ದಕ್ಷಿಣ ಏಷ್ಯಾದ ಶಿಲಾಯುಗ
ಭಾರತ ದೇಶದ ಪುರಾತನ ಮಾನವ ಇತಿಹಾಸವು ಪೂರ್ವ ಶಿಲಾಯುಗದಿಂದ ಪ್ರಾರಂಭವಾಗುತ್ತದೆ. ಪ್ಲೀಯಿಸ್ಟೋಸೀನ್ (pleistocene) ಎಂದು ಕರೆಯಲಾಗುವ ಈ ಯುಗಾಂತ್ಯದಲ್ಲಿ ಮಾನವನು ಕಲ್ಲಿನ ಕೊಡಲಿ ಮತ್ತು ಇನ್ನಿತರ ಆಯುಧೋಪಕರಣಗಳನ್ನು ಉಪಯೋಗಿಸಲಾರಂಭಿಸಿದ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಭಿಮ್‍ಬೆಟ್ಕಾ ಮತ್ತು ನರ್ಮದೆಯ ಕಣಿವೆಯ 'ಹತ್ನೋರಾ', 'ಶಿವಾಲಿಕ್' ಮತ್ತು 'ಪೊಟ್ವಾರ್' ನಲ್ಲಿ ಮತ್ತು ಉತ್ತರ ಪ್ರದೇಶದ 'ಬೇಲಾನ್'ನಲ್ಲಿ ಈ ಕಾಲದ ಪಳೆಯುಳಿಕೆಗಳು ದೊರಕಿವೆ. ಆಲ್ಲದೇ ದೇಶಾದ್ಯಂತ ಹಲವಾರು ಕಡೆಯಿರುವ ಪ್ರಾಗೈತಿಹಾಸಿಕಕಾಲದ ಚಿತ್ರಕಲೆಯೂ ಪ್ರಸಿಧ್ಧವಾಗಿದೆ.
ಇದಲ್ಲದೇ ಶ್ರೀಲಂಕಾದಲ್ಲಿ ಏಶ್ಯಾದಲ್ಲೇ ಹಳೆಯಆಧುನಿಕ ಮಾನವನ ಪಳೆಯುಳಿಕೆಗಳು ದೊರಕಿವೆ.