ಬಿಕಾನೆರ್
ಬಿಕಾನೆರ್ ಉತ್ತರಭಾರತದಲ್ಲಿರುವ ರಾಜಸ್ಥಾನ ರಾಜ್ಯದ ವಾಯವ್ಯ ದಿಕ್ಕಿನಲ್ಲಿರುವ ಜಿಲ್ಲೆಯಾಗಿದೆ. ನಗರವು ಬಿಕಾನೆರ್ ಜಿಲ್ಲೆಯ ಮತ್ತು ಬಿಕಾನೆರ್ ವಿಭಾಗದ ಆಡಳಿತದ ಪ್ರಧಾನ ಕಾರ್ಯಸ್ಥಾನವಾಗಿದೆ. ಇದು ಹಿಂದೆ ಬಿಕಾನೆರ್ ಸ್ಥಳೀಯ ರಾಜಾಡಳಿತದ ರಾಜ್ಯಕ್ಕೆ ರಾಜಧಾನಿಯಾಗಿತ್ತು. ಈ ನಗರವನ್ನು ರಾವ್ ಬಿಕ ಮತ್ತು ಜಾಟರು[೧] ಸ್ಥಾಪಿಸಿದರು. ರಾವ್ ಬಿಕ ರಾಜಧಾನಿಗೆಂದು ಆಯ್ಕೆ ಮಾಡಿದ ಸ್ಥಳವು ನೆಹ್ರಾ ಜಾಟ್ ನ ಜನ್ಮಸಿದ್ಧ ಹಕ್ಕಾಗಿತ್ತು. ಅವನ ಹೆಸರು ಶಾಶ್ವತವಾಗಿ ತಳಕುಹಾಕಿಕೊಂಡರೆ ಮಾತ್ರ ಈ ಉದ್ದೇಶಕ್ಕಾಗಿ ಸ್ಥಳವನ್ನು ಬಿಟ್ಟುಕೊಡಲು ಅವನು ತಯಾರಿದ್ದ. ಮಾಲೀಕನ ಹೆಸರಾದ ನೈರ ಅಥವಾನೆರ ವನ್ನು ಬಿಕ ತನ್ನ ಹೆಸರಿನ ಜೊತೆಗೆ ಸೇರಿಸಿಕೊಂಡನು,ಈ ರೀತಿಯಾಗಿ ಭವಿಷ್ಯದ ರಾಜಧಾನಿಯಾದ ಬಿಕಾನೆರ್ ರಚಿಸಿದನು.[೨][೩][೪] 1486 ರಲ್ಲಿ ಚಿಕ್ಕ ಮೂಲಗಳಿಂದ ಪ್ರಾರಂಭವಾದ ಈ ನಗರ ರಾಜಸ್ಥಾನದ ನಾಲ್ಕನೇ ದೊಡ್ಡ ನಗರವಾಗಿ ಅಭಿವೃದ್ಧಿಹೊಂದಿತು. 1928 ರಲ್ಲಿ ಪೂರ್ಣಗೊಂಡ ಗಂಗಾ ಕಾಲುವೆ ಮತ್ತು 1987 ರಲ್ಲಿ ಪೂರ್ಣಗೊಂಡ ಇಂದಿರಾ ಗಾಂಧಿ ಕಾಲುವೆ , ಸಾಸಿವೆ, ಹತ್ತಿ, ಶೇಂಗಾ, ಗೋಧಿ ಮತ್ತು ತರಕಾರಿಗಳಂತಹ ಬೆಳೆಗಳನ್ನು ಬೆಳೆಯಲು ಅವಕಾಶ ನೀಡಿವೆ. ಇತರ ಉದ್ಯಮಗಳು ಉಣ್ಣೆಯ ಉತ್ಪಾದನೆ, ಜಿಪ್ಸಮ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬೆನ್ಟನೈಟ್(ನೀರನ್ನು ಹೀರಿಕೊಳ್ಳುವ ಗುಣದ ಜೇಡಿಮಣ್ಣು)ಗಳ ಗಣಿಗಾರಿಕೆಯನ್ನು ಒಳಗೊಂಡಿವೆ.
ಬಿಕಾನೆರ್
Bikaner | |
---|---|
city | |
Population (2008) | |
• Total | ೭,೨೩,೯೮೨ |
ಬಿಕಾನೆರ್ ಸಿಹಿತಿಂಡಿಗಳಿಗೆ ಮತ್ತು ಲಘುಆಹಾರಗಳಿಗೆ ಹೆಸರುವಾಸಿಯಾಗಿದೆ(ಹಿಂದಿಯಲ್ಲಿ ನಾಮ್ಕೀನ್ಸ್).
ಇತಿಹಾಸ
ಬದಲಾಯಿಸಿ15 ನೇ ಶತಮಾನದ ಮಧ್ಯಕಾಲೀನ ಆಳ್ವಿಕೆಯ ಮೊದಲು ಬಿಕಾನೆರ್ ಪ್ರದೇಶವು "ಜಂಗಲ್ ದೇಶ" ಎಂದು ಕರೆಯಲ್ಪಡುವ ಬಂಜರು ಪಾಳುಬಿದ್ದ ಪ್ರದೇಶವಾಗಿತ್ತು.[೧][೫] ಬಿಕಾನೆರ್‌ನ ಗಡಿಗಳಿಂದ ಕೂಡಿದ ಪ್ರದೇಶವನ್ನು ಜಾಟ್ರ ಜಾಟ್ ರಾಜವಂಶವು ಆಳ್ವಿಕೆ ಮಾಡಿತು. ಈಶಾನ್ಯ ಮತ್ತು ವಾಯವ್ಯರಾಜಸ್ಥಾನವು ಮಹಭಾರತದ ಕಾಲದಿಂದಲೂ ಜಂಗಲ್ ದೇಶ್ ಎಂದು ಹೆಸರಾಗಿತ್ತು. ಜಾಟ್‌ಕುಲದವರ ವಾಸಸ್ಥಾನವಾಗಿದ್ದ ಇದನ್ನು ಅವರದೇ ಸಾಂಪ್ರದಾಯಿಕ ಕಾನೂನಿನನ್ವಯ ಜಾಟ್ ಮುಖ್ಯಸ್ಥರು ಆಳುತ್ತಿದ್ದರು.[೬] ಇದರ ಮುಖ್ಯಸ್ಥರು ನಾಮಮಾತ್ರಕ್ಕೆ ಒಡೆಯರೆನ್ನಿಸಿಕೊಂಡ ದೆಹಲಿಯ ಸುಲ್ತಾನರಿಂದ ಹೆಚ್ಚಿನ ಸ್ವಾಯತ್ತೆಯನ್ನು ಅನುಭವಿಸುತ್ತಿದ್ದರು.
ಇಡೀ ಪ್ರದೇಶವು ಆರು ಅಥವಾ ಏಳು ಜಾಟ್ ಗೋತ್ರಗಳನ್ನು ಹೊಂದಿದ್ದವು. ಅವುಗಳೆಂದರೆ ಸಿಹಾಗ್, ಪುನಿಯ, ಗೋದಾರ, ಸಾರನ್, ಬೆನಿವಾಲ್, ಜೋಹಿಯ[೭] ಮತ್ತು ಕಸವಾನ್[೮]. ಈ ಗೋತ್ರಗಳಲ್ಲದೇ ಏಕಕಾಲದಲ್ಲಿ ರಜಪೂತ ಒಡೆಯರಿಂದ ಬಂದಿರುವ ಜಾಟರ ಅನೇಕ ಉಪಜಾತಿಗಳಿದ್ದವು.ಉದಾಹರಣೆಗೆ ಬಾಗೂರ್, ಕಾರಿಪತ್ತ, ಮೋಹಿಲ ಅಥವಾ ಮೆಹಿಲ,[೭] ಬುಕರ್, ಬದು, ಚಾಚರ್.[೯] ಬಿಕಾನೆರ್ ರಾಜ್ಯದ ಇತಿಹಾಸ ಮತ್ತು ವಿದ್ವಾಂಸರ ಪ್ರಕಾರ ಈ ಪ್ರದೇಶವನ್ನು ಜಾಟರು ಅವರ ಏಳು ಪ್ರದೇಶಗಳ ಜೊತೆಯಲ್ಲಿ ಆಕ್ರಮಿಸಿಕೊಂಡಿದ್ದಾರೆ. ಜಾಟ್ ಭೂಪ್ರದೇಶಗಳ ಬಗ್ಗೆಸಾತ್ ಪತ್ತಿ ಸತ್ತವಾನ್ ಮಜಾ ಎನ್ನಲಾಗುತ್ತದೆ. (ಇದರ ಅರ್ಥ ಏಳು ದೊಡ್ಡದಾದ ಮತ್ತು ಐವತ್ತೇಳು ಚಿಕ್ಕ ಪ್ರದೇಶಗಳು).[೧೦][೧೧]
1472 ರಲ್ಲಿ ರಾವ್ ಬಿಕಾ ಬಿಕಾನೆರ್ ನಗರವನ್ನು ಸ್ಥಾಪಿಸಿದ. ರಾವ್ ಬಿಕಾ ರಾಥೋರ್ ಕುಲದ ಜೋಧಪುರ ನಗರದ ಸಂಸ್ಥಾಪಕ ಮಹಾರಾಜ ರಾವ್ ಜೋಧನ ಎರಡನೆಯ ಪುತ್ರ. ಅವನದೇ ಆಧಿಪತ್ಯವನ್ನು ಸ್ಥಾಪಿಸಲು ರಾಜಸ್ಥಾನದ ಉತ್ತರ ದಿಕ್ಕಿಗಿರುವ ದೊಡ್ಡ ಬಂಜರು ಭೂಮಿಯನ್ನು ಗೆದ್ದುಕೊಂಡನು. ಜೋಧ ರಾಜನ ಎರಡನೇ ಮಗನಾದ್ದರಿಂದ ಅವನ ತಂದೆಯ ರಾಜ್ಯವನ್ನು ವಂಶಪಾರಂಪರ್ಯವಾಗಿ ಪಡೆಯುವ ಅಥವಾ ಮಹಾರಾಜನ ಗದ್ದುಗೆ ಏರುವ ಅವಕಾಶ ಅವನಿಗೆ ಇರಲಿಲ್ಲ. ಆದ್ದರಿಂದ ಅವನು ಹೊಂದಾಣಿಕೆ ಮಾಡಿಕೊಂಡು, "ಜಂಗಲ್ ದೇಶ್" ಎಂದು ಕರೆಯಲಾಗುತ್ತಿದ್ದ ಸ್ಥಳ ಬಿಕಾನೆರ್‌ನಲ್ಲಿ ಅವನದೇ ಆದ ಸಾಮ್ರಾಜ್ಯವನ್ನು ಕಟ್ಟಲು ನಿರ್ಧರಿಸಿದ. ಬಿಕಾನೆರ್ ಥಾರ್ ಮರುಭೂಮಿಯ ಮರಳುಗಾಡು ಪ್ರದೇಶವಾದರೂ, ಸಾಕಷ್ಟು ನೀರಿನ ಚಿಲುಮೆಗಳ ಮೂಲಗಳನ್ನು ಹೊಂದಿರುವ ಕಾರಣ ಮಧ್ಯ ಏಷ್ಯಾದ ಮತ್ತು ಗುಜರಾತ್ ಕರಾವಳಿ ಪ್ರದೇಶದ ನಡುವಿನ ವಾಣಿಜ್ಯ ಹಾದಿಯಲ್ಲಿಒಯಸಿಸ್ಎಂದು ಪರಿಗಣಿಸಲಾಗಿತ್ತು. ಆದಕಾರಣ ಬಿಕಾನೆರ್ ನಗರಕ್ಕೆ ಮತ್ತು ನಂತರ ಬಿಕಾನೆರ್ ರಾಜ್ಯಕ್ಕೆ("ಬಿಕಾನ ವಸಾಹತು") ಬಿಕಾನ ಹೆಸರನ್ನು ಇಡಲಾಯಿತು. 1478 ರಲ್ಲಿ ಅವನು ಕೋಟೆಯನ್ನು ಕಟ್ಟಿದನು. ಈಗ ಅದು ನಾಶವಾಗಿದೆ. ಅಲ್ಲದೇ 100 ವರ್ಷಗಳ ನಂತರ ನಗರ ಕೇಂದ್ರದಿಂದ 1.5 km ದೂರದಲ್ಲಿ ಜುನಾಗಡ್ ಕೋಟೆ ಎಂದು ಹೆಸರಾದ ಹೊಸ ಕೋಟೆಯನ್ನು ಕಟ್ಟಲಾಯಿತು. ಬಿಕಾನೆರ್ ನ ಇತಿಹಾಸ ಮತ್ತು ಅದರೊಳಗೆ ಬರುವಂತಹ ಕೋಟೆಯು ಬಿಕಾನಿಂದ ಪ್ರಾರಂಭವಾಗುತ್ತವೆ.[೧೨][೧೩][೧೪]
ಬಿಕಾನ 100 ವರ್ಷಗಳ ನಂತರ ಬಿಕಾನೆರ್‌ನ ಸಂಪತ್ತು 1571 ರಿಂದ 1611 ಆಳ್ವಿಕೆ ಮಾಡಿದ ಬಿಕಾನೆರ್‌ನ ಆರನೆಯ ರಾಜನಾದ ರಾಜಾ ರಾಯ್ ಸಿಂಗ್‌ಜಿಯ ನೇತತ್ವದಲ್ಲಿ ಅಭಿವೃದ್ಧಿ ಹೊಂದಿತು. ಮೊಗಲರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಅವನು ಮೊಗಲರ ಸಾರ್ವಭೌಮತ್ವವನ್ನು ಒಪ್ಪಿಕೊಂಡನು. ಅಲ್ಲದೇ ಅಕ್ಬರ್ ಮತ್ತು ಆತನ ಪುತ್ರನಾದಜಹಂಗೀರ್ ಸಾಮ್ರಾಟನ ಆಸ್ಥಾನದಲ್ಲಿ ಸೇನಾ ಮುಖ್ಯಸ್ಥನಾಗಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದನು. ಮೇವಾರ್ ಸಾಮ್ರಾಜ್ಯದ ಅರ್ಧ ಭಾಗವನ್ನು ಗೆದ್ದುಕೊಳ್ಳುವ ಮೂಲಕ ಅವನ ಯಶಸ್ವಿ ಯುದ್ದದ ಸಾಹಸಕಾರ್ಯಗಳಿಂದ ಅವನಿಗೆ ಮೊಗಲ್ ಸಾಮ್ರಾಟರಿಂದ ಬಿರುದುಗಳು ಮತ್ತು ಪುರಸ್ಕಾರಗಳನ್ನು ತಂದುಕೊಟ್ಟಿತು. ಅವನಿಗೆ ಗುಜರಾತ್ ಮತ್ತು ಬುರನ್ ಪುರ್ ನ ಜಾಗೀರ್ಗಳನ್ನು (ಭೂಮಿಯನ್ನು) ಕೊಡುಗೆಯಾಗಿ ನೀಡಲಾಯಿತು. ಈ ಜಾಗೀರ್‌ಗಳಿಂದ ಬೃಹತ್ ಗಾತ್ರದ ಕಂದಾಯವನ್ನು ಗಳಿಸುವ ಮೂಲಕ ಅವನು ಸಮತಟ್ಟಾದ ಭೂಮಿಯಲ್ಲಿ ಜುನಾಗಢ್ ಕೋಟೆಯನ್ನು ಕಟ್ಟಿದನು.ಈ ಕೋಟೆ ಸರಾಸರಿ760 feet (230 m) ರಷ್ಟು ಎತ್ತರವನ್ನು ಹೊಂದಿದೆ. ಅವನು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಪರಿಣತನಾಗಿದ್ದ.ಅಲ್ಲದೇ ಅನೇಕ ರಾಷ್ಟ್ರಗಳಿಗೆ ಅವನು ಕೈಗೊಂಡ ಪ್ರವಾಸದ ಸಂದರ್ಭದಲ್ಲಿ ಗಳಿಸಿದ ಜ್ಞಾನವು ಜುನಾಗಢ್ ಕೋಟೆಯಲ್ಲಿ ಕಟ್ಟಿದ ಅಸಂಖ್ಯಾತ ಸ್ಮಾರಕಗಳಿಂದ ಸ್ಪಷ್ಟವಾಗಿ ಬಿಂಬಿತವಾಗಿದೆ.[೧೨][೧೪][೧೫]
1631 ರಿಂದ 1639 ರವರೆಗೆ ಮೊಗಲ ಸಾರ್ವಭೌಮತ್ವದ ಅಧೀನದಲ್ಲಿ ಆಳ್ವಿಕೆ ನಡೆಸಿದ ಕರಣ್ ಸಿಂಗ್ ಕರಣ್ ಮಹಲ್ ಅರಮನೆಯನ್ನು ಕಟ್ಟಿದನು. ನಂತರ ರಾಜರುಗಳು ಈ ಮಹಲಿಗೆ ಇನ್ನು ಹೆಚ್ಚಿನ ಮಹಡಿಗಳನ್ನು ಕಟ್ಟಿಸಿದರಲ್ಲದೇ ಅಲಂಕಾರಗಳನ್ನು ಮಾಡಿದರು. 1669–98 ರವರೆಗೆ ಆಳ್ವಿಕೆ ನಡೆಸಿದ ಅನುಪ್ ಸಿಂಗ್ ಕೋಟೆಯ ಸಂಕೀರ್ಣಕ್ಕೆ ಹೊಸ ಅರಮನೆಗಳನ್ನು ಮತ್ತು ಜನಾನಭಾಗವನ್ನು (ಮಹಿಳೆಯರಿಗಾಗಿ ಕಟ್ಟಲಾದ ರಾಜಮನೆತನದ ನಿವಾಸ) ಕಟ್ಟುವ ಮೂಲಕ ಗಣನೀಯ ಸೇರ್ಪಡೆಗಳನ್ನು ಮಾಡಿದ. ಅವನು ಕರಣ್ ಮಹಲ್ ಅನ್ನು ದಿವಾನ್ - ಐ- ಅಮ್ (ಸಾರ್ವಜನಿಕ ಸಂದರ್ಶನದ ಸಭಾಂಗಣ)ನೊಂದಿಗೆ ನವೀಕರಿಸಿ ಅದನ್ನು ಅನುಪ್ ಮಹಲ್ ಎಂದು ಕರೆದನು. 1746 ರಿಂದ 1787 ವರೆಗೆ ಆಳ್ವಿಕೆ ನಡೆಸಿದ ಗಾಜ್ ಸಿಂಗ್ ಚಂದ್ರ ಮಹಲ್(ಚಂದ್ರ ಅರಮನೆ)ನ್ನು ನವೀಕರಿಸಿದ. ಅವನನ್ನು ಅನುಸರಿಸಿದ ಸೂರತ್ ಸಿಂಗ್,1787 ರಿಂದ 1828 ರವರೆಗೆ ಆಳ್ವಿಕೆ ನಡೆಸಿ, ಪ್ರೇಕ್ಷಕರ ಸಭಾಂಗಣವನ್ನು( ಮಾಹಿತಿ ಕೋಶದಲ್ಲಿರುವ ಚಿತ್ರವನ್ನು ನೋಡಿ) ಗಾಜಿನಿಂದ ಮತ್ತು ಉಜ್ಜ್ವಲ ಬಣ್ಣಗೆಲಸದಿಂದ ಅದ್ಧೂರಿಯಾಗಿ ಅಲಂಕರಿಸಿದ. 1872 ರಿಂದ 1887 ರವರೆಗೆ ಆಳ್ವಿಕೆ ನಡೆಸಿದಂತಹ ದುಂಗರ್ ಸಿಂಗ್ ಬಾದಲ್ ಮಹಲ್ ಕಟ್ಟಿಸಿದನು(ಹವಾ ಅರಮನೆ) ಮಳೆಬೀಳುತ್ತಿರುವ ಮತ್ತು ಮೋಡಗಳ(ಬಿಕಾನೆರ್ ಬಂಜರುಪ್ರದೇಶದಲ್ಲಿ ವಿರಳವಾಗಿ ನಡೆಯುವ ಘಟನೆ)ವರ್ಣಚಿತ್ರದ ದೃಷ್ಟಿಯಿಂದ ಅದಕ್ಕೆ ಹಾಗೆಂದು ಹೆಸರಿಟ್ಟನು. 1887 ರಿಂದ 1943 ರವರೆಗೆ ಆಳ್ವಿಕೆ ನಡೆಸಿದಗಂಗಾ ಸಿಂಗ್ ಗಂಗಾ ನಿವಾಸ್ ಅರಮನೆಯನ್ನು ಕಟ್ಟಿಸಿದ. ಪ್ರವೇಶದ್ವಾರದ ಒಳಾಂಗಣದಲ್ಲಿ ಇದು ಗೋಪುರಗಳನ್ನು ಒಳಗೊಂಡಿತ್ತು. ಈ ಅರಮನೆಯನ್ನು ಸರ್ ಸ್ಯಾಮ್ಯೂಲ್ ಸ್ವಿಂಟನ್ ಜಾಕೋಬ್ ವಿನ್ಯಾಸಗೊಳಿಸಿದ್ದಾರೆ.[೧೬] ಗಂಗಾಸಿಂಗ್‌ನ ಮಗ ಸದುಲ್ ಸಿಂಗ್ 1943 ರಲ್ಲಿ ಅವನ ತಂದೆಯ ಉತ್ತರಾಧಿಕಾರಿಯಾದ. ಆದರೆ 1949 ರಲ್ಲಿ ಯುನಿಯನ್ ಆಫ್ ಇಂಡಿಯಾವನ್ನು ಒಪ್ಪಿಕೊಂಡ. 1950 ರಲ್ಲಿ ಅವನು ಸಾವನ್ನಪ್ಪಿದನು.[೧೩]
1818 ರಲ್ಲಿ ಸಹಿಹಾಕಿದ ಪರಮಾಧಿಕಾರದ ಒಪ್ಪಂದದಡಿಯಲ್ಲಿ ಬಿಕಾನೆರ್ ಬ್ರಿಟಿಷ್ ರಾಜ್ರ ಸಾರ್ವಭೌಮತ್ವಕ್ಕೆ ಒಳಪಟ್ಟಿತು. ತರುವಾಯ, ಬಿಕಾನೆರ್‌ನ ಮಹಾರಾಜರುಗಳು ಜುನಾಗಢ್ ಕೋಟೆಯ ನವೀಕರಣಕ್ಕೆ ಅಪಾರ ಹಣ ಹೂಡಿದರು.[೧೭] ಆದಾಗ್ಯೂ, 12 ನೇ ಶತಮಾನದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿಹಾಕುವ ಮೊದಲು,ಬಿಕಾನೆರ್ ಮತ್ತು ಜೋಧಪುರದ ರಾಜರುಗಳ ನಡುವೆ ಮತ್ತು ಇತರ ಠಾಕುರ್‌ಗಳ ನಡುವೆ ಅಂತಃ ಕಲಹ ನಡೆಯುತ್ತಿತ್ತು. ಈ ಕಲಹಗಳನ್ನು ಬ್ರಿಟಿಷ್ ಪಡೆಗಳು ಅಡಗಿಸಿದವು.[೧೪]
ರಾಜಸ್ಥಾನದ ಅರಸರಲ್ಲಿ ಗಂಗಾ ಸಿಂಗ್ ಅತ್ಯಂತ ಪ್ರಖ್ಯಾತ ರಾಜನಾಗಿದ್ದನು.ಅಲ್ಲದೇ ಇವನು ಬ್ರಿಟಿಷ್ ರಾಜ್‌ಗೆ ಅಚ್ಚಮೆಚ್ಚಿನವನಾಗಿದ್ದ ಹಾಗೂ ನೈಟ್ ಕಮಾಂಡರ್ ಆಫ್ ಸ್ಟಾರ್ ಆಫ್ ಇಂಡಿಯಾ ಬಿರುದನ್ನು ಪಡೆದಿದ್ದಾನೆ. ಇಂಪೀರಿಯಲ್ ವಾರ್ ಕ್ಯಾಬಿನೆಟ್‌ನ ಸದಸ್ಯನಾಗಿಯೂ ಅವನು ಸೇವೆ ಸಲ್ಲಿಸಿದ್ದಾನೆ, ಇಂಪೀರಿಯಲ್‌ನಲ್ಲಿ(ಮೊದಲನೆಯ ವಿಶ್ವ ಯುದ್ಧದ ಅಧಿವೇಶನಗಳು)ರಾಷ್ಟ್ರವನ್ನು ಪ್ರತಿನಿಧಿಸಿದ ಹಾಗು ವರ್ಸೈಲ್ಸ್ ಶಾಂತಿ ಸಮ್ಮೇಳನದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದ ಮತ್ತು ವಿಶ್ವ ಯುದ್ಧ IIರಲ್ಲಿ ಅದೃಷ್ಟವು ಏರಿಳಿತವಾಗಬಹುದೆಂಬ ಅರಿವು ಅವನಿಗಿತ್ತು. ಆದರೆ ಮಿತ್ರ ರಾಷ್ಟ್ರಗಳು ಯುದ್ಧವನ್ನು ಗೆಲ್ಲುವ ಮೊದಲೇ 1943 ರಲ್ಲಿ ಮೃತಪಟ್ಟನು. ಜುನಾಗಢ್‌ನಲ್ಲಿ ಕಟ್ಟಡ ಚಟುವಟಿಕೆಗಳಿಗೆ ಅವನ ಕೊಡುಗೆಯು,ಗಂಗಾ ಮಹಲ್‌ನಲ್ಲಿ ಖಾಸಗಿ ಮತ್ತು ಸಾರ್ವಜನಿಕ ಪ್ರೇಕ್ಷಕರಿಗಾಗಿ ಪ್ರತ್ಯೇಕ ಸಭಾಂಗಣಗಳು ಮತ್ತು ಔಪಚಾರಿಕ ಸಮಾರಂಭಗಳಿಗೆ ದರ್ಬಾರ್ ಸಭಾಂಗಣ ಒಳಗೊಂಡಿದೆ. ಬಿಕಾನೆರ್‌ನ ರಾಜನಾಗಿ ಸುವರ್ಣ ಮಹೋತ್ಸವ ನಡೆಸಿದ ಸಭಾಂಗಣ ಈಗ ವಸ್ತು ಸಂಗ್ರಹಾಲಯವಾಗಿದೆ. ಜುನಾಗಢ್ ಕೋಟೆಯ ಉತ್ತರಕ್ಕೆ ಅವನು ಸ್ವಿನ್‌ಟನ್ ವಿನ್ಯಾಸಗೊಳಿಸಿ, ನಿರ್ಮಿಸಿದ ಹೊಸ ಅರಮನೆಯನ್ನು ಹೊಂದಿದ್ದ.ಇದು ಬಿಕಾನೆರ್‌ನಲ್ಲಿ ನಿರ್ಮಿಸಿದ ಹೊಸ ಅರಮನೆಗಳ ಪೈಕಿ ಮೂರನೆಯದಾಗಿದ್ದು, ಅರಮನೆಗೆ ಲಾಲ್‌ಗಢ್ ಅರಮನೆ ಎಂದು ಅವನ ತಂದೆಯ ಹೆಸರನ್ನಿಟ್ಟ. 1902 ರಲ್ಲಿ ಅವನ ನಿವಾಸವನ್ನು ಜುನಾಗಢ್ ಕೋಟೆಯಿಂದ ಅರಮನೆಗೆ ಬಸಲಾಯಿಸಿದನು. ರಾಜಮನೆತನದ ಕುಟುಂಬವು ಲಾಲ್‌ಬಾಗ್ ಅರಮನೆಯ ವಿಶೇಷ ವಸತಿಗೃಹದಲ್ಲಿ ಈಗಲೂ ವಾಸವಿದೆ. ಲಾಲ್‌ಬಾಗ್ ಅರಮನೆಯನ್ನು ಅವರು ಪಾರಂಪರಿಕ ಹೊಟೆಲ್ ಆಗಿ ಪರಿವರ್ತಿಸಿದ್ದಾರೆ.[೧೪][೧೭]
ಬೌಗೋಳಿಕತೆ
ಬದಲಾಯಿಸಿಸಾರಿಗೆ
ಬದಲಾಯಿಸಿಬಿಕಾನೆರ್ನ ಆಂತರಿಕ ಸಾರಿಗೆ ವ್ಯವಸ್ಥೆ ಆಟೋ ರಿಕ್ಷಾಗಳನ್ನು ಮತ್ತು ನಗರದ (ಸಿಟಿ) ಬಸ್‌ಗಳನ್ನು ಒಳಗೊಂಡಿದೆ. ಬ್ರಾಡ್ ಗೇಜ್ ರೈಲ್ವೆಯ ಮೂಲಕ ಬಿಕಾನೆರ್ ಅನೇಕ ಭಾರತೀಯ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ನಗರವು, ದೆಹಲಿ, ಮುಂಬಯಿ, ಕಾನ್ ಪುರ್, ಆಗ್ರ, ಜಲಂಧರ್, ಬರೋಡ, ಹೈದ್ರಾಬಾದ್, ಕೋಲ್ಕತ್ತ, ಗೌಹಾಟಿ, ಜೈಪುರ್, ಸೂರತ್, ಜಲಂಧರ್, ತಿರುವನಂತಪುರಂ, ಚಂಡಿಗಡ್, ಜಮ್ಮು, ಮತ್ತು ಅಹಮದಾಬಾದ್ ನಗರಗಳೊಡನೆ ನೇರ ರೈಲ್ವೆ ಸಂಪರ್ಕವನ್ನು ಹೊಂದಿದೆ. ಆದರೂ, ಭಾರತದ ಇತರ ಪ್ರಮುಖ ನಗರಗಳಾದ ಇಂದೋರ್, ಭೋಪಾಲ್, ಗ್ವಾಲಿಯರ್, ಜಬಲ್ ಪುರ್, ಗೋರಕ್ ಪುರ್ ಮತ್ತು ಪುರಿ ಯಂತಹ ನಗರಗಳೊಂದಿಗೆ ರೈಲ್ವೆ ಸಂಪರ್ಕವನ್ನು ಹೊಂದಿಲ್ಲ. ಬಿಕಾನೆರ್ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ ಮತ್ತು ದೆಹಲಿ, ಜೈಪುರ್, ಆಗ್ರ, ಲೂಧಿಯಾನ, ಬಟಿಂಡಾ, ಅಮ್ ಬಾಲ, ಅಹಮದಾಬಾದ್, ಹರಿದ್ವಾರ್, ಜೋಧ್ ಪುರ್, ಇಂದೋರ್ ಮತ್ತು ಇತರ ನಗರಗಳೊಂದಿಗೆ ನೇರ ಸಾರಿಗೆ ಸಂಪರ್ಕವನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗಳು 11, 15, ಮತ್ತು 8 ಬಿಕಾನೆರ್ ನಲ್ಲಿ ಸೇರುತ್ತವೆ. ಬಿಕಾನೆರ್ ನಾಲ್ ನಲ್ಲಿ ಸುಸಜ್ಜಿತ ಮಿಲಿಟರಿ ವಾಯುನೆಲೆಯನ್ನು ಹೊಂದಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪ್ರಯಾಣಿಕರ ವಿಮಾನ ನಿಲ್ದಾಣವನ್ನು ನಿರ್ಮಿಸುವ ಆಶಯವನ್ನು ಹೊಂದಿದೆ.
ವಾಯುಗುಣ
ಬದಲಾಯಿಸಿಬಿಕಾನೆರ್ ಥಾರ್ ಮರುಭೂಮಿಯ ಮಧ್ಯದಲ್ಲಿ ನೆಲೆಗೊಂಡಿದ್ದು, ಅತಿ ವಿರಳ ಮಳೆ ಮತ್ತು ವಿಪರೀತ ತಾಪಮಾನದಿಂದ ಕೂಡಿದೆ. ಬೇಸಿಗೆಯಲ್ಲಿ ತಾಪಮಾನ 50 °C ಗಿಂತ ಹೆಚ್ಚಾಗಿರುತ್ತದೆ ಹಾಗು ಚಳಿಗಾಲದಲ್ಲಿ ಘನೀಕರಣ ಬಿಂದುವಿಗೆ ಕುಸಿಯುತ್ತದೆ.
ಬಿಕಾನೆರ್‌ನ ಹವಾಮಾನ ಸ್ವರೂಪವು ತಾಪಮಾನದಲ್ಲಿ ಉಂಟಾಗುವ ವಿಪರೀತ ಬದಲಾವಣೆಗಳ ಲಕ್ಷಣಗಳಿಂದ ಕೂಡಿದೆ. ಬೇಸಿಗೆಯ ಕಾಲದಲ್ಲಿ ತಾಪಮಾನ 28–41.8 °C (82.4–107.2 °F) ರಷ್ಟಿದ್ದಾಗ ಅತ್ಯಂತ ಹೆಚ್ಚು ಸುಡುಬಿಸಿಲಿರುತ್ತದೆ. ಚಳಿಗಾಲದಲ್ಲಿ, 5–23.2 °C (41.0–73.8 °F) ರಷ್ಟು ತಾಪಮಾನದ ಮೂಲಕ ತಕ್ಕಮಟ್ಟಿಗೆ ತಣ್ಣಗಿನ ವಾತಾವರಣ ಇರುತ್ತದೆ.[೧೮] ವಾರ್ಷಿಕ ಮಳೆಯ ಪ್ರಮಾಣ 260–440 millimetres (10–17 in) ನಷ್ಟಿರುತ್ತದೆ.[೧೮][೧೯]
ಕಲೆ ಮತ್ತು ಸಾಂಸ್ಕೃತಿ
ಬದಲಾಯಿಸಿಬಿಕಾನೆರ್ ಈ ಕೆಳಕಂಡವುಗಳಿಗೆ ಪ್ರಖ್ಯಾತವಾಗಿದೆ -:
1) ಇದರ ಒಂಟೆ ಸಂಶೋಧನೆ ಕೇಂದ್ರ (NRCC). 2) ಇದರ "ಬಿಕಾನೆರಿ ಬುಜಿಯ. 3) ಇದರ ಉಣ್ಣೆ ಉತ್ಪಾದನೆ. 4) ಇದರ ಸಿಹಿತಿಂಡಿಗಳು.
ಬಿಕಾನೆರಿ ಬುಜಿಯು ಮಸಾಲೆಭರಿತ ಲಘುಉಪಹಾರವಾಗಿದ್ದು, ಇದನ್ನು ಮೋತ್ ದಾಲ್, ಮಸಾಲೆಗಳು, ಖಾದ್ಯದ ಎಣ್ಣೆಯಿಂದ ತಯಾರಿಸಲಾಗುತ್ತದೆ. ಬಿಕಾನೆರ್ ಅದರ ಕರಕುಶಲವಸ್ತುಗಳು ಮತ್ತು ಚರ್ಮದ ವಸ್ತುಗಳಿಗೆ, ಅದರ ಅರಮನೆಗಳಿಗೆ ಹಾಗು ಏಷ್ಯಾದ ಅತ್ಯಂತ ದೊಡ್ಡ ಒಂಟೆ ಸಾಕಣೆ ಕೇಂದ್ರವನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ.
ನಗರವು ಅದರ ಜರೋಕಸ್‌ನ ಸಂಕೀರ್ಣವಾದ ಕೆತ್ತನೆಗೂ ಕೂಡ ಹೆಸರಾಗಿದೆ. ಈ ಕೆಂಪು ಮರಳಶಿಲೆಗಳ ಕಲ್ಲಿನ ಜಾಲಿಗಳು(ತೆರೆಗಳು), ಜುನಾಗಢ್ ಕೋಟೆಯ ಕಿಟಕಿಗಳಲ್ಲಿ ಹಾಗು ದೇವಸ್ಥಾನಗಳು ಮತ್ತು ಹವೇಲಿಗಳಲ್ಲಿ(ಉತ್ತರ ಭಾರತದ ಮಹಲುಗಳು) ಕಂಡುಬರುತ್ತವೆ. ಜಾಲಿಗಳನ್ನು ವಾತಾಯನ ವ್ಯವಸ್ಥೆಗೆ ಹಾಗೂ ಮಹಿಳೆಯರು ಮರೆಯಾಗಿದ್ದುಕೊಂಡೇ ಹೊರಗಿನ ಪ್ರಪಂಚವನ್ನು ನೋಡಲು ಬಳಸಲಾಗುತ್ತಿತ್ತು.
ಈ ಕಲ್ಲಿನ ಕಿಟಕಿಯ ತೆರೆಗಳಿಗಾಗಿ ಬಳಸುತ್ತಿದ್ದ ಕೆಂಪು ಮರಳಶಿಲೆಗಳನ್ನು ಹತ್ತಿರದ ದುಲ್ಮೇರ ಹಳ್ಳಿಯಿಂದ ಸರಬರಾಜು ಮಾಡಲಾಗುತ್ತಿತ್ತು.
ಉಸ್ಟ ಕಲೆ
ಬದಲಾಯಿಸಿಬಿಕಾನೆರ್ ಹಿಂದೆ ಮತ್ತು ಈಗಲೂ ಉಸ್ಟ ಕಲೆಯ ಕೇಂದ್ರವಾಗಿದೆ. ಉಸ್ಟ ಕಲೆಯು ಬಿಕಾನೆರ್ನ ಉಸ್ಟ ಕುಟುಂಬಕ್ಕೆ ಸೇರಿದ ಶ್ರೇಷ್ಠ ಕಲೆಗಾರರಿಂದ ತಯಾರಿಸಲಾದ ಮನೋಟಿ-ನಕಾಷಿ (ಉಬ್ಬಿದ ಅಥವಾ ಉಬ್ಬಿಲ್ಲದ ಹೂವಿನಾಕೃತಿಗಳು ಹಾಗು ಚಿನ್ನದ ಹೊದಿಕೆಯಿರುವ ಜ್ಯಾಮಿತಿಯಾಕಾರದ ವಸ್ತುಗಳು)ಸಾಧನಕ್ಕೆ ಜಾತಿವಿಶಿಷ್ಠ ಪದವಾಗಿದೆ. ಉಸ್ಟ ಕಲಾವಿದರು ಮತ್ತು ಕಲೆಗಾರರು 16 ನೇ ಶತಮಾನದ ಉತ್ತರಾರ್ಧದಿಂದ 19 ನೇ ಶತಮಾನದ ಉತ್ತರಾರ್ಧದವರೆಗೂ ಅರೆಪಾರದರ್ಶಕ ಮತ್ತು ಅಪಾರದರ್ಶಕ ತರಕಾರಿ ಮತ್ತು ಖನಿಜ ಜಲವರ್ಣಗಳನ್ನು ಬಳಸಿ ಚಿತ್ರಿಸುತ್ತಿದ್ದ ಬಿಕಾನೆರ್ ಶಾಲೆಯ ಎಲ್ಲಾ "ಸೂಕ್ಷ್ಮ" ವರ್ಣಚಿತ್ರಗಳ ಉತ್ಪಾದನೆಯನ್ನು ಕೂಡ ನಿಯಂತ್ರಿಸುತ್ತಿದ್ದರು. ಬಿಕಾನೆರ್ ಶಾಲೆಯ ಪ್ರಖ್ಯಾತ ಚಿತ್ರಕಾರರು, ಹಮಿದ್ ರುಕ್ನುದ್ದಿನ್, ಅಹಮದ್, ನಥು ಜಿ, ನುರೆ, ರಹೀಮ್, ಇಸ, ಇಸೊ, ಸಹಾಬುದ್ದಿನ್ , ರಹೀಮ್ ಜಿ ಮತ್ತು ಮುರಾದ್.
ಜಾತ್ರೆಗಳು ಮತ್ತು ಉತ್ಸವಗಳು
ಬದಲಾಯಿಸಿ- ಕಾರ್ನಿ ಮಟ ಜಾತ್ರೆ
- ಗಂಗೌರ್
- ಕಪಿಲ್ ಮುನಿ ಜಾತ್ರೆ
- ಒಂಟೆ ಉತ್ಸವ: ಪ್ರತಿ ಜನವರಿಯಲ್ಲಿ ರಾಜ್ಯ ಸರ್ಕಾರವು ಒಂಟೆಗಳ ಓಟದ ಪಂದ್ಯಗಳೊಂದಿಗೆ ಒಂಟೆ ಉತ್ಸವ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿದ್ ಜನರು ನಿರ್ವಹಿಸುವ ಬೆಂಕಿ ನೃತ್ಯವನ್ನು ಆಯೋಜಿಸುತ್ತದೆ.
- ಅಕ್ಷಯ ತೃತೀಯ ಅಥವಾ "ಅಕ್ಕ ತೇಜ್": ಬಿಕಾನೆರ್ ಸ್ಥಾಪನೆಯಾದ ದಿನ. ಇದು ರಾವ್ ಬಿಕಾ ಹೊಸ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ದಿನವಾಗಿದೆ. ಸಾಮಾಜಿಕ ಸಮುದಾಯಗಳಿಗೆ ಸೇರಿರುವ ಜನರು ಪ್ರತಿವರ್ಷ ಈ ದಿನದಂದು ಗಾಳಿಪಟಗಳನ್ನು ಅಥವಾ "CHANDA"ವನ್ನು ಹಾರಿಸುವ ಮೂಲಕ ಸಂತೋಷ ಅನುಭವಿಸುತ್ತಾರೆ. ಅಲ್ಲದೇ ಅವರು "ಕಿಚ್ರವನ್ನು ಮತ್ತು ಇಮ್ ಲಾನಿ"ಯಂತಹ ವಿಶೇಷ ಭೋಜನವನ್ನು ಸೇವಿಸುತ್ತಾರೆ.
- ಪರ್ಯುಷಣ್:ಇದು ಜೈನ ಸಮುದಾಯದ ಅತ್ಯಂತ ದೊಡ್ಡ ಉತ್ಸವವಾಗಿದೆ. ಇದನ್ನು ಹಿಂದೂ ಪಂಚಾಂಗದ ಭಾದ್ರಪದ ಮಾಸದಲ್ಲಿ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ನಗರದಲ್ಲಿ ಆಚರಿಸಲಾಗುತ್ತದೆ. ದೇವಸ್ಥಾನಗಳನ್ನು ಅದ್ದೂರಿಯಾಗಿ ಅಲಂಕರಿಸಲಾಗುತ್ತದೆ. ಆಧ್ಯಾತ್ಮಿಕ ಆಚರಣೆಗಳು ಮತ್ತು ಉಪವಾಸಗಳು ನಗರದಲ್ಲೆಲ್ಲಾ ಕಂಡುಬರುತ್ತವೆ.
- ಕಾರ್ತಿಕ ಪೌರ್ಣಿಮೆ: ಜೈನ ಸಮುದಾಯವು ಈ ದಿನದಂದು ವರ್ಣಚಿತ್ರಗಳನ್ನು,ತೀರ್ಥಂಕರರ ಪಲಕ್ಕಿಗಳನ್ನು ಮತ್ತು ಸಂಗೀತವಾದ್ಯಗಳನ್ನು ಒಳಗೊಂಡಂತೆ ಬಹುದೊಡ್ಡ ಮೆರವಣಿಗೆಯನ್ನು ಕೈಗೊಳ್ಳುತ್ತಾರೆ. ಮೆರವಣಿಗೆ ಜೈನ ನಿವಾಸಿಗಳಿಂದ ಕೂಡಿದ ಎಲ್ಲಾ ಸ್ಥಳಗಳಿಗೂ ತೆರಳುತ್ತದೆ. ಸ್ಥಳೀಯ ಭಜನೆ ಮಂಡಳಿಗಳು ಅಥವಾ ಆಧ್ಯಾತ್ಮಿಕ ವಾದ್ಯಮೇಳಗಳು ಈ ಸಂದರ್ಭದಲ್ಲಿ ಅತ್ಯಂತ ಸಂಭ್ರಮದಿಂದ ಪ್ರದರ್ಶನ ನೀಡುತ್ತವೆ. ಇದಕ್ಕೆ ಸರಿಸಮಾನವಾದ ಹಬ್ಬಗಳು ಭಾರತದಲ್ಲಿ ಬೇರೆಡೆಯಲ್ಲೆಲ್ಲೂ ಜರುಗುವುದಿಲ್ಲ.
ಬಿಕಾನೆರ್ ಮತ್ತು ಸಮೀಪದ ಆಕರ್ಷಣೆಗಳು
ಬದಲಾಯಿಸಿಜುನಾಗಢ್ ಕೋಟೆ
ಬದಲಾಯಿಸಿ1571 ರಿಂದ 1612 ರ ವರೆಗೆ ಆಳ್ವಿಕೆ ನಡೆಸಿದ ಬಿಕಾನೆರ್ ನ ಆರನೆಯ ರಾಜನಾದ ರಾಜಾ ರಾಯ್‌ಸಿಂಗ್ ಈ ಕೋಟೆಯನ್ನು ಕಟ್ಟಿಸಿದ. ರಾಯ್ ಸಿಂಗ್ ಮಾರ್ವಾರ್ ನ ಭಾಗವನ್ನು ವಶಪಡಿಸಿಕೊಂಡ ಹಾಗು ಅವನು ಮಿಲಿಟರಿ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸೇವೆಗಾಗಿ ಮೊಗಲ್ ಸಾಮ್ರಾಟ ಅಕ್ಬರ್ ನಿಂದ ಗುಜರಾತ್ ಮತ್ತು ಬುರಾನ್ಪುರ್ ನಲ್ಲಿ ಭೂಪ್ರದೇಶಗಳನ್ನು ಬಹುಮಾನವಾಗಿ ಪಡೆದಿದ್ದ. ಇದು ಮತ್ತು ಜೋಧಪುರದಿಂದ ಬಂದ ಹಣ ಅವನನ್ನು ಕೋಟೆ ಕಟ್ಟಲು ಅನುಕೂಲ ಒದಗಿಸಿತು. ಅಕ್ಬರ್ ಮತ್ತು ಆತನ ಉತ್ತರಾಧಿಕಾರಿಯಾದ ಜಹಾಂಗೀರ್‌ನ ಸಾಮ್ರಾಜ್ಯದ ಆಸ್ಥಾನಗಳಲ್ಲಿ ರಾಯ್ ಸಿಂಗ್ ಉನ್ನತ ಸ್ಥಾನ ಪಡೆದಿದ್ದನು. ಸಾಮ್ರಾಜ್ಯದ ಸೇವೆಯ ಸಂದರ್ಭದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದನಲ್ಲದೇ, ಇದರಿಂದ ಅವನು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮನ್ನಣೆ ನೀಡಿದ. ಈ ಕಲ್ಪನೆಗಳನ್ನು ಜುನಾಗಢ್ ಕೋಟೆಯ ವಾಸ್ತು ಶೈಲಿಯಲ್ಲಿ ಅತಿ ಸೂಕ್ಷ್ಮವಾಗಿ ಅಳವಡಿಸಿದ.
ಲಕ್ಷ್ಮಿ ನಿವಾಸ್ ಅರಮನೆ
ಬದಲಾಯಿಸಿಲಕ್ಷ್ಮಿ ನಿವಾಸ್ ಪ್ಯಾಲೆಸ್, ಭಾರತದ ರಾಜ್ಯ ರಾಜಸ್ಥಾನದಲ್ಲಿ ಮುಂಚಿನ ಬಿಕಾನೆರ್ ರಾಜ್ಯದ ಅರಸ ಬಿಕಾನೆರ್‌ನ ಮಹಾರಾಜ ಗಂಗಾ ಸಿಂಗ್(/೦)ಮುಂಚೆ ವಾಸವಿದ್ದ ಅರಮನೆಯಾಗಿತ್ತು. ಇದನ್ನು ಬ್ರಿಟಿಷ್ ವಿನ್ಯಾಸಕ ಸರ್ ಸ್ಯಾಮುಲ್ ಸ್ವಿಂಟನ್ ಜಾಕೋಬ್ 1902 ರಲ್ಲಿ ವಿನ್ಯಾಸಗೊಳಿಸಿದರು. ಇದರ ವಾಸ್ತುಶಿಲ್ಪವು ಇಂಡೋ-ಸ್ಯಾರಸೆನಿಕ್‌ಶೈಲಿಯಿಂದ ಕೂಡಿದೆ. ಈಗ ಇದು ಐಶಾರಾಮಿ ಹೋಟೆಲ್ ಆಗಿದ್ದು, ಗೋಲ್ಡನ್ ಟ್ರೈಯಾಂಗಲ್ ಹೋಟೆಲ್ ಅಂಡ್ ಪ್ಯಾಲೆಸ್ ಖಾಸಗಿ ನಿಯಮಿತದ ಸ್ವಾಮ್ಯದಲ್ಲಿದೆ. ಕೆಂಪು ಮರಳಶಿಲೆಯಲ್ಲಿ ಕಟ್ಟಿರುವ ಭವ್ಯವಾದ ರಚನೆಯು ಬಿಕಾನೆರ್ ಪ್ರವಾಸಿಗರ ವೀಕ್ಷಣೆಗೆ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ.[೨೦]
ಲಾಲ್‌ಗಢ್ ಅರಮನೆ
ಬದಲಾಯಿಸಿಲಾಲ್ ಗಢ್ ಅರಮನೆಯನ್ನು ರಜಪೂತ್ ಮೊಗಲ್ ಮತ್ತು ಯುರೋಪಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ 1902 ಮತ್ತು 1926 ರ ನಡುವೆ ಕಟ್ಟಲಾಯಿತು. ಈ ಕಟ್ಟಡವನ್ನು ಮಹರಾಜ ಗಂಗಾ ಸಿಂಗ್ (1889–1925) ಅವನ ತಂದೆಯಾದ ಮಹರಾಜ ಲಾಲ್ ಸಿಂಗ್ ರ ಸ್ಮರಣಾರ್ಥವಾಗಿ ಕಟ್ಟಿಸಿದ ಹಾಗು ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿ ಸ್ವಿಂಟನ್ ಜಾಕೋಬ್ ವಿನ್ಯಾಸಗೊಳಿಸಿದ್ದಾರೆ. ಇದು ಕೆಂಪು ಮರಳಶಿಲೆಗಳ ಹೊದಿಕೆಯಿಂದ ಕೂಡಿದ್ದು ಅನೇಕ ಭವ್ಯವಾದ ಸಭಾಂಗಣಗಳು,ಮೊಗಸಾಲೆ , ಗುಮ್ಮಟಗಳಿಂದ ಮತ್ತು ಉದ್ಯಾನಗೃಹ ಗಳಿಂದ ಆವೃತವಾಗಿದೆ. ಕಟ್ಟಡದಲ್ಲಿ ಭವ್ಯವಾದ ಕಂಬಗಳು,ವ್ಯಾಪಕ ಬೆಂಕಿಗೂಡುಗಳು ಮತ್ತು ಇಟಾಲಿಯನ್ ಕಂಬಸಾಲುಗಳು ಮತ್ತು ಸಂಕೀರ್ಣ ಜಾಲರಿ ಜೋಡಣೆಗಳು ಮತ್ತು ಬಳ್ಳಿಗೆಲಸ ಕಂಡುಬರುತ್ತವೆ. ಅರಮನೆಯು ಶ್ರೀ ಸದುಲ್ ವಸ್ತುಸಂಗ್ರಾಹಲಯಕ್ಕೆ ಮತ್ತು ಪ್ರಪಂಚದ ನಾಲ್ಕನೇ ಅತ್ಯಂತ ದೊಡ್ಡ ಗ್ರಂಥಾಲಯಕ್ಕೆ ನೆಲೆಯಾಗಿದೆ. ಬಿಕಾನೆರ್ ರಾಜಮನೆತನ ಇನ್ನೂ ಆ ಅರಮನೆಯಲ್ಲಿ ವಾಸಿಸುತ್ತಿದ್ದರೂ, ಬಿಕಾನೆರ್ ರಾಜಮನೆತನದ ಕುಟುಂಬ ನಿರ್ವಹಿಸುತ್ತಿರುವ ಪಾರಂಪರಿಕ ಹೋಟೆಲ್ ಆಗಿ ಈ ಕಟ್ಟಡದ ಒಂದು ಭಾಗವನ್ನು ಪರಿವರ್ತಿಸಲಾಗಿದೆ.
ಮುಲ್ನಾಯಕ್‌ಜಿ
ಬದಲಾಯಿಸಿಇದನ್ನು 1486 ರಲ್ಲಿ ಕಟ್ಟಲಾಯಿತು. ಮುಲ್ನಾಯಕ್‌ಜಿ ಬಿಕಾನೆರ್‌ನಲ್ಲಿ ಕಟ್ಟಲಾದ ಮೊದನೆಯ ವೈಷ್ಣವ ದೇವಾಲಯವಾಗಿದೆ. ಇದು ವೈಷ್ಣವ ಪಂಥದ ಪ್ರಧಾನ ಪೀಠವಾಗಿದೆ. ಬಿಕಾನೆರ್‌ನ ರಟ್ಟನಿ ವ್ಯಾಸ ಕುಲದ ಭಗವದ್ ಕಥಾ ವಾಚಕರಲ್ಲಿ ಮೊದಲಿಗರಾದ ಶ್ರೀ ರಟ್ಟೋಜಿ ವ್ಯಾಸರು ರಾಜನಾದ ರಾವ್ ಬಿಕಾ ಮತ್ತು ಅವನ ಸಹಾಯಕ ಸಲ್ಲುಜಿ ರಥಿಗೆ ಭಗವದ್ ಉಪದೇಶವನ್ನು ಮಾಡಿದರು. ಈ ಆಚರಣೆಯು ಕೊನೆಯ ದಿನದವರೆಗೂ ಮುಂದುವರಿಯಿತು. ಇದರ ಅಗ್ರ ದೇವತೆ ಮುಲ್ನಾಯಕ್ ಕೃಷ್ಣ.
ಲಕ್ಷ್ಮಿನಾಥ ದೇವಾಲಯ
ಬದಲಾಯಿಸಿಲಕ್ಷ್ಮಿನಾಥ ದೇವಾಲಯ ಬಿಕಾನೆರ್ ನಲ್ಲಿರುವ ಅತ್ಯಂತ ಪುರಾತನ (ಹಳೆಯ) ದೇವಾಲಯಗಳಲ್ಲಿ ಒಂದಾಗಿದೆ. 1488 ರಲ್ಲಿ ರಾವ್ ಬಿಕಾ ಈ ನಗರಕ್ಕೆ ಇಲ್ಲಿ ಅಡಿಪಾಯ ಹಾಕಿದ. ಈ ದೇವಾಲಯವನ್ನು ರಾವ್ ಲುನ್ ಕರಣ್ ಆಳ್ವಿಕೆಯಲ್ಲಿ ಕಟ್ಟಲಾಯಿತು ಹಾಗುಮಹಾರಾಜ ಗಂಗಾ ಸಿಂಗ್ ರ ಆಳ್ವಿಕೆಯಲ್ಲಿ ವಿಸ್ತರಣೆ ಮಾಡಲಾಯಿತು.
ಬಂದಸಾರ್ ಜೈನ ದೇವಾಲಯ
ಬದಲಾಯಿಸಿಬಿಕಾನೆರ್ ನಗರದ ಭೂದೃಶ್ಯವನ್ನು ಅಲಂಕರಿಸಿರುವ 27 ಜೈನ ದೇವಾಲಯಗಳಲ್ಲಿ ಈ ದೇವಾಲಯ 5ನೇಯ ತೀರ್ಥಂಕರನಾದ ಸುಮತಿನಾಥ್‌ನಿಗೆ ಮೀಸಲಾಗಿದೆ. ಇದನ್ನು ಅತ್ಯಂತ ಎತ್ತರದ ಮತ್ತು ಸುಂದರವಾದ ದೇವಾಲಯವೆಂದು ಪರಿಗಣಿಸಲಾಗಿದೆ. ಈ ದೇವಾಲಯವನ್ನು ಬಾಂದಾ ಶಾಹ್ ಎಂಬ ಜೈನ ವ್ಯಾಪಾರಿ ಕಟ್ಟಿಸಿದನು. ಈ ದೇವಾಲಯದ ಅಡಿಪಾಯದಲ್ಲಿ ಶುದ್ಧ ತುಪ್ಪ ಮತ್ತು ಒಣಗಿದ ಕೊಬ್ಬರಿಗಳನ್ನು ತುಂಬಲಾಗಿದೆ.
ಈ ದೇವಾಲಯ ಮುಖ್ಯವಾಗಿ ಗೋಡೆಗಳ ಚಿತ್ರಕಲೆ ಮತ್ತು ಉಸ್ಟಕಲೆಗಾಗಿ ಪ್ರಸಿದ್ಧವಾಗಿದೆ. ಇದನ್ನು ಕೆಂಪು ಮರಳಶಿಲೆಯಿಂದ ಕಟ್ಟಲಾಗಿದೆ ಹಾಗು ಮೂರು ಮಹಡಿಗಳಾಗಿ ವಿಭಜಿಸಲಾಗಿದೆ. ದೇವಾಲಯದ ಅತೀ ಎತ್ತರದ ಮಹಡಿಯನ್ನು ಹತ್ತಿ ಬಿಕಾನೆರ್‌ನ ದಿಗಂತವನ್ನು ವೀಕ್ಷಿಸಬಹುದು.
ಕೊಲಯತ್
ಬದಲಾಯಿಸಿಕೊಲಯತ್ ಪ್ರಸಿದ್ಧ ಯಾತ್ರ ಸ್ಥಳವಾಗಿದ್ದು , ಕಪಿಲನಿಗೆ ಮೀಸಲಾಗಿರುವ ದೇವಾಲಯವನ್ನು ಹೊಂದಿದೆ.ಭಕ್ತರ ಪ್ರಕಾರ ಇವನು ಸರೋವರದ ಬಳಿ ಕುಳಿತು ಧ್ಯಾನ ಮಾಡಿದ್ದನೆಂದು ಹೇಳಲಾಗುತ್ತದೆ. ಪುಷ್ಕರ್ ಉತ್ಸವದ ಒಂದು ವಾರದ ಮುಂಚೆ(ಮೊದಲು) ಮತ್ತು ನಂತರದ ಒಂದು ವಾರದ ವರೆಗೆ ನೀವು ಸಾಧುಗಳನ್ನು ನೋಡಲು ಬಯಸುವುದಾದರೆ ಸರೋವರವು ಮತ್ತಷ್ಟು ಆಸಕ್ತಿಕರವಾಗಿರುತ್ತದೆ. ಪುಷ್ಕರಕ್ಕೆ ಕೆಲವು ಸಾಧುಗಳು ಬಂದರೆ, ಕೊಲಯತ್‌ಗೆ ನೂರಾರು ಸಾಧುಗಳು ಬರುತ್ತಾರೆ.
ಕರ್ಣಿಮಾತ ದೇವಾಲಯ
ಬದಲಾಯಿಸಿವಿಶ್ವಪ್ರಸಿದ್ಧವಾಗಿರುವ ಕರ್ಣಿಮಾತಾ ಪೂಜಾಮಂದಿರವನ್ನು ಬಿಕಾನೆರ್‌ನಿಂದ ದಕ್ಷಿಣಕ್ಕೆ 30 ಕಿಲೋಮೀಟರ್ ದೂರದಲ್ಲಿ ಜೋಧಪುರ್‌ದ ರಸ್ತೆಯಲ್ಲಿರುವ ದೆಶ್ ನೊಕೆ ನಗರದಲ್ಲಿ ಕಾಣಬಹುದು. ಕರ್ಣಿಮಾತಳನ್ನು ದುರ್ಗಾದೇವಿಯ ಅವತಾರವೆಂದು ಪೂಜಿಸಲಾಗುತ್ತದೆ.
ದೇವಾಲಯದಲ್ಲಿ ಎಲ್ಲಾ ಕಡೆಯಲ್ಲೂ ಕಂಡುಬರುವಂತಹ ಇಲಿಗಳಿಗಾಗಿ ಈ ದೇವಾಲಯ ಪ್ರಸಿದ್ಧವಾಗಿದೆ.
ಶಿವ್ ಬರಿ ದೇವಾಲಯ
ಬದಲಾಯಿಸಿಈ ದೇವಾಲಯವನ್ನು 19 ನೇ ಶತಮಾನದ ಉತ್ತರಾರ್ಧದಲ್ಲಿ ದುಂಗರ್ ಸಿಂಗ್ ಕೆಂಪು ಮರಳಶಿಲೆಗಳಿಂದ ಕಟ್ಟಿಸಿದನು. ದೇವಾಲಯವು ಮಾಳಿಗೆಗಳಿಂದ ಕೂಡಿದ ಗೋಡೆಯಿಂದ ಸುತ್ತುವರಿದಿದೆ. ಇದು ಕಪ್ಪು ಅಮೃತಶಿಲೆಯ ಶಿವನ ಚತುರ್ಮುಖ ವಿಗ್ರಹವನ್ನು ಮತ್ತು ಶಿವ ಲಿಂಗದತ್ತ ಮುಖ ಮಾಡಿಕೊಂಡಿರುವ ಕಂಚಿನ ನಂದಿಯ ಪ್ರತಿಮೆಯನ್ನು ಹೊಂದಿದೆ. ಬಾವರಿಗಳೆಂದು ಕರೆಯಲ್ಪಡುವ ಇನ್ನೂ ಎರಡು ನೀರಿನ ಪುಷ್ಕರಿಣಿಗಳಿವೆ. ದೇವಾಲಯವು ಶ್ರಾವಣ(ಆಗಸ್ಟ್) ಮಾಸದಲ್ಲಿ ವಿಶೇಷವಾಗಿ ಸೋಮವಾರದಂದು ನೂರಾರು ಭಕ್ತರನ್ನು(ವೀಕ್ಷಕರು)ಆಕರ್ಷಿಸುತ್ತದೆ.
ಇತರ ಆಕರ್ಷಣೆಗಳು
ಬದಲಾಯಿಸಿ- ಬಿಕಾನೆರ್ ನ ಒಂಟೆ ಸಂಶೋಧನ ಕೇಂದ್ರ
- ರಾಜಸ್ಥಾನದ ರಾಜ್ಯ ದಾಖಲೆಗಳು
- ಸುರ್ ಸಾಗರ್
- ಸಾರ್ವಜನಿಕ ಉದ್ಯಾನ ಮತ್ತು ಮೃಗಾಲಯ
- ರಾಜ್ ರತನ್ ಬಿಹಾರಿನ್ದ್ ರಾಸಿಕ್ ಸಿರೊಮಣಿ ದೇವಸ್ಥಾನ
- ಲಕ್ಷ್ಮಿನಾಥ ದೇವಾಲಯ
- ಬಂದಸಾರ್ ಜೈನ ದೇವಾಲಯ
- ವೈದೇಹಿ ಜಾಗತಿಕ ಟ್ರಸ್ಟ್
- ವೈಷ್ಣೊ ಧಾಮ್
- ಗಂಗಾ ಗೋಲ್ಡನ್ ಜೂಬ್ಲಿ ಮ್ಯೂಸಿಯಂ
- ರಾಂಪುರಿಯ ಹವೇಲಿಸ್
- ರತನ್ ಬಿಹಾರಿ ದೇವಾಲಯ
- ಐತಿಹಾಸಿಕ ಗೋಪಿನಾಥ ದೇವಾಲಯ, ಸರ್ಕಾರಿ ಮುದ್ರಣಾಲಯ ಎದುರು
- ದೇವಿ ಕುಂದ್ ಸಾಗರ್.
- ಗಜನೆರ್ ವನ್ಯಜೀವಿ ಅಭಯಾರಣ್ಯ.
- ಕಲಿಬಂಗನ್.
- ಕೊಲಯತ್.
- MUKAM ನೋಖ
- ದೆಶ್ನೊಕ್ ದೇವಿಯ ಕರ್ಣಿ ದೇವಾಲಯ.
- ದೋಡ ಥೋರ
ಜನಸಂಖ್ಯಾಶಾಸ್ತ್ರ
ಬದಲಾಯಿಸಿ2001 ರ ಭಾರತದ ಜನಗಣತಿಯ [೨೧] ಪ್ರಕಾರ ಬಿಕಾನೆರ್ 529,007 ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 47% ನಷ್ಟಿದ್ದಾರೆ. ಬಿಕಾನೆರ್ ರಾಷ್ಟ್ರೀಯ ಸರಾಸರಿ ಸಾಕ್ಷರತಾ ಪ್ರಮಾಣವಾದ 59.5% ಕ್ಕಿಂತ ಹೆಚ್ಚು ಸಾಕ್ಷರತಾ ಪ್ರಮಾಣವಾದ ಸರಾಸರಿ 66%ರಷ್ಟನ್ನು ಹೊಂದಿದೆ; ಪುರುಷರು 74%ನಷ್ಟು ಸಾಕ್ಷರತೆ ಪ್ರಮಾಣವನ್ನು ಮತ್ತು ಮಹಿಳೆಯರು 57% ನಷ್ಟು ಸಾಕ್ಷರತೆ ಪ್ರಮಾಣವನ್ನು ಹೊಂದಿದ್ದಾರೆ. 14% ರಷ್ಟು ಜನಸಂಖ್ಯೆ 6 ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ.
ಬಿಕಾನೆರ್‌ನಲ್ಲಿ ಶಿಕ್ಷಣ
ಬದಲಾಯಿಸಿಪ್ರಸಿದ್ಧ ವಿಶ್ವವಿದ್ಯಾನಿಲಯಗಳಿಗಾಗಿ ಮತ್ತು ಕಾಲೇಜುಗಳಿಗಾಗಿ ಬಿಕಾನೆರ್‌ನ ವಿಶ್ವವಿದ್ಯಾನಿಲಯಗಳ ಮತ್ತು ಕಾಲೇಜುಗಳ ಪಟ್ಟಿಯನ್ನು ನೋಡಿ: ಈಗ ಅಲ್ಲಿರುವಂತಹ ನಾಲ್ಕು ಇಂಜಿನಿಯರಿಂಗ್ ಕಾಲೇಜ್‌ಗಳೆಂದರೆ ಬಿಕಾನೆರ್ ಇಂಜಿನಿಯರಿಂಗ್ ಕಾಲೇಜು, ಮರುಧಾರ್ ಇಂಜಿನಿಯರಿಂಗ್ ಕಾಲೇಜ್(ಜೈಪುರ ರಸ್ತೆ) ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ,ಮಂಡ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಜೈಪುರ ರಸ್ತೆ) ಮಹಾರಾಜ ಗಂಗಾಸಿಂಗ್ ವಿಶ್ವವಿದ್ಯಾನಿಲಯ, ಜೈಸಲ್ಮರ್ ರಸ್ತೆ , ಬಿಕಾನೆರ್ ಸ್ವಾಮಿ ಕೇಶವಾನಂದ ರಾಜಸ್ಥಾನ್ ಕೃಷಿ ವಿಶ್ವವಿದ್ಯಾನಿಲಯ , ಗಂಗಾನಗರ್ ರಸ್ತೆ, ಬಿಕಾನೆರ್ ಸರ್ಕಾರಿ ದುಂಗೇರ್ ಕಾಲೇಜು, ಜೈಪುರ್ ರಸ್ತೆ, ಬಿಕಾನೆರ್ ಮಹಿಳೆಯರಿಗಾಗಿ M.S. ಕಾಲೇಜು , ಜೈಸಲ್ಮರ್ ರಸ್ತೆ, ಬಿಕಾನೆರ್ ಕೀನ್ ಕಾಲೇಜು, ಕೋಟೆ ಗೇಟ್‌ನ ಒಳಗಿರುವ ರಾಂಪುರಿಯ ಕಾಲೇಜು, ಜೋಶಿವಾರ, ಬಿಕಾನೆರ್.
ಪ್ರಸಿದ್ಧ ಶಾಲೆಗಳಿಗಾಗಿ ರಾಜಸ್ಥಾನದ ಬಿಕಾನೆರ್ ನ ಶಾಲೆಗಳ ಪಟ್ಟಿಯನ್ನು ನೋಡಿ. ಮೂರು ಕೇಂದ್ರೀಯ ವಿದ್ಯಾಲಯ ಶಾಲೆಗಳಿವೆ (KVs) - K.V. No. 1 (ಜೈಪುರ್ ರಸ್ತೆಯಲ್ಲಿದೆ),K.V. No. 2 (ಸೇನಾ ಆವರಣದೊಳಗಿದೆ) ಮತ್ತು K.V. No. 3 ನಾಲ್ ಬಿಕಾನೆರ್ (ನಾಲ್ ಬಿಕಾನೆರ್ ವಾಯುಪಡೆ ಕೇಂದ್ರದೊಳಗಿದೆ). ಬಿಕಾನೆರ್ ಬಾಲಕರ ಶಾಲೆ (BBS), ಸೋಫಿಯ ಸೀನಿಯರ್ ಸೆಕೆಂಡರಿ ಸ್ಕೂಲ್ , ದೆಹಲಿ ಪಬ್ಲಿಕ್ ಸ್ಕೂಲ್ , ದಯಾನಂದ ಪಬ್ಲಿಕ್ ಸ್ಕೂಲ್ ಮುಂತಾದ ಕಾನ್ವೆಂಟ್ ಶಾಲೆಗಳೂ ಇವೆ. ಬಿಕಾನೆರ್‌ನ ರಾಣಿ ಬಜಾರ್ ಕೈಗಾರಿಕಾ ಪ್ರದೇಶದಲ್ಲಿರುವ ಸಿನಿ ಮ್ಯಾಜಿಕ್ ಸಿನಿಮಾದ ಎದುರಿಗಿರುವ K.A.M. ಚಿಲ್ಡ್ರನ್ ಸೆಕೆಂಡರಿ ಸ್ಕೂಲ್ ನೀಲ್ ಕಾಂತ್ ಕಾಲೋನಿಯಲ್ಲಿದೆ. ಸರ್ಕಾರಿ ಕೋಟೆ Sr. Sec. ಸ್ಕೂಲ್, ಸ್ಟೇಷನ್ ರಸ್ತೆ, ಬಿಕಾನೆರ್ ಕೋಟೆ ಗೇಟ್ ನ ಒಳಗಿರುವ Govt. ಸದುಲ್ Sr. Sec. ಸ್ಕೂಲ್, ಬಿಕಾನೆರ್ ಮೇಜರ್ ಥಾಮಸ್ Govt. City Sr. Sec. ಸ್ಕೂಲ್, ಮಾರ್ಡನ್ ಮಾರ್ಕೆಟ್ ಸ್ಕೂಲ್ , ಬಿಕಾನೆರ್
ಸಂಪರ್ಕಶೀಲತೆ
ಬದಲಾಯಿಸಿಬಿಕಾನೆರ್ ರಾಷ್ಟ್ರದ ಇತರ ಭಾಗಗಳಿಗೆ ರಸ್ತೆ, ರೈಲ್ವೆ ಮತ್ತು ವಿಮಾನಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.[೨೨]
ಬಿಕಾನೆರ್ ನಗರಕೇಂದ್ರದಿಂದ 17 kilometres (11 mi) ಕಿಲೋಮೀಟರ್ ದೂರದಲ್ಲಿರುವ ನಾಲ್ ವಿಮಾನ ನಿಲ್ದಾಣವನ್ನು ಹೊಂದಿದೆ. ಅಲ್ಲದೇ ಇದು ಇನ್ನೂ ಸಂಪೂರ್ಣವಾಗಿ ಕಾರ್ಯವನ್ನು ನಿರ್ವಹಿಸುತ್ತಿಲ್ಲ. ಆದರೂ, ರಾಜಸ್ಥಾನದೊಳಗೆ ಜೋಧಪುರ(254 kilometres (158 mi))ಮತ್ತು ಜೈಪುರದ ಸಂಗನೆರ್ ವಿಮಾನನಿಲ್ದಾಣ(352 kilometres (219 mi)) ಸಂಪರ್ಕ ಒದಗಿಸುತ್ತವೆ.
ಬಿಕಾನೆರ್ ಜಂಕ್ಷನ್ (BKN)[೨೩] ಮತ್ತು ಲಾಲ್‌ಗಢ್ ರೈಲು ನಿಲ್ದಾಣ (LGH)[೨೪] ವೆಂಬ ಹೆಸರಿನ ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ. ಈ ಎರಡು ನಿಲ್ದಾಣಗಳು ಬಿಕಾನೆರ್ ಅನ್ನು ರಾಜಸ್ಥಾನದ ಇತರ ನಗರಳೊಂದಿಗೆ ಮತ್ತು ಪಟ್ಟಣಗಳೊಂದಿಗೆ ಹಾಗು ಉತ್ತರ ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಏರ್ಪಡಿಸುತ್ತದೆ.
ಇದು ನಗರ ರಸ್ತೆಗಳ ಉತ್ತಮ ಸಂಪರ್ಕಜಾಲವನ್ನು ಹೊಂದಿದೆ ಮತ್ತು ಎಲ್ಲಾ ರೀತಿಯ ವಾಹನ ಸಾರಿಗೆ ಸಂಪರ್ಕಗಳು ಕಾರ್ಯನಿರ್ವಹಿಸುತ್ತವೆ.
ಗ್ಯಾಲರಿ
ಬದಲಾಯಿಸಿಇವನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ಪಾಟ್ನಾಯಕ್, ನವೀನ್. (1990). ಅ ಡೆಸರ್ಟ್ ಕಿಂಗ್ಡಮ್: ದಿ ರಜಪುತ್ಸ್ ಆಫ್ ಬಿಕಾನೆರ್ . ಜಾರ್ಜ್ ವೈಡನ್ ಫೆಲ್ಡ್ ಅಂಡ್ ನಿಕೊಲ್ಸನ್ Ltd., ಲಂಡನ್.
- ↑ ೧.೦ ೧.೧ ಠಾಕೂರ್ ದೇಶ್ ರಾಜ್, ಜಾಟ್ ಇತಿಹಾಸ್, 1934, p. 616-624
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2010-08-03.
- ↑ http://www.prachinamuseum.org/ಬಿಕಾನೆರ್.htm
- ↑ http://www.travelgrove.com/travel-guides/India/Bikaner-History-c868406.html
- ↑ "Bikaner". Retrieved 2007-09-08.
- ↑ ದಶರಥ ಶರ್ಮ , ರಾಜಸ್ಥಾನ ತ್ರೂ ದಿ ಏಜ್, ಜೋಧಪುರ್, 1966, Vol.I, p. 287-288
- ↑ ೭.೦ ೭.೧ Tod. ಪುಟಗಳು 1126 ಮತ್ತು 1127.
- ↑ Ibid., ಜಾಟರುಗಳ ಏಳನೇ ಕುಲ
- ↑ ಠಾಕೂರ್ ದೇಶ್ ರಾಜ್, ಜಾಟ್ ಇತಿಹಾಸ್, ದೆಹಲಿ, 2002, p. 269-285
- ↑ G.S.L.ದೇವ್ರ, op. cit., Cf. ದಯಾಳ್ ದಾಸ್ ರಿ ಖ್ಯಾತ್, ಭಾಗ II, p. 7-10
- ↑ [53] ^ Ibid., ಪು. 38.
- ↑ ೧೨.೦ ೧೨.೧ Ring, Trudy (1996). International Dictionary of Historic Places: Asia and Oceania. Taylor & Francis. ISBN 1884964044. Retrieved 2009-12-07.
{{cite book}}
:|work=
ignored (help); Text "page 129" ignored (help) - ↑ ೧೩.೦ ೧೩.೧ Ward, Philip (1989). Northern India, Rajasthan, Agra, Delhi: a travel guide. Pelican Publishing Company. pp. 116–119. ISBN 0882897535. Retrieved 2009-12-07.
{{cite book}}
:|work=
ignored (help) - ↑ ೧೪.೦ ೧೪.೧ ೧೪.೨ ೧೪.೩ "History". National Informatics centre, Bikaner district. Retrieved 2009-12-07.
- ↑ "Junagarh Fort, Bikaner". Archived from the original on 2009-04-16. Retrieved 2009-12-07.
- ↑ Ring p.132
- ↑ ೧೭.೦ ೧೭.೧ ರಿಂಗ್ p.133
- ↑ ೧೮.೦ ೧೮.೧ "Bikaner". Archived from the original on 2010-01-09. Retrieved 2009-12-09.
- ↑ "Climate of Bikaner". Archived from the original on 2012-07-22. Retrieved 2009-12-09.
- ↑ ಲಕ್ಷ್ಮಿ ನಿವಾಸ್ ಪ್ಯಾಲೆಸ್ (ಬಿಕಾನೆರ್, ರಾಜಸ್ಥಾನ) - ಹೋಟೆಲ್ ರಿವ್ಯೂಸ್ - ಟ್ರಿಪ್ ಅಡ್ ವೈಸರ್
- ↑ GRIndia
- ↑ "Junagarh Fort of Bikaner in Rajasthan, India". Archived from the original on 2009-10-11. Retrieved 2009-12-07.
- ↑ ಇಂಡಿಯ ರೈಲ್ ಇನ್ ಫೋ: ಬಿಕಾನೆರ್ ಜಂಕ್ಷನ್
- ↑ ಇಂಡಿಯ ರೈಲ್ ಇನ್ ಫೋ: ಲಾಲ್ ಗಢ್ ರೈಲ್ವೆ ಸ್ಟೇಷನ್
ಬಾಹ್ಯ ಕೊಂಡಿಗಳು
ಬದಲಾಯಿಸಿ- ಡಿಸ್ಟ್ರಿಕ್ಟ್ ಗವರ್ನಮೆಂಟ್ ಸೈಟ್ Archived 2009-05-08 ವೇಬ್ಯಾಕ್ ಮೆಷಿನ್ ನಲ್ಲಿ.
- ಬಿಕಾನೆರ್ ದರ್ಶನ್ - ಪಿಕ್ಚರಿಂಗ್ 21st ಸೆಂಚುರಿ ಬಿಕಾನೆರ್ Archived 2014-05-16 ವೇಬ್ಯಾಕ್ ಮೆಷಿನ್ ನಲ್ಲಿ.
- ರಿಯಲ್ ಬಿಕಾನೆರ್ - ದಿ ಸಿಟಿ ಪೋರ್ಟಲ್ Archived 2010-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ಹಮಾರ ಬಿಕಾನೆರ್- ದಿ ಸಿಟಿ ಆಫ್ ಜಾಯ್, ಹ್ಯಾಪಿನೆಸ್ ಅಂಡ್ ರಿಲೀಜಿಯಸ್ Archived 2020-09-19 ವೇಬ್ಯಾಕ್ ಮೆಷಿನ್ ನಲ್ಲಿ.
- ಖಬರ್ ಎಕ್ಸ್ ಪ್ರೆಸ್- ಬಿಕಾನೆರ್ ಡೇಲಿ ನ್ಯೂಸ್ , ಪೋಟೊ ಅಂಡ್ ವಿಡಿಯೋ Archived 2010-08-22 ವೇಬ್ಯಾಕ್ ಮೆಷಿನ್ ನಲ್ಲಿ.