ಮಡಿಕೆ ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯಾರಿಸುವುದು ಒಂದು ಕಲೆ, ಆ ಕಲೆಯು ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.

ಮಡಿಕೆ ತಯಾರಿ
preparation of pots in srikakulam town

ಮಡಿಕೆಯ ಉಪಯೋಗಗಳು

ಬದಲಾಯಿಸಿ

ಮಡಿಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೇಖರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು ಎಲ್ಲವುಗಳಿಗೂ ಮಡಿಕೆಯನ್ನೇ ಬಳಸುವ ಕಾಲವೊಂದಿತ್ತು.

 
ರಾಮನಗರದ ಜಾನಪದ ಲೋಕದಲ್ಲಿಯ ಮಡಿಕೆ

ಒಂದು ಮಡಿಕೆ ತಯಾರಿಕೆ ಕಾರ್ಯದಲ್ಲಿ 7-10 ಹಂತಗಳಿವೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸಬಹುದು. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನಗಳ ಕಾಲಾವಕಾಶ ಅಗತ್ಯವಿದೆ.

"https://kn.wikipedia.org/w/index.php?title=ಮಡಿಕೆ&oldid=1107171" ಇಂದ ಪಡೆಯಲ್ಪಟ್ಟಿದೆ