ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಸೆಪ್ಟೆಂಬರ್
- ಸೆಪ್ಟೆಂಬರ್ ೪ : ಹೊನ್ನಾವರದಲ್ಲಿ ೧೯೪೮`ರಲ್ಲಿ ಅನಂತ್ ನಾಗ್ ಜನನ.
- ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.
- ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.
- ಸೆಪ್ಟೆಂಬರ್ ೮ : ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.
- ಸೆಪ್ಟೆಂಬರ್ ೮ : ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.
- ಸೆಪ್ಟೆಂಬರ್ ೧೧ : ೨೦೦೧ರಲ್ಲಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ.
- ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟ ಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.
- ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ
- ಸೆಪ್ಟೆಂಬರ್ ೧೮ : ೧೯೫೦ರಲ್ಲಿ ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಜನನ, ೧೯೬೮ರಲ್ಲಿ ಕುಂದಾಪುರದಲ್ಲಿ ಉಪೇಂದ್ರ ಜನನ.
- ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.
- ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.
- ಸೆಪ್ಟೆಂಬರ್ ೩೦ : ಯಹೂದಿ ಧರ್ಮದಲ್ಲಿ 'ರೋಷ್ ಹಶಾನ್ನ' ಹಬ್ಬ.
- ಸೆಪ್ಟೆಂಬರ್ ೩೦ : ವಿಶ್ವ ಹೃದಯ ದಿನ