ಗೋದಾವರಿ
ಗೋದಾವರಿನದಿ (ತೆಲುಗು: గోదావరి) (ಮರಾಠಿ: गोदावरी) ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ತೆಲಂಗಾಣ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ , ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇದು ಡೆಕ್ಕನ್ ಪ್ರಸ್ಥಭೂಮಿ ಅಡ್ಡಲಾಗಿ ಪೂರ್ವಕ್ಕೆ ಹರಿಯುತ್ತದೆ.
Godavari (Dakshin Ganga) | ||
River | ||
[[Image:| 256px|none |
]] | |
Kintra | India | |
---|---|---|
States | ಮಹಾರಾಷ್ಟ್ರ, Telangana, Chhattisgarh, ಆಂಧ್ರ ಪ್ರದೇಶ, Pondicherry (Yanam) | |
Region | Southern India, Western India | |
Tributaries | ||
- left | Purna, Pranahita, Indravati, Sabari, Taliperu, Wainganga, Penganga, Wardha, Dudhana | |
- right | Pravara, Manjira, Pedda Vagu, Manair, Kinnerasani | |
Ceeties | Nashik, Nanded, Nizamabad, Rajamundry | |
Soorce | ||
- location | Brahmagiri Mountain, Tryambakeshwar, Nashik, ಮಹಾರಾಷ್ಟ್ರ, India | |
- elevation | ೯೨೦ m (೩,೦೧೮ ft) | |
Mooth | ||
- location | Antarvedi into Bay of Bengal, East Godavari, Andhra Pradesh, India | |
- elevation | ೦ m (೦ ft) | |
Lenth | ೧,೪೬೫ km (೯೧೦ mi) | |
Basin | ೩,೧೨,೮೧೨ km² (೧,೨೦,೭೭೭ sq mi) | |
Discharge | ||
- average | ೩,೫೦೫ m³/s (೧,೨೩,೭೭೮ cu ft/s) [೧] | |
Dischairge ensewhaur (average) | ||
- Polavaram (1901-1979) | ೩,೦೬೧.೧೮ m³/s (೧,೦೮,೧೦೫ cu ft/s) [೨] | |
[[Image:| 256px|none |
]] |
ಇದನ್ನು ದಕ್ಷಿಣದ ಗಂಗೆ (ದಕ್ಷಿಣಗಂಗಾ) ಎಂದು ಕರೆಯುತ್ತಾರೆ. ಇದು ಆದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ತೆಲಂಗಾಣವನ್ನು ಪ್ರವೇಶಿಸುತ್ತದೆ. ಆಂಧ್ರ ಪ್ರದೇಶದ ಮೂಲಕ ಹಾದುಹೋಗುವಾಗ ಧರ್ಮಪುರಿಯ ಹತ್ತಿರ ಹಾದುಹೋಗುತ್ತದೆ. ಈ ಧರ್ಮಪುರಿಯು ಒಂದು ಯಾತ್ರಾಸ್ಥಳವಾಗಿದ್ದು ಇಲ್ಲಿ ಅನೇಕ ಪುರಾತನ ದೇವಸ್ಥಾನಗಳಿದ್ದು ಇಲ್ಲಿ ಗೋದಾವರಿ ನದಿಯ ಸ್ನಾನವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ನಂತರ ಡೆಕ್ಕನ್ ಪ್ರಸ್ಥಭೂಮಿ ದಾಟುವ ಮತ್ತು ಹಾಗೆಯೇ ಎರಡು ಕವಲಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಸರಾ ಕ್ಷೇತ್ರವು, ಆದಿಲಾಬಾದ್ ಜಿಲ್ಲೆಯಲ್ಲಿ ಗೋದಾವರಿ ತೀರದಲ್ಲಿರುವ , ಸರಸ್ವತಿಯ ಪ್ರಸಿದ್ಧ ದೇವಸ್ಥಾನವನ್ನು ಹೊಂದಿದೆ. ಇದು ಭಾರತದಲ್ಲಿ ಸರಸ್ವತಿಯ ಎರಡನೇ ದೇವಾಲಯವಾಗಿದೆ.( ಮೊದಲನೆಯದು ಪಾಕ್ ಆಕ್ರಮಿತ ಕಾಶ್ಮೀರದ ಕಿಷನ್ ಗಂಗಾ ಕಣಿವೆಯಲ್ಲಿನ ಶಾರದಿ ಎಂಬ ಹಳ್ಳಿಯಲ್ಲಿದೆ.)
ರಾಜಮುಂಡ್ರಿ ಅಥವಾ ರಾಜಮಹೇಂದ್ರಿ , ಗೋದಾವರಿ ತೀರದಲ್ಲಿರುವ ಎರಡನೇ ದೊಡ್ಡ ನಗರ (ನಾಸಿಕ್ ಮೊದಲನೇ ದೊಡ್ಡ ನಗರ) ಆಗಿದೆ. ರಾಜಮುಂಡ್ರಿ ನಲ್ಲಿ, ಗೋದಾವರಿ ನದಿಯು ರಾಜಮುಂಡ್ರಿ ಯಿಂದ ಇನ್ನೊಂದು ದಂಡೆಯಾದ ಕೋವೂರ್ ವರೆಗೆ ಸುಮಾರು 5 ಕಿಮೀ ಅಗಲವನ್ನು ಹೊಂದಿದೆ.
ಒಂಬತ್ತನೇ ಶತಮಾನದ ಕವಿರಾಜಮಾರ್ಗ ಕೃತಿಯಲ್ಲಿ "ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್" ಎಂದು ಆ ಕಾಲದಲ್ಲಿ ಕನ್ನಡ ನಾಡಿನ ಹರಹು ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂದು ಹೇಳಲಾಗಿದೆ
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Kumar, Rakesh; Singh, R.D.; Sharma, K.D. (2005-09-10). "Water Resources of India" (PDF). Current Science. Bangalore: Current Science Association. 89 (5): 794–811. Retrieved 2013-10-13.
- ↑ "Sage River Database". Retrieved 2011-06-16.