ನಿರ್ಮಲಾ ಸೀತಾರಾಮನ್ ಭಾರತೀಯ ರಾಜಕಾರಣಿ, ಅವರು ಪ್ರಸ್ತುತ ಭಾರತದ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಸೀತಾರಾಮನ್ ಅವರು ಹಣಕಾಸು ಮತ್ತು ಮಿನಿಸ್ಟ್ರಿ ಆಫ್ ಫೈನಾನ್ಸ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಯ ಅಡಿಯಲ್ಲಿ ಸ್ವತಂತ್ರ ಹೊಂದಿರುವ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೆ ಮೊದಲು ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು.2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆಂಧ್ರಪ್ರದೇಶದಿಂದ ರಾಜ್ಯಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು . ಪ್ರಸ್ತುತ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.

ನಿರ್ಮಲಾ ಸೀತಾರಾಮನ್
ನಿರ್ಮಲ ಸೀತಾರಾಮನ್

ಹಾಲಿ
ಅಧಿಕಾರ ಸ್ವೀಕಾರ 
4 September 2017
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಅರುಣ್ ಜೇಟ್ಲಿ

ಅಧಿಕಾರ ಅವಧಿ
26 May 2014 – 3 September 2017
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಆನಂದ್ ಶರ್ಮಾ
ಉತ್ತರಾಧಿಕಾರಿ ಸುರೇಶ್ ಪ್ರಭು

ಅಧಿಕಾರ ಅವಧಿ
2010 – 2014
ಉತ್ತರಾಧಿಕಾರಿ ಶೈನಾ ಎನ್ಸಿ

ಹಾಲಿ
ಅಧಿಕಾರ ಸ್ವೀಕಾರ 
1 July 2016
ಪೂರ್ವಾಧಿಕಾರಿ ಎಂ ವೆಂಕಯ್ಯ ನಾಯ್ಡು, ಬಿಜೆಪಿ

ಅಧಿಕಾರ ಅವಧಿ
26 June 2014 – 21 June 2016
ವೈಯಕ್ತಿಕ ಮಾಹಿತಿ
ಜನನ (1959-08-18) 18 August 1959 (age 60)
ಮದುರೈ
ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ
ಸಂಗಾತಿ(ಗಳು) ಪರಕಾಲಾ ಪ್ರಭಾಕರ್
ಮಕ್ಕಳು 1
ವಾಸಸ್ಥಾನ ಹೈದರಾಬಾದ್, ತೆಲಂಗಾಣ
ಅಭ್ಯಸಿಸಿದ ವಿದ್ಯಾಪೀಠ Seethalakshmi Ramaswamy College, Tiruchirapalli
Jawaharlal Nehru University

ಓದುಸಂಪಾದಿಸಿ

ನಿರ್ಮಲಾ ಸೀತಾರಾಮನ್ ಮದುರೈನಲ್ಲಿ ತಮಿಳು ಐಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು. ನಿರ್ಮಲಾ ಅವರು ತಿರುಚಿರಾಪಲ್ಲಿಯಲ್ಲಿ ಬಿ.ಎ. ಪದವಿ ಪಡೆದು, ನಂತರ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ದಿಲ್ಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದರು.

ವೃತ್ತಿಸಂಪಾದಿಸಿ

ಲಂಡನ್ ನಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ ಸಂಸ್ಥೆಯಲ್ಲಿ ಆರ್ಥಿಕ ವ್ಯವಹಾರಗಳ ಅಧಿಕಾರಿಯಾಗಿ ಬಹುಕಾಲ ಕಾರ್ಯಗೈಯ್ದರು.[೩]

ಪರಿವಾರಸಂಪಾದಿಸಿ

ಸ್ನಾತಕೋತ್ತರ ಪದವಿ ಸಮಯದಲ್ಲಿ ತಮ್ಮ ಸಹಪಾಠಿ ಪರಕಾಲ ಪ್ರಭಾಕರರನ್ನು ಸಂಧಿಸಿದ ನಿರ್ಮಲಾ, ಪ್ರಭಾಕರರನ್ನು ವರಿಸಿದರು.

ಸಮಾಜಸೇವೆಸಂಪಾದಿಸಿ

೨೦೦೩-೨೦೦೫ರ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು.೨೦೦೮ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. ತಮ್ಮ ವಾಕ್ಚಾತುರ್ಯದಿಂದ ಅಲ್ಪಕಾಲದಲ್ಲಿಯೇ ಪಕ್ಷದ ವಕ್ತಾರೆಯಾದಗಿ ನೇಮಕಗೊಂಡರು. ಸುಷ್ಮಾ ಸ್ವರಾಜ್ ರ ನಂತರ ಈ ಉನ್ನತ ಹುದ್ದೆ ಪಡೆದ ಮಹಿಳೆ ಎಂಬುದು ನಿರ್ಮಲಾರ ಹೆಗ್ಗಳಿಕೆ. ವಕ್ತಾರೆಯಾಗಿದ್ದಾಗ ಅವರು ಸುದ್ದಿ ವಾಹಿನಿಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು. ಪಕ್ಷದ ವಕ್ತಾರೆಯಾಗಿ, ಅವರು ಗುಜರಾತ್‍ನಲ್ಲಿ ಸಾಕಷ್ಟು ಜನಪ್ರಿಯರಾದರು. ನಿರ್ಮಲಾ ಸೀತಾರಾಮನ್ ನರೇಂದ್ರ ಮೋದಿಯವರ ಮಂತ್ರಿಮಂಡಲವನ್ನು ಮೇ ೨೦೧೪ರಲ್ಲಿ ಸೇರಿದರು.[೪]

ವಾಣಿಜ್ಯ ಖಾತೆಯ ನಿರ್ವಹಣೆಯಲ್ಲಿ, ದಕ್ಷತೆ ತೋರಿ, ಹೆಸರು ಗಳಿಸಿ ಬಡ್ತಿಯೆಂಬಂತೆ, ಸೆಪ್ಟೆಂಬರ್ ೩ರ ಸಂಪುಟ ಪುನರ್ರಚನೆಯಲ್ಲಿ ರಕ್ಷಣಾ ಖಾತೆಯನ್ನು ಪಡೆದರು.

ಸರ್ಕಾರೀ ಸೇವೆಸಂಪಾದಿಸಿ

  • ೨೦೧೪-೨೦೧೭:‌ ವಾಣಿಜ್ಯ ಖಾತೆಯ ರಾಜ್ಯ ಸಚಿವೆ (ಸ್ವತಂತ್ರ ನಿರ್ವಹಣೆ)
  • ೨೦೧೭- :‌ರಕ್ಷಣಾ ಖಾತೆಯ ಸಂಪುಟ ಸಚಿವೆ
  • ೨೦೧೯ ರಿಂದ- ಕೇಂದ್ರ ಸರ್ಕಾರದ ಹಣಕಾಸು ಸಚಿವೆ.

ಉಲ್ಲೇಖಗಳುಸಂಪಾದಿಸಿ

  1. http://commerce.nic.in/bio/CIMBiodata.pdf
  2. "Nirmala Sitharaman Wins Rajya Sabha Seat From Karnataka, Congress Gets 3".
  3. https://yourstory.com/2017/09/nirmala-sitharaman-defense-minister/
  4. http://timesofindia.indiatimes.com/india/modi-cabinet-reshuffle-full-list-of-pm-modis-council-of-ministers/articleshow/60348346.cms