ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ಕುಂಡಲಿನಿ ಬದಲಾಯಿಸಿ

  • ಕುಂಡಲಿನಿ (kuṇḍalinī, ಸಂಸ್ಕೃತ:कुण्डलिनी) ಅಕ್ಷರಶಃ ಸುರುಳಿಯಾಕಾರ' ಎಂಬ ಅರ್ಥವನ್ನು ನೀಡುತ್ತದೆ. ಭಾರತೀಯ ಯೋಗ ದಲ್ಲಿ, ಇದು ಒಂದು "ದೈಹಿಕ ಶಕ್ತಿ"[೧] - ಒಂದು ಸುಪ್ತ, ಸಹಜ ಪ್ರವೃತ್ತಿಯ ಅಥವಾ ಮಾನಸಿಕ ಪ್ರಚೋದನೆ ಅಥವಾ ಶಕ್ತಿಯು, ಬೆನ್ನುಮೂಳೆಯ ತಳದಲ್ಲಿ ಸುರುಳಿಯಾಕಾರದಲ್ಲಿ ಇರುತ್ತದೆ.[೨][೩][೪]
  • ಇದನ್ನು ಒಂದು ದೇವಿಯ ರೂಪದಲ್ಲಾಗಲಿ ಅಥವಾ ಒಂದು ಮಲಗಿರುವ ಸರ್ಪದ ರೂಪದಲ್ಲಾಗಲಿ ಚಿತ್ರಿಸಲಾಗುತ್ತದೆ. ಹೀಗಾಗಿ ಈ ಪದದ ಇಂಗ್ಲೀಷ್ ರೂಪಾಂತರದಲ್ಲಿ ಹೆಚ್ಚಾಗಿ 'ಸರ್ಪ ಶಕ್ತಿ' ಎಂದು ಕರೆಯಲಾಗುತ್ತದೆ. ಕುಂಡಲಿನಿಯು ಸೇಕ್ರಂ(ಬೆನ್ನೆಲುಬುಗಳು ಸೇರಿಕೊಂಡು ಉಂಟಾಗಿರುವ ತ್ರಿಕೋನಾಕಾರದ ಎಲುಬು) ಮೂಳೆಯಲ್ಲಿ ಮೂರುವರೆ ಸುರುಳಿಗಳಲ್ಲಿ ಇರುತ್ತದೆ ಹಾಗೂ ಇದನ್ನು ಪರಿಶುದ್ಧ ವಾಂಛೆಯ ಒಂದು ಉಳಿಕೆ ಶಕ್ತಿ ಎಂದು ವಿವರಿಸಲಾಗಿದೆ.[೫]
  • ಯೋಗತತ್ತ್ವ ಉಪನಿಷತ್ತು ನಾಲ್ಕು ವಿಧದ ಯೋಗಗಳನ್ನು ಉಲ್ಲೇಖಿಸುತ್ತದೆ. ಇದರಲ್ಲಿ ಲಯ-ಯೋಗ ವು ಕುಂಡಲಿನಿಯನ್ನು ಒಳಗೊಂಡಿದೆ.[೬]
  • ಶ್ರೀ ರಮಣಮಹರ್ಷಿಗಳು ಕುಂಡಲಿನಿ ಶಕ್ತಿಯು ಆತ್ಮದ ಸ್ವಾಭಾವಿಕ ಶಕ್ತಿಯೆಂದು ಸಮರ್ಥಿಸುತ್ತಾರೆ. ಆತ್ಮವು ಸಾರ್ವತ್ರಿಕ ಪ್ರಜ್ಞೆಯಾಗಿದ್ದು (ಪರಮಾತ್ಮ) ಪ್ರತಿಯೊಂದು ಜೀವಿಯಲ್ಲೂ ಇರುವುದರ ಜೊತೆಗೆ ವೈಯಕ್ತಿಕ ಚಿಂತನೆಗಳ ಮನಸ್ಸು ಈ ಸ್ವಾಭಾವಿಕ ಶಕ್ತಿಯನ್ನು ಪರಿಶುದ್ಧವಾದ ಭಾವದಿಂದ ಮುಚ್ಚಿಹಾಕುತ್ತದೆ. ಅದ್ವೈತವು ಆತ್ಮಸಾಕ್ಷಾತ್ಕಾರ, ಜ್ಞಾನೋದಯ, ಭಗವಂತನ ಬಗ್ಗೆ ಅರಿವು, ನಿರ್ವಾಣ ಹಾಗೂ ಕುಂಡಲಿನಿಯ ಜಾಗೃತಿ ಎಲ್ಲವೂ ಒಂದೇ ಎಂದು ಬೋಧಿಸುತ್ತದೆ ಹಾಗೂ ಈ ಗುರಿಯನ್ನು ತಲುಪಲು ಸ್ವಯಂ-ಶೋಧನೆಯ ಧ್ಯಾನವು ತುಂಬಾ ಸ್ವಾಭಾವಿಕವಾದ ಹಾಗೂ ಸುಲಭದ ಸಾಧನವೆಂದು ಪರಿಗಣಿಸಲಾಗಿದೆ.[೭]
  • ಯೋಗ ಹಾಗೂ ತಂತ್ರವು ಈ ಶಕ್ತಿಯನ್ನು ಗುರುವಿನ ಮೂಲಕ "ಜಾಗೃತ" ಗೊಳಿಸಿಕೊಳ್ಳಬಹುದು ಎಂದು ಸೂಚಿಸುತ್ತವೆ, ಆದರೆ ದೇಹ ಹಾಗೂ ಆತ್ಮವನ್ನು ಯೋಗದ ತಪಶ್ಚರ್ಯಗಳಾದ ಪ್ರಾಣಾಯಾಮ, ಅಥವಾ ಉಸಿರಿನ ನಿಯಂತ್ರಣ, ದೈಹಿಕ ವ್ಯಾಯಾಮಗಳು, ಮನೋಗೋಚರತೆ ಹಾಗೂ ಮಂತ್ರ ಪಠಣದಿಂದ ಸಿದ್ಧಗೊಳಿಸಿಕೊಳ್ಳಬೇಕು.

ಕುಂಡಲಿನಿಯನ್ನು ಜಾಗೃತಗೊಳಿಸುವುದು ಬದಲಾಯಿಸಿ

  • ಕುಂಡಲಿನಿಯನ್ನು ಸಿದ್ಧ-ಗುರುಗಳ ಅನುಗ್ರಹದಿಂದ ಜಾಗೃತಗೊಳಿಸಿಕೊಳ್ಳಬಹುದು. ಇವರು ತಾವು ಅಭ್ಯಾಸ ಮಾಡಿದ ಕುಂಡಲಿನಿ ಶಕ್ತಿಯನ್ನು ಶಕ್ತಿಪಾತ ಅಥವಾ ಆಶೀರ್ವಾದದ ಮೂಲಕ ಜಾಗೃತಗೊಳಿಸುತ್ತಾರೆ. ಒಬ್ಬ ಸಿದ್ಧ ಗುರುವು ಆಧ್ಯಾತ್ಮಿಕ ಬೋಧಕನಾಗಿರುತ್ತಾನೆ. ಒಬ್ಬ ಗುರುವಾಗಿರುತ್ತಾನೆ. ಸರ್ವೋಚ್ಚ ಆತ್ಮದ ಜೊತೆಗೆ ಈತನು ಗುರುತಿಸಿಕೊಳ್ಳುವುದು ನಿರಂತರವಾಗಿರುತ್ತದೆ.[೮] ಶಕ್ತಿಯ ಪ್ರತಿಯೊಂದು ರೂಪಗಳಂತೆ ಪ್ರತಿಯೊಬ್ಬರೂ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಅರಿಯಬೇಕು. ಈ ಆಧ್ಯಾತ್ಮಿಕ ಶಕ್ತಿಯನ್ನು ಏಕೀಕರಿಸುವ ನಿಟ್ಟಿನಲ್ಲಿ, ಮೊದಲು ದೇಹ ಹಾಗು ನರಮಂಡಲದ ಶುದ್ಧೀಕರಣ ಹಾಗೂ ಅದನ್ನು ಬಲಪಡಿಸುವ ಅಗತ್ಯವಿದೆ.[೯]
  • ಕುಂಡಲಿನಿಯು, ಬೆನ್ನುಮೂಳೆಯ ತಳದಲ್ಲಿ ಮೂಲಾಧಾರ ಚಕ್ರದಿಂದ ಒಂದು ತೆಳುವಾದ ನಾಳದವರೆಗೂ ಮೇಲಕ್ಕೆ ಏರುತ್ತದೆ (ಇದನ್ನು ಸುಶುಮ್ನ ಎಂದು ಕರೆಯಲಾಗುತ್ತದೆ) ಹಾಗೂ ಅಲ್ಲಿಂದ ತಲೆಯ ಮೇಲ್ಭಾಗದವರೆಗೂ ಸಹಸ್ರಾರ ದ ಜೊತೆಗೆ ಅಥವಾ ನೆತ್ತಿಯ ಚಕ್ರದ ಜೊತೆಗೆ ಒಂದಾಗುತ್ತದೆ. ಕುಂಡಲಿನಿ ಶಕ್ತಿಯನ್ನು ಒಂದು ದೇವಿಯ ರೂಪದಲ್ಲಿ ಕಲ್ಪಿಸಿಕೊಂಡಾಗ, ನಂತರ ಅದು ತಲೆಯ ಭಾಗಕ್ಕೆ ಏರಿದರೆ, ಅದು ಪರಮಾತ್ಮನ ಜೊತೆ ವಿಲೀನವಾಗುತ್ತದೆ (ಭಗವಾನ್ ಶಿವ). ನಂತರ ಜ್ಞಾನಕ್ಕಾಗಿ ಹಂಬಲಿಸುವವನು ಆಳವಾದ ಧ್ಯಾನದಲ್ಲಿ ಹಾಗೂ ಅಪರಿಮಿತ ಆನಂದದಲ್ಲಿ ಮಗ್ನನಾಗುತ್ತಾನೆ.[೧೦][೧೧]
  • ಈ ಜಾಗೃತಿಯು ದೈಹಿಕವಾಗಿ ಸಂಭವಿಸುವುದಿಲ್ಲ. ಆದರೆ ಇದು ಪ್ರತ್ಯೇಕವಾಗಿ ಪ್ರಜ್ಞೆಯ ಬೆಳವಣಿಗೆಯನ್ನು ಒಳಗೊಂಡಿರುತ್ತದೆ. ಕುಂಡಲಿನಿ ಜಾಗೃತಿಯು ಬ್ರಹ್ಮಾಂಡದ ಕಂಪನಗಳು ಹಾಗೂ ಪ್ರಖರ ಶಕ್ತಿಯ ಬಗ್ಗೆ ಗ್ರಹಿಕೆಯನ್ನು ಹೆಚ್ಚಿಸುತ್ತದೆ. ಬ್ರಹ್ಮಾಂಡದೊಳಗಿರುವ ಸಂಪರ್ಕಗಳು ಹಾಗೂ ನಿಯಮಗಳ ಬಗೆಗಿನ ಅರಿವು ಆಳವಾಗುತ್ತದೆ.[೯]ನಿರ್ಮಲ ಶ್ರೀವಾಸ್ತವ ಅವರ ಪ್ರಕಾರ ಬೆರಳತುದಿಗಳಲ್ಲಿ ಹಾಗೂ ನೆತ್ತಿ ಸುಳಿಯ ಮೂಲೆಯ ಭಾಗದಲ್ಲಿ ಒಂದು ತಂಪು ಗಾಳಿಯು ಬೀಸಿದ ಅನುಭವವಾಗುತ್ತದೆ.[೫]
  • ದೈವಿಕ ತಿಳಿವಳಿಕೆಯನ್ನು ಸಾಧಿಸಲು ಕುಂಡಲಿನಿಯನ್ನು ಜಾಗೃತಗೊಳಿಸುವುದು ಮಾತ್ರ ಏಕೈಕ ಮಾರ್ಗ. ಆತ್ಮಸಾಕ್ಷಾತ್ಕಾರ ವನ್ನು ದೈವಿಕ ಅರಿವು ಅಥವಾ ಗ್ನೋಸಿಸ್(ಜ್ಞಾನ)ಗೆ ಸಮನಾಗಿದೆ ಎಂದು ಹೇಳಲಾಗುತ್ತದೆ ಅಥವಾ ಆತ್ಮ-ಜ್ಞಾನಕ್ಕೆ ಸಮನಾಗಿದೆ ಎಂದು ಅರ್ಥೈಸಲಾಗುತ್ತದೆ.[೧೨] ಕುಂಡಲಿನಿಯ ಜಾಗೃತಿಯು "ಆಂತರಿಕ ಜ್ಞಾನದ ಜಾಗೃತಿ" ಯನ್ನು ವ್ಯಕ್ತಪಡಿಸುತ್ತದೆ ಹಾಗೂ ಅದರ ಜತೆಗೆ ಪರಿಶುದ್ಧ ಆನಂದ, ಪರಿಶುದ್ಧ ಜ್ಞಾನ ಹಾಗೂ ಪರಿಶುದ್ಧ ಪ್ರೀತಿ ಹುಟ್ಟು ಹಾಕುತ್ತದೆ.[೯]

ಪದದ ವ್ಯುತ್ಪತ್ತಿ ಬದಲಾಯಿಸಿ

  • "ಕುಂಡಲಿನಿ" ಎಂಬ ಪದವು ಹಲವಾರು ಪದಗಳ ಹಾಗೂ ಹಲವಾರು ಅರ್ಥಗಳ ಮೇಲೆ ಆಧರಿಸಿದೆ. "ಇ" ನಿಂದ ಅಂತ್ಯಗೊಳ್ಳುವ ಈ ಪದವು ಸ್ತ್ರೀತತ್ತ್ವಕ್ಕೆ ಸಂಬಂಧಿಸುವುದರ ಜೊತೆಗೆ ಶಕ್ತಿ ಹಾಗೂ ಪ್ರಕೃತಿ ರೂಪಕ್ಕೂ ಸಹ ಸಂಬಂಧಿಸುತ್ತದೆ ಎಂದು ಸೂಚಿಸಲಾಗಿದೆ.[೯]
  • ಕುಂಡ(KUNDA)ಎಂದರೆ ಎಲ್ಲ ಕಸಕಡ್ಡಿ ಹಾಗೂ ಹೊಲಸನ್ನು ಎಸೆಯುವ ಒಂದು ಕಂದಕ ಅಥವಾ ಬಾವಿ. ಬಹಳ ಬೇಗನೆ ಹೊಲಸು ತನ್ನ ಮೂಲ ರೂಪವನ್ನು ಕಳೆದುಕೊಂಡು ಒಂದು ನಿರಾಕಾರ ಜಾಲದಲ್ಲಿ ವಿಯೋಜಿಸಲ್ಪಡುತ್ತದೆ. ಇದರಲ್ಲಿ ವೈಯಕ್ತಿಕ ಅಂಶಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇದೇ ರೀತಿಯಲ್ಲಿ, ನಮ್ಮ ಪೂರ್ವಜನ್ಮಗಳ ಭಾವನೆ ಒಂದು ಅಸ್ಪಷ್ಟಾಕಾರದ ವಸ್ತುವಾಗಿ ಸುಪ್ತ ಮನಸ್ಸಿನಲ್ಲಿ ಹುದುಗಿರುತ್ತದೆ (ಮೂಲಾಧಾರ ಚಕ್ರ).[೯]
  • ಕುಂಡಲ (KUNDALA) ಎಂದರೆ ಉಂಗುರ ಹಾಗೂ ಸಾಮಾನ್ಯವಾಗಿ ಸಂಸ್ಕೃತದಲ್ಲಿ ಒಂದು ಕಿವಿಯೋಲೆಯನ್ನು ಉಲ್ಲೇಖಿಸುತ್ತದೆ.
  • "ಕುಂಡಲಿನಿ"(KUNDALINI)ಯ ಇತರ ಮೂಲಗಳೆಂದರೆ ಕುಂಡಲಿನ್ (KUNDALIN) ಎಂಬ ಸರ್ಪ ಹಾಗೂ ಕಾಲ(KALA), ಕಾಲಪುರುಷ ಅಥವಾ ಸಾವು. ಭಾರತೀಯ ಪುರಾಣದಲ್ಲಿ ಭಗವಾನ್ ವಿಷ್ಣು ಸಾವಿರ ತಲೆಗಳ ಸರ್ಪದ ಮೇಲೆ ವಿರಮಿಸುತ್ತಾನೆ ಹಾಗೂ ಮೊದಲ ಕಂಪನವನ್ನು ಹೊರಡಿಸುತ್ತಾನೆ (ಸ್ಫುರಣ). ಇದರಿಂದ ಸಂಪೂರ್ಣ ಬ್ರಹ್ಮಾಂಡವು ಉದ್ಭವಿಸುತ್ತದೆ[೯].

ಕುಂಡಲಿನಿ ಬಗ್ಗೆ ಸ್ವಾಮಿ ವಿವೇಕಾನಂದರ ವ್ಯಾಖ್ಯಾನ ಬದಲಾಯಿಸಿ

ಸ್ವಾಮಿ ವಿವೇಕಾನಂದರು ಲಂಡನ್ ನಲ್ಲಿ ರಾಜ ಯೋಗದ ಬಗ್ಗೆ ಉಪನ್ಯಾಸ ನೀಡುತ್ತಾ ಕುಂಡಲಿನಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾರೆ:[೧೩]

  • "ಯೋಗಿಗಳ ಪ್ರಕಾರ, ಬೆನ್ನುಮೂಳೆಯಲ್ಲಿ ಎರಡು ನರಗಳಿರುತ್ತವೆ. ಪಿಂಗಳ ಹಾಗು ಇಡಾ. ಇದಲ್ಲದೆ ಸುಶುಮ್ನ ಎಂಬ ಒಂದು ಟೊಳ್ಳಾದ ನಾಳವು ಬೆನ್ನುಹುರಿಯ ಮೂಲಕ ಹಾದು ಹೋಗುತ್ತದೆ. ಟೊಳ್ಳಾದ ನಾಳದ ಕೊನೆಯ ಭಾಗವನ್ನು "ಕುಂಡಲಿನಿಯ ಕಮಲ" ಎಂದು ಯೋಗಿಗಳು ಕರೆಯುತ್ತಾರೆ. ಅವರು ಇದನ್ನು ತ್ರಿಕೋನಾಕಾರದಲ್ಲಿದೆಯೆಂದು ವಿವರಿಸುವುದರ ಜೊತೆಗೆ, ಯೋಗಿಗಳ ಸಾಂಕೇತಿಕ ಭಾಷೆಯಲ್ಲಿ, ಕುಂಡಲಿನಿ ಎಂಬ ಶಕ್ತಿಯು, ಸುರುಳಿಯಾಗಿ ರಚನೆಗೊಂಡಿರುತ್ತದೆ. ಕುಂಡಲಿನಿಯು ಜಾಗೃತಗೊಂಡಾಗ, ಈ ಟೊಳ್ಳು ನಾಳದ ಮೂಲಕ ಒಂದು ದಾರಿ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಜೊತೆಗೆ ಇದು ಹಂತ ಹಂತವಾಗಿ ಮೇಲೇರುವಾಗ, ಅಂದರೆ ಮನಸ್ಸು ಎಳೆ ಎಳೆಯಾಗಿ ತೆರೆದುಕೊಳ್ಳುತ್ತದೆ. ಜೊತೆಗೆ ಎಲ್ಲ ವಿವಿಧ ದೃಷ್ಟಿಕೋನಗಳು ಹಾಗೂ ಅದ್ಭುತ ಶಕ್ತಿಗಳು ಯೋಗಿಗೆ ಒದಗುತ್ತದೆ. ಅದು ಮಿದುಳನ್ನು ತಲುಪಿದಾಗ, ಯೋಗಿಯು ಸಂಪೂರ್ಣವಾಗಿ ದೇಹ ಮತ್ತು ಮನಸ್ಸಿನಿಂದ ಬೇರ್ಪಡುತ್ತಾನೆ; ಆತ್ಮವು ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳುತ್ತದೆ.
  • ನಮಗೆಲ್ಲ ತಿಳಿದಿರುವ ಹಾಗೆ ಬೆನ್ನು ಹುರಿಯು ಒಂದು ವಿಶಿಷ್ಟ ರೀತಿಯಲ್ಲಿ ರಚನೆಯಾಗಿರುತ್ತದೆ. ನಾವು ಎಂಟರ ಸಂಖ್ಯೆಯನ್ನು ಅಡ್ಡಡ್ಡಲಾಗಿ ನೋಡಿದಾಗ (∞) ಎರಡು ಭಾಗವು ಮಧ್ಯದಲ್ಲಿ ಕೂಡಿ ಕೊಂಡಿರುವುದು ಕಂಡು ಬರುತ್ತದೆ. ಒಂದು ವೇಳೆ ಎಂಟರ ನಂತರ ಎಂಟನ್ನು ಕೂಡಿಸಿ, ಒಂದರ ಮೇಲೊಂದರಂತೆ ಪೇರಿಸಿದಾಗ, ಅದು ಬೆನ್ನು ಹುರಿಯನ್ನು ಸಂಕೇತಿಸುತ್ತದೆ. ಇಡಾ ಎಡಭಾಗದಲ್ಲಿದ್ದರೆ, ಪಿಂಗಳವು ಬಲಭಾಗದಲ್ಲಿದೆ, ಜೊತೆಗೆ ಬೆನ್ನು ಹುರಿಯ ಮಧ್ಯದಿಂದ ಹಾದು ಹೋಗುವ ಟೊಳ್ಳುನಾಳವೇ ಸುಶುಮ್ನ. ಅಲ್ಲಿ ಬೆನ್ನು ಹುರಿಯು ಬೆನ್ನಿನ ಕೆಳಭಾಗದ ಬೆನ್ನುಮೂಳೆ ಯಲ್ಲಿ ಕೊನೆಗೊಂಡರೆ, ಒಂದು ಸೂಕ್ಷ್ಮವಾದ ತಂತು ರಚನೆಯು ಕೆಳಮುಖವಾಗಿ ರಚನೆಯಾಗಿದೆ. ಜೊತೆಗೆ ನಾಳವು ತಂತು ರಚನೆಯ ಒಳಗೆ ಹಾದು ಹೋಗುತ್ತದೆ. ಸೇಕ್ರಲ್ ಪ್ಲೆಕ್ಸಸ್ (ತ್ರಿಕಾಸ್ಥಿಯ ಜಾಲರಚನೆ) ನ ಹತ್ತಿರ ಸ್ಥಾಪಿತವಾಗಿರುವ ಈ ನಾಳವು ಕೆಳಭಾಗದಲ್ಲಿ ಕೊನೆಗೊಳ್ಳುತ್ತದೆ. ಇದು ಆಧುನಿಕ ಶರೀರ ವಿಜ್ಞಾನದ ಪ್ರಕಾರ ತ್ರಿಕೋನಾಕಾರದಲ್ಲಿ ರಚನೆಯಾಗಿದೆ. ಬೆನ್ನುಮೂಳೆಯ ನಾಳದಲ್ಲಿ ಕೇಂದ್ರೀಕೃತವಾಗಿರುವ ವಿವಿಧ ನರಜಾಲಗಳು, ಯೋಗಿಯ ವಿವಿಧ "ಕಮಲಗಳಿಗೆ" ಚೆನ್ನಾಗಿ ಅನ್ವಯಿಸುತ್ತವೆ."

ಕುಂಡಲಿನಿ/ತಂತ್ರ ಹಾಗೂ ಲೈಂಗಿಕತೆಯ ಬಗ್ಗೆ ವೇದಾಂತದ ದೃಷ್ಟಿಕೋನ ಬದಲಾಯಿಸಿ

  • ತಂತ್ರವೆಂಬುದು ದೈವ ಸ್ವರೂಪಿಣಿ, ಶಕ್ತಿಯ ಆರಾಧನೆ.[೧೪]
  • ಶಕ್ತಿಯನ್ನು ಪ್ರಕೃತಿ ಅಥವಾ ಆದಿಸ್ವರೂಪದ ಪ್ರಕೃತಿ ಎಂದೂ ಸಹ ಕರೆಯಲಾಗುತ್ತದೆ. ನಿಸರ್ಗ(ಪ್ರಕೃತಿ)ವು ಮೂಲ ದೈವಿಕ ಜ್ಞಾನ(ಪುರುಷ)ದ ಜೊತೆಗೆ ಯಾವಾಗಲೂ ಸಂಪರ್ಕವನ್ನು ಕಾಯ್ದುಕೊಂಡಿರುತ್ತದೆ. ಪ್ರಕೃತಿಯ ಅಂಶವಾಗಿ ಆಕರ್ಷಣಾ ಶಕ್ತಿಯು ಬೆಳವಣಿಗೆಯಾಗುತ್ತದೆ. ಐಕ್ಯಗೊಳ್ಳುವ ಅಪೇಕ್ಷೆ ಹಾಗೂ ವಿಸ್ತರಣೆಯ ಬಗ್ಗೆ ಪ್ರಯತ್ನವು "ಸ್ವಾಭಾವಿಕವಾದುದು"; ಅವು ಪ್ರಕೃತಿಯ ಸ್ವಾಭಾವಿಕ ಪ್ರಚೋದನೆಗಳು.[೧೫] ಪುರುಷ ಮತ್ತು ಪ್ರಕೃತಿಗಿರುವ ಇತರ ಪದಗಳು ಶಿವ ಹಾಗು ಶಕ್ತಿ. ಶಿವ ಪ್ರಜ್ಞೆ ಹಾಗೂ ಪುರುಷ ತತ್ತ್ವವನ್ನು ಸಂಕೇತಿಸಿದರೆ, ಶಕ್ತಿಯು ಸ್ತ್ರೀ ತತ್ತ್ವವನ್ನು ಸಂಕೇತಿಸುತ್ತದೆ.
  • ಶಿವ ಹಾಗೂ ಶಕ್ತಿಯನ್ನು ಪುರುಷ ಹಾಗೂ ಸ್ತ್ರೀಯಾಗಿ ಕಂಡಾಗ,ಕೆಲವೊಂದು ಬಾರಿ ತಪ್ಪಾಗಿ ಅರ್ಥೈಸಲಾಗುತ್ತದೆ. ಜೊತೆಗೆ ಅವರ ಸಂಬಂಧವನ್ನು ಲೈಂಗಿಕವಾಗಿ ಪರಿಗಣಿಸಲಾಗುತ್ತದೆ:[೧೬]

ಪಾಶ್ಚಾತ್ಯ ವ್ಯಾಖ್ಯಾನ ಬದಲಾಯಿಸಿ

  • ಕುಂಡಲಿನಿಯನ್ನು ಚಕ್ರ ಶಕ್ತಿ ಕೇಂದ್ರಗಳು ಹಾಗೂ ನಾಡಿಗಳ ನಾಳದ ಜೊತೆಗಿನ ಸೂಕ್ಷ್ಮ ದೇಹದ ಪರಸ್ಪರ ಕ್ರಿಯೆ ಎಂದು ಪರಿಗಣಿಸಲಾಗಿದೆ. ಪ್ರತಿ ಚಕ್ರವು ಒಂದೊಂದು ವಿಶೇಷ ಲಕ್ಷಣವನ್ನು ಹೊಂದಿರುತ್ತವೆಂದು ಹೇಳಲಾಗಿದೆ[೧೭] ಹಾಗೂ ಸರಿಯಾದ ಅಭ್ಯಾಸದಿಂದ, ಕುಂಡಲಿನಿ ಶಕ್ತಿಯನ್ನು ಈ ಚಕ್ರಗಳ 'ಮೂಲಕ' ಪ್ರಚೋದಿಸಬಹುದು. ಇದು ಈ ಲಕ್ಷಣಗಳು ತೆರೆದುಕೊಳ್ಳಲು ಅಥವಾ ವ್ಯಕ್ತಪಡಿಸಲು ಸಹಕಾರಿಯಾಗಿದೆ.
  • ಸರ್ ಜಾನ್ ವುಡ್ರೋಫ್ಫ್ (ಕಾವ್ಯನಾಮ ಆರ್ಥರ್ ಅವಲೋನ್) ಪಾಶ್ಚಿಮಾತ್ಯರಿಗೆ ಕುಂಡಲಿನಿ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲಿಗರು. ಕೊಲ್ಕತ್ತಾ ದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಇವರು ಶಕ್ತಿ ಸಿದ್ಧಾಂತ ಹಾಗು ಹಿಂದೂ ತಂತ್ರ ದ ಬಗ್ಗೆ ಆಸಕ್ತಿ ಯನ್ನು ಹೊಂದಿದ್ದರು. ಎರಡು ಪ್ರಮುಖ ವಿಷಯಗಳ ಮೇಲಿನ ಅವರ ತರ್ಜುಮೆ ಹಾಗೂ ವ್ಯಾಖ್ಯಾನವು ದಿ ಸರ್ಪೆಂಟ್ ಪವರ್ ಎಂಬ ಹೆಸರಿನಿಂದ ಪ್ರಕಟಗೊಂಡಿದೆ.
  • ವುಡ್ರೋಫ್ಫ್ ಕುಂಡಲಿನಿಗೆ ಆಂಗ್ಲ ಭಾಷೆಯಲ್ಲಿ ಒಂದು ಸೂಕ್ತ ಪದ ದೊರೆಯದ ಕಾರಣ "ಸರ್ಪೆಂಟ್ ಪವರ್" ಎಂದು ಹೆಸರಿಸುತ್ತಾರೆ. ಆದರೆ ಸಂಸ್ಕೃತದಲ್ಲಿ "ಕುಂಡಲ" ಎಂದರೆ "ಸುರುಳಿಯಾಗಿರುವುದು" ಎಂಬ ಅರ್ಥವನ್ನು ನೀಡುತ್ತದೆ.[೧೮]
  • ಥಿಯೋಸೋಫಿಕಲ್ ಸೊಸೈಟಿ ಜೊತೆಗೆ ಮನೋವಿಶ್ಲೇಷಕ ಕಾರ್ಲ್ ಜಂಗ್ ರ ಆಸಕ್ತಿಯಿಂದ ಕುಂಡಲಿನಿಯ ಕಲ್ಪನೆಯ ಬಗ್ಗೆ ಪಾಶ್ಚಿಮಾತ್ಯರ ಜಾಗೃತಿಯನ್ನು ಬಲಪಡಿಸಿತು. (1875-1961)[೧].

"ಕಳೆದ 1932ರಲ್ಲಿ ಜ್ಯೂರಿಚ್ ನ ಸೈಕಾಲಜಿಕಲ್ ಕ್ಲಬ್ ಆಯೋಜಿಸಿದ ಕುಂಡಲಿನಿ ಯೋಗದ ಬಗೆಗಿನ ಜಂಗ್‌ರ ವಿಚಾರಗೋಷ್ಠಿಯನ್ನು ಪೌರಸ್ತ್ಯ ಚಿಂತನೆಯ ಬಗ್ಗೆ ಮನೋವೈಜ್ಞಾನಿಕ ತಿಳಿವಳಿಕೆಯ ಒಂದು ಮೈಲಿಗಲ್ಲು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

ಕುಂಡಬಫರ್ ಬದಲಾಯಿಸಿ

  • ಕುಂಡಬಫರ್ ಎಂಬ ಪದವನ್ನು G.I. ಗುರ್ಡ್ಜಿಯೆಫ್ಫ್ ತಮ್ಮ ರಷ್ಯನ್ ರೂಪಾಂತರ ಆಲ್ ಅಂಡ್ ಎವೆರಿಥಿಂಗ್: ಬೆಲ್ಜಿಬಬ್'ಸ್ ಟೇಲ್ಸ್ ಟು ಹಿಸ್ ಗ್ರ್ಯಾಂಡ್ಸನ್ ನಲ್ಲಿ ಮೊದಲ ಬಾರಿಗೆ ಸೃಷ್ಟಿಸುತ್ತಾರೆ. ಈ ಪದವನ್ನು ಆಂಗ್ಲ ಭಾಷೆಗೆ ಅವರ ಸ್ನೇಹಿತ ಹಾಗು ಶಿಷ್ಯ A. R. ಓರೇಜ್ ತರ್ಜುಮೆ ಮಾಡಿದ್ದಾರೆ.
  • "ಕುಂಡ" ಎಂಬುದು ಸಂಸ್ಕೃತ ಪದ "ಕುಂಡಲಿ"ಯ ಸಂಕ್ಷಿಪ್ತ ರೂಪ. ಅದರ ಅರ್ಥ "ಸುರುಳಿಯಾಕಾರ " ಹೀಗಾಗಿ "ಕುಂಡಲಿನಿ" ಎಂದರೆ ಅಕ್ಷರಶಃ "ಸುರುಳಿಯಾಕಾರವಿಲ್ಲದ" ಎಂಬ ಅರ್ಥವನ್ನು ನೀಡುತ್ತದೆ.
  • ಗುರ್ಡ್ಜಿಯೆಫ್ಫ್ P. D. ಔಸ್ಪೆನ್ಸ್ಕಿ ಗೆ ವಿವರಿಸುತ್ತಾ ". ಬಫರ್ ಗಳೆಂಬ ಪರಿಕರಗಳು ಮನುಷ್ಯನನ್ನು ಯಾವಾಗಲೂ ಸರಿಯಾದ ಮಾರ್ಗದಲ್ಲಿ ನಡೆಸುತ್ತವೆ." ಕುಂಡಬಫರ್ ನಂತರ ಮನುಷ್ಯನಲ್ಲಿ ನೆಲೆಗೊಂಡು ಅವನನ್ನು ನಿಶ್ಚೇಷ್ಟನನ್ನಾಗಿ ಮಾಡುವುದರ ಜೊತೆಗೆ ತನ್ನ ಕೆಳ ಸ್ವಭಾವದ ಅಪ್ಪಣೆಯನ್ನು ಪಾಲಿಸುವುದನ್ನು ಬಿಟ್ಟು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಗುರ್ಡ್ಜಿಯೆಫ್ಫ್ ಹಾಗು ಔಸ್ಪೆನ್ಸ್ಕಿ ಯು "ಕುಂಡಬಫರ್" ಹಾಗೂ "ಕುಂಡಲಿನಿ" ನಡುವೆ ಯಾವುದೇ ವ್ಯತ್ಯಾಸವನ್ನು ಕಂಡು ಹಿಡಿಯಲಿಲ್ಲ.
  • ಈ ನಿರ್ದಿಷ್ಟವಾದ ಹಂತದಲ್ಲಿ, ಸಮೆಲ್ ಆನ್ ವೆಯೋರ್, ಗುರ್ಡ್ಜಿಯೆಫ್ಫ್ ಹಾಗು ಔಸ್ಪೆನ್ಸ್ಕಿ ಇಬ್ಬರ ದೃಷ್ಟಿಕೋನವೂ ತಪ್ಪೆಂದು ಪರಿಗಣಿಸುತ್ತಾರೆ. ಈ ದೃಷ್ಟಿಕೋನವು, ಮಹಾನ್ ಭಾರತೀಯ ಋಷಿ ಪತಂಜಲಿಯ ದೃಷ್ಟಿಕೋನಕ್ಕೆ ನೇರ ವೈರುಧ್ಯವನ್ನು ಹೊಂದಿದೆ. ಗುರ್ಡ್ಜಿಯೆಫ್ಫ್ ನಂತೆ ಪತಂಜಲಿಯು ಸಹ ಕುಂಡಲಿನಿ ಅರಿವಿಗೆ ಹಾಗೂ ಜೀವದಾನ ಮಾಡುವ ಪ್ರಾಣಕ್ಕೆ ಅಡಚಣೆ ಎಂದು ಸೂಚಿಸುತ್ತಾರೆ. ಜೊತೆಗೆ ಇದನ್ನು ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ದಹಿಸಬೇಕು. ಖಂಡಿತವಾಗಿ ಪ್ರಚೋದನೆಗೆ ಒಳಪಡಿಸಬಾರದು. ನೋಡಿ ದೇಶಿಕಾಚಾರ್ ರ ರಿಲಿಜಿಯಸ್‌ನೆಸ್ ಇನ್ ಯೋಗ.
  • ಋಷಿಗಳಾದ ಪತಂಜಲಿ, ಗುರ್ಡ್ಜಿಯೆಫ್ಫ್ ಹಾಗು ಔಸ್ಪೆನ್ಸ್ಕಿ ಗೆ ಭಿನ್ನವಾಗಿ, ಸಮೆಲ್ ಆನ್ ವೆಯೋರ್ ಕುಂಡಬಫರ್ ಸೈತಾನನ ಬಾಲವೆಂದು ವ್ಯಾಖ್ಯಾನಿಸುತ್ತಾರೆ ಹಾಗೂ ಕುಂಡಲಿನಿಯು ಮನುಷ್ಯನಿಗೆ ಆತ್ಮಸಾಕ್ಷಾತ್ಕಾರವನ್ನು ಪಡೆಯುವಲ್ಲಿ ಸಹಕಾರಿಯಾಗಿದೆ. ಹಿಂದೂಗಳು ಕುಂಡಬಫರ್ ನ್ನು ಸರಳವಾಗಿ "ಕುಂಡಲಿ" ಎಂದು ತಿಳಿದಿದ್ದರೆ "ಕುಂಡಲಿನಿ"ಯನ್ನು "ಕುಂಡಲಿನಿ" ಎಂದೇ ತಿಳಿದಿದ್ದಾರೆ.[೨೩]

ನವ ಯುಗ ಬದಲಾಯಿಸಿ

  • ಕುಂಡಲಿನಿಯ ಬಗ್ಗೆ ಸೂಚನೆಗಳನ್ನು ಸಾಧಾರಣವಾಗಿ ಒಂದು ವ್ಯಾಪಕವಾದ ವಿವಿಧ ಜನ್ಯಗಳಾದ "ನ್ಯೂ ಏಜ್" ನಿರೂಪಣೆಗಳಿಂದ ಕಂಡುಕೊಳ್ಳಬಹುದಾಗಿದೆ, ಉದಾಹರಣೆಗೆ ಶಿರ್ಲೆಯ್ ಮ್ಯಾಕ್ಲೈನ್ ರ ನಿರೂಪಣೆ, ಜೊತೆಗೆ ಇದೊಂದು ಸೂಚಕಪದವಾಗಿ ಹಲವು ಹೊಸ ಧಾರ್ಮಿಕ ಚಳವಳಿಗಳು ಅಳವಡಿಸಿವೆ. ಆದಾಗ್ಯೂ, ಕೆಲವು ವ್ಯಾಖ್ಯಾನಕಾರರುಗಳು, ಉದಾಹರಣೆಗೆ ಅತೀಂದ್ರಿಯ ಮನೋವಿಜ್ಞಾನಿ ಸ್ಟುವರ್ಟ್ ಸೊವ್ಯಾಟ್ಸ್ಕಿ,[೨೪] ಯೋಗಕ್ಕೆ ಸಂಬಂಧಿಸಿದ ಸಂಸ್ಕೃತ ಪರಿಭಾಷೆಯು(ಚಕ್ರಗಳು, ಕುಂಡಲಿನಿ, ಮಂತ್ರಗಳು, ಮುಂತಾದವು) ಹೊಸ-ಯುಗದ ಬಾಹ್ಯರೂಪದ ಶೈಲಿಗೆ ಒಳಪಟ್ಟಿರುವುದು ದುರದೃಷ್ಟಕರ ಎಂದು ಭಾವಿಸುತ್ತಾರೆ.[೨೫]

ಮನೋರೋಗ ಚಿಕಿತ್ಸೆ (ಮಿದುಳು ತರಂಗಗಳು) ಬದಲಾಯಿಸಿ

  • ಇತ್ತೀಚಿನ ದಿನಗಳಲ್ಲಿ, ವೈದ್ಯಕೀಯ ಸಮುದಾಯದಲ್ಲಿ ಧ್ಯಾನದಿಂದ ದೇಹದ ಮೇಲೆ ಉಂಟಾಗುವ ಪರಿಣಾಮದ ಬಗೆಗಿನ ಅಧ್ಯಯನಗಳ ಬಗ್ಗೆ ಆಸಕ್ತಿಯು ಹೆಚ್ಚುತ್ತಿದೆ, ಜೊತೆಗೆ ಈ ಅಧ್ಯಯನಗಳಲ್ಲಿ ಕೆಲವು ಕುಂಡಲಿನಿ ಯೋಗದ ಅಭ್ಯಾಸವನ್ನು ತಮ್ಮ ಪ್ರಯೋಗದಲ್ಲಿ ಬಳಸಿ ಕೊಳ್ಳುತ್ತಿವೆ.[೨೬][೨೭] ಅವರ ಪ್ರಯೋಗವು ಸಕರಾತ್ಮಕವಾಗಿಲ್ಲ.
  • ಕೆಲ ಆಧುನಿಕ ಪ್ರಾಯೋಗಿಕ ಸಂಶೋಧನೆಯು[೨೮] ಕುಂಡಲಿನಿಯ ಅಭ್ಯಾಸದ ಬಗ್ಗೆ ಹಾಗೂ ವಿಲಹೆಲ್ಮ್ ರಿಚ್ ಹಾಗು ಅವರ ಅನುಯಾಯಿಗಳ ಕಲ್ಪನೆಗಳ ಬಗ್ಗೆ ಸಂಬಂಧವನ್ನು ಸ್ಥಾಪಿಸಿವೆ.
  • ಆದಾಗ್ಯೂ, ಏಷಿಯಾದ ಕೆಲವೊಂದು ಸಂಪ್ರದಾಯಗಳಿಗೆ ಸಂಬಂಧಿಸಿದ ಗಾಢವಾದ ಆಧ್ಯಾತ್ಮಿಕ ಅಭ್ಯಾಸಗಳು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿದ್ದವು. ಮನೋವೈಜ್ಞಾನಿಕ ಸಾಹಿತ್ಯವು "ಪೌರಸ್ತ್ಯ ಆಧ್ಯಾತ್ಮಿಕ ಅಭ್ಯಾಸಗಳ ಒಳಹರಿವಿನ ನಂತರ ಹಾಗೂ 1960ರ ದಶಕದಲ್ಲಿ ಪ್ರಾರಂಭ ಗೊಂಡ ಧ್ಯಾನದ ಜನಪ್ರಿಯತೆಯಿಂದಾಗಿ, ಬಹಳ ಜನರು ವಿಧವಿಧವಾದ ಮಾನಸಿಕ ಕಷ್ಟಗಳನ್ನು, ಗಾಢವಾದ ಆಧ್ಯಾತ್ಮಿಕ ಅಭ್ಯಾಸದಲ್ಲಿ ನಿರತವಾಗಿರುವಾಗ ಅಥವಾ ಸಹಜವಾಗಿ ಅನುಭವಿಸಿದರು" ಎಂಬುದನ್ನು ಗುರುತಿಸುತ್ತದೆ.
  • ಗಾಢವಾದ ಆಧ್ಯಾತ್ಮಿಕ ಅಭ್ಯಾಸದ ಜೊತೆಗೆ ಸಂಬಂಧಿಸಿರುವ ಮಾನಸಿಕ ತೊಂದರೆಗಳಲ್ಲಿ "ಕುಂಡಲಿನಿ ಜಾಗೃತಿ" ಸೇರಿದೆ, "ಯೋಗ ಸಂಪ್ರದಾಯದಲ್ಲಿ ವಿವರಿಸಲಾದ ಒಂದು ಸಂಕೀರ್ಣ ದೈಹಿಕ-ಮಾನಸಿಕವಾದ ಆಧ್ಯಾತ್ಮಿಕ ಪರಿವರ್ತಕ ಕ್ರಿಯೆ".[೨೯] ಇದಲ್ಲದೆ, ಅತೀಂದ್ರಿಯ ಮನಃಶಾಸ್ತ್ರ,[೩೦] ಹಾಗು ಸಾವಿನ-ಸಮೀಪದ ಅಧ್ಯಯನ[೩೧][೩೨] ಕ್ಷೇತ್ರದ ಸಂಶೋಧಕರು, ಒಂದು ಸಂಕೀರ್ಣ ಮಾದರಿಯ ಸಂವೇದಕ, ಚಾಲಕ, ಮಾನಸಿಕ ಹಾಗೂ ಪರಿಣಾಮಕಾರಿಯಾದ ಲಕ್ಷಣಗಳು ಕುಂಡಲಿನಿ ಪರಿಕಲ್ಪನೆಯ ಜೊತೆ ಸಂಬಂಧವನ್ನು ಹೊಂದಿದೆ. ಇದನ್ನು ಕೆಲವೊಂದು ಬಾರಿ ಕುಂಡಲಿನಿ ಸಿಂಡ್ರೋಮ್ಎಂದು ಕರೆಯಲಾಗುತ್ತದೆ.
  • ಮನೋವಿಶ್ಲೇಷಕ ಕಾರ್ಲ್ ಜಂಗ್ ರ ಪ್ರಕಾರ "...ಕುಂಡಲಿನಿ ಕಲ್ಪನೆಯು ಕೇವಲ ಒಂದೇ ಒಂದು ಉಪಯುಕ್ತತೆಯನ್ನು ಹೊಂದಿದೆ, ಅದೆಂದರೆ ನಮ್ಮ ಸ್ವಅನುಭವಗಳನ್ನು ಅಜಾಗೃತ ಸ್ಥಿತಿಯಲ್ಲಿ ವಿವರಿಸುವುದು..."[೩೩]

ಆಕರಗಳು ಬದಲಾಯಿಸಿ

  1. ಕುಂಡಲಿನಿಯನ್ನು "ದೈಹಿಕ ಬಲ"ವಾಗಿ ಕಾಣಲು ನೋಡಿ: ಫ್ಲಡ್ (1996), ಪುಟ.96.
  2. ^ ಫ್ಲಡ್ (1996), ಪುಟ . 99.
  3. ಹಾರ್ಪರ್ et al. (2002), ಪುಟ. 94
  4. ಮ್ಯಾಕ್ ಡೇನಿಯಲ್(2004), ಪುಟ. 103
  5. ೫.೦ ೫.೧ ಪೂಜ್ಯ ಶ್ರೀ ಮಾತಾಜಿ ನಿರ್ಮಲ ದೇವಿ ಶ್ರೀವಾಸ್ತವ: "ಮೆಟಾ ಮಾಡ್ರನ್ ಎರ", ಪುಟಗಳು 233-248. ವಿಶ್ವ ನಿರ್ಮಲ ಧರ್ಮ; ಮೊದಲ ಆವೃತ್ತಿ, 1995. ISBN 978-8186650059
  6. ^ ಫ್ಲಡ್ (1996), ಪುಟ.96.
  7. "From The Teachings of Sri Ramana Maharshi, Edited by David Godman".
  8. "The Guru". Archived from the original on 2008-10-07. Retrieved 2008-10-05.
  9. ೯.೦ ೯.೧ ೯.೨ ೯.೩ ೯.೪ ೯.೫ ^ಪರಮಹಂಸ ಸ್ವಾಮಿ ಮಹೇಶ್ವರಾನಂದ, ದ ಹಿಡನ್ ಪವರ್ ಇನ್ ಹ್ಯೂಮನ್ಸ್, ಇಬೆರಾ ವೆರ್ಲಾಗ್, ಪುಟಗಳು 47, 48. ISBN 3-85052-197-4.
  10. ಕುಂಡಲಿನಿ ಯೋಗ: http://www.siddhashram.org/kundalini.shtml Archived 2009-08-28 ವೇಬ್ಯಾಕ್ ಮೆಷಿನ್ ನಲ್ಲಿ.
  11. ಕುಂಡಲಿನಿ ಯೋಗ ಫ್ರಮ್ ಸ್ವಾಮಿ ಶಿವಾನಂದ: http://www.experiencefestival.com/kundalini
  12. Vivekananda, Swami (1915). The Complete Works of Swami Vivekananda. p. 185. Archived from google. com /books?id=030TAAAAQAAJ&pg=PA185&dq=The+complete+works+of+the+Swami+Vivekananda+kundalini#v=onepage&q=&q=&f=false the original on 2013-07-31. Retrieved 2021-08-12. ...kundalini is the one and only way... {{cite book}}: Check |url= value (help)
  13. [ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, http://en.wikisource.org/wiki/The_Complete_Works_of_Swami_Vivekananda/Volume_1/Raja-Yoga/The_Psychic_Prana]
  14. ^ಪರಮಹಂಸ ಸ್ವಾಮಿ ಮಹೇಶ್ವರಾನಂದ, ದ ಹಿಡನ್ ಪವರ್ ಇನ್ ಹ್ಯೂಮನ್ಸ್, ಇಬೆರಾ ವೆರ್ಲಾಗ್, ಪುಟಗಳು 48. ISBN 3-85052-197-4.
  15. ^ಪರಮಹಂಸ ಸ್ವಾಮಿ ಮಹೇಶ್ವರಾನಂದ, ದ ಹಿಡನ್ ಪವರ್ ಇನ್ ಹ್ಯೂಮನ್ಸ್, ಇಬೆರಾ ವೆರ್ಲಾಗ್, ಪುಟಗಳು 16. ISBN 3-85052-197-4.
  16. ^ಪರಮಹಂಸ ಸ್ವಾಮಿ ಮಹೇಶ್ವರಾ ನಂದ, ದ ಹಿಡನ್ ಪವರ್ ಇನ್ ಹ್ಯೂಮನ್ಸ್, ಇಬೆರಾ ವೆರ್ಲಾಗ್, ಪುಟಗಳು 68,69. ISBN 3-85052-197-4.
  17. ಸ್ಕಾಟನ್(1996), ಪುಟ. 261-262.
  18. Avalon, Arthur (1974). =PA1&dq=Arthur+Avalon+ The+Serpent+ Power+ kundala#v=onepage&q=&f=false The Serpent Power. Dover Publications Inc. p. 1. ISBN 0486230589. Kundala means coiled. {{cite book}}: Check |url= value (help)
  19. ಪ್ರಿನ್ಸ್ಟನ್ ಯುನಿವರ್ಸಿಟಿ ಪ್ರೆಸ್, ಬುಕ್ ಡಿಸ್ಕ್ರಿಪ್ಶನ್ ಟು C. G ಜಂಗ್ - "ದಿ ಸೈಕಾಲಜಿ ಆಫ್ ಕುಂಡಲಿನಿ ಯೋಗ", 1999
  20. ಕೃಷ್ಣ, ಗೋಪಿ (1971) ಕುಂಡಲಿನಿ: ದಿ ಎವಲ್ಯೂಷನರಿ ಎನರ್ಜಿ ಇನ್ ಮ್ಯಾನ್. ಬೌಲ್ಡರ್, ಕೊಲೋರಾಡೋ: ಶಂಭಾಲ
    • ಉದ್ಧೃತ ಸಾಲುಗಳಾದ "ಒಂದು ಜನಪ್ರಿಯ ಮಟ್ಟದಲ್ಲಿ ಕುಂಡಲಿನಿ ಯೋಗದ ಬಗೆಗಿನ ಪಾಶ್ಚಿಮಾತ್ಯರ ಆಸಕ್ತಿಯು ಬಹುಶಃ ಗೋಪಿ ಕೃಷ್ಣರ ಬರವಣಿಗೆಗಳಿಂದ ಪ್ರಭಾವಕ್ಕೊಳಪಟ್ಟಿರಬಹುದು. ಇದರಲ್ಲಿ ಕುಂಡಲಿನಿಯನ್ನು ಒಂದು ಸಂಪೂರ್ಣ ಅವ್ಯವಸ್ಥೆಯ ಹಾಗೂ ಸಹಜ ಧಾರ್ಮಿಕ ಅನುಭವದ ಲಕ್ಷಣ ಎಂದು ಮರುವ್ಯಾಖ್ಯಾನಿಸಲಾಗಿದೆ." ನೋಡಿ:ಮ್ಯಾಕ್ ಡೇನಿಯಲ್, ಪುಟ.280.
    • ಪಲಮಿದೆಸ್ಸಿ ಟೋಮ್ಮಾಸೋ, ಅಲ್ಕಿಮಿಯ ಕಮ್ ವಯಾ ಅಲ್ಲೋ ಸ್ಪಿರಿಟೋ , ed. EGO, 1948 ಟುರೀನ್
  21. P. D. ಔಸ್ಪೆನ್ಸ್ಕಿಇನ್ ಸರ್ಚ್ ಆಫ್ ದಿ ಮಿರಾಕ್ಯುಲಸ್, ಪುಟ. 220, ಹಾರ್ಕೊರ್ಟ್ ಬ್ರೇಸ್ & ಕೋ., 1977 ISBN 0-15-644508-5
  22. Yoga Journal. 1985. p. 42. ISSN 0191-0965. I just wanted to talk to someone who would understand about kundalini and wouldn't think I was crazy... {{cite book}}: Unknown parameter |month= ignored (help)
  23. ಸೊವಾಟ್ಸ್ಕಿ, ಪುಟ. 160
  24. ಲಜರ್ et al. (2000).
  25. ಕ್ರೋಮಿ (2002)
  26. ರುದ್ರ, ಕುಂಡಲಿನಿ (1993 ಜರ್ಮನಿಯಲ್ಲಿ)
  27. ಉಲ್ಲೇಖ ದೋಷ: Invalid <ref> tag; no text was provided for refs named Turner et al.,pg. 440
  28. ಸ್ಕಾಟನ್(1996)
  29. ಕಸೋನ್ (2000)
  30. ಗ್ರೇಸನ್(2000)
  31. Hayman, Ronald (2002). A Life of Jung. W. W. Norton & Co. p. 304. ISBN 0393323221. ...the concept of Kundalini has for us only one use... {{cite book}}: Check |isbn= value: checksum (help)

ಬಾಹ್ಯ ಕೊಂಡಿಗಳು ಬದಲಾಯಿಸಿ