ಬಂದರು ಎಂಬ ಶಬ್ದವು ಸಾಮಾನ್ಯವಾಗಿ ಪೋರ್ಟ್ನೊಂದಿಗೆ ಪರ್ಯಾಯವಾಗಿ ಬಳಸಲ್ಪಡುತ್ತದೆ. ಇದು ನೌಕೆಗಳನ್ನು ಲೋಡ್ ಮಾಡಲು ಮತ್ತು ಇಳಿಸುವ ಮತ್ತು ಇದು ಮಾನವ ನಿರ್ಮಿತ ಸೌಲಭ್ಯವಾಗಿದೆ.[][]

ಭಾರತದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಸ್ಥಳವನ್ನು ತೋರಿಸುವ ನಕ್ಷೆ

ಭಾರತವು 7516.6 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಕರಾವಳಿಯನ್ನು ಹೊಂದಿದೆ, ಇದು ವಿಶ್ವದ ಅತಿದೊಡ್ಡ ಪರ್ಯಾಯ ದ್ವೀಪಗಳಲ್ಲಿ ಒಂದಾಗಿದೆ. ಹಡಗು ಸಾಗಣೆ ಸಚಿವಾಲಯ, ಭಾರತ ಸರಕಾರದ ಪ್ರಕಾರ, ಭಾರತದ ವ್ಯಾಪಾರದ ಸುಮಾರು 95 ಪ್ರತಿಶತದಷ್ಟು ಮತ್ತು ಮೌಲ್ಯದಿಂದ 68 ಪ್ರತಿಶತದಷ್ಟು ಸಮುದ್ರ ಸಾರಿಗೆ ಮೂಲಕ ಮಾಡಲಾಗುತ್ತದೆ. ಇದು 13 ಪ್ರಮುಖ ಬಂದರುಗಳು (12 ಸರ್ಕಾರಿ ಸ್ವಾಮ್ಯದ ಮತ್ತು ಒಂದು ಖಾಸಗಿ) ಮತ್ತು 187 ಅಧಿಸೂಚಿತ ಸಣ್ಣ ಮತ್ತು ಮಧ್ಯಂತರ ಬಂದರುಗಳಿಂದ ಸೇವೆ ಸಲ್ಲಿಸುತ್ತದೆ. 2010 ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲ್ಪಟ್ಟ ಪೋರ್ಟ್ ಬ್ಲೇರ್ ಅನ್ನು ಇತ್ತೀಚೆಗೆ ಅದರ ಸ್ಥಾನಮಾನದಿಂದ ತೆಗೆದುಹಾಕಲಾಯಿತು. ಒಟ್ಟು 200 ಪ್ರಮುಖ ಮತ್ತು ಪ್ರಮುಖವಲ್ಲದ ಬಂದರುಗಳು ಈ ಕೆಳಗಿನ ರಾಜ್ಯಗಳಲ್ಲಿವೆ: ಮಹಾರಾಷ್ಟ್ರ (53); ಗುಜರಾತ್ (40); ಕೇರಳ (20); ತಮಿಳುನಾಡು (15); ಕರ್ನಾಟಕ(10) ಮತ್ತು ಇತರರು (63).

ಪಶ್ಚಿಮ ತೀರದ ಬಂದರುಗಳು

ಬದಲಾಯಿಸಿ

ಇದು ಗುಜಾರಾತಿನ ಕಛ್ ಖಾರಿಯ ಶಿರೋಭಾಗದಲ್ಲಿದೆ.ಇದನ್ನು ದೀನ್ ದಯಾಳ್ ಉಪಾಧ್ಯಾಯ ಬಂದರು ಎನ್ನುವರು.ಇದು ಸ್ವತಂತ್ರ ಭಾರತದ ಮೊದಲ ಬಂದರು.[]

ಇದು ವಿಶಾಲ ಸ್ಥಳಾವಕಾಶವುಳ್ಳ, ಹಡಗು ತಂಗುವ ಬಂದರು. ಇದು ಮಹಾರಾಷ್ಟ್ರದಲ್ಲಿದ್ದು, ಇದನ್ನು "ಭಾರತದ ಹೆಬ್ಬಾಗಿಲು" ಎಂದು ಕರೆಯುತ್ತಾರೆ.[]

ಹಿಂದೆ ಇದನ್ನು "ನವಾಶೇವ ಬಂದರು" ಎಂದು ಕರೆಯುತ್ತಿದ್ದರು.ಇದು ಮುಂಬಯಿ ನಗರದಿಂದ ೧೦ ಕಿ.ಮೀ.ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ಸಮೀಪದಲ್ಲಿದೆ. ಮುಂಬಯಿ ಬಂದರಿನ ಒತ್ತಡವನ್ನು ಕುಗ್ಗಿಸಲು ಈ ಬಂದರು ನಿರ್ಮಾಣಗೊಂಡಿದೆ.[]

ಮರ್ಮಗೋವ

ಬದಲಾಯಿಸಿ

ಇದು ಗೋವಾದ ಜುವಾರಿ ನದಿಯ ಹತ್ತಿರದಲ್ಲಿದೆ.[]ಅತೀ ಹೆಚ್ಚು ಕಬ್ಬಿಣ ರಪ್ತು ಮಾಡುವ ಬಂದರು

ನವಮಂಗಳೂರು

ಬದಲಾಯಿಸಿ

ಇದನ್ನು "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯಲಾಗಿದೆ.[]

ಇದು ಕೇರಳ ತೀರದಲ್ಲಿದೆ. ಇದನ್ನು 'ಅರಬ್ಬೀ ಸಮುದ್ರದ ರಾಣಿ'ಎಂದು ಕರೆಯಳಗಿದೆ.[]

ಪೂರ್ವ ತೀರದ ಬಂದರುಗಳು

ಬದಲಾಯಿಸಿ

ತುತುಕುಡಿ

ಬದಲಾಯಿಸಿ

ತಮಿಳುನಾಡಿನ ಆಗ್ನೇಯ ಭಾಗದಲ್ಲಿದೆ.[]

ಇದು ತಮಿಳುನಾಡಿನಲ್ಲಿರುವ ಹಳೆಯ ಬಂದರು. ಇದೊಂದು ಕೃತಕ ರೇವುವುಳ್ಳದ್ದು.[೧೦]

ಎನ್ನೋರ್

ಬದಲಾಯಿಸಿ

ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಚೆನ್ನೈ ಬಂದರಿನಿಂದ ಉತ್ತರ ಭಾಗದಲ್ಲಿದೆ.ಇತ್ತೀಚಿಗೆ ಇದಕ್ಕೆ ಕಾಮರಾಜ ಎಂದು ನಾಮಕರಣ ಮಾಡಿದ್ದಾರೆ.

ಪಾರಾದೀಪ್

ಬದಲಾಯಿಸಿ

ಒಡಿಸ್ಸಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು.[೧೧]

ಇದು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿರುವ ಬಂದರು. [೧೨] ಭಾರತದ ಆಳವಾದ ಬಂದರು

ಹಾಲ್ಡಿಯ

ಬದಲಾಯಿಸಿ

ಇದು ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದೆ. ಕೊಲ್ಕತ್ತ ಬಂದರಿಗೆ ಪ್ರವೇಶಿಸಲಾಗದ ಕೆಲ ಬಂದರುಗಳು ಈ ಬಂದರಿಗೆ ಪ್ರವೇಶಿಸುತ್ತದೆ ಇದು ಪಶ್ಚಿಮ ಬಂಗಳದಲ್ಲಿ ಕ೦ಡು ಬರುತ್ತದೆ.

ಹೂಗ್ಲಿ ನದಿಯ ಎಡ ದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ಭಾರತದ ಎರಡನೇ ದೊಡ್ಡ ಬಂದರು. ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ ಕಾರ್ಯನಿರ್ವಹಿಸುವ ಆಗ್ನೇಯ ಏಷ್ಯಾದ ದೊಡ್ಡ ಬಂದರು[೧೩]

ಪೋರ್ಟ್ ಬ್ಲೇರ್

ಬದಲಾಯಿಸಿ

ಇದು ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿದೆ. [೧೪]

ಭಾರತದ ಪ್ರಮುಖ ಬಂದರು

ಬದಲಾಯಿಸಿ

ಕೆಳಗಿನ ಕೋಷ್ಟಕವು ಭಾರತದ ಪ್ರಮುಖ ಬಂದರುಗಳ ಬಗ್ಗೆ ವಿವರವಾದ ಡೇಟಾವನ್ನು ನೀಡುತ್ತದೆ[೧೫] (ಮೂಲ: ಭಾರತೀಯ ಬಂದರುಗಳ ಸಂಘ)

ಹೆಸರು ನಗರ ರಾಜ್ಯ ಸರಕು ನಿರ್ವಹಣೆ
(ಆರ್ಥಿಕ ವರ್ಷ2017-18)
ಕಂಟೈನರ್ ಸಂಚಾರ

(ಆರ್ಥಿಕ ವರ್ಷ 2017-18)

ಮಿಲಿಯನ್ ಟನ್ % ಹೆಚ್ಚಳ
(ಹಿಂದಿನ ಆರ್ಥಿಕ ವರ್ಷ )
'000 ಇಪ್ಪತ್ತು ಅಡಿ ಸಮಾನ ಘಟಕ % ಹೆಚ್ಚಳ
(ಹಿಂದಿನ ಆರ್ಥಿಕ ವರ್ಷ)
ಮುಂದ್ರಾ ಬಂದರು ಮುಂದ್ರಾ ಗುಜರಾತ್ 150
ದೀನದಯಾಳ್ ಪೋರ್ಟ್ ಟ್ರಸ್ಟ್ ಕಾಂಡ್ಲಾ ಗುಜರಾತ್ 110.10 4.42% ↑ 117 95.73% ↑
ಪಾರದೀಪ ಬಂದರು ಪಾರದೀಪ್ ಒಡಿಶಾ 102.01 14.68% ↑ 7 71.43% ↑
ಜವಾಹರಲಾಲ್ ನೆಹರು ಬಂದರು ನವಿ ಮುಂಬೈ ಮಹಾರಾಷ್ಟ್ರ 66.00 6.20% ↑ 4,833 6.89% ↑
ವಿಶಾಖಪಟ್ಟಣಂ ಬಂದರು ವಿಶಾಖಪಟ್ಟಣ ಆಂಧ್ರಪ್ರದೇಶ 63.54 4.12% ↑ 389 5.66% ↑
ಮುಂಬೈ ಬಂದರು ಮುಂಬೈ ಮಹಾರಾಷ್ಟ್ರ 62.83 -0.35% ↓ 42 -2.38% ↓
ಶ್ಯಾಮ ಪ್ರಸಾದ್ ಮುಖರ್ಜಿ ಪೋರ್ಟ್ ಟ್ರಸ್ಟ್ ಕೋಲ್ಕತ್ತಾ ಪಶ್ಚಿಮ ಬಂಗಾಳ 57.89 13.61% ↑ 796 3.02% ↑
ಚೆನ್ನೈ ಪೋರ್ಟ್ ಟ್ರಸ್ಟ್ ಚೆನ್ನೈ ತಮಿಳುನಾಡು 51.88 3.32% ↑ 1,549 3.49% ↑
ನವ ಮಂಗಳೂರು ಬಂದರು ಕರ್ನಾಟಕ 42.06 5.28% ↑ 115 17.39% ↑
ವಿ.ಓ. ಚಿದಂಬರನಾರ್ ಬಂದರು ಪ್ರಾಧಿಕಾರ ತೂತುಕ್ಕುಡಿ ತಮಿಳುನಾಡು 36.58 -4.91% ↓ 698 8.02% ↑
ಕೊಚ್ಚಿ ಬಂದರು ಕೊಚ್ಚಿ ಕೇರಳ 32.02 16.52% ↑ 735 11.69% ↑
ಕಾಮರಾಜರ್ ಬಂದರು ಚೆನ್ನೈ ತಮಿಳುನಾಡು 30.45 1.42% ↑ 3 100.00% ↑
ಮರ್ಮಗೋವ ಬಂದರು ಪ್ರಾಧಿಕಾರ ಮರ್ಮಗೋವ ಗೋವಾ 26.90 -18.94% ↓ 32 6.25% ↑
ಎಲ್ಲಾ ಬಂದರುಗಳು ಭಾರತ 679.37 4.77% ↑ 9,138 7.62% ↑

ಉಲ್ಲೇಖಗಳು

ಬದಲಾಯಿಸಿ
  1. https://dictionary.cambridge.org/dictionary/english/harbor
  2. https://harbor.com
  3. https://www.google.com/search?client=tablet-android-samsung&q=kandla+harbor&sa=X&ved=2ahUKEwjApNO4zMLgAhWZfX0KHbHkCvgQ7xYoAHoECA8QAg&biw=1024&bih=768
  4. https://www.britannica.com/place/Mumbai-Harbour
  5. "ಆರ್ಕೈವ್ ನಕಲು". Archived from the original on 2019-07-15. Retrieved 2019-02-17.
  6. http://www.goatrip.co.in/travel-guide/cities-townships/mormugao-harbour.html
  7. https://www.mapsofindia.com/maps/sea-ports/new-mangalore-port.html
  8. https://www.google.com/search?client=tablet-android-samsung&biw=1024&bih=768&ei=aT1pXIi_HNGo9QP-9YWgCQ&q=kocchi+harbor&oq=kocchi+harbor&gs_l=mobile-gws-wiz-serp.3...5050.9133..10507...0.0..0.484.3299.2-6j3j2......0....1.........0i71j35i304i39j35i39j0i67j0i7i30.k_NfhGAeRDg
  9. https://www.holidify.com/places/tuticorin/tuticorin-port-sightseeing-6085.html
  10. https://www.mapsofindia.com/maps/sea-ports/chennai-port.html
  11. www.tripadvisor.in/Attraction_Review-g1020806-d4153554-Reviews-Paradip_Port-Paradeep_Jagatsinghpur_District_Odisha.html
  12. "ಆರ್ಕೈವ್ ನಕಲು". Archived from the original on 2019-06-24. Retrieved 2019-02-17.
  13. http://www.kolkataporttrust.gov.in
  14. https://www.business-standard.com/article/current-affairs/port-blair-may-soon-be-no-more-a-major-due-to-lack-of-container-traffic-117042500233_1.html
  15. "Operational Details". Indian Ports Association. Retrieved 17 December 2014.