100-200ಗ್ರಾಂ). ಹಣ್ಣಿಗೆ ಕರಟಕಾಯಿ ಸುವಾಸನೆ ಇರುತ್ತದೆ. ಸಿಪ್ಪೆಯ ರಚನೆಯು `ಹ್ಯಾಸ್'ಗಿಂತ ಹೆಚ್ಚು ನುಣುಪಾಗಿರುತ್ತದೆ, ಹಣ್ಣಾದಾಗ ನಸುಹಸಿರು ಬಣ್ಣವಾಗುತ್ತದೆ. ಇದರ ಹಣ್ಣು ಹೆಚ್ಚು ಗಟ್ಟಿಯಾಗಿರುವುದಿಲ್ಲ, ಇದು 30 °F ಉಷ್ಣಾಂಶವನ್ನು ತಾಳಿಕೊಳ್ಳಬಲ್ಲುದು.
ಪಿಂಕರ್ಟನ್
ಬದಲಾಯಿಸಿಇದು ಕ್ಯಾಲಿಫೋರ್ನಿಯಾದ ಸಾಟಿಕೋಯ್‌ನ ಪಿಂಕರ್ಟನ್ ರ‌್ಯಾಂಚ್ ಎಂಬಲ್ಲಿ 1970ರ ಆರಂಭದಲ್ಲಿ ಮೊದಲು ಬೆಳೆಯಿತು. ಈ ತಳಿಯು ಹ್ಯಾಸ್ ರಿಂಕಾನ್‌ನ ಮೊಳಕೆ ಗಿಡ. ಸಣ್ಣ ಬೀಜವನ್ನು ಹೊಂದಿರುವ ಇದರ ಹಣ್ಣು ದೊಡ್ಡದು. ಸಿಪ್ಪೆಯು ಹಸಿರಾಗಿದ್ದು, ಹಣ್ಣಾದ ಹಾಗೆ ಬಣ್ಣ ಗಾಢವಾಗುತ್ತದೆ. ಹಣ್ಣಿನ ತಿರುಳು ಮೃದುವಾಗಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗೂ ಕೆನೆಯಂತಿದ್ದು, ತಿಳಿ ಹಸಿರು ಬಣ್ಣದಿಂದ ಉತ್ತಮ ಪರಿಮಳದಿಂದ ಕೂಡಿರುತ್ತದೆ. ಇದರಲ್ಲಿರುವ ಎಣ್ಣೆಯ ಅಂಶ ಅಧಿಕ. ಇದು ಸ್ವಲ್ಪ ಪ್ರಮಾಣದ ತಣ್ಣಗಿನ ಹವಾಮಾನವನ್ನು ತಡೆದುಕೊಳ್ಳುತ್ತದೆ ಹಾಗೂ ಸುಸಂಗತವಾಗಿ ಅಗಾಧ ಪ್ರಮಾಣದಲ್ಲಿ ಫಸಲು ನೀಡುತ್ತದೆ. ಸುಲಭವಾಗಿ ಸುಲಿಯಬಹುದಾದ ಗುಣಲಕ್ಷಣದ ಸಿಪ್ಪೆ ಇದಕ್ಕಿದೆ. ಹೈಬ್ರಿಡ್ ಗ್ವಾಟೆಮಲನ್ ಪ್ರಕಾರವು ಸಹಿಸಿಕೊಳ್ಳಬಹುದಾದ ತಾಪಮಾನ 30 °F. ಇಸ್ರೇಲ್‌ನ ಪ್ರಮುಖ ತಳಿ ಇದು.
ರೀಡ್
ಬದಲಾಯಿಸಿಕ್ಯಾಲಿಫೋರ್ನಿಯಾದಲ್ಲಿ 1948ರಲ್ಲಿ ಜೇಮ್ಸ್ S. ರೀಡ್ ಎಂಬುವನು ಸಸಿಯೊಂದರಿಂದ ಇದನ್ನು ಅಭಿವೃದ್ಧಿಪಡಿಸಿದ್ದು ಆಕಸ್ಮಿಕವಾಗಿ. ಹಣ್ಣು ದೊಡ್ಡದಾಗಿ ಉರುಟಾಗಿ ಹಸಿರು ಬಣ್ಣದ್ದಾಗಿರುತ್ತದೆ. ಇದರ ಸಿಪ್ಪೆಯು ಗಾಢ ಬಣ್ಣದಿಂದಿದ್ದು, ಮೃದುವಾಗಿ ನಯವಾಗಿರುತ್ತದೆ. ಹಣ್ಣಿಗೆ ಸ್ವಲ್ಪ ಪ್ರಮಾಣದಲ್ಲಿ ಕರಟಕಾಯಿಯ ಸುವಾಸನೆ ಇರುತ್ತದೆ. ಸಿಪ್ಪೆಯು ಹಣ್ಣಾದಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ. ಗ್ವಾಟೆಮಲನ್ ಜಾತಿಯು 30 °F ಉಷ್ಣಾಂಶವನ್ನು ತಡೆದುಕೊಳ್ಳುತ್ತದೆ. ಮರದ ಗಾತ್ರ - 5m x 4m.
B ತಳಿಗಳು
ಬದಲಾಯಿಸಿಬ್ಯಾಕನ್
ಬದಲಾಯಿಸಿವ್ಯವಸಾಯಗಾರ ಜೇಮ್ಸ್ ಬ್ಯಾಕನ್ 1954ರಲ್ಲಿ ಇದನ್ನು ಬೆಳೆಸಿದನು. ಇದೊಂದು ಮಧ್ಯಮ ಗಾತ್ರದ ಹಣ್ಣು . ಅಲ್ಪ ರುಚಿ ಇದ್ದು, ಮೃದುವಾದ ಹಸಿರು ಬಣ್ಣದ ಸಿಪ್ಪೆ ಇರುತ್ತದೆ. ತಿರುಳಿನ ಬಣ್ಣ ಹಳದಿ-ಹಸಿರು ಮಿಶ್ರಿತವಾಗಿರುತ್ತದೆ. ಪಕ್ವಗೊಂಡಾಗ ಸಿಪ್ಪೆಯು ಹಸಿರಾಗಿ ಉಳಿದರೂ, ಸ್ವಲ್ಪ ಗಾಢವಾಗುತ್ತದೆ. ಸಾಧಾರಣ ಆರೈಕೆಯಲ್ಲೇ ಫಸಲು ನೀಡುವ ಮರವಿದು. -5°Cಗಿಂತಲೂ ಕೆಳಗಿನ ಶೀತ ಹವಾಮಾನವನ್ನು ತಡೆದುಕೊಳ್ಳಬಲ್ಲುದು.
ಎಟ್ಟಿಂಗರ್
ಬದಲಾಯಿಸಿಇದು ಮೆಕ್ಸಿಕೊ ದೇಶದ ಗ್ವಾಟೆಮಲನ್‌ನ ಮಿಶ್ರ ತಳಿ, ಫುಯರ್ಟೆಯ ಮೊಳಕೆ ಗಿಡ. ಇಸ್ರೇಲ್ ಮೂಲದ್ದಾದ ಇದು, 1947ರಲ್ಲಿ ಉತ್ಪಾದನೆಗೊಳ್ಳುವುದಕ್ಕೆ ಆರಂಭವಾಯಿತು. ಬೆಳೆದ ಮರವು 4 ಗಂಟೆಗಳ ಕಾಲ -6°Cನಷ್ಟು ಶೀತವನ್ನು ಸಹಿಸಿಕೊಳ್ಳಬಲ್ಲುದು. ಮೃದುವಾದ ತೆಳ್ಳಗಿನ ಹಸಿರು ಬಣ್ಣದ ಸಿಪ್ಪೆ ಇದ್ದು, ಸುಲಿಯಲು ಸುಲಭಸಾಧ್ಯವಲ್ಲ. ಇದರ ತಿರುಳಿನ ಬಣ್ಣ ನಸು ಹಸಿರು.
ಫ್ಯುಯರ್ಟೆ
ಬದಲಾಯಿಸಿಇದು ಮೆಕ್ಸಿಕೊ ದೇಶದ ಗ್ವಾಟೆಮಲನ್ ಮಿಶ್ರತಳಿ, ಮೆಕ್ಸಿಕೊ ದೇಶದ ಪ್ಯುಯೆಬ್ಲಾದಲ್ಲಿ ಹುಟ್ಟಿಕೊಂಡಿತು. ಫ್ಯುಯರ್ಟೆ ಎಂದರೆ ಸ್ಪ್ಯಾನಿಶ್‌ನಲ್ಲಿ 'ಪ್ರಬಲ ಅಥವಾ ಬಲಿಷ್ಠ' ಎಂಬರ್ಥವಿದೆ. 1913ರಲ್ಲಿ ಕ್ಯಾಲಿಫೋರ್ನಿಯಾದ ತೀವ್ರ ಶೀತಹವಾಮಾನವನ್ನು ತಡೆದುಕೊಂಡಿದ್ದರಿಂದಾಗಿ ಈ ಹೆಸರನ್ನು ಪಡೆದುಕೊಂಡಿತು. 26 °F ಉಷ್ಣಾಂಶವನ್ನು ಸಹಿಸಿಕೊಳ್ಳಬಹುದು. ಮಧ್ಯಮ ಗಾತ್ರದ ಪೇರುಹಣ್ಣಿನಾಕಾರದ ಈ ಹಣ್ಣು ಸುಲಿಯಲು ಸುಲಭವಾಗಿರುವ ಹಸಿರು ಸಿಪ್ಪೆಯನ್ನು ಹೊಂದಿರುತ್ತದೆ. ಪರಿಮಳ ಭರಿತವಾಗಿರುವ ಇದರ ತಿರುಳು ಕೆನೆಯಂತಿರುತ್ತದೆ. 18%ನಷ್ಟು ಎಣ್ಣೆಯ ಅಂಶವಿರುತ್ತದೆ. ಹಣ್ಣಾದಾಗ ಸಿಪ್ಪೆಯು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮರದ ಗಾತ್ರ - 6ಮೀ x 4ಮೀ.
ಶಾರ್ವಿಲ್
ಬದಲಾಯಿಸಿಮೆಕ್ಸಿಕೋದ ಕೆಲವು ಗುಣಗಳನ್ನು ಹೊಂದಿರುವ ಇದು ಪ್ರಧಾನವಾಗಿ ಗ್ವಾಟೆಮಲನ್ ತಳಿ. 1951ರಲ್ಲಿ ಆಸ್ಟ್ರೇಲಿಯಾದ ದಕ್ಷಿಣ QLDನ ರೆಡ್‌ಲ್ಯಾಂಡ್ ಬೇಯಲ್ಲಿ ಸರ್ ಫ್ರಾಂಕ್ ಶಾರ್ಪೆ ಇದನ್ನು ಪತ್ತೆಹಚ್ಚಿದ. ಶಾರ್ಪ್ ಮತ್ತು ವಿಲ್ಸನ್ ಹೆಸರಿನ ಸಂಯೋಗದಿಂದ 'ಶಾರ್ವಿಲ್' ಹೆಸರು ನಿಷ್ಪನ್ನಗೊಂಡಿದೆ (J.C. ವಿಲ್ಸನ್ ಇದರ ಬಗ್ಗೆ ಮೊದಲು ಪ್ರಚಾರ ಮಾಡಿದವನು). ಇದರ ಕಸಿಕುಡಿಗಳನ್ನು ಆಸ್ಟ್ರೇಲಿಯಾದಿಂದ ಹವಾಯ್‌ಗೆ 1966ರಲ್ಲಿ ಕಳುಹಿಸಲಾಯಿತು. ನುಣುಪಿಲ್ಲದ ಹಸಿರು ಸಿಪ್ಪೆಯನ್ನು ಹೊಂದಿರುವ, ಮಧ್ಯಮ-ಗಾತ್ರದ ಈ ಹಣ್ಣು ಸ್ವಲ್ಪವಾಗಿ ಫ್ಯುಯರ್ಟೆಯನ್ನು ಸನಿಹಕ್ಕೆ ಹೋಲುತ್ತದಾದರೂ ಅದಕ್ಕಿಂತ ಹೆಚ್ಚು ಅಂಡಾಕಾರವಾಗಿರುತ್ತದೆ. ಹಣ್ಣಿನ ತಿರುಳು ಹಸಿರು-ಹಳದಿ ಬಣ್ಣವಿದ್ದು, ಕರಟಕಾಯಿ ಪರಿಮಳವನ್ನು ಹೊಂದಿರುತ್ತದೆ; ಹೆಚ್ಚಿನ ಪ್ರಮಾಣದ ಎಣ್ಣೆಯಂಶವಿರುತ್ತದೆ (20-24%) ಇದರ ಬೀಜ ಸಣ್ಣದು. ಮಾಗಿ ಹಣ್ಣಾದಾಗ ಸಿಪ್ಪೆ ಬಣ್ಣ ಹಸಿರಿರುತ್ತದೆ. ಇದಕ್ಕೆ ಹವಾಯ್ ವಾಣಿಜ್ಯ ಕ್ಷೇತ್ರದಲ್ಲಿ 57%ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಇದನ್ನು ಬೆಳೆಯಲಾಗುತ್ತದೆ, ಆಸ್ಟ್ರೇಲಿಯಾದ NSWನಲ್ಲಿ ಬೆಳೆಯುವ ಒಟ್ಟಾರೆ ಆವಕಾಡೊಗಳಲ್ಲಿ 20%ನಷ್ಟು ಈ ತಳಿಯೇ ಇದೆ. ಶ್ರೇಷ್ಠ ಗುಣಮಟ್ಟದ ಹಣ್ಣನ್ನು ಕ್ರಮಬದ್ಧವಾಗಿ, ಸಮಪ್ರಮಾಣದಲ್ಲಿ ಇದು ನೀಡುತ್ತದೆ. ಹಿಮದ ತಣ್ಣನೆಯ ವಾತಾರವಣಕ್ಕೆ ಇದು ಅತಿಸಂವೇದನಾಶೀಲ ಸಸ್ಯ. ಫ್ಯುಯರ್ಟೆಗಿಂತ ಹೆಚ್ಚು ರೋಗ ಮತ್ತು ಕೀಟ ನಿರೋಧಕ ಶಕ್ತಿಯುಳ್ಳದ್ದು.
ಜುಟಾನೊ
ಬದಲಾಯಿಸಿಫಾಲ್ಬ್ರೂಕ್ನ R.L. ರುಯಿಟ್ 1926ರಲ್ಲಿ ಈ ತಳಿಯನ್ನು ಕಂಡುಹಿಡಿದ. ಮೆಕ್ಸಿಕೋದ ಪ್ರಭೇದದ ಇದು, 25 °F ತಾಪಮಾನವನ್ನು ತಡೆದುಕೊಳ್ಳಬಲ್ಲುದು. ಇದರ ಹಣ್ಣು ದೊಡ್ಡ ಪೇರುಹಣ್ಣಿನ ಆಕಾರದಲ್ಲಿರುತ್ತದೆ. ಹಳದಿ-ಹಸಿರು ಮಿಶ್ರಿತ ತೆಳುವಾದ ಸಿಪ್ಪೆಯಿದ್ದು, ತಿರುಳು ತಿಳಿ ಹಸಿರು ಬಣ್ಣದಿಂದ ನಾರುನಾರಾಗಿರುತ್ತದೆ, ಸ್ವಲ್ಪ ಪರಿಮಳವನ್ನು ಹೊಂದಿರುತ್ತದೆ. ಇದರ ಸಿಪ್ಪೆ ಸುಲಿಯುವುದು ಸುಲಭ.
ಇತರ ತಳಿಗಳು
ಬದಲಾಯಿಸಿಇತರ ಆವಕಾಡೊ ತಳಿಗಳಲ್ಲಿ ಪ್ರಮುಖವಾದುದು - ಸ್ಪಿಂಕ್ಸ್. ಹೆಚ್ಚಾಗಿ ಕ್ಯಾಲಿಫೋರ್ನಿಯಾದ ಹೊರಗೆ, ಫ್ಲೋರಿಡಾದಲ್ಲಿ ಬೆಳೆಯುವ ಈ ತಳಿಯ ಹಣ್ಣುಗಳು ದೊಡ್ಡದಾಗಿ ದುಂಡಗಾಗಿರುತ್ತವೆ. ಹಣ್ಣು ಮೃದುವಾದ ಹಸಿರು ಸಿಪ್ಪೆಯನ್ನು ಹೊಂದಿದ್ದು, ಕಡಿಮೆ ಕೊಬ್ಬಿನಾಂಶವಿರುತ್ತದೆ ಹಾಗೂ ತಿರುಳು ನಾರಿನಿಂದ ತುಂಬಿರುತ್ತದೆ. ಕಡಿಮೆ-ಕ್ಯಾಲೊರಿಯುಳ್ಳ ಆವಕಾಡೊಗಳಾದ ಇವು ಆಗೊಮ್ಮೆ ಈಗೊಮ್ಮೆ ಮಾತ್ರ ಮಾರಾಟವಾಗುತ್ತವೆ. ಬಹುಹಿಂದಿನಿಂದ ಇರುವ ಇತರ ತಳಿಗಳೆಂದರೆ (ಅವು ತೋಟಗಾರಿಕೆಯಲ್ಲಿ ಇರಲಿ ಬಿಡಲಿ) - ಚಾಲೆಂಜ್, ಡಿಕಿನ್ಸನ್, ಕಿಸ್ಟ್, ಕ್ವೀನ್, ರೇ, ರಾಯಲ್, ಶಾರ್ಪ್‌ಲೆಸ್ ಮತ್ತು ಟಾಫ್ಟ್.[೧೪]
ಆವಕಾಡೊ- ಅಂತಾರಾಷ್ಟ್ರೀಯ ವ್ಯಾಪಾರ ಸಂಗತಿಗಳು
ಬದಲಾಯಿಸಿ1994ರಲ್ಲಿ ನಾರ್ತ್ ಅಮೇರಿಕನ್ ಫ್ರೀ ಟ್ರೇಡ್ ಅಗ್ರಿಮೆಂಟ್ (NAFTA) ಜಾರಿಗೆ ಬಂದ ನಂತರ, ಮೆಕ್ಸಿಕೊ ಆವಕಾಡೊಗಳನ್ನು USಗೆ ರಫ್ತು ಮಾಡಲು ಯತ್ನ ನಡೆಸಿತು. ಈ ರೀತಿಯ ವ್ಯಾಪಾರದಿಂದ ಹಣ್ಣಿನ ಜೊತೆ ಕ್ರಿಮಿಕೀಟಾದಿಗಳೂ ಪ್ರವೇಶಿಸಿ ಕ್ಯಾಲಿಫೋರ್ನಿಯಾದ ಬೆಳೆ ನಾಶವಾಗುತ್ತದೆ ಎಂದು ದೂರಿದ US ಸರಕಾರ ಈ ಕ್ರಮವನ್ನು ನಿರ್ಬಂಧಿಸಿತು. ಇದಕ್ಕೆ ಮೆಕ್ಸಿಕೊ ಸರಕಾರವು ಪ್ರತಿಕ್ರಿಯಿಸಿ U.S ಕೃಷಿ ವಿಭಾಗದ ತಪಾಸಣಾಅಧಿಕಾರಿಗಳನ್ನು ಮೆಕ್ಸಿಕೊಗೆ ಆಮಂತ್ರಿಸಿತು. ಆದರೆ ಹಣ್ಣಿನಲ್ಲಿರುವ-ಕೀಟಗಳ ತಪಾಸಣೆ ಉಪಯೋಗಕರವಲ್ಲ ಎಂದು ಹೇಳಿದ U.S ಸರಕಾರ ಆಮಂತ್ರಣವನ್ನು ತಳ್ಳಿಹಾಕಿತು. ನಂತರ ಮೆಕ್ಸಿಕೊ ಸರಕಾರ ಈಶಾನ್ಯ USಗೆ ಮಾತ್ರ ಚಳಿಗಾಲದಲ್ಲಿ (ಅತೀಶೀತವನ್ನು ಹಣ್ಣಿನ ಕ್ರಿಮಿಗಳು ಸಹಿಸಲಾರವು) ಆವಕಾಡೊಗಳನ್ನು ಪೂರೈಕೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿತು. US ಸರಕಾರ ಇದನ್ನು ನಿರ್ಲಕ್ಷಿಸಿತು, ಆದರೆ ಮೆಕ್ಸಿಕೊ ದೇಶವು US ಬೆಳೆಗೆ ಪ್ರತಿಬಂಧ ಹೇರಲು ಆರಂಭಿಸಿದಾಗ US ಸೋಲೊಪ್ಪಿಕೊಂಡಿತು. ಪರ್ಸಿಯಾ ಮಿಟೆ ಮತ್ತು ಆವಕಾಡೊ ಥ್ರಿಪ್ಸ್ ಮೊದಲಾದ ಮೆಕ್ಸಿಕೋದಲ್ಲಿ ಹುಟ್ಟಿಕೊಂಡ ರೋಗಗಳು ಕ್ಯಾಲಿಫೋರ್ನಿಯಾಕ್ಕೆ ಬರಲು ಆರಂಭಿಸಿದ್ದರಿಂದ, ವಿನಾಶಕಾರೀ ಕ್ರಿಮಿಕೀಟ ದಾಳಿಯಿಂದ ಉದ್ಭವವಾದ ನ್ಯಾಯ-ಸಮ್ಮತ ಸಮಸ್ಯೆಗಳು ಕಾಣಿಸಿಕೊಂಡವು. ಈ ಕ್ರಿಮಿಕೀಟಗಳು ಕೀಟನಾಶಕಗಳ ನಿಯಂತ್ರಣ ಮಾಡುವ ವೆಚ್ಚವನ್ನು ಏರಿಸಿತು,ಮತ್ತು ಹಿಂದೊಮ್ಮೆ ವಿಶ್ವಸನೀಯವಾಗಿದ್ದ ಜೈವಿಕ ನಿಯಂತ್ರಣವನ್ನು ಅವಲಂಬಿಸುವಂತೆ ಮಾಡಿದವು. ವೀವಿಲ್‌ನಂತಹ ಹೆಚ್ಚು ಹಾನಿಕಾರಕ ರೋಗಗಳು ತೀವ್ರ ಗಂಡಾಂತರ ಒಡ್ಡಿದವು. ಮೆಕ್ಸಿಕೊ (ಮತ್ತು ಚಿಲಿ) ರಫ್ತು ಸೃಷ್ಟಿಸಿದ ಕಡಿಮೆ ಬೆಲೆಯು ಕ್ಯಾಲಿಫೋರ್ನಿಯಾದ ಹೊರಗಿನ ಪ್ರದೇಶಗಳಲ್ಲಿ ಆವಕಾಡೊಗಳ ಜನಪ್ರಿಯತೆಯನ್ನು ಹೆಚ್ಚಿಸಿತು, ಹೊಸ ಪೈಪೋಟಿಯಿಂದ, ಉಂಟಾಗುವ ಲಾಭದಲ್ಲಿನ ನಷ್ಟವನ್ನು ತುಂಬಿಕೊಡುತ್ತದೆ ಎಂದು ಭಾವಿಸಲಾಯಿತು. ಮೆಕ್ಸಿಕೋದಿಂದ ಬರುವ ಆವಕಾಡೊಗಳಿಗೆ ಇಂದು ಅಮೇರಿಕಾದ ಎಲ್ಲಾ 50 ದೇಶಗಳಲ್ಲೂ ಬಾಗಿಲು ತೆರೆದಿದೆ. ಮೈಕೋವಕಾನ್ನ (ಮೆಕ್ಸಿಕೋದ 90%ನಷ್ಟು ಹ್ಯಾಸ್ ಆವಕಾಡೊಗಳನ್ನು ಬೆಳೆಯುವ ಮೆಕ್ಸಿಕೋದ ರಾಜ್ಯ) USDA ಪರಿಶೀಲನಾಧಿಕಾರಿಗಳು, ಉರ್ವಪನ್‌ನಲ್ಲಿ ಲಕ್ಷಾಂತರ ಹಣ್ಣುಗಳನ್ನು ಕತ್ತರಿಸಿ ಪರಿಶೀಲಿಸಿ ಸಮಸ್ಯೆ ಇಲ್ಲದಿರುವುದನ್ನು ಕಂಡುಕೊಂಡರು. ವರ್ಷ 2005–2006ರಲ್ಲಿ ಮೆಕ್ಸಿಕೋದ ರಫ್ತಿನ ಪ್ರಮಾಣವು 130,000 ಟನ್‌ಗಳನ್ನೂ ಮೀರಿತು.[೧೫][clarification needed] ಆವಕಾಡೊಗಳನ್ನು USಗೆ ರಫ್ತು ಮಾಡುವುದಕ್ಕಾಗಿ ಚಿಲಿ ಮತ್ತು ಮೆಕ್ಸಿಕೊ ಜೊತೆ 2009ರಲ್ಲಿ ಪೆರು ಸೇರಿಕೊಂಡಿತು.[೧೬] USನಲ್ಲಿ ಬಳಸಲ್ಪಡುವ ಆವಕಾಡೊಗಳಲ್ಲಿ ಹೆಚ್ಚಿನವು ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದಲ್ಲಿ ಬೆಳೆದವು, ಆದ್ದರಿಂದ ಇತರ ರಾಷ್ಟ್ರಗಳಿಗಿಂತ USನಲ್ಲಿ ಇದು ಹೆಚ್ಚು ದುಬಾರಿ.[clarification needed] ಹೆಚ್ಚಿನ ಪ್ರಮಾಣದ ಇಳುವರಿ ನೀಡಲು ಆವಕಾಡೊ ಸಸ್ಯಗಳಿಗೆ ವಿಶೇಷವಾಗಿ ವಸಂತಕಾಲ, ಬೇಸಿಗೆ ಮತ್ತು ಶರತ್ಕಾಲದಲ್ಲಿ ದೀರ್ಘಕಾಲದ, ಅಧಿಕ ಪ್ರಮಾಣದ ನೀರಿನ ಅವಶ್ಯಕತೆ ಇದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಆರಂಭಿಕ ದಶಕಗಳಲ್ಲಿ ನೀರುಣಿಸುವುದಕ್ಕೆ ಅಧಿಕ ವೆಚ್ಚ ತಗುಲಿದ್ದರಿಂದ, ಈಗ ಇದು ಅತಿ ದುಬಾರಿ ಬೆಳೆಯಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಆವಕಾಡೊ ಬೆಳೆಯಲ್ಲಿ ಸುಮಾರು 90%ನಷ್ಟು ಭಾಗವನ್ನು ಕ್ಯಾಲಿಫೋರ್ನಿಯಾ ಉತ್ಪಾದಿಸುತ್ತದೆ.[೧೧] ಅಂತಾರಾಷ್ಟ್ರೀಯ ಮಟ್ಟದಲ್ಲಿ ಆವಕಾಡೊವನ್ನು ರಫ್ತು ಮಾಡುವುದರಲ್ಲಿನ ಸಿಂಹ ಪಾಲು ಅಮೇರಿಕಾ ಸಂಯುಕ್ತ ಸಂಸ್ಥಾನದ್ದು, ಇದು ವಿಶ್ವವ್ಯಾಪಿ ಆವಕಾಡೊ ರಫ್ತಿನಲ್ಲಿ 40%ಗಿಂತಲೂ ಹೆಚ್ಚು ಉತ್ಪತ್ತಿ ಮಾಡುತ್ತದೆ.[೧೬]
ಆರೋಗ್ಯಕಾರೀ ಪ್ರಯೋಜನ
ಬದಲಾಯಿಸಿಹೆಚ್ಚಿನ ಪ್ರಮಾಣದ ಆವಕಾಡೊ ಸೇವನೆಯು ರಕ್ತಸಾರದ ಕೊಲೆಸ್ಟರಾಲ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ, ಆವಕಾಡೊಗಳನ್ನು ಏಳು-ದಿನಗಳವರೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೈಪರ್‌ಕೊಲೆಸ್ಟರಾಲೀಮಿಯ ರೋಗಿಗಳಲ್ಲಿ ರಕ್ತಸಾರದಲ್ಲಿನ ಸಂಪೂರ್ಣ ಕೊಲೆಸ್ಟರಾಲ್ ಮಟ್ಟವು 17%ನಷ್ಟು ಕಡಿಮೆಯಾಗುತ್ತದೆ. ಈ ರೀತಿಯ ಸೇವನೆಯು LDL (ಕೆಟ್ಟ ಕೊಲೆಸ್ಟರಾಲ್) ಮತ್ತು ಟ್ರೈಗ್ಲಿಸಿರೈಡ್ ಮಟ್ಟವನ್ನು 22%ನಷ್ಟು ತಗ್ಗಿಸುತ್ತದೆ ಹಾಗೂ HDL (ಉತ್ತಮ ಕೊಲೆಸ್ಟರಾಲ್) ಮಟ್ಟವನ್ನು 11%ನಷ್ಟು ಹೆಚ್ಚಿಸುತ್ತದೆ.[೧೭] ಜಪಾನಿನ ತಂಡವು ನಾಲ್ಕು ಕೈರಲ್(=ಅಸಮಮಿತ ಅಂಶ) ಅಂಶಗಳನ್ನು ಉತ್ಪತ್ತಿ ಮಾಡಿತು ಹಾಗೂ (2R, 4R)-16-ಹೆಪ್ಟಡೀಸಿನ್-1, 2, 4-ಟ್ರಯೋಲ್ಅನ್ನು ನೈಸರ್ಗಿಕ ಜೀವಿರೋಧಿ ಘಟಕವಾಗಿ ಕಂಡುಹಿಡಿಯಿತು.[೧೮]
ಬಳಕೆಗಳು
ಬದಲಾಯಿಸಿಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (March 2009) |
ಪೌಷ್ಟಿಕಾಂಶದ ಮೌಲ್ಯ 100 g (3.5 oz) | |
---|---|
ಶಕ್ತಿ | 670 kJ (160 kcal) |
ಕಾರ್ಬೋಹೈಡ್ರೇಟ್ಗಳು | 8.53 g |
ಸಕ್ಕರೆ | 0.66 g |
ನಾರು ಪದಾರ್ಥ | 6.7 g |
14.66 g | |
ಪರ್ಯಾಪ್ತ | 2.13 g |
ಏಕಾಪರ್ಯಾಪ್ತ | 9.80 g |
ಬಹು ಅಪರ್ಯಾಪ್ತ | 1.82 g |
2 g | |
ವಿಟಮಿನ್(ಅನ್ನಾಂಗ)ಗಳು | ಪ್ರಮಾಣ %DV† |
ಥಯಾಮಿನ್ | 6% 0.067 mg |
ಬಿ೨ ಅನ್ನಾಂಗ (ರೈಬೊಫ್ಲೆವಿನ್) | 11% 0.130 mg |
ಬಿ೩ ಅನ್ನಾಂಗ (ನಯಾಸಿನ್) | 12% 1.738 mg |
ಬಿ೫ ಅನ್ನಾಂಗ (ಪಾಂಟೊಥೆನಿಕ್ ಆಸಿಡ್) | 28% 1.389 mg |
ಬಿ೧೨ ಅನ್ನಾಂಗ | 20% 0.257 mg |
ಬಿ೯ ಅನ್ನಾಂಗ (ಫೊಲೆಟ್) | 20% 81 μg |
ಸಿ ಅನ್ನಾಂಗ | 12% 10 mg |
ಖನಿಜಗಳು | ಪ್ರಮಾಣ %DV† |
ಸುಣ್ಣ(ಕ್ಯಾಲ್ಸಿಯಮ್) | 1% 12 mg |
ಕಬ್ಬಿಣ | 4% 0.55 mg |
ಮೆಗ್ನೀಸಿಯಂ | 8% 29 mg |
ಫಾಸ್ಫರಸ್ | 7% 52 mg |
ಪೊಟಾಸಿಯಂ | 10% 485 mg |
ಸತು | 7% 0.64 mg |
| |
†Percentages are roughly approximated using US recommendations for adults. Source: USDA FoodData Central |
ತೋಟಗಾರಿಕೆಯ ತಳಿಗಳ ಹಣ್ಣುಗಳು ಹೆಚ್ಚುಕಡಿಮೆ ಅಂಡಾಕಾರವಾಗಿ ಅಥವಾ ಪೇರುಹಣ್ಣಿನ ಆಕಾರದಲ್ಲಿರುತ್ತವೆ, ವಿಶಿಷ್ಟವಾಗಿ ಸಮಶೀತೋಷ್ಣ-ವಲಯದ ಪೇರುಹಣ್ಣು ಅಥವಾ ಅದಕ್ಕಿಂತ ದೊಡ್ಡದಾಗಿರುತ್ತವೆ. ಹಣ್ಣಿನ ಹೊರಭಾಗ ಗಾಢ ಹಸಿರಿನಿಂದ ಅಥವಾ ಹಸಿರು-ಕಂದು ಮಿಶ್ರಿತ (ಅಥವಾ ಹೆಚ್ಚುಕಡಿಮೆ ಕಪ್ಪು) ಬಣ್ಣದಿಂದ ಕೂಡಿರುತ್ತದೆ. ಇತರ ಹಣ್ಣುಗಳಿಗಿಂತ ಈ ಹಣ್ಣು ಗಮನಾರ್ಹವಾಗಿ ಅಧಿಕ ಕೊಬ್ಬಿನಾಂಶವನ್ನು ಹೊಂದಿರುತ್ತದೆ, ಅದರಲ್ಲೂ ಮೋನೊಅನ್‌ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಕೊಬ್ಬಿನಾಂಶವಿರುವ ಇತರ ಆಹಾರ ಪದಾರ್ಥಗಳನ್ನು (ಹೆಚ್ಚು-ಕೊಬ್ಬಿರುವ ಮಾಂಸ ಮತ್ತು ಮೀನು, ಹಾಲಿನ ಉತ್ಪನ್ನಗಳು, ಇತ್ಯಾದಿ) ಮಿತಿಗೊಳಿಸಿದ ಆಹಾರ ಕ್ರಮದಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಮಾಗಿದ ಆವಕಾಡೊವನ್ನು ಕೈಯಲ್ಲಿ ಹಿಸುಕಿ, ಬಿಡಿಸಿ ತಿನ್ನಬಹುದು. ತಿರುಳು ಹಸಿರು-ಹಳದಿ ಮಿಶ್ರಿತವಾಗಿದ್ದು, ಹಣ್ಣಾದ ನಂತರ ಹೊಂಬಣ್ಣದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಗಾಳಿಗೆ ಒಡ್ಡಲಾದ ತಿರುಳು ಎಂಜೈಮ್ ಪರಿಣಾಮದಿಂದಾಗಿ, ಶೀಘ್ರವಾಗಿ ಕಂದುಬಣ್ಣಕ್ಕೆ ತಿರುಗುತ್ತದೆ. ಇದನ್ನು ತಡೆಗಟ್ಟುವುದಕ್ಕಾಗಿ, ಆವಕಾಡೊಗಳ ಸಿಪ್ಪೆ ಸುಲಿದ ನಂತರ ಅದಕ್ಕೆ ನಿಂಬೆ ಅಥವಾ ಗಜನಿಂಬೆ ರಸವನ್ನು ಸೇರಿಸುತ್ತಾರೆ.
ಸಸ್ಯಾಹಾರ ಅಡುಗೆಯಲ್ಲಿ ಆವಕಾಡೊ ಬಹುಜನಪ್ರಿಯವಾದುದು, ಇದು ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶವನ್ನು ಹೊಂದಿರುವುದರಿಂದ ಸ್ಯಾಂಡ್‌ವಿಚ್ ಮತ್ತು ಸಲಾಡ್‌ಗಳಲ್ಲಿ ಮಾಂಸದ ಬದಲಿಯಾಗಿ ಉಪಯೋಗಿಸಲಾಗುತ್ತದೆ. ಹಣ್ಣು ಸಿಹಿಯಾಗಿಲ್ಲದೆ ಅಧಿಕ ಕೊಬ್ಬಿನಾಂಶವನ್ನು ಹೊಂದಿರುತ್ತದೆ, ಸ್ವಲ್ಪ ಪರಿಮಳಭರಿತವಾಗಿದ್ದು, ಮೃದುವಾಗಿ ಕೆನೆಯಂತಿರುತ್ತದೆ. ಇದನ್ನು ಗ್ವಕಮೋಲ್ ಎಂಬ ಮೆಕ್ಸಿಕೋದ ಡಿಪ್(=ಗೊಜ್ಜು) ತಯಾರಿಕೆಗೆ ಬಳಸುತ್ತಾರೆ ಹಾಗೂ ಕ್ಯಾಲಿಫೋರ್ನಿಯಾ ರೋಲ್(=ರೊಟ್ಟಿ) ಮೊದಲಾದ ಹಲವಾರು ರೀತಿಯ ಸೂಷಿ(=ಚಿತ್ರಾನ್ನ) ಸಿದ್ಧತೆಯಲ್ಲೂ ಉಪಯೋಗಿಸುತ್ತಾರೆ. ಆವಕಾಡೊವನ್ನು ಕೋಳಿಮಾಂಸದಿಂದ ತಯಾರಿಸುವ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ ಹಾಗೂ ಟೋಸ್ಟುಗಳ ಮೇಲೆ ಹರಡಿ, ಉಪ್ಪು ಮತ್ತು ಮತ್ತು ಕಾಳುಮೆಣಸಿನೊಂದಿಗೆ ತಿನ್ನಲು ನೀಡುತ್ತಾರೆ. ಬ್ರೆಜಿಲ್, ಇಂಡೋನೇಷಿಯಾ, ವಿಯೆಟ್ನಾಂ ಮತ್ತು ದಕ್ಷಿಣ ಭಾರತದಲ್ಲಿ (ವಿಶೇಷವಾಗಿ ಕರ್ನಾಟಕದ ಕರಾವಳಿಯಲ್ಲಿ), ಆವಕಾಡೊಗಳನ್ನು ರುಚಿಯಾಗಿ ತಯಾರಿಸುವ ಪಾನೀಯಗಳಲ್ಲಿ(=ಮಿಲ್ಕ್‌ಶೇಕ್ಸ್) ಹೆಚ್ಚಾಗಿ ಬಳಸುತ್ತಾರೆ ಹಾಗೂ ಐಸ್‌ಕ್ರೀಮು ಮತ್ತು ಇತರ ಸಿಹಿತಿಂಡಿಗಳಲ್ಲಿಯೂ ಸೇರಿಸುತ್ತಾರೆ. ಬ್ರೆಜಿಲ್, ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಇಂಡೋನೇಷಿಯಾದಲ್ಲಿ ಸಕ್ಕರೆ, ಹಾಲು ಅಥವಾ ನೀರು ಮತ್ತು ನುಣ್ಣನೆ ಕೆನೆಯಂತೆ ಮಾಡಿದ ಆವಕಾಡೊ ರಸ ಮೊದಲಾದವುಗಳನ್ನು ಸೇರಿಸಿ ಒಂದು ಬಗೆಯ ಸಿಹಿಯಾದ ಪಾನೀಯವನ್ನು ಮಾಡುತ್ತಾರೆ. ಕೆಲವೊಮ್ಮೆ ಚಾಕೋಲೇಟ್ ದ್ರಾವಕನ್ನು ಸೇರಿಸುತ್ತಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಇದನ್ನು ಸಾಮಾನ್ಯವಾಗಿ ಸ್ಯಾಂಡ್‌ವಿಚ್‌ನೊಂದಿಗೆ, ಕೆಲವೊಮ್ಮೆ ಕೋಳಿಮಾಂಸದ ಆಹಾರಪದಾರ್ಥದೊಂದಿಗೂ ತಿನ್ನಲು ನೀಡುತ್ತಾರೆ. ಘಾನದಲ್ಲಿ, ಬ್ರೆಡ್ ಚೂರುಗಳೊಂದಿಗೆ ಬರಿಯ ಈ ಹಣ್ಣನ್ನು ಮಾತ್ರ ಸ್ಯಾಂಡ್‌ವಿಚ್‌ನಂತೆ ತಿನ್ನುತ್ತಾರೆ.ಶ್ರೀಲಂಕಾದಲ್ಲಿ, ಚೆನ್ನಾಗಿ ಬಲಿತ ಈ ಹಣ್ಣಿನ ತಿರುಳನ್ನು ಸಕ್ಕರೆ ಮತ್ತು ಹಾಲು ಅಥವಾ ಟ್ರೀಸಲ್‌ನೊಂದಿಗೆ ಚೆನ್ನಾಗಿ ಕಲಸಿ ಒಂದು ರೀತಿಯ ಸಿಹಿಭಕ್ಷ್ಯವನ್ನು ತಯಾರಿಸುತ್ತಾರೆ. ಮೆಕ್ಸಿಕೊ ಮತ್ತು ಮಧ್ಯ ಅಮೇರಿಕಾದಲ್ಲಿ, ಆವಕಾಡೊಗಳನ್ನು ಬಿಳಿ ಅನ್ನ, ಸಾರು, ಸಲಾಡ್‌ಗಳೊಂದಿಗೆ ಬೆರೆಸಿ ಅಥವಾ ಕೋಳಿಮಾಂಸ ಮತ್ತು ಮಾಂಸದೊಂದಿಗೆ ವಿತರಿಸುತ್ತಾರೆ. ಪೆರುವಿನಲ್ಲಿ ಆವಕಾಡೊಗಳನ್ನು ಟೆಕ್ವೆನೊಗಳಲ್ಲಿ ಮಯೋನೈಸೆ ಆಗಿ ಬಳಸುತ್ತಾರೆ, ಪರಿಲ್ಲಾಗಳೊಂದಿಗೆ ಹೆಚ್ಚುವರಿ ಭಕ್ಷ್ಯವಾಗಿ ಹಾಗೂ ಸಲಾಡ್ ಮತ್ತು ಸ್ಯಾಂಡ್‌ವಿಚ್‌ಗಳಲ್ಲೂ ಉಪಯೋಗಿಸುತ್ತಾರೆ, ಟ್ಯೂನಾ, ಸಿಗಡಿ ಅಥವಾ ಕೋಳಿಮಾಂಸದೊಂದಿಗೆ ಸಂಪೂರ್ಣ ಪದಾರ್ಥವಾಗಿ ನೀಡುತ್ತಾರೆ. ಇದನ್ನು ಕೋಳಿಮಾಂಸ, ಹ್ಯಾಮ್‌ಬರ್ಗರ್ ಮತ್ತು ಹಾಟ್ ಡಾಗ್‌ಗಳಲ್ಲಿ ನುಣ್ಣಗೆ ಕೆನೆಯಂತೆ ಮಾಡಿ ಹಾಗೂ ಸೆಲರಿ ಅಥವಾ ಲೆಟಿಸ್ ಸಲಾಡ್‌ಗಳಲ್ಲಿ ಹೋಳುಗಳನ್ನಾಗಿ ಮಾಡಿ ಚಿಲಿಯಲ್ಲಿ ಬಳಸುತ್ತಾರೆ. ಚಿಲಿಯ ಸೀಸರ್ ಸಲಾಡ್‌ನಲ್ಲಿ ಬಲಿತ ಆವಕಾಡೊ ಹಣ್ಣಿನ ಚೂರುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಕೀನ್ಯಾದಲ್ಲಿ, ಆವಕಾಡೊ ಹಣ್ಣನ್ನಾಗಿ ಸೇವಿಸುತ್ತಾರೆ, ಅಥವಾ ಹಣ್ಣಿನ ಸಲಾಡ್‌ನಲ್ಲಿ ಇತರ ಹಣ್ಣುಗಳೊಂದಿಗೆ ಅಥವಾ ತರಕಾರಿ ಸಲಾಡ್‌ನಲ್ಲೂ ಬಳಸುತ್ತಾರೆ. ಇರಾನ್‌ನಲ್ಲಿ ಇದನ್ನು ಕಾಂತಿ ವರ್ಧಿಸುವ ಮುಖದ ಕ್ರೀಮ್‌ನಲ್ಲಿ ಉಪಯೋಗಿಸುತ್ತಾರೆ. ಸರಿನೇಮ್ ಮತ್ತು ರೆಸಿಫೆಯ ಡಚ್ ಜನರು ತಯಾರಿಸುವ ಅಡ್ವೊಕಾಟ್ ಪಾನೀಯವನ್ನು ಗಟ್ಟಿಯಾಗಿಸಲು ಮತ್ತು ಅದನ್ನು ಪರಿಮಳಭರಿತವನ್ನಾಗಿಸಲು ಈ ಹಣ್ಣನ್ನು ನುಣ್ಣನೆ ಕೆನೆಯಂತೆ ಮಾಡಿ ಬಳಸುತ್ತಾರೆ.
ಪೌಷ್ಟಿಕ ಮೌಲ್ಯ
ಬದಲಾಯಿಸಿಆವಕಾಡೊಗಳಲ್ಲಿ ಸುಮಾರು 75%ನಷ್ಟು ಕೊಬ್ಬಿನಾಂಶವಿದ್ದು, ಅದರಲ್ಲಿ ಮೋನೊಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಬಾಳೆಹಣ್ಣಿಗಿಂತ 60% ಹೆಚ್ಚು ಪೊಟ್ಯಾಸಿಯಮ್ಆವಕಾಡೊಗಳಲ್ಲಿ ಇರುತ್ತದೆ. ಈ ಹಣ್ಣುಗಳಲ್ಲಿ ಅಪಾರ ಪ್ರಮಾಣದಲ್ಲಿ B ಜೀವಸತ್ವ ಇರುವುದಲ್ಲದೆ E ಜೀವಸತ್ವ ಮತ್ತು K ಜೀವಸತ್ವವೂ ಹೇರಳವಾಗಿ ಇರುತ್ತದೆ.[೧೯] ಈ ಹಣ್ಣಿನ ಎಲ್ಲಾ ಜಾತಿಗಳು 75%ನಷ್ಟು ಕರಗದಿರುವ ಮತ್ತು 25%ನಷ್ಟು ಕರಗಬಲ್ಲ ಪ್ರಮಾಣದಲ್ಲಿ ನಾರಿನ ಅಂಶವನ್ನು ಹೊಂದಿರುತ್ತವೆ.[೨೦] ಒಂದು ದ್ವಿಬಂಧದೊಂದಿಗೆ ಒಂದು ಕೊಬ್ಬುಳ್ಳ ಟ್ರಯೋಲ್ (ಕೊಬ್ಬು ಇರುವ ಆಲ್ಕೋಹಾಲ್), ಅವಾಡೊಸೀನ್ (16-ಹೆಪ್ಟಡೀಸಿನ್-1,2,4-ಟ್ರಯೋಲ್), ಆವಕಾಡೊದಲ್ಲಿ ಕಂಡುಬರುತ್ತದೆ.[೨೧]
ಮನೆ ಗಿಡವಾಗಿ
ಬದಲಾಯಿಸಿಹೆಚ್ಚು ಜನಪ್ರಿಯವಾಗಿಲ್ಲವಾದರೂ, ಆವಕಾಡೊವನ್ನು ಮನೆಯಲ್ಲಿ ಬೆಳೆಸಬಹುದು ಹಾಗೂ ಮನೆಯ ಅಲಂಕರಣ ಸಸ್ಯವನ್ನಾಗಿಯೂ ಇದನ್ನು ಉಪಯೋಗಿಸಬಹುದು. ಸಾಧಾರಣ ಮಣ್ಣಿನ ಪರಿಸ್ಥಿತಿಯಲ್ಲಾಗಲಿ ಅಥವಾ ನೀರಿನ ಪಾತ್ರೆಯಲ್ಲಿ ಅರ್ಧ ಮುಳುಗಿಸಿಟ್ಟರಾಗಲಿ ಬೀಜಗಳು ಮೊಳಕೆ ಒಡೆಯುತ್ತವೆ. ನೀರಿನಲ್ಲಿಟ್ಟು ಮೊಳಕೆ ಬರಿಸುವ ವಿಧಾನದಲ್ಲಿ ಬೀಜವು 4-6 ವಾರಗಳಲ್ಲಿ ಮೊಳೆಕೆಯೊಡೆಯುತ್ತದೆ, ನಂತರ ಅದನ್ನು ಫಲವತ್ತಾದ ಮಣ್ಣಿನಲ್ಲಿ ನೆಡಬಹುದು. ಸಸ್ಯವು ಬೆಳೆದು ಅನಾವಶ್ಯಕ ಕೊಂಬೆಗಳನ್ನು ಸವರಿ ಹಾಕುವಷ್ಟು ದೊಡ್ಡದಾದರೂ, ಸಾಕಷ್ಟು ಸೂರ್ಯನ ಬೆಳಕು ಮತ್ತು ಮಿಶ್ರ-ಪರಾಗಸ್ಪರ್ಶ ಮಾಡಿಕೊಳ್ಳಲು ಮತ್ತೊಂದು ಸಸ್ಯ ಈ ಎರಡು ಅಂಶಗಳು ಸಿಗುವವರೆಗೂ ಅದು ಹಣ್ಣು ಬಿಡುವುದಿಲ್ಲ.
ಪ್ರಾಣಿಗಳಿಗೆ ವಿಷಕಾರಿ
ಬದಲಾಯಿಸಿಬೆಕ್ಕು, ನಾಯಿ, ಕರು, ಆಡು, ಮೊಲ, ಇಲಿ, ಪಕ್ಷಿ, ಮೀನು ಮತ್ತು ಕುದುರೆ ಮೊದಲಾದ ಜೀವಿಗಳು[೧೨][೨೨] ಆವಕಾಡೊ ಎಲೆ, ತೊಗಟೆ, ಸಿಪ್ಪೆ ಅಥವಾ ಬೀಜಗಳನ್ನು ತಿಂದರೆ ಅವುಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತವೆ ಅಥವಾ ಅವು ಸಾವನ್ನಪ್ಪುವ ಸಾಧ್ಯತೆಯೂ ಉಂಟು. ಆವಕಾಡೊ ಹಣ್ಣು ಕೆಲವು ಪಕ್ಷಿಗಳ ಪಾಲಿಗೆ ವಿಷಪೂರಿತವಾಗಿದೆ. ಬೆಕ್ಕು, ನಾಯಿ ಮತ್ತು ಕುದುರೆಗಳಂತಹ ಹಲವು ಪ್ರಾಣಿಗಳಿಗೂ ಇದು ವಿಷಕಾರಿಯಾಗಿದೆ ಎಂದು ASPCA ಮತ್ತು ಕೆಲವು ಇತರ ಸೈಟ್‌ಗಳು ಹೇಳಿವೆ.[೨೩] ಅವೊಡರ್ಮ್ ಎಂಬ ನಾಯಿ ಆಹಾರ[೨೪] ಮತ್ತು ಬೆಕ್ಕಿನ ಆಹಾರದಲ್ಲಿ ಆವಕಾಡೊ ಹಣ್ಣೂ ಒಂದು ಅಂಶವಾಗಿದೆ.[೨೫] ಆದರೆ, ಯಾವ ರೀತಿಯಲ್ಲಿ ಆವಕಾಡೊ ಸಂಸ್ಕರಿಸಲ್ಪಟ್ಟಿದೆ ಎಂಬುದರ ಅರಿವಿಲ್ಲದ ಕಾರಣ ಆವಕಾಡೊ ಹಣ್ಣು ಅವಕ್ಕೆ ಸುರಕ್ಷಿತವೇ ಅಲ್ಲವೇ ಎಂಬುದನ್ನು ಹೇಳಲು ASPCA ನಿರಾಕರಿಸಿದೆ.[೨೬] ಆವಕಾಡೊ ಎಲೆಗಳು ಪರ್ಸಿನ್ ಎಂಬ ವಿಷಕಾರಿ ಕೊಬ್ಬಿನಾಮ್ಲವನ್ನು ಹೊಂದಿರುತ್ತವೆ, ಆದ್ದರಿಂದ ಹೆಚ್ಚಿನ ಪ್ರಮಾಣದ ಇದರ ಸೇವನೆಯು ಕುದುರೆಗಳಲ್ಲಿ ಹೊಟ್ಟೆನೋವಿಗೆ ಕಾರಣವಾಗಿ, ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವನ್ನೂ ತರಬಹುದು.[೨೭] ಇತರ ರೋಗಲಕ್ಷಣಗಳೆಂದರೆ - ಜಠರಗರುಳಿನ ಕೆರಳಿಕೆ, ವಾಂತಿ, ಅತಿಸಾರ, ಉಸಿರಾಟದ ತೊಂದರೆ, ರಕ್ತನಿಬಿಡತೆ(=ದೇಹದ ಯಾವುದೇ ಭಾಗದಲ್ಲಿ ರಕ್ತ ವಿಪರೀತವಾಗಿ ಸೇರಿಕೊಳ್ಳುವುದು), ಹೃದಯದ ಅಂಗಾಂಶಗಳ ಸುತ್ತ ದ್ರವ ಪದಾರ್ಥಗಳು ಸಂಗ್ರಹವಾಗುವುದು ಹಾಗೂ ಕೆಲವೊಮ್ಮೆ ಸಾವೂ ಬಂದೆರಗಬಹುದು. ಪಕ್ಷಿಗಳೂ ಈ ವಿಷಮಯ ಅಂಶದ ಪ್ರಭಾವಕ್ಕೆ ಒಳಗಾಗುತ್ತವೆ. ಮಾನವರಲ್ಲಿ ಇದರ ಋಣಾತ್ಮಕ ಪರಿಣಾಮವು ಪ್ರಾಥಮಿಕವಾಗಿ ಒಗ್ಗದಿಕೆ(=ಅಲರ್ಜಿ) ಇರುವವರಲ್ಲಿ ಕಂಡುಬರುತ್ತದೆ.
ಸಹ-ವಿಕಾಸ
ಬದಲಾಯಿಸಿಆವಕಾಡೊ 'ವಿಕಾಸವಾದದಲ್ಲಿ ಕಾಲಕ್ಕೆ ಹೊಂದದಿರುವುದಕ್ಕೆ' ಒಂದು ಉದಾಹರಣೆಯಾಗಿದೆ. ಈಗ-ಅಳಿದಿರುವ ದೊಡ್ಡ ಸಸ್ತನಿಗಳೊಂದಿಗೆ (ದೈತ್ಯ ನೆಲದ ಸ್ಲಾತ್ ಪ್ರಾಣಿ ಅಥವಾ ಗೋಂಫೋಥೆರೆಯಂತಹ) ಪರಿಸರ ಸಂಬಂಧಕ್ಕಾಗಿ ಮಾರ್ಪಾಡಾದ ಹಣ್ಣು ಇದು. ಹೆಚ್ಚು ತಿರುಳಿರುವ ಹಣ್ಣುಗಳು ಬೀಜ ಪ್ರಸರಣ ಕಾರ್ಯವನ್ನು ಮಾಡುತ್ತವೆ, ದೊಡ್ಡ ಪ್ರಾಣಿಗಳು ಸೇವಿಸುವುದರಿಂದ ಈ ಕ್ರಿಯೆ ನಡೆಯುತ್ತದೆ. ಸ್ವಲ್ಪ ವಿಷಕಾರಿಯಾಗಿರುವ ಬೀಜ ಹೊಂದಿರುವ ಈ ಹಣ್ಣನ್ನು ಪ್ಲೈಸ್ಟೊಸೀನ್ ಮೆಗಾಫೌನ ಇಡಿಯಾಗಿ ನುಂಗಿ,ಸಗಣಿಯ ಮೂಲಕ ಹೊರಹಾಕುತ್ತದೆ. ಆಗ ಬೀಜವು ಮೊಳಕೆಯೊಡೆಯಲು ತಯಾರಾಗಿರುತ್ತದೆ, ಈ ರೀತಿಯಾಗಿ ಆವಕಾಡೊ ವಿಕಾಸವಾಗಿರಬಹುದು ಎಂದು ಲೇಖಕ ಕೊನ್ನಿ ಬಾರ್ಲೊ ಊಹೆಮಾಡಿದ್ದಾನೆ. ಈ ರೀತಿಯಲ್ಲಿ ಆವಕಾಡೊವನ್ನು ಪರಿಣಾಮಕಾರಿಯಾಗಿ ಪ್ರಸರಣ ಮಾಡುವಂಥ ಯಾವುದೇ ಬೃಹತ್ ಪ್ರಾಣಿ ಈಗಿಲ್ಲ. ಮಾನವನು ಆವಕಾಡೊಗಳ ಕೃಷಿ ಮಾಡುವ ಮೂಲಕ "ವಿಕಾಸವಾದದ ಛಾಯೆ"ಯನ್ನು ಉಳಿಸಿಕೊಂಡಿರದೆ ಇದ್ದರೆ, ಆವಕಾಡೊಗಳ ಪರಿಸರ ಜೊತೆಗಾರರು ಎಂದು ಊಹೆ ಮಾಡಿದವುಗಳು ಅಳಿದುಹೋದಾಗ ಇವೂ ನಾಶವಾಗಿ ಹೋಗುತ್ತಿತ್ತು ಅಥವಾ ಬೇರೆ ಹಣ್ಣಾಗಿ ವಿಕಾಸವಾಗುತ್ತಿತ್ತು.[೨೮]
ಅಡುಗೆ ವಿಧಾನ
ಬದಲಾಯಿಸಿಆವಕಾಡೊಗಳನ್ನು ಹಾಗೆಯೇ ತಿನ್ನಬಹುದಾದರೂ, ಹೆಚ್ಚಾಗಿ ಅದ್ದಿ ತಿನ್ನುವಂಥ ದ್ರವರೂಪಿ ಆಹಾರ(=ಡಿಪ್) ತಯಾರಿಕೆಯಲ್ಲಿ ಬಳಸುತ್ತಾರೆ. ಗ್ವಾಕಮೋಲ್ ಆವಕಾಡೊಗಳಿಂದ ಮಾಡುವ ಜನಪ್ರಿಯ ತಿನಿಸುಗಳಲ್ಲೊಂದು. ಆವಕಾಡೊಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಟೋಸ್ಟ್ ಮೇಲೆ ಈ ಹಣ್ಣಿನಿಂದ ಮಾಡಿದ ಪದಾರ್ಥವನ್ನು ಹಾಕಿ ಬೆಳಗಿನ ಉಪಾಹಾರಕ್ಕೆ ತಿನ್ನುತ್ತಾರೆ. ಇದನ್ನು ನಿಂಬೆ ಹಣ್ಣಿನ ರಸ, ಉಪ್ಪು ಮತ್ತು ಕಾಳುಮೆಣಸಿನೊಂದಿಗೆ ಆವಕಾಡೊವನ್ನು ಬೆರೆಸಿ, ಸುಟ್ಟ ಬಿಸಿ ಬ್ರೆಡ್‌ನ ಮೇಲೆ ಹರಡಿ ನೀಡುತ್ತಾರೆ. ಆವಕಾಡೊ ಹೋಳುಗಳನ್ನು ಹೆಚ್ಚಾಗಿ ಹ್ಯಾಮ್‌ಬರ್ಗರ್, ಟೋರ್ಟಾಸ್, ಹಾಟ್ ಡಾಗ್ ಮತ್ತು ಕಾರ್ನೆ ಅಸಾಡ ಮೊದಲಾದವುಗಳಲ್ಲಿ ಸೇರಿಸುತ್ತಾರೆ. ಆವಕಾಡೊಗಳನ್ನು ಮೊಟ್ಟೆ ಪದಾರ್ಥಗಳೊಂದಿಗೂ (ಬೇಯಿಸಿದ ಮೊಟ್ಟೆ, ಟೋರ್ಟಿಲ್ಲಾ ಅಥವಾ ಆಮ್ಲೆಟ್‌ಗಳಲ್ಲಿ) ಜತೆಗೂಡಿಸುತ್ತಾರೆ. ಆವಕಾಡೊವನ್ನು ಕಹಿಯಾಗದ ರೀತಿಯಲ್ಲಿ ಬೇಯಿಸಬಹುದಾದರೂ, ಸಾಮಾನ್ಯವಾಗಿ ಹಸಿಯಾಗಿಯೇ ನೀಡಲಾಗುತ್ತದೆ. ಕ್ಯಾಲಿಫೋರ್ನಿಯಾ ರೋಲ್ ಮತ್ತು ಮಾಕಿಜುಶಿಯಲ್ಲಿ ("ಮಾಕಿ" ಅಥವಾ ರೋಲ್ ಮಾಡಿದ ಸುಶಿ) ಆವಕಾಡೊ ಒಂದು ಪ್ರಮುಖ ಅಂಶ. ದಕ್ಷಿಣ ಆಫ್ರಿಕಾದಲ್ಲಿ, ಆವಕಾಡೊ ರಿಟ್ಜ್ ಒಂದು ಸಾಮಾನ್ಯ ಆಹಾರ ಪದಾರ್ಥ.[೨೯]
ಇದನ್ನೂ ಗಮನಿಸಿ
ಬದಲಾಯಿಸಿಆಕರಗಳು
ಬದಲಾಯಿಸಿ- ↑ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ವಾಟ್ ಕೈಂಡ್ ಆಫ್ ಫ್ರುಟ್ ಈಸ್ ದ ಆವಕಾಡೊ?
- ↑ Barry, PC (2001-04-07). "Avocado: The Early Roots of Avocado History". Canku Ota. Archived from the original on 2007-12-15. Retrieved 2007-12-29.
- ↑ ೩.೦ ೩.೧ "Avocado History". IndexFresh.com. Bloomington, CA: Index Fresh Avocado. 2007. Archived from the original on 2007-12-25. Retrieved 2007-12-29.[unreliable source?]
- ↑ ೪.೦ ೪.೧ ೪.೨ Stradley, Linda (2004). "All About Avocados: History of the Hass Avocado". What'sCookingAmerica.net. Newberg, OR: self-published. Retrieved 2008-05-13. ಇದು ಸ್ವ-ಪ್ರಕಟಿತ ಬರಹ, ಇದರ ಮೂಲದ ಬಗ್ಗೆ ಉಲ್ಲೇಖಿಸುತ್ತದೆ, ಹಾಗೂ ಸ್ಟ್ರಾಡ್ಲಿ ಅಡುಗೆ ವಿಧಾನದ ಪ್ರಮುಖ ಲೇಖನ.
- ↑ ಆನ್‌ಲೈನ್ ಎಟಿಮೋಲಜಿ ಡಿಕ್ಶನರಿ - ಆವಕಾಡೊ
- ↑ Whiley, A (2000-09-01). "Avocado Production in Australia". Food and Agriculture Organization of the United Nations. Retrieved 2007-12-29.
- ↑ ಎತಿಲೀನ್ ಗ್ಯಾಸ್ ಆಂಡ್ ಪ್ರೊಡ್ಯೂಸ್
- ↑ "Agriculture Handbook". University of California. 2007. Archived from the original on 2007-12-17. Retrieved 2007-12-29.
- ↑ Crane, JH (2007-08-01). "Avocado Growing in the Florida Home Landscape". University of Florida. Retrieved 2007-12-29.
{{cite web}}
: Unknown parameter|coauthors=
ignored (|author=
suggested) (help) - ↑ Ohr, HD (2003-08-04). "Common Names of Plant Diseases". American Phytopathological Society. Archived from the original on 2008-04-23. Retrieved 2008-05-13.
{{cite web}}
: Unknown parameter|coauthors=
ignored (|author=
suggested) (help) - ↑ ೧೧.೦ ೧೧.೧ "Avocado Fun Facts". California Avocado Commission. Archived from the original on 2010-06-20. Retrieved 2008-06-03.
- ↑ ೧೨.೦ ೧೨.೧ Clipsham, R. "Avocado Toxicity". Retrieved 2007-12-29.
- ↑ ೧೩.೦ ೧೩.೧ ೧೩.೨ "The Hass Mother Tree: 1926–2002". Avocado.org. Irvine, CA: California Avocado Commission. 2008 [copyright date]. pp. "About Avocados: History" section. Archived from the original on 2008-09-13. Retrieved 2008-09-27.
{{cite web}}
: Check date values in:|date=
(help)CS1 maint: extra punctuation (link) - ↑ Overholser, E. L. (1924–25). "Cold Storage Behavior of Avocados" (PDF). California Avocado Association Annual Report. San Diego, CA: California Avocado Association. 10: 32–40. Retrieved August 19, 2009.
{{cite journal}}
: Check date values in:|date=
(help) - ↑ "Mexico praises lifting of last U.S. avocado import barriers". International Herald Tribune. 2007-02-02. Archived from the original on 2008-01-18. Retrieved 2007-12-29.
- ↑ ೧೬.೦ ೧೬.೧ "The productivity connection behind openness" (PDF). Trade and Poverty in Latin America (COPLA). 2009-05-05. Archived from the original (PDF) on 2014-10-19. Retrieved 2009-05-20.
- ↑ Lopez Ledesma, R (1996 Winter), "Monounsaturated fatty acid (avocado) rich diet for mild hypercholesterolemia", Arch-Med-Res., 27 (4): 519–23, archived from the original on 2010-08-20, retrieved 2009-12-30
{{citation}}
: Check date values in:|date=
(help); Unknown parameter|coauthors=
ignored (|author=
suggested) (help) - ↑ Takeyoshi SUGIYAMA1), Akemi SATO and Kyohei YAMASHITA S. mode2=detail&origin=ibids_references&therow=45635 "Synthesis of All Four Stereoisomers of Antibacterial Component of Avocado". Agricultural and Biological Chemistry Vol.46, No.2(1982)pp.481-485.
{{cite journal}}
: Check|url=
value (help)CS1 maint: numeric names: authors list (link)[ಶಾಶ್ವತವಾಗಿ ಮಡಿದ ಕೊಂಡಿ] - ↑ "Avocados, raw, California". NutritionData.com. 2007. Retrieved 2007-12-29.
- ↑ Naveh E, Werman MJ, Sabo E, Neeman I (2002). "Defatted avocado pulp reduces body weight and total hepatic fat but increases plasma cholesterol in male rats fed diets with cholesterol". J. Nutr. 132 (7): 2015–8. PMID 12097685.
{{cite journal}}
: CS1 maint: multiple names: authors list (link) - ↑ "FATTY ALCOHOLS: Unsaturated alcohols". Cyberlipid Center. Archived from the original on 2012-06-25. Retrieved 2007-12-29.
- ↑ "Notes on poisoning: avocado". Canadian Biodiversity Information Facility. 2006-06-30. Retrieved 2007-12-29.
- ↑ "Avocado". ASPCA Animal Poison Control Center.
- ↑ "AvoDerm Natural Premium Dog Food". Archived from the original on 2010-04-29. Retrieved 2009-01-13.
- ↑ "AvoDerm Natural Premium Cat Food". Archived from the original on 2010-01-31. Retrieved 2009-01-13.
- ↑ "Dog Food Containing Avocado".
- ↑ Oelrichs PB, Ng JC, Seawright AA, Ward A, Schäffeler L, MacLeod JK (1995). "Isolation and identification of a compound from avocado (Persea americana) leaves which causes necrosis of the acinar epithelium of the lactating mammary gland and the myocardium". Nat. Toxins. 3 (5): 344–9. doi:10.1002/nt.2620030504. PMID 8581318.
{{cite journal}}
: CS1 maint: multiple names: authors list (link) - ↑ Barlow, Connie C. (2000). The ghosts of evolution: nonsensical fruit, missing partners, and other ecological anachronisms. New York: Basic Books. ISBN 0-465-00551-9.
- ↑ ಆವಕಾಡೊ ರಿಟ್ಜ್‌ಗೆ ಪಾಕವಿಧಾನ http://www.rainbownation.com/recipes/recipe.asp?type=1&id=1 Archived 2011-12-08 ವೇಬ್ಯಾಕ್ ಮೆಷಿನ್ ನಲ್ಲಿ.
ಹೆಚ್ಚಿನ ಓದಿಗಾಗಿ
ಬದಲಾಯಿಸಿಪರ್ಸಿಯಾ ಅಮೇರಿಕಾನ (ಆವಕಾಡೊ): ಪುರಾತನ ಹೂವುಗಳನ್ನು ಹಣ್ಣಾಗಿಸಲು ಜಿನೋಮಿಕ್ಸ್ ಶಕಕ್ಕೆ ತರುವುದು. ಚಂದರ್ಬಾಲಿ AS, ಆಲ್ಬರ್ಟ್ VA, ಅಶ್ವರ್ತ್ VE, ಕ್ಲೆಗ್ MT, ಲಿಟ್ಜ್ RE, ಸೋಲ್ಟಿಸ್ DE, ಸೋಲ್ಟಿಸ್ PS. ಬಯೋಎಸ್ಯೇಸ್. 2008 ಎಪ್ರಿಲ್;30(4):386-96.PMID 18348249
ಹೊರಗಿನ ಕೊಂಡಿಗಳು
ಬದಲಾಯಿಸಿ- ಪರ್ಡ್ಯು ಹಾರ್ಟಿಕಲ್ಚರಲ್ ಲೆಕ್ಚರ್ ಆನ್ ಆವಕಾಡೋಸ್ ವಿತ್ ಪಿಕ್ಚರ್ಸ್ ಆಫ್ ಕಲ್ಟಿವೇಶನ್ ಫ್ರಮ್ ಫರ್ಟಿಲೈಸೇಶನ್ ಟು ಹಾರ್ವೆಸ್ಟ್ Archived 2010-04-18 ವೇಬ್ಯಾಕ್ ಮೆಷಿನ್ ನಲ್ಲಿ.
- ಆವಕಾಡೊ ಕಲ್ಚರ್ ಆಂಡ್ ಕೇರ್ Archived 2010-03-09 ವೇಬ್ಯಾಕ್ ಮೆಷಿನ್ ನಲ್ಲಿ.
- ಆವಕಾಡೊ ನ್ಯೂಟ್ರಿಷನ್ ಫ್ಯಾಕ್ಟ್ಸ್ ಆಂಡ್ ಹೆಲ್ತ್ ಬೆನಿಫಿಟ್ಸ್ Archived 2016-03-25 ವೇಬ್ಯಾಕ್ ಮೆಷಿನ್ ನಲ್ಲಿ.
- Avocadosource.com - ಆವಕಾಡೊ ಸಂಶೋಧನಾ ಪತ್ರಿಕೆಗಳ ಆನ್‌ಲೈನ್ ಮಾಹಿತಿಕೇಂದ್ರ.
- ಆಸ್ಟ್ರೇಲಿಯನ್ ಆವಕಾಡೋಸ್.
- ಕ್ಯಾಲಿಫೋರ್ನಿಯಾ ರೇರ್ ಫ್ರುಟ್ ಗ್ರೋವರ್ಸ್ Archived 2006-11-07 ವೇಬ್ಯಾಕ್ ಮೆಷಿನ್ ನಲ್ಲಿ. - ಪರ್ಸಿಯಾ ಅಮೇರಿಕಾನ ನಂತರದ ಆವಕಾಡೊ
- ಫ್ರೋಜನ್ ಆವಕಾಡೋಸ್ ಯುರೋಪಿಯನ್ ಡಿಸ್ಟ್ರಿಬ್ಯೂಟರ್ Archived 2010-02-06 ವೇಬ್ಯಾಕ್ ಮೆಷಿನ್ ನಲ್ಲಿ..