ಮಸೂರ ಅವರೆ
Lentil (Masoor Dal) | |
---|---|
![]() | |
Lentils | |
Egg fossil classification | |
Kingdom: | Plantae
|
Division: | |
Class: | |
Order: | |
Family: | |
Subfamily: | |
Tribe: | |
Genus: | |
Species: | L. culinaris
|
Binomial nomenclature | |
Lens culinaris Medikus
|
ಮಸೂರ ಅವರೆ ಅಥವಾ ಮಸೂರ್ ದಾಲ್ ಅಥವಾ ಮಸೂರ ಬೇಳೆ (ಲೆನ್ಸ್ ಕ್ಯುಲಿನರಿಸ್ ), ಯನ್ನು ದ್ವಿದಳ ಧಾನ್ಯದ ಒಂದು ವರ್ಗವೆಂದು ಪರಿಗಣಿಸಲಾಗುತ್ತದೆ, (ದಾಲ್ ಅಥವಾ ಬೇಳೆ ಎಂಬುದು ವರ್ಗದ ರೂಪಾಂತರ). ಇದು ದ್ವಿದಳ ಧಾನ್ಯಗಳ ಸಸ್ಯದ ಜಾತಿಗೆ ಸೇರಿದ ಪೊದೆಯಾಗಿ ಬೆಳೆಯುವ ಒಂದು ವಾರ್ಷಿಕ ಸಸ್ಯ. ಇದರ ಬೀಜ ಗಳು ಮಸೂರ-ಆಕಾರದಲ್ಲಿ ಬೆಳೆಯುತ್ತವೆ.ಇದು15 inches (38 cm)ರಷ್ಟು ಎತ್ತರವಿದೆ, ಹಾಗು ಬೀಜಗಳು ಕೋಶಗಳಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಪ್ರತಿಯೊಂದರಲ್ಲೂ ಎರಡು ಬೀಜಗಳಿರುತ್ತವೆ.
ಹಿನ್ನೆಲೆಸಂಪಾದಿಸಿ
ಈ ದ್ವಿದಳಧಾನ್ಯದ ಸಸ್ಯವು ಬಹುಶಃ ನಿಯರ್ ಈಸ್ಟ್ ನಲ್ಲಿ ಹುಟ್ಟಿಕೊಂಡಿರಬಹುದು. ಜೊತೆಗೆ ಇದು ನೀಅಲಿತಿಕ್(ನವ ಶಿಲಾ ಯುಗ) ನ ಅಸೆರಾಮಿಕ್(ಮಡಿಕೆಗಳ ತಯಾರಿಕೆ ಇರದ) ಕಾಲದಿಂದಲೂ ಮನುಷ್ಯರ ಆಹಾರದ ಒಂದು ಭಾಗವಾಗಿದೆ. ಇದು ನಿಯರ್ ಈಸ್ಟ್ ನಲ್ಲಿ ಸ್ಥಳೀಯ ಮೊದಲ ಬೆಳೆ ಯಾಗಿದೆ. ಪ್ರೋಟೀನ್ ನಿಂದ ಸರಿಸುಮಾರು 26% ಕ್ಯಾಲೋರಿಯನ್ನು ಹೊಂದಿರುವ ಮಸೂರ ಅವರೆ, ಹಾಗು ಸಾಮಾನ್ಯವಾಗಿ ಯಾವುದೇ ಕಾಳು ಅಥವಾ ದ್ವಿದಳ ಧಾನ್ಯಗಳು, ಸಸ್ಯ-ಆಧಾರಿತ ಆಹಾರದಲ್ಲಿ ಸೋಯಾಬೀನ್ ಗಳು ಹಾಗು ಸೆಣಬಿನ ನಂತರ ಪ್ರೋಟೀನ್ ನ ಪ್ರಮಾಣದಲ್ಲಿ ಮೂರನೇ-ಅತ್ಯಂತ ಹೆಚ್ಚಿನ ಮಟ್ಟ ಹೊಂದಿದೆ. ಇದು ಜಗತ್ತಿನ ಹಲವು ಭಾಗಗಳಲ್ಲಿ ಒಂದು ಪ್ರಮುಖ ಆಹಾರವಾಗಿದೆ, ವಿಶೇಷವಾಗಿ ದೊಡ್ಡ ಪ್ರಮಾಣದ ಶಾಖಾಹಾರಿ ಜನಸಂಖ್ಯೆಯನ್ನು ಹೊಂದಿರುವ ಭಾರತದ ಉಪಪ್ರದೇಶ ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರ ಖಚಿತವಾದ ಹೆಸರಿನ ಬಗ್ಗೆ ಕೆಲವು ತಪ್ಪಾದ ಗ್ರಹಿಕೆಗಳಿವೆ. ಭಾರತದಲ್ಲಿ ಬೇಳೆಯನ್ನು ಕಾಳು ಅಥವಾ ದ್ವಿದಳ ಧಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಬೇರೆ ದೇಶಗಳಲ್ಲಿ ವಿಶೇಷವಾಗಿ US ನಲ್ಲಿ ಮಸೂರ ಅವರೆಯನ್ನು ಮಸೂರ್ ನ ನಿರ್ದಿಷ್ಟ ವರ್ಗವೆಂದು ಹಾಗು ಎಲ್ಲ ಕಾಳುಗಳಿಗೆ ತಳಿಯ ಇದೇ ಹೆಸರನ್ನು ತಪ್ಪಾಗಿ ಇಡಲಾಗಿದೆ. ಈ ಪುಟದಲ್ಲಿ ಕೇವಲ ಮಸೂರ್ ನ ಚಿತ್ರಗಳನ್ನು ಮಾತ್ರ ತೋರಿಸಲಾಗಿದೆ. ಇದನ್ನೇ ವಾಸ್ತವವಾಗಿ US ನಲ್ಲಿ ಮಸೂರ ಅವರೆ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಚಿತ್ರಗಳು ಒಂದು ಖಚಿತ ನಿರೂಪಣೆಯನ್ನು ನೀಡುತ್ತವೆ.
ಬಗೆಬಗೆಯ ಕಾಳುಗಳು ಹಾಗು ಮಸೂರ ಅವರೆಗಳು ವಿವಿಧ ಬಣ್ಣಗಳಿಂದ ಕೂಡಿದೆ. ಇದು ಹಳದಿ, ಕೆಂಪು ಮಿಶ್ರಿತ ಕಿತ್ತಳೆ ಬಣ್ಣ, ಹಸಿರು, ಕಂದು ಹಾಗು ಕಪ್ಪು ಬಣ್ಣಗಳಿಂದ ಕೂಡಿದೆ. ಕೆಂಪು, ಬಿಳಿ ಹಾಗು ಹಳದಿ ಮಸೂರ ಅವರೆಯನ್ನು ಕೆಲವು ಕಡೆಗಳಲ್ಲಿ ಸಿಪ್ಪೆ ಸುಲಿಯಲಾಗುತ್ತದೆ. ಅಂದರೆ ಸಿಪ್ಪೆಯುಳ್ಳ ಮಸೂರ ಅವರೆಯನ್ನು ಮಾರಾಟಕ್ಕೆ ಮುಂಚೆ ಸುಲಿಯಲಾಗುತ್ತದೆ. ಮಸೂರ ಅವರೆಯಲ್ಲಿ ದೊಡ್ಡದು ಹಾಗು ಸಣ್ಣದಾದ ಹಲವು ಜಾತಿಗಳಿವೆ. (ಉದಾಹರಣೆಗೆ, ಚಿತ್ರದಲ್ಲಿ ತೋರಿಸಲಾದ ಮಸೂರ ಅವರೆಗಳು) ಮಸೂರ ಅವರೆಯನ್ನು ಹಲವು ರೂಪಗಳಲ್ಲಿ ಮಾರಾಟ ಮಾಡಲಾಗುತ್ತದೆ, ಸಿಪ್ಪೆಯೊಂದಿಗೆ ಅಥವಾ ಸಿಪ್ಪೆಯಿಲ್ಲದೆ, ಇಡಿಯಾಗಿ ಅಥವಾ ಬಿಡಿಸಿ ಮಾರಾಟ ಮಾಡಲಾಗುತ್ತದೆ.ಕೃಷಿ ವಿಧಾನದಂತೆ, ಇತರ ಕಾಳುಗಳನ್ನು ಕೆಲವು ಬಾರಿ ಮಸೂರ ಅವರೆಯೆಂದೇ ಕರೆಯಲಾಗುತ್ತದೆ. ಆದರೆ ಅವುಗಳು ವಾಸ್ತವವಾಗಿ ಹುರುಳಿ ಅಥವಾ ಬಟಾಣಿಯಾಗಿರುತ್ತದೆ. ಉದಾಹರಣೆಗೆ "ಕಪ್ಪು ಮಸೂರ ಅವರೆಗಳು" (ಉದ್ದಿನ ಬೇಳೆ).
ವಿಧಗಳುಸಂಪಾದಿಸಿ
- ಕಂದುಬಣ್ಣದ/ಸ್ಪಾನಿಶ್ ಪರ್ಡಿನ
- ಫ್ರೆಂಚ್ ಹಸಿರು/ಪುಯ್ (ಗಾಢವಾದ ಮಚ್ಚೆಗಳ್ಳುಳ್ಳ ನೀಲಿ-ಹಸಿರು ಬಣ್ಣ)
- ಹಸಿರು
- ಕಪ್ಪು/ಬಿಲೂಗ
- ಹಳದಿ/ಕಂದುಬಣ್ಣದ ಮಸೂರ ಅವರೆಗಳು (ಒಳಭಾಗದಲ್ಲಿ ಕೆಂಪು ಬಣ್ಣ)
- ರೆಡ್ ಚೀಫ್ (ಸಿಪ್ಪೆಯುಳ್ಳ ಹಳದಿ ಮಸೂರ ಅವರೆಗಳು)
- ಎಸ್ಟನ್ ಹಸಿರು(ತೆಳು ಹಸಿರು ಬಣ್ಣ)
- ರಿಚ್ಲೆಅ (ಮಾಧ್ಯಮ ಹಸಿರು ಬಣ್ಣ)
- ಲೈರ್ಡ್ (ಗಾಢ ಹಸಿರು ಬಣ್ಣ)
- ತೆಳುವಾದ ಬಂಗಾರದ ಬಣ್ಣ (ಸಿಪ್ಪೆಯುಳ್ಳ ಮಸೂರ ಅವರೆಗಳು)
- ಮಸೂರ್ ( ಕಂದು ಬಣ್ಣದ ಸಿಪ್ಪೆಗಳ್ಳುಳ್ಳ ಮಸೂರ ಅವರೆಗಳು ಒಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುತ್ತದೆ)
- ತೆಳುವಾದ ಕಡುಗೆಂಪು/ಕೆಂಪು ಬಣ್ಣ (ಸಿಪ್ಪೆಯುಳ್ಳ ಮಸೂರ ಅವರೆಗಳು)
- ಮಕಾಚಿಯಾಡೋಸ್ (ಹಳದಿ ಬಣ್ಣದ ದೊಡ್ಡ ಮೆಕ್ಸಿಕನ್ ಮಸೂರ ಅವರೆಗಳು)
ಸಿದ್ಧತೆಸಂಪಾದಿಸಿ
ಬೀಜಗಳನ್ನು ಬೇಯಿಸಲು ಕಡಿಮೆ ಸಮಯ ಹಿಡಿಯುವುದರ ಜೊತೆಗೆ (ವಿಶೇಷವಾಗಿ, ಸಿಪ್ಪೆಯನ್ನು ತೆಗೆದ ಸಣ್ಣ ಬೀಜಗಳು, ಉದಾಹರಣೆಗೆ, ಸಾಮಾನ್ಯವಾಗಿ ದೊರಕುವ ಕೆಂಪು ಮಸೂರ ಅವರೆ) ಒಂದು ವಿಶಿಷ್ಟವಾದ ಮಣ್ಣಿನ ವಾಸನೆಯನ್ನು ಹೊಂದಿರುತ್ತವೆ. ಮಸೂರ ಅವರೆಯನ್ನು, ತಯಾರಿಕೆಯಲ್ಲಿ ಕಡಿಮೆ ವೆಚ್ಚ ತಗಲುವ ಆದರೆ ಪೌಷ್ಟಿಕಾಂಶ ಭರಿತ ಸೂಪ್ ನ್ನು ತಯಾರಿಸಲು ಯುರೋಪ್ ಹಾಗು ಉತ್ತರ ಹಾಗು ದಕ್ಷಿಣ ಅಮೆರಿಕಗಳಲ್ಲಿ ಬಳಸಲಾಗುತ್ತದೆ. ಇದಕ್ಕೆ ಕೆಲವೊಂದು ಬಾರಿ ಚಿಕನ್ ಅಥವಾ ಪೋರ್ಕ್(ಹಂದಿ ಮಾಂಸ)ನ್ನು ಯಾವುದೇ ರೀತಿಯಲ್ಲಾದರೂ ಮಿಶ್ರಣ ಮಾಡಲಾಗುತ್ತದೆ. ಇವುಗಳನ್ನು ಸಾಧಾರಣವಾಗಿ ಅಕ್ಕಿಯೊಂದಿಗೆ ಸೇರಿಸಿ ಬೇಯಿಸಲಾಗುತ್ತದೆ. ಇದನ್ನು ಸಹ ಬೇಯಿಸಲು ಅದೇ ಸಮಯ ಹಿಡಿಯುತ್ತದೆ. ಮಸೂರ ಅವರೆ ಹಾಗು ಅನ್ನದಿಂದ ತಯಾರಾದ ತಿನಿಸನ್ನು ಮಿಡಲ್ ಈಸ್ಟ್ ನಲ್ಲಿ ಮುಜದ್ದರ ಅಥವಾ ಮೆಜಾದ್ರ ಎಂದು ಕರೆಯುತ್ತಾರೆ. ಭಾರತದ ಜನಪ್ರಿಯ ಖಾದ್ಯವಾದ ಖಿಚಡಿ ಯನ್ನು ತಯಾರಿಸಲು ಅಕ್ಕಿ ಮತ್ತು ಮಸೂರ ಅವರೆಯನ್ನು ಒಟ್ಟಿಗೆ ಸೇರಿಸಿ ಬೇಯಿಸಲಾಗುತ್ತದೆ; ಇದೇ ರೀತಿಯ ಖಾದ್ಯವಾದ ಕುಷರಿ ಯನ್ನು ಈಜಿಪ್ಟ್ ನಲ್ಲಿ ತಯಾರಿಸಲಾಗುತ್ತದೆ. ಈಜಿಪ್ಟ್ ನ ಎರಡು ರಾಷ್ಟ್ರೀಯ ಭಕ್ಷ್ಯ ಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. ಮಸೂರ ಅವರೆಯನ್ನು ಭಾರತದಲ್ಲಿ,ಮೆಡಿಟರೇನಿಅನ್ ಪ್ರದೇಶ ಹಾಗು ಮಿಡಲ್ ಈಸ್ಟ್ ನಲ್ಲಿ ಬಳಸಲಾಗುತ್ತದೆ. ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ, ಮಸೂರ ಅವರೆಯನ್ನು ಡೈರಿ ಚೀಸ್ ನೊಂದಿಗೆ ಬೆರೆಸಲಾಗುತ್ತದೆ.ಭಾರತೀಯರಲ್ಲಿ ಹೆಚ್ಚು ಜನರು ಶಾಖಾಹಾರಿ ಗಳಾಗಿದ್ದಾರೆ, ಹಾಗು ಪ್ರೋಟೀನ್ ಅಂಶವನ್ನು ಹೊಂದಿರುವ ಮಸೂರ ಅವರೆಯು ತುಂಬಾ ದೀರ್ಘ ಕಾಲದಿಂದ ಅವರ ಸ್ಥಳೀಯ ಆಹಾರದ ಒಂದು ಭಾಗವಾಗಿದೆ. ಸಾಧಾರಣವಾಗಿ, ಮಸೂರ ಅವರೆಯನ್ನು ನುಣ್ಣನೆಯ ಹದಕ್ಕೆ ಬೇಯಿಸಿಕೊಳ್ಳಲಾಗುತ್ತದೆ. ಉತ್ತರ ಹಾಗು ಪಶ್ಚಿಮದಲ್ಲಿ, ಅದು ಬೆಂದ ನಂತರ ಅದಕ್ಕೆ ಮಸಾಲೆ ಸೇರಿಸಲಾಗುತ್ತದೆ, ದಕ್ಷಿಣ ಭಾರತದಲ್ಲಿ ಅದನ್ನು ತರಕಾರಿಯ ಜೊತೆಗೆ ಬೇಯಿಸಿಕೊಳ್ಳಲಾಗುತ್ತದೆ (ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ, ಅಂದರೆ ಶೇಕಡಾ 99ರಷ್ಟು ಸಮಯ ತೊಗರಿ ಬೇಳೆಯೊಂದಿಗೆ ಬೇಯಿಸಲಾಗುತ್ತದೆ, ಮಸೂರ ಬೇಳೆಯೊಂದಿಗೆ ಅಲ್ಲ). ನಂತರ ಇದಕ್ಕೆ ಮಸಾಲೆಯ ಮಿಶ್ರಣವನ್ನು ಸೇರಿಸಿ ಹೆಚ್ಚುವರಿ ತಿನಿಸಾಗಿ ತಯಾರು ಮಾಡಲಾಗುತ್ತದೆ, ಉದಾಹರಣೆಗೆ ದಾಲ್, ಉತ್ತರ ಭಾರತದಲ್ಲಿರುವ ಇದರ ಮೂಲ ತಳಿಯ ಹೆಸರನ್ನೇ ಇಡಲಾಗಿದೆ. ತಳಿಯ ಹೆಸರಿನ ಈ ತಿನಿಸು ಅಕ್ಕಿ ಅಥವಾ ಗೋಧಿಯ ಮುಖ್ಯ ಖಾದ್ಯಗಳೊಂದಿಗೆ ಸೇವಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಂಬಾರ್ ಅಥವಾ ರಸಂ ನ್ನು ಅನ್ನದ ಜೊತೆ ಸೇರಿಸಿ ತಿನ್ನಲಾಗುತ್ತದೆ. ಸಾಮಾನ್ಯವಾಗಿ ಇದು ಶಾಖಾಹಾರಿ ಅಡುಗೆಯ ಪ್ರೋಟೀನ್ ಯುಕ್ತ ಒಂದು ಪ್ರಮುಖ ಆಧಾರವಾಗಿದೆ.ಮಸೂರ ಅವರೆ, ಅಥವಾ ಇತರ ಕಾಳುಗಳು ಅಥವಾ ಬೀಜಗಳನ್ನು ಬೇಯಿಸುವುದಕ್ಕೆ ಮುಂಚೆ ಮಸೂರ ಅವರೆಯು ಹುಳುಕಾಗಿದೆಯೇ, ಅದರಲ್ಲಿ ಕಲ್ಲುಗಳಿವೆಯೇ ಅಥವಾ ಯಾವುದೇ ಕಸವಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ನಂತರ ಅದನ್ನು ಚೆನ್ನಾಗಿ ತೊಳೆಯಲಾಗುತ್ತದೆ, ಹಾಗೂ ನೀರಿನಿಂದ ಕಸವು ಹೊರಬರುವ ತನಕ ಶುದ್ದಿ ಮಾಡಲಾಗುತ್ತದೆ. ಕೆಲವರು ಮಸೂರ ಅವರೆಯನ್ನು ಹೆಚ್ಚುಕಾಲದ ವರೆಗೆ ನೆನೆಸಿಡಲು ಇಚ್ಚಿಸುತ್ತಾರೆ, ಹಾಗು ನಂತರ ನೀರನ್ನು ತೆಗೆದುಬಿಡುತ್ತಾರೆ. ಈ ವಿಧಾನದಿಂದ ಅಜೀರ್ಣ ಉಂಟುಮಾಡುವ ವಸ್ತುಗಳು ಹೊರಬರುತ್ತದೆ. ಸಾಮಾನ್ಯವಾಗಿ ಎಲ್ಲರೂ ಇದನ್ನು ನೀರಲ್ಲಿ ನೆನೆಸಿಡುವುದಿಲ್ಲ. ಬೀಜವನ್ನು ನೆನೆಸಿಟ್ಟರೆ ಅದು ಮೆತ್ತಗಾಗಿ ಬೇಯಲು ಕಡಿಮೆ ಸಮಯವನ್ನು ತೆಗೆದುಕೊಳ್ಳುವುದರ ಜೊತೆಗೆ ಇಂಧನದ ಉಳಿತಾಯವಾಗುತ್ತದೆ. ಈ ವಿಧಾನವು ಉತ್ತರ ಭಾಗದ ಚಳಿಗಾಲಕ್ಕೆ ಸೂಕ್ತವಾಗಿದೆ.[dubious ]ಮಸೂರ ಅವರೆಯನ್ನು ನೀರಿನಲ್ಲಿ ಅಥವಾ ತಿಳಿಯಾದ ಸಾರಿನಲ್ಲಿ ನಂತರ ಬೇಯಿಸಲಾಗುತ್ತದೆ. ಇದನ್ನು ಹಾಗೆ ಒಲೆಯ ಮೇಲಿಟ್ಟು, ಅಥವಾ ಕುಕ್ಕರ್ ನಲ್ಲಿ ಬೇಯಿಸಬಹುದು. ಪ್ರೆಶರ್ ಕುಕ್ಕರ್ ಅನ್ನು ಸರಿಯಾಗಿ ಬಳಸದಿದ್ದರೆ, ಅದು ಪ್ರೆಶರ್ ರಿಲೀಫ್ ವಾಲ್ವ್ ಗೆ ತಡೆಯಾಗುತ್ತದೆ. ಹೀಗಾಗಿ ಪ್ರೆಶರ್ ಕುಕ್ಕರ್ ನಿಂದ ಆಗುವ ಒಂದು ಚಿಕ್ಕ ಅನುಕೂಲವೆಂದರೆ, ಬೇಯಿಸಲು ಅದು ತೆಗೆದುಕೊಳ್ಳುವ ಕಡಿಮೆ ಸಮಯ. ಆದಾಗ್ಯೂ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಲಾದ ಅಡುಗೆಯು ಹಾಗೆ ಒಲೆಯ ಮೇಲಿಟ್ಟು ಬೇಯಿಸುವ ಹಾಗು ಇತರ ವಿಧಾನಗಳಿಗಿಂತ ಸಮರ್ಥವಾಗಿರುವುದರ ಜೊತೆಗೆ ಪೌಷ್ಟಿಕಾಂಶದಿಂದ ಕೂಡಿರುತ್ತದೆ; ಸರಿಯಾದ ವಿಧಾನದಲ್ಲಿ ಬೇಯಿಸಿದರೆ ಅಂದರೆ ಪ್ರೆಶರ್ ಕುಕ್ಕರ್ ನ ಒಳಗೆ ಪಾತ್ರೆಯನ್ನು ಮುಚ್ಚಿಟ್ಟು ಬೇಯಿಸಿದರೆ, ಇದರಿಂದ ಸಾಕಷ್ಟು ಪೌಷ್ಟಿಕಾಂಶವು ದೊರೆಯುತ್ತದೆ. ಈ ವಿಧಾನವನ್ನು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಅನುಸರಿಸುತ್ತಾರೆ.ಬೇಯಿಸಿದ ಮಸೂರ ಅವರೆಯನ್ನು ಮತ್ತಷ್ಟು ತೆಳುವಾಗಿ ಮಾಡುವ ಅವಶ್ಯಕತೆಯಿರುತ್ತದೆ: ಅಂತಿಮವಾಗಿ ಇಚ್ಚಿಸಿದ ಹದವನ್ನು ತಲುಪುವ ತನಕ ಬೇಯಿಸಿದ ಈ ದ್ವಿದಳ ಧಾನ್ಯವನ್ನು ಬಿಸಿ ನೀರು ಅಥವಾ ತಿಳಿ ಸಾರನ್ನು ಸೇರಿಸಿ ಬೇಯಿಸಬೇಕಾಗುತ್ತದೆ.ಸಾಮಾನ್ಯವಾಗಿ ಉಷ್ಣವಲಯದಲ್ಲಿ ವಾಸಿಸುವ ದಕ್ಷಿಣ ಭಾರತದ ಜನರು ಇದನ್ನು ತೆಳ್ಳನೆಯ ರೂಪದಲ್ಲಿ ಸೇವಿಸಿದರೆ ಉತ್ತರ ಭಾರತದವರು, ಬಡತನ ಅಥವಾ ದುಸ್ಥಿತಿಯಲ್ಲಿರುವ ಜನರ ಹೊರತಾಗಿ ಉಳಿದವರು ಸ್ವಲ್ಪ ಗಟ್ಟಿಯಾಗಿ ತಯಾರಿಸುತ್ತಾರೆ. ಆದರೆ ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಗಟ್ಟಿಯಾಗಿ ರುಚಿಕಟ್ಟಾದ ಹಾಗು ನುಣ್ಣನೆಯ ಹದಕ್ಕೆ ತಯಾರಿಸುತ್ತಾರೆ. ಅದಲ್ಲದೇ ಕೆಲವರು ಸಂಪೂರ್ಣವಾಗಿ ಇದನ್ನು ದೇವರಿಗೆ ಒಪ್ಪಿಸಿ ಪಾಕವನ್ನು ನೈವಿದ್ಯೆ ರೂಪದಲ್ಲಿ ದೈವತ್ವಗೊಳಿಸುವ ಪ್ರಯತ್ನ ಮಾಡುತ್ತಾರೆ.ಮತ್ತೊಮ್ಮೆ, ಈ ಪುಟದಲ್ಲಿ ಕಂಡುಬರುವ ಚಿತ್ರಗಳಿಂದ ಕೆಲವು ತಪ್ಪು ಗ್ರಹಿಕೆಗಳು ಉಂಟಾಗಬಹುದು, ಕೆಲವು ನಿರ್ದಿಷ್ಟ ಜಾತಿಯ (ಮಸೂರ್) ಮಸೂರ ಅವರೆಯನ್ನು ದಕ್ಷಿಣ ಭಾರತದಲ್ಲಿ ಅಪರೂಪವಾಗಿ ಬಳಕೆ ಮಾಡುತ್ತಾರೆ. ಆದರೆ ಉತ್ತರ ಭಾರತದವರಿಗೆ ಇದು ಅತ್ಯಂತ ಪ್ರಿಯ ಹಾಗು ಸಾಮಾನ್ಯವಾಗಿ ಬಳಕೆಯಲ್ಲಿರುವ ಧಾನ್ಯ. ಜೊತೆಗೆ ಇದನ್ನು ಪೂರ್ವ ಹಾಗು ಪಶ್ಚಿಮ ಭಾರತದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.
ಪೌಷ್ಟಿಕಾಂಶದ ಪ್ರಮಾಣ ಹಾಗು ಆರೋಗ್ಯದ ಲಾಭಗಳುಸಂಪಾದಿಸಿ
Nutritional value per 100 g (3.5 oz) | |
---|---|
Energy | 1,477 kJ (353 kcal) |
60 g | |
Sugars | 2 g |
Dietary fiber | 31 g |
1 g | |
26 g | |
Vitamins | Quantity %DV† |
Thiamine (B1) | 76% 0.87 mg |
Minerals | Quantity %DV† |
Iron | 58% 7.5 mg |
| |
†Percentages are roughly approximated using US recommendations for adults. Source: USDA FoodData Central |
ಮಸೂರ ಅವರೆಯು ಹೆಚ್ಚಿನ ಪ್ರೋಟೀನ್ ನನ್ನು ಒಳಗೊಳ್ಳುವುದರ ಜೊತೆಗೆ ಅವಶ್ಯಕ ಅಮೈನೋ ಆಸಿಡ್ ಗಳು ಐಸೋಲ್ಯೂಸಿನ್ ಹಾಗು ಲೈಸಿನ್ ಗಳನ್ನೂ ಹೊಂದಿದೆ. ಶಾಖಾಹಾರವನ್ನು ಪಾಲಿಸುವವರಿಗೆ ಇದು ಅಗ್ಗದ, ಅವಶ್ಯಕ ಪ್ರೋಟೀನ್ ಪೂರಕವಾಗಿ ಒದಗಿಬರುತ್ತದೆ.[೧] ಮಸೂರ ಅವರೆಯಲ್ಲಿ ಮೆತಯನೀನ್ ಹಾಗು ಸಿಸ್ಟೈನ್ ಎಂಬ ಎರಡು ಅವಶ್ಯಕ ಅಮೈನೊ ಆಸಿಡ್ ಗಳ ಕೊರತೆಯಿದೆ.[೨] ಆದಾಗ್ಯೂ, ಮೊಳಕೆ ಬಂದ ಮಸೂರ ಅವರೆಯು ಅಗತ್ಯಕ್ಕೆ ಬೇಕಾದಷ್ಟು ಪ್ರಮಾಣದ ಎಲ್ಲ ಅವಶ್ಯಕ ಅಮಿನೋ ಆಸಿಡ್ಸ್ ಗಳನ್ನು ಒಳಗೊಂಡಿದೆ. ಇದರಲ್ಲಿ ಮೆತಯನೀನ್ ಹಾಗು ಸಿಸ್ಟೈನ್ ಗಳು ಸಹ ಸೇರಿವೆ.[೩] ಸಾಕಷ್ಟು ಪ್ರಮಾಣದ ಪ್ರೋಟೀನ್ ಗಳನ್ನು ಹೊಂದಿರುವುದರ ಜೊತೆಗೆ, ಮಸೂರ ಅವರೆಯು ಆಹಾರಕ್ಕೆ ಬೇಕಾದಷ್ಟು ಪ್ರಮಾಣದ ನಾರಿನಂಶ, ಫೋಲೇಟ್, ವಿಟಮಿನ್ B1, ಹಾಗು ಖನಿಜಾಂಶ ಹೊಂದಿದೆ. ಹಸಿರು ಮಸೂರ ಅವರೆಗಿಂತ ಕೆಂಪು (ಅಥವಾ ಗುಲಾಬಿ ಬಣ್ಣದ) ಮಸೂರ ಅವರೆಗಳು ಕಡಿಮೆ ನಾರಿನಂಶದ ಸಾರವನ್ನು ಹೊಂದಿರುತ್ತವೆ. (31% ಗೆ ಬದಲಾಗಿ ಕೇವಲ 11%).[೪] ಹೆಲ್ತ್ ನಿಯತಕಾಲಿಕವು ಮಸೂರ ಅವರೆಯನ್ನು ಐದು ಆರೋಗ್ಯಕರ ಪೌಷ್ಟಿಕ ಆಹಾರಗಳಲ್ಲಿ ಒಂದೆಂದು ಆಯ್ಕೆ ಮಾಡಿದೆ.[೫] ಮಸೂರ ಅವರೆಯನ್ನು ಸಾಧಾರಣವಾಗಿ ಇತರ ಧಾನ್ಯಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ, ಉದಾಹರಣೆಗೆ ಅಕ್ಕಿಯೊಂದಿಗೆ ಬೆರೆಸಿದಾಗ ಒಂದು ಸಂಪೂರ್ಣ ಪ್ರೋಟೀನ್ ತಿನಿಸಾಗಿ ಒದಗಿ ಬರುತ್ತದೆ.ಮಂಗೋಲಿಯಾ ದೇಶದ ಒಳಭಾಗದಲ್ಲಿರುವ ಹಲವಾರು ಬುಡಕಟ್ಟಿನ ಪ್ರದೇಶಗಳಲ್ಲಿ, ಮಸೂರ ಅವರೆ, ಕೊತ್ತಂಬರಿ ಹಾಗು ಜೀರಿಗೆಯಿಂದ ತಯಾರಿಸಿದ ಒಂದು ಲೇಪನವು ಬಂಜೆತನ ನಿವಾರಿಸುವ ಒಂದು ಸಾಂಪ್ರದಾಯಿಕ ಪರಿಹಾರವಾಗಿ ಬಳಕೆಯಾಗುತ್ತದೆ.[೫]
ಕಬ್ಬಿಣದ ಅಂಶಸಂಪಾದಿಸಿ
ಮಸೂರ ಅವರೆಯು ಕಬ್ಬಿಣದ ಅಂಶವನ್ನು ಹೊಂದಿರುವ ಒಂದು ಅತ್ಯುತ್ತಮ ಶಾಖಾಹಾರಿ ಉತ್ಪನ್ನಮೂಲವಾಗಿದೆ. ಇದು ಶಾಖಾಹಾರಿ ತಿನಿಸುಗಳಲ್ಲಿ ಒಂದು ಪ್ರಮುಖ ಭಾಗವಾಗಿರುವುದರ ಜೊತೆಗೆಕಬ್ಬಿಣಾಂಶದ ಕೊರತೆ ಯನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿಯಾಗಿದೆ.ಕಬ್ಬಿಣಾಂಶವು ವಿಶೇಷವಾಗಿ ಹದಿಹರೆಯದವರಿಗೆ ಹಾಗು ಗರ್ಭಿಣಿ ಹೆಂಗಸರಿಗೆ ಮುಖ್ಯವಾಗಿದೆ. ಕಬ್ಬಿಣಾಂಶದ ಅವಶ್ಯಕತೆಯು ಇವರುಗಳಿಗೆ ಹೆಚ್ಚಾಗಿರುತ್ತದೆ.[೬]
ಉತ್ಪಾದನೆಸಂಪಾದಿಸಿ
ಮಸೂರ ಅವರೆಯ ಬೆಳೆಯು ಹೆಚ್ಚುಕಡಿಮೆ ಬರಡು ಭೂಮಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ವಿಶ್ವದಾದ್ಯಂತ ಇದನ್ನು ಬೆಳೆಯಲಾಗುತ್ತದೆ. ವಿಶ್ವದಾದ್ಯಂತ ಉತ್ಪಾದನೆಯಾಗುವ ಮಸೂರ ಅವರೆಯ ಮೂರನೇ ಒಂದು ಭಾಗ ಭಾರತ ದಲ್ಲಿ ಬೆಳೆಯಲಾಗುತ್ತದೆ. ಇದನ್ನು ಹೆಚ್ಚಾಗಿ ದೇಶದೊಳಗೆ ಬಳಸಲಾಗುತ್ತದೆ.ಮಸೂರ ಅವರೆಯನ್ನು ಕೆನಡಾ ಜಗತ್ತಿನಲ್ಲೇ ಅತ್ಯಂತ ಹೆಚ್ಚಿಗೆ ರಫ್ತು ಮಾಡುವ ದೇಶ ಹಾಗು ಕೆನಡಾ ದೇಶದ ಸಸ್ಕಾಟ್ಚೆವನ್ ಪ್ರದೇಶದಲ್ಲಿ ಹೆಚ್ಚಿಗೆ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಪೂರ್ವ ವಾಶಿಂಗ್ಟನ್ ನ ಪಲೌಸೆ ಪ್ರದೇಶ ಹಾಗು ಇದಾಹೋ ಪಾನ್ಹ್ಯಾಂಡಲ್ ನ ಪುಲ್ ಮ್ಯಾನ್, ನಲ್ಲಿರುವ ವಾಣಿಜ್ಯ ಕೇಂದ್ರ ವು ಯುನೈಟೆಡ್ ಸ್ಟೇಟ್ಸ್ ನಲ್ಲಿ ಬೆಳೆಯನ್ನು ಉತ್ಪಾದಿಸುವ ಅತ್ಯಂತ ಪ್ರಮುಖ ಪ್ರದೇಶವಾಗಿದೆ.[೭] FAO ವರದಿಯ ಪ್ರಕಾರ, ಕಳೆದ 2007ರಲ್ಲಿ 3.874 ಮಿಲ್ಯನ್ ಮೆಟ್ರಿಕ್ ಟನ್ಸ್ ನಷ್ಟು ಮಸೂರ ಅವರೆಯನ್ನು ವಿಶ್ವದಾದ್ಯಂತ ಉತ್ಪಾದಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿ ಭಾರತ (36%), ಕೆನಡಾ (17%) ಹಾಗು ಟರ್ಕಿ(15%)ದೇಶಗಳು ಸೇರಿವೆ. ನ್ಯಾಷನಲ್ ಅಗ್ರಿಕಲ್ಚರಲ್ ಸ್ಟ್ಯಾಟಿಸ್ಟಿಕ್ಸ್ ಸರ್ವೀಸ್ (NASS)ನ ವರದಿಯ ಪ್ರಕಾರ ಕಳೆದ 2007ರಲ್ಲಿ ಯುನೈಟೆಡ್ ಸ್ಟೇಟ್ಸ್ 154.5 ಸಾವಿರ ಮೆಟ್ರಿಕ್ ಟನ್ಸ್ ನಷ್ಟು ಉತ್ಪಾದನೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಉತ್ತರ ಡಕೋಟ, ಮೊಂಟಾನ, ವಾಶಿಂಗ್ಟನ್, ಹಾಗು ಇದಾಹೋ ರಾಜ್ಯಗಳಿಂದ ಬಂದಿತ್ತು. ಸ್ಟ್ಯಾಟಿಸ್ಟಿಕ್ಸ್ ಕೆನಡಾ ದ ಅಂದಾಜಿನ ಪ್ರಕಾರ 2009/10 ರಲ್ಲಿ ದಾಖಲೆಯ 1.5 ಮಿಲ್ಯನ್ ಮೆಟ್ರಿಕ್ ಟನ್ಸ್ ನಷ್ಟು ಕೆನೆಡಿಯನ್ ಮಸೂರ ಅವರೆಯು ಉತ್ಪಾದನೆಯಾಗಿದೆ.[೮]
ಅಗ್ರ ಹತ್ತು ಮಸೂರ ಅವರೆ ಉತ್ಪಾದಕರು - 2007 | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ದೇಶ | ಉತ್ಪಾದನೆ (ಟನ್ನು ಗಳು) | ಅಡಿಟಿಪ್ಪಣಿ | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಭಾರತ | 1,400,000 | * | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
Canada | 669,700 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಟರ್ಕಿ | 580,260 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಚೀನಾ | 180,000 | F | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಸಿರಿಯಾ | 165,000 | F | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ನೇಪಾಲ | 164,694 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
United States | 154,584 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಆಸ್ಟ್ರೇಲಿಯಾ | 131,000 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಬಾಂಗ್ಲಾದೇಶ | 119,000 | F | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಇರಾನ್ | 115,000 | F | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ವಿಶ್ವ | 3,873,801 | A | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
ಚಿಹ್ನೆ ಇಲ್ಲದಿರುವುದು = ಅಧಿಕೃತ ಚಿತ್ರಣ, P = ಅಧಿಕೃತ ಚಿತ್ರಣ, F = FAO ಅಂದಾಜು, * = ಅನಧಿಕೃತ/ಭಾಗಶಃ-ಅಧಿಕೃತ/ಪ್ರತಿಬಿಂಬಿತ ದತ್ತಾಂಶ, C = ಎಣಿಕೆಯ ಚಿತ್ರಣ A = ಒಟ್ಟು (ಇದರಲ್ಲಿ ಅಧಿಕೃತ, ಭಾಗಶಃ-ಅಧಿಕೃತ ಅಥವಾ ಅಂದಾಜಿನ ಚಿತ್ರಣಗಳು ಸೇರಿರಬಹುದು); ಮೂಲಾಧಾರ: ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಜೆಶನ್ ಆಫ್ ಯುನೈಟೆಡ್ ನೇಶನ್ಸ್: ಎಕನಾಮಿಕ್ ಅಂಡ್ ಸೋಶಿಯಲ್ ಡಿಪಾರ್ಟ್ಮೆಂಟ್: ದಿ ಸ್ಟ್ಯಾಟಿಸ್ಟಿಕಲ್ ಡಿವಿಷನ್|}ಹಾಲಿ ಯುನೈಟೆಡ್ ಸ್ಟೇಟ್ಸ್ ನ ಉತ್ಪಾದನಾ ಸಂಖ್ಯೆಯನ್ನು ನಸ್ಸ್ ನ ದತ್ತಾಂಶ ಸಂಗ್ರಹ ಇಲ್ಲಿ Archived 2010-04-13 ವೇಬ್ಯಾಕ್ ಮೆಷಿನ್ ನಲ್ಲಿ. ಇಚ್ಚಿಸಿದ ಅಂಶಗಳನ್ನು ಆಯ್ಕೆ ಮಾಡಿ ಗುರುತಿಸಬಹುದು. ಕಾಯಿಲೆಗಳುಸಂಪಾದಿಸಿಸಂಸ್ಕೃತಿಯಲ್ಲಿಸಂಪಾದಿಸಿಮಸೂರ ಅವರೆಯನ್ನು ಹಲವು ಬಾರಿ ಓಲ್ಡ್ ಟೆಸ್ಟಾಮೆಂಟ್ ನಲ್ಲಿ ಉಲ್ಲೇಖಿಸಲಾಗಿದೆ, ಮೊದಲು ಉಲ್ಲೇಖಿಸಲಾದ ಘಟನೆಯೆಂದರೆ ಜಾಕೋಬ್ ಏಸು ವಿನಿಂದ ಹುಟ್ಟಿನ ಹಕ್ಕನ್ನು, ಬೇಯಿಸಿದ ಮಸೂರ ಅವರೆಯ ಜೊತೆ ಖರೀದಿಸುತ್ತಾನೆ (ಒಂದು "ಮೆಸ್ಸ್ ಆಫ್ ಪಾಟೇಜ್"(ಶ್ರೇಷ್ಟವಾದುದನ್ನು ಬಲಿ ಕೊಟ್ಟು ಪಡೆದ ಪ್ರಾಪಂಚಿಕ ಸುಖ){{0}ಜೆನೆಸಿಸ್ 25:34}.[೯] ಜೂಇಶ್ ಶೋಕ ಆಚರಣೆಯಲ್ಲಿ, ಶೋಕವನ್ನು ಆಚರಿಸುವವನಿಗೆ ಬೇಯಿಸಿದ ಮೊಟ್ಟೆಯೊಂದಿಗೆ ಇದನ್ನು ಆಹಾರವಾಗಿ ನೀಡಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಇದರ ಗುಂಡಗಿನ ಆಕೃತಿಯು ಹುಟ್ಟಿನಿಂದ ಸಾಯುವ ತನಕವಿರುವ ಜೀವನ ಚಕ್ರವನ್ನು ಸಂಕೇತಿಸುತ್ತದೆ.ಪ್ರಾಚೀನ ಗ್ರೀಕ್ ನಾಟಕಕಾರ ಅರಿಸ್ಟೋಫನೆಸ್ ತನ್ನ ನಾಟಕಗಳಲ್ಲಿ ಮಸೂರ ಅವರೆ ಸೂಪ್ ನ ಬಗ್ಗೆ ಉಲ್ಲೇಖಿಸುವುದರ ಜೊತೆಗೆ "ಮಧುರಭಕ್ಷ್ಯಗಳಲ್ಲೇ ಅತ್ಯಂತ ಸಿಹಿಯಾದುದ್ದೆಂದು" ವಿವರಿಸುತ್ತಾನೆ.[೧೦] ಮಸೂರದ ವ್ಯುತ್ಪತ್ತಿಸಂಪಾದಿಸಿಕಣ್ಣಿನ ಮಸೂರ ವನ್ನು ಮಸೂರ ಅವರೆಯ ಮೇಲೆ ಹೆಸರಿಸಲಾಗಿದೆ (ಲ್ಯಾಟಿನ್: ಮಸೂರ, ಅದರ ರೂಪವನ್ನು ಇದು ಹೋಲುತ್ತದೆ.[೧೧] ಇದೇ ರೀತಿಯಾದ ಹೋಲಿಕೆಗಳು ಇತರ ಭಾಷೆಗಳಲ್ಲೂ ಕಂಡು ಬರುತ್ತದೆ:
ಇವನ್ನೂ ನೋಡಿಸಂಪಾದಿಸಿ
ಆಕರಗಳುಸಂಪಾದಿಸಿ
ಹೆಚ್ಚಿನ ಮಾಹಿತಿಗಾಗಿಸಂಪಾದಿಸಿ
ಬಾಹ್ಯ ಕೊಂಡಿಗಳುಸಂಪಾದಿಸಿLens culinaris ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
|