Sindu ganga bayalu

ಭಾರತದ ನದಿಗಳ ವಿಂಗಡನೆ

ಬದಲಾಯಿಸಿ

ಭಾರತದ ನದಿಗಳನ್ನು ಅನೇಕ ರೀತಿಗಳಲ್ಲಿ ವಿಂಗಡಿಸಬಹುದು.ಸದ್ಯ ಹರಿವ ಪ್ರದೇಶ,ಉಪನದಿಗಳ ಸಮೂಹ,ಹರಿವ ರಾಜ್ಯಗಳ ಅನುಸಾರವಾಗಿ ನಾವು ಈ ಕೆಳಗಿನ ನದಿಗಳನ್ನು ಗಮನಿಸಬಹುದು.

 
ಭಾರತದ ನದಿಗಳು

ಹರಿಯುವ ಪ್ರದೇಶ/ಹುಟ್ಟುವ ಸ್ಥಳಾಧಾರಿತ

ಬದಲಾಯಿಸಿ

ಉತ್ತರಭಾರತದ ನದಿಗಳು ಹೆಚ್ಚು ಕಡಿಮೆ ವರ್ಷ ಪೂರ್ತಿ ಹರಿಯುತ್ತವೆ.ಮಳೆಗಾಲದಲ್ಲಿ ಪ್ರವಾಹಗಳನ್ನು ಉಂಟು ಮಾಡುವಷ್ಟು ದೊಡ್ಡದಾಗುತ್ತವೆ. ದಕ್ಷಿಣ ಭಾರತದ ನದಿಗಳು ಮಳೆಗಾಲದಲ್ಲಿ ತುಂಬಿ ಹರಿದು ಬೇಸಿಗೆಯಲ್ಲಿ ಕ್ಷೀಣಿಸುತ್ತವೆ. ಕರಾವಳಿಯಲ್ಲಿ ಅನೇಕ ನದಿಗಳು ಸಹ್ಯಾದ್ರಿ ಪರ್ವತಸಾಲಿನಲ್ಲಿ ಹುಟ್ಟಿ ಅರಬ್ಬಿ ಸಮುದ್ರವನ್ನು ಸೇರುತ್ತವೆ.

  • ಉತ್ತರ ಭಾರತದ ನದಿಗಳು

ಗಂಗಾ, ಬ್ರಹ್ಮಪುತ್ರ, ಸಿಂಧು, ಬಿಯಾಸ್, ರಾಬಿ, ಸತ್ಲೇಜ್,

  • ದಕ್ಷಿಣ ಸಮತಟ್ಟು ಪ್ರದೇಶದ ನದಿಗಳು

ಕಾವೇರಿ, ಕೃಷ್ಣಾ, ಗೋದಾವರಿ, ಭೀಮಾ, ತುಂಗಭದ್ರ, ಘಟಪ್ರಭ, ಮಲಪ್ರಭ, ವರದಾ, ಶರಾವತೀ, ಅಘನಾಶಿನೀ

  • ಮಧ್ಯಭಾರತದ ನದಿಗಳು

ಮಹಾನದಿ, ನರ್ಮದಾ, ತಪತಿ

  • ಕರಾವಳಿಯ ನದಿಗಳು:ಕಾಳಿ, ವರಾಹಿ, ಗಂಗಾವಳಿ

ಸರಸ್ವತಿ ನದಿ ಅಸ್ತಿತ್ವದಲ್ಲಿತ್ತು

ಬದಲಾಯಿಸಿ
  • 16 Oct, 2016:ತಜ್ಞರ ವರದಿ:
  • ನವದೆಹಲಿ: ಈವರೆಗೂ ಕಾಲ್ಪನಿಕ ಎಂದು ಪರಿಗಣಿಸಲಾಗಿದ್ದ ಸರಸ್ವತಿ ನದಿ ವಾಸ್ತವವಾಗಿ ಅಸ್ತಿತ್ವದಲ್ಲಿತ್ತು ಎಂದು ತಜ್ಞರ ಸಮಿತಿಯ ವರದಿ ಶನಿವಾರ ತಿಳಿಸಿದೆ.[]
  • ‘ಹಿಮಾಲಯದಲ್ಲಿ ಮೂಲ ಹೊಂದಿದ್ದ ನದಿ ಕೊಲ್ಲಿಯಲ್ಲಿ ಪಶ್ಚಿಮದ ಸಮುದ್ರ ಸೇರುತ್ತಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಸಮಿತಿ ನೇತೃತ್ವ ಹೊಂದಿದ್ದ ಪ್ರೊ. ಕೆ.ಎಸ್‌. ವಾಲ್ದಿಯಾ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹರಿಯಾಣ, ರಾಜಸ್ತಾನ ಹಾಗೂ ಉತ್ತರ ಗುಜರಾತ್‌ನಲ್ಲಿ ನದಿ ಹರಿಯುತ್ತಿತ್ತು ಎಂದು ಹಿರಿಯ ಭೂಗೋಳಶಾಸ್ತ್ರಜ್ಞರೂ ಆಗಿರುವ ವಾಲ್ದಿಯಾ ಹೇಳಿದ್ದಾರೆ.[]
  • ನದಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ಕವಲು ಹೊಂದಿತ್ತು. ಹಿಮಾಲಯದಲ್ಲಿ ಹುಟ್ಟುತ್ತಿದ್ದ ಸಟ್ಲೆಜ್‌ ನದಿ ಪ್ರಸ್ತುತ ಘಗ್ಗರ್‌–ಪಟಿಯಾಲಿವಾಲಿ ಕಾಲುವೆ ಮಾರ್ಗದಲ್ಲಿ ಹರಿಯುತ್ತಿತ್ತು. ಇದು ಪುರಾತನ ಕಾಲದ ಸರಸ್ವತಿ ನದಿಯ ಪಶ್ಚಿಮ ಕವಲಾಗಿತ್ತು. ಸರಸ್ವತಿ ನದಿಯ ಪೂರ್ವ ಕವಲು ಮಾರ್ಕಂಡ ಹಾಗೂ ಸರ್ಸುತಿ (ಸರಸ್ವತಿಯ ಅಪಭ್ರಂಶ) ನದಿಯಾಗಿತ್ತು ಎಂದು ಏಳು ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿದೆ.[]

ವಿಶಿಷ್ಟ ಮಾರ್ಗ ಪತ್ತೆ

ಬದಲಾಯಿಸಿ
  • ನದಿ ತನ್ನ ಪಥ ಬದಲಿಸಿದ ವಿಶಿಷ್ಟ ಕುರುಹು ಪತ್ತೆಯಾಗಿದ್ದು, ಇದು ಈಗ ಇರುವ ಘಗ್ಗರ್‌, ಸರ್ಸುತಿ , ಹಕ್ರಾ ಹಾಗೂ ನಾರಾ ನದಿಗಳ ಮಾರ್ಗಕ್ಕೆ ಸಂಬಂಧಿಸಿದ್ದು ಎಂದು ವಾಲ್ದಿಯಾ ಅವರು ವಿವರಿಸಿದ್ದಾರೆ. ಸರಸ್ವತಿ ನದಿ ಅಸ್ತಿತ್ವ ಕುರಿತು ಸಮಿತಿ ಆರು ತಿಂಗಳ ಕಾಲ ಸಂಶೋಧನೆ ನಡೆಸಿದೆ.

1700 ಪಟ್ಟಣಗಳಿಗೆ ನೀರು ಒದಗಿಸಿದ್ದ ನದಿ

ಬದಲಾಯಿಸಿ
  • ಹರಪ್ಪ ನಾಗರಿಕತೆ ಇದ್ದ ಕಾಲದಲ್ಲಿ ಈ ವಿಶಿಷ್ಟ ಮಾರ್ಗದ ಸುತ್ತಮುತ್ತ ಅಂದಾಜು 1700 ದೊಡ್ಡ ಸಣ್ಣ ಹಾಗೂ ದೊಡ್ಡ ಗ್ರಾಮ, ಪಟ್ಟಣಗಳಿದ್ದವು. 100ಕ್ಕೂ ಹೆಚ್ಚು ಹೆಕ್ಟೇರ್‌ ವಿಸ್ತೀರ್ಣ ಹೊಂದಿದ್ದ ಕೆಲವು ಪಟ್ಟಣಗಳು ಸುಮಾರು 5500 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದವು. ನೀರಿಲ್ಲದೆ ಈ ಪಟ್ಟಣಗಳು ಅಸ್ತಿತ್ವ ಹೊಂದಲು ಸಾಧ್ಯವಿತ್ತೆ? ಇಲ್ಲ. ಅಂದರೆ ಇಲ್ಲಿ ಹರಿಯುತ್ತಿದ್ದ ನದಿ ಗ್ರಾಮ, ಪಟ್ಟಣಗಳಿಗೆ ನೀರು ಒದಗಿಸುತ್ತಿತ್ತು. ಆ ನದಿ ಯಾವುದಾಗಿತ್ತು? ಅದರ ಹೆಸರೇನು? ಎಂಬುದನ್ನು ಪತ್ತೆ ಮಾಡಲು ನಾವು ಸಂಶೋಧನೆ ನಡೆಸಿದೆವು ಎಂದು ವಾಲ್ದಿಯಾ ಹೇಳಿದ್ದಾರೆ.
  • ಸರಸ್ವತಿ ನದಿ ಕುರಿತು ತಜ್ಞರ ಸಮಿತಿ ನೀಡಿರುವ ವರದಿ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ. ಎಂದು ಉಮಾ ಭಾರತಿ, ಕೇಂದ್ರ ಜಲಸಂಪನ್ಮೂಲ ಸಚಿವೆ ಹೇಳಿದ್ದಾರೆ.[]

ಉತ್ತರ ಭಾರತದ ನದಿಗಳ ಸಂಕ್ಷಿಪ್ತ ವಿವರ

ಬದಲಾಯಿಸಿ
ಕ್ರಮ ಸಂ ಹೆಸರು ಉದ್ದ- ಕಿ.ಮೀ ಜಲಾನಯನ ವಿಸ್ತೀರ್ಣ ಚ.ಕಿಮೀ. ನದಿಯ ಉಗಮಸ್ಥಳ ಸೇರುವ ಸ್ಥಳ ಪ್ರಯೋಜಕರು
1 ಸಿಂಧೂ ನದಿ 3,200 11,65,000 ಕೈಲಾಸ ಪರ್ವತ ಅರಬ್ಬೀ ಸಮುದ್ರ ಭಾರತ, ಪಾಕೀಸ್ತಾನ
2 ಗಂಗಾ 2,525 10,80,000 ಗಂಗೊತ್ರಿ(ಅಲಕಾನಂದ ಬಂಗಾಳಾಕೊಲ್ಲಿ ಉತ್ತರ ಪ್ರದೇಶ, ಬಿಹಾರ,ಪಶ್ಚಿಮ ಬಂಗಾಳ
3 ಯಮುನಾ 1370 3,59,000 ಯಮುನೇತ್ರಿ ಬಂಗಾಳ

ಕೊಲ್ಲಿ(+ಗಂಗಾ) || ದೆಹಲಿ, ಹರಿಯಾಣ, ಉತ್ತರ ಪ್ರದೇಶ

4 ಬ್ರಹ್ಮಪುತ್ರ 725 2,40,000 ಸಮಾಯಂಗ್ ಬಂಗಾಳ ಕೊಲ್ಲಿ ಈಶಾನ್ಯ ರಾಜ್ಯಗಳು

[] []

ಗಂಗಾನದೀ ಸಮೂಹ

ಬದಲಾಯಿಸಿ
  • ವಿವರಣೆ: ಗಂಗಾ ಜಲಾನಯನ ಪ್ರದೇಶ ಭಾರತ, ಟಿಬೆಟ್ (ಚೀನಾ), ನೇಪಾಳ ಮತ್ತು ಬಾಂಗ್ಲಾದೇಶ ಗಳಲ್ಲಿ 10,86,000 ಚ.ಕಿ.ಮೀ.ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ.
 
ಗಂಗಾ,ಬ್ರಹ್ಮಪುತ್ರ ಮೇಘನಾ ಜಲಾನಯನ ಪ್ರದೇಶ
ಗಂಗೆಯ ಕಥೆ ಭಾರತದ ಸಂಸ್ಕೃತಿ ಕಥೆ

"ಎಲ್ಲಕ್ಕಿಂತ ಹೆಚ್ಚಾಗಿ ಗಂಗಾ ಭಾರತದ ನದಿ ; ಅದು , ಭಾರತದ ಹೃದಯವನ್ನೇ ಹಿಡಿದಿಟ್ಟುಕೊಂಡಿದೆ ಮತ್ತು ಅದು ಇತಿಹಾಸದ ಉದಯಕಾಲದಿಂದಲೂ ಲೆಕ್ಕವಿಲ್ಲದಷ್ಟು ಜನರನ್ನು ತನ್ನ ನದೀತೀರಕ್ಕೆ ಸೆಳೆದಿದೆ. ಅದರ ಉಗಮದಿಂದ ಸಾಗರ ಸೇರುವವರೆಗಿನ ಗಂಗೆಯ ಕಥೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದ ವರೆಗೂ ಭಾರತದ ನಾಗರಿಕತೆಯ ಮತ್ತು ಸಂಸ್ಕೃತಿಯ ಕಥೆಯೇ ಆಗಿದೆ” -ಜವಾಹರಲಾಲ್ ನೆಹರು(ಡಿಸ್ಕವರಿ ಆಫ್ ಇಂಡಿಯಾ)

.

ಗಂಗಾ ನದಿಯ ಹುಟ್ಟು ಹರಿವು

ಬದಲಾಯಿಸಿ
  • ಗಂಗಾನದಿ 7,010 ಮೀ ಎತ್ತರದಲ್ಲಿ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಹಿಮಾಲಯದ ಗಂಗೋತ್ರಿ ಹಿಮನದಿಯಲ್ಲಿ ಹುಟ್ಟುತ್ತದೆ. ಅದರ ಮೂಲದಲ್ಲಿ, ನದಿಯನ್ನು ಭಾಗೀರಥಿ ಎಂದು ಕರೆಯಲಾಗುತ್ತದೆ. ಇದು ದೇವಪ್ರಯಾಗದವರೆಗೆ ಕಣಿವೆಯ ಇಳಿಜಾರಿನಲ್ಲಿ ಧುಮುಕಿ ಹರಿದು ಮತ್ತೊಂದು ಬೆಟ್ಟದ ಹಳ್ಳ ಅಲಕನಂದಿಯೊಡನೆ ಸೇರಿದ ನಂತರ, ಇದನ್ನು ಗಂಗಾ ಎಂದು ಕರೆಯಲಾಗುತ್ತದೆ. ಗಂಗಾ ನದಿಯ ಒಟ್ಟು ಉದ್ದ 2,525 ಕಿ.ಮೀ. ಇದು ಭಾಗೀರಥಿ ಮತ್ತು ಹೂಗ್ಲಿ ನದಿಗಳನ್ನು ಸೇರಿ ಉದ್ದಕ್ಕೂ ಬಂಗಾಳ ಕೊಲ್ಲಿಯನ್ನು ಸೇರುವವರೆಗೆ ಅಳತೆ ಮಾಡಿದಾಗ ಅದರ ಉದ್ದ. ಅದು ಕೊಲ್ಲಿಯನ್ನು ಸೇರುವ ಮೊದಲು ಗಂಗಾ ನದಿಯನ್ನು ಸೇರುವ ಪ್ರಧಾನ ಉಪನದಿಗಳು:
  • ಬಲ ಗಡೆಯಲ್ಲಿ ಯಮುನಾ ಮತ್ತು ಸೊನ ಮತ್ತು
  • ಎಡದಿಂದ ರಾಮಗಂಗಾ ಘಾಗ್ರಾ, ಗಂಡಕಿ, ಕೋಸಿ ಮತ್ತು ಮಹಾನಂದ ಉಪನದಿಗಳು.
  • ಚಂಬಲ್ ಮತ್ತು ಬೇತ್ವಾ ಇನ್ನೆರಡು ಪ್ರಮುಖ ಉಪನದಿಗಳಾಗಿವೆ.
  • ಭಾರತದ ಈ ಪ್ರದೇಶದ ಜಲಾನಯನ ಭಾಗದಲ್ಲಿ ಬಹುಪಾಲು ಕೃಷಿ ಭೂಮಿ. ಇದು ಒಟ್ಟು ಪ್ರದೇಶದ 65,57% ಭಾಗ, ಮತ್ತು ನದಿಯ ಜಲಾನಯನದ 3.47% ರಷ್ಟನ್ನು ಸಂಗ್ರಹಿತ ನೀರು(ಜಲಾಶಯ:ಕೆರೆಕಟ್ಟೆಗಳು) ಆವರಿಸಿಕೊಂಡಿದೆ. ಈ ಜಲಾನಯನ ಪ್ರದೇಶ, ಉತ್ತರ ಪ್ರದೇಶದ 80, ಬಿಹಾರದ 40, ಪಶ್ಚಿಮ ಬಂಗಾಳದ 40, ಮಧ್ಯ ಪ್ರದೇಶದ 25, ರಾಜಸ್ಥಾನದ 16, ಝಾರ್ಖಂಡ್`ನ 12, ಹರಿಯಾಣದ 8, ಉತ್ತರಾಖಂಡದ 5, ಛತ್ತೀಸ್ಗಡದ 4, ಹಿಮಾಚಲ ಪ್ರದೇಶದ 2,ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ 7, ಒಟ್ಟು 239 ಲೋಕಸಭಾ ಕ್ಷೇತ್ರಗಳನ್ನು (2009) ಒಳಗೊಂಡಿದೆ.
  • ಸಂಯುಕ್ತ ಗಂಗಾ-ಬ್ರಹ್ಮಪುತ್ರ-ಮೇಘ್ನಾ ಜಲಾನಯನ ಪ್ರದೇಶವು ಭಾರತೀಯ ಒಕ್ಕೂಟದ ಭೂಪ್ರದೇಶದ ಸುಮಾರು ಮೂರನೇ ಒಂದು ಭಾಗವನ್ನು ಆವರಿಸುತ್ತದೆ. ಈ ಜಲಾನಯನ ಪ್ರದೇಶವು ಗಂಗಾ, ಬ್ರಹ್ಮಪುತ್ರ ಹಾಗೂ ಬರಾಕ್ ಉಪ ಜಲಾನಯನಗಳಾಗಿ ಕೂಡಿಕೊಂಡಿದೆ. ಗಂಗಾನದಿಯು ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ ಮತ್ತು ಆಗ ಅದರ ಹೆಸರು ಪದ್ಮಾ ಅಥವಾ ಗಂಗಾ ಅಡಿಯಲ್ಲಿ ಮುಂದುವರಿಯುತ್ತದೆ. ಇದು ಅಂತಿಮವಾಗಿ ಮೇಘನಾ ನದಿಯನ್ನು ಸೇರಿ ಬಂಗಾಳ ಕೊಲ್ಲಿಗೆ ಬೀಳುತ್ತದೆ.[]

ಬ್ರಹ್ಮಪುತ್ರ ನದಿ ಸಮೂಹ

ಬದಲಾಯಿಸಿ
 
ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ಮತ್ತು ಇತರ ನದಿಗಳನ್ನು ತೋರಿಸುವ ಒಂದು ನಕ್ಷೆ.
  • ಬ್ರಹ್ಮಪುತ್ರ ಜಲಾನಯನ ಪ್ರದೇಶವು ಟಿಬೆಟ್ (ಚೀನಾ), ಭೂತಾನ್, ಭಾರತ ಮತ್ತು ಬಾಂಗ್ಲಾದೇಶ ರಾಷ್ಟ್ರಗಳಲ್ಲಿ ಒಟ್ಟು 5,80,000 ಚ.ಕಿ.ಮೀ.. ಪ್ರದೇಶಗಳಲ್ಲಿ ಹರಡಿಕೊಂಡಿದೆ. ಭಾರತದಲ್ಲಿ ಇದು ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಹರಡಿಕೊಂಡಿದೆ.
  • ಇದು ದೇಶದ ಒಟ್ಟು ಭೌಗೋಳಿಕ ವಲಯದಲ್ಲಿ 1,94,413 ಚ.ಕಿ.ಮೀ. ಪ್ರದೇಶವನ್ನು ಹೊಂದಿದ್ದು, ಸುಮಾರು 5.9% ನಷ್ಟು ವ್ಯಾಪಿಸುತ್ತವೆ. ಉತ್ತರಕ್ಕೆ ಹಿಮಾಲಯ, ಪೂರ್ವದಲ್ಲಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಹಬ್ಬಿರುವ ಪಾತ್ಕರಿ ಬೆಟ್ಟಗಳ ಶ್ರೇಣಿ, ದಕ್ಷಿಣದಲ್ಲಿ ಅಸ್ಸಾಂ ಬೆಟ್ಟಗಳ ವ್ಯಾಪ್ತಿ ಇದ್ದು, ಪಶ್ಚಿಮದಲ್ಲಿ ಹಿಮಾಲಯ ಪರ್ವತ ಮತ್ತು ಗಂಗಾ ಜಲಾನಯನ ಪ್ರದೇಶವನ್ನು ಪ್ರತ್ಯೇಕಿಸುವ ಎತ್ತರ ಪ್ರದೇಶಗಳಿಂದ ಸುತ್ತುವರಿಯಲ್ಪಟ್ಟಿದೆ. ಕೈಲಾಶ್ ಪರ್ವತ ಶ್ರೇಣಿಯಲ್ಲಿರುವ ಹಿಮಾಲಯದ 5.150 ಮೀ ಎತ್ತರದ ಕೊಂಗಯುತ್ಸು ಎಂಬ ಸರೋವರದ ದಕ್ಷಿಣದಲ್ಲಿ ಹುಟ್ಟುತ್ತದೆ. ಅಲ್ಲಿಂದ ಬ್ರಹ್ಮಪುತ್ರ ನದಿಯು ಒಟ್ಟು 2,900 ಕಿಮೀ ಉದ್ದದ ಹರಿವು ಹೊಂದಿದ್ದು . ಭಾರತದಲ್ಲಿ ಇದು 916 ಕಿ.ಮೀ. ಉದ್ದದ ಹರಿವು ಹೊಂದಿದೆ ಬಲದಿಂದ ಸೇರುವ ನದಿಯ ಪ್ರಧಾನ ಉಪನದಿಗಳು ಲೋಹಿತ್, ದಿಬಂಗ್, ಸಬನ್ಸರಿ, ಜಯಬರಾಲಿ, ಧನಶ್ರೀ,ಮಾನಸ್, ತೋರ್ಸಾ ಮತ್ತು ತೀಸ್ತಾ ; ಎಡದಿಂದ ಬುರಿಹಿದಿಹಿಂಗ್, ದೇಸಾಂಗ್, ದಿಖೋವ್, ಧನಶ್ರೀ ಮತ್ತು ಕೋಪಿಲಿ ಇದನ್ನು ಸೇರುತ್ತವೆ.
  • ಜಲಾನಯನ ಪ್ರದೇಶದ ಬಹುಪಾಲನ್ನು ಎಂದರೆ ಸುಮಾರು 55.48% ರಷ್ಟು ಅರಣ್ಯ ಪ್ರದೇಶ ಮತ್ತು 5,79% ಭಾಗ ನೀರಿನ ಸಂಗ್ರಹ ಪ್ರದೇಶ ಆವರಿಸಿಕೊಂಡಿದೆ. ಜಲಾನಯನ ಪ್ರದೇಶವು 22 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ (2009). ಅವು ಅಸ್ಸಾಂನ 12, ಪಶ್ಚಿಮ ಬಂಗಾಳ-4; ಅರುಣಾಚಲ ಪ್ರದೇಶದ -2;, ಮೇಘಾಲಯದ -2, ಸಿಕ್ಕಿಂನ 1 ಮತ್ತು ನಾಗಾಲ್ಯಾಂಡ್ ನ 1.
  • ಯಾರ್ಲುಂಗ್ ಟ್ಸಾಂಗ್ಪೋ ( ಬ್ರಹ್ಮಪುತ್ರ ) ಉತ್ತರ ಹಿಮಾಲಯದ ಕೈಲಾಸಪರ್ವತದ ಬಳಿ ಜೀಮಾ ಯಾಂಗ್ಜಾಂಗ್ ಹಿಮನದಿಯಲ್ಲಿ ಹುಟ್ಟುತ್ತದೆ. ಅದು 5150 ಮೀ ಎತ್ತರದಲ್ಲಿದೆ. ಅಲ್ಲಿ ಹುಟ್ಟಿದ ಅದು ಟಿಬೆಟ್ (ಚೀನಾ), ಭಾರತ ಮತ್ತು ಬಾಂಗ್ಲಾದೇಶ ಮೂಲಕ 2900 ಕಿ.ಮೀ. ಹರಿದು ಗಂಗಾ ಸೇರುತ್ತದೆ. ನದಿ ಬ್ರಹ್ಮಪುತ್ರ ನದಿ ಭಾರತದಲ್ಲಿ ಜಲ ಸಂಗ್ರಹಣಾ ಪ್ರದೇಶದಲ್ಲಿ, ಅದರ ಉತ್ತರ ಮತ್ತು ದಕ್ಷಿಣ ತೀರಗಳಲ್ಲಿ ಹಲವಾರು ಉಪನದಿಗಳನ್ನು ಪಡೆಯುತ್ತದೆ.
  • ಬ್ರಹ್ಮಪುತ್ರ ಸುಮಾರು ೧೭೦೦ ಕಿ.ಮೀ.ವರೆಗೆ ಟಿಬೆಟ್ ನಲ್ಲಿ ಪೂರ್ವಾಭಿಮುಖವಾಗಿ ಹರಿಯುವುದು. ಇಲ್ಲಿ ಇದು ಸರಾಸರಿ ಸಮುದ್ರಮಟ್ಟದಿಂದ ಸುಮಾರು ೪೦೦೦ ಮೀ. ಎತ್ತರದಲ್ಲಿ ಹರಿಯುವುದು. ಹೀಗೆ ಬ್ರಹ್ಮಪುತ್ರ ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಹರಿಯುವ ಮಹಾನದಿಯಾಗಿದೆ. ತನ್ನ ಪಾತ್ರದ ಅತ್ಯಂತ ಪೂರ್ವದ ಅಂಚಿನಲ್ಲಿ ಈ ನದಿಯು ನಮ್ಚಾ ಬರ್ವಾ ಪರ್ವತವನ್ನು ಬಳಸಿ ಮುಂದೆ ಯಾರ್ಲುಂಗ್ ಟ್ಸಾಂಗ್ಪೋ ಕೊಳ್ಳವನ್ನು ಸೃಷ್ಟಿಸಿದೆ. ಈ ಕೊಳ್ಳವು ಜಗತ್ತಿನ ಅತಿ ಆಳದ ಕೊಳ್ಳವೆನ್ನಲಾಗುತ್ತದೆ.
  • ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ಎರಡು ಶಾಖೆಗಳಾಗಿ ಒಡೆದು ಹಿರಿದಾದ ಶಾಖೆಯು ಜಮುನಾ ಎಂಬ ಹೆಸರನ್ನು ಹೊಂದಿ ನೇರ ದಕ್ಷಿಣಕ್ಕೆ ಹರಿದು ಮುಂದೆ ಗಂಗಾ ನದಿಯನ್ನು ಕೂಡುತ್ತದೆ. ಕಿರಿಯ ಶಾಖೆಯು ಬ್ರಹ್ಮಪುತ್ರ ಎಂಬ ಹೆಸರಿನಿಂದ ಆಗ್ನೇಯಕ್ಕೆ ಹರಿದು ಮೇಘನಾ ನದಿಯನ್ನು ಸೇರುತ್ತದೆ. ಮುಂದೆ ಚಾಂದ್ ಪುರದ ಬಳಿ ಈ ಎರಡೂ ಒಗ್ಗೂಡಿ ಬಂಗಾಳ ಆಖಾತವನ್ನು ತಲುಪುತ್ತವೆ. ಹೀಗೆ ಹಲವು ನದಿಗಳ ಸಂಗಮಗಳುಂಟಾಗಿ ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ವಿಶ್ವದಲ್ಲಿ ಅತಿ ಹಿರಿದಾದ ಮುಖಜಭೂಮಿ ಸೃಷ್ಟಿಯಾಗಿದೆ. ಇದಕ್ಕೆ ಗಂಗಾ ಮುಖಜ ಭೂಮಿ ಎಂಬ ಹೆಸರು.

ಬ್ರಹ್ಮಪುತ್ರ ನದಿಯ ಮುಖ್ಯಾಂಶಗಳು

ಬದಲಾಯಿಸಿ
 
ಭಾರತದ ನದಿಗಳು
ಬ್ರಹ್ಮಪುತ್ರಾ ನದಿಯ ಉದ್ದ (ಕಿಮಿ) 916 (ಭಾರತದಲ್ಲಿ)
ಸಂಗ್ರಹಣಾ ಪ್ರದೇಶ (Sq.km.) 194413
ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) 537240
ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) 24000
ಪೂರ್ಣಗೊಂಡಿದೆ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 1710.0
ನಿರ್ಮಾಣ ಅಡಿಯಲ್ಲಿ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 690.0
ಯೋಜನೆಗಳು ಒಟ್ಟು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 2400.00
ಹೈಡ್ರಾಲಾಜಿಕಲ್ ವೀಕ್ಷಣೆ ಕೇಂದ್ರಗಳು ನಂ (CWC) 108
ಪ್ರವಾಹ ಫೋರ್ಕಾಸ್ಟಿಂಗ್ ಸ್ಟೇಷನ್ಸ್ ನಂ (CWC) 27

ಉಪನದಿಗಳು

ಬದಲಾಯಿಸಿ
ಉತ್ತರ ತೀರಸೇರುವ ಉಪನದಿಗಳು ದಕ್ಷಿಣ ತೀರಸೇರುವ ಉಪನದಿಗಳು
ಚಿಟಜಾಐದಾಲ್ ನೊವಾ
ಸುಬನ್ ಸಿರಿ ಬುರಿದೆಹಿಂಗ
ಲಂಚ್ ದೇಬಾಂಗ
ಕಾಮೆಂಗ್ (ಅಸ್ಸಾಂ-ಜೈಬರಲಿ) ದಿಖೋವ್
ವರ್ ಧನಶ್ರೀ (ಉತ್ತರ) ವರ್ ಧನಶ್ರೀ (ಸಿ)
ಪುತಿಮರಿ ಕೊಪಿಲೊವ್
ಚಿಪಗಲಡಿಯ ಹ್ಯಾರೋ
ಮಾನಸ್ ದುಧ್ನಾಯ್
ಚಂಪಾಮತಿ ಕೃಷ್ಠಾಯ್
ಸರಲಭಂಗ
ಆಯೀ
ಕಾರ್ಪಸ್
  • ಇವುಗಳ ಜೊತೆಗೆ, ಆರು ಉಪನದಿಗಳು ತೀಸ್ತಾ ಸಂಕೋಶ್, ರಾಯದಕ್-I, ರೈಡ್ II, ಮುಂಡ ಮತ್ತು ಜಾಲ್ದಕಾ ಸಹ ಬಂಗಾಳದ ವಾಯವ್ಯ (ಉತ್ತರ-ಪಶ್ಚಿಮ)ದಿಂದ ಬ್ರಹ್ಮಪುತ್ರ ಮುಖ್ಯಹರಿವಿಗೆ ಸೇರುತ್ತವೆ.

ಕೆಲವು ಉಪನದಿಗಳ ವಿವರ

ಬದಲಾಯಿಸಿ
ಎ) ದಿನ ನದಿ
  • ಯಾರ್ಲಿಂಗ್ ಜಂಗ್ಲೊ ಎಂದು ಚೀನಾದಲ್ಲಿ ಕರೆಯಲ್ಪಡುವ ಸಿಯಾಂಗ್, ಬ್ರಹ್ಮಪುತ್ರದ ಪ್ರಮುಖ ಘಟಕ ನದಿ. ಅದು 5300 ಮೀ ಎತ್ತರದಲ್ಲಿ ಹಿಮಾಲಯದ ಕೈಲಾಶ್ ಶ್ರೇಣಿಯ ಹಿಮನದಿಗಳ ದ್ರವ್ಯರಾಶಿಯಲ್ಲಿ ಹುಟ್ಟಿ ಚೀನಾದಲ್ಲಿ ಹರಿಯುತ್ತದೆ. ನದಿ ಟಿಬೆಟ್ ಪ್ರಸ್ಥಭೂಮಿಯ ಮೂಲಕ ಸುಮಾರು 1600 ಕಿಮೀ ಪೂರ್ವಕ್ಕೆ ಹರಿಯುತ್ತದೆ. ನದಿ ಭಾರತ ಸೇರುವ ಮೊದಲು ಸಿಯಾಂಗ್ ಅಥವಾ ದಿಹಾಂಗ್ ಹಿಮಾಲಯದ ಪೂರ್ವಭಾಗದ ತುತ್ತತುದಿಯಲ್ಲಿ ಅಡ್ಡಲಾಗಿ ಆಳವಾದ ಕಣಿವೆಯ ಮೂಲಕ ಹರಿಯುತ್ತದೆ. ನದಿ ನಂತರ ಪಸಿಘತ್ ತಲುಪಲು 230 ಕಿ.ಮೀ. ದಕ್ಷಿಣ / ದಕ್ಷಿಣ ಪೂರ್ವದಿಕ್ಕಿನ ದಿಕ್ಕಿನಲ್ಲಿ ಅರುಣಾಚಲ ಪ್ರದೇಶದಲ್ಲಿ ಹರಿಯುತ್ತದೆ. ಇತರ ಎರಡು ನದಿಗಳು : ಲೋಹಿತ್ ಮತ್ತು ದಿಬಂಗ್ 30 ಕಿ.ಮೀ ಹರಿದು ಪಸಿಘಟ್ ನಲ್ಲಿ ಸಿಯಾಂಗ್ ಸೇರಿ .ಪ್ರಬಲ ಬ್ರಹ್ಮಪುತ್ರ ನದಿಯನ್ನು ರೂಪಿಸುತ್ತವೆ
(ಬಿ) ಸಬನ್ಸರಿ ನದಿ
  • ಸಬನ್ಸರಿ ನದಿಯು ಟಿಬೆಟ್ ಪರ್ವತಗಳಲ್ಲಿ ಹುಟ್ಟುತ್ತದೆ. ಅದರ ಮೂಲದ ಬಳಿ, ಹೊಳೆಗಳು ಒಂದು ದೊಡ್ಡ "ಚು" ಕುಟುಂಬ ಹೊಳೆಗಳು ಮುಖ್ಯ ಕಣಿವೆಯಲ್ಲಿ ಹರಿಯುತ್ತವೆ. ಈ "ಚು" ಸಮೂಹಕ್ಕೆ ಸೇರಿದ ‘’ಸಿಕುಂಗ್ ಚು" ಸಬನ್ಸರಿ ನದಿಯ ಪ್ರಮುಖ ಪ್ರವಾಹಗಳ ಮೂಲವಾಗಿರುತ್ತದೆ. ಸಬನ್ಸರಿ ನದಿಯ ಒಟ್ಟು ಉದ್ದ ಸುಮಾರು 442 ಕಿ.ಮೀ. ಅದರಲ್ಲಿ 192 ಕಿಮೀ ಈಗ ಅರುಣಾಚಲ ಪ್ರದೇಶ ಎಂದು ಮರುನಾಮಕರಣ ಹೊಂದಿದ ನೇಫಾದಲ್ಲಿದೆ. ಅಸ್ಸಾಂನಲ್ಲಿ 190 ಕಿಮೀ ಮತ್ತು ಉಳಿದ ಭಾಗ ಟಿಬೆಟ್ ನಲ್ಲಿದೆ.
(ಸಿ) ಕಾಮೆಂಗ್ ಅಥವಾ ಜಯಬಹರಾಲಿ ನದಿ
  • ಕಾಮೆಂಗ್ ನದಿ ಸಂಭಾವ್ಯವಾಗಿ ಟಿಬೆಟ್ ಪ್ರದೇಶದಲ್ಲಿ ಹಿಮಾಲಯದಲ್ಲಿ ಗಡಿ ಗುರುತಿಸದ ಎ.ಕೆ.ಎ & ಡಿ.ಯು.ಎಪ್`ಎಫ್`ಎ. ಬೆಟ್ಟಗಳಲ್ಲಿ ಜನಿಸುವುದು. ಕಾಮೆಂಗ್ ನದಿ ಆಗ್ನೇಯ (ದಕ್ಷಿಣ-ಪಶ್ಚಿಮ) ದಿಕ್ಕಿನಲ್ಲಿ 55 ಕಿ.ಮೀ. ಹರಿದು ಭಾಲುಕ್`ಪಾಂಗ್ ತಲುಪಲು ಅದರ ಗುಡ್ಡಗಾಡು ಪ್ರಯಾಣ ಕೊನೆಗೊಳ್ಳುತ್ತದೆ; ನದಿ ಸುಮಾರು 250 ಕಿ.ಮೀ. ಉದ್ದವಿದೆ. (ಅರುಣಾಚಲ ಪ್ರದೇಶದಲ್ಲಿ 190 ಕಿಮೀ ಅಸ್ಸಾಂನಲ್ಲಿ 60 ಕಿ)
(ಡಿ) ಧನಶ್ರೀ (ಸಿ) ನದಿ
  • ಧನಶ್ರೀ (ಎಸ್) ನಾಗಾಲ್ಯಾಂಡ್`ನ ಆಗ್ನೇಯ (ನೈಋತ್ಯ) ಮೂಲೆಯಲ್ಲಿ ಲಾಶಿಯಾಂಗ್` ಶಿಖರದ ತಲದಲ್ಲಿ ಹುಟ್ಟುತ್ತದೆ. ದಿಮಾಪುರ್` ವರೆಗೆ ಅದರ ಆಕರದಿಂದ ಧನಶ್ರೀಯು ಕಚಾರ್, ನಗೊವಾನ್`ಮತ್ತು ನಾಗಾಲ್ಯಾಂಡ್ ಜಿಲ್ಲೆಗಳ ನಡುವೆ ಗಡಿರೇಖೆಯನ್ನು ನಿರೂಪಿಸುತ್ತದೆ. ದಿಮಾಪುರ್` ನಂತರ ನದಿ ಸೇರುವಂತಹ ಮತ್ತು ಅಸ್ಸಾಂನ ಕರ್ಬಿಅಲಾಂಗ್` ಮತ್ತು ಗೊಲಘಾಟ್` ಜಿಲ್ಲೆಗಳಲ್ಲಿ ಹರಿಯುತ್ತದೆ. ನದಿ ಸುಮಾರು 354 ಕಿಮೀ ಉದ್ದವಿದೆ.

ಜಲ ಸಂಭಾವ್ಯತೆ ಮತ್ತು ಜಲವಿದ್ಯುತ್ ಉತ್ಪಾದನೆ

ಬದಲಾಯಿಸಿ
  • ಬ್ರಹ್ಮಪುತ್ರ ಉಪ ಜಲಾನಯನ ಪ್ರದೇಶ ಹೇರಳವಾಗಿ ಹೈಡ್ರೋಪವರ್ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚಿನ ಮೌಲ್ಯಮಾಪನ ಪ್ರಕಾರ ಜಲಾನಯನ ಹೈಡ್ರೋಪವರ್ ಸಂಭಾವ್ಯ 66065 ಮೆವ್ಯಾ ಆಗಿದೆ. ದಿನಾಂಕ 01/08/2013 ಕ್ಕೆ ಒಟ್ಟಾರೆ 2120 ಮೆವ್ಯಾ ಸಾಮಥ್ರ್ಯ ವಿದ್ಯುತ್ತನ್ನು ಉತ್ಪಾದಿಸಿ ಉಪಯೋಗದಲ್ಲಿದೆ. ಮತ್ತು 5292,00 ಮೆವ್ಯಾ ಒಟ್ಟು ಸಾಮರ್ಥ್ಯದ ಅಳವಡಿಕೆಯ ನಿರ್ಮಾಣ ಹಂತದಲ್ಲಿದೆ. ಈ ಯೋಜನೆಗಳ ಒಟ್ಟಿನ ಮೌಲ್ಯಮಾಪನ ಸಾಮರ್ಥ್ಯ 11.33% ಪ್ರಮಾಣ ಮಾತ್ರ. ಆದ್ದರಿಂದ, ಈ ಜಲಾನಯನದ ಜಲವಿದ್ಯುತ್ (ಹೈಡ್ರೋಪವರ್)ಉತ್ಪಾದನಾ ಸಂಭಾವ್ಯಶಕ್ತಿಯ ದೊಡ್ಡ ಪ್ರಮಾಣ ವ್ಯರ್ಥವಾಗಿ ಉಪಯೋಗಿಸದೆ ಉಳಿದಿದೆ.
  • ಹೈಡ್ರಾಲಿಕ್ ನೆಟ್ವರ್ಕ್;
  • ಉಪ ಜಲಾನಯನದ ಪರಿಶೀಲನಾ ಕಾರ್ಯವನ್ನು ಜಲವಿಜ್ಞಾನದ ಕೇಂದ್ರೀಯ ಜಲ ಆಯೋಗ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸುತ್ತವೆ. ಜಲಾನಯನದ 108 ಪರಿಶೀಲನಾ ಕೇಂದ್ರಗಳಿವೆ. ಜೊತೆಗೆ, 80 ಸ್ಥಳಗಳಲ್ಲಿ ದತ್ತಾಂಶ (ಡೇಟಾ) ಅಳೆಯುವ 25 ಕೇಂದ್ರಗಳಿವೆ. ಜಲ ಹರಿವು (ವಿಸರ್ಜನೆ) ಮತ್ತು ಕೆಸರು, ಇವುಗಳ 15 ಮಾಪನ ಕೇಂದ್ರಗಳನ್ನು ರಾಜ್ಯ ಸರ್ಕಾರಗಳು ಮತ್ತು ಬ್ರಹ್ಮಪುತ್ರ ಬೋರ್ಡ್`ನಿರ್ವಹಿಸುತ್ತದೆ. ಬಿಡುಗಡೆಯಾದ ನೀರು ಅಳೆಯುವ ಕೇಂದ್ರೀಯ ಜಲ ಆಯೋಗ ಉಪ ಜಲಾನಯನ ಪ್ರದೇಶದಲ್ಲಿ 27 ಪ್ರವಾಹ ಮುಂದಾಲೋಚನೆ ಕೇಂದ್ರಗಳನ್ನು ನಡೆಸುತ್ತದೆ.[]

ಸಿಂಧೂ ನದಿ ಸಮೂಹ

ಬದಲಾಯಿಸಿ
 
ಸಿಂಧೂ ನದಿ
 
26-8-2010 ರಿಂದ ಸೆಪ್ಟೆಂಬರ್ 2010ರಲ್ಲಿ,ಸಿಂಧೂ ಪ್ರವಾಹದಲ್ಲಿ ಕನಿಷ್ಠ 1400000 ಎಕರೆ (570,000 ಹೆ) ಬೆಳೆಜಮೀನಿನ ನಾಶ, ಮತ್ತು ಸಿಂಧ್ ದಕ್ಷಿಣ ಪ್ರಾಂತ್ಯದಲ್ಲಿ. ಎರಡು ಸಾವಿರ ಜನರು ಸತ್ತಿದ್ದರು ಮತ್ತು ಪ್ರವಾಹ ಆರಂಭವಾದಂದಿನಿಂದ ಒಂದು ದಶಲಕ್ಷ ಮನೆಗಳು ನಾಶವಾಗಿತ್ತು.
  • ಸಿಂಧೂ ನದಿ (ಆಂಗ್ಲ ಭಾಷೆ: ಇಂಡಸ್ ; ಟಿಬೆಟ್ ಭಾಷೆ: ಸೆಂಗೆ ಚೂ;) ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಹರಿಯುವ ಒಂದು ಪ್ರಮುಖ ನದಿ. ಟಿಬೆಟ್ಟಿನ ಪ್ರಸ್ಥಭೂಮಿಯಲ್ಲಿರುವ ಮಾನಸಸರೋವರದ ಹತ್ತಿರ ಉಗಮಿಸುವ ಈ ನದಿ ಕಾಶ್ಮೀರದ ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು, ನಂತರ ದಕ್ಷಿಣ ಮುಖಕ್ಕೆ ತಿರುಗಿ ಇಡಿ ಪಾಕಿಸ್ತಾನದ ಉದ್ದಕ್ಕೆ ಹರಿದು, ಕರಾಚಿ ನಗರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ವಿವರ
  • ಸಿಂಧೂ ನದಿಯನ್ನು ಟಿಬೆಟ್ಟಿನಲ್ಲಿ ಮತ್ತು ಸಂಸ್ಕೃತದಲ್ಲಿ ಸಿಂಧು ಸಿಂಧಿ ಸಿಂಧು ಅಥವಾ ಮೆಹರಾನ್ ಎಂದು ಕರೆಲಾಗುತ್ತದೆ. ; ಇದು ದಕ್ಷಿಣ ಏಷ್ಯಾದಲ್ಲಿ ದೊಡ್ಡ ಟ್ರಾನ್ಸ್-ಹಿಮಾಲಯನ್ ನದಿ. ಈ ನದಿ 1,800 ಮೈಲಿ (2,900 ಕಿ.ಮೀ.) ಉದ್ದವಿದ್ದು, ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 450,000 ಚದರ ಮೈಲಿ (1,165,000 ಚದರ ಕಿ.ಮೀ.), ಅದರಲ್ಲಿ 175,000 ಚದರ ಮೈಲಿ (453,000 ಚದರ ಕಿ.ಮೀ) ಪ್ರದೇಶ ಹಿಮಾಲಯ ಮತ್ತು ತಪ್ಪಲಿನಲ್ಲಿ ಇದೆ. ಮತ್ತು ಉಳಿದದ್ದು ಪಾಕಿಸ್ತಾನದ ಸ್ವಲ್ಪ ಮಳೆ ಬೀಳುವ ಬಯಲು ಪ್ರದೇಶ .
  • ಸಿಂಧೂ ನದಿ ಟಿಬೆಟ್`ನ ಕೈಲಾಶ್ ಶ್ರೇಣಿಯ ಉತ್ತರ ಇಳಿಜಾರಿನಲ್ಲಿ ಮಾನಸ ಸರೋವರದ ಬಳಿ ಹುಟ್ಟುತ್ತದೆ. ಇದು ಟಿಬೆಟ್ ಮೂಲಕ ವಾಯುವ್ಯದ ಉತ್ತರ ದಿಕ್ಕಿನ ಮಾರ್ಗವನ್ನು ಅನುಸರಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಪ್ರದೇಶವನ್ನು ಪ್ರವೇಶಿಸುವ ಇದು ಈ ಭಾಗದಲ್ಲಿ ಒಂದು ಚಿತ್ರಸದೃಶ ಕಣಿವೆಗಳನ್ನು ರೂಪಿಸುತ್ತದೆ.
  • ಇದರ ಹಲವಾರು ಉಪನದಿಗಳು - ಝಾಸ್ಕರ್` ಶೈಯೋಕ್`, ನುಬ್ರಾ ಮತ್ತು ಹುನ್ಜ ಕಾಶ್ಮೀರ ಪ್ರದೇಶದಲ್ಲಿ ಇದನ್ನು ಸೇರುವುದು. ಇದು ಲಡಾಖ್ ಬಾಲ್ಟಿಸ್ತಾನ್ ಮತ್ತು ಗಿಲ್ಗಿಟ್ ಪ್ರದೇಶಗಳ ಮೂಲಕ ಹರಿದು ಲಡಾಖ್ ಮತ್ತು ಝಸ್ಕರ` ಪರ್ವತ ಶ್ರೇಣಿಗಳ ನಡುವೆ ಅಟ್ಟಾಕ್ ಬಳಿ 5181 ಮೀ ಆಳವಾದ ಕಣಿವೆಯ ಮೂಲಕ ಸಾಗುತ್ತದೆ. ಇದು ನಂಗಾ ಪರ್ವತದ ಉತ್ತರದಲ್ಲಿರುವ ಕಣಿವೆ ಮೂಲಕ ಹಿಮಾಲಯ ದಾಟಿ, ನಂತರ ಆಗ್ನೇಯ (ನೈಋತ್ಯX) ದಿಕ್ಕಿನಲ್ಲಿ ಬಾಗಿ ಪಾಕಿಸ್ತಾನವನ್ನು ಸೇರುತ್ತದೆ. ಇದು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಅನೇಕ ಉಪನದಿಗಳನ್ನು ಹೊಂದಿದೆ. ನಂತರ ಇದು ಕರಾಚಿ ಬಳಿ ಅರೇಬಿಯನ್ ಸಮುದ್ರಕ್ಕೆ ಹರಿಯುತ್ತದೆ. ಮೂಲದಿಂದ ಅಲ್ಲಿಯ ಸಮುದ್ರ ಸೇರುವ ಬಿಂದುವಿಗೆ ಒಟ್ಟು ಉದ್ದ 2880 ಕಿ.ಮೀ. ಭಾರತದಲ್ಲಿ ಸಿಂಧೂ ನದಿಯ ಮುಖ್ಯ ಉಪನದಿಗಳು ಝೀಲಂ, ಚೆನಾಬ್ ರವಿ, ಬಿಯಾಸ್, ಸಟ್ಲಜ್.
  • ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ನದಿಗಳು ಹಿಮದಿಂದ ಪೂರಣವಾಗುತ್ತದೆ. ಅವರ ಹರಿವು ವರ್ಷದ ವಿವಿಧ ಸಮಯಗಳಲ್ಲಿ ಬದಲಾಗುತ್ತದೆ: ನದೀ ಹರಿವು ಚಳಿಗಾಲದ ತಿಂಗಳುಗಳಲ್ಲಿ (ಫೆಬ್ರವರಿ ಡಿಸೆಂಬರ್) ಅವಧಿಯಲ್ಲಿ ಕನಿಷ್ಠ ಆಗಿರುತ್ತದೆ; ವಸಂತಕಾಲದಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ (ಜೂನ್ ಮಾರ್ಚ್) ನೀರಿನ ಹರಿವಿನಲ್ಲಿ ಏರಿಕೆ ಇರುತ್ತದೆ; ಪ್ರವಾಹಗಳು ಮಳೆಗಾಲದಲ್ಲಿ (ಜುಲೈನಿಂದ ಸೆಪ್ಟೆಂಬರ್) ಸಂಭವಿಸಬಹುದು. ಕೆಲವೊಮ್ಮೆ ವಿನಾಶಕಾರಿ ತತ್ಕ್ಷಣದ ಪ್ರವಾಹ ಇರುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳು ತಮ್ಮ ಸಂಗ್ರಹಾಗಾರಗಳ ಬೆಟ್ಟದ ಮೇಲಿನ ಭಾಗಗಳಿಂದ ತಮ್ಮ ನೀರನ್ನು ಪಡೆಯುತ್ತವೆ. ಆದ್ದರಿಂದ, ಅವುಗಳ ಭರಪೂರ ಹರಿವು ತಪ್ಪಲಿನಲ್ಲಿ ಗರಿಷ್ಠ; ಬಯಲು ಪ್ರದೇಶದಲ್ಲಿ ಜಲಪೂರಣ ಮತ್ತು ಬಾಷ್ಪೀಕರಣ ಮತ್ತು ಸೋರುವಿಕೆಯಿಂದ ಗಣನೀಯವಾಗಿ ಮೇಲ್ಮೈ ಹರಿವಿನ ಪ್ರಮಾಣವು ಕಡಿಮೆ. ನೀರಿನ ಮುಂಗಾರು ತಿಂಗಳ ನಂತರದ ಸೆಪ್ಟಂಬರ್ ನವೆಂಬರ್`ಅವಧಿಯಲ್ಲಿ ಮಳೆ ಮೂಲಕ ಹರಿವು ಹೆಚ್ಚಾಗುತ್ತದೆ. ಸಿಂಧೂವಿನ ನೀರಿನ ಮಟ್ಟವು ಡಿಸೆಂಬರ್ ಮಧ್ಯ ದಿಂದ ಫೆಬ್ರವರಿ ಮಧ್ಯದವರೆಗೆ ಹರಿವು ಕಡಿಮೆ ಆಗುವುದು. ಈ ನಂತರ ನದಿ, ಮಾರ್ಚ್ ಕೊನೆಯಲ್ಲಿ ಪ್ರವಾಹ ನಿಧಾನವಾಗಿ ಜಾಸ್ತಿಯಾಗುತ್ತದೆ. ತದನಂತರ ನೀರಿನ ಮಟ್ಟವು ಸಾಮಾನ್ಯವಾಗಿ ಮಧ್ಯ ಜುಲೈನಲ್ಲಿ ಮತ್ತು ಆಗಸ್ಟ್`ನಲ್ಲಿ ನೀರಿನ ಮಟ್ಟ ಏರಲು ಆರಂಭವಾಗುತ್ತದೆ. ನದಿ ನಂತರ ಕ್ರಮೇಣ ಅಕ್ಟೋಬರ್ ಆರಂಭದವರೆಗೆ ವೇಗವಾಗಿ ನೀರಿನ ಮಟ್ಟ ಕಡಿಮೆಯಾಗುತ್ತದೆ . ಝೀಲಂ, ಚೆನಾಬ್ ರವಿ, ಬಿಯಾಸ್, ಸಟ್ಲಜ್ ಸಿಂಧೂ ನದಿಯ ಇತರ ಪ್ರಮುಖ ಉಪನದಿಗಳು.


|- ! ವಿವರ||ಅಂಕೆ-ಅಂಶ |- |ಸಿಂಧೂ ನದಿಯ ಉದ್ದ (ಕಿಮಿ) || 1114 (ಭಾರತದಲ್ಲಿ) |- | ಸಂಗ್ರಹಣಾ ಪ್ರದೇಶ (Sq.km.) || 321289 |- | ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) || 73310 |- | ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) || 46000 |- | ಪೂರ್ಣಗೊಂಡ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 16222.0 |- | ನಿರ್ಮಾಣ ಅಡಿಯಲ್ಲಿ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 100.00 |- | ಯೋಜನೆಗಳು ಒಟ್ಟು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 16322.00 |- | ಜಲವಿಜ್ಞಾನದ ವೀಕ್ಷಣೆ ಕೇಂದ್ರಗಳು CWC ಯವು, ಸಂಖ್ಯೆ || 26 |- |ಪ್ರವಾಹ ಮುನ್ಸೂಚನಾ ಕೇಂದ್ರಗಳು ಸಂಖ್ಯೆ || 0 |- |}

ಅಭಿವೃದ್ದಿ ಮತ್ತು ಇತರೆ ವಿಷಯ

ಬದಲಾಯಿಸಿ
  • ಸಿಂಧೂ ಜಲಾನಯನ 11,65,500 ಚದರ. ಕಿಮೀ ಪ್ರದೇಶವನ್ನು ವ್ಯಾಪಿಸುತ್ತವೆ ಮತ್ತು ಟಿಬೆಟ್, ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನಗಳಲ್ಲಿ ಹರಡಿದೆ. ಭಾರತದಲ್ಲಿ ಜಲಾನಯನ ಪ್ರದೇಶ 321289 ಚದರ. ಕಿಮೀ . ಇದು ದೇಶದ ಒಟ್ಟು ಭೌಗೋಳಿಕ ವಲಯದಲ್ಲಿ ಸುಮಾರು 9.8% ಆಗಿದೆ.
 
ಜವಾಹರಲಾಲ್ ನೆಹರು ನಂಗಲ್ ಜಲವಿದ್ಯುತ್'ಉತ್ಪಾದನಾ ಕಾಲುವೆಯನ್ನು ಪರಿಶೀಲಿಸುತ್ತಿರುವುದು: 8 ನವೆಂಬರ್ 1953:ಮೊದಲ ಪಂಚವಾರ್ಷಿಕ ಯೋಜನೆ.
  • ಜಲಾನಯನ ಪ್ರದೇಶದ ಬಹುಪಾಲನ್ನು ಎಂದರೆ ಒಟ್ಟು ಪ್ರದೇಶದ 35.8% ರಷ್ಟು ಕೃಷಿ ಭೂಮಿ ಮತ್ತು ಜಲಾನಯನ ಪ್ರದೇಶದ 1. 85% ಗೆ ನೀರಿನ ಸಂಗ್ರಹಣೆ ಆವರಿಸಿಕೊಂಡಿದೆ. ಜಲಾನಯನ ಪ್ರದೇಶ 32 ಲೋಕಸಭೆ ಕ್ಷೇತ್ರಗಳಿಗೆ (2009) ಹರಡಿಕೊಂಡಿದೆ, ಪಂಜಾಬ್ 13,; ಜಮ್ಮು ಮತ್ತು ಕಾಶ್ಮೀರದ,4(7?) ; ಹಿಮಾಚಲ ಪ್ರದೇಶ 3 ಮತ್ತು ಹರ್ಯಾಣ 3, ರಾಜಸ್ಥಾನ 3 ಮತ್ತು ಚಂಡೀಘಢ 1 . ಯೋಜನೆ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಮತ್ತು ಪೂರ್ಣಗೊಂಡ ಪ್ರಮುಖ ಯೋಜನೆಗಳು ಭಾಕ್ರಾ-ನಂಗಲ್, ಬಿಯಾಸ್ ಯೋಜನೆ, ಮತ್ತು ಹರಿಕೆ ಬ್ಯರೇಜ್ ಸೇರಿವೆ. ರಾಜಸ್ಥಾನ ಕಾಲುವೆ, ಥೀಯಿನ್ ಅಣೆಕಟ್ಟು, ಸಟ್ಲೆಜ್-ಯಮುನಾ ಲಿಂಕ್ ಕಾಲುವೆ ಮತ್ತು ರಾವಿ ತಾವಿ ಏತ ನೀರಾವರಿ ಇವು ಪ್ರಸ್ತುತ ಜಲಾನಯನ ಮೇಲ್ಮೈ ನೀರಿನ ಬಳಕೆಯಲ್ಲಿ ನಿರ್ಮಾಣ ಅಡಿಯಲ್ಲಿ ಇರುವ ಪ್ರಮುಖ ಯೋಜನೆಗಳು. ಜಲಾನಯನ ಪ್ರದೇಶದ ಮೇಲ್ಮೈ ನೀರಿನ ಸರಾಸರಿ ಪ್ರಮಾಣ 40-42 ಘನ ಕಿಮೀ ಅಂದಾಜು ಮಾಡಲಾಗಿದೆ . ಇದು ಪ್ರಯೋಜನಕ್ಕೆ ಮೇಲ್ಮೈ ನೀರಿನ ಸಂಭಾವ್ಯ 87% ಆಗಿದೆ. ಜಲಾನಯನ ಪ್ರದೇಶದ ನೀರನ್ನು ಉಪಯೋಗಿಸಿಕೊಳ್ಳಬಲ್ಲ ಅಂತರ್ಜಲ ಸುಮಾರು 71% ಸಹ ಉಪಯೋಗಿಸಲಾಗಿದೆ. , ಪೂರ್ವ ನದಿಗಳ ನೀರಿನ ಬಳಕೆ 1960 ರ ಒಡಂಬಡಿಕೆಯ ಪ್ರಕಾರ, ಸಿಂಧೂ ವಾಟರ್ ಒಡಂಬಡಿಕೆಯ ವಿವಿಧ ಅವಕಾಶಗಳಲ್ಲಿ ನಿರ್ವಹಿಸಲ್ಪಡುತ್ತದೆ. ಅವುಗಳೆಂದರೆ, ರವಿ, ಬಿಯಾಸ್, ಸಟ್ಲೇಜ್, ಲಭ್ಯವಿರುವ ನೀರನ್ನು ಭಾರತದ ಅನಿರ್ಬಂಧಿತ ಉಪಯೋದಕ್ಕೆ ಇರಬೇಕು. ಸಿಂಧೂ ನೀರು ಹಂಚಿಕೆ ಒಪ್ಪಂದದ ಪ್ರಕಾರ ಭಾರತ ಪಶ್ಚಿಮ ನದಿಯಿಂದ ನೀರನ್ನು ಬಳಕೆ ಮಾಡಲು ಅನುಮತಿ ಇದೆ., ದೇಶೀಯ ಸ್ವಯಂ ಬಳಕೆ ಅಲ್ಲದ, ನದಿ ಜಲವಿದ್ಯುತ್ ಸಸ್ಯಗಳು ಮತ್ತು ನಿರ್ದಿಷ್ಟ ಕೃಷಿ ಬಳಕೆ ಮತ್ತು ಸಂಗ್ರಹದ ಕಾರ್ಯಕ್ಕೆ ನಿರ್ಮಾಣ ಕಾರ್ಯ ಮಾಡಬಹುದು.
ಜಲಾನಯನ ಹೈಡ್ರೋಪವರ್/ಜಲವಿದ್ಯುತ್
  • ಜಲಾನಯನ ಪ್ರದೇಶದ ಹೈಡ್ರೋಪವರ್ ಸಂಭಾವ್ಯ 33832 ಮೆವ್ಯಾ ಎಂದು ಅಂದಾಜು ಮಾಡಲಾಗಿದೆ. ಈ ವರೆಗೆ ಮಾರ್ಚ್ 2012 ರ ವರೆಗೆ 10779. 30 ಮೆವ್ಯಾ ಸಂಭಾವ್ಯ ಅಭಿವೃದ್ಧಿ ಮಾಡಲಾಗಿದೆ ಮತ್ತು 4581 ಮೆ.ವ್ಯಾ.ಸಾಮರ್ಥ್ಯದ ನಿರ್ಮಾಣ ಹಂತದಲ್ಲಿದೆ. ಆದ್ದರಿಂದ,ಸಂಭಾವ್ಯ ಜಲವಿದ್ಯುತ್ ಉತ್ಪಾದನೆ ಭಿವೃದ್ಧಿಯ ಪ್ರಮುಖ ವಿಷಯವಾಗಿದೆ, ಬಹಳಷ್ಟು ಜಲವಿದ್ಯುತ್ ಉತ್ಪಾದನೆ ಅಭಿವೃದ್ಧಿ ಉಳಿದಿದೆ. ಈಗ ಇರುವ ಪ್ರಮುಖ ಹೈಡ್ರೊ ವಿದ್ಯುತ್ ಕೇಂದ್ರಗಳು ಚಮೇರಾ I II, III, ಹಂತ ಭಾಕ್ರಾ, ಪಾಂಗ್,ದೇಹರ್ ರಂಜಿತ್ ಸಾಗರ್ ಈ ನಾತ್ಪಾ ಝಾಕ್ರಿ , ಯೂರಿ, ಸಲಾಲ್, ಬಾಗಲಿಯಾರ್.[]
  • ಸಿಂಧೂ ನೀರು ಹಂಚಿಕೆ ಒಪ್ಪಂದ

ನರ್ಮದಾ ನದಿ ಸಮೂಹ

ಬದಲಾಯಿಸಿ
  • ಮಧ್ಯ ಭಾರತದಲ್ಲಿ ಹರಿಯುವ ಒಂದು ನದಿ. ಇದು ಭಾರತ ಉಪಖಂಡದ ಐದನೆಯ ಅತಿ ದೊಡ್ಡ ನದಿ ಸಹ ಆಗಿದೆ. ಭಾರತದ ಪರ್ಯಾಯ ದ್ವೀಪದ ಪ್ರಮುಖ ನದಿಗಳಲ್ಲಿ ನರ್ಮದಾ, ತಪತಿ ಮತ್ತು ಮಾಹಿ ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ. ಇದು ಮಧ್ಯಪ್ರದೇಶ ರಾಜ್ಯದಲ್ಲಿ ಅಮರ್ಕಂಟಕ್ ಪರ್ತತ ಶಿಖರದಲ್ಲಿ ನರ್ಮದಾ ಕುಂಡ ಎಂದು ಹೆಸರಾಗಿರುವ ಒಂದು ಸಣ್ಣ ಕುಂಡದಿಂದ ಹುಟ್ಟುತ್ತದೆ, ಮತ್ತು ಮೊದಲ 320 ಕಿಲೋಮೀಟರ್ (200 ಮೈಲಿ) ಸಾತ್ಪುರ ಶ್ರೇಣಿಯ ಎತ್ತರ ಪ್ರದೇಶವಾದ ಮಂಡ್ಲಾ ಬೆಟ್ಟಗಳ ನಡುವೆ ಅದರ ಪಯಣಸಾಗುತ್ತದೆ; ನಂತರ ಜಬಲ್ಪುರ್` ದಲ್ಲಿ, ಬೆಣಚುಕಲ್ಲಿನ ಅಥವಾ 'ಅಮೃತ ಶಿಲೆಗಳು' ನಡುವೆ ಸಾಗಿ, ಇದು ವಿಂಧ್ಯ ಮತ್ತು ಸಾತ್ಪುರ ಶ್ರೇಣಿಗಳ ನಡುವೆ ನರ್ಮದಾ ಕಣಿವೆಯನ್ನು ಪ್ರವೇಶಿಸುತ್ತದೆ, ನೇರ ಪಶ್ಚಿಮದ ಕಡೆ ಗಮನಿಸುತ್ತದೆ. ಅದು ನಂತರ ಕ್ಯಾಂಬೆ ಕೊಲ್ಲಿಯನ್ನು (ಗಲ್ಫ್ ಕ್ಯಾಂಬೆ) ಪ್ರವೇಶಿಸುತ್ತದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹರಿಯುವ ಇದರ ಒಟ್ಟು ಉದ್ದ 1312 ಕಿಲೋಮೀಟರ್ (815 ಮೈಲಿ) ಆಗುವುದು. ಇದು ಕೊನೆಗೆ ಗುಜರಾತ್`ನ ಭರೂಚ್ ಜಿಲ್ಲೆಯಲ್ಲಿ ಅರೇಬಿಯನ್ ಸಮುದ್ರಕ್ಕೆ ಪ್ರವೇಶಿಸುತ್ತದೆ. ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಸಾಂಪ್ರದಾಯಿಕ ಎಲ್ಲೆ ಎಂದು ಪರಿಗಣಿಸಲ್ಪಡುತ್ತದೆ.
 
ನರ್ಮದಾ ಜಲಾನಯನ ಪ್ರದೇಶದ ಯೋಜನೆಗಳ ಸ್ಥಳ.

ನರ್ಮದಾ ಜಲಾನಯನ ಪ್ರದೇಶದ ಮುಖ್ಯ ಲಕ್ಷಣಗಳು

ಬದಲಾಯಿಸಿ
ವಿವರ ಅಂಕೆ-ಅಂಶ
ನರ್ಮದಾ ನದಿಯ ಉದ್ದ (ಕಿಮಿ) 1312
ಸಂಗ್ರಹಣಾ ಪ್ರದೇಶ (Sq.km.) 98796
ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) 45639
ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) 34500
ಪೂರ್ಣಗೊಂಡಿದೆ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 17806.0
ನಿರ್ಮಾಣ ಅಡಿಯಲ್ಲಿ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 6835.00
ಯೋಜನೆಗಳು ಒಟ್ಟು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 24641.0
ಆಫ್ ಸಾಲಿನಿಂದ ಹೈಡ್ರಾಲಾಜಿಕಲ್ ವೀಕ್ಷಣೆ ಕೇಂದ್ರಗಳು ನಂ 26 (including 8 Gauge site)
ಸಾಲಿನಿಂದ ರ ಪ್ರವಾಹ ಫೋರ್ಕಾಸ್ಟಿಂಗ್ ಸ್ಟೇಷನ್ಸ್ ನಂ 4

ಉಪನದಿಗಳು ಮತ್ತು ಯೋಜನೆಗಳು

ಬದಲಾಯಿಸಿ

ನದಿಯ ಒಟ್ಟು 1.312 ಕಿಮೀ ಉದ್ದದ ಹರಿವಿನಲ್ಲಿ ಮತ್ತು ಮೊದಲ 1079 ಕಿ.ಮೀ.ದೂರವನ್ನು ಮಧ್ಯಪ್ರದೇಶದಲ್ಲಿ ಹರಿದು, ನಂತರ 35 ಕಿ.ಮೀ. ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರಗಳ ನಡುವೆ ಸಾಮಾನ್ಯ ಗಡಿರೇಖೆಯಲ್ಲಿ ಹರಿಯುತ್ತದೆ. ಮುಂದೆ ಮಹಾರಾಷ್ಟ್ರ ಮತ್ತು ಗುಜರಾತ್`ಗಳ ಮಧ್ಯೆ 39 ಕಿ.ಮೀ. ಹರಿಯುತ್ತದೆ. ನಂತರ ಗುಜರಾತ್ ರಾಜ್ಯದಲ್ಲಿ ಇದು 159 ಕಿ.ಮೀ. ವ್ಯಾಪಿಸಿದೆ. ಇದರ ಪ್ರಮುಖ ಎಡದಿಂದ ಸೇರುವ ಉಪನದಿಗಳು ಬುರ್ಹನೇರ್`, ಬಂಜಾರ್, ಶೇರ್`, ಶಕ್ಕಾರ್`, ದೂಧಿ, ತವಾ, ಗಂಜಾಲ್`, ಕುಂದಿ, ಗೋಯಿ, ಕರ್ಜನ್,ಇವು; ಮತ್ತು ಹಿರಣ, ತೆಂದೋನಿ, ಬಾರ್ನ, ಉರಿ, ಹಾತ್ನಿ, ಒಟಸಾಂಗ್` ಕೋಲಾರ ಇವು ನರ್ಮದೆಯನ್ನು ಬಲದಿಂದ ಸೇರುತ್ತದೆ. ಖಂಬಾತಕೊಲ್ಲಿಯ ಮೂಲಕ ಅರೇಬಿಯನ್ ಸಮುದ್ರಕ್ಕೆ ನರ್ಮದಾ ಸೇರುತ್ತದೆ. ಆಲ್ಲಿ ಮುಖಜ ಬೂಮಿಯ ಜಲಾನಯನ ಪ್ರದೇಶದ ಬಹುಪಾಲು ಅಂದರೆ 56.90% ಕೃಷಿಗೆ ಉಪಯೋಗಿಸಲಾಗಿದೆ. ಒಟ್ಟು ಜಲಾನಯನ (ನೀರಿನ) ಪ್ರದೇಶದ 2.95% ಭಾಗವು ಜಲಾಶ್ರಯವಾಗಿದೆ. ನರ್ಮದೆಯ ಜಲಾನಯನ ಪ್ರದೇಶವು 20 ಲೋಕಸಭಾ ಕ್ಷೇತ್ರಗಳನ್ನು (2009) ಒಳಗೊಂಡಿದೆ; ಮಧ್ಯಪ್ರದೇಶ 15, ಗುಜರಾತ್ 3 ಮತ್ತು ಛತ್ತೀಸ್ಗಢ 1, ಮತ್ತು ಮಹಾರಾಷ್ಟ್ರ 1,. 'ನರ್ಮದಾ ನೀರು ಹಂಚಿಕೆ ವಿವಾದಗಳ ಟ್ರಿಬ್ಯೂನಲ್' ರಾಜ್ಯಗಳ ನಡುವೆ ನೀರು ಹಂಚಿಕೆ ಮಾಡಿದೆ:

  • ನರ್ಮದಾ ನೀರು ಹಂಚಿಕೆ ಕೆಳಗೆ ತೋರಿಸಿದೆ.
ರಾಜ್ಯ ನೀರಿನ ಪ್ರಮಾಣ:ಎಕರೆ(ವಿಸ್ತೀರ್ಣ)Xಅಡಿ
ಮಧ್ಯಪ್ರದೇಶ 18,25 ಮಿಲಿಯನ್ ಎಕ್ರೆ ಅಡಿ
ಗುಜರಾತ್ 9.0 ಮಿಲಿಯನ್ ಎಕ್ರೆ ಅಡಿ
ರಾಜಸ್ಥಾನ 0.5 ಮಿಲಿಯನ್ ಎಕ್ರೆ ಅಡಿ
ಮಹಾರಾಷ್ಟ್ರ 0.25 ಮಿಲಿಯನ್ ಎಕ್ರೆ ಅಡಿ
ಒಟ್ಟು 28.0 ಮಿಲಿಯನ್ ಎಕ್ರೆ ಅಡಿ

[೧೦]

ಮೇಲ್ಮೈ ಸಂಗ್ರಹಿತ ನೀರು ಅಭಿವೃದ್ಧಿಯ ಸ್ಥಿತಿ:

ಬದಲಾಯಿಸಿ
  • ಜಲಾನಯನ ಪ್ರದೇಶದ ಮೇಲ್ಮೈ ಸಂಗ್ರಹಿತ ಜಲದ ಅಭಿವೃದ್ಧಿಯು ಪಂಚವಾರ್ಷಿಕ ಯೋಜನೆಯ ಪೂರ್ವ ಅವಧಿಯಲ್ಲಿ ಬಹಳ ಅತ್ಯಲ್ಪ ಇತ್ತು. ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ, ತವಾ, ಬರ್ನ ಮತ್ತು ಸುಖ ಪೂರ್ಣಗೊಂಡ ಪ್ರಮುಖ ಯೋಜನೆಗಳು. ನರ್ಮದಾ ವಾಟರ್ ವಿವಾದ ಟ್ರಿಬ್ಯೂನಲ್ ಜಲಾನಯನ ಪ್ರದೇಶದ ಅಭಿವೃದ್ಧಿಯ ಪೂರ್ಣ ಹೊಣೆ ಹೊತ್ತಿದೆ. ಜಲಸಂಪನ್ಮೂಲದ ಸರ್ವತೋಮುಖ ಅಭಿವೃದ್ಧಿಯ ಅಡಿಯಲ್ಲಿ ನಿರ್ಮಾಣವಾದ ಯೋಜನೆಗಳು : ಸರ್ದಾರ್ ಸರೋವರ್, ಇಂದಿರಾ ಸಾಗರ್, ಬಾರ್ಗಿ ಮತ್ತು ಓಂಕಾರೇಶ್ವರ ಜಲಾಶಯ ಅತ್ಯಂತ ಪ್ರಮುಖವಾಗಿವೆ.
  • ನರ್ಮದಾ ಜಲ ಹಂಚಿಕೆ ವಿವಾದಗಳ ಟ್ರಿಬ್ಯೂನಲ್ ನರ್ಮದಾ ನೀರನ್ನು ರಾಜ್ಯಗಳ ನಡುವೆ (75% ನಂಬಬಹುದಾದ ಬಳಕೆಯೋಗ್ಯ ಸಂಗ್ರಹಣೆ ಅಂದಾಜು ಅಡಿಯಲ್ಲಿ 34,54 ಘನ ಕಿ. ಹರಿವನ್ನು ಸರ್ದಾರ್ ಸರೋವರ ಅಣೆಕಟ್ಟು) ಹಂಚಿಕೆ ಮಾಡಿದೆ:
ರಾಜ್ಯ ಹಂಚಿಕೆ ನೀರಿನ ಪ್ರಮಾಣ:1000ಮೀ.X1000ಮೀ.X1000ಮೀ.
ಮಧ್ಯಪ್ರದೇಶ 22.51 ಘನ ಕಿಮೀ
ಗುಜರಾತ್ 11.10 ಘನ ಕಿಮೀ
ರಾಜಸ್ಥಾನ 0.62 ಘನ ಕಿಮೀ
ಮಹಾರಾಷ್ಟ್ರ 0.31 ಘನ ಕಿಮೀ
ಒಟ್ಟು ಒಟ್ಟು 34.54 ಘನ ಕಿಮೀ
  • ಜಲಾನಯನ ಪ್ರದೇಶದ ಪ್ರಮುಖ ಹೈಡ್ರೊ ವಿದ್ಯುತ್ ಯೋಜನೆಗಳು: ಇಂದಿರಾ ಸಾಗರ್, ಸರ್ದಾರ್ ಸರೋವರ್, ಓಂಕಾರೇಶ್ವರ,ಬಾರ್ಗಿ & ಮಹೇಶ್ವರ ಆಗಿವೆ.
  • ತಪತಿ/ತಪತೀ/ ತಾಪ್ತಿ ನದಿ/ತಾಪೀ ನದಿ(Sanskrit: तपती) ಮಧ್ಯ ಭಾರತದ ಒಂದು ನದಿ. ಇದರ ಮೂಲ ಹೆಸರು ತಾಪಿ ನದಿ ಎಂದು. ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು 724 ಕಿ.ಮೀ.ಗಳು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ದೊಡ್ಡ ನದಿಗಳಲ್ಲಿ ತಾಪ್ತಿ ಒಂದು. ನರ್ಮದಾ ನದಿ ಮತ್ತು ಮಾಹಿ ನದಿಗಳು ಉಳಿದೆರಡು. ತಾಪ್ತಿ ನದಿಯು ಮಧ್ಯ ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ಸಾತ್ಪುರ ಪರ್ವತಗಳಲ್ಲಿ ಉಗಮಿಸುವುದು. ತಾಪ್ತಿ ನದಿಯ ಜಲಾನಯನ ಪ್ರದೇಶಗಳು ಮಧ್ಯ ಪ್ರದೇಶದ ನಿಮಾರ್ ಪ್ರದೇಶ, ಮಹಾರಾಷ್ಟ್ರವಿದರ್ಭ ಮತ್ತು ಕಾಂದೇಶ್ ಹಾಗೂ ದಕ್ಷಿಣ ಗುಜರಾತ್. ತಾಪ್ತಿ ನದಿಯು ಸೂರತ್ ಬಳಿ ಖಂಭಾಟ್ ಕೊಲ್ಲಿಯನ್ನು ಸೇರುತ್ತದೆ. ಪೂರ್ಣಾ, ಗಿರ್ನಾ ಮತ್ತು ಪನ್ಜಾರಾ ನದಿಗಳು ತಾಪ್ತಿ ನದಿಯ ಮುಖ್ಯ ಉಪನದಿಗಳು. ತಾಪ್ತಿ ನದಿಗೆ ಅಡ್ಡಲಾಗಿ ಮಹಾರಾಷ್ಟ್ರದ ಜಳಗಾಂವ್ ಬಳಿ ಹಾತ್ನೂರ್ ಆಣೆ ಮತ್ತು ಗುಜರಾತ್‌ನ ಸೋನ್‌ಗಢದ ಬಳಿ ಉಕಾಯ್ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
  • ತಪತೀ ನದಿಯ ಜಲಾನಯನ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ 65.145 ಚ.ಕಿ.ಮೀ. ಪ್ರದೇಶವನ್ನುಆವರಿಸಿದೆ. ಅದು ಗರಿಷ್ಠ ಉದ್ದ ಮತ್ತು ಅಗಲ 534 & 196 ಕಿಮೀ ವ್ಯಾಪಿಹೊಂದಿವೆ. ಇದು 72ಡಿ. 33’ ರಿಂದ '78ಡಿ 17' ಪೂರ್ವ ರೇಖಾಂಶಗಳ ಮತ್ತು '21 ಡಿ 50' 20 ಡಿ. 9 ಉತ್ತರ ಅಕ್ಷಾಂಶದಲ್ಲಿದೆ. ಡೆಕ್ಕನ್ ಪ್ರಸ್ಥಭೂಮಿಯ ಭಾಗದಲ್ಲಿರುವ ಜಲಾನಯನ ಪ್ರದೇಶ, ಪೂರ್ವದಲ್ಲಿ ಮಹಾದೇವ್ ಬೆಟ್ಟಗಳ ಅಜಂತಾ ರೇಂಜ್ ಮತ್ತು ದಕ್ಷಿಣದಲ್ಲಿ ಸಾತ್ಮಲಾ ಬೆಟ್ಟಗಳು ಮತ್ತು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದಿಂದ ಮೂಲಕ ಉತ್ತರ ಸಾತ್ಪುರ ಶ್ರೇಣಿಯಿಂದ ಸುತ್ತುವರಿಯಲ್ಪಟ್ಟಿದೆ. ಜಲಾನಯನ ಪ್ರದೇಶದ ಬೆಟ್ಟಪ್ರದೇಶದ ದಟ್ಟ ಕಾಡುಪ್ರದೇಶವಾಗಿದೆ. ಬಯಲು ಪ್ರದೇಶ ಕೃಷಿಗೆ ಸೂಕ್ತವಾಗಿದೆ. ವಿಶಾಲ ಮತ್ತು ಫಲವತ್ತಾದ ಪ್ರದೇಶಗಳಲ್ಲಿ ಹಾಗೆಯೇ ತಾಪಿ ಈ ಪರ್ಯಾಯದ ಎರಡನೇ ದೊಡ್ಡ ಪಶ್ಚಿಮಾಭಿಮುಖವಾಗಿ ಹರಿಯುವ ನದಿ. ಇದು 752 ಮೀ ಎತ್ತರದಲ್ಲಿ ಹುಟ್ಟುತ್ತದೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಮುಲತಾಯಿ ಮೀಸಲು ಅರಣ್ಯ ಬಳಿ ಹುಟ್ಟುತ್ತದೆ. ಅರೇಬಿಯನ್ ಸಮುದ್ರದ ಮುಖಜಕ್ಕೆ ಮೂಲ ನದಿಯ ಒಟ್ಟು ಉದ್ದ 724 ಕಿಮೀ ಮತ್ತು ಅದರ ಪ್ರಮುಖ ಉಪನದಿಗಳು ಸುಕಿ,ಗೋಮಯಿ, ಅರುಣಾವತಿ, ಮತ್ತು ಅನೇರ್ ಬಲದಿಂದ ಇದು ಸೇರುತ್ತದೆ. ಎಡದಿಂದ ವಾಘುರ್ ಅಮರಾವತಿ, ಬುರಾಯಿ ಪಂಜ್ರ, ಬೋರಿ, ಗಿರ್ಣ, ಪೂರ್ಣಾ, ಮೋನಾ ಮತ್ತು ಸಿಪ್ನಾ ಸೇರುತ್ತವೆ. ಜಲಾನಯನ ಒಟ್ಟು ಪ್ರದೇಶದ ಬಹುಪಾಲು, ಎಂದರೆ 66,19% ರಷ್ಟು ಕೃಷಿಗೆ ಇಪಯೋಗಿಸಲಾಗುತ್ತದೆ. ಜಲಾನಯನ 2.99% ಭಾಗದಲ್ಲಿ ನೀರು ಆವರಿಸಿಕೊಂಡಿದೆ. ಜಲಾನಯನ ಪ್ರದೇಶ, ಮಹಾರಾಷ್ಟ್ರ 12, ಗುಜರಾತ್ 3 ಮತ್ತು ಮಧ್ಯಪ್ರದೇಶದ 3 ಒಳಗೊಂಡ 18 ಲೋಕಸಭಾ ಕ್ಷೇತ್ರಗಳನ್ನು (2009) ಓಳಕೊಂಡಿದೆ.[೧೧]

ತಪತೀ ನದಿಯ ವಿವರ

ಬದಲಾಯಿಸಿ
ತಾಪಿ ಬೇಸಿನ್ ಪ್ರಮುಖ ಅಂಶಗಳು
ವಿಷಯ ಅಂಕೆ-ಅಂಶ
ತಪತಿ ನದಿಯ ಉದ್ದ (ಕಿಮಿ) 724
ಸಂಗ್ರಹಣಾ ಪ್ರದೇಶ (Sq.km.) 65145
ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) 14880
ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) 14500
ಪೂರ್ಣಗೊಂಡಿದೆ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 9088.0
ನಿರ್ಮಾಣ ಅಡಿಯಲ್ಲಿ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 1555.0
ಯೋಜನೆಗಳು ಒಟ್ಟು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 10643.0
ಹೈಡ್ರಾಲಾಜಿಕಲ್ ವೀಕ್ಷಣೆ ಕೇಂದ್ರಗಳು ನಂ (CWC) 18
ಪ್ರವಾಹ ಫೋರ್ಕಾಸ್ಟಿಂಗ್ ಸ್ಟೇಷನ್ಸ್ ನಂ (CWC) 3

[೧೧]

ತಾಪಿ ಜಲಾನಯನ ಪ್ರದೇಶದ ಪ್ರಮುಖ ಯೋಜನೆಗಳು

ಬದಲಾಯಿಸಿ
  • ಪ್ರಮುಖ ಯೋಜನೆಗಳು: ಅವುಗಳೆಂದರೆ ಹಾತನೂರ್‍ ಅಣೆಕಟ್ಟು, ಮೇಲ್ ತಾಪಿ ಪ್ರಾಜೆಕ್ಟ್, ಕಕ್ರಾಪಾರ ಸಣ್ಣ ಅಣೆಕಟ್ಟು ಮತ್ತು ಉಕಾಯ್ ಪ್ರಾಜೆಕ್ಟ್, ಗಿರ್ಣ ಅಣೆಕಟ್ಟು ಮತ್ತು ಗಿರ್ಣ ಯೋಜನೆಯ ದಹಿಗೊವೇರ್, ಉಕಾಯ್ ಅಣೆಕಟ್ಟು ಪ್ರಮುಖವಾದವುಗಳು.
  • ಮಧ್ಯಪ್ರದೇಶ & ಮಹಾರಾಷ್ಟ್ರ ನಡುವೆ ಅಂತರ ರಾಜ್ಯ ಒಪ್ಪಂದಗಳು ಪ್ರಕಾರ ಉಕಾಯ್ ಅಣೆಕಟ್ಟಿನ ಪ್ರದೇಶದ (ಗುಜರಾತ್) ಲಭ್ಯವಿರುವ ನೀರಿನ ಹಂಚಿಕೆ ಕೆಳಗೆ ಕೊಟ್ಟಿದೆ.
  • ಮಧ್ಯಪ್ರದೇಶ 70.0 ಟಿಎಂಸಿ
  • ಮಹಾರಾಷ್ಟ್ರ 191,40 ಟಿಎಂಸಿ

ಹಾತನೂರು ಅಣೆಕಟ್ಟು (ಮಹಾರಾಷ್ಟ್ರ)

ಬದಲಾಯಿಸಿ
  • ಇದು ಮೇಲಿನ, ತಾಪಿ (ತಪತೀ) ಪ್ರಾಜೆಕ್ಟ್ ಮೊದಲ ಹಂತವಾಗಿದೆ. ಇದು 717 ಮೀ ಉದ್ದ ಇಂಗ್ಲಿಷ್ ಎಸ್ (S) ಆಕಾರದ ಒಡ್ಡು; ಮಹಾರಾಷ್ಟ್ರ ಜಲಗಾಂವ್ ಜಿಲ್ಲೆಯ ಹಾತನೂರು ಹಳ್ಳಿಯ ಬಳಿ ಬದಿಯಲ್ಲಿ, ತಾಪಿ ನದಿಗೆ ಅಡ್ಡಲಾಗಿ ನಿರ್ಮಿಸಿದ 1863 ಮೀ ಉದ್ದ ಮಣ್ಣಿನ ಒಡ್ಡು, ಮಧ್ಯದಲ್ಲಿರುವ ಉಕ್ಕಿ ಹರಿಯುವ ಬಾಗಿಲುನ್ನು ಒಳಗೊಂಡಿದೆ. ಇದು 95 ಕಿಮೀ ಉದ್ದ ಬಲದಂಡೆಯ ಕಾಲುವೆ ಮೂಲಕ ಜಲಗಾಂವ್ ಜಿಲ್ಲೆಯ ರೆವರ್, ಯಾವಲ್‍ ಮತ್ತು ಚೋಪ್ಡಾ ತಾಲ್ಲೂಕುಗಳ 3,78,384 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುವುದು. ಇದು 255 ಎಂಸಿಎಂ (ಹತ್ತು ಲಕ್ಷ ಘನಮೀಟರ್) ನೇರ ಸಂಗ್ರಹ ಸಾಮರ್ಥ್ಯ ಹೊಂದಿದೆ.:(ಅಣೆಕಟ್ಟೆ ನೀರು ಹರಿವು-ಚಲನದೃಶ್ಯ:[೨])
 
ಗೋದಾವರಿ ನದಿ
 
ಗೋದಾವರಿ ನದಿಯ ಜಲಾನಯನ ಪ್ರದೇಶ
  • ಗೋದಾವರಿನದಿ (ತೆಲುಗು: గోదావరి) (ಮರಾಠಿ: गोदावरी) ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ , ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇದು ಡೆಕ್ಕನ್ ಪ್ರಸ್ಥಭೂಮಿ ಅಡ್ಡಲಾಗಿ ಪೂರ್ವಕ್ಕೆ ಹರಿಯುತ್ತದೆ.

ವಿವರಣೆ

ಬದಲಾಯಿಸಿ
  • ಗೋದಾವರಿ ಜಲಾನಯನ ಪ್ರದೇಶವು ಮಧ್ಯಪ್ರದೇಶ, ಪುದುಚೆರಿ ಕರ್ನಾಟಕ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಣ್ಣ ಭಾಗಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್ಗಢ ಮತ್ತು ಒಡಿಶಾಗಳ ಹೆಚ್ಚಿನ ಪ್ರದೇಶವನ್ನೊಳಗೊಂಡಿದೆ. ಆ ಪ್ರದೇಶದ ಗರಿಷ್ಠ ಉದ್ದ 995ಕಿಮೀ ಮತ್ತು ಅಗಲ ಸುಮಾರು 583 ಕಿಮೀ.; ಒಟ್ಟು 3,12,812 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಅದು ದೇಶದ ಒಟ್ಟು ಭೌಗೋಳಿಕ ವಲಯದ ಸುಮಾರು 9.5% ರಷ್ಟಿದೆ. ಜಲಾನಯನ ಪ್ರದೇಶದ ದಕ್ಷಿಣದಲ್ಲಿ ಪೂರ್ವ ಘಟ್ಟಗಳು ಮತ್ತು ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಉತ್ತರದಲ್ಲಿ ಸಾತ್ಮಲಾ ಬೆಟ್ಟಗಳ ಅಜಂತಾ ಶ್ರೇಣಿ ಮತ್ತು ಮಹಾದೇವೋ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದೆ.
  • ಗೋದಾವರಿ ನದಿ ಸಮುದ್ರಮಟ್ಟದಿಂದ 1,067 ಮೀ ಎತ್ತರದಲ್ಲಿದೆ ಅರಬ್ಬೀ ಸಮುದ್ರದಿಂದ 80 ಕಿಮೀ ದೂರದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ದಲ್ಲಿ ಉಗಮಿಸುತ್ತದೆ. ಬಂಗಾಳ ಕೊಲ್ಲಿಯ ಮುಖಜ ಭೂಮಿಗೆ ಅದರ ಮೂಲದಿಂದ ಗೋದಾವರಿಯು ಒಟ್ಟು 1,465 ಕಿ.ಮೀ. ಉದ್ದವಿದೆ.
  • ಗೋದಾವರಿಯ ಸುಮಾರು 64 ಕಿ. ದೂರದಲ್ಲಿ, ಅದರ ಬಲದಂಡೆಗೆ ಧರಣಾ ನದಿ ಸೇರಿಕೊಳ್ಳುತ್ತದೆ ಮತ್ತು ಕೆಳಗೆ ಇಳಿದಂತೆ ಸ್ವಲ್ಪ ದೂರದಲ್ಲಿ ಸಣ್ಣ ನದಿ ಕದನಾ ಎಡದಿಂದ ಇದನ್ನು ಸೇರುತ್ತದೆ. ಅಂಕೋಲಾ ಗುಡ್ಡಗಳಲ್ಲಿ ಹುಟ್ಟುವ ಪ್ರವರ ಮತ್ತು ಮೂಲಾ ನದಿಗಳ ಸಂಯೋಜಿತ ನೀರು ನದಿಯ ಮೂಲದಿಂದ 217 ಕಿ.ಮೀ.ಗಳ ದೂರದಲ್ಲಿ ಇದನ್ನು ಸೇರುತ್ತದೆ.
  • ಮೂಲದಿಂದ ಸುಮಾರು 338 ಕಿ.,ಮೀ. ದೂರದಲ್ಲಿ ಪೂರ್ಣಾ ನದಿ ಮತ್ತು ದುಧ್ನಾ ನದಿಗಳು ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಸೇರುತ್ತವೆ. ಇನ್ನೂ 138 ಕಿಲೋಮೀಟರ್ ಹರಿದ ನಂತರ ಮಂಜೀರಾ ನದಿಯು ದಕ್ಷಿಣ ದಿಕ್ಕಿನಲ್ಲಿ ಇದನ್ನು ಸೇರುತ್ತದೆ. ಈ ಹಂತದಲ್ಲಿ, ಗೋದಾವರಿ 329 ಮೀ ಎತ್ತರದಲ್ಲಿ ಹರಿಯುತ್ತದೆ.

ಉಪನದಿಗಳ ವಿವರ

ಬದಲಾಯಿಸಿ
  • ಪ್ರಣಹಿತಾ ನದಿ, ಪಾಯಿನ್ಗಂಗಾ, ವಾರ್ಧಾ ಮತ್ತು ವೇನ್ಗಾಂಗಾ ಸಂಯೋಜಿತ ನೀರಿನೊಂದಿಗೆ ನಾಗ್ಪುರ ಮತ್ತು ಸಾತ್ಪುರ ಶ್ರೇಣಿಯ ದಕ್ಷಿಣ ಇಳಿಜಾರುಗಳಲ್ಲಿ ಹರಿಯುತ್ತವೆ. ಇದು ಗೋದಾವರಿಯು ಕೆಳಗೆ ಮಂಜೀರಾ ಸಂಗಮವಾಗುವ 306 ಕಿ.ಮೀ. ದೂರದಲ್ಲಿ ಸೇರುತ್ತದೆ. ನಂತರ 48 ಕಿ.ಮೀ. ಕೆಳಗೆ ಇಂದ್ರಾವತಿ ಗೋದಾವರಿ ನದಿ ಸೇರುತ್ತದೆ. ಕೊನೆಯ ಪ್ರಮುಖ ಗೋದಾವರಿಯ ಉಪನದಿ, ನಂತರ ರಾಜಮಂಡ್ರಿ ಯಿಂದ 100 ಕಿಮೀ ದೂರದಲ್ಲಿ ಶಬರಿ ಇದನ್ನು ಸೇರುತ್ತದೆ, ಪ್ರಣಹಿತಾ ಗೋದಾವರಿಯ ದೊಡ್ಡ ಉಪನದಿ. ಅದರ ಜಲಾನಯನ ಪ್ರದೇಶ 34,87% ರಷ್ಟು ವ್ಯಾಪ್ತಿ ಹೊಂದಿದೆ. ಬಲದಂಡೆಯ ಉಪನದಿಗಳು, ಪೂರ್ಣಾ, ಪ್ರವರ, ಮಂಜೀರಾ ಮತ್ತು ಮಾನೆರ್ 16.14% ರಷ್ಟು , ಜಲಾನಯನ ಪ್ರದೇಶ ಹೊಂದಿದೆ. ಇಂದ್ರಾವತಿ ಮತ್ತು ಶಬರಿ ಪ್ರಮುಖ ಎಡದಂಡೆಯ ಉಪನದಿಗಳು. ಅವುಗಳ ಒಟ್ಟು ಜಲಾನಯನ ಪ್ರದೇಶವು ಸುಮಾರು 59.7% ರಷ್ಟು ಇವೆ. ಮೇಲಿನ, ಮಧ್ಯದ ಗೋದಾವರಿ, ಮತ್ತು ತಗ್ಗು ಒಟ್ಟು ಉಳಿದ 24.16% ಭಾಗ. ಜಲಾನಯನ ಪ್ರದೇಶವನ್ನು ತುಂಬುವುದು. ಒಟ್ಟು ಪ್ರದೇಶದ 59,57% (ಬಹುಪಾಲು) ಕೃಷಿ ಭೂಮಿ. ಮತ್ತು ಜಲಾನಯನದ 3.6% ಭಾಗ ನೀರಿನ ಆಶ್ರಯ ಆವರಿಸಿಕೊಂಡಿದೆ. ಜಲಾನಯನ ಪ್ರದೇಶವು ಮಹಾರಾಷ್ಟ್ರದ 21, ಆಂಧ್ರ ಪ್ರದೇಶದ 18 ಮಧ್ಯಪ್ರದೇಶದ 4, ಛತ್ತೀಸ್ಗಢದ 3, ಮತ್ತು ಒಡಿಶಾ 3, ಮತ್ತು ಕರ್ನಾಟಕ 1, ಮತ್ತು ಪುದುಚೆರಿ 1, ಹೀಗೆ 51(2009) ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ

ರಾಜ್ಯವಾರು ನದಿಯ ಜಲಾನಯನ ಪ್ರದೇಶ

ಬದಲಾಯಿಸಿ
ಕ್ರಮ ಸಂಖ್ಯೆ. ರಾಜ್ಯ ಹೆಸರು ಜಲಾನಯನ ಪ್ರದೇಶ ಚದರ ಕಿ.ಮೀ.
1 ಮಹಾರಾಷ್ಟ್ರ 152,199
2 ಆಂಧ್ರ ಪ್ರದೇಶ 73,201
3 ಮಧ್ಯಪ್ರದೇಶ 31,821
4 ಚತ್ತೀಸ್ಗಡ 33,434
5 ಒಡಿಶಾ 17,752
6 ಕರ್ನಾಟಕ 4,406
7 ಒಟ್ಟು ಜಲಾನಯನ ಪ್ರದೇಶ 312,813 ಚದರ ಕಿಲೋಮೀಟರ್

ಗೋದಾವರಿ ಜಲಾನಯನ ಪ್ರದೇಶದ ಮುಖ್ಯ ಲಕ್ಷಣಗಳು

ಬದಲಾಯಿಸಿ
ಕ್ರಮ ಸಂಖ್ಯೆ. ವಿವರ ಅಂಕೆ-ಅಂಶ
A ಜಲಾನಯನ ಪ್ರದೇಶದ ವಿಸ್ತಾರ: ರೇಖಾಂಶ>ಪೂರ್ವ 73° 24’ to 83° 4’ E
B ಜಲಾನಯನ ಪ್ರದೇಶದ ವಿಸ್ತಾರ :ಅಕ್ಷಾಂಶ>ಉತ್ತರ 16° 19’ to 22° 34’ N
1 ಗೋದಾವರಿ ನದಿಯ ಉದ್ದ (ಕಿಮಿ) 1465
2 ಸಂಗ್ರಹಣಾ ಪ್ರದೇಶ (Sq.km.)ಚ.ಕಿಮೀ. 312812
3 ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) 110540
4 ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) 76300
5 ಪೂರ್ಣಗೊಂಡಿದೆ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 35434.00
6 ನಿರ್ಮಾಣ ಅಡಿಯಲ್ಲಿ ಯೋಜನೆಗಳು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 8228.00
7 ಯೋಜನೆಗಳು ಒಟ್ಟು ಲೈವ್ ಶೇಖರಣಾ ಸಾಮರ್ಥ್ಯ (ಎಂಸಿಎಂ) 43662.00
8 ಹೈಡ್ರಾಲಾಜಿಕಲ್ ವೀಕ್ಷಣೆ ಕೇಂದ್ರಗಳು ನಂ (CWC ನೋಡಿಕೊಳ್ಳುತ್ತಿದೆ) 77
9 ಪ್ರವಾಹ ಫೋರ್ಕಾಸ್ಟಿಂಗ್ ಸ್ಟೇಷನ್ಸ್ ನಂ ( CWC ನೋಡಿಕೊಳ್ಳುತ್ತಿದೆ) 18

[೧೨]

ಭಾರತದ ನದಿಗಳ ಸಂಪರ್ಕ ಯೋಜನೆ

ಬದಲಾಯಿಸಿ
  • ವಿಸ್ತೃತ ಲೇಕನ:ಭಾರತದ ನದಿಗಳ ಅಂತರ್-ಸಂಪರ್ಕ ಯೋಜನೆ
  • ಭಾರತ ನದಿಗಳನ್ನು ಅಂತರ್-ಸಂಪರ್ಕ ಮಾಡುವ ಉದ್ದೇಶದ ದೊಡ್ಡ-ಪ್ರಮಾಣದ ಸಿವಿಲ್ ಎಂಜಿನಿಯರಿಂಗ್ ಯೋಜನೆಯಾಗಿದೆ., ಭಾರತೀಯ ನದಿಗಳನ್ನು ಜಲಾಶಯಗಳು ಮತ್ತು ಕಾಲುವೆಗಳ ಜಾಲದಿಂದ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಆದ್ದರಿಂದ ಭಾರತದ ಇತರ ನೀರಿನ ಕೊರತೆಯಿರುವ ಕೆಲವು ಭಾಗಗಳಲ್ಲಿ ನೀರು ಪೂರೈಕೆ ಮತ್ತು ನಿರಂತರ ಪ್ರವಾಹವನ್ನು ಕಡಿಮೆ ಮಾಡುವ ಯೊಜನೆ.
  • ಅಂತರ್-ಸಂಪರ್ಕ (ಇಂಟರ್-ಲಿಂಕ್) ಯೋಜನೆಯು ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ: ೧.ಉತ್ತರದ ಹಿಮಾಲಯನ್ ನದಿಗಳು ಇಂಟರ್-ಲಿಂಕ್ ಘಟಕ, ೨.ದಕ್ಷಿಣ ಭಾರತದ ಘಟಕ; ಮತ್ತು ೩)ರಾಜ್ಯ ನದಿಗಳ ಪರಸ್ಪರ ಸಂಪರ್ಕಗಳು. ಈ ಯೊಜನೆ 2005 ರಿಂದ ಆರಂಭಗೊಂಡತು,
  • ಈ ಯೋಜನೆಯನ್ನು ಭಾರತದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲ್ಯೂಡಿಎ:India's National Water Development Agency [NWDA]) ತನ್ನ ಜಲ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ನಿರ್ವಹಿಸುತ್ತಿದೆ. ಯನ್ಡಿಎ ಹಿಮಾಲಯನ್ ಘಟಕಕ್ಕಾಗಿ 14 ಅಂತರ-ಸಂಪರ್ಕ ಯೋಜನೆಗಳು, ಪೆನಿನ್ಸುಲರ್ ಘಟಕಕ್ಕಾಗಿ 16 ಅಂತರ-ಸಂಪರ್ಕ ಯೋಜನೆಗಳು ಮತ್ತು ರಾಜ್ಯಗಳ 37 ನದಿಗಳ ಸಂಪರ್ಕದ ಯೋಜನೆಗಳ ಬಗ್ಗೆ ವರದಿಗಳನ್ನು ಅಧ್ಯಯನ ಮಾಡಿದೆ.[೧೩]
  • ಈಗ ೨೦೧೭ ರಲ್ಲಿ ಅ ಯೋಜನೆಯ ಅಂಗವಾಗಿ ದೇಶದ 60 ನದಿಗಳನ್ನು ಜೋಡಿಸುವ ರೂ. 5.5 ಲಕ್ಷ ಕೋಟಿ ಮೊತ್ತದ ಹಲವು ಯೋಜನೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಯೋಜನೆಗಳಿಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಈಗಾಗಲೇ ಪಡೆದುಕೊಂಡಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಹರಿಯುವ ಕರ್ನಾವತಿ ಮತ್ತು ಬೆತವಾ ನದಿಗಳ ಜೋಡಣೆ ಯೋಜನೆಗೆ ಎನ್‌ಡಿಎ ಸರ್ಕಾರ ಆದ್ಯತೆ ನೀಡಿದೆ. ಝಾನ್ಸಿ ಸಮೀಪ ಹರಿಯುವ ಬೆತವಾದಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ. ಆದರೆ ಕರ್ನಾವತಿಯಲ್ಲಿ ಮುಂಗಾರು ವೇಳೆಯಲ್ಲಿ ಪ್ರವಾಹ ಉಂಟಾಗುವಷ್ಟು ಹರಿವು ಇರುತ್ತದೆ. ಹೀಗಾಗಿ ನದಿಗೆ ದಾಧನ್ ಬಳಿ ಅಣೆಕಟ್ಟು ಕಟ್ಟಿ ಅಲ್ಲಿ ಸಂಗ್ರಹವಾಗವ ನೀರನ್ನು ಪಶ್ಚಿಮಾಭಿಮುಖವಾಗಿ ನಾಲೆಯ ಮೂಲಕ ಬೆತವಾ ನದಿಗೆ ಹರಿಸುವ ಯೋಜನೆಯಾಗಿದೆ.[೧೪] [೧೫]

ಉಪನದಿಗಳ ಸಮೂಹವನ್ನಾದರಿಸಿ

ಬದಲಾಯಿಸಿ

ರಾಜ್ಯಗಳಲ್ಲಿ ಹರಿಯುವ ನದಿಗಳು

ಬದಲಾಯಿಸಿ
  1. ಆಂಧ್ರ ಪ್ರದೇಶದ ನದಿಗಳು
  2. ಅರುಣಾಚಲ ಪ್ರದೇಶದ ನದಿಗಳು
  3. ಅಸ್ಸಾಮಿನ ನದಿಗಳು
  4. ಬಿಹಾರಿನ ನದಿಗಳು
  5. ಚತ್ತೀಸ್‍ಗಢದ ನದಿಗಳು
  6. ಗೋವದ ನದಿಗಳು
  7. ಗುಜರಾತಿನ ನದಿಗಳು
  8. ಹರ್ಯಾಣಾದ ನದಿಗಳು
  9. ಹಿಮಾಚಲ ಪ್ರದೇಶದ ನದಿಗಳು
  10. ಜಮ್ಮು ಮತ್ತು ಕಾಶ್ಮೀರದ ನದಿಗಳು
  11. ಜಾರ್ಖಂಡಿನ ನದಿಗಳು
  12. ಕರ್ನಾಟಕದ ನದಿಗಳು
  13. ಕೇರಳದ ನದಿಗಳು
  14. ಮಧ್ಯ ಪ್ರದೇಶದ ನದಿಗಳು
  1. ಮಹಾರಾಷ್ಟ್ರದ ನದಿಗಳು
  2. ಮಣಿಪುರದ ನದಿಗಳು
  3. ಮೇಘಾಲಯದ ನದಿಗಳು
  4. ಮಿಜೋರಮಿನ ನದಿಗಳು
  5. ನಾಗಾಲ್ಯಾಂಡಿನ ದ ನದಿಗಳು
  6. ಒಡಿಶಾದ ನದಿಗಳು
  7. ಪಂಜಾಬಿನ ನದಿಗಳು
  8. ರಾಜಸ್ಥಾನದ ನದಿಗಳು
  9. ಸಿಕ್ಕಿಮಿನ ನದಿಗಳು
  10. ತಮಿಳುನಾಡಿನ ನದಿಗಳು
  11. ತ್ರಿಪುರದ ನದಿಗಳು
  12. ಉತ್ತರಾಖಂಡದ ನದಿಗಳು
  13. ಉತ್ತರ ಪ್ರದೇಶದ ನದಿಗಳು
  14. ಪಶ್ಚಿಮ ಬಂಗಾಳದ ನದಿಗಳು

ಉಲ್ಲೇಖಗಳು

ಬದಲಾಯಿಸಿ
  1. https://m.mapsofindia.com/maps/india/rivers-amppage.html
  2. "ಆರ್ಕೈವ್ ನಕಲು". Archived from the original on 2018-08-28. Retrieved 2018-08-27.
  3. http://www.walkthroughindia.com/walkthroughs/top-10-longest-and-major-rivers-of-india/
  4. "ಸರಸ್ವತಿ ನದಿ ಅಸ್ತಿತ್ವದಲ್ಲಿತ್ತು". Archived from the original on 2016-10-18. Retrieved 2016-10-16.
  5. Kumar,, Rakesh; Singh, R.D.; Sharma, K.D. (10 September 2005). "Water Resources of India
  6. Sharad K. Jain; Pushpendra K. Agarwal; Vijay P. Singh (5 March 2007). Hydrology and water resources of India.[೧]
  7. "ಆರ್ಕೈವ್ ನಕಲು". Archived from the original on 2016-06-11. Retrieved 2016-06-24.
  8. "ಆರ್ಕೈವ್ ನಕಲು". Archived from the original on 2016-08-10. Retrieved 2016-06-25.
  9. "ಆರ್ಕೈವ್ ನಕಲು". Archived from the original on 2016-12-10. Retrieved 2016-06-26.
  10. "ಆರ್ಕೈವ್ ನಕಲು". Archived from the original on 2016-12-10. Retrieved 2016-06-26.
  11. ೧೧.೦ ೧೧.೧ "ಆರ್ಕೈವ್ ನಕಲು". Archived from the original on 2016-12-10. Retrieved 2016-06-27.
  12. "ಆರ್ಕೈವ್ ನಕಲು". Archived from the original on 2016-08-07. Retrieved 2016-06-28.
  13. http://nwda.gov.in/index1.asp?linkid=9&langid=1
  14. ₹ 5.5 ಲಕ್ಷ ಕೋಟಿ ವೆಚ್ಚದಲ್ಲಿ 60 ನದಿಗಳ ಜೋಡಣೆ;2 Sep, 2017
  15. 87 ಶತಕೋಟಿ ಡಾಲರ್ ವೆಚ್ಚದ ಯೋಜನೆ;ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ 'ನದಿ ಜೋಡಣೆ' ಶೀಘ್ರದಲ್ಲೇ ಆರಂಭ;1 Sep, 2017


ಉಲ್ಲೇಖ

ಬದಲಾಯಿಸಿ