ಸೃಷ್ಟಿ ಮತ್ತು ಬೈಬಲ್
ಜಗದ ಸೃಷ್ಟಿ -ಹಳೆಯ ಒಡಂಬಡಿಕೆ - ಹಳೆಯ ಬೈಬಲ್
ಬದಲಾಯಿಸಿಪೀಠಿಕೆ
ಬದಲಾಯಿಸಿ- ಜಗದ ಸೃಷ್ಟಿ -ಹಳೆಯ ಒಡಂಬಡಿಕೆ - ಹಳೆಯ ಬೈಬಲ್-ಮೊದಲ ಮಾನವನ ಸೃಷ್ಟಿ. ಪ್ರಾಚೀನ ಬೈಬಲ್ ಸುಮಾರು ಕ್ರಿ. ಪೂ. ೧೩ನೇ ಶತಮಾನದಿಂದ ಕ್ರಿ. ಪೂ ೧ ನೇ ಶತಮನದ ವರೆಗೂ ಯಹೂದಿ ಧರ್ಮದವರು ಬರೆದಿಟ್ಟಿರುವ ಅವರ ಸಾಮಾಜಿಕ ಹಾಗೂ ಧಾರ್ಮಿಕ ದಾಖಲೆಗಳ ಗ್ರಂಥ. ಮಧ್ಯ ಏಷ್ಯಾದಲ್ಲಿ ಮೊದಲು ಸುಮೇರಿಯ (ಸೆಮಿಟಿಕ್) ಸಾಮ್ರಾಜ್ಯವಿದ್ದು ನಂತರ ಕ್ರಿ.ಪೂ. ೭೩೧ ರಲ್ಲಿ ಯಹೂದ್ಯರ ಸಾಮ್ರಾಜ್ಯ ತಲೆ ಎತ್ತಿ ಅದೇ ಧರ್ಮವನ್ನು ಮುಂದುವರಿಸಿದ್ದರಿಂದ ಆ ಪ್ರಾಂತದಲ್ಲಿ ಹುಟ್ಟಿದ ಆ ಗ್ರಂಥಗಳ ಆಧಾರ ಹೊಂದಿದ ಧರ್ಮಗಳಿಗೆ ಸೆಮಿಟಿಕ್ ಧರ್ಮಗಳೆಂದು ಕರೆಯುತ್ತಾರೆ. ಹಳೆಯ ಬೈಬಲ್ ಹೀಬ್ರೂ ಭಾಷೆಯಲ್ಲಿ ಬರೆದಿದ್ದು, ಜೆನಿಸಿಸ್, ಎಕ್ಸೋಡಸ್, ಲೆವಿಟಿಕಸ್, ನಂಬರ‍್ಸ್, ಪೆನ್ಟಟಾಕ್ ಎಂದು ಐದು ಭಾಗಗಳಿದ್ದು, ೩೯ ಸಂಹಿತೆ (ವಾಲ್ಯೂಮ್) ಗಳಿವೆ. ಇವನ್ನು ಕ್ರಿ.ಶ. ೭ನೇ ಶತಮಾನದಲ್ಲಿ ಗ್ರೀಕ್ ಮತ್ತು ಲ್ಯಾಟಿನ್ನಿಗೆ ಅನುವಾದಿಸಲಾಯಿತು. ಮೊದಲ ಕ್ರಿಪೂ.೧೦ನೇ ಶತಮಾನದ ಯಾಹೋವಿಸ್ಟ್ ಐದು ಗ್ರಂಥಗಳು ಮೋಸೆಸ್ ನಿಂದ ಕ್ರಿಪೂ.೧೩ ಶ.ದಲ್ಲಿ ರಚಿಸಲ್ಪಟ್ಟವೆಂದೂ, ಮುಂದಿನ ಇಲೋಹಿಸ್ಟ್, ಸಾಸರ್‌ಡೋಟಲ್ ಗ್ರಂಥಗಳು ನಂತರ ಸೇರಿಸಿದವು ಎಂಬ ನಂಬುಗೆ ಇದೆ. ಇವು ಯಹೂದ್ಯರ ತೋರ‍್ಹಾ-ನಿಯಮ,- ಧಾರ್ಮಿಕ ನಿಯಮಗಳೆಂದು ಕರೆಯಲ್ಪಟ್ಟಿವೆ.
- ಯಾಹೊವಾ -ಸೃಷ್ಟಿ ಕರ್ತ
ಸೃಷ್ಟಿಯ ಒಂದನೇ ಹಂತ - ಸ್ವರ್ಗ ಮೊದಲ ದಿನ
ಬದಲಾಯಿಸಿ- ಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ ೧ & ೨ :
- ೧ ಮೊದಲು ಕತ್ತಲೆಯಿಂದ ತುಂಬಿದ ಏನೂ ಇಲ್ಲದೆ ಭೂಮಿಯು ನಿರಾಕಾರವಾಗಿತ್ತು. ಆಗ ದೇವನು ಶಕ್ತಿ ರೂಪದಲ್ಲಿ ನೀರಿನ ಮೇಲೆ ತೇಲುತ್ತಿದ್ದನು. ಪ್ರಾರಂಭದಲ್ಲಿ ದೇವನು ಸ್ವರ್ಗವನ್ನು ಸೃಷ್ಟಿಸಿದನು.
ಸೃಷ್ಟಿಯ ಎರಡನೇ ಹಂತ
ಬದಲಾಯಿಸಿಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ ೩-೫;
- ನಂತರ ದೇವನು ಹೇಳಿದನು, ಬೆಳಕು ಉಂಟಾಗಲಿ ಬೆಳಕು ಆಯಿತು. ಆವನು ಬೆಳಕು ಕತ್ತಲೆಗಳನ್ನು ಬೇರೆ ಮಾಡಿದನು. ಹೀಗೆ ಹಗಲು ರಾತ್ರಿಗಳು ಆದವು . ಒಂದು ದಿನ ಮುಗಿಯಿತು. (ಸೋಮವಾರ)
ಸೃಷ್ಟಿಯ ಮೂರನೇ ಹಂತ
ಬದಲಾಯಿಸಿ- ಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ ೬-೮;
- ೩ ದೇವನು ಆಕಾಶವಾಗಲಿ ಎಂದನು, - ನೀರು ಆಕಾಶ ಬೇರೆಯಾಗಲಿ ಎಂದನು ಸ್ಚರ್ಗದ ನೀರನ್ನೂ ಭೂಮಿಯ ನೀರನ್ನೂ ಬೇರೆಮಾಡಿದನು. ಆಕಾಶವನ್ನು ಸ್ವರ್ಗವೆಂದು ಕರೆದನು. ಸಂಜೆಯಾಗಿ ಬೆಳಗಾಯಿತು. ಎರಡು ದಿನ ಮುಗಿಯಿತು. ( ಮಂಗಳವಾರ)
ಸೃಷ್ಟಿಯ ನಾಲ್ಕನೇ ಹಂತ
ಬದಲಾಯಿಸಿ- ಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ ೯-೧೩;
- ೪ ದೇವನು, ನೀರಲ್ಲಾ ಒಂದೆಡೆ ಸೇರಲಿ, ನೆಲವೂ ತೋರಲಿ, ಎಂದನು. ಹಾಗೆಯೇ ಆಯಿತು. ನೆಲವನ್ನು ಭೂಮಿಯೆಂದೂ, ಒಟ್ಟಾದ ನೀರನ್ನು ಸಮುದ್ರವೆಂದೂ ಕರೆದನು, ಭೂಮಿಯಮೇಲೆ ಬೀಜಗಳುಳ್ಳ ಹಣ್ಣು ಬಿಡುವ ಸಸ್ಯಗಳಾಗಲಿ ಎಂದನು. ಹಾಗೆಯೇ ಆಯಿತು. ದೇವನು ನೋಡಿದನು; ಒಳಿತು ಎಂದನು. ಸಂಜೆಯಾಗಿ ಬೆಳಗಾಯಿತು. ಮೂರು ದಿನ ಮುಗಿಯಿತು. (ಬುಧವಾರ)
ಸೃಷ್ಟಿಯ ಐದನೇ ಹಂತ
ಬದಲಾಯಿಸಿ- ಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ ೧೪-೧೯;
- ೫ ದೇವನು, ಹಗಲು ರಾತ್ರಿ ಗಳನ್ನು ಬೇರೆ ಮಾಡುವ ಬೆಳಕು ಆಕಾದಲ್ಲಿ ಮೂಡಲಿ, ಹಾಗೆಯೇ ಅದು ದಿನ, ಋತು, ವರ್ಷ, ಗಳನ್ನು ತೋರುವಂತಾಗಲಿ, ಹಗಲು ಪ್ರಕಾಶದ ಬೇಳಕೂ, ರಾತ್ರಿ ಮಂದ ಬೆಳಕೂ ಆಗಲಿ, ನಕ್ಷತ್ರಗಳಾಗಲಿ, ಎಂದನು. ಹಾಗೆಯೇ ಆಯಿತು. ದೇವನು ನೋಡಿದನು; ಒಳಿತು ಎಂದನು. ಸಂಜೆಯಾಗಿ ಬೆಳಗಾಯಿತು. ನಾಲ್ಕು ದಿನ ಮುಗಿಯಿತು. (ಗುರುವಾರ)
ಸೃಷ್ಟಿಯ ಆರನೇ ಹಂತ
ಬದಲಾಯಿಸಿ- ಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ : ೨೦-೨೩;
- ೬ ದೇವನು ಹೇಳಿದನು, ನೀರಿನಲ್ಲಿ ಜೀವಿಗಳುಂಟಾಗಲಿ, ಆಕಾಶದಲ್ಲಿ ಹಕ್ಕಿಗಳು ಹಾರಲಿ, ಎಂದನು, ಹೀಗೆ ಸೃಷ್ಟಸಿ, ನೀರಿನಲ್ಲಿ ದೈತ್ಯ ಪ್ರಾಣಿಗಳನ್ನು ಸೃಷ್ಟಿಸಿ ಸಂತಾನ ಹೊಂದಿ, ಅಧಿಕವಾಗಿ,ಎಂದನು ಹರಸಿದನು, ಹಾಗೆಯೇ ಆಯಿತು. ಸಂಜೆಯಾಗಿ ಬೆಳಗಾಯಿತು. ಐದು ದಿನ ಮುಗಿಯಿತು. (ಶುಕ್ರವಾರ)
ಸೃಷ್ಟಿಯ ಏಳನೇ ಹಂತ
ಬದಲಾಯಿಸಿಹಳೆ ಒಡಂಬಡಿಕೆ - ಅಧ್ಯಾಯ೧, ಪದ್ಯ : ೨೪-೩೧ ;
- ೭ ದೇವನು, ಭೂಮಿಯ ಮೇಲೆ, ಪಶು-ಪ್ರಾಣಿಗಳೂ, ಹರಿದಾಡುವ ಜೀವಿಗಳೂ ಆಗಲಿ-ಅಧಿಕವಾಗಲಿ, ಎಂದನು ; ಒಳಿತು ಎಂದು, ತನ್ನ ಆಕಾರದಲ್ಲಿ ಮಾನವನನ್ನು ಸೃಷ್ಟಿಸಿ - ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿ - ಮಕ್ಕಳನ್ನು ಹೊಂದಿ ಅಧಿಕವಾಗಿ, ಎಲಾ ಪ್ರಾಣಿಗಳಿಗೂ ಒಡೆಯರಾಗಿ, ಎಂದನು. ನೋಡಿ ತೃಪ್ತಿ ಹೊಂದಿದನು. . ಸಂಜೆಯಾಗಿ ಬೆಳಗಾಯಿತು. ಆರು ದಿನ ಮುಗಿಯಿತು. (ಶನಿವಾರ): (ಸೋಮವಾರದಿಂದ ಶನಿವಾರದ ವರೆಗೆ)
ವಿಶ್ರಾಂತಿಯ ದಿನ
ಬದಲಾಯಿಸಿ- (೮) ಏಳನೆಯ ದಿನ ದೇವನು ಸೃಷ್ಟಿ ಕೆಲಸ ಮಗಿಸಿ ವಿಶ್ರಾಂತಿ ಹೊಂದಿದನು, ಕೊನೆಯ ಭಾನುವಾರವನ್ನು ವಿಶ್ರಾಂತಿ (hallowedಹ್ಯಾಲೋವ್ಡ್) ದಿನವಾಗಿ ಮಾಡಿದನು. (ಜಿನೆಸಿಸ್ ನಲ್ಲಿರುವ ಮತ್ತೊಂದು ಬಗೆಯ ಸೃಷ್ಟಿಯ ಸಂಕ್ಷಿಪ್ತ ವಿವರಣೆಯನ್ನು ಮುಂದೆ ಕೊಟ್ಟಿದೆ)
ಸೃಷ್ಟಿ ಯ ಮತ್ತೊಂದು ಬಗೆ
ಬದಲಾಯಿಸಿ- ಜಿನೆಸಿಸ್ ನಲ್ಲಿರುವ ಮತ್ತೊಂದು ಬಗೆಯ ಸೃಷ್ಟಿಯ ಸಂಕ್ಷಿಪ್ತ ವಿವರಣೆ
- ಆದಮ್ ಮತ್ತು ಈವ್ -ಆದಿ ಮಾನವ ದಂಪತಿಗಳು : ಹಳೆಯ ಒಡಂಬಡಿಕೆ ಅಥವಾ ಹಳೆಯ ಬೈಬಲ್ ನಲ್ಲಿ ಬಂದಿರವ ಎರಡನೇಬಗೆಯ ಸೃಷ್ಟಿಯ ವಿವರಣೆ ಕ್ರಿ. ಪೂ, ೧೦ನೇ ಶತಮಾನದ್ದೆಂದು ಊಹಿಸಲಾದ ಯಹೂದ್ಯರ ದಾಖಲೆ, ಮೋಸೆಸ್ ೧೩ ನೇ ಶತಮಾನದಲ್ಲಿ ಬರೆದಿರಬೇಕೆಂಬ ಊಹೆ ಇದೆ.: ದೇವನು ಭೂಮಿಯನ್ನು ಸೃಷ್ಟಿಸಿದಾಗ , ಭೂಮಿಯಮೇಲೆ ಗಿಡ ಮರಗಳಾಗಲಿ, ಹಸಿರು ಸಸ್ಯಗಳಾಗಲಿ ಇರಲಿಲ್ಲ; ಎಕೆಂದರೆ ದೇವನು ಇನ್ನೂ ಭೂಮಿಯಮೇಲೆ ಮಳೆಗರೆದಿರಲಿಲ್ಲ, ಭೂಮಿಯನ್ನು ನೀರಿನಿಂದ ನೆನೆಸಿರಲಿಲ್ಲ.; ದೇವನು ಭೂಮಿಯ ಧೂಳಿನಿಂದ ಮಾನವನನ್ನು ಸೃಷ್ಟಿಸಿ ಅವನ ಮೂಗಿನ ಹೊರಳೆಗಳಲ್ಲಿ ಪ್ರಾಣವಾಯುವನ್ನು ಊದಿದಾಗ ಅವನು ಜೀವಂತ ಮನುಷ್ಯನಾದನು. ಆವನಿಗೆ ಈಡನ್ ಎಂಬ ಸುಂದರ ತೋಟವನ್ನು ಸೃಷ್ಟಿಸಿ ಕೊಟ್ಟನು. ಆದರೆ ಅದರಲ್ಲಿರುವ ಒಳಿತು ಕೆಡುಕುಗಳ ಅಥವಾ ಪಾಪ ಪುಣ್ಯಗಳ ಮರದ ಹಣ್ಣು ತಿನ್ನಬಾರದೆಂದು ವಿಧಿಸಿದನು. ತಿಂದರೆ ಸಾವಿನ ಶಿಕ್ಷೆ ಯಾಗುವುದೆಂದನು. ಆದಮನಿಗೆ ನಿದ್ದೆ ಬರಿಸಿ ಆವನ ಪಕ್ಕೆಲುಬು ಒಂದರಿಂದ ಈವಳನ್ನು ಸೃಷ್ಟಿಸಿ ಅವನ ಜೊತೆಗಾತಿಯನ್ನಾಗಿ ಮಾಡಿದನು. ಆದರೆ ಕೆಟ್ಟ ಹಾವಿನ ದುರ್ಬೋಧನೆಗೆ ಒಳಗಾಗಿ ಈವಳ ಜೊತೆಯಲ್ಲಿ ಆದಮನೂ ಆ ಒಳಿತುಕೆಡಕುಗಳ ಮರದ ಹಣ್ನನ್ನು ತಿಂದನು. ಅಲ್ಲಿಯ ವರೆಗೆ ಅವರು ಮುಗ್ಧರಾಗಿದ್ದರು. ನಂತರ ತಾವು ಬೆತ್ತಲೆಯಾಗಿರವ ಬಗ್ಗೆ ನಾಚಿಕೆಯಾಗಿ ಫಗ್ ಮರದ ಎಲೆಗಳನ್ನು ಮುಚ್ಚಿಕೊಂಡರು. ದೇವನು ನೋಡಿ ಅವರ ಅವಿಧೇಯತೆಯ ತಪ್ಪನ್ನು ತಿಳಿದು ಅವರಿಗೆ ಈ ರೀತಿ ಶಪಿಸಿದನು. ಹೆಣ್ಣು ಇನ್ನು ಮುಂದೆ ಮಗವಿನ ಜನನದ ನೋವನ್ನು ಅನುಭವಿಸಲಿ ಮತ್ತು ಗಂಡು ಜೀವನ ನಿರ್ವಹಣೆಗೆ ಬೆವರು ಸುರಿಸಿ ದುಡಿಯಲಿ. (ಆದ್ದರಿಂದ ಆದಮನ ನಂತರದ ಮಾನವರೆಲ್ಲಾ ಆ ನೋವನ್ನು ಅನುಭವಿಸುವಂತಾಗಿದೆ. ಆದ್ದರಿಂದ ಆ ಪಾಪದ ಫಲವನ್ನು ಕಳೆಯಲೋಸುಗ ಜೀಸಸ್ ಕ್ರೈಸ್ತ ನ ಅನುಗ್ರಹ ಬೇಕೆಂದೂ ಅವನ ಬಲಿದಾನವಯಿತೆಂದೂ ಕ್ರೈಸ್ತರೂ, ಯಹೂದಿಗಳೂ (ಜ್ಯಿವ್ಸ್) ಭಾವಿಸುತ್ತಾರೆ )
ಸೃಷ್ಟಿ ಯ ಕಾಲ
ಬದಲಾಯಿಸಿ- ಕೆಲವರ ಲೆಕ್ಕಾಚಾರದಂತೆ ಯಹೂದ್ಯರ ವರ್ಷಗಣನೆಯ ಪ್ರಕಾರ ಹಳೆಯ ಒಡಂಬಡಿಕೆಯ ಲೆಕ್ಕದಂತೆ ಕ್ರಿ . ಶ. ೨೦೦೯ನೇ ಇಸವಿಗೆ ದೇವನು ಜಗತ್ತನ್ನು ಸೃಷ್ಟಿಸಿ ೫,೭೭೦ನೇ ವರ್ಷವಾಗುವುದು. ೧೭ನೇ ಶತಮಾನದಲ್ಲಿದ್ದ ಇಂಗ್ಲೆಂಡಿನ ಆರ್ಚ ಬಿಷಪ್ ಅಷ್ಷರ್ ಅವರು ಹಳೆಯ ಒಡಂಬಡಿಕೆಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಭೂಮಿಯು ಕ್ರಿಸ್ತ ಪೂರ್ವ ೪೦೦೪ನೇ ಅಕ್ಟೋಬರ್ ೨೬ನೇ ದಿನಾಂಕ ಬೆಳಿಗ್ಗೆ ೯ ಗಂಟೆಗೆ ಸೃಷ್ಟಿಯಾಗಿದೆಯೆಂದು ನಿರ್ಣಯಿಸಿದ್ದಾರೆ. ಆ ಲೆಕ್ಕದಲ್ಲಿ ೨೦೦೯ನೇ ಇಸವಿಗೆ ಭೂಮಿ ಸೃಷ್ಟಿಯಾಗಿ (೪೦೦೪+೨೦೦೯) ೬೦೧೩ ವರ್ಷಗಳಾಗುವುವು.
- ಟಿಪ್ಪ ಣಿ: ಇಲ್ಲಿ ಸೃಷ್ಟಿ ಕರ್ತನ ೧ ದಿನ ಮಾನವನ ೧ ದಿನ ಸಮಾನವೆಂದು ಭಾವಿಸಿದೆ. ಭಾರತದ ಪುರಾಣಗಳ ಪ್ರಕಾರ ಸೃಷ್ಟಿ ಕರ್ತ ಬ್ರಹ್ಮನ ಒಂದುದಿನ ೨,೨೦,೦೦,೦೦೦ ವರ್ಷಗಳಿಗೆ ಸಮ. (ಮಹಾಭಾರತ). ಬೇರೆ ಪುರಾಣಗಳ (ಮತ್ಸ್ಯ ಪುರಾಣ) ಪ್ರಕಾರ ಇನ್ನೂ ಹೆಚ್ಚಾಗುವುದು. :
- ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ ೧೯೨೦ ರಲ್ಲಿ ಈ ವಿಶ್ವದ ಸೃಷ್ಟಿ ಸುಮಾರು ೧೩.೭ಬಿಲಿಯನ್ ಅಥವಾ ೧೩೭೦ಕೋಟಿ ವರ್ಷಗಳ ಹಿಂದೆ ಆಗಿರಬೇಕೆಂದು ತರ್ಕಿಸಿದ್ದಾನೆ. ಅವನ ನಂತರದ ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ.
- ಭೂಮಿಯ ವಯಸ್ಸು ಸುಮಾರು ೪೬೫ಕೋಟಿ ವರ್ಷ (ಭೂಮಿ ಕಲ್ಲಿನ ರೇಡಿಯೇಶನ್ ಲೆಕ್ಕ)
ನೋಡಿ
ಬದಲಾಯಿಸಿ- ವಿಕಿಪೀಡಿಯಾ ಇಂಗ್ಲಿಷ್ ವಿಭಾಗ
- ಸೃಷ್ಟಿ ಮತ್ತು ವಿಜ್ಞಾನ
- ಸೃಷ್ಟಿ ಮತ್ತು ಪುರಾಣ;
ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ ಸೃಷ್ಟಿ ಮತ್ತು ಪುರಾಣ