ಶ್ರೀ ಶಂಕರಾಚಾರ್ಯರು
- ಈ ಪುಟದಲ್ಲಿ ಕಾಲ್ಪನಿಕ ಮತ್ತು ಆಧಾರಗಳಿಲ್ಲದ ವಿಷಯ ಮತ್ತು ನಿರೂಪಣೆಯ ಅನೇಕ ದೋಷಗಳಿವೆ. ಇದರ ಬದಲು ಮೈ.ವಿಕೋ.ದ ಲೇಖನವನ್ನು ಆದಿ ಶಂಕರ ಲೇಖನಕ್ಕೆ ಪೂರಕವಾಗಿ ಹಾಕಬಹುದು.
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಿಶಂಕರಾಚಾರ್ಯ
ಭಾರತದ ಸಾಂಸ್ಕ್ರತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಶಂಕರಾಚಾರ್ಯರು ಪ್ರಮುಖರು.ಭಾರತದಲ್ಲಿ ಮಾತ್ರವಲದೆ, ಜಗತಿನ ತತ್ವ ಶಾಸ್ತ್ರದ ಇತಿಹಾದಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಹೆಸರು ಶ್ರೀ ಶಂಕರಚಾರ್ಯರದು. ಪ್ರಾಚೀನ ಕಾಲದಲ್ಲಿ ಪ್ರಯಾಣ ಮಾಡುವುದು ಅತಿ ಕಷ್ಟವಾದ ಕೆಲಸವಾಗಿದಾಗ, ಶ್ರೀ ಶಂಕರರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶಾದ್ಯಂತ ಸಂಚರಿಸಿ ಮೂವತೆರಡು ವರ್ಷಗಳಲ್ಲಿ ಜನಮವನು ಗೆದ್ದರು. ಜೀವಿತ ಕಾಲದಲ್ಲೇ ತಮ್ಮ ಮಹತ್ಸಾಧನೆಗಳಿಂದ ಮತ್ತು ಆದರ್ಶ ಜೀವನದಿಂದ ಪ್ರಸಿದ್ದಿ ಪಡೆದ ಆಚಾರ್ಯರ ಸುತ ಕಾಲಕ್ರಮದಲ್ಲಿ ದಂತಕಥೆಗಳು ಹಬ್ಬಿ , ನ್ಯೆಜವಾದ ಮತ್ತು ಐತಿಹಾಸಿಕವಾದ ವಿಷಯಗಳು ಮಾಸಲಾಗಿ ಗೋಚರಿಸುತ್ತಿವೆ. ಇದು ಎಲ್ಲ ಪ್ರಾಚೀನ ಮಹಾಪುರುಷರ ಜೀವನ ಚರಿತ್ರೆಯಲ್ಲೂ ಉಂಟಾಗಿರುವ ಸಂಗತಿ. ಆಚಾರ್ಯರ ಸಮಕಾಲೀನವಾದ ಯಾವ ಐತಿಹಸಿಕ ದಾಖಲೆಗೂ,ಗ್ರಂಥವೂ ದೊರಕಿದೆ ಇರುವುದು ನಮ್ಮ ದುರ್ದ್ಯೆವ ಆಚಾರ್ಯರ ಜೀವನವನ್ನು ತಿಳಿಸುವ ಶಂಕರ ದಿಗ್ಗ್ವಿಜಯ ಎಂಬ ಹೆಸರಿನ ಕೆಲವು ಗ್ರಂಥಗಳು ದೊರಕಿರುವುದು ನಿಜವಾದರೂ ಅವುಗಳು ಯಾವುವೂ ಶ್ರೀ ಶಂಕರರ ಸಮಕಾಲದಲ್ಲಿ ಆಥವಾ ಸಮೀಪ ಕಾಲದಲ್ಲಿ ರಚಿತವಾದವುಗಳಲ್ಲ.ಕೆಲವಂತೂ ನಾಲ್ಕಾರು ಶತಮಾನಗಳಿಂದ ಮೇಲೆ ರಚಿತವಾದ ಗ್ರಂಥಗಳು. ಆಚಾರ್ಯರ ಶಿಷ್ಯರೇ ಆಗಿದ್ದ ಪದ್ಮಪಾದರು ಶಂಕರ ದಿಗ್ವಿಜಯ ಎಂಬ ಗ್ರಂಥವನ್ನು ರಚಿಸಿದ್ದರೆಂದು ಹೇಳುತ್ತಾರೆ.ಆದರೆ ಈ ಗ್ರಂಥ ಇದುವರೆಗೂ ದೊರೆತಿಲ್ಲ. ಆದುದರಿಂದ ಶ್ರೀ ಶಂಕರರ ಜೀವನ ಚರಿತ್ರೆಯನ್ನು ತಿಳಿಯಲು ಪರಂಪರಾಗತವಾಗಿ ಬಂದಿರುವ ಐತಿಹ್ಯಗಳು, ಮಾಧವೀಯ ಶಂಕರ ದಿಗ್ವಿಜಯ, ಗುರುವಂಶ ಕಾವ್ಯ ಮೊದಲಾದ ಗ್ರಂಥಗಳ ತೌಲನಿಕ ಅಧ್ಯಯನದಿಂದ ಮಾತ್ರ ಸಾಧ್ಯ.
ಆಚರ್ಯ ಶಂಕರ ಅವತಾರದ ಸೂಚನೆಗಳು ಪದ್ಮಪುರಾಣ , ಶಿವರಹಸ್ಯ ಮುಂತದ ಗ್ರಂಥಳಲ್ಲಿ ಸ್ಪಷ್ಟವಾಗಿಯೇ ಕಂಡು ಬರುತ್ತವೆ. ಅವರು ಅವತರಿಸುವ ಕಾಲದಲ್ಲಿ ಸ್ಪಷ್ಟವಾಗಿಯೇ ಕಂಡು ಬರುತ್ತವೆ.ಅವರು ಅವತರಿಸುವ ಕಾಲದಲ್ಲಿ ಭಾರತದಲ್ಲಿ ಧಾರ್ಮಿಕ ಕ್ಕ್ಶೊಭೇ ಉಂಟಗಿದೆ, ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಭಾರೀ ಅಪಾಯ ಒದಗಿ ಬಂದಿತ್ತು. ಇಂತಹ ದುಃಸ್ಥಿತಿಯಿಂದ ಈ ದೇಶವನ್ನು ಸಂರಕ್ಷಿಸಿ , ಧರ್ಮ ಸಂಸ್ಥಾಪನೆ ಮಾಡಲು ಜ್ಣಾನಸ್ವರೂಪಿಯಾದ ಆ ಪರಮೇಶ್ವರನೇ ಧರೆಗಿಳಿದು ಬರಬೇಕಾಯಿತು ಅತಂಹ ಪರಶಿವನ ಪರಮಾವತಾರವೇ ಶ್ರೀ ಶಕಂರರು.
ದ್ಯೆವ ಕೃಪೆ"
ಕೇರಳ ರಾಜ್ಯವು ಪ್ರಾಚೀನ ಕಾಲದಿಂದಲೂ ಪ್ರಕೃತಿ ಸೌಂದರ್ಯಕ್ಕೆ ಮತ್ತು ಬೌದ್ದಿಕ ಪ್ರತಿಭೆಗೆ ಹೆಸರಾದ ಪ್ರದೇಶ.ಇಂದಿನ ಕೊಚ್ಚಿನ್ ಗೆ ಸಮೀಪದಲ್ಲಿರುವ ಕಾಲಟಿ ಎಂಬುದು ಅಲ್ಲಿನ ಒಂದು ಸುಂದರ ಗ್ರಾಮ ; ಪೂರ್ಣಾ ನದಿಯ ದಡದ ಮೇಲೆ ಇಂದಿಗೂ ಕಂಗೊಳಿಸುತ್ತಿರುವ ಜನನಿವಾಸ. ಅಲ್ಲಿ ಶಿವಗುರು ಮತ್ತು ಆರ್ಯಾಂಬೆ ಎಂಬ ದಂಪತಿಗಳಿದ್ದರು.ಅವರದು ಸಂಪ್ರದಾಯಸ್ಥ ನಂಬೂದರಿ ಬ್ರಾಹ್ಮಣ ಕುಟುಂಬ. ಶ್ರೀಮಂತರದರೂ ಸರಳ ಜೀಮಿಗಳು. ಸತಿ-ಪತಿಯರಿಬ್ಬರೂ ವಿದ್ವಾಂಸರು; ದ್ಯೆವಭಕ್ತ್ತರು. ಆದರೆ ಅವರಿಗೆ ಮಕ್ಕಳಿಲ್ಲವೆಂಬ ಚಿಂತೆ. ಎಲ್ಲ ದೇವರಿಗೂ ಹರಕೆ ಹೊತ್ತದ್ದಾಯಿತು. ಕೊನೆಗೆ ಆಪ್ತೇಷ್ಟರ ಸಲಹೆಯಂತೆ ದಂಪತಿಗಳು ವೃಷಭಾಚಲ ಕ್ಷೇತ್ರಕ್ಕೆ ಹೋದರು. ಅಲ್ಲಿ ಅಚಲವಾದ ಭಕ್ತಿ ಮತ್ತು ನಿಷ್ಟ್ಟಯಿಂದ ವೃಷಾಚಲೇಶ್ವರನ ಸೇವೆಯೇ ಏಕ್ಯೆಕ ಮಾರ್ಗ ಎನ್ನುವ ಭಾವದಿಂದ ಹಲವು ದಿನಗಳನ್ನು ಕಳೆದರು. ಒಂದು ರಾತ್ರಿ ದಂಪತಿಗಳ ಕನಸಿನಲ್ಲಿ ವೃಷಾಚಲೇಶ್ವರನು ಕಾಣಿಸಿಕೊಂಡ ಅನುಭವ.
ಕನಸಿನಲ್ಲಿ ಭಗವಂತ ಪ್ರಶ್ನಿಸಿದ. ನಿಮ್ಮ ನಿಷ್ಟೆ-ಭಕ್ತಿ ಗೆ ಮೆಚ್ಚಿದ್ದೇನೆ. ನಿಮ್ಮ ಆಸೆಯನ್ನು ಈಡೇರಿಸುತ್ತೇನೆ. ಆದರೆ ಒಂದು ಪ್ರಶ್ನೆ; ನಿಮಗೆ ದೀರ್ಘಾಯುಷ್ಯವುಳ್ಳ ದಡ್ಡ ಮಕ್ಕಳು ಬೇಕೋ ಅಥವಾ ಅಲ್ಪಾಯುಷ್ಯವುಳ್ಳ ಲೋಕ ಗುರುವೆನಿಸುವ ಸರ್ವಜ್ನನಾದ ಒಬ್ಬ ಮಗ ಸಾಕೊ ? ಭಗವಂತನಲ್ಲಿ ಆಪಾರ ವಿಶ್ವಾಸವುಳ ದಂಪತಿಗಳು ಅಲ್ಪಯುಷಿಯಾದರೂ ಸರ್ವಜ್ನನೂ, ವಿಶ್ವ ವಿಖ್ಹ್ಯಾತನೂ ಆಗುವ ಮಗನು ತಮಗೆ ಬೇಕು ಎಂದು ಭೇಡಿಕೊಂಡರು. ಪ್ರಸನ್ನನಾದ ಸ್ವಾಮಿಯು ಶಿವಾಂಶಸಂಭೂತನಾಗಿ ನಿಮ್ಮ ಕುಮಾರ ಲೋಕ ಗುರುವಾಗುತ್ತಾನೆ ಎಂದು ಹೇಳಿ ಅಂತರ್ಧಾನನಾದ ಅನುಭವ. ಬಹು ಸಂತೋಷಪಟ್ಟ ಶಿವಗುರು ಆರ್ಯಾಂಭೆಯರು ಮತ್ತೆ ಹಲವು ದಿನಗಳು ಇದ್ದು, ಈಶ್ವರನ ಸೇವೆ ಮಾಡಿ ತಮ್ಮ ಊರಿಗೆ ಹಿಂತಿರುಗಿದರು.
ದ್ಯ್ವವಕೃಪೆಯಿಂದ ಆರ್ಯಾಂಬೆಯ ಗರ್ಭದಲ್ಲಿ ಜನಿಸಿದ ಶಿಶುವಿಗೆ ಶಂಕರನೆಂದೇ ನಾಮಕರಣ ಮಾಡಿದರು. ಶಂಕರರು ಆವಿರ್ಭವಿಸಿದ ಈ ದಿನವನ್ನು ಶಾಲಿವಾಹನ ಶಕ ೭೧೩ ರ ವಿಭವ ಸಂವತ್ಸರದ ವ್ಯೆಶಾಖ ಶುಕ್ಲ್ಲ ಪಂಚಮಿ ಎಂದು ಪರಿಗಣಿಸಲಾಗಿದೆ. ಆದುದರಿಂದಲೇ ಇಂದಿಗೂ ಶಂಕರ ಜಯಂತಿಯನ್ನು ಪ್ರತಿವರ್ಷ ವ್ಯೆಶಾಖ ಶುಕ್ಲ ಪಂಚಮಿಯ ದಿನದಂದು ಭಾರತದ ಎಲ್ಲೆಡೆಯಲ್ಲೂ ಆಚರಿಸುತ್ತಾರೆ.
ದಿವ್ಯಾಂಶಸಂಭೂತರಾದ ಶಂಕರರು ಬಾಲ್ಯ ದಿಂದಲೂ ಎಲ್ಲ ರೀತಿಯಲ್ಲಿ ಅಸಮಾನರಾಗಿಯೇ ಬೆಳಯುತ್ತಿದ್ದರು. ಎಂಟನೇ ವಯಸ್ಸಿನಲ್ಲಿ ನಾಲ್ಕು ವೇದಗಳನ್ನು ಅರಿತರಂತೆ. ಹನ್ನೆರಡರ ವೇಳೆಗೆ ತಮ್ಮ ಪ್ರಧಾನ ಕೃತಿಗೆಳೆನಿಸಿರುವ ವೇದಾಂತ ಭಾಷ್ಯಗಳನ್ನು ಬರೆದಿದ್ದರಂತೆ. ಅವರ ಬುದ್ದಿಶಕ್ತಿ ಎಷ್ಟು ತೀಕ್ಷ್ನ್ಯವಾಗಿತೋ , ಅಷ್ಟೆ ಅವರ ಹೃದಯವೂ ಸಂಸ್ಕ್ರುತ ಭಾಷೆಗಳಲ್ಲಿ ಪಾರಂಗತರಾಗಿದ್ದರು. ಅವರು ತಮ್ಮ ಮೊದಲ ವರ್ಷದಲ್ಲಿ ಮಾತೃಭಾಷೆಯಾದ ಮಲೆಯಾಳ ಮತ್ತು ವೇದಭಾಷೆಯಾದ ಸಂಸ್ಕ್ರತ - ಎರಡನ್ನೂ ಕಲಿತರು. ಎರಡನೆಯ ವರ್ಷದಲ್ಲಿ ಈ ಭಾಷೆಗಳಲ್ಲಿ ಕಾವ್ಯಗಳನ್ನೂ ಪುರಾಣಗಳನ್ನೂ ಓದಿ ಅವುಗಳ ಅರ್ಥಗಳನ್ನು ಹೇಳುತಿದ್ದರು ಎನಲಾಗಿದೆ. ಸಾಮಾನ್ಯ ದೃಷ್ಟಿಯಿಂದ ನೋಡಿದರೆ ಇದರಲ್ಲಿ ಉತ್ಪ್ರೇಕ್ಷೆ ಬಹಳಮಿದೆ ಎನಿಸಬಹುದು. ಆದರೆ ಬಾಲ್ಯ ದಲ್ಲಿಯೇ ದ್ಯ್ವೆವದತ್ತವಾದ ಇಂತಹ ಪ್ರತಿಭೆಯನ್ನು ವ್ಯೆಕ್ತಪಡಿಸಿರುವರ ನಿದರ್ಶನಗಳು ನಮಗೆ ಸಿಕ್ಕುತ್ತವೆ.