ಬಸವನ ಬಾಗೇವಾಡಿ ತಾಲ್ಲೂಕು
ಬಸವನ ಬಾಗೇವಾಡಿ ಒಂದು ಪಟ್ಟಣ, ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಬಸವನ ಬಾಗೇವಾಡಿ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 43 ಕಿ.ಮಿ. ದೂರವಿದೆ.
ಬಸವನ ಬಾಗೇವಾಡಿ ತಾಲ್ಲೂಕು
ಬಸವನ ಬಾಗೇವಾಡಿ | |
---|---|
village | |
Population (2012) | |
• Total | ೩೫,೦೦೦ |
Website | http://www.basavanabagewaditown.mrc.gov.in/ |
ಚರಿತ್ರೆ
ಬದಲಾಯಿಸಿಬಸವನ ಬಾಗೇವಾಡಿ ವಿಜಯಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿ ಗ್ರಾಮವು ವಿಜಯಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ವಿಜಯಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.
ಐತಿಹ್ಯ: 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನಂತೆ. ಹೀಗೆ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.
ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.
ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು.
ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.
ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ.
ಸುಮಾರು 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.
ಬಸವನ ಬಾಗೇವಾಡಿಯು ವಿಜಯಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿಯು ವಿಜಯಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.
ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಾಗೇವಾಡಿಯಿಂದ ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ. ಇಲ್ಲಿ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ನೋಡುಗರ ಮನ ಸೆಳೆಯುತ್ತದೆ.
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ಲಿಂಗಾಯತರು ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.
ಬಸವನ ಬಾಗೇವಾಡಿ ಪುರಸಭೆ
ಬದಲಾಯಿಸಿಬಸವನ ಬಾಗೇವಾಡಿ ಪುರಸಭೆ Archived 2016-01-10 ವೇಬ್ಯಾಕ್ ಮೆಷಿನ್ ನಲ್ಲಿ.
ಬಸವನ ಬಾಗೇವಾಡಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು. 2011 ರ ಜನಗಣತಿಯ ಪ್ರಕಾರ ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ 35000 ಜನಸಂಖ್ಯೆಯನ್ನು ಹೊಂದಿರುತ್ತದೆ. ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಬಸವನ ಬಾಗೇವಾಡಿ ಪುರಸಭೆಯ ವ್ಯಾಪ್ತಿಯು ಒಟ್ಟು 10 ಚದುರ ಕೀಲೋಮೀಟರ್ ಗಳಿರುತ್ತದೆ. ಶ್ರೀ ಬಸವೇಶ್ವರ ಜನ್ಮಸ್ಥಳಕ್ಕೆ ಬಸವ ಸ್ಮಾರಕ ಎಂದು ಪ್ರಸಿದ್ದಿ ಪಡೆದಿದೆ. ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರ ಇಲಾಖೆಗೆ ಒಳಪಡುತ್ತದೆ. ಬಸವನ ಬಾಗೇವಾಡಿ ಪ್ರಸಿದ್ದವಾದ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ಈ ದೇವಾಲಯಕ್ಕೆ ಜನರು ದೇಶ ವಿದೇಶದಿಂದ ಬರುತ್ತಾರೆ ಹಾಗೂ ವರ್ಷಕೊಮ್ಮೆ ನಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.
ಇಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಯೋಜನೆ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡದು.
ಭೌಗೋಳಿಕ
ಬದಲಾಯಿಸಿಕರ್ನಾಟಕದ ಉತ್ತರದ ಗಡಿಯಲ್ಲಿರುವ ಬಸವನ ಬಾಗೇವಾಡಿ ತಾಲ್ಲೂಕವು ಉತ್ತರಕ್ಕೆ ವಿಜಯಪುರ ತಾಲ್ಲೂಕು, ಪಶ್ಚಿಮಕ್ಕೆ ವಿಜಯಪುರ ತಾಲ್ಲೂಕು ದಕ್ಷಿಣಕ್ಕೆ ಬೀಳಗಿತಾಲ್ಲೂಕು ಮತ್ತು ಪೂರ್ವಕ್ಕೆ ಮುದ್ದೇಬಿಹಾಳ ತಾಲ್ಲೂಕು ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. ಬಸವನ ಬಾಗೇವಾಡಿತಾಲ್ಲೂಕವು 143 ಹಳ್ಳಿಗಳು, 32 ಗ್ರಾಮ ಪಂಚಾಯತಗಳು ಹಾಗೂ 4 ಹೊಬಳ್ಳಿಗಳನ್ನೊಳಗೊಂಡಿದೆ.
ಕರ್ನಾಟಕ ಸರ್ಕಾರವು ಫೆಬ್ರುವರಿ 8,2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಿಡಗುಂದಿ ಮತ್ತು ಕೊಲ್ಹಾರ ನಗರಗಳನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.
ಹವಾಮಾನ
ಬದಲಾಯಿಸಿ- ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆ ಕಾಲ - 35°C - 42°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು ಮಳೆಗಾಲ - 18°C - 28°Cಡಿಗ್ರಿ ಸೆಲ್ಸಿಯಸ್
- ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.
ಮಳೆ ಮಾಪನ ಕೇಂದ್ರಗಳು
ಬದಲಾಯಿಸಿ- ಬಸವನ ಬಾಗೇವಾಡಿ - ಆಲಮಟ್ಟಿ , ಹೂವಿನ ಹಿಪ್ಪರಗಿ, ಮನಗೂಳಿ, ಮಟ್ಟಿಹಾಳ.
ಸಾಂಸ್ಕೃತಿಕ
ಬದಲಾಯಿಸಿಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ, ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
ಆಹಾರ (ಖಾದ್ಯ)
ಬದಲಾಯಿಸಿಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರ ದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಧಾರ್ಮಿಕ ಕೇಂದ್ರಗಳು
ಬದಲಾಯಿಸಿ- ಬಸವನ ಬಾಗೇವಾಡಿ - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
- ಇಂಗಳೇಶ್ವರ - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ.
ದೇವಾಲಯಗಳು
ಬದಲಾಯಿಸಿಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಮಸೀದಿಗಳು
ಬದಲಾಯಿಸಿಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ಹಬ್ಬಗಳು
ಬದಲಾಯಿಸಿಪ್ರತಿವರ್ಷ ಶ್ರೀ ಬಸವೇಶ್ವರ ಜಾತ್ರೆ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಕೃಷಿ
ಬದಲಾಯಿಸಿಕೃಷಿ ಬಸವನ ಬಾಗೇವಾಡಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.
ತೋಟಗಾರಿಕೆ
ಬದಲಾಯಿಸಿತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.
ನೀರಾವರಿ
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಪ್ರತಿಶತ 30 ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಸಂಸ್ಕೃತಿ
ಬದಲಾಯಿಸಿಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ.
ಕಲೆ
ಬದಲಾಯಿಸಿಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
ಆರ್ಥಿಕತೆ
ಬದಲಾಯಿಸಿಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
ವ್ಯಾಪಾರ
ಬದಲಾಯಿಸಿಬಸವನ ಬಾಗೇವಾಡಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.
ಉದ್ಯೋಗ
ಬದಲಾಯಿಸಿಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
ಕೆರೆಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು
ರೋಣಿಹಾಳ, ಮಣ್ಣೂರ, ಮನಗೂಳಿ, ಹೂವಿನ ಹಿಪ್ಪರಗಿ, ಅರಳಿಚಂಡಿ, ಮುತ್ತಗಿ, ಕುಪಕಡ್ಡಿ, ಅಗಸಬಾಳ, ಕೂಡಗಿ, ನಾಗವಾಡ, ಮಸೂತಿ, ಕಿರಿಶ್ಯಾಳ, ಸುಳಖೋಡ, ಮುಕಾರ್ತಿಹಾಳ, ಆಸಂಗಿ, ಗರಸಂಗಿ.
ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು
ಆಕಳವಾಡಿ, ಮಲಘಾಣ, ತಳೇವಾಡ, ಉಕ್ಕಲಿ, ಉಕ್ಕಲಿ ಇಂಗು ಕೆರೆ, ಬೆಳ್ಳುಬ್ಬಿ, ವಡವಡಗಿ, ಮಸೂತಿ, ತಳೇವಾಡ ಇಂಗು ಕೆರೆ, ಕೊಡಗಾನೂರ, ಮುಳವಾಡ, ಇಂಗಳೇಶ್ವರ.
ಆಣೆಕಟ್ಟುಗಳು
ಬದಲಾಯಿಸಿ- ಆಲಮಟ್ಟಿ ಆಣೆಕಟ್ಟು (ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಬಳಿ ಕಟ್ಟಲಾಗಿದೆ.
ಕಾಲುವೆಗಳು
ಬದಲಾಯಿಸಿ- ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.
- ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ.
ಕೃಷಿ ಮಾರುಕಟ್ಟೆಗಳು
ಬದಲಾಯಿಸಿಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಸವನ ಬಾಗೇವಾಡಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಗೊಳಸಂಗಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹೂವಿನ ಹಿಪ್ಪರಗಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ನಿಡಗುಂದಿ
ರೈತ ಸಂಪರ್ಕ ಕೇಂದ್ರಗಳು
ಬದಲಾಯಿಸಿ- ಬಸವನ ಬಾಗೇವಾಡಿ - ಕೊಲ್ಹಾರ, ಹೂವಿನ ಹಿಪ್ಪರಗಿ.
ಹಾಲು ಉತ್ಪಾದಕ ಘಟಕಗಳು
ಬದಲಾಯಿಸಿಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
ಅರಳದಿನ್ನಿ, ಬಸವನ ಬಾಗೇವಾಡಿ, ಗೊಳಸಂಗಿ, ಹಣಮಾಪುರ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಹೂವಿನ ಹಿಪ್ಪರಗಿ, ಕಲಗುರ್ಕಿ, ಕಣಕಾಲ, ಕನ್ನಾಳ, ಕವಲಗಿ, ಕೊಲ್ಹಾರ, ಮನಗೂಳಿ, ಮಸೂತಿ, ಮುಳವಾಡ, ಮುತ್ತಗಿ, ನಿಡಗುಂದಿ, ನಾಗರದಿಣ್ಣಿ, ನಂದಿಹಾಳ, ಸಾಸಲಗಿ, ಉಕ್ಕಲಿ, ಯರನಾಳ.
ಬೆಳೆಗಳು
ಬದಲಾಯಿಸಿಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯಗಳು
ಬದಲಾಯಿಸಿಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿಗಳು
ಬದಲಾಯಿಸಿತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಸಾಕ್ಷರತೆ
ಬದಲಾಯಿಸಿಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ.
ಶಿಕ್ಷಣ
ಬದಲಾಯಿಸಿಪ್ರಮುಖ ಶಿಕ್ಷಣ ಸಂಸ್ಥೆಗಳು
- ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
- ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
- ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಬಸವನ ಬಾಗೇವಾಡಿ
- ಸರಕಾರಿ ಉರ್ದು ಪ್ರೌಡ ಶಾಲೆ, ಬಸವನ ಬಾಗೇವಾಡಿ
- ಲಯನ್ಸ್ ಶಾಲೆ, ಬಸವನ ಬಾಗೇವಾಡಿ
- ಸರಕಾರಿ ಪ್ರೌಡ ಶಾಲೆ, ಬಸವನ ಬಾಗೇವಾಡಿ
- ಕಿತ್ತೂರ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಬಸವನ ಬಾಗೇವಾಡಿ
- ಮೂರಾರ್ಜಿ ದೇಸಾಯಿ ವಸತಿ ಪ್ರಾಥಮಿಕ ಮತ್ತು ಪ್ರೌಡ ಶಾಲೆ, ಬಸವನ ಬಾಗೇವಾಡಿ
- ನೂತನ ಪ್ರೌಡ ಶಾಲೆ, ಬಸವನ ಬಾಗೇವಾಡಿ
- ಸರ್ವೋದಯ ಪ್ರೌಡ ಶಾಲೆ, ಬಸವನ ಬಾಗೇವಾಡಿ
- ಸರಕಾರಿ ಶ್ರೀ ಬಸವೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
- ಸರಕಾರಿ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
- ಶ್ರೀ ಸಿದ್ದೇಶ್ವರ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
- ಬಿ.ಎಲ್.ಡಿ.ಈ.ಎ. ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ
- ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಸವನ ಬಾಗೇವಾಡಿ
- ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗೊಳಸಂಗಿ, ಬಸವನ ಬಾಗೇವಾಡಿ
- ಶ್ರೀ ಎಮ್.ವಿ.ನಾಗಠಾಣ ಕಲಾ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
- ಶ್ರೀ ಸಂಗನಬಸವೇಶ್ವರ ಕಲಾ ಮಹಾವಿದ್ಯಾಲಯ, ಮಸೂತಿ-ಕೂಡಗಿ, ಬಸವನ ಬಾಗೇವಾಡಿ
- ಶ್ರೀ ವಿಶ್ವಕರ್ಮ ಕಲಾ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ
- ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
- ಶ್ರೀ ನಂದಿಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
- ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಬಸವನ ಬಾಗೇವಾಡಿ
- ಜಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
- ಜನತಾ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಮನಗೂಳಿ, ಬಸವನ ಬಾಗೇವಾಡಿ
- ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಕೊಲ್ಹಾರ, ಬಸವನ ಬಾಗೇವಾಡಿ
- ಹರ್ಡೆಕರ ಮಂಜಪ್ಪ್ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಆಲಮಟ್ಟಿ, ಬಸವನ ಬಾಗೇವಾಡಿ
- ನಂದಿ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಬಸವನ ಬಾಗೇವಾಡಿ
- ಜಿ.ವಿ.ವಿ.ಎಸ್. ಪ್ರೌಢ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ನಿಡಗುಂದಿ, ಬಸವನ ಬಾಗೇವಾಡಿ
ಪ್ರಮುಖ ವ್ಯಕ್ತಿಗಳು
ಬದಲಾಯಿಸಿ- ಅಣ್ಣ ಬಸವಣ್ಣ
- ಡಾ. ಸರಸ್ವತಿ ಚಿಮ್ಮಲಗಿ
- ಶರಣಪ್ಪ ಕಂಚಾಣಿ
ರಾಜಕೀಯ
ಬದಲಾಯಿಸಿಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.
ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.
ಕ್ಷೇತ್ರದ ವಿಶೇಷತೆ
ಕಾಂಗ್ರೇಸಿನ ಬಿ.ಎಸ್.ಪಾಟೀಲ(ಮನಗೂಳಿ)ರು 6 ಸಲ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ನೀರಾವರಿ ಸಚಿವರೂ ಆಗಿದ್ದರು. ಇದೆ ಕ್ಷೇತ್ರದಿಂದ 1957 ಮತ್ತು 1962 ಸುಶಿಲಾಬಾಯಿ ಶಹಾ ಅವರನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು. ಎಸ್.ಕೆ.ಬೆಳ್ಳುಬ್ಬಿಯವರು 2008ರಲ್ಲಿ ಬಿ.ಎಸ್.ಯಡಿಯುರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2013 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಿವಾನಂದ ಪಾಟೀಲ | ಕಾಂಗ್ರೇಸ್ | 56329 | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 36653 |
2008 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 48481 | ಶಿವಾನಂದ ಪಾಟೀಲ | ಕಾಂಗ್ರೇಸ್ | 34594 |
2004 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಿವಾನಂದ ಪಾಟೀಲ | ಕಾಂಗ್ರೇಸ್ | 50238 | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 46933 |
1999 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 50543 | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 40487 |
1994 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 27557 | ಕುಮಾರಗೌಡ ಪಾಟೀಲ | ಜೆ.ಡಿ | 19270 |
1989 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 37868 | ಕುಮಾರಗೌಡ ಪಾಟೀಲ | ಜೆ.ಡಿ | 25235 |
1985 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಕುಮಾರಗೌಡ ಪಾಟೀಲ | ಜೆ.ಎನ್.ಪಿ | 29320 | ಭೀಮನಗೌಡ ಪಾಟೀಲ | ಕಾಂಗ್ರೇಸ್ | 23744 |
1983 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 34386 | ರಾಜಶೇಖರ ಪಟ್ಟಣಶೆಟ್ಟಿ | ಬಿಜೆಪಿ | 15577 |
1978 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಜೆ.ಎನ್.ಪಿ | 27806 | ಬಸವಂತರಾಯ ಪಾಟೀಲ | ಕಾಂಗ್ರೇಸ್ | 16048 |
ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಎನ್.ಸಿ.ಓ | 23061 | ಜಿ.ವಿ.ಪಾಟೀಲ | ಕಾಂಗ್ರೇಸ್ | 16250 |
1967 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 25173 | ಜಿ.ಬಿ.ಈರಯ್ಯ | ಸ್ವತಂತ್ರ | 2759 |
1962 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಸುಶಿಲಾಬಾಯಿ ಶಹಾ | ಕಾಂಗ್ರೇಸ್ | 12365 | ರಾಮನಗೌಡ ಪಾಟೀಲ | ಸ್ವತಂತ್ರ | 6113 |
1957 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಸುಶಿಲಾಬಾಯಿ ಶಹಾ | ಕಾಂಗ್ರೇಸ್ | 11941 | ರಾಮಣ್ಣ ಕಲ್ಲೂರ | ಸ್ವತಂತ್ರ | 4883 |
ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಂಕರಗೌಡ ಪಾಟೀಲ | ಕಾಂಗ್ರೇಸ್ | 17752 | ಸಾವಳಗೆಪ್ಪ ನಂದಿ | ಕೆಎಂಪಿಪಿ | 5507 |
ಆರೋಗ್ಯ
ಬದಲಾಯಿಸಿಬಸವನ ಬಾಗೇವಾಡಿ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.
ವಿದ್ಯುತ್ ಪರಿವರ್ತನಾ ಕೇಂದ್ರಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
- ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ , ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
- ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ
- 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಸವನ ಬಾಗೇವಾಡಿ
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಸವನ ಬಾಗೇವಾಡಿ
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮಟ್ಟಿಹಾಳ
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುಕಾರ್ತಿಹಾಳ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮುತ್ತಗಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಹೂವಿನ ಹಿಪ್ಪರಗಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮನಗೂಳಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಿಡಗುಂದಿ
ಬ್ಯಾಂಕಗಳು
ಬದಲಾಯಿಸಿ- ವಿಜಯ ಬ್ಯಾಂಕ, ಬಸವನ ಬಾಗೇವಾಡಿ
- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಬಸವನ ಬಾಗೇವಾಡಿ
- ಡಿ.ಸಿ.ಸಿ. ಬ್ಯಾಂಕ, ಬಸವನ ಬಾಗೇವಾಡಿ
- ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಬಸವನ ಬಾಗೇವಾಡಿ
- ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಬಸವನ ಬಾಗೇವಾಡಿ
- ಸಿಂಡಿಕೇಟ್ ಬ್ಯಾಂಕ, ಬಸವನ ಬಾಗೇವಾಡಿ
- ಕಾರ್ಪೋರೇಶನ್ ಬ್ಯಾಂಕ, ಬಸವನ ಬಾಗೇವಾಡಿ
- ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ
- ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ
ಖಜಾನೆ ಕಚೇರಿಗಳು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)
ಅರೇಶಂಕರ, ಬಸವನ ಬಾಗೇವಾಡಿ, ಬಳೂತಿ, ಬೇನಾಳ, ಬೊಮ್ಮನಹಳ್ಳಿ, ಬ್ಯಾಕೋಡ, ಚಿಮ್ಮಲಗಿ, ಡೋಣೂರ, ಗೊಳಸಂಗಿ, ಗೋನಾಳ, ಗುಡದಿನ್ನಿ, ಗುಳಬಾಳ, ಹಳೆರೊಳ್ಳಿ, ಹಂಗರಗಿ, ಹತ್ತರಕಿಹಾಳ, ಹೆಬ್ಬಾಳ, ಹುಣಶ್ಯಾಳ ಪಿ.ಬಿ., ಹೂವಿನ ಹಿಪ್ಪರಗಿ, ಇಂಗಳೇಶ್ವರ, ಇವಣಗಿ, ಕಲಗುರ್ಕಿ, ಕಣಕಾಲ, ಕೊಲ್ಹಾರ, ಕುಪಕಡ್ಡಿ, ಕುದರಿ ಸಾಲವಾಡಗಿ, ಮಲಘಾಣ, ಮನಗೂಳಿ, ಮಣ್ಣೂರ, ಮಸಬಿನಾಳ, ಮಸೂತಿ, ಮಟ್ಟಿಹಾಳ, ಮುಳವಾಡ, ಮುತ್ತಗಿ, ನಿಡಗುಂದಿ, ರಬಿನಾಳ, ರೋಣಿಹಾಳ, ಸಾಸನೂರ, ಸಾತಿಹಾಳ, ಸೋಲವಾಡಗಿ, ಸೋಮನಾಳ, ಟಕ್ಕಳಕಿ, ತಳೇವಾಡ, ತೆಲಗಿ, ಉಕ್ಕಲಿ, ವಡವಡಗಿ, ಯಾಳವಾರ.
ಪಟ್ಟಣ ಪಂಚಾಯತಿಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
ಬದಲಾಯಿಸಿಅಬ್ಬಿಹಾಳ, ಅಗಸಬಾಳ, ಆಕಳವಾಡಿ, ಆಲಮಟ್ಟಿ, ಅಂಬಳನೂರ, ಅಂಗಡಗೇರಿ, ಅರಳದಿನ್ನಿ, ಅರಳಿಚಂಡಿ, ಅರಷಣಗಿ, ಅರೇಶಂಕರ, ಆಸಂಗಿ ಬಿ.ಕೆ., ಆಸಂಗಿ ಕೆ.ಡಿ., ಬಳೂತಿ, ಬಳ್ಳೂರ, ಬೀರಲದಿನ್ನಿ, ಬಿಂಗಪ್ಪನಹಳ್ಳಿ, ಬೇನಾಳ, ಭೈರವಾಡಗಿ, ಬಿದನಾಳ, ಬಿಸನಾಳ, ಬಿಸಲಕೊಪ್ಪ, ಬೊಮ್ಮನಹಳ್ಳಿ, ಬೂದಿಹಾಳ, ಬುದ್ನಿ, ಬ್ಯಾಕೋಡ, ಬ್ಯಾಲ್ಯಾಳ, ಚಬನೂರ, ಚೀರಲದಿನ್ನಿ, ಚಿಮ್ಮಲಗಿ, ದೇಗಿನಾಳ, ದೇವಲಾಪುರ, ದಿಂಡವಾರ, ಡೋಣೂರ, ಗಣಿ, ಗರಸಂಗಿ ಬಿ.ಕೆ., ಗರಸಂಗಿ ಕೆ.ಡಿ., ಗೊಳಸಂಗಿ, ಗೋನಾಳ, ಗುಡದಿನ್ನಿ, ಗುಳಬಾಳ, ಹಳೆರೊಳ್ಳಿ, ಹಳಿಹಾಳ, ಹಳ್ಳದ ಗೆಣ್ಣೂರ, ಹಣಮಾಪುರ, ಹಂಚಿನಾಳ, ಹಂಗರಗಿ, ಹತ್ತರಕಿಹಾಳ, ಹೆಬ್ಬಾಳ, ಹುಲಬೆಂಚಿ, ಹುಣಶ್ಯಾಳ ಪಿ.ಬಿ., ಹುಣಶ್ಯಾಳ ಪಿ.ಸಿ., ಹೂವಿನ ಹಿಪ್ಪರಗಿ, ಇಂಗಳೇಶ್ವರ, ಇಟಗಿ, ಇವಣಗಿ, ಜಾಯವಾಡಗಿ, ಜೀರಲಭಾವಿ, ಕಡಕೋಳ, ಕಲಗುರ್ಕಿ, ಕಾಮನಕೇರಿ, ಕಣಕಾಲ, ಕನ್ನಾಳ, ಕರಬಂಟನಾಳ, ಕವಲಗಿ, ಕಿರಿಶ್ಯಾಳ, ಕೊಡಗಾನೂರ, ಕೃಷ್ಣಾಪುರ, ಕುಪಕಡ್ಡಿ, ಕುದರಿ ಸಾಲವಾಡಗಿ, ಕೂಡಗಿ, ಕುರುಬರದಿನ್ನಿ, ಮಜರೆಕೊಪ್ಪ, ಮಲಘಾಣ, ಮಣಗೂರ, ಮಣ್ಣೂರ, ಮಾರಡಗಿ, ಮರಿಮಟ್ಟಿ, ಮಾರ್ಕಬ್ಬಿನಹಳ್ಳಿ, ಮಸಬಿನಾಳ, ಮಸೂತಿ, ಮಟ್ಟಿಹಾಳ, ಮುದ್ದಾಪುರ, ಮುಕಾರ್ತಿಹಾಳ, ಮುಳವಾಡ, ಮುಳ್ಳಾಳ, ಮುತ್ತಗಿ, ಮುತ್ತಲದಿನ್ನಿ, ನಾಗರದಿನ್ನಿ, ನಾಗರಾಳ ಡೋಣ, ನಾಗರಾಳ ಹುಲಿ, ನಾಗವಾಡ, ನಾಗೂರ, ನಂದಿಹಾಳ ಪಿ.ಹೆಚ್., ನಂದಿಹಾಳ ಪಿ.ಯು., ನರಸಲಗಿ, ನೇಗಿನಾಳ, ರಬಿನಾಳ, ರಾಜನಾಳ, ರಾಮನಹಟ್ಟಿ, ರೋಣಿಹಾಳ, ಸಂಕನಾಳ, ಸಾಸನೂರ, ಸಾತಿಹಾಳ, ಶೀಕಳವಾಡಿ, ಸಿದ್ದನಾಥ, ಸಿಂದಗೇರಿ,ಸೋಲವಾಡಗಿ, ಸೋಮನಾಳ, ಸುಳಖೋಡ, ತಡಲಗಿ, ಟಕ್ಕಳಕಿ, ತಳೇವಾಡ, ತೆಲಗಿ, ಉಕ್ಕಲಿ, ಉಣ್ಣಿಭಾವಿ, ಉಪ್ಪಲದಿನ್ನಿ, ಉತ್ನಾಳ, ವಡವಡಗಿ, ವಂದಾಲ, ಯಾಳವಾರ, ಯಂಬತ್ನಾಳ, ಯರನಾಳ.
ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು
ಬದಲಾಯಿಸಿನಾಡ ಕಚೇರಿಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ನಾಡ ಕಚೇರಿಗಳು
ಕಂದಾಯ ಕಚೇರಿಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಕಂದಾಯ ಕಚೇರಿಗಳು
ತಾಲ್ಲೂಕು ಪಂಚಾಯತಿ
ಬದಲಾಯಿಸಿ- ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ
ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
ಜಿಲ್ಲಾ ಪಂಚಾಯತ
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು
ಬಸವನ ಬಾಗೇವಾಡಿ ತಾಲ್ಲೂಕಿನ ಆರಕ್ಷಕ (ಪೋಲಿಸ್) ಠಾಣೆಗಳು
ಬದಲಾಯಿಸಿ- ಪೋಲಿಸ್ ಠಾಣೆ, ಬಸವನ ಬಾಗೇವಾಡಿ
- ಹೊರ ಪೋಲಿಸ್ ಠಾಣೆ, ಯಾಳವಾರ
ಅಗ್ನಿಶಾಮಕ ಠಾಣೆಗಳು
ಬದಲಾಯಿಸಿ- ಅಗ್ನಿಶಾಮಕ ಠಾಣೆ, ಬಸವನ ಬಾಗೇವಾಡಿ
ನ್ಯಾಯಾಲಯಗಳು
ಬದಲಾಯಿಸಿ- ತಾಲೂಕು ಸಿವಿಲ್ ನ್ಯಾಯಾಲಯ, ಬಸವನ ಬಾಗೇವಾಡಿ
ಸಕ್ಕರೆ ಕಾರ್ಖಾನೆಗಳು
ಬದಲಾಯಿಸಿ- ಕೊಲ್ಹಾರ ಸಕ್ಕರೆ ಕಾರ್ಖಾನೆ, ತಡಲಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ.
- ಶಾರದಾ ಸಕ್ಕರೆ ಕಾರ್ಖಾನೆ, ಕೊಡಗಾನೂರ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಬದಲಾಯಿಸಿಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಕೂಡಗಿ, ಮನಗೂಳಿ, ನಿಡಗುಂದಿ, ಕುದರಿ ಸಾಲವಾಡಗಿ, ತೆಲಗಿ, ರೋಣಿಹಾಳ, ಉಕ್ಕಲಿ, ವಡವಡಗಿ, ಗೊಳಸಂಗಿ, ಕೊಲ್ಹಾರ, ಮುಳವಾಡ, ಯಾಳವಾರ, ಸಾಸನೂರ, ಹೂವಿನ ಹಿಪ್ಪರಗಿ.
ಪಶು ಆಸ್ಪತ್ರೆಗಳು
ಬದಲಾಯಿಸಿ- ಪಶು ಆಸ್ಪತ್ರೆ, ಬಸವನ ಬಾಗೇವಾಡಿ
ಪಶು ಚಿಕಿತ್ಸಾಲಯಗಳು
ನಿಡಗುಂದಿ, ಮನಗೂಳಿ, ಹೂವಿನ ಹಿಪ್ಪರಗಿ, ಕೂಡಗಿ, ವಂದಾಲ, ಕೊಲ್ಹಾರ, ನರಸಲಗಿ, ಗೊಳಸಂಗಿ, ಸಾಸನೂರ, ಉಕ್ಕಲಿ, ತೆಲಗಿ, ಮುಳವಾಡ, ಮಸಬಿನಾಳ, ಮುತ್ತಗಿ.
ಪ್ರಾಥಮಿಕ ಪಶು ಚಿಕಿತ್ಸಾಲಯಗಳು
ಉಚಿತ ಪ್ರಸಾದನಿಲಯಗಳು
ಬದಲಾಯಿಸಿಬಸವನ ಬಾಗೇವಾಡಿ, ಹೆಬ್ಬಾಳ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿ, ತೆಲಗಿ, ವಡವಡಗಿ, ಜಾಯವಾಡಗಿ, ನರಸಲಗಿ, ನಿಡಗುಂದಿ, ಸಿದ್ದನಾಥ.
ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು
ಬದಲಾಯಿಸಿ- ಬಸವನ ಬಾಗೇವಾಡಿ - 08358
- ತೆಲಗಿ - 8426
ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
ಆಲಮಟ್ಟಿ, ಬಸವನ ಬಾಗೇವಾಡಿ, ಡೋಣೂರ, ಹೂವಿನ ಹಿಪ್ಪರಗಿ, ಹಣಮಾಪುರ, ಹಂಗರಗಿ, ಇಂಗಳೇಶ್ವರ, ಕೋಲ್ಹಾರ, ಕುದರಿ ಸಾಲವಾಡಗಿ, ಮನಗೂಳಿ, ಮಸಬಿನಾಳ, ಮಸೂತಿ, ಮುಳವಾಡ, ಮುತ್ತಗಿ, ನರಸಲಗಿ, ರಬಿನಾಳ, ಸಾಸನೂರ, ತೆಲಗಿ, ಉಕ್ಕಲಿ, ವಡವಡಗಿ, ವಂದಾಲ, ಯಾಳವಾರ
ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು
ಬದಲಾಯಿಸಿ- ಮನಗೂಳಿ - 586122 (ನಂದಿಹಾಳ, ಯರನಾಳ, ಹತ್ತರಕಿಹಾಳ, ಹಿಟ್ಟಿನಹಳ್ಳಿ, ಜುಮನಾಳ).
- ಬಸವನ ಬಾಗೇವಾಡಿ - 586203 (ಅರಳಿಚಂಡಿ, ಭೈರವಾಡಗಿ, ಬಿಸನಾಳ, ಬ್ಯಾಲ್ಯಾಳ, ದಿಂಡವಾರ, ಡೋಣೂರ, ಇಂಗಳೇಶ್ವರ, ಇವಣಗಿ, ಕಡಕೋಳ, ಕಣಕಾಲ, ಕನ್ನಾಳ, ಮಸಬಿನಾಳ, ನರಸಲಗಿ, ರಬಿನಾಳ, ಯಾಳವಾರ).
- ಹೂವಿನ ಹಿಪ್ಪರಗಿ - 586208 (ಬೂದಿಹಾಳ, ಬ್ಯಾಕೋಡ, ಹುಣಶ್ಯಾಳ ಪಿ.ಬಿ., ಕುದರಿ ಸಾಲವಾಡಗಿ, ಕೊಣ್ಣೂರ, ಸೋಮನಾಳ, ವಡವಡಗಿ).
- ಕೊಲ್ಹಾರ - 586210 (ಆಸಂಗಿ ಕೆ.ಡಿ., ಬಳೂತಿ, ಹಳೆರೊಳ್ಳಿ, ಹಳ್ಳದ ಗೆಣ್ಣೂರ, ಹಣಮಾಪುರ, ಹೊಳೆ ಹಂಗರಗಿ, ಕುಪಕಡ್ಡಿ, ಕುರುಬರದಿನ್ನಿ, ಮಟ್ಟಿಹಾಳ, ರೋಣಿಹಾಳ, ಸಿದ್ದನಾಥ).
- ನಿಡಗುಂದಿ - 586213 (ಅಬ್ಬಿಹಾಳ, ಬಳಬಟ್ಟಿ, ಬೂದಿಹಾಳ ಪಿ.ಎನ್., ಹೆಬ್ಬಾಳ, ಹುಲ್ಲೂರ, ಹುಲ್ಲೂರ ಎಲ್.ಟಿ., ಇಟಗಿ, ಕಾಳಗಿ, ಯಲಗೂರ).
- ಮನಗೂಳಿ - 586122 (ನಂದಿಹಾಳ, ಯರನಾಳ, ಹತ್ತರಕಿಹಾಳ, ಹಿಟ್ಟಿನಹಳ್ಳಿ, ಜುಮನಾಳ).
ದೂರವಾಣಿ ಕೈಪಿಡಿ
ಬದಲಾಯಿಸಿ- ತಹಸಿಲ್ದಾರರ ಕಾರ್ಯಾಲಯ - 321750
- ಖಜಾನೆ ಕಾರ್ಯಾಲಯ - 321680
- ಆಹಾರ ಮತ್ತು ನಾಗರಿಕ ಪುರೈಕೆ ಕಾರ್ಯಾಲಯ - 321220
- ಪ್ರಧಾನ ನ್ಯಾಯಾಧೀಶರ ಕಾರ್ಯಾಲಯ - 321276
- ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 245580
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು
ಬದಲಾಯಿಸಿರಾಷ್ಟ್ರೀಯ ಹೆದ್ದಾರಿ - 13 => ಸೋಲಾಪುರ - ವಿಜಯಪುರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ.
ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.
ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ.
ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
ಸರಕಾರಿ ವಾಹನ ನಿಲ್ದಾಣಗಳು
ಬದಲಾಯಿಸಿ- ಬಸವನ ಬಾಗೇವಾಡಿ - ಮನಗೂಳಿ, ಹೂವಿನ ಹಿಪ್ಪರಗಿ, ನಿಡಗುಂದಿ, ಕೊಲ್ಹಾರ.
ಸರಕಾರಿ ವಾಹನ ಘಟಕಗಳು
ಬದಲಾಯಿಸಿ- ಬಸವನ ಬಾಗೇವಾಡಿ
ಚಿತ್ರ ಮಂದಿರಗಳು
ಬದಲಾಯಿಸಿ- 1. ಸತ್ಯನಾರಾಯಣ ಚಿತ್ರ ಮಂದಿರ
- 2. ಅಲಂಕಾರ ಚಿತ್ರ ಮಂದಿರ
ಆಕರ್ಷಕ ಸ್ಥಳಗಳು
ಬದಲಾಯಿಸಿಈ ತಾಲೂಕಿನಲ್ಲಿ ಕೆಲವು ಪ್ರಸಿದ್ಧ ಸ್ಥಳಗಳೂ ಇವೆ.
ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರ
ಬದಲಾಯಿಸಿ- ವಿಜಯಪುರದಿಂದ 42 ಕಿ.ಮೀ.
- ಬೆಂಗಳೂರಿನಿಂದ 525 ಕಿ.ಮೀ.
- ಸೋಲಾಪುರದಿಂದ ಮಹಾರಾಷ್ಟ್ರದಿಂದ 140 ಕಿ.ಮೀ.
- ಹೈದರಾಬಾದ್ದಿಂದ ಆಂಧ್ರ ಪ್ರದೇಶದಿಂದ 400 ಕಿ.ಮೀ.
- ಕೂಡಲಸಂಗಮದಿಂದ 60 ಕಿ.ಮೀ.
- ಸಮೀಪದ ರೈಲ್ವೆ ನಿಲ್ದಾಣ ಆಲಮಟ್ಟಿಯಿಂದ 30 ಕಿ.ಮೀ.
- ಸಮೀಪದ ದೇಶೀಯ ವಿಮಾನ ನಿಲ್ದಾಣ ಹುಬ್ಬಳ್ಳಿಯಿಂದ 210 ಕಿ.ಮೀ.
- ಸಮೀಪದ ದೇಶೀಯ ವಿಮಾನ ನಿಲ್ದಾಣ ಬೆಳಗಾವಿಯಿಂದ 240 ಕಿ.ಮೀ.
- ಸಮೀಪದ ದೇಶೀಯ ವಿಮಾನ ನಿಲ್ದಾಣ ಕಲಬುರಗಿಯಿಂದ 170 ಕಿ.ಮೀ.
- ಸಮೀಪದ ದೇಶೀಯ ವಿಮಾನ ನಿಲ್ದಾಣ ಹೊಸಪೇಟೆಯಿಂದ 200 ಕಿ.ಮೀ.
- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗೋವಾಯಿಂದ 370 ಕಿ.ಮೀ.
- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೈದರಾಬಾದ್ಯಿಂದ 400 ಕಿ.ಮೀ.
- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ * ಬೆಂಗಳೂರಿನಿಂದ 525 ಕಿ.ಮೀ.
ದಿಕ್ಕುಗಳು
ಬದಲಾಯಿಸಿ