ಅಮೈಲ್ ನೈಟ್ರೈಟ್ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಗುಂಡಿಗೆಯ ರೋಗದಿಂದೇಳುವ ಎದೆಸೆರೆಬಿಗಿತವನ್ನು (ಅಂಜೈನ ಪೆಕ್ಟೊರಿಸ್) ಕಳೆಯಲು ಬಳಸುವ ದ್ರವಮದ್ದು. ಇದರ ರಾಸಾಯನಿಕ ಸೂತ್ರ C5H11ONO.

ಅಮೈಲ್ ನೈಟ್ರೈಟ್
Chemical structure of amyl nitrite
Ball-and-stick model of amyl nitrite
ಹೆಸರುಗಳು
ಐಯುಪಿಎಸಿ ಹೆಸರು
(3-methylbutyl) nitrite
Other names
Isoamyl nitrite
Nitramyl
3-methyl-1-nitrosooxybutane
Pentyl alcohol nitrite(ambiguous)
Nitrous acid, pentyl ester(ambiguous)
poppers (colloquial, street slang)
Identifiers
ECHA InfoCard 100.003.429
ಗುಣಗಳು
ಆಣ್ವಿಕ ಸೂತ್ರ C5H11NO2
ಮೋಲಾರ್ ದ್ರವ್ಯರಾಶಿ ೧೧೭.೧೫ g mol−1
ಸಾಂದ್ರತೆ 0.872 g/cm3, liquid (25 °C)
ಕುದಿ ಬಿಂದು

99 °C, 372 K, 210 °F

ಕರಗುವಿಕೆ ನೀರಿನಲ್ಲಿ slightly soluble
Hazards
Main hazards vasodilator
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
209 °C (408 °F; 482 K)
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ತಯಾರಿಕೆ

ಬದಲಾಯಿಸಿ

ಹಿಟ್ಟು, ನೈಟ್ರಿಕಾಮ್ಲಗಳಿಂದ ಬರುವ ನೈಟ್ರಸ್ ಆವಿಯನ್ನು ಬೆಚ್ಚನೆಯ ಐಸೊಅಮೈಲ್ ಮದ್ಯಸಾರದೊಳಗೆ ಹಾಯಿಸುವುದರಿಂದಲೋ 15 ಪಾಲು ನೀರಲ್ಲಿರುವ 26 ಪಾಲು ಐಸೊಅಮೈಲ್ ಮದ್ಯಸಾರವನ್ನು ಕೂಡಿಸಿ ಬಟ್ಟಿಯಿಳಿಸುವುದರಿಂದಲೋ ತಯಾರಾಗುತ್ತದೆ.[]

ಲಕ್ಷಣಗಳು

ಬದಲಾಯಿಸಿ

ತುಸು ಚೊಕ್ಕ ಹಳದಿ ಬಣ್ಣದ, ಬಲು ಸುಲಭವಾಗಿ ಆರಿಹೋಗುವ, ಹತ್ತಿಕೊಂಡುರಿವ, (ಕುದಿವ ಮಟ್ಟ 95 - 96 ಸೆಂ.ಗ್ರೇ). ವಿಶಿಷ್ಟಚೊಗರಿನ ಹಣ್ಣಿನ ವಾಸನೆಯ ದ್ರವ. ಹತ್ತಿರ ಬೆಂಕಿ, ಉರಿ ಇದ್ದಲ್ಲಿ ಸಿಡಿಯಬಹುದು. ಈ ರಾಸಾಯನಿಕ ನೀರಲ್ಲಿ ವಿಲೀನವಾಗದಿದ್ದರೂ ಸಲೀಸಾಗಿ ಮದ್ಯಸಾರ, ಈಥರ್, ಹಿಮದಂದ, ಅಸೆಟಿಕಾಮ್ಲ, ಕ್ಲೋರೋಫಾರ್ಮ್, ಬೆಂಜೀನ್‍ಗಳಲ್ಲಿ ವಿಲೀನವಾಗುತ್ತದೆ.[]

ಬಹುಮಟ್ಟಿಗೆ ಗುಂಡಿಗೆ ರೋಗಿಗಳು ಅನುಭವಿಸುವ ಮಾರಕ ಎದೆಶೂಲೆಯನ್ನು ಈ ದ್ರವ ಸರಕ್ಕನೆ ಕಳೆವುದು. ಶೂಲೆ ಬರುವ ಮುನ್ಸೂಚನೆ ಕಂಡಕೂಡಲೇ ತೆಗೆದುಕೊಳ್ಳಲು, ತೆಳುವಾದ ಗಾಜಿನ ಕಿರುಸೀಸೆಗಳಲ್ಲಿರುವ ಈ ದ್ರವವನ್ನು ರೋಗಿಗಳು ಯಾವಾಗಲೂ ಕಿಸೆಯಲ್ಲಿ ಇಟ್ಟುಕೊಂಡಿರುವವರು. ಬೇಕೆಂದಾಗ ಕೈವಸ್ತ್ರದ ಪದರಗಳಲ್ಲಿರಿಸಿ ಅಮುಕಿದಾಗ ಟಪಾರೆಂದು ಸದ್ದಾಗಿ ಒಡೆದು (0.3 ಮಿ.ರೇ.) ದ್ರವ ಕೂಡಲೇ ಆವಿಯಾಗಿ ಬರುವುದನ್ನು ಮೂಗಿನ ಬಳಿ ಹಿಡಿದು ಉಸಿರಲ್ಲಿ ಸೇದಿಕೊಳ್ಳುವರು. ಇದರ ಪ್ರಭಾವ ಸರಕ್ಕನೆ ಕಾಣಿಸಿಕೊಂಡು 3 ಮಿನಿಟು ಹೊತ್ತು ಇರಬಹುದು. ಹಲವು ವೇಳೆ ಮೊಗ ಕೆಂಪೇರಿ, ತಲೆನೋವಿನ ಸಿಡಿತ, ತಲೆತಿರುಗೂ ಆಗುವುದು ಅನಾನುಕೂಲ. ಇದ್ದಕ್ಕಿದ್ದಂತೆ ರಕ್ತದ ಒತ್ತಡ ಕುಸಿಯುತ್ತದೆ. ಕೋಣೆಯೆಲ್ಲ ಇದರ ಕಂಪು ಹರಡಿಕೊಳ್ಳುತ್ತದೆ. ಸಯನೈಡುಗಳ ವಿಷವೇರಿಕೆಯಲ್ಲೂ ಇದರ ಬಳಕೆಯಾಗುವುದು. ಡೈಯಜೋನಿಯಂ, ಐಸೊನೈಟ್ರೊಸೊ ಸಂಯುಕ್ತಗಳನ್ನು ತಯಾರಿಸಲೂ ತುಸುಮಟ್ಟಿಗೆ ಬಳಸುವುದುಂಟು.[]

ಉಲ್ಲೇಖಗಳು

ಬದಲಾಯಿಸಿ
  1. Noyes, W. A. (1943). "n-Butyl Nitrite". Org. Synth. {{cite journal}}: Cite has empty unknown parameter: |authors= (help); Coll. Vol., vol. 2, p. 108
  2. Nickerson, Mark, John O Parker, Thomas P Lowry, and Edward W Swenson. Isobutyl Nitrite and Related Compounds Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., 1st ed. San Francisco: Pharmex, Ltd, 1979.
  3. AJ Giannini, AE Slaby, MC Giannini. The Handbook of Overdose and Detoxification Emergencies. New Hyde Park, NY. Medical Examination Publishing Co., 1982, pp.48-50.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: