ಎಸ್ಪೆರಾಂಟೊ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಸ್ಪೆರಾಂಟೊ ( ಅಥವಾ ಎಸ್ಪರ್ಯಾಂಟೊ) ಯುರೋಪಿನ ಅನೇಕ ಭಾಷೆಗಳ ಆಧಾರದ ಮೇಲೆ ನಿರ್ಮಿತವಾದ ಒಂದು ಅಂತಾರಾಷ್ಟ್ರೀಯ ಭಾಷೆ. ಪ್ರಪಂಚಕ್ಕೆಲ್ಲ ಒಂದು ಭಾಷೆಯಿದ್ದರೆ ಒಳ್ಳೆಯದು, ಅದರಿಂದ ಮಹತ್ತ್ವದ ಪ್ರಯೋಜನಗಳಾಗುತ್ತವೆ ಎಂಬ ಉದ್ದೇಶದಿಂದ ಕಲ್ಪಿತವಾದ ಭಾಷೆಗಳಲ್ಲಿ ಇದೂ ಒಂದು. ಬೇರೆ ಬೇರೆ ಭಾಷೆಗಳಿಂದ ತೆಗೆದುಕೊಂಡ ಅಂಶಗಳು ಇದರಲ್ಲಿ ತುಂಬ ಇವೆ. ಮೂಲ ಪದಗಳು ಹೆಚ್ಚಾಗಿಲ್ಲದಿದ್ದರೂ ಪ್ರತ್ಯಯಗಳ ನೆರವಿನಿಂದ ಹೇರಳವಾಗಿ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಿಕೊಳ್ಳಬಹುದು. ಈ ಭಾಷೆಯಲ್ಲಿ ಕೃತಕವಾದ ಅಂಶಗಳೂ ಇಲ್ಲದಿಲ್ಲ. ಇಂಡೋ-ಯುರೋಪಿಯನ್ ಭಾಷೆಗಳನ್ನೇ ಸಂಪುರ್ಣವಾಗಿ ಅವಲಂಬಿಸಿರುವ ಇದರಲ್ಲಿ ಅರ್ಧಕ್ಕೂ ಹೆಚ್ಚು ಲ್ಯಾಟಿನ್ ಅಂಶಗಳಿವೆ. ಮಿಕ್ಕ ಅಂಶಗಳಲ್ಲಿ ಹೆಚ್ಚು ಪಾಲು ಜಮಾರ್ಯ್‌ನಿಕ್ ಮೂಲದವು.
ಎಸ್ಪೆರಾಂಟೊ | ||
---|---|---|
Created by: | L. L. Zamenhofಟೆಂಪ್ಲೇಟು:Infobox ಭಾಷೆ/creationdate | |
ಬಳಕೆ: | ಆಂತರಾಷ್ಟ್ರೀಯ ಪೂರಕ ಬಾಷೆ | |
ಒಟ್ಟು ಮಾತನಾಡುವವರು: |
ಮಾತೃಭಾಷೆ:ಅಂದಾಜು ೧,೦೦೦ | |
Category (purpose): | ನಿರ್ಮಿತ ಭಾಷೆ International auxiliary language ಎಸ್ಪೆರಾಂಟೊ | |
ಬರವಣಿಗೆ: | ಲ್ಯಾಟಿನ್ (ಎಸ್ಪರಾಂಟೋ ಅಕ್ಷರಮಾಲೆ) Esperanto Brailleಟೆಂಪ್ಲೇಟು:Infobox ಭಾಷೆ/aposterioriಟೆಂಪ್ಲೇಟು:Infobox ಭಾಷೆ/agency | |
ಭಾಷೆಯ ಸಂಕೇತಗಳು | ||
ISO 639-1: | eo
| |
ISO 639-2: | epo
| |
ISO/FDIS 639-3: | epo
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಎಸ್ಪರ್ಯಾಂಟೊ ಭಾಷೆಗೆ ವ್ಯಾಕರಣವಿದ್ದು ಅದರಲ್ಲಿ ಅಪವಾದಗಳಿಲ್ಲದ ಹದಿನಾರು ನಿಯಮಗಳಿವೆ. ಹೀಗೆ ಭಾಷೆಯ ರಚನೆ ಸರಳವಾಗಿದೆ. ಈ ಭಾಷೆಗೆ ರೋಮನ್ ಲಿಪಿಯನ್ನೇ ಬಳಸಲಾಗಿದೆ. ಆದರೆ ಅದು ಧನ್ಯಾತ್ಮಕವಾಗಿದೆ. ಅದರ ಫಲವಾಗಿ ಬಳಕೆಯಲ್ಲಿರುವ ರೋಮನ್ ಲಿಪಿಯಲ್ಲಿ ಕೆಲವು ಸಣ್ಣಪುಟ್ಟ ಮಾರ್ಪಾಡುಗಳಾಗಿವೆ. ಎಸ್ಪರ್ಯಾಂಟೊ ಭಾಷೆಯನ್ನು ನಿರ್ಮಿಸಿದವ ರಷ್ಯದ ಒಬ್ಬ ವೈದ್ಯ ಲಾಜರಸ್ ಲುಸ್ವಿಗ್ ಜಮೆನ್ ಹಾಫ್ (1859-1917). ಈತ ಯುರೋಪಿನ ಪ್ರಮುಖ ಭಾಷೆಗಳೆಲ್ಲವನ್ನೂ ಬಲ್ಲವನಾಗಿದ್ದ. 1887ರಲ್ಲಿ ಅಂತಾರಾಷ್ಟ್ರೀಯ ಭಾಷೆ ಎಂಬ ಪುಸ್ತಿಕೆಯನ್ನು ಡಾ. ಎಸ್ಟರಾಂಟೊ ಎಂಬ ಗುಪ್ತ ನಾಮದಲ್ಲಿ ಪ್ರಕಟಿಸಿದ. ಎಸ್ಪರ್ಯಾಂಟೊ ಎಂದರೆ ಆಶಾವಾದಿ ಎಂದು ಅರ್ಥ. ಒಂದು ಜಗತ್ತಿಗೆ ಒಂದು ಭಾಷೆ ಇರಬೇಕು ಎಂಬುದು ಜಮೆನ್ ಹಾಫ್ನ ಹಂಬಲವಾಗಿತ್ತು ಆತ ಅದನ್ನು ಈಡೇರಿಸುವ ಕನಸು ಕಂಡ. ಈ ಉದ್ದೇಶದಿಂದ ತಾನು ನಿರ್ಮಿಸಿದ ಭಾಷೆಗೆ, ತಾನು ಬಳಸಿಕೊಂಡಿದ್ದ ಹೆಸರನ್ನೆ ಇಟ್ಟ. ಆರಂಭದ ವರ್ಷಗಳಲ್ಲಿ ಈ ಭಾಷೆ ರಷ್ಯ, ಜರ್ಮನಿ, ಅಮೆರಿಕ ಸಂಯುಕ್ತ ಸಂಸ್ಥಾನ ಮೊದಲಾದ ದೇಶಗಳಲ್ಲಿ ನಿಧಾನವಾಗಿ ಪ್ರಚಾರಕ್ಕೆ ಬಂತು. ಈಗ ಲೋಕದ ಅನೇಕ ಕಡೆ ಪ್ರಸರಿಸಿದೆ. 1889ರಷ್ಟು ಹಿಂದೆಯೆ ಜರ್ಮನಿಯಲ್ಲಿ ಈ ಭಾಷೆಯ ಪತ್ರಿಕೆಯೊಂದು ಆರಂಭವಾಯಿತು. ಈ ಶತಮಾನದ ಆರಂಭದಲ್ಲಿ ಎಸ್ಪರ್ಯಾಂಟೊ ಚಳವಳಿ ಪ್ರಬಲವಾಯಿತು. ಅನೇಕ ಸಂಘ ಸಂಸ್ಥೆಗಳು ಈ ಭಾಷೆಯ ಪ್ರಚಾರಕ್ಕೆಂದೇ ಅಸ್ತಿತ್ವಕ್ಕೆ ಬಂದುವು. ಜಗತ್ತಿನಾದ್ಯಂತ ಸಾವಿರಾರು ಪುಸ್ತಕಗಳು ಎಸ್ಪರ್ಯಾಂಟೊ ಭಾಷೆಯಲ್ಲಿ ಪ್ರಕಟವಾಗಿವೆ. 65ಕ್ಕಿಂತಲೂ ಹೆಚ್ಚು ಭಾಷೆಗಳಿಂದ ಗ್ರಂಥಗಳು ಅನುವಾದಗೊಂಡಿವೆ. ನೂರಕ್ಕೂ ಹೆಚ್ಚು ನಿಯತಕಾಲಿಕಗಳು ಪ್ರಕಟವಾಗುತ್ತಿವೆ. ಅನೇಕ ರೇಡಿಯೋ ಕೇಂದ್ರಗಳು ಈ ಭಾಷೆಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿವೆ. ಕೆನಡ ಮತ್ತು ಅಮೆರಿಕೆಯ ಹದಿನೈದಕ್ಕೂ ಹೆಚ್ಚಿನ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಎಸ್ಪರ್ಯಾಂಟೊ ಬೋಧನ ವಿಷಯವಾಗಿದೆ. ಹಲವು ಕುಟುಂಬಗಳಲ್ಲಿ ಇದನ್ನು ಮನೆಮಾತಾಗಿ ಸ್ವೀಕರಿಸಿರುವ ಉದಾಹರಣೆಗಳೂ ಇವೆ. ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ಎಸ್ಪರ್ಯಾಂಟೊವನ್ನು ತೀವ್ರ ಪ್ರಚಾರಮಾಧ್ಯಮವನ್ನಾಗಿಯೂ ಬಳಸಲಾಗಿತ್ತು. ಈ ಭಾಷೆಯ ನಿರ್ಮಾಪಕ ಹೊಸ ಹೊಸ ಪದಗಳನ್ನು ಸ್ವೀಕರಿಸಲು ಸಮ್ಮತಿಸಿದ್ದನೆ ಹೊರತು, ನಿಯಮಗಳನ್ನು ಬದಲಿಸಲು, ಸರಳಗೊಳಿಸಲು ಅಪೇಕ್ಷಿಸಿರಲಿಲ್ಲ. ಆದರೆ ಎಸ್ಪರ್ಯಾಂಟೊ ನಿಯಮಗಳನ್ನು ಇನ್ನೂ ಸುಲಭಗೊಳಿಸುವ ಪ್ರಯತ್ನಗಳು ನಡೆದೇ ಇವೆ. ಅದರ ಫಲವಾಗಿ ಕಾಲಕಾಲಕ್ಕೆ ಬೇರೆ ಭಾಷೆಗಳೇ ತಲೆ ಎತ್ತುವ ಅವಕಾಶವಿದೆ. ಇಡೊ ಇಂಥದೊಂದು ಭಾಷೆ.
ನಿರ್ಮಿತ ಭಾಷೆಗಳಲ್ಲೆಲ್ಲ ಎಸ್ಪರ್ಯಾಂಟೊ ನಿರ್ವಿವಾದವಾಗಿ ಅತ್ಯಂತ ಯಶಸ್ವಿಯಾದ, ಜನಪ್ರಿಯವಾದ ಭಾಷೆ. ಸರಳತೆ, ಸಂಕ್ಷಿಪ್ತತೆ, ಸೌಲಭ್ಯ ಹಾಗೂ ಕ್ರಮಬದ್ಧತೆಗಳೇ ಈ ಭಾಷೆಯ ಮುಖ್ಯ ಸೂತ್ರಗಳು (ನೋಡಿ-ಅಂತಾರಾಷ್ಟ್ರೀಯ-ಭಾಷೆ). (ವಿ.ಜಿ.)
ಉಲ್ಲೇಖಗಳು
ಬದಲಾಯಿಸಿ