ಭಾರತ ಸರ್ಕಾರದ ಸಚಿವಾಲಯಗಳು
ಭಾರತ ಸರ್ಕಾರ ತನ್ನ ಕಾರ್ಯಕಾರಿ ಅಧಿಕಾರವನ್ನು ಹಲವಾರು ಸಚಿವಾಲಯಗಳು ಅಥವಾ ರಾಜ್ಯ ಇಲಾಖೆಗಳ ಮೂಲಕ ಬಳಸುತ್ತದೆ. ಸಚಿವಾಲಯವು ಉದ್ಯೋಗಿಗಳು, ಅಧಿಕಾರಿಗಳನ್ನು ಕೂಡಿದ್ದು, ಇವರನ್ನು ನಾಗರಿಕ ಸೇವಕರು ಎಂದು ಕರೆಯಲಾಗುತ್ತದೆ ಮತ್ತು ರಾಜಕೀಯವಾಗಿ ಸಚಿವರು ಜವಾಬ್ದಾರರಾಗಿರುತ್ತಾರೆ. ಹೆಚ್ಚಾಗಿ ಪ್ರಮುಖ ಸಚಿವಾಲಯಗಳ ನೇತೃತ್ವವನ್ನು ಸಚಿವ ಸಂಪುಟದ ಮಂತ್ರಿಗಳು ವಹಿಸುತ್ತಾರೆ.
ಕೆಲವು ಸಚಿವಾಲಯಗಳು ಇಲಾಖೆಗಳು ಎಂಬ ಉಪವಿಭಾಗಗಳನ್ನು ಹೊಂದಿವೆ. ಉದಾಹರಣೆಗೆ, ಸಂವಹನ ಸಚಿವಾಲಯವು ಎರಡು ವಿಭಾಗಗಳನ್ನು ಹೊಂದಿದೆ - ದೂರಸಂಪರ್ಕ ಇಲಾಖೆ ಮತ್ತು ಅಂಚೆ ಇಲಾಖೆ .
ಕೇಂದ್ರ ಸರ್ಕಾರಿ ಸಚಿವಾಲಯಗಳ ಪಟ್ಟಿ
ಬದಲಾಯಿಸಿಇತ್ತೀಚೆಗೆ ಮುಕ್ತಾಯಗೊಂಡ 2019 ರ ಸಾರ್ವತ್ರಿಕ ಚುನಾವಣೆಯು ಭಾರತೀಯ ಜನತಾ ಪಕ್ಷವು ಒಟ್ಟು 303 ಸ್ಥಾನಗಳನ್ನು ಗಳಿಸಿ ಜಯಗಳಿಸಿತು. ನರೇಂದ್ರ ಮೋದಿಯವರನ್ನು 17 ನೇ ಲೋಕಸಭೆಯ ನಾಯಕರಾಗಿ ಆಯ್ಕೆ ಮಾಡಲಾಯಿತು. ಇತರ ಐವತ್ತೆಂಟು ಸದಸ್ಯರೊಂದಿಗೆ ನರೇಂದ್ರ ಮೋದಿ 30 ಮೇ 2019 ರಂದು ಸಂಜೆ 7 ಗಂಟೆಗೆ ಗೌರವಾನ್ವಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಬಿಮ್ಸ್ಟೆಕ್ ರಾಷ್ಟ್ರಗಳ ಪ್ರಮುಖ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಚಿವಾಲಯದ ಹೆಸರು | ಸ್ಥಾಪನೆ | ಸಚಿವರು | ಸಚಿವ ಶ್ರೇಣಿ | |
---|---|---|---|---|
1 | ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ | 1947 | ನರೇಂದ್ರ ಸಿಂಹ ತೋಮರ್ | ಸಂಪುಟ ಸಚಿವ |
2 | ಆಯುಷ್ ಸಚಿವಾಲಯ | 9 ನವೆಂಬರ್ 2014 | ಶ್ರೀಪಾದ್ ಯಸ್ಸೊ ನಾಯಕ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
3 | ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ | 5 ಜೂನ್ 1991 | ಡಿ. ವಿ. ಸದಾನಂದ ಗೌಡ | ಸಂಪುಟ ಸಚಿವ |
4 | ನಾಗರಿಕ ವಿಮಾನಯಾನ ಸಚಿವಾಲಯ | ಹರ್ದೀಪ್ ಸಿಂಹ ಪುರಿ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) | |
5 | ಕಲ್ಲಿದ್ದಲು ಸಚಿವಾಲಯ | ಪ್ರಹ್ಲಾದ ಜೋಶಿ | ಸಂಪುಟ ಸಚಿವ | |
6 | ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ | 15 ಆಗಷ್ಟ್ 1947 | ಪೀಯುಷ್ ಗೋಯಲ್ | ಸಂಪುಟ ಸಚಿವ |
7 | ಸಂವಹನ ಸಚಿವಾಲಯ | 19 ಜುಲೈ 2016 | ರವಿ ಶಂಕರ್ ಪ್ರಸಾದ್ | ಸಂಪುಟ ಸಚಿವ |
8 | ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ | ರಾಮ್ ವಿಲಾಸ್ ಪಾಸ್ವಾನ್ | ಸಂಪುಟ ಸಚಿವ | |
9 | ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ | ನಿರ್ಮಲಾ ಸೀತಾರಾಮನ್ | ಸಂಪುಟ ಸಚಿವ | |
10 | ಸಂಸ್ಕೃತಿ ಸಚಿವಾಲಯ | ಪ್ರಹ್ಲಾದ್ ಸಿಂಹ ಪಟೇಲ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) | |
11 | ರಕ್ಷಣಾ ಸಚಿವಾಲಯ | 15 ಆಗಷ್ಟ್ 1947 | ರಾಜನಾಥ್ ಸಿಂಗ್ | ಸಂಪುಟ ಸಚಿವ |
12 | ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ | 29 ಜನವರಿ 2003 | ಜಿತೇಂದ್ರ ಸಿಂಗ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
13 | ಭೂ ವಿಜ್ಞಾನ ಸಚಿವಾಲಯ | 2006 | ಹರ್ಷವರ್ಧನ್ | ಸಂಪುಟ ಸಚಿವ |
14 | ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ | 19 ಜುಲೈ 2016 | ರವಿ ಶಂಕರ್ ಪ್ರಸಾದ್ | ಸಂಪುಟ ಸಚಿವ |
15 | ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ | 1985 | ಪ್ರಕಾಶ್ ಜಾವಡೇಕರ್ | ಸಂಪುಟ ಸಚಿವ |
16 | ವಿದೇಶಾಂಗ ಸಚಿವಾಲಯ | 2 ಸೆಪ್ಟೆಂಬರ್ 1946 | ಎಸ್.ಜೈಶಂಕರ್ | ಸಂಪುಟ ಸಚಿವ |
17 | ಹಣಕಾಸು ಸಚಿವಾಲಯ | 29 ಅಕ್ಟೋಬರ್ 1946 | ನಿರ್ಮಲಾ ಸೀತಾರಾಮನ್ | ಸಂಪುಟ ಸಚಿವ |
18 | ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ | 1988 | ಹರ್ಸಿಮ್ರತ್ ಕೌರ್ ಬಾದಲ್ | ಸಂಪುಟ ಸಚಿವ |
19 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ | 15 ಆಗಷ್ಟ್ 1947 | ಹರ್ಷವರ್ಧನ್ | ಸಂಪುಟ ಸಚಿವ |
20 | ಗೃಹ ಸಚಿವಾಲಯ | 15 ಆಗಷ್ಟ್ 1947 | ಅಮಿತ್ ಶಾ | ಸಂಪುಟ ಸಚಿವ |
21 | ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯ | ಪ್ರಕಾಶ್ ಜಾವಡೇಕರ್ | ಸಂಪುಟ ಸಚಿವ | |
22 | ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ | 2017 | ಹರ್ದೀಪ್ ಸಿಂಹ ಪುರಿ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
23 | ಶಿಕ್ಷಣ ಸಚಿವಾಲಯ | 15 ಆಗಷ್ಟ್ 1947 | ರಮೇಶ್ ಪೋಖ್ರಿಯಾಲ್ | ಸಂಪುಟ ಸಚಿವ |
24 | ಮಾಹಿತಿ ಮತ್ತು ಪ್ರಸಾರ ಸಚಿವಾಲಯ | 15 ಆಗಷ್ಟ್ 1947 | ಪ್ರಕಾಶ್ ಜಾವಡೇಕರ್ | ಸಂಪುಟ ಸಚಿವ |
25 | ಜಲಶಕ್ತಿ ಸಚಿವಾಲಯ | 30 ಮೇ 2019 | ಗಜೇಂದ್ರ ಸಿಂಹ | ಸಂಪುಟ ಸಚಿವ |
26 | ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ | ಸಂತೋಷ್ ಗಾಂಗವರ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) | |
27 | ಕಾನೂನು ಮತ್ತು ನ್ಯಾಯ ಸಚಿವಾಲಯ | 15 ಆಗಷ್ಟ್ 1947 | ರವಿ ಶಂಕರ್ ಪ್ರಸಾದ್ | ಸಂಪುಟ ಸಚಿವ |
28 | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ | 9 ಮೇ 2007 | ನಿತಿನ್ ಗಡ್ಕರಿ | ಸಂಪುಟ ಸಚಿವ |
29 | ಗಣಿಗಾರಿಕೆ ಸಚಿವಾಲಯ | ಪ್ರಹ್ಲಾದ ಜೋಶಿ | ಸಂಪುಟ ಸಚಿವ | |
30 | ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ | 2006 | ಮುಖ್ತಾರ್ ಅಬ್ಬಾಸ್ ನಕ್ವಿ | ಸಂಪುಟ ಸಚಿವ |
31 | ಹೊಸ ಮತ್ತು ನವೀಕರಣೀಯ ಶಕ್ತಿ ಸಚಿವಾಲಯ | 1992 | ಆರ್.ಕೆ.ಸಿಂಗ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
32 | ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ | 1971 | ಹರ್ಷವರ್ಧನ್ | ಸಂಪುಟ ಸಚಿವ |
33 | ಸಂಸದೀಯ ವ್ಯವಹಾರಗಳ ಸಚಿವಾಲಯ | 1949 | ಪ್ರಹ್ಲಾದ ಜೋಶಿ | ಸಂಪುಟ ಸಚಿವ |
34 | ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ | 1 ಆಗಷ್ಟ್ 1970 | ನರೇಂದ್ರ ಮೋದಿ | ಭಾರತದ ಪ್ರಧಾನ ಮಂತ್ರಿ (ಹೆಚ್ಚುವರಿ ಉಸ್ತುವಾರಿ) |
35 | ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ | ಧರ್ಮೇಂದ್ರ ಪ್ರಧಾನ್ | ಸಂಪುಟ ಸಚಿವ | |
36 | ಯೋಜನಾ ಸಚಿವಾಲಯ | 2014 | ರಾವ್ ಇಂದರ್ಜಿತ್ ಸಿಂಗ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
37 | ಪಂಚಾಯತಿ ರಾಜ್ ಸಚಿವಾಲಯ | 27 ಮೇ 2004 | ನರೇಂದ್ರ ಸಿಂಹ ತೋಮರ್ | ಸಂಪುಟ ಸಚಿವ |
38 | ವಿದ್ಯುತ್ ಸಚಿವಾಲಯ | 2 ಜುಲೈ 1992 | ರಾಜಕುಮಾರ್ ಸಿಂಗ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
39 | ಪ್ರಧಾನಮಂತ್ರಿ ಕಾರ್ಯಾಲಯದ ಸಚಿವಾಲಯ | 1977 | ಜಿತೇಂದ್ರ ಸಿಂಗ್ | ರಾಜ್ಯ ಮಂತ್ರಿ |
40 | ಗ್ರಾಮೀಣಾಭಿವೃದ್ಧಿ ಸಚಿವಾಲಯ | ನರೇಂದ್ರ ಸಿಂಹ ತೋಮರ್ | ಸಂಪುಟ ಸಚಿವ | |
41 | ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ | 1942 | ನಿತಿನ್ ಗಡ್ಕರಿ | ಸಂಪುಟ ಸಚಿವ |
42 | ವಿದ್ಯುತ್ ಸಚಿವಾಲಯ | 2 ಜುಲೈ 1992 | ಆರ್.ಕೆ.ಸಿಂಗ್ | ಸಂಪುಟ ಸಚಿವ |
43 | ರೈಲ್ವೆ ಸಚಿವಾಲಯ | 15 ಆಗಷ್ಟ್ 1947 | ಪೀಯುಷ್ ಗೋಯಲ್ | ಸಂಪುಟ ಸಚಿವ |
44 | ಹಡಗು ಸಾಗಣೆ ಸಚಿವಾಲಯ | 15 ಆಗಷ್ಟ್ 1947 | ಮನ್ಸುಖ್ ಎಲ್. ಮಾಂಡವಿಯಾ | ಸಂಪುಟ ಸಚಿವ |
45 | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ | 1985 | ಥಾವರ್ ಚಂದ್ ಗೆಹ್ಲೊಟ್ | ಸಂಪುಟ ಸಚಿವ |
46 | ಅಂಕಿಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ | ರಾವ್ ಇಂದರ್ಜಿತ್ ಸಿಂಗ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) | |
47 | ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ | 9 ನವೆಂಬರ್ 2014 | ಮಹೇಂದ್ರನಾಥ್ ಪಾಂಡೆ | ಸಂಪುಟ ಸಚಿವ |
48 | ಉಕ್ಕು ಸಚಿವಾಲಯ | ಧರ್ಮೇಂದ್ರ ಪ್ರಧಾನ್ | ಸಂಪುಟ ಸಚಿವ | |
49 | ಜವಳಿ ಸಚಿವಾಲಯ | ಸ್ಮೃತಿ ಇರಾನಿ | ಸಂಪುಟ ಸಚಿವ | |
50 | ಪ್ರವಾಸೋದ್ಯಮ ಸಚಿವಾಲಯ | 1999 | ಪ್ರಹ್ಲಾದ್ ಸಿಂಗ್ ಪಟೇಲ್ | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
51 | ಬುಡಕಟ್ಟು ವ್ಯವಹಾರಗಳ ಸಚಿವಾಲಯ | 1999 | ಅರ್ಜುನ್ ಮುಂಡಾ | ಸಂಪುಟ ಸಚಿವ |
52 | ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ | 30 ಮೇ 2019 | ಗಿರಿರಾಜ್ ಸಿಂಗ್ | ಸಂಪುಟ ಸಚಿವ |
53 | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ | 1985 | ಸ್ಮೃತಿ ಇರಾನಿ | ಸಂಪುಟ ಸಚಿವ |
54 | ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ | 27 ಮೇ 2000 | ಕಿರೆಣ್ ರಿಜಿಜು | ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ) |
ಸ್ವತಂತ್ರ ಇಲಾಖೆಗಳು
ಬದಲಾಯಿಸಿಕೆಳಗಿನವುಗಳು ಯಾವುದೇ ಕೇಂದ್ರ ಸಚಿವಾಲಯದ ಅಡಿಯಲ್ಲಿರದ ಭಾರತ ಸರ್ಕಾರದ ಸ್ವತಂತ್ರ ಇಲಾಖೆಗಳು. ಇವುಗಳು ನೇರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯದ ಅಡಿಯಲ್ಲಿ ಬರುತ್ತವೆ.
ನಿಷ್ಕ್ರಿಯ ಸಚಿವಾಲಯಗಳು
ಬದಲಾಯಿಸಿಈ ಕೆಳಗಿನ ಸಚಿವಾಲಯಗಳು ಹಿಂದೆ ಕಾರ್ಯ ನಿರ್ವಹಿಸಿದ್ದವು, ಆದರೆ ಈಗ ಅವು ನಿಷ್ಕ್ರಿಯಗೊಂಡಿವೆ, ಏಕೆಂದರೆ ಸಾಮಾನ್ಯವಾಗಿ ಮತ್ತೊಂದು ಸಚಿವಾಲಯದೊಂದಿಗೆ ವಿಲೀನ ಅಥವಾ ಹೊಸ ಸಚಿವಾಲಯಗಳಾಗಿ ವಿಭಜನೆಯಾಗುತ್ತದೆ.