ಸೃಷ್ಟಿ ಮತ್ತು ಸಾಂಖ್ಯ ದರ್ಶನ

ಸಾಂಖ್ಯ ದರ್ಶನದಲ್ಲಿ ಸೃಷ್ಟಿಸಂಪಾದಿಸಿ

ಪೀಠಿಕೆ :ಸಂಪಾದಿಸಿ

 • ಉಪನಿಷತ್ ಮತ್ತು ಭಗವದ್ಗೀತೆ ಗಳಲ್ಲಿ ಉಲ್ಲೇಖವಿರುವ ಸಾಂಖ್ಯದರ್ಶನ ವು ಅತ್ಯಂತ ಪ್ರಾಚೀನವಾದುದೆಂದು ಹೇಳಬಹುದು. ಕಪಿಲ ಮುನಿ ಈ ದರ್ಶನದ ಆದಿ ಪ್ರವರ್ತಕನೆಂದು ಹೇಳಲಾಗಿದೆ. ವಿಶ್ವ ಸೃಷ್ಟಿಯನ್ನು ಸಂಖ್ಯಾ ಕ್ರಮದಲ್ಲಿ ವಿವರಿಸಿರುವುದರಿಂದ ಇದಕ್ಕೆ ಸಾಂಖ್ಯ ದರ್ಶನ ವೆಂದು ಹೆಸರು ಬಂದಿದೆ. ಈ ಸಂಖ್ಯಾ ಕ್ರಮದ ಸಮಷ್ಠಿ ಮತ್ತು ವ್ಯಷ್ಠಿ (ಬ್ರಹ್ಮಾಂಡ ಮತ್ತು ಏಕ ಜೀವಿ) ಸೃಷ್ಟಿ ಕ್ರಮವನ್ನು ಸಾಮಾನ್ಯವಾಗಿ ಭಾರತದಲ್ಲಿ ಹುಟ್ಟಿದ ಎಲ್ಲಾ ದರ್ಶನಗಳೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿವೆ. ಪ್ರಪಂಚದ ಉತ್ಪತ್ತಿಗೆ ಪ್ರಕೃತಿ ತತ್ವದಿಂದ ಉದಯಿಸಿದ ಮುಖ್ಯವಾಗಿ ೨೪ ತತ್ವಗಳು (ಪರಮಾತ್ಮ ತತ್ವ ಸೇರಿದರೆ ೨೫ ತತ್ವಗಳು) ಮತ್ತು ಅದೇ ಪ್ರಕೃತಿ ತತ್ವದಿಂದ ಉದಯಿಸಿದ ಸತ್ವ, ರಜ, ತಮ ಎಂಬ ಮೂರು ಗುಣಗಳು ಕಾರಣ. ಪ್ರಕೃತಿ ಯಲ್ಲಿ ಕಾಣುವ ಈ ವೈರುದ್ಧತೆಗೆ - ವಿವಿಧತೆಗೆ ಸಾಂಖ್ಯದ ದೃಷ್ಟಿಯಲ್ಲಿ ಸತ್ವ -ರಜ -ತಮೋ ಗಣಗಳಲ್ಲಿನ ಏರು ಪೇರು ಕಾರಣ. ಆ ಮೂರೂ ಗುಣಗಳು ಸಮ ಸ್ಥಿತಿಯಲ್ಲಿದ್ದರೆ ಸೃಷ್ಠಿಯಿಲ್ಲ. ಆ ಮೂರೂ ಗುಣಗಳು ಸಮ ಸ್ಥಿತಿಗೆ ಬಂದರೆ ಪ್ರಳಯ. ಫುರುಷ ತತ್ವ ಕೇವಲ ಚೇತನ- ಕ್ರಿಯಾಶೀಲವಲ್ಲ. ಪ್ರಕೃತಿ ಜಡ - ಸ್ವತಂತ್ರವಾಗಿ ಪ್ರವರ್ತಿಸಲಾರದು. ಆದ್ದರಿಂದ ಸೃಷ್ಟಿಯ ಎಲ್ಲಾ ಕ್ರಿಯೆ ಪ್ರಕೃತಿ ತತ್ವವು ಪುರುಷ ಚೈತನ್ಯವನ್ನು ಬಳಸಿಕೊಂಡು ವೈವಿಧ್ಯತೆಯ ಸೃಷ್ಟಿಗೆ ಕಾರಣವಾಗಿದೆ.

ಸೃಷ್ಟಿ ಮೂಲ ತತ್ವಗಳುಸಂಪಾದಿಸಿ


ಪುರುಷ (ಚೇತನ) + ಪ್ರಕೃತಿಸಂಪಾದಿಸಿ
ಪುರುಷ (ಚೇತನ):ಸಂಪಾದಿಸಿ
 • ಅದು ನಿತ್ಯ, ನಿರ್ಗುಣ, ನಿರಾಕಾರ, ಅವ್ಯಕ್ತ , ಅವ್ಯಯ, ಅಸಂಗ, ಅವಿಕಾರಿ, ಮುಕ್ತ, ಕೇವಲ ನಾನು ಎಂಬ ಸಾಕ್ಷಿ ರೂಪ, ಅರಿಯುವ ಶಕ್ತಿ-ಚೇತನ; (ಪ್ರಕೃತಿಯು):- ಪುರುಷ ಅಲ್ಲದ್ದು ಜಡ ಮೂಲ ತತ್ವ..
ಪ್ರಕೃತಿ :ಸಂಪಾದಿಸಿ
 • ಪ್ರಕೃತಿ ಜಡವಾದರೂ, ಪುರುಷ ನಿಗೆ ಸಮಾನ ತತ್ವ, ಪರುಷನೊಡನೆ ಸೇರಿ ಕ್ರಿಯಾಶೀಲವಾಗುವುದು.ಅದರಿಂದ ಹುಟ್ಟಿದ
 • ಸತ್ವ; ೨. ರಜ ೩. ತಮ ಇವು ಮೂರು ವಿಶ್ವವನ್ನು ವ್ಯಾಪಿಸಿರುವ ತ್ರಿಗುಣಗಳು.
 • ೧. ಸತ್ವದ ಗುಣ : ಬಿಳಿ, ಲಘು, ಪ್ರಕಾಶಕ , ಆನಂದ,
 • ೨:ರಜದ ಗುಣ : ಕೆಂಪು, ಚಂಚಲ, ಕ್ರಿಯಾಶೀಲ. ದುಃಖ,
 • ೩. ತಮದ ಗುಣ :ಕಪ್ಪು , ಭಾರ, ಜಡ . ತಡೆ ಹಿಡಿಯುವ ಅಜ್ಞಾನ,

ಮಹತ್: ( ಸಮಷ್ಟಿ ತತ್ವ )ಸಂಪಾದಿಸಿ


 • ಮಹತ್: ಪ್ರಕೃತಿ+ ಪುರುಷ (ಜಡವಾದ ಪ್ರಕೃತಿಯು ಚೈತನ್ಯ ವನ್ನು ಉಪಯೋಗಿಸಿ ಕೊಂಡು ಅದರಿಂದ ಹುಟ್ಟಿದ ತತ್ವ ಮಹತ್ ತತ್ವ . ಅದು ( ಸಮಷ್ಟಿ ತತ್ವ ) ವಿಶ್ವದ ಬುದ್ಧಿ-ಚಿತ್ತ: ಜಗತ್ತಿನ ಉತ್ಪತ್ತಿಗೆ ಬೀಜ - ಜಗದ ಸ್ವಾಮಿತ್ವ..(ಸಮಷ್ಟಿ ತತ್ವ ವೆಂದರೆ ಇಡೀ ವಿಶ್ವಕ್ಕೆ ಸಂಬಂಧ ಪಟ್ಟುದು) ವ್ಯಷ್ಟಿ ಯಲ್ಲಿ (ವ್ಯಷ್ಟಿ ಎಂದರೆ ಒಂದು ಜೀವಿಗೆ ಸಂಬಂಧ ಪಟ್ಟುದು)

ಮಹತ್: (ವ್ಯಷ್ಟಿ )ಸಂಪಾದಿಸಿ

 • ಮಹತ್ತಿ ಗೆ (ಅದಕ್ಕೆ )ಸಮಾನಾಂತರವಾಗಿ -
 • ಮಹತ್ತಿನಿಂದ-ಮನುಷ್ಯನ ಬುದ್ಧಿ ಮತ್ತು ಅಹಂಕಾರ ; ಕರ್ತೃತ್ವ, - ಭೋಕ್ತೃತ್ವ,; ಮನುಷ್ಯನಲ್ಲಿ ನಾನು ಎಂಬ ಅಜ್ಞಾನ ಭಾವನೆ, ಅನೇಕತ್ವ ಭಾವ,

ಅಹಂಕಾರದೊಡನೆ ಸೇರಿ ಪಂಚ ತನ್ಮಾತ್ರೆಗಳು ಇತ್ಯಾದಿ , ಸತ್ವ, ರಜ, ತಮೋ ಗುಣಗಳ ಏರು-ಪೇರು ಅಥವಾ ವ್ಯತ್ಯಾಸವೇ ಸೃಷ್ಟಿ ಗೆ ಕಾರಣ.

 • (ಪುರುಷ ಅನೇಕ + ಪ್ರಕೃತಿ -ಅದರೊಡಗೂಡಿದ ತತ್ವಗಳು)

ಪಂಚ ತತ್ವ ಗಳುಸಂಪಾದಿಸಿ


 • ವಿಶ್ವದ ಮೂಲ ತತ್ವ 'ಅಹಂಕಾರ ' ದೊಡನೆ ಸತ್ವ - ರಜ - ತಮ ಈ ಮೂರು ಗುಣಗಳು ಸೇರಿ - ಸಮಷ್ಟಿ ವ್ಯಷ್ಟಿ ಗಳಲ್ಲಿ ಸಮಾನಾಂತರವಾಗಿ ೨೩- ತತ್ವಗಳು ಉದ್ಭವಿಸಿದವು.

ಸಮಷ್ಟಿಸಂಪಾದಿಸಿ

 • ತತ್ವ ರೂಪದಲ್ಲಿ ಮೂಲ ಅಹಂಕಾರ ದಲ್ಲಿ ಉತ್ಪತ್ತಿ ಆದವುಗಳು
 • ೧ನೇ ಸರ್ಗ ೫ ಪಂಚ ತನ್ಮಾತ್ರೆಗಳು - ಶಬ್ದ +ಸ್ಪರ್ಶ + ರೂಪ + ರಸ +ಗಂಧ
 • ೨ ನೇ ,, ೫ ಪಂಚ ಮಹಾ ಭೂತಗಳು - ಆಕಾಶ +ವಾಯು+ ತೇಜಸ್ಸು +ಜಲ +ಭೂಮಿ
 • ೩ ,, ೫ ಪಂಚ ಪ್ರಾಣಗಳು - ವ್ಯಾನ , ಪ್ರಾಣ, ಸಮಾನ, ಉದಾನ. ಅಪಾನ.
 • ೪ ,, ೫ ಪಂಚ ಜ್ಞಾನೇಂದ್ರಿಯಗಳು - ಕಿವಿ, ಚರ್ಮ, ಕಣ್ಣು ,ನಾಲಗೆ , ಮೂಗು ,
 • ** ೪(೩) ಮನಸ್ಸು + ಬುದ್ಧಿ + ಅಹಂಕಾರ (+ಪುರುಷ)
 • ಕೆಲವು ಗ್ರಂಥಗಳಲ್ಲಿ ಪುರು‍ಷ ನನ್ನು ಬಿಟ್ಟು ೨೩ ತತ್ವಗಳನ್ನು ಮಾತ್ರಾ ಹೇಳಿದೆ ಏಕೆಂದರೆ ಪುರುಷ ಮೊದಲೇ ಇದ್ದ ತತ್ವ
 • ಪುರು‍ಷ ಸೇರಿ ಒಟ್ಟು ತತ್ವಗಳು ೨೪ (ಮೂಲ ಸಾಂಖ್ಯ ದಲ್ಲಿ ಪರಮಾತ್ಮ ತ್ತ್ವ ವನ್ನು ಒಪ್ಪಿಲ್ಲ ಅದೂ ಸೇರಿದರೆ ೨೫ ತತ್ವಗಳು
 • ಅನು ಕ್ರಮವಾಗಿ (ಏಕ ಕಾಲದಲ್ಲಿ) ಪರಸ್ಪರ ಸಂಮಿಲನದಿಂದ ಉದ್ಭವಿಸಿದ ಪಂಚ ತತ್ವ ಗಳು :-
 • ೧. ಶಬ್ದ (ದಿಂದ)-> ಆಕಾಶ -> ವ್ಯಾನ-> ಕಿವಿ -> ಕೈ -> ಗ್ರಹಣ ಶಕ್ತಿ
 • ೨. ಸ್ಪರ್ಶ+ ಶಬ್ದ -ಅವುಗಳ ಸಮ್ಮಿ ಲನದಿಂದ ->ವಾಯು-> ಪ್ರಾಣ -> ಚರ್ಮ -> ಗುದ ->ವಿಸರ್ಜನ
 • ೩.ರೂಪ+ ಶಬ್ದ +ಸ್ಪರ್ಶ -ಅವುಗಳ ಸಮ್ಮಿ ಲನದಿಂದ -> ತೇಜಸ್ಸು ->ಕಣ್ಣು ->ಬಾಯಿ (ಮುಖ) -> ಮಾತು.
 • ೪.ರಸ + ರೂಪ+ ಶಬ್ದ +ಸ್ಪರ್ಶ ಅವುಗಳ ಸಮ್ಮಿ ಲನದಿಂದ -> ಜಲ ->ಉದಾನ ->ನಾಲಗೆ -> ಜನನೇಂ ದ್ರಿಯ ->ಸಂತಾನ
 • ೫.ಗಂಧ+ರಸ + ರೂಪ+ ಶಬ್ದ +ಸ್ಪರ್ಶ ಅವುಗಳ ಸಮ್ಮಿಲನದಿಂದ-> ಭೂಮಿ-> ಅಪಾನ-> ಮೂಗು-> ಕಾಲು->ವಿಹರಣ

ವ್ಯಷ್ಟಿಸಂಪಾದಿಸಿ

ಮನುಷ್ಯ ಮತ್ತು ಪ್ರಾಣಿಗಳು

 • ೧ನೇ ಸರ್ಗ ೫ ಪಂಚ ತನ್ಮಾತ್ರೆಗಳು - ಶಬ್ದ , ಸ್ಪರ್ಶ, ರೂಪ, ರಸ, ಗಂಧ.
 • ೨ ನೇ ,, ೫ ಪಂಚ ಮಹಾ ಭೂತಗಳು - ಆಕಾಶ, ವಾಯು, ತೇಜಸ್ಸು ,ಜಲ, ಭೂಮಿ.
 • ೩ ,, ೫ ಪಂಚ ಪ್ರಾಣಗಳು - ವ್ಯಾನ , ಪ್ರಾಣ, ಸಮಾನ, ಉದಾನ. ಅಪಾನ.
 • ೪ ,, ೫ ಪಂಚ ಜ್ಞಾನೇಂದ್ರಿಯಗಳು - ಕಿವಿ, ಚರ್ಮ, ಕಣ್ಣು ,ನಾಲಗೆ ,ಮೂಗು ,
   • ೪ ಮನಸ್ಸು + ಬುದ್ಧಿ + ಅಹಂಕಾರ +ಪುರುಷ ( + ಪರಮಾತ್ಮ ಸೇರಿ ೨೫ ತತ್ವ ಗಳು)
   • ೨೪ ಒಟ್ಟು ತತ್ವಗಳು - (ಪಂಚ ಕರ್ಮೇಂದ್ರಿಯಗಳು, ಕ್ರಿಯೆಗಳು ಮೂಲ ತತ್ವ ದಲ್ಲಿ ಸೇರಿಲ್ಲ
 • ೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು, ಗುದ , ಬಾಯಿ (ಮುಖ), ಜನನೇಂ ದ್ರಿಯ, ಕಾಲು
 • ೬ ,, (೫) ಕ್ರಿಯೆಗಳು - ಗ್ರಹಣ , ವಿಸರ್ಜನ, ಮಾತು, ಸಂತಾನ, ವಿಹರಣ.
 • ಟಿಪ್ಪಣಿ : ಸಾಂಖ್ಯ ದರ್ಶನವು ಪರಮಾತ್ಮ ನನ್ನು ಒಪ್ಪಿಲ್ಲ, ಪುರುಷ ಎನ್ನುವ (ಆತ್ಮ) ತತ್ವವನ್ನು ಒಪ್ಪಿದೆ, ಆದರೆ ಅವು ಅನೇಕ. ಪರಮಾತ್ಮ ತತ್ವವನ್ನು ಸೇರಿಸಿದರೆ ಒಟ್ಟು ೨೫ ತತ್ವಗಳಾಗುವುವು - ವೇದಾಂತ ದರ್ಶನಕ್ಕೆ ಹೋಲುವುದು.
 • ಸಾಂಖ್ಯ ಮತ್ತು ಯೋಗ ದರ್ಶನಗಳಲ್ಲಿ ಸೃಷ್ಟಿ ಅನಾದಿ ಮತ್ತು ಅನಂತ; ಎಂದರೆ ಆದಿ ಇಲ್ಲದ್ದು, ಅಂತ್ಯವಿಲ್ಲದ್ದು; ಅಥವಾ ಆದಿ ಅಂತ್ಯಗಳು ಮಾನವ ಬುದ್ಧಿ ಶಕ್ತಿಗೆ ನಿಲುಕದ್ದು..

[೧][೨]

ನೋಡಿಸಂಪಾದಿಸಿ

ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ

ಉಲ್ಲೇಖಸಂಪಾದಿಸಿ

 1. ಭಾರತೀಯ ತತ್ವ ಶಾಸ್ತ್ರ ಪರಿಚಯ - ಎಂ ಪ್ರಭಾಆಕರ ಜೋಷಿ, ಎಂ.ಎಂ. ಹೆಗಡೆ.
 2. ಶ್ರೀ ಶಂಕರರ ಗೀತಾ ಭಾಷ್ಯ