ಅರ್ಥ ವ್ಯವಸ್ಥೆ

ಅರ್ಥಶಾಸ್ತ್ರ
ವಿಷಯಗಳ ರೂಪರೇಖೆ
ಸಾಮಾನ್ಯ ವರ್ಗೀಕರಣಗಳು

ಸೂಕ್ಷ್ಮ ಅರ್ಥಶಾಸ್ತ್ರ · ಸ್ಥೂಲ ಅರ್ಥಶಾಸ್ತ್ರ
ಆರ್ಥಿಕ ಚಿಂತನೆಯ ಇತಿಹಾಸ
ಕ್ರಮಶಾಸ್ತ್ರ · ಅಸಾಂಪ್ರದಾಯಿಕ ವಿಧಾನಗಳು

ಕಾರ್ಯವಿಧಾನಗಳು

ಗಣಿತ · ಅರ್ಥಶಾಸ್ತ್ರ ಮಾಪನ ಪದ್ಧತಿ
ಪ್ರಾಯೋಗಿಕ · ರಾಷ್ಟ್ರೀಯ ಹಣಕಾಸು ಲೆಕ್ಕ ವ್ಯವಸ್ಥೆ

ಕ್ಷೇತ್ರ ಮತ್ತು ಉಪಕ್ಷೇತ್ರಗಳು

ವರ್ತನೆ · ಸಾಂಸ್ಕೃತಿಕ · ವಿಕಾಸವಾದಿ
ಬೆಳವಣಿಗೆ · ಅಭಿವೃದ್ಧಿ · ಇತಿಹಾಸ
ಅಂತರರಾಷ್ಟ್ರೀಯ · ಆರ್ಥಿಕ ವ್ಯವಸ್ಥೆಗಳು
ವಿತ್ತ ಮತ್ತು ಹಣಕಾಸು
ಸಾರ್ವಜನಿಕ ಮತ್ತು ಸಮಾಜಕಲ್ಯಾಣ ಅರ್ಥಶಾಸ್ತ್ರ
ಆರೋಗ್ಯ · ದುಡಿಮೆ · ನಿರ್ವಾಹಕ
ವ್ಯಾಪಾರ · ಮಾಹಿತಿ · ಕೌಶಲಯುತ ಸಂವಹನ ಸಿದ್ಧಾಂತ
ಔದ್ಯೋಗಿಕ ಸಂಯೋಜನೆ  · ಕಾನೂನು
ಕೃಷಿ · ಪ್ರಾಕೃತಿಕ ಸಂಪತ್ತು
ಪರಿಸರ · ಜೀವಿ ಪರಿಸ್ಥಿತಿ ವಿಜ್ಞಾನ
ನಗರ ಪ್ರದೇಶದ · ಗ್ರಾಮೀಣ · ಪ್ರಾದೇಶಿಕ

ಪಟ್ಟಿಗಳು

ನಿಯತಕಾಲಿಕಗಳು · ಪ್ರಕಟಣೆಗಳು
ವರ್ಗಗಳು · ವಿಷಯಗಳು · ಅರ್ಥಶಾಸ್ತ್ರಜ್ಞರು

ಅರ್ಥ ವ್ಯವಸ್ಥೆ/ಆರ್ಥಿಕತೆ ಎಂದರೆ ರಾಷ್ಟ್ರ ಅಥವಾ ಇತರೆ ಪ್ರದೇಶದ, ಕಾರ್ಮಿಕವರ್ಗ, ಬಂಡವಾಳ/ಮೂಲಧನ ಹಾಗೂ ಭೂಮಿ ಸಂಪನ್ಮೂಲಗಳು, ಹಾಗೂ ಉತ್ಪಾದನೆ, ವಿನಿಮಯ, ವಿತರಣೆ, ಹಾಗೂ ಆ ಪ್ರದೇಶದಲ್ಲಿನ ಸರಕುಗಳ ಹಾಗೂ ಸೇವೆಗಳ ಬಳಕೆಗಳಲ್ಲಿ ಸಾಮಾಜಿಕವಾಗಿ ಭಾಗವಹಿಸುವ ಆರ್ಥಿಕ ಕಾರಕಸಂಸ್ಥೆಗಳು ಒಳಗೊಂಡಿರುವ ಒಂದು ಆರ್ಥಿಕ ವ್ಯವಸ್ಥೆ. ನಿರ್ದಿಷ್ಟ ಅರ್ಥ ವ್ಯವಸ್ಥೆ/ಆರ್ಥಿಕತೆಯೆಂದರೆ ತಾಂತ್ರಿಕ ವಿಕಸನ, ಇತಿಹಾಸ ಹಾಗೂ ಸಾಮಾಜಿಕ ಸಂಯೋಜನೆ, ಅಷ್ಟೇ ಅಲ್ಲದೇ ಅಲ್ಲಿನ ಭೌಗೋಳಿಕ ವ್ಯವಸ್ಥೆ, ನೈಸರ್ಗಿಕ ಸಂಪನ್ಮೂಲಗಳ ಸಂಪನ್ನತೆ, ಹಾಗೂ ಪರಿಸರ ವ್ಯವಸ್ಥೆಗಳನ್ನು ಪ್ರಮುಖ ಅಂಶಗಳನ್ನಾಗಿ ಒಳಗೊಂಡ ಒಂದು ಪ್ರಕ್ರಿಯೆಯ ಫಲಿತಾಂಶವಾಗಿರುತ್ತದೆ. ಈ ಸಂಗತಿಗಳು ಪರಿಸ್ಥಿತಿ, ಅಂಶಗಳನ್ನು ಹೊಂದಿಸುವುದಲ್ಲದೇ, ಅರ್ಥ ವ್ಯವಸ್ಥೆ/ಆರ್ಥಿಕತೆ ಕಾರ್ಯನಿರ್ವಹಿಸುವ ವಿವಿಧ ಸಂದರ್ಭಗಳು ಹಾಗೂ ಪರಿಮಾಣಗಳನ್ನು ನಿಗದಿಪಡಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಅರ್ಥ ವ್ಯವಸ್ಥೆ/ಆರ್ಥಿಕತೆಗಳನ್ನು ಪರಿಶೀಲಿಸುವ ಸಮಾಜವಿಜ್ಞಾನ ಅಧ್ಯಯನ ಶಾಖೆಗಳ ವ್ಯಾಪ್ತಿಗೆ ಆರ್ಥಿಕತೆಯ, ಸಮಾಜಶಾಸ್ತ್ರ (ಆರ್ಥಿಕ ಸಮಾಜಶಾಸ್ತ್ರ), ಇತಿಹಾಸ (ಆರ್ಥಿಕ ಇತಿಹಾಸ) ಹಾಗೂ ಭೂಗೋಳಶಾಸ್ತ್ರ (ಆರ್ಥಿಕ ಭೂಗೋಳಶಾಸ್ತ್ರ)ಗಳಂತಹಾ ಶಾಖೆಗಳೂ ಸೇರುತ್ತವೆ. ಉತ್ಪಾದನೆ, ವಿತರಣೆ, ವಿನಿಮಯಗಳಲ್ಲದೇ, ಸರಕುಗಳ ಮತ್ತು ಸೇವೆಗಳ ಬಳಕೆಯನ್ನೊಳಗೊಂಡ ಮಾನವ ಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿದ ಕಾರ್ಯೋಪಯೋಗಿ ಕ್ಷೇತ್ರಗಳಾದ ವಾಸ್ತುಶಿಲ್ಪದಿಂದ ಹಿಡಿದು ನಿರ್ವಹಣೆ ಹಾಗೂ ವ್ಯಾವಹಾರಿಕ ಆಡಳಿತಗಳು ಮತ್ತು ಅನ್ವಯಿಕ ವಿಜ್ಞಾನದಿಂದ ಹಿಡಿದು ಹಣಕಾಸು ಕ್ಷೇತ್ರಗಳವರೆಗೆ ವ್ಯಾಪಿಸಿವೆ. ಎಲ್ಲಾ ವಿಧದ ವೃತ್ತಿಗಳು, ಉದ್ಯೋಗಗಳು, ಆರ್ಥಿಕ ಕಾರಕಸಂಸ್ಥೆಗಳು ಅಥವಾ ಆರ್ಥಿಕ ಚಟುವಟಿಕೆಗಳು ಅರ್ಥ ವ್ಯವಸ್ಥೆ/ಆರ್ಥಿಕತೆಗೆ ತಮ್ಮ ಕೊಡುಗೆ ನೀಡುತ್ತವೆ. ಅರ್ಥ ವ್ಯವಸ್ಥೆ/ಆರ್ಥಿಕತೆಯಲ್ಲಿ ಬಳಕೆ, ಉಳಿಕೆ ಹಾಗೂ ಹೂಡಿಕೆಗಳು ಮೂಲ ವ್ಯತ್ಯಾಸಸಾಧ್ಯ ಘಟಕಗಳಾಗಿದ್ದು ಮಾರುಕಟ್ಟೆಯ ಸಮತೋಲನವನ್ನು ನಿರ್ಧರಿಸುತ್ತವೆ. ಆರ್ಥಿಕ ಚಟುವಟಿಕೆಗಳ ಮೂರು ಪ್ರಮುಖ ವಲಯಗಳಿವೆ: ಪ್ರಾಥಮಿಕ/ಪ್ರಥಮ, ಮಾಧ್ಯಮಿಕ/ಮಧ್ಯಮ ಹಾಗೂ ತೃತೀಯ ವಲಯಗಳೆಂದು ಅವುಗಳನ್ನು ಕರೆಯಲಾಗುತ್ತದೆ.

ಪದದ ವ್ಯುತ್ಪತ್ತಿಸಂಪಾದಿಸಿ

ಆಂಗ್ಲ ಪದಗಳಾದ "ಅರ್ಥ ವ್ಯವಸ್ಥೆ/ಆರ್ಥಿಕತೆ" ಹಾಗೂ "ಆರ್ಥಿಕತೆ"ಗಳ ಮೂಲವನ್ನು ಗ್ರೀಕ್‌‌ ಪದಗಳಾದ οἰκονόμος "ಮನೆಯನ್ನು ನಿರ್ವಹಿಸುವ ವ್ಯಕ್ತಿ" ಎಂಬರ್ಥದ ಪದಗಳಷ್ಟು ಹಿಂದಿನವರೆಗೆ ನಿಗಮಿಸಬಹುದಾಗಿದ್ದು (οἴκος "ಮನೆ", ಹಾಗೂ νέμω "ವಿತರಣೆ (ವಿಶೇಷವಾಗಿ, ನಿರ್ವಹಣೆ)"), οἰκονομία "ಗೃಹಕೃತ್ಯ ನಿರ್ವಹಣೆ", ಹಾಗೂ οἰκονομικός "ಗೃಹಕೃತ್ಯ ಅಥವಾ ಕುಟುಂಬಕ್ಕೆ ಸಂಬಂಧಿಸಿದ " ಎಂಬ ಪದಗಳಿಂದ ವ್ಯುತ್ಪನ್ನವಾಗಿವೆ. "ಅರ್ಥ ವ್ಯವಸ್ಥೆ/ಆರ್ಥಿಕತೆ" ಎಂಬರ್ಥ ಹೊಂದಿರುವ ಪದದ ಪ್ರಥಮ ದಾಖಲಿತ ಬಳಕೆಯನ್ನು ಬಹುಶಃ ೧೪೪೦ರಲ್ಲಿ ರಚಿಸಿರಬಹುದಾದ ಗ್ರಂಥದಲ್ಲಿ ಗಮನಿಸಲಾಗಿತ್ತು, ಅದರ ಸಂದರ್ಭದಲ್ಲಿ "ಆರ್ಥಿಕ ವ್ಯವಹಾರಗಳ ನಿರ್ವಹಣೆ", ಎಂಬುದು ಸನ್ಯಾಸಿಧಾಮ/ಆಶ್ರಮದ್ದಾಗಿತ್ತು. ಅರ್ಥ ವ್ಯವಸ್ಥೆ/ಆರ್ಥಿಕತೆ ಎಂಬ ಪದವನ್ನು ನಂತರ "ಒಪ್ಪವಾದ ವ್ಯವಸ್ಥೆ/ಮಿತವ್ಯಯ" ಹಾಗೂ "ಆಡಳಿತ" ಎಂಬುವುಗಳೂ ಸೇರಿದಂತೆ ಮತ್ತಷ್ಟು ಸಾರ್ವತ್ರಿಕ/ಸಾಧಾರಣ ತಾತ್ಪರ್ಯಗಳಲ್ಲಿ ದಾಖಲಿಸಲಾಗಿದೆ. ಬಹುಸಾಮಾನ್ಯವಾಗಿ ಬಳಸಲ್ಪಡುವ ಪ್ರಸ್ತುತ ತಾತ್ಪರ್ಯವಾದ, "ಒಂದು ಪ್ರದೇಶ ಅಥವಾ ರಾಷ್ಟ್ರದ ಆರ್ಥಿಕ ವ್ಯವಸ್ಥೆ", ಎಂಬುದು ೧೯ನೇ ಅಥವಾ ೨೦ನೇ ಶತಮಾನದವರೆಗೆ ವಿಕಾಸಗೊಂಡಿರಲಿಲ್ಲ.[೧]

ಇತಿಹಾಸಸಂಪಾದಿಸಿ

ಪ್ರಾಚೀನ ಕಾಲಸಂಪಾದಿಸಿ

ಯಾವುದೇ ವ್ಯಕ್ತಿ ಅಥವಾ ಸಮೂಹ ಎಲ್ಲಿಯವರೆವಿಗೂ ಸರಕುಗಳನ್ನು ನಿರ್ಮಿಸುವುದು ಹಾಗೂ ವಿತರಿಸುವುದನ್ನು ಮಾಡುತ್ತಿರುವರೋ ಅಥವಾ ಸೇವೆಗಳನ್ನು ನೀಡುತ್ತಿರುವರೋ, ಆಗೆಲ್ಲಾ ಒಂದಲ್ಲಾ ಒಂದು ವಿಧದ ಅರ್ಥ ವ್ಯವಸ್ಥೆ/ಆರ್ಥಿಕತೆಯು ಒಳಗೊಂಡಿರುತ್ತದೆ; ಸಾಮಾಜಿಕ ವ್ಯವಸ್ಥೆಯು ಬೆಳವಣಿಗೆಯಾದಂತೆ ಹಾಗೂ ಹೆಚ್ಚು ಸಂಕೀರ್ಣಗೊಳ್ಳುತ್ತಾ ಹೋದಂತೆ ಆರ್ಥಿಕತೆಗಳೂ ಬೆಳೆಯುತ್ತಾ ಹೋದವು. ಸೂಮರರು ಸರಕುಧನದ ಮೇಲೆ ಬೃಹತ್‌ ಪ್ರಮಾಣದ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಕಟ್ಟಿದರೆ, ಬ್ಯಾ/ಬೇಬಿಲೋನಿಯನ್ನರು ಹಾಗೂ ಅವರ ನೆರೆಹೊರೆಯ ಸಂಸ್ಥಾನಗಳು ಕೆಲಕಾಲದ ನಂತರ ನಮ್ಮ ಅರ್ಥೈಸುವಿಕೆಗೆ ಸನಿಹವಾದ ಸಾಲಗಳ ಮೇಲಿನ ನಿಯಮಗಳು/ಕಾನೂನುಗಳು, ವ್ಯಾವಹಾರಿಕ ಚರ್ಯೆಗಳಿಗೆ ಹಾಗೂ ಖಾಸಗಿ ಆಸ್ತಿಗಳಿಗೆ ಸಂಬಂಧಪಟ್ಟಂತೆ ಕಾನೂನುಬದ್ಧ ಒಪ್ಪಂದಗಳು ಹಾಗೂ ಕಾನೂನು ನಿಯಮಾವಳಿಗಳನ್ನೊಳಗೊಂಡ ಆರ್ಥಿಕತೆಯ ಅತೀವ ಮುಂಚಿತವೆನ್ನಬಹುದಾದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು.[೨] ಬ್ಯಾ/ಬೇಬಿಲೋನಿಯನ್ನರು ಹಾಗೂ ಅವರ ಸಂಸ್ಥಾನಗಳ ನೆರೆಹೊರೆಯ ಸಂಸ್ಥಾನಗಳು ಪ್ರಸಕ್ತ ಬಳಕೆಯಲ್ಲಿರುವ ನಾಗರಿಕ ಸಮಾಜ (ಕಾನೂನು) ಕಲ್ಪನೆಗಳನ್ನು ಹೋಲಬಹುದಾದ ಆರ್ಥಿಕತೆಯ ಸ್ವರೂಪಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದರು.[೩] ನ್ಯಾಯಾಲಯಗಳು, ಕಾರಾಗೃಹಗಳು, ಹಾಗೂ ಸರ್ಕಾರಿ ದಾಖಲೆಗಳನ್ನೆಲ್ಲಾ ಒಳಗೊಂಡ ಪ್ರಪ್ರಥಮ ತಿಳಿಯಲ್ಪಟ್ಟ ವಿಧಿನಿಯಮಗಳನ್ನೊಳಗೊಂಡ ಸಂಪೂರ್ಣ ಕಾನೂನು ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದರು. ಬೆಣೆಲಿಪಿಯ ಆವಿಷ್ಕಾರದ ಅನೇಕ ಶತಮಾನಗಳ ನಂತರ, ಬಳಕೆಯ ಉಪಯೋಗವು ಸಾಲ/ಪಾವತಿ ದಾಖಲೆಗಳು ಹಾಗೂ ತಪಶೀಲು ವಿವರಗಳ ಯಾದಿಗಳನ್ನು ಹೊರತುಪಡಿಸಿ ಪ್ರಥಮ ಬಾರಿಗೆ ಸುಮಾರು ೨೬೦೦ BCಯ ಹೊತ್ತಿಗೆ, ಸಂದೇಶಗಳನ್ನು ಬರೆಯಲು ಹಾಗೂ ಅಂಚೆ ವಿತರಣೆ, ಇತಿಹಾಸ, ದಂತಕಥೆಗಳು, ಗಣಿತಶಾಸ್ತ್ರ, ಖಗೋಳಶಾಸ್ತ್ರೀಯ ದಾಖಲೆಗಳು ಹಾಗೂ ಇತರೆ ವೃತ್ತಿ ಅನ್ವೇಷಣೆಗಳನ್ನು ದಾಖಲಿಸಲು ಬಳಸಲು ಆರಂಭವಾಯಿತು. ಖಾಸಗಿ ಆಸ್ತಿಯು ವಿವಾದಕ್ಕೊಳಗಾದಾಗ ಅದನ್ನು ಹೇಗೆ ವಿಭಜಿಸಬೇಕೆಂಬುದು... ಸಾಲಗಳ ಮೇಲಿನ ಬಡ್ಡಿಯ ಪ್ರಮಾಣ... ಸ್ಥಿರಾಸ್ಥಿಗಳಿಗಾದ ನಷ್ಟ ಅಥವಾ ವ್ಯಕ್ತಿಯೋರ್ವನಿಗಾದ ದೈಹಿಕ ನಷ್ಟಗಳಿಗೆ ನೀಡಬೇಕಾದ ಆಸ್ತಿ ಹಾಗೂ ಹಣಕಾಸಿನ ಪರಿಹಾರಗಳನ್ನು ನಿಗದಿಪಡಿಸುವ ನಿಯಮಗಳು ... 'ತಪ್ಪು/ಅಪರಾಧ ನಡವಳಿಕೆಗಳಿಗೆ' ದಂಡದ ಪ್ರಮಾಣ... ಹಾಗೂ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಿಯಮಬದ್ಧಗೊಳಿಸಿದ ಕಾನೂನುಗಳ ವಿವಿಧ ರೀತಿಯ ಉಲ್ಲಂಘನೆಗಳಿಗೆ ಹಣದ ರೂಪದ ಪರಿಹಾರವನ್ನು ಮಾನಕೀಕರಿಸಲಾಗಿತ್ತು.[೨]

 
ಎಜೀನಾದ ಗ್ರೀಕ್‌‌ ಡ್ರ್ಯಾಮ್‌‌ ನಾಣ್ಯ. ನಾಣ್ಯದ ಮೇಲ್ಭಾಗ: ಭೂಮಿಯ ಆಮೆ/ ಕೆಳಭಾಗ/ಹಿಂಭಾಗ: ΑΙΓ(INA) ಹಾಗೂ ಡಾಲ್ಫಿನ್‌‌‌. ಅತಿ ಪ್ರಾಚೀನವಾದ ಆಮೆ ನಾಣ್ಯವು 700 BCನಷ್ಟು ಹಳೆಯದು

ಪ್ರಾಚೀನ ಅರ್ಥ ವ್ಯವಸ್ಥೆ/ಆರ್ಥಿಕತೆಯು ಪ್ರಮುಖವಾಗಿ ಜೀವನಾಧಾರವಾಗಿದ್ದ ಕೃಷಿಯನ್ನು ಅವಲಂಬಿಸಿತ್ತು. ಷೆಕೆಲ್‌ ಎಂಬುದು ತೂಕ ಹಾಗೂ ಧನಮಾನಕಗಳ ಪ್ರಾಚೀನ ಏಕಮಾನವಾಗಿತ್ತು. ಮೆಸೊಪೊಟಮಿಯಾದಲ್ಲಿ ಸುಮಾರು ೩೦೦೦ BC.ಯ ಅವಧಿಯಲ್ಲಿ ಈ ಪದದ ಪ್ರಥಮ ಬಳಕೆ ಕಂಡುಬಂದಿತಲ್ಲದೇ ಇದು ಬೆಳ್ಳಿ, ತವರ, ತಾಮ್ರ etc.ಗಳಂತಹಾ ವಿವಿಧ ಮಾನಕಗಳಿಗೆ ಸಮೀಕರಿಸಲಾಗುತ್ತಿದ್ದ ನಿರ್ದಿಷ್ಟ ಪ್ರಮಾಣದ ಜವೆಗೋಧಿಯನ್ನು ಸೂಚಿಸುತ್ತಿತ್ತು. ಬ್ರಿಟಿಷ್‌‌ ಪೌಂಡ್‌‌ ಮೂಲತಃ ಒಂದು ಪೌಂಡ್‌‌ ಪ್ರಮಾಣ/ತೂಕದ ಬೆಳ್ಳಿಯನ್ನು ಸೂಚಿಸುವ ಒಂದು ಏಕಮಾನವಾಗಿದ್ದ ಹಾಗೆಯೇ ಬಾರ್ಲಿ/ಜವೆಗೋಧಿ/ಷೆಕೆಲ್‌‌ ಎಂಬ ಮಾನಕವನ್ನು ಸಾರ್ವತ್ರಿಕವಾಗಿ ಮೂಲತಃ ಧನಮಾನಕದ ಏಕಮಾನ ಹಾಗೂ ತೂಕದ ಏಕಮಾನ....ವಾಗಿ ಎರಡೂ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ಬಹುತೇಕ ಜನರ ವಿಚಾರದಲ್ಲಿ ಸರಕುಗಳ ವಿನಿಮಯವು ಸಾಮಾಜಿಕ ಸಂಬಂಧಗಳ ಮುಖಾಂತರ ನಡೆಯುತ್ತಿತ್ತು. ಆಗ ಮಾರುಕಟ್ಟೆಗಳಲ್ಲಿ ವಿನಿಮಯ ವ್ಯಾಪಾರ ನಡೆಸುವ ವ್ಯಾಪಾರಿಗಳೂ ಇದ್ದರು. ಪ್ರಸ್ತುತ ಆಂಗ್ಲ ಪದ 'ಅರ್ಥ ವ್ಯವಸ್ಥೆ/ಆರ್ಥಿಕತೆಯು' ವ್ಯುತ್ಪನ್ನಗೊಂಡ ಪ್ರಾಚೀನ ಗ್ರೀಸ್‌‌ನಲ್ಲಿ, ಅನೇಕ ಜನರು ಹಿಡುವಳಿ ಉತ್ತರಾಧಿಕಾರಿಗಳ ಜೀತದಾಳುಗಳಾಗಿದ್ದರು. ಆರ್ಥಿಕ ವಾದವಿವಾದಗಳು ದುರ್ಭಿಕ್ಷ/ಅಭಾವಗಳಿಂದಾಗಿ ತಲೆದೋರುತ್ತಿದ್ದವು. ಅರಿಸ್ಟಾಟಲ್‌‌ (೩೮೪-೩೨೨ B.C.) ಸರಕುಗಳ ಬಳಕೆ ಬೆಲೆ ಹಾಗೂ ವಿನಿಮಯ ಬೆಲೆಗಳನ್ನು ಪ್ರತ್ಯೇಕಿಸಿದ ಪ್ರಥಮರಾಗಿದ್ದರು. (ಪಾಲಿಟಿಕ್ಸ್‌‌, ಗ್ರಂಥ I.) ಅವರು ವಿಷದೀಕರಿಸಿದ ವಿನಿಮಯ ಅನುಪಾತವು ಸರಕುಗಳ ಬೆಲೆಯ ಅಭಿವ್ಯಕ್ತಿ ಮಾತ್ರವಲ್ಲದೇ ಆ ವ್ಯವಹಾರದಲ್ಲಿ ತೊಡಗಿಕೊಂಡ ವ್ಯಕ್ತಿಗಳ ನಡುವಿನ ಸಂಬಂಧದ ಅಭಿವ್ಯಕ್ತಿ ಕೂಡಾ ಆಗಿತ್ತು. ಹಾಗಾಗಿಯೇ ಇತಿಹಾಸದ ಬಹುತೇಕ ಅವಧಿಗಳಲ್ಲಿ ಅರ್ಥ ವ್ಯವಸ್ಥೆ/ಆರ್ಥಿಕತೆಯು ಸ್ಥಿರ ವಿನಿಮಯ ಅನುಪಾತಗಳನ್ನೊಳಗೊಂಡ ಆಳ್ವಿಕೆ, ಸರಕಾರ, ಧರ್ಮ, ಸಂಸ್ಕೃತಿ, ಹಾಗೂ ಸಂಪ್ರದಾಯಗಳಂತಹಾ ವ್ಯವಸ್ಥೆಗಳ ವಿರುದ್ಧವಾಗಿಯೇ ವ್ಯವಹರಿಸುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]

ಮಧ್ಯ ಕಾಲೀನ ಯುಗಸಂಪಾದಿಸಿ

ಮಧ್ಯ ಯುಗದ ಅವಧಿಯಲ್ಲಿ, ನಾವು ಪ್ರಸ್ತುತ ಕಾಲದಲ್ಲಿ ಅರ್ಥ ವ್ಯವಸ್ಥೆ/ಆರ್ಥಿಕತೆಯೆಂದು ಕರೆಯುವ ವ್ಯವಸ್ಥೆಯು ಕನಿಷ್ಟ ಜೀವನಾಧಾರ ಮಟ್ಟಕ್ಕಿಂತ ಹೆಚ್ಚಿನ ಮಟ್ಟದ್ದೇನೂ ಆಗಿರಲಿಲ್ಲ. ಬಹುತೇಕ ವಿನಿಮಯವು ಸಾಮಾಜಿಕ ಸಮೂಹಗಳಲ್ಲಿ ಅಂತರ್ಗತವಾಗಿಯೇ ನಡೆಯುತ್ತಿರುತ್ತಿತ್ತು. ಇದಕ್ಕೆ ಮೇಲ್ಪಟ್ಟು, ಅನೇಕ ಶ್ರೇಷ್ಠ ವಿಜೇತರು ಸಟ್ಟಾ ವ್ಯಾಪಾರದ ಬಂಡವಾಳ/ಮೂಲಧನವನ್ನು (ವೆಂಚುರಾ ದಿಂದ, ital.; ನಷ್ಟ ) ತಮ್ಮ ಆಕ್ರಮಣ/ವಶಪಡಿಕೆಗಳ ವೆಚ್ಚವನ್ನು ಸರಿದೂಗಿಸಲು ತೊಡಗಿಸಿದರು. ಹೀಗೆ ತೊಡಗಿಸಿದ ಬಂಡವಾಳ/ಮೂಲಧನವು ನವ ವಿಶ್ವಗಳಿಂದ/ವಶಪಡಿಸಿಕೊಂಡ ಹೊಸ ಪ್ರದೇಶಗಳಿಂದ ಅವರು ತರುವ ಸರಕುಗಳ ಮುಖಾಂತರ ಮರುಗಳಿಕೆಯಾಗಬೇಕಾಗಿತ್ತು. ಜಾಕೊಬ್‌ ಫಗ್ಗರ್‌‌ (೧೪೫೯–೧೫೨೫) ಹಾಗೂ ಗಿಯೋವಾನ್ನಿ ಡಿ ಬಿಕಕಿ ಡೆ' ಮೆಡಿಸಿ (೧೩೬೦–೧೪೨೮)ಗಳಂತಹಾ ವ್ಯಾಪಾರಿಗಳು ಮೊದಲ ಬ್ಯಾಂಕ್‌‌ಗಳನ್ನು ಕಂಡುಹಿಡಿದರು.[ಸೂಕ್ತ ಉಲ್ಲೇಖನ ಬೇಕು] ಮಾರ್ಕೋ ಪೋಲೋ (೧೨೫೪–೧೩೨೪), ಕ್ರಿಸ್ಟೋಫರ್‌‌ ಕೊಲಂಬಸ್‌‌ (೧೪೫೧–೧೫೦೬) ಹಾಗೂ ವಾಸ್ಕೋ ಡಿ ಗಾಮರವರುಗಳ (೧೪೬೯–೧೫೨೪) ಶೋಧನೆಗಳು ಪ್ರಪ್ರಥಮ ಜಾಗತಿಕ ಅರ್ಥ ವ್ಯವಸ್ಥೆ/ಆರ್ಥಿಕತೆಯ ಹುಟ್ಟಿಗೆ ಕಾರಣವಾದವು. ಮೊತ್ತಮೊದಲಿನ ಉದ್ಯಮಗಳು ಮಾರಾಟದ ಸಂಸ್ಥೆಗಳಾಗಿದ್ದವು . ೧೫೧೩ರಲ್ಲಿ ಪ್ರಥಮ ಸ್ಟಾಕ್‌/ಷೇರು ವಿನಿಮಯ ಕೇಂದ್ರವನ್ನು ಆಂಟ್‌ವರ್ಪೆನ್‌ನಲ್ಲಿ ಕಂಡುಹಿಡಿಯ/ನಡೆಸಲಾಯಿತು. ಆ ಸಮಯದಲ್ಲಿ ಅರ್ಥ ವ್ಯವಸ್ಥೆ/ಆರ್ಥಿಕತೆ ಎಂದರೆ ಪ್ರಮುಖವಾಗಿ ವ್ಯಾಪಾರ ಮಾತ್ರವಾಗಿತ್ತು

ಆಧುನಿಕ ಪೂರ್ವ ಕಾಲಸಂಪಾದಿಸಿ

ಯುರೋಪ್‌ನ ರಾಷ್ಟ್ರಗಳು ವಶಪಡಿಸಿಕೊಂಡ ಪ್ರದೇಶಗಳು ಐರೋಪ್ಯ ರಾಷ್ಟ್ರಗಳ/ಸರಕಾರಗಳ ಶಾಖೆಗಳಾಗಿ ಮಾರ್ಪಟ್ಟು ವಸಾಹತುಗಳು/ಕಾಲೊನಿಗಳು ಎಂದು ಕರೆಸಿಕೊಂಡವು. ಏಳಿಗೆ ಹೊಂದುತ್ತಿದ್ದ ರಾಷ್ಟ್ರಗಳಾದ ಸ್ಪೇನ್‌, ಪೋರ್ಚುಗಲ್‌‌‌, ಫ್ರಾನ್ಸ್‌‌‌, ಗ್ರೇಟ್‌‌ ಬ್ರಿಟನ್‌ ಹಾಗೂ ನೆದರ್‌ಲೆಂಡ್ಸ್‌‌ಗಳ ರಾಷ್ಟ್ರೀಯ ಸರ್ಕಾರಗಳು ತಮ್ಮ ರಾಷ್ಟ್ರೀಯ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲು ಸುಂಕಗಳನ್ನು ಹಾಗೂ ತೆರಿಗೆಗಳನ್ನು ವಿಧಿಸಿ ವ್ಯಾಪಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದವು. ವ್ಯಾಪಾರೀ ಸಿದ್ಧಾಂತವೆಂದು ಕರೆಯಲ್ಪಡುವ ಒಂದು ವ್ಯವಸ್ಥೆಯು (ಮರ್ಕೆಟಾರ್‌ ‌ನಿಂದ, lat.: ವ್ಯಾಪಾರಿ) ಖಾಸಗಿ ಸಂಪತ್ತು ಹಾಗೂ ಸಾರ್ವಜನಿಕ ಹಿತಾಸಕ್ತಿಗಳ ನಡುವೆ ಮಧ್ಯವರ್ತಿಯಾಗಿ ವರ್ತಿಸಿದ ಪ್ರಪ್ರಥಮ ಪ್ರಯತ್ನವಾಗಿತ್ತು. ಯೂರೋಪ್‌‌ನಲ್ಲಿ ಜಾತ್ಯತೀತತೆಯು ಸರ್ಕಾರಗಳು ಪಟ್ಟಣ/ನಗರಗಳ ಅಭಿವೃದ್ಧಿಗಾಗಿ ಚರ್ಚ್‌ಗಳ ಅಗಾಧ ಆಸ್ತಿಗಳನ್ನು ಬಳಸಲು ಅನುವು ಮಾಡಿಕೊಟ್ಟಿತು. ಶ್ರೀಮಂತರ/ನೋಬಲ್‌ ಜನರ ಪ್ರಭಾವವು ಕ್ಷೀಣಿಸತೊಡಗಿತು. ಅರ್ಥ ವ್ಯವಸ್ಥೆ/ಆರ್ಥಿಕತೆಯ ಸರ್ಕಾರಿ ಕಾರ್ಯದರ್ಶಿಗಳ ಇಲಾಖೆಯು ಪ್ರಥಮವಾಗಿ ಕಾರ್ಯಾರಂಭ ಮಾಡಿತು. ಆಮ್‌ಷೆಲ್‌ ಮೇಯರ್‌‌ ರಾಥ್ಸ್‌‌ಚೈಲ್ಡ್‌‌ (೧೭೭೩–೧೮೫೫) ನಂತಹಾ ಹಣಕಾಸು ಸಂಸ್ಥೆಗಳು ಯುದ್ಧಗಳು ಹಾಗೂ ಶಾಶ್ವತ ಸ್ಥಾಪನೆಗಳು/ಮೂಲಭೂತ ವ್ಯವಸ್ಥೆಗಳಂತಹಾ ರಾಷ್ಟ್ರೀಯ ಯೋಜನೆಗಳಿಗೆ ಹಣಕಾಸು ಒದಗಿಸಲು ಆರಂಭಿಸಿದವು. ಆಗಿನಿಂದ ಅರ್ಥ ವ್ಯವಸ್ಥೆ/ಆರ್ಥಿಕತೆ ಎಂಬುದರ ಅರ್ಥವು ರಾಷ್ಟ್ರೀಯ ಅರ್ಥ ವ್ಯವಸ್ಥೆ/ಆರ್ಥಿಕತೆ ಎಂಬ ರಾಷ್ಟ್ರ/ಸರ್ಕಾರವೊಂದರ ಪ್ರಜೆಗಳು ನಡೆಸುವ ಆರ್ಥಿಕ ಚಟುವಟಿಕೆಗಳ ಪ್ರಸ್ತಾಪವೆಂದೆನಿಸಿಕೊಳ್ಳತೊಡಗಿತು.

ಕೈಗಾರಿಕಾ ಕ್ರಾಂತಿಸಂಪಾದಿಸಿ

ಪದಶಃ ಅರ್ಥದ ಪ್ರಕಾರ ಪ್ರಥಮ ಅರ್ಥಶಾಸ್ತ್ರಜ್ಞರೆಂದರೆ ಸ್ಕಾಟ್‌ಲೆಂಡ್‌ನ/ಸ್ಕಾಟ್ಸ್‌‌ಮನ್‌‌ ಆಡಂ ಸ್ಮಿತ್‌ (೧೭೨೩–೧೭೯೦)ರವರು. ಅವರು ರಾಷ್ಟ್ರೀಯ ಅರ್ಥ ವ್ಯವಸ್ಥೆ/ಆರ್ಥಿಕತೆಗಳ ಮೂಲಭೂತ ಅಂಶಗಳನ್ನು ವಿಷದಪಡಿಸಿದ್ದರು: ಉತ್ಪನ್ನಗಳನ್ನು ಸ್ಪರ್ಧೆ - ವಿತರಣೆ ಹಾಗೂ ಬೇಡಿಕೆಗಳು ಹಾಗೂ ದುಡಿಮೆಯ ಹಂಚಿಕೆಯ ತಂತ್ರಗಳ ನೆರವಿನಿಂದ ರೂಪುಗೊಳ್ಳುವ ಅದರ ಸ್ವಾಭಾವಿಕ ಬೆಲೆಗೆ ನೀಡಲಾಗುತ್ತಿತ್ತು. ಅವರ ಭಾವನೆಯ ಪ್ರಕಾರ ಮಾನವನ ಸ್ವಹಿತಾಸಕ್ತಿಯೇ ಮುಕ್ತ ವ್ಯಾಪಾರದ ಮೂಲಭೂತ ಉದ್ದೇಶ. ಸ್ವಹಿತಾಸಕ್ತಿ ಆಧಾರಕಲ್ಪನೆ ಎಂದು ಕರೆಯಲಾದ ಕಲ್ಪನೆಯು ಆರ್ಥಿಕತೆಯ ಮಾನವಶಾಸ್ತ್ರೀಯ ತಳಹದಿಯಾಗಿದೆ. ಥಾಮಸ್‌‌ ಮಾಲ್ತಸ್‌‌ (೧೭೬೬–೧೮೩೪) ಜನಸಂಖ್ಯಾ ಹೆಚ್ಚಳದ ಸಮಸ್ಯೆಯನ್ನು ಪರಿಹರಿಸಲು ಪೂರೈಕೆ ಹಾಗೂ ಬೇಡಿಕೆಯ ಕಲ್ಪನೆಯನ್ನು ಸೂಚಿಸಿದರು. ಯುನೈಟೆಡ್‌‌ ಸ್ಟೇಟ್ಸ್‌‌ ಆಫ್‌‌ ಅಮೇರಿಕಾವು ಎಲ್ಲಾ ಐರೋಪ್ಯ ರಾಷ್ಟ್ರಗಳಿಂದ ಮುಕ್ತ ಆರ್ಥಿಕ ವಿಕಸನವನ್ನು ಹುಡುಕಿಕೊಂಡು ಹೊರಟ ದಶಲಕ್ಷಗಳಷ್ಟು ಮಂದಿ ವಲಸೆಗಾರರು ಬಂದಿಳಿಯುವ ರಾಷ್ಟ್ರವಾಯಿತು. ಯೂರೋಪ್‌‌ನ ನಿರಂಕುಶ ಬಂಡವಾಳಶಾಹಿಯು ವ್ಯಾಪಾರೀ ಸಿದ್ಧಾಂತದ ವ್ಯವಸ್ಥೆಯ (ಪ್ರಸ್ತುತ: ಆರ್ಥಿಕ ರಕ್ಷಣಾ ನೀತಿ) ಬದಲಿಯಾಗಿ ವ್ಯಾಪಿಸತೊಡಗಿತಲ್ಲದೇ ಆರ್ಥಿಕ ಅಭಿವೃದ್ಧಿಗೆ ದಾರಿಯಾಯಿತು. ಆ ಅವಧಿಯನ್ನು ಪ್ರಸ್ತುತ ಕೈಗಾರಿಕಾ ಕ್ರಾಂತಿ ಎಂದು ಕರೆಯಲಾಗುತ್ತದೆಯಲ್ಲದೇ ಉತ್ಪಾದನೆ ಹಾಗೂ ದುಡಿಮೆಯ ಹಂಚಿಕೆಯ ವ್ಯವಸ್ಥೆಯು ಸರಕುಗಳ ಸಾಮೂಹಿಕ ಉತ್ಪಾದನೆಗೆ ದಾರಿ ಮಾಡಿಕೊಟ್ಟಿತು.

ಕಮ್ಯುನಿಸಮ್‌‌/ಸಾಮುದಾಯಿಕ ಸಿದ್ಧಾಂತ ಹಾಗೂ ಅದರ ಬಂಡವಾಳಶಾಹಿತ್ವದ ಬಗೆಗಿನ ನೋಟಸಂಪಾದಿಸಿ

ಇಂಗ್ಲೆಂಡ್‌‌ನಲ್ಲಿ ಆರಂಭಗೊಂಡ, ಯಾಂತ್ರೀಕರಣ/ಯಂತ್ರೀಕರಣ, ಹಾಗೂ ಸಾರ್ವಜನಿಕ ಆಸ್ತಿಗಳ ವಶಪಡಿಕೆಗಳ ಏಕಕಾಲಿಕ ಪ್ರಕ್ರಿಯೆಗಳು, ಬಂಡವಾಳ/ಮೂಲಧನಗಳ ನಿಯಂತ್ರಕರ ಶ್ರೀಮಂತಿಕೆಯನ್ನು, ಹಾಗೂ ಬಹುತೇಕ ಜನಸಮೂಹದ ಸಾಮೂಹಿಕ ಸಮಸ್ಯೆಗಳಾದ ಬಡತನ, ಉಪವಾಸದ/ಹಸಿವಿನ ಸಮಸ್ಯೆ, ನಗರೀಕರಣ ಹಾಗೂ ದಿವಾಳಿತನಗಳ ಏರಿಕೆಗೆ ಕಾರಣವಾಯಿತು[ಸೂಕ್ತ ಉಲ್ಲೇಖನ ಬೇಕು]. ಕಾರ್ಲ್‌‌ ಮಾರ್ಕ್ಸ್‌‌ (೧೮೧೮–೧೮೮೩) ಹಾಗೂ ಜರ್ಮನ್‌‌ ಕೈಗಾರಿಕೋದ್ಯಮಿ ಹಾಗೂ ತತ್ವಜ್ಞಾನಿ ಫ್ರೆಡ್‌ರಿಕ್‌‌ ಎಂಗೆಲ್ಸ್‌‌, (೧೮೨೦–೧೮೯೫)ರಂತಹವರು ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು "ಬಂಡವಾಳಶಾಹಿತ್ವದ ವ್ಯವಸ್ಥೆ" ಎಂದು ಕರೆಯಲು ಇದು ಕಾರಣವಾಯಿತು. ಬಂಡವಾಳಶಾಹಿತ್ವವು ಕಾರ್ಮಿಕ ಹಾಗೂ ಬಂಡವಾಳಗಾರರ ನಡುವೆ ದುಡಿಮೆಯ ಹಂಚಿಕೆ, ಉತ್ಪಾದನೆಯ ಸಾಧನಗಳನ್ನು ನೇರ ಉತ್ಪಾದಕರಿಂದ ಪ್ರತ್ಯೇಕಿಸಿ ಬದಲಿಗೆ ಪರಾವಲಂಬಿ ಬಂಡವಾಳಶಾಹಿ ವರ್ಗದ ಸ್ವಾಮ್ಯಕ್ಕೆ ಒಳಪಡಿಸಲಾಗುತ್ತದೆ. ಮಾರ್ಕ್ಸ್‌‌ ಹಾಗೂ ಎಂಗೆಲ್ಸ್‌‌ ಬಂಡವಾಳಶಾಹಿತ್ವದಡಿಯಲ್ಲಿ, ಕಾರ್ಮಿಕ ವರ್ಗವು ಹೆಚ್ಚುವರಿ ಮೌಲ್ಯದ ಸರಕನ್ನು ಉತ್ಪಾದಿಸಿದ್ದರೂ, ಅದರ ಅಲ್ಪ ಭಾಗವನ್ನು ಮಾತ್ರವೇ ಅವರಿಗೆ ಕನಿಷ್ಠ ಜೀವನಾಧಾರವಾಗಿ ಮರಳಿ ಕೂಲಿಯ ರೂಪದಲ್ಲಿ ನೀಡಲಾಗುತ್ತದೆ ಎಂದು ನಂಬಿದ್ದರು. ಉಳಿದ ಹೆಚ್ಚುವರಿ ಭಾಗವನ್ನು ಲಾಭಾಂಶವಾಗಿ ಇಟ್ಟುಕೊಂಡು ಉತ್ಪಾದನಾ ಚಕ್ರದಲ್ಲಿ ಬಂಡವಾಳಗಾರರು ಮರಳಿ ತೊಡಗಿಸುತ್ತಾರೆ. ಮಾರುಕಟ್ಟೆಯ ಸ್ಪರ್ಧಾತ್ಮಕ ಚಾಲಕಗಳು ಬಂಡವಾಳ/ಮೂಲಧನವನ್ನು ನಿರಂತರವಾಗಿ "ಮತ್ತಷ್ಟು ಸಂಗ್ರಹಗೊಳಿಸುವ ಉದ್ದೇಶದಿಂದಲೇ" ಸಂಗ್ರಹಿಸುವುದಕ್ಕೆ ಚಾಲನೆ ನೀಡಿ, ಏಕಸ್ವಾಮ್ಯಗಳು, ಆರ್ಥಿಕ ಬಿಕ್ಕಟ್ಟು ಹಾಗೂ ಸಾಮ್ರಾಜ್ಯಶಾಹಿತ್ವಗಳಿಗೆ ದಾರಿ ಮಾಡಿಕೊಡುತ್ತವೆ. ಮಾರ್ಕ್ಸ್‌‌ ಹಾಗೂ ಎಂಗೆಲ್ಸ್‌‌ ಬಂಡವಾಳಶಾಹಿತ್ವವನ್ನು ತಮ್ಮದೇ ಆದ ಆಂತರಿಕ ವಿರೋಧಿತ್ವಗಳನ್ನು ಹೊಂದಿರುವ ಊಳಿಗಮಾನ್ಯ ಪದ್ಧತಿ ಹಾಗೂ ಬೇಟೆಗಾರ-ಸಂಗ್ರಹಣೆಕಾರ ಸಮುದಾಯಗಳ ಐತಿಹಾಸಿಕವಾಗಿ-ನಿರ್ದಿಷ್ಟವಾದ ಉತ್ಪಾದನೆಯ ಪದ್ಧತಿಯಾಗಿ ಭಾವಿಸಿದ್ದರು. ಬಂಡವಾಳಶಾಹಿತ್ವವು ನೇರ ಉತ್ಪಾದಕರು ತಮ್ಮ ದುಡಿಮೆಯ ಪರಿಸ್ಥಿತಿ ಅಥವಾ ಉತ್ಪಾದನೆಯ ಸಾಧನಗಳ ಬಗ್ಗೆ ಯಾವುದೇ ನಿಯಂತ್ರಣ ಇಲ್ಲದ ಪ್ರಪ್ರಥಮ ಉತ್ಪಾದನೆಯ ಪದ್ಧತಿಯೆನಿಸಿದೆ. ಕಾರ್ಮಿಕ ವರ್ಗದ ಜೀವನಮಟ್ಟದ ಇಳಿಯತೊಡಗುವಿಕೆಯು ಕಾರ್ಮಿಕರನ್ನು ಒಂದುಗೂಡಿ ತಿರುಗಿಬಿದ್ದು ಪ್ರತಿಭಟಿಸುವಂತೆ ಮಾಡಿ ವರ್ಗಸಂಘರ್ಷಕ್ಕೆಡೆ ಮಾಡಿತಲ್ಲದೇ, ಅಂತಿಮವಾಗಿ ನೇರ ಉತ್ಪಾದಕರಾದ - ಕಾರ್ಮಿಕ ವರ್ಗವು - ಲಾಭಾಂಶಗಳ ಸಂಗ್ರಹಣೆಯ ಬದಲಿಗೆ ತಮ್ಮ ಸಾಧಾರಣ ಜೀವನಾಧಾರಕ್ಕೆ ಅವಶ್ಯಕವಾದುದನ್ನು ಪೂರೈಸುವಷ್ಟು ಮಾತ್ರವೇ ಆಗುವಂತೆ ಸ್ವತಃ ಉತ್ಪಾದನೆಯನ್ನು ನಿಯಂತ್ರಿಸಬಲ್ಲ ವ್ಯವಸ್ಥೆಯು ಉಂಟಾಗುವಂತಹಾ ಕಾರ್ಮಿಕವರ್ಗದ ಕ್ರಾಂತಿಯ ಮೂಲಕ ಬಂಡವಾಳಶಾಹಿ ಸರ್ಕಾರವನ್ನು ಕಿತ್ತುಹಾಕಿ ಪ್ರಜಾಪ್ರಭುತ್ವವಾಗಿ ಯೋಜಿಸಿದ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ರಚಿಸಿದರು. ಆದ್ದರಿಂದಲೇ ಕಮ್ಯುನಿಸ್ಟ್‌‌ ಮ್ಯಾನಿಫೆಸ್ಟೋ ಗ್ರಂಥದಲ್ಲಿ ಮಾರ್ಕ್ಸ್‌‌ ಹಾಗೂ ಎಂಗೆಲ್ಸ್‌‌ ಬಂಡವಾಳಶಾಹಿತ್ವವು, ನಗರೀಕೃತಗೊಂಡ ಕಾರ್ಮಿಕವರ್ಗವನ್ನು ಅಸ್ತಿತ್ವಕ್ಕೆ ತರುತ್ತಾ ತನ್ನದೇ "ಸಮಾಧಿ ತೋಡುವವರ ತಂಡ"ವನ್ನು ಕಟ್ಟಲು ಹೊರಟಿದೆಯೆಂದು ಹಾಗೂ ಸಂದರ್ಭದ ವಸ್ತುಸ್ಥಿತಿ ಹಾಗೂ ಪರಿಸ್ಥಿತಿಗಳು ವರ್ಗರಹಿತ ಸಮಾಜವಾದಿ ಸಮಾಜವು ರೂಪುಗೊಳ್ಳಲು ಪಕ್ವವಾಗತೊಡಗಿದೆ ಎಂದೂ ವಿಷದಪಡಿಸಿದ್ದರು. ಪ್ರಪ್ರಥಮ ಕೇಂದ್ರಿತವಾಗಿ ಯೋಜಿತವಾದ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು 1917ರ ರಷ್ಯನ್‌ ಕ್ರಾಂತಿಯ ನಂತರ, ಬೋಲ್ಷೆವಿಕ್‌ ಪಾರ್ಟಿ/ಪಕ್ಷದ ನೇತೃತ್ವದಲ್ಲಿ ಕಟ್ಟಲಾಯಿತು, ಇದರಲ್ಲಿ ಉತ್ಪಾದನೆ (ಹಾಗೂ ಸಾಮಾಜಿಕ ಜೀವನ)ವು ಸೋವಿಯೆಟ್ಸ್‌‌ ಎಂದು ಕರೆಯಲಾಗುತ್ತಿದ್ದ ಕಾರ್ಮಿಕರ ಸಮಾಲೋಚನಾ ಸಮಿತಿಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಇರುತ್ತಿತ್ತು. ಇದೇ ಮಾದರಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಹಿಂದೆ ಕರೆಸಿಕೊಳ್ಳಬಹುದಾದ ಕಾರ್ಮಿಕ ಪ್ರತಿನಿಧಿಗಳ ಸಮಾಲೋಚನ ಸಮಿತಿಗಳು ೧೯೩೬ರ ಸ್ಪ್ಯಾನಿಷ್‌ ಕ್ರಾಂತಿ, ಪೋರ್ಚುಗಲ್‌‌ನಲ್ಲಿ ನಡೆದ ೧೯೭೪ರ ಕಾರ್ನೇಷನ್‌ ಕ್ರಾಂತಿ, ೧೯೭೯ರ ಇರಾನ್‌‌ನ ಕ್ರಾಂತಿ ಮತ್ತು ೧೯೮೦ರ ಪೋಲೆಂಡ್‌ನಲ್ಲಿನ ಐಕಮತ್ಯದ ಪ್ರಗತಿಗಳೂ ಸೇರಿದಂತೆ ನಂತರದ ಕ್ರಾಂತಿಗಳು ಹಾಗೂ ಕ್ರಾಂತಿಕಾರಿ ಸಂದರ್ಭಗಳಲ್ಲಿ ೨೦ನೇ ಶತಮಾನದುದ್ದಕ್ಕೂ ಅಸ್ತಿತ್ವದಲ್ಲಿದ್ದವು.

ವಿಶ್ವ ಸಮರ IIರ ನಂತರದ ಅವಧಿಸಂಪಾದಿಸಿ

ಎರಡು ವಿಶ್ವ ಸಮರಗಳ ಹಾಗೂ ವಿಧ್ವಂಸಕ ಬೃಹತ್‌ ಆರ್ಥಿಕ ದುಸ್ಥಿತಿಗಳ ಅರಾಜಕತ್ವದ ನಂತರ, ರಾಜನೀತಿ ನಿರೂಪಕರು ಅರ್ಥ ವ್ಯವಸ್ಥೆ/ಆರ್ಥಿಕತೆಯ ಪಥವನ್ನು ನಿಯಂತ್ರಿಸುವ ನವೀನ ಮಾರ್ಗಗಳನ್ನು ಹುಡುಕತೊಡಗಿದ್ದರು. ಇದೆಲ್ಲವನ್ನೂ ಅನ್ವೇಷಿಸಿದ್ದದ್ದು ಹಾಗೂ ಚರ್ಚಿಸಿದ್ದು ನವೀನ ಉದಾರತಾ ಸಿದ್ಧಾಂತದ ಪಿತಾಮಹರುಗಳೆನಿಸಿಕೊಳ್ಳಬಹುದಾದ ಜಾಗತಿಕ ಮುಕ್ತ ವ್ಯಾಪಾರ ವ್ಯವಸ್ಥೆಯನ್ನು ಸಮರ್ಥಿಸುತ್ತಿದ್ದ ಫ್ರೆಡ್‌‌ರಿಕ್‌‌ ಆಗಸ್ಟ್‌‌ ವಾನ್‌ ಹಯೆಕ್‌ (೧೮೯೯–೧೯೯೨) ಹಾಗೂ ಮಿಲ್ಟನ್‌‌ ಫ್ರೀಡ್‌ಮನ್‌ (೧೯೧೨–೨೦೦೬). ಆದಾಗ್ಯೂ, ಇದರ ಬಗ್ಗೆ ಮೇಲುಗೈಯಾಗಿ ಚಾಲ್ತಿಯಲ್ಲಿದ್ದ ಅಭಿಪ್ರಾಯವೆಂದರೆ ಜಾನ್‌‌ ಮೇನರ್ಡ್‌ ಕೀನೆಸ್‌‌ (೧೮೮೩–೧೯೪೬) ಎಂಬುವವರು ಸಮರ್ಥಿಸುತ್ತಿದ್ದ ಸರ್ಕಾರವೇ ಮಾರುಕಟ್ಟೆಗಳ ಮೇಲೆ ಪ್ರಭಾವಶಾಲಿಯಾದ ನಿಯಂತ್ರಣವಿಟ್ಟುಕೊಳ್ಳಬಹುದಾದ ವ್ಯವಸ್ಥೆ. ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಆರ್ಥಿಕ ಬೆಳವಣಿಗೆಯನ್ನು ಪ್ರೇರೇಪಿಸಲು ಸಮಷ್ಟಿ ಬೇಡಿಕೆಗಳ ಕುಶಲ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಸೂಚಿಸುವ ಸಿದ್ಧಾಂತವನ್ನು ಅವರ ಗೌರವಾರ್ಥವಾಗಿ ಕೀನೆಸಿಯಾನಿಸಮ್‌‌ ಎಂದು ಕರೆಯಲಾಗುತ್ತದೆ. ೧೯೫೦ರ ದಶಕದ ಉತ್ತರಾರ್ಧದಲ್ಲಿ ಅಮೇರಿಕಾ ಹಾಗೂ ಯೂರೋಪ್‌‌ಗಳಲ್ಲಿನ ನಡೆದ ಆರ್ಥಿಕ ಅಭಿವೃದ್ಧಿ — ಅನೇಕವೇಳೆ ವಿರ್ಟ್ಸ್‌ಚಾಫ್ಟ್‌‌ಸ್ವಂಡರ್‌‌ (ger: ಆರ್ಥಿಕ ಚಮತ್ಕಾರ ) ಎಂದು ಕರೆಯಲಾಗುವ — ಅರ್ಥ ವ್ಯವಸ್ಥೆ/ಆರ್ಥಿಕತೆಯ ನವೀನ ಸ್ವರೂಪವನ್ನು ಚಾಲ್ತಿಗೆ ಕರೆತಂದಿತಲ್ಲದೇ : ಬೃಹತ್‌/ಸಾಮೂಹಿಕ ಬಳಕೆಯ ಅರ್ಥ ವ್ಯವಸ್ಥೆ/ಆರ್ಥಿಕತೆಗೆ ಚಾಲನೆ ನೀಡಿತು. ೧೯೫೮ರಲ್ಲಿ ಜಾನ್‌ ಕೆನ್ನೆತ್‌‌ ಗಲ್‌ಬ್ರೈತ್‌‌ (೧೯೦೮–೨೦೦೬)ರವರು ಸಂಪದ್ಭರಿತ ಸಮಾಜದ ಬಗ್ಗೆ ಪ್ರಸ್ತಾಪಿಸಿದ ಪ್ರಥಮರೆನಿಸಿಕೊಂಡರು. ಬಹುತೇಕ ರಾಷ್ಟ್ರಗಳಲ್ಲಿ ಆರ್ಥಿಕ ವ್ಯವಸ್ಥೆಯನ್ನು ಸಾಮಾಜಿಕ ಮಾರುಕಟ್ಟೆಯ ಅರ್ಥ ವ್ಯವಸ್ಥೆ/ಆರ್ಥಿಕತೆ ಎಂದು ಕರೆಯಲಾಗುತ್ತದೆ.

ಉತ್ತರ-ಆಧುನಿಕ ಅರ್ಥ ವ್ಯವಸ್ಥೆ/ಆರ್ಥಿಕತೆಸಂಪಾದಿಸಿ

ಆರ್ಥಿಕತಜ್ಞ ರಾಬರ್ಟ್‌ ರೇ/ರೀಚ್‌‌ರ ಪ್ರಕಾರ, "ಸಮಗ್ರವಾಗಿ ಸುವರ್ಣಯುಗ ಎನ್ನಲಾಗದ" (WW IIರಿಂದ ಮಧ್ಯ-೧೯೭೦ರ ದಶಕದ ಅವಧಿ) ಅವಧಿಯು ಪ್ರಸಕ್ತ ಜಾಗತಿಕ ಅರ್ಥ ವ್ಯವಸ್ಥೆ/ಆರ್ಥಿಕತೆ, ಅಥವಾ ಮಹತ್‌‌ಬಂಡವಾಳಶಾಹಿತ್ವ ವ್ಯವಸ್ಥೆಯು ಉಚ್ಛ್ರಾಯಕ್ಕೆ ಬರಲು ದಾರಿ ಮಾಡಿಕೊಟ್ಟಿತು.[೪] ಈ ಆರ್ಥಿಕ ಕ್ರಾಂತಿಯು ಪಾಶ್ಚಿಮಾತ್ಯ ಸಂಸ್ಕೃತಿಗಳ ತೀವ್ರಗಾಮಿ ರೂಪಾಂತರವಾಗುವ ಅವಧಿಯಲ್ಲಿಯೇ ಸಂಭವಿಸಿತಲ್ಲದೇ, ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳ ರಾಜಕೀಯ ಚಟುವಟಿಕೆಗಳಲ್ಲಿ ಮಿತಜನತಂತ್ರೀಯ/ಶ್ರೀಮಂತಪ್ರಭುತ್ವಕ್ಕೊಳಪಡುವ ಪ್ರವೃತ್ತಿಗಳ ಏರಿಕೆಗೆ ಕಾರಣವಾಯಿತು. ವಿಶ್ವ ಬ್ಯಾಂಕ್‌‌ನ, ವಿಶ್ವ ವ್ಯಾಪಾರ ಸಂಘಟನೆ ಹಾಗೂ ಜಾಗತಿಕ ಸಂಸ್ಥೆಗಳ ವಿಶ್ವ ಆರ್ಥಿಕ ಫೋರಮ್‌‌‌ ಸದಸ್ಯರೊಳಗಿನ ರಾಜಕೀಯ, ಹಾಗೂ ಜಾಗತಿಕ ಪರಿಸರಶಾಸ್ತ್ರ ಹಾಗೂ ಸಹನೀಯತೆ/ಸಮರ್ಥನೀಯತೆಗಳ ಬಗೆಗಿನ ಚರ್ಚೆಗಳೆಲ್ಲವೂ ಅರ್ಥ ವ್ಯವಸ್ಥೆ/ಆರ್ಥಿಕತೆ ಯ ನಿರೂಪಣೆಯನ್ನು ಪ್ರಭಾವಿಸಿದೆ. ಜೋಸೆಫ್‌‌ E. ಸ್ಟಿಗ್ಲಿಟ್ಜ್‌‌‌ ಜಾಗತಿಕ ಸಾರ್ವತ್ರಿಕ ಸರಕು ಗಳ ವ್ಯವಹಾರವನ್ನು ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನಾಗಿ ನಿರೂಪಿಸಿದೆ. ಪೀಟರ್‌‌ ಬಾರ್ನೆಸ್‌‌ ಹಾಗೂ ಅಲೆಕ್ಸಾಂಡರ್‌‌ ಡಿಲ್‌‌ರವರುಗಳಂತಹಾ ಆರ್ಥಿಕತಜ್ಞರು ಸಾರ್ವಜನಿಕಾಧಿಕಾರವನ್ನು ಮರುಪಡೆದುಕೊಳ್ಳುತ್ತಿರುವುದಲ್ಲದೇ ಉಚಿತ ತಂತ್ರಾಂಶ/ಸರಕುನಂತಹಾ ನವೀನ ವಿದ್ಯಮಾನಗಳನ್ನು ಸ್ವಾಗತಿಸುವ ವಿವಿಧ ನಿರೂಪಣೆಗಳನ್ನು ನೀಡುತ್ತಲೂ ಇದ್ದಾರೆ. ಕ್ರೀಡಾ ಸಿದ್ಧಾಂತಿಗಳಾಅರ್ನೆಸ್ಟ್‌‌‌ ಫೆಹ್ರ್‌‌ ಹಾಗೂ ಕ್ಲಾಸ್‌ M. ಷ್ಮಿಡ್ಟ್‌‌ರವರುಗಳು ಸರ್ವವ್ಯಾಪಿಯಾದ ಆರ್ಥಿಕ ಸ್ವಹಿತಾಸಕ್ತಿಯ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಕೊಡುಗೆ ಅರ್ಥ ವ್ಯವಸ್ಥೆ/ಆರ್ಥಿಕತೆಯಡಿಯಲ್ಲಿ ಸವಿಸ್ತಾರವಾದ ಮೂಲಭೂತ ಚಳುವಳಿಗಳು ಉದ್ಭವಿಸತೊಡಗಿದವು ; ನೊಬೆಲ್‌ ಪ್ರಶಸ್ತಿ ವಿಜೇತ ಮುಹಮ್ಮದ್‌‌ ಯೂನಸ್‌ರ ಸಾಲ ಕಾರ್ಯಕ್ರಮಗಳೂ ಉದ್ಭವಿಸಿದವು. ೨೦೦೬ರಲ್ಲಿ ವಿಶ್ವ ಬ್ಯಾಂಕ್‌ ಸಾಮಾಜಿಕ ಹಾಗೂ ಮಾನವಿಕ/ಮಾನವ ಬಂಡವಾಳ/ಮೂಲಧನಗಳ ಮಾಹಿತಿಯನ್ನು ಒಳಗೊಂಡ ತನ್ನ ರಾಷ್ಟ್ರಗಳ ಐಶ್ವರ್ಯಗಳ ವರದಿ ಯನ್ನು ನೀಡಲು ಆರಂಭಿಸಿತು.

ಆರ್ಥಿಕ ವಲಯಗಳುಸಂಪಾದಿಸಿ

ಅರ್ಥ ವ್ಯವಸ್ಥೆ/ಆರ್ಥಿಕತೆಯು ಅನುಕ್ರಮವಾದ ಮಜಲುಗಳಲ್ಲಿ ವಿಕಸನಗೊಳ್ಳುವ ವಲಯಗಳನ್ನು (ಕೈಗಾರಿಕೆಗಳು ಎಂದೂ ಕರೆಯಲಾಗುತ್ತದೆ) ಒಳಗೊಂಡಿರುತ್ತದೆ.

ಆಧುನಿಕ ಆರ್ಥಿಕತೆಗಳಲ್ಲಿ, ಆರ್ಥಿಕ ಚಟುವಟಿಕೆಗಳ ಒಟ್ಟಾರೆಯಾಗಿ ನಾಲ್ಕು ಪ್ರಮುಖ ವಲಯಗಳಿವೆ:[ಸೂಕ್ತ ಉಲ್ಲೇಖನ ಬೇಕು]

 • ಅರ್ಥ ವ್ಯವಸ್ಥೆ/ಆರ್ಥಿಕತೆಯ ಪ್ರಾಥಮಿಕ ವಲಯ: ಈ ವಲಯವು ಮುಸುಕಿನ ಜೋಳ, ಇದ್ದಿಲು, ಮರಮುಟ್ಟು ಹಾಗೂ ಕಬ್ಬಿಣದಂತಹಾ ಕಚ್ಚಾ ವಸ್ತುಗಳ ಹೊರತೆಗೆಯುವಿಕೆ ಹಾಗೂ ಉತ್ಪಾದನೆಯನ್ನು ಒಳಗೊಂಡಿರುತ್ತದೆ. (ಇದ್ದಿಲು ಗಣಿಕಾರ್ಮಿಕ ಹಾಗೂ ಮೀನುಗಾರರಂತಹವರು ಪ್ರಾಥಮಿಕ ವಲಯದ ಕಾರ್ಮಿಕರಾಗಿರುತ್ತಾರೆ.)
 • ಅರ್ಥ ವ್ಯವಸ್ಥೆ/ಆರ್ಥಿಕತೆಯ ಮಾಧ್ಯಮಿಕ/ದ್ವಿತೀಯ ವಲಯ: ಈ ವಲಯವು ಕಚ್ಚಾವಸ್ತು ಅಥವಾ ಮಧ್ಯವರ್ತಿ ವಸ್ತುಗಳನ್ನು ಸರಕುಗಳಾಗಿ ರೂಪಾಂತರಿಸುವುದನ್ನು ಒಳಗೊಂಡಿರುತ್ತದೆ e.g. ತಯಾರಿಕಾ ಉಕ್ಕನ್ನು ಕಾರುಗಳಾಗಿ ಅಥವಾ ಕಚ್ಚಾ ವಸ್ತ್ರಗಳನ್ನು ಸಿದ್ಧ ಉಡುಪುಗಳನ್ನಾಗಿ ರೂಪಾಂತರಿಸುವುದು. (ಕಟ್ಟಡ ನಿರ್ಮಾಪಕರು ಹಾಗೂ ವಸ್ತ್ರತಯಾರಕರು ಮಾಧ್ಯಮಿಕ/ದ್ವಿತೀಯ ವಲಯದ ಕಾರ್ಮಿಕರಾಗಿರುತ್ತಾರೆ.)
 • ಅರ್ಥ ವ್ಯವಸ್ಥೆ/ಆರ್ಥಿಕತೆಯ ಮೂರನೇ/ತೃತೀಯ ವಲಯ: ಈ ವಲಯವು ಶಿಶುಪಾಲನೆ, ಚಲನಚಿತ್ರ ಹಾಗೂ ಬ್ಯಾಂಕಿಂಗ್‌‌‌ನಂತಹಾ ಗ್ರಾಹಕರು ಹಾಗೂ ಉದ್ದಿಮೆಗಳಿಗೆ ಸೇವೆಗಳ ನೀಡಿಕೆಯನ್ನು ಒಳಗೊಂಡಿರುತ್ತದೆ. (ಅಂಗಡಿ ಮೇಲ್ವಿಚಾರಕ ಹಾಗೂ ಓರ್ವ ಕರಣಿಕ/ಅಕೌಂಟೆಂಟುಗಳು ಮೂರನೇ/ತೃತೀಯ ವಲಯದ ಕಾರ್ಮಿಕರಾಗಿರುತ್ತಾರೆ.)
 • ಅರ್ಥ ವ್ಯವಸ್ಥೆ/ಆರ್ಥಿಕತೆಯ ಚತುಷ್ಟಯ/ನಾಲ್ಕನೇ ವಲಯ: ಈ ವಲಯವು ನೈಸರ್ಗಿಕ ಸಂಪನ್ಮೂಲಗಳಿಂದ ಉತ್ಪನ್ನಗಳನ್ನು ಉತ್ಪಾದಿಸಲು ಅಗತ್ಯವಾದ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. (ಮರಮುಟ್ಟುಗಳ ಕಂಪೆನಿಯೊಂದು ಹಾನಿಗೊಳ್ಳದ ಭಾಗಗಳನ್ನು ಕಾಗದಗಳನ್ನು ತಯಾರಿಸಲು ಅನುವಾಗುವಂತೆ ಅದಕ್ಕೆ ಬಳಸುವ ಭಾಗಶಃ ಮರದ ತೆಳು ಹಾಳೆಗಳನ್ನು ತಯಾರಿಸಲು ಸುಟ್ಟ ಮರಗಳನ್ನು ಬಳಸಬಹುದಾದ ದಾರಿಗಳ ಬಗ್ಗೆ ನಡೆಸಬಹುದಾದ ಸಂಶೋಧನೆಗಳು.) ಗಮನಿಸಬೇಕಾದ ವಿಷಯವೆಂದರೆ ಶಿಕ್ಷಣವನ್ನು ಕೆಲವೊಮ್ಮೆ ಈ ವಲಯಕ್ಕೆ ಸೇರಿಸಲಾಗುತ್ತದೆ.

ಇತರೆ ವಲಯಗಳು ಕೆಳಕಂಡವನ್ನು ಒಳಗೊಂಡಿರುತ್ತವೆ

ಆರ್ಥಿಕ ಚಟುವಟಿಕೆಗಳುಸಂಪಾದಿಸಿ

ರಾಷ್ಟ್ರವೊಂದರ ಆರ್ಥಿಕ ಚಟುವಟಿಕೆಗಳನ್ನು ಅಳೆಯುವ ಅನೇಕ ದಾರಿಗಳಿವೆ. ಆರ್ಥಿಕ ಚಟುವಟಿಕೆಗಳನ್ನು ಅಳೆಯುವ ಈ ಕೆಲವು ವಿಧಾನಗಳೆಂದರೆ:

GDPಸಂಪಾದಿಸಿ

GDP - ರಾಷ್ಟ್ರವೊಂದರ ಸಮಗ್ರ ದೇಶೀಯ ಉತ್ಪನ್ನವೆಂದರೆ ಅದರ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಅಳೆಯುವ ಒಂದು ಮಾನದಂಡ. ಬಹುತೇಕ ಮಟ್ಟಿಗೆ ರಾಷ್ಟ್ರವೊಂದರ ಸಾಂಪ್ರದಾಯಿಕ ಆರ್ಥಿಕ ವಿಶ್ಲೇಷಣೆಯು GDP ಹಾಗೂ ತಲಾ GDPಗಳಂತಹಾ ಆರ್ಥಿಕ ಸೂಚಕಗಳ ಮೇಲೆ ಬಹುವಾಗಿ ಅವಲಂಬಿಸಿರುತ್ತದೆ. ಬಹಳಷ್ಟು ಉಪಯುಕ್ತವೆನಿಸಿದರೂ ಕೂಡಾ, ಗಮನಿಸಬೇಕಾದ ವಿಷಯವೆಂದರೆ GDPಯು ಹಣದ ವಿನಿಮಯ ನಡೆಯುವಂತಹಾ ಆರ್ಥಿಕ ಚಟುವಟಿಕೆಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದು.

ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಸಂಪಾದಿಸಿ

ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆ ಎಂದರೆ ಔಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಗೆ ತದ್ವಿರುದ್ಧವಾಗಿ ಸರ್ಕಾರಗಳಿಂದ ನಿಯಂತ್ರಣಗೊಳ್ಳದಿರುವ ಹಾಗೆಯೇ ತೆರಿಗೆ ವಿಧಿಸಲ್ಪಡದಿರುವ ಆರ್ಥಿಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಆದ್ದರಿಂದಲೇ ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಸರ್ಕಾರದ ಸಮಗ್ರ ರಾಷ್ಟ್ರೀಯ ಉತ್ಪನ್ನ(GNP)ದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಬಹುಮಟ್ಟಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಂದಿಗೆ ತಳಕು ಹಾಕಲಾಗುತ್ತದಾದರೂ ಎಲ್ಲಾ ಆರ್ಥಿಕ ವ್ಯವಸ್ಥೆಗಳೂ ಕೆಲ ಪ್ರಮಾಣದಷ್ಟಾದರೂ ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಒಳಗೊಂಡಿರುತ್ತವೆ. ಅನೌಪಚಾರಿಕ ಆರ್ಥಿಕ ಚಟುವಟಿಕೆಯು ಕ್ರಿಯಾಶಕ್ತ ಪ್ರಕ್ರಿಯೆಯಾಗಿದ್ದು ವಿನಿಮಯ, ನಿಯಂತ್ರಣ ಹಾಗೂ ಜಾರಿಗೊಳಿಸುವಿಕೆಗಳೂ ಸೇರಿದಂತೆ ಆರ್ಥಿಕ ಹಾಗೂ ಸಾಮಾಜಿಕ ಸಿದ್ಧಾಂತಗಳ ಅನೇಕ ಮಗ್ಗಲುಗಳನ್ನು ಒಳಗೊಂಡಿರುತ್ತದೆ. ತನ್ನ ಪ್ರವೃತ್ತಿಗನುಗುಣವಾಗಿ ಅದರ ಅವಲೋಕನ, ಅಧ್ಯಯನ, ನಿರೂಪಣೆ, ಹಾಗೂ ಅಳೆಯುವಿಕೆಗಳಂತಹಾ ಚಟುವಟಿಕೆಗಳನ್ನು ಕೈಗೊಳ್ಳಲು ಸಹಜವಾಗಿಯೇ ಕಷ್ಟಸಾಧ್ಯವಾಗಿರುತ್ತದೆ. ಯಾವುದೇ ಒಂದು ಆಕರವು ತತ್‌ಕ್ಷಣದಲ್ಲಿ ಅಥವಾ ಅಧಿಕಾರವಾಣಿಯಿಂದ ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಅಧ್ಯಯನವೊಂದರ ಶಾಖೆಯೆಂದು ನಿರೂಪಿಸಲಾಗುತ್ತಿಲ್ಲ. "ಮೇಜಿನ ಕೆಳಗಿನ ವ್ಯವಹಾರ" ಹಾಗೂ "ಅನಧಿಕೃತ ದಾಖಲೆಗಳ ಪ್ರಕಾರ" ಎಂಬ ಪದಪುಂಜಗಳು ಸಾಧಾರಣವಾಗಿ ಈ ವಿಧದ ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನೇ ಸೂಚಿಸುತ್ತವೆ. ಕಪ್ಪು ಮಾರುಕಟ್ಟೆ ಎಂಬ ಪದಪುಂಜವು ಅನೌಪಚಾರಿಕ ಅರ್ಥ ವ್ಯವಸ್ಥೆ/ಆರ್ಥಿಕತೆಯ ಒಂದು ನಿರ್ದಿಷ್ಟ ಉಪಪಂಗಡಕ್ಕೆ ಅನ್ವಯವಾಗುತ್ತದೆ. "ಅನೌಪಚಾರಿಕ ವಲಯ" ಎಂಬ ಪದಪುಂಜವನ್ನು ಅನೇಕ ಹಿಂದಿನ ಅಧ್ಯಯನಗಳಲ್ಲಿ ಬಳಸಲಾಗಿದ್ದು, ಹೊಸ ಪದಪುಂಜವನ್ನು ಬಳಸುತ್ತಿರುವ ಇತ್ತೀಚಿನ ಅಧ್ಯಯನಗಳಲ್ಲಿ ಆ ಪದಪುಂಜವನ್ನು ಬಹುತೇಕ ಬದಲಿಯಾಗಿ ಬಳಸಿದೆ. ಸೂಕ್ಷ್ಮ ಆರ್ಥಿಕತೆಗಳು ನಿರ್ದಿಷ್ಟ ಆರ್ಥಿಕ ಸಮಾಜದ ವ್ಯಕ್ತಿಗಳ ವೈಯಕ್ತಿಕ ಆರ್ಥಿಕತೆಯ ಮೇಲೆ ಕೇಂದ್ರಿತವಾಗಿರುತ್ತದಲ್ಲದೇ ಬೃಹತ್‌/ಮ್ಯಾಕ್ರೋ ಆರ್ಥಿಕತೆಗಳು ಅರ್ಥ ವ್ಯವಸ್ಥೆ/ಆರ್ಥಿಕತೆಯನ್ನು ಸಮಗ್ರವಾಗಿ ಪರಿಶೀಲಿಸುತ್ತದೆ. (ಪಟ್ಟಣ, ನಗರ, ಪ್ರದೇಶ)

GDPಯ ಪ್ರಕಾರ ಬೃಹತ್‌ ಆರ್ಥಿಕತೆಗಳೆಂದರೆ (ದಶಲಕ್ಷಗಳಷ್ಟು USDಗಳಲ್ಲಿ)ಸಂಪಾದಿಸಿ

ಅಂತರರಾಷ್ಟ್ರೀಯ ಹಣಕಾಸು ನಿಧಿ[೫] ದಾಖಲೆಗಳ ಅನುಸಾರವಾಗಿ 2008ರ ಸಾಲಿನ ಪಟ್ಟಿ
ಶ್ರೇಣಿ ರಾಷ್ಟ್ರ GDP (ದಶಲಕ್ಷಗಳಷ್ಟು USDಗಳಲ್ಲಿ)
 ವಿಶ್ವ ೬೦,೯೧೭,೪೭೭ [೬]
  European Union ೧೮,೩೮೭,೭೮೫[೬]
  United States ೧೪,೪೪೧,೪೨೫
  Japan ೪,೯೧೦,೬೯೨
  China ೪,೩೨೭,೪೪೮
  Germany ೩,೬೭೩,೧೦೫
  France ೨,೮೬೬,೯೫೧
  United Kingdom ೨,೬೮೦,೦೦೦
  Italy ೨,೩೧೩,೮೯೩
  Russia ೧,೬೭೬,೫೮೬
  Spain ೧,೬೦೧,೯೬೪
೧೦   Brazil ೧,೫೭೨,೮೩೯

ಇವನ್ನೂ ನೋಡಿಸಂಪಾದಿಸಿ

ಅನುಬಂಧಗಳುಸಂಪಾದಿಸಿ

 1. Dictionary.com, "ಇಕಾನಮಿ." [1] ^ ದಅಮೇರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ಇಂಗ್ಲೀಷ್ ಲಾಂಗ್ವೇಜ್‌‌, ನಾಲ್ಕನೆಯ ಆವೃತ್ತಿ ಹಾಟನ್‌‌ ಮಿಫ್‌‌ಲಿನ್‌‌‌ ಕಂಪೆನಿ, ೨೦೦೪. ೨೪ Oct. ೨೦೦೯
 2. ೨.೦ ೨.೧ ^ ಶೀಲಾ C. ಡೋವ್‌ (೨೦೦೫), "ಆಕ್ಸಿಯಮ್ಸ್‌ ಅಂಡ್‌ ಬ್ಯಾಬಿಲೋನಿಯನ್‌ ಥಾಟ್‌: ಎ ರಿಪ್ಲೈ", ಜರ್ನಲ್‌ ಆಫ್‌ ಪೋಸ್ಟ್‌ ಕೀನ್ಯೇಷಿಯನ್‌ ಇಕನಾಮಿಕ್ಸ್‌ ೨೭ (೩), ಪುಟ ೩೮೫-೩೯೧.
 3. Charles F. Horne, Ph.D. (1915). "The Code of Hammurabi : Introduction". Yale University. Retrieved September 14 2007. Unknown parameter |dateformat= ignored (help); Check date values in: |accessdate= (help)
 4. ರಾಬರ್ಟ್‌ ರೇ/ರೀಚ್‌‌, ಸೂಪರ್‌‌ಕ್ಯಾಪಿಟಲಿಸಂ: ದ ಟ್ರಾನ್ಸ್‌‌ಫರ್ಮೇಷನ್‌‌ ಆಫ್‌ ಬಿಸಿನೆಸ್‌‌, ಡೆಮೋಕ್ರಸಿ ಅಂಡ್‌‌ ಎವ್ವೆರಿಡೇ ಲೈಫ್‌‌ (ನ್ಯೂಯಾರ್ಕ್‌‌: ಆಲ್‌ಫ್ರೆಡ್‌‌‌ A. ಕ್ನಾಪ್‌‌ಫ್, ೨೦೦೭)
 5. ಅಂತರರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಆರ್ಥಿಕ ಹೊರನೋಟ/ಬಾಹ್ಯನೋಟ ದತ್ತಸಂಚಯ, ಆಕ್ಟೋಬರ್ 2009: ರಾಷ್ಟ್ರಗಳ ನಾಮಮಾತ್ರ GDP ಪಟ್ಟಿ. 2008ನೇ ವರ್ಷದ ದತ್ತಾಂಶಗಳು.
 6. ೬.೦ ೬.೧ "Nominal 2008 GDP for the world and the European Union". World economic outlook database, October 2009. International Monetary Fund. Retrieved 2009-10-01.

ಆಕರಗಳುಸಂಪಾದಿಸಿ

 • ಅರಿಸ್ಟಾಟಲ್‌‌, ಪಾಲಿಟಿಕ್ಸ್‌‌ , ಗ್ರಂಥ I-IIX, ಬೆಂಜಮಿನ್‌ ಜೋವೆಟ್‌‌ರಿಂದ ಭಾಷಾಂತರಿತ, Classics.mit.edu
 • ಬಾರ್ನೆಸ್‌‌‌, ಪೀಟರ್‌‌, ಕ್ಯಾಪಿಟಲಿಸಂ ೩.೦, ಎ ಗೈಡ್‌‌ ಟು ರಿಕ್ಲೈಮಿಂಗ್‌‌ ದ ಕಾಮನ್ಸ್‌‌, ಸ್ಯಾನ್‌ ಫ್ರಾನ್ಸಿಸ್ಕೋ ೨೦೦೬, Whatiseconomy.com Archived 2009-02-27 at the Wayback Machine.
 • ಡಿಲ್‌‌, ಅಲೆಕ್ಸಾಂಡರ್‌‌, ರಿಕ್ಲೈಮಿಂಗ್‌‌ ದ ಹಿಡನ್‌ ಆಸೆಟ್ಸ್‌‌‌, ಟುವರ್ಡ್ಸ್‌‌ ಎ ಗ್ಲೋಬಲ್‌‌ ಫ್ರೀವೇರ್‌‌ ಇಂಡೆಕ್ಸ್‌‌‌, ಗ್ಲೋಬಲ್‌ ಫ್ರೀವೇರ್‌ ರಿಸರ್ಚ್‌‌ ಪೇಪರ್‌‌‌ ೦೧-೦೭, ೨೦೦೭, Whatiseconomy.com Archived 2009-02-22 at the Wayback Machine.
 • ಫೆಹ್ರ್‌‌‌ ಅರ್ನೆಸ್ಟ್‌‌‌, ಷ್ಮಿಡ್‌ಟ್‌‌, ಕ್ಲಾಸ್‌‌ M., ದ ಇಕಾನಮಿ ಆಫ್‌ ಫೇರ್‌ನೆಸ್‌‌,ರೆಸಿಪ್ರೊಸಿಟಿ ಅಂಡ್‌‌ ಅಲ್‌‌ಟ್ರೂಯಿಸಮ್‌‌‌ - ಎಕ್ಸ್‌‌ಪೆರಿಮೆಂಟಲ್‌‌ ಎವಿಡೆನ್ಸ್‌‌‌ ಅಂಡ್‌‌ ನ್ಯೂ ಥಿಯರೀಸ್‌‌, ೨೦೦೫, ಚರ್ಚಾ ದಾಖಲೆ/PAPER ೨೦೦೫-೨೦, ಮ್ಯೂನಿಚ್‌‌‌ ಆರ್ಥಿಕತೆ, Whatiseconomy.com Archived 2009-02-27 at the Wayback Machine.
 • ಮಾರ್ಕ್ಸ್‌‌, ಕಾರ್ಲ್‌‌, ಎಂಗೆಲ್ಸ್‌‌‌, ಫ್ರೀಡ್‌ರಿಚ್‌‌‌, ೧೮೪೮, ದ ಕಮ್ಯುನಿಸ್ಟ್‌‌ ಮ್ಯಾನಿಫೆಸ್ಟೋ, Marxists.org
 • ಸ್ಟಿಗ್ಲಿಟ್ಜ್‌‌‌, ಜೋಸೆಫ್‌‌‌‌ E., ಗ್ಲೋಬಲ್‌‌ ಪಬ್ಲಿಕ್‌‌‌‌‌ ಸ್ಟಾಕ್ಸ್‌‌‌ ಅಂಡ್‌‌‌ ಗ್ಲೋಬಲ್‌‌‌ ಫೈನಾನ್ಸ್‌‌‌‌: ಡಸ್‌‌‌ ಗ್ಲೋಬಲ್‌‌‌ ಗೌವರ್ನೆನ್ಸ್‌‌‌ ಎನ್‌ಶ್ಯೂರ್‌‌ ದಟ್‌‌‌ ದ ಗ್ಲೋಬಲ್‌‌‌ ಪಬ್ಲಿಕ್‌‌‌ ಇಂಟರೆಸ್ಟ್‌‌ ಈಸ್‌ ಸರ್ವ್‌ಡ್? ಇನ್‌‌: ಅಡ್ವಾನ್ಸಿಂಗ್‌‌ ಪಬ್ಲಿಕ್‌‌‌ ಸ್ಟಾಕ್ಸ್‌‌‌, ಜೀನ್‌‌-ಫಿಲಿಪ್ಪೆ ಟೌಫಟ್ಟ್‌‌‌, (ed.), ಪ್ಯಾರಿಸ್‌ ೨೦೦೬, pp. ೧೪೯/೧೬೪, GSB.columbia.edu
 • ವೇರ್‌‌ ಈಸ್‌‌ ದ ವೆಲ್ತ್‌‌‌‌ ಆಫ್‌‌ ನೇಷನ್ಸ್‌? ಮೆಷರಿಂಗ್‌‌ ಕ್ಯಾಪಿಟಲ್‌ ಫಾರ್‌ ದ ೨೧ಸ್ಟ್‌‌‌ ಸೆಂಚುರಿ. ವೆಲ್ತ್‌ ಆಫ್‌‌ ನೇಷನ್ಸ್‌‌‌ ರಿಪೋರ್ಟ್‌‌ ೨೦೦೬, ಇಯಾನ್‌‌ ಜಾನ್‌‌ಸನ್‌‌ ಅಂಡ್‌‌ ಫ್ರಾಂಕಾಯಿಸ್‌‌ ಬೌರರ್ಗುಯಿಗ್ನಾನ್‌‌‌, ವಿಶ್ವ ಬ್ಯಾಂಕ್‌ , ವಾಷಿಂಗ್ಟನ್‌‌‌ ೨೦೦೬, Whatiseconomy.com Archived 2009-02-27 at the Wayback Machine.

ಹೆಚ್ಚಿನ ಓದಿಗಾಗಿಸಂಪಾದಿಸಿ

 • ಫ್ರೀಡ್‌‌ಮನ್‌‌‌, ಮಿಲ್ಟನ್‌‌‌, ಕ್ಯಾಪಿಟಲಿಸಂ ಅಂಡ್‌‌ ಫ್ರೀಡಮ್‌‌, ೧೯೬೨.
 • ಗಲ್‌‌ಬ್ರೈತ್‌‌, ಜಾನ್‌‌‌ ಕೆನ್ನೆತ್‌‌‌, ದ ಅಫ್ಲ್ಯೂಯೆಂಟ್‌‌ ಸೊಸೈಟಿ, ೧೯೫೮.
 • ಕೀನೆಸ್‌‌‌, ಜಾನ್‌‌ ಮೇನರ್ಡ್‌‌, ದ ಜನರಲ್‌ ಥಿಯರಿ ಆಫ್‌‌ ಎಂಪ್ಲಾಯ್‌ಮೆಂಟ್‌‌, ಇಂಟರೆಸ್ಟ್‌‌‌ ಅಂಡ್‌‌ ಮನಿ, ೧೯೩೬.
 • ಸ್ಮಿತ್‌‌‌, ಆಡಂ, ಆನ್‌‌ ಇನ್‌ಕ್ವೈರಿ ಇನ್‌ಟು ದ ನೇಚರ್‌‌ ಅಂಡ್‌‌ ಕಾಸಸ್‌‌‌ ಆಫ್‌‌‌ ದ ವೆಲ್ತ್‌‌‌‌ ಆಫ್‌‌ ನೇಷನ್ಸ್‌‌, ೧೭೭೬.