ಶ್ರೀಲಂಕಾದ ಇತಿಹಾಸ
This article needs attention from an expert in History.(April 2008) |
ಶ್ರೀಲಂಕಾ ದೇಶವು, ಕಂಡ ಮಹತ್ವದ ಘಟನೆಗಳು ಮತ್ತು ಮಾನವನ ಪುರಾತತ್ತ್ವಶಾಸ್ತ್ರದ ಆವಿಷ್ಕಾರಗಳು ಹಾಗೂ ಕಾಲಾನುಕ್ರಮದಲ್ಲಿ ದೊರೆತ ದಾಖಲೆಗಳನ್ನು ಶ್ರೀಲಂಕಾದ ಇತಿಹಾಸ ಎಂದು ಕರೆಯಲಾಗುತ್ತದೆ. ಹಲವಾರು ಪುರಾತತ್ತ್ವಶಾಸ್ತ್ರದ ಸಾಕ್ಷ್ಯಾಧಾರ ಮತ್ತು ಮಾಹಿತಿ ವಿವರಗಳನ್ನು ಶ್ರೀಲಂಕನ್ನರು ಮತ್ತು ಶ್ರೀಲಂಕನ್ನೇತರರು ಬರೆದಿದ್ದಾರೆ, ಅವು ಸುಮಾರು 10,000 ವರ್ಷಗಳಿಗಿಂತಲೂ ಹೆಚ್ಚಿನ ಕಾಲದ ಇತಿಹಾಸವನ್ನು ದಾಖಲಿಸುತ್ತವೆ.
ಬಾಲಂಗೊಡ ಮಾನವ ನ ಪುರಾತತ್ತ್ವಶಾಸ್ತ್ರದ ಶೋಧನೆಯು ಸುಮಾರು 30,000 ವರ್ಷಗಳಷ್ಟು ಹಿಂದಿನ ನಾಗರಿಕತೆಯ ಬಗ್ಗೆ ಸಾಕ್ಷ್ಯವನ್ನು ಒದಗಿಸುತ್ತದೆ. ಶ್ರೀಲಂಕಾದ ಪ್ರಸಿದ್ಧ ಕಾಲಾನುಕ್ರಮ ವರದಿಯೊಂದಿಗೆ ಮಹಾವಂಶ, ದೀಪವಂಶ, ಕುಲವಂಶ ಮತ್ತು ರಾಜವೆಲಿಯ ಮೊದಲಾದವು ಕ್ರಿ.ಪೂ. 6ನೇ ಶತಮಾನದಲ್ಲಿ ಸಿಂಹಳೀಯರ ರಾಜಪ್ರಭುತ್ವವು ಆರಂಭವಾದಂದಿನಿಂದ ಹಿಡಿದು ಹದಿನಾರನೇ ಶತಮಾನದಲ್ಲಿ ಯುರೋಪಿಯನ್ ವಸಾಹತುಶಾಹಿಗಳ ಆಗಮನ ಮತ್ತು 1815ರಲ್ಲಿ ರಾಜಪ್ರಭುತ್ವದ ಪದಚ್ಯುತಿಯವರೆಗಿನ ಶ್ರೀಲಂಕನ್ನರ ದಾಖಲಿತ-ಇತಿಹಾಸವನ್ನು ಹೊಂದಿವೆ. ಈ ರಾಷ್ಟ್ರದ ಬಗೆಗಿನ ಕೆಲವು ಐತಿಹಾಸಿಕ ದಾಖಲೆಗಳು ಪ್ರಸಿದ್ಧ ಭಾರತೀಯ ಪುರಾಣಗಳಾದ ವಾಲ್ಮೀಕಿ ಮುನಿಯ ರಾಮಾಯಣ, ಮಹಾಭಾರತ ಮತ್ತು ಗೌತಮ ಬುದ್ಧನ ಬೋಧನೆಗಳ ಪ್ರಾಚೀನ ಪುಸ್ತಕಗಳಲ್ಲೂ ಒಳಗೊಂಡಿವೆ.
ಹದಿನಾರನೇ ಶತಮಾನದ ನಂತರ, ರಾಷ್ಟ್ರದ ಕೆಲವು ಕರಾವಳಿ ಪ್ರದೇಶಗಳನ್ನು ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟೀಷರು ಆಳಿದರು. 1815ರ ನಂತರ ಸಂಪೂರ್ಣ ರಾಷ್ಟ್ರವನ್ನು ಬ್ರಿಟಿಷ್ ವಸಾಹತುಶಾಹಿಗಳು ಆಳ್ವಿಕೆ ನಡೆಸಿದರು. ನಂತರ 1948ರಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ನೀಡಲಾಯಿತು. ಅದಲ್ಲದೇ 1972ರ ನಂತರ ಇದು ಸಾರ್ವಭೌಮ ರಾಷ್ಟ್ರವಾಯಿತು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಶ್ರೀಲಂಕನ್ನರು ನಡೆಸಿದ ಸಶಸ್ತ್ರ ದಂಗೆಗಳೆಂದರೆ 1818ರ ಯುವ ದಂಗೆ ಮತ್ತು 1848ರ ಮ್ಯಾಟಲೆ ದಂಗೆ .
1971ರ ಎಪ್ರಿಲ್ ದಂಗೆ ಎನ್ನುವ ಸಶಸ್ತ್ರ ಯುವ ದಂಗೆಯು ನಡೆದ ನಂತರ 1978ರಲ್ಲಿ ಹೊಸ ಸಂವಿಧಾನವು ಚಾಲ್ತಿಗೆ ಬಂದಿತು. ಅದರ ಕಾರ್ಯನಿರ್ವಾಹಕ ಅಧ್ಯಕ್ಷ ಪದವಿಗೇರಿದ ವ್ಯಕ್ತಿ ರಾಷ್ಟ್ರದ ಮುಖ್ಯಸ್ಥರಾದರು. ಶ್ರೀಲಂಕನ್ನರ ನಾಗರಿಕ ಕದನವು 1983ರಲ್ಲಿ ಆರಂಭವಾಯಿತು ಮತ್ತು ಮತ್ತೊಂದು ಸಶಸ್ತ್ರ ಯುವ ದಂಗೆಯು 1987-89ರಲ್ಲಿ ಸಂಭವಿಸಿತು. ಈ 26 ವರ್ಷಗಳ ನಾಗರಿಕ ಸಂಘರ್ಷ 2009ರ ವರ್ಷದಲ್ಲಿ ಕೊನೆಗೊಂಡಿತು.
ಕ್ರಿ.ಪೂ. 3ನೇ ಶತಮಾನದಲ್ಲಿ ಅರ್ಹತ್ ಮಹಿಂದ (ಭಾರತೀಯ ಚಕ್ರವರ್ತಿ ಅಶೋಕನ ಪುತ್ರ) ಬೌದ್ಧ ಧರ್ಮನನ್ನು ಪರಿಚಯಿಸಿದ ನಂತರ ಇಲ್ಲಿ ಗಮನಾರ್ಹ ಸಾಂಸ್ಕೃತಿಕ ಬದಲಾವಣೆಗಳು ಕಂಡುಬಂದವು. 16ನೇ ಶತಮಾನದಲ್ಲಿ ಯುರೋಪಿಯನ್ ವಸಾಹತುಶಾಹಿಗಳ ಆಗಮನದ ನಂತರ ಮತ್ತು 1977ರ ನಂತರ ಹೊಸದಾಗಿ ಆರಂಭಗೊಂಡ ಆರ್ಥಿಕ ನೀತಿಗಳೂ ಸಹ ರಾಷ್ಟ್ರದಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬದಲಾಯಿಸಿದವು.
ಇತಿಹಾಸ-ಪೂರ್ವ ಶ್ರೀಲಂಕಾ
ಬದಲಾಯಿಸಿPrehistory of Sri Lanka|Main|Prehistory of Sri Lanka
ಶ್ರೀಲಂಕಾದಲ್ಲಿ ಮಾನವನ ನೆಲೆಸುವಿಕೆಯ ಬಗೆಗಿನ ಆರಂಭಿಕ ಪುರಾತತ್ತ್ವಶಾಸ್ತ್ರದ ದಾಖಲೆಯು ಬಾಲಂಗೊಡದಲ್ಲಿ ಕಂಡುಬಂದಿದೆ. ಈ ಬಾಲಂಗೊಡ ಮಾನವರು (ಆದಿ ಮಾನವ ಸಂಕುಲ)ಶ್ರೀಲಂಕಾ ದ್ವೀಪಕ್ಕೆ ಸುಮಾರು ೩೪,೦೦೦ ವರ್ಷಗಳ ಹಿಂದೆ ಬಂದಿದ್ದರು. ಅಲ್ಲದೇ ಅವರನ್ನು ಗುಹೆಗಳಲ್ಲಿ ವಾಸಿಸುತ್ತಿದ್ದ ಮಧ್ಯಶಿಲಾಯುಗದ ಬೇಟೆಗಾರ ಸಂಗ್ರಾಹಕರೆಂದು ಗುರುತಿಸಲಾಗಿದೆ.(ಅವರು ಆಗಿನ ವಿಷಯ-ಮಾಹಿತಿ ಸಂಗ್ರಹಿಸುತ್ತಿದ್ದರೆನ್ನಲಾಗಿದೆ.) ಪ್ರಸಿದ್ಧ ಬಾಟದೊಂಬಲೇನ ಮತ್ತು ಫಾ-ಹೈನ್ ರಾಕ್ ಗುಹೆಯನ್ನೂ ಒಳಗೊಂಡಂತೆ ಈ ಗುಹೆಗಳಲ್ಲಿ ಕೆಲವು, ಶ್ರೀಲಂಕಾ ದ್ವೀಪದ ಮೊದಲ ನಿವಾಸಿಗರೆಂದು ತಿಳಿಯಲಾದ ಈ ಜನರ ಹಲವಾರು ಪ್ರಾಕ್ತನ (ಹಸ್ತ)ಕೃತಿಗಳನ್ನು ಒದಗಿಸಿವೆ.
ಬಹುಶಃ ಬಾಲಂಗೊಡ ಮಾನವರು ತಮಗೆ ಬೇಕಾದ ಜಾಗ-ಪ್ರಸ್ಥ ಭೂಮಿ ಪಡೆಯಲು ಆ ಜಾಗದಲ್ಲಿನ ಮರಗಳನ್ನು ಸುಟ್ಟು ಕೇಂದ್ರ ಬೆಟ್ಟಗಳಲ್ಲಿ ಹಾರ್ಟನ್ ಬಯಲು ಪ್ರದೇಶವನ್ನು ನಿರ್ಮಿಸಿರಬಹುದು. ಹೀಗಾಗಿ ಕ್ರಿ.ಪೂ. ೧೫,೦೦೦ರಲ್ಲಿ ಬಯಲು ಪ್ರದೇಶಗಳಲ್ಲಿ ಕಂಡುಬಂದ ಓಟ್ ಮತ್ತು ಬಾರ್ಲಿಗಳು, ಅಷ್ಟು ಹಿಂದೆಯೇ ಕೃಷಿಯು ಅಭಿವೃದ್ಧಿಗೊಂಡಿತ್ತು ಎಂಬುದನ್ನು ಸೂಚಿಸುತ್ತವೆ.[೧]
ಕೆಲವು ಸಣ್ಣ ಗ್ರ್ಯಾನೈಟ್ ಪರಿಕರಗಳು (ಸುಮಾರು ೪ ಸೆಂಟಿಮೀಟರ್‌ಗಳಷ್ಟು ಗಾತ್ರದ), ಸುಟ್ಟ ಜೇಡಿಮಣ್ಣಿನ ಪಾತ್ರೆಗಳು, ಇದ್ದಿಲಾದ ಮರಗಳ ಅವಶೇಷಗಳು ಮತ್ತು ಜೇಡಿಮಣ್ಣಿನಿಂದ ತಯಾರಿಸಿದ ಹೂತು ಹೋಗಿರುವ ಮಡಿಕೆಗಳು ಮಧ್ಯಶಿಲಾಯುಗಕ್ಕೆ ಸೇರಿದವೆಂದು ಸೂಚಿಸುತ್ತವೆ. ಕ್ರಿ.ಪೂ. ೬೦೦೦ರಷ್ಟು ಹಿಂದಿನ ಮಾನವನ ಅವಶೇಷಗಳನ್ನು, ವಾರಣ ರಾಜ ಮಹಾ ವಿಹಾರದಲ್ಲಿನ ಗುಹೆಯ ಸುತ್ತಮುತ್ತ ಮತ್ತು ಕಾಲಟುವವ ಪ್ರದೇಶದ ಜಲಸಂಗ್ರಹಾಗಾರದಲ್ಲಿ ಮಾಡಿದ ಇತ್ತೀಚಿನ ಉತ್ಖನನಗಳಲ್ಲಿ ಕಂಡುಹಿಡಿಯಲಾಗಿದೆ.
ಮೂಲತಃ ಶ್ರೀಲಂಕಾಕ್ಕೆ ಸೇರಿದ ದಾಲ್ಚಿನ್ನಿ ಚಕ್ಕೆ(ಸಿನ್ನಾಮನ್)ಯು ಬಹುಹಿಂದೆಯೇ ಕ್ರಿ.ಪೂ. ೧೫೦೦ರಲ್ಲಿ ಪುರಾತನ ಈಜಿಪ್ಟಿನಲ್ಲಿ ಕಂಡುಬಂದಿತ್ತು. ಇದು ಈಜಿಪ್ಟ್ ಮತ್ತು ಈ ದ್ವೀಪದ ನಿವಾಸಿಗರ ಮಧ್ಯೆ ಬಹಳಷ್ಟು ಹಿಂದೆಯೇ ವ್ಯಾಪಾರ ಸಂಪರ್ಕವಿತ್ತು ಎಂಬುದನ್ನೂ ಸೂಚಿಸುತ್ತದೆ. ಬೈಬಲ್‌ನ ಟಾರ್ಶಿಶ್ (ಅಟ್ಲಾಂಟಿಕ್ ಸಮುದ್ರ ಪ್ರದೇಶ) ಈ ದ್ವೀಪದಲ್ಲಿ ನೆಲೆಯಾಗಿರಬಹುದಾದ ಸಾಧ್ಯತೆ ಇದೆ. (ಜೇಮ್ಸ್ ಎಮರ್ಸನ್ ಟೆನ್ನೆಂಟ್ ಗ್ಯಾಲ್ಲೆ ಒಂದಿಗೆ ಶ್ರೀಲಂಕಾವನ್ನು ಗುರುತಿಸಿದರು).[೨]
ಪ್ರೋಟೊಹಿಸ್ಟಾರಿಕ್ ಆರಂಭಿಕ(ಲೋಹಯುಗ) ಕಬ್ಬಿಣದ ಯುಗವು ದಕ್ಷಿಣ ಭಾರತದಲ್ಲಿ ಕ್ರಿ.ಪೂ. ೧,೨೦೦ರಷ್ಟು ಹಿಂದೆಯೇ ಕಂಡುಬಂದಿತ್ತು (ಪೊಸ್ಸೆಹ್ಲ್ ೧೯೦೦; ದೇರನಿಯಗಲ(ಬರಹಗಾರ್ತಿ-ಕಲಾವಿದೆ-ಮಾಹಿತಿಯಲ್ಲಿ) ೧೯೯೨:೭೩೪). ಶ್ರೀಲಂಕಾದಲ್ಲಿ ಇದರ ಆರಂಭಿಕ ಕುರುಹು ಸಿಗಿರಿಯಾದ ಅಲಿಗಲ ಮತ್ತು ಅನುರಾಧಪುರದಲ್ಲಿ ಸುಮಾರು ಕ್ರಿ.ಪೂ. ೧೦೦೦-೮೦೦ರಲ್ಲಿ ಕಂಡುಬಂದಿದೆ (ಗ್ರಂಥಕರ್ತೆ ದೇರನಿಯಗಲ 1992:709-29; ಕರುನಾರಟ್ನೆ ಮತ್ತು ಅದಿಕಾರಿ 1994:58; ಮೋಗ್ರೆನ್ 1994:39; ಅನುರಾಧಪುರ ಕಾಲನಿರ್ದೇಶನವನ್ನು ಈಗ ಕೊನಿಂಗ್ಹ್ಯಾಮ್ 1999ರಿಂದ ದೃಢೀಕರಿಸಲಾಗಿದೆ). ಹೆಚ್ಚಿನ ಅನ್ವೇಷಣೆಗಳು ಶ್ರೀಲಂಕನ್ನರನ್ನು ದಕ್ಷಿಣ ಭಾರತದೊಂದಿಗೆ ಹೋಲಿಸಲು ಸಮರ್ಪಕವಾದ ಮಾಹಿತಿ ಹೊಂದಿವೆ ಎಂಬ ಸಂದೇಶ ಕಳುಹಿಸುತ್ತದೆ.[೩]
ಶ್ರೀಲಂಕಾದಲ್ಲಿ (ಪ್ರಾಕ್ತನ ಯುಗ)ಕಬ್ಬಿಣದ ಯುಗದ ಆರಂಭದ ಬಗೆಗಿನ ಪುರಾತತ್ತ್ವಶಾಸ್ತ್ರದ ಸಾಕ್ಷ್ಯವು ಅನುರಾಧಪುರದಲ್ಲಿ ಕಂಡುಬಂದಿದೆ. ಇಲ್ಲಿ ಕ್ರಿ.ಪೂ. 900ಕ್ಕಿಂತಲೂ ಹಿಂದೆ ಒಂದು ದೊಡ್ಡ ನಗರ-ವಹಾಸತು ಕಂಡುಬಂದಿತ್ತು. ಈ ವಹಾಸತು ಕ್ರಿ.ಪೂ. 900ರಲ್ಲಿ ಸುಮಾರು 15 ಹೆಕ್ಟೇರುಗಳಷ್ಟಿತ್ತು, ಆದರೆ ಕ್ರಿ.ಪೂ. 700ರ ಹೊತ್ತಿಗೆ ಇದು 50 ಹೆಕ್ಟೇರುಗಳವರೆಗೆ ವಿಸ್ತರಿಸಿತು.[೧] Archived 2007-11-10 ವೇಬ್ಯಾಕ್ ಮೆಷಿನ್ ನಲ್ಲಿ. ಅದೇ ಅವಧಿಯಲ್ಲಿ ಅಂತಹುದೇ ಒಂದು ಪ್ರದೇಶವು ಸಿಗಿರಿಯಾದ ಅಲಿಗಲದ ಹತ್ತಿರದಲ್ಲೂ ಕಂಡುಬಂದಿದೆ.[೪]
ವನ್ನಿಯಲ-ಅಯೆಟ್ಟೊ ಅಥವಾ ವೇದಾಸ್ ಎಂದು ಕರೆಯಲ್ಪಡುವ ಬೇಟೆಗಾರ-ಸಂಗ್ರಾಹಕ ಜನರು (ಇವರು ಈಗಲೂ ದ್ವೀಪದ ಕೇಂದ್ರ, ಯುವ ಮತ್ತು ಈಶಾನ್ಯ ಭಾಗದಲ್ಲಿ ವಾಸಿಸುತ್ತಿದ್ದಾರೆ) ಬಹುಶಃ ಮೊದಲ ನಿವಾಸಿಗರ (ಬಾಲಂಗೊಡ ಮಾನವ) ಸಂತತಿಯವರಾಗಿರಬಹುದು. ಆಫ್ರಿಕಾದಿಂದ ಮಾನವರು ಭಾರತಕ್ಕೆ ಹರಡಿದ ಸಂದರ್ಭದಲ್ಲಿ ಇವರು ಈ ದ್ವೀಪಕ್ಕೆ ಸುತ್ತಲಿನ ಪ್ರಧಾನ ಭೂಭಾಗದಿಂದ ವಲಸೆ ಬಂದಿರಬಹುದು.
ಸುಮಾರು ಕ್ರಿ.ಪೂ.500 ರಲ್ಲಿ ಶ್ರೀಲಂಕನ್ನರು (ಪುರಾತತ್ತ್ವಶಾಸ್ತ್ರದ ಹಂತ?, ಸಾಂಸ್ಕೃತಿಕ/ಭಾಷೆಯ ಗುರುತು?) ಒಂದು ಅಪರೂಪದ ಅನನ್ಯ ಜಲೀಯ ನಾಗರಿಕತೆಯನ್ನು ಅಭಿವೃದ್ಧಿಪಡಿಸಿದರು.(ನೀರಿನ ಸಂಪೂರ್ಣ ಉಪಯೋಗ ಕಂಡುಕೊಂಡಿದ್ದರು) ಆ ಸಂದರ್ಭದಲ್ಲಿ ಅವರು ಹಲವಾರು ದೊಡ್ಡ ಜಲಾಶಯಗಳು ಮತ್ತು ಅಣೆಕಟ್ಟುಗಳು ಮಾತ್ರವಲ್ಲದೆ ಅಪಾರ ಪಿರಮಿಡ್-ರೀತಿಯ ಸ್ಥೂಪ (ಡಗೋಬ) ರಚನೆಗಳನ್ನು ನಿರ್ಮಿಸಿದರು. ಈ ಹಂತದ ಶ್ರೀಲಂಕನ್ನರ ಸಂಸ್ಕೃತಿಯು ಗಾಢವಾಗಿ ಆರಂಭಿಕ ಬೌದ್ಧಧರ್ಮದಿಂದ ಪ್ರಭಾವಕ್ಕೊಳಗಾಗಿತ್ತು.[೫] ಬೌದ್ಧ ಧರ್ಮದ ಪವಿತ್ರ ಗ್ರಂಥಗಳ ಪ್ರಕಾರ, ಬುದ್ಧದೇವನು ನಾಗ ರಾಜರನ್ನು ನೋಡಲು ಈ ದ್ವೀಪಕ್ಕೆ ಮೂರು ಬಾರಿ ಭೇಟಿ ನೀಡಿದ್ದನು ಎಂದು ಸೂಚಿಸುತ್ತವೆ. ಈ ರಾಜರು ಇಷ್ಟಾನುಸಾರ ಮಾನವರ ರೂಪವನ್ನು ತಾಳಬಲ್ಲ ಸರ್ಪಗಳಾಗಿದ್ದರು ಎಂದು ಹೇಳಲಾಗುತ್ತದೆ. ಆದರೂ ಈ ರಾಜರು ಸಾಂಕೇತಿಕವಾಗಿದ್ದರು,ಐತಿಹಾಸಿಕ ಅಂಶಗಳನ್ನು ಆಧರಿಸಿರಲಿಲ್ಲ.[೬]
ದೀಪವಂಶ ಮತ್ತು ಮಹಾವಂಶ ಎಂಬ ಈ ದ್ವೀಪದ ಆರಂಭಿಕ ಈಗಲೂ ಉಳಿದಿರುವ ಕಾಲಾನುಕ್ರಮ ವರದಿಗಳು, ಯಕ್ಷರು (ದುಷ್ಟ ಶಕ್ತಿ ಆರಾಧಕರು), ನಾಗಾಗಳು (ಹಾವುಗಳ ಆರಾಧಕರು) ಮತ್ತು ದೇವಾಗಳ (ದೇವರ ಆರಾಧಕರು) ಸಂತತಿಯವರು ಈ ದ್ವೀಪದಲ್ಲಿ ವಿಜಯ ಬರುವುದಕ್ಕಿಂತ ಮೊದಲು ನೆಲೆಸಿದ್ದರೆಂದು ಹೇಳುತ್ತವೆ.
ಬ್ರಾಹ್ಮಿ ಲಿಪಿ ಮತ್ತು ಬ್ರಾಹ್ಮಿಯಲ್ಲದ ಬರವಣಿಗೆಯನ್ನು ಹೊಂದಿದ್ದ, ಕ್ರಿ.ಪೂ. 600ರಷ್ಟು ಹಿಂದಿನ ಕಾಲನಿರ್ದೇಶನವನ್ನು ಸೂಚಿಸುತ್ತಿದ್ದ ಮಣ್ಣಿನ ಪಾತ್ರೆಗಳು ಅನುರಾಧಪುರದಲ್ಲಿ ಕಂಡುಬಂದವು, ಇದು ಲಿಪಿಯ ಬಗೆಗಿನ ಹಳೆಯ ಉದಾರಹಣೆಗಳಲ್ಲಿ ಒಂದಾಗಿದೆ.[೭]
ಪುರಾತನ ಶ್ರೀಲಂಕಾ
ಬದಲಾಯಿಸಿPre Colonial era (500 BC - 1505 AD)|Ancient history of Sri Lanka|Pre Colonial era (500 BC - 1505 AD)
ಪಾಲಿ ಕಾಲಾನುಕ್ರಮ ವರದಿಗಳು ಮತ್ತು ವಿಜಯನ ಆಗಮನ
ಬದಲಾಯಿಸಿಭಾರತೀಯ ಶಾಸನಲಿಪಿಯ ದಾಖಲೆಗಳು, ಕಾಲಾನುಕ್ರಮ ವರದಿಗಳ ಬರ್ಮಿಭಾಷೆಯ ಆವೃತ್ತಿಗಳು ಇತ್ಯಾದಿಗಳು ಸುಮಾರು ಕ್ರಿ.ಪೂ. 6ನೇ ಶತಮಾನದಿಂದ ಶ್ರೀಲಂಕಾದ ಇತಿಹಾಸದ ಬಗ್ಗೆ ಅಸಾಧಾರಣ ದಾಖಲೆಯನ್ನು ಒದಗಿಸುತ್ತವೆ.[೮]
ದೀಪವಂಶ, ಅಟ್ಟಕಥಾ ಮತ್ತು ಲಭ್ಯವಾದ ಇತರ ಲಿಖಿತ ದಾಖಲೆಗಳನ್ನು ಬಳಸಿಕೊಂಡು ಸಂನ್ಯಾಸಿ ನಾಗಸೇನನು ಸುಮಾರು ಕ್ರಿ.ಶ. ೪೦೦ರಲ್ಲಿ ಬರೆದ ಮಹಾವಂಶವು ಆ ಅವಧಿಯ ಭಾರತೀಯ ಇತಿಹಾಸಗಳೊಂದಿಗೆ ಉತ್ತಮ ಸಂಬಂಧವನ್ನು ತೋರಿಸುತ್ತದೆ. ವಾಸ್ತವವಾಗಿ ಅಶೋಕ ಚಕ್ರವರ್ತಿಯ ಆಳ್ವಿಕೆಯನ್ನು ಈ ಮಹಾವಂಶದಲ್ಲಿ ದಾಖಲಿಸಲಾಗಿದೆ. ಅಶೋಕನ ಪಟ್ಟಾಭಿಷೇಕಕ್ಕಿಂತ (ಬುದ್ಧನ ಮರಣದ ೨೧೮ ವರ್ಷಗಳ ನಂತರ) ಹಿಂದಿನ ಕಾಲದ ಮಹಾವಂಶದ ವಿವರಣೆಯು ಭಾಗಶಃ ದಂತಕಥೆಯಾಗಿ ಕಂಡುಬರುತ್ತದೆ. ಇತಿಹಾಸವು ವಿಜಯ ಮತ್ತು ಆತನ ೭೦೦ ಮಂದಿ ಅನುಯಾಯಿಗಳ ಆಗಮನದೊಂದಿಗೆ ಆರಂಭವಾಗುತ್ತದೆ. ವಿಜಯನು ವಾಂಗದ (ಪುರಾತನ ಭಾರತದ ಬಂಗಾಳ) ರಾಜ. ಆತನು ಸಿಂಘಪುರದಲ್ಲಿ (ಭಾರತದ ಪಶ್ಚಿಮ ಬಂಗಾಳದಲ್ಲಿರುವ ಈಗಿನ ಸಿಂಗೂರು) ರಾಜಧಾನಿಯನ್ನು ಹೊಂದಿದ್ದ ರಾಜ ಸಿಂಹಬಾಹು ("ಸಿಂಹದ ಕೈಗಳನ್ನು ಹೊಂದಿರುವವ") ಮತ್ತು ರಾಣಿ ಸಿಂಹಸಿವಾಲಿ ದಂಪತಿಗಳ ಹಿರಿಯ ಮಗ. ಈ ಇಬ್ಬರೂ ಸಿಂಹಳ ನಾಯಕರು ಒಂದು ಸಿಂಹ ಮತ್ತು ಮಾನವ ರಾಣಿಯ ನಡುವಿನ ಪೌರಾಣಿಕ ಐಕ್ಯದಿಂದ ಹುಟ್ಟಿದ್ದರು (ವಿಕಿಪೀಡಿಯಾದಲ್ಲಿ ಸಂಬಂಧಿತ ದಾಖಲೆ ಶ್ರೀಲಂಕಾದ ವಿಜಯವನ್ನು ಗಮನಿಸಿ). ಬುದ್ಧನ ಸಾವಿನ ದಿನದಂದೇ ವಿಜಯನು ಆಗಮಿಸಿದನು ಎಂದು ಮಹಾವಂಶವು ಹೇಳುತ್ತದೆ (ಮಹಾವಂಶದ ಗೈಗರ್‌ನ ಮುನ್ನುಡಿಯನ್ನು ಗಮನಿಸಿ). ವಿಜಯ ಮತ್ತು ಕುವೇಣಿಯ (ಸ್ಥಳೀಯ ರಾಣಿ) ಕಥೆಯು ಗ್ರೀಕ್ ಪುರಾಣ ಕಥೆಯನ್ನು ನೆನಪಿಗೆ ತರುತ್ತದೆ.ಅಲ್ಲದೇ ಇದು ಪುರಾತನ ಪ್ರೋಟೊ-ಇಂಡೊ-ಯುರೋಪಿಯನ್ ಜಾನಪದ ಕಥೆಗಳಲ್ಲಿ ಸಾಮಾನ್ಯ ಮೂಲವನ್ನು ಹೊಂದಿರಬಹುದು.[೯]
ಮಹಾವಂಶದ ಪ್ರಕಾರ, ವಿಜಯನು ಮಹಾತೀತದ (ಮಂತೋಟ ಅಥವಾ ಮನ್ನಾರ್[೧೦]) ಹತ್ತಿರ ಶ್ರೀಲಂಕಾವನ್ನು ತಲುಪಿದನು. ಆ ದ್ವೀಪಕ್ಕೆ "ತಾಂಬಪರ್ಣಿ" ('ತಾಮ್ರ-ಬಣ್ಣದ ಅಂಗೈ) ಎಂದು ಹೆಸರಿಸಿದನು.[೧೧] ಈ ಹೆಸರು ಪುರಾತನ ಪ್ರಪಂಚದ ಪ್ಟೋಲೆಮಿಯ ನಕ್ಷೆಯಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ. ಮಹಾವಂಶವು ಬುದ್ಧನು ಶ್ರೀಲಂಕಾಕ್ಕೆ ಮೂರು ಬಾರಿ ಭೇಟಿ ನೀಡಿದುದರ ಬಗ್ಗೆಯೂ ವಿವರಿಸುತ್ತದೆ. ಮೊದಲ ಬಾರಿಗೆ, ಮಾಣಿಕ್ಯ ಖಚಿತ ಸಿಂಹಾಸನಕ್ಕಾಗಿ ಜಗಳವಾಡುತ್ತಿದ್ದ ನಾಗ ರಾಜ ಮತ್ತು ಅವನ ಅಳಿಯನ ನಡುವಿನ ಕದನವನ್ನು ನಿಲ್ಲಿಸುವುದಕ್ಕಾಗಿ ಬಂದನು. ಬುದ್ಧನು ಕೊನೆಯ ಭೇಟಿಯ ಸಂದರ್ಭದಲ್ಲಿ ಸಿರಿಪಾದದಲ್ಲಿ (ಆಡಮ್ಸ್ ಪೀಕ್) ಆತನ ಪಾದದ ಗುರುತನ್ನು ಬಿಟ್ಟುಹೋಗಿದ್ದಾನೆಂದು ಹೇಳಲಾಗುತ್ತದೆ.
ತಾಮಿರಭರಣಿಯು ಶ್ರೀಲಂಕಾದಲ್ಲಿನ ಎರಡನೇ ಅತ್ಯಂತ ಉದ್ದವಾದ ನದಿಗಿರುವ ಹಳೆಯ ಹೆಸರಾಗಿದೆ (ಸಿಂಹಳದಲ್ಲಿ ಮಾಲ್ವಟು ಓಯ ಮತ್ತು ತಮಿಳಿನಲ್ಲಿ ಅರುವಿ ಅರು). ಈ ನದಿಯು ರಾಜಧಾನಿ ಅನುರಾಧಪುರವನ್ನು ಮಹಾತೀತದೊಂದಿಗೆ (ಮನ್ನಾರ್) ಸಂಪರ್ಕಿಸುವ ಪ್ರಮುಖ ಪೂರೈಕೆ ಮಾರ್ಗವಾಗಿತ್ತು. ಈ ಜಲಮಾರ್ಗವನ್ನು ದಕ್ಷಿಣದ ಸಿಲ್ಕ್ ಮಾರ್ಗಕ್ಕೆ ಪ್ರಯಾಣಿಸುವ ಗ್ರೀಕ್ ಮತ್ತು ಚೀನಾದ ಹಡಗುಗಳು ಬಳಸುತ್ತಿದ್ದವು.
ಮಹಾತೀತವು ಶ್ರೀಲಂಕಾವನ್ನು ಭಾರತ ಮತ್ತು ಪರ್ಷಿಯನ್ ಗಲ್ಫ್‌ಗೆ ಸಂಪರ್ಕಿಸುವ ಒಂದು ಪುರಾತನ ಬಂದರಾಗಿತ್ತು.[೧೨]
ಈಗಿನ ಸಿಂಹಳೀಯರು (ಮತ್ತು ಹಲವಾರು ಆಧುನಿಕ ತಮಿಳಿಗರು) ಸ್ಥಳೀಯ ಜನರ ಮತ್ತು ಭಾರತದ ವಿವಿಧ ಭಾಗಗಳಿಂದ ದ್ವೀಪಕ್ಕೆ ಬಂದು ನೆಲೆಸಿದ ಇತರ ಜನರ ಮಿಶ್ರಣವಾಗಿದ್ದಾರೆ. ಈ ಸಿಂಹಳೀಯರು ವಿಜಯನ್ ಇಂಡೊ-ಆರ್ಯನ್ ಸಂಸ್ಕೃತಿ ಮತ್ತು ಬೌದ್ಧ ಧರ್ಮವನ್ನು (ವಿಜಯನ ಆಗಮನಕ್ಕಿಂತ ಮೊದಲೇ ಅಸ್ತಿತ್ವದಲ್ಲಿದ್ದ) ಹತ್ತಿರದ ದಕ್ಷಿಣ ಭಾರತದ ಇತರ ಗುಂಪುಗಳಿಗಿಂತ ಭಿನ್ನವಾದುದೆಂದು ಪರಿಗಣಿಸುತ್ತಾರೆ.
ಅನುರಾಧಪುರ ಸಾಮ್ರಾಜ್ಯ
ಬದಲಾಯಿಸಿಅನುರಾಧಪುರ ಸಾಮ್ರಾಜ್ಯದ ಆರಂಭಿಕ ದಿನಗಳಲ್ಲಿ, ಸಿಂಹಳೀಯರ ಆರ್ಥಿಕ ಸ್ಥಿತಿಯು ವ್ಯವಸಾಯವನ್ನು ಅವಲಂಬಿಸಿತ್ತು. ಅಲ್ಲದೇ ಅವರು ಆರಂಭದಲ್ಲಿ ಮುಖ್ಯವಾಗಿ ಪೂರ್ವ, ಉತ್ತರ ಕೇಂದ್ರ ಮತ್ತು ಈಶಾನ್ಯ ಪ್ರದೇಶಗಳ ನದಿಗಳ ಹತ್ತಿರ ತಮ್ಮ ವಾಸ್ತವ್ಯವನ್ನು ಹೂಡಿದ್ದರು. ಈ ನದಿಗಳು ಅವರಿಗೆ ವ್ಯವಸಾಯ ಮಾಡಲು ವರ್ಷಪೂರ್ತಿ ನೀರನ್ನು ಒದಗಿಸುತ್ತಿದ್ದವು. ರಾಜನೇ ರಾಷ್ಟ್ರದ ಆಡಳಿತಗಾರ, ಕಾನೂನು, ಸೈನ್ಯ ಮತ್ತು ಸತ್ಯದ ರಕ್ಷಕನಾಗಿದ್ದನು. ದೇವನಾಂಪಿಯ ಟಿಸ್ಸನು (ಕ್ರಿ.ಪೂ. ೨೫೦-೨೧೦) ಮೌರ್ಯ ವಂಶದ ಸಿಂಹಳೀಯರ ರಾಜ. ಅಶೋಕ ಚಕ್ರವರ್ತಿಯೊಂದಿಗಿನ ಆತನ ಸಂಬಂಧದಿಂದಾಗಿ ಕ್ರಿ.ಪೂ. ೨೪೭ರಲ್ಲಿ ಮಹಿಂದನು (ಅಶೋಕನ ಪುತ್ರ) ಬೌದ್ಧ ಧರ್ಮವನ್ನು ಇಲ್ಲಿಗೆ ಪರಿಚಯಿಸಿದನು. ಸಂಗಮಿತ (ಮಹಿಂದನ ಸಹೋದರಿ) ಜಂಬುಕೊಲದಲ್ಲಿ (ಸಾಂಬಿಲಿಟುರೈ) ಬೆಳೆಯುತ್ತಿದ್ದ ಬೋಧಿಯೊಂದನ್ನು ತಂದಳು. ಈ ರಾಜನ ಆಳ್ವಿಕೆಯು ಥೆರವಾಡ ಬೌದ್ಧಧರ್ಮ ಮತ್ತು ಶ್ರೀಲಂಕಾಕ್ಕೆ ಕಷ್ಟಕರವಾಗಿತ್ತು.
ರಾಜ ಅಸೇಲನನ್ನು ಕೊಂದ ನಂತರ ತಮಿಳು ಅರಸ ಎಲಾರನು (ಕ್ರಿ.ಪೂ. ೨೦೫-೧೬೧) "ಪಿಹಿಟಿ ರಾಟ"ವನ್ನು ಆಳಿದನು, ಅಂದರೆ ಮಹಾವೇಲಿಯ ಉತ್ತರದ ಶ್ರೀಲಂಕಾ. ಎಲಾರನ ಅವಧಿಯಲ್ಲಿ, ಕೆಲನಿ ಟಿಸ್ಸನು ಮಾಯ ರಾಟದ (ನೈಋತ್ಯ) ಉಪ-ರಾಜನಾಗಿದ್ದನು ಮತ್ತು ಕಾವನ್ ಟಿಸ್ಸನು ರುಹುನಾದ (ಆಗ್ನೇಯ) ಪ್ರಾದೇಶಿಕ ಉಪ-ರಾಜನಾಗಿದ್ದನು. ಕಾವನ್ ಟಿಸ್ಸನು ಟಿಸ್ಸ ಮಹಾ ವಿಹಾರ, ದಿಘಾವಪಿ ಟ್ಯಾಂಕ್ ಮತ್ತು ಸೆರುವಿಲದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದನು. ರಾಜ ಕಾವನ್ ಟಿಸ್ಸನ ಪುತ್ರ ದುತುಗೆಮುನು (೧೬೧-೧೩೭ BC) ೨೫ ವರ್ಷದ ಯುವಕನಾಗಿರುವಾಗ ದಕ್ಷಿಣ ಭಾರತದ ತಮಿಳು ಆಕ್ರಮಿ ಎಲಾರನನ್ನು (ಸುಮಾರು ೬೪ ವರ್ಷದ) ಏಕ ಕದನದಲ್ಲಿ ಸೋಲಿಸಿದನು ಎಂದು ಮಹಾವಂಶದಲ್ಲಿ ವಿವರಿಸಲಾಗಿದೆ. ದುತುಗೆಮುನು ರಾಜನನ್ನು ಸಿಂಹಳ "ಅಶೋಕ" ಎಂದು ನಿರೂಪಿಸಲಾಗುತ್ತದೆ. ಈ ರಾಜನು ನಿರ್ಮಿಸಿದ ರುವಾನ್ವೆಲಿಸಾಯವು ಪಿರಮಿಡ್-ರೀತಿಯ ದಗಬವಾಗಿದೆ. ಇದು ಒಂದು ಅದ್ಭುತವಾದ ವಿನ್ಯಾಸವಾಗಿದೆ.
ಪುಲಹಟ್ಟನನ್ನು (ಅಥವಾ ಪುಲಹತ) ಬಾಹಿಯನು, ಈತನನ್ನು ಪಾನಯ ಮಾರನು, ನಂತರ ಈತನನ್ನು ಪಿಲಯ ಮಾರನು ಪದಚ್ಯುತಿಗೊಳಿಸಿದರು. ನಂತರ ಪಿಲಯನನ್ನು ಕ್ರಿ.ಪೂ. ೮೮ರಲ್ಲಿ ದಾತಿಯನು ಕೊಂದನು. ಈ ದಾತಿಯನನ್ನು ವಾಲಗಂಬಾಹು ಪದಚ್ಯುತಿಗೊಳಿಸಿದನು, ಈತನ ನಂತರ ತಮಿಳು ಆಳ್ವಿಕೆಯು ಕೊನೆಗೊಂಡಿತು. ವಾಲಂಗಬಾಹು I (ಕ್ರಿ.ಪೂ. ೮೯-೭೭) ದುತುಗಮುನು ರಾಜಸಂತತಿಯನ್ನು ಪುನಃಸ್ಥಾಪಿಸಿದನು. ಈ ಸಂದರ್ಭದಲ್ಲಿ ಮಹಾವಿಹಾರ ಥೆರವಾಡ - ಅಭಯಗಿರಿ (ಹಿಂದಿನ-ಮಹಾಯಾನ) ತಾತ್ತ್ವಿಕ ವಿವಾದಗಳು ಕಂಡುಬಂದವು. ತ್ರಿಪಿಟಕವನ್ನು ಮಾಟಲೆಯ ಅಲುವಿಹಾರದಲ್ಲಿ ಪಾಲಿಯಲ್ಲಿ ಬರೆಯಲಾಯಿತು. ಚೋರ ನಾಗನನ್ನು (ಮಹಾನಾಗ) (ಕ್ರಿ. ಪೂ. ೬೩-೫೧) ಆತನ ಪತ್ನಿ ಅನುಲಾಳು ವಿಷ ನೀಡಿ ಸಾಯಿಸಿದಳು. ಚೋರ ನಾಗ ಮತ್ತು ಕುಡ ಟಿಸ್ಸರ ವಿಧವೆ ರಾಣಿ ಅನುಲಾಳು (ಕ್ರಿ.ಪೂ. ೪೮ -೪೪) ಶ್ರೀಲಂಕಾದ ಮೊದಲ ರಾಣಿಯಾಗಿದ್ದಾಳೆ. ಆಕೆಯು ಹಲವಾರು ಪ್ರಿಯತಮರನ್ನು ಹೊಂದಿದ್ದಳು, ಎಲ್ಲರನ್ನೂ ಆಕೆ ವಿಷ ನೀಡಿ ಹತ್ಯೆಮಾಡುತ್ತಿದ್ದಳು. ಆಕೆಯನ್ನು ಅಂತಿಮವಾಗಿ ಕುಟ್ಟಕನ್ನ ಟಿಸ್ಸ ಹತ್ಯೆಮಾಡಿದ. ವಾಸಭನ (ಕ್ರಿ.ಶ. ೬೭ -೧೧೧) ಆಳ್ವಿಕೆಯಲ್ಲಿ ವಲ್ಲಿಪುರಂದಲ್ಲಿ ಚಿನ್ನದ ಹಲಗೆ ಇತ್ತು, ಈತನು ಅನುರಾಧಪುರವನ್ನು ಬಲಪಡಿಸಿದನು, ಹನ್ನೊಂದು ಟ್ಯಾಂಕುಗಳನ್ನು ನಿರ್ಮಿಸಿದನು ಮತ್ತು ಹಲವಾರು ರಾಜಶಾಸನಗಳನ್ನು ಹೊರಡಿಸಿದನು. ಗಜಬಾಹು I (೧೧೪-೧೩೬) ಚೋಳ ಸಾಮ್ರಾಜ್ಯವನ್ನು ಆಕ್ರಮಿಸಿಕೊಂಡನು ಹಾಗೂ ಸೆರೆಯಾಳುಗಳನ್ನು ಹಿಂದಕ್ಕೆ ಕರೆಯಿಸಿಕೊಂಡನು. ಆತನು ಬುದ್ಧನ ನೆನಪಿನ ಕುರುಹು ಹಲ್ಲನ್ನು ಪುನಃಪಡೆದುಕೊಂಡನು.
ಆ ಶತಮಾನಗಳಲ್ಲಿ ಪುರಾತನ ತಮಿಳು ರಾಷ್ಟ್ರ (ಇಂದಿನ ದಕ್ಷಿಣ ಭಾರತ) ಮತ್ತು ಶ್ರೀಲಂಕಾ ಒಂದಿಗೆ ರೋಮನ್ ವ್ಯಾಪಾರದ ಭಾರೀ ಸಂಪರ್ಕವಿತ್ತು.[೧೩] ಇದರಿಂದಾಗಿ ಈ ಪ್ರದೇಶಗಳಲ್ಲಿ ಹಲವಾರು ವ್ಯಾಪಾರ ವಸಾಹತುಗಳು ಸ್ಥಾಪನೆಗೊಂಡವು. ಇವು ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯದ ಪತನದ ನಂತರವೂ ಕೆಲವು ಕಾಲ ಹಾಗೆಯೇ ಮುಂದುವರಿದವು.[೧೪]
ಮಹಾಸೇನನಿಗೆ (೨೭೪-೩೦೧) ತೆರವಾಡವು (ಮಹಾ ವಿಹಾರ) ಕಿರುಕುಳ ಕೊಟ್ಟಿತು ಮತ್ತು ಮಹಾಯಾಣದ ಬಗ್ಗೆ ಅರಿವಾಯಿತು. ನಂತರ ಈ ರಾಜನು ಮಹಾ ವಿಹಾರಕ್ಕೆ ಹಿಂದಿರುಗಿದನು. ಪಾಂಡು (೪೨೯) ರಾಜನು ಏಳು ಪಾಂಡಿಯನ್ ರಾಜರಲ್ಲಿ ಮೊದಲನೆಯವನನು. ಈ ರಾಜವಂಶವು ಪಿತ್ಯಾ ರಾಜನೊಂದಿಗೆ ೪೫೫ರಲ್ಲಿ ಕೊನೆಗೊಂಡಿತು; ಧಾತುಸೇನನ (೪೫೯-೪೭೭) ಚಿಕ್ಕಪ್ಪನಾದ ಮಹಾನಾಮನು ಮಹಾವಂಶವನ್ನು ಬರೆದನು. ಧಾತುಸೇನನು "ಕುಲವೇವ"ವನ್ನು ನಿರ್ಮಿಸಿದನು. ಆತನ ಮಗ ಕಶ್ಯಪನು (೪೭೭-೪೯೫) ಪ್ರಸಿದ್ಧ ಸಿಗಿರಿಯಾ ಶಿಲಾ ಅರಮನೆಯನ್ನು ಕಟ್ಟಿದನು. ಇಲ್ಲಿನ ಕೆಲವು ೭೦೦ ಕಲ್ಲಿನ ಗೀರು ಚಿತ್ರಗಳು ಪುರಾತನ ಸಿಂಹಳದ ನಸುನೋಟವನ್ನು ನೀಡುತ್ತವೆ.
ಮಧ್ಯಕಾಲೀನ ಶ್ರೀಲಂಕಾ
ಬದಲಾಯಿಸಿರುಹುನಾ ಸಾಮ್ರಾಜ್ಯ
ಬದಲಾಯಿಸಿಚೋಳ ಸಾಮ್ರಾಜ್ಯದ ರಾಜರಾಜ I ದಕ್ಷಿಣ ಭಾರತದ ಮೇಲೆ ನಡೆಸಿದ ಮತ್ತೊಂದು ದಾಳಿಯಿಂದಾಗಿ ರುಹುನಾ ಸಾಮ್ರಾಜ್ಯವು ಈ ದ್ವೀಪದ ಪ್ರಮುಖ ಸಾಮ್ರಾಜ್ಯವಾಯಿತು.
ಪೋಲೊನ್ನರುವ ಸಾಮ್ರಾಜ್ಯ
ಬದಲಾಯಿಸಿಪೋಲೊನ್ನರುವ ಸಾಮ್ರಾಜ್ಯವು ಶ್ರೀಲಂಕಾದ ಸಿಂಹಳೀಯರ ಎರಡನೇ ಪ್ರಮುಖ ಸಾಮ್ರಾಜ್ಯವಾಗಿತ್ತು. ಈ ಸಾಮ್ರಾಜ್ಯವು ೧೦೫೫ರಲ್ಲಿ ವಿಜಯಬಾಹು Iರಿಂದ ಹಿಡಿದು ೧೨೧೨ರಲ್ಲಿ ಲೀಲಾವತಿಯ ಆಳ್ವಿಕೆಯವರೆಗೆ ಇತ್ತು. ಪೋಲೊನ್ನರುವ ಸಾಮ್ರಾಜ್ಯವು ಅನುರಾಧಪುರ ಸಾಮ್ರಾಜ್ಯವನ್ನು ರಾಜರಾಜ Iರ ಮುಂದಾಳತ್ವದಲ್ಲಿ ಚೋಳರು ದಾಳಿ ನಡೆಸಿದ ನಂತರ ಮತ್ತು ರುಹುನಾ ಸಾಮ್ರಾಜ್ಯದ ನಂತರ ಆಳ್ವಿಕೆಗೆ ಬಂದಿತು. ಆ ಸಂದರ್ಭದಲ್ಲಿ ಚೋಳರ ಆಳ್ವಿಕೆಯಲ್ಲಿ ಸಿಂಹಳೀಯ ರಾಜರು ಆಡಳಿತ ನಡೆಸಿದರು.
ದಾಂಬದೇನಿಯ ಸಾಮ್ರಾಜ್ಯ
ಬದಲಾಯಿಸಿಗಾಂಪೋಲ ಸಾಮ್ರಾಜ್ಯ
ಬದಲಾಯಿಸಿಕೊಟ್ಟೆ ಸಾಮ್ರಾಜ್ಯ
ಬದಲಾಯಿಸಿಸಿಟಾವಕ ಸಾಮ್ರಾಜ್ಯ
ಬದಲಾಯಿಸಿಕ್ಯಾಂಡಿ ಸಾಮ್ರಾಜ್ಯ
ಬದಲಾಯಿಸಿವಸಾಹತು ಶ್ರೀಲಂಕಾ
ಬದಲಾಯಿಸಿಪೋರ್ಚುಗೀಸ್ ಯುಗ
ಬದಲಾಯಿಸಿಆಧುನಿಕ ಕಾಲದಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು: ಫ್ರ್ಯಾಂಸಿಸ್ಕೊ ಡಿ ಅಲ್ಮೈಡಾ ೧೫೦೫ರಲ್ಲಿ ಇಲ್ಲಿಗೆ ಬಂದನು. ಆತನು ಈ ದ್ವೀಪವು ಏಳು ಕಾದಾಡುವ ಸಾಮ್ರಾಜ್ಯಗಳಾಗಿ ವಿಂಗಡನೆಯಾದುದನ್ನು ಮತ್ತು ಇಲ್ಲಿ ಮಧ್ಯ ಪ್ರವೇಶಿಸಲು ಉತ್ತಮ ಅವಕಾಶವಿರುವುದನ್ನು ಕಂಡುಕೊಂಡನು. ಪೋರ್ಚುಗೀಸರು 1517ರಲ್ಲಿ ಆಗಮಿಸಿ, ನಗರ ಕೊಲೊಂಬೊದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದರು ಹಾಗೂ ಕ್ರಮೇಣ ಅವರ ನಿಯಂತ್ರಣವನ್ನು ಕರಾವಳಿ ಪ್ರದೇಶದಾದ್ಯಂತ ವಿಸ್ತರಿಸಿದರು. 1592ರಲ್ಲಿ ಸಿಂಹಳೀಯರು ಅವರ ರಾಜಧಾನಿಯನ್ನು ದಾಳಿಕಾರರ ದಾಳಿಯ ವಿರುದ್ಧ ಹೆಚ್ಚು ಭದ್ರ ಸ್ಥಳವಾದ ಒಳನಗರ ಕ್ಯಾಂಡಿಗೆ ಬದಲಾಯಿಸಿದರು. ಮರುಕಳಿಸುವ ಯುದ್ಧಗಳು 16ನೇ ಶತಮಾನದಾದ್ಯಂತ ಮುಂದುವರಿದವು.
ಹೆಚ್ಚಿನ ಕೆಳನಾಡಿನ ಸಿಂಹಳೀಯರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಲವಂತಕ್ಕೊಳಗಾದರು. ಕರಾವಳಿಯ ಮೂರ್ ಜನಾಂಗದವರಿಗೆ ಧಾರ್ಮಿಕ ಕಿರುಕುಳ ನೀಡಲಾಯಿತು ಹಾಗೂ ಅವರನ್ನು ಕೇಂದ್ರ ಪ್ರಸ್ಥಭೂಮಿಗೆ ಹಿಂದಕ್ಕೆ ಹೋಗುವಂತೆ ಒತ್ತಾಯಪಡಿಸಲಾಯಿತು. ಬೌದ್ಧ ಧರ್ಮದ ಅನುಯಾಯಿಗಳು ಪೋರ್ಚುಗೀಸರ ಆಕ್ರಮಣವನ್ನು ಮತ್ತು ಅವರ ಪ್ರಭಾವವನ್ನು ಇಷ್ಟಪಡಲಿಲ್ಲ ಹಾಗೂ ತಮ್ಮನ್ನು ರಕ್ಷಿಸಬಹುದಾದ ಯಾವುದೇ ಆಳ್ವಿಕೆಯನ್ನು ಸ್ವಾಗತಿಸಿದರು. ಆದ್ದರಿಂದ 1602ರಲ್ಲಿ ಡಚ್ ಕ್ಯಾಪ್ಟನ್ ಜೋರಿಸ್ ವ್ಯಾನ್ ಸ್ಪಿಲ್ಬರ್ಗನ್ ಈ ದ್ವೀಪಕ್ಕೆ ಬಂದಾಗ, ಕ್ಯಾಂಡಿಯ ರಾಜನು ಸಹಾಯಕ್ಕಾಗಿ ಆತನಲ್ಲಿ ಕೇಳಿಕೊಂಡನು.
ಡಚ್ ಯುಗ
ಬದಲಾಯಿಸಿಕ್ಯಾಂಡಿಯ ರಾಜ ರಾಜಸಿಂಘೆ II, ದ್ವೀಪದ ಹೆಚ್ಚಿನ ಕರಾವಳಿ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ಪೋರ್ಚುಗೀಸರನ್ನು ತೊಲಗಿಸಲು ೧೬೩೮ರಲ್ಲಿ ಡಚ್ಚರೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡನು. ಆ ಒಪ್ಪಂದ ಪ್ರಮುಖ ಷರತ್ತುಗಳೆಂದರೆ ಡಚ್ಚರು ವಶಪಡಿಸಿಕೊಳ್ಳುವ ಕರಾವಳಿ ಪ್ರದೇಶಗಳನ್ನು ಕ್ಯಾಂಡಿಯನ್ ರಾಜನಿಗೆ ಒಪ್ಪಿಸಬೇಕು ಮತ್ತು ಅದಕ್ಕೆ ಪ್ರತಿಯಾಗಿ ರಾಜನು ಡಚ್ಚರಿಗೆ ಸಂಪೂರ್ಣ ದ್ವೀಪದಾದ್ಯಂತದ ವ್ಯಾಪಾರದ ಮೇಲೆ ಏಕಸ್ವಾಮ್ಯತೆಯನ್ನು ನೀಡಬೇಕು.ಆದ್ದರಿಂದ 1638ರಲ್ಲಿ ಡಚ್ಚರು ತೀವ್ರಾಸಕ್ತಿಯಿಂದ ದಾಳಿ ಮಾಡಿದರು. ಆದರೆ ಅದು ಒಪ್ಪಂದೊಂದಿಗೆ (ಇದನ್ನು ಎರಡೂ ಪಕ್ಷಗಳು ಅಗೌರವಿಸಿದವು) ಕೊನೆಗೊಂಡಿತು. ೧೬೫೬ರ ಹೊತ್ತಿಗೆ ಡಚ್ಚರು ಸಂಪೂರ್ಣ ಕೊಲೊಂಬೊವನ್ನು ವಶಪಡಿಸಿಕೊಂಡರು. ೧೬೬೦ರಲ್ಲಿ ಡಚ್ಚರು ಕ್ಯಾಂಡಿ ಸಾಮ್ರಾಜ್ಯವನ್ನು ಹೊರತುಪಡಿಸಿ ಸಂಪೂರ್ಣ ದ್ವೀಪವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಡಚ್ಚರು (ಪ್ರೊಟೆಸ್ಟೆಂಟ್‌ರು) ಕ್ಯಾಥೋಲಿಕ್‌ರಿಗೆ (ಉಳಿದ ಪೋರ್ಚುಗೀಸ್ ವಸಾಹತುಶಾಹಿಗಳು) ಕಿರುಕುಳ ನೀಡಿದರು. ಆದರೆ ಬೌದ್ಧ, ಹಿಂದು ಮತ್ತು ಮುಸ್ಲಿಂ ಧರ್ಮದವರಿಗೆ ಏನೂ ಮಾಡಲಿಲ್ಲ. ಆದರೆ ಅವರು ಪೋರ್ಚುಗೀಸರಿಗಿಂತ ಅತಿ ಹೆಚ್ಚಿನ ತೆರಿಗೆಗಳನ್ನು ವಿಧಿಸಿದರು. ಬರ್ಘರ್ ಜನರೆಂದು ಕರೆಯಲ್ಪಡುವ ಡಚ್-ಸಿಂಹಳೀಯ ಮಿಶ್ರ-ಜನರು ಡಚ್ ಆಳ್ವಿಕೆಯ ಆಸ್ತಿಯಾಗಿದ್ದರು.
೧೬೫೯ರಲ್ಲಿ ಬ್ರಿಟಿಷ್ ಸಮುದ್ರ ಕ್ಯಾಪ್ಟನ್ ರಾಬರ್ಟ್ ನಾಕ್ಸ್ ಆಕಸ್ಮಿಕವಾಗಿ ಶ್ರೀಲಂಕಾವನ್ನು ತಲುಪಿದನು ಮತ್ತು ಕ್ಯಾಂಡಿಯ ರಾಜನಿಂದ ಬಂಧಿಸಲ್ಪಟ್ಟನು. ಅವನು ೧೯ ವರ್ಷಗಳ ನಂತರ ಅಲ್ಲಿಂದ ತಪ್ಪಿಸಿಕೊಂಡು ಹೋದ.ನಂತರ ಈ ಬಂಧನದ ಬಗ್ಗೆ ಅವನು ಒಂದು ಕಥನವನ್ನು ಬರೆದಿದ್ದಾನೆ. ಇದು ಈ ದ್ವೀಪದ ಬಗ್ಗೆ ಬ್ರಿಟಿಷರು ಗಮನ ಹರಿಸುವಂತೆ ಮಾಡಿತು.
ಬ್ರಿಟಿಷ್ ಆಡಳಿತ
ಬದಲಾಯಿಸಿನೆಪೋಲಿಯನ್ ಯುದ್ಧದ ಸಂದರ್ಭದಲ್ಲಿ, ನೆದರ್ಲ್ಯಾಂಡ್ಸ್‌ನ ಮೇಲಿನ ಫ್ರೆಂಚ್ ನಿಯಂತ್ರಣವು ಶ್ರೀಲಂಕಾವನ್ನು ಫ್ರೆಂಚ್‌ನ ಹಿಡಿತಕ್ಕೆ ಒಪ್ಪಿಸಬಹುದೆಂದು ಗ್ರೇಟ್ ಬ್ರಿಟನ್ ಗಾಬರಿಗೊಂಡಿತು, ಇದು ಶ್ರೀಲಂಕಾ ದ್ವೀಪದ ಕರಾವಳಿ ಪ್ರದೇಶಗಳನ್ನು (ಇದನ್ನು ಅವರು ಸಿಲೋನ್ ಎಂದು ಕರೆದರು) ೧೭೬೯ರಲ್ಲಿ ಬಹಳ ಕಷ್ಟಪಟ್ಟು ವಶಕ್ಕೆ ತೆಗೆದುಕೊಂಡಿತ್ತು. ೧೮೦೨ರಲ್ಲಿ ಅಮೈನ್ಸ್ ಒಪ್ಪಂದದಿಂದ ದ್ವೀಪದ ಡಚ್ ಭಾಗವು ನಿಯಮಾನುಸಾರವಾಗಿ ಬ್ರಿಟನ್ ವಶಕ್ಕೆ ಹೋಯಿತು ಮತ್ತು ಅದು ರಾಜವಸಾಹತು ಆಯಿತು. ೧೮೦೩ರಲ್ಲಿ ಬ್ರಿಟಿಷರು ೧ನೇ ಕ್ಯಾಂಡಿಯನ್ ಕದನದಲ್ಲಿ ಕ್ಯಾಂಡಿ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿದರು, ಆದರೆ ರಕ್ತಪಾತದೊಂದಿಗೆ ಹಿಮ್ಮೆಟ್ಟಿದರು. ೧೮೧೫ರಲ್ಲಿ ಕ್ಯಾಂಡಿಯು 2ನೇ ಕ್ಯಾಂಡಿಯನ್ ಕದನದಲ್ಲಿ ಗೆಲುವನ್ನು ಪಡೆದುಕೊಂಡನು, ಅಂತಿಮವಾಗಿ ಶ್ರೀಲಂಕನ್ನರು ಸ್ವಾತಂತ್ರ್ಯವನ್ನು ಪಡೆದರು.
ಯುವ ದಂಗೆಯ ರಕ್ತಪಾತದ ನಿಗ್ರಹದ ನಂತರ, ಕ್ಯಾಂಡಿಯನ್ ರೈತರಿಂದ ಅವರ ಜಮೀನುಗಳನ್ನು ಹದ್ದುಬಸ್ತುಮಾಡಿಕೊಳ್ಳುವ ಒಂದು ಆಧುನಿಕ ಚಳವಳಿಯಾದ ವೇಸ್ಟ್‌ಲ್ಯಾಂಡ್ಸ್ ಅಧಿಶಾಸನದ ಮೂಲಕ ಕಿತ್ತುಕೊಳ್ಳಲಾಯಿತು, ಇದರಿಂದಾಗಿ ದ್ವೀಪದಲ್ಲಿ ಕಡುಬಡತನ ಕಂಡುಬಂದಿತು. ಬ್ರಿಟಿಷರು ಶ್ರೀಲಂಕಾದ ಒಳನಾಡಿನ ಪ್ರದೇಶಗಳು ಕಾಫೀ, ಚಹಾ ಮತ್ತು ರಬ್ಬರ್ ಕೃಷಿಗೆ ಅತ್ಯುತ್ತಮವಾಗಿದೆಯೆಂಬುದನ್ನು ಕಂಡುಕೊಂಡರು. ೧೯ನೇ ಶತಮಾನದ ಮಧ್ಯದಲ್ಲಿ ಸಿಲೋನ್ ಚಹಾವು ಬ್ರಿಟಿಷ್ ಮಾರುಕಟ್ಟೆಯ ಅತಿಮುಖ್ಯ ಪದಾರ್ಥವಾಯಿತು. ಇದು ಸಣ್ಣ ವರ್ಗದ ಬಿಳಿಯ ಚಹಾ-ಕೃಷಿಗಾರರಿಗೆ ಭಾರಿ ಸಂಪತ್ತನ್ನು ತಂದುಕೊಟ್ಟಿತು. ಎಸ್ಟೇಟುಗಳಲ್ಲಿ ಕೆಲಸ ಮಾಡುವುದಕ್ಕಾಗಿ ಕೃಷಿಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಕಾರ್ಮಿಕರನ್ನು ದಕ್ಷಿಣ ಭಾರತದಿಂದ ಕರಾರಿಗೆ ಒಳಪಡಿಸಿದ ಕೂಲಿಗಳಾಗಿ ಕರೆತಂದರು, ಇವರ ಸಂಖ್ಯೆಯು ಅತಿ ಶೀಘ್ರದಲ್ಲಿ ದ್ವೀಪದ ಜನಸಂಖ್ಯೆಯ ಸುಮಾರು ೧೦%[ಸೂಕ್ತ ಉಲ್ಲೇಖನ ಬೇಕು]ನಷ್ಟಾಯಿತು. ಈ ಕಾರ್ಮಿಕರು ಜೀತದಾಳು-ರೀತಿಯ ಸ್ಥಿತಿಗಳಲ್ಲಿ ಕೆಲಸ ಮಾಡಬೇಕಿತ್ತು ಮತ್ತು ಸಾಲು ಕೊಠಡಿಗಳಲ್ಲಿ ಜೀವಿಸಬೇಕಾಗಿತ್ತು, ಇವು ದನದ ಕೊಟ್ಟಿಗೆಗಳಿಗಿಂತ ಹೆಚ್ಚು ಭಿನ್ನವಾಗಿರಲಿಲ್ಲ. ಇದು ತಮಿಳ್ ಟೈಗರ್ಸ್ ಮತ್ತು ಅವರ ಸ್ವಾತಂತ್ರ್ಯ ಹುಡುಕಾಟದ ಸುತ್ತಲಿನ ಆಧುನಿಕ ಸಮಸ್ಯೆಗಳಿಗೆ ಕಾರಣವನ್ನು ಸೃಷ್ಟಿಸಿತು.
ಬ್ರಿಟಿಷ್ ವಸಾಹತುಶಾಹಿಗಳು ಅರೆ-ಯುರೋಪಿಯನ್ ಬರ್ಘರ್‌ಗಳು, ಕೆಲವು ಮೇಲಿನ-ಜಾತಿಯ ಸಿಂಹಳೀಯರು ಹಾಗೂ ಮುಖ್ಯವಾಗಿ ರಾಷ್ಟ್ರದ ಉತ್ತರ ಭಾಗವನ್ನು ಕೇಂದ್ರೀಕರಿಸಿದ, ಇಂದಿನವರೆಗೂ ಮುಂದುವರೆದಿರುವ ದ್ವೇಷ ಮತ್ತು ವಿಭಜನೆಗಳನ್ನು ಕೆರಳಿಸುತ್ತಿದ್ದ ತಮಿಳರಿಗೆ ಬೆಂಬಲವನ್ನು ನೀಡಿದರು. ಇಷ್ಟು ಮಾತ್ರವಲ್ಲದೆ ಬ್ರಿಟಿಷರು ತಮ್ಮ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಚಾಲ್ತಿಗೆ ತಂದರು. ಬರ್ಘರ್‌ಗಳಿಗೆ ೧೮೩೩ರಲ್ಲಿ ಸ್ವ-ಸರ್ಕಾರದ ಪದವಿಯನ್ನು ನೀಡಲಾಯಿತು. ೧೯೦೯ರಲ್ಲಿ ಭಾಗಶಃ ಚುನಾಯಿತ ಶಾಸನ ಸಭೆಯೊಂದಿಗೆ ಸಂವಿಧಾನಾತ್ಮಕ ಅಭಿವೃದ್ಧಿಯು ಆರಂಭವಾಯಿತು. ೧೯೨೦ರಲ್ಲಿ ಈ ಚುನಾಯಿತ ಸದಸ್ಯರು ಅಧಿಕೃತ ನೇಮಿತರನ್ನು ಮೀರಿಸಿದರು. ಸಾರ್ವತ್ರಿಕ ಮತದಾನವನ್ನು 1931ರಲ್ಲಿ ಚಾಲ್ತಿಗೆ ತರಲಾಯಿತು ಸಿಂಹಳೀಯರು, ತಮಿಳರು ಮತ್ತು ಬರ್ಘರ್‌ಗಳ ಆಕ್ಷೇಪದೊಂದಿಗೆ ಸಾಮಾನ್ಯ ಜನರಿಗೆ ಮತ ಚಲಾಯಿಸುವ ಅವಕಾಶವನ್ನು ನೀಡಲಾಯಿತು [೨] Archived 2011-06-22 ವೇಬ್ಯಾಕ್ ಮೆಷಿನ್ ನಲ್ಲಿ., [೩][೪] Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ..
ಸ್ವಾತಂತ್ರ್ಯ ಚಳವಳಿ
ಬದಲಾಯಿಸಿಸಿಲೋನ್ ನ್ಯಾಷನಲ್ ಕಾಂಗ್ರೆಸ್ (CNC)ಅನ್ನು ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಸಲು ಸ್ಥಾಪಿಸಲಾಯಿತು. ಈ ಪಕ್ಷವು ಅತಿ ಶೀಘ್ರದಲ್ಲಿ ಜನಾಂಗೀಯ ಮತ್ತು ಜಾತಿಯ ಮಿತಿಗಳಲ್ಲಿ ವಿಂಗಡಿಸಲ್ಪಟ್ಟಿತು. ಅಲ್ಪಸಂಖ್ಯಾತ ಸ್ಥಿತಿಯನ್ನು ಸ್ವೀಕರಿಸುವಲ್ಲಿ ಸಿಲೋನ್ ತಮಿಳರ ನಿರಾಕರಣೆಯು ಸಿಲೋನ್ ನ್ಯಾಷನಲ್ ಕಾಂಗ್ರೆಸ್ ವಿಭಜನೆಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಇತಿಹಾಸಕಾರ ಕೆ. ಎಮ್. ಡಿ ಸಿಲ್ವ ಹೇಳಿದ್ದಾರೆ.[೧೫] ಸ್ವಾತಂತ್ರ್ಯ ಚಳವಳಿಯು ಎರಡು ಗುಂಪುಗಳಾಗಿ ವಿಂಗಡಿಸಿತು, ಅಂದರೆ "ಸಂವಿಧಾನವಾದಿಗಳು", ಇವರು ಸಿಲೋನ್‌ನ ಸ್ಥಿತಿಯನ್ನು ಕ್ರಮೇಣ ಬದಲಾಯಿಸುವ ಮೂಲಕ ಸ್ವಾತಂತ್ರ್ಯವನ್ನು ಪಡೆಯಲು ಪ್ರಯತ್ನಿಸಿದರು ಹಾಗೂ ಹೆಚ್ಚು ಕ್ರಾಂತಿಕಾರಿ ಗುಂಪುಗಳು, ಅವುಗಳಲ್ಲಿ ಕೆಲವು ಕೊಲೊಂಬೊ ಯೂತ್ ಲೀಗ್, ಲೇಬರ್ ಮೂಮೆಂಟ್ ಆಫ್ ಗೂನಸಿಂಘೆ ಮತ್ತು ಜಾಫ್ನ ಯೂತ್ ಕಾಂಗ್ರೆಸ್. ಈ ಸಂಘಟನೆಗಳು ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯದ ಕೂಗನ್ನು ಎಬ್ಬಿಸಿದ ಮೊದಲಿಗರಾಗಿವೆ. ಇವು ನೆಹರು, ಸರೋಜಿನಿ ನಾಯ್ಡು ಮತ್ತು ಇತರ ಭಾರತೀಯ ಮುಖಂಡರು ೧೯೨೬ ರಲ್ಲಿ ಸಿಲೋನ್‌ಗೆ ಭೇಟಿ ನೀಡಿದ ನಂತರ ಕಾರ್ಯಪ್ರವೃತ್ತವಾದವು.[೧೬] ಕಮ್ಯೂನಲ್ ಪಾಲಿಟಿಕ್ಸ್ ಅಂಡರ್ ದಿ ಡೋನಫ್‌ಮೋರ್ ಕಾಂಸ್ಟಿಟ್ಯೂಶನ್. ಟ್ಸೈಸರ್ ಪ್ರಕಾಸಕಾಯೊ ದೇಹಿವಾಲ, ೧೯೮೨</ref> ಸಂವಿಧಾನವಾದಿಗಳ ಪ್ರಯತ್ನಗಳು ದೊನೌಘ್ಮೋರ್ ಕಮಿಷನ್ ಸುಧಾರಣೆಗಳು (೧೯೩೧) ಮತ್ತು ಸೌಲ್ಬರಿ ಕಮಿಷನ್ ಶಿಫಾರಸುಗಳು ಚಾಲ್ತಿಗೆ ಬರುವಂತೆ ಮಾಡಿದವು. ಇದು D. S. ಸೇನನಾಯಕೆ ನಾಯಕತ್ವದ ಮಂತ್ರಿಮಂಡಲದ 1944ರ ಕರಡು ಸಂವಿಧಾನಕ್ಕೆ ಬೆಂಬಲ ನೀಡಿತು.[೧೫][೧೬] 1935ರಲ್ಲಿ ಯೂತ್ ಲೀಗ್ಸ್‌ನಿಂದ ಬೆಳೆದ ಮಾರ್ಕ್ಸ್‌ವಾದಿ ಲಂಕ ಸಾಮ ಸಮಾಜ ಪಾರ್ಟಿಯು (LSSP) ಅದರ ನೀತಿಯ ಮೂಲಾಧಾರವಾಗಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯ ಪಡಿಸಿತು.[೫] Archived 2018-12-10 ವೇಬ್ಯಾಕ್ ಮೆಷಿನ್ ನಲ್ಲಿ. ಅದರ ರಾಜ್ಯ ಕೌನ್ಸಿಲ್‌ನಲ್ಲಿನ ಪ್ರತಿನಿಧಿಗಳಾದ N.M. ಪೆರೇರ ಮತ್ತು ಫಿಲಿಪ್ ಗುಣವರ್ದನ ಈ ಹೋರಾಟದಲ್ಲಿ, ನಾತೇಸ ಅಯ್ಯರ್ ಮತ್ತು ಡಾನ್ ಅಲ್ವಿನ್ ರಾಜಪಕ್ಷ ಮೊದಲಾದ ಇತರ ಕಡಿಮೆ-ಕ್ರಾಂತಿಕಾರಿ ಸದಸ್ಯರ ಮೂಲಕ ಬೆಂಬಲವನ್ನು ನೀಡಿದರು. ಅವರು ಇಂಗ್ಲಿಷ್ ಭಾಷೆಯ ಬದಲಿಗೆ ಸಿಂಹಳ ಮತ್ತು ತಮಿಳನ್ನು ಅಧಿಕೃತ ಭಾಷೆಯಾಗಿ ಮಾಡಬೇಕೆಂದೂ ಆದೇಶಿಸಿದರು. ಮಾರ್ಕ್ಸ್‌ವಾದಿ ಗುಂಪುಗಳು ಬಹಳ ಸಣ್ಣ ಗುಂಪುಗಳಾಗಿದ್ದವು, ಆದರೂ ಅವುಗಳ ಕಾರ್ಯಾಚರಣೆಯನ್ನು ಬ್ರಿಟಿಷ್ ಆಡಳಿತವು ತೀವ್ರ ಸಂದೇಹದಿಂದ ಕಾಣುತ್ತಿತ್ತು. ದಂಗೆಯ ಮೂಲಕ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಾರ್ವಜನಿಕರನ್ನು ಉತ್ತೇಜಿಸುವ ಸಾಹಸದ (ಆದರೆ ನಿಷ್ಫಲ) ಪ್ರಯತ್ನಗಳು ರಕ್ತಪಾತಕ್ಕೆ ಕಾರಣವಾದವು ಮತ್ತು ಅವುಗಳಿಂದಾಗಿ ಸ್ವಾತಂತ್ರ್ಯ ಸಿಗುವಲ್ಲಿ ಸ್ವಲ್ಪ ವಿಳಂಬವಾಯಿತು. ೧೯೫೦ರಲ್ಲಿ ಪ್ರಕಟಗೊಂಡ ಬ್ರಿಟಿಷ್ ರಾಜ್ಯ ವೃತ್ತಪತ್ರಿಕೆಗಳು, ಮಾರ್ಕ್ಸ್‌ವಾದಿ ಚಳವಳಿಗಳು ವಸಾಹತು ಕಛೇರಿಯಲ್ಲಿ ನಿಯಮ ರೂಪಿಸುವವರ ಮೇಲೆ ಬಹಳ ಋಣಾತ್ಮಕ ಪರಿಣಾಮವನ್ನು ಬೀರಿವೆ ಎಂದು ತೋರಿಸಿವೆ.
ಸೌಲ್ಬರಿ ಕಮಿಷನ್ ೧೯೩೦ರ ಸಂವಿಧಾನದ ತಿದ್ದುಪಡಿಗಾಗಿ ನಡೆದ ಚಳವಳಿಯ ಪ್ರಮುಖ ಪರಿಣಾಮವಾಗಿದೆ. ಈ ತಮಿಳು ಸಂಘಟನೆಯನ್ನು ನಂತರ G. G. ಪೊನ್ನಂಬಲಮ್ ನಿರ್ವಹಿಸಿದರು, ಇವರು "ಸಿಲೋನಿನ ಗುರುತನ್ನು" ನಿರಾಕರಿಸಿದರು.[೧೭] ಪೊನ್ನಂಬಲಮ್ ತಮ್ಮನ್ನು ತಾವು "ಹೆಮ್ಮೆಯ ದ್ರಾವಿಡ" ಎಂದು ಘೋಷಿಸಿದರು. ತಮಿಳರಿಗೆ ಒಂದು ಸ್ವತಂತ್ರ ಗುರುತನ್ನು ಪ್ರಕಟಿಸಿದರು. ಅವರು ಸಿಂಹಳೀಯರ ಮೇಲೆ ದಾಳಿ ನಡೆಸಿದರು ಮತ್ತು ಮಹಾವಂಶ ಎಂಬ ಅವರ ಐತಿಹಾಸಿಕ ಕಾಲಾನುಕ್ರಮ ವರದಿಯನ್ನು ಟೀಕಿಸಿದರು. ನಾವಲಪಿತಿಯದಲ್ಲಿನ ಅಂತಹ ಒಂದು ಸಂಘರ್ಷವು[specify] 1939ರಲ್ಲಿ ಮೊದಲ ಸಿಂಹಳ-ತಮಿಳರ ದಂಗೆಗೆ ಕಾರಣವಾಯಿತು.[೧೬][೧೮] ಪೊನ್ನಂಬಲಮ್ ಸಾರ್ವತ್ರಿಕ ಮತದಾನದ ಹಕ್ಕನ್ನು ವಿರೋಧಿಸಿದರು, ಜಾತಿ ವ್ಯವಸ್ಥೆಯನ್ನು ಬೆಂಬಲಿಸಿದರು. ಅದಲ್ಲದೇ ತಮಿಳು ಹಕ್ಕುಗಳ ರಕ್ಷಣೆಗೆ ತಮಿಳರು (1931ರ ಒಟ್ಟು ಜನಸಂಖ್ಯೆಯ 15%) ಸಂಸತ್ತಿನಲ್ಲಿ ಸಿಂಹಳೀಯರ ಸ್ಥಾನಗಳಿಗೆ (ಒಟ್ಟು ಜನಸಂಖ್ಯೆಯ ~72%) ಸಮವಾದ ಸ್ಥಾನಗಳನ್ನು ಹೊಂದುವ ಅಗತ್ಯವಿದೆ ಎಂದು ವಾದಿಸಿದರು. ಈ "50-50" ಅಥವಾ "ಸಮತೋಲಿತ ಪ್ರಾತಿನಿಧ್ಯ" ನೀತಿಯು ಆ ಸಂದರ್ಭದ ತಮಿಳು ರಾಜಕೀಯದಲ್ಲಿ ಪ್ರಮುಖ ಗುರುತಾಯಿತು. ಪೊನ್ನಂಬಲಮ್ ಬ್ರಿಟಿಷರು "ಸಾಂಪ್ರದಾಯಿಕ ತಮಿಳು ಪ್ರದೇಶ"ಗಳಲ್ಲಿ ವಸಾಹತುಗಳನ್ನು ಹೊಂದಿದುದಕ್ಕಾಗಿ ಮತ್ತು ಬೌದ್ಧಧರ್ಮದ ಲೌಕಿಕ ಆಸ್ತಿ ಕಾರ್ಯದ ಮೂಲಕ ಬೌದ್ಧಧರ್ಮದವರಿಗೆ ಬೆಂಬಲ ನೀಡಿದುದಕ್ಕಾಗಿ ಅವರನ್ನು ದೂರಿದರು. ಸೌಲ್ಬರಿ ಕಮಿಷನ್ ಪೊನ್ನಂಬಲಮ್‌ನ ಈ ಅರಿಕೆಗಳನ್ನು ನಿರಾಕರಿಸಿತು ಮತ್ತು ಅದರ ಸ್ವೀಕಾರಯೋಗ್ಯವಲ್ಲದ ಮತೀಯ ಲಕ್ಷಣವೆಂದು ಹೇಳುವ ಮೂಲಕ ಟೀಕಿಸಿತು[clarification needed]. ದಕ್ಷಿಣದ ನಗರ ಕೇಂದ್ರಗಳಿಗೆ ವಿಶೇಷವಾಗಿ ಜಾಫ್ನ-ಕೊಲೊಂಬೊ ರೈಲು ಮಾರ್ಗವು ಆರಂಭವಾದ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ವಲಸೆ ಬಂದರೆಂದು ಸಿಂಹಳೀಯ ಬರಹಗಾರರು ಸೂಚಿಸುತ್ತಾರೆ. ಅದೇ ಸಂದರ್ಭದಲ್ಲಿ ಸೇನನಾಯಕೆ, ಬ್ಯಾರನ್ ಜಯಟಿಲ್ಲೆಕೆ, ಆಲಿವರ್ ಗುಣಟಿಲ್ಲೆಕೆ ಮತ್ತು ಇತರರು ಅಧಿಕೃತವಾಗಿ ಅಭಿಮುಖವಾಗದೆ ಸೌಲ್ಬರಿ ಕಮಿಷನ್‌ನ ಮೇಲೆ ಪ್ರಭಾವ ಬೀರಿದರು. ಈ ಅನಧಿಕೃತ ಅರಿಕೆಗಳು ನಂತರ 1944ರ ಕರಡು ಸಂವಿಧಾನವಾಯಿತು.[೧೬]
ಯುದ್ಧದ-ಸಂದರ್ಭದಲ್ಲಿ ಬ್ರಿಟಿಷ್ ಆಡಳಿತದೊಂದಿಗಿನ D. S. ಸೇನನಾಯಕೆ ಸರ್ಕಾರದ ಹತ್ತಿರದ ಸಹಯೋಗವು ಲಾರ್ಡ್ ಲೂಯಿಸ್ ಮೌಂಟ್‌ಬ್ಯಾಟನ್‌ನಿಂದ ಬೆಂಬಲವನ್ನು ಪಡೆಯಲು ಕಾರಣವಾಯಿತು. ಸಿಲೋನ್‌ಗಾಗಿ ಸ್ವಾತಂತ್ರ್ಯವನ್ನು ಬೆಂಬಲಿಸುವ ವಸಾಹತು ಕಛೇರಿಗೆ ಅವರು ಕಳುಹಿಸಿದ ಲಿಖಿತ ಸಮಾಚಾರಗಳು ಮತ್ತು ಟೆಲಿಗ್ರಾಮ್, ಶ್ರೀಲಂಕಾದ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಸೇನನಾಯಕೆ ಸರ್ಕಾರಕ್ಕೆ ಸಹಾಯ ಮಾಡಿದವು ಎಂದು ಇತಿಹಾಸಕಾರರು ಹೇಳಿದ್ದಾರೆ. ಬ್ರಿಟಿಷರೊಂದಿಗಿನ ಪ್ರಬಲ ಸಹಯೋಗ ಮತ್ತು ಆಲಿವರ್ ಗುಣಟಿಲ್ಲೆಕೆ ನೇತೃತ್ವದಲ್ಲಿ ಯುದ್ಧ-ಸಾಮಗ್ರಿಗಳ ಮಾರುಕಟ್ಟೆಯ ಬೇಡಿಕೆಗಳನ್ನು ಸಿಲೋನ್‌ನ ಮಾರುಕಟ್ಟೆಗಳಿಗೆ ಪೂರೈಕೆ ಕೇಂದ್ರವಾಗಿ ಬದಲಾಯಿಸಿದುದು, ಹೊಸ ಸ್ವತಂತ್ರ ಸರ್ಕಾರಕ್ಕೆ ಸೂಕ್ತ ಹಣಕಾಸಿನ ಸ್ಥಿತಿಯನ್ನು ಒದಗಿಸಿತು.
ಎರಡನೆ ವಿಶ್ವ ಸಮರ
ಬದಲಾಯಿಸಿವಿಶ್ವ ಸಮರ IIರ ಸಂದರ್ಭದಲ್ಲಿ ಶ್ರೀಲಂಕಾವು ಜಪಾನಿಯರ ವಿರುದ್ಧ ಬ್ರಿಟಿಷರ ಮುಂಭಾಗದ ಆಧಾರವಾಗಿತ್ತು. ಶ್ರೀಲಂಕಾದಲ್ಲಿ ಈ ಯುದ್ಧಕ್ಕೆ ವಿರೋಧವನ್ನು ಮಾರ್ಕ್ಸ್‌ವಾದಿ ಸಂಘಟನೆಗಳು ವ್ಯಕ್ತಪಡಿಸಿದವು. LSSP ಸ್ವಾತಂತ್ರ್ಯಾ-ಪರವಾದ ಚಳವಳಿಯ ಮುಖಂಡರನ್ನು ವಸಾಹತುಶಾಹಿ ಅಧಿಕಾರಿಗಳು ಬಂಧಿಸಿದರು. 1942ರ ಎಪ್ರಿಲ್ 5ರಂದು, ಜಪಾನಿನ ನೌಕಾಪಡೆಯು ಕೊಲೊಂಬೊ ಮೇಲೆ ಬಾಂಬ್ ದಾಳಿ ನಡೆಸಿತು. ಇದು ಕೊಲೊಂಬೊ ವಾಣಿಜ್ಯ ಕ್ಷೇತ್ರದಲ್ಲಿ ಪ್ರಬಲವಾಗಿದ್ದ ಭಾರತೀಯ ವ್ಯಾಪಾರಿಗಳು ಪಲಾಯನ ಗೈಯುವಂತೆ ಮಾಡಿತು. ಈ ಪಲಾಯನವು ಸೇನನಾಯಕೆ ಸರ್ಕಾರವು ಎದುರಿಸುತ್ತಿದ್ದ ಪ್ರಮುಖ ರಾಜಕೀಯ ಸಮಸ್ಯೆಯನ್ನು ಪರಿಹರಿಸಿತು.[೧೬] ಮಾರ್ಕ್ಸ್‌ವಾದಿ ಮುಖಂಡರೂ ಸಹ ಭಾರತಕ್ಕೆ ಓಡಿಹೋದರು, ಅಲ್ಲಿ ಅವರು ಸ್ವಾತಂತ್ರ್ಯಾ ಹೋರಾಟದಲ್ಲಿ ಭಾಗವಹಿಸಿದರು. ಸಿಲೋನ್‌ನಲ್ಲಿನ ಚಳವಳಿಯು ತುಂಬಾ ಸಣ್ಣ ಪ್ರಮಾಣದಲ್ಲಿತ್ತು, ಇಂಗ್ಲಿಷ್-ಶಿಕ್ಷಣ ಪಡೆದ ಬುದ್ಧಿಜೀವಿಗಳು ಮತ್ತು ವ್ಯಾಪಾರ ಒಕ್ಕೂಟಗಳಿಗೆ ಸೀಮಿತವಾಗಿತ್ತು. ಅಲ್ಲದೇ ಮುಖ್ಯವಾಗಿ ನಗರದ ಕೇಂದ್ರ ಭಾಗದಲ್ಲಿ ಮಾತ್ರ ಇತ್ತು. ಈ ಗುಂಪುಗಳ ಮುಂದಾಳತ್ವವನ್ನು ಫಿಲಿಪ್‌ನ ಸಹೋದರ ರಾಬರ್ಟ್ ಗುಣವರ್ಧನ ವಹಿಸಿಕೊಂಡಿದ್ದರು. ಯುದ್ಧದ ಈ "ಸಾಹಸ"ದ ಆದರೆ ನಿಷ್ಫಲ ಸಾಧನೆಗೆ ಸಂಪೂರ್ಣವಿರುದ್ಧವಾಗಿ, ಸೇನನಾಯಕೆ ಸರ್ಕಾರವು ಆಳುವವರೊಂದಿಗೆ ಸೌಹಾರ್ದದ ಸಂಬಂಧವನ್ನು ಹೆಚ್ಚಿಸಲು ಈ ಯುದ್ಧದ ಪ್ರಯೋಜನವನ್ನು ಪಡೆದುಕೊಂಡಿತು. ಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಲೋನ್ ಬಲು ಕಷ್ಟಕರವಾಯಿತು, ಲಾರ್ಡ್ ಲೂಯಿಸ್ ಮೌಂಟ್‌ಬ್ಯಾಟನ್ ಕೊಲೊಂಬೊವನ್ನು ಪೌರಾತ್ಯ ಥಿಯೇಟರ್‌ಗೆ ತಮ್ಮ ಪ್ರಧಾನ ಕಛೇರಿಯಾಗಿ ಬಳಸುತ್ತಿದ್ದರು. ಆಲಿವರ್ ಗುಣಟಿಲ್ಲೆಕೆಯು ಭಂಡಾರವನ್ನು ಮತ್ತೆ ತುಂಬಲು ರಾಷ್ಟ್ರದ ರಬ್ಬರ್ ಮತ್ತು ಇತರ ಕೃಷಿ ಉತ್ಪನ್ನಗಳಿಗಾಗಿ ಯಶಸ್ವಿಯಾಗಿ ಮಾರುಕಟ್ಟೆಗಳನ್ನು ಬಳಸಿಕೊಂಡರು. ಸಿಂಹಳೀಯರು ಬ್ರಿಟನ್ ಒಂದಿಗೆ ವಿಶೇಷ ಸಂಬಂಧವನ್ನು ಹೊಂದಲು ಯುದ್ಧದಿಂದ ಒದಗಿಬಂದ ಅವಕಾಶಗಳನ್ನು ಬಳಸಿಕೊಂಡು ಸ್ವಾತಂತ್ರ್ಯಕ್ಕಾಗಿ ಮತ್ತು ಸಿಂಹಳೀಯರ ಸೌರ್ವಭೌಮತ್ವಕ್ಕಾಗಿ ಚಳವಳಿ ನಡೆಸುವುದನ್ನು ಮುಂದುವರಿಸಿದರು.
ಮಾರ್ಕ್ಸ್‌ವಾದಿಗಳು ಈ ಯುದ್ಧವನ್ನು ಸಾಮ್ರಾಜ್ಯಶಾಹಿಯ ಪ್ರದರ್ಶನವೆಂದು ಪರಿಗಣಿಸಿದರು ಮತ್ತು ಅವರ ನಗಣ್ಯ ಹೋರಾಡುವ ಬಲಕ್ಕೆ ಅಸಮನಾದ ಚಳವಳಿಯ ಮಾರ್ಗವನ್ನು ಆರಿಸಿಕೊಂಡು ಕೆಳ ವರ್ಗದ ಪ್ರಜೆಗಳ ದಂಗೆಯಾಗಬೇಕೆಂದು ಬಯಸಿದರು. ಅಲ್ಲದೆ ಅವರು ಸೇನನಾಯಕೆ ಮತ್ತು ಇತರ ಜನಾಂಗೀಯ ಸಿಂಹಳೀಯ ಮುಖಂಡರ "ಸಂವಿಧಾನವಾದಿ" ಮಾರ್ಗಗಳನ್ನು ವಿರೋಧಿಸಿದರು. ಕೊಕೊಸ್ ದ್ವೀಪದಲ್ಲಿನ ಸಿಲೋನಿನವರ ಸಣ್ಣ ರಕ್ಷಕ ಸೈನ್ಯವೊಂದು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ಪ್ರಯತ್ನಿಸಿತು. ಈ ಕಾರ್ಯದಲ್ಲಿ LSSP ಸ್ವಲ್ಪ ಪ್ರಮಾಣದಲ್ಲಿ ಮಧ್ಯಸ್ಥಿಕೆ ವಹಿಸಿತ್ತು ಎಂದು ನಿರೂಪಿಸಲಾಗಿದೆ, ಆದರೆ ಇದರ ಬಗ್ಗೆ ಸ್ಪಷ್ಟತೆ ಇಲ್ಲ. ವಿಶ್ವ ಸಮರ IIರ ಸಂದರ್ಭದ "ದಂಗೆ"ಯಲ್ಲಿ ಭಾಗವಹಿಸಿದವರಲ್ಲಿ ಕೇವಲ ಮೂವರು ಬ್ರಿಟಿಷ್ ಜನರಾಗಿದ್ದರೆಂದು ಹೇಳಲಾಗಿದೆ [೬] Archived 2001-09-11 ವೇಬ್ಯಾಕ್ ಮೆಷಿನ್ ನಲ್ಲಿ.. ಆಡಳಿತ ನಡೆಸುತ್ತಿದ್ದ ಪಕ್ಷದ ಇಬ್ಬರು ಸದಸ್ಯರಾದ ಜೂನಿಯಸ್ ರಿಚರ್ಡ್ ಜಯವರ್ದನೆ ಮತ್ತು ಡ್ಯೂಡ್ಲಿ ಸೇನನಾಯಕೆ ಬ್ರಿಟಿಷರೊಂದಿಗಿನ ಹೋರಾಟದಲ್ಲಿ ಜತೆಗೂಡುವಂತೆ ಜಪಾನಿಯರೊಂದಿಗೆ ಚರ್ಚಿಸಿದರು.
ಸಿಂಗಾಪುರ ಮತ್ತು ಮಲೇಷಿಯಾದ ಶ್ರೀಲಂಕನ್ನರು (ಪರವಾದ/ವಿರುದ್ಧ ವಸಾಹತು?) ಭಾರತೀಯ ರಾಷ್ಟ್ರೀಯ ಸೇನೆಯ 'ಲಂಕಾ ರೆಜಿಮೆಂಟ್'ಅನ್ನು ರೂಪಿಸಿದರು.
D. S. ಸೇನನಾಯಕೆ ಮುಖಂಡತ್ವದ ಸಂವಿಧಾನವಾದಿಗಳು ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು. ಸೌಲ್ಬರಿ ಸಂವಿಧಾನವು ಸೇನನಾಯಕೆಯ ಮಂತ್ರಿ ಮಂಡಲವು 1944ರಲ್ಲಿ ಕರಡು ತಯಾರಿಸಿದುದರ ಫಲವಾಗಿದೆ. ಪರಮಾಧಿಕಾರದ ಸ್ಥಿತಿಯ ಮತ್ತು ಸ್ವಾತಂತ್ರ್ಯದ ಭರವಸೆಯನ್ನು ವಸಾಹತು ಕಛೇರಿಯು ನೀಡಿತು.
ಯುದ್ಧಾನಂತರದ ಸ್ಥಿತಿ
ಬದಲಾಯಿಸಿಸಿಂಹಳೀಯರ ಮುಖಂಡ ಡಾನ್ ಸ್ಟೀಫನ್ ಸೇನನಾಯಕೆಯವರು ಸ್ವಾತಂತ್ರ್ಯದ ವಿವಾದದಿಂದಾಗಿ CNCಅನ್ನು ತೊರೆದರು. ಸ್ವಾತಂತ್ರ್ಯವನ್ನು ಪಡೆಯುವ ಪರಿಷ್ಕೃತ ಗುರಿಯನ್ನು ನಿರಾಕರಿಸಿದರು, ಆದರೂ ಅವರ ನೈಜ ಕಾರಣಗಳು ಹೆಚ್ಚು ವಿವರಣಾತ್ಮಕವಾಗಿರಲಿಲ್ಲ [೭] Archived 2001-11-07 ವೇಬ್ಯಾಕ್ ಮೆಷಿನ್ ನಲ್ಲಿ.. ಅವರು ನಂತರ 1946ರಲ್ಲಿ ಯುನೈಟೆಡ್ ನ್ಯಾಷನಲ್ ಪಾರ್ಟಿಯನ್ನು (UNP) ರೂಪಿಸಿದರು.[೮] ಆ ಸಂದರ್ಭದಲ್ಲಿ ಸೌಲ್ಬರಿ ಕಮಿಷನ್‌ನ ಪರದೆಯ ಹಿಂದೆ ಬೆಂಬಲ ನೀಡುವ ಆಧಾರದಲ್ಲಿ ಹೊಸ ಸಂವಿಧಾನವನ್ನು ಅಂಗೀಕರಿಸಲಾಯಿತು. 1947ರ ಚುನಾವಣೆಯಲ್ಲಿ, UNP ಸಂಸತ್ತಿನಲ್ಲಿ ಅಲ್ಪ ಮತ ಸ್ಥಾನಗಳನ್ನು ಗಳಿಸಿತು. ಆದರೆ ಇದು ಸೋಲೊಮನ್ ಬಂಡರನಾಯಕೆಯವರ ಸಿಂಹಳ ಮಹಾ ಸಭಾ ಮತ್ತು G.G. ಪೊನ್ನಂಬಲಮ್‌ನ ತಮಿಳ್ ಕಾಂಗ್ರೆಸ್ ಒಂದಿಗೆ ಜತೆಗೂಡಿತು. ತಮಿಳು-ಕೋಮುವಾದಿ ಮುಖಂಡ ಪೊನ್ನಂಬಲಮ್ ಮತ್ತು ಅವರ ಸಿಂಹಳ-ಎದುರಾಳಿ ಬಂಡರನಾಯಕೆಯವರ ಯಶಸ್ವಿ ಒಳಪ್ರವೇಶವು ಸೇನನಾಯಕೆಯವರ ಆಡಳಿತದಲ್ಲಿ ಗಮನಾರ್ಹ ರಾಜಕೀಯ ಸಮತೋಲನದ ಕಾರ್ಯವಾಗಿದೆ. ಪೊನ್ನಂಬಲಮ್‌ರ ಸ್ಥಾನಾಂತರದಿಂದ ತಮಿಳು ರಾಷ್ಟ್ರೀಯತಾವಾದಿ ರಾಜಕಾರಣದಲ್ಲಿ ಉಂಟಾದ ತೆರವು, ತಮಿಳ್ ಅರಸು ಕಚ್ಚಿಗೆ ಸ್ಥಾನವನ್ನು ಒದಗಿಸಿತು, ಇದು ಕ್ರಿಶ್ಚಿಯನ್ ಮಂತ್ರಿಯ ವಕೀಲ ಪುತ್ರ S. J. V. ಚೆಲ್ವನಾಯಕಮ್ ಮುಖಂಡತ್ವದ ತಮಿಳು ಸಾರ್ವಭೌಮತ್ವದ ಪಕ್ಷವಾಗಿದೆ (ಇಂಗ್ಲಿಷ್‌ನಲ್ಲಿ "ಫೆಡರಲ್" ಪಕ್ಷವೆಂದು ನಿರೂಪಿಸಲಾಗಿದೆ).
ಇಪ್ಪತ್ತನೇ ಶತಮಾನದ ಶ್ರೀಲಂಕಾ
ಬದಲಾಯಿಸಿಸ್ವಾತಂತ್ರ್ಯ
ಬದಲಾಯಿಸಿಪರಮಾಧಿಕಾರ ಸ್ಥಿತಿಯು 1948ರ ಫೆಬ್ರವರಿ 4ರಲ್ಲಿ ಸ್ವಾತಂತ್ರ್ಯವಾಗಿ ಪ್ರಗತಿ ಹೊಂದಿತು, ಬ್ರಿಟನ್ ಒಂದಿಗೆ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು (ಆರಂಭದಲ್ಲಿ ಶಸ್ತ್ರಾಸ್ತ್ರ ಸಜ್ಜಿತ ಸೈನ್ಯಗಳಲ್ಲಿ ಉನ್ನತ ಸ್ಥಾನವನ್ನು ಗಳಿಸಿದ್ದವರೆಂದರೆ ಬ್ರಿಟಿಷರು) ಹಾಗೂ ಬ್ರಿಟಿಷ್ ವಾಯು ಮತ್ತು ಸಮುದ್ರ ಮಾರ್ಗಗಳು ಯಾವುದೇ ಹಾನಿಗೊಳಗಾಗದೆ ಉಳಿದವು. ಸೇನನಾಯಕೆಯವರು ಶ್ರೀಲಂಕಾದ ಪ್ರಥಮ ಪ್ರಧಾನ ಮಂತ್ರಿಯಾದರು. 1949ರಲ್ಲಿ, ಸಿಲೋನ್-ತಮಿಳು ಮುಖಂಡರ ಸಹಯೋಗದೊಂದಿಗೆ UNP ಸರ್ಕಾರವು ಭಾರತೀಯ-ತಮಿಳು ತೋಟದ-ಕಾರ್ಮಿಕರ ನಾಗರಿಕ ಹಕ್ಕುಗಳನ್ನು ತಪ್ಪಿಸಿತು.[೧೬][೧೯] ಚಹಾ ಎಸ್ಟೇಟುಗಳ ಕಾರ್ಮಿಕ-ವರ್ಗದಿಂದ ಅಪಾಯವನ್ನು ಎದುರಿಸುತ್ತಿದ್ದ ಕ್ಯಾಂಡಿಯನ್ ಸಿಂಹಳೀಯರ ಬೆಂಬಲವನ್ನು ಪಡೆಯಲು ಸೇನನಾಯಕೆ ಈ ನಷ್ಟವನ್ನು ಸರಿದೂಗಿಸಬೇಕಾಗಿತ್ತು. ಇಲ್ಲಿ ಭಾರತೀಯ-ತಮಿಳರ ಸೇರ್ಪಡೆಯು ಕ್ಯಾಂಡಿಯನ್ ಮುಖಂಡರಿಗೆ ಮತದಾರರ ಸೋಲನ್ನು ತಂದೊಡ್ಡಬಹುದಿತ್ತು. ಸೇನನಾಯಕೆ 1952ರಲ್ಲಿ ಕುದುರೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದರು ಅವರ ನಂತರ ಅವರ ಪುತ್ರ ಕೃಷಿ ಮಂತ್ರಿ ಡ್ಯೂಡ್ಲಿ ಸೇನನಾಯಕೆ ಅಧಿಕಾರಕ್ಕೆ ಬಂದರು. ಆದರೆ 1953ರಲ್ಲಿ UNPಯ ವಿರುದ್ಧ ಎಡ ಪಕ್ಷಗಳು ನಡೆಸಿದ ಭಾರಿ ಸಾರ್ವತ್ರಿಕ ಪ್ರತಿಭಟನೆ ಅಥವಾ 'ಹರತಾಳ'ದ ನಂತರ ಡ್ಯೂಡ್ಲಿ ಸೇನನಾಯಕೆಯವರು ರಾಜೀನಾಮೆ ನೀಡಿದರು. ಅವರ ನಂತರ ಹಿರಿಯ ರಾಜಕಾರಣಿ ಮತ್ತು ಡ್ಯೂಡ್ಲಿಯ ಚಿಕ್ಕಪ್ಪ ಜಾನ್ ಕೊತೆಲವಾಲರು ಅಧಿಕಾರಕ್ಕೆ ಬಂದರು. ಕೊತೆಲವಾಲರು D. S. ಸೇನನಾಯಕೆಯವರಷ್ಟು ರಾಜಕೀಯ ಕುಶಾಗ್ರಮತಿಯನ್ನು ಅಥವಾ ಹೆಚ್ಚಿನ ವೈಯಕ್ತಿಕ ಪ್ರತಿಷ್ಠೆಯನ್ನು ಹೊಂದಿರಲಿಲ್ಲ [೯]. ಅವರು D. S. ಸೇನನಾಯಕೆಯವರು ಚಾತುರ್ಯದಿಂದ ಗಮನ ಪಡೆಯದಂತೆ ಇರಿಸಿದ ರಾಷ್ಟ್ರೀಯ ಭಾಷೆಗಳ ಸಮಸ್ಯೆಯನ್ನು ಮುಂದಕ್ಕೆ ತಂದರು. ಅವರು ಸಿಂಹಳ ಮತ್ತು ತಮಿಳನ್ನು ಅಧಿಕೃತ ಭಾಷೆಗಳಾಗಿ ಮಾಡುವುದಕ್ಕೆ ಸಂಬಂಧಿಸಿದಂತೆ ಸಂಘರ್ಷದ ನೀತಿಗಳನ್ನು ಸೂಚಿಸುವ ಮೂಲಕ ತಮಿಳರು ಮತ್ತು ಸಿಂಹಳೀಯರ ವೈರ ಕಟ್ಟಿಕೊಂಡರು. ಅವರು ಬಂಡರನಾಯಕೆಯ ಬೆಂಬಲಿಗರಾದ ರಾಜಕೀಯವಾಗಿ ಸಕ್ರಿಯವಾಗಿದ್ದ ಬೌದ್ಧ ಧರ್ಮದ ಸಂನ್ಯಾಸಿಗಳ ಮೇಲೆ ದಾಳಿ ಮಾಡುವ ಮೂಲಕ ಬೌದ್ಧ ಧರ್ಮದ ಗುಂಪುಗಳೊಂದಿಗೂ ವಿರೋಧ ಮಾಡಿಕೊಂಡರು.
ಪ್ರಜಾಪ್ರಭುತ್ವ (1970ರಿಂದ 2009)
ಬದಲಾಯಿಸಿಬಂಡರನಾಯಕೆಯವರ ಆಳ್ವಿಕೆಯಡಿಯಲ್ಲಿ ರಾಷ್ಟ್ರವು ಪ್ರಜಾಪ್ರಭುತ್ವ, ಸಾರ್ವಭೌಮ ಮತ್ತು ಸ್ವತಂತ್ರ ಪ್ರಜಾಪ್ರಭುತ್ವ ಶ್ರೀಲಂಕವಾಯಿತು.[೨೦] ಅಲ್ಲದೆ ಸೆನೆಟ್ ಅಂತ್ಯಗೊಂಡಿತು ಮತ್ತು ಸಿಂಹಳವು ಅಧಿಕೃತ ಭಾಷೆಯಾಯಿತು (ತಮಿಳು ಎರಡನೇ ಭಾಷೆಯಾಯಿತು). ಬ್ರಿಟಿಷ್ ಪ್ರೈವಿ ಕೌನ್ಸಿಲ್‌ಗೆ ಬೇಡಿಕೆ ಸಲ್ಲಿಸುವ ಕ್ರಮವು ರದ್ದುಗೊಂಡಿತು. ಮಾರ್ಕ್ಸ್‌ವಾದಿ ಯೋಜನೆಯ ಚುನಾವಣಾ ವಾಗ್ದಾನಗಳನ್ನು ನೆರವೇರಿಸಲು ಮತ್ತು ಸ್ವಂತ ಕಂಪನಿಗಳಿಂದ ಹೆಚ್ಚಾಗುತ್ತಿರುವ ಬಂಡವಾಳದ-ಹಿಂದೆಗೆತವನ್ನು ತಡೆಯಲು ವಸಾಹತು ತೋಟಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.
1971ರ ದಂಗೆ
ಬದಲಾಯಿಸಿಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (November 2009) |
ತೀವ್ರವಾದಿ ಸಿಂಹಳೀಯರ ಜನತಾ ವಿಮುಕ್ತಿ ಪೆರಮುನವು 1971ರ ಎಪ್ರಿಲ್‌ನಲ್ಲಿ ಬಂಡರನಾಯಕೆಯವರ ಸರ್ಕಾರದ ವಿರುದ್ಧ ದಂಗೆಯನ್ನು ಆರಂಭಿಸಿದಾಗ ಪ್ರಪಂಚದಾದ್ಯಂತ ಗಮನ ಸೆಳೆಯಿತು. ದಂಗೆಕೋರರು ಕಿರಿಯರಾಗಿದ್ದು, ಕಡಿಮೆ ಶಸ್ತ್ರಾಸ್ತ್ರವನ್ನು ಹೊಂದಿದ್ದು, ಅಸಮರ್ಪಕವಾಗಿ ತರಬೇತಿಯನ್ನು ಪಡೆದಿದ್ದರೂ, ಅವರು ಭದ್ರತಾ ಪಡೆಗಳಿಂದ ಸೋಲನ್ನನುಭವಿಸುವುದಕ್ಕಿಂತ ಮೊದಲು ದಕ್ಷಿಣ ಮತ್ತು ಕೇಂದ್ರ ಪ್ರಾಂತ್ಯಗಳ ಪ್ರಮುಖ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವ ಅವರ ಪ್ರಯತ್ನವು ಸರ್ಕಾರಕ್ಕೆ ಪ್ರಮುಖ ಸಮಸ್ಯೆಯನ್ನು ತಂದೊಡ್ಡಿತು ಮತ್ತು ರಾಷ್ಟ್ರದ ಭದ್ರತಾ ಅವಶ್ಯಕತೆಗಳು ಮೂಲಭೂತವಾಗಿ ಹೊಸದಾಗಿ ನಿರ್ಮಾಣವಾಗುವಂತೆ ಮಾಡಿತು.
ಈ ಚಳವಳಿಯು 1960ರ ಉತ್ತರಾರ್ಧದಲ್ಲಿ ಹಾಂಬಂಟೋಟ ಜಿಲ್ಲೆಯ ತಾಂಗಲ್ಲದ ಸಮುದ್ರ-ಬಂದರಿನ ವ್ಯಾಪಾರಿಯ ಪುತ್ರ ಹೋರನ ವಿಜೆವೀರನಿಂದ ಆರಂಭಗೊಂಡಿತು. ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ವಿಜೆವೀರನು ಹಣಕಾಸಿನ ಸಮಸ್ಯೆಗಳಿಂದಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸುವಂತೆ ಆಯಿತು. ಸಿಲೋನ್ ಕಮ್ಯೂನಿಸ್ಟ್ ಪಕ್ಷದ ಸದಸ್ಯನಾದ ತನ್ನ ತಂದೆಯ ಸ್ನೇಹಿತರ ಮೂಲಕ ವಿಜೆವೀರನು ಯಶಸ್ವಿಯಾಗಿ ಸೋವಿಯತ್ ಒಕ್ಕೂಟದಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದನು. 1960ರಲ್ಲಿ ತನ್ನ ಹದಿನೇಳನೇ ವಯಸ್ಸಿನಲ್ಲಿ ಆತನು ಪ್ಯಾಟ್ರಿಸ್ ಲುಮುಂಬ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಶಾಸ್ತ್ರವನ್ನು ಅಧ್ಯಯನ ಮಾಡಲು ಮಾಸ್ಕೊಗೆ ಹೋದನು.
ಮಾಸ್ಕೊದಲ್ಲಿರುವಾಗ ಆತನು ಮಾರ್ಕ್ಸ್ ತತ್ತ್ವವನ್ನು ಅಧ್ಯಯನ ಮಾಡಿದನು. ಆದರೆ ಮಾವೋನ ಕ್ರಾಂತಿಕಾರಿ ಸಿದ್ಧಾಂತದ ಬಗೆಗಿನ ಆತನ ಮುಕ್ತ ಸಹಮತದಿಂದಾಗಿ 1964ರಲ್ಲಿ ಅಲ್ಪ ಕಾಲದ ಮನೆಯ ಭೇಟಿ ನಂತರ ಸೋವಿಯತ್ ಒಕ್ಕೂಟಕ್ಕೆ ಹಿಂತಿರುಗುವ ವೀಸಾವನ್ನು ನಿರಾಕರಿಸಿದನು. ನಂತರ ಕೆಲವು ವರ್ಷಗಳ ಕಾಲ ಆತನು ಸಿಲೋನ್ ಕಮ್ಯೂನಿಸ್ಟ್ ಪಕ್ಷದ ಬೀಜಿಂಗ್-ಪರವಾದ ವಿಭಾಗದಲ್ಲಿ ಪಾಲ್ಗೊಂಡನು. ಆದರೆ ಆತನು ಪಕ್ಷದ ಸದಸ್ಯರೊಂದಿಗೆ ಹೆಚ್ಚಿನ ಭಿನ್ನಾಭಿಪ್ರಾಯ ಹೊಂದಿದ್ದನು ಮತ್ತು ಪಕ್ಷವು ಕ್ರಾಂತಿಕಾರಿ ಗುರಿಯನ್ನು ಹೊಂದಿಲ್ಲವೆಂದು ಅಸಹನೆ ಸೂಚಿಸುತ್ತಿದ್ದನು. ಯುವ ತಂಡಗಳೊಂದಿಗೆ ಕೆಲಸ ಮಾಡುವಲ್ಲಿನ ಆತನ ಯಶಸ್ಸು ಮತ್ತು ಸಾರ್ವಜನಿಕವಾಗಿ ಉತ್ತಮ ರೀತಿಯಲ್ಲಿ ಮಾತನಾಡುವ ಸಾಮರ್ಥ್ಯದ ಪ್ರಸಿದ್ಧಿಯು 1967ರಲ್ಲಿ ಆತನು ಸ್ವಂತ ಚಳವಳಿಯನ್ನು ಆರಂಭಿಸುವಂತೆ ಮಾಡಿತು. ಆರಂಭದಲ್ಲಿ ಹೊಸ ಎಡ ಪಕ್ಷವೆಂದು ಪರಿಗಣಿಸಲಾದ ಈ ಗುಂಪು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ನಿರುದ್ಯೋಗ ಯುವಕರನ್ನು ಒಳಗೊಂಡಿತ್ತು. ಅವರಲ್ಲಿ ಹೆಚ್ಚಿನವರು ಹದಿನಾರರಿಂದ ಇಪ್ಪತ್ತೈದು ವರ್ಷ ವಯಸ್ಸಿನವರಾಗಿದ್ದರು. ಇದರ ಹೆಚ್ಚಿನ ಹೊಸ ಸದಸ್ಯರು ಕೆಳ ಜಾತಿಯ (ಕಾರವ ಮತ್ತು ದುರವ) ಸದಸ್ಯರಾಗಿದ್ದರು, ಅವರು ತಮ್ಮ ಆರ್ಥಿಕ ಆಸಕ್ತಿಗಳನ್ನು ರಾಷ್ಟ್ರದ ತೀವ್ರವಾದಿ ಒಕ್ಕೂಟಗಳು ನಿರಾಕರಿಸುತ್ತಿದ್ದರೆಂದು ಭಾವಿಸಿದ್ದರು. ಐದು ಉಪನ್ಯಾಸಗಳೆಂದು ಕರೆಯಲಾಗುವ ಉಪದೇಶದ ಪ್ರಮಾಣಿತ ಯೋಜನೆಯು ಭಾರತೀಯ ಸಾರ್ವಭೌಮತ್ವದ ವಾದವಿವಾದಗಳು, ಬೆಳೆಯುತ್ತಿರುವ ಆರ್ಥಿಕ ಬಿಕ್ಕಟ್ಟು, ದ್ವೀಪದ ಕಮ್ಯೂನಿಸ್ಟ್ ಮತ್ತು ಸಮಾಜವಾದಿ ಪಕ್ಷಗಳ ವಿಫಲತೆಗಳು ಹಾಗೂ ಅಧಿಕಾರದ ತಕ್ಷಣದ, ಬಿರುಸಿನ ಹಿಡಿತದ ಅವಶ್ಯಕತೆ ಮೊದಲಾದವನ್ನು ಒಳಗೊಂಡಿತ್ತು.
1967ರಿಂದ 1970ರವರೆಗಿನ ಅವಧಿಯಲ್ಲಿ, ಈ ಗುಂಪು ಅತಿ ಶೀಘ್ರದಲ್ಲಿ ವಿಸ್ತರಿಸಿತು, ಹಲವಾರು ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಮಾಜವಾದಿ ಚಳವಳಿಯ ನಿಯಂತ್ರಣವನ್ನು ಪಡೆಯಿತು ಹಾಗೂ ಶಸ್ತ್ರಾಸ್ತ್ರ-ಸಜ್ಜಿತ ಪಡೆಗಳಲ್ಲಿನ ಸದಸ್ಯರನ್ನು ಮತ್ತು ಅನುಮೋದಕರನ್ನು ಗೆದ್ದುಕೊಂಡಿತು. ಈ ಶಸ್ತ್ರಾಸ್ತ್ರ-ಸಜ್ಜಿತ ಪಡೆಗಳ ಬೆಂಬಲಿಗರಲ್ಲಿ ಕೆಲವರು ವಾಸ್ತವವಾಗಿ ಆರರಕ್ಷಕ ಠಾಣೆಗಳು, ವಿಮಾನ ನಿಲ್ದಾಣಗಳು ಮತ್ತು ಮಿಲಿಟರಿ ಸೌಕರ್ಯಗಳ ಸ್ಥೂಲ ಚಿತ್ರಣವನ್ನು ಒದಗಿಸಿದರು, ಅವು ದಂಗೆಯ ಆರಂಭಿಕ ಯಶಸ್ಸಿಗೆ ಮುಖ್ಯವಾಗಿದ್ದವು. ಹೊಸ ಸದಸ್ಯರನ್ನು ಹೆಚ್ಚು ಭದ್ರವಾಗಿ ಈ ಸಂಘಟನೆಗೆ ಸೇರಿಸಿಕೊಳ್ಳಲು ಮತ್ತು ಅವರನ್ನು ಮುಂಬರುವ ಹೋರಾಟಕ್ಕೆ ತಯಾರಿಗೊಳಿಸಲು, ವಿಜೆವೀರನು ದಕ್ಷಿಣ ಮತ್ತು ನೈಋತ್ಯ ಕರಾವಳಿಯಾದ್ಯಂತದ ಕೆಲವು ದೂರದ ಪ್ರದೇಶಗಳಲ್ಲಿ "ಶಿಕ್ಷಣ ಕ್ಯಾಂಪ್"ಗಳನ್ನು ಆರಂಭಿಸಿದನು. ಈ ಕ್ಯಾಂಪ್‌ಗಳು ಮಾರ್ಕ್ಸ್‌ವಾದ-ಲೆನಿನ್‌ವಾದದ ಬಗ್ಗೆ ಮತ್ತು ಮೂಲ ಮಿಲಿಟರಿ ಕೌಶಲಗಳಲ್ಲಿ ತರಬೇತಿಯನ್ನು ನೀಡಿದವು.
ರಹಸ್ಯ ಕಾರ್ಯಕೇಂದ್ರಗಳು ಮತ್ತು ಪ್ರಾದೇಶಿಕ ನಿಯಂತ್ರಣಗಳನ್ನು ಅಭಿವೃದ್ಧಿ ಪಡಿಸುವಾಗ, ವಿಜೆವೀರನ ಗುಂಪು 1970ರ ಚುನಾವಣೆಯ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕ ಸಹಾಯವನ್ನು ತೆಗೆದುಕೊಳ್ಳಲು ಆರಂಭಿಸಿತು. ಆತನ ಗುಂಪಿನವರು ಸಿರಿಮಾವೊ R. D. ಬಂಡರನಾಯಕೆಯವರ ಯುನೈಟೆಡ್ ಫ್ರಂಟ್‌ಗಾಗಿ ಮುಕ್ತವಾಗಿ ಚಳವಳಿ ನಡೆಸಿದರು. ಆದರೆ ಅದೇ ಸಂದರ್ಭದಲ್ಲಿ ಅವರು, ಬಂಡರನಾಯಕೆಯವರು ಕೆಳವರ್ಗದ ಜನರ ಬಗ್ಗೆ ಕಾಳಜಿಯನ್ನು ತೋರಿಸದಿದ್ದರೆ ಹಿಂಸಾತ್ಮಕ ಪ್ರತಿಭಟನೆಯನ್ನು ಮಾಡುತ್ತೇವೆಂದು ಸೂಚಿಸುವ ಭಿತ್ತಿಪತ್ರಗಳು ಮತ್ತು ಕಿರುಹೊತ್ತಗೆಗಳನ್ನು ಹಂಚಿದರು. ಈ ಅವಧಿಯಲ್ಲಿ ಹೊರಡಿಸಿದ ಪ್ರಕಟಣೆಗಳಲ್ಲಿ ಈ ಗುಂಪು ಮೊದಲ ಬಾರಿಗೆ ಜನತಾ ವಿಮುಕ್ತಿ ಪೆರಮುನ ಎಂಬ ಹೆಸರನ್ನು ಬಳಸಿತ್ತು. ಈ ಪ್ರಕಟಣೆಗಳ ವಿಧ್ವಂಸಕ ಶೈಲಿಯಿಂದಾಗಿ, ಸಂಯುಕ್ತ ರಾಷ್ಟ್ರೀಯ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ವಿಜೆವೀರನು ಬಂಧನದಲ್ಲಿರುವಂತೆ ಮಾಡಿತು. ಆದರೆ ವಿಜಯಶಾಲಿ ಬಂಡರನಾಯಕೆ 1970ರ ಜುಲೈನಲ್ಲಿ ಪ್ರಕಟನೆಯನ್ನು ಬಿಡುಗಡೆಗೊಳಿಸಿದರು. ನಂತರದ ಕೆಲವು ತಿಂಗಳ ರಾಜಕೀಯವಾಗಿ ಸಹಿಷ್ಣುವಾದ ವಾತಾವರಣದಲ್ಲಿ, ಹೊಸ ಸರ್ಕಾರವು ವ್ಯಾಪಕ ಅಸಾಂಪ್ರದಾಯಿಕವಾದ ತೀವ್ರವಾದಿ ಗುಂಪುಗಳ ವಿರುದ್ಧ ಜಯಗಳಿಸಲು ಪ್ರಯತ್ನಿಸಿದರಿಂದ, JVPಯು ದಂಗೆಗೆ ಸಾರ್ವಜನಿಕ ಚಳವಳಿ ಮತ್ತು ಖಾಸಗಿ ತಯಾರಿಗಳೆರಡನ್ನೂ ತೀವ್ರಗೊಳಿಸಿತು. JVP ಗುಂಪು ಹೆಚ್ಚುಕಡಿಮೆ ಸಣ್ಣದಾಗಿದ್ದರೂ, ಅದರ ಸದಸ್ಯರು ದ್ವೀಪದಾದ್ಯಂತ ಭದ್ರತಾ ಪಡೆಗಳ ವಿರುದ್ಧ ಹಠಾತ್, ಏಕಕಾಲದ ಪ್ರತಿಭಟನೆಗಳನ್ನು ಮಾಡುವ ಮೂಲಕ ಮತ್ತು ಆಯ್ದ ಅಪಹರಣ ಮಾಡುವ ಮೂಲಕ ಸರ್ಕಾರವನ್ನು ಹದ್ದುಬಸ್ತಿನಲ್ಲಿಡುವ ಉದ್ದೇಶವನ್ನು ಹೊಂದಿದ್ದರು. ಇದರ ಸದಸ್ಯರು ನೀಡಿದ ಹಣದಿಂದ ಕೆಲವು ಅವಶ್ಯಕ ಆಯುಧಗಳನ್ನು ಕೊಂಡುಕೊಳ್ಳಲಾಯಿತು. ಇನ್ನಷ್ಟು ಆಯುಧಗಳನ್ನು ಪಡೆಯಲು ಅವರು ಆರರಕ್ಷಕ ಠಾಣೆಗಳು ಮತ್ತು ಸೈನ್ಯ ಕ್ಯಾಂಪ್‌ಗಳನ್ನು ಲೂಟಿಮಾಡಿದರು ಮತ್ತು ತಮ್ಮದೇ ಸ್ವಂತ ಬಾಂಬ್‌ಗಳನ್ನು ತಯಾರಿಸಿದರು.
ಕೆಲವು JVP ಬಾಂಬ್ ಕಾರ್ಖಾನೆಗಳ ಶೋಧನೆಯು, ಈ ಗುಂಪಿನಿಂದ ಸಾರ್ವಜನಿಕರಿಗೆ ಗಂಭೀರ ಅಪಾಯಗಳಿವೆ ಎಂಬುದನ್ನು ತಿಳಿಯಲು ಸರ್ಕಾರಕ್ಕೆ ಮೊದಲ ಸಾಕ್ಷ್ಯವನ್ನು ಒದಗಿಸಿತು. 1971ರ ಮಾರ್ಚ್‌ನಲ್ಲಿ ಈ ಕಾರ್ಖಾನೆಗಳಲ್ಲಿ ಒಂದರಲ್ಲಿ ಆಕಸ್ಮಿಕ ಸ್ಫೋಟವಾದ ನಂತರ ಪೋಲೀಸರು ಕೇಗಲ್ಲ ಜಿಲ್ಲೆಯ ನೆಲುಂದೇನಿಯಾದಲ್ಲಿನ ಒಂದು ಗುಡಿಸಲಿನಲ್ಲಿ ಐವತ್ತೆಂಟು ಬಾಂಬ್‌ಗಳನ್ನು ಪತ್ತೆಹಚ್ಚಿದರು. ಅದಾದ ಸ್ವಲ್ಪದರಲ್ಲಿ, ವಿಜೆವೀರನನ್ನು ಬಂಧಿಸಿ, ಜಾಫ್ನಾ ಜೈಲಿಗೆ ಕಳುಹಿಸಲಾಯಿತು. ಈ ದಂಗೆ ಕೊನೆಗೊಳ್ಳುವವರೆಗೆ ಆತನು ಅಲ್ಲೇ ಉಳಿದನು. ಆತನ ಬಂಧನ ಮತ್ತು ಹೆಚ್ಚುತ್ತಿರುವ ಪೋಲೀಸ್ ತನಿಖೆಗಳ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ, ಇತರ JVP ಮುಖಂಡರು ತಕ್ಷಣವೇ ಕಾರ್ಯಪ್ರವೃತ್ತರಾಗಲು ನಿರ್ಧರಿಸಿದರು ಮತ್ತು ಎಪ್ರಿಲ್ 5ರಂದು ರಾತ್ರಿ 11:00 ಗಂಟೆಗೆ ದಂಗೆಯನ್ನು ಆರಂಭಿಸುವಂತೆ ನಿರ್ಣಯ ಮಾಡಿದರು.
ರಾಷ್ಟ್ರದಾದ್ಯಂತ ದಂಗೆಯನ್ನು ಮಾಡುವ ಯೋಜನೆಯನ್ನು ಮುಂದಾಲೋಚನೆಯಿಲ್ಲದೆ, ಕೊರೆಯಾಗಿ ಸಂಘಟಿಸಲಾಗಿತ್ತು; ಕೆಲವು ಜಿಲ್ಲೆಯ ಮುಖಂಡರಿಗೆ ದಂಗೆಯ ದಿನದ ಬೆಳಗ್ಗಿನವರೆಗೆ ಆ ವಿಷಯ ತಿಳಿದಿರಲಿಲ್ಲ. ಅಷ್ಟೊಂದು ಪ್ರಬಲವಾಗಿರದ ಒಂದು ದಾಳಿಯ ನಂತರ, ದ್ವೀಪದಾದ್ಯಂತದ ಭದ್ರತಾ ಪಡೆಗಳನ್ನು ಜಾಗರೂಕಗೊಳಿಸಲಾಯಿತು ಹಾಗೂ ಹಲವಾರು JVP ಮುಖಂಡರು ಬದಲಾದ ಪರಿಸ್ಥಿತಿಯ ಬಗ್ಗೆ ತಮ್ಮ ಸಂಗಡಿಗರಿಗೆ ತಿಳಿಸುವ ಗೊಡವೆಗೆ ಹೋಗದೆ ತಲೆಮರೆಸಿಕೊಂಡರು. ಈ ಗಲಭೆಯನ್ನು ಹೊರತುಪಡಿಸಿ, ದಂಗೆಯ ಗುಂಪುಗಳು ಶಾಟ್‌ಗನ್‌ಗಳು, ಬಾಂಬ್‌ಗಳು ಮತ್ತು ಮೊಲೊಟೊವ್ ಕಾಕ್‌ಟೇಲ್‌ಗಳೊಂದಿಗೆ ಶಸ್ತ್ರ-ಸಜ್ಜಿತರಾಗಿ ಏಕಕಾಲದಲ್ಲಿ ದ್ವೀಪದಾದ್ಯಂತದ ಎಪ್ಪತ್ತೇಳು ಆರಕ್ಷಕ ಠಾಣೆಗಳ ಮೇಲೆ ದಾಳಿ ನಡೆಸಿದವು ಮತ್ತು ಪ್ರಮುಖ ನಗರ ಪ್ರದೇಶಗಳ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದವು. ಈ ದಾಳಿಗಳು ದಕ್ಷಿಣದಲ್ಲಿ ಭಾರಿ ಯಶಸ್ಸು ಕಂಡವು. ಎಪ್ರಿಲ್ 10ರ ಹೊತ್ತಿಗೆ ದಂಗೆಗಳು ಮತರ ಜಿಲ್ಲೆ ಮತ್ತು ಗಲ್ಲೆ ಜಿಲ್ಲೆಯ ಅಂಬಲಂಗೊಡ ನಗರದ ಸಂಪೂರ್ಣ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಂಡವು ಹಾಗೂ ದಕ್ಷಿಣದ ಪ್ರಾಂತ್ಯದ ಉಳಿದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹತ್ತಿರವಾದವು.
ಹೊಸ ಸರ್ಕಾರವು ಅದಕ್ಕೆ ಎದುರಾದ ಬಿಕ್ಕಟ್ಟನ್ನು ಪರಿಹರಿಸಲು ಉತ್ತಮ ರೀತಿಯಲ್ಲಿ ತಯಾರಾಗಿರಲಿಲ್ಲ. ಸದ್ಯದಲ್ಲೇ ದಾಳಿಯೊಂದು ಸಂಭವಿಸಲಿದೆಯೆಂಬ ಎಚ್ಚರಿಕೆಯಿದ್ದರೂ, ಬಂಡರನಾಯಕೆಯವರ ರಕ್ಷಣಾ ಪಡೆಯನ್ನು ಹಿಂದಕ್ಕೆ ಸರಿಸಲಾಯಿತು ಮತ್ತು ಭದ್ರತಾ ಸೌಕರ್ಯಗಳನ್ನು ಒದಗಿಸಲು ಭಾರತವನ್ನು ಕೇಳುವಂತೆ ಅವರನ್ನು ಒತ್ತಾಯಪಡಿಸಲಾಯಿತು. ಭಾರತೀಯ ಶಸ್ತ್ರ-ಸಜ್ಜಿತ ಯುದ್ಧನೌಕೆಯು ಕರಾವಳಿ ಪ್ರದೇಶದಾದ್ಯಂತ ಗಸ್ತು ತಿರುಗಲು ಆರಂಭಿಸಿತು ಮತ್ತು ಭಾರತೀಯ ಸೈನ್ಯವು ಕಾಟುನಾಯಕದಲ್ಲಿನ ಬಂಡರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಕ್ಷಣೆಯನ್ನು ಒದಗಿಸಿತು. ಹಾಗೆಯೇ ಭಾರತೀಯ ವಾಯು ಪಡೆಯ ಹೆಲೆಕಾಪ್ಟರ್‌ಗಳು ಆಕ್ರಮಣಕಾರಿಗಳ ವಿರುದ್ಧ ರಕ್ಷಣೆಯನ್ನು ನೀಡಿದವು. ಶ್ರೀಲಂಕಾದ ಸ್ವಯಂ-ಸೇವಕ ಸೈನ್ಯವು ವಿಶ್ವ ಸಮರ IIರ ನಂತರ ಯಾವುದೇ ಹೋರಾಟದ ಅನುಭವವನ್ನು ಮತ್ತು ದಂಗೆಯನ್ನು ಎದುರಿಸುವ ತರಬೇತಿಯನ್ನು ಹೊಂದಿರಲಿಲ್ಲ. ಪೋಲೀಸರು ಕೆಲವು ಪ್ರದೇಶಗಳಿಗೆ ರಕ್ಷಣೆಯನ್ನು ನೀಡಲು ವಿಫಲರಾದರೂ, ಹೆಚ್ಚಿನ ಸ್ಥಳಗಳಲ್ಲಿ ಸರ್ಕಾರವು ಎಲ್ಲಾ ಮೂರು ಸೇವೆಗಳ ಸೈನಿಕರನ್ನು ಭೂಸೇನಾ ಸಾಮರ್ಥ್ಯದಲ್ಲಿ ನೇಮಿಸಿತು. ಸಿಲೋನ್‌ನ ವಾಯು ನೌಕೆಯ ಹೆಲಿಕಾಪ್ಟರ‌್‌ಗಳು ಮುತ್ತಿಗೆ ಹಾಕಿದ ಆರರಕ್ಷಕ ಠಾಣೆಗಳಿಗೆ ಪರಿಹಾರ ಪೂರೈಕೆಗಳನ್ನು ಒದಗಿಸಿದವು. ಸಂಯುಕ್ತ ಸೇವಾ ಪಡೆಗಳು ದಂಗೆಕೋರರನ್ನು ನಗರ ಪ್ರದೇಶಗಳಿಂದ ಹೊರಗೆ, ಗ್ರಾಮಾಂತರ ಪ್ರದೇಶಗಳೆಡೆಗೆ ಅಟ್ಟಿದವು.
ಈ ಕಾದಾಟ ನಡೆದ ಎರಡು ವಾರಗಳ ನಂತರ ಸರ್ಕಾರವು ಕೆಲವು ಗ್ರಾಮೀಣ ಸ್ಥಳಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಪ್ರದೇಶಗಳ ನಿಯಂತ್ರಣವನ್ನು ಪುನಃಪಡೆಯಿತು. ಮಾನವರು ಮತ್ತು ರಾಜಕೀಯ ಮಿತಿಗಳಲ್ಲಿ, ಈ ಗೆಲುವಿನ ನಷ್ಟವು ಹೆಚ್ಚಿನ ಪ್ರಮಾಣದಲ್ಲಿತ್ತು: ಈ ಸಂಘರ್ಷದಲ್ಲಿ ಸುಮಾರು 10,000 ದಂಗೆಕೋರರು, ಹೆಚ್ಚಿನವರು ತಮ್ಮ ಹದಿಹರೆಯದ ವಯಸ್ಸಿನಲ್ಲಿ, ಸಾವನ್ನಪ್ಪಿದರು ಹಾಗೂ ಸೈನ್ಯವನ್ನು ವ್ಯಾಪಕವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಆಸಕ್ತಿ ಕಳೆದುಕೊಂಡ ದಂಗೆಕೋರರ ವಿರುದ್ಧ ಜಯಗಳಿಸಲು ಮತ್ತು ದೀರ್ಘಕಾಲದ ಸಂಘರ್ಷವನ್ನು ತಡೆಯಲು, ಬಂಡರನಾಯಕೆ 1971ರ ಮೇ ಮತ್ತು ಜೂನ್‌ನಲ್ಲಿ ಸಾರ್ವತ್ರಿಕ ಕ್ಷಮಾದಾನ ಮಾಡಿದರು ಮತ್ತು ಕೇವಲ ಪ್ರಮುಖ ದಂಗೆಕೋರ-ಮುಖಂಡರನ್ನು ಮಾತ್ರ ಬಂಧಿಸಲಾಯಿತು. ದಂಗೆಯ ಸಂದರ್ಭದಲ್ಲಿ ಬಂಧನದಲ್ಲಿದ್ದ ವಿಜೆವೀರನಿಗೆ ಇಪ್ಪತ್ತು-ವರ್ಷದ ಶಿಕ್ಷೆಯನ್ನು ನೀಡಲಾಯಿತು ಮತ್ತು JVPಅನ್ನು ನಿಷೇಧಿಸಲಾಯಿತು.
ದಂಗೆಯ ನಂತರದ ಆರು ವರ್ಷಗಳ ತುರ್ತುಪರಿಸ್ಥಿತಿಯ ಆಡಳಿತದ ಸಂದರ್ಭದಲ್ಲಿ JVP ಚಟುವಟಿಕೆಯಿಲ್ಲದೆ ಉಳಿಯಿತು. 1977ರ ಚುನಾವಣೆಯಲ್ಲಿ ಸಂಯುಕ್ತ ರಾಷ್ಟ್ರೀಯ ಪಕ್ಷವು ಜಯಗಳಿಸಿದ ನಂತರ, ಹೊಸ ಸರ್ಕಾರವು ರಾಜಕೀಯ ಸಹನೀಯತೆಯ ಅವಧಿಯೊಂದಿಗೆ ಅದರ ಆದೇಶವನ್ನು ವಿಸ್ತರಿಸಲು ಪ್ರಯತ್ನಿಸಿತು. ವಿಜೆವೀರನನ್ನು ಬಂಧನ ಮುಕ್ತಗೊಳಿಸಲಾಯಿತು, ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು JVPಯು ನಿಯಮಬದ್ಧ ರಾಜಕೀಯ ಪೈಪೋಟಿಯ ಕ್ಷೇತ್ರಕ್ಕೆ ಪ್ರವೇಶಿಸಿತು. 1982ರ ಅಧ್ಯಕ್ಷೀಯ ಚುನಾವಣೆಯಲ್ಲಿನ ಅಭ್ಯರ್ಥಿಯಾಗಿ ಭಾಗವಹಿಸಿದ ವಿಜೆವೀರ 250,000ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯುವುದರೊಂದಿಗೆ (ಜಯವರ್ಧನೆ ಪಡೆದ 3.2 ದಶಲಕ್ಷ ಮತಗಳಿಗೆ ಹೋಲಿಸಿದರೆ) ನಾಲ್ಕನೇ ಸ್ಥಾನವನ್ನು ಗಳಿಸಿದರು. ಈ ಅವಧಿಯಲ್ಲಿ, ವಿಶೇಷವಾಗಿ ಉತ್ತರದಲ್ಲಿನ ತಮಿಳು ಸಂಘರ್ಷವು ಹೆಚ್ಚು ತೀವ್ರವಾದುದರಿಂದ JVPಯ ಚಿಂತನೆ ಮತ್ತು ಗುರಿಗಳಲ್ಲಿ ಬದಲಾವಣೆ ಕಂಡುಬಂದಿತು. ಆರಂಭದಲ್ಲಿ ದೃಷ್ಟಿಕೋನದಲ್ಲಿ ಮಾರ್ಕ್ಸ್‌ವಾದಿಯಾಗಿದ್ದ ಹಾಗೂ ತಮಿಳು ಮತ್ತು ಸಿಂಹಳೀಯ ಸಮುದಾಯಗಳೆರಡನ್ನೂ ದಮನ ಮಾಡುವ ಉದ್ದೇಶವನ್ನು ಹೊಂದಿದ್ದ ಈ ಗುಂಪು ತಮಿಳು ದಂಗೆಯೊಂದಿಗೆ ಯಾವುದೇ ರೀತಿಯ ಸಂಧಾನವನ್ನು ವಿರೋಧಿಸಿ ಸಿಂಹಳೀಯರ ರಾಷ್ಟ್ರೀಯತಾವಾದಿ ಸಂಘಟನೆಯಾಗಿ ಹೊರಹೊಮ್ಮಿತು. ಈ ಹೊಸ ನಿಲುವು 1983ರ ಜುಲೈನಲ್ಲಿ ನಡೆದ ತಮಿಳು-ವಿರೋಧಿ ದಂಗೆಗಳಲ್ಲಿ ಸುಸ್ಪಷ್ಟವಾಯಿತು. ಹಿಂಸೆಯನ್ನು ಉತ್ತೇಜಿಸುತ್ತದೆಂದು JVPಅನ್ನು ಮತ್ತೊಮ್ಮೆ ನಿಷೇಧಿಸಲಾಯಿತು ಮತ್ತು ಅದರ ಮುಖಂಡತ್ವವು ರಹಸ್ಯವಾಯಿತು.
ಈ ಗುಂಪಿನ ಚಟುವಟಿಕೆಗಳು 1987ರ ಉತ್ತರಾರ್ಧದಲ್ಲಿ ಭಾರತೀಯರ-ಶ್ರೀಲಂಕನ್ನರ ಸಾಮರಸ್ಯದಿಂದಾಗಿ ತೀವ್ರಗೊಂಡಿತು. ಉತ್ತರದಲ್ಲಿ ಭಾರತೀಯ ಸೈನ್ಯದ ಅಸ್ತಿತ್ವದೊಂದಿಗೆ ತಮಿಳು ಸ್ವಯಮಾಧಿಪತ್ಯವು ಸಿಂಹಳೀಯರ ರಾಷ್ಟ್ರೀಯತೆಯ ಅಲೆಯನ್ನು ಎಬ್ಬಿಸಿತು ಮತ್ತು ಹಠಾತ್ ಸರ್ಕಾರ-ವಿರೋಧಿ ಹಿಂಸಾಚಾರವು ನಡೆಯುವಂತೆ ಮಾಡಿತು. 1987ರಲ್ಲಿ JVPಯ ಉಪಶಾಖೆಯಾಗಿ ಹೊಸ ಗುಂಪೊಂದು ಹುಟ್ಟಿಕೊಂಡಿತು, ಪೇಟ್ರಿಯಾಟಿಕ್ ಲಿಬರೇಶನ್ ಆರ್ಗನೇಸೇಶನ್ (ದೇಶಪ್ರೇಮಿ ಜನತಾ ವಿಯಪರಾಯ—DJV). 1987ರ ಆಗಸ್ಟ್‌ನಲ್ಲಿ ನಡೆದ ರಾಷ್ಟ್ರದ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯ ಹತ್ಯೆಯ ಪ್ರಯತ್ನಗಳಿಗೆ DJV ಜವಾಬ್ದಾರವೆಂದು ಆಪಾದಿಸಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಈ ಗುಂಪು ಆಳುವ ಪಕ್ಷದ ವಿರುದ್ಧ ಬೆದರಿಕೆ ನೀಡುವ ಚಳವಳಿಯೊಂದನ್ನು ಆರಂಭಿಸಿತು. ಇದು ಜುಲೈನಿಂದ ನವೆಂಬರ್ ತಿಂಗಳವರೆಗೆ ಎಪ್ಪತ್ತಕ್ಕಿಂತಲೂ ಹೆಚ್ಚು ಸಂಸತ್ತಿನ ಸದಸ್ಯರನ್ನು ಸಾಯಿಸಿತು.
ಈ ಗುಂಪಿನ ಹೊಸ ರೀತಿಯ ಹಿಂಸೆಯಿಂದಾಗಿ ಶಸ್ತ್ರಾಸ್ತ್ರ-ಸಜ್ಜಿತ ಸೈನ್ಯದ ಅಂತರಾಕ್ರಮಣದ ಹೊಸ ಭಯ ಹುಟ್ಟಿಕೊಂಡಿತು. 1987ರ ಮೇಯಲ್ಲಿ ಪಲ್ಲೆಕೆಲ್ಲೆ ಸೈನ್ಯ ಕ್ಯಾಂಪಿನ ಮೇಲೆ ನಡೆಸಿದ ಯಶಸ್ವಿ ಅನಿರೀಕ್ಷಿತ ದಾಳಿಯ ನಂತರ, ಸರ್ಕಾರವು ತನಿಖೆಯೊಂದನ್ನು ಆರಂಭಿಸಿತು, ಇದು ಮೂವತ್ತೇಳು ಸೈನಿಕರು JVP ಒಂದಿಗೆ ಸಂಬಂಧ ಹೊಂದಿರುವುದನ್ನು ಪತ್ತೆಹಚ್ಚಿತು. 1971ರ ದಂಗೆಯು ಮರುಕಳಿಸದಂತೆ ಮಾಡಲು, ಸರ್ಕಾರವು 1988ರ ಆರಂಭದಲ್ಲಿ JVPಯ ಮೇಲಿನ ನಿಷೇಧವನ್ನು ರದ್ದುಗೊಳಿಸಲು ಮತ್ತು ಆ ಗುಂಪಿಗೆ ರಾಜಕೀಯ ಕ್ಷೇತ್ರದಲ್ಲಿ ಪೈಪೋಟಿ ನಡೆಸುವಂತೆ ಅವಕಾಶ ಮಾಡಿಕೊಡಲು ನಿರ್ಧರಿಸಿತು. ಆದರೆ ವಿಜೆವೀರ ತಲೆಮರೆಸಿಕೊಂಡಿದ್ದರಿಂದ, JVPಯು ಆ ಸಂದರ್ಭದಲ್ಲಿ ಪ್ರಬಲ ಮುಖಂಡನನ್ನು ಹೊಂದಿರಲಿಲ್ಲ ಮತ್ತು ಸರ್ಕಾರದ ವಿರುದ್ಧ ಸುಸಂಘಟಿತ ಆಕ್ರಮಣವನ್ನು ನಡೆಸಲು ಮಿಲಿಟರಿ ಅಥವಾ ರಾಜಕೀಯವನ್ನು ಆರಿಸಿಕೊಳ್ಳಬೇಕೇ ಎಂಬ ಬಗ್ಗೆ ಅದು ಸಂದಿಗ್ಧವನ್ನು ಹೊಂದಿತ್ತು.
ಹೊಸ ಸಂವಿಧಾನ
ಬದಲಾಯಿಸಿ1977ರ ಹೊತ್ತಿಗೆ ಮತದಾರರು ಬಂಡರನಾಯಕೆಯವರು ಸಮಾಜವಾದಿ ನೀತಿಗಳಿಂದ ಬೇಸತ್ತರು. ನಂತರದ ಚುನಾವಣೆಗಳನ್ನು UNPಯು ಗೆದ್ದುಕೊಂಡಿತು ಮತ್ತು ಆಡಳಿತವು ಜೂನಿಯಸ್ ಜಯವರ್ದನೆಯವರ ಕೈಗೆ ಬಂದಿತು, ಅವರು ಮಾರುಕಟ್ಟೆ ಆರ್ಥಿಕ ಸ್ಥಿತಿಯನ್ನು ಮತ್ತು "8 ಸೀರ್‌ಗಳಷ್ಟು (ಕಿಲೋಗ್ರಾಂಗಳು) ಧಾನ್ಯಗಳನ್ನು ಉಚಿತವಾಗಿ ನೀಡುವ" ವಾಗ್ದಾನವನ್ನು ಪ್ರಕಟಿಸಿದರು. SLFP ಮತ್ತು ಎಡ-ಪಕ್ಷಗಳು ವಾಸ್ತವಿಕವಾಗಿ ಸಂಸತ್ತಿನಿಂದ ಹೊರಗುಳಿದವು (ಅವು 40%ನಷ್ಟು ಮತಗಳನ್ನು ಗಳಿಸಿದರೂ) ಹಾಗೂ ಅಪ್ಪಾಪಿಲ್ಲೈ ಅಮರ್ತಲಿಂಗಮ್ ಮುಖಂಡತ್ವದ ತಮಿಳ್ ಯುನೈಟೆಡ್ ಲಿಬರೇಶನ್ ಫ್ರಂಟ್ ಅಧಿಕೃತ ವಿರೋಧ ಪಕ್ಷವಾಯಿತು. ಇದು ಶ್ರೀಲಂಕಾದ ರಾಜಕಾರಣದಲ್ಲಿ ಅಪಾಯಕಾರಿ ಜನಾಂಗೀಯ ಬಿರುಕನ್ನು ಉಂಟುಮಾಡಿತು.
1978ರ ಸಂವಿಧಾನ
ಬದಲಾಯಿಸಿಅಧಿಕಾರಕ್ಕೆ ಬಂದ ನಂತರ ಜಯವರ್ದನೆಯವರು ಸಂವಿಧಾನವನ್ನು ಪುನಃರಚಿಸುವಂತೆ ನಿರ್ದೇಶಿಸಿದರು. ರಚಿಸಲಾದ ದಾಖಲೆಯು, 1978ರ ಹೊಸ ಸಂವಿಧಾನವು, ಶ್ರೀಲಂಕಾದ ಆಡಳಿತದ ಲಕ್ಷಣವನ್ನು ತೀವ್ರವಾಗಿ ಬದಲಾಯಿಸಿತು. ಇದು ಹಿಂದಿನ ವೆಸ್ಟ್‌ಮಿಂಸ್ಟರ್ ಶೈಲಿಯ ಸಂಸತ್ತಿನ ಸರ್ಕಾರವನ್ನು, ಫ್ರಾನ್ಸ್‌ನ ನಂತರ ರೂಪಿಸಲಾದ ಪ್ರಬಲ ಮುಖ್ಯ ಕಾರ್ಯಾಂಗವನ್ನು ಹೊಂದಿರುವ ಹೊಸ ಅಧ್ಯಕ್ಷೀಯ ವ್ಯವಸ್ಥೆಯಾಗಿ ಪರಿವರ್ತಿಸಿತು. ಅಧ್ಯಕ್ಷರನ್ನು ನೇರ ಚುನಾವಣೆಯ ಮೂಲಕ ಆರು-ವರ್ಷದ ಅವಧಿಗಾಗಿ ಆರಿಸಲಾಗುತ್ತಿತ್ತು. ಅವರು ಸಂಸತ್ತಿನ ಅಂಗೀಕಾರದೊಂದಿಗೆ ಪ್ರಧಾನ ಮಂತ್ರಿಯವರನ್ನು ಆರಿಸುವ ಮತ್ತು ಮಂತ್ರಿಮಂಡಲದ ಸಭೆಗಳ ಅಧ್ಯಕ್ಷತೆ ವಹಿಸುವ ಅಧಿಕಾರವನ್ನು ಹೊಂದಿದ್ದರು. ಹೊಸ ಸಂವಿಧಾನದಡಿಯಲ್ಲಿ ಜಯವರ್ದನೆ ಮೊದಲ ಅಧ್ಯಕ್ಷರಾದರು ಹಾಗೂ ಸರ್ಕಾರದ ಕಾರ್ಯತಂತ್ರಗಳ ಮತ್ತು ಪಕ್ಷದ ನೇರ ನಿಯಂತ್ರಣ ಪಡೆದರು.
ಈ ಹೊಸ ಆಡಳಿತ ವಿಧಾನವು SLFPಗೆ ಹೆಚ್ಚಾಗಿ ಹೊಂದಿಕೆಯಾಗಲಿಲ್ಲ. ಜಯವರ್ದನೆ UNP ಸರ್ಕಾರವು ಮಾಜಿ ಪ್ರಧಾನ ಮಂತ್ರಿ ಬಂಡರನಾಯಕೆಯವರ 1970ರಿಂದ 1977ರವರೆಗಿನ ಆಡಳಿತದ ಬಗ್ಗೆ ದೂಷಿಸಿ ಅವರನ್ನು ಆಪಾದಿತರನ್ನಾಗಿ ಮಾಡಿತು. 1980ರ ಅಕ್ಟೋಬರ್‌ನಲ್ಲಿ, ರಾಜಕಾರಣದಲ್ಲಿ ಭಾಗವಹಿಸುವ ಬಂಡರನಾಯಕೆಯವರ ಸ್ವಾತಂತ್ರ್ಯವನ್ನು ಏಳು ವರ್ಷಗಳವರೆಗೆ ರದ್ದುಗೊಳಿಸಲಾಯಿತು ಮತ್ತು SLFP ಹೊಸ ಮುಖಂಡರನ್ನು ಹುಡುಕಿಕೊಳ್ಳುವಂತೆ ಕಡ್ಡಾಯ ಮಾಡಲಾಯಿತು. ದೀರ್ಘಕಾಲದ ಭೇದಕಲ್ಪಿಸುವ ಕಾದಾಟದ ನಂತರ ಈ ಪಕ್ಷವು ಅವರ ಪುತ್ರ ಅನುರಾರರನ್ನು ಮುಖಂಡರನ್ನಾಗಿ ಆರಿಸಿತು. ಅನುರಾ ಬಂಡರನಾಯಕೆ ಶೀಘ್ರದಲ್ಲಿ ತಮ್ಮ ತಂದೆಯ ಗುಣಲಕ್ಷಣವನ್ನು ಉಳಿಸುವಲ್ಲಿ ಯಶಸ್ವಿಯಾದರು. ಆದರೆ ಅವರ ಪಕ್ಷವು ಗುಂಪುಗಾರಿಕೆಯಿಂದಾಗಿ ಛಿದ್ರವಾಯಿತು ಮತ್ತು ಸಂಸತ್ತಿನಲ್ಲಿನ ಅದರ ಪಾತ್ರವು ಕ್ಷೀಣಿಸಿತು.
1978ರ ಸಂವಿಧಾನವು ತಮಿಳು-ಸಂವೇದನಾಶೀಲರಿಗೆ ಗಣನೀಯ ಪ್ರಮಾಣದ ರಿಯಾಯಿತಿಗಳನ್ನು ನೀಡಿತು. ಸಂವಿಧಾನ ರೂಪಿಸುವಲ್ಲಿ TULF ಭಾಗವಹಿಸದಿದ್ದರೂ, ತಮಿಳು ಸಮಸ್ಯೆಗೆ ಸಂಧಾನದ ಮೂಲಕ ತೀರ್ಮಾನವನ್ನು ನೀಡುವ ನಿರೀಕ್ಷೆಯಿಂದ ಸಂಸತ್ತಿನಲ್ಲಿ ಉಳಿದುಕೊಂಡಿತು. ದ್ವೀಪದ ಜನಾಂಗೀಯ ಸಮಸ್ಯೆಗಳನ್ನು ಎಲ್ಲಾ-ಪಕ್ಷಗಳು ಸಭೆ ಸೇರುವ ಮೂಲಕ ಪರಿಹರಿಸುವ ಜಯವರ್ದನೆಯವರ ಸೂಚನೆಯನ್ನೂ TULF ಒಪ್ಪಿತು. ಜಯವರ್ದನೆಯವರ UNP ಶಾಂತಿಯನ್ನು ಕಾಪಾಡಲು ಇತರ ರಿಯಾಯಿತಿಗಳನ್ನು ಒದಗಿಸಿತು. ಸಿಂಹಳವು ಶ್ರೀಲಂಕಾದಾದ್ಯಂತ ಅಧಿಕೃತ ಭಾಷೆ ಮತ್ತು ಆಡಳಿತ ಭಾಷೆಯಾಗಿ ಉಳಿಯಿತು. ಆದರೆ ತಮಿಳಿಗೆ ಹೊಸ "ರಾಷ್ಟ್ರೀಯ ಭಾಷೆ"ಯ ಸ್ಥಾನ ನೀಡಲಾಯಿತು. ತಮಿಳನ್ನು ಅನೇಕ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತಿತ್ತು. ತಮಿಳರಿಗೆ ವಿಶ್ವವಿದ್ಯಾನಿಲಯದ ಪ್ರವೇಶ ಮಾನದಂಡವನ್ನು ಹೆಚ್ಚು ಕಷ್ಟಕರವಾಗಿಸಿದ್ದ ಯುನೈಟೆಡ್ ಫ್ರಂಟ್ ಸರ್ಕಾರದ "ಸ್ಟ್ಯಾಂಡರ್ಡೈಸೇಶನ್(ಮಾನಕೀಕರಣ)" ನೀತಿಯನ್ನು ರದ್ದುಗೊಳಿಸುವ ಮೂಲಕ ಜಯವರ್ದನೆಯವರು ತಮಿಳರ ಪ್ರಮುಖ ಅಸಮಾಧಾನವನ್ನು ಹೋಗಲಾಡಿಸಿದರು. ಇಷ್ಟೇ ಅಲ್ಲದೆ, ಅವರು ತಮಿಳು ನಾಗರಿಕರಿಗೆ ನ್ಯಾಯಾಧೀಶ ಸ್ಥಾನವನ್ನೂ ಒಳಗೊಂಡಂತೆ ಹಲವಾರು ಉನ್ನತ-ದರ್ಜೆಯ ಸ್ಥಾನಗಳನ್ನು ನೀಡಿದರು.
UNP ಒಟ್ಟಿಗೆ TULF ಎಲ್ಲಾ-ಪಕ್ಷಗಳ ಸಭೆಯಲ್ಲಿ ಭಾಗವಹಿಸಿತು. ಆ ಸಂದರ್ಭದಲ್ಲಿ ತಮಿಳ್ ಟೈಗರ್ಸ್(ವ್ಯಾಘ್ರಗಳು) ಭಯೋತ್ಪಾದಕ ದಾಳಿಗಳನ್ನು ನಡೆಸಿದರು. ಇದು ಸಿಂಹಳೀಯರು ತಮಿಳರ ವಿರುದ್ಧ ಪ್ರತಿಕ್ರಿಯಿಸುವಂತೆ ಉತ್ತೇಜಿಸಿತು ಮತ್ತು ಯಾವುದೇ ಯಶಸ್ವಿ ಸಭೆ ಸೇರದಂತೆ ತಡೆಯಿತು. ಜಾಫ್ನಾ ಪೋಲೀಸ್ ಇನ್‌ಸ್ಪೆಕ್ಟರ್‌ನ ಹತ್ಯೆಗೆ ಪ್ರತಿಕ್ರಿಯೆಯಾಗಿ ಜಯವರ್ದನೆ ಸರ್ಕಾರವು ತುರ್ತುಪರಿಸ್ಥಿತಿಯನ್ನು ಘೋಷಿಸಿತು ಮತ್ತು ಸೈನ್ಯವನ್ನು ರವಾನಿಸಿತು, ಈ ಸೈನ್ಯವು ಭಯೋತ್ಪಾದಕ ಬೆದರಿಕೆಯನ್ನು ತೊಡೆದುಹಾಕಲು ಆರು ತಿಂಗಳ ಕಾಲ ಪ್ರಯತ್ನಿಸಿತು.
ಈ ಸರ್ಕಾರವು 1979ರಲ್ಲಿ ಭಯೋತ್ಪಾದನಾ ನಿಗ್ರಹ (ತಾತ್ಕಾಲಿಕಾ ನಿಬಂಧನೆ) ಕಾಯಿದೆಯನ್ನು ಅಂಗೀಕರಿಸಿತು. ಈ ಕಾಯಿದೆಯನ್ನು ತಾತ್ಕಾಲಿಕ ಕಾನೂನಾಗಿಸಲಾಯಿತ್ತು. ಆದರೆ ನಂತರ ಅದು ಶಾಶ್ವತ ಕಾಯಿದೆಯಾಯಿತು. ಇಂಟರ್‌ನ್ಯಾಷನಲ್ ಕಮಿಷನ್ ಆಫ್ ಜುರಿಸ್ಟ್ಸ್, ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಇತರ ಮಾನವ ಹಕ್ಕುಗಳ ಸಂಘಟನೆಗಳು ಈ ಕಾಯಿದೆಯು ಪ್ರಜಾಪ್ರಭುತ್ವ ನಿಯಮಗಳಿಗೆ ಸರಿಹೊಂದುವುದಿಲ್ಲವೆಂದು ದೂಷಿಸಿದವು. ಕಾಯಿದೆಯನ್ನೂ ಅಂಗೀಕರಿಸಿದರೂ, ಭಯೋತ್ಪಾದನಾ ಚಟುವಟಿಕೆಗಳ ಸಂಖ್ಯೆಯು ಹೆಚ್ಚಾಯಿತು. ಗೆರಿಲ್ಲಾಗಳು ಅಂಚೆ ಕಛೇರಿಗಳು ಮತ್ತು ಪೋಲೀಸ್ ಹೊರ ಠಾಣೆಗಳಂತಹ ಹೆಚ್ಚು ಸಾಂಕೇತಿಕ ಮೌಲ್ಯದ ಕೇಂದ್ರಗಳ ಮೇಲೆ ದಾಳಿ ನಡೆಸಲು ಆರಂಭಿಸಿದವು, ಇದು ಸರ್ಕಾರವೂ ಪ್ರತಿದಾಳಿ ನಡೆಸುವಂತೆ ಪ್ರೇರೇಪಿಸಿತು. ಈ ಕಾದಾಟದಲ್ಲಿ ಹಲವಾರು ನಾಗರಿಕರು ಸೆರೆಹಿಡಿಯಲ್ಪಟ್ಟಿದರಿಂದ, ತಮಿಳರ ಬೆಂಬಲವು "ಬಾಯ್ಸ್"ವರೆಗೆ ವಿಸ್ತರಿಸಿತು, ಗೆರಿಲ್ಲಾಗಳನ್ನು ಬಾಯ್ಸ್ ಎಂದು ಕರೆಯಲಾಗುತ್ತಿತ್ತು. ಉತ್ತಮ ರೀತಿಯಲ್ಲಿ ಶಸ್ತ್ರಾಸ್ತ್ರ-ಸಜ್ಜಿತವಾದ ಇತರ ದೊಡ್ಡ ಗುಂಪುಗಳು LTTE ಒಂದಿಗೆ ಪೈಪೋಟಿ ನಡೆಸಲು ಆರಂಭಿಸಿದವು, ಅವುಗಳಲ್ಲಿ ಕೆಲವು ಪೀಪಲ್ಸ್ ಲಿಬರೇಶನ್ ಆರ್ಗನೈಸೇಶನ್ ಆಫ್ ತಮಿಳ್ ಈಲಮ್, ತಮಿಳ್ ಈಲಮ್ ಲಿಬರೇಶನ್ ಆರ್ಮಿ ಮತ್ತು ತಮಿಳ್ ಈಲಮ್ ಲಿಬರೇಶನ್ ಆರ್ಗನೈಸೇಶನ್. ಈ ಪ್ರತಿಯೊಂದು ಗುಂಪುಗಳು ನೂರಾರು ಮಂದಿಯ ಬಲ ಹೊಂದಿದ್ದವು. ಸರ್ಕಾರವು ಹೆಚ್ಚಿನ ಭಯೋತ್ಪಾದಕರು ಭಾರತದ ತಮಿಳು ನಾಡು ರಾಜ್ಯದ ತರಬೇತಿ ಕೇಂದ್ರಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆಂದು ಆಪಾದಿಸಿತು. ಆದರೆ ಭಾರತ ಸರ್ಕಾರವು ಈ ಆಪಾದನೆಯನ್ನು ನಿರಾಕರಿಸಿತು. ಹಿಂಸೆಯ ಮಟ್ಟವು ಹೆಚ್ಚಾದುದರಿಂದ, ಸಂಧಾನ ಮಾಡಿಕೊಳ್ಳುವುದು ಅಸಂಭವವಾಯಿತು.
1987–89 ದಂಗೆ
ಬದಲಾಯಿಸಿಆಂತರಿಕ ಯುದ್ಧ (1983ರಿಂದ 2009ರವರೆಗೆ)
ಬದಲಾಯಿಸಿ1983ರ ಜುಲೈನಲ್ಲಿ ತಮಿಳ್ ಟೈಗರ್ಸ್ ಹೊಂಚು ಹಾಕಿ, ಶ್ರೀಲಂಕಾದ 13 ಮಂದಿ ಸೈನಿಕರನ್ನು ಸಾಯಿಸಿದ್ದರಿಂದ ಪ್ರಜೆಗಳ ದಂಗೆಗಳು ನಡೆದವು. ತಮಿಳರ ನಿಖರ ವಿಳಾಸ ಹೊಂದಿದ್ದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಿಂಹಳೀಯ ದಂಗೆಕೋರರು ತಮಿಳು ಸಮುದಾಯದ ಮೇಲೆ ಭಾರಿ ದಾಳಿ ನಡೆಸಿದರು, ಹಲವಾರು ಅಂಗಡಿಗಳು, ಮನೆಗಳನ್ನು ನಾಶಮಾಡಿದರು; ಮತ್ತು ಅವರನ್ನು ಕ್ರೂರವಾಗಿ ಥಳಿಸಿದರು. ಆದರೆ ಕೆಲವು ಸಿಂಹಳೀಯರು ಅಕ್ಕಪಕ್ಕದ ತಮಿಳರನ್ನು ತಮ್ಮ ಮನೆಯಲ್ಲಿ ಅಡಗಿಕೊಳ್ಳಲು ಅವಕಾಶ ಮಾಡಿಕೊಟ್ಟು ಅವರನ್ನು ದಂಗೆಕೋರರಿಂದ ರಕ್ಷಿಸಿದರು. ಈ ದಂಗೆಗಳ ಸಂದರ್ಭದಲ್ಲಿ ಸರ್ಕಾರ ದಂಗೆಯನ್ನು ನಿಯಂತ್ರಿಸುವ ಯಾವುದೇ ಕಾರ್ಯ ಮಾಡಲಿಲ್ಲ. ಸಂಪ್ರದಾಯವಾದಿ ಸರ್ಕಾರವು ಈ ದಂಗೆಯಲ್ಲಿ ಸುಮಾರು 400 ಮಂದಿ ಸಾವನ್ನಪ್ಪಿದರೆಂದು ಅಂದಾಜಿಸಿದೆ.[೧೦] ಆದರೆ ಸಾವನ್ನಪ್ಪಿದವರ ನೈಜ ಪ್ರಮಾಣವು ಸುಮಾರು 3000 ಆಗಿದೆ ಎಂದು ನಂಬಲಾಗುತ್ತದೆ [೧೧] Archived 2009-08-15 ವೇಬ್ಯಾಕ್ ಮೆಷಿನ್ ನಲ್ಲಿ.. ಅಲ್ಲದೆ ಸುಮಾರು 18,000 ತಮಿಳರ ಮನೆಗಳು ಮತ್ತು 150,000ನಷ್ಟು ಇತರರ ಮನೆಗಳು ಈ ದಂಗೆಯಲ್ಲಿ ನಾಶಗೊಂಡವು. ಸುಮಾರು 150,000ನಷ್ಟು ತಮಿಳರು ಈ ದ್ವೀಪವನ್ನು ಬಿಟ್ಟು ಕೆನಡಾ, UK, ಆಸ್ಟ್ರೇಲಿಯಾ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಚದುರಿ ಹೋದರು.
2005ರ ನವೆಂಬರ್ 17ರಂದು ನಡೆದ ಚುನಾವಣೆಯಲ್ಲಿ ಡಾನ್ ಆಲ್ವಿನ್ ರಾಜಪಕ್ಷೆಯವರ ಪುತ್ರ ಮಹಿಂದಾ ರಾಜಪಕ್ಷೆ ವಿಕ್ರಮಸಿಂಘೆಯವರನ್ನು ಸೋಲಿಸಿ ಅಧ್ಯಕ್ಷರಾಗಿ ಚುನಾಯಿತರಾದರು. ಅವರು ರತ್ನಶ್ರೀ ವಿಕ್ರಮನಾಯಕೆಯವರನ್ನು ಪ್ರಧಾನ ಮಂತ್ರಿ ಮತ್ತು ಮಂಗಳ ಸಮರವೀರರನ್ನು ವಿದೇಶಿ ಮಂತ್ರಿಯಾಗಿ ನೇಮಿಸಿದರು. LTTE ಒಂದಿಗಿನ ಸಂಧಾನಗಳು ಸ್ಥಗಿತಗೊಂಡವು. ಆಗ ಕಡಿಮೆ-ತೀವ್ರತೆಯ ಸಂಘರ್ಷಗಳು ಆರಂಭವಾದವು. ಈ ಹಿಂಸಾಚಾರವು ಫೆಬ್ರವರಿಯ ಮಾತುಕತೆಯ ನಂತರ ಸ್ವಲ್ಪ ತಗ್ಗಿತು, ಆದರೆ ಎಪ್ರಿಲ್‌ನಲ್ಲಿ ಮತ್ತೆ ತೀವ್ರಗೊಂಡಿತು. ಈ ಸಂಘರ್ಷವು 2009ರ ಮೇಯಲ್ಲಿ ಮಿಲಿಟರಿಯು LTTEಅನ್ನು ಸಂಪೂರ್ಣವಾಗಿ ಸೋಲಿಸುವವರೆಗೆ ಮುಂದುವರಿಯಿತು.
LTTEಯ ಸೋಲು
ಬದಲಾಯಿಸಿಶ್ರೀಲಂಕಾದ ಸರ್ಕಾರವು 2009ರ ಮೇ 18ರಂದು ಸಂಪೂರ್ಣ ಗೆಲುವನ್ನು ಘೋಷಿಸಿತು. 2009ರ ಮೇ 19ರಂದು ಶ್ರೀಲಂಕಾದ ಮಿಲಿಟರಿಯು LTTE ವಿರುದ್ಧದ ಅದರ 26 ವರ್ಷಗಳ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಿತು. ಅದರ ಮಿಲಿಟರಿ ಸೈನ್ಯವು ಉತ್ತರದ ಪ್ರಾಂತ್ಯದಲ್ಲಿನ LTTE ನಿಯಂತ್ರಿತ ಎಲ್ಲಾ ಕ್ಷೇತ್ರಗಳನ್ನು ಮತ್ತೆ ವಶಪಡಿಸಿಕೊಂಡಿತು, ಗಮನಾರ್ಹವಾಗಿ ಕಿಲ್ಲಿನೊಚ್ಚಿ (ಜನವರಿ 2), ಎಪಿಫ್ಯಾಂಟ್ ಪಾಸ್ (ಜನವರಿ 9) ಮತ್ತು ಅಂತಿಮವಾಗಿ ಸಂಪೂರ್ಣ ಜಿಲ್ಲೆ ಮುಲ್ಲೈತಿವುವನ್ನು ವಶಪಡಿಸಿಕೊಂಡಿತು.
2009ರ ಮೇ 22ರಂದು ಶ್ರೀಲಂಕಾದ ರಕ್ಷಣಾ ಕಾರ್ಯದರ್ಶಿ ಗೊಟಭಾಯ ರಾಜಪಕ್ಷರವರು 2006ರ ಜುಲೈನ ಈಲಮ್ ಯುದ್ಧ IVರ ಸಂದರ್ಭದಲ್ಲಿ ಶ್ರೀಲಂಕಾ ಸೈನ್ಯದ ಸುಮಾರು 6,261 ಸೈನಿಕರು ತಮ್ಮ ಜೀವವನ್ನು ಕಳೆದುಕೊಂಡರು ಮತ್ತು ಸುಮಾರು 29,551 ಮಂದಿ ಗಾಯಗೊಂಡರು ಎಂದು ದೃಢಪಡಿಸಿದರು. ಬ್ರಿಗೇಡಿಯರ್ ಉದಯ ನಾಯಕ್ಕರರು ಈ ಸಂದರ್ಭದಲ್ಲಿ ಸರಿಸುಮಾರು 2,000 LTTE ಉಗ್ರರು ಸಾವನ್ನಪ್ಪಿದರೆಂದು ಹೇಳಿದ್ದಾರೆ.
ಸಂಘರ್ಷದ ನಂತರದ ಶ್ರೀಲಂಕಾ
ಬದಲಾಯಿಸಿ- Post conflict history of Sri Lanka
- ಅಧ್ಯಕ್ಷೀಯ ಚುನಾವಣೆಗಳು 2010ರ ಜನವರಿಯಲ್ಲಿ ಪೂರ್ಣಗೊಂಡವು. ಈ ಚುನಾವಣೆಯಲ್ಲಿ ಮಹಿಂದ ರಾಜಪಕ್ಷೆಯವರು ವಿರೋಧ ಅಭ್ಯರ್ಥಿ ಜನರಲ್ ಫೋನ್ಸೆಕರನ್ನು ಸೋಲಿಸಿ 59%ನಷ್ಟು ಮತಗಳೊಂದಿಗೆ ಜಯಗಳಿಸಿದರು.
ಇವನ್ನೂ ಗಮನಿಸಿ
ಬದಲಾಯಿಸಿ- ಮಹಾವಂಶ
- ಪುರಾತನ ಶ್ರೀಲಂಕಾದ ನೀರಾವರಿ ಕೆಲಸಗಳು
- ಶ್ರೀಲಂಕಾದ ಪುರಾತನ ನಿರ್ಮಾಣ ಕಾರ್ಯಗಳು
- ಪುರಾತನ ಶ್ರೀಲಂಕಾದ ವಾಸ್ತುಶಿಲ್ಪ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಲಂಕಾ
ಉಲ್ಲೇಖಗಳು
ಬದಲಾಯಿಸಿ- ↑ http://www.lankalibrary.com/geo/prehistory.htm
- ↑ http://www.lankalibrary.com/heritage/galle6.htm
- ↑ "ಆರ್ಕೈವ್ ನಕಲು". Archived from the original on 2014-01-05. Retrieved 2010-10-08.
- ↑ "ಆರ್ಕೈವ್ ನಕಲು". Archived from the original on 2013-03-21. Retrieved 2010-10-08.
- ↑ de Silva, Chandra Richard (2011). "A hydraulic civilization". The Sri Lanka reader : history, culture, politics. Holt, John, 1948-. Durham [N.C.]: Duke University Press.
- ↑ Ranwella, K (05 - 18 June 2000). "THE SO-CALLED TAMIL KINGDOM OF JAFFNA". Archived from the original on 2009-02-11. Retrieved 2009-07-28.
{{cite web}}
: Check date values in:|date=
(help); Cite has empty unknown parameter:|coauthors=
(help) - ↑ Pichumani, K (05 - 18 June 2004). "Prehistoric basis for the rise of civilisation in Sri Lanka and southern India". Frontline. 21 (12). Retrieved 09-08-2008.
{{cite journal}}
: Check date values in:|accessdate=
and|date=
(help); Unknown parameter|coauthors=
ignored (|author=
suggested) (help) - ↑ ಗೈಗರ್-ಬೋಡ್ ಟ್ರಾನ್ಸ್‌ಲೇಶನ್ ಆಫ್ ದಿ ಮಹಾವಂಶ ಮತ್ತು ಚುಲವಂಶ ಮಾತ್ರವಲ್ಲದೆ ಶಿಲಾ ಶಾಸನಗಳ ಭಾರೀ ಸಂಗ್ರಹ, name="sila">ಪಾರಣವಿಧಾನ ಎಪಿಗ್ರಾಫಿಕ್ಸ್ ಜೇಲನಿಕ
- ↑ ಇಂಡೊ-ಯುರೋಪಿಯನ್ ಫೋಕ್-ಟೇಲ್ಸ್ ಆಂಡ್ ಗ್ರೀಕ್ ಲೆಜೆಂಡ್ - W. R. ಹ್ಯಾಲಿಡೇ
- ↑ ಸೀ ಪ್ಲೇಸ್ ನೇಮ್ಸ್
- ↑ Geiger W, Bode M H. (1912) The Mahavamsa or the great chronicle of Ceylon. London: Oxford university press. p. 58.
- ↑ S. ಕಿರಿಬಾಮುನ, "ದಿ ರೋಲ್ ಆಫ್ ದಿ ಪೋರ್ಟ್ ಸಿಟಿ ಆಫ್ ಮಹಾತಾತಿತ ಇನ್ ದಿ ಟ್ರೇಡ್ ನೆಟ್ವರ್ಕ್ಸ್ ಆಫ್ ದಿ ಇಂಡಿಯನ್ ಓಶನ್", - "ರಿಫ್ಲೆಕ್ಷನ್ಸ್ ಆನ್ ಎ ಹೆರಿಟೇಜ್", ಭಾಗ I ೨೦೦೦
- ↑ ರೋಮನ್ಸ್ ಆಂಡ್ ಸಿಲೋನ್
- ↑ ಕರ್ಟಿನ್ ೧೯೮೪: 100
- ↑ ೧೫.೦ ೧೫.೧ ಕೆ. ಎಮ್. ಡಿ ಸಿಲ್ವ, ಯೂನಿವರ್ಸಿಟಿ ಆಫ್ ಸಿಲೋನ್
- ↑ ೧೬.೦ ೧೬.೧ ೧೬.೨ ೧೬.೩ ೧೬.೪ ೧೬.೫ ಡಾ. ಜಾನೆ ರಸ್ಸೆಲ್,
- ↑ ಹ್ಯಾನ್ಸರ್ಡ್ 1935
- ↑ ಹಿಂದು ಆರ್ಗನ್, ನವೆಂಬರ್ 1, 1939
- ↑ ವೆಲ್ಕಮ್ ಟು UTHR, ಶ್ರೀಲಂಕಾ
- ↑ K. M. ಡಿ ಸಿಲ್ವ, ಹಿಸ್ಟರಿ ಆಫ್ ಶ್ರೀಲಂಕಾ, ಪೆಂಗ್ವಿನ್ 1995, ಚಾಪ್ಟರ್. 37
ಪುಸ್ತಕಗಳು ಮತ್ತು ನಿಯತಕಾಲಿಕಗಳು
ಬದಲಾಯಿಸಿ- ಆರ್ಸೆಕ್ಯುಲರಾಟ್ನೆ, S. N, ಸಿನ್ಹಲೀಸ್ ಇಮಿಗ್ರಂಟ್ಸ್ ಇನ್ ಮಲೇಷಿಯಾ ಆಂಡ್ ಸಿಂಗಾಪೂರ್, 1860-1990: ಹಿಸ್ಟರಿ ಥ್ರೂ ರಿಕಲೆಕ್ಷನ್ಸ್ , ಕೊಲೊಂಬೊ, KVG ಡಿ ಸಿಲ್ವ ಆಂಡ್ ಸನ್ಸ್, 1991
- ಬ್ರೋಹಿಯರ್, R. L, ದಿ ಗೋಲ್ಡನ್ ಏಜ್ ಆಫ್ ಮಿಲಿಟರಿ ಅಡ್ವೆಂಚರ್ ಇನ್ ಸೈಲನ್: ಆನ್ ಅಕೌಂಟ್ ಆಫ್ ದಿ ಯುವ ರೆಬೆಲಿಯನ್ 1817-1818 . ಕೊಲೊಂಬೊ: 1933
- ಕ್ರುಸ್ಜ್, ನೋಯಲ್, ದಿ ಕೊಕೊಸ್ ಐಲ್ಯಾಂಡ್ಸ್ ಮ್ಯುಟಿನಿ . ಫ್ರೆಮಾಂಟಲ್ ಆರ್ಟ್ಸ್ ಸೆಂಟರ್ ಪ್ರೆಸ್, ಫ್ರೆಮಾಂಟಲ್, WA, 2001
- ದೇರನಿಯಗಲ, ಸಿರಾನ್, ದಿ ಪ್ರಿಹಿಸ್ಟರಿ ಆಫ್ ಶ್ರೀಲಂಕಾ; ಆನ್ ಎಕಲಾಜಿಕಲ್ ಪರ್ಸಪೆಕ್ಟಿವ್ . (ಪರಿಷ್ಕೃತ ಆವೃತ್ತಿ), ಕೊಲೊಂಬೊ: ಆರ್ಕಿಯಲಾಜಿಕಲ್ ಸರ್ವೆ ಡಿಪಾರ್ಟ್ಮೆಂಟ್ ಆಫ್ ಶ್ರೀಲಂಕಾ, 1992
- ಲಿಯಾನಗಾಮಗೆ, ಅಮರದಾಸ, ದಿ ಡಿಕ್ಲೈನ್ ಆಫ್ ಪೊಲೊನ್ನರುವ ಆಂಡ್ ದಿ ರೈಸ್ ಆಫ್ ದಾಂಬದೇನಿಯ . ಡಿಪಾರ್ಟ್ಮೆಂಟ್ ಆಫ್ ಕಲ್ಚರಲ್ ಅಫೇರ್ಸ್, ಗೌರ್ನ್ಮೆಂಟ್ ಪ್ರೆಸ್, ಕೊಲೊಂಬೊ, ಶ್ರೀಲಂಕಾ. 1968.
- ಪೈರಿಸ್, ಪಾಲಸ್ ಎಡ್ವರ್ಡ್, ಸಿಲೋನ್ ಆಂಡ್ ಹೋಲ್ಯಾಂಡರ್ಸ್ 1658-1796 . ಅಮೆರಿಕನ್ ಸಿಲೋನ್ ಮಿಶನ್ ಪ್ರೆಸ್, 1918.
- ಪೈರಿಸ್, ಪಾಲಸ್ ಎಡ್ವರ್ಡ್, ಸಿಲೋನ್ ಆಂಡ್ ದಿ ಪೋರ್ಚುಗೀಸ್ 1505-1658 . ಅಮೆರಿಕನ್ ಸಿಲೋನ್ ಮಿಶನ್ ಪ್ರೆಸ್, 1920.
- ವಿಲಿಯಂ ಅಡೈರ್ ನೆಲ್ಸನ್ ಮತ್ತು R. ಕುಮಾರ್ ಡಿ ಸಿಲ್ವ, ದಿ ಡಚ್ ಫೋರ್ಟ್ಸ್ ಆಫ್ ಶ್ರೀಲಂಕಾ . ಮರುಮುದ್ರಣ: ಶ್ರೀಲಂಕಾ - ನೆದರ್ಲೆಂಡ್ಸ್ ಅಸೋಸಿಯೇಶನ್, ಕೊಲೊಂಬೊ, 2004 (1984ರ ಮೊದಲ ಆವೃತ್ತಿ)
- R. ಕುಮಾರ್ ಡಿ ಸಿಲ್ವ ಮತ್ತು ವಿಲೆಮಿನ G. M. ಬ್ಯೂಮರ್, ಇಲ್ಲಸ್ಟ್ರೇಶನ್ಸ್ ಆಂಡ್ ವ್ಯೂವ್ಸ್ ಆಫ್ ಡಚ್ ಸಿಲೋನ್, 1602-1796 . ಸೆರೆಂಡಿಬ್ ಪಬ್ಲಿಕೇಶನ್ಸ್, ಲಂಡನ್, 1988.
ಬಾಹ್ಯ ಕೊಂಡಿಗಳು
ಬದಲಾಯಿಸಿ- ನಿಯರ್ಲಿ 1200 ಲಿಂಕ್ಸ್ ಆನ್ ಶ್ರೀಲಂಕಾ Archived 2008-09-14 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ವರ್ಚ್ವಲ್ ಮದರ್ಲ್ಯಾಂಡ್ ಆಫ್ ಶ್ರೀಲಂಕನ್ಸ್
- ಶ್ರೀಲಂಕಾ ಇನ್ 1942 - ವರ್ಲ್ಡ್ ವಾರ್ II ಮೂವಿ ಕ್ಲಿಪ್
- ಲೈಬ್ರರಿ ಆಫ್ ಕಾಂಗ್ರೆಸ್ ಕಂಟ್ರಿ ಸ್ಟಡಿ: ಶ್ರೀಲಂಕಾ
- ದಿ ನೆದರ್ಲೆಂಡ್ಸ್ - ಸಿಲೋನ್ ಹೆರಿಟೇಜ್
- ಕೊಲೊಂಬೊ ಇನ್ ಡಚ್ ಟೈಮ್ಸ್
- ಜೇಕಬ್ ಹಾಫ್ನರ್. Archived 2008-01-12 ವೇಬ್ಯಾಕ್ ಮೆಷಿನ್ ನಲ್ಲಿ.ಟ್ರಾವೆಲ್ಸ್ ಥ್ರೂ ದಿ ಐಲ್ಯಾಂಡ್ ಆಫ್ ಸಿಲೋನ್ ಇನ್ 1783 Archived 2008-01-12 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಡಚ್ ಇನ್ ಸಿಲೋನ್ ಗ್ಲಂಪ್ಸೆ ಆಫ್ ದೈಯರ್ ಲೈಫ್ ಆಂಡ್ ಟೈಮ್ಸ್ Archived 2007-11-09 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಜರ್ನಲ್ ಆಫ್ ದಿ ಡಚ್ ಬರ್ಘರ್ ಯೂನಿಯನ್ ಆಫ್ ಸಿಲೋನ್ Archived 2007-12-29 ವೇಬ್ಯಾಕ್ ಮೆಷಿನ್ ನಲ್ಲಿ.
- ಎ ಬಾಪ್ಟಿಸಮ್ ಆಫ್ ಫೈರ್: ದಿ ವ್ಯಾನ್ ಗೊಯನ್ಸ್ ಮಿಶನ್ ಟು ಸಿಲೋನ್ ಆಂಡ್ ಇಂಡಿಯಾ, 1653-54
- 1694 ಸೆನ್ಸಸ್ ಇನ್ ಜಫ್ನಪಾಟ್ನಮ್ ಸಿಟಿ ಆಂಡ್ ಕ್ಯಾಸಲ್
- ಡಚ್ ಆಂಡ್ ಪೋರ್ಚುಗೀಸ್ ಬಿಲ್ಡಿಂಗ್ಸ್ ಇನ್ ಶ್ರೀಲಂಕಾ Archived 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.
- ಟೂರಿಸ್ಟ್ ಬೋರ್ಡ್ ಆಫ್ ಶ್ರೀಲಂಕಾ Archived 2019-05-03 ವೇಬ್ಯಾಕ್ ಮೆಷಿನ್ ನಲ್ಲಿ.
- hWeb - ಶ್ರೀಲಂಕಾಸ್ ರೀಸೆಂಟ್ ಹಿಸ್ಟರಿ ಆಫ್ ಎತ್ನಿಕ್ ಕಾನ್ಫ್ಲಿಕ್ಟ್ ಒರಿಜಿನೇಟ್ಸ್ ಫ್ರಮ್ ಇಟ್ಸ್ ಕೊಲೊನಿಯಲ್ ಲೆಗೆಸಿ Archived 2007-10-07 ವೇಬ್ಯಾಕ್ ಮೆಷಿನ್ ನಲ್ಲಿ.
- ಬುಕ್ಸ್ ಆನ್ ಶ್ರೀಲಂಕಾ ಹಿಸ್ಟರಿ Archived 2007-09-28 at Archive.is
- ಮ್ಯಾರಿಟೈಮ್ ಹೆರಿಟೇಜ್ ಇನ್ ಶ್ರೀಲಂಕಾ
- ದಿ ಮಹಾವಂಶ ಹಿಸ್ಟರಿ ಆಫ್ ಶ್ರೀಲಂಕಾ ದಿ ಗ್ರೇಟ್ ಕ್ರೋನಿಕಲ್ ಆಫ್ ಶ್ರೀಲಂಕಾ
- ಪೀಸ್ ಆಂಡ್ ಕಾನ್ಫ್ಲಿಕ್ಟ್ ಟೈಮ್ಲೈನ್ (PACT) - ಇಂಟರ್ಯಾಕ್ಟಿವ್ ಟೈಮ್ಲೈನ್ ಆಫ್ ದಿ ಶ್ರೀಲಂಕನ್ ಕಾನ್ಫ್ಲಿಕ್ಟ್ Archived 2013-05-23 ವೇಬ್ಯಾಕ್ ಮೆಷಿನ್ ನಲ್ಲಿ.