ನಿತಿನ್ ಜೈರಾಮ್ ಗಡ್ಕರಿ (ಜನನ 27 ಮೇ 1957) ಮಹಾರಾಷ್ಟ್ರದ ಒಬ್ಬ ಭಾರತೀಯ ರಾಜಕಾರಣಿ [] ಅವರು ಪ್ರಸ್ತುತ ಭಾರತ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [] ಪ್ರಸ್ತುತ ಹತ್ತು ವರ್ಷಗಳ ಕಾಲ ತಮ್ಮ ಅಧಿಕಾರಾವಧಿಯನ್ನು ನಡೆಸುತ್ತಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳಿಗೆ ಸುದೀರ್ಘ ಸೇವೆ ಸಲ್ಲಿಸಿದ ಸಚಿವರಾಗಿದ್ದಾರೆ. [] ಗಡ್ಕರಿ ಅವರು ಈ ಹಿಂದೆ 2009 ರಿಂದ 2013 ರವರೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರಾಗಿಯು ಸಹ ಸೇವೆ ಸಲ್ಲಿಸಿದ್ದರು .[] ಅವರು ಮಹಾರಾಷ್ಟ್ರ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾಗಿ ಮಾಡಿದ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ರಸ್ತೆಗಳು, ಹೆದ್ದಾರಿಗಳು ಮತ್ತು ಸರಣಿ ಮೇಲ್ಸೇತುವೆಗಳನ್ನು ನಿರ್ಮಿಸಲಾಯಿತು.

ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

2023 ರಲ್ಲಿ ಗಡ್ಕರಿ

ಪ್ರಸಕ್ತ
ಅಧಿಕಾರ ಪ್ರಾರಂಭ 
26 May 2014
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಮ್ ನಾಥ್ ಕೋವಿಂದ್
ದ್ರೌಪದಿ ಮುರ್ಮು
ಪೂರ್ವಾಧಿಕಾರಿ ಆಸ್ಕರ್ ಫೆರ್ನಾಂಡಿಸ್
ಪೂರ್ವಾಧಿಕಾರಿ ಗಿರಿಜಾ ಸಿಂಗ್
ಉತ್ತರಾಧಿಕಾರಿ ನಾರಾಯಣ ರಾಣೆ
ಅಧಿಕಾರದ ಅವಧಿ
26 May 2014 – 30 May 2019
ಪೂರ್ವಾಧಿಕಾರಿ ಜಿ.ಕೆ ವಾಸನ್
ಉತ್ತರಾಧಿಕಾರಿ ಮುನ್ಸುಕ್ ಎಲ್ ಮಾಂಡವೀಯ
ಅಧಿಕಾರದ ಅವಧಿ
3 September 2017 – 30 May 2019
ಪೂರ್ವಾಧಿಕಾರಿ Uma Bharti
ಉತ್ತರಾಧಿಕಾರಿ ಗಜೇಂದ್ರ ಸಿಂಗ್ ಶೇಖಾವತ್
ಅಧಿಕಾರದ ಅವಧಿ
4 June 2014 – 9 November 2014
ಪೂರ್ವಾಧಿಕಾರಿ ಗೊಪಿನಾಥ ಮುಂಡೆ
ಉತ್ತರಾಧಿಕಾರಿ Birender Singh

ಜನನ (1957-05-27) ೨೭ ಮೇ ೧೯೫೭ (ವಯಸ್ಸು ೬೭)
Nagpur, Bombay State (present Maharashtra), India
ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ
ಜೀವನಸಂಗಾತಿ ಕಾಂಚನ್ ಗಡ್ಕರಿ

ಅವರು ಪ್ರಸ್ತುತ ಲೋಕಸಭೆಯಲ್ಲಿ ನಾಗ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ವ್ರುತ್ತಿಯಲ್ಲಿ ವಕೀಲರು, ಜಲಸಂಪನ್ಮೂಲ, ನದಿ ಅಭಿವೃದ್ಧಿ, ಬಂದರು, ಗ್ರಾಮೀಣಾಭಿವೃದ್ಧಿ ಮತ್ತು ಮಧ್ಯಮ, ಸಣ್ಣ& ಅತಿ ಸಣ್ಣ ಕೈಗಾರಿಕೆ ಉದ್ಯಮಗಳು (ಎಮ್, ಎಸ್, ಎಮ್ ಇ)ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 7 ಜುಲೈ 2021 ರಂದು ಕ್ಯಾಬಿನೆಟ್ ಪುನರ್ ರಚನೆಯ ಸಮಯದಲ್ಲಿ, ಅವರು ನಿರ್ವಹಿಸುತ್ತಿದ್ದ ಮಧ್ಯಮ, ಸಣ್ಣ& ಅತಿ ಸಣ್ಣ ಕೈಗಾರಿಕೆ ಉದ್ಯಮಗಳು ಸಚಿವಾಲಯದ ಖಾತೆಯನ್ನು ಸಂಪುಟ ವಿಸ್ತರಣೆಯ ಭಾಗವಾಗಿ ಮಹಾರಾಷ್ಟ್ರದ ಇನ್ನೊಬ್ಬ ಬಿಜೆಪಿ ಸಂಸದ ನಾರಾಯಣ ರಾಣೆಗೆ ವರ್ಗಾಯಿಸಲಾಯಿತು. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಯ ಪ್ರಾರಂಭ ಮತ್ತು ಎಕ್ಸ್‌ಪ್ರೆಸ್‌ವೇಗಳು ಮತ್ತು ಇತರ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಯಿಂದಾಗಿ ಅವರನ್ನು ಮಾಧ್ಯಮಗಳು ಹೆಚ್ಚಾಗಿ "ಎಕ್ಸ್‌ಪ್ರೆಸ್‌ವೇ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯತ್ತಾರೆ[] []. ವರ್ಲ್ಡ್ ಎಕನಾಮಿಕ್ ಫೋರಮ್ ಅವರನ್ನು "ಭಾರತದ ರಸ್ತೆ ವಲಯದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ (ಪಿಪಿಪಿ) ಪ್ರವರ್ತಕ" ಎಂದು ಗುರುತಿಸಿದೆ[]. ರಸ್ತೆ ಮತ್ತು ಸಾರಿಗೆ ಸಚಿವರಾಗಿದ್ದ ಅವರ ಅಧಿಕಾರಾವಧಿಯಲ್ಲಿ, ಭಾರತೀಯ ಹೆದ್ದಾರಿ ಜಾಲವು 9 ವರ್ಷಗಳಲ್ಲಿ 59% ರಷ್ಟು ಬೆಳೆದಿದೆ. []

ಆರಂಭಿಕ ಜೀವನ

ಬದಲಾಯಿಸಿ

ಮಹಾರಾಷ್ಟ್ರದ ನಾಗ್ಪುರದಲ್ಲಿ ಮರಾಠಿ ಕುಟುಂಬವೂಂದರಲ್ಲಿ ಜನನ [] [೧೦] [೧೧] [೧೨] [೧೩] . 27 ಮೇ 1957 ರಂದು ಜೈರಾಮ್ ಗಡ್ಕರಿ ಮತ್ತು ಭಾನುತಾಯಿ ಗಡ್ಕರಿ [೧೪] [೧೫] ಯ ಪುತ್ರನಾಗಿ ಜನಿಸಿದರು. ಅವರ ಹರೆಯದಲ್ಲಿ, ಅವರು ಭಾರತೀಯ ಜನತಾ ಯುವ ಮೋರ್ಚಾ ಮತ್ತು ವಿದ್ಯಾರ್ಥಿ ಒಕ್ಕೂಟ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗಾಗಿ ಕೆಲಸ ಮಾಡಿದರು. ಅವರು ಎಂ.ಕಾಂ. ಮತ್ತು ಎಲ್.ಎಲ್.ಬಿ ಯನ್ನು ನಾಗ್ಪುರ ವಿಶ್ವವಿದ್ಯಾಲಯದಿಂದ ಪಡೆದರು. [೧೬]

ರಾಜಕೀಯ ಜೀವನ

ಬದಲಾಯಿಸಿ

ಗಡ್ಕರಿ ಅವರು 1995 ರಿಂದ 1999 ರವರೆಗೆ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯ (ಪಿ.ಡಬ್ಲು.ಡಿ)ಸಚಿವರಾಗಿ ಸೇವೆ ಸಲ್ಲಿಸಿದರು. ಇಲಾಖೆಯನ್ನು ಪ್ರತಿಯೊಂದು ವಿಭಗವನ್ನು ಪುನರ್ ರಚಿಸಿದರು. [೧೭] ಅವರು ಬಿಜೆಪಿಯ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. [೧೮]

ಗಡ್ಕರಿ ಅವರು ಮೂಲಸೌಕರ್ಯ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗಳಿಂದ ಹೂಡಿಕೆಯನ್ನು ಉತ್ತೀಜಿಸಿದರು. ಅವರು ಖಾಸಗೀಕರಣವನ್ನು ಬಲವಾಗಿ ಬೆಂಬಲಿಸುತ್ತಿದ್ದರು. ಈ ಕಾರ್ಯಕ್ಕೆ ಅವರು ಖಾಸಗಿ ಹೂಡಿಕೆದಾರರು, ಗುತ್ತಿಗೆದಾರರು, ಬಿಲ್ಡರ್‌ಗಳು ಮತ್ತು ವಿವಿಧ ವ್ಯಾಪಾರ ಸಂಸ್ಥೆಗಳ ನಡುವೆ ಹಲವಾರು ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಬೃಹತ್ ಮೊತ್ತದ ಬಜೆಟ್ ಯೋಜನೆಗಳನ್ನು ಖಾಸಗೀಕರಣ ಮಾಡಿದರು. ತದನಂತರ ರಾಜ್ಯ ಸರ್ಕಾರ 700 ಕೊಟಿ ಹಣವನ್ನು ಗ್ರಾಮೀಣ ಸಂಪರ್ಕಕ್ಕಾಗಿ ಮಂಜೂರು ಮಾಡಿತು. ಮುಂದಿನ ನಾಲ್ಕು ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ ಎಲ್ಲಾ ಹವಾಮಾನ ಗಳಲ್ಲಿ ಚಲಿಸಬಹುದಾದ ರಸ್ತೆಗಳನ್ನ ನಿರ್ಮಿಸಿದರು. ಈ ಸಂಪರ್ಕವ್ಯವಸ್ತೆಯು ಜನಸಂಖ್ಯೆಯ ಅನುಪಾತದಲ್ಲಿ 98% ರಷ್ಟುತ್ತು. ಯೋಜನೆಯು ಸ್ವಾತಂತ್ರ್ಯದೋತ್ತರದ ರಸ್ತೆಯ ಮೂಲಕ ಸಂಪರ್ಕವಿಲ್ಲದ 13,736 ದೂರದ ಹಳ್ಳಿಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. [೧೯] [೨೦] ಈ ಯೋಜನೆಯ ದೂರದ ಮೆಲ್ಘಾಟ್ - ಅಮರಾವತಿ ಜಿಲ್ಲೆಯ ಧರಣಿ ಪ್ರದೇಶದಲ್ಲಿ ಅಪೌಷ್ಟಿಕತೆಯ ಕೊರತೆಯನ್ನು ನಿವಾರಿಸಲು ಸಹಾಯ ಮಾಡಿತು. ಈ ಹಿಂದೆ ವೈದ್ಯಕೀಯ ನೆರವು, ಪಡಿತರ ಅಥವಾ ಶೈಕ್ಷಣಿಕ ಸೌಲಭ್ಯಗಳು ಗ್ರಾಮಿಣ ಪ್ರದೇಶಗಳನ್ನು ಸಂಪರ್ಕಿಸಲು ಅವಕಾಶವಿರಲಿಲ್ಲ.

ಕೇಂದ್ರ ಸರ್ಕಾರವು ಅವರನ್ನು ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಹಲವಾರು ಸಭೆಗಳು ಮತ್ತು ಅಧ್ಯಯನಗಳ ನಂತರ, ಗಡ್ಕರಿ ಅವರು ತಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು. ಈ ಅದ್ಯಯನವನ್ನು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಿದರು. ಅವರ ಈ ಹೊಸ ವರದಿಯನ್ನು ಅಂಗಿಕರಿಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯಡಿಯಲ್ಲಿ₹600 ಬಿಲಿಯನ್ ಮೌಲ್ಯದ ಮಹತ್ವಾಕಾಂಕ್ಷೆಯ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯನ್ನು ಪ್ರಾರಂಭಿಸಲಾಯಿತು[೨೧] . ಅವರು 2020-21 ರ ಅತ್ಯಂತ ದಕ್ಷ ಸಂಸದರಿಗಾಗಿ ನೀಡಲಾಗುವ ದಿವಂಗತ ಮಾಧವರಾವ್ ಲಿಮಾಯೆ ಪ್ರಶಸ್ತಿಯನ್ನು ಸಾರ್ವಜನಿಕ ಗ್ರಂಥಾಲಯ ನಾಸಿಕ್‌ನಿಂದ ಸ್ವೀಕರಿಸಿದರು [೨೨] [೨೩].

ನಿರ್ವಹಿಸಿದ ಹುದ್ದೆಗಳು

ಬದಲಾಯಿಸಿ

ಲೋಕೋಪಯೋಗಿ ಇಲಾಖೆ (ಪಿ.ಡಬ್ಲ್ಯೂ. ಡಿ) ಸಚಿವರಾಗಿ, ಮಹಾರಾಷ್ಟ್ರ, 1996–99

ಬದಲಾಯಿಸಿ

ಮಹಾರಾಷ್ಟ್ರದ ಪಿ.ಡಬ್ಲ್ಯೂ.ಡಿ ಸಚಿವರಾಗಿ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ತ್ವರಿತವಾಗಿ ನಿರ್ಮಾಸುವುದರಲ್ಲಿ ಗಡ್ಕರಿ ನಿರ್ಣಾಯಕ ಪಾತ್ರ ವಹಿಸಿದರು. [೨೮] 1990 ರಲ್ಲಿ, ಮಹಾರಾಷ್ಟ್ರ ಸರ್ಕಾರವು ಹೊಸ ಎಕ್ಸ್‌ಪ್ರೆಸ್‌ವೇಗೆ ಟೋಲ್ ಆಧಾರದ ಮೇಲೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಿತು, ಆದಾಗ್ಯೂ, ಗಡ್ಕರಿ ಅವರು ಪಿ.ಡಬ್ಲ್ಯೂ.ಡಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರವೇ [೨೯] ಈ ಯೋಜನೆಯ ನಿರ್ಮಾಣವು ತ್ವರಿತಗತಿಯಲ್ಲಿ ಸಾಗಿತು. ಗಡ್ಕರಿ ಅವರು 30 ವರ್ಷಗಳ ಕಾಲ ಟೋಲ್ ಸಂಗ್ರಹಿಸಲು ಅನುಮತಿಯೊಂದಿಗೆ ಬಿಲ್ಡ್-ಆಪರೇಟ್-ವರ್ಗಾವಣೆ ಆಧಾರದ ಮೇಲೆ ಮಾರ್ಚ್ 1997 ರಲ್ಲಿ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕೆಲಸವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ ವಹಿಸಿದರು. ಈ ಟೆಂಡರ್ ಪ್ರಕಟಣೆ [೩೦] ಭಾರತದಾದ್ಯಂತ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇಂಟರ್ನೆಟ್‌ನಲ್ಲಿ ಪ್ರಕಟವಾಯಿತು. ವ್ಯಾಪಕ ಪ್ರಚಾರದಿಂದಾಗಿ, 133 ಟೆಂಡರ್‌ಗಳನ್ನು ಮಾರಾಟ ಮಾಡಲಾಯಿತು ಮತ್ತು 18 ಡಿಸೆಂಬರ್ 1997 ರಂದು, 55 ಟೆಂಡರ್‌ಗಳನ್ನು ಸ್ವೀಕರಿಸಲಾಯಿತು. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನದ ನಂತರ, ಟೆಂಡರ್‌ಗಳನ್ನು ಸ್ವೀಕರಿಸಲಾಯಿತು. 1 ಜನವರಿ 1998 ರಂದು ನಾಲ್ಕು ಗುತ್ತಿಗೆದಾರರಿಗೆ ಕೆಲಸದ ಆದೇಶಗಳನ್ನು ನೀಡಲಾಯಿತು. ನಂತರ ಖಂಡಾಲಾ ಮತ್ತು ಲೋನಾವಾಲಾ - ಖಂಡಾಲಾ ಬೈಪಾಸ್ ಕಾಮಗಾರಿಗಳ ಅಗಲೀಕರಣಕ್ಕೆ ಟೆಂಡರ್ ಆಹ್ವಾನಿಸಲಾಯಿತು. ಟೆಂಡರ್‌ಗಳನ್ನು 24 ಆಗಸ್ಟ್ 1998 ರಂದು ಸ್ವೀಕರಿಸಲಾಯಿತು ಮತ್ತು 4 ಸೆಪ್ಟೆಂಬರ್ 1998 ರಂದು ಆದೇಶಗಳನ್ನು ನೀಡಲಾಯಿತು. ಎಕ್ಸ್‌ಪ್ರೆಸ್‌ವೇಯ ಮೊದಲ ವಿಭಾಗಗಳನ್ನು 2000 ರಲ್ಲಿ ತೆರೆಯಲಾಯಿತು, ಮತ್ತು ಸಂಪೂರ್ಣ ಮಾರ್ಗವನ್ನು ಪೂರ್ಣಗೊಳಿಸಿ ಸಂಚಾರಕ್ಕೆ ತೆರೆಯಲಾಯಿತು. ಏಪ್ರಿಲ್ 2002 ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಾಯಿತು.

ಗಡ್ಕರಿ ಅವರು ರಾಜ್ಯ ಸಚಿವರಾಗಿ [೩೧] ಮಾಡಿದ ಇತರ ಪ್ರಮುಖ ಸಾಧನೆಯೆಂದರೆ ಮುಂಬೈನಲ್ಲಿ 55 ಮೇಲ್ಸೇತುವೆಗಳ ನಿರ್ಮಾಣ, ಇದು ನಗರದ ಟ್ರಾಫಿಕ್ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆಗೊಳಿಸಿತು.

ಬಿಜೆಪಿ ಅಧ್ಯಕ್ಷರಾಗಿ, 2009-2013

ಬದಲಾಯಿಸಿ

ಗಡ್ಕರಿ ಅವರನ್ನು ಡಿಸೆಂಬರ್ 2009 ರಲ್ಲಿ ಬಿಜೆಪಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸತತವಾಗಿ ಎರಡು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಕಾರಣಕ್ಕೆ ಬಿಜೆಪಿಗೆ ಇದು ಕಠಿಣ ಹಂತವೆಂದು ಪರಿಗಣಿಸಿಲ್ಪಟ್ಟಿತ್ತು. ಹಗೂ ತ್ವರಿತವಾಗಿ ಪಕ್ಷದ ಪುನಶ್ಚೇತನದ ಅಗತ್ಯವಿತ್ತು. [೩೨]

ತುಹಿನ್ ಸಿನ್ಹಾ ಅವರ ಸಹ-ಲೇಖಕರಾದ ಇಂಡಿಯಾ ಆಸ್ಪೈರ್ಸ್ ಪುಸ್ತಕದಲ್ಲಿ ಗಡ್ಕರಿ [೩೩] ದೇಶಕ್ಕಾಗಿ ತಮ್ಮ ಅಭಿವೃದ್ಧಿ ವಿಚಾರಗಳನ್ನು ಬಹಳ ವಿವರವಾಗಿ ವಿವರಿಸಿದ್ದಾರೆ. ಹಸಿರು ಶಕ್ತಿ, ಪರ್ಯಾಯ ಇಂಧನ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿದ ಸಾಂಸ್ಥಿಕ ಬೆಂಬಲವು ಗಡ್ಕರಿ ಅವರ ಅಭಿವೃದ್ಧಿ ಯೋಜನೆಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. [೩೪]

ಬಿಜೆಪಿ ಪಕ್ಷದ ಅಧ್ಯಕ್ಷರಾಗಿ, ಗಡ್ಕರಿ ಅವರು ಜನಸಂಘದ ನಾಯಕರಾಗಿದ್ದ ದೀನ್ ದಯಾಳ್ ಉಪಾಧ್ಯ ಅವರ ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ (ಬಡವರ ಉನ್ನತಿ) ತತ್ವಗಳಿಗೆ ಮತ್ತೊಮ್ಮೆ ಒತ್ತು ನೀಡಿದರು. ಅದೇ ಸಮಯದಲ್ಲಿ, ವಿವಿಧ ಬಿಜೆಪಿ ರಾಜ್ಯ ಸರ್ಕಾರಗಳು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಹೊಸ ನೀತಿ ಒಳಹರಿವುಗಳೊಂದಿಗೆ ಬರಲು ಪಕ್ಷದೊಳಗೆ ವಿವಿಧ ಕೋಶಗಳನ್ನು ರಚಿಸಲಾಯಿತು[೩೫][೩೬] .

ಗಡ್ಕರಿ ಜನವರಿ 2013 ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು [೩೭] [೩೮]

2014 ಮತ್ತು 2019 ರ ಲೋಕಸಭಾ ಚುನಾವಣೆಗಳು

ಬದಲಾಯಿಸಿ

ಗಡ್ಕರಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಯಶಸ್ವಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಲಾಸ್ ಮುತ್ತೇಮ್ವಾರ್ ಅವರನ್ನು 2,85,000 ಅಂತರದಿಂದ ಸೋಲಿಸಿದರು. ಅವರು 2019 ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡು ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಅವರನ್ನು 2,16,000 ಅಂತರದಿಂದ ಸೋಲಿಸಿದರು. []

ಕೇಂದ್ರ ಸಚಿವ

ಬದಲಾಯಿಸಿ
 
ಗಡ್ಕರಿ ಅವರು 29 ಮೇ 2014 ರಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
 
ಗಡ್ಕರಿ ಅವರು 4 ಜೂನ್ 2019 ರಂದು ನವದೆಹಲಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
 
ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷರಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಅವರು 19 ಸೆಪ್ಟೆಂಬರ್ 2014 ರಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವ ನಿತಿನ್ ಗಡ್ಕರಿ ಮತ್ತು ಅವರ ಪತ್ನಿ ಕಾಂಚನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ಗಡ್ಕರಿ ಅವರು ಮೇ 2014 ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವರಾದರು. [೩೯] ಅವರು ಸ್ಥಗಿತಗೊಂಡದ್ದ ಯೋಜನೆಗಳಲ್ಲಿ 1 ಟ್ರಿಲಿಯನ್ ಯುಎಸ್$೨೨.೨ ಶತಕೋಟಿ) ಮೌಲ್ಯದ ಯೋಜನೆಗಳು ಮತ್ತು ಇತರವು  ೩೫೦ ಶತಕೋಟಿ (ಯುಎಸ್$೭.೭೭ ಶತಕೋಟಿ) ಮರುಬಿಡ್ಡಿಂಗ್‌ಗೆ ಹಾಕಲಾಯಿತು[೪೦]. ದೇಶದಲ್ಲಿ ರಸ್ತೆ ನಿರ್ಮಾಣದ ವೇಗವನ್ನು ಹೆಚ್ಚಿಸಿದರು ದಿನಕ್ಕೆ 2ಕಿಮೀ ರಷ್ಟಿದ್ದ ಹೆದ್ದಾರಿ ನಿರ್ಮಣ ಅವರ ಮೊದಲ ವರ್ಷದಲ್ಲಿ ದಿನಕ್ಕೆ 16.5 ಕಿಮೀ. ಮುಂದಿನ ವರ್ಷಕ್ಕೆ ದಿನಕ್ಕೆ 21ಕಿ.ಮಿ ಮತ್ತು 2018 ರ ಅಂತ್ಯದಲ್ಲಿ 30ಕಿಮೀ/ದಿನ [೪೧]ರಷ್ಟುವೇಗಕ್ಕೆ ತಲುಪಿಸಿದರು. ಅವರು ಒಟ್ಟು ಯೊಜನೆಯ 1% ನಷ್ಟು ಭಾಗವನ್ನು ಅಂದರೆ 2 ಟ್ರಿಲಿಯನ್ ಯುಎಸ್$೪೪.೪ ಶತಕೋಟಿ) ಮರಗಳು ಮತ್ತು ರಸ್ತೆಗಳ ಅಂದವನ್ನು ಹೆಚ್ಛಿಸುವ ಸಲುವಾಗಿ ಕಯ್ದಿರಿಸಿದರು[೪೨].

ಎರಡನೇ ಬಾರಿ ಮೋದಿ ಸರ್ಕಾರದ ಸಚಿವಾಲಯದ ಅವಧಿಯಲ್ಲಿ, ಗಡ್ಕರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವನ್ನು ಉಳಿಸಿಕೊಂಡು, 31 ಮೇ 2019 ರಂದು ಶಿಪ್ಪಿಂಗ್ ಮತ್ತು ಜಲಸಂಪನ್ಮೂಲ ಸಚಿವಾಲಯ, ನದಿಗಳ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಗಳ ಬದಲು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದೊಂದಿಗೆ ಬದಲಾಯಿಸಿಕೂಂಡರು[೪೩]. 2019 ರ ನಂತರದ ಹೆದ್ದಾರಿ ನಿರ್ಮಾಣದ ವೇಗವು 2020 ರಲ್ಲಿ ದಿನಕ್ಕೆ 36 ಕಿಮೀ ಆಗಿತ್ತು. ಗಡ್ಕರಿ ಅವರು 2022-23 ರಲ್ಲಿ 25,000 ಕಿಮೀಗಳ ಗುರಿಯೊಂದಿಗೆ ದಿನಕ್ಕೆ 68 ಕಿಮೀಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದಾರೆ. [೪೪] [೪೫] ಆತ್ಮನಿರ್ಭರ್ ಭಾರತ ಹಸಿರು ಇಂಧನ ಅಳವಡಿಕೆ ಮತ್ತು ಇಂಧನ ಸ್ವಾವಲಂಬನೆಯ ದೃಷ್ಟಿಗೆ ಪ್ರೊತ್ಸಾಹ ಕೊಡುವ ನಿಟ್ಟಿನಲ್ಲಿಅವರು ಹೈಡ್ರೋಜನ್ ಚಾಲಿತ ಎಫ್‌.ಸಿ.ಇ.ವಿ ಟೊಯೊಟಾ ಮಿರಾಯ್ ಕಾರಿನ್ನು ಚಲಾಯಿಸಿಕೋಂಡು ಸಂಸತ್ತಿಗೆ ಬಂದರು. ಹಸಿರು ಇಂಧನ ವಾಹನಗಳನ್ನು ಬಳಸುವಂತೆ ಅವರು ಜನರಿಗೆ ಕರೆಕೋಟ್ಟರು[೪೬].

28 ಅಕ್ಟೋಬರ್ 2020 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಏನ್. ಹೆಚ್.ಎ. ಐ ) ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಖುದ್ದು ಹಾಜರಿದ್ದ ಗಡ್ಕರಿಯವರು ಏನ್. ಹೆಚ್.ಎ. ಐ ಅಧಿಕಾರಿಗಳು ಮತ್ತು ಅಧಿಕಾರಶಾಹಿಯನ್ನು ಹೆಚ್ಚು ಟೀಕಿಸುವಂತ ಭಾಷಣವನ್ನು ಮಾಡಿದರು[೪೭] [೪೮] [೪೯].

ಗಡ್ಕರಿ ಅವರ ಮೂಂದಾಳತ್ವ ಮತ್ತು ಕಾರ್ಯವೈಖರಿಯನ್ನು ಬಿಜೆಪಿ, ಕಾಂಗ್ರೆಸ್ ನಾಯಕರು ಮತ್ತು ವಿಮರ್ಶಕರು ಶ್ಲಾಘಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಇಂದನದಲ್ಲಿ ಗ್ಯಾಸೋಲಿನ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸಿದ್ದು, ಡಾಂಬರು-ಬಿಟುಮೆನ್ ರಸ್ತೆಗಳಲ್ಲಿ ಪ್ಲಾಸ್ಟಿಕ್ ಮಿಶ್ರಣವನ್ನು ಬಳಸಲು ಉತ್ತೇಜಿಸಿದ್ದು ಮತ್ತು ಭಾರತ ಎನ್.ಸಿ.ಎ.ಪಿ ಅನ್ನು ಪ್ರಾರಂಭಿಸದ್ದು[೫೦] [೫೧] ಸೇರಿದೆ. ಭಾರತ ಎನ್.ಸಿ.ಎ.ಪಿ ಯನ್ನು ಗ್ಲೋಬಲ್ ಎನ್.ಸಿ.ಎ.ಪಿ ಯ ಮಾದರಿಯಲ್ಲಿ ರಚಿಸಲಾಗಿದೆ, [೫೨] [೫೩] ಇದು ಲ್ಯಾಟಿನ್ ಎನ್.ಸಿ.ಎ.ಪಿ 2016 ಅನ್ನು ಆಧರಿಸಿದೆ. 2014 ರಲ್ಲಿ ಕೆಲವು ಮಾಡೆಲ್‌ಗಳಲ್ಲಿ ಕ್ರ್ಯಾಶ್ ಟೆಸ್ಟಿಂಗ್ ಮಾಡಿದ ನಂತರ ಭಾರತಕ್ಕಾಗಿ ತಯಾರಿಸಿದ ಕಾರುಗಳಲ್ಲಿ ಸುರಕ್ಷತಾ ವೈಶಿಷ್ಟ್ಯಗಳಿಲ್ಲದ ಕಾರಣ ಗಡ್ಕರಿ ಅವರು ಭಾರತದಾದ್ಯಂತ ಮಾರಾಟವಾಗುವ ಕಾರುಗಳಿಗೆ ಎ.ಬಿ.ಎಸ್ ಮತ್ತು 6 ಏರ್‌ಬ್ಯಾಗ್‌ಗಳನ್ನ (ಹಿಂದೆ 2 ಏರ್‌ಬ್ಯಾಗ್‌ಗಳಿದ್ದವು) ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಿದರು. [೫೪] [೫೫] ರಸ್ತೆಗಳು ಮತ್ತು ಕಾರುಗಳನ್ನು ಸುರಕ್ಷಿತವಾಗಿಸಲು ಪ್ರಯತ್ನಿಸಿದ್ದಕ್ಕಾಗಿ ಅವರು ಪ್ರಶಂಸೆಯನ್ನು ಪಡೆದರೆ, ಕೆಲವು ವಾಹನ ತಯಾರಕರು ಈ ನಿರ್ಧಾರವನ್ನು ಟೀಕಿಸಿದರು, ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸುವುದರಿಂದ ವಾಹನಗಳ ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಕೈಗೆಟುಕುವಂತಿಲ್ಲ ಎಂದು ಅರೋಪಿಸಿದರು. [೫೬]

ಖಾಸ್ದರ್ ಸಾಂಸ್ಕೃತಿಕ ಮಹೋತ್ಸವ

ಬದಲಾಯಿಸಿ

ಗಡ್ಕರಿ, ನಾಗ್ಪುರದಲ್ಲಿ ಪ್ರತಿ ವರ್ಷ ಖಾಸ್ದರ್ ಸಾಂಸ್ಕೃತಿಕ ಮಹೋತ್ಸವವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮಗಳು ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಸಾಂಪ್ರದಾಯಿಕ ಕಲೆಗಳು, ಸಂಗೀತ, ನೃತ್ಯ ಮತ್ತು ಸಾಹಿತ್ಯವನ್ನು ಒಳಗೊಂಡಿರುತ್ತವೆ. ಕಾರ್ಯಕ್ರಮವು ಹೇಮಾ ಮಾಲಿನಿ, ಮಿಲ್ಕಾ ಸಿಂಗ್, ಅಮಿತ್ ತ್ರಿವೇದಿ ಮತ್ತು ಅದ್ನಾನ್ ಸ್ವಾಮಿ ಸೇರಿದಂತೆ ವಿವಿಧ ಬಾಲಿವುಡ್ ಸೆಲೆಬ್ರಿಟಿಗಳು, ಗಾಯಕರು ಮತ್ತು ಪ್ರದರ್ಶಕರನ್ನು ಒಳಗೊಂಡಿರುತ್ತದೆ. [೫೭] [೫೮]

2024 ಸಾರ್ವತ್ರಿಕ ಚುನಾವಣೆ

ಬದಲಾಯಿಸಿ

ಮಾರ್ಚ್ 2024 ರಲ್ಲಿ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ತವರು ಕ್ಷೇತ್ರ ನಾಗ್ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರನ್ನು ಘೋಷಿಸಲಾಯಿತು. [೫೯]

ಕೈಗಾರಿಕಾ ವೃತ್ತಿ

ಬದಲಾಯಿಸಿ

ರಾಜಕೀಯದಲ್ಲಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಗಡ್ಕರಿ ಅವರು ಹಲವಾರು ಖಾಸಗಿ ಕೈಗಾರಿಕೆಗಳು ಮತ್ತು ಕಂಪನಿಗಳನ್ನು ಸ್ಥಾಪಿಸಿದರು. [೬೦] ಇವುಗಳ ಸಹಿತ -

  • ಪಾಲಿ ಸ್ಯಾಕ್ ಇಂಡಸ್ಟ್ರಿಯಲ್ ಸೊಸೈಟಿ ಲಿಮಿಟೆಡ್ - ಸಂಸ್ಥಾಪಕ ಮತ್ತು ಅಧ್ಯಕ್ಷರು [೨೪]
  • ನಿಖಿಲ್ ಫರ್ನಿಚರ್ ಅಂಡ್ ಅಪ್ಲೈಯೆನ್ಸಸ್( ಪ್ರೈ. ಲಿಮಿಟೆಡ್) - ಪ್ರವರ್ತಕ ಮತ್ತು ನಿರ್ದೇಶಕ [೨೪]
  • ಅಂತ್ಯೋದಯ ಟ್ರಸ್ಟ್ – ಸಂಸ್ಥಾಪಕ ಮತ್ತು ಸದಸ್ಯ [೨೪]
  • ಎಂಪ್ರೆಸ್ ಎಂಪ್ಲಾಯೀಸ್ ಕೋ-ಆಪರೇಟಿವ್ ಪೇಪರ್ ಮಿಲ್ಸ್ ಲಿಮಿಟೆಡ್ - ಸಂಸ್ಥಾಪಕ ಮತ್ತು ಅಧ್ಯಕ್ಷರು [೨೪]
  • ಪೂರ್ತಿ ಪವರ್ ಅಂಡ್ ಶುಗರ್ ಲಿಮಿಟೆಡ್ / ಪೂರ್ತಿ ಸಕ್ಕರೆ ಕಾರ್ಖಾನಾ ಲಿಮಿಟೆಡ್ – ಪ್ರವರ್ತಕ [೬೧]

ಗಡ್ಕರಿ ಅವರು ತಾವು ಸ್ವತಃ ಕೃಷಿಕರು ಎಂದು ನೋಂದಾಯಿಸಿಕೊಂಡಿದ್ದಾರೆ. "ಕೇತಕಿ ಓವರೀಸ್ ಟ್ರೇಡಿಂಗ್ ಕಂಪನಿ" ಎಂಬ ಬ್ಯಾನರ್ ಅಡಿಯಲ್ಲಿ ಹಣ್ಣು ರಫ್ತು ಕಂಪನಿಯನ್ನು ಪ್ರಾರಂಭಿಸಿದರು. [೨೪] ಅವರು ವಿದರ್ಭದಲ್ಲಿ ಪೂರ್ಣಿ ಗುಂಪಿನ ಬ್ಯಾನರ್ ಅಡಿಯಲ್ಲಿ ಒಟ್ಟು 17 ಸಕ್ಕರೆ ತೋಟಗಳನ್ನು ಹೊಂದಿದ್ದಾರೆ. ಗಡ್ಕರಿ ಅವರು 1995 ರಲ್ಲಿ ಮಹಾರಾಷ್ಟ್ರದಲ್ಲಿ ಪಿ ಡಬ್ಲೂ ಡಿ ಮಂತ್ರಿಯಾಗಿದ್ದಾಗ ಪೂರ್ಣಿ ಪವರ್ ಅಂಡ್ ಶುಗರ್ ಲಿಮಿಟೆಡ್ (ಈಗ ಪೂರ್ಣಿ ಗ್ರೂಪ್) ಅನ್ನು ಪ್ರಾರಂಭಿಸಿದರು, [೬೨] . 2012 ರಲ್ಲಿ, ಆರ್‌ಟಿಐ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು ಬಹಿರಂಗಪಡಿಸಿದ ಅಕ್ರಮಗಳಲ್ಲಿ, ಆದಾಯ ತೆರಿಗೆ ಇಲಾಖೆಯು ಪೂರ್ಣಿಯಲ್ಲಿ ಹೂಡಿಕೆ ಮಾಡಿದ ಹಲವಾರು ಸಂಸ್ಥೆಗಳನ್ನು ತನಿಖೆ ಮಾಡಿತು ಮತ್ತು ಇವುಗಳಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ನಕಲಿ ವಿಳಾಸಗಳು ಕಂಡುಬಂದಿವೆ. [೬೩] ಮತ್ತೊಂದು ಮೂರು ಹೂಡಿಕೆ ಸಂಸ್ಥೆಗಳು ಸೋಮಾನಿ ಗ್ರೂಪ್‌ನೊಂದಿಗೆ ಸಹ-ಸ್ಥಳಗೊಂಡಿರುವುದು ಕಂಡುಬಂದಿದೆ, ಆದರೆ ಈ ಸಂಸ್ಥೆಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. [೬೪] ಇದರ ಬೆನ್ನಲ್ಲೇ ದೆಹಲಿಯ ಸಿಎಂ ಅಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಗಡ್ಕರಿ ಮೇಲೆ ಅಕ್ರಮಗಳ ಆರೋಪವನ್ನು ಹೂರಸಿದರು. ಇದಕ್ಕೆ ಪ್ರತಿಯಾಗಿ ಗಡ್ಕರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ ಕೇಜ್ರಿವಾಲ್ ಬೇಷರತ್ ಕ್ಷಮೆಯಾಚಿಸಿದರು. [೬೫]

2010 ರಲ್ಲಿ, ಪೂರ್ತಿ ಸಮೂಹವು 640 ಮಿಲಿಯನ್ ರೂಗಳಷ್ಟು ನಷ್ಟವನ್ನು ಅನುಭವಿಸಿದಾಗ,[೬೬] ಗಡ್ಕರಿಯವರು ಪಿ.ಡಬ್ಲೂ.ಡಿ ಸಚಿವರಾಗಿದ್ದ ಅವಧಿಯಲ್ಲಿ ಭಾರಿ ರಸ್ತೆ ಗುತ್ತಿಗೆಗಳನ್ನು ಪಡೆದ ಸಂಸ್ಥೆ IRB, ಪೂರ್ಣಿ ಸಮೂಹಕ್ಕೆ ರೂ. 1.64 ಬಿಲಿಯನ್ ನಷ್ಟು ಸಾಲವನ್ನು ಕೊಟ್ಟಿತು. ಈ ಮೊತ್ತ ಪೂರ್ಣಿ ಸಮೂಹದ ವಹಿವಾಟು ರೂ. 1.45 ಶತಕೋಟಿ ಗಿಂತ ಹೆಚ್ಛು. ಮರಾಠಿ ಚಾನೆಲ್ IBN-Lokmat ನಲ್ಲಿ, ಅವರು ಬ್ಯಾಂಕ್‌ಗಳಿಂದ ಏಕೆ ಸಾಲವನ್ನು ಪಡೆಯಲಿಲ್ಲ ಎಂದು ಪ್ರಶ್ನಿಸಿದಾಗ, ಗಡ್ಕರಿ ಅವರು ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳು ಸೂಕ್ತ ಸ್ಥಿತಿಯಲ್ಲಿಲ್ಲ, ಆದ್ದರಿಂದ ತನಗೆ ಸಹಾಯ ಮಾಡುವಂತೆ ಅವರು ತಮ್ಮ ಸ್ನೇಹಿತ ದತ್ತಾತ್ರೇಯವರಿಗೆ ವಿನಂತಿಸಿದ್ದಾರೆ ಎಂದು ವಿವರಿಸಿದರು. [೬೭] ಅಲ್ಲದೆ, ಆ ಸಮಯದಲ್ಲಿ ಗಡ್ಕರಿ ಅವರ ಪುತ್ರ ನಿಖಿಲ್ ಐಆರ್‌ಬಿಯಲ್ಲಿ ನಿರ್ದೇಶಕರಾಗಿದ್ದರು. ಒಬ್ಬರ ಸಂಸ್ಥೆಗಳಲ್ಲಿ ಗುತ್ತಿಗೆದಾರರು ಹೂಡಿಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗಡ್ಕರಿ ವಾದಿಸಿದರು. [೬೮]

ಗಡ್ಕರಿ ಅವರು ಬಿಜೆಪಿ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಕೆಲವು ತಿಂಗಳುಗಳ ಮೊದಲು ಈ ಆರೋಪಗಳ ಸುದ್ದಿ ಹೊರಬಿದ್ದಿದೆ. ಆ ಸಮಯದಲ್ಲಿ, ಗಡ್ಕರಿ ಅವರು 2012 ರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಹಲವಾರು ಸಭೆಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಗಡ್ಕರಿ ಅವರ ಉಪಸ್ಥಿತಿಯು ಬಿಜೆಪಿಯ ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬಿಜೆಪಿ ನಾಯಕ ಶಾಂತ ಕುಮಾರ್ ಸೂಚಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿತು. [೬೯] ತರುವಾಯ, ಗಡ್ಕರಿ ಅವರು ಅಕ್ಟೋಬರ್ 30 ರಂದು ಬಿಲಾಸ್‌ಪುರ ಮತ್ತು ಸೋಲನ್‌ನಲ್ಲಿ ತಮ್ಮ ನಿಗದಿಯಾಗಿದ್ದ ಸಭೆಗಳನ್ನು ರದ್ದುಗೊಳಿಸಿದರು.

2013 ರ ಆರಂಭದಲ್ಲಿ, ಬಿಜೆಪಿ ಅಧ್ಯಕ್ಷರ ಚುನಾವಣೆಯಲ್ಲಿಗಡ್ಕರಿ ಅವರು " ಎರಡನೇ ಬಾರಿಗೆ ಮರು ಅಯ್ಕೆಗೆ ತಯಾರಾಗಿದ್ದರು" [೭೦] ಆದರೆ 'ಪುರ್ತಿ' ಗುಂಪುಗಳ ಮೇಲಿನ ಹೂಡಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದೋಷಾರೋಪಣೆಯು ಪಟ್ಟಿಯು ಅವರ ವ್ಯಕ್ತಿತ್ವಕ್ಕೆ ಹಾನಿ ಮಾಡಿದೆ ಎಂದು ಹಲವಾರು ಹಿರಿಯ ನಾಯಕರು ಆಕ್ಷೇಪಿಸಿದರು[೭೧]. ಹಾಗಾಗಿ ಗಡ್ಕರಿ ಮರು ಆಯ್ಕೆಯಾಗಲಿಲ್ಲ. [೭೨] ತನಿಖೆಯಲ್ಲಿ ತಾನು ನಿರಪರಾಧಿ ಎಂದು ಸಾಬೀತು ಪಡಿಸುವವರೆಗೆ ಹುದ್ದೆಯಿಂದ ಕೆಳಗಿಳಿಯುವುದಾಗಿ ಗಡ್ಕರಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು. [೭೩] ಕೆಲವು ಆರ್‌ಎಸ್‌ಎಸ್ ಕಾರ್ಯಕರ್ತರು ಅವರ ನಿರ್ಗಮನವು ಪಕ್ಶದ ಆಂತರಿಕ ಕಲಹದಿಂದಾಗಿದೆ ಎಂದಿದ್ದಾರೆ. [೭೪] ತರುವಾಯ, ಗಡ್ಕರಿ ಐಟಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದರು, "ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನು (ಐಟಿ ಅಧಿಕಾರಿಗಳು) ಉಳಿಸಲು ಚಿದಂಬರಂ ಅಥವಾ ಸೋನಿಯಾ ಇರುವುದಿಲ್ಲ"; ಈ ಹಿಂದೆ ಸಿಬಿಐ ಕಾಂಗ್ರೆಸ್‌ನ ಹರಾಜನ್ನು ಮಾಡುತ್ತಿತ್ತು ಮತ್ತು ಈಗ ಐಟಿ ಜನರು ಅದನ್ನು ಅನುಸರಿಸುತ್ತಿದ್ದಾರೆ ಎಂದು ಗಡ್ಕರಿ ಹೇಳಿದರು. [೭೫] ಐಟಿ ಅಧಿಕಾರಿಗಳ ಸಂಘವು ಈ ಟೀಕೆಗಳನ್ನು ಖಂಡಿಸಿತು ಮತ್ತು ಕ್ಷಮೆಯಾಚಿಸಲು ಒತ್ತಾಯಿಸಿತು. [೭೬]

ಅಂತಿಮವಾಗಿ, ಮೇ 2013 ರಲ್ಲಿ, ಆದಾಯ ತೆರಿಗೆ ಇಲಾಖೆಯು ಗಡ್ಕರಿ ಅವರ ಸಂಸ್ಥೆಗಳು 700 ಕೋಟಿ ರೂಗಳ ಬೇನಾಮಿ ಹೂಡಿಕೆಗಳು ಮತ್ತು ಇತರ ದಾರಿಗಳ ಮೂಲಕ ಅಗಿದೆ ಎನ್ನುವ ಅರೋಪವನ್ನು ಪರಾಮರ್ಶಿಸಿ ಗಡ್ಕರಿಯವರನ್ನು ಅರೋಪದಿಂದ ಮುಕ್ತಗೋಳಿಸಿತು. ಏಪ್ರಿಲ್ 30 ರಂದು. 2014 ರಲ್ಲಿ, ಆಗಿನ ಕಾಂಗ್ರೆಸ್ ಕೇಂದ್ರ ಸಚಿವ ಮನೀಶ್ ತಿವಾರಿ ಅವರು ಗಡ್ಕರಿಯವರು ಹಾಕಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕ್ಷಮೆಯಾಚಿಸಿದರು. ಈ ಕ್ಷಮೆಯಾಚನೆಯು ಗಡ್ಕರಿ ಯಾವುದೇ ಪಾತ್ರವನ್ನು ವಹಿಸಿಲ್ಲ ಅಥವಾ ಹಗರಣದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ನ್ಯಾಯಾಂಗ ಆಯೋಗದ ಉಲ್ಲೇಖವನ್ನು ಆಧರಿಸಿದೆ. [೭೭] 13 ಮೇ 2014 ರಂದು, ಮಹಾರಾಷ್ಟ್ರ ರಾಜ್ಯದ ಆದಾಯ ತೆರಿಗೆ ಇಲಾಖೆ ಗಡ್ಕರಿ ಅವರ ಹೆಸರನ್ನು ತೆರವುಗೊಳಿಸಿತು ಮತ್ತು ಪ್ರಸ್ತುತ ಯಾವುದೇ ತನಿಖೆ ಬಾಕಿ ಉಳಿದಿಲ್ಲ ಎಂದು ಅವರಿಗೆ ಕ್ಲೀನ್ ಚಿಟ್ ನೀಡಿತು. [೬೭][೭೮][೭೯]

ವೈಯಕ್ತಿಕ ಜೀವನ

ಬದಲಾಯಿಸಿ

ನಿತಿನ್ ಗಡ್ಕರಿ ಅವರು ಕಾಂಚನ್ ಗಡ್ಕರಿ ಅವರನ್ನು ವಿವಾಹವಾಗಿದ್ದಾರೆ ಮತ್ತು ಅವರಿಗೆ ನಿಖಿಲ್, ಸಾರಂಗ್ ಮತ್ತು ಕೇತ್ಕಿ ಎಂಬ ಮೂವರು ಮಕ್ಕಳಿದ್ದಾರೆ. [೮೦] [೮೧] ಅವರ ಹಿರಿಯ ಮಗ ನಿಖಿಲ್ ರುತುಜಾ ಪಾಠಕ್ [೮೨] ಅವರನ್ನು ವಿವಾಹವಾದರು ಮತ್ತು ಸಾರಂಗ್ ಗಡ್ಕರಿ ಮಧುರಾ ರೋಡಿ ಅವರನ್ನು ವಿವಾಹವಾದರು. [೮೩] ಗಡ್ಕರಿ ಮತ್ತು ಅವರ ಕುಟುಂಬದವರು ಸಸ್ಯಾಹಾರಿಗಳು[೧೨].

ಘಟನೆಗಳು

ಬದಲಾಯಿಸಿ

2019 ರ ಆಗಸ್ಟ್‌ನಲ್ಲಿ ಗಡ್ಕರಿ ಅವರು ಆರ್‌ಬಿಐ ಗವರ್ನರ್ ಅವರನ್ನು ವಜಾ ಮಾಡುವಂತೆ ಅಂದಿನ ಕೇಂದ್ರ ಹಣಕಾಸು ಸಚಿವರಿಗೆ ಸಲಹೆ ನೀಡಿದ್ದರು ಎಂಬ ಹೇಳಿಕೆ ವಿವಾದವನ್ನು ಸೃಷ್ಟಿಸಿತು. ಆರ್‌ಬಿಐ ಗವರ್ನರ್ ಹೊಂದಿಕೊಂಡು ಕೆಲಸ ಮಾಡುವುದಿಲ್ಲ ಮತ್ತು ಹಠವಾದಿ ಎಂಬುದು ಅವರ ಅರೋಪವಾಗಿತ್ತು[೮೪].

2009 ರಲ್ಲಿ, ಏಳು ವರ್ಷದ ಯೋಗಿತಾ ಠಾಕ್ರೆ ಅವರು ಗಡ್ಕರಿ ಒಡೆತನದ ಕಾರಿನಲ್ಲಿ ಅವರ ಮನೆಯ ಬಳಿ ದೇಹದಾದ್ಯಂತ ಮೂಗೇಟುಗಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ಮಹಾರಾಷ್ಟ್ರದ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಪ್ರಕರಣವನ್ನು ಮುಚ್ಚಲು ಎರಡು ಬಾರಿ ಪ್ರಯತ್ನಿಸಿತು, ಆದರೆ ಸ್ಥಳೀಯ ನ್ಯಾಯಾಲಯಗಳು ತಿರಸ್ಕರಿಸಿದವು. ಬಾಲಕಿ ಆಕಸ್ಮಿಕವಾಗಿ ಕಾರಿನ ಬೂಟ್‌ಗೆ ಲಾಕ್ ಆಗಿದ್ದಾಳೆ ಮತ್ತು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಗಡ್ಕರಿ ಅವರ ಉದ್ಯೋಗಿಗಳು ಹೇಳಿದ್ದಾರೆ. ಆದರೆ ಬಾಲಕಿಯ ತಾಯಿ ಆಕೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಯೋಗಿತಾಳ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. [೮೫]

ಜನಪ್ರಿಯ ಸಂಸ್ಕೃತಿಯಲ್ಲಿ

ಬದಲಾಯಿಸಿ

27 ಅಕ್ಟೋಬರ್ 2023 ರಲ್ಲಿ, ಗಡ್ಕರಿ ಎಂಬ ಮರಾಠಿ ಭಾಷೆಯ ಜೀವನಚರಿತ್ರೆ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಯಿತು. [೮೬]

ಸಹ ನೋಡಿ

ಬದಲಾಯಿಸಿ

ಮೂಲಗಳು

ಬದಲಾಯಿಸಿ
  • Mahurkar, Uday (2017), Marching with a Billion: Analysing Narendra Modi's Government at Midterm, Penguin Books, ISBN 978-9-386-49584-6

ಬಾಹ್ಯ ಕೊಂಡಿಗಳು

ಬದಲಾಯಿಸಿ

 


  1. ೧.೦ ೧.೧ "Nagpur Election Results 2019: Nitin Gadkari defeats Congress's Nana Patole". Archived from the original on 1 June 2019. Retrieved 1 June 2019.
  2. "Rajnath steps down, Gadkari takes over as BJP president". The Times of India. Archived from the original on 25 October 2012. Retrieved 1 July 2013.
  3. "Highway construction's pace bulldozes pandemic barriers! Sets new record". The Financial Express (in ಅಮೆರಿಕನ್ ಇಂಗ್ಲಿಷ್). 10 June 2021. Retrieved 14 July 2021.
  4. "Profile: Nitin Gadkari". BBC News. 23 January 2013. Archived from the original on 1 November 2018. Retrieved 20 June 2018.
  5. FPJ Web Desk (26 May 2023). "Nitin Gadkari Birthday: Must-know facts about this highly popular Indian politician". The Free Press Journal. Retrieved 21 June 2023.
  6. Sutar, Kamlesh Damodar (30 May 2019). "Nitin Gadkari, BJP's all time visionary performer | What you need to know". India Today. Retrieved 21 June 2023.
  7. "Nitin Jairam Gadkari". World Economic Forum. Retrieved 21 June 2023.
  8. "India's road network grows 59% in last 9 years: Gadkari". Mint. 27 June 2023. Retrieved 16 July 2023.
  9. Praveen Donthi. "Son of the Sangh Nitin Gadkari's heritage as the RSS's man in reserve". The Caravan. Archived from the original on 11 April 2018. Retrieved 1 April 2018.
  10. "Brahmins bag most top BJP posts". India Today. Archived from the original on 13 August 2018. Retrieved 4 April 2010.
  11. Harish Damodaran (25 November 2018). INDIA'S NEW CAPITALISTS: Caste, Business, and Industry in a Modern Nation. Hachette UK. p. 20. ISBN 9789351952800. Retrieved 25 November 2018. The Mhaiskars are Chitpavan, while Gadkari is a Deshastha Brahmin
  12. ೧೨.೦ ೧೨.೧ "Let's Drop Anchor". Outlook India. Archived from the original on 7 May 2016. Retrieved 5 March 2015. In another mail of Friday, July 5, 2013, a detailed plan from Vaibhav Dange is forwarded to the captain by Sunil Bajaj, from Essar Services. This mail lists Nikhil and Sarang Gadkari as contact persons, and lists their mobile numbers. The planner adds, "Everybody is Vegetarian and prefers Asian vegetarian that is Indian Veg, Chinese Veg etc."
  13. "Gadkari loves his food & politics". The Economic Times. Archived from the original on 18 February 2019. Retrieved 21 December 2009. Mr Gadkari is full of ideas about development and food. Had it not been politics, he perhaps could have been one of the best food critics. His stout and rather over-nourished figure though stands testimony to his fondness for food, it actually doesn't tell a complete story. An authority on pure vegetarian and Maharashtrian food, Nitin equally loves to take his friends on culinary trips
  14. "Nitin Jairam Gadkari | National Portal of India". Archived from the original on 13 August 2018. Retrieved 13 August 2018.
  15. "Members : Lok Sabha - Gadkari, Shri Nitin Jairam". Lok Sabha. Retrieved 23 May 2022.
  16. Layak, Suman (10 July 2016), "Cabinet reshuffle: Modi government's got talent but is it being fully utilised?", The Economic Times, archived from the original on 12 July 2018, retrieved 13 July 2016
  17. "Gadkari emerges as front-runner for post". 15 November 2009. Archived from the original on 15 September 2016. Retrieved 29 August 2016.
  18. "Nitin Gadkari takes over as new BJP chief, Rajnath steps down". MSN India. Archived from the original on 12 March 2012. Retrieved 27 April 2011.
  19. "Nitin Gadkari sure to transform transport sector". MotorIndia. June 2014. Archived from the original on 27 October 2018. Retrieved 26 October 2018.
  20. "Standard Bio-introduction of Shri Nitin Gadkari" (PDF). bjp.org. Archived (PDF) from the original on 27 October 2018. Retrieved 26 October 2018.
  21. "Nitin Gadkari wants Ganga – Cauvery Link of national rivers!". Agricultureinformation.com. 12 May 2010. Archived from the original on 20 July 2012. Retrieved 22 December 2010.
  22. "nashik: Savana To Felicitate Gadkari For 'efficiency'". The Times of India (in ಇಂಗ್ಲಿಷ್). 8 February 2022. Retrieved 3 March 2022.
  23. "नितीन गडकरी यांना कार्यक्षम खासदार पुरस्कार जाहीर". Loksatta (in ಮರಾಠಿ). 7 February 2022. Retrieved 3 March 2022.
  24. ೨೪.೦೦ ೨೪.೦೧ ೨೪.೦೨ ೨೪.೦೩ ೨೪.೦೪ ೨೪.೦೫ ೨೪.೦೬ ೨೪.೦೭ ೨೪.೦೮ ೨೪.೦೯ ೨೪.೧೦ ೨೪.೧೧ ೨೪.೧೨ ೨೪.೧೩ ೨೪.೧೪ ೨೪.೧೫ ೨೪.೧೬ ೨೪.೧೭ ೨೪.೧೮ ೨೪.೧೯ ೨೪.೨೦ "Nitin Gadkari | Nagpur News, Blogs, Jobs, Events, Classifieds, Travel, Education and Business Directory". Nagpurpulse.com. 22 January 2008. Archived from the original on 14 March 2012. Retrieved 11 July 2012.
  25. "BJP official site". Archived from the original on 21 ಫೆಬ್ರವರಿ 2012. Retrieved 23 ಮಾರ್ಚ್ 2012.
  26. "Biography for Nitin Gadkari". Silobreaker. Archived from the original on 12 March 2012. Retrieved 11 July 2012.
  27. Kumar, Devesh (20 December 2009). "Features". The Times of India. Archived from the original on 15 October 2012. Retrieved 26 January 2011.
  28. Dandekar, Hemalata C.; Mahajan, Sulakshana (2001). "MSRDC and Mumbai-Pune Expressway: A Sustainable Model for Privatising Construction of Physical Infrastructure?". Economic and Political Weekly. 36 (7): 549–559. ISSN 0012-9976. JSTOR 4410291.
  29. "Nitin Gadkari: Minister of Road Transport and Highways, and Shipping". India Today. Archived from the original on 28 May 2014. Retrieved 26 May 2014.
  30. "One-man band". The Daily Telegraph. Archived from the original on 10 October 2015. Retrieved 4 October 2015.
  31. "Nitin Gadkari – flyover man". The Hindu. 27 May 2014. Archived from the original on 17 November 2017. Retrieved 27 May 2014.
  32. Ramakrishnan, T. (12 April 2010). "BJP's focus is on development, socio-economic reform, and nationalism: Nitin Gadkari". the hindu. Retrieved 12 April 2010.
  33. "THIS ONE HAS WALKED THE TALK". the pioneer. Archived from the original on 14 February 2014. Retrieved 14 February 2014.
  34. "'Author' Gadkari spells out his aspirations". Free Press Journal. Archived from the original on 2 January 2017. Retrieved 12 October 2013.
  35. "BJP creates Governance Cell, makes Goa ex-CM convenor". India Today. Archived from the original on 3 January 2017. Retrieved 29 April 2010.
  36. "Gadkari prescribes e-governance to battle corruption". Firstpost. 4 October 2012. Archived from the original on 24 September 2015. Retrieved 4 October 2012.
  37. Shrivastava, Rahul (January 2013). "Nitin Gadkari resigns; Rajnath Singh likely to be next BJP president". NDTV. Archived from the original on 27 October 2018. Retrieved 26 October 2018.
  38. BS Reporter (January 2013). "BJP dumps Nitin Gadkari, gives Rajnath Singh his job". Business Standard India. Archived from the original on 27 October 2018. Retrieved 26 October 2018.
  39. Mahurkar 2017, p. 120.
  40. Mahurkar 2017, p. 122.
  41. Mahurkar 2017, pp. 121–122.
  42. Mahurkar 2017, p. 123.
  43. "PM Modi allocates portfolios. Full list of new ministers", Live Mint, 31 May 2019, archived from the original on 2 June 2019, retrieved 2 June 2019
  44. "National Highway construction speed to be enhanced to meet next fiscal target: Road Transport Secretary". Financialexpress (in ಇಂಗ್ಲಿಷ್). 7 February 2022. Retrieved 31 March 2022.
  45. "Despite lockdown, national highway construction hits all-time high of 36.4 km/day in 2020-21". ThePrint (in ಅಮೆರಿಕನ್ ಇಂಗ್ಲಿಷ್). 1 April 2021. Retrieved 31 March 2022.
  46. Livemint (30 March 2022). "Nitin Gadkari reaches Parliament in India's first hydrogen fuel cell vehicle". mint (in ಇಂಗ್ಲಿಷ್). Retrieved 31 March 2022.
  47. "'I am ashamed this project took so long to finish': Nitin Gadkari on NHAI building inauguration". Scroll.in (in ಅಮೆರಿಕನ್ ಇಂಗ್ಲಿಷ್). 29 October 2020. Retrieved 30 October 2020.
  48. Manchanda, Megha (29 October 2020). "Nitin Gadkari's criticism of NHAI casts shadow on the body's functioning". Business Standard India. Retrieved 30 October 2020.
  49. Sharma, Akhilesh (29 October 2020). "Hang Photos Of Officers Who Delayed Building For 12 Years: Nitin Gadkari". NDTV. Retrieved 30 October 2020.
  50. "India has built 21,000 miles of road ways using plastic waste". 20 December 2019.
  51. "Bharat NCAP car safety rating system protocol to be finalized soon". RushLane. 11 February 2022. Retrieved 17 February 2022.
  52. "Bharat NCAP and Global NCAP: differences and similarities explained". Autocar India.
  53. "2022 Global NCAP crash test protocols for cars in India | Team-BHP". Team-BHP.com.
  54. "Indian small cars fail independent crash tests". NDTV. January 31, 2014. Retrieved 5 June 2014.
  55. "Stop selling unsafe cars to 'poor Indians': Nitin Gadkari at auto industry event". The Times of India. 14 September 2022.
  56. "More safety features in cars will mean less road safety, says Maruti chief". The Indian Express (in ಇಂಗ್ಲಿಷ್). 2014-11-12. Retrieved 2021-07-12.
  57. "Nagpur's Grand Celebration: Khasdar Sanskrutik Mahotsav 2023 Is Back In The City". Nagpurtrends.com. 20 November 2023. Retrieved 13 March 2024.
  58. Deshpande, Chaitanya (6 December 2023). "Music, Dance And Raw Energy, Mika Raps Up A Perfect Finale". The Times of India. Retrieved 13 March 2024.
  59. "Second list of BJP candidates for ensuing General Elections 2024 to the Parliamentary Constituencies of different states finalised by BJP CEC". bjp.org. 13 March 2024. Retrieved 13 March 2024.
  60. "Rajnath steps down, Gadkari takes over as BJP president". The Times of India. Press Trust of India. 19 December 2009. Archived from the original on 17 November 2010. Retrieved 22 December 2010.
  61. "Gadkari under CAG fire for Rs 49-crore Purti loan, Cong wants his ouster | india | Hindustan Times". Archived from the original on 2 October 2015. Retrieved 30 October 2015.
  62. "Purti Group". Archived from the original on 7 January 2018. Retrieved 30 January 2020.
  63. Aditi Raja (9 November 2012). "I-T noose tightens around Nitin Gadkari, finds most of the addresses of investors in Purti group to be bogus". India Today. Archived from the original on 25 May 2014. Retrieved 24 May 2014.
  64. Sandeep Ashar & Rajshri Mehta (23 October 2012). "Mysterious investors in Gadkari's group share 'fake' addresses". The Times of India. Archived from the original on 23 October 2012. Retrieved 24 May 2014.
  65. "Kejriwal's apology to Gadkari: Mumbai activist Damania says there's more to it than meets the eye". Hindustan Times (in ಇಂಗ್ಲಿಷ್). 20 March 2018. Retrieved 23 March 2022.
  66. "Gadkari denies allegations of murky dealings". The Hindu. 21 October 2012. Archived from the original on 25 May 2014. Retrieved 24 May 2014.
  67. ೬೭.೦ ೬೭.೧ Will BJP president Nitin Gadkari get his second term in office? (26 October 2012). "In the Wrong Business". Kiran Tare and Bhavna Vij-Aurora. Archived from the original on 25 May 2014. Retrieved 24 May 2014.
  68. Sreenivasan Jain; Miloni Bhatt; Abhinav Bhatt (20 October 2012). "Nothing wrong in getting investments from contractors: Nitin Gadkari tells NDTV". NDTV.
  69. Bhavna Vij-Aurora (25 January 2013). "The burden of Gadkari". India Today. Archived from the original on 25 May 2014. Retrieved 24 May 2014.
  70. "Nitin Gadkari: an ex-president of BJP trying to make Lok Sabha debut". NDTV. 28 March 2014. Archived from the original on 16 May 2014. Retrieved 24 May 2014.
  71. BS (22 January 2013). "BJP dumps Nitin Gadkari, gives Rajnath Singh his job". Business Standard India. Archived from the original on 17 December 2013. Retrieved 17 December 2013.
  72. "BJP drops Nitin Gadkari, says Rajnath Singh to be president". Archived from the original on 25 May 2014. Retrieved 24 May 2014.
  73. "What led to Nitin Gadkari's resignation as BJP president?". Times of India. Archived from the original on 26 January 2013. Retrieved 24 May 2014.
  74. Pavan Dahat (30 January 2013). "Gadkari's exit was due to internal political conspiracy, says Vaidya". The Hindu. Archived from the original on 25 May 2014. Retrieved 24 May 2014.
  75. "Where will you go when BJP comes to power? Nitin Gadkari threatens I-T officials". The Times of India. Press Trust of India. 24 January 2013. Archived from the original on 25 May 2014. Retrieved 24 May 2014.
  76. "I-T officers' body demands apology from Gadkari". The Hindu. 27 January 2013. Archived from the original on 25 May 2014. Retrieved 24 May 2014.
  77. Deepshikha Ghosh (30 April 2014). "Why Congress' Manish Tewari apologised to BJP's Nitin Gadkari". NDTV.com. Archived from the original on 26 July 2014. Retrieved 30 July 2014.
  78. "Income tax department clean chit to Nitin Gadkari, may get BJP chief post". timesofindia-economictimes. Archived from the original on 12 August 2014. Retrieved 30 July 2014.
  79. "IT dept detects Rs. 7 crore evasion in Gadkari's companies". The Hindu. 5 May 2013. Archived from the original on 25 May 2014. Retrieved 24 May 2014.
  80. "Gadkari' daughter ties knot at glittering ceremony, ministers, politicians attend function". The Indian Express. 4 December 2016. Archived from the original on 18 July 2019. Retrieved 18 July 2019.
  81. "For wedding of Nitin Gadkari's daughter, 50 chartered flights to ferry guests to Nagpur". The Indian Express. 4 December 2016. Archived from the original on 17 July 2017. Retrieved 9 May 2017.
  82. "The big-bang Gadkari wedding celebrations". NDTV. 2010. Archived from the original on 20 February 2019. Retrieved 19 February 2019.
  83. Bhagwat, Ramu (6 June 2012). "Not that big fat Indian wedding this time for Nitin Gadkari's son | Nagpur News". The Times of India. Archived from the original on 31 July 2019. Retrieved 18 July 2019.
  84. Arya, Shishir (12 August 2019). "Had once told finance minister to sack RBI governor: Nitin Gadkari". The Times of India. Retrieved 2 November 2023.
  85. Bhatt, Miloni; Ghosh, Shamik (21 February 2013). "Court rejects CID's report on death of Yogita, child who allegedly died in Nitin Gadkari's car". NDTV. Retrieved 2 November 2023.
  86. Khapre, Shubhangi (19 October 2023). "Role in BJP big picture uncertain, Nitin Gadkari gets a film break". The Indian Express. Retrieved 2 November 2023.