ಸಕ್ರಿಯ ಇಂಗಾಲ , ವನ್ನು ಸಕ್ರಿಯ ಇದ್ದಿಲು ಅಥವಾ ಸಕ್ರಿಯ ಕಲ್ಲಿದ್ದಲು ಎಂದು ಕೂಡ ಕರೆಯಲಾಗುತ್ತದೆ. ಇದು ಇಂಗಾಲದ ರೂಪವಾಗಿದ್ದು ರಂಧ್ರಗಳಿಂದ ತುಂಬಿರುತ್ತದೆ. ಈ ಕಾರಣದಿಂದಾಗಿ ಹೊರಹೀರುವಿಕೆ ಅಥವಾ ರಾಸಾಯನಿಕ ಪ್ರಕ್ರಿಯೆಗಳಿಗೆ ಅತಿ ಹೆಚ್ಚು ಮೇಲ್ಮೈ ವಿಸ್ತೀರ್ಣ ಹೊಂದಿದೆ.[]

ಸಕ್ರಿಯ ಇಂಗಾಲ

ನಿಜ ಹೆಸರಿನಲ್ಲಿ ಸಕ್ರಿಯ ಗೊಂಡ ಎಂಬ ಪದದ ಬದಲಿಗೆ ಕೆಲವೊಮ್ಮೆ ಸಕ್ರಿಯ ಎಂಬ ಪದವನ್ನು ಬಳಸಲಾಗುತ್ತದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮವಾದ ರಂಧ್ರಗಳನ್ನು ಹೊಂದಿರುವುದರಿಂದ, ಕೇವಲ 1 ಗ್ರಾಂ ಸಕ್ರಿಯ ಇಂಗಾಲ 500 m2(ಪುಟ್ ಬಾಲ್ ಕ್ರೀಡಾಂಗಣದ ಹತ್ತನೇ ಒಂದು ಗಾತ್ರದಷ್ಟಿರುತ್ತದೆ.)ಗಿಂತ ಹೆಚ್ಚಿನ ಮೇಲ್ಮೈ ವಿಸ್ತೀರ್ಣ ಹೊಂದಿರುತ್ತದೆ. ಅಲ್ಲದೇ ವಿಶೇಷವಾಗಿ ಸಾರಜನಕ ಅನಿಲದ ಹೊರಹೀರುವಿಕೆಯಿಂದ ನಿರ್ಧರಿಸಲ್ಪಡುತ್ತದೆ. ರಾಸಾಯನಿಕ ವರ್ತನೆ ಮುಂದೆ ಯಾವಾಗಲೂ ವಸ್ತುವಿನಲ್ಲಿ ಹೀರಿಕೊಳ್ಳುವ ಅಂಶಗಳನ್ನು ಹೆಚ್ಚಿಸುತ್ತದೆಯಾದರೂ,ಉಪಯುಕ್ತ ಬಳಕೆಗಳಿಗಾಗಿ ಅಗತ್ಯವಿರುವ ಸಕ್ರಿಯಗೊಳಿಸುವಿಕೆ ಅತ್ಯಂತ ಹೆಚ್ಚು ಮೇಲ್ಮೈ ವಿಸ್ತೀರ್ಣದಿಂದ ನಿಧಾನವಾಗಿ ಬರಬಹುದು. ಸಕ್ರಿಯ ಇಂಗಾಲ ಸಾಮಾನ್ಯವಾಗಿ ಇದ್ದಿಲಿನಿಂದ ಹುಟ್ಟಿಕೊಂಡಿದೆ.

ಉತ್ಪಾದನೆ

ಬದಲಾಯಿಸಿ

ಸಕ್ರಿಯ ಇಂಗಾಲವೆಂಬುದು ಕಾಯಿಯ ಕರಟಗಳು, ಸಸ್ಯದಿದ್ದಿಲು, ಮರ, ತೆಂಗಿನ ನಾರು, ಕಂದು ಕಲ್ಲಿದ್ದಲು, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ನಿಕ್ಷೇಪ ದಂತಹ ಇಂಗಾಲ ಮೂಲದ ವಸ್ತುಗಳಿಂದ ಉತ್ಪಾದಿಸಲಾಗುವ ಇಂಗಾಲವಾಗಿದೆ. ಇದನ್ನು ಈ ಕೆಳಕಂಡ ವಿಧಾನಗಳ ಮೂಲಕ ಉತ್ಪಾದಿಸಬಹುದು:

  1. ನೈಸರ್ಗಿಕವಾಗಿ ಭೌತಿಕಮಟ್ಟದಲ್ಲಿ ಪುನಃ ಸಕ್ರಿಯಗೊಳಿಸುವಿಕೆ : ಅನಿಲಗಳನ್ನು ಬಳಸಿಕೊಂಡು ಪೂರ್ವವರ್ತಿಯನ್ನು ಸಕ್ರಿಯ ಇಂಗಾಲನ್ನಾಗಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಒಂದು ಅಥವಾ ಎರಡು ವಿಧಾನಗಳನ್ನು ಸೇರಿಸಿಕೊಂಡು ಮಾಡಲಾಗುತ್ತದೆ:
    • ಇಂಗಾಲೀಕರಣ :ಇಂಗಾಲದ ಅಂಶವನ್ನು ಹೊಂದಿರುವ ವಸ್ತುಗಳನ್ನು ಗಾಳಿ ಇಲ್ಲದಂತೆ (ಸಾಮಾನ್ಯವಾಗಿ ಆರ್ಗಾನ್ ಅಥವಾ ಸಾರಜನಕದ ದಂತಹ ಅನಿಲಗಳನ್ನು ನಿಶ್ಚಲಗೊಳಿಸಲಾದ ವಾತಾವರಣದಲ್ಲಿ) 600–900 °C ಮಟ್ಟದ ತಾಪಮಾನದಲ್ಲಿ ಉಷ್ಣದಿಂದ ವಿಭಜನೆಮಾಡುವುದು{/1.
    • ಸಕ್ರಿಯಗೊಳಿಸುವಿಕೆ/ಆಕ್ಸಿಡೀಕರಣ :ಕಚ್ಛಾ ವಸ್ತು ಅಥವಾ ಇಂಗಾಲೀಕರಿಸಿದ ವಸ್ತುವನ್ನು 250 °C, ಕ್ಕಿಂತ ಮೇಲೆ ಸಾಮಾನ್ಯವಾಗಿ 600–1200 °C. ಮಟ್ಟದ ತಾಪಮಾನದ ಆಕ್ಸಿಡೀಕರಿಸುವ ವಾತಾವರಣದಲ್ಲಿ (ಇಂಗಾಲದ ಡೆಆಕ್ಸೈಡ್, ಆಮ್ಲಜನಕ, ಅಥವಾ ಆವಿ) ಒಡ್ಡಲಾಗುತ್ತದೆ.
  2. ರಾಸಾಯನಿಕ ಸಕ್ರಿಯಗೊಳಿಸುವಿಕೆ : ಇಂಗಾಲೀಕರಣಗೊಳಿಸುವ ಮೊದಲು ಕಚ್ಛಾ ವಸ್ತುವನ್ನು ನಿರ್ದಿಷ್ಟವಾದ ರಾಸಾಯನಿಕಗಳೊಂದಿಗೆ ತುಂಬಲಾಗಿರುತ್ತದೆ. ವಿಶೇಷವಾಗಿ ಆಮ್ಲ, ತೀಕ್ಷ್ಣವಾದ ಪ್ರತ್ಯಾಮ್ಲೀಯ ಸಂಯುಕ್ತ, ಅಥವಾ ಉಪ್ಪು (ಫಾಸ್ಪರಿಕ್ ಆಮ್ಲ, ಪೊಟ್ಯಾಸಿಯಂ ಹೈಡ್ರಾಕ್ಸೈಡ್, ಸೋಡಿಯಂ ಹೈಡ್ರಾಕ್ಸೈಡ್, ಸತು ಕ್ಲೋರೈಡ್ ಗಳು ಅನುಕ್ರಮವಾಗಿ ರಾಸಾಯನಿಕಗಳಾಗಿವೆ). ಕಚ್ಛಾ ವಸ್ತುವನ್ನು ನಂತರ ಕಡಿಮೆ ತಾಪಮಾನದಲ್ಲಿ(450–900 °C) ಇಂಗಾಲೀಕರಿಸಬೇಕು. ಇಂಗಾಲೀಕರಣ / ಸಕ್ರಿಯಗೊಳಿಸುವಿಕೆಯ ಹಂತಗಳನ್ನು ರಾಸಾಯನಿಕ ಸಕ್ರಿಯಗೊಳಿಸುವಿಕೆಯ ಜೊತೆಯಲ್ಲಿ ಏಕಕಾಲದಲ್ಲಿ ಮುಂದುವರೆಸಲಾಗುತ್ತದೆ. ಭೌತಿಕ ಸಕ್ರಿಯಗೊಳಿಸುವಿಕೆ ಗಿಂತ ರಾಸಾಯನಿಕ ಸಕ್ರಿಯಗೊಳಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಏಕೆಂದರೆ ವಸ್ತುಗಳನ್ನು ಸಕ್ರಿಯಗೊಳಿಸಲು ಕಡಿಮೆ ಸಮಯ ಮತ್ತು ಕಡಿಮೆ ತಾಪಮಾನವನ್ನು ಇದು ಒಳಗೊಳ್ಳುತ್ತದೆ.

ವರ್ಗೀಕರಣಗಳು

ಬದಲಾಯಿಸಿ

ಸಕ್ರಿಯ ಇಂಗಾಲಗಳು ಸಂಕೀರ್ಣವಾದ ಉತ್ಪನ್ನಗಳಾಗಿದ್ದು ಇವುಗಳನ್ನು ಅವುಗಳ ವರ್ತನೆ , ಮೇಲ್ಮೈ ಗುಣಲಕ್ಷಣ ಮತ್ತು ಉತ್ಪಾದಿಸುವ ವಿಧಾನಗಳ ಆಧಾರದ ಮೇಲೆ ವರ್ಗೀಕರಿಸಲು ಕಷ್ಟವಾಗುತ್ತದೆ. ಆದರೂ, ಸಾರ್ವರ್ತ್ರಿಕ ಉದ್ದೇಶಕ್ಕಾಗಿ ಅವುಗಳ ಭೌತಿಕ ಗುಣಲಕ್ಷಣಗಳನ್ನು ಆಧರಿಸಿ ಅವುಗಳನ್ನು ಸ್ಥೂಲವಾಗಿ ವರ್ಗೀಕರಿಸಲಾಗಿದೆ.

ಸಕ್ರಿಯ ಇಂಗಾಲದ ಪುಡಿ(ಪೌಡರ್ಡ್ ಆಕ್ಟಿವೇಟೆಡ್ ಕಾರ್ಬನ್) (PAC)

ಬದಲಾಯಿಸಿ
 
ಬೆಳಕಿನ ಸೂಕ್ಷ್ಮ ದರ್ಶಕದ ಮೇಲೆ ಪ್ರಕಾಶಮಾನವಾದ ಬೆಳಕಿನಡಿಯಲ್ಲಿರುವ ಸಕ್ರಿಯ ಇಂಗಾಲದ ಮೈಕ್ರೋ ಛಾಯಚಿತ್ರ.ಕಣಗಳ ಫ್ರಾಕ್ಟಲ್ ನಂತಹ ಆಕಾರ ಅವುಗಳ ವಿಶಾಲವಾದ ಮೇಲ್ಮೈ ವಿಸ್ತೀರ್ಣದಲ್ಲಿ ಸೂಕ್ಷ್ಮ ಸೂಚನೆಯನ್ನು ನೀಡುತ್ತಿರುವುದನ್ನು ಗಮನಿಸಿ.ಈ ಚಿತ್ರದಲ್ಲಿರುವ ಪ್ರತಿ ಕಣವು ಸುತ್ತಲು ಕೇವಲ 0.1 mm ನಷ್ಟು ಅಗಲವನ್ನು ಹೊಂದಿದ್ದರು ಕೂಡ ಅನೇಕ ಚದರ ಮೀಟರ್ ಗಳ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ನೀರಿನಲ್ಲಿರುವ ಸಕ್ರಿಯ ಇಂಗಾಲದ ಈ ಚಿತ್ರ 6.236 pixels/μm ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಇಡೀ ಚಿತ್ರ ಸರಿಸುಮಾರು 1.1 by 0.7 mm ನಷ್ಟು ವಿಸ್ತೀರ್ಣದ ಪ್ರದೇಶವನ್ನು ಅವರಿಸಿಕೊಂಡಿದೆ.

ಸಾಂಪ್ರದಾಯಿಕವಾಗಿ ಸಕ್ರಿಯ ಇಂಗಾಲವನ್ನು ನಿರ್ದಿಷ್ಟವಾದ ರೂಪದಲ್ಲಿ ಪುಡಿಯಂತೆ ಮಾಡಲಾಗುತ್ತದೆ; ಅಥವಾ 1.0 mm ಗಿಂತ ಕಡಿಮೆ ಗಾತ್ರವನ್ನು ಹಾಗು ಸರಿಸುಮಾರು .15 ಮತ್ತು .25 mm. ನಷ್ಟು ವಿನ್ಯಾಸವನ್ನು ಹೊಂದಿರುವಂತಹ ಸಣ್ಣ ಕಣಗಳಂತೆ ಮಾಡಲಾಗುತ್ತದೆ.[] ಇದರಿಂದಾಗಿ ಅವು ಗಾತ್ರದ ಅನುಪಾತಕ್ಕೆ ಸ್ವಲ್ಪ ವಿಸರಣ ಪ್ರಮಾಣದೊಂದಿಗೆ ಹೆಚ್ಚು ಮೇಲ್ಮೈ ವಿಸ್ತೀರ್ಣವನ್ನು ನೀಡುತ್ತವೆ. PAC ಯನ್ನು ಪುಡಿಮಾಡಿದ ಅಥವಾ ಒಂದೇ ಅರೆಯುವಿಕೆಯಲ್ಲಿ ಅಥವಾ ಜಾಲರಿಯಲ್ಲಿ ಜಾಲಾಡಿದಾಗ ಕೆಳಗೆ ಉಳಿಯುವ 95–100% ರಷ್ಟು ತಳದಲ್ಲಿರುವ ಇಂಗಾಲದ ಅಂಶಗಳಿಂದ ಅದನ್ನು ಸಿದ್ದ ಮಾಡಲಾಗುತ್ತದೆ. ಸಣ್ಣ ಕಣಗಳಂತಿರುವ ಸಕ್ರಿಯ ಇಂಗಾಲವನ್ನು ಸಕ್ರಿಯ ಇಂಗಾಲವೆಂದು ವ್ಯಾಖ್ಯಾನಿಸಲಾಗುತ್ತದೆ. ಇದು 50-ಜಾಲರಿಯಲ್ಲಿ(0.297 mm)ಉಳಿದುಕೊಂಡಿರುತ್ತದೆ. ಅಲ್ಲದೇ ASTM 80-ಜಾಲರಿಗೆ (0.177 mm) ಅನುಗುಣವಾಗಿ ಮತ್ತು PAC ಯಂತೆ ಚಿಕ್ಕದಾಗಿ ಕಣಗಳನ್ನು ವಿಂಗಡಿಸುವಾಗ PAC ವಸ್ತು ಅಂತಿಮ ರೂಪಪಡೆದ ಮೃದುವಾದ ವಸ್ತುವಾಗುತ್ತದೆ. ಉತ್ಪಾದನೆಯಲ್ಲಿ ಉಂಟಾಗುವ ಹೆಚ್ಚು ನಷ್ಟದ ಕಾರಣ PACಯನ್ನು ಸಾಮಾನ್ಯವಾಗಿ ಮೀಸಲಿರಿಸಲಾದ ಪಾತ್ರೆಗಳಲ್ಲಿ ಬಳಸುವುದಿಲ್ಲ. ಸಾಮಾನ್ಯವಾಗಿ PAC ಯನ್ನು ಮೂಲ ರೂಪದ ನೀರು ತೆಗೆದುಕೊಳ್ಳುವ ಸ್ಥಳ,ಶೀಘ್ರವಾಗಿ ಬೆರೆಸಬಲ್ಲ ಬೋಗುಣಿ, ಸ್ವಚ್ಛಕಾರಿ, ಮತ್ತು ಸ್ವಯಂ ಶೋಧಕದಂತಹ ಕಾರ್ಯವಿಧಾನದ ಇತರ ಘಟಕಗಳೊಂದಿಗೂ ನೇರವಾಗಿ ಸೇರಿಸಲಾಗುತ್ತದೆ.

ಕಣದಂತಿರುವ ಸಕ್ರಿಯ ಇಂಗಾಲ (ಗ್ರ್ಯಾನ್ಯುಲರ್ ಆಕ್ಟಿವೇಟೆಡ್ ಕಾರ್ಬನ್)(GAC)

ಬದಲಾಯಿಸಿ

ಕಣದಂತಿರುವ ಸಕ್ರಿಯ ಇಂಗಾಲವನ್ನು ಪುಡಿ ಮಾಡಲಾದ ಸಕ್ರಿಯ ಇಂಗಾಲಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ದೊಡ್ಡ ಕಣಗಳ ಗಾತ್ರವನ್ನು ಹೊಂದಿರುತ್ತದೆ. ಇದರಿಂದಾಗಿ ಚಿಕ್ಕದಾದ ಹೋರಮೇಲ್ಮೈ ವಿಸ್ತೀರ್ಣವನ್ನು ನೀಡುತ್ತದೆ. ಆದ್ದರಿಂದ ಹೊರಗಿನಿಂದ ಹೀರಿಕೊಂಡ ದ್ರವ್ಯದ ಪ್ರಸರಣವು ಪ್ರಮುಖ ವಿಷಯವಾಗಿದೆ. ಆದ್ದರಿಂದ ಈ ಇಂಗಾಲಗಳು ಎಲ್ಲಾ ಅನಿಲಗಳ ಹೊರಹೀರುವಿಕೆ ಮತ್ತು ಪ್ರಸಾರಗೊಳ್ಳುವ ಪ್ರಮಾಣವನ್ನು ಹೆಚ್ಚಿಸಲು ಆವಿಯಾಗುವುದಕ್ಕೆ ಆದ್ಯತೆ ನೀಡುತ್ತವೆ. ಕಣಕಣವಾಗಿ ಮಾಡಿದಂತಹ ಇಂಗಾಲಗಳನ್ನು ನೀರನ್ನು ಸ್ವಚ್ಛಗೊಳಿಸಲು, ವಾಸನೆ ಕಳೆಯಲು ಮತ್ತು ಹರಿಯುವ ವ್ಯವಸ್ಥೆಯಲ್ಲಿ ಘಟಕಗಳನ್ನು ಬೇರ್ಪಡಿಸಲು ಬಳಸಲಾಗುತ್ತದೆ. GAC ಕಣದ ರೂಪದಲ್ಲಿರಬಹುದು ಅಥವಾ ಉದ್ದೇಶಿತ ರೂಪದಲ್ಲಿರಬಹುದು. GAC ದ್ರವರೂಪದ ಹಂತದಲ್ಲಿರುವ ಅನ್ವಯಿಕೆಗಳಲ್ಲಿ 8×20, 20×40, ಅಥವಾ 8×30 ಯಷ್ಟು ಗಾತ್ರವನ್ನು ಹೊಂದಿರುತ್ತದೆ ಹಾಗು ಆವಿ ರೂಪದ ಅನ್ವಯಿಕೆಗಳಲ್ಲಿ 4×6, 4×8 or 4×10 ಯಷ್ಟು ಗಾತ್ರವನ್ನು ಹೊಂದಿರುತ್ತದೆ. 20×40 ಗಾತ್ರದ ಇಂಗಾಲವನ್ನು U.S. ನಿಂದ ಪ್ರಮಾಣೀಕರಿಸಲಾದ ಜಾಲರಿ ಸಂಖ್ಯೆ 20 ಜಾಲರಿ (0.84 mm) ಯಲ್ಲಿ(ಸಾಮಾನ್ಯವಾಗಿ 85% ಪ್ರತಿಶತ ಸಾಗುತ್ತದೆ ಎಂದು ಹೇಳಲಾಗಿದೆ.) ಸಾಗಬಹುದಾದ ಕಣದ ರೂಪದಲ್ಲಿ ಮಾಡಲಾಗುತ್ತದೆ. ಆದರೆ U.S. ನಿಂದ ಪ್ರಮಾಣೀಕರಿಸಲಾದ ಅದರ ರಂಧ್ರಗಳ ಪ್ರಮಾಣಿತ ಸಂಖ್ಯೆ 40 ಅಥವಾ ಜಾಲರಿ ರೂಪದಲ್ಲಿನ ಇಂಗಾಲದ ಕಣಗಳು (0.42 mm) (ಸಾಮಾನ್ಯವಾಗಿ 95% ಪ್ರತಿಶತ ಉಳಿದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.)ಇದರಲ್ಲಿ ಉಳಿದುಕೊಳ್ಳುತ್ತವೆ. AWWA (1992) B604, 50-ತೂತುಗಳ ಜಾಲರಿ (0.297 mm) ಯನ್ನು GAC ಯ ಕನಿಷ್ಠ ಗಾತ್ರವಾಗಿ ಬಳಸುತ್ತದೆ. ಅತ್ಯಂತ ಪ್ರಸಿದ್ಧವಾಗಿರುವ ಜಲರೂಪದ ಇಂಗಾಲಗಳು 12×40 ಮತ್ತು 8×30 ಗಾತ್ರವನ್ನು ಹೊಂದಿವೆ, ಏಕೆಂದರೆ ಅವುಗಳು ಗಾತ್ರದ , ಮೇಲ್ಮೈ ವಿಸ್ತೀರ್ಣ ಮತ್ತು ಹೆಡ್ ಲಾಸ್ ಗುಣಲಕ್ಷಣಗಳ ಉತ್ತಮ ಸಮತೋಲನ ಹೊಂದಿವೆ.

ಉದ್ದೇಶಿತ ರೂಪದ ಸಕ್ರಿಯ ಇಂಗಾಲ (ಎಕ್ಸ್ ಟ್ರೂಡ್ ಆಕ್ಟಿವೇಟೆಡ್ ಕಾರ್ಬನ್)(EAC)

ಬದಲಾಯಿಸಿ

ಉದ್ದೇಶಿತ ರೂಪದ ಸಕ್ರಿಯ ಇಂಗಾಲವು ಪುಡಿರೂಪದ ಸಕ್ರಿಯ ಇಂಗಾಲವನ್ನು ಸಂಯೋಜಕದೊಂದಿಗೆ ಬೆರೆಸುತ್ತದೆ. ಇದರಿಂದಾಗಿ ಇವೆರೆಡು ಸಂಯೋಜನೆಗೊಂಡು ಸಿಲಿಂಡರಾಕಾರದ ಸಕ್ರಿಯ ಇಂಗಾಲದ ಭಾಗವಾಗುತ್ತವೆ. ಇವು 0.8 to 130 mm ನಷ್ಟು ವ್ಯಾಸವನ್ನು ಹೊಂದಿರುತ್ತವೆ. ಇವುಗಳನ್ನು ಪ್ರಮುಖವಾಗಿ ಅನಿಲರೂಪದ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಅವುಗಳು ಕಡಿಮೆ ಒತ್ತಡದ ಹನಿಯನ್ನು, ಹೆಚ್ಚು ಯಾಂತ್ರಿಕ ಶಕ್ತಿಯನ್ನು ಹಾಗು ಕಡಿಮೆ ಧೂಳಿನ ಅಂಶವನ್ನು ಹೊಂದಿರುತ್ತವೆ.

ವ್ಯಾಪಕತೆ ಪಡೆದಿರುವ ಇಂಗಾಲ

ಬದಲಾಯಿಸಿ

ರಂಧ್ರಗಳಿರುವ ಇಂಗಾಲಗಳು ಅಯೊಡಿನ್, ರಜತ, ಧನ ಅಯಾನುಗಳು ಉದಾಹರಣೆಗೆ Al, Mn, Zn, Fe, Li, Ca ನಂತಹ ಅನೇಕ ವಿಧದ ಅಕಾರ್ಬನಿಕ ಪೂರಿತ ಇಂಗಾಲವನ್ನು ಒಳಗೊಂಡಿರುತ್ತವೆ. ಅಲ್ಲದೇ ಅವುಗಳನ್ನು ವಿಶೇಷವಾಗಿ ವಸ್ತು ಸಂಗ್ರಹಾಲಯ ಮತ್ತು ಗ್ಯಾಲರಿಗಳಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಂತಹ ನಿರ್ಧಿಷ್ಟ ಬಳಕೆಗಾಗಿ ಸಿದ್ಧಗೊಳಿಸಲಾಗಿರುತ್ತದೆ. ಸೂಕ್ಷ್ಮ ಜೀವಿ ಪ್ರತಿರೋಧಕ/ರೋಗಾಣುನಾಶಕ ಗುಣಗಳಿಂದಾಗಿ ಬೆಳ್ಳಿ ತುಂಬಿದ ಸಕ್ರಿಯ ಇಂಗಾಲವನ್ನು ಗೃಹಬಳಕೆಯ ನೀರಿನ ಶುದ್ಧೀಕರಣಕ್ಕೆ ಹೊರಹೀರುಗನಾಗಿ ಬಳಸಲಾಗುತ್ತದೆ. ನೈಸರ್ಗಿಕ ಜಲದೊಡನೆ ಸಕ್ರಿಯ ಇಂಗಾಲವನ್ನು ಮತ್ತು Al(OH)3, ಬೊಂತೆ ಕಟ್ಟುವ ಕಾರಕವನ್ನು ಸೇರಿಸಿ ನೈಸರ್ಗಿಕ ಜಲದಿಂದ ಕುಡಿಯುವ ನೀರನ್ನು ಪಡೆಯಬಹುದು. ಸಿದ್ಧಗೊಳಿಸಲಾದ ಇಂಗಾಲಗಳನ್ನು H2S ಮತ್ತು ಥಯಾಲ್ ಗಳ ಹೊರಹೀರುವಿಕೆಗೂ ಕೂಡ ಬಳಸಲಾಗುತ್ತದೆ. H2S ನ ಹೊರಹೀರುವಿಕೆಯ ಪ್ರಮಾಣ ಅದರ ತೂಕದ 50%ರಷ್ಟು ಹೆಚ್ಚಿರುತ್ತದೆ.

ಪಾಲಿಮರ್ ಲೇಪಿಸಲಾದ ಇಂಗಾಲ

ಬದಲಾಯಿಸಿ

ಇದು ಸೂಕ್ಷ್ಮ ರಂಧ್ರಗಳನ್ನು ಮುಚ್ಚದೆ ಮೃದುವಾದ ಮತ್ತು ಒಳಹೋಗಲು ಸಾಧ್ಯವಿರುವ ಲೇಪನವನ್ನು ನೀಡಲು ರಂಧ್ರಗಳಿರುವ ಇಂಗಾಲಕ್ಕೆ ಜೈವಿಕ ಹೊಂದಾಣಿಕೆ ಇರುವ ಪಾಲಿಮರ್ ಅನ್ನು ಲೇಪಿಸುವ ವಿಧಾನವಾಗಿದೆ. ಹೀಗೆ ಲೇಪಿಸಲಾದ ಇಂಗಾಲವು ಹೆಮೋಫರ್ಫ್ಯುಷನ್(ರೋಗಿಯ ರಕ್ತದಿಂದ ವಿಷವನ್ನು ತೆಗೆಯುವ ವಿಧಾನ) ಕ್ರಿಯೆಗೆ ಹೆಚ್ಚು ಉಪಯುಕ್ತವಾಗಿದೆ. ಹೆಮೋಪರ್ಫ್ಯೂಷನ್ ಎಂಬುದು ರಕ್ತದಲ್ಲಿರುವ ವಿಷವಸ್ತುವನ್ನು ತೆಗೆದುಹಾಕಲು ರೋಗಿಯ ರಕ್ತದ ಹೆಚ್ಚಿನ ಪ್ರಮಾಣವನ್ನು ಹೊರಹೀರುವ ದ್ರವ್ಯದ ಮೇಲೆ ಕೊಂಡೊಯ್ಯಲಾಗುವ ಚಿಕಿತ್ಸಾ ವಿಧಾನವಾಗಿದೆ.

ಸಕ್ರಿಯ ಇಂಗಾಲ ಬಟ್ಟೆ ಮತ್ತು ನಾರುಗಳಂತಹ ವಿಶೇಷರೂಪದಲ್ಲಿಯೂ ಕಂಡುಬರುತ್ತದೆ. ಉದಾಹರಣೆಗೆ "ಇಂಗಾಲ ಬಟ್ಟೆಯನ್ನು" ಮಿಲಿಟರಿಯ ಸೇವಕ ವರ್ಗದ ರಕ್ಷಣೆಗೆ ಬಳಸಲಾಗುತ್ತದೆ.

ಜಾತಿಲಕ್ಷಣ

ಬದಲಾಯಿಸಿ

ಸಕ್ರಿಯ ಇಂಗಾಲದ ಒಂದು ಗ್ರಾಂ 500 m2 ನಷ್ಟು ಮೇಲ್ಮೈ ವಿಸ್ತೀರ್ಣವನ್ನು ಒಳಗೊಂಡಿದ್ದು, 1500 m2 ನಷ್ಟು ಮೇಲ್ಮೈ ವಿಸ್ತೀರ್ಣವನ್ನು ಸುಲಭವಾಗಿ ಪಡೆಯಬಲ್ಲದು.[] ಇಂಗಾಲದ ಏರೋಜೆಲ್ ಗಳು ಅತ್ಯಂತ ಹೆಚ್ಚು ಮೇಲ್ಮೈ ವಿಸ್ತೀರ್ಣಗಳನ್ನು ಹೊಂದಿದ್ದರೂ ಕೂಡ ಅತ್ಯಂತ ದುಬಾರಿಯಾಗಿವೆ. ಅಲ್ಲದೇ ಇವುಗಳನ್ನು ವಿಶೇಷವಾದ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ.

ಚಿತ್ರ:Activated-carbon.jpg
ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ನೋಡಲಾದ ಸಕ್ರಿಯ ಇಂಗಾಲ

ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಸಕ್ರಿಯ ಇಂಗಾಲದ ಅತ್ಯಂತ ಹೆಚ್ಚು ಮೇಲ್ಮೈ ವಿಸ್ತೀರ್ಣದ ರಚನಾ ವಿನ್ಯಾಸವನ್ನು ತೋರಿಸಲಾಗಿದೆ. ಪ್ರತ್ಯೇಕ ಕಣಗಳು ಅತಿಯಾಗಿ ಸುರುಳಿಸುತ್ತಿಕೊಂಡಿರುತ್ತವೆ, ಮತ್ತು ಸರಂಧ್ರತೆಯ ಅನೇಕ ವಿಧಗಳನ್ನು ತೋರಿಸುತ್ತವೆ;ಗ್ರಾಫೈಟ್ ನಂತಹ ವಸ್ತು ಹೇಗೆ ಸಮದಟ್ಟಗಿರುವಂತೆ ತೋರುತ್ತದೆಯೋ ಅಂತಹ ಸಮತಲವಾದ ಮೇಲ್ಮೈಅನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮ ಕಣಗಳು ಮಾತ್ರ ಬೇರ್ಪಡಿಸಬಲ್ಲವು. ಹೀರಿಕೊಳ್ಳುವ ವಸ್ತು ಏಕಕಾಲದಲ್ಲಿ ಅನೇಕ ವಸ್ತುಗಳೊಂದಿಗೆ (ಮೇಲ್ಮೈ)ಪರಸ್ಪರ ಕಾರ್ಯ ನಡೆಸುತ್ತಿದ್ದರೂ ಕೂಡ ಈ ಸೂಕ್ಷ್ಮರಂಧ್ರಗಳು ಹೊರಹೀರುವಿಕೆ ಕ್ರಿಯೆಗೆ ಬೇಕಾಗುವ ಉತ್ತಮ ಸ್ಥಿತಿಯನ್ನು ಕಲ್ಪಿಸಿಕೊಡುತ್ತವೆ. ಹೊರಹೀರುವಿಕೆಯ ಗುಣಲಕ್ಷಣದ ಪರೀಕ್ಷೆಯನ್ನು ಸಾಮಾನ್ಯವಾಗಿ 77 K ಡಿಗ್ರಿಯಲ್ಲಿ ಅತ್ಯಂತ ಹೆಚ್ಚು ನಿರ್ವಾತ ಪ್ರದೇಶದಡಿಯಲ್ಲಿ ಸಾರಜನಕ ಅನಿಲದ ಮೂಲಕ ಮಾಡಲಾಗುತ್ತದೆ. ಆದರೆ ದಿನನಿತ್ಯದ ಅವಧಿಯಲ್ಲಿ ಸಕ್ರಿಯ ಇಂಗಾಲ ಅದರ ವಾತಾವರಣದಿಂದ, ಅಂದರೆ 100 °C ನಷ್ಟು ಆವಿಯನ್ನು ಹೊಂದಿರುವ ದ್ರವರೂಪದಲ್ಲಿರುವ ನೀರು ಮತ್ತು ವಾಯುಮಂಡಲದ 1/10,೦೦೦ ನಷ್ಟು ಒತ್ತಡವನ್ನು ಹೊಂದಿರುವ ವಾತಾವರಣದಿಂದ ಹೊರಹೀರುವಿಕೆ ಕ್ರಿಯೆಯ ಮೂಲಕ ಸಮಾನವಾದುದನ್ನು ಉತ್ಪಾದಿಸುವ ಸರಿಯಾದ ಸಾಮರ್ಥ್ಯ ಹೊಂದಿದೆ.

ವ್ಯಾನ್ ಡರ್ ವಾಲ್ಸ್ ಫೋರ್ಸ್ ಅಥವಾ ಲಂಡನ್ ಡಿಸ್ಪರ್ಷನ್ ಫೋರ್ಸ್ ನಿಂದ ಭೌತಿಕವಾಗಿ ಸಕ್ರಿಯಗೊಂಡ ಇಂಗಾಲದ ಬಂಧಕಗಳ ವಸ್ತುಗಳು.

ಸಕ್ರಿಯ ಇಂಗಾಲವು ಆಲ್ಕಹಾಲ್ ಗಳು, ಗ್ಲೈಕಾಲ್ ಗಳು, ತೀವ್ರವಾದ ಆಮ್ಲಗಳು ಮತ್ತು ಪ್ರತ್ಯಾಮ್ಲ, ಲೋಹಗಳು ಹಾಗು ಲಿತಿಯಂ, ಸೋಡಿಯಂ, ಕಬ್ಬಿಣ, ಸೀಸ, ಆರ್ಸನಿಕ್, ಫ್ಲೋರೀನ್, ಮತ್ತು ಬೋರಿಕ್ ಆಮ್ಲ ಗಳಂತಹ ಅತ್ಯಂತ ಅಕಾರ್ಬನಿಕಗಳನ್ನು ಒಳಗೊಂಡಂತೆ ಕೆಲವೊಂದು ರಾಸಾಯನಿಕಗಳ ಜೊತೆ ಬಂಧಿಸುವುದಿಲ್ಲ.

ಸಕ್ರಿಯ ಇಂಗಾಲ ಅಯೊಡಿನ್ ಅನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಅಲ್ಲದೇ ಅಯೊಡಿನ್ ಸಂಖ್ಯೆ, mg/g(ASTM D28 ಸ್ಟ್ಯಾಂಡರ್ಡ್ ಮೆಥೆಡ್ ಟೆಸ್ಟ್)ಯನ್ನು ಒಟ್ಟು ಮೇಲ್ಮೈ ವಿಸ್ತೀರ್ಣವನ್ನು ಸೂಚಿಸಲು ಬಳಸಲಾಗುತ್ತದೆ.

ವೆಬ್ ನ ಉದ್ದಕ್ಕೂ ಹೇಳಲಾಗಿರುವುದಕ್ಕೆ [ಸೂಕ್ತ ಉಲ್ಲೇಖನ ಬೇಕು] ವ್ಯತಿರಿಕ್ತವಾಗಿ ಸಕ್ರಿಯ ಇಂಗಾಲ ಅನಿಲರೂಪದ ಅಮೋನಿಯವನ್ನು ಬಂಧಿಸುತ್ತದೆ. ಅಲ್ಲದೇ ಇದನ್ನು ಅನೇಕ ಡಯಾಸೋ ನಕಲು ಮಾಡಲಾಗದ ಯಂತ್ರಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ.

ಸಕ್ರಿಯ ಇಂಗಾಲವನ್ನು ಅನೇಕ ರಾಸಾಯನಿಕ ಅನ್ವಯಿಕೆಗಳಲ್ಲಿ ಹೈಡ್ರೋಜನ್ ಸಲ್ಫೈಡ್ (H2S), ಅಮೋನಿಯ (NH3), ಫಾರ್ಮ್ಯಾಲ್ಡಿಹೈಡ್ (HCOH), ರೇಡಿಯೋ ಐಸೊಟೋಪ್ ಅಯೊಡಿನ್-131(131I) ಮತ್ತು ಪಾದರಸ (Hg)ಗಳಂತಹ ಕೆಲವು ಅಕಾರ್ಬನಿಕ(ಮತ್ತು ಸಮಸ್ಯಾತ್ಮಕ ಕಾರ್ಬನಿಕ) ಸಂಯುಕ್ತಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಮೇಲ್ಮೈಯಾಗಿ ಬಳಸಬಹುದು. ಈ ವಸ್ತುವನ್ನು ಕೆಮಿಸಾರ್ಪಷನ್(ಬಾಹ್ಯ ಚೂಷಣೆ)ಎಂದು ಕರೆಯಲಾಗುತ್ತದೆ.

ಅಯೊಡಿನ್ ಪರಮಾಣು ಸಂಖ್ಯೆ

ಅನೇಕ ಇಂಗಾಲಗಳು ಸಣ್ಣ ಕಣಗಳನ್ನು ಹೆಚ್ಚಾಗಿ ಹೀರಿಕೊಳ್ಳುತ್ತವೆ. ಅಯೊಡಿನ್ ಪರಮಾಣುಸಂಖ್ಯೆ ಸಕ್ರಿಯ ಇಂಗಾಲದ ಕ್ರಿಯೆಯನ್ನು ನಿರೂಪಿಸುವ ಮೂಲಭೂತ ಪರಿಮಾಣವಾಗಿದೆ. ಇದು ಕ್ರಿಯೆಯ (ಹೆಚ್ಚಿನ ಸಂಖ್ಯೆ ಸಕ್ರಿಯಗೊಳಿಸುವಿಕೆ ಹೆಚ್ಚಿನ ಹಂತವನ್ನು ಸೂಚಿಸುತ್ತದೆ) ಅಳತೆಗೋಲಾಗಿದ್ದು, ಯಾವಾಗಲೂ ಇದನ್ನು mg/g (500–1200 mg/g ವಿಶೇಷವಾದ ಪ್ರಮಾಣದಲ್ಲಿ) ಗಳಲ್ಲಿ ತೋರಿಸುತ್ತದೆ. ಕರಗುವ ಮೂಲಕ ಅಯೋಡಿನ್ ನನ್ನು ಹೀರಿಕೊಳ್ಳುವುದು ಸಕ್ರಿಯ ಇಂಗಾಲದ(0 ರಿಂದ 20 Å, ಅಥವಾ 2 nm ನ ವರೆಗೆ)ಸೂಕ್ಷ್ಮ ಕಣಗಳ ಗಾತ್ರದ ಅಳತೆಯಾಗಿದೆ. 900 m²/g ಮತ್ತು 1100 m²/g ನಡುವೆ ಇರುವ ಇಂಗಾಲದ ಮೇಲ್ಮೈ ವಿಸ್ತೀರ್ಣಕ್ಕೆ ಸಮಾನವಾಗಿದೆ. ಇದು ದ್ರವರೂಪದ ಅನ್ವಯಿಕೆಗಳಿಗೆ ಪ್ರಮಾಣೀಕರಿಸಲಾದ ಮಾಪನವಾಗಿದೆ.

ಶೇಷ ಶೋಧಿಸುವಿಕೆಯಲ್ಲಿ ಅಯೋಡಿನ್ ಸಾಂದ್ರತೆ ಸಹಜವಾಗಿ 0.02 ರಷ್ಟಿದಾಗ ಒಂದು ಗ್ರಾಂ ಇಂಗಾಲ ಹೀರಿಕೊಂಡಂತಹ ಅಯೋಡಿನ್ ನ ಮಿಲಿಗ್ರಾಂ ಅಯೋಡಿನ್ ಪರಮಾಣು ಸಂಖ್ಯೆಯಾಗಿದೆ. ಮೂಲತಃ ಅಯೊಡಿನ್ ಪರಮಾಣು ಸಂಖ್ಯೆಯು ಸೂಕ್ಷ್ಮ ರಂಧ್ರಗಳಲ್ಲಿ ಹೀರಿಕೊಂಡಿರುವ ಅಯೊಡಿನ್ ನ ಮಾಪನವಾಗಿದೆ. ಅಲ್ಲದೇ ಇದು ಸಕ್ರಿಯ ಇಂಗಾಲದಲ್ಲಿರುವ ಸೂಕ್ಷ್ಮ ರಂಧ್ರಗಳ ಗಾತ್ರವನ್ನು ಸೂಚಿಸುತ್ತದೆ. ಜಲಶುದ್ಧೀಕರಣ ಇಂಗಾಲಗಳು ವಿಶೇಷವಾಗಿ 600 ರಿಂದ 1100 ರವರೆಗಿನ ಅಯೊಡಿನ್ ಸಂಖ್ಯೆಯನ್ನು ಹೊಂದಿರುತ್ತವೆ. ಸಾಧಾರಣವಾಗಿ, ಈ ಪರಿಮಾಣವನ್ನು ಬಳಕೆಯಲ್ಲಿ ಇಂಗಾಲದ ಬರಿದಾಗುವಿಕೆಯ ಮಟ್ಟವನ್ನು ನಿರ್ಧರಿಸಲು ಬಳಸಲಾಗುತ್ತದೆ. ಅದೇನೇ ಅದರೂ, ಹೀರಿಕೊಂಡ ದ್ರವ್ಯ ತಪ್ಪು ಫಲಿತಾಂಶವನ್ನು ನೀಡುವ ಮೂಲಕ ಗ್ರಹಿಸಿಕೊಂಡ ಅಯೊಡಿನ್ ನ ಮೇಲೆ ಪರಿಣಾಮವನ್ನು ಬೀರಿ ರಾಸಾಯನಿಕ ಪ್ರತಿಕ್ರಿಯೆ ಉಂಟುಮಾಡುತ್ತದೆ. ಆದ್ದರಿಂದ ಈ ಪದ್ದತಿಯನ್ನೂ ಎಚ್ಚರಿಕೆಯಿಂದ ಅನುಸರಿಸಬೇಕಾಗಿದೆ. ಆದ್ದರಿಂದ , ಅಯೊಡಿನ್ ಪರಮಾಣು ಸಂಖ್ಯೆ ಹೀರಿಕೊಂಡ ದ್ರವ್ಯದ ಜೊತೆಯಲ್ಲಿ ಯಾವುದೇ ರೀತಿಯ ರಾಸಾಯನಿಕ ಪರಿಣಾಮ ಉಂಟಾಗುವುದಿಲ್ಲವೆಂದು ಖಚಿತವಾದ ಮೇಲೆ ಅದನ್ನು ಕಾರ್ಬನ್ ಬೆಡ್ ನ ಬರಿದಾಗುವಿಕೆಯ ಮಟ್ಟದ ಮಾಪನವಾಗಿ ಬಳಸಲು ಶಿಫಾರಸ್ಸು ಮಾಡಲಾಗುತ್ತದೆ. ಅಲ್ಲದೇ ಅಯೊಡಿನ್ ಪರಮಾಣು ಸಂಖ್ಯೆ ಮತ್ತು ಬರಿದಾಗುವಿಕೆಯ ಮಟ್ಟದ ನಡುವೆ ಇರುವ ಪ್ರಯೋಗಾತ್ಮಕ ಸಂಬಂಧವನ್ನು ನಿರ್ದಿಷ್ಟ ಅನ್ವಯಿಕೆಗಾಗಿ ನಿರ್ಧರಿಸಲಾಗುತ್ತದೆ.

ಸಕ್ಕರೆ ಚರಟ

ಕೆಲವು ಇಂಗಾಲಗಳು ದೊಡ್ಡ ಕಣಗಳನ್ನು ಹೀರಿಕೊಳ್ಳಲು ಹೆಚ್ಚು ಸಮರ್ಥವಾಗಿರುತ್ತವೆ. ಸಕ್ಕರೆ ಚರಟದ ಪರಮಾಣು ಸಂಖ್ಯೆ ಅಥವಾ ಸಕ್ಕರೆ ಚರಟದ ಸಾಮರ್ಥ್ಯವು ಸಕ್ರಿಯ ಇಂಗಾಲದಲ್ಲಿರುವ ಮೆಸೊಪೋರ್ ನ ಮಾಪನವಾಗಿದೆ.( 20 Åಗಿಂತ ಹೆಚ್ಚು, ಅಥವಾ 2 nmಗಿಂತ ದೊಡ್ಡದು).ಇದನ್ನು ಕರಗುವಿಕೆಯ ಪ್ರಮಾಣದ ಮೇಲೆ ಸಕ್ಕರೆ ಚರಟ ಗಳ ಹೀರಿಕೊಳ್ಳುವಿಕೆ ಮೂಲಕ ಮಾಡಲಾಗುತ್ತದೆ. ಹೆಚ್ಚು ಸಕ್ಕರೆ ಚರಟದ ಪರಮಾಣು ಸಂಖ್ಯೆ ದೊಡ್ಡ ಕಣಗಳನ್ನು ಹೆಚ್ಚಾಗಿ ಹೀರಿಕೊಳ್ಲುತ್ತವೆ ಎಂಬುದನ್ನು ಸೂಚಿಸುತ್ತದೆ.(ಮಟ್ಟ 95–600). ಸುಟ್ಟ ಸಕ್ಕರೆ dp (ಡಿಕಲರೈಸಿಂಗ್ ಪರ್ಫಾಮೆನ್ಸ್) ಸಕ್ಕರೆ ಚರಟದ ಪರಮಾಣುಸಂಖ್ಯೆಗೆ ಸಮನಾಗಿರುತ್ತದೆ. ಸಕ್ಕರೆ ಚರಟದ ಸಾಮರ್ಥ್ಯವನ್ನು ಪ್ರತಿಶತ (ಮಟ್ಟ 40%–185%) ಮತ್ತು ಸಮಾಂತರದ ಸಕ್ಕರೆ ಚರಟ ಪರಮಾಣುಸಂಖ್ಯೆಯ(600 = 185%, 425 = 85%) ರೂಪದಲ್ಲಿ ವರದಿಮಾಡಲಾಗಿದೆ. ಯುರೋಪಿಯನ್ ಸಕ್ಕರೆ ಚರಟದ ಪರಮಾಣು ಸಂಖ್ಯೆ (range 525–110) ಉತ್ತರ ಅಮೇರಿಕದ ಸಕ್ಕರೆ ಚರಟದ ಪರಮಾಣು ಸಂಖ್ಯೆಗೆ ವಿರುದ್ಧವಾಗಿದೆ.

ಸಕ್ಕರೆ ಚರಟದ ಪರಮಾಣು ಸಂಖ್ಯೆಯು ಪ್ರಮಾಣೀಕರಿಸಲಾದ ಸಕ್ಕರೆ ಕರಗುವಿಕೆ ಮಟ್ಟದ ವಿವರ್ಣಗೊಳಿಸುವಿಕೆಯ ಮಾಪನವಾಗಿದೆ. ಇದನ್ನು ಬಣ್ಣಗುಂದಿಸಲಾಗಿರುತ್ತದೆ, ಅದನ್ನು ಪ್ರಮಾಣೀಕರಿಸಲಾದ ಸಕ್ರಿಯ ಇಂಗಾಲದ ವಿರುದ್ಧ ಪ್ರಮಾಣೀಕರಿಸಲಾಗಿದೆ. ವರ್ಣ ರಂಧ್ರಗಳ ಗಾತ್ರದಿಂದಾಗಿ ಸಕ್ಕರೆ ಚರಟ ದೊಡ್ಡ ಪ್ರಮಾಣದಲ್ಲಿ ಹೀರಿಕೊಳ್ಳುವ ವಿಧಗಳಿಗಾಗಿ ಇರುವ ಪ್ರಬಲ ರಂಧ್ರಗಳ ಪ್ರಮಾಣವನ್ನು ಸೂಚಿಸುತ್ತದೆ. ನಿರ್ದಿಷ್ಟವಾದ ತ್ಯಾಜ್ಯ ನೀರಿನ ಅನ್ವಯಿಕೆಯಲ್ಲಿ ಹೀರಿಕೊಳ್ಳಲು ಬೇಕಾದ ಎಲ್ಲಾ ರಂಧ್ರಗಳ ಪ್ರಮಾಣ ಇಲ್ಲದಿರಬಹುದು. ಅಲ್ಲದೇ ಸ್ವಲ್ಪ ಹೀರಿಕೊಡ ದ್ರವ್ಯ ಚಿಕ್ಕ ರಂಧ್ರಗಳನ್ನು ಪ್ರವೇಶಿಸಬಹುದು. ಇದು ಪ್ರತ್ಯೇಕ ಅನ್ವಯಿಕೆಗಾಗಿರುವ ನಿರ್ದಿಷ್ಟ ಸಕ್ರಿಯ ಇಂಗಾಲದ ಸರಿಯಾದ ಮಾಪನವಲ್ಲ. ಸಾಧಾರಣವಾಗಿ, ಈ ಪರಿಮಾಣ ಸಕ್ರಿಯ ಇಂಗಾಲ ಸರಣಿಗಳ ಹೀರುವಿಕೆಯ ಪ್ರಮಾಣಕ್ಕಾಗಿ ಅವುಗಳ ಪರಿಮಾಣ ನಿರ್ಧರಿಸಲು ಉಪಯುಕ್ತವಾಗಿವೆ. ಹೀರುವಿಕೆಗೆ ಬೇಕಾದ ಎರಡು ಸಕ್ರಿಯ ಇಂಗಾಲದ ಜೊತೆಯಲ್ಲಿ ಸಮನಾದ ರಂಧ್ರಗಳ ಪ್ರಮಾಣವನ್ನು ಕೊಟ್ಟಾಗ,ಇವುಗಳಲ್ಲಿ ಸಕ್ಕರೆ ಚರಟದ ಅತ್ಯಂತ ಹೆಚ್ಚು ಪರಮಾಣು ಸಂಖ್ಯೆಯನ್ನು ಹೊಂದಿರುವ ಒಂದು ಸಕ್ರಿಯ ಇಂಗಾಲವು ಸಾಮಾನ್ಯವಾಗಿ ಹೆಚ್ಚು ಹೀರಿಕೊಳ್ಳುವ ರಂಧ್ರಗಳನ್ನು ಹೊಂದಿರುತ್ತವೆ.ಇದರಿಂದಾಗಿ ಅದು ಹೀರಿಕೊಳ್ಳುವ ರಂಧ್ರಗಳಿಗೆ ಹೀರಿಕೊಂಡ ದ್ರವ್ಯವನ್ನು ಸಾಗಿಸಲು ಸಮರ್ಥವಾಗುತ್ತದೆ.

ಟ್ಯಾನಿನ್ (ಟ್ಯಾನಿನ್ ಆಮ್ಲ)

ಟ್ಯಾನಿನ್ ಗಳು ದೊಡ್ಡ ಮತ್ತು ಮಧ್ಯಮ ಗಾತ್ರದ ಕಣಗಳ ಮಿಶ್ರಣವಾಗಿವೆ. ಟ್ಯಾನಿನ್ ಗಳನ್ನು ಹೊರಹೀರಿಕೊಳ್ಳುವ ದೊಡ್ಡ ರಂಧ್ರಗಳ ಮತ್ತು ಮೆಸೊಪೋರ್ನ ಸಂಯೋಜನೆಯ ಇಂಗಾಲ. ಟ್ಯಾನಿನ್ ಗಳ ಹೊರ ಹೀರಿಕೊಳ್ಳುವ ಇಂಗಾಲ ಸಾಮರ್ಥ್ಯವನ್ನು ಪ್ರತಿ ಮಿಲಿಯನ್ ಸಾರತೆಯ ಭಾಗವಾಗಿ (range 200 ppm–362 ppm) ವರದಿಮಾಡಲಾಗಿದೆ.

ಮೆತಿಲೀನ್ ಬ್ಲ್ಯೂ

ಕೆಲವು ಇಂಗಾಲಗಳು ಮೆಸಪೋರ್ಸ್ (20 Å to 50 Å, ಅಥವಾ 2 to 5 nm) ರಚನೆಯನ್ನು ಹೊಂದಿರುತ್ತವೆ. ಇವು ಡೈ ಮೆತಿಲೀನ್ ಬ್ಲ್ಯೂ ನಂತಹ ಮಧ್ಯಮ ಗಾತ್ರದ ಕಣಗಳನ್ನು ಹೀರಿಕೊಳ್ಳುತ್ತವೆ. ಮೆತಿಲೀನ್ ಬ್ಲ್ಯೂ ನ ಹೊರಹೀರುವಿಕೆಯನ್ನು g/100g (range 11–28 g/100g)ಎಂದು ವರದಿಮಾಡಲಾಗಿದೆ.

ಸಕ್ರಿಯ ಕಾರ್ಬನ್ ನಿಂದ ಕ್ಲೋರಿನ್ ತೆಗೆಯುವಿಕೆ

ಕೆಲವು ಇಂಗಾಲಗಳನ್ನು ಕಲ್ಮಶ ನೀರಿನಿಂದ ತೆಗೆಯುವಿಕೆಯಕ್ಲೋರಿನ್ ನ ಅರ್ಧ ಪ್ರಮಾಣದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಇದು ಸಕ್ರಿಯ ಇಂಗಾಲದ ಕ್ಲೋರಿನ್ ತೆಗೆಯುವಿಕೆಯ ಸಾಮರ್ಥ್ಯವನ್ನು ಮಾಪನ ಮಾಡುತ್ತದೆ. ಹೊರತೆಗೆದ ಕ್ಲೋರಿನ್ ಪ್ರಮಾಣದಲ್ಲಿ ಅರ್ಧದಷ್ಟು, 5 ppm ರಿಂದ 3.5 ppm ವರೆಗೆ ಹರಡಿರುವ ಆವಿಯಲ್ಲಿ ಕ್ಲೋರಿನ್ ಮಟ್ಟವನ್ನು ತಗ್ಗಿಸಲು ಬೇಕಾದ ಇಂಗಾಲದ ಸಾಂದ್ರತೆಯಾಗಿದೆ. ಕೆಳಮಟ್ಟದ ಅರ್ಧದಷ್ಟು ಪ್ರಮಾಣವು ಅತ್ಯುನ್ನತ ಸಾಮರ್ಥ್ಯವನ್ನು ಸೂಚಿಸುತ್ತದೆ.

ಗೋಚರಿಸುವ ಸಾಂದ್ರತೆ

ಹೆಚ್ಚಿನ ಸಾಂದ್ರತೆ ಹೆಚ್ಚಿನ ಪ್ರಮಾಣದ ಕ್ರಿಯೆಯನ್ನು ಒದಗಿಸುತ್ತದೆ. ಅಲ್ಲದೇ ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಸಕ್ರಿಯ ಇಂಗಾಲವನ್ನು ಸೂಚಿಸುತ್ತದೆ.

ಗಡಸುತನ/ಕಣಗಳ ಘರ್ಷಣೆಯ ಸಂಖ್ಯೆ

ಇದು ಸಕ್ರಿಯ ಇಂಗಾಲಗಳು ಘರ್ಷಣೆಯನ್ನು ಎಷ್ಟರ ಮಟ್ಟಿಗೆ ತಡೆದು ಕೊಳ್ಳಬಲ್ಲವು ಎಂಬುದರ ಮಾಪನವಾಗಿದೆ. ಇದು, ಸಕ್ರಿಯ ಇಂಗಾಲ ಅದರ ಭೌತಿಕ ಐಕ್ಯತೆಯನ್ನು ಕಾಪಾಡಿಕೊಳ್ಳಲು ಹಾಗು ಬ್ಯಾಕ್ ವಾಷಿಂಗ, ಇತ್ಯಾದಿಗಳು ಉಂಟುಮಾಡುವ ಘರ್ಷಣ ಶಕ್ತಿಗಳನ್ನು ತಡೆದುಕೊಳ್ಳುಲು ಇರುವಂತಹ ಸಕ್ರಿಯ ಇಂಗಾಲದ ಪ್ರಮುಖ ಸೂಚಕವಾಗಿದೆ.ಸಕ್ರಿಯ ಇಂಗಾಲಗಳ ಗಡಸುತನದಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣಬಹುದು. ಈ ವ್ಯತ್ಯಾಸ ಕಚ್ಚಾ ವಸ್ತುವಿನ ಮೇಲೆ ಹಾಗು ಕ್ರಿಯೆಯ ಮಟ್ಟವನ್ನು ಆಧರಿಸಿರುತ್ತದೆ.

ಬೂದಿಯಂಶ

ಇದು ಸಕ್ರಿಯ ಇಂಗಾಲದ ಸಂಪೂರ್ಣ ಕ್ರಿಯಾಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದು ಪುನಃ ಸಕ್ರಿಯ ಗೊಳಿಸುವಿಕೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಲೋಹದ ಅಕ್ಸೈಡ್ (Fe2O3) ವಿವರ್ಣ ಗೊಳಿಸುವಿಕೆಯ ಮೂಲಕ ಸಕ್ರಿಯ ಇಂಗಾಲವನ್ನು ಬೇರ್ಪಡಿಸಬಲ್ಲದು. ಒಟ್ಟು ಬೂದಿಯ ಅಂಶಕ್ಕಿಂತ ಆಮ್ಲ/ನೀರಿನಲ್ಲಿ ಕರಗಬಲ್ಲ ಬೂದಿಯ ಅಂಶವು ಹೆಚ್ಚು ಪ್ರಧಾನವಾಗಿದೆ. ಕರಗಬಲ್ಲ ಬೂದಿಯ ಅಂಶವು ಜಲಜೀವಿ ಸಂಗ್ರಾಹಕನಿಗೆ ಅತ್ಯಂತ ಮುಖ್ಯವಾಗಿರುತ್ತದೆ. ಫೆರಿಕ್ ಆಕ್ಸೈಡ್ ಪಾಚಿಯು ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ಕಡಿಮೆ ಕರಗಬಲ್ಲ ಬೂದಿಯ ಅಂಶದ ಜೊತೆಯಲ್ಲಿ ಇಂಗಾಲವನ್ನು ಕಡಲಿನಲ್ಲಿ, ತಾಜಾನೀರಿನ ಮೀನುಗಳಿಗೆ ಹಾಗು ರೀಫ್ ಟ್ಯಾಂಕ್ ಗಳಲ್ಲಿ ಭಾರವಾದ ಲೋಹದ ವಿಷವನ್ನು ತಡೆಯಲು ಹಾಗು ಸಸ್ಯ/ಪಾಚಿ ಚೆನ್ನಾಗಿ ಬೆಳೆಯಲು ಬಳಸಲಾಗುತ್ತದೆ.

ಇಂಗಾಲದ ಟೆಟ್ರಾಕ್ಲೋರೈಡ್ ಕ್ರಿಯಾಪಟುತ್ವ

ಪರಿಯಾಪ್ತ ಇಂಗಾಲದ ಟೆಟ್ರಾಕ್ಲೋರೈಡ್ ಆವಿಯ ಹೀರಿಕೊಳ್ಳುವಿಕೆಯಿಂದ ಸಕ್ರಿಯ ಇಂಗಾಲದ ಸರಂಧ್ರತೆಯ ಮಾಪನ.

ಕಣದ ಗಾತ್ರದ ವಿಂಗಡನೆ

ಸಕ್ರಿಯ ಇಂಗಾಲದ ಕಣದ ಗಾತ್ರ ಮೇಲ್ಮೈ ವಿಸ್ತೀರ್ಣವನ್ನು ಪ್ರವೇಶಿಸುವಷ್ಟಿರುತ್ತದೆ; ಅಲ್ಲದೇ ಹೊರಹೀರಿಕೆಯ ಪ್ರಮಾಣದಷ್ಟಿರುತ್ತದೆ. ಆವಿ ರೂಪದ ವ್ಯವಸ್ಥೆಗಳಲ್ಲಿ ಶಕ್ತಿ ಮೌಲ್ಯದ ಮೇಲೆ ಪ್ರಭಾವವನ್ನು ಬೀರುವ ಒತ್ತಡದ ಬಿಂದುವಿನ ವಿರುದ್ಧ ಇದನ್ನು ಪರಿಗಣಿಸುವ ಅಗತ್ಯವಿದೆ. ಕಣದ ಗಾತ್ರವನ್ನು ಎಚ್ಚರಿಕೆಯಿಂದ ವಿಂಗಡಿಸುವುದು ಪ್ರಮುಖ ಚಲನ ಸ್ಥಿತಿ ಲಾಭಗಳನ್ನು ಒದಗಿಸಬಹುದು.

ಹೊರಹೀರುವಿಕೆಯ ಉದಾಹರಣೆಗಳು

ಬದಲಾಯಿಸಿ

ಮಿಶ್ರರೂಪದ ವೇಗವರ್ಧನೆ

ಬದಲಾಯಿಸಿ

ಕೈಗಾರಿಕೆಗಳಲ್ಲಿ ರಾಸಾಯನಿಕ ಹೊರಹೀರುವಿಕೆಯನ್ನು ವಿರೋಧಿಸುವ ಅತ್ಯಂತ ಸಾಮಾನ್ಯ ರೂಪದ ಪ್ರತಿಕ್ರಿಯಾಕಾರಿ ,ಘನ ಸ್ಥಿತಿಯಲ್ಲಿರುವ ವೇಗವರ್ಧಕ ಅನಿಲ ರೂಪದಲ್ಲಿರುವ ಕಚ್ಚಾವಸ್ತುವಿನ ಮೇಲೆ ಪ್ರಭಾವ ಬೀರಿದಾಗ ಕಂಡುಬರುತ್ತದೆ. ವೇಗವರ್ಧಕದ ಮೇಲ್ಮೈನಲ್ಲಿ ಪ್ರತಿಕ್ರಿಯಾಕಾರಿ/ ಪ್ರತಿಕ್ರಿಯಾಕಾರಿಗಳ ಹೊರಹೀರುವಿಕೆಯು ರಾಸಾಯನಿಕ ಸಂಯುಕ್ತವನ್ನು ಸೃಷ್ಟಿಸುತ್ತದೆ.ಪ್ರತಿಕ್ರಿಯಾಕಾರಿ ಕಣದ ಸುತ್ತಲೂ ಎಲೆಕ್ಟ್ರಾನ್ ಸಾಂದ್ರತೆಯನ್ನು ಬದಲಾಯಿಸುತ್ತದೆ. ಅಲ್ಲದೇ ಸಾಮಾನ್ಯವಾಗಿ ನಡೆಯದ ಪ್ರಕ್ರಿಯೆಗೆ ಅದನ್ನು ಒಳಗಾಗುವಂತೆ ಮಾಡುತ್ತದೆ.

ಹೊರಹೀರುವಿಕೆಯ ತಂಪುಗೊಳಿಸುವಿಕೆ

ಬದಲಾಯಿಸಿ

ಹೊರಹೀರುವಿಕೆಯ ತಂಪುಗೊಳಿಸುವಿಕೆ ಮತ್ತು ತಾಪಮಾನದ ಟರ್ಬೈನ್ ಪಂಪು ಚಕ್ರವು ಕಡಿಮೆ ಒತ್ತಡದಲ್ಲಿ ಹೊರಹೀರುಗನಾಗಿ ತಂಪುಗೊಳಿಸಲಾದ ಗಾಳಿಯ ಹೀರಿಕೊಳ್ಳುವಿಕೆಯ ಮೇಲೆ ಹಾಗು ಬಿಸಿಮಾಡುವ ಮೂಲಕ ಹೀರಿಕೊಂಡದ್ದನ್ನು ಹೊರಹಾಕುವುದನ್ನು ಆಧರಿಸಿರುತ್ತವೆ. ಹೊರಹೀರುಗ ತಾಪದಿಂದ ಹಾಗು ಈ ವಿಷಯದಲ್ಲಿ ವ್ಯವಸ್ಥೆಯ "ಪಂಪ್"ನಿಂದಾಗಿ "ರಾಸಾಯನಿಕ ಸಂಪೀಡಕ"(ಕಂಪ್ರೆಸರ್) ನಂತೆ ಕಾರ್ಯನಿರ್ವಹಿಸುತ್ತದೆ. ಇದು ಸೌರ ಸಂಗ್ರಾಹಕವನ್ನು , ದ್ರವಕಾರಕ ಅಥವಾ ಉಷ್ಣ ವಿನಿಮಯಕ ಹಾಗು ರೆಫ್ರಿಜಿರೇಟರ್ ಬಾಕ್ಸ್ ನಲ್ಲಿರುವ ಇಂಗಿಸುವ ಸಾಧನವನ್ನು ಒಳಗೊಂಡಿರುತ್ತದೆ. ಸಕ್ರಿಯಗೊಂಡ ಇಂಗಾಲದ ಆಂತರಿಕ ಪರಿಮಾಣವು ಮೆತನಾಲ್ ನಲ್ಲಿ ಒಟ್ಟು ಸೇರಿ ಸಂಗ್ರಹವಾಗುವ ಒಂದು ಪ್ರಕ್ರಿಯೆಯಾಗಿದೆ. ರೆಫ್ರಿಜಿರೇಟರ್ ಬಾಕ್ಸ್ ಅನ್ನು ನೀರಿನಿಂದ ತುಂಬಿಸಿ ವಿಂಗಡಿಸಲಾಗುತ್ತದೆ. ಸಕ್ರಿಯ ಇಂಗಾಲವು ವಾಯುಮಂಡಲದ ತಾಪಮಾನದಲ್ಲಿಯೇ ಅಧಿಕ ಪ್ರಮಾಣದ ಮೆತನಾಲ್ ಆವಿಯನ್ನು ಹೀರಿಕೊಳ್ಳಬಲ್ಲದು ಹಾಗು ಅಧಿಕ ತಾಪಮಾನದಲ್ಲಿ(ಸರಿಸುಮಾರು 100 ಡಿಗ್ರಿ ಸೆಲ್ಶಿಯಸ್)ಅದನ್ನು ಹೊರಹಾಕಬಲ್ಲದು. ಹಗಲಿನ ಹೊತ್ತಿನಲ್ಲಿ ಸೂರ್ಯನ ಬೆಳಕು ಸಂಗ್ರಾಹಕವನ್ನು ಬೆಳಗುವಂತೆ ಮಾಡುತ್ತದೆ, ಇದರಿಂದಾಗಿ ಸಂಗ್ರಾಹಕವು ಬಿಸಿಯಾಗುತ್ತದೆ ಹಾಗು ಸಕ್ರಿಯ ಇಂಗಾಲದಿಂದ ಮೆತನಾಲ್ ಬಿಡುಗಡೆಯಾಗುತ್ತದೆ. ಹೊರಹಾಕುವಿಕೆಯಲ್ಲಿ , ದ್ರವರೂಪದ ಮೆತನಾಲ್ ಅನ್ನು ಇದ್ದಿಲು ಬಿಸಿಯಾಗುವುದರ ಮೂಲಕ ಹಾಗು ಅನಿಲರೂಪಕ್ಕೆ ತರುವ ಸಾಧನದ ಮೂಲಕ ಹೀರಿಕೊಳ್ಳಲಾಗುತ್ತದೆ. ಮೆತನಾಲ್ ಆವಿಯನ್ನು ಬಾಷ್ಪೀಕರಿಸಲಾಗುತ್ತದೆ ಹಾಗು ಇದನ್ನು ಇಂಗಿಸುವ ಸಾಧನದಲ್ಲಿಡಲಾಗುತ್ತದೆ.

ರಾತ್ರಿಯ ಹೊತ್ತಿನಲ್ಲಿ, ಸಂಗ್ರಾಹಕದ ತಾಪಮಾನ ವಾಯುಮಂಡಲದ ತಾಪಮಾನಕ್ಕಿಂತ ಕಡಿಮೆಯಾಗುತ್ತ ಹೋಗುತ್ತದೆ. ಇದಲ್ಲದೇ ಇಂಗಿಸುವ ಸಾಧನದಿಂದ ಇದ್ದಿಲು ಮೆತನಾಲ್ ಅನ್ನು ಹೀರಿಕೊಳ್ಳುತ್ತದೆ. ಬಾಷ್ಪೀಕರಣ ಕೋಶದ ಅನಿಲರೂಪಕ್ಕೆ ತರುವ ಸಾಧನದಲ್ಲಿರುವ ದ್ರವರೂಪದ ಮೆತನಾಲ್ ಟ್ರೇ ಯಲ್ಲಿರುವ ನೀರಿನಿಂದ ಉಷ್ಣಾಂಶವನ್ನು ಹೀರಿಕೊಳ್ಳುತ್ತದೆ. ಹೊರಹೀರುವಿಕೆ ಉಷ್ಣಾಂಶವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಾದರೂ, ರಾತ್ರಿಹೊತ್ತಿನಲ್ಲಿ ಸಂಗ್ರಾಹಕ ಸಮರ್ಥವಾಗಿ ತಂಪಾಗಿರಬೇಕು. ಮೇಲೆ ತಿಳಿಸಲಾದಂತೆ, ಹೊರಹೀರುವಿಕೆಯ ತಂಪುಗೊಳಿಸುವ ವ್ಯವಸ್ಥೆಯನ್ನು ತಂಪಾಗಿಸಲು ಮರುಕಳಿಸುವ ರೀತಿಯಲ್ಲಿ ನಡೆಸಲಾಗುತ್ತದೆ.

ಹೀಲಿಯಂ ಅನಿಲವನ್ನು ಕೂಡ 4 ಕೆಲ್ವಿನ್ ಗಳ ನಡುವೆ ಇರುವ ಉಷ್ಣಾಂಶದ ಮೂಲಕ ಚಕ್ರಗತಿಯಲ್ಲಿ ಚಲಿಸುವ ಸಕ್ರಿಯ ಇಂಗಾಲದ 'ಒಳ ಮತ್ತು ಹೊರ ಹೀರಿಕೆಯ ಪಂಪ್ ಗಳಿಂದ'ಹಾಗು ಅಧಿಕ ಉಷ್ಣಾಂಶದಿಂದ ಪಂಪ್ ಮಾಡಬಹುದು. ಇದು ಆಕ್ಸ್ ಫರ್ಡ್ ಸಾಧನಗಳ AST ಸರಣಿ ಸಾರಗುಂದುವ ರೆಫ್ರಿಜಿರೇಟರ್ ಗಳಿಗೆ ತಂಪುಮಾಡುವ ಶಕ್ತಿಯನ್ನು ಒದಗಿಸುವುದಕ್ಕೆ ಕೆಳಕಂಡಂತೆ ಉದಾಹರಣೆಯನ್ನು ನೀಡಲಾಗಿದೆ. 3He ಆವಿಯನ್ನು ಸಾರಗುಂದಿಸಿದ ದ್ರವರೂಪದಲ್ಲಿರುವ ಮಿಶ್ರಣದ ಮೇಲ್ಮೈನಿಂದ 4He ಹಾಗು ಅದರ ಐಸೋಟೋಪ್ 3He ನಿಂದ ಪಂಪ್ ಮಾಡಲಾಗುತ್ತದೆ. 3He ಅನ್ನು ಕಡಿಮೆ ತಾಪಮಾನದಲ್ಲಿ(ವಿಶೇಷವಾಗಿ <4K) ಇಂಗಾಲದ ಮೇಲ್ಮೈನ ಮೇಲೆ ಹೀರಿಕೊಳ್ಳಲಾಗುತ್ತದೆ. 20 ರಿಂದ 40 K ಗಳ ನಡುವೆ ಪಂಪ್ ನ ಪುನರುತ್ಪಾದನೆ 3He ಅನ್ನು ದ್ರವರೂಪ ಮಿಶ್ರಣದ ಸಾಂದ್ರೀಕರಣಕ್ಕೆ ಮತ್ತೆ ಹಿಂದಿರುಗಿಸುತ್ತದೆ. ತಂಪುಮಾಡುವಿಕೆಯು ಎರಡು ದ್ರವರೂಪದ ಹಂತಗಳಲ್ಲಿ 3He 'ಆವಿಮಾಡುವಾಗ' ಗಡಿಯಂಚಿನ ಮುಖಾಮುಖಿಯು ಈ ಸಂದರ್ಭದಲ್ಲಿ ಆಗುತ್ತದೆ. ಈ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಂಪ್ ಗಳಿದ್ದರೆ,ಒಂದು ಪಂಪ್ ಒಳ ಮತ್ತು ಹೊರ ಹೀರುವಿಕೆಯನ್ನು ಮಾಡುತ್ತಿರುವಾಗ ಇನ್ನೊಂದು ಪಂಪ್ ಮಾಡುವ ಮೂಲಕ ಅನಿಲದ ಪ್ರಸಾರ ಹಾಗು ನಿರಂತರವಾಗಿ ತಂಪುಮಾಡುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಇಂತಹ ವ್ಯವಸ್ಥೆಯು ಕೆಲವೊಂದು ಚಲನ ಶಕ್ತಿಯುಳ್ಳ ಭಾಗಗಳಿಂದ 10 mK (0.01 kelvin)ಗಿಂತ ಕಡಿಮೆ ತಾಪಮಾನವನ್ನು ಪಡೆಯುತ್ತದೆ.

ಉಪಯೋಗಗಳು

ಬದಲಾಯಿಸಿ

ಸಕ್ರಿಯ ಇಂಗಾಲವನ್ನು ಅನಿಲ ಶುದ್ಧೀಕರಣ, ಚಿನ್ನದ ಶುದ್ದೀಕರಣ, ಲೋಹದ ಸಂಗ್ರಹ, ಜಲ ಶುದ್ದೀಕರಣ, ಔಷಧ, ಹೊಲಸು ತೆಗೆಯುವ ಪ್ರಕ್ರಿಯೆ,ಅನಿಲ ಮುಖವಾಡಗಳಲ್ಲಿ ಶುದ್ಧೀಕರಿಸಲಾದ ಮುಖವಾಡಗಳಲ್ಲಿ ವಾಯು ಶುದ್ದೀಕರಣ ಮತ್ತು ಸಂಪೀಡಿತ ವಾಯುವಿನಲ್ಲಿ ಶುದ್ಧೀಕರಿಸಲು ಹಾಗು ಇತರ ಅನೇಕ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ.

ಒಂದು ಪ್ರಧಾನ ಕೈಗಾರಿಕಾ ಅನ್ವಯಿಕೆ ಲೋಹಗಳಿಗೆ ಅಂತಿಮ ರೂಪ ಕೊಡುವ ಕ್ಷೇತ್ರದಲ್ಲಿ ಸಕ್ರಿಯ ಇಂಗಾಲದ ಬಳಕೆಯನ್ನು ಒಳಗೊಂಡಿದೆ. ಇದನ್ನು ವಿದ್ಯುಲ್ಲೇಪಿಸುವ ದ್ರಾವಣಗಳ ಶುದ್ದೀಕರಣದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಇದು ಲೇಪಿಸಲು ಬಳಸುವ ಗಾಢವಾದ ನಿಕ್ಕಲ್ ದ್ರಾವಣದಲ್ಲಿ ಕಾರ್ಬನಿಕ ಕಲ್ಮಶಗಳನ್ನು ತೆಗೆದುಹಾಕಲು ಬಳಸುವ ಪ್ರಮುಖ ವಿಧಾನವಾಗಿದೆ. ಲೇಪನ ಮಾಡಲು ಬಳಸುವ ದ್ರಾವಕಗಳಲ್ಲಿ ಅವುಗಳ ಸಂಚಯದ ಗುಣಲಕ್ಷಣಗಳನ್ನು ಹೆಚ್ಚಿಸಲು ಹಾಗು ಅವುಗಳಲ್ಲಿ ಮೆರುಗು, ಮೃದತ್ವ, ನಮ್ಯತೆ , ಇತ್ಯಾದಿಗಳು ಉಳಿಯುವಂತೆ ಮಾಡಲು ವಿಭಿನ್ನ ಕಾರ್ಬನಿಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ವಿದ್ಯುತ್ ನ ನೇರವಾದ ಸ್ಥಿತ್ಯಂತರ ಮತ್ತು ಆನಡಿಕ್ ಆಕ್ಸಿಡೀಕರಣದ ವಿದ್ಯುದ್ವಿಚ್ಛೇದನ ಪ್ರಕ್ರಿಯೆಗಳು ಹಾಗು ಕ್ಯಾತೋಡಿಕ್ ಸಂಕೋಚನದಿಂದಾಗಿ , ಕಾರ್ಬನಿಕ ಸಂಯೋಜನೀಯಗಳು ದ್ರಾವಣದಲ್ಲಿ ಅಗತ್ಯವಿಲ್ಲದ ಬೇಗ ಅಳಿದುಹೋಗುವ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅವುಗಳ ಮೀತಿಮೀರಿದ ಬೆಳವಣಿಗೆ ಲೇಪನದ ಗುಣಮಟ್ಟ ಹಾಗು ಸಂಚಯಿಸಲಾದ ಲೋಹದ ಭೌತಿಕ ಗುಣಲಕ್ಷಣದ ಮೇಲೆ ಪ್ರತಿಕೂಲವಾಗಿ ಪ್ರಭಾವಬೀರುತ್ತವೆ. ಸಕ್ರಿಯ ಇಂಗಾಲ ಸಂಸ್ಕರನ ಇಂತಹ ಕಲ್ಮಶಗಳನ್ನು ತೆಗೆದುಹಾಕುತ್ತದೆ.ಅಲ್ಲದೇ ನಾವು ಬಯಸುವ ಮಟ್ಟದಲ್ಲಿ ಲೇಪನದ ಗುಣಮಟ್ಟವನ್ನು ನೀಡುತ್ತದೆ.

ವಿಶ್ಲೇಷಕ ರಸಾಯನ ವಿಜ್ಞಾನದ ಅನ್ವಯಿಕೆಗಳು

ಬದಲಾಯಿಸಿ

ಸಿಲೈಟ್ ನೊಂದಿಗೆ 50% w/w ಪ್ರತಿಶತದಷ್ಟು ಮಿಶ್ರವಾಗಿರುವ ಸಕ್ರಿಯ ಇಂಗಾಲವನ್ನು, ಕಾರ್ಬೊಹೈಡ್ರೇಟ್ (ಮೊನೊ-, ಡೈ- ಟ್ರೈಸ್ಯಾಚೆರೆಡ್ಸ್) ನ ಕಡಿಮೆ ಒತ್ತಡದ ವರ್ಣರೇಖನ ಬೇರ್ಪಡಿಸುವಿಕೆಯಲ್ಲಿ ಸ್ಥಾಯಿ ಸ್ಥಿತಿಯಾಗಿ ಬಳಸಲಾಗುತ್ತದೆ. ಅಲ್ಲದೇ ಈತೈಲ್ ಆಲ್ಕಹಾಲ್ ದ್ರಾವಣವನ್ನು (5–50%)ವಿಶ್ಲೇಷಕದಲ್ಲಿ ಅಥವಾ ಪೂರ್ವಭಾವಿ ನಿಯಮಾವಳಿಗಳಲ್ಲಿ ಚಲನ ಸ್ಥಿತಿಯಾಗಿ ಬಳಸಲಾಗುತ್ತದೆ.

ಪರಿಸರದ ಅನ್ವಯಿಕೆಗಳು

ಬದಲಾಯಿಸಿ
 
ಸಕ್ರಿಯ ಇಂಗಾಲವನ್ನು ಸಾಮಾನ್ಯವಾಗಿ ಜಲ ಶುದ್ಧೀಕರಣ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಈ ಉದಾಹರಣೆಯಲ್ಲಿ ಸಕ್ರಿಯ ಇಂಗಾಲ ನಾಲ್ಕನೆ ಹಂತದಲ್ಲಿದೆ (ಕೆಳಗಿನಿಂದ ಎಣಿಕೆ).

ಇಂಗಾಲದ ಹೊರಹೀರುವಿಕೆಯು ಗಾಳಿ ಅಥವಾ ನೀರಿನಲ್ಲಿ ಮಲಿನಕಾರಿ ಗಳನ್ನು ತೆಗೆದುಹಾಕುವ ಕ್ರಿಯೆಯಲ್ಲಿ ಅನೇಕ ಬಳಕೆಗಳನ್ನು ಹೊಂದಿದೆ. ಅಲ್ಲದೇ ಕೈಗಾರಿಕ ಕ್ಷೇತ್ರದಲ್ಲೂ ಕೆಳಕಂಡಂತಹ ಅನೇಕ ಬಳಕೆಗಳನ್ನು ಹೊಂದಿದೆ:

  • ಚೆಲ್ಲಿದ್ದನ್ನು ಸ್ವಚ್ಛಗೊಳಿಸಲು
  • ಅಂತರ್ಜಲದ ಶುದ್ದೀಕರಣ
  • ಕುಡಿಯುವ ನೀರಿನ ಶೋಧನೆ
  • ವಾಯು ಶುದ್ದೀಕರಣ
  • ಬಣ್ಣಲೇಪನ, ಡ್ರೈ ಕ್ಲೀನಿಂಗ್ , ಗ್ಯಾಸೊಲೀನ್ ನ ವಿತರಿಸುವ ಕ್ರಿಯೆ ಹಾಗು ಇತರ ಪ್ರಕ್ರಿಯೆಗಳಿಂದ ಬಂಧಿಸಲ್ಪಡುವ ಬಾಷ್ಪಶೀಲ ಕಾರ್ಬನಿಕ ಸಂಯುಕ್ತಗಳು.

ವೆಸ್ಟ್ ಫ್ಲ್ಯಾಂಡರ್ಸ್ ವಿಶ್ವವಿದ್ಯಾನಿಲಯದಲ್ಲಿ (ಬೆಲ್ಜಿಯಂನಲ್ಲಿ) ಉತ್ಸವಗಳ ನಂತರದ ಜಲಶುದ್ಧೀಕರಣದ ಮೇಲೆ 2007 ರಲ್ಲಿ ಸಂಶೋಧನೆಯನ್ನು ಪ್ರಾರಂಭಿಸಲಾಯಿತು[]. ಈ ತಂತ್ರಜ್ಞಾನವನ್ನು ಬಳಸಿಕೊಂಡು ಮುಂದಿನ 20 ವರ್ಷಗಳಿಗೆ ಜಲಶುದ್ದೀಕರಣವನ್ನು ಮಾಡುವ ಯೋಜನೆಯಿಂದ 2008[ಸೂಕ್ತ ಉಲ್ಲೇಖನ ಬೇಕು]ರಲ್ಲಿ ನಡೆದ ಡ್ರಾನೌಟರ್ ಸಂಗೀತ ಮೇಳದಲ್ಲಿಸಂಪೂರ್ಣ ಪ್ರಮಾಣದ ಸಕ್ರಿಯ ಇಂಗಾಲವನ್ನು ಬಳಸಲಾಯಿತು[ಸೂಕ್ತ ಉಲ್ಲೇಖನ ಬೇಕು].

ಸಕ್ರಿಯ ಇದ್ದಿಲನ್ನು ಗಾಳಿಯಲ್ಲಿರುವ ರೇಡಾನ್ ನ ಪ್ರಮಾಣದ ಮಾಪನಕ್ಕಾಗಿಯೂ ಬಳಸಲಾಗುತ್ತದೆ.

ವೈದ್ಯಕೀಯ ಪ್ರಯೋಜನಗಳು

ಬದಲಾಯಿಸಿ

ಸಕ್ರಿಯ ಇಂಗಾಲವನ್ನು ಬಾಯಿಯ ಮೂಲಕ ಆಹಾರದ ಸೇವನೆಯಿಂದ ಉಂಟಾಗುವ ವಿಷದ ಪರಿಣಾಮಕ್ಕೆ ಒಳಗಾಗುವಿಕೆಗೆ ಹಾಗು ವಿಪರೀತ ಸೇವನೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಇದು ವಿಷವನ್ನು ಬಂಧಿಸುತ್ತದೆ; ಹಾಗು (ದೊಡ್ಡ ಕರುಳಿನ ಅಂಗಾಂಗದ ಭಾಗದಲ್ಲಿ)ಗ್ಯಾಸ್ಟ್ರೋ ಇಂಟೆಸ್ಟಿನಲ್ ವಿಷವನ್ನು ಹೀರಿಕೊಳ್ಳದಂತೆ ಅದನ್ನು ತಡೆಯುತ್ತದೆ. ಅನುಮಾನಿತ ವಿಷಪ್ರಾಶನದ ಪ್ರಕರಣಗಳು ಆಸ್ಪತ್ರೆಗೆ ಬಂದಾಗ ಅದರ ಮೇಲೆ ಪ್ರಯೋಗಿಸಲು ಸಕ್ರಿಯ ಇದ್ದಿಲ ಸಂಯುಕ್ತವನ್ನು ಬಳಸಲು ಆಸ್ಪತ್ರೆಯ ತುರ್ತುವಿಭಾಗ ಮುಂದಾಗುತ್ತದೆ. ಜೌಷಧಿಯ ಪ್ರಮಾಣ ಸಾಮಾನ್ಯವಾಗಿ ದೇಹದ ತೂಕದ 1 ಗ್ರಾಂ/kg (ಯುವಕ/ಯುವತಿಯರಿಗೆ ಅಥವಾ ವಯಸ್ಕರಿಗೆ, 50–100 gನಷ್ಟು ಕೊಡಲಾಗುತ್ತದೆ) ಯಷ್ಟು ಸ್ವಯಂವರ್ಧಿತವಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ಕೇವಲ ಒಂದು ಬಾರಿ ಕೊಡಲಾಗುತ್ತದೆ. ಆದರೆ ಕೆಲವೊಮ್ಮೆ ಇದು ಜೌಷಧಿಯ ಪ್ರಮಾಣವನ್ನು ಆಧರಿಸಿರುವುದರಿಂದ ಇದನ್ನು ಒಂದಕ್ಕಿಂತ ಹೆಚ್ಚು ಬಾರಿಯೂ ಕೊಡಬಹುದಾಗಿದೆ. ಕೆಲವೊಂದು ಪರಿಸ್ಥಿತಿಗಳಲ್ಲಿ ಸಕ್ರಿಯ ಇದ್ದಿಲ್ಲನ್ನು ವಿಷ ಪ್ರಾಶನಮಾಡಿದ ರೋಗಿಯ ರಕ್ತದಿಂದ ಹಾನಿಕಾರಕ ವಸ್ತುವನ್ನು ತೆಗೆಯುವ ತೀವ್ರ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ. ಸಕ್ರಿಯ ಇದ್ದಿಲು ವಿಷದ ಅನೇಕ ಪರಿಣಾಮಗಳಿಗೆ ಹಾಗು ಇಪಿಕ್ಯಾಕ್ ನಂತಹ ಶುದ್ಧ ಗೊಳಿಸುವ ವಿಧಾನಗಳ ಉತ್ತಮ ಸಂಸ್ಕರಣವಾಗಿದೆ. ಇಪಿಕ್ಯಾಕ್ ವಿಧಾನವೆಂದರೆ ಈಗ ವಿರಳವಾಗಿ ಬಳಸುತ್ತಿರುವ ಘರ್ಷಣೆಯ ಮೂಲಕ ವಾಂತಿಮಾಡಿಸುವುದು ಅಥವಾ ಹೊಟ್ಟೆಯಿಂದ ವಾಂತಿಯಾಗುವಂತೆ ಮಾಡುವ ವಿಧಾನ.

 
ವೈದ್ಯಕೀಯ ಬಳಕೆಗಾಗಿ ಸಕ್ರಿಯ ಇದ್ದಿಲು.

ಸಕ್ರಿಯ ಇಂಗಾಲವು ವಿಷದ ತೀವ್ರವಾದ ಪರಿಣಾಮಗಳನ್ನು ಕಡಿಮೆ ಮಾದುವಲ್ಲಿ ಉಪಯುಕ್ತವಾದರೂ, ಸಸ್ಯನಾಶಕ ವಿಷದಂತಹ ಹೆಚ್ಚು ಕಾಲದಿಂದ ಸಂಚಯಗೊಂಡ ವಿಷದ ಮೇಲೆ ಇದು ಪರಿಣಾಮಕಾರಿಯಲ್ಲ ಎಂದು ತಿಳಿಸಲಾಗಿದೆ.[]

ಕ್ರಿಯೆಯ ಕಾರ್ಯವಿಧಾನ:

  • ಹೊಟ್ಟೆ ಮತ್ತು ಕರುಳಿನ ಹೀರಿಕೊಳ್ಳುವಿಕೆಯನ್ನು ತಡೆಯುವಂತೆ ವಿಷವನ್ನು ಬಂಧಿಸಲಾಗುತ್ತದೆ. ಬಂಧಕವು ಹಿಂದುಮುಂದು ಮಾಡಬಲ್ಲದಾದ್ದರಿಂದ ಸೋರ್ಬಿಟಲ್ ನಂತಹ ವಿರೇಚಕವನ್ನು ಸೇರಿಸಬಹುದಾಗಿದೆ.
  • ಇದು ಕೆಲವು ಜೌಷಧಗಳನ್ನು/ವಿಷಗಳನ್ನು ಮತ್ತು ಅವುಗಳ ಚಯಾಪಚಯಜವನ್ನು ಹರಡುವ ಎಂಟ್ರೊ ಹಿಪ್ಯಾಟಿಕ್ ಮತ್ತು ಎಂಟ್ರೊ ಎಂಟ್ರಿಕ್ ಗಳಿಗೆ ಅಡ್ಡಿಮಾಡುತ್ತದೆ.

ತಪ್ಪಾದ ಬಳಕೆಯಿಂದ (ಉದಾಹರಣೆಗೆ ಶ್ವಾಸಕೋಶಗಳಿಗೆ) ಶ್ವಾಸಕೋಶದ ಉಸಿರಾಟದ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು. ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡದಿದ್ದಲ್ಲಿ ಕೆಲವೊಮ್ಮೆ ಇದು ಮಾರಕವಾಗಬಹುದು.[] ಸೇವಿಸಿದ ವಸ್ತು ಆಮ್ಲೀಯ, ಪ್ರತ್ಯಾಮ್ಲೀಯ ಸಂಯುಕ್ತ ಅಥವಾ ಪೆಟ್ರೋಲಿಯಂ ಉತ್ಪನ್ನವಾಗಿದ್ದಾಗ ಸಕ್ರಿಯ ಇದ್ದಿಲಿನ ಬಳಕೆ ಸೂಕ್ತವಲ್ಲ.

ಪ್ರಥಮ ಚಿಕಿತ್ಸೆಯ (ಅನುವೈದ್ಯ)ಬಳಕೆಗಾಗಿ, ಇದು ಪ್ಲ್ಯಾಸ್ಟಿಕ್ ಟ್ಯೂಬ್ ಗಳಲ್ಲಿ ಅಥವಾ ಬಾಟಲ್ ಗಳಲ್ಲಿ ದೊರಕುತ್ತದೆ. ಇದನ್ನು ಮೊದಲೇ ನೀರಿನಲ್ಲಿ ಬೆರೆಸಲಾಗಿರುತ್ತದೆ ಹಾಗು ಸಾಮಾನ್ಯವಾಗಿ 12.5 ಅಥವಾ 25 ಗ್ರಾಂ ನಷ್ಟಿರುತ್ತದೆ. ಇದರ ವ್ಯಾಪಾರದ ಹೆಸರುಗಳು ಇನ್ಸ್ಟ ಚಾರ್, ಸೂಪರ್ ಚಾರ್, ಆಕ್ಟಿಡೋಸ್, ಚಾರ್ಕೋಡೋಟ್, ಮತ್ತು ಲಿಕ್ವಿ- ಚಾರ್ ಎಂಬ ಹೆಸರುಗಳನ್ನು ಒಳಗೊಂಡಿವೆ ಆದರೆ ಇದನ್ನು ಸಾಮಾನ್ಯವಾಗಿ ಸಕ್ರಿಯ ಇದ್ದಿಲು ಎಂದು ಕರೆಯಲಾಗುತ್ತದೆ.

ರಕ್ತದಲ್ಲಿ ಈತೈಲ್ ಆಲ್ಕಹಾಲ್ ನ ಪ್ರಮಾಣವನ್ನು ಕಡಿಮೆ ಮಾಡಲು ಅಲ್ಕಹಾಲ್ ಪಾನೀಯಗಳನ್ನು ಕುಡಿಯುವ ಮೊದಲು ಅವುಗಳಿಗೆ ಸಕ್ರಿಯ ಇದ್ದಿಲ್ಲನ್ನು ಸೇರಿಸಬಹುದಾಗಿದೆ. 170 ml ಶುದ್ಧ ಈತೈಲ್ ಆಲ್ಕಹಾಲ್ (ಇದು 10 ಬಾರಿ ನೀಡಿರುವ ಆಲ್ಕ್ ಹಾಲ್ ಪಾನೀಯದ ಪ್ರಮಾಣಕ್ಕೆ ಸಮ)ಅನ್ನು ಸೇವಿಸುವ ಸಂದರ್ಭದಲ್ಲಿ ದೇಹದ ತೂಕದ ಪ್ರತಿ ಕಿಲೋಗ್ರಾಂ ಗೆ 5 ರಿಂದ 15 ಮಿಲಿಗ್ರಾಂಗಳಷ್ಟು ಸಕ್ರಿಯ ಇದ್ದಿಲ್ಲನ್ನು ಸೇರಿಸಬಹುದಾಗಿದೆ. ಇದನ್ನು ಸೇವಿಸಿದ ಒಂದು ಗಂಟೆಯ ನಂತರ ರಕ್ತದಲ್ಲಿರುವ ಆಲ್ಕಹಾಲ್ ಅಂಶವನ್ನು ಕಡಿಮೆ ಮಾಡುತ್ತದೆ.[] ಸಕ್ರಿಯ ಇದ್ದಿಲಿನ ಬಳಕೆಯಿಂದಾಗಿ ರಕ್ತದಲ್ಲಿರುವ ಈತೈಲ್ ಆಲ್ಕ್ ಹಾಲ್ ನ ಪ್ರಮಾಣ ಹೆಚ್ಚುತ್ತದೆ ಎಂಬುದನ್ನು ತಿಳಿಸುವ ಮೂಲಕ ಇತರ ಅಧ್ಯಯನಗಳು ಅದರ ಪ್ರಮಾಣ ಕಡಿಮೆಯಾಗುವುದಿಲ್ಲ ಎಂಬುದನ್ನು ತೋರಿಸಿವೆ.[]

ಇಂಗ್ಲೆಂಡ್ ನಲ್ಲಿ 19 ನೇ ಶತಮಾನದ ಪೂರ್ವಾರ್ಧದ ಆರಂಭದಲ್ಲಿ ಮಾರಾಟವಾಗಿದ್ದ ಇದ್ದಿಲು ಬಿಸ್ಕತ್ತುಗಳು ಮೂಲತಃ ವಾಯು ಮತ್ತು ಹೊಟ್ಟೆಯ ತೊಂದರೆಗಳಿಗೆ ಮದ್ದಾಗಿದ್ದವು.[]

ಸಕ್ರಿಯ ಇದ್ದಲಿನ ಮಾತ್ರೆಗಳು ಅಥವಾ ಜೆಲಿಟಿನ್ ಕೋಶಗಳನ್ನು ಅನೇಕ ರಾಷ್ಟ್ರಗಳಲ್ಲಿ ಅತಿಸಾರ, ಅಜೀರ್ಣ, ಮತ್ತು ವಾಯು ತುಂಬಿದ ಸ್ಥಿತಿಯನ್ನು ಗುಣಪಡಿಸುವ ಔಷಧವಾಗಿ ಬಳಸಲಾಗುತ್ತದೆ.[೧೦] ಇರಿಟಬಲ್ ಬೌಲ್ ಸಿಂಡ್ರೋಮ್ (IBS), ನ ಚಿಕಿತ್ಸೆಯಲ್ಲಿ,[೧೧] ಹಾಗು ಇರ್ನೋಟೆಕ್ಯಾನ್ ಅನ್ನು ನೀಡಲಾದ ಕ್ಯಾನ್ಸರ್ ರೋಗಿಗಳಲ್ಲಿ ಅತಿಸಾರವನ್ನು ತಡೆಗಟ್ಟಲು ಇದು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಕೆಲವೊಂದು ದಾಖಲೆಗಳಿವೆ.[೧೨] ಕೆಲವೊಂದು ಜೌಷಧಿಗಳನ್ನು ಹೀರಿಕೊಳ್ಳುವ ಗುಣದೊಂದಿಗೆ ಇದು ವ್ಯತಿಕರಿಸಬಹುದು. ಅಲ್ಲದೇ ಗೈಅಕಮ್ ಕಾರ್ಡ್ ಪರೀಕ್ಷೆಯಂತಹ ವೈದ್ಯಕೀಯ ಪರೀಕ್ಷೆಗಳಲ್ಲಿ ಸ್ಥಿರವಲ್ಲದ ಫಲಿತಾಂಶ ದೊರೆಯುವಂತೆ ಮಾಡುತ್ತದೆ.[೧೩] ಪಿತ್ತರಸ , ಮೇದೋಜೀರಕ ಗ್ರಂಥಿ ಹಾಗು ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನೋಡಲು ಹೊಟ್ಟೆಯ ಎಕ್ಸ್ ರೇ ತೆಗೆಯುವ ಮೊದಲು ಕರುಳಿನಲ್ಲಿರುವ ಗಾಳಿಯ ಅಂಶವನ್ನು ಕಡಿಮೆ ಮಾಡುವ ಮೂಲಕ ಸಕ್ರಿಯ ಇದ್ದಿಲ್ಲನ್ನು ಕರುಳಿನ ಶುದ್ದೀಕರಣದಲ್ಲಿ ಬಳಸಲಾಗುತ್ತದೆ. ಒಂದು ವಿಧದ ಇದ್ದಿಲ ಬಿಸ್ಕತ್ತನ್ನು ಸಾಕುಪ್ರಾಣಿಗಳ ಆಹಾರವಾಗಿ ಮಾರಾಟಮಾಡಲಾಗುತ್ತದೆ.

ಇಂಧನದ ಸಂಗ್ರಹಣೆ

ಬದಲಾಯಿಸಿ

ನೈಸರ್ಗಿಕ ಅನಿಲ ಮತ್ತು ಜಲಜನಕದ ಅನಿಲವನ್ನು ಸಂಗ್ರಹಿಸಬಲ್ಲ ಅನೇಕ ಸಕ್ರಿಯ ಇಂಗಾಲಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಮೂಲಕ ಸಂಶೋಧನೆಯನ್ನು ಮಾಡಲಾಗಿದೆ. ರಂಧ್ರಗಳಿರುವ ವಸ್ತುಗಳು ಅನೇಕ ರೀತಿಯ ಅನಿಲಗಳಿಗೆ ಹೀರಿಕೊಳ್ಳುವ ಸ್ಪಂಜಾಗಿ ವರ್ತಿಸುತ್ತವೆ. ವ್ಯಾನ್ ಡರ್ ವಾಲ್ಸ್ ಫೋರ್ಸ್. ಕೆಲವು ಇಂಗಾಲಗಳು ಪ್ರತಿ ಮೋಲ್ ಗೆ 5–10 KJ ಯಷ್ಟು ಬಂಧಿಸುವ ಶಕ್ತಿಯನ್ನು ಪಡೆಯಬಲ್ಲವು. ನಂತರ ಅತ್ಯಂತ ಹೆಚ್ಚು ಉಷ್ಣಾಂಶಕ್ಕೆ ಒಡ್ಡುವ ಮೂಲಕ ಹಾಗು ಕಾರ್ಯ ನಿರ್ವಹಿಸಲು ದಹನಕ್ಕೊಳಪಡಿಸುವ ಮೂಲಕ ಅನಿಲವನ್ನು ಹೊರಹಾಕಬಹುದು, ಅಥವಾ ಜಲಜನಕ ಅನಿಲದ ವಿಷಯದಲ್ಲಿ ಜಲಜನಕ ಇಂಧನ ಕೋಶದಲ್ಲಿ ಬಳಸಲು ಪಡೆಯಲಾಗುತ್ತದೆ. ಸಕ್ರಿಯ ಇಂಗಾಲಗಳಲ್ಲಿ ಅನಿಲ ಸಂಗ್ರಹಣೆ ಮಾಡುವಿಕೆ ಹೆಚ್ಚುಬೇಡಿಕೆ ಇರುವಂತಹ ಅನಿಲ ಸಂಗ್ರಹಣಾ ವಿಧಾನವಾಗಿದೆ. ಏಕೆಂದರೆ ಅನಿಲವನ್ನು ಕಡಿಮೆ ಒತ್ತಡದಲ್ಲಿ, ಕಡಿಮೆ ಪ್ರಮಾಣದಲ್ಲಿ, ಕಡಿಮೆ ಒತ್ತಡದ ವಾತಾವರಣದಲ್ಲಿ ಸಂರಕ್ಷಿಸಿಡಬಹುದಾಗಿದೆ. ಇದು ವಾಹನಗಳಲ್ಲಿರುವ ಬೃಹತ್ ಗಾತ್ರದಲ್ಲಿರುವ ಮರದ ಸಂಪೀಡನ ಟ್ಯಾಂಕ್ ಗಿಂತ ಕಾರ್ಯ ರೂಪಕ್ಕೆ ತರಬಹುದಾದ ಅತ್ಯುತ್ತಮ ವಿಧಾನವಾಗಿದೆ. ಯುನೈಟೈಡ್ ಸ್ಟೇಟ್ ಡಿಪಾರ್ಟ್ ಮೆಂಟ್ ಆಫ್ ಎನರ್ಜಿ, ಸೂಕ್ಷ್ಮ ರಂಧ್ರಗಳಿರುವ ಇಂಗಾಲದ ವಸ್ತುಗಳ ಅಭಿವೃದ್ಧಿ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ತಲುಪಬೇಕಿರುವ ಕೆಲವೊಂದು ನಿರ್ದಿಷ್ಟ ಗುರಿಗಳನ್ನು ಸ್ಪಷ್ಟಪಡಿಸಿದೆ. ಅಂದಿನಿಂದ ಇಲ್ಲಿಯವರೆಗೆ ಇನ್ನೂ ಎಲ್ಲಾ ಗುರಿಗಳನ್ನು ಮುಟ್ಟಬೇಕಿದೆ. ಆದರೆ ಅಲೈನ್ಸ್ ಫಾರ್ ಕೊಲಾಬೋರೇಟಿವ್ ರಿಸರ್ಚ್ ಇನ್ ಆಲ್ಟರ್ ನೇಟಿವ್ ಫ್ಯೂಅಲ್ ಟೆಕ್ನಾಲಜಿ(ALL-CRAFT, http://all-craft.missouri.edu Archived 2011-07-20 ವೇಬ್ಯಾಕ್ ಮೆಷಿನ್ ನಲ್ಲಿ.) ಪ್ರೋಗ್ರಾಂ ಅನ್ನು ಒಳಗೊಂಡಂತೆ ಅನೇಕ ಸಂಸ್ಥೆಗಳು ಈ ಆಶಾದಾಯಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಿವೆ.

ಅನಿಲ ಶುದ್ಧೀಕರಣ

ಬದಲಾಯಿಸಿ

ಸಕ್ರಿಯ ಇಂಗಾಲದ ಶೋಧಕವನ್ನು , ಎಣ್ಣೆಯಲ್ಲಿರುವ ಆವಿ, ವಾಸನೆ ಹಾಗು ಗಾಳಿಯಲ್ಲಿರುವ ಇತರ ಹೈಡ್ರೋಕಾರ್ಬನ್ ಗಳನ್ನು ತೆಗೆಯಲು ಸಾಮಾನ್ಯವಾಗಿ ಸಂಪೀಡಿತ ವಾಯುವಿನಲ್ಲಿ ಹಾಗು ಅನಿಲ ಶುದ್ಧೀಕರಣದಲ್ಲಿ ಬಳಸಲಾಗುತ್ತದೆ. ಅತ್ಯಂತ ಸಾಮಾನ್ಯ ವಿನ್ಯಾಸಗಳು 1 ನೇ ಹಂತದ ಅಥವಾ 2 ನೇ ಹಂತದ ಶುದ್ಧೀಕರಣ ನಿಯಮಗಳನ್ನು ಬಳಸುತ್ತವೆ. ಈ ಪ್ರಕ್ರಿಯೆಯಲ್ಲಿ ಸಕ್ರಿಯ ಇಂಗಾಲವನ್ನು ಶುದ್ಧೀಕರಣದ ಮಾಧ್ಯಮದೊಳಗೆ ಸೇರಿಸಲಾಗುತ್ತದೆ. ಸಕ್ರಿಯ ಇದ್ದಿಲ್ಲನ್ನು ಆಕಾಶ ಪೋಷಾಕು ಪ್ರೈಮರಿ ಲೈಫ್ ಸಪೋರ್ಟ್ ಸಿಸ್ಟಮ್(ಪ್ರಾಥಮಿಕ ಜೀವ ರಕ್ಷಣ ವ್ಯವಸ್ಥೆ) ಗಳಲ್ಲಿಯೂ ಕೂಡ ಬಳಸಲಾಗುತ್ತದೆ. ಸಕ್ರಿಯ ಇದ್ದಲಿನ ಶೋಧಕಗಳನ್ನು , ಬೃಹತ್ ಪ್ರಮಾಣದಲ್ಲಿ ಕುದಿಯುವ ನೀರಿನ ಪ್ರತಿಕ್ರಿಯಾಕಾರಿ ಜಲಚಕ್ರದ ಘನೀಕಾರಕದಿಂದ ವಿಕಿರಣಶೀಲ ಅನಿಲವನ್ನು ಅದರ ಸ್ಥಾನದಲ್ಲಿಯೇ ಉಳಿಸಲು ಬಳಸಲಾಗುತ್ತದೆ. ಘನೀಕಾರಕ ಒಳಗೊಂಡಿರುವ ಅತ್ಯಲ್ಪ ಪ್ರಮಾಣದ ವಿಕಿರಣಶೀಲ ಅನಿಲದ ಮೂಲಕ ವಾಯುವನ್ನು ತೆಗೆದುಹಾಕಲಾಗುತ್ತದೆ. ಇದ್ದಲಿನ ದೊಡ್ಡ ಹಾಸಿಗೆಗಳು ಈ ಅನಿಲವನ್ನು ಹೊರಹೀರಿಕೊಳ್ಳುತ್ತವೆ ಹಾಗು ವಿಕೀರಣಪಟುತ್ವದ ತೀವ್ರತೆ ಕಡಿಮೆಯಾಗುವ ವರೆಗು ಅವುಗಳನ್ನು ಉಳಿಸಿರುತ್ತವೆ. ಶೋಧಿಸಿದಂತ ಗಾಳಿ ಅದರ ಮೂಲಕ ಹಾದು ಹೋಗುವಾಗ ಘನಗಳನ್ನು ಇದ್ದಿಲು ಕಣಗಳಲ್ಲಿ ತಡೆಯಲಾಗುತ್ತದೆ.

ರಾಸಾಯನಿಕ ಶುದ್ಧೀಕರಣ

ಬದಲಾಯಿಸಿ

ಸಕ್ರಿಯ ಇಂಗಾಲವನ್ನು ಸಾಮಾನ್ಯವಾಗಿ ಸೋಡಿಯಂ ಆಸಿಟೇಟ್ ನಂತಹ ಮನೆಯಲ್ಲಿ ತಯಾರಿಸಲಾದ ಅಪಾಯಕರವಲ್ಲದ ರಾಸಾಯನಿಕಗಳಲ್ಲಿ ಬಳಸಲಾಗುತ್ತದೆ. ನಂತರ ಇದನ್ನು ಶೋಧಿಸಲಾಗುತ್ತದೆ.

ಬಟ್ಟಿಇಳಿಸಿ ತಯಾರಿಸಲಾದ ಆಲ್ಕಹಾಲ್ ಪಾನೀಯದ ಶುದ್ದೀಕರಣ

ಬದಲಾಯಿಸಿ

ಸಕ್ರಿಯ ಇಂಗಾಲ ಶೋಧಕಗಳನ್ನು ,ಕಾರ್ಬನಿಕ ಕಲ್ಮಶಗಳ ವೋಡ್ಕ ಮತ್ತು ವಿಸ್ಕಿ ಗಳಲ್ಲಿ ಬಳಸಲಾಗುತ್ತದೆ. ಇದು ಇವುಗಳ ಬಣ್ಣ, ರುಚಿ , ಹಾಗು ವಾಸನೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಮೂಲತಃ ಅಶುದ್ಧವಾದ ವೋಡ್ಕವನ್ನು ಸಕ್ರಿಯ ಇಂಗಾಲ ಶೋಧಕದ ಮೂಲಕ ಸೂಕ್ತವಾದ ಹರಿಯುವ ದರದಲ್ಲಿ ಸೋಸುವುದರಿಂದಾಗಿ, ಏಕವಿಧದ ಆಲ್ಕಹಾಲ್ ಅಂಶದೊಂದಿಗೆ ವೋಡ್ಕಾದಲ್ಲಿ ಕಾರ್ಬನಿಕ ಶುದ್ಧತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ, ಎಂದು ವಾಸನೆ ಮತ್ತು ರುಚಿಯ ಮೂಲಕ ನಿರ್ಣಯಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಪಾದರಸದಿಂದ ಉಜ್ಜಿತೊಳೆಯುವುದು.

ಬದಲಾಯಿಸಿ

ಹೆಚ್ಚಾಗಿ ಅಯೊಡಿನ್ ಅಥವಾ ಗಂಧಕದಿಂದ ಪೂರಿತವಾಗಿರುವ ಸಕ್ರಿಯ ಇಂಗಾಲವನ್ನು ಕಲ್ಲಿದ್ದಲಿನ ಮೂಲಕ ವಿದ್ಯುತ್ ಉತ್ಪಾದಿಸುವ ವಿದ್ಯುತ್ ಕೇಂದ್ರಗಳು, ವೈದ್ಯಕೀಯ ದಹನ ಸಾಧನಗಳು ಹಾಗು ಮೂಲ ನೈಸರ್ಗಿಕ ಅನಿಲದ ಮೂಲಕ ಪಾದರಸದ ಉತ್ಸರ್ಜನವನ್ನು ಕಂಡುಹಿಡಿಯಲು ಹೆಚ್ಚಾಗಿ ಬಳಸಲಾಗುತ್ತದೆ. ಈ ಇಂಗಾಲವು ಉತ್ತಮ ಗುಣಮಟ್ಟದ್ದಾಗಿದ್ದು ಪ್ರತಿ ಕೆ.ಜಿ ಗೆ $4.00 ನಷ್ಟು ಬೆಲೆಯನ್ನು ಹೊಂದಿದೆ. ಅದೇನೇ ಆದರೂ, ಇದನ್ನು ಹೆಚ್ಚಾಗಿ ಪುನರುಪಯೋಗಿಸುವುದಿಲ್ಲ.

ಪಾದರಸವನ್ನು ಹೀರಿಕೊಂಡ ನಂತರ USA ಯಲ್ಲಿ ವಿಲೇವಾರಿ
ಬದಲಾಯಿಸಿ

ಪಾದರಸವನ್ನು ಹೀರಿಕೊಂಡ ಸಕ್ರಿಯ ಇಂಗಾಲ ಸಂದಿಗ್ಧತೆಯನ್ನು ಉಂಟುಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸಕ್ರಿಯ ಇಂಗಾಲ 260 ppm ಕ್ಕಿಂತ ಕಡಿಮೆ ಪಾದರಸವನ್ನು ಒಳಗೊಂಡಿರುತ್ತದೆ. ಸಂಯುಕ್ತ ರಾಷ್ಟ್ರದ ನಿಯಂತ್ರಣಗಳು ಭೂಮಿಯ ಒಳಗೆ ತ್ಯಾಜ್ಯ ವಸ್ತುಗಳನ್ನು ಹೂತುಹಾಕುವುದಕ್ಕಾಗಿ ಇದನ್ನು ಸ್ಥಿರಗೊಳಿಸಲು (ಉದಾಹರಣೆಗೆ ಕಾಂಕ್ರೀಟ್ ನಲ್ಲಿ ಕಂಡುಹಿಡಿಯಲಾಗಿದೆ.)ಅವಕಾಶನೀಡಿವೆ.[ಸೂಕ್ತ ಉಲ್ಲೇಖನ ಬೇಕು] ಆದರೂ, 260 ppm ಕ್ಕಿಂತ ಹೆಚ್ಚು ಪಾದರಸವನ್ನು ಒಳಗೊಂಡಿರುವ ತ್ಯಾಜ್ಯವನ್ನು, ಅತ್ಯಂತ ಹೆಚ್ಚು ಪಾದರಸ ಒಳಗೊಂಡಿರುವ ಉಪವರ್ಗವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದನ್ನು ನೆಲದಲ್ಲಿ ಹೂತುಹಾಕದಂತೆ(ಭೂಮಿ-ನಿಷೇಧ ಕಾಯ್ದೆ) ನಿಷೇಧಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಇದು ಈಗ ಮಳಿಗೆಗಳಲ್ಲಿ ಹಾಗು ಆಳವಾದ ಗಣಿಗಳಲ್ಲಿ ಸಂಗ್ರಹಿಸಿಡುವ ವಸ್ತುವಾಗಿದ್ದು , ಇದನ್ನು ಒಂದು ವರ್ಷಕ್ಕೆ 1000 ಟನ್ ಗಳಷ್ಟನ್ನು ಸಂಗ್ರಹಿಸಿಡಲಾಗುತ್ತದೆ ಎಂದು ಅಂದಾಜು ದರ ನಿಗದಿ ಮಾಡಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಪಾದರಸ ಲೇಪಿತ ಸಕ್ರಿಯ ಇಂಗಾಲವನ್ನು ನಿರ್ವಹಿಸುವ ಸಮಸ್ಯೆ U.S. ಗೆ ಅಸಾಧಾರಣವಾದುದ್ದಲ್ಲ. ನೆದರ್ಲೆಂಡ್ ನಲ್ಲಿ ಈ ಪಾದರಸವನ್ನು ಬೃಹತ್ ಪ್ರಮಾಣದಲ್ಲಿ ಪುನಃ ಪಡೆದುಕೊಳ್ಳಲಾಗುತ್ತದೆ[೧೪]. ಅಲ್ಲದೇ ಸಕ್ರಿಯ ಇಂಗಾಲವನ್ನು ಸಂಪೂರ್ಣವಾಗಿ ದಹಿಸುವ ಮೂಲಕ ಹೊರಹಾಕಲಾಗುತ್ತದೆ.

ಪುನರುತ್ಪಾದನೆ

ಬದಲಾಯಿಸಿ

ಸಕ್ರಿಯ ಇಂಗಾಲಗಳ ಪುನರುತ್ಪಾದನೆ, ಹೊರಹೀರಿಕೊಂಡ ಕಲ್ಮಶಕಾರಕವನ್ನು ಸಕ್ರಿಯ ಇಂಗಾಲದ ಮೇಲ್ಮೈ ಮೇಲೆ ಹೊರಹಾಕುವ ಮೂಲಕ , ಆದ್ರ ಸಕ್ರಿಯ ಇಂಗಾಲದ ಹೊರಹೀರುವಿಕೆ ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ.

ಉಷ್ಣ ಪುನರುತ್ಪಾದನೆ

ಬದಲಾಯಿಸಿ

ಕೈಗಾರಿಕಾ ಕಾರ್ಯವಿಧಾನದಲ್ಲಿ ಬಳಸುವ ಅತ್ಯಂತ ಸಾಮಾನ್ಯವಾದ ಪುನರುತ್ಪಾದನಾ ವಿಧಾನ ಉಷ್ಣ ಪುನರುತ್ಪಾದನೆಯಾಗಿದೆ[೧೫]. ಉಷ್ಣ ಪುನರುತ್ಪಾದನೆ ಪ್ರಕ್ರಿಯೆ ಸಾಮಾನ್ಯವಾಗಿ ಕೆಳಗೆ ಕೊಟ್ಟಿರುವ ಮೂರು ಹಂತಗಳನ್ನು ಅನುಸರಿಸುತ್ತದೆ.[೧೬]:

  • ಸರಿಸುಮಾರು 105 °C ನಲ್ಲಿ ಹೊರಹೀರುಗ ಒಣಗುತ್ತದೆ.
  • ನಿಷ್ಕ್ರಿಯ ವಾತಾವರಣದಡಿಯಲ್ಲಿ ಅಧಿಕ ತಾಪಮಾನದ ಹೊರಹಾಕುವಿಕೆ ಮತ್ತು ವಿಭಜನೆ(500–900 °C)
  • ಅತ್ಯಂತ ಹೆಚ್ಚು ತಾಪಮಾನದಲ್ಲಿ(800 °C) ಅನಿಲವನ್ನು ಆಕ್ಸಿಡೀಕರಿಸುವ ಮೂಲಕ(ಹಬೆ ಅಥವಾ ಇಂಗಾಲದ ಡೈಆಕ್ಸೈಡ್) ಶೇಷಾತ್ಮಕ ಜೈವಿಕ ಅನಿಲೀಕರಣ

ಉಷ್ಣ ಸಂಸ್ಕರಣ ಹಂತ, ಹೊರಹೀರುವಿಕೆಯ ಬಹಿರುಷ್ಣಕ ಗುಣವನ್ನು ಬಳಸಿಕೊಕೊಂಡು ಹೀರಿಕೊಂಡದ್ದನ್ನು ಹೊರಹಾಕುತ್ತದೆ. ಅಲ್ಲದೇ ಹೀರಿಕೊಂಡ ಜೈವಿಕ ಸಂಕೀರ್ಣ ಕಣಗಳನ್ನು ಸ್ವಲ್ಪ ಒಡೆದು ಸರಳ ಕಣಗಳಾಗಿಸುತ್ತದೆ. ಅಲ್ಲದೇ ಸಣ್ಣ ಸಣ್ಣ ಕಣಗಳನ್ನು ಸೇರಿಕೊಂಡು ಪಾಲಿಮರೀಕರಣ ಉಂಟುಮಾಡುತ್ತದೆ. ಕೊನೆಯ ಹಂತ ಹಿಂದಿನ ಹಂತದಲ್ಲಿ ರಂಧ್ರಗಳ ವಿನ್ಯಾಸದಲ್ಲಿ ಉಂಟಾಗಿದ್ದ ಇದ್ದಲಿನ ಜೈವಿಕ ಶೇಷವನ್ನು ತೆಗೆದುಹಾಕುವ ಗುರಿಯನ್ನು ಹೊಂದಿರುತ್ತದೆ. ಅಲ್ಲದೇ ಸೂಕ್ಷ್ಮ ರಂಧ್ರಗಳಿರುವ ಇಂಗಾಲದ ಹಿಂದಿನ ಮೇಲ್ಮೈ ಗುಣಲಕ್ಷಣವನ್ನು ಮತ್ತೆ ಪಡೆಯಲು ಅದರ ರಚನೆಯನ್ನು ಮತ್ತೊಮ್ಮೆ ಸಂಸ್ಕರಣಕ್ಕೆ ಒಡ್ಡುತ್ತದೆ. ಸಂಸ್ಕರಣದ ನಂತರ ಹೊರಹೀರುವಿಕೆ ಭಾಗವನ್ನು ಮರುಬಳಕೆಮಾಡಬಹುದು. ಇಂಗಾಲದ ಹಾಸು 5–15 wt% ನಡುವಿನ ಉಷ್ಣ ಪುನರುತ್ಪಾದನನಾ ಚಕ್ರದ ಪ್ರತಿ ಹೀರುವಿಕೆಯ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವ ಮೂಲಕ ಅದು ದಹನವಾಗುತ್ತದೆ.[೧೭]. ಉಷ್ಣ ಪುನರುತ್ಪಾದನೆ ಅಧಿಕ ಶಕ್ತಿಯ ಕ್ರಿಯೆಯಾಗಿದೆ. ಅಧಿಕ ತಾಪಮಾನದ ಅಗತ್ಯತೆ ಇದನ್ನು ಶಕ್ತಿಯುತವಾಗಿ ಮತ್ತು ವಾಣಿಜ್ಯವಾಗಿ ದುಬಾರಿ ಪ್ರಕ್ರಿಯೆಯನ್ನಾಗಿಸಿದೆ[೧೬]. ಸಕ್ರಿಯ ಇಂಗಾಲದ ಉಷ್ಣ ಪುನರುತ್ಪಾದನೆಯ ಮೇಲೆ ಅವಲಂಬಿಸಿರುವ ಕಾರ್ಖಾನೆಗಳು ಬಯಸಿದೆಡೆಯಲ್ಲಿ ಪುನರುತ್ಪಾದನಾ ಸೌಲಭ್ಯಗಳನ್ನು ಮಿತವ್ಯಯಕ್ಕೆ ಹೊಂದುವ ಮೊದಲು ನಿರ್ದಿಷ್ಟ ಚೌಕಟ್ಟಿಗೆ ಒಳಪಟ್ಟಿರಬೇಕು. ಇದರಿಂದಾಗಿ ಅಲ್ಪ ಪ್ರಮಾಣದ ತ್ಯಾಜ್ಯ ವಸ್ತುಗಳನ್ನು ಶುದ್ಧೀಕರಿಸುವ ಕೇಂದ್ರಗಳು ಅವುಗಳ ಸಕ್ರಿಯ ಇಂಗಾಲದ ಕಚ್ಚಾ ವಸ್ತುಗಳನ್ನು ಪುನರುತ್ಪಾದನೆಯ ವಿಶೇಷ ಸೌಲಭ್ಯಗಳಿರುವ ಕೇಂದ್ರಗಳಿಗೆ ಕಳುಹಿಸಬಹುದು.ಇದು ಮೊದಲೇ ಪ್ರಧಾನವಾಗಿರುವ ಇಂಗಾಲದ ಮುದ್ರೆ (ಗುರುತನ್ನು) ನಿರೂಪಿಸುವ ಕ್ರಿಯೆಯನ್ನು ಅಧಿಕಗೊಳಿಸುತ್ತದೆ[೧೮].

ಪುನರುತ್ಪಾದನೆಯ ಇತರ ವಿಧಾನಗಳು

ಬದಲಾಯಿಸಿ

ಸಕ್ರಿಯ ಇಂಗಾಲದ ಉಷ್ಣ ಪುನರುತ್ಪಾದನೆಯ ಅಧಿಕ ಶಕ್ತಿ/ವೆಚ್ಚದ ಗುಣಲಕ್ಷಣಗಳಿಗೆ ಸಂಬಂಧಿಸಿದ ಇತ್ತೀಚಿನ ವಿಚಾರಗಳು, ಇಂತಹ ಪ್ರಕ್ರಿಯೆಗಳ ಮೇಲೆ ಪರಿಸರದ ಪ್ರಭಾವವನ್ನು ಕಡಿಮೆ ಮಾಡಲು ಬೇಕಾದ, ಪರ್ಯಾಯ ಪುನರುತ್ಪಾದನಾ ವಿಧಾನಗಳ ಸಂಶೋಧನೆಗೆ ಪ್ರೋತ್ಸಾಹವನ್ನು ನೀಡಿವೆ. ನಿದರ್ಶನಗಳಾಗಿ ಕೊಟ್ಟಿರುವ ಪುನರುತ್ಪಾದನೆಯ ಅನೇಕ ವಿಧಾನಗಳು ಸಂಪೂರ್ಣವಾಗಿ ಶೈಕ್ಷಣಿಕ ಸಂಶೋಧನೆಯಲ್ಲಿ ಉಳಿದಿರುವ ಕ್ಷೇತ್ರಗಳನ್ನು ಹೊಂದಿದ್ದರೂ ಕೂಡ, ಕೈಗಾರಿಕಾ ಸಂಸ್ಥೆ ಕೆಲವೊಂದು ಪರ್ಯಾಯ ಉಷ್ಣ ಪುನರುತ್ಪಾದನಾ ವ್ಯವಸ್ಥೆಯನ್ನು ಬಳಸುತ್ತಿದೆ. ಪ್ರಸ್ತುತದಲ್ಲಿರುವ ಪರ್ಯಾಯ ಪುನರುತ್ಪಾದನಾ ವಿಧಾನಗಳು ಕೆಳಕಂಡಂತಿವೆ:

  • ರಾಸಾಯನಿಕದ ಮತ್ತು ದ್ರಾವಕದ ಪುನರುತ್ಪಾದನೆ [೧೯]
  • ಸೂಕ್ಷ್ಮ ಜೀವಿಯ ಪುನರುತ್ಪತ್ತಿ[೨೦]
  • ವಿದ್ಯುದ್ರಾಸಾಯನಿಕ ಪುನರುತ್ಪಾದನೆ [೨೧]
  • ಶ್ರವಣಾತೀತ ಪುನರುತ್ಪಾದನೆ [೨೨]
  • ಆರ್ದ್ರಗಾಳಿಯ ಆಕ್ಸಿಡೀಕರಣ [೨೩]

ಇವನ್ನೂ ವೀಕ್ಷಿಸಿ

ಬದಲಾಯಿಸಿ
  • ಇಂಗಾಲಗಪ್ಪು(ಕಾರ್ಬನ್ ಕರಿ)
  • ಇಂಗಾಲದ ಶೋಧಿಸುವಿಕೆ
  • Kværner-ಕ್ರಿಯೆ
  • ಆನ್ ಬೋರ್ಡ್ ರಿಫ್ಯೂಲಿಂಗ್ ವೇಪರ್ ರಿಕವರಿ
  • ಸುಮಿ
  • ಸಿಯೋಕಾರ್ಬನ್

ಉಲ್ಲೇಖಗಳು

ಬದಲಾಯಿಸಿ
  1. ""ಪ್ರಾಪರ್ಟೀಸ್ ಆಫ್ ಆಕ್ಟಿವೇಟೆಡ್ ಕಾರ್ಬನ್ ", CPL ಕಾರನ್ ಲಿಂಕ್ , ಆಕ್ಸೆಸ್ಡ್ 2008-05-02". Archived from the original on 2012-06-19. Retrieved 2010-09-02.
  2. http://en.mimi.hu/astronomy/granule.html
  3. ವ್ಯಾಲ್ಯೂ ಆಡೆಡ್ ಪ್ರಾಡೆಕ್ಟ್ಸ್ ಫ್ರಮ್ ಗ್ಯಾಸಿಫಿಕೇಷನ್ Archived 2014-09-12 ವೇಬ್ಯಾಕ್ ಮೆಷಿನ್ ನಲ್ಲಿ. – ಆಕ್ಟಿವೇಟೆಡ್ ಕಾರ್ಬನ್ , ಬೈ ಶೋಭ ಜಾದವ್ , ದಿ ಕಂಬಸ್ಚನ್ , ಗ್ಯಾಸಿಫಿಕೇಷನ್ ಅಂಡ್ ಪ್ರಪಲ್ಷನ್ ಲ್ಯಾಬೋರೇಟರಿ (CGPL) ಅಟ್ ದಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (IISc)
  4. ಸಸ್ಟೇನಬಲ್ ವೇಸ್ಟ್ ವಾಟರ್ ಟ್ರೀಟ್ ಮೆಂಟ್ ಆಫ್ ಟೆಂಪರರಿ ಇವೆಂಟ್ಸ್: ದಿ ಡ್ರನೌಟರ್ ಫೆಸ್ಟಿವಲ್ ಕೇಸ್ ಸ್ಟಡಿ Archived 2014-02-27 ವೇಬ್ಯಾಕ್ ಮೆಷಿನ್ ನಲ್ಲಿ.</a>. ವಾಟರ್ ಸೈನ್ಸ್ ಅಂಡ್ ಟೆಕ್ನಾಲಜಿ: ಅ ಜರ್ನಲ್ ಆಫ್ ದಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆನ್ ವಾಟರ್ ಪಲೂಷನ್ ರಿಸರ್ಚ್ 2008;58(8):1653–7.
  5. Eddleston M, Juszczak E, Buckley NA; et al. (2008). "Multiple-dose activated charcoal in acute self-poisoning: a randomised controlled trial". Lancet. 371 (9612): 579. doi:10.1016/S0140-6736(08)60270-6. {{cite journal}}: Explicit use of et al. in: |author= (help)CS1 maint: multiple names: authors list (link)
  6. Elliott C, Colby T, Kelly T, Hicks H (1989). "Charcoal lung. Bronchiolitis obliterans after aspiration of activated charcoal". Chest. 96 (3): 672–4. doi:10.1378/chest.96.3.672. PMID 2766830.{{cite journal}}: CS1 maint: multiple names: authors list (link)
  7. US 4594249, Procter, Richard & Anondson, Stanton, "Method of altering intoxicating effects of alcohol", issued 1986 
  8. ಆಕ್ಟಿವೇಡೆಡ್ ಚಾರ್ ಕೋಲ್ ಇನ್ ಒರಲ್ ಎತನಾಲ್: ಲ್ಯಾಕ್ ಆಫ್ ಎಫೆಕ್ಟ್ಸ್ ಇನ್ ಹ್ಯೂಮನ್ಸ್ ., ಮಿನೊಕಾ A, ಹೆರಾಲ್ಡ್ DA, ಬರ್ತ್ JT, ಗಿಡಿಯಾನ್ DA, ಸೈಕರ್ DA., J ಟಾಕ್ಸಿಕಾಲ್ ಕ್ಲಿನ್ ಟಾಕ್ಸಿಕಾಲ್. 1986;24(3):225–34, PubMED
  9. Rolland, Jacques L. (2006). The Food Encyclopedia: Over 8,000 Ingredients, Tools, Techniques and People. Robert Rose. p. 148. ISBN 0778801500.
  10. Stearn, Margaret (2007). Warts and all: straight talking advice on life's embarrassing problems. London: Murdoch Books. p. 333. ISBN 978-1-92125984-5. Retrieved 2009-05-03.
  11. Hübner WD, Moser EH (2002). "Charcoal tablets in the treatment of patients with irritable bowel syndrome". Adv Ther. 19 (5): 245–52. doi:10.1007/BF02850364. PMID 12539884.[ಶಾಶ್ವತವಾಗಿ ಮಡಿದ ಕೊಂಡಿ]
  12. Michael M, Brittain M, Nagai J; et al. (2004). "Phase II study of activated charcoal to prevent irinotecan-induced diarrhea". J Clin Oncol. 22 (21): 4410–7. doi:10.1200/JCO.2004.11.125. PMID 15514383. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  13. Gogel HK, Tandberg D, Strickland RG (1989). "Substances that interfere with guaiac card tests: implications for gastric aspirate testing". Am J Emerg Med. 7 (5): 474–80. doi:10.1016/0735-6757(89)90248-9. PMID 2787993. {{cite journal}}: Unknown parameter |month= ignored (help)CS1 maint: multiple names: authors list (link)
  14. "BMT-ಬೆಗೆಮನ್, ಮರ್ಕ್ಯುರಿ ವೇಸ್ಟ್ ಟ್ರೀಟ್ ಮೆಂಟ್ ಫೆಸಿಲಿಟೀಸ್". Archived from the original on 2011-07-24. Retrieved 2010-09-02.
  15. Bagreev, A. (2001). "Thermal regeneration of a spent activated carbon adsorbent previously used as hydrogen sulfide adsorbent". Carbon. 39: 1319–1326. doi:10.1016/S0008-6223(00)00266-9. {{cite journal}}: Unknown parameter |coauthors= ignored (|author= suggested) (help)
  16. ೧೬.೦ ೧೬.೧ Sabio, E. (2004). "Thermal regeneration of activated carbon saturated with p-nitrophenol". Carbon. 42: 2285–2293. doi:10.1016/j.carbon.2004.05.007. {{cite journal}}: Unknown parameter |coauthors= ignored (|author= suggested) (help)
  17. Miguel, G. S. (2001). "The regeneration of field spent granular activated carbons". Water Research. 35 (11): 2740–2748. doi:10.1016/S0043-1354(00)00549-2. PMID 11456174. {{cite journal}}: Unknown parameter |coauthors= ignored (|author= suggested) (help)
  18. Alvarez, P. M. (2004). "Comparison between thermal and ozone regenerations of spent activated carbon exhausted with phenol". Water Research. 38 (8): 2155–2165. doi:10.1016/j.watres.2004.01.030. PMID 15087197. {{cite journal}}: Unknown parameter |coauthors= ignored (|author= suggested) (help)
  19. Martin, R. J. (1997). "The repeated exhaustion and chemical regeneration of activated carbon". Water Research. 21 (8): 961–965. doi:10.1016/S0043-1354(87)80014-3. {{cite journal}}: Unknown parameter |coauthors= ignored (|author= suggested) (help)
  20. Aizpuru, A. (2003). "Biofiltration of a mixture of volatile organic compounds on granular activated carbon". Biotechnology and Bioengineering. 83 (4): 479–488. doi:10.1002/bit.10691. PMID 12800142. {{cite journal}}: Unknown parameter |coauthors= ignored (|author= suggested) (help)
  21. Narbaitz, R. M. (2009). "Electrochemical regeneration of granular activated carbons loaded with phenol and natural organic matter". Environmental Technology. 30 (1): 27–36. doi:10.1080/09593330802422803. PMID 19213463. {{cite journal}}: Unknown parameter |coauthors= ignored (|author= suggested) (help)
  22. Lim, J. (2005). "Regeneration of granular activated carbon using ultrasound". Ultrasonic-Sono-Chemistry. 12 (4): 277–285. doi:10.1016/j.ultsonch.2004.02.003. PMID 15501710. {{cite journal}}: Unknown parameter |coauthors= ignored (|author= suggested) (help)
  23. Shende, R. V. (2002). "Wet oxidative regeneration of activated carbon loaded with reactive dye". Waste Management. 22 (1): 73–83. doi:10.1016/S0956-053X(01)00022-8. PMID 11942707. {{cite journal}}: Unknown parameter |coauthors= ignored (|author= suggested) (help)

ಬಾಹ್ಯ ಕೊಂಡಿಗಳು

ಬದಲಾಯಿಸಿ