ಮಹಾವಿಷ್ಣು ವಿಷ್ಣುವಿನ ಒಂದು ಅಂಶ, ಮಾನವ ಗ್ರಹಿಕೆಗೆ ಮೀರಿದ ಮತ್ತು ಎಲ್ಲ ಗುಣಲಕ್ಷಣಗಳನ್ನು ಮೀರಿದ ಪರಮ ರೂಪ. ವೈಷ್ಣವ ಪಂಥದ ಒಂದು ಪರಂಪರೆಯಾದ ಗೌಡೀಯ ವೈಷ್ಣವ ಪಂಥದಲ್ಲಿ, ಸಾತ್ವತ ತಂತ್ರವು ವಿಷ್ಣುವಿನ ಮೂರು ಭಿನ್ನ ರೂಪಗಳನ್ನು ವಿವರಿಸುತ್ತದೆ: ಮಹಾವಿಷ್ಣು, ಗರ್ಭೋದಕಷಾಯಿ ವಿಷ್ಣು ಮತ್ತು ಕ್ಷೀರೋದಕಷಾಯಿ ವಿಷ್ಣು. ಮಹಾವಿಷ್ಣು ಪದವು ಬ್ರಹ್ಮನ್ ಪದವನ್ನು ಹೋಲುತ್ತದೆ, ಮತ್ತು ದೇವರ ಪರಮೋಚ್ಚ ವ್ಯಕ್ತಿತ್ವವಾಗಿದೆ. ಇದರರ್ಥ ಪರಮ ಸತ್ಯವನ್ನು ಮೊದಲು ಬ್ರಹ್ಮನ್ ಆಗಿ (ನಿರಾಕಾರ ಅಂಶ), ನಂತರ ಪರಮಾತ್ಮವಾಗಿ (ವ್ಯಕ್ತಿಗತ ಅಂಶ) ಮತ್ತು ಅಂತಿಮವಾಗಿ ಭಗವಾನ್ (ಮೈದಾಳಿದ ಪರಿಪೂರ್ಣತೆ) ಆಗಿ ಸಿದ್ಧಿಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಭಕ್ತಿ ಭಗವಾನ್ ಕೃಷ್ಣನಿಗೆ (ವಿಷ್ಣುವಿನ ಅವತಾರ) ಹೋಗುತ್ತದೆ. ಈ ರೀತಿಯಲ್ಲಿ, ಭಕ್ತಿಯು ಯೋಗವನ್ನೂ ಮೀರಿಸುತ್ತದೆ ಮತ್ತು ಇದರ ಗುರಿ ಪರಮಾತ್ಮವಾಗಿದೆ. ಮಹಾವಿಷ್ಣುವು ಎಲ್ಲ ಭೌತಿಕ ಬ್ರಹ್ಮಾಂಡಗಳಲ್ಲಿ ಎಲ್ಲ ಜೀವಾತ್ಮಗಳ ಪರಮಾತ್ಮವಾಗಿದೆ. ಅದನ್ನು ಹಲವುವೇಳೆ ಗೌರವ ಸೂಚಿಸಲು ವಿಷ್ಣುವಿನೊಂದಿಗೆ ಅದಲು ಬದಲಾಗಿಯೂ ಬಳಸಲಾಗುತ್ತದೆ, ಏಕೆಂದರೆ ಪೂರ್ವಪ್ರತ್ಯಯ "ಮಹಾ"ವನ್ನು ಸೇರಿಸಿದ ನಾಮಪದವನ್ನು ಉದಾತ್ತಗೊಳಿಸುತ್ತದೆ. ಮಹಾವಿಷ್ಣುವು ಭೌತಿಕ ಬ್ರಹ್ಮಾಂಡವನ್ನು ನಿರ್ವಹಿಸಲು ಆದಿ ಪರಾಶಕ್ತಿಯನ್ನು ಸೃಷ್ಟಿಸಿದ ಎಂದು ನಂಬಲಾಗಿದೆ. ಹಾಗಾಗಿ ಪರಾಶಕ್ತಿಯು ಮಹಾವಿಷ್ಣುವಿನ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಹಾಗಾಗಿ ಶಿವ, ಪರಾಶಕ್ತಿ, ಬ್ರಹ್ಮ ಸೇರಿದಂತೆ ಎಲ್ಲ ದೇವತೆಗಳು ಮಹಾವಿಷ್ಣು ವಿಸ್ತರಣೆಯ ಭಾಗವೆಂದು ಪರಿಗಣಿಸಲಾಗಿದೆ.

ಮಹಾವಿಷ್ಣುವು ಕಾರಣೋದಕದಲ್ಲಿ ಅಡ್ಡಾಗಿದ್ದಾನೆ ಎಂದು ಹೇಳಲಾಗುತ್ತದೆ. ಅವನು ಈ ಭೌತಿಕ ಬ್ರಹ್ಮಾಂಡದ ಬೀಜವನ್ನು ಮಹಾಮಾಯೆಯಲ್ಲಿ ಹಾಕುತ್ತಾನೆ (ಅವಳತ್ತ ನೋಡಿ). ಮಹಾಮಾಯೆಯು ಪರಮೇಶ್ವರನ ಸದಾ ಆಜ್ಞಾಧಾರಾಕ ಭೌತಿಕ ಶಕ್ತಿಯಾಗಿ ಇರುತ್ತಾಳೆ. ಆಕಾಶ, ಬೆಂಕಿ, ನೀರು, ಗಾಳಿ ಮತ್ತು ಭೂಮಿ ಸೇರಿದಂತೆ ಎಲ್ಲ ಪ್ರಾಕೃತಿಕ ಅಂಶಗಳನ್ನು ಮನಸ್ಸು, ಬುದ್ಧಿಶಕ್ತಿ ಮತ್ತು ಸುಳ್ಳು ಅಹಂನೊಂದಿಗೆ ಸೃಷ್ಟಿಸಲಾಗುತ್ತದೆ.

ಇದರ ನಂತರ, ಮಹಾವಿಷ್ಣುವು ಸೃಷ್ಟಿಯಾದ ಅನೇಕ ಬ್ರಹ್ಮಾಂಡಗಳ ಪ್ರತಿಯೊಂದರಲ್ಲಿ ಗರ್ಭೋದಕಷಾಯಿ ವಿಷ್ಣುವಾಗಿ ಪ್ರವೇಶಿಸುತ್ತಾನೆ (ಅವನ ಚರ್ಮದ ರಂಧ್ರಗಳಿಂದ ಹೊರಹೊಮ್ಮುವ ಬೀಜಗಳು). ಗರ್ಭೋದಕಷಾಯಿ ವಿಷ್ಣುವು ಒಂದು ನಿರ್ದಿಷ್ಟ ಬ್ರಹ್ಮಾಂಡದಲ್ಲಿ ಎಲ್ಲ ಆತ್ಮಗಳ ಸಾಮೂಹಿಕ ಆತ್ಮ ಎಂದು ಮತ್ತು ಮಹಾವಿಷ್ಣುವು ಎಲ್ಲ ಬ್ರಹ್ಮಾಂಡಗಳಲ್ಲಿನ ಎಲ್ಲ ಆತ್ಮಗಳ ಸಾಮೂಹಿಕ ಆತ್ಮ ಎಂದು ವ್ಯಾಖ್ಯಾನ ಮಾಡಬಹುದು.

ಗರ್ಭೋದಕಷಾಯಿ ವಿಷ್ಣುವಿನಿಂದ ಬ್ರಹ್ಮನು ಹೊರಹೊಮ್ಮುತ್ತಾನೆ. ಬ್ರಹ್ಮನು (ಬ್ರಹ್ಮಾಂಡದಲ್ಲಿ ಗ್ರಹಗಳನ್ನು ಸೃಷ್ಟಿಸಲು ತಪಸ್ಸು ಮಾಡಬೇಕಾದ ಕಾರಣ) ವಿಶೇಷವಾಗಿ ಈ ಬ್ರಹ್ಮಾಂಡದ ಗ್ರಹಗಳ ವ್ಯವಸ್ಥೆಗಳ ಆನುಷಂಗಿಕ ಸೃಷ್ಟಿಕರ್ತ.