ಭೂತಾನ್ ದೇಶದ ಇತಿಹಾಸ:

ಪ್ರಾಚೀನ ಇತಿಹಾಸಸಂಪಾದಿಸಿ

ಭೂತಾನಿನ ಪರ್ವತ ಪ್ರದೇಶಗಳು ಸಾವಿರಾರು ವರ್ಷಗಳಿಂದ ಜನ ವಸತಿ ಪ್ರದೇಶಗಳು ಎಂದು ಪುರಾತತ್ವ ಸಾಕ್ಷಿಗಳು ಹೇಳುತ್ತವೆ. ಭೂತಾನಿಗಳು ನಂಬುವ ಪ್ರಕಾರ ಲ್ಹೋಪು ಎಂಬ ಪಂಗಡದ ಜನರೇ ಭೂತಾನಿನ ಮೂಲನಿವಾಸಿಗಳು. ಮಂಗೋಲಿಯದಿಂದ ಬಂದ ಟಿಬೆಟನ್ನರು ಇವರನ್ನು ಸ್ಥಾನಪಲ್ಲಟ ಮಾಡಿದರು. ಇವರ ಸಂತತಿಯೇ ಇಂದಿನ ಭೂತಾನ್ ದೇಶದ ಬಹುಸಂಖ್ಯಾತರಾಗಿದ್ದರೆ.

ತಾಂತ್ರಿಕ ಬೌದ್ಧ ಧರ್ಮದ ಆಗಮನಸಂಪಾದಿಸಿ

ಗುರು ರಿಂಪೋಚೆ ಎಂದು ಕರೆಸಿಕೊಳ್ಳುವ ಭಾರತದ ಪದ್ಮ ಸಾಂಭವ ಎಂಬ ವ್ಯಕ್ತಿಯೇ ೮ನೇ ಶತಮಾನದಲ್ಲಿ ತಾಂತ್ರಿಕ ಬೌದ್ಧ ಧರ್ಮವನ್ನು ಭೂತಾನಿಗೆ ತಂದನೆಂದು ನಂಬಲಾಗಿದೆ. ೪೦೦ ವರ್ಷಗಳ ತರುವಾಯ ಇದು ಟಿಬೆಟ್ಟಿನ ಬೌದ್ಧ ಧರ್ಮವಾಗಿ ಮಾರ್ಪಾಡಾಯಿತು. ಈ ಗುರು ಬಹಳಷ್ಟು ಮಂದಿರ ಮತ್ತು ಆಶ್ರಮಗಳನ್ನು ಕಟ್ಟಿಸಿದನು.

ಭೂತಾನ್ ದೇಶಸಂಪಾದಿಸಿ

೧೬೦೦ರ ಕಾಲದ ತನಕ ಭೂತಾನದಲ್ಲಿ ತಮ್ಮಲ್ಲೇ ಕಚ್ಚಾಡುತ್ತಿದ್ದ ಸಾಮಂತ ರಾಜರನ್ನು ಟಿಬೆಟ್ಟಿನ ಲಾಮಾ ಮತ್ತು ಸೇನಾ ನಾಯಕ ಶಬ್ದೃಂಗ ಗವಾಂಗ್ ನಂಗ್ಯಾಲ್ ಒಗ್ಗೂಡಿಸಿ ಭೂತಾನ್ ರಾಷ್ಟ್ರೀಯ ಗುರುತುಗಳನ್ನು ಹುಟ್ಟಿಹಾಕಿದನು. ಶಬ್ದೃಂಗ ದ್ವಿಪದ್ಧತಿ ಸರ್ಕಾರವನ್ನು ಸ್ಥಾಪಿಸಿದನು. ಅಧಿಕಾರವನ್ನು ಆಧ್ಯಾತ್ಮಿಕ ಗುರು ಮತ್ತು ಆಡಳಿತಾಧಿಕಾರಿ, ಹೀಗೆ ಇಬ್ಬರು ಹಂಚಿಕೊಂಡರು. ಶಬ್ದೃಂಗನ ಸಾವಿನ ನಂತರ ಕಚ್ಚಾಟ ಮತ್ತೆ ಆರಂಭವಾಗಿ ಇನ್ನೂರು ವರ್ಷ ಬಾಳಿತು. ೧೮೮೫ರಲ್ಲಿ ತ್ರಾಂಗ್ಸಾ ಪ್ರಾಂತ್ಯದ ಉಗ್ಯೇನ್ ವಾಂಗ್ಚುಕ್ ಪ್ರಬಲನಾಗಿ ಭಾರತದಲ್ಲಿದ್ದ ಬ್ರಿಟಿಷರ ಜೊತೆ ಸಂಬಂಧ ಬೆಳೆಸಿದನು.

ಬ್ರಿಟಿಷರ ಜೊತೆ ಒಪ್ಪಂದಸಂಪಾದಿಸಿ

ಕಾಲಕಾಲಕ್ಕೆ ಉತ್ತರದಿಂದ ಟಿಬೆಟನ್ನರು ದಾಳಿ ಮಾಡುತ್ತಿದ್ದ ಹೊರತಾಗಿಯೂ, ಭೂತಾನ್ ನ ಸಾರ್ವಭೌಮತ್ವಕ್ಕೆ ಅಡ್ಡಿಯಾಗಲಿಲ್ಲ. ೧೭೦೦ರಲ್ಲಿ ಭೂತಾನೀಯರು ಕೂಚ್ ಬಿಹಾರ್ ಪ್ರಾಂತ್ಯವನ್ನು ಆಕ್ರಮಿಸಿದರು. ೧೭೭೨ರಲ್ಲಿ ಆಕ್ರಮಿತ ಜನರು ಬ್ರಿಟಿಷ್ ಇಸ್ಟ್ ಇಂಡಿಯಾ ಕಂಪನಿಯ ಮೊರೆ ಹೊಕ್ಕಾಗ ಇಬ್ಬರೂ ಸೇರಿ ಭೂತಾನ್ ಸೈನಿಕರನ್ನು ಆ ಪ್ರಾಂತ್ಯದಿಂದ ಹೊರದೂಡಿ ಭೂತಾನದ ಮೇಲೆಯೇ ೧೭೭೪ರಲ್ಲಿ ಆಕ್ರಮಣ ಮಾಡಿದರು. ಕೊನೆಗೆ ಬ್ರಿಟಿಷರ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಹಿಂದಿನ ಸ್ಥಿತಿ ಕಾಯ್ದುಕೊಂಡಿತು. ಆದರೆ ಗಡಿ ವಿವಾದ ಬಗೆಹರಿಯದೆ ಮುಂದಿನ ೧೦೦ ವರ್ಷಗಳ ವರೆಗೆ ಬ್ರಿಟಿಷರ ಜೊತೆ ಚಕಮಕಿ ನಡೆದವು.

ರಾಜಪ್ರಭುತ್ವದ ಸ್ಥಾಪನೆ ಮತ್ತು ಅಂತ್ಯಸಂಪಾದಿಸಿ

ಬ್ರಿಟಿಷರ ಪ್ರಭಾವದಿಂದ ಡಿಸೆಂಬರ್ ೧೭, ೧೯೦೭ ರಂದು ರಾಜ ಪ್ರಭುತ್ವದ ಉಗಮವಾಗಿ ಉಗ್ಯೇನ್ ವಾಂಗ್ಚುಕ್ ಭೂತಾನದ ಪ್ರಥಮ ದೊರೆಯಾದನು. ಈ ದಿನವನ್ನು ಇಂದಿಗೂ ಭೂತಾನದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ಮೂರು ವರ್ಷಗಳ ನಂತರ ಬ್ರಿಟಿಷರ ಜೊತೆ ಒಪ್ಪಂದವಾಗಿ ಬ್ರಿಟಿಷರ ರಕ್ಷಣೆ ದೊರೆತಿತು. ರಾಜ ಪ್ರಭುತ್ವವನ್ನು ಒಪ್ಪದ ಶಬ್ದೃಂಗನ ಬೆಂಬಲಿಗರು, ಶಬ್ದೃಂಗನ ಮರುಜನ್ಮವೆತ್ತಿದವನೇ ದೇಶವನ್ನಾಳಬೇಕೆಂದು ಪಟ್ಟು ಹಿಡಿದು, ಕೊನೆಗೆ ರಾಜ ಪ್ರಭುತ್ವವನ್ನು ಕೊನೆಗಾಣಿಸಲು ಮಹಾತ್ಮಾ ಗಾಂಧಿಯವರ ಸಹಾಯವನ್ನೂ ಕೋರಿದರು. ಕೊನೆಗೆ ರಾಜನ ಬೆಂಬಲಿಗರು ಶಬ್ದೃಂಗನ ಹತ್ಯೆಗೈದರು.

ಆಶ್ಚರ್ಯಕರವಾಗಿ ಭೂತಾನದ ಮೂರನೇ ಮತ್ತು ನಾಲ್ಕನೇ ದೊರೆಗಳು ತಮ್ಮ ಅಧಿಕಾರವನ್ನು ಮೊಟಕುಗೊಳಿಸುವ ಸೂಚನೆ ಹೊರಡಿಸಿದರು. ಡಿಸೆಂಬರ್ ೨೦೦೫ರಲ್ಲಿ ಭೂತಾನದ ನಾಲ್ಕನೇ ಮತ್ತು ಈಗಿನ ದೊರೆ ೨೦೦೮ರಲ್ಲಿ ರಾಜ್ಯಾಧಿಕಾರವನ್ನು ತ್ಯಜಿಸಿ ದೇಶದ ಮೊದಲ ಚುನಾವಣೆಯನ್ನು ನಡೆಸಿ ದೇಶಕ್ಕೆ ಹೊಸ ಸಂವಿಧಾನವನ್ನು ಪರಿಚಯಿಸುವದಾಗಿ ಘೋಷಿಸಿದನು.

ಪ್ರತ್ಯೇಕತೆಯಿಂದ ಹೊರಕ್ಕೆಸಂಪಾದಿಸಿ

ಮೂರನೇ ದೊರೆ ಜಿಗ್ಮೆ ದೊರ್ಜಿ ವಾಂಗ್ಚುಕ್ ನಿರ್ದೇಶನದಲ್ಲಿ ಭೂತಾನವು ಹೊರಗಿನ ಪ್ರಪಂಚಕ್ಕೆ ನಿಧಾನವಾಗಿ ತೆರೆದುಕೊಳ್ಳಲಾರಂಭಿಸಿತು. ೧೯೭೧ರಲ್ಲಿ ಸಂಯುಕ್ತ ರಾಷ್ಟ್ರಗಳ ಸಾರ್ವಭೌಮ ರಾಷ್ಟ್ರವಾಗಿ ಸೇರಿಕೊಂಡಿತು. ಈಗಿನ ನಾಲ್ಕನೇ ದೊರೆಯಾದ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ೧೯೭೨ರಲ್ಲಿ ೧೭ನೇ ವಯಸ್ಸಿನಲ್ಲಿ ಸಿಂಹಾಸನವನ್ನೇರಿ ಪ್ರಪಂಚದ ನಾನಾ ದೇಶಗಳ ರಾಯಭಾರಿಗಳು ಮತ್ತು ಅತಿಥಿಗಳನ್ನು ದೇಶಕ್ಕೆ ಆಹ್ವಾನಿಸಿದರು. ನಾಲ್ಕನೇ ದೊರೆಯು ದೇಶವನ್ನು ಸಾಂಪ್ರದಾಯಿಕತೆಯನ್ನು ಬಿಡಲಾರದೇ ೨೧ನೇ ಶತಮಾನದತ್ತ ಮುನ್ನಡೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಸಂವಿಧಾನಸಂಪಾದಿಸಿ

ಮಾರ್ಚ್ ೨೬, ೨೦೦೫ರಂದು ದೊರೆ ಮತ್ತು ಸರ್ಕಾರ ಸಂವಿಧಾನದ ಕರಡನ್ನು ಪ್ರಜೆಗಳಿಗೆ ಹಂಚಿದರು. ಜನರಿಂದ ಚುನಾಯಿತರಾದ ೨೦ ಪ್ರತಿನಿಧಿಗಳು ಮತ್ತು ದೊರೆ ಆರಿಸಿದ ೫ ಅಸಾಧಾರಣ ವ್ಯಕ್ತಿಗಳಿಂದ ಕೂಡಿದ ರಾಷ್ಟ್ರೀಯ ಪರಿಷತ್ತನ್ನು ಸ್ಥಾಪಿಸಿಲಾಗಿದೆ. ಇದು ಈಗಿರು ರಾಷ್ಟ್ರೀಯ ಸಭೆಯ ಜೊತೆ ಕಾರುಅ ನಿರ್ವಹಿಸುತ್ತದೆ.

ಶಾಂತಿ ಮತ್ತು ಭದ್ರತೆಗೆ ಆತಂಕಗಳುಸಂಪಾದಿಸಿ

ಚೀನಾ ಆಕ್ರಮಣಸಂಪಾದಿಸಿ

ನವೆಂಬರ್ ೧೩, ೨೦೦೫ರಂದು ಚೀನಾ ಸೈನ್ಯವು ಭೂತಾನ್ ದೇಶದ ಹಲವು ಭಾಗಗಳಲ್ಲಿ ಪ್ರವೇಶಿಸಿ, ೨೦ ಕಿ.ಮಿ. ಒಳಗೆ ನುಸುಳಿ, ಅನೇಕ ಸೇತುವ ಮತ್ತು ರಸ್ತೆಗಳನ್ನು ನಿರ್ಮಿಸಿದರು. ಚೀನಾ ರಾಯಭಾರಿಗಳು ಇದನ್ನು ಅಲ್ಪಗೊಳಿಸಿದರು. [೧]. ಭೂತಾನಿನ ೬೦೦೦ ಸೈನಿಕರು ಚೀನಾದ ೨೨ ಲಕ್ಷಕ್ಕಿಂತ ಅಧಿಕ ಸೈನಿಕರಿಗೆ ಯಾವುದೇ ಲೆಕ್ಕವಲ್ಲ. ಆದ್ದರಿಂದ ಭೂತಾನವು ವಿಶ್ವ ಸಮುದಾಯ ಮತ್ತು ಭಾರತೀಯ ಭೂಸೇನೆಯ ಮೇಲೆ ರಕ್ಷಣೆಗಾಗಿ ಅವಲಂಬಿಸಬೇಕು.

ಅಸ್ಸಾಮಿ ಉಗ್ರವಾದಿಗಳುಸಂಪಾದಿಸಿ

ಸ್ವತಂತ್ರ ಅಸ್ಸಾಮಿ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶವುಳ್ಳ ಈಶಾನ್ಯ ಭಾರತದ ಉಗ್ರವಾದಿಗಳು ದಕ್ಷಿಣ ಭೂತಾನಿನಲ್ಲಿ ಗೆರಿಲ್ಲಾ ಶಾಖೆಗಳನ್ನು ತೆರೆದಿದ್ದಾರೆ. ಈ ವಿಷಯವಾಗಿ ೨೦೦೩ರಲ್ಲಿ ನಡೆದ ಮಾತುಕತೆಗಳು ವಿಫಲವಾದ ಕಾರಣ ದೇಶವ್ಉ ತನ್ನ ಸೇನೆಯನ್ನು ಬಲಿಷ್ಠಗೊಳಿಸಬೇಕಿದೆ.

ನೇಪಾಳಿ ವಲಸೆಗಾರರುಸಂಪಾದಿಸಿ

೧೯೮೮ರಲ್ಲಿ ಒಂದು ಲಕ್ಷ ನೇಪಾಳಿ ಭಾಷಿಕರನ್ನು ದಕ್ಷಿಣ ಭೂತಾನಿನಿಂದ ಉಚ್ಹಾಟಿಸಿಲಾಯಿತು. ಅನೇಕ ವರ್ಷಗಳ ಮಾತುಕತೆಗಳ ನಂತರ ೨೦೦೦ದಲ್ಲಿ ಕೆಲವು ವಲಸೆಗಾರರನ್ನು ಮಾತ್ರ ದೇಶಕ್ಕೆ ಮರುಸೇರ್ಪಡೆಗೊಳಿಸಲು ತಾತ್ವಿಕವಾಗಿ ಒಪ್ಪಿಕೊಂಡರೂ ಒಬ್ಬರನ್ನೂ ಬಿಟ್ಟುಕೊಂಡಿಲ್ಲ. ಈ ವಲಸೆಗಾರರಲ್ಲಿ ಅಶಾಂತಿ ಮೂಡುತ್ತಿದೆ.

ಭೂತಾನ್ ಕಮ್ಯೂನಿಸ್ಟ್ ಪಕ್ಷಸಂಪಾದಿಸಿ

ಈ ವಲಸೆಗಾರರ ಮಧ್ಯದಿಂದ ಏಪ್ರಿಲ್ ೨೦೦೩ರಲ್ಲಿ ಈ ಪಕ್ಷವು ಉದಯವಾಗಿದ್ದು ರಾಜಪ್ರಭುತ್ವವನ್ನು ಅಂತ್ಯಗೊಳಿಸಲು ಪಣತೊಟ್ಟಿದೆ. ನೆರೆ ರಾಷ್ಟ್ರವಾದ ನೇಪಾಳದಲ್ಲಿನಂತೆ ಜನರ ಯುದ್ಧ ಮಾಡುವಂತೆ ಪ್ರೇರೇಪಿಸುತ್ತದೆ. ಇದಕ್ಕೆ ಭೂತಾನೀ ಕ್ರಾಂತಿಕಾರಿ ವಿದ್ಯಾರ್ಥಿಗಳ ಸಂಘದ ಬೆಂಬಲವೂ ಇದೆ. ಈ ಎರಡೂ ಪಕ್ಷಗಳು ಬಹುತೇಕವಾಗಿ ನೇಪಾಳಿಗಳನ್ನೊಳಗೊಂಡಿದೆ.

ಹೊರಗಿನ ಸಂಪರ್ಕಗಳುಸಂಪಾದಿಸಿ

ಭಾರತೀಯ ಉಪಖಂಡದ ಇತಿಹಾಸ
             
ಶಿಲಾಯುಗ ಕ್ರಿ.ಪೂ.೭೦,೦೦೦– ೭೦೦೦
ಮೆಹರಗಢ ಸಂಸ್ಕೃತಿ ಕ್ರಿ.ಪೂ.೭೦೦೦– ೩೩೦೦
ಸಿಂಧೂ ನದಿ ನಾಗರಿಕತೆ ಕ್ರಿ.ಪೂ.೩೩೦೦–೧೭೦೦
ಹರಪ್ಪ ನಾಗರಿಕತೆ ಕ್ರಿ.ಪೂ.೧೭೦೦–೧೩೦೦
ವೈದಿಕ ನಾಗರಿಕತೆ ಕ್ರಿ.ಪೂ.೧೫೦೦–೫೦೦
- ಪ್ರಾಚೀನ ರಾಜಮನೆತನಗಳು - ಕ್ರಿ.ಪೂ.೧೨೦೦–೭೦೦
ಮಹಾ ಜನಪದಗಳು ಕ್ರಿ.ಪೂ.೭೦೦–೩೦೦
ಮಗಧ ಸಾಮ್ರಾಜ್ಯ ಕ್ರಿ.ಪೂ.೬೮೪–೨೬
- ಮೌರ್ಯ ಸಾಮ್ರಾಜ್ಯ - ಕ್ರಿ.ಪೂ.೩೨೧–೧೮೪
ನಡುಗಾಲದ ರಾಜಮನೆತನಗಳು ಕ್ರಿ.ಪೂ.೨೦೦– ಕ್ರಿ.ಶ.೧೨೭೯
- ಪ್ರಾಚೀನ ತಮಿಳು ರಾಜರು - ಕ್ರಿ.ಪೂ.೨೦೦–ಕ್ರಿ.ಶ.೨೦೦
- ಕುಶಾನ ಸಾಮ್ರಾಜ್ಯ - ಕ್ರಿ.ಶ.೬೦–ಕ್ರಿ.ಶ.೨೪೦
- ಗುಪ್ತ ಸಾಮ್ರಾಜ್ಯ - ೨೪೦–೫೫೦
- ಚಾಲುಕ್ಯ ಸಾಮ್ರಾಜ್ಯ - ೫೪೩೧೨೦೦
- ಪಾಳ ಸಾಮ್ರಾಜ್ಯ - ೭೫೦೧೧೭೪
- ಚೋಳ ಸಾಮ್ರಾಜ್ಯ - ೮೪೮೧೨೭೯
ಮುಸ್ಲಿಮ್ ಸುಲ್ತಾನರು ೧೨೧೦೧೫೯೬
- ದೆಹಲಿ ಸುಲ್ತಾನರು - ೧೨೧೦೧೫೨೬
- ಡೆಕ್ಕನ್ ಸುಲ್ತಾನರು - ೧೪೯೦೧೫೯೬
ಹೊಯ್ಸಳ ಸಾಮ್ರಾಜ್ಯ ೧೦೪೦೧೩೪೬
ವಿಜಯನಗರ ಸಾಮ್ರಾಜ್ಯ ೧೩೩೬೧೫೬೫
ಮೊಘಲ್ ಸಾಮ್ರಾಜ್ಯ ೧೫೨೬೧೭೦೭
ಮರಾಠ ಸಾಮ್ರಾಜ್ಯ ೧೬೭೪೧೮೧೮
ಬ್ರಿಟಿಷ್ ಆಳ್ವಿಕೆ ೧೭೫೭೧೯೪೭
ಆಧುನಿಕ ಭಾರತ ೧೯೪೭ ನಂತರ
ಇತರೆ ಇತಿಹಾಸಗಳು
ಭಾರತ · ಪಾಕಿಸ್ತಾನ · ಬಾಂಗ್ಲಾದೇಶ
ಶ್ರೀಲಂಕಾ · ನೇಪಾಳ · ಭೂತಾನ್ · ಟಿಬೆಟ್
ಪ್ರಾಂತೀಯ ಇತಿಹಾಸಗಳು
ಪಂಜಾಬ್ · ದಕ್ಷಿಣ ಭಾರತ · ಸಿಂಧ್ · ಬಂಗಾಳ
ವಿಶೇಷ ಇತಿಹಾಸಗಳು
ರಾಜಮನೆತನಗಳು · ಭಾಷೆಗಳು · ಸಾಹಿತ್ಯ
ಸೇನೆ · ಗಣಿತ · ವಿಜ್ಞಾನ ಮತ್ತು ತಂತ್ರಜ್ಞಾನ