ಜೀವವಿಜ್ಞಾನದ ಅರ್ಥಾನ್ವಯದಲ್ಲಿ, ವಿಷ ಎಂಬುದು ರಾಸಾಯನಿಕ ಕ್ರಿಯೆ ಅಥವಾ ಆಣ್ವಿಕಪ್ರಮಾಣದಲ್ಲಿ ಇತರ ಕಾರ್ಯದ ಮೂಲಕ ಜೀವಿಗಳಿಗೆ ತೊಂದರೆಯನ್ನುಂಟುಮಾಡುವ ಪದಾರ್ಥವಾಗಿದೆ. ಸಾಮಾನ್ಯವಾಗಿ ಇದನ್ನು ಒಂದು ಜೀವಿಯು ಸಾಕಷ್ಟು ಪ್ರಮಾಣದಲ್ಲಿ ಹೀರಿಕೊಂಡಾಗ ದೇಹಕ್ಕೆ ಅಡ್ಡಿ ಉಂಟಾಗುತ್ತದೆ. ಕಾನೂನುಬದ್ಧವಾಗಿ ಹಾಗು ಪಟ್ಟಿ ಮಾಡಿದ ಅಪಾಯಕಾರಿ ರಾಸಾಯನಿಕಗಳಲ್ಲಿ, ವಿಷವು ವಿಶೇಷವಾಗಿ ನಂಜುಳ್ಳ ಪದಾರ್ಥವಾಗಿದೆ; ಕಡಿಮೆ ನಂಜುಳ್ಳ ಪದಾರ್ಥಗಳನ್ನು "ಹಾನಿಕರ", "ಉದ್ರೇಕಕಾರಿ" ಎಂದು ಪಟ್ಟಿ ಮಾಡಲಾಗುತ್ತದೆ, ಅಥವಾ ಪಟ್ಟಿ ಮಾಡಲಾಗಿರುವುದಿಲ್ಲ.

ಡೈರೆಕ್ಟಿವ್ 67/548/EEC ವಿವರಿಸಿದ EUನ ಸ್ಟ್ಯಾಂಡರ್ಡ್ ವಿಷದ ಚಿಹ್ನೆ. ತಲೆಬುರುಡೆ ಹಾಗು ಅಡ್ಡವಾಗಿ ಚಿತ್ರಿಸಲಾದ ಮೂಳೆಗಳು ವಿಷದ ಒಂದು ಸ್ಟ್ಯಾಂಡರ್ಡ್ ಚಿಹ್ನೆಯಾಯಿತು.

ವೈದ್ಯಕೀಯದಲ್ಲಿ (ವಿಶೇಷವಾಗಿ ಪಶು ವೈದ್ಯದಲ್ಲಿ) ಹಾಗು ಪ್ರಾಣಿಶಾಸ್ತ್ರದಲ್ಲಿ, ವಿಷವನ್ನು ಸಾಮಾನ್ಯವಾಗಿ ಜೀವಾಣುವಿಷ ಹಾಗು ನಂಜಿನಿಂದ ಭಿನ್ನವಾದುದೆಂದು ಗುರುತಿಸಲಾಗುತ್ತದೆ. ನಿಸರ್ಗದಲ್ಲಾಗುವ ಕೆಲವು ಜೀವವಿಜ್ಞಾನ ಕ್ರಿಯೆಯ ಮೂಲಕ ಉತ್ಪಾದಿಸಲ್ಪಡುವ ವಿಷಗಳನ್ನು ಜೀವಾಣುವಿಷ ಎಂದು ಕರೆಯಲಾಗುತ್ತದೆ, ಹಾಗು ನಂಜನ್ನು ಸಾಮಾನ್ಯವಾಗಿ ಜೀವವಿಜ್ಞಾನದ ಜೀವಾಣುವಿಷ ಎಂದು ವಿವರಿಸಲಾಗುತ್ತದೆ. ಇದು ಒಂದು ಕಡಿತದಿಂದ ಅಥವಾ ಕುಟುಕಿನ ಪರಿಣಾಮದಿಂದ ಉಂಟಾಗುತ್ತದೆ. ಈ ನಡುವೆ ಇತರ ವಿಷಗಳನ್ನು ಸಾಧಾರಣವಾಗಿ ಚರ್ಮ ಅಥವಾ ಕರುಳಿನಂತಹ ಎಪಿತೀಲಿಮ್‌ನ ಪದರಗಳ ಮೂಲಕ ಹೀರಿಕೊಳ್ಳಲಾಗುವ ವಸ್ತುಗಳಿಗೆ ಸೂಚಿತವಾಗಿದೆ.

ಪರಿಭಾಷಾ ಶಾಸ್ತ್ರ

ಬದಲಾಯಿಸಿ

ಕೆಲವು ವಿಷಗಳು ಸಹ ಜೀವಾಣುವಿಷಗಳಾಗಿರುತ್ತವೆ, ಸಾಮಾನ್ಯವಾಗಿ ಇದು ನೈಸರ್ಗಿಕವಾಗಿ ಉತ್ಪತ್ತಿಗೊಂಡ ವಸ್ತುಗಳಿಗೆ ಸೂಚಿತವಾಗಿದೆ, ಉದಾಹರಣೆಗೆ ಧನುರ್ವಾಯು ಹಾಗು ಆಹಾರ ನಂಜಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ಪ್ರೋಟೀನುಗಳು. ಈ ಎರಡೂ ಪದಗಳ ನಡುವಿನ ಭೇದವನ್ನು, ವಿಜ್ಞಾನಿಗಳನ್ನೊಳಗೊಂಡಂತೆ ಯಾರೂ ಸಹ ಅವಲೋಕಿಸಿಲ್ಲ.

ಪ್ರಾಣಿಗಳ ಚರ್ಮದಡಿಯಿಂದ ವಿಮುಕ್ತಗೊಂಡ ಜೀವಾಣು ವಿಷಗಳನ್ನೂ(ಉದಾಹರಣೆಗೆ ಕುಟುಕು ಅಥವಾ ಕಡಿತ) ಸಹ ನಂಜು ಎಂದು ಕರೆಯಲಾಗುತ್ತದೆ. ಸಾಧಾರಣ ಬಳಕೆಯಲ್ಲಿ, ಒಂದು ವಿಷಪೂರಿತ ಜೀವಿಯನ್ನು ಬಳಸಲು ಹಾನಿಕರವಾಗಿರುತ್ತದೆ, ಆದರೆ ಒಂದು ವಿಷಪೂರಿತ ಜೀವಿಯು ಬದುಕಿರುವಾಗಲೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಷವನ್ನು ಬಳಕೆ ಮಾಡುತ್ತದೆ. ಒಂದು ಏಕೈಕ ಜೀವಿಯು ನಂಜಿನಿಂದ ಹಾಗು ವಿಷಯುಕ್ತತೆ ಎರಡರಿಂದಲೂ ಕೂಡಿರಬಹುದು.

"ನಂಜು" ಹಾಗು "ವಿಷಪೂರಿತ" ಎಂಬ ಪದಗಳ ವ್ಯುತ್ಪನ್ನವು ಸಮಾನ ಅರ್ಥವನ್ನು ನೀಡುತ್ತವೆ.

ರಸಾಯನಶಾಸ್ತ್ರ ಹಾಗು ಭೌತಶಾಸ್ತ್ರದ ಪರಿಮಿತಿಯಲ್ಲಿ, ಒಂದು ವಿಷವೆಂದರೆ ಒಂದು ಕ್ರಿಯೆಯನ್ನು ಅಡ್ಡಿಪಡಿಸುವ ಅಥವಾ ಪ್ರತಿಬಂಧಿಸುವ ಒಂದು ಪದಾರ್ಥವಾಗಿದೆ, ಉದಾಹರಣೆಗೆ, ವೇಗವರ್ಧಕಕ್ಕೆ ಬಂಧಕವಾಗುವುದು. ಉದಾಹರಣೆಗಾಗಿ, ಬೈಜಿಕ ವಿಷವನ್ನು ನೋಡಿ.

ವಿಷಶಾಸ್ತ್ರದ ಜನಕ, ಪರಾಸೆಲ್ಸಾಸ್, ಒಮ್ಮೆ ಬರೆಯುತ್ತಾರೆ: "ಎಲ್ಲವೂ ವಿಷವಾಗಿದೆ, ಎಲ್ಲದರಲ್ಲೂ ವಿಷ ತುಂಬಿದೆ. ಕೇವಲ ಅದನ್ನು ತೆಗೆದುಕೊಳ್ಳುವ ಪ್ರಮಾಣವು ವಸ್ತುವನ್ನು ವಿಷವಾಗಿಸುವುದಿಲ್ಲ." "ವಿಷ" ಎಂಬ ನುಡಿಗಟ್ಟನ್ನು ಸಾಮಾನ್ಯವಾಗಿ ಯಾವುದೇ ಹಾನಿಕರ ವಸ್ತುವನ್ನು ವಿವರಿಸುವಾಗ ಆಡುಮಾತಿನಲ್ಲಿ ಬಳಕೆ ಮಾಡಲಾಗುತ್ತದೆ, ವಿಶೇಷವಾಗಿ ನಾಶಕಾರಿ ವಸ್ತುಗಳು, ಕ್ಯಾನ್ಸರ್ ಜನಕಗಳು, ವಿಕೃತಿಜನಕಗಳು, ವಿರೂಪಜನಕಗಳು ಹಾಗು ಹಾನಿಕರ ಮಲಿನಕಾರಿಗಳು, ಹಾಗು ಪ್ರಬಲ ರಾಸಾಯನಿಕಗಳ ಅಪಾಯಗಳು. ಕಾನೂನಿನ ಅರ್ಥನಿರೂಪಣೆಯಲ್ಲಿ "ವಿಷ" ಎಂಬ ಪದವು ಕರಾರುವಾಕ್ಕಾಗಿದೆ. ಒಂದು ವೈದ್ಯಕೀಯ ಪರಿಸ್ಥಿತಿಯಲ್ಲಿ, ಕಾನೂನುಬದ್ಧವಾಗಿ "ವಿಷ" ಎಂದು ಗುರುತುಪಟ್ಟಿ ಹೊಂದದ ಪದಾರ್ಥಗಳಿಂದ ವಿಷದ ಪರಿಣಾಮವು ಉಂಟಾಗುತ್ತದೆ.

ವಿಷದ ಉಪಯೋಗಗಳು

ಬದಲಾಯಿಸಿ
 
ಜಾನ್ ಮತೆಜ್ಕೊ ಅವರ "ಪಾಯ್ಸನಿಂಗ್ ಆಫ್ ಕ್ವೀನ್ ಬೋನ".

ಮಾನವ ಇತಿಹಾಸದುದ್ದಕ್ಕೂ, ವಿಷದ ಉದ್ದೇಶಪೂರ್ವಕ ಬಳಕೆಯನ್ನು ಹತ್ಯೆ, ಕೊಲೆ, ಆತ್ಮಹತ್ಯೆ, ಹಾಗು ಮರಣದಂಡನೆಯ ಒಂದು ವಿಧಾನವೆಂದು ಹೇಳಲಾಗುತ್ತದೆ.[][] ಮರಣದಂಡನೆಯ ಒಂದು ವಿಧಾನದಲ್ಲಿ, ಪುರಾತನ ಅಥೆನ್ಸ್ ಜನರು ಮಾಡಿದಂತೆ ವಿಷವನ್ನು ಹೊಟ್ಟೆಗೆ ಹಾಕಲಾಗುತ್ತದೆ (ಸಾಕ್ರೆಟಿಸ್ಅನ್ನು ಗಮನಿಸಿ), ಇದನ್ನು ದೇಹದ ಒಳಕ್ಕೆ ಎಳೆದುಕೊಂಡಾಗ, ಕಾರ್ಬನ್ ಮಾನಾಕ್ಸೈಡ್ ಅಥವಾ ಹೈಡ್ರೋಜನ್ ಸಯನೈಡ್(ಅನಿಲ ಕೋಣೆಯನ್ನು ಗಮನಿಸಿ) ದೇಹದ ಒಳಗೆ ಸೇರಿಕೊಳ್ಳುತ್ತದೆ, ಅಥವಾ ಇದನ್ನು ಚುಚ್ಚುಮದ್ದಿನ ಮೂಲಕ ದೇಹದೊಳಕ್ಕೆ ಸೇರಿಸಲಾಗುತ್ತದೆ(ಮಾರಕ ಚುಚ್ಚುಮದ್ದನ್ನು ಗಮನಿಸಿ). ಹಲವು ಭಾಷೆಗಳು ಮಾರಕ ಚುಚ್ಚುಮದ್ದನ್ನು ತಮಗೆ ಅನುಗುಣವಾದ ಪದವಾದ "ವಿಷದ ಚುಚ್ಚುಮದ್ದು" ಎಂದು ವಿವರಿಸುತ್ತವೆ. ವಿಷದ ಮಾರಕ ಪರಿಣಾಮವನ್ನು ಅದರ ಮಾಂತ್ರಿಕ ಶಕ್ತಿ ಎಂದು ಹೇಳಲಾಗುವ ಪರಿಣಾಮದ ಜೊತೆಗೆ ಒಟ್ಟುಗೂಡಿಸಬಹುದು; ಒಂದು ಉದಾಹರಣೆಯೆಂದರೆ ಚೈನೀಸ್ಗು ವಿಷ. ವಿಷವನ್ನು ಕೋವಿಮದ್ದು ಯುದ್ಧದಲ್ಲೂ ಸಹ ಉಪಯೋಗಿಸಲಾಗುತ್ತದೆ. ಉದಾಹರಣೆಗೆ, 14ನೇ ಶತಮಾನದಲ್ಲಿ ಜಿಯಾವ್ ಯು ಬರೆದ ಚೈನೀಸ್ ಗ್ರಂಥ ಹುಯೋಲಾಂಗ್ಜಿಂಗ್ ನಲ್ಲಿ, ಒಂದು ವಿಷಪೂರಿತ ಕೋವಿಮದ್ದು ಮಿಶ್ರಣವನ್ನು ಬೀಡುಕಬ್ಬಿಣ ಗ್ರೆನೇಡು ಬಾಂಬುಗಳಲ್ಲಿ ತುಂಬಿಸಲು ಬಳಸಲಾಗುತ್ತಿತ್ತೆಂದು ವಿವರಣೆ ನೀಡಲಾಗಿದೆ.[]

ಆದರೂ, ಒಟ್ಟಾರೆಯಾಗಿ, ವಿಷವನ್ನು ಸಾಮಾನ್ಯವಾಗಿ ಅವುಗಳಲ್ಲಿನ ವಿಷತ್ವಕ್ಕೆ ಬಳಸಲಾಗುವುದಿಲ್ಲ ಆದರೆ ಅವುಗಳ ಇತರ ಗುಣ ಲಕ್ಷಣಗಳಿಗೆ ಬಳಸಲ್ಪಡುತ್ತದೆ. ಸ್ವತಃ ವಿಷತ್ವದ ಲಕ್ಷಣವು ಮಾರಕವಲ್ಲದ ಸೀಮಿತ ಬಳಕೆಯನ್ನು ಹೊಂದಿದೆ: ಮುಖ್ಯವಾಗಿ ಕೀಟಗಳು ಹಾಗು ಕಳೆಗಳ ನಿಯಂತ್ರಣಕ್ಕೆ, ಶುದ್ಧಗೊಳಿಸಿ ನಿರ್ವಹಣೆ ಮಾಡಲು, ಹಾಗು ಕಟ್ಟಡ ನಿರ್ಮಾಣದ ವಸ್ತುಗಳು ಹಾಗು ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ಬಳಸಲಾಗುತ್ತದೆ. ಸಾಧ್ಯವಿರುವ ಕಡೆಗಳಲ್ಲಿ, ಕಡಿಮೆ ವಿಷಯುಕ್ತತೆಯನ್ನು ಹೊಂದಿರುವ ಮನುಷ್ಯರಿಗೆ ಕಡಿಮೆ ಹಾನಿಯುಂಟುಮಾಡುವ ನಿರ್ದಿಷ್ಟ ಕಾರಕಗಳನ್ನು ಆಯ್ಕೆ ಮಾಡಲಾಗುತ್ತದೆ, ಆದರೆ ಫಾಸ್ಫೀನ್ ನಂತಹ ರಾಸಾಯನಿಕಗಳು ಇದಕ್ಕೆ ಹೊರತಾಗಿವೆ, ಇದರ ಬಳಕೆಯ ಮೇಲಿನ ನಿರ್ಬಂಧವನ್ನು ಮುಂದುವರೆಸಲಾಗಿದೆ.

ಹಲವು ವಿಷಯುಕ್ತ ಪದಾರ್ಥಗಳು ಇನ್ನೂ ಕೂಡ ಬಳಕೆಯಲ್ಲಿವೆ. ಇವುಗಳಲ್ಲಿನ ವಿಷಪೂರಿತ ಗುಣದ ಹೊರತಾಗಿಯೂ ಇವುಗಳ ರಾಸಾಯನಿಕ ಅಥವಾ ಭೌತಿಕ ಲಕ್ಷಣಗಳಿಗೆ ಬಳಕೆ ಮಾಡಲಾಗಿದೆ. ಹಲವು ವೈದ್ಯರ ಲಿಖಿತ ಸೂಚಿಯಿಲ್ಲದೆ ದೊರೆಯುವ ಔಷಧಗಳಾದ ಆಸ್ಪಿರಿನ್ ಹಾಗು ಟೈಲೆನೋಲ್ ಗಳನ್ನು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಇವುಗಳು ಸಂಪೂರ್ಣವಾಗಿ ವಿಷಮಯವಾಗುತ್ತವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆಲ್ಕೋಹಾಲ್ ಸೇವನೆಯೂ ಸಹ ವಿಷವಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ನಿರ್ದಿಷ್ಟ ರಾಸಾಯನಿಕ ಲಕ್ಷಣಗಳು ಬೇಕಾಗುವ ಪ್ರಯೋಗಾಲಯದ ಪರಿಸರದಲ್ಲಿ, ರಾಸಾಯನಿಕ ಸಂಶ್ಲೇಷಣೆಯಲ್ಲಿ ಬಳಸಲಾಗುವ ಅತ್ಯಂತ ಪರಿಣಾಮಕಾರಿ, ಸುಲಭವಾದ, ಸುರಕ್ಷಿತವಾದ, ಅಥವಾ ಅಗ್ಗದ ಆಯ್ಕೆಯೂ ಸಹ ವಿಷಪೂರಿತ ವಸ್ತುವಾಗಿರುತ್ತದೆ. ಒಂದು ವಿಷವಲ್ಲದ ವಸ್ತುವಿಗಿಂತ ಈ ಎಲ್ಲ ಲಕ್ಷಣಗಳನ್ನು ಹೆಚ್ಚು ನಿರ್ದಿಷ್ಟವಾಗಿ ಒಂದು ವಿಷಮಯವಾದ ವಸ್ತುವು ಹೊಂದಿದ್ದಲ್ಲಿ, ವಿಷಮಯವಾದ ವಸ್ತುವು ಹೆಚ್ಚಿನ ಪರಿಣಾಮವನ್ನು ಹೊಂದಿರುತ್ತದೆ. ಅಂತಹ ಒಂದು ಉದಾಹರಣೆಯೆಂದರೆ "ಸರಳ ಬಳಕೆ"ಯ ಕಾರಕ ಕ್ರೋಮಿಕ್ ಆಸಿಡ್, ಆದರೆ ವಿಶೇಷವಾಗಿ ಪ್ರತಿಕ್ರಿಯಾತ್ಮಕತೆಯೂ ಸಹ ಮುಖ್ಯವಾಗುತ್ತದೆ. ಉದಾಹರಣೆಗೆ ಹೈಡ್ರೋಜನ್ ಫ್ಲೋರೈಡ್ (HF), ವಿಷಮಯ ಹಾಗು ತೀವ್ರವಾದ ನಾಶಕಾರಿ ವಸ್ತುವಾಗಿದೆ. ಆದಾಗ್ಯೂ, ಸಿಲಿಕಾನ್‌ಗೆ ಒಂದು ಅಧಿಕ ಆಕರ್ಷಣ ಬಲವಿದೆ (ಮುಕ್ತ ಬಲ), ಇದನ್ನು HF ಬಳಸಿಕೊಂಡು ಗಾಜನ್ನು ನಿಕ್ಷಾರಿಸಲು ಅಥವಾ ಸಿಲಿಕಾನ್ ಅರೆವಾಹಕ ಚಿಪ್ಪುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.

ಇನ್ನೊಂದು ಭಾಗದಲ್ಲಿ, ಕೆಲವು ವೈದ್ಯಕೀಯ ಚಿಕಿತ್ಸೆಗಳಲ್ಲಿ ವಾಸ್ತವವಾಗಿ ವಿಷಮಯವಾದ ಕೆಲವು ಪದಾರ್ಥಗಳ ಉದ್ದೇಶಪೂರ್ವಕ ಬಳಕೆ ಮಾಡಲಾಗುತ್ತದೆ. ಪ್ರತಿಜೀವಕಗಳು (ಮೂಲತಃ ಜೀವಿಗಳಿಂದ ಸಂಗ್ರಹಿಸಲಾಗುತ್ತದೆ, ಆದರೆ ಇದನ್ನು ಈಗ ಪ್ರಯೋಗಾಲಯಗಳಲ್ಲಿ ಕೃತಕವಾಗಿ ಉತ್ಪಾದಿಸಲಾಗುತ್ತದೆ) ಸೂಕ್ಷ್ಮಜೀವಿಗಳ ರಾಸಾಯನಿಕ ಕ್ರಿಯಾವಳಿಗೆ ಹೆಚ್ಚು ಅಡ್ಡಿಪಡಿಸುತ್ತವೆ, ಈ ನಡುವೆ ಇವುಗಳು ಮಾನವರ ಮೇಲೆ ಯಾವುದೇ ನೇರ ಪರಿಣಾಮವನ್ನು ಬೀರುವುದಿಲ್ಲ. ಇದೇ ರೀತಿಯಾಗಿ, ರಾಸಾಯನಿಕ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಗಳು ಸಂಪೂರ್ಣವಾಗಿ ವಿಷಪೂರಿತವಾಗಿರುತ್ತವೆ; ಇದಕ್ಕೆ ಕಾರಣವೆಂದರೆ ರಾಸಾಯನಿಕ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಗಳು ಪ್ರತಿಜೀವಕಗಳು ಉಂಟುಮಾಡುವ ಪರಿಣಾಮಕ್ಕಿಂತ ತೀವ್ರತರವಾದ ಅಡ್ಡ ಪರಿಣಾಮವನ್ನು ಉಂಟುಮಾಡುತ್ತವೆ. ಅವುಗಳ ವಿಷತ್ವವು ಸೂಕ್ಷ್ಮವಾಗಿ ಹೇಳಿ ಮಾಡಿಸಿದಂತಿರುತ್ತದೆ. ಅದರ ಪ್ರಯೋಜನವು, ಇವುಗಳು ಸಾಧಾರಣ ಕೋಶಗಳಿಗಿಂತ ಕ್ಯಾನ್ಸರ್ ನ ಕೋಶಗಳಿಗೆ ಹೆಚ್ಚು ವಿಷತ್ವವಾಗಿ ಪರಿಣಮಿಸುತ್ತದೆಂಬ ಭರವಸೆಯಲ್ಲಿ ಅಡಗಿದೆ. ಇಂತಹ ಪದಾರ್ಥಗಳನ್ನು ಮೇಲೆ ವಿವರಿಸಲಾದಂತಹ ವಿಷದ ವರ್ಗಗಳಡಿಯಲ್ಲಿ ವಿಂಗಡಿಸಬಹುದಾಗಿದೆ, ಏಕೆಂದರೆ ಅವುಗಳು ಸಾಧಾರಣವಾಗಿ ಸ್ವಭಾವತಃ ಕೃತಕವಾಗಿರುತ್ತದೆ, ಆದರೆ ಇದು ಸಾಧಾರಣವಾಗಿ ಚರ್ಚೆಗೆ ಒಳಪಟ್ಟಿಲ್ಲ.

ಜೈವಿಕ ವಿಷದ ಪರಿಣಾಮಕ್ಕೆ ಒಳಗಾಗುವಿಕೆ

ಬದಲಾಯಿಸಿ

ತೀವ್ರತರವಾದ ವಿಷದ ಪರಿಣಾಮವೆಂದರೆ ಒಂದು ಸಂದರ್ಭದಲ್ಲಿ ಅಥವಾ ಒಂದು ಕಡಿಮೆ ಅವಧಿಯಲ್ಲಿ ವಿಷದ ಪರಿಣಾಮಕ್ಕೆ ಒಳಪಡುವುದು. ವಿಷದ ಪರಿಣಾಮಕ್ಕೆ ಹತ್ತಿರದಲ್ಲಿ ಒಡ್ಡಿಕೊಂಡರೆ ರೋಗಲಕ್ಷಣಗಳು ಬೆಳವಣಿಗೆಯಾಗುತ್ತವೆ. ವ್ಯವಸ್ಥಿತವಾಗಿ ವಿಷದ ಪರಿಣಾಮಕ್ಕೆ ವಿಷದ ಹೀರಿಕೆಯು ಅಗತ್ಯವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ಅಂಗಾಂಶಗಳನ್ನು ನಾಶಮಾಡುವ ಪದಾರ್ಥಗಳು ವಿಷವನ್ನು ಹೀರಿಕೊಳ್ಳುವುದಿಲ್ಲ, ಉದಾಹರಣೆಗೆ ಕ್ಷಾರ ದ್ರಾವಣಗಳನ್ನು ವಿಷಕಾರಿ ಎಂಬುದಕ್ಕಿಂತ ಹೆಚ್ಚಾಗಿ ನಾಶಕಾರಿ ವಸ್ತುಗಳೆಂದು ವಿಂಗಡಿಸಲಾಗಿದೆ.

ದೀರ್ಘಕಾಲದ ವಿಷದ ಪರಿಣಾಮವೆಂದರೆ ಒಂದು ವಿಷಕ್ಕೆ ದೀರ್ಘಕಾಲದಲ್ಲಿ ಪದೇ ಪದೇ ಅಥವಾ ಸತತವಾಗಿ ಒಡ್ಡಿಕೊಂಡಾಗ ರೋಗ ಲಕ್ಷಣಗಳು ತಕ್ಷಣದಲ್ಲಿ ಅಥವಾ ಪ್ರತಿ ಬಾರಿ ಅದಕ್ಕೆ ಒಡ್ಡಿಕೊಂಡ ನಂತರ ಸಂಭವಿಸುವುದಿಲ್ಲ. ರೋಗಿಯು ಕ್ರಮೇಣವಾಗಿ ಅಸ್ವಸ್ಥನಾಗುತ್ತಾನೆ, ಅಥವಾ ಒಂದು ಸುಪ್ತ ದೀರ್ಘಾವಧಿಯ ನಂತರ ಅಸ್ವಸ್ಥನಾಗುತ್ತಾನೆ. ದೀರ್ಘಕಾಲಿಕ ವಿಷದ ಪರಿಣಾಮವು ಸಾಮಾನ್ಯವಾಗಿ ಈ ಕೆಳಕಂಡ ರೀತಿಯಲ್ಲಿ ಬಯೋಅಕ್ಯುಮ್ಯುಲೆಟ್ ಆದ ವಿಷಕ್ಕೆ ಒಡ್ಡಿಕೊಂಡಾಗ ಸಂಭವಿಸುತ್ತದೆ, ಉದಾಹರಣೆಗೆ ಪಾದರಸ ಹಾಗು ಸೀಸ.

ವಿಷ ವಸ್ತುಗಳ ಜೊತೆ ಸಂಪರ್ಕಕ್ಕೆ ಬಂದಾಗ ಅಥವಾ ವಿಷವನ್ನು ಹೀರಿದಾಗ ಅದು ತಕ್ಷಣವೇ ಸಾವಿಗೆ ಕಾರಣವಾಗಬಹುದು ಅಥವಾ ದೇಹವನ್ನು ದುರ್ಬಲಗೊಳಿಸಬಹುದು. ನರಮಂಡಲದ ಮೇಲೆ ಪರಿಣಾಮ ಬೀರುವ ಕಾರಕಗಳು ಒಂದು ಸೆಕೆಂಡ್ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ಪಾರ್ಶ್ವವಾಯುವನ್ನು ಉಂಟುಮಾಡಬಹುದು, ಜೊತೆಗೆ ಇದು ಜೈವಿಕವಾಗಿ ಉತ್ಪತ್ತಿಯಾದ ನ್ಯೂರೋಟಾಕ್ಸಿನ್ ಹಾಗು ನರಾನಿಲಗಳು ಎಂದು ಕರೆಯಲಾಗುವ ಎರಡೂ ಕಾರಕಗಳನ್ನು ಒಳಗೊಂಡಿದೆ. ಇದನ್ನು ಯುದ್ಧದಲ್ಲಿ ಅಥವಾ ಕೈಗಾರಿಕೆಯಲ್ಲಿ ಸಂಶ್ಲೇಷಿಸಬಹುದಾಗಿದೆ.

ದೇಹದೊಳಕ್ಕೆ ಎಳೆದುಕೊಂಡ ಅಥವಾ ಹೊಟ್ಟೆಗೆ ತೆಗೆದುಕೊಂಡಂತಹ ಸಯನೈಡ್ ನ್ನು, ಅನಿಲ ಕೋಣೆಯಲ್ಲಿ ನಿರ್ವಹಣಾ ವಿಧಾನವಾಗಿ ಬಳಕೆ ಮಾಡಲಾಗುತ್ತದೆ. ಇದು ಕೂಡಲೇ ದೇಹಕ್ಕೆ ATPಯನ್ನು ಉಂಟು ಮಾಡುವ ಮೈಟೊಕಾಂಡ್ರಿಯದಲ್ಲಿನ ಕಿಣ್ವಗಳನ್ನು ಪ್ರತಿಬಂಧಿಸುವ ಮೂಲಕ ಶಕ್ತಿಯ ಕೊರತೆಯನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೈದಿಗಳನ್ನು ಮರಣದಂಡನೆಗೆ ಒಳಪಡಿಸುವಾಗ ನೀಡುವ ಅಸ್ವಾಭಾವಿಕವಾದ ಅಧಿಕ ಸಾರೀಕರಣವುಳ್ಳ ಪೊಟಾಷಿಯಂ ಕ್ಲೋರೈಡ್ ನ್ನು ಅಭಿಧಮನಿಯೊಳಗೆ ಚುಚ್ಚುಮದ್ದಿನ ಮೂಲಕ ನೀಡಿದಾಗ, ಅದು ತಕ್ಷಣವೇ ಸ್ನಾಯು ಸಂಕೋಚನಕ್ಕೆ ಅಗತ್ಯವಾದ ಜೀವಕೋಶದ ಸಾಮರ್ಥ್ಯವನ್ನು ತೆಗೆದುಹಾಕುವ ಮೂಲಕ ಹೃದಯ ಬಡಿತವನ್ನು ನಿಲ್ಲಿಸುತ್ತದೆ.

ಕ್ರಿಮಿನಾಶಕಗಳನ್ನು ಒಳಗೊಂಡ ಹಲವು ಬಯೋಸೈಡ್ ಗಳನ್ನು, ಜೀವಿಗಳಿಗೆ ಗುರಿಯಾಗಿಸಿಕೊಂಡು ವಿಷವಾಗಿ ಪರಿಣಮಿಸಲು ಸೃಷ್ಟಿಸಲಾಗುತ್ತದೆ. ಆದಾಗ್ಯೂ ತೀವ್ರತರವಾದ ಅಥವಾ ಕಡಿಮೆ ಗೋಚರವಾಗಬಲ್ಲ ತೀವ್ರತರವಾದ ವಿಷದ ಪರಿಣಾಮವು ಗುರಿಯಾಗಿಸಿಕೊಂಡಿಲ್ಲದ ಜೀವಿಗಳಲ್ಲೂ ಸಹ ಇರುತ್ತದೆ. ಬಯೋಸೈಡ್‌ಗಳು ಹಾಗು ಇತರ ಪ್ರಯೋಜನಕಾರಿ ಜೀವಿಗಳನ್ನು ಬಳಕೆಮಾಡುವ ಮನುಷ್ಯರೂ ಸಹ ಇದರಲ್ಲಿ ಸೇರಿದ್ದಾರೆ. ಉದಾಹರಣೆಗೆ, ಸಸ್ಯನಾಶಕ 2,4-D ಒಂದು ಸಸ್ಯ ಹಾರ್ಮೊನಿನ ಕ್ರಿಯೆಯನ್ನು ಅನುಸರಿಸುತ್ತದೆ. ಮಾರಕ ವಿಷತ್ವದ ಪರಿಣಾಮವು ಸಸ್ಯಗಳಿಗೂ ಸಹ ನಿರ್ದಿಷ್ಟವಾಗಿದೆ. ವಾಸ್ತವವಾಗಿ, 2,4-D ಒಂದು ವಿಷವಲ್ಲವಾದರೂ ಅದನ್ನು "ಹಾನಿಕರ" (EU) ಎಂದು ವರ್ಗೀಕರಿಸಲಾಗಿದೆ.

ವಿಷಗಳೆಂದು ಪರಿಗಣಿಸಲಾದ ಹಲವು ಪದಾರ್ಥಗಳು ವಿಷಯುಕ್ತತೆಯಿಂದ ಕೇವಲ ಪರೋಕ್ಷವಾಗಿ ವಿಷಕಾರಿಯೆನಿಸಿದೆ. ಇದರ ಒಂದು ಉದಾಹರಣೆಯೆಂದರೆ "ವುಡ್ ಆಲ್ಕೋಹಾಲ್" ಅಥವಾ ಮೆಥನಾಲ್, ಅದು ಸ್ವಭಾವತಃ ವಿಷಕಾರಿಯಾಗಿಲ್ಲದಿದ್ದರೂ ಪಿತ್ತಜನಕಾಂಗದಲ್ಲಿ ರಾಸಾಯನಿಕವಾಗಿ ಅದನ್ನು ವಿಷಯುಕ್ತ ಫಾರ್ಮ್ಯಾಲ್ಡಿಹೈಡ್ ಹಾಗು ಫಾರ್ಮಿಕ್ ಆಮ್ಲವಾಗಿ ಪರಿವರ್ತಿಸಲಾಗುತ್ತದೆ. ಔಷಧದ ಹಲವು ಅಣುಗಳು ಪಿತ್ತಜನಕಾಂಗದಲ್ಲಿ ವಿಷವಾಗಿ ಪರಿವರ್ತನೆಯಾಗುತ್ತವೆ, ಹಾಗು ಪಿತ್ತಜನಕಾಂಗದಲ್ಲಿನ ಕೆಲವು ಕಿಣ್ವಗಳ ವಂಶಾವಳಿ ವ್ಯತ್ಯಾಸನೀಯತೆಯು ಹಲವು ಸಂಯುಕ್ತತೆಗಳ ವಿಷತ್ವವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಜೈವಿಕ ವಿಷದ ರೋಗಲಕ್ಷಣ, ಪ್ರಕ್ರಿಯೆ, ಚಿಕಿತ್ಸೆ ಹಾಗು ರೋಗ ನಿದಾನದ ಅಧ್ಯಯನವನ್ನು ವಿಷಶಾಸ್ತ್ರ ಎಂದು ಕರೆಯಲಾಗಿದೆ.

ವಿಕಿರಣಶೀಲ ಪದಾರ್ಥಗಳಿಗೆ ಒಡ್ಡಿಕೊಂಡಾಗ ವಿಕಿರಣ ವಿಷದ ಪರಿಣಾಮವು ಉಂಟಾಗುತ್ತದೆ ಎಂಬುದು ಸಂಬಂಧರಹಿತ ಸಂಗತಿಯಾಗಿದೆ.

ವಿಷದ ಪರಿಣಾಮದ ನಿರ್ವಹಣೆ

ಬದಲಾಯಿಸಿ
  • ಪಾಯ್ಸನ್ ಕಂಟ್ರೋಲ್ ಸೆಂಟರ್ಸ್(USನಲ್ಲಿ ವಿಶ್ವವ್ಯಾಪಿಯಾಗಿ 1-800-222-1222 ಸಂಖ್ಯೆಯನ್ನು ತಲುಪಬಹುದಾಗಿದೆ) - ವಿಷದ ಅಥವಾ ವಿಷಪೂರಿತ ಪದಾರ್ಥಗಳಿಗೆ ಸಂದೇಹಾಸ್ಪದವಾಗಿ ಒಡ್ಡಿಕೊಂಡ ಸಂದರ್ಭದಲ್ಲಿ ತಕ್ಷಣದ, ಉಚಿತ, ಹಾಗು ತಜ್ಞರ ಚಿಕಿತ್ಸಾ ಸಲಹೆಯನ್ನು ಹಾಗು ದೂರವಾಣಿ ಮೂಲಕ ನೆರವನ್ನು ಒದಗಿಸುತ್ತದೆ.

ಪ್ರಾಥಮಿಕ ನಿರ್ವಹಣೆ

ಬದಲಾಯಿಸಿ
  • ಎಲ್ಲ ವಿಷದ ಪರಿಣಾಮಗಳ ಪ್ರಾಥಮಿಕ ನಿರ್ವಹಣೆಯು ನಿಶ್ಚಿತವಾದ ಸಮರ್ಪಕ ಕಾರ್ಡಿಯೋಪಲ್ಮನರಿ ಕ್ರಿಯೆಯನ್ನು ಒಳಗೊಂಡಿರುವುದರ ಜೊತೆಗೆ ಯಾವುದೇ ರೋಗ ಲಕ್ಷಣಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತದೆ, ಉದಾಹರಣೆಗೆ ಹೊಡೆತಗಳು, ಆಘಾತ, ಹಾಗು ನೋವು.
  • ದೇಹಕ್ಕೆ ಸೇರಿಕೊಂಡ ವಿಷವನ್ನು, ಆ ಭಾಗಕ್ಕೆ ಒಂದು ಪ್ರೆಷರ್ ಬ್ಯಾಂಡೇಜ್ಅನ್ನು ಸುತ್ತುವ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಜೊತೆಗೆ ಪರಿಣಾಮಕ್ಕೊಳಗಾದ ದೇಹದ ಭಾಗವನ್ನು ಬಿಸಿ ನೀರಿನಲ್ಲಿ (50 °Cನಷ್ಟು ತಾಪಮಾನದಲ್ಲಿ) ಇರಿಸಬೇಕಾಗುತ್ತದೆ. ಪ್ರೆಷರ್ ಬ್ಯಾಂಡೇಜ್, ವಿಷವು ದೇಹ ಪೂರ್ತಿಯಾಗಿ ಹರಡದಂತೆ ನೋಡಿಕೊಳ್ಳುತ್ತದೆ ಹಾಗು ಬಿಸಿ ನೀರು ವಿಷದ ಪರಿಣಾಮವನ್ನು ತಗ್ಗಿಸುತ್ತದೆ. ಆದಾಗ್ಯೂ ಈ ಚಿಕಿತ್ಸೆಯು ಕೇವಲ ಪ್ರೋಟೀನ್-ಅಣುಗಳಿಂದ ರಚಿತವಾದ ವಿಷಗಳಿಗೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ.[]

ನಿರ್ಮಲೀಕರಣ

ಬದಲಾಯಿಸಿ
  • ವಿಷತ್ವವು ಇತ್ತೀಚಿಗಷ್ಟೇ ಹೊಟ್ಟೆಗೆ ಸೇರಿದ್ದರೆ, ಜಠರದ ನಿರ್ಮಲೀಕರಣದ ಮೂಲಕ ಆ ಪದಾರ್ಥವನ್ನು ದೇಹವು ಹೀರಿಕೊಳ್ಳುವುದನ್ನು ತಗ್ಗಿಸಬಹುದಾಗಿದೆ. ಇದನ್ನು ಸಕ್ರಿಯವಾದ ಇಂಗಾಲದ ರೂಪವನ್ನು ಬಳಸಿ, ಜಠರದ ತೊಳೆತ, ಸಂಪೂರ್ಣವಾಗಿ ಕರುಳಿಗೆ ದ್ರವವನ್ನು ಒದಗಿಸುವುದು, ಅಥವಾ ನಾಸೋಗ್ಯಾಸ್ಟ್ರಿಕ್ ಆಸ್ಪಿರೇಶನ್ (ಮೂಗಿನ ಮೂಲಕ ನಾಳವನ್ನು ಹಾಕಿ ಜಠರದಿಂದ ವಿಷವನ್ನು ಹೀರಿ ತೆಗೆಯುವುದು) ವಿಧಾನಗಳ ಮೂಲಕ ವಿಷವನ್ನು ದೇಹದಿಂದ ಆಚೆ ತೆಗೆದುಹಾಕಬಹುದಾಗಿದೆ. ವಾಂತಿ ಮಾಡಿಸುವ ಔಷಧ (ಇಪಿಕ್ಯಾಕ್‌ನ ಶರಬತ್ತು), ವಿರೇಚಕ ಅಥವಾ ಮಲವಿಸರ್ಜನೆ ಮಾಡಿಸುವ ಔಷಧಗಳ ನಿಯತಕ್ರಮದ ಬಳಕೆಯನ್ನು ಸೂಚಿಸಲಾಗುವುದಿಲ್ಲ.
    • ಸಕ್ರಿಯ ಇಂಗಾಲದ ಚಿಕಿತ್ಸಾ ವಿಧಾನವನ್ನು ವಿಷದ ಹೀರಿಕೆಯನ್ನು ತಡೆಗಟ್ಟಲು ಮಾಡಿಕೊಳ್ಳುವ ಆಯ್ಕೆ. ಈ ಚಿಕಿತ್ಸಾ ವಿಧಾನವನ್ನು ರೋಗಿಯು ತುರ್ತು ಪರಿಸ್ಥಿತಿಯಲ್ಲಿರುವಾಗ ಅಥವಾ ತುರ್ತುಆರೋಗ್ಯ ಸೇವೆಯನ್ನು ಒದಗಿಸುವ ಒಬ್ಬ ತಜ್ಞ ಉದಾರಹಣೆಗೆ ಒಬ್ಬ ವೈದ್ಯಸಹಾಯಕ ಅಥವಾ EMT ಪ್ರಾಶನ ಮಾಡಿಸುತ್ತಾರೆ. ಆದಾಗ್ಯೂ, ಇಂಗಾಲದ ಚಿಕಿತ್ಸಾ ವಿಧಾನವು ಲೋಹಗಳಾದ ಸೋಡಿಯಂ, ಪೋಟಾಷಿಯಂ, ಹಾಗು ಲಿಥಿಯಂ, ಹಾಗು ಆಲ್ಕೋಹಾಲ್ಗಳು ಹಾಗು ಗ್ಲೈಕಾಲ್ ಯುಕ್ತ ವಿಷದ ಪದಾರ್ಥಗಳಿಗೆ ನಿಷ್ಪರಿಣಾಮಕಾರಿಯಾಗಿದೆ; ಈ ವಿಧಾನವನ್ನು ನಾಶಕಾರಿ ರಾಸಾಯನಿಕಗಳಾದ ಆಮ್ಲಗಳು ಹಾಗು ಕ್ಷಾರ ಯುಕ್ತ ವಿಷದ ಪದಾರ್ಥಗಳಿಗೂ ಸಹ ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ.[]
    • ಸಂಪೂರ್ಣವಾಗಿ ಜಠರಕ್ಕೆ ದ್ರವವನ್ನು ಒದಗಿಸುವ ವಿಧಾನದಿಂದ ಜಠರವು ಶುದ್ಧಿಗೊಳ್ಳುತ್ತದೆ. ಇದನ್ನು ರೋಗಿಗೆ ದೊಡ್ಡ ಪ್ರಮಾಣದಲ್ಲಿ ಪಾಲಿಎಥೈಲಿನ್ ಗ್ಲೈಕಾಲ್ ದ್ರಾವಣವನ್ನು ನೀಡುವುದರ ಮೂಲಕ ಚಿಕಿತ್ಸೆ ನಡೆಸಲಾಗುತ್ತದೆ. ಆಸ್ಮೊಸಿಸ್‌ನಿಂದ ಸಮತೋಲನಗೊಂಡ ಪಾಲಿಎಥೈಲಿನ್ ಗ್ಲೈಕಾಲ್ ದ್ರಾವಣವನ್ನು ದೇಹವು ಹೀರಿಕೊಳ್ಳುವುದಿಲ್ಲ. ಇದು ಗ್ಯಾಸ್ಟ್ರೋ ಇಂಟೆಸ್ಟಿನಲ್ ಅಂಗ ಪ್ರದೇಶವನ್ನು ಸಂಪೂರ್ಣವಾಗಿ ಶುದ್ಧಗೊಳಿಸುವಷ್ಟು ಪರಿಣಾಮಕಾರಿಯಾಗಿದೆ. ಇದರ ಪ್ರಮುಖ ಬಳಕೆಯೆಂದರೆ ಸಕ್ರಿಯ ಇಂಗಾಲವು ಹೀರಿಕೊಳ್ಳದ ನಿಧಾನವಾಗಿ ಕರಗಿ ಬಿಡುಗಡೆಯಾಗುವ ಔಷಧಗಳು, ಜೀವಾಣುವಿಷಗಳ ಸೇವನೆ ನಂತರ(ಉದಾಹರಣೆಗೆ., ಲಿಥಿಯಂ, ಕಬ್ಬಿಣ), ಹಾಗು ಸೇವನೆಯಾದ ಔಷಧಗಳ ಪುಡಿಕೆಗಳನ್ನು ತೆಗೆಯಲು ಬಳಸಲಾಗುತ್ತದೆ.(ದೇಹದೊಳಗೆ ಹುದುಗಿಸಲಾದ ಮಾದಕ ವಸ್ತುಗಳು/ಅದರ ಕಳ್ಳಸಾಗಣೆ).[]
    • ಸಾಮಾನ್ಯವಾಗಿ ಹೊಟ್ಟೆ ಪಿಚಕಾರಿ ಎಂದು ಕರೆಯಲಾಗುವ ಜಠರದ ತೊಳೆತದ ವಿಧಾನದಲ್ಲಿ ನಾಳವೊಂದನ್ನು ಹೊಟ್ಟೆಯ ಒಳಕ್ಕೆ ತೂರಿಸಿ ನೀರು ಅಥವಾ ಉಪ್ಪಾದ ದ್ರಾವಣವನ್ನು ಅದರ ಮೂಲಕ ಪ್ರಾಶನ ಮಾಡಿಸಲಾಗುತ್ತದೆ. ನಂತರ ಈ ದ್ರಾವಣವನ್ನು ಹೊಟ್ಟೆಯಲ್ಲಿರುವ ಇತರ ವಸ್ತುಗಳೊಂದಿಗೆ ತೆಗೆದುಹಾಕಲಾಗುತ್ತದೆ. ವಿಷ ಪ್ರಾಶನ ಮಾಡಿದ ರೋಗಿಗಳಿಗೆ ಈ ಜಠರ ತೊಳೆತದ ವಿಧಾನವನ್ನು ಹಲವಾರು ವರ್ಷಗಳು ಒಂದು ಸಾಮಾನ್ಯ ಚಿಕಿತ್ಸೆಯನ್ನಾಗಿ ಬಳಕೆ ಮಾಡಲಾಗುತ್ತಿತ್ತು. ಆದಾಗ್ಯೂ, ಒಂದು ಇತ್ತೀಚಿನ ಮರುಪರಿಶೀಲನೆಯು ಈ ವಿಧಾನವು ಯಾವುದೇ ಪ್ರಯೋಜನವನ್ನು ಉಂಟುಮಾಡುವುದಿಲ್ಲವೆಂದು ಸೂಚಿಸುತ್ತದೆ.[] ವಿಷಪ್ರಾಶನವಾಗಿ ಒಂದು ಗಂಟೆಯ ಒಳಗಿನ ಅವಧಿಯಾಗಿದ್ದರೆ ಹಾಗು ವಿಷಪ್ರಾಶನವು ಜೀವಕ್ಕೆ ಅಪಾಯವನ್ನು ಉಂಟುಮಾಡುವಂತಿದ್ದರೆ ಈಗಲೂ ಕೆಲವೊಂದು ಬಾರಿ ಈ ವಿಧಾನದ ಚಿಕಿತ್ಸಾಕ್ರಮವನ್ನು ಪ್ರಯೋಗಿಸಲಾಗುತ್ತದೆ.
    • ನಾಸೋಗ್ಯಾಸ್ಟ್ರಿಕ್ ಆಸ್ಪಿರೇಶನ್ ವಿಧಾನದಲ್ಲಿ ಮೂಗಿನ ಮೂಲಕ ಹೊಟ್ಟೆಗೆ ಒಂದು ನಾಳವನ್ನು ತೂರಿಸಿ ಹೊಟ್ಟೆಯಲ್ಲಿರುವ ವಿಷದ ಪದಾರ್ಥವನ್ನು ಚೂಷಣದ(ಹೀರಿಕೆ) ಮೂಲಕ ತೆಗೆದುಹಾಕಲಾಗುತ್ತದೆ. ವಿಷವನ್ನು ದ್ರಾವಣ ರೂಪದಲ್ಲಿ ಸೇವನೆ ಮಾಡಿದ ಸಂದರ್ಭದಲ್ಲಿ ಸಕ್ರಿಯ ಇಂಗಾಲವು ನಿಷ್ಪರಿಣಾಮಕಾರಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ವಿಧಾನವನ್ನು ಮುಖ್ಯವಾಗಿ ಬಳಸಲಾಗುತ್ತದೆ, ಉದಾಹರಣೆಗೆ, ಎಥೈಲೆನ್ ಗ್ಲೈಕೋಲ್ ವಿಷಪ್ರಾಶನ.
    • ವಮನ(ಅದೆಂದರೆ ಇಪಿಕ್ಯಾಕ್ ಶರಬತ್ತನ್ನು ಸೇವಿಸುವುದರ ಮೂಲಕ ವಿಷವನ್ನು ಕಕ್ಕುವಂತೆ ಮಾಡುವುದು)ದ ಚಿಕಿತ್ಸಾಕ್ರಮವನ್ನು ವಿಷಪ್ರಾಶನವಾದ ಸಂದರ್ಭಗಳಲ್ಲಿ ಇತ್ತೀಚಿಗೆ ಬಳಕೆ ಮಾಡಲಾಗುತ್ತಿಲ್ಲ, ಏಕೆಂದರೆ ವಮನವು ವಿಷವನ್ನು ತೆಗೆಯುವಲ್ಲಿ ನಿಷ್ಪರಿಣಾಮಕಾರಿಯಾಗಿದೆ.[]
    • ವಿರೇಚಕಗಳು ವಿಷ ಸೇವನೆಯ ಪ್ರಭಾವವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ವಿಷವನ್ನು ಜಠರಗರುಳಿನ ಪ್ರದೇಶದಿಂದ ತೆಗೆದುಹಾಕುತ್ತದೆ. ವಿಷಪ್ರಾಶನವಾದ ರೋಗಿಗಳಿಗೆ ಎರಡು ವಿಧಾನದ ವಿರೇಚಕಗಳನ್ನು ನೀಡಲಾಗುತ್ತದೆ; ಲವಣಯುಕ್ತ ವಿರೇಚಕಗಳು (ಸೋಡಿಯಂ ಸಲ್ಫೇಟ್, ಮೆಗ್ನೀಸಿಯಮ್ ಸಿಟ್ರೆಟ್ ಮೆಗ್ನೀಸಿಯಮ್ ಸಲ್ಫೇಟ್) ಹಾಗು ಸಕ್ಕರೆ ಲೇಪಿಸಲಾದ ವಿರೇಚಕಗಳು (ಸೋರ್ಬಿಟೋಲ್). ಇವುಗಳು ವಿಷಪ್ರಾಶನದ ಪರಿಣಾಮದಿಂದ ರೋಗಿಯ ಆರೋಗ್ಯದಲ್ಲಿ ಚೇತರಿಕೆಯನ್ನು ತರುವುದಿಲ್ಲವಾದ ಕಾರಣ ಈ ವಿಧಾನವನ್ನು ಈಗ ಸೂಚಿಸಲಾಗುವುದಿಲ್ಲ.[]

ವಿಷಾಹಾರಿಗಳು

ಬದಲಾಯಿಸಿ

ಕೆಲವು ವಿಷಗಳು ನಿರ್ದಿಷ್ಟ ವಿಷಾಹಾರಿಗಳನ್ನು ಹೊಂದಿವೆ:

ವಿಷ/ಔಷಧ ವಿಷಾಹಾರಿ
ಪ್ಯಾರಸಿಟಮಾಲ್ (ಅಸೆಟಾಮಿನೋಫೆನ್) N-ಅಸೆಟೈಲ್ಸಿಸ್ಟೆಯಿನ್
ವಿಟಮಿನ್ K ಪ್ರತಿಗರಣೆಕಾರಿ, ಉದಾಹರಣೆಗೆ, ಘನೀಕರಣರೋಧಕ ವಿಟಮಿನ್ K
ಒಪಿಆಯ್ಡ್ಸ್ ನಲೋಕ್ಸೋನ್
ಕಬ್ಬಿಣ (ಹಾಗು ಇತರ ಭಾರ ಲೋಹಗಳು) ಡೆಸ್ಫೆರಿಯೋಕ್ಸಾಮಿನ್ , ಡೆಫೆರಾಸಿರಾಕ್ಸ್,ಡೆಫೆರಿಪ್ರೋನ್
ಬೆಂಜೊಡಿಯಜೆಪೈನ್‌ಗಳು ಫ್ಲುಮಜೆನಿಲ್
ಎಥೆಲೈನ್ ಗ್ಲೈಕೋಲ್ ಎಥನೋಲ್ ಅಥವಾ ಫೊಮೆಪಿಜೊಲ್, ಹಾಗು ತೈಅಮಿನ್
ಮೆಥನೋಲ್ ಎಥನೋಲ್ ಅಥವಾ ಫೊಮೆಪಿಜೊಲ್, ಹಾಗು ಫಾಲಿನಿಕ್ ಆಮ್ಲ
ಸಯನೈಡ್ ಅಮೈಲ್ ನೈಟ್ರೈಟ್ , ಸೋಡಿಯಂ ನೈಟ್ರೈಟ್ ಹಾಗು ಸೋಡಿಯಂ ಥಿಯೋ ಸಲ್ಫೇಟ್
ಆರ್ಗನೋಫಾಸ್ಫೆಟ್ಸ್ ಅಟ್ರೋಪಿನ್ ಹಾಗು ಪ್ರಲಿಡೋಕ್ಸಿಂ
ಮೆಗ್ನಿಸಿಅಮ್ ಕ್ಯಾಲ್ಸಿಯಂ ಗ್ಲುಕೋನೇಟ್
ಕ್ಯಾಲ್ಸಿಯಂ ಚಾನೆಲ್ ಬ್ಲಾಕರ್ಸ್ (ವೆರಪಮಿಲ್, ಡಿಲ್ಟಿಯಜೆಮ್) ಕ್ಯಾಲ್ಸಿಯಂ ಗ್ಲುಕೋನೇಟ್
ಬೀಟಾ-ಬ್ಲಾಕರ್ಸ್ (ಪ್ರೋಪ್ರನೋಲೋಲ್ , ಸೋಟಲೋಲ್) ಕ್ಯಾಲ್ಸಿಯಂ ಗ್ಲುಕೋನೇಟ್ ಹಾಗು/ಅಥವಾ ಗ್ಲುಕಗೋನ್
ಐಸೊನಿಯಜಿದ್ ಪೈರಿಡಾಕ್ಸಿನ್
ಅಟ್ರೋಪಿನ್ ಫಿಸೋಸ್ಟಿಗ್ಮೈನ್
ಥ್ಯಾಲಿಯಂ ಪ್ರುಷಿಯನ್ ಬ್ಲೂ
ಹೈಡ್ರೋಫ್ಲೋರಿಕ್ ಆಮ್ಲ ಕ್ಯಾಲ್ಸಿಯಂ ಗ್ಲುಕೋನೇಟ್
ಮೆಥನೋಲ್ ಎಥನೋಲ್

ದೇಹಶುದ್ಧಿಯಿಂದ ಅಧಿಕ ವಿಷವರ್ಜನೆ

ಬದಲಾಯಿಸಿ

ಮತ್ತಷ್ಟು ಚಿಕಿತ್ಸೆ

ಬದಲಾಯಿಸಿ
  • ಬಹುತೇಕ ವಿಷದ ಪರಿಣಾಮಗಳಲ್ಲಿ ಚಿಕಿತ್ಸಾ ವಿಧಾನದ ಮೂಲಾಧಾರವು ರೋಗಿಗೆ ಬೆಂಬಲಿತ ಆರೈಕೆಯನ್ನು ಒದಗಿಸುವುದು. ಉದಾಹರಣೆಗೆ ವಿಷದ ಪರಿಣಾಮಕ್ಕಿಂತ ಹೆಚ್ಚಾಗಿ ಅದರ ರೋಗ ಲಕ್ಷಣಗಳಿಗೆ ಚಿಕಿತ್ಸೆಯನ್ನು ನೀಡುವುದು.

ಸಾಂಕ್ರಾಮಿಕಶಾಸ್ತ್ರ

ಬದಲಾಯಿಸಿ
 
ಅಸಾಮರ್ಥ್ಯ-2004ರಲ್ಲಿ ತಲಾ 100,000 ವಿಷಪ್ರಾಶನವಾದ ಜನಗಳ ಅಳವಡಿಕೆಯಾದ ಕಾಲಾವಧಿ.[೧೦][19][20][21][22][23][24][25][26][27][28][29][30][31]

ಇವನ್ನೂ ನೋಡಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಕೌಟಿಲ್ಯ ಪ್ರಾಯೋಗಿಕ ಮಾರ್ಗಗಳಾದ ಪ್ರಲೋಭನೆ, ಆಯುಧಗಳ ಗುಪ್ತ ಬಳಕೆ, ವಿಷ ಮುಂತಾದವುಗಳ ಬಳಕೆಯನ್ನು ಸೂಚಿಸುತ್ತಾನೆ. S.D. ಚಮೋಲ, ಕೌಟಿಲ್ಯ ಅರ್ಥಶಾಸ್ತ್ರ ಅಂಡ್ ದಿ ಸೈನ್ಸ್ ಆಫ್ ಮ್ಯಾನೇಜ್ಮೆಂಟ್: ರಿಲವೆನ್ಸ್ ಫಾರ್ ದಿ ಕಾಂಟೆಂಪರರಿ ಸೊಸೈಟಿ , ಪುಟ. 40. ISBN 81-7871-126-5
  2. ಕೌಟಿಲ್ಯ ಹತ್ಯೆಯ ವಿರುದ್ಧ ಒಂದು ಸವಿಸ್ತಾರವಾದ ಮುನ್ನೆಚ್ಚರಿಕೆಗೆ ಮುಂದೊಡ್ಡುತ್ತಾನೆ- ಆಹಾರದ ಆಸ್ವಾದಕರು, ವಿಷದ ಪತ್ತೆಗಿರುವ ಸವಿಸ್ತಾರವಾದ ಮಾರ್ಗಗಳು. "ಮಧ್ಯಮಾರ್ಗಿ ಮ್ಯಾಕಿಅವೇಲಿ? ಕಾಂಟ್ರಾಸ್ಟಿಂಗ್ ದಿ ಪ್ರಿನ್ಸ್ ವಿಥ್ ದಿ ಅರ್ಥಶಾಸ್ತ್ರ ಆಫ್ ಕೌಟಿಲ್ಯ". ಕ್ರಿಟಿಕಲ್ ಹಾರಿಜನ್ಸ್ , ಸಂ. 3, ನಂ. 2 (ಸೆಪ್ಟೆಂಬರ್ 2002) ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್. ISSN 1440-9917 (ಮುದ್ರಣ) 1568-5160 (ಆನ್ಲೈನ್). DOI: 10.1163/156851602760586671.
  3. ನೀಧಮ್, ಜೋಸೆಫ್ (1986). ಸೈನ್ಸ್ ಅಂಡ್ ಸಿವಿಲೈಸೇಷನ್ ಇನ್ ಚೈನಾ: ಸಂಪುಟ 5, ಭಾಗ 7 . ತೈಪೆ: ಕೇವ್ಸ್ ಬುಕ್ಸ್, Ltd. ಪುಟ 180.
  4. ಕಂಪ್ಲೀಟ್ ಡೈವಿಂಗ್ ಮ್ಯಾನುಅಲ್ ಬೈ ಜ್ಯಾಕ್ ಜ್ಯಾಕ್ಸನ್
  5. Chyka PA, Seger D, Krenzelok EP, Vale JA (2005). "Position paper: Single-dose activated charcoal". Clin Toxicol (Phila). 43 (2): 61–87. PMID 15822758.{{cite journal}}: CS1 maint: multiple names: authors list (link)
  6. "Position paper: whole bowel irrigation". J Toxicol Clin Toxicol. 42 (6): 843–54. 2004. doi:10.1081/CLT-200035932. PMID 15533024.
  7. Vale JA, Kulig K; American Academy of Clinical Toxicology; European Association of Poisons Centres and Clinical Toxicologists. (2004). "Position paper: gastric lavage". J Toxicol Clin Toxicol. 42 (7): 933–43. doi:10.1081/CLT-200045006. PMID 15641639.{{cite journal}}: CS1 maint: multiple names: authors list (link)
  8. American Academy of Clinical Toxicology; European Association of Poisons Centres Clinical Toxicologists (2004). "Position paper: Ipecac syrup". J Toxicol Clin Toxicol. 42 (2): 133–43. doi:10.1081/CLT-120037421. PMID 15214617.{{cite journal}}: CS1 maint: multiple names: authors list (link)
  9. Toxicology, American Academy of Clinical (2004). "Position paper: cathartics". J Toxicol Clin Toxicol. 42 (3): 243–53. doi:10.1081/CLT-120039801. PMID 15362590.
  10. [18]


ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ವಿಷ&oldid=1127948" ಇಂದ ಪಡೆಯಲ್ಪಟ್ಟಿದೆ