ಸೃಷ್ಟಿ ಮತ್ತು ಸೆಮೆಟಿಕ್ ಪುರಾಣ

(ಸೃಷ್ಟಿ ಸೆಮೆಟಿಕ್ ಪುರಾಣ ಇಂದ ಪುನರ್ನಿರ್ದೇಶಿತ)

ಸೃಷ್ಟಿ-ಸುಮೇರಿಯಾ-ಬೆಬಿಲೋನಿಯಾ ಪುರಾಣ

ಬದಲಾಯಿಸಿ
 
ಪ್ರಾಚೀನ ಮೆಸೊಪೊಟೇನಿಯಾ ನಕ್ಷೆ (Mesopotamia)

ಪೀಠಿಕೆ: ಕಾಲ

ಬದಲಾಯಿಸಿ
  • ಕಾಲ: ಕ್ರಿ.ಪೂರ್ವ ೨೪೦೦ ರಿಂದ ೨೮೦೦; ಈಗ ೫೦೦೦ ವರ್ಷಗಳ ಹಿಂದಿನ ಪುರಾಣ.

ಜಗತ್ತಿನಲ್ಲಿ, ಬರಹ ಮೂಲಕ ಲಭ್ಯವಿರುವ ಅತ್ಯಂತ ಹಿಂದಿನ ಪುರಾಣ ಸೆಮಿಟಿಕ್. ನಮ್ಮ ವೇದ ಪುರಾಣಗಳ ಕಾಲಕ್ಕೂ ಈ ಗಿಲ್ಗಮೇಶನ ಪುರಾಣ ಹಿಂದಿನದೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ; ಆಗ ಭಾರತದಲ್ಲಿ ೫೦೦೦ವರ್ಷದ ಹಿಂದಿನ ಸಿಂಧೂನದಿ ಸಂಸ್ಕೃತಿ ಮೇಲ್ಮಟ್ಟದಲ್ಲಿತ್ತು.. ಸುಮಾರು ಕ್ರಿ. ಪೂ. ೨೧೦೦ಕಾಲಕ್ಕೆ ಸೇರಿದ ಕ್ಯೂನಿಫಾರ್ಮ ಸಂಕೇತಾಕ್ಷರಗಳಲ್ಲಿ ೨೫೦೦೦ ಸುಟ್ಟ ಮಣ್ಣಿನ ಬಿಲ್ಲೆಗಳಲ್ಲಿ ಬರೆದ ಪುರಾಣ; ಸುಮಾರು ಕ್ರಿ.ಪೂ. ೨೯೦೦ ವರ್ಷಗಳ ಹಿಂದೆ ಮೆಸೆಪೆಟೋಮಿಯಾ ದಲ್ಲಿ ನೆಡೆದ ಭೀಕರ ನೆರೆಯ ಕಥೆ ಪ್ರಳಯ ಪುನರ್ ಸೃಷ್ಟಿ ಯ ಕಥೆ. , ಸುಮೇರ್ ನ ಗಿಲ್ಗಮೇಶ್ ನಿಗೆ ಅವನ ಪೂರ್ವಜ ಶುರಿಪ್ಪಕ್ ನ ರಾಜ ಉತನಪಿಷ್ಟಿಮ್ ಹೇಳಿದ ಕಥೆ ಎನುಮಾ-ಎಲಿಶ್ ಅಥವಾ ಗಿಲ್ಗಮೇಶ್ ಪುರಾಣ ಎಂದು ಪ್ರಸಿದ್ಧವಾಗಿದೆ.

೧ ನೇ ಹಂತ: ಆರಂಭ

ಬದಲಾಯಿಸಿ
 
ಗಿಲ್ಗಮೇಶ್ (Hérosmaîtrisantunlion)
  • ಸೃಷ್ಟಿಯ ಆರಂಭಕ್ಕೂ ಮೊದಲು ಭೂಮಿ ಘನವಲ್ಲ; ಸಮುದ್ರ ದ್ರವವಲ್ಲ; ಗಾಳಿ ಪಾರದರ್ಶಕವಲ್ಲ ಅಂಧಕಾರ (ChaosChaosಇಂಗ್ಲಿಷ್‌ನ್ ಖೇಆಸ್) ಸೃಷ್ಟಿಯ ಎಲ್ಲಾ ಬೀಜಗಳೂ ಇದರಲ್ಲಿ ಅಮೂರ್ತವಾಗಿ ಅಡಕವಾಗಿದ್ದವು.

೨ನೇ ಹಂತ: ಲೋಕಗಳ ಸೃಷ್ಟಿ

ಬದಲಾಯಿಸಿ
  • ದೇವನು(ಮೂಲ ತತ್ವ) ಒಡೆದು ಎರಡಾದ-ಅದೇ ಸ್ವರ್ಗ ಮತ್ತು ಭೂಮಿ-ದ್ಯಾವಾ:ಪೃಥ್ವೀದ್ಯಾವಾ:ಪೃಥ್ವೀ ಗೆ ಅಧಿಪತಿಗಳು:-

ಯುರೇನಸ್-ಗೇಯಾ (ಪುರುಷ - ಪ್ರಕೃತಿ) ಈ ಪೃಥಕ್ಕರಣ ದಿಂದ, ಭಾರವಾದ ಸಮುದ್ರದಿಂದ ಬೇರೆಯಾಗಿ ಭೂಮಿಯು ಕೆಳಗೆ ಜಾರಿ ಬೇರೆ ಆಗಿ ಚಪ್ಪಟೆಯಾಗಿ ಸಮುದ್ರದ ಮೇಲೆ ತೇಲತೊಡಗಿತು. ಆಕಾಶ (ಸ್ವರ್ಗ) ಮೇಲೆದ್ದು ನಿಂತಿತು. ನೀರು ದ್ರವ ರೂಪದ್ದಾದ್ದರಿಂದ ಕೆಳಗೆಜಾರಿ ಸಮುದ್ರವಾಗಿತ್ತು. ಗಾಳೀ ಪಾರದರ್ಶಕವಾಯಿತು. ಹಗುರವಾದ ಅಗ್ನಿಯಿಂದ ಕಿಡಿಗಳು ಹಾರಿ ಆಕಾಶದಲ್ಲಿ ನಕ್ಷತ್ರಗಳಾದವು.

  • ಪ್ರಥಮ ಧರ್ಮ ಪುರಾಣ:(ಕ್ರಿ.ಪೂ. ೨೭೦೦-೨೧೦೦ಕ್ಕೂ ಹಿಂದಿನ ಸುಮೇರಿಯಾದ ಧರ್ಮ; ದೇವತೆಗಳ ಸೃಷ್ಟಿ:
ದೇವತೆಗಳು:-ನಾಲ್ಕು ಬಗೆ ೧. ಅನ್-ಸ್ವರ್ಗಾಧಿಪತಿ ; ೨.ರೀ-ಭೂಮಿಯದೇವತೆ; ೩.ಎನ್ಲಿಲ್-ವಾಯುದೇವತೆ; ೪.ಎಂಕಿ-ಜಲ ದೇವತೆ:
ವಿಶ್ವಕಾರ್ಯದಲ್ಲಿ ಗೊಂದಲ ನಿವಾರಿಸಲು ಯಾರೂ ಮೀರದ ಧರ್ಮನಿಯಮಗಳು- 'ಮೇ'; ಭಾರತದ ವೇದಗಳಿದ್ದಂತೆ.
'ಡುಮುಜ್' ಗೋಪಾಲಕರ ಮಾನವ ದೇಹಿ; ನಂತರ ಅಧಿದೇವತೆಗಳ ಸೃಷ್ಟಿ: , ಆಕಾಶ ದೇವತೆಗಳು; ಚಂದ್ರನ ಅಧಿಪತಿ,- ನನ್ನ ; ಸೂರ್ಯನ ಅಧಿಪತಿ,ಅಥವಾ ಸೂರ್ಯದೇವತೆ- ಉತಾ ; ಪ್ರೇಮದದೇವತೆ -ಇನನ್ನ; ನಿನುರ್ತ -ದಕ್ಷಿಣದ ರುದ್ರ ಮಾರುತ;
ಡುಮುಜ್ ಗೋಪಾಲಕರ ಪ್ರೀತಿಯದೇವ ಮಾನವ ದೇಹಿ; ಅವನು ಪ್ರೇಮದ ದೇವತೆ ಇನನ್ನಳನ್ನು ಮದುವೆಯಾಗಿ ಅವಳಿಂದ ಶಾಪಗ್ರಸ್ತನಾಗಿ ಪಾತಾಳಕ್ಕೆ ಆರು ತಿಂಗಳು ಹೋಗುವನು; ಆಗ ಬರಬೇಸಿಗೆ ಫಲಪುಷ್ಪಗಳಿಲ್ಲ ; ಆರನೇ ಸಂಕ್ರಮಣಕ್ಕೆ ಅವನು ಭೂಮಿಗೆ ವಾಪಾಸಾಗಿ ಪ್ರೀತಿಯದೇವತೆಯೊಡನೆ ಸೇರಿದೊದೊಡನೆ ಮಳೆ ಬೆಳೆ ಫಲವತ್ತತೆ ಫಲ ಪುಷ್ಪಗಳು ಉಂಟಾಗುವವು.

೩ನೇ ಹಂತ :ದೈತ್ಯ - ದೇವತೆಗಳ ಸೃಷ್ಟಿ:

ಬದಲಾಯಿಸಿ
 
ಸುಟ್ಟ ಮಣ್ಣಿನ ಹಲಗೆಯ ಮೇಲೆ ಬರೆದ ಗ್ಲಿಗಮೇಶ/ಗಿಲ್ಗಮೇಶ ಪುರಾಣ:೫ ನೇ ಹಲಗೆ (Tablet V of the Epic of Gligamesh)
 
ಇಯಾ-Ea: (Babilonian) - ಎಂಕಿ-EnKi (Sumerian)ಅಕಾಡಿಯನ್ ಸಿಲಿಂಡರ್ ಮುದ್ರೆ c. 2300 ಕ್ರಿ.ಪೂ., ಇನನ್ನಾ, ಉಟು, ಎನ್ಕಿ, ಮತ್ತು ಇಸಿಮಡ್ಗಳನ್ನು ಚಿತ್ರಿಸಲಾಗಿದೆ
  • ದೇವತೆಗಳ ಸೃಷ್ಟಿ: Iಪ್ರೊಮಿಥಯಸ್ ಮತ್ತು ಅವನ ತಮ್ಮ ಎಪಿಮಿಥಿ ಯಸ್, ದೈತ್ಯರು (ವಿಶ್ವ ಸೃಷ್ಟಿಯ ಮೂಲ ಕರ್ತೃ ಗಳು;
  • ವಿಶ್ವಕರ್ಮ ಮತ್ತು ಪ್ರಾಣ ದೇವತೆ ಅಥವಾ ಬೃಹಸ್ಪತಿ ಇದ್ದಂತೆ,) ಸ್ವರ್ಗಾಧಿಪತಿ ಜ್ಯೂಪಿಟರ್ (ಜೀಸಸ್) ಅವನಿಂದ ಪೆಂಡೋರಾ ಸ್ತ್ರೀ ಯ ಸೃಷ್ಟಿ;)
  • 1) ದೇವತೆಗಳ ರಾಜ; ಎನ್ಲಿಲ್; ರುದ್ರ-ಮಾರುತಗಳ ದೇವತೆ : ಅದದ್; ಎನ್ಲಿಲ್ ನ ಸೋದರಿ: ಇಷ್ಟರ್ ಮಹಾಮಾತೆ-ಎಲ್ಲಾ ಜೀವಿಗಳಿಗೆ ಜನ್ಮ ಕೊಟ್ಟವಳು ; ಎನ್ಲಿಲ್ ನ ಸೋದರ: ಇಯಾ (ಅತ್ಯಂತ ವಿವೇಕಿ ; ಸಿಹಿನೀರಿನ ಒಡೆಯ; ಇವನಿಗೆ ಇಯಾ-ಹನ್, ಅಥವಾ .ಒಯನ್ನಸ್ ಎಂಬ ಹೆಸರೂ ಇದೆ. ಜನ ರಕ್ಷಕ ; ಜಲಾಧಿಪತಿ; ಈತನ ದೇಹದ ಕೆಳ ಭಾಗ ಮೀನಿನ ದೇಹ ; (ಮತ್ಸಾವತಾರಿ ವಿಷ್ಣುವೇ?) ; ಶಮಶ -ಸೂರ್ಯದೇವತೆ ಯುದ್ಧದೇವತೆ ದೇವ ಸೇನಾನಿ: ನಿನುರ್ತ;
  • 2) ದೇವತೆಗಳ ಪಿತಾಮಹ ಅನು; ಆದಿದೇವ ಅನುವಿನ ಪತ್ನಿ ನಿಂತು ಲೋಕ ಮಾತೆ ; ಮೊದಲ ಮಾನವ ಸಂತತಿಯನ್ನು ಮಣ್ಣಿನಿಂದ ಸೃಷ್ಟಿಸಿದವಳು; ಶುರಿಪ್ಪಕ್ ನಗರದ ರಾಜ ಉತನಪಿಷ್ಟಂ; ಇವನೇ ಭಾರತದ ಮನುವಿನಂತೆ ಜಲಪ್ರಳಯ ಕಾಲದಲ್ಲಿ ಜೀವ ಸೃಷ್ಟಿಯನ್ನು ರಕ್ಷಿಸಿದವನು. ಅವನು ಸೃಷ್ಟಿಯನ್ನು ರಕ್ಷಿಸಿದ್ದರಿಂದ ,ಅವನಿಗೆ ಅಮರನಾಗುವ ವರವನ್ನು ಕೊಟ್ಟ ಮತ್ತು ದಿಲ್ಮನ ಪ್ರಾಂತ್ಯದಲ್ಲಿ ಶಾಶ್ವತವಾಗಿ ನೆಲೆಯೂರಿಸಿದ. (ಎನ್ಲಿಲ್ ನ ಸೋದರ : ಇಯಾ; ಇವನೇ ಮುಂದೆ ಆಗುವ ಪ್ರಳಯದ ವಿಷಯವನ್ನು ರಹಸ್ಯವಾಗಿ ಉತನಪಿಷ್ಟಂ ಗೆ ಹೇಳಿ, ಅವನೂ ಅವನ ಕುಟುಂಬ, ಪ್ರಾಣಿ ಪಕ್ಷಿಗಳು; ಸಸ್ಯಬೀಜಗಳು ಇವನ್ನು ನಾವೆಯಲ್ಲಿ ತುಂಬಿ. ಜಲ ಪ್ರಳಯವಾದಾಗ ಎಲ್ಲವನ್ನೂ ಉಳಿಸುವ ಉಪಾಯ ವನ್ನು ಉತನ ಪಿಷ್ಟಂ ಗೆ ಹೇಳುತ್ತಾನೆ.)
  • 3) ಅಂಧಕಾರದಿಂದ ಹುಟ್ಟಿದ ದೈತ್ಯರಾದ ಪ್ರೊಮಿಥಯಸ್ ಮತ್ತು ಅವನ ತಮ್ಮ ಎಪಿಮಿಥಿಯಸ್ ರಿಂದ ಸೃಷ್ಟಿಯ ಕಾರ್ಯ ಮುಂದುವರಿಕೆಯಾಯಿತು. ದೇವತೆಗಳಿಗೆ ಹೊಟ್ಟೆ ಕಿಚ್ಚಾಯಿತು. ಸ್ವರ್ಗದಿಂದ ಬೆಂಕಿಯನ್ನು ಕದ್ದುತಂದು ಮಾನವರಿಗೆ ಕೊಟ್ಟಿದ್ದರಿಂದ ಸಿಟ್ಟೂ ಬಂದಿತ್ತು. ಪ್ರೊಮಿಥಯಸ್ ಮತ್ತು ಅವನ ತಮ್ಮ ಎಪಿಮಿಥಿ ಯಸ್, (ವಿಶ್ವಕರ್ಮ ಮತ್ತು ಪ್ರಾಣ ದೇವತೆ ಅಥವಾ ಬೃಹಸ್ಪತಿ ಇದ್ದಂತೆ, ಆದರೆ ದೈತ್ಯ.) ಪ್ರೊಮಿಥಯಸ್, ಕೊನೆಗೆ ಭೂಮಿಯ ಮಣ್ಣನ್ನು ಕಲಸಿ ನಾದಿ ಅದಕ್ಕೆ ಬೂಮಿಯಲ್ಲಿ ಸೇರಿದ್ದ ಸ್ವಲ್ಪ ಸ್ವರ್ಗದ ಅಂಶವನ್ನೂ ಸೇರಿಸಿ ದೇವತೆಗಳ ಆಕಾರದಲ್ಲಿ ಮಾನವನನ್ನು ನಿರ್ಮಿಸಿದ. ಅವನಲ್ಲಿ ಸ್ವರ್ಗದ ಅಂಶ ಸೇರಿದ್ದರಿಂದ ಉಳಿದ ಪ್ರಾಣಿಗಳಿಗಿಂತ ಬೇರೆಯಾಗಿ ಮೇಲೆ ಆಕಾಶದ ಕಡೆ ನೋಡುವ ಸ್ವಬಾವದ ವನಾದ.
  • 4) ಪ್ರೊಮಿಥಯಸ್ , ಪರ್ವತ ನದಿ, ಹೊಲ, ಚಿಲುಮೆ ಬೆಟ್ಟ ಬಯಲು, ವನ ಕಣಿವೆ ಮೊದಲಾದವನ್ನು ನಿರ್ಮಿಸಿದ-ಪ್ರಾಣಿ ಪಕ್ಷಿಗಳನ್ನು ನಿರ್ಮಿಸಿದ. ಪ್ರೊಮಿಥಯಸ್ ತಮ್ಮ ಎಪಿಮಿಥಿಯಸ್ ಪ್ರತಿಯೊಂದು ಪ್ರಾಣಿಗೋ ಅದರ ಬದುಕಿಗೆ ಅಗತ್ಯವಾದ ಧೈರ್ಯ, ಬಲ, ವೇಗ, ಕೆಲವಕ್ಕೆ ರೆಕ್ಕೆ - ದಾಡೆ ಕೊಂಬು-ಉಗುರು, ಮೊದಲಾದವು ಗಳನ್ನು ಕೊಟ್ಟ. ಮಾನವನಿಗೆ ಏನನ್ನು ಕೊಡಬೇಕೆಂದು ತಿಳಿಯದೆ ಅಣ್ಣನನ್ನು ಕೇಳಿದ ಅವನು ಸ್ವರ್ಗಕ್ಕೆ ಹೋಗಿ ಸೂರ್ಯನ ರಥದ ಬೆಂಕಿಯನ್ನು ಒಂದು ದೀವಠಿಗಯಲ್ಲಿ ಹೊತ್ತಿಸಿಕೊಂಡು ಕೆಳಗೆ ಬಂದು ಮಾನವನಿಗೆ ವಿಶೇಷ ಉಡುಗೊರೆಯಾಗಿ ಕೊಟ್ಟ. ಹೀಗೆ ಅಗ್ನಿಯನ್ನು ಧರಿಸಿದವನಾದುದರಿಂದ ಉಳಿದೆಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನೂ ಬಲಿಷ್ಠನೂ ಆದ. ನಾಗರೀಕನೂ ಭೂಮಿಯ ಒಡೆಯನೂ ಆದ.

೪ನೇ ಹಂತ:ಮೊದಲ ಮಾನವ ಸ್ತ್ರೀ ಸೃಷ್ಟಿ :

ಬದಲಾಯಿಸಿ
  • ಮೊದಲ ಮಾನವ ಸ್ತ್ರೀ ಸೃಷ್ಟಿ : ದೇವ ಲೋಕಾಧಿಪತಿಯಾದ ಜ್ಯೂಪಿಟರ್ (ಜೀಸಸ್), ಸ್ವರ್ಗದಿಂದ ಬೆಂಕಿಯನ್ನು ಕದ್ದುತಂದ ಪ್ರೊಮಿಥಯಸ್‌ನನ್ನು ಶಿಕ್ಷಿಸಲು ಒಬ್ಬಳು ಸ್ತ್ರೀಯನ್ನು ಸೃಷ್ಟಿಸಿದ. ಅವಳನ್ನು ಎಪಿಮಿಥಿಯಸ್‍ಗೆ ಉಡುಗೊರೆಯಾಗಿ ಕೊಟ್ಟ. (ಆದರೆ ಪ್ರೊಮಿಥಯಸ್‌ಗೆ ಇದರಲ್ಲಿ ಮೋಸವಿರಬಹುದೆಂದು ಅನುಮಾನವಿತ್ತು.); (ಬೆಂಕಿಯಿಂದ ಬೇಯಿಸಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರಿಂದ ಮಾನವನಿಗೆ ಇತರ ಪ್ರಾಣಿಗಳಿಗಿಲ್ಲದ ರೋಗ ರುಜಿನಗಳಿಗೆ ಒಳಗಾಗಿದ್ದಾನೆಂಬ ಅಭಿಪ್ರಾಯವಿದೆ.) ದೇವ ಲೋಕಾಧಿಪತಿಯಾದ ಜ್ಯೂಪಿಟರ್‌ನಿಂದ ಸೃಷ್ಟಿಯಾದವಳೇ ಪಂಡೋರಾ. ಎಪಿಮಿಥಿಯಸ್, ಸೃಷ್ಟಿ ಮಾಡುವಾಗ ಬೇಡವಾದ ಕೆಟ್ಟ ಅಂಶಗಳನ್ನೆಲ್ಲಾ ಒಂದು ಭರಣಿಯಲ್ಲಿ ಹಾಕಿ ಭದ್ರಪಡಿಸಿದ್ದ. ಅದನ್ನು ಯಾವ ಕಾರಣಕ್ಕೂ ತೆರೆಯಬಾರದೆಂದು ಹೇಳಿದ್ದ. ಅದನ್ನು ತೆರೆದವಳೇ ಪೆಂಡೋರಾ. ಪಂಡೋರಾಳಲ್ಲಿ ವೀನಸ್ಸಿನ ಸೌಂದರ್ಯ, ಮರ್ಕ್ಯುರಿಯ ಕಾರ್ಯತತ್ಪರತೆ, ಅಪೋಲೋವಿನ ಸಂಗೀತ ವಿದ್ಯೆಯೇ ಮೊದಲಾಗಿ ದೇವತೆಗಳ ಸರ್ವಗುಣಗಳೂ ಅವಳಲ್ಲಿದ್ದವು. ಎಪಿಮಿಥಿಯಸ್ ಇಲ್ಲದಾಗ ಪಂಡೋರಾ ಆ ಭರಣಿಯ ಮುಚ್ಚಳವನ್ನು ಕುತೂಹಲಕ್ಕಾಗಿ ತೆರೆದು ಬಿಟ್ಟಳು. ಅದರಿಂದ ಹೊರಬಿದ್ದಿದ್ದೇ ರೋಗ ರುಜಿನಗಳು ಮತ್ತು ಕಷ್ಟ ಕೋಟಲೆಗಳು. ತಕ್ಷಣ ಮುಚ್ಚಿದಳು. ಆದರೆ ಅದರಲ್ಲಿ ಭದ್ರವಾಗಿ ಉಳಿದು ಕಂಡಿದ್ದು ಒಂದೇ- ಮಾನವನ ಆಶಾಭಾವ. ಮಾನವ ಎಲ್ಲಾ ಕಷ್ಟ ಕೋಟಲೆ, ರೋಗ ರುಜಿನಗಳನಡುವೆ ಈ ಆಶಾಭಾವದಿಂದ ಬದುಕಿದ್ದಾನೆ.

೫ನೇ ಹಂತ: ಪ್ರಳಯ-ಕಾಲ-ಪೀಠಿಕೆ

ಬದಲಾಯಿಸಿ
  • ಜಲ ಪ್ರಳಯದ ಕಥೆ ಮತ್ತು ಪುನರ್ ಸೃಷ್ಟಿ ಕಥೆ (ಸುಮಾರು ಕ್ರಿ. ಶ. ೨೦೦-೩೦೦ರಲ್ಲಿ ರಚಿತವಾದುದೆಂದು ನಂಬುವ ಮತ್ಸ್ಯ ಪುರಾಣದ ಕಥೆಯನ್ನು ಹೋಲುತ್ತದೆ). ಸುಮೇರಿನ್ ರಾಜ್ಯ ಉರ್ ಉರುಕ್ ನಗರ ಪ್ರವಾಹದಲ್ಲಿ ಮುಳುಗಿದ ಕಥಯೇ ಎನುಮಾ-ಎಲಿಶ್ ಎಂಬ ಹೆಸರಿನ ಬೆಬಿಲೋನಿಯಾ ಪುರಾಣ: ಅತ್ರಹಾಸಿಸ್ ಎಂದೂ ಹೆಸರಿದೆ. ಗಿಲ್ಗಮೇಶನಿಗೆ ಸುಮಾರು ಕ್ರಿ.ಪೂ.೨೯೦೦ (2400)ವರ್ಷಗಳ ಹಿಂದೆ ಇದ್ದ ಉರ್ ಉರುಕ್ ನಗರ-ಸುಮೇರು ರಾಜ್ಯವನ್ನು ಅವನಿಗಿಂತ ಸುಮಾರು ನಾನೂರು ವರ್ಷಗಳ ಹಿಂದೆ ಆಳುತ್ತಿದ್ದ ಉತನಪಿಷ್ಟಂ ಹೇಳಿದ ಪ್ರಳಯದ ಕಥೆಗಿಲ್ಗಮೆಶ್ ನಿಗೆ ಟೈಗ್ರಿಸ್ ಯೂಫ್ರೆಟೀಸ್ ನದೀತೀರದಲ್ಲಿಇದ್ದ ಉರ್;ಉರುಕ್ ಲಗಶ್ ನಗರ ರಾಜ್ಯದ ದೊರೆ (?)ಗಿಲ್ಗಮೆಶ್ ಮೂರನೇ ಎರಡು ಭಾಗ ಮಾನವ, ಮೂರನೇ ಒಂದು ಭಾಗ ದೇವತೆ. ಅವನ ೪೦೦ ವರ್ಷಗಳ ಹಿಂದಿನ ಪೂರ್ವಜ ಉತನಪಿಷ್ಟಂ ಗಿಲ್ಗಮೇಶನಿಗೆ ಹೇಳಿದ ಕಥೆಯೇ ಎನುಮಾ-ಎಲಿಶ್ ಅಥವಾ ಗಿಲ್ಗಮೇಶ್ ಪುರಾಣ.
  • ಸುಮೇರಿಯನ್ ಕಥೆ :(೧೬೦೦-೧೦೦೦ಕ್ರಿಪೂದಲ್ಲಿ ಬೆಬಿಲೋನಿಯನ್ ಭಾಷೆಯಿಂದ ಸುಮೇರಿಯನ್ ಇತರೆ ಭಾಷೆಗಳಿಗೆ ಭಾಷಾಂತರ ಪಾಠ; ಮೂಲ ಪಾಠಗಲ್ಲಿ ಕೆಲವು ಕ್ಯೂನಿಫಾರ್ಮದಲ್ಲಿ ಬರೆದ ಬಿಲ್ಲೆಗಳು ಮುಕ್ಕಾಗಿವೆ. ನಂತರ ಬಂದ ಸುಮೇರಿಯನ್ ಭಾಷಾಂತರ ಪೂರ್ಣಪಾಠ ಕೊಡುತ್ತದೆ.) ಕ್ಯೂನಿಫಾರ್ಮದಲ್ಲಿ ಬರೆದ ಮಣ್ಣಿನ ಬಿಲ್ಲೆಗಳು ಪ್ರಾಚೀನ ಸುಮೇರಿಯನ್ ಮತ್ತು ನಂತರದ ಅಕ್ಕಾದಿನ್ ಭಾಷೆಗಳಲ್ಲಿದೆ. ಅಕ್ಕಾದಿನ್ ಭಾಷೆಯಲ್ಲಿರುವುದು ಶುದ್ಧ ಪ್ರತಿ.


೬ನೇ ಹಂತ: ಪ್ರಲಯಕ್ಕೆ ಪೀಠಿಕೆ

ಬದಲಾಯಿಸಿ
  • ಪ್ರಳಯ -ಪ್ರಲಯಕ್ಕೆ ಪೀಠಿಕೆ : ಯುಪ್ರೆಟಿಸ್ ನದಿ ದಡದಲ್ಲಿದ್ದ ದೇವತೆಗಳ ನಗರ ಶುರಿಪ್ಪಕ್ ದಲ್ಲಿದ್ದ ದೇವತೆಗಳು ಮುದುಕರಾದಾಗ ಒಂದು ಮಹಾಪ್ರಲಯ ಮಾಡಿ ಎಲ್ಲವನ್ನೂ ನಾಶಮಾಡುವ ಯೋಚನೆ ದೇವತೆಗಳರಾಜ ಎನ್ಲಿಲ್ ನಿಗೆ ಬರುತ್ತದೆ. ದೇವಸಭೆ ಕರೆದು ಎಲ್ಲರನ್ನೂ ಒಪ್ಪಿಸುತ್ತಾನೆ. ದೇವರಾಜ ಎನ್ಲಿಲ್ ಹೇಳಿದ, ಉರ್ವಿಯಲ್ಲಿ ಜನ ಸಂಖ್ಯೆ ಮಿತಿ ಮೀರಿದೆ. ಗದ್ದಲವು ತುಂಬಿ ನಮ್ಮ ಶಾಂತಿಗೆ ಭಂಗವುಂಟಾಗಿದೆ. ಆದ್ದರಿಂದ ರುದ್ರ ಮಾರುತಗಳ ದೇವತೆ ಭೀಕರ ಮಳೆಗರೆಯಬೇಕು. ಇದ್ದಕ್ಕಿದ್ದಂತೆ ಜನ, ಬೀಜ, ಪಶು, ಪಕ್ಷಿಗಳು ಎಲ್ಲವೂ ನಿರ್ನಾಮವಾಗಬೇಕು. ಎಲ್ಲವೂ ನೆರೆಯಲ್ಲಿ ಕೊಚ್ಚಿಕೊಂಡು ಹೋಗಬೇಕು. ಆತನ ಸೋದರಿ - ಮಹಾಮಾತೆ, ಇಷ್ಟರ್ ಸಹ ಒಪ್ಪಿದಳು. ಎನ್ಲಿಲ್‍ನ ಸೋದರ ಇಯಾ ವಿವೇಕಿ ಅಂತರಂಗದಲ್ಲಿ ಒಪ್ಪಲಿಲ್ಲ. ಸಿಹಿನೀರಿನ ದೇವತೆಗಳ ಒಡೆಯ- ಜನರಕ್ಷಕ. ಇವನು ಉತನಪಿಷ್ಟಂಗೆ ಕನಸಿನಲ್ಲಿ ಕಾಣಿಸಿಕೊಂಡು ದೇವತಗಳ ಪಿತೂರಿಯನ್ನ ಹೇಳುತ್ತಾನೆ. ರಕ್ಷಿಸಿಕೊಳ್ಳುವ ಉಪಾಯವನ್ನೂ ಹೇಳುತ್ತಾನೆ.

೭ನೇ ಹಂತ

ಬದಲಾಯಿಸಿ

ಪ್ರಳಯದ ವಿವರ:

  • ಎನ್ಲಿಲ್ ನ ಸೋದರ ಇಯಾ ವಿವೇಕಿ ಅಂತರಂಗದಲ್ಲಿ ಒಪ್ಪಲಿಲ್ಲ. ಸಿಹಿನೀರಿನ ದೇವತೆಗಳ ಒಡೆಯ-ಜನರಕ್ಷಕ. ಇವನು ಎಲ್ಲಾ ದೇವತೆಗಳ ಒಡೆಯ. ಇವನು ಉತನಪಿಷ್ಟಂಗೆ ಕನಸಿನಲ್ಲಿಕಾಣಿಸಿಕೊಂಡು ದೇವತಗಳ ಪಿತೂರಿಯನ್ನಹೇಳುತ್ತಾನೆ. ಇಯಾ (ಹನ್ ಅಥವಾ ಒಯನ್ನಸ್ ಎಂಬಹೆಸರೂ ಇದೆ.)ಭಾರತದ ಇಂದ್ರನ ಸಮಾನ ದೇವತೆಯಂತಿರುವ ಮರ್‍ದುಕ್‍ನ ತಂದೆ ಇಯಾ. ಇವನು ಭೂಮಿಯ ಜನರ ರಕ್ಷಕ. ಸಮೃದ್ಧ ಹುಲ್ಲು ಬಯಲು, ಹೊಲಗಳನ್ನು ಮಾನವರಿಗಾಗಿ ಸೃಷ್ಠಿಸಿದವನು. ಅವರಿಗೆ ವ್ಯಯಸಾಯವನ್ನು ಕಲಿಸಿದವನು. ಅವನಿಗೆ ಮಾನವರನ್ನು ನಾಶಮಾಡುವ ಎನ್ಸಿಲ್ಲನ ಸಂಚು ಸ್ವಲ್ಪವೂ ಹಿಡಿಸಲಿಲ್ಲ. ಆದ್ದರಿಂದ ಇಯಾ ಶ್ಮರಿಪ್ಪಕ್‍ನ ರಾಜ ಉತನಪಿಷ್ಠಿಂನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ದೇವತೆಗಳ ಪಿತೂರಿಯನ್ನು ಹೇಳುತ್ತಾನೆ. ದೆವತೆಗಳು ಒಂದು ಪ್ರಲಯವನ್ಮ್ನ ಉಂಟುಮಾಡಿ ಎಲ್ಲವನ್ನೂ ನಾಶಮಾಡಲು ಯೋಜಿಸಿದ್ದಾರೆಂದು ಗುಟ್ಟಾಗಿ ತಿಳಿಸುತ್ತಾನೆ. ಅದರಿಂದ ರಕ್ಷಿಸಿಸಿಕೊಳ್ಳಲು ಉಪಾಯವನ್ನೂ ಹೇಳುತ್ತಾನೆ. ಉತನಪಿಷ್ಠಮ್‍ನಿಗೆ, "ನೀನು ನಿನ್ನ ಮನೆಯನ್ನು ಬಿಚ್ಚಿ ಅದರಿಂದ ಜೀವರಕ್ಷಕ ವೆಂಬ ದೊಡ್ಡ ನೌಕೆಯನ್ನು ನರ್ಮಿಸಿಕೋ. ನೌಕೆಯ ಉದ್ದ ಮತ್ತು ಅಗಲ ಸಮವಾಗಿರಬೇಕು. ಭದ್ರವಾಗಿ ರಚಿಸಬೇಕು. ಸೂರ್ಯ ದೇವತೆ ಶಮಶನ ಒಂದು ಕಿರಣವೂ ಅದರಲ್ಲಿ ಬರಬಾರದು. ಅದರಲ್ಲಿ ನಿನ್ನ ಹೆಂಡತಿ ಮಕ್ಕಳು, ಸಂಬಂಧಿಕರು, ಉತ್ತಮ ಕುಶಲ ಕರ್ಮಿಗಳು, ಎಲ್ಲರನ್ನೂ ನಾವೆಯೊಳಗೆ ಸೇರಿಸಿಕೋ. ಜೊತೆಗೆ ಅದರಲ್ಲಿ ಧಾನ್ಯಗಳು, ಇತರ ಅಗತ್ಯವಸ್ತುಗಳನ್ನು ಮತ್ತು ಜೀವ ಪ್ರಕಾರಗಳನ್ನು ತುಂಬಿಸಿಕೋ. ಸಕಾಲದಲ್ಲಿ ನಾನು ಬಂದು ನಿನಗೆ ನಾವೆಯಲ್ಲಿ ಸೇರಿಕೊಳ್ಳಬೇಕಾದ ಸಮಯಯವನ್ನು ಹೇಳುತ್ತೇನೆ", ಎಂದು ತಿಳಿಸುತ್ತಾನೆ. ನಾವೆಯನ್ನು ರಚಿಸುವ ಕ್ರಮವನ್ನೂ, ತಿಳಿಸಿ ಪ್ರಜೆಗಳಿಗೆ, ಎನ್ಲಿಲ್‍ಗೆ ತನ್ನನ್ನು ಕಂಡರೆ ಆಗದು ಅದರಿಂದ ಈ ಹಡಗಿನಲ್ಲಿ ಕುಳಿತು ಜಲ ದೇವತೆ ಇಯಾನ ಸೀಮೆಗೆ ಹೋಗುವುದಾಗಿಯೂ ಉಳಿದವರಿಗೇನೂ ತೊಂದರೆಯಾಗದೆಂದೂ ತಿಳಿಸುವಂತೆ ಹೇಳುತ್ತಾನೆ.
  • ಒಂದು ಎಕರೆ ವಿಸ್ತೀರ್ಣದ ೨೦೦ ಅಡಿಯಷ್ಟು ಎತ್ತರದ ಏಳು ಅಂತಸ್ತುಗಳ, ಪ್ರತಿಯೊಂದರಲ್ಲಿ ಒಂಭತ್ತು ಕೋಣೆ ಗಳುಳ್ಳ ವಾವೆಯನ್ನು ರಚಿಸಿತ್ತಾನೆ.ಏಳು ದಿನ ಎಡಬಿಡದೆ ಕಟ್ಟಿದ ನೌಕೆಯಲ್ಲಿ ಇಯಾನ ಸಲಹೆಯಂತೆ ಬೀಜಗಳು ಮತ್ತು ಪ್ರಾಣಿ - ಪಕ್ಷಿಗಳು, ತನ್ನ ಕುಟಂಬದವರು ಹಡಗನ್ನು ಕಟ್ಟಿದ ಕೆಲಸಗಾರರನ್ನು ತುಂಬಿಸಿದ. ಶಮಶ ಸೂರ್ಯ ದೇವತೆ ಸೂಚನೆ ಕೊಟ್ಟ; ಅದದ್ ಬಿರುಗಾಳಿ ದೇವತೆ ಕಾರ್ಮೋಡವನ್ನು ಉಂಟುಮಾಡುತ್ತಲೇ ನೀನು ನಾವೆಯೊಳಗೆ ಸೇರಿಕೊಂಡು, ಬಾಗಿಲನ್ನು ಭದ್ರಪಡಿಸಿಕೊಂಡುಬಿಡು. ಉತನಪಿಷ್ಟಂ ಕಾರ್ಮೋಡವನ್ನು ಕಾಣುತ್ತಲೇ ನಾವೆಯೊಳಗೆ ಸೇರಿಕೊಂಡು ನೀರು ಒಳಬರದಂತೆ ಭದ್ರ ಪಡಿಸಿಕೊಂಡ. ಇಡೀ ದಿನ ಕಾರ್ಮೋಡಗಳು ಕವಿದು ಬಿರುಗಾಳಿ ಮಳೆ ಆರ್ಭಟಿಸಿ ಸುರಿಯಿತು. ಭೂಮಿ ಛಿದ್ರ ಛಿದ್ರ ವಾಯಿತು. ಆ ಕತ್ತಲೆಯಲ್ಲಿ ಭೂಮಿಯ ದುರಂತವನ್ನು ನೋಡಲು ದೇವತೆಗಳು ಆಕಾಶದಲ್ಲಿ ದೀವಟಿಗೆಯನ್ನು ಹಡಿದು ಇಣುಕಿ ನೋಡುತ್ತಿದ್ದರು. ಎಲ್ಲವೂ ಮಳುಗತ್ತಾ ಸರ್ವನಾಶವಾಯಿತು. ನಾವೆಯು ಹೊಯಿದಾಡುತ್ತಿತ್ತು. ದೇವತೆಗಳಿಗೂ ಎದೆ ನಡುಗಿತು. ಅವರು ಮೇಲಿನ ಆಕಾಶ ದೇವತೆಯಾದ ಅನುವಿನ ಲೋಕಕ್ಕೆ ಹೋಗಿ ಆಶ್ರಯ ಪಡೆದರು. ಅಲ್ಲಿ ಅನುವಿನ ಪತ್ನಿ ನಿಂತು ಲೋಕಮಾತೆ ಮಾನವ ಸಂತತಿಯನ್ನು ಮೊದಲು ಮಣ್ಣಿನಿಂದ ಸೃಷ್ಟಿಸಿದವಳು, ಈ ದುರಂತವನ್ನು ಕಂಡು ಅತ್ತಳು. ಎನ್ಲಿನ್‍ನ ಸಂಚಿಗೆ ಮೊದಲು ಒಪ್ಪಿಗೆ ಕೊಟ್ಟ ಆತನ ತಂಗಿ ಇಷರ್ ಕೂಡಾ ಅತ್ತಳು. ನಾನು ಒಪ್ಪಿದ್ದೇ ಕಾರಣ, ಎಲ್ಲಾ ನಾಶವಾಯಿತಲ್ಲಾ, ನನ್ನ ಸಂತಾನದ ಹೆಣಗಳು ನೀರಿನಲ್ಲಿ ತೇಲುತ್ತಿವೆ, ಹೇಗೆ ಸಹಿಸಲಿ ಅಯ್ಯೋ! ನಾನು ಪಾಪಿ! ಎಂದು ಪರಿತಪಿಸುತ್ತಾಳೆ. ಉಳಿದ ದೇವತೆಗಳೂ ಪರಿತಪಿಸುತ್ತಾರೆ. ಏಳು ದಿನ ಏಳು ರಾತ್ರಿ ಎಡಬಿಡದೆ ಬಿರುಗಾಳಿ ಮಳೆ ಹೊಡೆದು ಸರ್ವವೂ ನಾಶವಾಯಿತು.
  • ಎಂಟನೆಯ ದಿನ ಮಳೆ ನಿಂತು ಬೆಳಕು ಹರಿಯಿತು. ಸ್ವಲ್ಪವೇ ಕಿಟಕಿಯ ಬಾಗಿಲು ತೆರದು ಭೀಕರ ನಾಶವನ್ನು ನೋಡಿ ಅತ್ತ. ಶಮಶ ಒಳಗೆ ಬೆಳಕು ಹರಿಸಿದ. ಉತನಪಿಷ್ಟಂ ಅವನಿಗೆ ತನ್ನನ್ನು ಉಳಿಸಿದ್ದಕ್ಕಾಗಿ ನಮಸ್ಕರಿಸಿ, ಒಂದು ಎತ್ತು ಮತ್ತು ಒಂದು ಕುರಿಯನ್ನು ದೇವತೆಗಳಿಗೆ ಬಲಿ ಕೊಟ್ಟ. ಆತನ ನೌಕೆ ೧೨ ದಿನ ನೀರಿನಲ್ಲಿ ತೇಲುತ್ತಲೇ ಇತ್ತು. ದೂರದಲ್ಲಿ ೧೪ ಬೆಟ್ಟಗಳು ನೀರಿನಿಂದ ಮೇಲೆ ತಲೆ ಎತ್ತಿ ನಿಂತಿದ್ದನ್ನು ನೋಡಿದ. ಇವನ ನೌಕೆ ನಿಸಿರ ಎಂಬ ಬೆಟ್ಟದ ಹತ್ತಿರ ನಿಂತಿತು. ಓಂದು ಪರಿವಾಳವನ್ನು ಹೊರಕ್ಕೆ ಬಿಟ್ಟ. ಅದು ಇಳಿಯಲು ಸ್ಥಳವಿಲ್ಲದೆ ಹಾಗೆಯೇ ಬಂದಿತು. ನಂತರ ಒಂದು ಗುಬ್ಬಿಯನ್ನು (ಸ್ವಾಲೊ ಪಕ್ಷಿ) ಯನ್ನು ಬಿಟ್ಟ. ಅದೂ ಹಾಗೇಯೇ ಹಿಂತಿರುಗಿತು. ಸ್ವಲ್ಪ ಸಮಯದ ನಂತರ ಒಂದು ಕಡಲ ಕಾಗೆಯನ್ನು ಹೊರಕ್ಕೆ ಹಾರಿ ಬಿಟ್ಟ. ಅದು ಹೊರಗೇ ಉಳಿಯಿತು. ನೀರು ಇಳಿಯುತ್ತಿತ್ತು. ಆಗ ಉತನಪಿಷ್ಟಂ ಎಲ್ಲಾ ಪಶು ಪಕ್ಷಿ ಗಳನ್ನು ಹೊರಕ್ಕೆ ಬಿಟ್ಟ. ಪರ್ವತದ ಮೇಲೆ ೧೪ ಕಂಬಗಳನ್ನು ನೆಟ್ಟ. ದೇವತೆಗಳಿಗೆ ಗರಿಕೆ, ಕಟ್ಟಿಗೆ(ಮರ) ಬೆತ್ತಗಳನ್ನಿಟ್ಟು ತರ್ಪಣ ಕೊಟ್ಟ. ಅದರ ಪರಿಮಳಕ್ಕೆ ದೇವತೆಗಳೆಲ್ಲಾ ಇಳಿದು ಬಂದರು. ಆಗಸದ ಎತ್ತರದ ಒಡೆಯನಾದ ದೇವರಾಜ ಅನು ಮತ್ತು ಅಂತರಿಕ್ಷದ ಮತ್ತೊಬ್ಬ ಒಡೆಯ ಎನ್ಲಿಲ್‍ಗೆ ಉದ್ದಂಡ ನಮಸ್ಸರಿಸಿದ. ಆಗ ಇಷರ್ ಅಲ್ಲಿಗೆ ಬಂದಳು. ಉತನಪಿಷ್ಟಂ ನೀಡಿರುವ ತರ್ಪಣವನ್ನು ಸ್ವೀಕರಿಸಲು ದೇವತೆಗಳನ್ನು ಕರೆದಳು; ಆದರೆ ಎನ್ಲಿಲ್ ಬರಬಾರದೆಂದು ಹೇಳಿದಳು. ಅವನು ವಿನಾಕಾರಣ ಸರ್ವನಾಶಕ್ಕೆ ಕಾರಣನಾದವನು ಎಂದಳು. ಎನ್ಲಿಲ್ ಸಿಟ್ಟಿನಿಂದ ತನ್ನ ಸಂಚನ್ನು ವಿಫಲ ಗೊಳಿಸಿದ್ದು ಯಾರೆಂದು ಘರ್ಜಿಸಿದ.
  • ಆಗ ಇಯಾ ಹೇಳುತ್ತಾನೆ, 'ನೀನು ದೇವತೆಗಳ ರಾಜನಾಗಿದ್ದು, ವಿವೇಕಿಯಾಗಿದ್ದು, ಕಾರಣವಿಲ್ಲದೆ ಈ ರೀತಿ ನೆರೆಯನ್ನು ಯಾಕೆ ತಂದೆ. ತಪ್ಪಿತಸ್ತರನ್ನು ಮಾತ್ರಾ ಶಿಕ್ಷಿಸಬೇಕು. ಬೇರೆ ಉಪಾಯದಿಂದ ತಪ್ಪಿತಸ್ತರನ್ನು ನಾಶಮಾಡಬೇಕಿತ್ತು. ಉತನಪಿಷ್ಟಂ ಕನಸಿನಲ್ಲಿ ಪಾರಾಗುವ ಉಪಾಯವನ್ನು ಕಂಡು ಕೊಂಡ' ಎಂದ. ಉತನಪಿಷ್ಟಂ ತನ್ನನ್ನು ಕಾಪಾಡಲು ಬೇಡಿಕೊಂಡ. ಎನ್ಲಿಲ್ ಅವನ (ಉತನಪಿಷ್ಟಂ) ಮತ್ತು ಅವನ ಮಡದಿಯನ್ನು ಮೊಣಕಾಲೂರಿ ನಿಲ್ಲಲು ಹೇಳಿದ. ಆವರ ತಲೆಯ ಮೇಲೆ ಕೈಯಿಟ್ಟು ಮರ್ತ್ಯರಾದ ಇವರು ಇನ್ನು ಮುಂದೆ ದೇವತೆಗಳಾಗುವರು; ಅವರಿಗೆ ಅನಂತವಾದ ಉಸಿರನ್ನು ನೀಡಿದ್ದೇನೆ ಎಂದ. ಶಿರಿಪ್ಪುಕ್‍ನ ರಾಜ ಉತನಪಿಷ್ಟಂ ಭೂಮಿಯ ಮೇಲೆ ಜೀವ ಕುಲಗಳನ್ನು ಉಳಿಸಿದನನೆಂದು ಹೆಸರು ಪಡೆದು ದಿಲ್ಮನ್ ಎಂಬ ರಾಜ್ಯದ ನದೀ ಮುಖದಲ್ಲಿ ಸದಾನೆಲಸುವನೆಂದು ಆಶೀರ್ವದಿಸಿದನು.
  • ಹೀಗೆ ಶಿರಿಪ್ಪುಕ್‍ನ ರಾಜ ಉತನಪಿಷ್ಟಿಂ ಪ್ರಳಯದ ನಂತರ ಪುನಃ ಭೂಮಿಯ ಮೇಲೆ ಮಾನವ ಕುಲ ಪ್ರಾಣಿ ಪಕ್ಷಿಗಳು, ಜೀವ ಜಾಲಗಳನ್ನು ಸೃಷ್ಟಿಸುತ್ತಾನೆ.

ಗಿಲ್ಗಮೇಷ್ ಪುರಾಣ

ಬದಲಾಯಿಸಿ
  • ಹೀಗೆ ಶಿರಿಪ್ಪುಕ್ ನ ರಾಜ ಉತನಪಿಷ್ಟಿಂ ಪ್ರಳಯದ ನಂತರ ಪುನಃ ಭೂಮಿಯ ಮೇಲೆ ಮಾನವ ಕುಲ ಪ್ರಾಣಿ ಪಕ್ಷಿಗಳು, ಜೀವ ಜಾಲಗಳನ್ನುಉಳಿಸಿ ಪುನರ್ ಸೃಷ್ಟಿಗೆ ಕಾರಣನಾದನು. ಅವನು ಮತ್ತು ಅವನ ಪತ್ನಿ ದೇವತೆಗಳ ಸಾಲಿಗೆ ಸೇರಿದರು.ನಂತರ ಇದು ಸುಮರ್-ಬ್ಯಾಬಿಲೋನಿಯಾದ ಪ್ರಾಚೀನ ರಾಜ ಗಿಲ್ಗಮೇಷ್‍ನು ತಾನು ತನ್ನ ಪೂರ್ವಜ ಉತನಪಿಷ್ಟಂ ಅವನಿಗೆ ಹೇಳಿದ ವಿಚಾರಗಳನ್ನು ಪ್ರಚುರ ಪಡಿಸಿದ್ದರಿಂದ ಅದು ಗಿಲ್ಗಮೇಷ್ ಪುರಾಣ ಎಂದು ಪ್ರಸಿದ್ಧವಾಗಿದೆ. ಈ ಕಥೆ ಭಾರತದ ಪುರಾಣಗಳಲ್ಲಿ ಬರುವ ಮಹಾ ಪ್ರಳಯದಲ್ಲಿ ಚಕ್ರವರ್ತಿ ಮನು ಮತ್ಸ್ಯ ರೂಪಿ ಮಹಾವಿಷ್ಣುವಿನ ಸಹಾಯದಿಂದ ಮಾನವ ಕುಲ ಮತ್ತು ಪ್ರಾಣಿ ಪಕ್ಷಿಗಳನ್ನು ಕಾಪಾಡಿದ ಕಥೆಯನ್ನು ಹೋಲುತ್ತದೆ.[][]

ಆ ಕಾಲದ ದೇವತೆಗಳ ಪಟ್ಟಿ

ಬದಲಾಯಿಸಿ

ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. ಸೃಷ್ಟಿ ಪ್ರಲಯ ಮರುಸೃಷ್ಟಿ -ಪ್ರೊ. ಶ್ರೀಪತಿ ತಂತ್ರಿ.
  2. Ackerman, Robert (1991—Reprint edition). "Introduction". Prolegomena to the Study of Greek Religion by Jane Ellen Harrison. Princeton University Press. ISBN 0-691-01514-7.