ಸೃಷ್ಟಿ ಮತ್ತು ವೇದಾಂತ

ಸೃಷ್ಟಿ ಮತ್ತು ವೇದಾಂತ-ಅದ್ವೈತ :

ಬದಲಾಯಿಸಿ

ಪ್ರಸ್ತಾವನೆ :-

ಬದಲಾಯಿಸಿ

 • ಅದ್ವೈತ ಪರ ವಾಕ್ಯಗಳು ವೇದ ಉಪನಿಷತ್ ಗಳಲ್ಲಿ ಇದ್ದರೂ ಅದಕ್ಕೊಂದು ವ್ಯವಸ್ಥಿತ ಸಿದ್ಧಾಂತವಿರಲಿಲ್ಲ. ಸುಮಾರು ಕ್ರಿ ಶ ೭೦೦ ರಲ್ಲಿ ಬದುಕಿದ ಗೌಡಪಾದಮುನಿಗಳು ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಧೃಡವಾಗಿ ಪ್ರತಿಪಾದಿಸಿದರು. ಅವರ ಶಿಷ್ಯರು ಗೋವಿಂದ ಭಗವತ್ಪಾದರು. ಆವರ ಶಿಷ್ಯರು ಶ್ರೀ ಶಂಕರಾಚಾರ್ಯರು. ಅವರು ಆದಿಶಂಕರ ರೆಂದು ಪ್ರಸಿದ್ಧರಾಗಿದ್ದಾರೆ. ಅವರು ಅದ್ವೈತ ತತ್ವ ಸಿದ್ಧಾಂತಕ್ಕೆ ಸ್ಪಷ್ಟ ರೂಪಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು.

ಆದಿ ಶಂಕರರು

ಬದಲಾಯಿಸಿ
 • :ಶ್ರೀ ಶಂಕರಾಚಾರ್ಯರು [ಕ್ರಿಶ.೭೮೮-೮೨೦ ವಿಕಿಪೀಡಿಯ] ಒಬ್ಬ ಅಸಾಧಾರಣ ಕ್ರಿಯಾಶೀಲ ಅದ್ಭುತ ವ್ಯಕ್ತಿ. ಅವರದು ದೈತ್ಯ ಪ್ರತಿಭೆ. ಕೇರಳದ ಕಾಲಟಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಬದರಿ ಕಾಶ್ಮೀರ, ಕಾಶ್ಮೀರದಿಂದ ಕಾಶಿ, ಪುನಃ ಶೃಂಗೇರಿ, ಕಂಚಿ, ಪುರಿ, ದ್ವಾರಕಾ, ಬದರಿ, ಹೀಗೆ ಭಾರತವನ್ನು ಎರಡು ಬಾರಿ ಕಾಲ್ನಡಿಗೆಯಲ್ಲಿ ಸುತ್ತಿ, ತಮ್ಮ ತರ್ಕಶಕ್ತಿ ಯಿಂದ ಪ್ರತಿವಾದಿಗಳನ್ನು ಸೋಲಿಸಿ ಅದ್ವೈತದ ಧ್ವಜವನ್ನು ಎತ್ತಿ ಹಿಡಿದರು. ಅವರು ಬದುಕಿದ್ದು ಕೇವಲ ೩೨ವರ್ಷಗಳ ಕಾಲ ಮಾತ್ರವಾದರೂ, ಪ್ರತಿಯೊಂದು ಕ್ಷಣವನ್ನೂ ವ್ಯರ್ಥ ಮಾಡದೆ ಸಾರ್ಥಕ ಪಡಿಸಿಕೊಂಡವರು. ಅವರ ಜೀವನದ ಬಗೆಗೆ ಒಂದು ಶ್ಲೋಕ ಹೀಗಿದೆ :
 • ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ |
 • ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
 • ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗಾತ್- ಎಂದರೆ ಹೊರಟು ಹೋದರು. ಅವರು ಬರೆದ ಭಗವದ್ಗೀತಾ, ಉಪನಿಷತ್ ಗಳ, ಬ್ರಹ್ಮಸೂತ್ರ ಗಳ ಭಾಷ್ಯ ಪ್ರಸ್ಥಾನತ್ರಯ ಭಾಷ್ಯ ವೆಂದು ಪ್ರಸಿದ್ಧವಾಗಿದೆ.

ಅದ್ವೈತ :

ಬದಲಾಯಿಸಿ
 • ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ ||ಬ್ರಹ್ಮವು ಸತ್ಯ ; ಜಗತ್ತು ಮಿಥ್ಯ ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ.ಎಂಬುದು ಶ್ರೀ ಶಂಕರರ ಅದ್ವೈತ ವೇದಾಂತದ ಸಾರ (ಈ ವಾಕ್ಯವನ್ನು ಅವರು ಹೇಳಿಲ್ಲ , ಆದರೆ ಯಾರೋ ವಿದ್ವಾಂಸರು 'ಅದ್ವೈತ' ತತ್ವವನ್ನು ಹೀಗೆ ಸಂಗ್ರಹಿಸಿದ್ದಾರೆ). ಈ ದರ್ಶನವು ಸಾಂಖ್ಯ, ಮತ್ತು ಯೋಗ ಗಳಿಂದ ಮೂಲ ಪಂಚೀಕರಣ ತತ್ವಗಳನ್ನು ತೆಗೆದುಕೊಂಡಿದೆ. ಇದೂ ಕೂಡಾ ಸಾಂಖ್ಯ ಮತ್ತು ಯೋಗ ದರ್ಶನಗಳಂತೆ ಸೃಷ್ಟಿ ಅನಾದಿ ಮತ್ತು ಅನಂತ ಎನ್ನುತ್ತದೆ; ಎಂದರೆ ಆದಿ ಇಲ್ಲದ್ದು, ಅಂತ್ಯವಿಲ್ಲದ್ದು; ಅಥವಾ ಆದಿ ಅಂತ್ಯಗಳು ಮಾನವ ಬುದ್ಧಿ ಶಕ್ತಿಗೆ ನಿಲುಕದ್ದು. ಆದ್ದರಿಂದ ಅದು ಸೃಷ್ಟಿ ಹೇಗೆ ಯಾವಾಗ ಆಯಿತೆಂಬ ವಿಚಾರಕ್ಕಿಂತ ಸೃಷ್ಟಿಯ ರಚನಾ ಕ್ರಮಕ್ಕೆ ಪ್ರಾಧಾನ್ಯತೆ ಕೊಟ್ಟಿದೆ. ಆದರೆ ಸೃಷ್ಟಿಯ ಕ್ರಮ ರಾಜಯೋಗವನ್ನು ಹೋಲುತ್ತದೆ ಅಥವಾ ನಂತರದ ಅದ್ವೈತದ ಬೆಳವಣಿಗೆಯಲ್ಲಿ ಸೇರಿಸಲಾಗಿದೆ. ಆದ್ದರಿಂದ ರಾಜಯೋಗದ ಅಂಶಗಳನ್ನೂ ಸೇರಿಸಿದೆ (ತೈತ್ತರೀಯ ,ಐತರೇಯ ಉಪನಿಷತ್ ನೋಡಿ).

ಬ್ರಹ್ಮ

ಬದಲಾಯಿಸಿ

ಬ್ರಹ್ಮ (ಪರ ಬ್ರಹ್ಮ ) :

 • ಸಮಷ್ಟಿ ದೃಷ್ಟಿಯಿಂದ ಮೂಲ ಚೈತನ್ಯ ಓಂ, ತತ್, ಸತ್, ಸಃ, - ಜ್ಞಾನ, ಅನಂತ, ಅಶಬ್ದ, ಅರೂಪ, ಅವ್ಯಯ, ಅಚಿಂತ್ಯ, ಅನಾದಿ, ನಿರ್ಗುಣ, ನಿರಾಕಾರ. ಪಾರಮಾರ್ಥಿಕ ಸತ್ಯ : ಚೈತನ್ಯ.(ಪರಬ್ರಹ್ಮ , ಮೂಲ ಚೈತನ್ಯ) -ಅವ್ಯಕ್ತ-ನಿರ್ಗುಣ-ನಿರಾಕಾರ ಇದೊಂದೇ ಪರಮ ಸತ್ಯ. ಸರ್ವವ್ಯಾಪಿ. ಬ್ರಹ್ಮಾಂಡದಲ್ಲಿ ಆನಂದ ಮಯ ಕೋಶ . ಅವರ್ಣನೀಯ - ತರ್ಕಕ್ಕೆ ನಿಲುಕದ್ದು ಶಬ್ದಗಳು ವಿವರಿಸಲಾರವು . ಇಂದ್ರಿಯಗಳು ತಲುಪಲಾರವು. ವೇದ , ಉಪನಿಷತ್ ಗಳೇ ಆಧಾರ. ತಾರ್ಕಿಕವಾಗಿ ಇಲ್ಲದ ವಸ್ತುವಿನಿಂದ ಇದೆ ಎಂಬ ವಸ್ತು ಅಥವಾ ಭಾವನೆ ಹುಟ್ಟಲಾರದು ಒಮ್ಮೆ ಇದೆ ಎಂದಾದರೆ ನಂತರ ಇಲ್ಲವೇ ಇಲ್ಲ ಎಂದಾಗದು ;
 • ಆನಂದ ಮಯ ಕೋಶ . (ಓ ಗುಂ ಸತ್ಯಂ, -ಸತ್ಯಲೊಕ- ಕುಂಡಲಿನಿಯಲ್ಲಿ -ಸಹಸ್ರಾರ - (ಇದು ಸಮಷ್ಟಿ ದೃಷ್ಟಿಯಿಂದ -ಬ್ರಹ್ಮಾಂಢಕ್ಕೆ ಅನ್ವಯಿಸಿ ಹೇಳಿದೆ.) (ಆರಂಭಿಕ ಹಂತ)
 • ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು
 • ಮಾನವನು ಪಂಚ ಕೋಶಗಳಿಂದ ಉಂಟಾಗಿರುವನೆಂದು ವೇದಾಂತದಲ್ಲಿ ಒಂದು ಸಿದ್ಧಾಂತವಿದೆ. ಶ್ರೀ ಆದಿ ಶಂಕರ ವಿರಚಿತ ವೆಂದು ಪ್ರಸಿದ್ಧವಾಗಿರುವ ವಿವೇಕ ಚೂಡಾಮಣಿಯಲ್ಲಿ ಇದರ ವರ್ಣನೆ ಬರುವುದು. ತೈತ್ತರೀಯುಪನಿಷತ್ತಿನಲ್ಲಿಯೂ ಇದರ ಸೂಕ್ಷ್ಮ ನಿರೂಪಣೆ ಇದೆ.
 • ೧. ಅನ್ನಮಯಕೋಶ
 • ೨. ಪ್ರಾಣಮಯಕೋಶ :
 • ೩. ಮನೋಮಯ ಕೋಶ :
 • ೪. ವಿಜ್ಞಾನಮಯಕೋಶ
 • ೫. ಆನಂದಮಯ ಕೋಶ
 • (ವಿವರಕ್ಕೆ ನೋಡಿ : ಪಂಚ ಕೋಶ )
 • ಅದೇ ರೀತಿಯಲ್ಲಿ ವ್ಯಷ್ಟಿಗೆ (ಮನುಷ್ಯನಿಗೆ) ಅನ್ವಯಿಸಿ : ಒಂದೇ ವ್ಯಕ್ತಿಗೆ ಹೇಳಿದಾಗ-ಅದೇ ಬ್ರಹ್ಮ ವು ಅಥವಾ ಪರಬ್ರಹ್ಮವು - ಸಾಕ್ಷಿ ; ಆತ್ಮ ; ಮೂಲ ಚೈತನ್ಯ ; ಆನಂದ ಸ್ವರೂಪ; ಉಳಿದುದೆಲ್ಲಾ ಅದೇ ಗುಣ, ವಿಶೇಷಣ ;- ಜ್ಞಾನ, ಅನಂತ, ಅಶಬ್ದ, ಅರೂಪ, ಅವ್ಯಯ, ಅಚಿಂತ್ಯ, ಅನಾದಿ, ನಿರ್ಗುಣ, ನಿರಾಕಾರ. ಪಾರಮಾರ್ಥಿಕ ಸತ್ಯ : (ಓ ಗುಂ ಸತ್ಯಂ,ಸತ್ಯಲೊಕ- ಕುಂಡಲಿನಿಯಲ್ಲಿ -ಸಹಸ್ರಾರ)
 • ಪಂಚ ಕೋಶ ವ್ಯವಸ್ಥೆ : ಆನಂದಮಯ ಕೋಶ .
 • ಶರೀರ ವ್ಯವಸ್ಥೆ : ಪರಬ್ರಹ್ಮ ದಲ್ಲಿ ಒಂದಾಗುವಿಕೆ. ಅಥವಾ ಅತಿ ಸಾಮೀಪ್ಯ
 • ಲೋಕ : ಸತ್ಯ ಲೋಕ - ಓಗುಂ ಸತ್ಯಂ ಆಕಾಶ ತತ್ವ
 • ದೇಹದಲ್ಲಿ ಕುಂಡಲಿನೀ ಸ್ಥಾನ : ಸಹಸ್ರಾರ ಕಮಲ
 • ಪರಬ್ರಹ್ಮದಿಂದ -> ಮೂಲ ಪ್ರಕೃತಿ ತತ್ವ :

ಅಪರಾ ಪ್ರಕೃತಿ

ಬದಲಾಯಿಸಿ

'

 • ಅಪರಾಪ್ರಕೃತಿ ಅಥವಾ ಚಿತ್ ಪ್ರಕೃತಿ' -
 • ಸಮಷ್ಟಿ ಯಲ್ಲಿ - (ವಿಶ್ವದ ಚಿತ್ತ) ; ಮಾಯೆ, (ಅನಿರ್ವಚನೀಯ) (ಪ್ರಕೃತಿ : ಮಾಯೆ, ಉಪಾದಿ, ಮಿಥ್ಯಾ ಜ್ಞಾನ, ಇಲ್ಲದ್ದನ್ನು ಇದೆ ಎಂದು ತಿಳಿಯುವುದು,-ಅವಿದ್ಯೆ,ಆದರೆ ಅನಿರ್ವಚನೀಯ ಎಂದರೆ, ಮಿಥ್ಯೆಯಾದರೂ ಸತ್ಯ ವೆಂದೇ ತೋರುವ ಇಲ್ಲವೆಂದು ಹೇಳಲಾಗದ ಪ್ರಾಪಂಚಿಕ ಸತ್ಯ. (ಜಡ)) ; ಮೂಲಪ್ರಕೃತಿ, ಅಕ್ಷರಾ, ಅವ್ಯಾಕೃತ, -> ಜಡ
 • ಚೇತನ + ಪ್ರಕೃತಿ ->ನಾರಾಯಣ+ಲಕ್ಷಿ ತತ್ವ ; ಶಿವ +ಪಾರ್ವತಿ ಪ್ರಕೃತಿ, ಚೈತನ್ಯದೊಡನೆ ಸೇರಿ ಕ್ರಿಯಾಶೀಲ (ಪ್ರಾಪಂಚಿಕ ಸತ್ಯ)
 • ಲೋಕ : ಓಂ ತಪಃ ; ಆಕಾಶ ತತ್ವ
 • ಪಂಚ ಕೋಶ ವ್ಯವಸ್ಥೆ : ವಿಜ್ಞಾನ ಮಯ ಕೋಶ .
 • ಲೋಕ : ತಪೋ ಲೋಕ - ಓ ತಪಃ ,
 • ಕುಂಡಲಿನೀ ಸ್ಥಾನ : ಆಜ್ಞಾ ಚಕ್ರ - ದ್ವಿದಳ ಕಮಲ
 • ವ್ಯಷ್ಟಿಗೆ (ಮನುಷ್ಯನಿಗೆ) ಅನ್ವಯಿಸಿ
 • ಸಾಕ್ಷೀರೂಪ ಚಿತ್ತ - ಈಶ್ವರನಲ್ಲಿ ನಾನು ನೀನೆಂಬ ಭಾವನೆ.
 • ಲೋಕ : ಓಂ ತಪಃ ; ಆಕಾಶ ತತ್ವ
 • ಪಂಚ ಕೋಶ ವ್ಯವಸ್ಥೆ : ವಿಜ್ಞಾನ ಮಯ ಕೋಶ .
 • ಶರೀರ ವ್ಯವಸ್ಥೆ : ಕಾರಣ ಶರೀರ (ಜನ್ಮಾಂತರ ಕರ್ಮಗಳ ವಾಸನಾ ಶರೀರ)
 • ಕುಂಡಲಿನೀ ಸ್ಥಾನ : ಆಜ್ಞಾ ಚಕ್ರ - ದ್ವಿದಳ ಕಮಲ
 • ಅದರಿಂದ ಪರಾ ಪ್ರಕೃತಿ

ಪರಾ ಪ್ರಕೃತಿ

ಬದಲಾಯಿಸಿ

( ಶ್ರೀ ಶಂಕರ ಭಾಷ್ಯ ಗಳಲ್ಲಿ ಅಪರಾ ಪ್ರಕೃತಿ - ಪರಾ ಪ್ರಕೃತಿ ಎಂದು ವಿಂಗಡಿಸಿದೆ)

 • ಸಮಷ್ಟಿ ಯಲ್ಲಿ : ಪರಾ ಪ್ರಕೃತಿ - ಮಾಯೆ, ವಿಕ್ಷೇಪ ಶಕ್ತಿ, ತಮ+ರಜ+ಸತ್ವಗುಣಗಳು

+ ಅಪರ ಬ್ರಹ್ಮ (ಬುದ್ಧಿ) - ನಾರಾಯಣ ಚೈತನ್ಯ -ನಾರಾಯಣ ಚೇತನ. ; -ಅವ್ಯಕ್ತ, ವಿಶ್ವದ ಬುದ್ಧಿ,- ಜಡ ಪ್ರಕೃತಿ : ಮಾಯೆ, ಉಪಾದಿ, ಮಿಥ್ಯಾ ಜ್ಞಾನ, ಇಲ್ಲದ್ದನ್ನು ಇದೆ ಎಂದು ತಿಳಿಯುವುದು,-ಅವಿದ್ಯೆ,ಆದರೆ ಅನಿರ್ವಚನೀಯ ಎಂದರೆ, ಮಿಥ್ಯೆಯಾದರೂ ಸತ್ಯ ವೆಂದೇ ತೋರುವ ಇಲ್ಲವೆಂದು ಹೇಳಲಾಗದ ಪ್ರಾಪಂಚಿಕ ಸತ್ಯ. (ಜಡ) ಪಂಚ ಕೋಶ ವ್ಯವಸ್ಥೆ -ಮನೋ ಮಯ ಕೋಶ . ಲೋಕ : ಓಂ ಜನಃ ; ಅಗ್ನಿ ತತ್ವ ಕುಂಡಲಿನೀ ಸ್ಥಾನ : ವಿಶುದ್ಧ ಚಕ್ರ - ೧೬ ದಳ ಕಮಲ

 • ವ್ಯಷ್ಟಿಗೆ (ಮನುಷ್ಯನಿಗೆ) ಅನ್ವಯಿಸಿ

* ಸಾಕ್ಷೀರೂಪ ಚಿತ್ತ - ಈಶ್ವರನಲ್ಲಿ ನಾನು ನೀನೆಂಬ ಭಾವನೆ.

 • ಲೋಕ : ಓಂ ಜನಃ ;ವಿಶುದ್ಧ ಚಕ್ರ ;ಅಗ್ನಿ ತತ್ವ
 • ಪಂಚ ಕೋಶ ವ್ಯವಸ್ಥೆ :ಮನೋ ಮಯ ಕೋಶ .
 • ಶರೀರ ವ್ಯವಸ್ಥೆ : ಕಾರಣ ಶರೀರ (ಜನ್ಮಾಂತರ ಕರ್ಮಗಳ ವಾಸನಾ ಶರೀರ)
 • ಕುಂಡಲಿನೀ ಸ್ಥಾನ : ಓಂ ವಿಶುದ್ಧ ಚಕ್ರ - ದಳ ಕಮಲ
 • ಅದರಿಂದ ಮಹತ್ತು-

ಮಹತ್ತು ಹಿರಣ್ಯಗರ್ಭ

ಬದಲಾಯಿಸಿ
 • ಸಮಷ್ಟಿ ಯಲ್ಲಿ : (ಮನಸ್ಸು) ಅಹಂಕಾರ : (ಬ್ರಹ್ಮ-ಮರೀಚಿ), ಜಗತ್ತಿನ ಮೂಲ ಕಾರಣ, (ಚತುರ್ಮುಖ ಬ್ರಹ್ಮ,), ವಿಜ್ಞಾನಾತ್ಮ; ಕಾರ್ಯಬ್ರಹ್ಮ ; ವಿಶ್ವದ ನಾನು ಎಂಬ ತತ್ವ ;-ಅಹಂಕಾರ ವಿಶ್ವದ ಸರ್ವ ಜೀವಿಗಳಲ್ಲೂ ಜೀವರೂಪದಲ್ಲಿರುವ ಕಾರ್ಯಬ್ರಹ್ಮ
 • ಲೋಕ : ಓಂ ಮಹಃ ಮತ್ತು ಓಂ ಜನಃ
 • ಪಂಚ ಕೋಶ ವ್ಯವಸ್ಥೆ -ಪ್ರಾಣ ಮಯ ಕೋಶ ಮತ್ತು ಮನೋ ಮಯ ಕೋಶ
 • ಕುಂಡಲಿನೀ ಸ್ಥಾನ : ಮಣಿಪುರ ೧೦ ಚಕ್ರ ;೧೨ ದಳ ಕಮಲ ಅನಾಹತ ಚಕ್ರ
 • ವ್ಯಷ್ಟಿಗೆ (ಮನುಷ್ಯನಿಗೆ) ಅನ್ವಯಿಸಿ :
 • ಜೀವ ಮನಸ್ಸು ನಾನು ಎಂಬ ತತ್ವ (ಜೀವ)
 • ಶರೀರ ವ್ಯವಸ್ಥೆ : ಸೂಕ್ಷ್ಮ ಶರೀರ (ಜನ್ಮಾಂತರ ಕರ್ಮಗಳ ಪಂಚ ತನ್ಮಾತ್ರಾ ಪಂಚ ಭೂತ ಶರೀರ)
 • ಪಂಚ ಕೋಶ ವ್ಯವಸ್ಥೆ - ಪ್ರಾಣ ಮಯ ಕೋಶ ಮತ್ತು ಮನೋ ಮಯ ಕೋಶ
 • ಲೋಕ : ಓಂ ಮಹಃ ಮತ್ತು ಓಂ ಜನಃ
 • ಕುಂಡಲಿನೀ ಸ್ಥಾನ : ಮಣಿಪುರ ೧೦ ಚಕ್ರ ;೧೨ ದಳ ಕಮಲ ಅನಾಹತ ಚಕ್ರ .
 • ಮಹತ್ತಿನಿಂದ ತತ್ವ ರೂಪದಲ್ಲಿ ಪಂಚ ಭೂತಗಳು ಇತ್ಯಾದಿ, ಮತ್ತು ಅವುಗಳ ಅಭಿಮಾನಿ ದೇವತೆಗಳ ಉತ್ಪತ್ತಿ.

ಪಂಚ ಭೂತಗಳು ಇತ್ಯಾದಿ,

ಬದಲಾಯಿಸಿ

ಸಮಷ್ಟಿ ಯಲ್ಲಿ : (ಜಡ) --(ನೋಡಿ  : ಸೃಷ್ಟಿ ಮತ್ತು ಸಾಂಖ್ಯ ದರ್ಶನ )

 • ಪಂಚ ಭೂತಗಳು ಮತ್ತು ಅದರ ಅಭಿಮಾನಿ ದೇವತೆಗಳು
 • ಪಂಚ ಭೂತ ಗಳು- ಆಕಾಶ , ಅದರಿಂದ-> ವಾಯು,ಅದರಿಂದ-> ಅಗ್ನಿ ,ಅದರಿಂದ->ಅಪ್,ಅದರಿಂದ->ಪೃಥವೀ.
 • ಪಂಚ ಭೂತ ಗಳಿಂದ ಕ್ರಮವಾಗಿ ->
 • ಪಂಚ ತನ್ಮಾತ್ರೆ ಗಳು - ಶಬ್ದ ,ಸ್ಪರ್ಶ,ರೂಪ, ರಸ, ಗಂಧ.
 • ಅವುಗಳಿಂದ ಕ್ರಮವಾಗಿ ->
 • ಪಂಚ ಪ್ರಾಣ ಗಳು - ವ್ಯಾನ , ಪ್ರಾಣ ,ಸಮಾನ, ಉದಾನ,ಅಪಾನ.
 • ಅವುಗಳಿಂದ ಕ್ರಮವಾಗಿ ->
 • ಪಂಚ ಇಂದ್ರಿಯಗಳು- ಶ್ರೋತೃ ತ್ವಕ್ ಚಕ್ಷು ಜಿಹ್ವಾ ನಾಸಿಕ
 • ಲೋಕ :ಓಂ ಭುವರ್ ಮತ್ತು ಸುವಃ ಲೋಕ ;ಮಣಿಪುರ ಮತ್ತು ಸ್ವಾಧಿಷ್ಠಾನ ಚಕ್ರ - ೧೦ದಳ ಮತ್ತು ಆರು ದಳ ಕಮಲ
 • * ವ್ಯಷ್ಟಿಗೆ (ಮನುಷ್ಯನಿಗೆ) ಅನ್ವಯಿಸಿ :
 • ಅದೇ ಪಂಚ ತತ್ವಗಳು ( ತತ್ವ ರೂಪದಲ್ಲಿ)
 • ಕೋಶ : ಪ್ರಾಣ ಮಯ ಕೋಶ
 • ಸೂಕ್ಷ್ಮ ಶರೀರ
 • ಲೋಕ  : ಭುವರ್ ಲೋಕ ;ಸುವಃ ಲೋಕ  ; ಸ್ವಾಧಿಷ್ಠಾನ ಚಕ್ರ ; ಆರು ದಳ ಕಮಲ; ಮಣಿಪುರ ಚಕ್ರ -೧೦ದಳ ಕಮಲ

ಭೌತಿಕ ಶರೀರ

ಬದಲಾಯಿಸಿ

 • ಸಮಷ್ಟಿ
 • ಪಂಚ ತತ್ವಗಳು ೨೪
 • ಕಾರ್ಯ ಬ್ರಹ್ಮ
 • ಲೋಕ ; ದೃಶ್ಯ ಜಗತ್ತು . ಭೂ ತತ್ವ
 • ಮೇಲಿನಂತೆ
 • ವ್ಯಷ್ಟಿ
 • ಕೋಶ ವ್ಯವಸ್ಥೆ - ಅನ್ನ ಮಯ ಕೋಶ
 • ಪಂಚ ತತ್ವಗಳು ೨೪ ಮತ್ತು ಪಂಚ ಕರ್ಮೇಂದ್ರಿಯಗಳು
 • ವಾಕ್ (ಬಾಯಿ)
 • ಪಾಣಿ (ಕೈ)
 • ಪಾದ (ಕಾಲು)
 • ಪಾಯು (ಗುದ)
 • ಉಪಸ್ಥ (ಜನನೇಂದ್ರಿಯ)
 • ೫. ಕರ್ಮೇಂದ್ರಿಯಗಳು
 • ಲೋಕ : ಓಂ ಭೂಃ
 • ಚಕ್ರ : ಮೂಲಾಧಾರ - ನಾಲ್ಕು ದಳ ಪೃಥ್ವೀ ತತ್ವ

ಅವಸ್ಥಾ ತ್ರಯ

ಬದಲಾಯಿಸಿ

 • ಜೀವಿಯ ಮೂರು ಅವಸ್ಥೆ ಗಳು: - ೧.ಜಾಗ್ರತ್ ; ೨. ಸ್ವಪ್ನ ; ೩. ಸುಷುಪ್ತಿ
 • ಅದಕ್ಕೆ ಮೂರು ಅಧಿ ದೇವತೆಗಳು:- ೧ ವೈಶ್ವಾ ನರ; ತೈಜಸ ; ೩ ಪ್ರಾಜ್ಞ
 • ತ್ರಿ ಮೂರ್ತಿಗಳು -.> ೧. ಸಗುಣ ಬ್ರಹ್ಮ ೨. ವಿಷ್ಣು ೩. ರುದ್ರ (ಮಹೇಶ್ವರ)
 • ಗುಣಗಳು -> ೧. ಸತ್ವ ೨. ರಜ ೩. ತಮ.
 • ಕಾರ್ಯ ಕಾರಣರು -> ೧. ಸೂತ್ರಾತ್ಮ ೨. ಅಂತರ್ಯಾಮಿ ೩. ಪ್ರಳಯಕಾರ

*ಭಗವದ್ಗೀತೆ ಮತ್ತು ವಿಶ್ವ ರಚನೆ

 • ಬ್ರಹ್ಮ , ಅಧ್ಯಾತ್ಮ , ಅಧಿಭೂತ, ಅಧಿದೈವ, ( ಅಧಿಯಜ್ಞ,) ಈ ಕ್ರಮದಲ್ಲೂ ಒಂದರೊಳಗೊಂದು ಹಾಸು ಹೊಕ್ಕಾದ ವಿಶ್ವ ರಚನೆಯನ್ನು ಗೀತೆಯಲ್ಲಿ ಹೇಳಿದೆ [೧][೨][೩][೪]

ಉಲ್ಲೇಖ

ಬದಲಾಯಿಸಿ
 1. ಭಗವದ್ಗೀತಾ ತಾತ್ಪರ್ಯ- ಎಂಟನೇ ಅಧ್ಯಾಯ.
 2. ಭಾರತ ತತ್ವಶಾಸ್ತ್ರ ಪರಿಚಯ : ಎಂ ಪ್ರಭಾಕರ ಜೋಷಿ ಮತ್ತು ಎಂ.ಎಂ. ಹೆಗಡೆ ಮತ್ತು ಇತರ ಗ್ರಂಥಗಳು.
 3. ಶ್ರೀ ಶಂಕರ ಗೀತಾ ಭಾಷ್ಯ
 4. ತೈತ್ತರೀಯ ಉಪನಿಷತ್