ಅಭಾವ
ಅಭಾವವು ಸೀಮಿತ ಸಂಪನ್ಮೂಲಗಳ ವಿಶ್ವದಲ್ಲಿ ತೋರಿಕೆಯಲ್ಲಿ ಅನಿಯಮಿತ ಅಗತ್ಯಗಳಿರುವ ಮೂಲಭೂತ ಆರ್ಥಿಕ ಸಮಸ್ಯೆಯಾಗಿದೆ. ಸಮಾಜವು ಎಲ್ಲ ಮಾನವ ಅಗತ್ಯಗಳು ಮತ್ತು ಬೇಕುಗಳನ್ನು ಪೂರೈಸಲು ಸಾಕಷ್ಟಿಲ್ಲದ ಉತ್ಪಾದಕ ಸಂಪನ್ಮೂಲಗಳನ್ನು ಹೊಂದಿದೆ ಎಂದು ಇದು ಹೇಳುತ್ತದೆ. ಅಭಾವವು ಅರ್ಥಶಾಸ್ತ್ರದ ಅಂತರಂಗದಲ್ಲಿದೆ, ಏಕೆಂದರೆ ಈ ಪರಿಕಲ್ಪನೆಯಿಲ್ಲದೆ ಬೃಹದಾರ್ಥಿಕ ಹಾಗೂ ವ್ಯಷ್ಟಿ ಆರ್ಥಿಕ ಸಂಶೋಧನೆಯು ಅರ್ಥಹೀನವಾಗಿಹೋಗುತ್ತದೆ.
ಎಲ್ಲ ಸಂಭಾವ್ಯ ಮಾನವ ಅಗತ್ಯಗಳನ್ನು ಪೂರೈಸಲು ಯಾವತ್ತೂ ಸಾಕಷ್ಟಿರುವುದಿಲ್ಲ, ಮಾನವ ತಂತ್ರಜ್ಞಾನದ ಮುಂದುವರಿಂದ ಸ್ಥಿತಿಗಳಲ್ಲಿಯೂ ಎಂಬುದೇ ಅಭಾವದ ಕಲ್ಪನೆ. ಬೇಕಾದ ವಿರಳ ಸಂಪನ್ಮೂಲದ ಹೆಚ್ಚಿನದನ್ನು ಪಡೆಯಲು ಅಭಾವವು ತ್ಯಾಗ ಮಾಡುವುದನ್ನು ಅಂದರೆ ಯಾವುದನ್ನಾದರೂ ಬಿಟ್ಟುಬಿಡುವುದನ್ನು, ಅಥವಾ ರಾಜಿ ವಿನಿಮಯ ಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ.[೧]
ನೈಜ ಪ್ರಪಂಚದಲ್ಲಿ ಅಭಾವದ ಪರಿಸ್ಥಿತಿಯು ವಿರಳ ಸಂಪನ್ಮೂಲಗಳಿಗೆ ಸ್ಪರ್ಧೆಯನ್ನು ಅಗತ್ಯವಾಗಿಸುತ್ತದೆ, "ಯಾರಿಗೆ ಏನು ಸಿಗಬೇಕು ಎಂದು ನಿರ್ಧರಿಸಲು ಬಳಸಲಾಗುತ್ತಿರುವ ಮಾನದಂಡಗಳನ್ನು ಪೂರೈಸಲು ಜನರು ಪ್ರಯತ್ನಿಸಿದಾಗ" ಸ್ಪರ್ಧೆ ಸಂಭವಿಸುತ್ತದೆ. ಬೆಲೆ ವ್ಯವಸ್ಥೆ, ಅಥವಾ ಮಾರುಕಟ್ಟೆ ಬೆಲೆಗಳು ವಿರಳ ಸಂಪನ್ಮೂಲಗಳನ್ನು ಹಂಚುವ ಒಂದು ವಿಧಾನ. "ಒಂದು ಸಮಾಜವು ಹಣ ಪಾವತಿಸುವ ಇಚ್ಛೆಯ ಆಧಾರದ ಮೇಲೆ ಆರ್ಥಿಕ ಯೋಜನೆಗಳನ್ನು ಸುಸಂಘಟಿತವಾಗಿಸಿದರೆ, ಆ ಸಮಾಜದ ಸದಸ್ಯರು ಹಣ ಮಾಡಿಕೊಳ್ಳಲು [ಸ್ಪರ್ಧಿಸಲು ಪ್ರಯತ್ನಿಸುವರು]. ಇತರ ಮಾನದಂಡಗಳನ್ನು ಬಳಸಿದರೆ, ನಾವು ಆ ಇತರ ಮಾನದಂಡಗಳ ಅನುಸಾರವಾಗಿ ಸ್ಪರ್ಧೆಯನ್ನು ನೋಡುವುದನ್ನು ನಿರೀಕ್ಷಿಸುವೆವು.
ಉದಾಹರಣೆಗೆ, ನಮಗೆ ಗಾಳಿಯು ಚಿನ್ನಕ್ಕಿಂತ ಹೆಚ್ಚು ಮುಖ್ಯವಾದರೂ, ಗಾಳಿಯ ಉತ್ಪಾದನಾ ವೆಚ್ಚ ಶೂನ್ಯವಾಗಿರುವುದರಿಂದಲೇ ಅದು ಕಡಿಮೆ ವಿರಳವಾಗಿದೆ. ಇನ್ನೊಂದೆಡೆ ಚಿನ್ನದ ಉತ್ಪಾದನಾ ವೆಚ್ಚ ಹೆಚ್ಚು. ಅದನ್ನು ಕಂಡುಹಿಡಿದು ಸಂಸ್ಕರಿಸಬೇಕು, ಇವೆರಡಕ್ಕೂ ಬಹಳ ಸಂಪನ್ಮೂಲಗಳು ಅಗತ್ಯವಿರುತ್ತವೆ. ಹೆಚ್ಚುವರಿಯಾಗಿ, ಅಭಾವವು ಸಮಾಜದ ಎಲ್ಲ ಗುರಿಗಳನ್ನು ಏಕಕಾಲಕ್ಕೆ ಹಿಂಬಾಲಿಸಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ; ಇತರ ಗುರಿಗಳೊಂದಿಗೆ ಒಂದು ಗುರಿಯ ರಾಜಿ ವಿನಿಮಯ ಮಾಡಲಾಗುತ್ತದೆ. ಏಕಸ್ವಾಮ್ಯತೆ ಅಥವಾ ಕ್ರಯಸ್ವಾಮ್ಯದ ಸಂದರ್ಭಗಳಲ್ಲಿ ಕೃತಕ ಅಭಾವದ ಸೃಷ್ಟಿಯಾಗಬಹುದು. ದಾಸ್ತಾನು ಸಂಗ್ರಹಣೆ ಮೂಲಕವೂ ಅಭಾವ ಆಗಬಹುದು, ಮಾರುಕಟ್ಟೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ ಅಥವಾ ಇತರ ಕಾರಣಗಳಿಗಾಗಿ. ದಿಗಿಲು ಖರೀದಿಯಿಂದ ತಾತ್ಕಾಲಿಕ ಅಭಾವ ಸಂಭವಿಸಬಹುದು.
ವಿರಳ ಸರಕೆಂದರೆ ಪೂರೈಕೆಗಿಂತ ಬೇಡಿಕೆ ಹೆಚ್ಚಿರುವ ಸರಕು. ಆರ್ಥಿಕ ನಿಯಮಗಳ ಪ್ರಕಾರ, ಇದು ಸ್ವಭಾವತಃ ಒಂದು ಆರೋಪಿತ ಬೆಲೆಯನ್ನು ಹೊಂದಿರುತ್ತದೆ. ಅಭಾವ ಪದವು ಸೀಮಿತ ಸರಕಿನ ಒಡೆತನದ ವಿಷಯದಲ್ಲಿ ಘರ್ಷಣೆಯ ಸಂಭಾವ್ಯ ಇರುವಿಕೆಯನ್ನು ಸೂಚಿಸುತ್ತದೆ. ಯಾವುದೇ ವಿರಳ ಸರಕಿಗೆ ಯಾರದ್ದಾದರೂ ಒಡೆತನ ಮತ್ತು ನಿಯಂತ್ರಣವು ಬೇರೆ ಯಾರದಾದ್ದರೂ ನಿಯಂತ್ರಣವನ್ನು ಕಡೆಗಣಿಸುತ್ತದೆ ಎಂದು ಹೇಳಬಹುದು.
ಉಲ್ಲೇಖಗಳು
ಬದಲಾಯಿಸಿ- ↑ : pp.5–8 Heyne, Paul; Boettke, Peter J.; Prychitko, David L. (2014). The Economic Way of Thinking (13th ed.). Pearson. ISBN 978-0-13-299129-2.